Sunday, May 28, 2023
HomeViral Newsಹಿಜಾಬ್ ವಿಚಾರದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಶಾಪ ತಟ್ಟಿ ಕಿರಿಕ್ ಕೀರ್ತಿ ಅವರಿಗೆ ಇಂದು ಈ...

ಹಿಜಾಬ್ ವಿಚಾರದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಶಾಪ ತಟ್ಟಿ ಕಿರಿಕ್ ಕೀರ್ತಿ ಅವರಿಗೆ ಇಂದು ಈ ಪರಿಸ್ಥಿತಿ ಬಂದಿದ್ದ.? ಈ ಬಗ್ಗೆ ಕೀರ್ತಿ ಏನಂದ್ರು ನೋಡಿ. ಹಾಲಿನಂತಿದ ಸಂಸಾರ ಇಂದು ಬೀದಿ ಪಾಲು.

 

ಕಿರಿಕ್ ಕೀರ್ತಿ ಕಳೆದ ಎರಡು ವಾರಗಳಿಂದಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆ ಆಗುತ್ತಿರುವ ಹೆಸರು ಕಿರಿಕ್ ಕೀರ್ತಿಯವರು ಇದ್ದಕ್ಕಿದ್ದ ಹಾಗೆ ಹಾಕಿದ ಪೋಸ್ಟ್ ಗಳು ಇಂದು ಅವರ ಬಗ್ಗೆ ಜನ ಚರ್ಚೆ ಮಾಡುವಂತೆ ಅವರ ಸಂಸಾರದ ಗುಟ್ಟು ರಟ್ಟು ಆಗುವಂತೆ ಮಾಡಿದೆ. ಕೊನೆಗೆ ಲೈವಲ್ಲಿ ಬಂದ ಕಿರಿಕ್ ಕೀರ್ತಿಯವರು ಅದೆಲ್ಲಾ ನಮ್ಮ ಭಾವನೆಗಳು, ಗೊತ್ತಿಲ್ಲದ ವಿಚಾರಗಳ ಬಗ್ಗೆ ನೆಗೆಟಿವ್ ಆಗಿ ಬರೆಯಬೇಡಿ ಅದರಲ್ಲೂ ಸಂಸಾರದ ವಿಷಯಕ್ಕೆ ಬರಬೇಡಿ ಎಂದು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಕಲಿತಿರುವ ಕೀಬೋರ್ಡ್ ವಾರಿಯರ್ಸ್ ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು.

ಬಳಿಕ ಸೈಕಲ್ ಗ್ಯಾಪ್ ಎನ್ನುವ ಯೌಟ್ಯೂಬ್ ಚಾನೆಲ್ ಅಲ್ಲಿ ಸಂದರ್ಶನ ನೀಡಿದ ಕೀರ್ತಿ ಅವರು ಜನ ಈಗ ಕೀರ್ತಿ ಅವರಿಗೆ ಮಾಡುತ್ತಿರುವ ಕೆಟ್ಟ ಕಮೆಂಟ್ಗಳ ಬಗ್ಗೆ ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ. ಮುಖ್ಯವಾಗಿ ಕಿರಿಕ್ ಕೀರ್ತಿ ಅವರಿಗೆ ಬಂದ ಕಮೆಂಟ್ ಗಳಲ್ಲಿ ನೀನು ಹಿಜಾಬ್ ವಿಷಯದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಆ ರೀತಿ ಮಾಡಿದ್ದು, ನಿನಗೆ ಶಾಪ ತಟ್ಟಿದೆ ಹಾಗಾಗಿ ನಿನ್ನ ಸಂಸಾರ ಹೀಗಾಗಿದೆ ಎನ್ನುವ ಮಾತು ಕೀರ್ತಿ ಅವರನ್ನು ಬಹಳ ಕಾಡಿದೆ.

ಯಾಕೆಂದರೆ ಕಿರಿಕ್ ಕೀರ್ತಿ ಅವರು ಹಿಜಾಬ್ ಗಲಾಟೆ ಸಮಯದಲ್ಲಿ ಕಳೆದ ವರ್ಷ ಕರ್ನಾಟಕದಲ್ಲಿ ಆಗಿದ್ದ ಆ ಸಂಘರ್ಷದ ಸಂದರ್ಭದಲ್ಲಿ ನ್ಯಾಯಾಲಯದ ಕೊಟ್ಟ ತೀರ್ಪನ್ನು ಎತ್ತಿ ಹಿಡಿದಿದ್ದರು. ಆದರೆ ಅದನ್ನು ಜನರಿಗೆ ತಲುಪಿಸುವ ರೀತಿ ಬೇರೆ ರೀತಿ ಆಗಿತ್ತು. ಅವರು ಮುಸ್ಲಿಂ ಹೆಣ್ಣು ಮಕ್ಕಳನ್ನು ವಿಡಂಬನೆ ಮಾಡುವ ಉದ್ದೇಶದಿಂದ ಅಲ್ಲದಿದ್ದರೂ ಪರಿಸ್ಥಿತಿ ಹೀಗಾದರೆ ಹೇಗಾಗಬಹುದು ಎನ್ನುವ ಸಂಗತಿ ಅರ್ಥ ಮಾಡಿಸುವ ಸಲುವಾಗಿ ಮುಸ್ಲಿಂ ಯುವತಿಯರು ಹಿಜಾಬ್, ಬುರ್ಖಾ ತೆಗೆಯುವುದಿಲ್ಲ.

