Home Blog Page 126

ಅಡುಗೆ ಮನೆ ಟಿಪ್ಸ್.!

 

ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಯಾವುದೇ ಕೆಲಸವನ್ನು ಕೂಡ ಒಂದು ಮನಸ್ಸಿನಿಂದ ಮಾಡಲು ಸಾಧ್ಯವಾಗುತ್ತಿಲ್ಲ ಅಂದರೆ ಇತ್ತೀಚಿನ ಜೀವನ ಶೈಲಿ ಬಹಳ ಗಡಿಬಿಡಿಯಾಗಿದೆ ಎಂದೇ ಹೇಳಬಹುದು ಒಂದು ಕೆಲಸ ಮಾಡುತ್ತಿದ್ದಂತೆ ಮತ್ತೊಂದು ಕೆಲಸ ಮಾಡುತ್ತಿರುತ್ತೇವೆ ಅದರಲ್ಲೂ ಸಮಯದ ಅಭಾವ ಇರುವುದರಿಂದ ಯಾವ ಕೆಲಸವನ್ನು ನಾವು ಸರಿಯಾಗಿ ಮಾಡುತ್ತಿದ್ದೇವ ಮಾಡುತ್ತಿಲ್ಲವ ಎನ್ನುವುದರ ಗಮನವನ್ನು ಸಹ ಕೊಡುವುದಿಲ್ಲ.

ಬದಲಿಗೆ ಆ ಕೆಲಸ ಮುಗಿದರೆ ಸಾಕು ಎನ್ನುವ ಹಾಗೆ ನಾವು ಪ್ರತಿ ಕೆಲಸವನ್ನು ಮಾಡುತ್ತಿರುತ್ತೇವೆ. ಆದರೆ ಆ ರೀತಿ ಮಾಡುವುದರಿಂದ ಕೆಲವೊಂದಷ್ಟು ಸಮಸ್ಯೆಗಳು ಉಂಟಾಗುತ್ತದೆ ಅದರಲ್ಲೂ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಅಡುಗೆ ಮನೆಯ ವಿಚಾರವಾಗಿ ಕೆಲವೊಂದಷ್ಟು ಟಿಪ್ಸ್ ಗಳನ್ನು ತಿಳಿದುಕೊಂಡಿರುವುದು ತುಂಬಾ ಮುಖ್ಯವಾಗಿರುತ್ತದೆ.

ಇಂದಿನ ಅವಸರದ ಜೀವನದಲ್ಲಿ ಎಲ್ಲವೂ ಗಡಿಬಿಡಿಯೇ. ಅದರಲ್ಲೂ ಕೆಲಸಕ್ಕೆ ತೆರಳುವ ಹೆಣ್ಣುಮಕ್ಕಳ ಅಡುಗೆ ಮನೆಯ ಗಡಿಬಿಡಿ, ಗಜಿಬಿಜಿಗೆ ಕೊನೆಯಿಲ್ಲ. ಆದರೆ ಅಡುಗೆಮನೆಯಲ್ಲಿ ಗಡಿಬಿಡಿ ತಪ್ಪಿಸಿ ಸಸೂತ್ರ ಅಡುಗೆ ಹಾಗೂ ಸಮಯ ನಿರ್ವಹಣೆ ನಿಮ್ಮದಾಗಬೇಕು ಎಂದರೆ ಈ ಟಿಪ್ಸ್ ಪಾಲಿಸಿ, ಖಂಡಿತ ಇದು ನಿಮಗೆ ಸಹಾಯ ಆಗುವುದರಲ್ಲಿ ಎರಡು ಮಾತಿಲ್ಲ.

ಇಂದು ಹೆಚ್ಚಿನ ಮಹಿಳೆಯರು ಉದ್ಯೋಗದಲ್ಲಿರುವವರೇ. ನಿತ್ಯ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅಡುಗೆ ಮನೆ ಕೆಲಸ ನಿಭಾಯಿಸುವ ಕೆಲವೊಂದು ಸರಳ ಟಿಪ್ಸ್ ಗಳು ಇಲ್ಲಿವೆ. ಇದರಿಂದ ನಿಮ್ಮ ಸಮಯ ಹಾಗೂ ಶಕ್ತಿ ಎರಡೂ ಉಳಿಯಲಿದೆ.
* ಆಲೂಗಡೆ ಸಿಪ್ಪೆಯನ್ನು ಬೇಗ ತೆಗೆಯಲು ಕುದಿಸುವಾಗ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿದರೆ ಆಲೂಗಡ್ಡೆಯ ಸಿಪ್ಪೆಯನ್ನು ಬಹಳ ಸುಲಭವಾಗಿ ತೆಗೆಯಬಹುದು.

* ಕಾಳುಗಳು ಮತ್ತು ಬೇಳೆಗಳು ಬೇಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಬಳಸುವ ಮುನ್ನ ಬೇಳೆ ಅಥವಾ ಕಾಳುಗಳನ್ನು ನೆನೆಸಿ, ನಂತರ ಬೇಯಿಸಿದರೆ ಬೇಗ ಬೇಯುತ್ತದೆ.
* ಅಕ್ಕಿಯನ್ನು ಮೃದುವಾಗಿಸಲು ಅಡುಗೆ ಮಾಡುವಾಗ ಎಣ್ಣೆ ಅಥವಾ ತುಪ್ಪವನ್ನು ಸೇರಿಸಬೇಕು. ಇದರಿಂದ ಅಕ್ಕಿ ಬೇಗನೆ ಬೇಯುವ ಜತೆಗೆ ಉತ್ತಮ ರುಚಿಯನ್ನೂ ನೀಡುತ್ತದೆ.
* ತೆಂಗಿನಕಾಯಿಯನ್ನು ಯಾವುದೇ ಗ್ರೇವಿಯನ್ನು ದಪ್ಪವಾಗಿಸಲು ಬಳಸಲಾಗುತ್ತದೆ. ಇದನ್ನು ಯಾವುದೇ ತರಕಾರಿಗಳೊಂದಿಗೆ ಸಹ ಹಾಕಿ ಅಡುಗೆ ಮಾಡಬಹುದು.

* ಪದೇ ಪದೇ ತುರಿಯುವುದು ಕಷ್ಟದ ಕೆಲಸ. ಹಾಗಾಗಿ ಕಾಯಿತುರಿಯನ್ನು ದೀರ್ಘ ಕಾಲದವರೆಗೆ ತಾಜಾವಾಗಿಡಲು ನೀವು ಅದರಲ್ಲಿ ಕರಿಬೇವನ್ನು ಹಾಕಿಡಬಹುದು.
* ಬಿಡುವಿದ್ದಾಗ ಎರಡು ತೆಂಗಿನಕಾಯಿಯನ್ನು ತುರಿದು ಒಂದು ಡಬ್ಬದಲ್ಲಿ ಹಾಕಿಟ್ಟು ಫ್ರೀಜರ್‌ನಲ್ಲಿಟ್ಟರೆ ಪ್ರತಿ ಸಲ ಕಾಯಿ ತುರಿಯುವ ಹೊರೆಯನ್ನು ಸ್ಪಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.
* ಪಾಯಸ ಮಾಡುವಾಗ ಹಾಲು ದಪ್ಪವಾಗಲು ಸಹ ಬಹಳ ಸಮಯವನ್ನು ತೆಗೆದು ಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಹಾಲಿನ ಪುಡಿಯನ್ನು ಬಳಸಬಹುದು.

* ಜೇನುತುಪ್ಪವನ್ನು ಫ್ರಿಡ್ಜ್‌ನಲ್ಲಿಟ್ಟರೆ ಗಟ್ಟಿಯಾಗುತ್ತದೆ. ಬದಲಾಗಿ ತಂಪಾದ, ಶುಷ್ಕ ಸ್ಥಳದಲ್ಲಿ ಇಟ್ಟರೆ ಗಟ್ಟಿಯಾಗುವುದಿಲ್ಲ.
* ಹಾಟ್ ಬಾಕ್ಸ್ ಗಳಲ್ಲಿ ತಿಂಡಿ ಇಟ್ಟ ಬಳಿಕ ಅದನ್ನು ಬಟ್ಟೆಯಿಂದ ಮುಚ್ಚಿದರೆ ತೇವಾಂಶ ಉಂಟಾಗುವುದಿಲ್ಲ.
* ಟೊಮೊಟೊ ಬಹಳ ದಿನಗಳವರೆಗೆ ಕೆಡದಂತೆ ಇಡಬೇಕಾದರೆ ಟೊಮೆಟೊ ಹಣ್ಣಿನ ಮೇಲ್ಬಾಗಕ್ಕೆ ಪ್ಲಾಸ್ಟರ್ ಹಾಕಿ ಇಡಬೇಕು.
* ಉಪ್ಪಿನ ಡಬ್ಬದಲ್ಲಿ ಎರಡು ಒಣಮೆಣಸಿನ ಕಾಯಿಯನ್ನು ಹಾಕಿಟ್ಟರೆ ಉಪ್ಪು ನೀರು ಬಿಟ್ಟು ಕೊಳ್ಳುವುದಿಲ್ಲ.

