Home Blog Page 105

ಪರ ಸ್ತ್ರೀ ಹಾಗೂ ಪರಪುರುಷನ ವ್ಯಾಮೋಹಕ್ಕೆ ಒಳಗಾಗಲು ಕಾರಣವೇನು.? ನಿಮ್ಮ ಎಲ್ಲಾ ಅನುಮಾನಕ್ಕೆ ಉತ್ತರ ಇಲ್ಲಿದೆ ನೋಡಿ.!

ಈಗಿನ ಕಾಲದ ಜನ ಒಳ್ಳೆ ವಿಚಾರಗಳಿಗಿಂತ ಕೆಟ್ಟ ವಿಚಾರಕ್ಕೆ ಬಹಳ ಬೇಗ ಆಕರ್ಷಿತರಾಗುತ್ತಿದ್ದಾರೆ. ದು’ಶ್ಚ’ಟಗಳಿಗೆ ಬಲಿಯಾಗಿ ಬದುಕನ್ನು ಅನರ್ಥ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಎಲ್ಲಾ ದುಶ್ಚಟಗಳಿಗಿಂತ ಬಹಳ ಕೆಟ್ಟ ಚಟ ಎಂದರೆ ಕಾಮಾಂಧತೆ ಯಾರನ್ನು ನೋಡಿದರೂ ಕೂಡ ಕೆಟ್ಟ ದೃಷ್ಟಿಯಲ್ಲಿ ನೋಡುವುದು, ವಿಕೃತವಾದ ಲೈಂಗಿಕ ಶಕ್ತಿ, ಇವುಗಳು ಎಷ್ಟು ಕೆಟ್ಟ ಮಟ್ಟಕ್ಕೆ ಹೋಗುತ್ತದೆ ಎಂದರೆ ಅವರು ಅವರದ್ದೆ ಆದ ಭ್ರಮಾ ಪ್ರಪಂಚದಲ್ಲಿ ಇರುತ್ತಾರೆ.

ಕೆಲವೊಮ್ಮೆ ತೀರಾ ಅಸಹ್ಯ ಎನ್ನುವಂತೆ ಅತಿ ಕಡಿಮೆ ವಯಸ್ಸಿನ ವ್ಯಕ್ತಿಗೆ ಅವರಿಗಿಂತ ದುಪ್ಪಟ್ಟು ವಯಸ್ಸಾದ ಮಹಿಳೆಯ ಜೊತೆ ಈ ರೀತಿ ಅನೈತಿಕ ಸಂಬಂಧ ಇರುತ್ತದೆ. ಇದಕ್ಕೆಲ್ಲ ಕಾರಣ ಏನು ಹಾಗೂ ಹೊರಬರಹುದು ಹೇಗೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಹಿಂದೆ ಕೂಡ ಈ ರೀತಿ ಸಮಸ್ಯೆ ಇತ್ತು. ಆದರೆ ಬೆರಳೆಣಿಕೆಯಷ್ಟು ಮಾತ್ರ, ಆದರೆ ಅವರನ್ನು ಬಹಳ ಅಗೌರದಿಂದ ನೋಡುತ್ತಿದ್ದರು ಹಾಗಾಗಿ ಮರ್ಯಾದೆಗೆ ಅಂಜಿಯಾದರೂ ಜನರು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದರು. ಆದರೆ ಈಗ ಯಾರಿಗೆ ಯಾರ ಭಯವೂ ಇಲ್ಲ ಜೊತೆಗೆ ಎಲ್ಲಾ ಕಾಮನ್ ಎನ್ನುವ ಕೆಟ್ಟ ಮೆಂಟಾಲಿಟಿ. ಇದಕ್ಕೆ ಅಷ್ಟೇ ಮಟ್ಟಿಗೆ ವೇದಿಕೆಯಾಗಿರುವುದು ಸೋಶಿಯಲ್ ಮೀಡಿಯಾ ಎಂದರೆ ತಪ್ಪಾಗಲಾರದು.

ಈಗಿನ ಕಾಲದ 70%-80% ಅನೈತಿಕ ಸಂಬಂಧಗಳಿಗೆ ಸೋಶಿಯಲ್ ಮೀಡಿಯಾದ ಕನೆಕ್ಷನ್ ಕಾರಣ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಚೆನ್ನಾಗಿ ಕಾಣಿಸಿಕೊಳ್ಳುವುದೇ ಒಂದು ಚಟವಾಗಿದೆ, ಹಾಗೆ ತಮ್ಮ ಅಂದವನ್ನು ಯಾರಾದರೂ ಹೊಗಳಿದರೆ ಹಿಂದೂ ಮುಂದು ಯೋಚಿಸದೆ ಮಹಿಳೆಯರಾಗಲಿ ಪುರುಷರಾಗಲಿ ಅವರ ವಶವಾಗಿ ಬಿಡುತ್ತಾರೆ.

ಇದೇ ಕಾರಣಕ್ಕೆ ಎಷ್ಟೋ ಚೆನ್ನಾಗಿದ್ದ ಸಂಸಾರಗಳು ಒಡೆದು ಹೋಗಿ ಅವರು ಕೂಡ ದುರಂತದಲ್ಲಿ ಅಂ’ತ್ಯ ಕಂಡಿರುವ ಉದಾಹರಣೆಗಳು ಸಾವಿರಾರು ಇದೆ, ಆದರೂ ಇನ್ನೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ರೀತಿ ಅವರಿಗೆ ಆಗಲು ಮುಖ್ಯ ಕಾರಣ ಅವರ ಆಜ್ಞಾ ಚಕ್ರ ಹಾಗೂ ಸ್ವಾಧಿಷ್ಠಾನ ಚಕ್ರ ಬ್ಲಾಕ್ ಆಗುವುದು ಇದಕ್ಕೆ ಕಾರಣ. ಈ ರೀತಿ ಚಕ್ರಗಳು ಬ್ಲಾಕೇಜ್ ಆದಾಗ ಸಹಜವಾಗಿ ನಮಗೆ ಸರಿ ತಪ್ಪುಗಳ ವಿವೇಚನೆ ಕಳೆದು ಹೋಗುತ್ತದೆ.

ಅದರಲ್ಲೂ ಸ್ವಾದಿಷ್ಠಾನ ಚಕ್ರದ ಬ್ಲಾಕೆಜ್ ನಿಂದ ಮನುಷ್ಯ ಕಾಮಸಕ್ತನಾಗುತ್ತಾನೆ. ಪ್ರೀತಿ ಪ್ರೇಮ ಪ್ರಣಯ ಎಲ್ಲವೂ ಜೀವನದ ಒಂದು ಭಾಗ ಆದರೆ ಅದೇ ಜೀವನವಲ್ಲ, ಅದರಲ್ಲೂ ಈ ಕಾಮ ಎನ್ನುವ ವಿಚಾರ ಪರಪುರುಷ ಅಥವಾ ಪರ ಸ್ತ್ರೀ ಸಹವಾಸಕ್ಕೆ ಕಾರಣವಾದರೆ ಅದಕ್ಕಿಂತ ಕೆಟ್ಟದು ಮತ್ಯಾವುದು ಇಲ್ಲ. ಒಂದು ಸಂಬಂಧ, ಒಂದು ಮನೆ, ಒಂದು ಕುಟುಂಬದ ಮರ್ಯಾದೆ ಮಾತ್ರವಲ್ಲದೆ ಸಮಾಜಕ್ಕು ಕೂಡ ಅದು ಕೆಟ್ಟ ಸಂದೇಶ.

ಈ ರೀತಿ ಬ್ಯಾಡ್ ಎಕ್ಸಾಂಪಲ್ ಆಗಬಾರದು ಎಂದರೆ ಮೊದಲು ಅವರು ತಮ್ಮ ಚಕ್ರಗಳಲ್ಲಿ ಆಗಿರುವ ಬ್ಲಾಕೇಜ್ ಗಳನ್ನು ಸರಿಪಡಿಸಿಕೊಳ್ಳಬೇಕು, ಅದಕ್ಕೆ ರೇಖಿ ಚಿಕಿತ್ಸೆ ಎನ್ನುವುದು ಅತ್ಯುತ್ತಮ ಪರಿಹಾರ. ರೆಖೀ ದೀಕ್ಷೆ ಪಡೆದು ಆ ತರಗತಿಗಳಿಗೆ ಒಳಗಾದ 21 ದಿನಗಳಲ್ಲಿ ಇದರ ರಿಸಲ್ಟ್ ಕಾಣಬಹುದು.

ನಿಮ್ಮ ಹಿಂದಿನ ಬದುಕನ್ನು ನೋಡಿ ನೀವೇ ನೊಂದುಕೊಳ್ಳುವಷ್ಟು ನಿಮ್ಮ ಮನಸ್ಸು ಸ್ಥಿಮಿತಕ್ಕೆ ಬಂದಿರುತ್ತದೆ ಮತ್ತು ಕೋಡ್ ಕಟ್ ಮಾಡುವುದು ಕೂಡ ಬೆಸ್ಟ್. ಕೆಟ್ಟ ವ್ಯಕ್ತಿಗಳು ಸುತ್ತಲೂ ಇದ್ದಾಗ ಕೆಟ್ಟದ್ದಕ್ಕೆ ಆಕರ್ಷಿತರಾಗುತ್ತೇವೆ, ಒಳ್ಳೆ ವ್ಯಕ್ತಿಗಳೊಂದಿಗೆ ಇದ್ದಾಗ ಅದೇ ರೀತಿ ಪಾಸಿಟಿವ್ ಎನರ್ಜಿ ಬರುತ್ತದೆ.

ನೀವು ಆದಷ್ಟು ಕೆ’ಟ್ಟ ಜನಗಳ ಜೊತೆ ಮಾತುಕತೆ ಸಂಪರ್ಕ ಕಟ್ ಮಾಡಿದಷ್ಟು ನಿಮ್ಮ ಕನೆಕ್ಷನ್ ಕಟ್ ಆಗಿ ನೀವು ಆರಾಮಾಗಿ ಇರುತ್ತೀರ, ನೀವು ಯಾರಿಗಾದರೂ ಕೆಟ್ಟವರಿಗೆ ರೆಸ್ಪಾನ್ಸ್ ಮಾಡಿದರೆ ನಿಮ್ಮ ಕನೆಕ್ಷನ್ ಸ್ಟಾರ್ಟ್ ಆಗಿದೆ ಎಂದು ಅರ್ಥ. ಇಂತಹ ಕೆ’ಟ್ಟ ಸಂಬಂಧಗಳಿಗೆ ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ ದಾರಿ ಮಾಡಿಕೊಡಬೇಡಿ ಇದರ ಕುರಿತು ಉತ್ತಮ ವಿವರಣೆಗೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಈ 5 ವಿಷಯಗಳು ಹುಟ್ಟುವುದಕ್ಕಿಂತ ಮೊದಲೇ ನಿರ್ಧಾರ ಆಗಿರುತ್ತದೆ ಇದನ್ನೇ ಹಣೆಬರಹ ಎನ್ನುವುದು ಅದು ಯಾವುದು ಅಂತ ನೋಡಿ.!

 

ನಾವು ಸಾಮಾನ್ಯವಾಗಿ ಮಾತನಾಡುವಾಗ ಇದು ಅವರ ಹಣೆಬರಹ ಆಗಿತ್ತು, ಇದೇ ಅವರ ಹಣೆಯಲ್ಲಿ ಬರೆದಿತ್ತು, ಅವರ ಹಣೆಯಲ್ಲಿ ಬರೆದ ರೀತಿ ಆಗಿದೆ, ಹಣೆಬರಹ ತಪ್ಪಿಸಿಕೊಳ್ಳಲು ಆಗುವುದಿಲ್ಲ ಈ ರೀತಿ ಎಲ್ಲ ಮಾತನಾಡುವುದನ್ನು ನಾವು ಕೇಳಿರುತ್ತೇವೆ. ಹಾಗಾದರೆ ಈ ಹಣೆಬರಹ ಎಂದರೆ ಏನು ಇದು ನಿಜಕ್ಕೂ ಅಷ್ಟು ಸತ್ಯವಾಗಿರುತ್ತದೆಯೇ, ಹಣೆಬರಹದಲ್ಲಿ ಏನೆಲ್ಲಾ ಬರೆದಿದೆ ಎನ್ನುವುದು ಎಂದಿಗೂ ಕೂಡ ಕುತೂಹಲ ಉಳಿಸಿಕೊಳ್ಳುವ ವಿಷಯ.

ಈಗಿನ 21ನೇ ಶತಮಾನದಲ್ಲೂ ಕೂಡ ಈ ಮಾತು ಎಷ್ಟೊಂದು ವಿಶ್ವಾಸ ಉಳಿಸಿಕೊಂಡಿದೆ ಎಂದರೆ ಒಪ್ಪಿ ನಿಟ್ಟಿಸಿರು ಬಿಟ್ಟರೆ ಇದು ಮುಂದೆ ಇರುವ ದಾರಿ ಸ್ಪಷ್ಟವಾಗಿ ಕಂಡಂತೆ, ಅದೆಷ್ಟೋ ಬೇಡದ ನೆಗೆಟಿವ್ ಥಿಂಕಿಂಗ್ ಮನಸ್ಸಿನಿಂದ ಆಚೆ ಹೋದಂತೆ.

