ಒಡೆದ ಹಿಮ್ಮಡಿಗಳನ್ನು ಬೇರೆಯವರು ನೋಡಿದರೆ ನಮಗೆ ಮುಜುಗರ ಎನ್ನಿಸುತ್ತದೆ ಅದೇ ರೀತಿ ಒಡೆದ ಹಿಮ್ಮಡಿಗಳು ನಮಗೆ ಅಷ್ಟೇ ನೋವನ್ನು ಸಹ ಉಂಟುಮಾಡುತ್ತದೆ. ಒಡೆದ ಹಿಮ್ಮಡಿಗಳಿದ್ದರೆ ನಡೆದಾಡಲು ಸಹ ತುಂಬಾ ಕಷ್ಟವಾಗುತ್ತದೆ ಇದೇ ರೀತಿಯ ಸಮಸ್ಯೆಯನ್ನು ನಮ್ಮಲ್ಲಿ ಹೆಚ್ಚಿನ ಜನ ಅನುಭವಿಸುತ್ತಿದ್ದಾರೆ.
ಆದರೆ ಈ ನೋವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಅವರು ಮಾರುಕಟ್ಟೆಗಳಲ್ಲಿ ಸಿಗುವಂತಹ ಹಲವಾರು ಪದಾರ್ಥಗಳನ್ನು ತಂದು ಉಪಯೋಗಿಸುತ್ತಿರುತ್ತಾರೆ. ಆದರೆ ಅವು ಸ್ವಲ್ಪ ದಿನದ ಮಟ್ಟಿಗೆ ನೋವನ್ನು ಕಡಿಮೆ ಮಾಡುತ್ತದೆ ಆದರೆ ಮತ್ತೆ ಆ ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಅವುಗಳನ್ನು ಉಪಯೋಗಿಸುವುದು ಅಷ್ಟು ಸೂಕ್ತವಲ್ಲ.
ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅಂದರೆ ಈಗ ನಾವು ಹೇಳುವಂತಹ ಈ ಒಂದು ಕ್ರೀಮ್ ಅನ್ನು ನೀವೇ ನಿಮ್ಮ ಮನೆಯಲ್ಲಿ ತಯಾರಿಸಿಕೊಂಡು ಅದನ್ನು ನಿಮ್ಮ ಒಡೆದ ಹಿಮ್ಮಡಿಗಳಿಗೆ ಹಚ್ಚುತ್ತಾ ಬಂದರೆ ಸಾಕು ನಿಮ್ಮ ಒಡೆದ ಹಿಮ್ಮಡಿಗಳು ಸರಿಹೋಗುತ್ತದೆ ಹಾಗೂ ಹಿಮ್ಮಡಿಗಳಲ್ಲಿ ಇರುವಂತಹ ಬಿರುಕುಗಳೆಲ್ಲವೂ ಸಹ ಮುಚ್ಚುತ್ತದೆ.
ಈ ಸುದ್ದಿ ಓದಿ:- ತಪ್ಪಿಯೂ ಈ 10 ಆಹಾರಗಳನ್ನು ಫ್ರಿಡ್ಜ್ ನಲ್ಲಿ ಇಡಬೇಡಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.!
ಯಾವುದೇ ರೀತಿಯ ನೋವು ಸಹ ಉಂಟಾಗುವುದಿಲ್ಲ ಹಾಗಾದರೆ ಈ ದಿನ ಒಡೆದ ಹಿಮ್ಮಡಿಗಳನ್ನು ಹೇಗೆ ಸರಿ ಮಾಡುವುದು ಹಾಗೂ ಆ ಒಂದು ಕ್ರೀಮ್ ಅನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ. ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಅದಕ್ಕೂ ಮೊದಲು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಸಾಮಾನ್ಯವಾಗಿ ಗಂಡು ಮಕ್ಕಳು ಈ ಒಡೆದ ಹಿಮ್ಮಡಿಯ ಬಗ್ಗೆ ಹೆಚ್ಚು ಗಮನವನ್ನು ವಹಿಸುವುದಿಲ್ಲ ಆದರೆ ಹೆಣ್ಣು ಮಕ್ಕಳು ತಮ್ಮ ಸೌಂದರ್ಯದ ವಿಚಾರವಾಗಿ ಯಾವುದೇ ರೀತಿಯ ಸಮಸ್ಯೆ ಉಂಟಾದರೂ ಕೂಡ ಅವರು ಸೌಂದರ್ಯವನ್ನು ಕಾಪಾಡಿಕೊಳ್ಳುವು ದಕ್ಕೆ ಮುಂದಾಗುತ್ತಾರೆ.
