Sunday, June 4, 2023
HomeEntertainmentಕ್ರಾಂತಿ ಸಿನಿಮಾ ಬುಕ್ಕಿಂಗ್ ಸ್ಟಾರ್ಟ್ ಆದ 1 ಗಂಟೆಗೆ ಎಷ್ಟು ಟಿಕೆಟ್ ಸೋಲ್ಡ್ ಔಟ್ ಆಗಿದೆ...

ಕ್ರಾಂತಿ ಸಿನಿಮಾ ಬುಕ್ಕಿಂಗ್ ಸ್ಟಾರ್ಟ್ ಆದ 1 ಗಂಟೆಗೆ ಎಷ್ಟು ಟಿಕೆಟ್ ಸೋಲ್ಡ್ ಔಟ್ ಆಗಿದೆ ಗೊತ್ತ.? ಎಲ್ಲಾ ದಾಖಲೆ ಪುಡಿ ಪುಡಿ…!

ಕಾಂತಿ ಚಿತ್ರ ಬಿಡುಗಡೆಗೆ ಕೌಂಟ್ ಡೌನ್ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಸೋಲ್ಡ್ ಔಟ್ ಎಲ್ಲಾ ದಾಖಲೆ ಪುಡಿ ಪುಡಿ. ಬುಕ್ಕಿಂಗ್ ಸ್ಟಾರ್ಟ್ ಆದ 3 ಗಂಟೆಗೆ ಎಷ್ಟು ಸಾವಿರ ಟಿಕೆಟ್ ಮಾರಾಟವಾಗಿ ಗೊತ್ತ.? ಕ್ರಾಂತಿ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಬೇಕಿತ್ತು, ಆದರೆ ಪ್ರೊಡಕ್ಷನ್ ಕೆಲಸಗಳು ಮತ್ತು ಇತರ ಕಾರಣದಿಂದ ಜನವರಿ 26ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಈ ದಿನ ಚಿತ್ರ ಬಿಡುಗಡೆ ಆಗುತ್ತದೆ ಎಂದು ಹೇಳಿದ ದಿನದಿಂದಲೂ ಕೂಡ ದರ್ಶನ್ ಅವರ ಅಭಿಮಾನಿಗಳು ಈ ದಿನಕ್ಕಾಗಿ ಕಾಯುತ್ತಿದ್ದಾರೆ. ಇನ್ನೇನು ಆ ದಿನ ಬಂದೆ ಬಿಟ್ಟಿತು.

ಜನವರಿ 26ರಂದು ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್ ಉಡೀಸ್ ಮಾಡುವ ಲಕ್ಷಣಗಳನ್ನು ಈಗಾಗಲೇ ತೋರಿಸುತ್ತಿದೆ. ಸಿನಿಮಾ ಬಿಡುಗಡೆಗೆ ಮೂರು ದಿನ ಮುನ್ನ ಇರುವಾಗಲೇ ಎಲ್ಲಾ ಕಡೆ ಸಿನಿಮಾ ಟಿಕೆಟ್ ಬುಕಿಂಗ್ ಜೋರಾಗಿ ನಡೆಯುತ್ತಿದ್ದು ಫಸ್ಟ್ ಡೇ ಫಸ್ಟ್ ಶೋ ನೋಡುವುದಕ್ಕಾಗಿ ತುದಿಗಾಲಲ್ಲಿ ಎಲ್ಲರೂ ಕಾಯುತ್ತಿದ್ದಾರೆ.

ಫಸ್ಟ್ ಶೋ ಜೊತೆಗೆ ಅನೇಕ ಶೋಗಳ ಟಿಕೆಟ್ ಅನ್ನು ಈಗಾಗಲೇ ಕಾದಿರಿಸಲಾಗುತ್ತಿದೆ. ಸ್ಯಾಂಡಲ್ ವುಡ್ ಅಲ್ಲಿ ಕ್ರಾಂತಿ ಸಂಭ್ರಮ ಜೋರಾಗಿ ನಡೆಯುತ್ತಿದ್ದು ಒಂದೆಡೆ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ಸ್ನೇಹಿತರು ಜೊತೆ ಕುಟುಂಬದವರ ಜೊತೆ ಹೋಗುವುದಕ್ಕೆ ತಯಾರಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಗುರುವಾರ ದರ್ಶನ್ ಅವರ ಕಟೌಟನ್ನು ಬಹು ಎತ್ತರದಲ್ಲಿ ನಿಲ್ಲಿಸಲು ತಯಾರಿ ಶುರು ಆಗಿದೆ.

ಡಿ.ಬಾಸ್ ಮಾಸ್ ಸಿನಿಮಾ ಕ್ರಾಂತಿ ಬಾಕ್ಸ್ ಆಫೀಸ್ ಅಲ್ಲಿ ಚೆನ್ನಾಗಿ ಓಪನಿಂಗ್ ಪಡೆದುಕೊಳ್ಳುತ್ತಿದೆ ಹಾಗೆ ತನ್ನ ಪ್ರದರ್ಶನವನ್ನು ಭರ್ಜರಿಯಾಗಿ ಮುಂದುವರಿಸುವ ಲಕ್ಷಣಗಳನ್ನು ತೋರುತ್ತಿದೆ. ವಿ ಹರಿಕೃಷ್ಣ ಅವರ ನಿರ್ದೇಶನದ ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ನಾಯಕ ನಟಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಕ್ರೇಜಿಸ್ಟಾರ್ ರವಿಚಂದ್ರನ್, ಸುಮಲತಾ ಅಂಬರೀಶ್, ಆರುಮುಗ ರವಿಶಂಕರ್, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಮುಂತಾದವರ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.