* ಬೆಳ್ಳುಳ್ಳಿಯನ್ನು ಹೆಚ್ಚಿದ ನಂತರ ಕೈ ಅದೇ ವಾಸನೆ ಬರುತ್ತಿದ್ದರೆ ಒಂದು ಪ್ಲೇಟ್‌ಗೆ ಕೈಯನ್ನು ರಬ್ ಮಾಡಿದರೆ ಬೆಳ್ಳುಳ್ಳಿಯ ಹಸಿ ವಾಸನೆ ಹೋಗುತ್ತದೆ.
* ತೆಂಗಿನಕಾಯಿ ಒಡೆದ ಬಳಿಕ ಅದಕ್ಕೆ ಸ್ಪಲ್ಪ ಉಪ್ಪು ಸವರಿ ಇಟ್ಟರೆ ಕೆಲ ದಿನಗಳವರೆಗೆ ಕೆಡುವುದಿಲ್ಲ.
* ನೀರನ್ನು ಕುದಿಸುವಾಗ ಪಾತ್ರೆಯನ್ನು ಮುಚ್ಚಿರಿ. ಇದರಿಂದ ನೀರು ಬೇಗನೆ ಬಿಸಿಯಾಗುತ್ತದೆ.

* ಆಹಾರ ಅಂಟಿಕೊಳ್ಳದಂತೆ ಸ್ಟೇನ್‌ಲೆಸ್ ಸ್ಟೀಲ್ ಕುಕ್‌ವೇರ್ ಅನ್ನು ಸರಿಯಾಗಿ ಬಳಸಿ.
* ಹಸಿಮೆಣಸಿನ ಕಾಯಿಯನ್ನು ಕತ್ತರಿಸಲು ಕತ್ತರಿಯನ್ನು ಬಳಸಿ. ಇದ ರಿಂದ ಕೈ ಉರಿಯುವುದನ್ನು ತಪ್ಪಿಸಬಹುದು.
* ಚಮಚ ಬಳಸಿ ಶುಂಠಿಯ ಸಿಪ್ಪೆಯನ್ನು ತೆಗೆದರೆ ಆ ಕೆಲಸ ಸುಲಭ ವಾಗಿ ಬೇಗ ಆಗುತ್ತದೆ.
* ಸಕ್ಕರೆ ಡಬ್ಬಿಯಲ್ಲಿ ಮೂರರಿಂದ ನಾಲ್ಕು ಲವಂಗ ಕಾಳುಗಳನ್ನು ಹಾಕಿಟ್ಟರೆ ಡಬ್ಬಕ್ಕೆ ಇರುವೆ ಬರುವುದನ್ನು ತಡೆಯಬಹುದು.

ಜೀವನದಲ್ಲಿ ಸದಾ ಖುಷಿಯಿಂದ ಇರಲು ಇಲ್ಲಿವೆ ಮೂರು ನಿಯಮಗಳು.!

 

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಸದಾ ಖುಷಿಯಾಗಿರ ಬೇಕು ಎಂದೇ ಬಯಸುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಖುಷಿಯಾಗಿ ಇರಲು ಸಾಧ್ಯವಾಗುವುದಿಲ್ಲ. ಹೌದು ಒಂದಲ್ಲ ಒಂದು ವಿಚಾರವಾಗಿ ಅವರು ತಮ್ಮ ಜೀವನದಲ್ಲಿ ಕೆಲವೊಂದಷ್ಟು ಸಮಸ್ಯೆಗಳನ್ನು ಅಂದರೆ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ.

ಹಾಗೆಂದ ಮಾತ್ರಕ್ಕೆ ಅವರು ಜೀವನದುದ್ದಕ್ಕೂ ಸಮಸ್ಯೆಗಳನ್ನು ಅನು ಭವಿಸುತ್ತಾರೆ ಅನುಭವಿಸಬೇಕು ಎಂಬ ಅರ್ಥ ಅಲ್ಲ. ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ಮಾಹಿತಿ ಏನು ಎಂದರೆ ಪ್ರತಿಯೊಬ್ಬರ ಖುಷಿ ದುಃಖ ಎಲ್ಲವೂ ಕೂಡ ಅವರಲ್ಲಿಯೇ ಅಡಕವಾಗಿರುತ್ತದೆ ಎಂದೇ ಹೇಳುತ್ತದೆ. ಹೌದು ಪ್ರತಿಯೊಬ್ಬರೂ ಕೂಡ ಸಂತೋಷವಾಗಿರಬೇಕು ಎಂದರೆ ಅವರ ಮನಸ್ಥಿತಿ ಅದರ ಮೇಲೆ ನಿಂತಿರುತ್ತದೆ.

ಹೌದು ನಾವು ನಮ್ಮ ಜೀವನದಲ್ಲಿ ಯಾವ ಕೆಲವು ಸಂದರ್ಭದಲ್ಲಿ ಯಾವ ರೀತಿಯಾದಂತಹ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ ಹಾಗೂ ಯಾವ ರೀತಿಯ ಮನಸ್ಥಿತಿಯಲ್ಲಿ ನಾವು ಇರುತ್ತೇವೆ ಹಾಗೂ ನಾವು ಯಾವ ಒಂದು ವಾತಾವರಣದಲ್ಲಿ ಇರುತ್ತೇವೆ ನಮ್ಮ ಸುತ್ತಮುತ್ತ ಲಿನ ವಾತಾವರಣ ಒಳ್ಳೆಯ ರೀತಿಯಾಗಿ ಇರುತ್ತದೆ.

ಹೀಗೆ ಪ್ರತಿಯೊಂದರ ಆಧಾರದ ಮೇಲೆಯೂ ನಮ್ಮ ಮನಸ್ಥಿತಿ ನಿಂತಿರುತ್ತದೆ. ಹೌದು ಉದಾಹರಣೆಗೆ ಯಾವುದೋ ಒಂದು ದೇವಸ್ಥಾನದ ಮುಂದೆ ಕುಳಿತರೆ ಅಲ್ಲಿ ಒಂದು ರೀತಿಯ ಪಾಸಿಟಿವಿಟಿ ಎನ್ನುವುದು ಹೆಚ್ಚಾಗಿರುತ್ತದೆ. ಹೌದು ಪ್ರತಿಯೊಬ್ಬರೂ ಕೂಡ ಮನಸ್ಸಿಗೆ ನೆಮ್ಮದಿ ಶಾಂತಿ ಬೇಕು ನಮ್ಮ ಮನಸ್ಸು ಎಲ್ಲಾ ರೀತಿಯ ಕಷ್ಟ ನೋವುಗಳನ್ನು ಸಹಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಪ್ರತಿಯೊಬ್ಬರೂ ಕೂಡ ದೇವಸ್ಥಾನಗಳಿಗೆ ಬಂದು ಅಲ್ಲಿ ದೇವರ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡು ತಮ್ಮ ಮನಸ್ಸನ್ನು ಸಮಾಧಾನಪಡಿಸಿಕೊಳ್ಳುತ್ತಿರುತ್ತಾರೆ.

ಇದರ ಅರ್ಥ ಆ ಒಂದು ಸ್ಥಳದಲ್ಲಿ ದೇವರ ಒಂದು ಶಕ್ತಿ ಇದೆ ಎಂದು ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಸದಾಕಾಲ ಖುಷಿಯಾಗಿ ಸಂತೋಷವಾಗಿ ಇರಬೇಕು ಎಂದರೆ ಮೊದಲು ಅವರ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಹೌದು ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಖುಷಿಯಾಗಿರಬೇಕು ಎಂದರೆ ಯಾವುದೇ ರೀತಿಯ ಆಲೋಚನೆಯನ್ನು ಮಾಡಬಾರದು.