ಹಾಗಾಗಿ ಪುರಾಣ ಕಾಲದಿಂದ ಕಲಿಯುಗದವರೆಗೂ ಕೂಡ ಈ ಹಣೆಬರಹ ಎನ್ನುವ ವಿಚಾರವನ್ನು ಪೂರ್ವ ನಿರ್ಣಯ ಎಂದು ಶೇಕಡವಾರು ಹೆಚ್ಚಿನ ಮಂದಿ ನಂಬಿ ಬದುಕಿದ್ದಾರೆ. ಈ ಪ್ರಕಾರವಾಗಿ ಯಾವುದೆಲ್ಲ ವಿಷಯಗಳು ಮನುಷ್ಯನ ಹುಟ್ಟಿದಾಗಲೇ ಪೂರ್ವ ನಿರ್ದಿತವಾಗಿವೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

1. ಮನುಷ್ಯನ ಹುಟ್ಟು:- ಒಂದು ಮಗುವಿನ ಜನನವು ಯಾವ ಕುಟುಂಬದಲ್ಲಿ ಆಗಬೇಕು ಹಾಗೂ ಯಾರಿಗೆ ಮಕ್ಕಳಾಗಿ ಹುಟ್ಟಬೇಕು ಎನ್ನುವುದು ಹುಟ್ಟುವ ವ್ಯಕ್ತಿಯ ನಿರ್ಧಾರ ಆಗಿರುವುದಿಲ್ಲ, ಒಂದು ವೇಳೆ ಈ ರೀತಿ ಇದ್ದಿದ್ದರೆ ಎಲ್ಲರೂ ಶ್ರೀಮಂತರ ಅಥವಾ ತಮಗೆ ಇಷ್ಟವಾದವರ ಕುಟುಂಬದಲ್ಲಿ ಜನಿಸಬೇಕು ಎಂದು ಕೇಳಿಕೊಳ್ಳುತ್ತಿದ್ದರು. ಆದರೆ ಬ್ರಹ್ಮ ಹುಟ್ಟುವುದಕ್ಕೂ ಮೊದಲೇ ಯಾರ ಮನೆಯಲ್ಲಿ ಹುಟ್ಟಬೇಕು ಎನ್ನುವುದನ್ನು ಅವರ ಹಿಂದಿನ ಜನ್ಮದ ಪಾಪ ಹಾಗೂ ಪುಣ್ಯಗಳ ಫಲಾನುಫಲದ ಮೇಲೆ ನಿರ್ಧಾರ ಮಾಡುತ್ತಾರೆ ಎಂದು ಹೇಳಲಾಗುತ್ತದೆ.

2. ಶಿಕ್ಷಣ:- ಒಬ್ಬ ಗುರು ತನ್ನ ನೂರು ಜನ ಶಿಷ್ಯರಿಗೆ ಒಂದೇ ರೀತಿಯ ಪಾಠ ಮಾಡುತ್ತಾರೆ ಆದರೆ ಎಲ್ಲರೂ ಒಂದೇ ರೀತಿಯ ಜ್ಞಾನಾರ್ಜನೆ ಮಾಡುವುದಿಲ್ಲ ಮತ್ತು ಎಲ್ಲರ ಶಿಕ್ಷಣ ಮಟ್ಟವು ಒಂದೊಂದು ಹಂತದಲ್ಲಿ ಮುಗಿಯುತ್ತದೆ ಅಥವಾ ಮುಂದುವರಿಯುತ್ತದೆ. ಹೀಗಾಗಿ ಅದು ಕೂಡ ಅವರ ಋಣದಲ್ಲಿ ಇದ್ದದ್ದು ಅಂದರೆ ಹಣೆಬರಹದಲ್ಲಿ ಪಡೆದುಕೊಂಡಷ್ಟೇ ಮಾತ್ರ ಎಂದು ಹೇಳಲಾಗುತ್ತದೆ.

3. ಮದುವೆ:- ವಿವಾಹ ಎನ್ನುವುದು ಜೀವನದ ಬಹಳ ಮುಖ್ಯವಾದ ಘಟ್ಟ ಅದೆಷ್ಟೋ ಜನರು ಮದುವೆಗೂ ಮುಂಚೆ ತಾವು ಇಂಥವರನ್ನೇ ಮದುವೆ ಆಗಬೇಕು ಎಂದು ಇಚ್ಛೆಪಟ್ಟಿರುತ್ತಾರೆ. ಕೆಲವರು ಮಾತುಕೊಟ್ಟು ಒಪ್ಪಿಕೊಂಡಿರುತ್ತಾರೆ, ಆದರೆ ಮದುವೆ ಸಂದರ್ಭದಲ್ಲಿ ಎಷ್ಟೋ ಬಾರಿ ಇದು ಅನೇಕರಿಗೆ ತಮ್ಮ ಇಚ್ಛೆಯ ವಿರುದ್ಧವಾಗಿ ಆಗಿರುತ್ತದೆ. ಅದೆಷ್ಟೇ ಪ್ರಯತ್ನ ಪಟ್ಟರು ಕೂಡ ಅದನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಯಾರು ಯಾರನ್ನು ವರಿಸಬೇಕು ಎನ್ನುವುದು ಪೂರ್ವ ನಿರ್ಧರಿತ ಅದು ಬ್ರಹ್ಮ ಲಿಖಿತ ಹಾಗಾಗಿಯೇ ಮದುವೆಗಳು ಸ್ವರ್ಗದಲ್ಲಿ ಭೂಮಿ ಮೇಲೆ ನಡೆಯುತ್ತದೆ ಎನ್ನುವ ಮಾತನ್ನು ಸಹ ಹೇಳಲಾಗುತ್ತದೆ.

4. ಸಿರಿತನ:- ಒಬ್ಬ ವ್ಯಕ್ತಿಯು ಏನು ಕ’ಷ್ಟ ಪಡದೆ ಧನವಂತನಾಗುತ್ತಾನೆ. ಕೆಲವರಿಗೆ ಅವರ ಪೂರ್ವಜರ ಆಸ್ತಿಯಾಗಿ ಸಂಪತ್ತು ಐಶ್ವರ್ಯ ಬಳುವಳಿಯಾಗಿ ಬರುತ್ತದೆ. ಇನ್ನು ಕೆಲವರಿಗೆ ಎಷ್ಟೇ ಕ’ಷ್ಟಪಟ್ಟರು ಕೂಡ ಅವರ ಸಿಲ ತೀರುವುದಿಲ್ಲ, ಹಣವು ಕೂಡ ನ’ಷ್ಟವಾಗಿ ತೊಂದರೆಗೆ ಸಿಲುಕುತ್ತಾರೆ. ಕೆಲವರಿಗೆ ಗುಪ್ತನಿಧಿಗಳ ಮೂಲಕ ಹಣ ಸಿಗುತ್ತದೆ. ಹೀಗೆ ಯಾರಿಗೆ ಎಷ್ಟು ಸಿಗಬೇಕು ಎನ್ನುವುದು ಕೂಡ ಈಗಾಗಲೇ ನಿರ್ಧಾರವಾಗಿದೆ ಎನ್ನುವುದನ್ನು ನಂಬಲಾಗುತ್ತದೆ.

5. ಮ’ರ’ಣ:- ಮ’ರ’ಣ ಎನ್ನುವುದು ಕೂಡ ನಮ್ಮ ಬೆನ್ನ ಹಿಂದೆಯೇ ಇರುವ ನೆರಳಿನಂತೆ ಇದನ್ನು ಯಾರು ಊಹಿಸುವುದಕ್ಕೆ ಆಗುವುದಿಲ್ಲ. ಅ’ಪ’ಘಾ’ತ, ಆ’ತ್ಮ’ಹ’ತ್ಯೆ, ಅ’ನಾ’ರೋ’ಗ್ಯ ಇವೆಲ್ಲ ನೆಪ ಆಗಿರಬಹುದು. 25 ವರ್ಷಗಳಿಂದ ಹಾಸಿಗೆ ಹಿಡಿದವರು ಕೂಡ ಉಸಿರು ಹಿಡಿದುಕೊಂಡು ಬದುಕುತ್ತಾರೆ ಆದರೆ ಯಾವುದೇ ಕಾಯಿಲೆ ಇಲ್ಲದ 30 ವರ್ಷದ ವ್ಯಕ್ತಿ ದಿಢೀರ್ ಎಂದು ಸ’ತ್ತು ಹೋಗುತ್ತಾನೆ ಹಾಗಾಗಿ ಅವನ ಆಯಸ್ಸು ಅವನ ಹಣೆಯಲ್ಲಿ ಬರೆಯಲಾಗಿರುತ್ತದೆ ಎನ್ನುವುದನ್ನು ಒಪ್ಪಲೇ ಬೇಕಾಗುತ್ತದೆ.

https://youtu.be/_FwPkefX05U?si=5xRa8plE18GaqX5u

ಈ ವಸ್ತುವಿನ ಬೆಲೆ ಕೇವಲ 5 ರೂಪಾಯಿ ಇದು ಕೊಡುವ ಲಾಭ ಲಕ್ಷ ಕೋಟಿಯಲ್ಲಿರುತ್ತದೆ, ಇದನ್ನು ಮನೆಗೆ ತಂದು ನೀವು ಶ್ರೀಮಂತರಾಗಿ…

 

ಪ್ರತಿಯೊಬ್ಬರಿಗೆ ಜೀವನದ ಉದ್ದೇಶ ಕೂಡ ತಮ್ಮ ಜೀವನಕ್ಕೆ ಬೇಕಾಗುವಷ್ಟು ಹಣ ಪಡೆದು ನೆಮ್ಮದಿಯಾಗಿ ಸಂತೋಷದ ಜೀವನವನ್ನು ಕುಟುಂಬದೊಂದಿಗೆ ಕಳೆಯಬೇಕು ಎನ್ನುವುದು. ಯಾವುದೇ ರೀತಿ ಆನಾರೋಗ್ಯವು ಇಲ್ಲದೆ ಜೀವನದ ಪ್ರತಿ ಕ್ಷಣವನ್ನು ಆನಂದದಿಂದ ಸವಿಯುತ್ತಾ ದಿನ ಕಳೆಯಬೇಕು ಎನ್ನುವುದು.

ಈ ಹಾದಿಯಲ್ಲಿ ಹಣದ ಮಹತ್ವ ಬಹಳಷ್ಟಿದೆ ಕೆಲವೊಮ್ಮೆ ಈ ಹಣ ಸಂಪಾದನೆಗಾಗಿ ನಾವೆಷ್ಟೇ ಕ’ಷ್ಟಪಟ್ಟರು, ಹಗಲಿರುವ ಶ್ರಮ ಪಡುತ್ತಿದ್ದರು ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎನ್ನುವ ರೀತಿ ಆಗುತ್ತಿರುತ್ತದೆ. ನೀವು ಕೂಡ ಈ ರೀತಿ ಶತ ಪ್ರಯತ್ನಗಳನ್ನು ಮಾಡಿಯೂ ಕೂಡ ಹಣಕಾಸಿನ ತೊಂದರೆಗಳನ್ನು ಅನುಭವಿಸುತ್ತಿದ್ದರೆ ಈಗ ನಾವು ಹೇಳುತ್ತಿರುವ ಈ ಸರಳ ಪ್ರಯೋಗವನ್ನು ಮಾಡಿ ಹಣದ ಹೊಳೆಯೇ ಹರಿದು ಬರುತ್ತದೆ.

ಅಡುಗೆ ಮನೆಯ ಮಸಾಲೆ ಡಬ್ಬದಲ್ಲಿರುವ ಅನೇಕ ಸಾಮಗ್ರಿಗಳು ಅಡುಗೆ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಆಯುರ್ವೇದ ದೃಷ್ಟಿಯಿಂದ ಕೂಡ ಔಷಧಿಗಳಾಗಿವೆ. ವಾಸ್ತುಶಾಸ್ತ್ರಕ್ಕೆ ಸಂಬಂಧಪಟ್ಟ ದೋಷಗಳನ್ನು ನಿವಾರಣೆ ಮಾಡುವುದು ಮಾತಾರವಲ್ಲದೇ ಕೆಲವು ತಂತ್ರಶಕ್ತಿ ಗಳಿಗೂ ಕೂಡ ಇವು ಬಳಕೆ ಆಗುತ್ತದೆ.

ಇದರಲ್ಲಿ ಜಾಯ್ ಕಾಯಿ ಕೂಡ ಒಂದು. ಇದನ್ನು ಜಾಜಿ ಕಾಯಿ ಎಂದು ಕೂಡ ಇದನ್ನು ಕರೆಯುತ್ತಾರೆ. ಯಾವುದೇ ಕಿರಾಣಿ ಅಂಗಡಿ ಅಥವಾ ಗ್ರಂಥಿಗೆ ಅಂಗಡಿಗಳಲ್ಲಿ ಇದು ಸಿಗುತ್ತದೆ. 5 ರೂ. ಬೆಲೆ ಬಾಳುವ ಈ ವಸ್ತುವಿನಿಂದ ಮನೆಗೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತದೆ ಎನ್ನುವುದು ನಿಮಗೆ ತಿಳಿದರೆ ಇಂದೇ ಇದನ್ನು ಖರೀದಿಸುತ್ತಿರುವ ಜಾಜಿಕಾಯಿ ಪ್ರಯೋಜನಗಳ ವಿವರ ಹೀಗಿದೆ ನೋಡಿ.

* ಈ ಮೇಲೆ ತಿಳಿಸಿದಂತೆ ನಿಮಗೆ ಆರ್ಥಿಕ ಸಂಕಷ್ಟಗಳು ಇದ್ದು ಅದು ಕಳೆದು ಹಣದ ಆಕರ್ಷಣೆ ಆಗಬೇಕು, ನೀವು ದುಡಿಯುತ್ತಿರುವ ಹಣವು ಉಳಿತಾಯವಾಗಬೇಕು ಮತ್ತು ನೀವು ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಆಗಬೇಕು ಎಂದು ಬಯಸಿದರೆ ಅಂಗಡಿಯಿಂದ ಜಾಯಿ ಕಾಯಿಗಳನ್ನು ತೆಗೆದುಕೊಂಡು ಬನ್ನಿ…

ಒಂದು ದಿನ ಎಂದಿನಂತೆ ನಿಮ್ಮ ಮನೆಯಲ್ಲಿ ನಿಮ್ಮ ಕುಲದೇವರ ಇಷ್ಟ ದೇವರ ಪೂಜೆ ಮಾಡಿ ದೇವರ ಕೋಣೆಯಲ್ಲಿ ಮೂರು ಜಾಯಿಕಾಯಿಗಳನ್ನು ಇಡಿ. ನೀವು ಸೋಮವಾರದಂದು ಪೂಜೆ ಮಾಡಿದರೆ ಒಂದು ವಾರ ಅಂದರೆ ಮುಂದಿನ ಸೋಮವಾರದವರೆಗೂ ಕೂಡ ಅದು ಅಲ್ಲೇ ಇರಬೇಕು.

