ಸ್ಯಾಂಡಲ್ ವುಡ್ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಗರ್ಭ ಶ್ರೀಮಂತನಾಗಿ ಹುಟ್ಟಿದ್ದರೂ ಇಂದು ಅವರು ಪಡೆದಿರುವ ಈ ಹೆಸರು ಹೂವಿನ ಹಾದಿಯಲ್ಲಿ ಅವರಿಗೆ ಸಿಕ್ಕಿದ್ದಲ್ಲ. ಸಿನಿಮಾ ಹೀರೋ ಆಗಬೇಕು ಎನ್ನುವ ಕನಸು ಕಂಡಿದ್ದ ಸುದೀಪ್ ಅವರು ಅದಕ್ಕಾಗಿ ಸಾಕಷ್ಟು ಕಷ್ಟ ಅವಮಾನ ಎಲ್ಲವನ್ನು ಸಹಿಸಿಕೊಂಡು ಇಂದು ಸ್ವಂತ ಪರಿಶ್ರಮದಿಂದ ಈ ಮಟ್ಟ ತಲುಪಿದ್ದಾರೆ.
ಈಗ ಸುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ನಾಯಕ ಮಾತ್ರ ಅಲ್ಲದೆ ಇಡೀ ಭಾರತದ ಎಲ್ಲಾ ಚಿತ್ರರಂಗದಲ್ಲೂ ಕೂಡ ಬಹಳ ಬೇಡಿಕೆ ಇರುವ ನಟ, ನಿಧಾನವಾಗಿ ಸುದೀಪ್ ಅವರ ಖ್ಯಾತಿ ವಿಶ್ವದಾದ್ಯಂತ ಹರಡುತ್ತಿದೆ. ಆದರೆ ಕೆಲ ಕಿಡಿಗೇಡಿಗಳು ಇಂತಹ ಹೆಮ್ಮೆಯ ನಟನ ಹೆಸರಿಗೆ ಮಸಿ ಬೆಳೆಯುವ ಪ್ರಯತ್ನ ಮಾಡತ್ತಿದ್ದಾರೆ.
ಅದೇನೆಂದರೆ, ಸುದೀಪ್ ಅವರ ಖಾಸಗಿ ವಿಡಿಯೋವನ್ನು ರಿಲೀಸ್ ಮಾಡುತ್ತೇವೆ ಎಂದು ಸುದೀಪ್ ಅವರಿಗೆ ಪತ್ರ ಬರೆದು ಕಳುಹಿಸಲಾಗಿದೆ. ಎರಡು ಪತ್ರಗಳು ಬಂದಿದ್ದು, ಆ ಎರಡು ಪತ್ರಗಳು ಕೂಡ ಸುದೀಪ್ ಮ್ಯಾನೇಜರ್ ಅವರ ಕೈ ಸೇರಿವೆ. ಪತ್ರದಲ್ಲಿ ಸುದೀಪ್ ಅವರ ಬಗ್ಗೆ ಬಹಳ ಕೇವಲವಾಗಿ ಬರೆಯಲಾಗಿದ್ದು ಕೆಟ್ಟ ಪದಗಳನ್ನು ಬಳಕೆ ಮಾಡಿ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿ ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿದೆ. ಪತ್ರ ಎಲ್ಲಿಂದ ಬಂದಿದ್ದು, ಯಾರು ಬರೆದಿರಬಹುದು ಎನ್ನುವ ಕುರಿತಾದ ತನಿಖೆಗಳು ಕೂಡ ನಡೆಯುತ್ತಿದೆ. ಜಾಕ್ ಮಂಜು ಅವರು ಕೂಡ ಇದರ ಬಗ್ಗೆ ಪ್ರತಿಕ್ರಿಯಿಸಿ ಸುದೀಪ್ ಅವರಿಗೆ ಇದರಿಂದ ಮಾನಸಿಕ ಕಿ.ರುಕುಳ ಆಗುತ್ತಿದೆ, ಅವರನ್ನು ಮಾನಸಿಕವಾಗಿ ಕುಗ್ಗಿಸಲು ಈ ಹುನ್ನಾರ ಮಾಡಲಾಗಿದೆ ಎಂದು ಕಿಡಿ ಕಾರಿದ್ದಾರೆ.