ಆಗ ಮಾತ್ರ ಅವನು ಯಾವುದೇ ರೀತಿಯ ತೊಂದರೆ ಇಲ್ಲದೆ ಖುಷಿಯಾಗಿ ಸಂತೋಷವಾಗಿ ಇರುತ್ತಾನೆ. ಬದಲಿಗೆ ಎಲ್ಲವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅದರ ಬಗ್ಗೆ ಆಲೋಚನೆಯನ್ನು ಮಾಡುತ್ತಾ ಇದ್ದರೆ ಅವನು ಜೀವನದಲ್ಲಿ ಖುಷಿಯಾಗಿ ಇರಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರಿಗೂ ಕೂಡ ಕಷ್ಟ ಎನ್ನುವುದು ಇದ್ದೇ ಇರುತ್ತದೆ ಆದರೆ ಆ ಕಷ್ಟ ಸದಾ ಕಾಲ ಇರುತ್ತದೆ ಎಂದರ್ಥ ಅಲ್ಲ ಬದಲಿಗೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವ ಆಲೋಚನೆಯನ್ನು ಸಹ ನಾವೇ ಮಾಡಬೇಕಾಗುತ್ತದೆ.

ಪ್ರತಿಯೊಂದು ಕಷ್ಟಕ್ಕೂ ಕೂಡ ಕೊನೆ ಎನ್ನುವುದು ಇರುತ್ತದೆ. ಆದ್ದರಿಂದ ಯಾವ ಸಂದರ್ಭದಲ್ಲಿ ಯಾವ ಪರಿಸ್ಥಿತಿ ಇರುತ್ತದೆಯೋ ಅದಕ್ಕೆ ಹೊಂದಿಕೊಂಡು ಜೀವನ ಸಾಗಿಸಿದರೆ ಅವರು ಜೀವನದುದ್ದಕ್ಕೂ ಸಂತೋಷವಾಗಿ ಖುಷಿಯ ಜೀವನವನ್ನು ನಡೆಸುತ್ತಾರೆ ಎಂದೇ ಹೇಳಬಹುದು.

ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವ ಕೆಲವು ಸಂದರ್ಭದಲ್ಲಿ ಯಾವ ರೀತಿಯಾದಂತಹ ಮನಸ್ಥಿತಿ ಇಟ್ಟುಕೊಳ್ಳುತ್ತಾರೆ ಹಾಗೂ ತಮ್ಮ ಸುತ್ತಮುತ್ತಲಿನ ವಾತಾವರಣ ಹಾಗೂ ಮನೆಯ ವಾತಾವರಣ ಯಾವ ರೀತಿಯಾಗಿ ಚೆನ್ನಾಗಿ ಇಟ್ಟುಕೊಂಡಿರು ತ್ತಾರೋ ಅದರ ಮೇಲೆ ಅವರ ಮನಸ್ಸಿನ ಸಂತೋಷ ನೆಮ್ಮದಿ ಅಡಗಿರುತ್ತದೆ ಎಂದೇ ಹೇಳಬಹುದು.

ನೀವು ಉತ್ತಮವಾದಂತಹ ಸಂಗೀತದ ನಾದವನ್ನು ಕೇಳಿದರೆ ಮನಸ್ಸಿಗೆ ಏನೋ ಒಂದು ರೀತಿಯ ಆನಂದ ಉಂಟಾಗುತ್ತದೆ. ಅದೇ ರೀತಿಯಾಗಿ ಒಂದು ಕರ್ಕಶ ಶಬ್ದ ನಿಮ್ಮ ಕಿವಿಗೆ ಬಿದ್ದರೆ ಅದು ನಿಮ್ಮ ಮನಸ್ಸನ್ನು ಹಾಳುಮಾಡುತ್ತದೆ. ಇದೆ ಅದಕ್ಕೆ ಒಂದು ಉತ್ತಮವಾದ ಉದಾಹರಣೆಯಾಗಿದೆ.

ಸ್ನಾನ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.!

 

ಸಾಮಾನ್ಯವಾಗಿ ನಾವೆಲ್ಲರೂ ಕೂಡ ಸ್ನಾನ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತೇವೆ. ಆದರೆ ಆ ತಪ್ಪುಗಳು ಯಾವುದು ಎಂದು ಸಹ ನಮಗೆ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ನಾವು ಆ ತಪ್ಪನ್ನು ಸರಿ ಎನ್ನುವ ಹಾಗೆ ಮಾಡುತ್ತಿರುತ್ತೇವೆ ಆದರೆ ಆ ರೀತಿ ಅನುಸರಿಸುವುದರಿಂದ ಯಾವ ಕೆಲವು ಸಮಸ್ಯೆಗಳು ಉಂಟಾ ಗುತ್ತದೆ ಎನ್ನುವ ಆಲೋಚನೆಯನ್ನು ಸಹ ನಾವು ಮಾಡುವುದಿಲ್ಲ.

ಆದ್ದರಿಂದ ಸ್ನಾನ ಮಾಡುವಂತಹ ಸಮಯದಲ್ಲಿ ಕೆಲವೊಂದಷ್ಟು ಉತ್ತಮವಾದ ವಿಧಾನಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು ಹಾಗೇನಾದರೂ ನಾವು ಅದನ್ನು ಅನುಸರಿಸದೇ ಇದ್ದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಅಂದರೆ ತೊಂದರೆಗ ಳನ್ನು ಅನುಭವಿಸಬೇಕಾಗುತ್ತದೆ.

ಹಾಗಾದರೆ ಈ ದಿನ ಸ್ನಾನ ಮಾಡುವ ಸಮಯದಲ್ಲಿ ನಾವು ಯಾವ ರೀತಿಯ ತಪ್ಪುಗಳನ್ನು ಮಾಡುತಿದ್ದೇವೆ ಹಾಗೂ ಅದನ್ನು ಯಾವ ವಿಧಾನದಲ್ಲಿ ಸರಿಪಡಿಸಿಕೊಳ್ಳಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ತಲೆ ಸ್ನಾನ ಮಾಡುವಂತಹ ಸಮಯದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಶಾಂಪೂವನ್ನು ನೇರವಾಗಿ ನಮ್ಮ ತಲೆ ಕೂದಲಿಗೆ ಹಚ್ಚುತ್ತೇವೆ. ಆದರೆ ಆ ರೀತಿ ಹಚ್ಚುವುದರಿಂದ ಶಾಂಪೂವಿನಲ್ಲಿ ಇರುವ ಕೆಮಿಕಲ್ ಗಳು ನಮ್ಮ ತಲೆಕೂದಲಿನ ಬುಡಕ್ಕೆ ಹೋಗಿ ಸೇರುತ್ತದೆ.

ಇದರಿಂದ ತಲೆ ಕೂದಲು ಬೇಗ ಕೆಂಚಾಗುತ್ತದೆ ಹಾಗೂ ತಲೆಕೂದಲು ಕೂಡ ಉದುರುವುದಕ್ಕೆ ಪ್ರಾರಂಭವಾಗುತ್ತದೆ. ಆದ್ದರಿಂದ ಶಾಂಪೂ ಬಳಸುವ ಮೊದಲು ಅದನ್ನು ಒಂದು ಚಿಕ್ಕ ಬೌಲಿಗೆ ಹಾಕಿ ಸ್ವಲ್ಪ ನೀರನ್ನು ಹಾಕಿ ಆನಂತರ ಅದನ್ನು ಹಚ್ಚಿ ತಲೆ ಸ್ನಾನ ಮಾಡುವುದರಿಂದ ತಲೆ ಕೂದಲಿಗೆ ಯಾವುದೇ ರೀತಿಯಾದ ತೊಂದರೆ ಉಂಟಾಗುವುದಿಲ್ಲ.

* ಪದೇ ಪದೇ ನಾವು ಸ್ನಾನ ಮಾಡುವಂತಹ ಸಮಯದಲ್ಲಿ ಅತಿ ಹೆಚ್ಚು ಸಾಬೂನನ್ನು ಬಳಸುವುದರಿಂದ ನಮ್ಮ ಚರ್ಮದಲ್ಲಿ ಇರುವಂತಹ ಎಣ್ಣೆಯ ಅಂಶ ನಾಶವಾಗುತ್ತದೆ. ಇದರಿಂದ ನಮ್ಮ ಚರ್ಮ ಒಣಗಿದಂತೆ ಕಾಣುತ್ತದೆ. ಆದ್ದರಿಂದ ನಿಯಮಿತವಾಗಿ ಸಾಬೂನನ್ನು ಬಳಸುವುದು ಒಳ್ಳೆಯದು. ಅದರ ಬದಲು ಕಡಲೆ ಹಿಟ್ಟು ಅಕ್ಕಿ ಹಿಟ್ಟಿನಿಂದ ಸ್ನಾನ ಮಾಡುವುದು ಉತ್ತಮ ಹಾಗೂ ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.

