Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentನಾನಿನ್ನು ಸಿಂಗಲ್ ದೇವ್ರೇ ನನ್ಗೂ ಒಬ್ಬ ಬಾಯ್ ಫ್ರೆಂಡ್ ಕಳಿಸಿ ಕೊಡಪ್ಪ ಎಂದು ಬಿಗ್ ಬಾಸ್...

ನಾನಿನ್ನು ಸಿಂಗಲ್ ದೇವ್ರೇ ನನ್ಗೂ ಒಬ್ಬ ಬಾಯ್ ಫ್ರೆಂಡ್ ಕಳಿಸಿ ಕೊಡಪ್ಪ ಎಂದು ಬಿಗ್ ಬಾಸ್ ಮನೇಲಿ ಕಣ್ಣೀರು ಹಾಕ್ತಿರೋ ಕಾವ್ಯಶ್ರೀ ಗೌಡ.

ದೊಡ್ಮನೆಯಲ್ಲಿ ಸಿಂಗಲ್ ಆಗಿರೋ ಕಾವ್ಯ, ಬಿಗ್ ಬಾಸ್ ಗೆ ಇಡುತ್ತಿರುವ ವಿಶೇಷ ಬೇಡಿಕೆ ಏನು ಗೊತ್ತಾ. ಮಂಗಳ ಗೌರಿ ಎನ್ನುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಧಾರಾವಾಹಿಯಲ್ಲಿ ಪ್ರಾಮಾಣಿಕತೆ ತಮ್ಮ ಮುಗ್ಧತೆ ಮತ್ತು ಒಳ್ಳೆಯತನ ತುಂಬಿರುವ ಅಳುಮುಂಜಿ ಮಂಗಳ ಗೌರಿ ಪಾತ್ರದಿಂದ ಕರ್ನಾಟಕದ ತುಂಬೆಲ್ಲಾ ಮನೆಮಾತಾದ ಈ ನಟಿಯ ನಿಜವಾದ ಹೆಸರು ಕಾವ್ಯ. ಧಾರಾವಾಹಿ ಪೂರ್ತಿ ಹಳ್ಳಿ ಹುಡುಗಿಯ ಕನ್ನಡ ಮಾತುಗಳು ಮತ್ತು ಎಂದೂ ಕೂಡ ಗಂಡನನ್ನು ಬಿಟ್ಟುಕೊಡದ ಪ್ರೀತಿ ಹಾಗೂ ಅವರು ಕಷ್ಟಗಳನ್ನು ಎದುರಿಸುತ್ತಿದ್ದ ಧೈರ್ಯ ಹಾಗೂ ನಮ್ಮ ಸಂಸ್ಕೃತಿಗೆ ಹೆಸರು ಎನ್ನುವಂತಿದ್ದ ಕಾವ್ಯ ಅವರು ಮಂಗಳ ಗೌರಿ ಎನ್ನುವ ಹೆಸರಿನಿಂದಲೇ ಸದ್ಯಕ್ಕೆ ಗುರುತಿಸಿಕೊಳ್ಳುತ್ತಿದ್ದಾರೆ.

ಧಾರಾವಾಹಿ ಇರುವಷ್ಟು ದಿನ ಇವರನ್ನು ಇದೇ ರೀತಿ ಕಾಣುತ್ತಿದ್ದ ಪ್ರೇಕ್ಷಕರಿಗೆ ಕಾವ್ಯ ಅವರು ಅಳುಮುಂಜಿ ಪಾತ್ರ ಮಾತ್ರ ಅಲ್ಲ ಬಹಳ ಕಾಮಿಡಿ ಸೆನ್ಸ್ ಇರುವ ಅದ್ಭುತ ಕಲಾವಿದೆ ಎನ್ನುವುದನ್ನು ಬಿಗ್ ಬಾಸ್ ಮನೆಗೆ ಹೋದ ಬಳಿಕ ನಿರೂಪಿಸಿದ್ದಾರೆ. ಬಿಗ್ ಬಾಸ್ ಮನೆಗೆ ಕಾವ್ಯ ಅವರು ಎಂಟ್ರಿ ಕೊಡುತ್ತಿದ್ದಂತೆ ಎಲ್ಲರೂ ಕೂಡ ಇವರು ತುಂಬಾ ಸೈಲೆಂಟ್ ಎಂದು ಕೊಂಡು ಬಿಟ್ಟಿದ್ದರು. ಮೊದಲನೇ ವಾರವೇ ಪ್ರವೀಣರು ಹಾಗೂ ನವೀನರ ಜೊತೆ ಆದ ಜೋಡಿಯಲ್ಲಿ ರೂಪೇಶ್ ಶೆಟ್ಟಿ ಅವರಿಗೆ ಜೋಡಿಯಾದ ಕಾವ್ಯ ಅವರು ವಾರಪೂರ್ತಿ ಭರ್ಜರಿ ಮನರಂಜನೆಯನ್ನು ಬಿಗ್ ಬಾಸ್ ಪ್ರೇಕ್ಷಕರಿಗೆ ನೀಡಿ ತಾವೆಂತ ಟ್ಯಾಲೆಂಟ್ ಎನ್ನುವುದನ್ನು ನಿರೂಪಿಸಿದರು.