ಹೀಗೆ ಯಾವುದೇ ದಿನ ಇಟ್ಟರು ಏಳು ದಿನ ಆದ ನಂತರ ಮುಂದಿನ ವಾರದ ಅದೇ ದಿನ ಅದನ್ನು ತೆಗೆದು ನೀವು ಹಣ ಇಡುವ ಬೀರು ಅಥವಾ ಡಬ್ಬದಲ್ಲಿ ಹಾಕಿ ಇಡಿ. ಎಷ್ಟು ಅದ್ಭುತವಾದ ಬದಲಾವಣೆ ಆಗುತ್ತದೆ ಎನ್ನುವುದನ್ನು ನೀವೇ ಪರೀಕ್ಷೆ ಮಾಡಿ ನೋಡಿ. ನಿಮಗೆ ಯಾವುದೇ ರೀತಿ ಹಣಕಾಸಿನ ತೊಂದರೆ ಬರುವುದಿಲ್ಲ. ಸುಖಾಸುಮ್ಮನೆ ಆರೋಗ್ಯ ಕೆಡುವುದಿಲ್ಲ, ಮನೆ ವಾತಾವರಣವೂ ಕೂಡ ಚೆನ್ನಾಗಿ ಆಗುತ್ತದೆ ಎಲ್ಲ ರೀತಿಯಲ್ಲೂ ಒಳ್ಳೆಯದಾಗುತ್ತದೆ.

* ನೀವು ಮನೆಯಿಂದ ಯಾವುದೇ ಕೆಲಸದ ಮೇಲೆ ಹೊರಗಡೆ ಹೋಗುವಾಗ ಅದು ಪರೀಕ್ಷೆ ಇರಬಹುದು ಇಂಟರ್ವ್ಯೂ ಇರಬಹುದು ಅಥವಾ ಹಣಕಾಸಿಗೆ ಸಂಬಂಧಪಟ್ಟ ವ್ಯವಹಾರವೇ ಇರಬಹುದು ನಿಮ್ಮ ಪರ್ಸನಲ್ಲಿ ಎರಡು ಜಾಯಿಕಾಯಿ ಇಟ್ಟುಕೊಂಡು ಹೋಗಿ ಈ ರೀತಿ ಇಟ್ಟುಕೊಳ್ಳುವಾಗ ಮನಸ್ಸಿನಲ್ಲಿ ಈ ಕಾರ್ಯ ಶುಭವಾಗಲಿ ಎಂದು ಸಂಕಲ್ಪ ಮಾಡಿಕೊಳ್ಳಿ ಸಕಾರಾತ್ಮಕವಾದ ರಿಸಲ್ಟ್ ಕಾಣುತ್ತೀರಿ.

* ದೂರದ ಊರುಗಳಿಗೆ ಪ್ರಯಾಣ ಮಾಡುವವರು ಜಾಯಿಕಾಯಿ ಪುಡಿ ಮಾಡಿ ನಿಮ್ಮ ಬಳಿ ಇಟ್ಟುಕೊಳ್ಳಿ ಮತ್ತು ಆಗಾಗ ಚಿಟಿಕೆಪುಡಿಯನ್ನು ಎರಡು ಪಾದರಕ್ಷೆಗಳ ಮೇಲೆ ಹಾಕಿ ಈ ರೀತಿ ಮಾಡಿದರೆ ನಿಮಗೆ ಯಾವುದೇ ಅ’ಪ’ಘಾ’ತಗಳು ಅಥವಾ ಚೋರ ಭ’ಯ ಆಗುವುದಿಲ್ಲ ಅವುಗಳಿಂದ ರಕ್ಷಣೆ ಸಿಗುತ್ತದೆ.

* ನಿಮ್ಮ ಕಷ್ಟಗಳು ಕಳೆಯುವುದಕ್ಕಾಗಿ ಶನಿವಾರದಂದು 2 ವೀಳ್ಯದೆಲೆ, 2 ಜಾಯಿಕಾಯಿ ಹಾಗೂ 2 ಲವಂಗವನ್ನು ಆಂಜನೇಯ ದೇವಸ್ಥಾನದಲ್ಲಿ ಅರ್ಪಿಸಿ ಮತ್ತು ನಿಮ್ಮ ಕಷ್ಟವನ್ನು ಹನುಮಂತನ ಬಳಿ ಹೇಳಿಕೊಂಡು ಮರಳಿ ಬರುವಾಗ ಅರ್ಚಕರಿಂದ ಒಂದು ಜಾಯಿಕಾಯಿಯನ್ನು ಕೇಳಿ ಮನೆಗೆ ತಂದು ನಿಮ್ಮ ಬಳಿ ಯಾವಾಗಲೂ ಇಟ್ಟುಕೊಳ್ಳಿ. ಆಂಜನೇಯ ಕೃಪಾಕಟಾಕ್ಷ ನಿಮಗೆ ದೊರೆಯುತ್ತದೆ. ಆ ಮೂಲಕ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ.

ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳಿಗೆ ಆಯುರ್ವೇದದಲ್ಲಿ ಇದೆ ಶಾಶ್ವತ ಪರಿಹಾರ.!

ಕೆಲವರು ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ ಆಕರ್ಷಣೀಯ ಬಣ್ಣವನ್ನು ಸಹ ಹೊಂದಿರುತ್ತಾರೆ, ಆದರೆ ಅವರ ಕಣ್ಣುಗಳ ಸುತ್ತ ಆಗಿರುವ ಕಪ್ಪು ಕಲೆಯು ಅವರ ಅಂದವನ್ನು ಹಾಳು ಮಾಡುತ್ತಿರುತ್ತದೆ. ಅನೇಕ ಹೆಣ್ಣುಮಕ್ಕಳಿಗೆ ಈ ರೀತಿ ಸಮಸ್ಯೆ ಇರುವುದನ್ನು ನಾವು ನೋಡುತ್ತಿರುತ್ತೇವೆ.

ಈಗ ಹೆಣ್ಣುಮಕ್ಕಳು ಮಾತ್ರವಲ್ಲದೆ ಗಂಡು ಮಕ್ಕಳಲ್ಲಿ ಕೂಡ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಅನೇಕ ಕಾರಣಗಳಿಂದಾಗಿ ಈ ರೀತಿ ಕಣ್ಣಿನ ಸುತ್ತ ಕಪ್ಪು ಕಲೆ ಆಗುತ್ತದೆ. ಮುಖ್ಯವಾಗಿ ನಿದ್ರೆಯ ಕೊರತೆಯಿಂದಲೇ ಎಂದು ಹೇಳಬಹುದು ಓದುವ ಮಕ್ಕಳು ಅಥವಾ ನೈಟ್ ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಿರುವವರು ಕಂಪ್ಯೂಟರ್ ಲ್ಯಾಪ್ಟಾಪ್ ನಲ್ಲಿ ಕೆಲಸ ಮಾಡುವವರು ಹೆಚ್ಚು ಹೊತ್ತು ಮೊಬೈಲ್ ನೋಡುವವರು ಮೀಡಿಯಾ ಗಳಲ್ಲಿ ಕೆಲಸ ಮಾಡುತ್ತಾ ಯಾವಾಗಲೂ ಕ್ಯಾಮೆರಾಗಳನ್ನು ಎದುರಿಸುವವರು ಅವರಿಗೆಲ್ಲ ಈ ಸಮಸ್ಯೆ ಇದ್ದೇ ಇರುತ್ತದೆ.

ಜೊತೆಗೆ ನಾವು ತಿನ್ನುವ ಆಹಾರದಲ್ಲಿ ಕೆಲ ಪೋಷಕಾಂಶಗಳ ಕೊರತೆ ಉಂಟಾದಾಗ ಆ ಕಾರಣದಿಂದಲೂ ಈ ರೀತಿ ಕಣ್ಣಿನ ಸುತ್ತ ಕಲೆಗಳು ಆಗುತ್ತದೆ. ಹಿಮೋಗ್ಲೋಬಿನ್ ಕಡಿಮೆ ಆದಾಗ ಕ್ಯಾಲ್ಸಿಯಂ, ಪೊಟ್ಯಾಶಿಯಂ ಐರನ್ ಅಂಶ ಮುಂತಾದ ಲವಣಾಂಶಗಳ ಕೊರತೆ ದೇಹದಲ್ಲಿ ಉಂಟಾದಾಗ ಈ ರೀತಿ ಆಗುತ್ತದೆ.

ಇದಕ್ಕೆ ಪರಿಹಾರ ನಾವು ತಿನ್ನುವ ಆಹಾರದಿಂದ ಇವುಗಳನ್ನು ಬ್ಯಾಲೆನ್ಸ್ ಮಾಡಿಕೊಳ್ಳುವುದರ ಜೊತೆಗೆ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ನಿದ್ರೆ ಮಾಡುವುದು. ಆದರೆ ಈಗಿನ ಕಾಲದಲ್ಲಿ ಇದನ್ನು ಪ್ಯಾಚ್ ಅಪ್ ಮಾಡುವ ಸಲುವಾಗಿ ದುಬಾರಿ ಬೆಲೆಯ ಕಾಸ್ಮೆಟಿಕ್ ಗಳನ್ನು ಬಳಸುತ್ತಾರೆ.

ಆದರೆ ಅದು ಎಲ್ಲರಿಗೂ ರಿಸಲ್ಟ್ ಕೊಡುವುದಿಲ್ಲ ಅಥವಾ ಆ ರಿಸಲ್ಟ್ ಶಾಶ್ವತವಾಗಿರುವುದಿಲ್ಲ. ಹಾಗಾಗಿ ಹೇಗೆ ಮನೆಯಲ್ಲಿ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ಶಾಶ್ವತವಾಗಿ ಈ ಸಮಸ್ಯೆಯಿಂದ ಹೊರಬರುವುದು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

* ಅರಿಶಿಣಕ್ಕೆ ನಮ್ಮ ದೇಹಕ್ಕೆ ಕಾಂತಿ ಕೊಡುವ ಗುಣ ಇದೆ. ಇದು ಸೌಂದರ್ಯ ಹೆಚ್ಚಿಸುವುದಕ್ಕೆ ಆರೋಗ್ಯ ವೃದ್ಧಿಸುವುದಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ ಇರುವ ನ್ಯಾಚುರಲ್ ಔಷಧಿ ಎನ್ನಬಹುದು. ಈ ಅರಿಶಿಣವನ್ನು ಕಡಲೆಹಿಟ್ಟಿನ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಾಗೂ ಕಣ್ಣಿನ ಸುತ್ತ ಪ್ಯಾಕ್ ಹಾಕಿ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ಈ ಸಮಸ್ಯೆ ಪರಿಹಾರ ಆಗುತ್ತದೆ.

* ಸೌತೆಕಾಯಿಯ ಪೇಸ್ಟ್ ಮಾಡಿ ಅದಕ್ಕೆ ಚಿಟಿಕೆ ಅರಿಶಿಣ ಹಾಕಿ ಅದನ್ನು ಕಣ್ಣಿನ ಸುತ್ತ ಹಚ್ಚುವುದರಿಂದ ಬಹಳ ಬೇಗ ಈ ಸಮಸ್ಯೆ ಪರಿಹಾರ ಆಗುತ್ತದೆ ಅಥವಾ ಸೌತೆಕಾಯಿ, ಆಲೂಗಡ್ಡೆ ಗಳನ್ನು ಸ್ಲೈಸ್ ಗಳಾಗಿ ಕಟ್ ಮಾಡಿ ಕೂಡ ಇಟ್ಟುಕೊಳ್ಳಬಹುದು.

* ಹಾಲಿನ ಕೆನೆಗೆ ಅರಿಶಿನ ಹಾಕಿ ಮಿಕ್ಸ್ ಮಾಡಿ ಅದನ್ನು ಈ ಕಪ್ಪು ಕಲೆಗಳು ಆಗಿರುವ ಕಡೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ವಾಷ್ ಮಾಡುವುದರಿಂದ ಉತ್ತಮ ರಿಸಲ್ಟ್ ಸಿಗುತ್ತದೆ.
* ರೋಜ್ ವಾಟರ್ ಹತ್ತಿಯಲ್ಲಿ ಅದ್ದಿ ಅದನ್ನು ಕಣ್ಣಿನ ಸುತ್ತ ಇಟ್ಟುಕೊಳ್ಳುವುದರಿಂದ ಕೂಡ ಕಲೆ ಕಡಿಮೆ ಆಗುತ್ತದೆ.