ಜನವರಿ 26ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿರುವ ಈ ಸಿನಿಮಾ ಬೆಳಿಗ್ಗೆ ಟಿಕೆಟ್ ಬುಕಿಂಗ್ ಓಪನ್ ಆಗುತ್ತಾ ಇದ್ದಂತೆ ಅಭಿಮಾನಿಗಳು ಟಿಕೆಟ್ ಕಾಯ್ದಿರಿಸಲು ಮುಗಿ ಬೀಳುತ್ತಾ ಇದ್ದರು. ಕೆಲವೇ ನಿಮಿಷಗಳಲ್ಲಿ ಎರಡು ಅರ್ಲಿ ಮಾರ್ನಿಂಗ್ ಶೋಗಳು ಸೋಲ್ಡ್ ಔಟ್ ಆಗಿ ಬಿಟ್ಟವು. 3 ಗಂಟೆಗಳಲ್ಲಿ 25,000 ಟಿಕೆಟ್ ಗಳು ದಾಖಲೆ ಬರೆದಿದೆ. ಟಿಕೆಟ್ಗಳ ಪ್ರೈಸ್ ನೋಡುತ್ತಾ ಇದ್ದರೆ ಕ್ರಾಂತಿ ಸಿನಿಮಾವು ಮೊದಲ ದಿನವೇ ಕಲೆಕ್ಷನ್ ಅಲ್ಲೂ ಕೂಡ ಬಾರಿ ಬಾಚಿ ಸದ್ದು ಮಾಡುವ ಸಾಧ್ಯತೆಗಳು ಕಾಣುತ್ತಿದೆ.

ಈಗಾಗಲೇ 13 ಶೋಗಳ ಟಿಕೆಟ್ ಕಂಪ್ಲೀಟ್ ಆಗಿ ಸೋಲ್ಡ್ ಔಟ್ ಆಗಿದ್ದು. ಬೆಳ್ಳಂ ಬೆಳಗ್ಗೆ 5.30 6:00ಗೆ ಮೊದಲ ಪ್ರದರ್ಶನ ಶುರು ಆಗುತ್ತದೆ. ಜನವರಿ 26ರಂದು ಬೆಳಿಗ್ಗೆ ಸೂರ್ಯ ಉದಯಿಸುವ ಸಮಯಕ್ಕೆ ಸರಿಯಾಗಿ ಥಿಯೇಟರ್ ಗಳಲ್ಲಿ ಕ್ರಾಂತಿ ದರ್ಶನವು ಸಿಗಲಿದೆ ಬೆಂಗಳೂರಿನ ಕೆಜಿ ರಸ್ತೆಯ ಅನುಪಮ ಹಾಗೂ ಮಾಗಡಿ ರಸ್ತೆಯ ವೀರೇಶ್ ಥೇಟರ್ನಲ್ಲಿ ಬೆಳಗಿನ ಎರಡು ಪ್ರದರ್ಶನವೂ ಹೌಸ್ ಫುಲ್ ಆಗಿದೆ.

ಇನ್ನುಳಿದಂತೆ ಮೋಹನ್, ಉಲ್ಲಾಸ್, ಪ್ರಸನ್ನ, ಸಿದ್ದಲಿಂಗೇಶ್ವರ ಅನೇಕ ಕಡೆ ಅಲ್ಲಿ ಮಾರ್ನಿಂಗ್ ಶೋ ಗಳು ಫುಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳ ಪ್ರೀಮಿಯರ್ ಶೋಗಳು ನಡೆಯುತ್ತಾ ಇದೆ. ಒಂದು ದಿನ ಮುಂಚಿಗೆ ಸ್ಪೆಷಲ್ ಶೋ ಗಳನ್ನು ಏರ್ಪಡಿಸಲಾಗುತ್ತದೆ. ಚಾರ್ಲಿ 777, ಗಂಧದಗುಡಿ ಸೇರಿದಂತೆ ಅನೇಕ ಚಿತ್ರಗಳ ಪ್ರೀಮಿಯರ್ ಶೋ ಯಶಸ್ವಿಯಾಗಿತ್ತು. ಆದರೆ ಕ್ರಾಂತಿ ಸಿನಿಮಾ ಪ್ರೇಮಿಯ ಶೋ ಮಾಡುತ್ತಿಲ್ಲ ಗುರುವಾರ ಬೆಳಿಗ್ಗೆ ಸಿನಿಮಾ ರಿಲೀಸ್ ಆಗುತ್ತಿದೆ. ಬಾರಿ ನಿರೀಕ್ಷೆ ಹುಟ್ಟುವ ಹಾಕಿರುವ ಕ್ರಾಂತಿ ಸಿನಿಮಾದ ಕ್ರಾಂತಿ ಹೇಗಿರುತ್ತದೆಂದು ನೋಡಲು ಇಡೀ ಕರ್ನಾಟಕ ಕಾಯುತ್ತಿದೆ.