* ಸಾಮಾನ್ಯವಾಗಿ ಕೆಲವೊಂದಷ್ಟು ಜನ ಸ್ನಾನಕ್ಕೆ ಹೋದರೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಹೆಚ್ಚು ಸಮಯ ತೆಗೆದು ಕೊಂಡು ಸ್ನಾನ ಮಾಡಬಾರದು ಈ ರೀತಿ ಮಾಡುವುದರಿಂದ ನಮ್ಮ ಚರ್ಮದಲ್ಲಿ ರುವಂತಹ ಮಾಯಿಶ್ಚರೈಸರ್ ನಾಶವಾಗುತ್ತದೆ ಹಾಗಾಗಿ ಸ್ನಾನಕ್ಕೆ 10 ನಿಮಿಷಕ್ಕಿಂತ ಹೆಚ್ಚು ಸಮಯ ಮಾಡಬೇಡಿ.

* ತುಂಬಾ ಬಿಸಿ ಇರುವಂತಹ ನೀರಿನಿಂದ ಸ್ನಾನ ಮಾಡಬೇಡಿ ಇದರಿಂದ ನಿಮ್ಮ ತ್ವಚೆ ಮತ್ತು ಕೂದಲು ಹಾಳಾಗುತ್ತದೆ. ಹಾಗೂ ಇದರಿಂದ ಕೂದಲಿಗೆ ಹಾನಿ ಉಂಟಾಗಿ ಕೂದಲು ಉದುರುವುದು ಕೂಡ ಪ್ರಾರಂಭವಾ ಗುತ್ತದೆ.
* ತಲೆ ಕೂದಲನ್ನು ಚೆನ್ನಾಗಿ ತೊಳೆಯಬೇಕು ಹಾಗೇನಾದರೂ ನೀವು ತೊಳೆಯದಿದ್ದರೆ ತಲೆಯಲ್ಲಿ ಹೊಟ್ಟು ಹೆಚ್ಚಾಗಿ ಬೇಗ ಬಿಳಿ ಕೂದಲು ಬರುವುದಕ್ಕೆ ಪ್ರಾರಂಭವಾಗುತ್ತದೆ.

* ಊಟ ಮಾಡಿದ ತಕ್ಷಣ ಸ್ನಾನ ಮಾಡಬೇಡಿ ಇದರಿಂದ ದೇಹದ ರಕ್ತ ಪರಿಚಲನೆ ಸರಾಗವಾಗಿ ಆಗುವುದಿಲ್ಲ.
* ವಾರದಲ್ಲಿ ಎರಡಕ್ಕಿಂತ ಹೆಚ್ಚು ಸಲ ತಲೆ ಸ್ನಾನ ಮಾಡಬೇಡಿ ಇದರಿಂದ ತಲೆ ಕೂದಲಿಗೆ ಹಾನಿ ಉಂಟಾಗುತ್ತದೆ.
* ಸ್ನಾನ ಮಾಡುವಾಗ ಮೈ ಕೈಯನ್ನು ಜೋರಾಗಿ ಉಜ್ಜಿ ತಿಕ್ಕಿ ಸ್ನಾನ ಮಾಡಬಾರದು ಈ ರೀತಿ ಮಾಡುವುದರಿಂದ ನಮ್ಮ ಚರ್ಮದಲ್ಲಿರು ವಂತಹ ಒಳ್ಳೆಯ ಸತ್ವಗಳು ನಾಶವಾಗುತ್ತದೆ. ಆದ್ದರಿಂದ ಮೃದುವಾಗಿರು ವಂತಹ ವಸ್ತುವಿನಿಂದ ಮೈ ಉಜ್ಜಿ ಸ್ನಾನ ಮಾಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಒಣ ಕೆಮ್ಮು ಸಮಸ್ಯೆ ಇದ್ದವರು ಈ ಮನೆ ಮದ್ದು ಬಳಸಿ ಸಾಕು.!

 

ಕೆಮ್ಮು ಕಫ ಎನ್ನುವಂತಹ ಸಮಸ್ಯೆ ಪ್ರತಿಯೊಬ್ಬರಲ್ಲಿಯೂ ಕೂಡ ಕಾಣಿಸಿಕೊಳ್ಳುವಂತಹ ಸಮಸ್ಯೆಯಾಗಿದ್ದು ಇದನ್ನು ದೂರ ಮಾಡಿಕೊಳ್ಳು ವುದಕ್ಕೆ ಹೆಚ್ಚಿನ ಜನ ಹಲವಾರು ರೀತಿಯ ಕೆಮ್ಮಿನ ಸಿರಪ್ ಗಳನ್ನು ಕುಡಿ ಯುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಜನ ಕೆಲವೊಂದು ಮನೆ ಮದ್ದುಗಳನ್ನು ಮಾಡಿ ಉಪಯೋಗಿಸಿ ಸೇವನೆ ಮಾಡುತ್ತಾರೆ.

ಹಾಗೆಂದ ಮಾತ್ರಕ್ಕೆ ಎಷ್ಟೇ ಕೆಮ್ಮು ಬಂದರು ಕೆಲವೊಂದಷ್ಟು ಕಷಾಯಗಳನ್ನು ಮಾಡಿ ಸೇವನೆ ಮಾಡಿದರೆ ಆ ಕೆಮ್ಮು ಗುಣವಾಗುವುದಿಲ್ಲ ಬದಲಿಗೆ ಮತ್ತಷ್ಟು ಸಮಸ್ಯೆಗಳು ಉಂಟಾಗುತ್ತದೆ ಎಂದೇ ಹೇಳಬಹುದು. ಹೌದು ನಮ್ಮ ಆರೋಗ್ಯದ ವಿಚಾರವಾಗಿ ನಮ್ಮ ಆರೋಗ್ಯವನ್ನು ಸರಿಪಡಿಸಿ ಕೊಳ್ಳಬೇಕು ಎಂದರೆ ಕೆಲವೊಂದಷ್ಟು ಆಯುರ್ವೇದದ ವಿಧಾನಗಳನ್ನು ಅಂದರೆ ಔಷಧಿಗಳನ್ನು ಮಾಡಿ ಸೇವನೆ ಮಾಡುವುದನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ನಾವು ಯಾವುದೇ ಸಮಸ್ಯೆ ಬಂದರೆ ಅದನ್ನು ಹೇಗೆ ದೂರ ಮಾಡಿಕೊಳ್ಳಬಹುದು. ಹಾಗೂ ಅದನ್ನು ಹೇಗೆ ಬಾರದಂತೆ ನೋಡಿ ಕೊಳ್ಳುವುದು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ಹಾಗಾದರೆ ಈ ದಿನ ಕೆಮ್ಮಿನ ಸಮಸ್ಯೆ ಬಂದರೆ ಯಾವ ಮನೆಮದ್ದನ್ನು ಮಾಡಿ ಸೇವನೆ ಮಾಡುವುದರಿಂದ ಅದನ್ನು ದೂರ ಮಾಡಿಕೊಳ್ಳ ಬಹುದು ಎನ್ನುವ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ನಾವೆಲ್ಲರೂ ತಿಳಿದುಕೊಂಡಿರುವುದು ಕೆಮ್ಮು ಒಂದೇ ಒಂದು ಕಾರಣಕ್ಕಾಗಿ ಬರುತ್ತದೆ ಅದು ಶೀತ ನೆಗಡಿಗೆ ಆಗಿರಬಹುದು. ಅಥವಾ ಯಾವುದಾದರೂ ಆಹಾರ ಪದಾರ್ಥದ ವ್ಯತ್ಯಾಸದಿಂದ ತಂಪಾಗಿ ನಮಗೆ ಕೆಮ್ಮು ಬರಬಹುದು ಎಂದು ಎಲ್ಲರಿಗೂ ತಿಳಿದಿರು ವಂತಹ ಮಾಹಿತಿ. ಆದರೆ ಅದು ತಪ್ಪು. ಕೆಮ್ಮಿನಲ್ಲಿ ಎರಡು ವಿಧ ಇದೆ ಅದು ಯಾವುದೆಂದರೆ.
• ಶುಷ್ಕ ಖಾಸ
• ಆರ್ದ್ರ ಖಾಸ
ಸಂಸ್ಕೃತದಲ್ಲಿ ಕೆಮ್ಮಿಗೆ ಖಾಸ ಎಂದು ಕರೆಯುತ್ತಾರೆ.