* ಮನೆಯಲ್ಲಿರುವ ಕೊಬ್ಬರಿ ಎಣ್ಣೆ ಸ್ವಲ್ಪ ಬಿಸಿ ಮಾಡಿ ಅದಕ್ಕೆ ಅರಿಶಿನ ಹಾಕಿ ಅವೆರಡು ಮಿಶ್ರಣವನ್ನು ಕಪ್ಪು ಕಲೆಗಳು ಆಗಿರುವುದರಸುತ್ತ ಹಚ್ಚಿ ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ ಅದ್ಭುತ ರಿಸಲ್ಟ್ ಕಾಣುತ್ತೀರಿ.
* ಕಿತ್ತಳೆ ಹಣ್ಣಿನ ಹೋಳುಗಳು ಅಥವಾ ಟೊಮೊಟೊ ಹಣ್ಣಿನ ಹೋಳುಗಳನ್ನು ಕೂಡ ಕಣ್ಣಿನ ಸುತ್ತ ಇಡುವುದರಿಂದ ಈ ಕಲೆ ಕಡಿಮೆ ಆಗುತ್ತದೆ, ಆದರೆ ಕೆಲವರಿಗೆ ಇದು ಆಗುವುದಿಲ್ಲ ಹಾಗಾಗಿ ನಿಮ್ಮ ಚರ್ಮದ ಪ್ರಕೃತಿಗೆ ಇದು ಹೊಂದಿದ್ದರೆ ಪ್ರಯತ್ನಿಸಬಹುದು.

https://youtu.be/c1qMC7KsJ64?si=N7jS0Ke5_3oab8IM

ಕೂದಲು ಚಿಕ್ಕ ವಯಸ್ಸಿಗೆ ಬೆಳ್ಳಗಾಗುತ್ತಿರುವುದಕ್ಕೆ ಕಾರಣವೇನು ಗೊತ್ತಾ? ಬಿಳಿ ಕೂದಲನ್ನು ರಿವರ್ಸ್ ಮಾಡಿ ಕಪ್ಪಗೆ ಮಾಡಿಕೊಳ್ಳುವುದು ಹೇಗೆ ಅಂತ ನೋಡಿ.!

 

ಕೂದಲು ಬೆಳಗಾಗುವುದು ವಯಸ್ಸಾಗುತ್ತಿರುವುದರ ಸಂಕೇತ ಎಂದುಕೊಳ್ಳಲಾಗುತ್ತಿತ್ತು. ಆದರೆ ಈಗ ಚಿಕ್ಕ ವಯಸ್ಸಿಗೆ ಕೂದಲು ಬೆಳಗಾಗುತ್ತಿದೆ, ಇದು ಪ್ರಕೃತಿಗೆ ವಿರುದ್ಧ. ಆದರೆ ಇದಕ್ಕೆ ಕಾರಣ ಮನುಷ್ಯನ ಆಹಾರ ಪದ್ಧತಿ ಮತ್ತು ಆತ ಈಗ ಅಳವಡಿಸಿಕೊಂಡಿರುವ ಜೀವನ ಶೈಲಿ ತೀರ ಇತ್ತೀಚೆಗೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಈ 25 ವರ್ಷಗಳ ಹಿಂದೆ ಈಗ ಸರ್ವೇ ಸಾಮಾನ್ಯವಾಗಿ ಇರುವ ಯಾವುದೇ ಸಮಸ್ಯೆಗಳು ಅವರಿಗೆ ಇರಲಿಲ್ಲ.

ಯಾಕೆಂದರೆ ಬಹಳ ಕ್ರಾಂತಿಕಾರಿಯಾಗಿ ಈ ಎರಡು ದಶಕದಲ್ಲಿ ಜೀವನ ಬದಲಾಗಿ ಹೋಗಿದೆ. ಊಟ ಬಟ್ಟೆ ಸೇರಿ ನಮ್ಮ ದೈನಂದಿಕ ಚಟುವಟಿಕೆಗಳು ಕೂಡ ಸಂಪೂರ್ಣ ಹದಗೆಟ್ಟಿದೆ ಎಂದರೆ ತಪ್ಪಲ್ಲ, ಇದೇ ಮುಂತಾದ ಕಾರಣಗಳಿಂದಾಗಿ ಈ ರೀತಿ ವಯಸ್ಸಾಗೋ ಮುಂಚೆ ಕೂದಲು ಬೆಳ್ಳಗಾಗುವಂತಹ ಕಾಲ ಬಂದಿದೆ.

ವಿಟಮಿನ್ B12 ಹಾಗೂ ವಿಟಮಿನ್ B17 ಕೊರತೆಯಿಂದಾಗಿ ದೇಹದಲ್ಲಿ ಈ ಸಮಸ್ಯೆ ಆಗುತ್ತಿದೆ. ತುಪ್ಪ ತಿನ್ನುವುದರಿಂದ ದೇಹಕ್ಕೆ B12ಹಾಗೂ ಸಿರಿಧಾನ್ಯಗಳನ್ನು ತಿನ್ನುವುದರಿಂದ ವಿಟಮಿನ್ B17 ದೇಹಕ್ಕೆ ಸಿಗುತ್ತದೆ. ಆದರೆ ಸಮಸ್ಯೆ ಏನೆಂದರೆ ನಾವು ತಿನ್ನುತ್ತಿರುವ ಆಹಾರವು ದೇಹಕ್ಕೆ ಹಿಡಿಯಲು ಕೆಲವು ಕೆಮಿಕಲ್ ಗಳು ಬಿಡುತ್ತಿಲ್ಲ, ಅದರಲ್ಲಿ ನಾವು ಪ್ರತಿನಿತ್ಯ ಸೇವಿಸುತ್ತಿರುವ ಅನೇಕ ಪದಾರ್ಥಗಳಲ್ಲಿ ಈ ಕೆಮಿಕಳ್ ಗಳು ಇವೆ.

ಉದಾಹರಣೆಗೆ ನಾವು ಅತಿ ಕಳಪೆ ಗುಣಮಟ್ಟದ ಅಡುಗೆ ಎಣ್ಣೆಗಳನ್ನು ಬಳಸುತ್ತಿದ್ದೇವೆ, ಅದರಲ್ಲೂ ಪಾಮ್ ಆಯಿಲ್ ನಂತಹ ಅಡುಗೆ ಎಣ್ಣೆಗಳು ಅತಿ ಹೆಚ್ಚು ಕೆಮಿಕಲ್ ಗಳನ್ನು ಒಳಗೊಂಡಿರುತ್ತವೆ. ಅನೇಕ ದೇಶಗಳಲ್ಲಿ ಇದು ಬ್ಯಾನ್ ಆಗಿದೆ ಪ್ರತಿಷ್ಠಿತ ಆಹಾರ ಪದಾರ್ಥಗಳನ್ನು ಅಥವಾ ತಿಂಡಿ ತಿನಿಸುಗಳನ್ನು ತಯಾರಿಸುವ ಕಂಪನಿಗಳಲ್ಲಿ ಇದನ್ನು ಬಳಕೆ ಮಾಡಬಾರದು ಎನ್ನುವ ಸರ್ಕಾರದ ನಿಯಮ ಕೂಡ ಇದೆ.

ಆದರೆ ಇಂದು ನಾವು ಯಾವ ಎಣ್ಣೆ ಹಾಕಿ ತಯಾರಿಸಿದ್ದಾರೆ ಎನ್ನುವುದನ್ನು ನೋಡುವುದು ಬಿಟ್ಟು ಚಪ್ಪರಿಸಿಕೊಂಡು ಜಂಕ್ ಫುಡ್ ಗಳನ್ನು ತಿನ್ನುತ್ತಿದ್ದೇವೆ. ಮತ್ತೊಂದು ಕಾರಣ ಏನೆಂದರೆ ಈಗ ಬೆಳೆಯುತ್ತಿರುವ ಎಲ್ಲ ತರಕಾರಿ ಹಾಗೂ ಧಾನ್ಯಗಳು ಎಲ್ಲದಕ್ಕೂ ಕೂಡ ರೈತರು ರಸಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಬಳಸುತ್ತಿದ್ದಾರೆ.

ಇದರ ಎಫೆಕ್ಟ್ ಕೂಡ ಆಗಿದೆ ಹಾಗೆ ನಾವು ಈಗ ಪಾತ್ರೆ ತೊಳೆಯಲು ವಿಮ್ ಜೆಲ್ ಅಥವಾ ಡಿಶ್ ವಾಷರ್ ಬಾರ್ ಗಳನ್ನು ಬಳಸುತ್ತಿದ್ದೇವೆ. ಇದು ತೊಳೆದ ಮೇಲೆ ಕೂಡ ವಾಸನೆ ಹಾಗೆ ಇರುತ್ತದೆ ಅಂದರೆ ಅದರಲ್ಲಿ ಕೆಮಿಕಲ್ ಅಂಶ ಇದೆ ಎಂದು ಅರ್ಥ. ಇದಕ್ಕೆ ಬಿಸಿ ಊಟ ಅಥವಾ ಬಿಸಿ ತುಪ್ಪ ಹಾಕಿಕೊಂಡು ತಿಂದರೆ ಅದು ದೇಹಕ್ಕೆ ಸೇರುವುದಿಲ್ಲ ಅಥವಾ ಅದರಲ್ಲಿರುವ ಪೋಷಕಾಂಶಗಳನ್ನು ಕೆಮಿಕಲ್ ಕೊಂ’ದು ಬಿಡಬಹುದು.

ಬೂದಿ ಅಥವಾ ಮಣ್ಣು ಹಾಕಿಕೊಂಡು ಪಾತ್ರೆಗಳನ್ನು ಹಿಂದಿನವರು ತೊಳೆಯುತ್ತಿದ್ದರು. ಆದರೆ ಈಗ ನಾವು ಬುದ್ಧಿವಂತರು ಎಂದುಕೊಂಡು ಬೇಡದ್ದವುಗಳನ್ನೇ ಬಳಸುತ್ತಿದ್ದೇವೆ. ನಾವು ಬಳಸೋ ಪೇಸ್ಟ್ ನಲ್ಲೂ ಕೂಡ ಎಷ್ಟೋ ಪ್ರಮಾಣದ ಕೆಮಿಕಲ್ ಇದೆ ಆದರೂ ಅದರ ಡಿಟೇಲ್ ನೋಡುವ ತಾಳ್ಮೆ ಯಾರಿಗೂ ಇಲ್ಲ ಇದರ ಜೊತೆಗೆ ಕುಡಿಯುವ ನೀರು ಕೂಡ ಮುಖ್ಯ ಪಾತ್ರ ವಹಿಸುತ್ತದೆ.

ಯಾಕೆಂದರೆ ಕುಡಿಯುವ ನೀರಿನಲ್ಲಿ ಅಸಿಡಿಕ್ ಅಂಶ ಹೆಚ್ಚಾಗುತ್ತಿದೆ ನಮ್ಮ ದೇಹಕ್ಕೆ ಸೇರುವ ಯಾವುದೇ ಪದಾರ್ಥವಾದರೂ ಆಲಾಕಲಿನ್ ಆಗಬೇಕು ಅದು ಹೊರಗೆ ಬರುವಾಗ ಅಸಿಡಿಕ್ ಆಗಿರಬೇಕು. ಇಂದು ನಾವು RO ವಾಟರ್ ಎಂದು ಸಂಸ್ಕರಿಸಿದ ನೀರನ್ನು ಕುಡಿಯುತ್ತಿದ್ದೇವೆ. ನಾವು ದುಬಾರಿ ಬೆಲೆಯ ಎಣ್ಣೆಗಳು, ಶಾಂಪುಗಳು ಬಳಸಿದರೆ ಕೂದಲು ಚೆನ್ನಾಗಿ ಆಗುತ್ತದೆ ಎಂದುಕೊಳ್ಳುತ್ತೇವೆ.

ಅದರಲ್ಲೂ ರಾಸಾಯನಿಕ ಅಂಶಗಳು ಇರುವುದರಿಂದ ಅದು ಕೂದಲು ಬೆಳಗಾಗುವುದಕ್ಕೆ ಕಾರಣವಾಗುತ್ತಿದೆ ಎನ್ನುವುದು ಕೂಡ ಪ್ರಮುಖ ಅಂಶ. ಇಂತಹ ಸಾಕಷ್ಟು ಕರಣಗಳನ್ನು ಹೇಳಬಹುದು ಆದರೆ ಇದನ್ನು ಸರಿಪಡಿಸುವುದು ಹೇಗೆ ಎಂದರೆ ಆಯುರ್ವೇದದಲ್ಲಿ ನಶ್ಯ ತೈಲ ಚಿಕಿತ್ಸೆ ಎಂದು ಇದೆ. ಅಣುತೈಲ ಎನ್ನುವ ಔಷಧಿಯೊಂದು ಎಲ್ಲಾ ಆಯುರ್ವೇದಿಕ್ ಅಂಗಡಿಗಳಲ್ಲೂ ಸಿಗುತ್ತದೆ, ಅದನ್ನು ಖರೀದಿಸಬಹುದು.

ಇದನ್ನು ಬೆಳಗ್ಗೆ ರಾತ್ರಿ ಎರಡು ಹನಿ ಮೂಗಿನ ಎರಡು ಹೊಳ್ಳೆಗಳಿಗೆ ಹಾಕಿಕೊಳ್ಳಬೇಕು ಅಥವಾ ನಿಮ್ಮ ಮನೆಯಲ್ಲಿ ಇರುವ ಶುದ್ಧವಾದ ಹರಳೆಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಎರಡು ಹನಿ ಬೆಳಿಗ್ಗೆ ರಾತ್ರಿ ಮೂಗಿಗೆ ಹಾಕಿಕೊಳ್ಳಬೇಕು ಈ ರೀತಿ ಮಾಡಿದರೆ ಸಂಪೂರ್ಣ ರಿವರ್ಸ್ ಆಗಿ ಕೂದಲು ಕಪ್ಪಗಾಗುವುದಕ್ಕೆ ಖಂಡಿತವಾಗಿಯೂ ಸಾಧ್ಯವಿದೆ.

ವಾಹನ ಖರೀದಿಸಬೇಕು ಅಂತಿದ್ದೀರಾ.? ಅದಕ್ಕೂ ಮುನ್ನ ಅದೃಷ್ಟ ಸಂಖ್ಯೆ ತಿಳಿದುಕೊಳ್ಳಿ.!