ಆದರೆ ನನಗೆ ಹಲ್ಲು ನೋವಿಗೆ ಚಿಕಿತ್ಸೆ ಬೇಕು ಎಂದು ಡೆಂಟಿಸ್ಟ್ ಬಳಿ ಹೋದರೆ ಹೇಗೆ ಎನ್ನುವುದನ್ನು ಸ್ವಲ್ಪ ಕಿಂಡಲ್ ಆಗಿಯೇ ಹೇಳಿದ್ದರು ಈಗ ಅನೇಕರು ನೀನು ಅಂದು ಆ ಹೆಣ್ಣು ಮಕ್ಕಳಿಗೆ ಆ ರೀತಿ ಮಾಡಿದ್ದು ಈಗ ನಿನಗೆ ಶಾಪವಾಗಿ, ಕರ್ಮವಾಗಿ ಕಾಡುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರಂತೆ. ಅದರ ಬಗ್ಗೆ ಮಾತನಾಡುವ ಕೀರ್ತಿ ಅವರು ಒಬ್ಬ ಜರ್ನಲಿಸ್ಟ್ ಆಗಿ ನ್ಯಾಯಾಲಯ ಕೊಟ್ಟ ತೀರ್ಪನ್ನು ನಾನು ಜನರಿಗೆ ಹೆಚ್ಚು ಪರಿಣಾಮಕಾರಿಯಾಗಿ ಮುಟ್ಟಿಸುವ ಪ್ರಯತ್ನ ಮಾಡಿದೆ.

ಒಬ್ಬೊಬ್ಬರ ನಿರೂಪಣ ಶೈಲಿ ಒಂದೊಂದು ರೀತಿ ಇರುತ್ತದೆ, ನಾನು ನನ್ನ ವೃತ್ತಿ ಧರ್ಮ ಮಾಡಿದ್ದೇನೆ. ಜೊತೆಗೆ ನಾವು ಮಾಡಿದ ತಪ್ಪಿಗಾಗಿ ನಾವು ಶಿಕ್ಷೆ ಪಟ್ಟರೆ ಅದು ನಮ್ಮ ಪಾಪ ಯಾರೋ ಮಾಡಿದ ತಪ್ಪಿಗೆ ಅಥವಾ ಮಾಡದ ತಪ್ಪಿಗೆ ಶಿಕ್ಷೆ ಪಟ್ಟರೆ ಅದು ಖಂಡಿತ ಶಾಪವಲ್ಲ. ನನ್ನ ನಿಲುವು ಇಷ್ಟೇ, ಸೈದ್ಧಾಂತಿಕವಾಗಿ ನೀನು ಒಂದು ಪಕ್ಷ ಅಥವಾ ಒಂದು ಸಿದ್ಧಾಂತವನ್ನು ಇಷ್ಟಪಡುವುದಾದರೆ ನಾನು ಯಾಕೆ ಇಷ್ಟಪಡಬಾರದು ಅದರ ಬಗ್ಗೆ ಯಾಕೆ ಮಾತನಾಡಬಾರದು ಸೈದಾಂತಿಕವಾಗಿ ಸಾಧ್ಯವಾದರೆ ನನ್ನನ್ನು ವಿರೋಧಿಸಿ ಆದರೆ ಪರ್ಸನಲ್ ವಿಷಯಕ್ಕೆ ಬರಬೇಡಿ ಎಂದು ಈ ರೀತಿ ಸ್ಪಷ್ಟನೆ ಕೊಟ್ಟಿದ್ದಾರೆ.

ಜೊತೆಗೆ ಇದು ಕಾಲ ಆಡುತ್ತಿರುವ ಆಟ ಅಷ್ಟೇ, ಲೈಫ್ ಎನ್ನುವ ಗ್ರಾಫ್ ಅಲ್ಲಿ ಈ ಅಪ್ ಆಂಡ್ ಡೌನ್ಸ್ ಕಾಮನ್ ಅದು ಸಮಯ ತೆಗೆದುಕೊಳ್ಳುತ್ತಿದೆ ಮುಂದೆ ಏನಾಗುತ್ತದೆ ನೋಡೋಣ ಎಂದು ಹೇಳಿ ಅರ್ಪಿತ ಅವರ ಜೊತೆ ಮತ್ತೆ ಒಂದಾಗುವ ಮನಸಿರುವ ಬಗ್ಗೆ ಸುಳಿವು ನೀಡಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಆಗಿ ಕಮೆಂಟ್ ಮಾಡುವವರಿಗೆ ಮತ್ತೊಮ್ಮೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.