* ಶುಷ್ಕ ಖಾಸ ಎಂದರೆ ಒಣ ಕೆಮ್ಮು. ಅಂದರೆ ಯಾವುದೇ ರೀತಿಯ ಗಾಳಿ ಸೋಕಿದರು ಪದೇ ಪದೇ ಗಂಟಲಿನಲ್ಲಿ ಒಣಗಿರುವoತಹ ಅನುಭವ ಉಂಟಾಗಿ ಒಣಕೆಮ್ಮು ಉಂಟಾಗುತ್ತದೆ ಯಾವುದೇ ರೀತಿಯ ಕಫ ಬರುವುದಿಲ್ಲ ಇದನ್ನು ಶುಷ್ಕ ಖಾಸ ಎಂದು ಕರೆಯುತ್ತೇವೆ. ಹಾಗಾದರೆ ಇಂತಹ ಸಮಯದಲ್ಲಿ ಯಾವ ಒಂದು ಮನೆ ಮದ್ದನ್ನು ಮಾಡಿ ಸೇವನೆ ಮಾಡಬೇಕು ಹಾಗೂ ಅದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.

* ಕಲ್ಲು ಸಕ್ಕರೆ
* ಏಲಕ್ಕಿ
* ಚಕ್ಕೆ
ಇಷ್ಟನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣನೆ ಪುಡಿ ಮಾಡಿ ಕೊಳ್ಳಬೇಕು. ಇದನ್ನು ತುಳಸಿ ರಸದ ಜೊತೆ ಮಿಶ್ರಣ ಮಾಡಿ ದಿನಕ್ಕೆ ಐದು ಬಾರಿಯಂತೆ 2ML ನಷ್ಟು ತೆಗೆದುಕೊಳ್ಳಬೇಕು. ಈ ರೀತಿ ತೆಗೆದುಕೊಳ್ಳುತ್ತಾ ಬರುವುದರಿಂದ ಮೂರು ದಿನದಲ್ಲಿಯೇ ಶುಷ್ಕ ಖಾಸ ಅಂದರೆ ಒಣ ಕೆಮ್ಮು ಸಂಪೂರ್ಣವಾಗಿ ಶಮನವಾಗುತ್ತದೆ.

ಹೀಗೆ ಮೇಲೆ ಹೇಳಿದ ವಿಧಾನವನ್ನು ಅನುಸರಿಸುವುದರ ಮೂಲಕ ನೀವು ಈ ಕೆಮ್ಮನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ಇದು ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿಯೇ ಸಿಗುವಂತಹ ಪದಾರ್ಥ ಗಳಾಗಿದ್ದು ಯಾವುದೇ ಅಂಗಡಿಯಿಂದ ಕೊಂಡು ತಂದು ಅದನ್ನು ಉಪಯೋಗಿಸುವಂತಹ ಅವಶ್ಯಕತೆ ಬರುವುದಿಲ್ಲ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ತಕ್ಷಣವೇ ಈ ಒಂದು ಮನೆಮದ್ದನ್ನು ಮಾಡಿ ಸೇವನೆ ಮಾಡುವುದರ ಮೂಲಕ ನಿಮ್ಮ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ಅದೇ ರೀತಿಯಾಗಿ ಇದನ್ನು ಮಾಡಿ ಸೇವನೆ ಮಾಡುವುದರಿಂದ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ ಬದಲಿಗೆ ನಮ್ಮ ಮನೆಯಲ್ಲಿಯೇ ಇರುವಂತಹ ಪದಾರ್ಥಗಳನ್ನು ಉಪಯೋಗಿಸಿ ನೈಸರ್ಗಿಕವಾಗಿ ಮಾಡಿ ಸೇವನೆ ಮಾಡುವುದರಿಂದ ಯಾವುದೇ ಅಪಾಯ ಇರುವುದಿಲ್ಲ.

ಮಹಿಳೆಯರೇ ಎಚ್ಚರ.!

 

ಮನೆಯಲ್ಲಿರುವಂತಹ ಮಹಿಳೆಯರು ಕೆಲವೊಂದು ವಿಚಾರವಾಗಿ ಕೆಲವೊಂದಷ್ಟು ವಿಷಯದ ಬಗ್ಗೆ ಹೆಚ್ಚು ಗಮನವನ್ನು ವಹಿಸುವುದು ಉತ್ತಮ ಆಗೇನಾದರೂ ಕೆಲವೊಂದು ವಿಚಾರದಲ್ಲಿ ನೀವು ಯಾವುದೇ ನಿರ್ಧಾರವನ್ನು ಯಾವುದೇ ವಿಷಯವನ್ನು ಗಮನಿಸದೇ ಇದ್ದರೆ ಅದರಿಂದ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಹಾಗಾದರೆ ಈ ದಿನ ಮಹಿಳೆಯರು ಯಾವ ಕೆಲವು ವಿಚಾರವಾಗಿ ಯಾವ ಕೆಲವು ವಿಷಯಗಳನ್ನು ಹೇಗೆ ತಿಳಿದುಕೊಂಡಿರಬೇಕು ಹಾಗೂ ಯಾವ ಸಮಯದಲ್ಲಿ ಯಾವುದೆಲ್ಲ ವಿಷಯದ ಬಗ್ಗೆ ಆಲೋಚನೆಯನ್ನು ಮಾಡಬೇಕು ಹೀಗೆ ಈ ಎಲ್ಲ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಮನೆಯಲ್ಲಿರುವಂತಹ ಹೆಣ್ಣು ಕೇವಲ ಅವಳ ಕೆಲಸದಲ್ಲಿ ಗಮನವನ್ನು ವಹಿಸುವುದಷ್ಟೇ ಅಲ್ಲದೆ ಮನೆಯಲ್ಲಿರುವಂತಹ ಪ್ರತಿಯೊಂದು ವಿಚಾರದ ಬಗ್ಗೆಯೂ ಕೂಡ ಆಲೋಚನೆಯನ್ನು ಮಾಡುವುದು ಒಳ್ಳೆಯದು.
* ಗಡಿಬಿಡಿಯಲ್ಲಿ ಬರಿ ಸ್ಟವ್ ಆಫ್ ಮಾಡಿ ನಲ್ಲಿ ಸಿಲೆಂಡರ್ ರೆಗ್ಯು ಲೇಟರ್ ಆಫ್ ಮಾಡೋದನ್ನ ಮರಿಯಲೇ ಬೇಡಿ.
* ಯಾವುದೇ ಕಾರಣಕ್ಕೂ ಬರ್ನರ್ ಸ್ಟವ್ ಬಳಸಬೇಡಿ ಇದು ಶಾಸ್ತ್ರದಲ್ಲಿ ನಿಶಿದ್ದ.

* ಗಂಡ ಮತ್ತು ಮಕ್ಕಳಿಗೆ ಯಾವುದೇ ಕಾರಣಕ್ಕೂ ಲಂಚ್ ಬ್ಲಾಕ್ ಅನ್ನು ಪ್ಲಾಸ್ಟಿಕ್ ಬಾಕ್ಸ್ ಅಲ್ಲಿ ಕಟ್ಟಬೇಡಿ ಇದರಿಂದ ಅನಾರೋಗ್ಯ ಕಟ್ಟಿಟ್ಟ ಬುತ್ತಿ.
* ಬಲಗೈ ಬೆರಳಿಗೆ ಉಗುರು ಬಣ್ಣ ಹೆಚ್ಚಲೇಬೇಡಿ ಇದು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಸಲುವಾಗಿ.
* ಕೂದಲು ಬಿಟ್ಟುಕೊಂಡು ಯಾವುದೇ ಕಾರಣಕ್ಕೂ ಅಡುಗೆ ಮಾಡಲೇ ಬೇಡಿ. ಇದರಿಂದ ಅಡುಗೆಯಲ್ಲಿ ಕೂದಲು ಸೇರುವ ಸಾಧ್ಯತೆ ಹೆಚ್ಚು ಶಾಸ್ತ್ರದ ಪ್ರಕಾರ ದಾರಿದ್ರ. ಈ ರೀತಿ ಮಾಡಿದರೆ ಮನೆಯಲ್ಲಿ ನೆಮ್ಮದಿ ನೆಲೆಸುವುದಿಲ್ಲ.