ಮತ್ತೊಂದೆಡೆ ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಕಾವು ರಂಗೀರುತ್ತಿದೆ. ಸರ್ವ ಪಕ್ಷಗಳು ಕೂಡ ಪ್ರಭಾವಿ ವ್ಯಕ್ತಿಗಳನ್ನು ತಮ್ಮ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲು ಪ್ರಯತ್ನ ನಡೆಸುತ್ತಿವೆ. ಈಗಾಗಲೇ ಸುದೀಪ್ ಅವರಿಗೆ ಕಾಂಗ್ರೆಸ್ ಮನ ಒಲಿಸುವ ಪ್ರಯತ್ನ ಮಾಡಿದೆ, ಅವರನ್ನು ಭೇಟಿ ಮಾಡಿ ಮಾತನಾಡಲಾಗಿದೆ ಎನ್ನುವ ಮಾತುಗಳು ಹರಿದಾಡಿದ್ದರೂ ಸುದೀಪ್ ಅವರು ತಾವು ಯಾವ ಪಕ್ಷ ಸೇರುವುದರ ಬಗ್ಗೆಯೂ ಹೇಳಿಕೊಂಡಿರಲಿಲ್ಲ.
ಮಾನ್ಯ ಮುಖ್ಯಮಂತ್ರಿಯಾದ ಬಸವರಾಜ್ ಬೊಮ್ಮಾಯಿ ಅವರು ಸುದೀಪ್ ಅವರಿಗೆ ಬಹಳ ಆಪ್ತರಾಗಿದ್ದಾರೆ, ಹಾಗಾಗಿ ಅವರು ಬಿಜೆಪಿಗೆ ಸಪೋರ್ಟ್ ಮಾಡುತ್ತಾರೆ ಎನ್ನುವ ನಿರೀಕ್ಷೆಯು ಇದೆ. ಏಪ್ರಿಲ್ 5 ರ ಮಧ್ಯಾಹ್ನ ಖಾಸಗಿ ಹೋಟೆಲಲ್ಲಿ ಬಿಜೆಪಿ ಪಕ್ಷ ಒಂದು ಸುದ್ದಿಗೋಷ್ಠಿ ಇಟ್ಟುಕೊಂಡಿದೆ. ಅಲ್ಲಿ ಈ ಬಗ್ಗೆ ಅನೌನ್ಸ್ ಆಗುವ ಸಾಧ್ಯತೆಗಳು ಇವೆ ಎಂದು ಊಹಾಪೋಹ ಮಾಡಲಾಗಿದೆ.
ಸುದೀಪ್ ಅವರು ಈ ಬಾರಿ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಪಕ್ಕ ಎಂದು ಸಹ ಕೆಲವು ವರದಿಗಳು ಹೇಳುತ್ತಿವೆ. ಆದರೆ ಸುದೀಪ್ ಅವರು ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳದೆ ಬರೀ ಪ್ರಚಾರ ಕಾರ್ಯದಲ್ಲಿ ಮಾತ್ರ ಭಾಗಿಯಾಗಬಹುದು ಎನ್ನುವ ಮಾತುಗಳು ಇವೆ. ಇದೆಲ್ಲ ಕುತೂಹಲಕ್ಕೂ ಇಂದು ತೆರೆ ಬೀಳಲಿದ್ದು ಸುದೀಪ್ ಅವರ ನಡೆ ಏನು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಯಲಿದೆ.
ಈಗ ಸುದೀಪ್ ಅವರ ಖಾಸಗಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತೇವೆ ಎಂದು ಬರೆದಿರುವ ಈ ಬೆದರಿಕೆ ಪತ್ರಕ್ಕೂ ಅವರ ಪಕ್ಷ ಸೇರುವುದಕ್ಕೂ ಸಂಬಂಧ ಇದೆಯಾ ಎಂದು ಕೆಲವರು ತಾಳೆ ಹಾಕಿ ನೋಡುತ್ತಿದ್ದಾರೆ. ಕರ್ನಾಟಕದ ಚಿತ್ತ ಈಗ ಸುದೀಪ್ ಅವರ ನಿಲುವು ಏನು ಎನ್ನುವುದರತ್ತ ಇದೆ ಏಪ್ರಿಲ್ 5ರ ಮಧ್ಯಾನದ ವರೆಗೂ ಕಾದು ನೋಡೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.