 

ಈಗಿನ ಕಾಲದಲ್ಲಿ ಸಂಖ್ಯಾಶಾಸ್ತ್ರವನ್ನು ಜನರು ಅತಿ ಹೆಚ್ಚು ನಂಬುತ್ತಾರೆ. ಆದರೆ ಅದು ಇತ್ತೀಚಿನ ವಿಜ್ಞಾನವಲ್ಲ, ಬಹಳ ಹಿಂದಿನಿಂದಲೂ ಕೂಡ ಸಂಖ್ಯಾಶಾಸ್ತ್ರ ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿ ಇತ್ತು. ಬಹಳ ಹಿಂದಿನಿಂದಲೂ ಕೂಡ ನಮ್ಮ ಜನರು ಲಕ್ಕಿ ನಂಬರ್ ಎಂದು ಹೇಳುವುದನ್ನು ಕೇಳಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ಸಂಖ್ಯಾಶಾಸ್ತ್ರದ ಮಹತ್ವ ಅನೇಕರಿಗೆ ತಿಳಿದು ಅದರಿಂದ ಅನುಕೂಲಕರ ಬದಲಾವಣೆ ಆದ ಕಾರಣ ಹೆಚ್ಚು ಸುದ್ದಿಯಲ್ಲಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕ ಬಹಳ ಮುಖ್ಯ. ಹುಟ್ಟಿದ ದಿನಾಂಕ ತಿಂಗಳು ಹಾಗೂ ಆ ವರ್ಷದ ಆಧಾರದ ಮೇಲೆ ಅವರ ಲಕ್ಕಿ ನಂಬರ್ ಯಾವುದು ಅನ್ ಲಕ್ಕಿ ನಂಬರ್ ಯಾವುದು ಮತ್ತು ಅವರಿಗೆ ಸಪೋರ್ಟ್ ಮಾಡಲು ಯಾವ ಸಂಖ್ಯೆ ಕಡಿಮೆಯಾಗಿದೆ.

ಅದಕ್ಕೆ ಸಂಬಂಧಿಸಿದಂತೆ ಆ ಕಾಂಬಿನೇಷನ್ ಆಧಾರದ ಮೇಲೆ ನಂಬರ್ ಗಳನ್ನು ಪಾಲಿಸಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಈ ವಿಚಾರ ಎಷ್ಟೊಂದು ಅನ್ವಯವಾಗುತ್ತದೆ ಎಂದರೆ ನೀವು ಮದುವೆ ಆಗುವ ದಿನಾಂಕದಿಂದ ಹಿಡಿದು ನೀವು ಒಂದು ವಾಹನವನ್ನು ಖರೀದಿಸಿದರೆ ಅದನ್ನು ಖರೀದಿಸುವ ದಿನಾಂಕ ಮತ್ತು ವಾಹನಕ್ಕೆ ಹಾಕಿರುವ ನಂಬರ್ ಪ್ಲೇಟ್ ಸಂಖ್ಯೆ ಇತ್ಯಾದಿವರೆಗೂ ಕೂಡ ಸಂಖ್ಯಾಶಾಸ್ತ್ರ ಪ್ರಭಾವ ಬೀರುತ್ತದೆ.

ಹಾಗಾಗಿ ಸಂಖ್ಯಾಶಾಸ್ತ್ರದಲ್ಲಿ ಯಾವ ದಿನಾಂಕದಂದು ಹುಟ್ಟಿದವರು ಯಾವ ಸಂಖ್ಯೆಗಳ ನಂಬರ್ ಪ್ಲೇಟ್ ಹೊಂದಿರಬೇಕು ಎನ್ನುವ ವಿಷಯದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ಅದಕ್ಕೂ ಮೊದಲು ನೀವು ಈ ವಿಚಾರವನ್ನು ಅರಿತಿರಬೇಕು. ಉದಾಹರಣೆಗೆ ನೀವು ಏಪ್ರಿಲ್ 14, 1994 ರಂದು ಜನಿಸಿದ್ದೀರಾ ಎಂದುಕೊಳ್ಳೋಣ 1+4=5 ಇಲ್ಲಿ ಐದು ನಿಮ್ಮ ಜನ್ಮ ಸಂಖ್ಯೆ ಆಗುತ್ತದೆ ಮತ್ತು 1+4+0+4+1+9+9+4=32, 3+2=5 ನಿಮ್ಮ ಭಾಗ್ಯ ಸಂಖ್ಯೆ ಕೂಡ 5 ಆಗಿರುತ್ತದೆ.

ನಿಮ್ಮ ಜನ್ಮ ಸಂಖ್ಯೆ ಅಥವಾ ಭಾಗ್ಯ ಸಂಖ್ಯೆಗೆ ಅನುಗುಣವಾದ ನಂಬರ್ ಇರುವ ಕಾಂಬಿನೇಷನ್ ಕಾರ್ ಸಂಖ್ಯೆಗಳನ್ನು ನೀವು ಖರೀದಿಸಿದರೆ ಅದರಿಂದ ನಿಮಗೆ ಲಾಭವಾಗುತ್ತದೆ. ಆಗ ಯಾವುದೇ ರೀತಿಯ ಅ’ಪಾ’ಯ ಹಾಗೂ ಅ’ಪ’ಘಾ’ತವಾಗುವ ಸಾಧ್ಯತೆಗಳು ಅಥವಾ ಅದರಿಂದ ಕೆಡುಕಾಗುವ ಸಾಧ್ಯತೆಗಳು ಬಹಳ ಕಡಿಮೆ.

ಯಾವ ದಿನಾಂಕದಂದು ಹುಟ್ಟಿದವರಿಗೆ ಯಾವ ದಿನಾಂಕ ಲಕ್ಕಿ ಆಗಿರುತ್ತದೆ ವಿವರ ಹೀಗಿದೆ
1, 10, 19, 28 —– 2, 3, 4, 5, 9
2, 11, 20, 29 —– 3, 5, 6
3, 12, 21, 30 —– 2, 4, 7, 9
4, 13, 22, 31 —– 1, 6, 7, 9
5, 14, 23 ——– 1, 2, 6, 8, 9
6, 15, 24 ——– 1, 4, 5, 7
7, 16, 25 ——– 3, 4, 6
8, 17, 26 ——– 5, 6, 9
9, 18, 27 ——– 1, 3, 5, 6, 8.

ನಂಬರ್ ಪ್ಲೇಟ್ ನ ಎಲ್ಲಾ ಸಂಖ್ಯೆಗಳನ್ನು ಕೂಡಿ ಬರುವ ಭಾಗ್ಯ ಸಂಖ್ಯೆ ಆಧಾರದ ಮೇಲೆ ಕೂಡ ಕೆಲ ವಿಚಾರವನ್ನು ಲೆಕ್ಕ ಹಾಕಲಾಗುತ್ತದೆ ಅದರ ವಿವರ ಹೀಗಿದೆ.
* ಸಂಖ್ಯೆ 1 ಬಂದರೆ, ಇದನ್ನು ಸೂರ್ಯ ಸಂಖ್ಯೆ ಎಂದು ಹೇಳಲಾಗುತ್ತದೆ. ಸರ್ಕಾರಿ ಕೆಲಸಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಆಡಳಿತಾತ್ಮಕ ಕಾರ್ಯಗಳಲ್ಲಿ ಹೆಚ್ಚು ಅನುಕೂಲಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ.

* ಸಂಖ್ಯೆ 2 ಬಂದರೆ ಆದು ಚಂದ್ರ ಸಂಖ್ಯೆ. ನೀವು ಅನೇಕ ಪ್ರಯಾಣವನ್ನು ಹೊಂದಿರಬಹುದು, ಸಣ್ಣ ಅ’ಪ’ಘಾ’ತಗಳಿಗೆ ಕಾರಣವಾಗಬಹುದು.
* ಸಂಖ್ಯೆ 3 ಗುರು ಸಂಖ್ಯೆ ಆಗಿರುತ್ತದೆ. ಸಮಾಲೋಚನೆ ಕಾರ್ಯಗಳಿಗೆ ಇದು ಉತ್ತಮ, ಈ ರೀತಿ ಸೇವೆಯ ಕಾರ್ಯಗಳಿಗೆ ಇದು ಬಳಕೆಯಾಗುತ್ತದೆ.

* ಸಂಖ್ಯೆ 4 ರಾಹು ಸಂಖ್ಯೆ. ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ, ಜೀವನದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳಲು ನಿಮ್ಮನ್ನು ಒತ್ತಾಯಿಸಬಹುದು.
* ಸಂಖ್ಯೆ 5 ಬುಧನ ಪ್ರಭಾವವಿರುವ ಸಂಖ್ಯೆ, ವ್ಯಾಪಾರಕ್ಕಾಗಿ ಪರಿಪೂರ್ಣ.
* ಸಂಖ್ಯೆ 6 ಶುಕ್ರನ ಪ್ರಭಾವ ಬೀರುವ ಸಂಖ್ಯೆ, ನಿಮ್ಮ ಸ್ವಂತ ಬಳಕೆಗೆ ಈ ಸಂಖ್ಯೆ ಕಾರ್ ಒಳ್ಳೆಯದು.

* ಸಂಖ್ಯೆ 7 ಕೇತುವಿನ ಸಂಖ್ಯೆ, ನೀವು ಹೆಚ್ಚು ಧಾರ್ಮಿಕ ಪ್ರವಾಸಗಳನ್ನು ಮಾಡುತ್ತೀರಿ.
* ಸಂಖ್ಯೆ 8 ಶನಿಗ್ರಹದ ಸಂಖ್ರೆ, ಹೆಚ್ಚು ಜನರನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ.ನಿಮ್ಮನ್ನು ತುಂಬಾ ಕಾರ್ಯನಿರತರನ್ನಾಗಿ ಮಾಡುತ್ತದೆ ಆದರೆ ಬಹಳ ಎಚ್ಚರಿಕೆಯಿಂದ ಇರಬೇಕು.
* ಸಂಖ್ಯೆ 9 ಮಂಗಳನ ಸಂಖ್ಯೆ ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಿ ಸಣ್ಣ ಅ’ಪ’ಘಾ’ತಗಳಿಗೆ ಕಾರಣವಾಗಬಹುದು.

ಆರೋಗ್ಯವೇ ಭಾಗ್ಯ, ಆರೋಗ್ಯದಿಂದಿರಲು ಒಂದಿಷ್ಟು ಟಿಪ್ಸ್ ಗಳು.!

 

* ರಾತ್ರಿ ಹೊತ್ತು ಬೇಗ ಮಲಗುವ ಅಭ್ಯಾಸ ಮಾಡಿಕೊಳ್ಳಿ. ಹಾಗೆ ಮುಂಜಾನೆ ಬೇಗ ಎದ್ದು ಹಲ್ಲು, ಬಾಯಿ, ನಾಲಿಗೆ, ಕ್ಲೀನ್ ಮಾಡಿಕೊಂಡು ಒಂದು ಲೋಟ ಬೆಚ್ಚಗೆ ಇರುವ ನೀರನ್ನು ಕುಡಿಯಿರಿ, ಇದರಿಂದ ದೇಹದಲ್ಲಿರುವ ಟಾಕ್ಸಿನ್ ಅಂಶಗಳು ಹೊರಹೋಗಲು ಮತ್ತು ಡೈಜೆಸ್ಟಿವ್ ಸಿಸ್ಟಮ್ ಕ್ಲೀನ್ ಆಗಲು ಸಹಾಯಕವಾಗುತ್ತದೆ.
* ಶೌಚ ಮಾಡುವ ಮುನ್ನ ಚಹಾ, ಕಾಫಿ ಸೇವಿಸುವ, ಬೀಡಿ ಸಿಗರೇಟ್ ಬಳಸುವ ಅಭ್ಯಾಸ ಮಾಡಿಕೊಳ್ಳಬೇಡಿ.

* ಶೌಚಕ್ಕೆ ಕುಳಿತಾಗ ಹೆಚ್ಚು ಉಗುಳುವುದಾಗಲಿ ಅಥವಾ ಉಸಿರನ್ನು ತಡೆಯುವುದಾಗಲಿ ಮಾಡಬಾರದು, ಇದು ಆರೋಗ್ಯಕ್ಕೆ ಮಾ’ರ’ಕ.
* ಪ್ರತಿನಿತ್ಯವೂ ಕೂಡ ಶೌಚಕ್ರಿಯೆ ಸರಾಗವಾಗಿ ಆಗಬೇಕು ಹಾಗೆ ಶೌಚ ಮುಗಿದ ಮೇಲೆ ಸೋಪು ಅಥವಾ ಮಣ್ಣಿನಿಂದ ನೀಟಾಗಿ ಕೈಗಳನ್ನು ಉಜ್ಜಿ ತೊಳೆಯಬೇಕು.
* ಶೌಚದಿಂದ ಬಂದ ತಕ್ಷಣವೇ ನೀರು ಕಾಫಿ ಕುಡಿಯುವುದು ಅಥವಾ ಏನನ್ನಾದರೂ ಸೇವಿಸುವುದು ಮಾಡಬಾರದು.

* ನಿಮ್ಮ ಶಕ್ತಿಗೆ ಅನುಸಾರವಾಗಿ ಸ್ವಚ್ಛಂದವಾದ ಸ್ಥಳದಲ್ಲಿ ಸೂರ್ಯ ನಮಸ್ಕಾರ ಮಾಡುವ ರೂಢಿಯನ್ನು ಆರಂಭಿಸಿಕೊಳ್ಳಿ.
* ನಮ್ಮ ದೇಹದ ಆರೋಗ್ಯಕ್ಕೆ ಊಟ ಎಷ್ಟು ಮುಖ್ಯವೋ ಹಾಗೆ ಮನಸ್ಸಿನ ಆರೋಗ್ಯಕ್ಕೆ ಸೂರ್ಯ ನಮಸ್ಕಾರ ಧ್ಯಾನ ಯೋಗ ದಿನ ನಿತ್ಯದ ಪೂಜೆ ಕೂಡ ಅವಶ್ಯಕ ಇವುಗಳನ್ನು ಕೂಡ ಅಭ್ಯಾಸ ಮಾಡಿ.
* ಸೂರ್ಯ ನಮಸ್ಕಾರ ಮುಗಿದ ಮೇಲೆ ಶವಾಸನದಲ್ಲಿ ವಿಶ್ರಾಂತಿ ಪಡೆಯಲೇಬೇಕು.