* ಅಡುಗೆ ಮನೆಯಲ್ಲಿ ಯಾವುದೇ ಔಷಧಿಗಳನ್ನು ಇಡಲೇಬೇಡಿ.
* ಅಡುಗೆ ಮನೆಗೆ ಚಪ್ಪಲಿ ಹಾಕಿಕೊಂಡು ಹೋಗಲೇಬೇಡಿ.
* ಅಡುಗೆ ಹೆಚ್ಚು ಹೆಚ್ಚು ಮಾಡಿ ತಂಗಳು ಆಹಾರ ತಿನ್ನಬೇಡಿ.
* ಅಡುಗೆ ಮನೆಯಲ್ಲಿ ದೇವರ ಫೋಟೋ ಇಡಲೇಬೇಡಿ.
* ಮೊಬೈಲ್ ಬಳಸುತ್ತಾ ಅಡುಗೆ ಮಾಡಬೇಡಿ.
* ಪ್ರತಿದಿನ 8 ಗ್ಲಾಸ್ ನೀರು ಕುಡಿಯುವುದನ್ನು ತಪ್ಪಿಸಬೇಡಿ.

* ಮನೆಯಲ್ಲಿ ಎಷ್ಟೇ ಕೆಲಸ ಇದ್ದರೂ ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವುದನ್ನು ಮರೆಯಬೇಡಿ.
* ಅತಿಯಾಗಿ ಮೇಕಪ್ ಮಾಡುವುದು ಇಲ್ಲವೇ ಏನೂ ಕೇರ್ ಮಾಡಿ ಕೊಳ್ಳದೆ ಇರುವುದು ಎರಡು ತಪ್ಪು ನ್ಯಾಚುರಲ್ ಆಗಿ ಬೇಕಾದ ಸಮಯಕ್ಕೆ ಎಲ್ಲ ವಿಧಾನ ಅನುಸರಿಸುವುದು ಮುಖ್ಯ. ಮದುವೆ ಆದ ಮೇಲೆ ಇನ್ನೇನು ಎಂದು ಅಸಡ್ಡೆ ಒಳ್ಳೆಯದಲ್ಲ.

* ಸರಿಯಾದ ಸಮಯಕ್ಕೆ ತಿಂಡಿ ಊಟ ಮಾಡುವುದು ಒಳ್ಳೆಯದು, ನೀವು ಚೆನ್ನಾಗಿದ್ದರೆ ಮಾತ್ರ ನಿಮ್ಮ ಮನೆಯಲ್ಲಿ ಅಡುಗೆ ಮತ್ತು ಬೇರೆ ಕೆಲಸಗಳು ಸರಾಗವಾಗಿ ನಡೆಯುವುದು ಅದನ್ನು ಮರೆಯಬೇಡಿ ಮನೆಯವರ ಕಾಳಜಿಯಷ್ಟೇ ಮುಖ್ಯ ನಿಮ್ಮ ಕಾಳಜಿ.
* ನಿಮಗೆ ಅಂತ ಸ್ವಲ್ಪ ಸಮಯ ಮೀಸಲಿಡಿ ಇಲ್ಲದಿದ್ದರೆ ಒಂದಲ್ಲ ಒಂದು ದಿನ ನಿಮಗಾಗಿ ನೀವು ಏನನ್ನು ಮಾಡಿಲ್ಲ ಎಂಬ ಕೊರತೆ ಕಾಡುತ್ತದೆ.

* ಅಂತಿಮವಾಗಿ ಕಟ್ಟಕಡೆಯದಾಗಿ ತಿಳಿಸುವುದೇನೆಂದರೆ. ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯವನ್ನು ಕಡೆಗಣಿಸಬೇಡಿ. ನೀವು ನಿಮ್ಮ ಮನೆಯನ್ನು ನಡೆಸುವ ಸಾಮರ್ಥ್ಯ ಆರೋಗ್ಯ ಬುದ್ದಿವಂತಿಕೆ ಹೊಂದಿ ದ್ದರೆ ಮಾತ್ರ ನಿಮಗೆ ಬೆಲೆ ಅನ್ನೋದನ್ನ ಮರಿಬೇಡಿ. ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಯೂ ಕೂಡ ನಿಮ್ಮ ಜೀವನದಲ್ಲಿ ತುಂಬಾ ಮುಖ್ಯವಾಗಿರುತ್ತದೆ.

ಹಾಗಾಗಿ ಇಂತಹ ಸಮಯದಲ್ಲಿ ಇಂತಹ ನಿರ್ಧಾರಗಳನ್ನು ಬಹಳ ನೆನಪಿನಲ್ಲಿಟ್ಟುಕೊಂಡು ಅದನ್ನು ಅನುಸರಿಸು ವುದು ತುಂಬಾ ಒಳ್ಳೆಯದು ಹಾಗೇನಾದರೂ ನೀವು ಇವೆಲ್ಲದರ ಬಗ್ಗೆ ನಿರ್ಲಕ್ಷ ಮಾಡಿದರೆ ಮುಂದೆ ನೀವೇ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಡಾಟಾ ಎಂಟ್ರಿ ಆಪರೇಟ್ ಹುದ್ದೆ ನೇಮಕಾತಿ.!

 

ಜಿಲ್ಲಾ ಪಂಚಾಯಿತಿಯಲ್ಲಿ ಪ್ರತಿ ಬಾರಿ ಹೊಸ ಹೊಸ ನೇಮಕಾತಿಯನ್ನು ಜಾರಿಗೆ ತರುತ್ತಿದ್ದು ಅದರಲ್ಲಿ ಈ ಬಾರಿ ಡಾಟಾ ಎಂಟ್ರಿ ಆಪರೇಟರ್ ಹಾಗೂ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಈಗ ಅರ್ಜಿ ಆಹ್ವಾನ ಮಾಡಿ ದ್ದಾರೆ ಹೌದು. ಹಾಗಾದರೆ ಯಾರೆಲ್ಲ ಈ ಅರ್ಜಿಯನ್ನು ಹಾಕಬಹುದು ಯಾರೆಲ್ಲಾ ಅರ್ಹರು ಹಾಗೂ ಈ ಅರ್ಜಿಯನ್ನು ಹಾಕುವುದಕ್ಕೆ ಯಾವ ದಾಖಲಾತಿಗಳು ಬೇಕಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿ ಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ಗ್ರಾಮ ಪಂಚಾಯಿತಿ ಎಂದಾಕ್ಷಣ ಎಲ್ಲಾ ಕಡೆ ಈ ಒಂದು ನೇಮಕಾತಿ ಪ್ರಾರಂಭ ವಾಗಿಲ್ಲ. ಬದಲಿಗೆ ಯಾವ ಒಂದು ಜಿಲ್ಲಾ ಪಂಚಾಯಿತಿಯಲ್ಲಿ ಈ ಹುದ್ದೆ ಗಳಿಗೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ ಹಾಗೂ ನೀವು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ವಿಧಾನಗಳನ್ನು ಅನುಸರಿಸಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ದಿನ ತಿಳಿಯೋಣ.

ನೇಮಕಾತಿ ಮಾಡುತ್ತಿರುವ ಪಂಚಾಯಿತಿ :- ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ಈ ಒಂದು ನೇಮಕಾತಿ ಬಿಡುಗಡೆ ಮಾಡಿದ್ದಾರೆ.

ಹುದ್ದೆಗಳ ವಿವರ :-
• ಡಾಟಾ ಎಂಟ್ರಿ ಆಪರೇಟರ್
• ತಾಂತ್ರಿಕ ಸಹಾಯಕರು ತೋಟಗಾರಿಕೆ
• ತಾಂತ್ರಿಕ ಸಹಾಯಕರು ಅರಣ್ಯ
• ತಾಂತ್ರಿಕ ಸಹಾಯಕರು ಕೃಷಿ
• ತಾಂತ್ರಿಕ ಸಹಾಯಕರು ಸಿವಿಲ್

ಒಟ್ಟು ಹುದ್ದೆಗಳು ಹಾಗೂ ಖಾಲಿ ಇರುವ ಹುದ್ದೆಗಳ ಸಂಖ್ಯೆ :-
• ಒಟ್ಟಾರೆಯಾಗಿ 16 ಹುದ್ದೆಗಳಿಗೆ ಇಲ್ಲಿ ಅರ್ಜಿ ಆಹ್ವಾನ ಮಾಡಿದ್ದಾರೆ.
• ತಾಂತ್ರಿಕ ಸಹಾಯಕ ಹುದ್ದೆಗೆ 14 ಅರ್ಜಿ
• ಡಿಇಓ ಹುದ್ದೆಗೆ 3 ಅರ್ಜಿ ಬಿಡುಗಡೆ ಮಾಡಿದ್ದಾರೆ.