ಅದೇ ರೀತಿಯಾಗಿ ಒಡೆದ ಹಿಮ್ಮಡಿಗಳನ್ನು ಸಹ ಸರಿಪಡಿಸಿಕೊಳ್ಳುವುದಕ್ಕೆ ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ ಕೆಲವೊಮ್ಮೆ ಒಡೆದ ಹಿಮ್ಮಡಿಗಳನ್ನು ಮುಚ್ಚುವಂತಹ ಪಾದರಕ್ಷೆಗಳನ್ನು ಹಾಗೂ ಶೂಗಳನ್ನು ಅತಿ ಹೆಚ್ಚಾಗಿ ಉಪಯೋಗಿಸುತ್ತಿರುತ್ತಾರೆ. ಆದರೆ ಇನ್ನು ಮುಂದೆ ಈ ವಿಧಾನ ಅನುಸರಿಸುವ ಅಗತ್ಯವಿಲ್ಲ ಎಂದೇ ಹೇಳಬಹುದು.
ಈ ಸುದ್ದಿ ಓದಿ:-10 ವರ್ಷದ ಹಳೆಯ ಕುಕ್ಕರ್ ಆಗಿದ್ದರೂ ಮತ್ತೆ ಹೊಸದರಂತೆ ಕಾಣುವ ಹಾಗೆ ಮಾಡಬಹುದು, ಈ ಸಿಂಪಲ್ ಟ್ರಿಕ್ ಉಪಯೋಗಿಸಿ…
ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಅನುಸರಿಸುವುದು ಬಹಳ ಮುಖ್ಯ ಹಾಗೂ ತಮ್ಮ ಎಲ್ಲಾ ಒಡೆದ ಹಿಮ್ಮಡಿಗಳ ಸಮಸ್ಯೆಗಳನ್ನು ಈ ವಿಧಾನ ಅನುಸರಿಸುವುದರಿಂದ ಸರಿ ಪಡಿಸಿಕೊಳ್ಳಬಹುದಾಗಿದೆ. ಹಾಗಾದಈ ಆ ಒಂದು ಕ್ರೀಮ್ ಅನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು ಎಂದು ಈ ಕೆಳಗೆ ತಿಳಿಯೋಣ.
* ಒಂದು ಚಮಚ ವ್ಯಾಸಲಿನ್
* ಗ್ಲಿಸರಿನ್ ಅಥವಾ ಅಲೋವೆರಾ ಜೆಲ್
* ಕೊಬ್ಬರಿ ಎಣ್ಣೆ
* ನಿಂಬೆ ಹಣ್ಣಿನ ರಸ
ಹೀಗೆ ಇಷ್ಟು ಪದಾರ್ಥಗಳನ್ನು ಸಹ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಇವೆಲ್ಲವನ್ನು ಸಹ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಉಪಯೋಗಿಸುವ ವಿಧಾನ :- ಮೊದಲು ಒಂದು ಅಗಲವಾದ ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಹಾಕಿ ಅದರಲ್ಲಿ ಎರಡು ಚಮಚ ಉಪ್ಪು ಹಾಗೂ ಅರ್ಧ ಹೋಳು ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದರಲ್ಲಿ ನಿಮ್ಮ ಪಾದಗಳನ್ನು ಇಟ್ಟು 5 ರಿಂದ 10 ನಿಮಿಷ ಬಿಟ್ಟು ಒಂದು ಸ್ಕ್ರಬ್ಬರ್ ಇಂದ ನಿಮ್ಮ ಕಾಲನ್ನು ಉಜ್ಜಿ ತೊಳೆಯಬೇಕು.
ಆನಂತರ ನಿಮ್ಮ ಕಾಲುಗಳನ್ನು ಒರೆಸಿ ಆನಂತರ ಮೇಲೆ ಹೇಳಿದ ಕ್ರೀಮ್ ಅನ್ನು ಹಚ್ಚಬೇಕು ಈ ರೀತಿ ಹಚ್ಚುತ್ತಾ ಬರುವುದರಿಂದ ನಿಮ್ಮ ಪಾದಗಳಲ್ಲಿ ಉಂಟಾಗಿರುವಂತಹ ಸೀಳುವಿಕೆ ನೋವು ಎಲ್ಲವೂ ಸಹ ಕಡಿಮೆಯಾಗುತ್ತಾ ಬರುತ್ತದೆ. ಈ ವಿಧಾನವನ್ನು ರಾತ್ರಿ ಮಲಗುವಂತಹ ಸಮಯದಲ್ಲಿ ಹಚ್ಚಿ ನಿಮ್ಮ ಕಾಲಿಗೆ ಒಂದು ಕವರ್ ಹಾಕಿ ಕಟ್ಟಿ ಮಲಗಬೇಕು ಈ ರೀತಿ ಮಾಡುವುದರಿಂದ ಹಚ್ಚಿದ ಕ್ರೀಮ್ ನಿಮ್ಮ ಹಾಸಿಗೆಗೆ ಅಂಟುವುದಿಲ್ಲ ಆದ್ದರಿಂದ ಈ ವಿಧಾನ ಅನುಸರಿಸುವುದು ಉತ್ತಮ.