* ಸೂರ್ಯ ನಮಸ್ಕಾರ ಆದಮೇಲೆ 30 ನಿಮಿಷಗಳ ನಂತರ ಸ್ನಾನ ಮಾಡಬೇಕು, ಒಂದು ತಾಸಿನ ನಂತರ ಮಾಡುವುದು ಇನ್ನೂ ಉತ್ತಮ.
* ಶರೀರದ ಸ್ವಚ್ಛತೆ ಹಾಗೂ ಕಾಂತಿಗಾಗಿ ಕಡಲೆ ಹಿಟ್ಟು ಮತ್ತು ಸೀಗೆಕಾಯಿ ಮಿಶ್ರಣದಲ್ಲಿ ಸ್ನಾನ ಮಾಡಬೇಕು.
* ವಾರಕ್ಕೊಮ್ಮೆ ಎಣ್ಣೆ ಸ್ನಾನ ಮಾಡಿದರೆ ದೇಹ ಗಟ್ಟಿಮುಟ್ಟಾಗಿರುತ್ತದೆ.
* ಊಟ ಸೇವಿಸಿ, ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸ್ನಾನ ಮುಗಿದ ಅರ್ಧ ತಾಸಿನ ನಂತರವಷ್ಟೇ ಟಿಫನ್ ಮಾಡಬೇಕು.

* ಹೊಟ್ಟೆ ಹಸಿವು ಇಲ್ಲದೆ ಇದ್ದಾಗ ಊಟ ಮಾಡುವುದು ಒಳ್ಳೆಯದಲ್ಲ, ಹಾಗೆ ಚೆನ್ನಾಗಿ ಹಸಿದ ಮೇಲೆ ತಡೆಯುವುದು ಕೂಡ ಒಳ್ಳೆಯದಲ್ಲ.
* ಊಟ ಮಾಡುವಾಗ ಊಟದ ಕಡೆಗೆ ಪೂರ್ತಿ ಗಮನ ಇರಬೇಕು. ತಮ್ಮ ಪಾಲಿಗೆ ಬಂದ ಆಹಾರವನ್ನು ಸಂತೃಪ್ತಿಯಿಂದ ಪ್ರಸಾದವೆಂಬಂತೆ ಸ್ವೀಕರಿಸಿ ಶಾಂತಿಯಿಂದ ತಿನ್ನಬೇಕು.
* ಧೂಮಪಾನ ಮತ್ತು ಮಧ್ಯಪಾನ ಆರೋಗ್ಯದ ದೃಷ್ಟಿಯಿಂದ ಬಹಳ ಕೆ’ಟ್ಟದ್ದು ಈ ಅಭ್ಯಾಸಗಳಿಂದ ಹೊರಬರಲು ಪ್ರಯತ್ನಿಸಿ.

* ಸಸ್ಯಹಾರವು ಮಾಂಸಹಾರಕ್ಕಿಂತ ದೇಹದ ಆರೋಗ್ಯಕ್ಕೆ ಉತ್ತಮ ಆಹಾರ ಎನ್ನುವುದು ಅನೇಕ ಸಂಶೋಧಗಳಿಂದ ಸಾಬೀತಾಗಿದೆ, ಹಾಗಾಗಿ ಸಾಧ್ಯವಾದಷ್ಟು ಸಾತ್ವಿಕ ಆಹಾರವನ್ನು ಸೇವಿಸಿ.
* ಮೊಳಕೆ ಕಟ್ಟಿದ ಕಾಳುಗಳು, ಹಸಿರು ಸೊಪ್ಪು ತರಕಾರಿಗಳು, ಮತ್ತು ಆಯಾ ಸೀಸನ್ ಗೆ ತಕ್ಕ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ.
* ತಿಂದ ಆಹಾರವು ಸುಲಭವಾಗಿ ಜೀರ್ಣವಾಗುವಂತೆ ಚೆನ್ನಾಗಿ ಅಗಿದು ನುಂಗಬೇಕು.

* ಸಾಧ್ಯವಾದಷ್ಟು ಮನೆಯಲ್ಲಿ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಿ. ಜಂಕ್ ಫುಡ್ ಗಳ ವೈಜ್ಞಾನಿಕವಾಗಿ ತಯಾರಾದ ಆಹಾರ ಪದಾರ್ಥಗಳ ಅಭ್ಯಾಸದಿಂದ ದೂರ ಇರಿ.
* ಊಟ ತಿಂದ ತಕ್ಷಣ ಮಲಗಬಾರದು.
* ರಾತ್ರಿ ಟಿವಿ ನೋಡುತ್ತಾ, ಮೊಬೈಲ್ ನೋಡುತ್ತಾ ಮಲಗುವುದು ತಪ್ಪು. ಮಲಗುವ ಒಂದು ತಾಸಿನ ಮೊದಲು ಒಂದು ಲೋಟ ನೀರು ಕುಡಿದಿರಬೇಕು, ಎರಡು ತಾಸಿನ ಮೊದಲು ಊಟ ಮಾಡಿರಬೇಕು, ಮೂರು ತಾಸಿನ ಮೊದಲು ಬ್ಲೂ ಲೈಟ್ ಎಮಿಷನ್ ನಿಂದ ಹೊರಬರಬೇಕು.
* ರಾತ್ರಿ ಹೊತ್ತು ನಿದ್ದೆಗೆಡಬಾರದು, ಕನಿಷ್ಠ 7 ಗಂಟೆಗಳ ನಿದ್ದೆ ಮಾಡಲೇಬೇಕು.

ದೇಹದ ತೂಕ ಹೆಚ್ಚಾಗಬೇಕಾ.? ತಪ್ಪದೇ ಇವುಗಳನ್ನು ಪಾಲಿಸಿ.!

 

ದೇಹದ ತೂಕ ಕಡಿಮೆ ಆಗುವುದು ಹಾಗೂ ಹೆಚ್ಚಾಗುವುದು ನೈಸರ್ಗಿಕವಾಗಿ ಆಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹೊರಗಿನಿಂದ ನ್ಯೂಟ್ರಿಷನ್ ಸಪ್ಲಿಮೆಂಟ್ಗಳು ಟಾನಿಕ್ ಟ್ಯಾಬ್ಲೆಟ್ ಗಳು ಇವುಗಳ ಮೂಲಕ ಅವೈಜ್ಞಾನಿಕವಾಗಿ ಇದ್ದಕ್ಕಿದ್ದಂತೆ ದಪ್ಪ ಆಗುವುದು ಹಾಗೂ ಅತಿಯಾದ ವ್ಯಾಯಾಮ ಮಾಡಿ ಮತ್ತು ತೂಕ ಕಡಿಮೆ ಆಗುವುದಕ್ಕೂ ಕೂಡ ಔಷಧಿಗಳನ್ನು ಸೇವಿಸಿ ಇದಕ್ಕಿದ್ದಂತೆ ಸಣ್ಣ ಆಗುವುದು ಮಾಡುತ್ತಿದ್ದಾರೆ.

ಆದರೆ ಇದು ಆರೋಗ್ಯದ ಮೇಲೆ ಬಹಳ ಗಂಭೀರವಾದ ಪರಿಣಾಮ ಬೀರುತ್ತದೆ. ಇದು ಸರಿಯಾದ ಪದ್ಧತಿ ಅಲ್ಲ, ಈ ರೀತಿ ಬಹಳ ಸಣ್ಣ ಇರುವವರು ದಪ್ಪಗಾಗುವ ಅವಶ್ಯಕತೆ ಇದ್ದರೆ ಅಥವಾ ದಪ್ಪಗಾಗಬೇಕು ಎನ್ನುವ ಇಚ್ಛೆ ಇದ್ದರೆ ನಾವು ತಿನ್ನುವ ಆಹಾರದ ಮೂಲಕವೇ ಅದನ್ನ ಹೆಚ್ಚಿಗೆ ಮಾಡಿಕೊಳ್ಳಬೇಕು. ಹಾಗಾಗಿ ಈ ಅಂಕಣದಲ್ಲಿ ಹೇಗೆ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ಟಿಪ್ಸ್ ಹಾಗೂ ಟ್ರಿಕ್ಸ್ ಗಳನ್ನು ಹೇಳಿಕೊಡುತ್ತಿದ್ದೇವೆ.

ದೇಹದ ತೂಕ ದಪ್ಪ ಆಗಬೇಕು ಎಂದರೆ ಅದು ಬರಿ ದೇಹಕ್ಕೆ ಸಂಬಂಧಿಸಿದ್ದು ಮಾತ್ರವಲ್ಲದೇ ಮಾನಸಿಕವಾಗಿ ಕೂಡ ಆರೋಗ್ಯವಾಗಿದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಯಾವಾಗಲೂ ಚಿಂತೆಯಲ್ಲಿರುವ ವ್ಯಕ್ತಿ ದಪ್ಪಗಾಗಲು ಸಾಧ್ಯವಿಲ್ಲ. ಹಾಗಾಗಿ ಜೀವನದಲ್ಲಿ ಬರುವ ದುಃ’ಖ, ನೋ’ವು ಸಮಸ್ಯೆ ಇವುಗಳನ್ನು ಯಾವಾಗಲೂ ಮನಸ್ಸಿನಲ್ಲಿ ತುಂಬಿಕೊಂಡು ಇರಬಾರದು.

ಈ ರೀತಿ ಇದ್ದಾಗ ಎಷ್ಟೇ ತಿಂದರೂ ಕೂಡ ಅದು ದೇಹಕ್ಕೆ ಧಕ್ಕುವುದಿಲ್ಲ. ಹಾಗಾಗಿ ಮೊದಲು ಯಾವ ಸಮಸ್ಯೆಯಿಂದ ಮನಸ್ಸಿಗೆ ಚಿಂತೆಯಾಗಿದೆ ಅದನ್ನು ಪರಿಹರಿಸಿಕೊಳ್ಳಬೇಕು, ನಾವು ನಗುನಗುತ್ತಾ ಸಂತೋಷವಾಗಿದ್ದಾಗ ಆರೋಗ್ಯವಾಗಿ ಇರುತ್ತೇವೆ ಮತ್ತು ನಮ್ಮ ದೇಹದ ತೂಕವು ಸಮತೋಲನದಲ್ಲಿರುತ್ತದೆ.

ಇದನ್ನು ಹೊರತುಪಡಿಸಿ ಆಹಾರ ಪದಾರ್ಥಗಳ ಬಗ್ಗೆ ಹೇಳುವುದಾದರೆ ತುಪ್ಪವು ದೇಹದ ತೂಕ ಹೆಚ್ಚಿಸುವುದಕ್ಕೆ ಮತ್ತು ದೇಹವನ್ನು ಆರೋಗ್ಯವಾಗಿ ಇಡುವುದಕ್ಕೆ ಉತ್ತಮವಾದ ಒಂದು ಔಷಧಿಯಾಗಿದೆ ಎಂದು ಹೇಳಬಹುದು. ಹಾಗಾಗಿ ತಪ್ಪದೆ ಪ್ರತಿದಿನವೂ ಸಾಧ್ಯವಾದರೆ ಮೂರು ಹೊತ್ತು ಕೂಡ ತುಪ್ಪವನ್ನು ಊಟಕ್ಕೆ ಹಾಕಿಕೊಂಡು ಸೇವಿಸಬೇಕು.

ಜೊತೆಗೆ ಈಗಿನ ಕಾಲದಲ್ಲಿ ತರಕಾರಿ, ಸೊಪ್ಪು, ಕಾಳುಗಳು ಇವುಗಳನ್ನು ತಿನ್ನುವುದೇ ಜನರು ಮರೆತಿದ್ದಾರೆ. ಈ ತರಕಾರಿ ಬೇಡ ಆ ಸೊಪ್ಪು ಬೇಡ ಈ ರೀತಿ ಉತ್ತಮವಾದದ್ದನ್ನು ಬಿಟ್ಟು ಐಸ್ ಕ್ರೀಮ್ , ಚಾಕಲೇಟ್ ಕಾರ್ಬೋನಿಕ್ ಡ್ರಿಂಕ್ಗಳು ಈ ರೀತಿ ಬೇಡದ್ದನ್ನು ಸೇವಿಸುವದರಿಂದ ದೇಹ ದುರ್ಬಲವಾಗುತ್ತಿದೆ.

ಅತಿ ಹೆಚ್ಚು ಹೆಚ್ಚು ಜಿಮ್ ಮಾಡುವುದರಿಂದ ದೇಹ ದಪ್ಪವಾಗುತ್ತದೆ ಎಂದುಕೊಳ್ಳುವುದು ಕೂಡ ತಪ್ಪು. ವ್ಯಾಯಾಮ ಮಾಡುವುದರಿಂದ ಸುಲಭವಾಗಿ ದೇಹವನ್ನು ಸಣ್ಣ ಮಾಡಲು ಆಗುವುದಿಲ್ಲ, ದಪ್ಪ ಮಾಡಲು ಆಗುವುದಿಲ್ಲ ಮತ್ತು ಅಷ್ಟು ವ್ಯಾಯಾಮದ ಅವಶ್ಯಕತೆಯೂ ಇಲ್ಲ. ಒಬ್ಬ ವ್ಯಕ್ತಿಯು ಶ್ರಮಪಟ್ಟು ಕೆಲಸ ಕಾರ್ಯ ಮಾಡುತ್ತಿದ್ದರೆ ಆತ ದಿನದ ಅರ್ಧ ತಾಸು ಮುಂಜಾನೆಯಲ್ಲಿ ಸರಳ ವ್ಯಾಯಾಮ ಮಾಡಿದರೆ ಸಾಕು.