ವಿದ್ಯಾರ್ಹತೆ :-
• ಡಿಇಓ ~ ಪಿಯುಸಿ ಜೊತೆಗೆ ಕನ್ನಡ ಹಾಗೂ ಇಂಗ್ಲಿಷ್ ಟೈಪಿಂಗ್ ಜ್ಞಾನ ಇರಬೇಕು.
• ತಾಂತ್ರಿಕ ಸಹಾಯಕರು (ತೋಟಗಾರಿಕೆ) ~ ಬಿ.ಎಸ್ಸಿ (ಆರ್ಟಿಕಲ್ಟರ್)
• ತಾಂತ್ರಿಕ ಸಹಾಯಕರು (ಅರಣ್ಯ) ~ ಬಿ.ಎಸ್ಸಿ (ಫಾರೆಸ್ಟ್ರಿ)
• ತಾಂತ್ರಿಕ ಸಹಾಯಕರು (ಕೃಷಿ) – ಬಿ.ಎಸ್ಸಿ (ಅಗ್ರಿಕಲ್ಟರ್ )
• ತಾಂತ್ರಿಕ ಸಹಾಯಕರು (ಸಿವಿಲ್) ~ ಬಿಇ (ಸಿವಿಲ್)
• ತಾಂತ್ರಿಕ ಸಹಾಯಕ ಹುದ್ದೆಗೆ ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಇರಬೇಕು.

ವಯೋಮಿತಿ :-
• ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಹಾಕುವವರ ವಯೋಮಿತಿ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಗರಿಷ್ಠ 35 ವರ್ಷ ಒಳಗಿನವರು ಆಗಿರಬೇಕು.
• ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಹಾಕುವವರ ವಯೋಮಿತಿ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 40 ವರ್ಷ ಒಳಗಿನವರು ಆಗಿರಬೇಕು.

ಉದ್ಯೋಗ ಸ್ಥಳ :-
• ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ.

ಅರ್ಜಿ ಶುಲ್ಕ :-
• ಇಲ್ಲಿ ನೀವು ಯಾವುದೇ ಅರ್ಜಿ ಹಾಕಿದರೂ ಕೂಡ ಯಾವುದಕ್ಕೂ ಅರ್ಜಿ ಶುಲ್ಕ ಇಲ್ಲ ಉಚಿತವಾಗಿ ನೀವು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ :-
• ಸಂಪೂರ್ಣವಾಗಿ ನೀವು ಇಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
• karnatakajobinfo.com/ shimoga ವೆಬ್ಸೈಟ್ಗೆ ಹೋಗಿ ಕ್ಲಿಕ್ ಮಾಡಿ ಅಲ್ಲಿ ಕೇಳಿರುವಂತಹ ಎಲ್ಲಾ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ ಆನಂತರ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.

ಆಯ್ಕೆಯ ವಿಧಾನ :-
• ವಿದ್ಯಾರ್ಹತೆ ಹಾಗೂ ಅನುಭವದ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆನಂತರ ಅಭ್ಯರ್ಥಿಗಳನ್ನು ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ದಿನಾಂಕ :-
• ಅರ್ಜಿ ಹಾಕುವುದಕ್ಕೆ ಪ್ರಾರಂಭ ದಿನಾಂಕ 20/10/2023
• ಅರ್ಜಿ ಹಾಕುವುದಕ್ಕೆ ಕೊನೆಯ ದಿನಾಂಕ 03/11/2023

ಒಂದು ನಿಮಿಷ ಸಮಯ ಮಾಡಿಕೊಂಡು ನೋಡಿ.!

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಕೆಲವೊಂದಷ್ಟು ಉತ್ತಮವಾ ದಂತಹ ಅಂದರೆ ತಮ್ಮ ಜೀವನದಲ್ಲಿ ಯಾವ ಕೆಲವು ವಿಧಾನಗಳನ್ನು ಹೇಗೆ ಅನುಸರಿಸುವುದರಿಂದ ಯಾವ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವ ಮಾಹಿತಿಗಳನ್ನು ತಿಳಿದುಕೊಂಡಿರು ವುದು ತುಂಬಾ ಒಳ್ಳೆಯದು ಹಾಗೂ ಅದು ಅವರ ಸಮಯಕ್ಕೆ ತುಂಬಾ ಅನುಕೂಲ ಕೂಡ ಆಗುತ್ತದೆ.

ಹೌದು ನಾವು ದಿನನಿತ್ಯ ಮಾಡುವಂತಹ ಪ್ರತಿಯೊಂದು ಕೆಲಸವಾಗಿರಬಹುದು ಪ್ರತಿಯೊಂದು ಕೂಡ ಅದರದೇ ಆದ ವಿಧಾನದಲ್ಲಿ ಮಾಡಬೇಕು ಎನ್ನುವ ನಿಯಮವಾಗಿರುತ್ತದೆ. ಹಾಗೇನಾದರೂ ನಾವು ಆ ರೀತಿ ಮಾಡದೇ ಇದ್ದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗುತ್ತದೆ.

ಆದ್ದರಿಂದ ಯಾವ ಕೆಲಸವನ್ನು ಹೇಗೆ ಮಾಡುವುದರಿಂದ ನಾವು ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಬಹುದು ಹಾಗೂ ಅದರ ಅನುಕೂಲ ಏನು? ಹಾಗೂ ನಾವು ತಪ್ಪು ವಿಧಾನದಲ್ಲಿ ಮಾಡಿದರೆ ಅದರ ಅನಾನುಕೂಲ ಏನು. ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈಗ ತಿಳಿಯೋಣ.

* ತಲೆ ಸ್ನಾನ ಮಾಡಿದ ಮೇಲೆ ತಲೆಗೆ ಟವಲ್ ಕಟ್ಟುವುದರಿಂದ ಕೂದಲಿಗೆ ಹೊಳಪು ಬರುತ್ತದೆ.
* ಟಿವಿ ನೋಡುವಾಗ, ದೊಡ್ಡವರಾದರು ಸರಿ ಚಿಕ್ಕ ಮಕ್ಕಳಾದರೂ ಸರಿ, ಟಿವಿಯ ಹತ್ತಿರ ಕೂತುಕೊಂಡು ಟಿವಿ ನೋಡುವುದು ಕಣ್ಣಿಗೆ ಅಪಾಯ. ಹೌದು ಆದಷ್ಟು ಮಕ್ಕಳನ್ನು ಟಿವಿ ನೋಡುವಾಗ ದೂರ ಕುಳಿತು ನೋಡು ವಂತೆ ಅಭ್ಯಾಸ ಮಾಡಿ. ಇಲ್ಲವಾದರೆ ಮಕ್ಕಳ ಕಣ್ಣಿನಲ್ಲಿರುವಂತಹ ನರಗಳು ತುಂಬಾ ಸೂಕ್ಷ್ಮವಾಗಿರುತ್ತದೆ ಹಾಗೇನಾದರೂ ಹತ್ತಿರದಲ್ಲಿ ಕುಳಿತು ನೋಡಿದರೆ ಅವರ ನರಗಳಲ್ಲಿ ಕೆಲವೊಂದಷ್ಟು ತೊಂದರೆಗಳು ಉಂಟಾಗಬಹುದು.

* ಪ್ರತಿನಿತ್ಯ ಜೀವನದಲ್ಲಿ ರಾಗಿ, ಜೋಳ, ಸಜ್ಜೆ ಹಿಟ್ಟಿನಿಂದ ತಯಾರಿಸಿದ ಆಹಾರ ಸೇವನೆ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ.
* ನೆಲ ಒರೆಸುವಾಗ ಸ್ವಲ್ಪ ಕಲ್ಲುಪ್ಪು ಹಾಕಿ ನೆಲ ಒರೆಸಿದರೆ, ಮನೆಯಲ್ಲಿರುವ ನೆಗೆಟಿವಿಟಿ ಹೋಗುತ್ತದೆ.
* ಚಪಾತಿ ಮಾಡಲು ಹಿಟ್ಟನ್ನು ಕಲಸುವಾಗ ಒಂದು ಚಮಚ ಬೆಣ್ಣೆ ಅಥವಾ ಒಂದು ಚಮಚ ತುಪ್ಪ ಬಳಸಿ ಹಿಟ್ಟನ್ನು ಕಲಸಿದರೆ, ಚಪಾತಿ ಮೃದುವಾಗುವುದರ ಜೊತೆಗೆ ರುಚಿಯೂ ಕೂಡ ಅಷ್ಟೇ ಚೆನ್ನಾಗಿರುತ್ತದೆ.