ಸದಾ ಮನೆಯಲ್ಲಿ ಚಟುವಟಿಕೆಯಿಂದ ಕೂಡಿರುವ ಇವರು ಸಹ ಕಂಟೆಸ್ಟೆಂಟ್ಗಳನ್ನು ಯಾವಾಗಲೂ ನಗಿಸುತ್ತಿರುತ್ತಾರೆ. ಟಾಸ್ಕಳಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಳ್ಳುವ ಇವರು ಮನೆ ಪೂರ್ತಿ ಓಡಾಡಿಕೊಂಡು ಚಟುವಟಿಕೆಯಿಂದ ಲವಲವಿಕೆಯಿಂದ ಬಿಗ್ ಬಾಸ್ ಮನೆಗೆ ಕಳೆ ತುಂಬುತ್ತಿದ್ದಾರೆ. ಪ್ರತಿವಾರವೂ ಕೂಡ ಒಂದಲ್ಲ ಒಂದು ಕಂಟೆಂಟ್ ಇಂದ ಮನೆ ತುಂಬಾ ಹವಾ ಕ್ರಿಯೇಟ್ ಮಾಡುವ ಕಾವ್ಯ ಅವರು ಈ ವಾರ ಯಾಕೋ ಬೇಸರಿಸಿಕೊಂಡು ತಲೆ ಮೇಲೆ ಕೈ ಹೊತ್ತು ಕುಳಿತು ತಮ್ಮ ದುಃಖವನ್ನೆಲ್ಲ ಬಿಗ್ ಬಾಸ್ ತೋಡಿಕೊಳ್ಳುತ್ತಿದ್ದಾರೆ.

ಇವರು ಅವರ ಮನದ ದುಃಖ ಹೇಳಿಕೊಳ್ಳುವಾಗ ಸಹ ಕಂಟೆಸ್ಟೆಂಟ್ಗಳು ಬಂದು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿದ್ದರು ಕೂಡ ಕಾವ್ಯ ಅವರು ತಮಗೆ ಆಗುತ್ತಿರುವ ಸಂಕಟ ಏನು ಎನ್ನುವುದನ್ನು ಹೇಳಿಕೊಂಡ ಪರಿಗೆ ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ. ಕಾವ್ಯ ಅವರು ಬಿಗ್ ಬಾಸ್ ಬಳಿ ಈ ರೀತಿ ಹೇಳುತ್ತಿದ್ದರು ನಾನು ಎಲ್ಲರಿಗೂ ಕಾಳು ಹಾಕಿ ಪ್ರೀತಿ ತೋರಿಸಿ ಅಣ್ಣನ ರೀತಿ ಮಾಡಿಕೊಳ್ಳುತ್ತೇನೆ. ಆದರೆ ಕಾಳು ತಿಂದ ಬಳಿಕ ಅವರೆಲ್ಲಾ ಹಾರಿ ಹೋಗುತ್ತಿದ್ದಾರೆ. ಮನೆ ತುಂಬಾ ಎಲ್ಲಾ ಜೋಡಿ ಜೋಡಿ ಆಗಿ ಓಡಾಡುತ್ತಿದ್ದಾರೆ ನನಗೆ ಹೇಗೆ ಆಗುವುದಿಲ್ಲ ನನ್ನ ಕಷ್ಟವನ್ನು ಹೇಳೋಣ ಅಂದರೆ ಬಿಗ್ ಬಾಸ್ ಕೂಡ ನನಗೆ ಕಾಣಿಸುವುದಿಲ್ಲವಲ್ಲ ನನ್ನ ಜೊತೆ ನಾನು ಯಾರ ಹತ್ತಿರ ಹೇಳಿಕೊಳ್ಳಬೇಕು ನನಗೂ ಜೋಡಿ ಕಳುಹಿಸಿ ಬಿಗ್ ಬಾಸ್ ಎಂದು ಹೇಳಿಕೊಂಡಿದ್ದಾರೆ.

ಈ ರೀತಿ ಅವರು ಹೇಳಲು ಕಾರಣ ರಾಕೇಶ್ ಮತ್ತು ಅಮೂಲ್ಯ ಅವರು ಜೋಡಿಯಾಗಿ ಓಡಾಡುತ್ತಿದ್ದರು ಇದನ್ನು ನೋಡಿದ ಕಾವ್ಯ ಅವರು ಅವರನ್ನು ಕಾಲೆಳೆಯುವ ಸಲುವಾಗಿ ಈ ರೀತಿ ಮಾತನಾಡಿದ್ದಾರೆ. ರಾಕೇಶ್ ಅವರು ಹೆಚ್ಚಾಗಿ ಕಾವ್ಯ ಅವರ ಜೊತೆ ಸಲುಗೆಯಲ್ಲಿ ಇದ್ದರು, ಕಾವ್ಯ ಕೂಡ ಅವರನ್ನು ಅಣ್ಣ ಎಂದು ಕರೆಯುತ್ತಿದ್ದರು. ಇತ್ತೀಚಿಗೆ ಅಮೂಲ್ಯ ಹಾಗೂ ರಾಕೇಶ್ ಅವರು ಹೆಚ್ಚಾಗಿ ಸಮಯ ಕಳೆಯುತ್ತಿರುವ ಕಾರಣ ತಮಾಷೆಗಾಗಿ ಕಾವ್ಯ ಅವರು ಈ ರೀತಿಯಲ್ಲಿ ಮಾತನಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.