ಇನ್ನು ಕೆಲವರಿಗೆ ತಿಂದ ತಕ್ಷಣ ಮಲಗುವುದರಿಂದ ದಪ್ಪ ಆಗುತ್ತೇವೆ ಎನ್ನುವ ಭಾವನೆ ಇದೆ ಅದು ಕೂಡ ತಪ್ಪು. ಮನಸ್ಸಿನಲ್ಲಿ ನೂರೆಂಟು ಯೋಚನೆ ತುಂಬಿಕೊಂಡು ತಿಂದ ತಕ್ಷಣ ಮಲಗುತ್ತೇವೆ ಎಂದುಕೊಳ್ಳುತ್ತಾರೆ, ಆ ರೀತಿ ಆಗುವುದಿಲ್ಲ. ನಮ್ಮ ಜಠರಾಗ್ನಿಯಲ್ಲಿ ಜೀರ್ಣಕ್ರಿಯೆಗೆ ಬೇಕಾದ ಎನರ್ಜಿ ಕ್ರಿಯೇಟ್ ಆಗಬೇಕು ಈ ರೀತಿ ಜಠರ ಕ್ರಿಯಾಶೀಲವಾಗಿರುವುದರಿಂದ ನಾವು ತಿಂದ ಆಹಾರವು ಸರಿಯಾಗಿ ರೀತಿಯಲ್ಲಿ ಜೀರ್ಣವಾಗಿ.

ಆ ಮೂಲಕ ಅದು ದೇಹದ ಅಂಗಗಳಿಗೆ ತಲುಪಿ ಇವುಗಳ ಮೂಲಕ ದೇಹಕ್ಕೆ ಶಕ್ತಿ ಹಾಗೂ ಮೆದುಳಿಕೆ ಚುರುಕುತನ ಬರುತ್ತದೆ ಅದನ್ನು ಹೊರತುಪಡಿಸಿ ನೈಸರ್ಗಿಕವಾಗಿ ಬಿಟ್ಟು ಕೃತಕವಾಗಿ ನಾವು ಏನೇ ಮಾಡಿದರು ಕೂಡ ಅದು ಹೊರಗಿನಿಂದ ಆಗಿರುತ್ತದ ಇವತ್ತು ದೇಹದ ಒಳಗಡೆ ಅದರ ಪರಿಣಾಮ ಶಾಶ್ವತವಾಗಿರುವುದಿಲ್ಲ ಮತ್ತು ಆರೋಗ್ಯಕರವಾಗಿರುವುದಿಲ್ಲ.

ಮಕ್ಕಳು ಯಾವ ವಾರ ಜನಿಸಿದರೆ ಏನು ಫಲ ಗೊತ್ತಾ.?.

ನಮ್ಮ ಭಾರತ ದೇಶದಲ್ಲಿ ಪುರಾತನ ಕಾಲದಿಂದಲೂ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ನಂಬಿಕೆ ಇಟ್ಟಿದ್ದೇವೆ ಮತ್ತು ಅದನ್ನು ಚಾಚು ತಪ್ಪದೆ ಪಾಲಿಸುತ್ತೇವೆ. ಆಧುನಿಕ ಕಾಲದ ಈ ಇಂಟರ್ನೆಟ್ ಯುಗದಲ್ಲೂ ಕೂಡ ಜ್ಯೋತಿಷ್ಯ ಶಾಸ್ತ್ರ ಇನ್ನು ತನ್ನ ಮಹತ್ವವನ್ನು ಉಳಿಸಿಕೊಂಡಿದೆ, ಇದಕ್ಕೆ ಕಾರಣ ಅದರಲ್ಲಿರುವ ಸತ್ಯಾಂಶಗಳು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನ ಎಲ್ಲಾ ಗೊಂದಲ ಹಾಗೂ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಹಣದ ಆ’ಸೆಗಾಗಿ, ಸು’ಳ್ಳು ವೇಷ ಹಾಕಿ ನಿಜವಾದ ಜ್ಯೋತಿಷ್ಯ ಶಾಸ್ತ್ರದ ಹೆಸರು ಹಾಳು ಮಾಡುತ್ತಿದ್ದಾರೆ. ಆದರೆ ಸರಿಯಾಗಿ ಈ ಬಗ್ಗೆ ಬಾಲ್ಯದಿಂದಲೂ ಅಭ್ಯಾಸ ಮಾಡಿದ ವ್ಯಕ್ತಿಗಳು ಹೇಳಿದ ಪ್ರಕಾರ ಜೋತಿಷ್ಯ ಶಾಸ್ತ್ರದಲ್ಲಿ ಹೇಳಿದ ಹಲವಾರು ಅಂಶಗಳು ಸತ್ಯವಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಗುಣ ಸ್ವಭಾವ ಮತ್ತು ಭವಿಷ್ಯವನ್ನು ಆತ ಹುಟ್ಟಿದ ದಿನ, ಹುಟ್ಟಿರುವ ವಾರ, ತಿಥಿ ನಕ್ಷತ್ರ ಅವನ ಹೆಸರು ಹಾಗೂ ರಾಶಿ ಮೂಲಕ ಲೆಕ್ಕಾಚಾರ ಹಾಕಿ ಹೇಳಬಹುದು. ವಾರದಲ್ಲಿ ಏಳೇ ದಿನಗಳು ಇದ್ದರೂ, ಒಬ್ಬರಿಗಿಂತ ಮತ್ತೊಬ್ಬರು ಭಿನ್ನ ಆಗಿರುತ್ತಾರೆ.

ಹಾಗೆ 27 ನಕ್ಷತ್ರಗಳಲ್ಲಿ ಜನಿಸಿದವರ ಗುಣ ಸ್ವಭಾವಗಳು ಪರಸ್ಪರ ಬೇರೆ ಆಗಿರುತ್ತವೆ, ಹೀಗೆ ಇದೆಲ್ಲವೂ ಅವರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ನಾವು ಕೂಡ ಈ ಅಂಕಣದಲ್ಲಿ ಇದರಲ್ಲಿ ಕೆಲ ಪ್ರಮುಖ ಅಂಶವಾದ ವಾರದ ಆಧಾರದ ಮೇಲೆ ಪರಿಣಾಮ ಬೀರಬಹುದಾದ ಕೆಲವು ಸಂಗತಿಗಳ ಬಗ್ಗೆ ವಿಷಯವನ್ನು ತಿಳಿಸಿ ಕೊಡುತ್ತಿದ್ದೇವೆ.

ಇದರಲ್ಲಿ ಮುಖ್ಯವಾಗಿ ಹೆಣ್ಣು ಮಕ್ಕಳು ಯಾವ ವಾರ ಹುಟ್ಟಿದರೆ ಏನು ಫಲ ತರುತ್ತಾರೆ ಮತ್ತು ಗಂಡು ಮಕ್ಕಳು ಯಾವ ವಾರ ಹುಟ್ಟಿದರೆ ಹೇಗಿರುತ್ತಾರೆ ಎನ್ನುವುದರ ಬಗ್ಗೆ ಆಯ್ದ ಕೆಲ ಪ್ರಮುಖ ಸಂಗತಿಯನ್ನು ಹೇಳುತ್ತಿದ್ದೇವೆ.

1. ಭಾನುವಾರ:-
* ಭಾನುವಾರ ಗಂಡು ಮಕ್ಕಳು ಜನಿಸಿದರೆ ಅಂತಹ ಮಕ್ಕಳು ಶುಭ ಫಲ ನೀಡುತ್ತಾರೆ, ಶ್ರೇಷ್ಠವಾದ ಗುಣವನ್ನು ಹೊಂದಿರುತ್ತಾರೆ. ಶಿಸ್ತಿನ ಜೀವನ ಪಾಲಿಸಿ ಉನ್ನತ ಸ್ಥಾನಕ್ಕೇರುತ್ತಾರೆ, ಮುಖದಲ್ಲಿ ಸೂರ್ಯನಂತ ತೇಜಸ್ಸು, ಕಳೆ ಎದ್ದು ಕಾಣುತ್ತದೆ.
* ಹೆಣ್ಣುಮಕ್ಕಳು ಭಾನುವಾರ ಜನಿಸಿದರೆ ತಂದೆ ಮನೆಗೆ ಮತ್ತು ಮದುವೆ ಆಗಿ ಹೋಗುವ ಗಂಡನ ಮನೆಗೆ ಅದೃಷ್ಟ ಅಷ್ಟ ಐಶ್ವರ್ಯವನ್ನು ತೆಗೆದುಕೊಂಡು ಹೋಗುತ್ತಾರೆ. ತಂದೆ ಮನೆಗೆ ಕೀರ್ತಿ ತಂದು ಕೊಡುತ್ತಾಳೆ.

‌2. ಸೋಮವಾರ:-
* ಸೋಮವಾರ ಜನಿಸಿದ ಗಂಡು ಭವಿಷ್ಯದಲ್ಲಿ ಶಿವನ ಆರಾಧಕರು ಆಗುತ್ತಾನೆ, ಧಾರ್ಮಿಕ ಕಾರ್ಯದಲ್ಲಿ ತೊಡಗುತ್ತಾನೆ. ಗೌರವದ ಮಾರ್ಗದಲ್ಲಿ ಸಾಧು-ಸಂತರಲ್ಲಿ ನಂಬಿಕೆ ಇಟ್ಟು ಧ್ಯಾನ ಯಾಗ ಇತ್ಯಾದಿಗಳಲ್ಲಿ ಭಾಗವಹಿಸುತ್ತಾರೆ.
* ಸೋಮವಾರ ಹುಟ್ಟಿದ ಹೆಣ್ಣು ಮಕ್ಕಳು ತಂದೆ ಮನೆಗೆ ಹೆಸರು ತರುವಂತೆ ಗಂಡನ ಮನೆಯಲ್ಲಿ ಬದುಕಿ ಬಾಳುತ್ತಾರೆ. ಸಹನಾಮೂರ್ತಿಗಳಾಗಿದ್ದು, ತಾಳ್ಮೆಯಿಂದ ಇವರು ಸಾಧನೆ ಮಾಡುತ್ತಾರೆ. ಕುಟುಂಬಕ್ಕಾಗಿ ಜೀವನವನ್ನು ಮೀಸಲಿಡುತ್ತಾರೆ

3. ಮಂಗಳವಾರ:-
* ಮಂಗಳವಾರ ಹುಟ್ಟಿದ ಗಂಡು ಮಕ್ಕಳು ಬಹಳ ಧೈರ್ಯಶಾಲಿಗಳಾಗಿರುತ್ತಾರೆ. ಸಾಹಸ ಪ್ರವೃತ್ತಿ ಹೊಂದಿರುತ್ತಾರೆ.
* ಮಂಗಳವಾರ ಹುಟ್ಟಿದಂತಹ ಹೆಣ್ಣು ಮಕ್ಕಳು ಮನೆಗೆ ಗಂಡು ಮಗನಂತೆ ನಿಂತು ತವರು ಮನೆಯ ಕ’ಷ್ಟ ಹಾಗೂ ಮೆಟ್ಟಿದ ಮನೆಯ ಕ’ಷ್ಟಗಳಲ್ಲಿ ಕುಟುಂಬಸ್ಥರನ್ನು ಕಾಪಾಡುತ್ತಾರೆ.

‌4. ಬುಧವಾರ:-
* ಗಂಡು ಮಗು ಬುಧವಾರ ಜನಿಸಿದರೆ ಮುಂದಿನ ದಿನಗಳಲ್ಲಿ ಮಹಾಜ್ಞಾನಿ ಆಗುತ್ತಾನೆ, ಸೌಮ್ಯ ಸ್ವಭಾವದವರಾಗಿರುತ್ತಾನೆ. ವಿದ್ಯಾಭ್ಯಾಸದಲ್ಲಿ ಉನ್ನತೆಯನ್ನು ಸಾದಿಸುತ್ತಾನೆ. ಇವರು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡುತ್ತಾರೆ. ಇವರ ಜೀವನ ಶೈಲಿ ಇವರಿಗಿಂತ ವೇಗವಾಗಿ ಬದಲಾಗುತ್ತದೆ.
* ಬುಧವಾರ ಹುಟ್ಟಿದ ಹೆಣ್ಣು ಮಕ್ಕಳು ಕೂಡ ಬಹಳ ಬುದ್ಧಿವಂತರಾಗಿರುತ್ತಾರೆ. ನಗುನಗುತ್ತ ಕುಟುಂಬ ಹಾಗೂ ಕರ್ತವ್ಯ ಎರಡನ್ನು ಪಾಲಿಸುವಷ್ಟು ಚಾಲಾಕಿಗಳಾಗಿರುತ್ತಾರೆ. ಬಹಳ ಆಕರ್ಷಣೀಯ ವ್ಯಕ್ತಿಗಳಾಗಿರುತ್ತಾರೆ.

5.ಗುರುವಾರ:-
* ಗುರುವಾರ ಹುಟ್ಟಿದ ಗಂಡು ಮಕ್ಕಳಲ್ಲಿ ಬೇರೆಯವರ ಕ’ಷ್ಟ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೆಚ್ಚಾಗಿರುತ್ತಾರೆ. ಸಹೋದರರಿಗಾಗಲಿ, ಸ್ನೇಹಿತರಿಗಾಗಲಿ ಸಮಸ್ಯೆ ಬಂದರೆ ಮೊದಲು ಎಲ್ಲರನ್ನು ಸಂಘಟಿಸುತ್ತಾರೆ ಮತ್ತು ತಮ್ಮಿಂದ ಆದಷ್ಟು ಸಹಾಯದ ಜೊತೆಗೆ ಸಲಹೆ ಕೂಡ ನೀಡುತ್ತಾರೆ.
* ಗುರುವಾರ ಹುಟ್ಟಿದ ಹೆಣ್ಣು ಮಕ್ಕಳು ದೈವಭಕ್ತರಾಗಿರುತ್ತಾರೆ. ಇವರಿಗೂ ಸಹ ಕುಟುಂಬದ ಮೇಲೆ ಅಪಾರ ಪ್ರೀತಿ ಇರುತ್ತದೆ, ಎಲ್ಲರ ಜೊತೆ ಚೆನ್ನಾಗಿರಬೇಕು ಎಂದು ಭಾವಿಸುವ ವ್ಯಕ್ತಿತ್ವ.

