2024ರ ರಥ ಸಪ್ತಮಿ ಫೆಬ್ರವರಿ 16 ರಂದು ಬಂದಿದೆ. ಈ ದಿನ ಸೂರ್ಯನ ಆಶೀರ್ವಾದ ತುಂಬಾ ಮುಖ್ಯ. ವಿಶೇಷ ಪೂಜೆ ಮಾಡಿದಾಗ ಜಾತಕದಲ್ಲಿ ಸೂರ್ಯನ ಸ್ಥಾನವನ್ನು ಬಲಗೊಳಿಸಬಹುದು. ಪೂಜೆ ವಿಧಾನ ಸೇರಿ ಅಗತ್ಯ ಮಾಹಿತಿ ಇಲ್ಲಿದೆ.
* ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ನಂತರ ಮಾಘ ಮಾಸದ ಶುದ್ಧ ಸಪ್ತಮಿಯಂದು ರಥಸಪ್ತಮಿ ಆಚರಿಸಲಾಗುತ್ತದೆ. 2024ರ ಫೆಬ್ರವರಿ 16 ರಂದು ರಥ ಸಪ್ತಮಿ ಹಬ್ಬ ಬಂದಿದೆ. ಈ ದಿನದಿಂದ ಸೂರ್ಯನ ರಥ ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಪ್ರಮಾಣಿಸುತ್ತಾನೆ. ಸೂರ್ಯನು ಎಲ್ಲಾ 12 ರಾಶಿಗಳನ್ನು ಸುತ್ತಲು ಒಂದು ವರ್ಷ ತೆಗೆದುಕೊಳ್ಳುತ್ತಾನೆ.
ಒಂದು ತಿಂಗಳು ಒಂದು ರಾಶಿಯಲ್ಲಿ ಸಂಚರಿಸುತ್ತಾನೆ. ಅದಿತಿ ಮತ್ತು ಕಶ್ಯಪ ದಂಪತಿಗೆ ಸೂರ್ಯ ಜನಿಸಿದ ದಿನವಾದ ಕಾರಣವಾಗಿ ಈ ದಿನ ರಥ ಸಪ್ತಮಿಯನ್ನು ಆಚರಿಸಲಾಗುತ್ತದೆ. ಇದನ್ನು ಸೂರ್ಯ ಜಯಂತಿ ಅಂತಲೂ ಕರೆಯುತ್ತಾರೆ. ರಥಸಪ್ತಮಿ ಅಥವಾ ಸೂರ್ಯ ಜಯಂತಿ ದಿನದಂದು ಪೂಜೆ ಮಾಡುವ ವಿಧಾನ.
ಈ ಸುದ್ದಿ ಓದಿ:- ಸಾಲ ತೀರಲು, ಮನೆ ಅಭಿವೃದ್ಧಿಯಾಗಲು ಜನರ ಕೆಟ್ಟ ದೃಷ್ಟಿ ಹೋಗಲು ಕಲ್ಲು ಉಪ್ಪಿನಿಂದ ಈ ಸಣ್ಣ ಕೆಲಸ ಮಾಡಿ ಸಾಕು.!
* ರಥಸಪ್ತಮಿಯ ದಿನ ಬೆಳಗ್ಗೆ ಬೇಗ ಎದ್ದು ಪುಣ್ಯಸ್ನಾನ ಮಾಡಿ ಸೂರ್ಯನಿಗೆ ನೀರು ಅರ್ಪಿಸಬೇಕು. ಇದನ್ನೇ ಅರ್ಥ್ಯಂ ಎನ್ನುತ್ತಾರೆ. ಪೂಜೆ ಮಾಡಲು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ. ಸೂರ್ಯೋದಯಕ್ಕೆ ಅರ್ಪಿಸುವ ನೀರಿನಲ್ಲಿ ಎಳ್ಳು ಮತ್ತು ಎಕ್ಕದ ಎಲೆಯನ್ನು ಸೇರಿಬೇಕು. ಓಂ ಸೂರ್ಯಾಯ ನಮಃ ಎಂಬ ಮಂತ್ರವನ್ನು ಪಠಿಸುವ ಮೂಲಕ ಅರ್ಥ್ಯವನ್ನು ಅರ್ಪಿಸಬೇಕು.
* ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಸೂರ್ಯನಿಗೆ ನೀರು ಅರ್ಪಿಸಿದರೆ ಸೂರ್ಯ ದೇವರ ಆಶೀರ್ವಾದ ಸಿಗುತ್ತದೆ. ತಲೆಯ ಮೇಲೆ 7 ಎಕ್ಕದ ಗಿಡದ ಎಲೆಗಳನ್ನು ಇಟ್ಟುಕೊಂಡು ಸ್ನಾನ ಮಾಡಿದರೆ 7 ಜನ್ಮಗಳಲ್ಲಿ ಮಾಡಿದ್ದ ಪಾಪಗಳು ಹೋಗುತ್ತವೆ ಎಂಬ ನಂಬಿಕೆ ಇದೆ. ಎಕ್ಕದ ಎಲೆಗಳಿಗೆ ಅರ್ಕ ಪತ್ರ ಅಂತಲೂ ಕರೆಯುತ್ತಾರೆ. ಸೂರ್ಯನಿಗೆ ಅರ್ಕ ಎಂಬ ಹೆಸರು ಕೂಡ ಇದೆ. ಹಾಗಾಗಿಯೇ ಸೂರ್ಯನಿಗೆ ಎಕ್ಕದ ಗಿಡಿದ ಎಲೆಗಳೆಂದರೆ ಇಷ್ಟ.
* ದೇಶದ ಹಲವು ಪ್ರಮುಖ ದೇವಾಲಯಗಳಲ್ಲಿ ರಥ ಸಪ್ತಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನಿಮ್ಮ ಜಾಕದಲ್ಲಿ ಸೂರ್ಯನ ಸ್ಥಾನ ದುರ್ಬಲವಾಗಿದ್ದರೆ ರಥ ಸಪ್ತಮಿಯ ದಿನದಂದು ಉಪವಾಸದ ಮೂಲಕ ಪೂಜೆ ಮಾಡಿದರೆ ಸೂರ್ಯನ ಕೃಪೆಗೆ ಪಾತ್ರರಾಗಬಹುದು. ರಥಸಪ್ತಮಿಯಂದು ಆದಿತ್ಯ ಹೃದಯ ಪಾರಾಯಣ ಮತ್ತು ಸೂರ್ಯಾಷ್ಟಕವನ್ನು ಓದುವುದರಿಂದ ಜೀವನದಲ್ಲಿ ಎಲ್ಲವೂ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ.
ಈ ಸುದ್ದಿ ಓದಿ:- ಹೆಣ್ಣು ಮಕ್ಕಳು ತವರಿನ ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು ಮತ್ತು ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಲು ಸಾಧ್ಯವಿಲ್ಲ.!
ಸೂರ್ಯನ ರಥ ವಿಶಿಷ್ಟವಾಗಿದೆ. ಸೂರ್ಯನು ಏಳು ಕುದುರೆಗಳ ಮೇಲೆ ಸಂಚಾರ ಮಾಡುತ್ತಲೇ ಇರುತ್ತಾನೆ. ಸೂರ್ಯ ರಥದ ಏಳು ಕುದುರೆಗಳು 12 ಚಕ್ರಗಳು, 7 ವಾರಗಳು ಮತ್ತು 12 ರಾಶಿಗಳನ್ನು ಪ್ರತಿನಿಧಿಸುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಸೂರ್ಯ ಸಂಚರಿಸುವ ಕುದುರೆಗಳ ಹೆಸರುಗಳು.
1) ಗಾಯತ್ರಿ
2) ತ್ರಿಷ್ಣುಭ
3) ಅನುಷ್ಟಭ
4) ಜಗತಿ
5) ಪಂಕ್ತಿ
6) ಬೃಹತಿ
7) ಉಷ್ನಿಹಿ
ಸೂರ್ಯನು ಮೇಷ ರಾಶಿಯಿಂದ ಮೀನ ರಾಶಿಗೆ ಪ್ರಯಾಣಿಸಲು ಒಂದು ವರ್ಷ ಬೇಕಾಗುತ್ತದೆ. ಪ್ರತಿ ತಿಂಗಳು ಪ್ರತಿ ಚಿಹ್ನೆಯಲ್ಲಿ ಚಲಿಸುತ್ತದೆ. ಸೂರ್ಯನನ್ನು ದ್ವಾದಶ ಆದಿತ್ಯ ಎಂದೂ ಕರೆಯುತ್ತಾರೆ. ಭಗವಾನ್ ಸೂರ್ಯನನ್ನು ತಿಂಗಳಿಗೆ ಅನುಗುಣವಾಗಿ 12 ರೂಪಗಳಲ್ಲಿ ಪೂಜಿಸಲಾಗುತ್ತದೆ. ಒಬ್ಬನೇ ಸೂರ್ಯ ಆದರೆ ಒಂದು ತಿಂಗಳಿಗೆ ಅನುಗುಣವಾಗಿ 12 ರೂಪಗಳಲ್ಲಿ ಪೂಜಿಸಲಾಗುತ್ತದೆ. ಒಂದೇ ತಿಂಗಳಲ್ಲಿ ಸೂರ್ಯನ ತೀವ್ರತೆಯಿಂದ 12 ಹೆಸರುಗಳು ಬಂದಿವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.