6. ಶುಕ್ರವಾರ:-
* ಶುಕ್ರವಾರದ ಹುಟ್ಟಿದ ಗಂಡು ಮಕ್ಕಳು ಜೀವನದಲ್ಲಿ ಬಹಳ ಅದ್ದೂರಿಯಾಗಿ ಬದುಕುತ್ತಾರೆ, ಹಣಕಾಸಿನ ಕೊರತೆ ಇವರಿಗೆ ಬರುವುದೇ ಇಲ್ಲ. ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಭಾಗ್ಯವನ್ನು ಪಡೆದಿರುತ್ತಾರೆ.
* ಹೆಣ್ಣುಮಕ್ಕಳು ಶುಕ್ರವಾರ ಜನಿಸಿದರೆ ತಂದೆಯ ಮನೆಯಲ್ಲಿ ದ’ರಿ’ದ್ರತನ ಬಂದರೂ ಸಹ ಗಂಡನ ಮನೆಗೆ ಅದೃಷ್ಟ ಲಕ್ಷ್ಮಿಯಾಗಿ ನಿಲ್ಲುತ್ತಾಳೆ. ಗಂಡನ ಮನೆಯಲ್ಲಿ ಎಲ್ಲ ಅಧಿಕಾರಗಳನ್ನು ಅನುಭವಿಸುತ್ತಾಳೆ.

7. ಶನಿವಾರ:-
* ಗಂಡು ಮಕ್ಕಳು ಜನಿಸಿದರೆ ಕಿಲಾಡಿ ಆಗಿರುತ್ತಾರೆ.ಯಾರ ಮಾತಿಗೂ ಕಿಮ್ಮತ್ತು ಕೊಡುವುದಿಲ್ಲ. ಇವರು ತಂದೆ ತಾಯಿಗೆ ಸ್ವಲ್ಪ ವಿರೋಧಿಯಾಗಿಯೇ ಬದುಕುತ್ತಾರೆ, ಜೀವನದಲ್ಲಿ ಅಡೆತಡೆಗಳು ಹೆಚ್ಚಾಗಿ ಬರುತ್ತವೆ. ಜೀವನದಲ್ಲಿ ಪ್ರಗತಿ ಎನ್ನುವುದು ಮಂದಗತಿಯಲ್ಲಿ ಸಾಗುತ್ತದೆ.
* ಶನಿವಾರ ಹುಟ್ಟಿದ ಹೆಣ್ಣು ಮಕ್ಕಳು ನಿಷ್ಠೂರವಾದಿಗಳಾಗಿರುತ್ತಾರೆ, ಸರಿ ತಪ್ಪು ಎನ್ನುವುದನ್ನು ಯಾವುದೇ ಅಳುಕು ಇಲ್ಲದೆ ನೇರವಾಗಿ ಹೇಳಿಬಿಡುತ್ತಾನೆ. ಇದರಿಂದ ಹಲವರ ಮೆಚ್ಚುಗೆಗೆ, ಕೆಲವರ ಕೋ’ಪ’ಕ್ಕೂ ಗುರಿಯಾಗುತ್ತಾರೆ.

ಗಂಡು ಮಗು ಜನಿಸಿದಾಗ ಈ ಭಾಗದಲ್ಲಿ ಮಚ್ಚೆ ಇದ್ರೆ ಆ ಮಗು ಲಕ್ಷ್ಮೀಪುತ್ರನಾಗ್ತಾನೆ.!

ಈಗಿನ ಕಾಲದಲ್ಲಿ ಮಕ್ಕಳಾಗುವುದೇ ಪುಣ್ಯ ಎಂದು ಹೇಳಬಹುದು. ಹೆಣ್ಣು ಮತ್ತು ಗಂಡು ಮಕ್ಕಳ ಭೇಧವಿಲ್ಲದೆ ಪ್ರತಿಯೊಬ್ಬರೂ ಕೂಡ ಮಕ್ಕಳನ್ನು ಸಮಾನವಾಗಿ ಸಾಕುತ್ತಾರೆ. ಈಗ ಹೆಣ್ಣು ಮಕ್ಕಳು ಕೂಡ ಗಂಡು ಮಕ್ಕಳಿಗೆ ಯಾವುದರಲ್ಲೂ ಕಡಿಮೆ ಇಲ್ಲ. ಆದರೆ ಮಗು ಜನಿಸುವ ಸಮಯದಲ್ಲಿ ಖಂಡಿತವಾಗಿಯೂ ಮೊದಲ ಮಗು ಗಂಡು ಮಗು ಆಗಲಿ ಎನ್ನುವ ಆಸೆ ಇರುತ್ತದೆ.

ಯಾಕೆಂದರೆ ತಾಯಿಗೆ ಗಂಡು ಮಕ್ಕಳ ಮೇಲೆ ಸ್ವಲ್ಪ ಹೆಚ್ಚು ಪ್ರೀತಿ ಹಾಗೆ ತಂದೆ ಹಾಗೂ ಕುಟುಂಬದವರಿಗೆ ವಂಶೋದ್ಧಾರಕ ಬಂದ ಎನ್ನುವ ಸಂಭ್ರಮ ಹಾಗೂ ಸಮಾಧಾನ. ಮೊದಲನೇ ಮಗು ಗಂಡು ಮಗುವಾಗಿದ್ದು ಎರಡನೇ ಮಗು ಗಂಡಾದರೂ ಹೆಣ್ಣಾದರು ಯಾರಿಗೂ ಏನೂ ಟೆನ್ಶನ್ ಇರುವುದಿಲ್ಲ, ಯಾಕೆಂದರೆ ಮೊದಲನೇ ಮಗು ಮೇಲೆ ನಿರೀಕ್ಷೆ ಹೆಚ್ಚು.

ಕೆಲವರಿಗೆ ಜೀವನದಲ್ಲಿ ಬಹಳ ತೊಂದರೆ ಕಷ್ಟಗಳು ಇದ್ದರೂ ಕೂಡ ಮಕ್ಕಳಾದ ಮೇಲೆ ಅದು ಪರಿಹಾರ ಆಗಿರುವ ಉದಾಹರಣೆಗಳು ಇವೆ. ಮೊದಲನೇ ಮಗು ಹೆಣ್ಣು ಆದರೂ ಅದಕ್ಕೆ ಇರುವ ಕೆಲವು ಲಕ್ಷಣಗಳಿಂದ ಅದೃಷ್ಟ ಬರುತ್ತದೆ. ಹಾಗೆ ಮೊದಲನೇ ಮಗು ಗಂಡು ಆದರೂ ಅನೇಕರಿಗೆ ಆ ಮಗು ಹೊತ್ತು ತಂದ ಭಾಗ್ಯದಿಂದ ಅವರ ಬದುಕು ಬಂಗಾರದ ರೀತಿ ಬದಲಾಗಿರುವ ಸಾಕಷ್ಟು ಉದಾಹರಣೆಗಳು ಇವೆ.

ಅದನ್ನೇ ಸಾಮೂಹಿಕ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ, ಮೊದಲ ಪುತ್ರನ ಜನನವಾದಾಗ ಆತನು ಹೊಂದಿರುವ ಕೆಲ ಲಕ್ಷಣಗಳ ಮೇಲೆ ಆತನಿಂದ ಎಂತಹ ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ ಅದರಲ್ಲಿ ಮಚ್ಚೆಗಳಿಗೂ ಕೂಡ ವಿಶೇಷ ಸ್ಥಾನ ಇದೆ. ಹುಟ್ಟಿದಾಗಿನಿಂದಲೂ ಕೂಡ ಇರುವ ಕೆಲವು ಮಚ್ಚೆಗಳು ಅವರ ಭವಿಷ್ಯವನ್ನು ಮಾತ್ರವಲ್ಲದೆ ಅವರ ಅದೃಷ್ಟದ ಲೆಕ್ಕಾಚಾರಕ್ಕೂ ಕೂಡ ಯಹಿಡಿದ ಕನ್ನಡಿಯ.

ಹಾಗಾಗಿ ಯಾವ ಸ್ಥಳದಲ್ಲಿ ಯಾವ ರೀತಿಯ ಮಚ್ಚೆ ಇದ್ದರೆ ಏನು ಅದೃಷ್ಟ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ಮಗು ಹುಟ್ಟಿದಾಗ ಮೊದಲು ತಂದೆ ತಾಯಿಗಳು ಮಗು ಆರೋಗ್ಯವಾಗಿದೆಯೇ ಎಂದು ನೋಡುತ್ತಾರೆ ಹಾಗೂ ಮಗುವಿನ ಅಂಗಾಂಗಳು ಸರಿ ಇವೆಯೇ ಎಂದು ಪರೀಕ್ಷಿಸುತ್ತಾರೆ.

ಹೀಗೆ ನೋಡುವಾಗ ತಪ್ಪದೆ ಗಂಡು ಮಕ್ಕಳ ಬಲಗೈ ಬಲ ತೊಡೆ ಹಾಗೂ ಬೆನ್ನಿನ ಭಾಗವನ್ನು ನೋಡಿ ಈ ಸ್ಥಳದಲ್ಲಿ ಹುಟ್ಟಿದಾಗಲಿಂದಲೂ ಕೂಡ ಮಚ್ಚೆ ಇದ್ದರೆ ಆ ಮಕ್ಕಳು ನಿಮಗೆ ಅದೃಷ್ಟವನ್ನು ನೀಡಲು ಬರುತ್ತಿದ್ದಾರೆ ಎಂದು ಅರ್ಥ. ಈ ರೀತಿ ಮಕ್ಕಳು ಜನಿಸಿದರೆ ಅವರ ತಂದೆ ತಾಯಿಯ ಕಷ್ಟವೆಲ್ಲ ತೀರಿತು ಎನ್ನುವುದೇ ಲೆಕ್ಕ.

ಆ ಮಕ್ಕಳು ಬೆಳೆಯುತ್ತಾ ಇದ್ದಂತೆ ಮನೆ ಕೂಡ ಪರಿವರ್ತನೆ ಆಗುತ್ತದೆ, ಮಕ್ಕಳು ಕೂಡ ಎಲ್ಲರಿಂದ ಆಕರ್ಷಣೆಗೆ ಒಳಗಾಗುತ್ತಾರೆ. ಓದಿನಲ್ಲಿ ಬುದ್ಧಿವಂತರಾಗುತ್ತಾರೆ, ಮನೆಗೆ ಗುಣವಂತರಾಗುತ್ತಾರೆ, ತಂದೆ ತಾಯಿಯ ಕೀರ್ತಿಯನ್ನು ಬೆಳಗಿಸುವಂತವರಾಗಿರುತ್ತಾರೆ ಮತ್ತು ಈ ಮಕ್ಕಳ ದೆಸೆಯಿಂದ ತಂದೆ ತಾಯಿ ಆರ್ಥಿಕ ಸಂಕಷ್ಟಗಳು ಕರಗಿ ಕುಟುಂಬದಲ್ಲಿದ್ದ ಬಿಕ್ಕಟ್ಟುಗಳು ಪರಿಹಾರವಾಗಿ ಅವರಿಗೆ ಗೌರವ ಸ್ಥಾನಮಾನಗಳು ಸಿಗುತ್ತವೆ.

ಕೆಲವು ಗಂಡು ಮಕ್ಕಳು ಹುಟ್ಟುವಾಗಲೇ ತೇಜಸ್ವಿನಿಂದ ಮುಖಲಕ್ಷಣ ಹೊಂದಿರುತ್ತಾರೆ. ಆವರ ಕಣ್ಣುಗಳನ್ನು ಹೊಳೆಯುತ್ತಿರುತ್ತದೆ, ದಪ್ಪವಾದ ಹುಬ್ಬು ಗಳನ್ನು ಹೊಂದಿರುತ್ತಾರೆ. ಇಂತಹ ಮಕ್ಕಳು ಕೂಡ ಲಕ್ಷ್ಮೀ ಕಳೆ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಇಂತಹ ಮಕ್ಕಳು ಕೂಡ ಬೆಳೆಯುತ್ತಿದ್ದಂತೆ ಬಹಳ ಹೆಸರು ಮಾಡುತ್ತಾರೆ ಇವರು ಸಾಧಕರಾಗಿರುತ್ತಾರೆ.

ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವಂತೆ ಬಾಲ್ಯದಿಂದಲೂ ತಾವಂದು ಕೊಂಡಿದ್ದನ  ಸಾಧಿಸಿ ಬಹಳ ಸಂತೋಷದ ಜೀವನ ನಡೆಸುತ್ತಾರೆ. ಹುಟ್ಟಿದಾಗ ಬಡತನದಲ್ಲಿದ್ದ ಕುಟುಂಬದಲ್ಲಿ ಕೂಡ ಬೆಳೆಯುತ್ತಾ ಹೋದಂತೆ ಪರಿಸ್ಥಿತಿ ಬದಲಾಗಿ ಧನವಂತರಾಗಿ ಬದುಕುತ್ತಾರೆ, ಇಂತಹ ಮಕ್ಕಳನ್ನು ಪಡೆಯುವುದು ಆ ಕುಟುಂಬದ ಪುಣ್ಯ ಎಂದು ಹೇಳಬಹುದು.