* ಪ್ರತಿದಿನ ನಿಮ್ಮ ಆಹಾರದಲ್ಲಿ ಕರಿಬೇವಿನ ಸೇವನೆ ಮಾಡುವುದರಿಂದ ತಲೆ ಕೂದಲು ಬೆಳ್ಳಗಾಗುವುದಿಲ್ಲ ಕೂದಲ ಬೆಳವಣಿಗೆಗೂ ಸಹ ಒಳ್ಳೆಯದು.
* ರಾತ್ರಿ ಸಮಯ ಅನ್ನ ಹೆಚ್ಚು ಸೇವನೆ ಮಾಡಿದರೆ ತೂಕ ಹೆಚ್ಚುತ್ತದೆ, ಜೊತೆಗೆ ನಮ್ಮ ಆರೋಗ್ಯಕ್ಕೆ ಹೊಟ್ಟೆ ತುಂಬುತ್ತದೆಯೇ ಹೊರತು ಪ್ರಯೋಜನಗಳೇನಿಲ್ಲ.
* ಪ್ರತಿದಿನ ನಮ್ಮ ಆಹಾರದಲ್ಲಿ ಒಂದು ನಿಂಬೆಹಣ್ಣಿನ ಸೇವನೆ ಇರಲಿ.
* ಉರಿ ಮೂತ್ರ ಆಗಿದ್ದರೆ, ಒಂದು ಗ್ಲಾಸ್ ನೀರಿಗೆ ಒಂದು ದೊಡ್ಡ ತುಂಡು ಕಲ್ಲು ಸಕ್ಕರೆಯನ್ನು ಹಾಕಿ ಕರಗಲು ಬಿಡಿ, ಕರಗಿದ ಮೇಲೆ ಆ ನೀರನ್ನು ಕುಡಿಯಿರಿ ಇದರಿಂದ ತುಂಬಾ ಬೇಗ ಉಪಶಮನ ಸಿಗುತ್ತದೆ.

ಈ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ನಿಮ್ಮ ಆರೋಗ್ಯದ ವಿಚಾರವಾಗಿರಬಹುದು ಪ್ರತಿಯೊಂದಕ್ಕೂ ಕೂಡ ತುಂಬಾ ಮುಖ್ಯವಾಗಿ ರುತ್ತದೆ. ಆದ್ದರಿಂದ ಇವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳು ವುದು ಬಹಳ ಮುಖ್ಯ ಅಳವಡಿಸಿಕೊಂಡಿದ್ದೆ ಆದಲ್ಲಿ ಅದರಿಂದ ಇನ್ನೂ ಹೆಚ್ಚಿನ ಆರೋಗ್ಯದ ಲಾಭಗಳನ್ನು ನೀವು ಪಡೆದುಕೊಳ್ಳಬಹುದು ಎಂದು ಹೇಳಬಹುದು.

ಇದರ ಜೊತೆಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮಾಹಿತಿ ಏನು ಎಂದರೆ ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯದ ಬಗ್ಗೆ ತಾವೇ ಹೆಚ್ಚಿನ ಗಮನವನ್ನು ವಹಿಸುವುದು ಮುಖ್ಯ ಹೌದು ನೀವು ಯಾವ ರೀತಿಯ ಆಹಾರ ಪದ್ಧತಿಯನ್ನು ಅನುಸರಿಸಿದ್ದೀರಿ ಹಾಗೂ ಯಾವ ರೀತಿಯ ಜೀವನಶೈಲಿಯನ್ನು ನಡೆಸುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮ್ಮ ಆರೋಗ್ಯ ನಿಂತಿರುತ್ತದೆ.

ಹಲ್ಲುಗಳ ಹೊಳಪಿಗಾಗಿ ಉಪಯುಕ್ತ ಟಿಪ್ಸ್ ಗಳು.!

 

ಪ್ರತಿಯೊಬ್ಬರ ಸೌಂದರ್ಯವನ್ನು ಹೆಚ್ಚಿಸುವುದು ಅವರ ಹಲ್ಲುಗಳು ಹಾಗೂ ಅವರ ತಲೆ ಕೂದಲು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಯಾರು ಎಷ್ಟೇ ಕಪ್ಪಾಗಿದ್ದರು ಕೂಡ ಅವರ ಬಣ್ಣ ಮುಖ್ಯವಲ್ಲ ಅವರ ಹಲ್ಲುಗಳು ಹಾಗೂ ಅವರ ಕೂದಲುಗಳಿಂದ ಆ ವ್ಯಕ್ತಿ ತುಂಬಾ ಸುಂದರವಾಗಿ ಕಾಣುತ್ತಾನೆ ಎಂದು ಹೇಳಬಹುದು.

ಆದರೆ ಕೆಲವೊಂದಷ್ಟು ಜನರಿಗೆ ಯಾವುದೇ ರೀತಿಯ ಸಿಹಿ ಪದಾರ್ಥಗಳನ್ನು ತಿಂದರೆ ಹಾಗೂ ಗಟ್ಟಿ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಹಲ್ಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ ಆದ್ದರಿಂದ ಅವರು ಆ ನೋವನ್ನು ತಾಳಲಾರದೆ ಹಲ್ಲುಗಳನ್ನು ಕೀಳಿಸುವಂತಹ ಸನ್ನಿವೇಶಗಳನ್ನು ಸಹ ನಾವು ನೋಡಿರಬಹುದು.

ಹಾಗಾದರೆ ಈ ದಿನ ಹಲ್ಲಿನ ವಿಚಾರವಾಗಿ ಸಂಬಂಧಿಸಿದ ಅಂದರೆ. ಹಲ್ಲುಗಳನ್ನು ನಾವು ಯಾವ ರೀತಿಯಾಗಿ ನೋಡಿಕೊಳ್ಳಬೇಕು, ಯಾವ ರೀತಿಯಾಗಿ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಹಲ್ಲುಗಳ ಆರೋಗ್ಯ ಹಾಳಾಗದಂತೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು, ಹಲ್ಲುಗಳು ಸದಾ ಕಾಲ ಹೊಳೆಯಬೇಕು ಎಂದರೆ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

* ಜಾಜಿ ಎಲೆಗಳನ್ನು ಚೆನ್ನಾಗಿ ತೊಳೆದು, ಬಾಯಲ್ಲಿಟ್ಟುಕೊಂಡು ಹಲ್ಲುಗ ಳಿಂದ ಜಗಿಯುವುದರಿಂದ ಹಲ್ಲು ನೋವು ಕಡಿಮೆ ಆಗುವುದಲ್ಲದೇ ಬಾಯಿ ಹುಣ್ಣು ವಾಸಿಯಾಗುವುದು. ದುರ್ವಾಸನೆ ಇದ್ದರೆ ದೂರವಾಗುವದು.
* ಎಳೆಯ ಬೇವಿನ ಕಡ್ಡಿಗಳಿಂದ ಹಲ್ಲು ಉಜ್ಜಿದರೆ ಉತ್ತಮ ಫಲಿತಾಂಶ ಕಂಡು ಬರುತ್ತದೆ. ಉಜ್ಜುವ ಮೊದಲು ಕಡ್ಡಿಗಳನ್ನು ಹಲ್ಲುಗಳಿಂದ ಅಗೆಯಬೇಕು. ಆಗ ಬರುವ ದ್ರವದಿಂದ ಬಾಯನ್ನು ಚೆನ್ನಾಗಿ ಮುಕ್ಕಳಿಸಬೇಕು.

* ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಇದರ ನೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲಿನಲ್ಲಿರುವ ಕ್ರಿಮಿಗಳು ನಾಶವಾಗುತ್ತದೆ.
* ಒಣಗಿಸಿಟ್ಟ ನಿಂಬೆ ಸಿಪ್ಪೆಯನ್ನು ಪುಡಿಮಾಡಿ ಅಡಿಗೆ ಸೋಡ, ಉಪ್ಪು ಬೆರೆಸಿಟ್ಟುಕೊಂಡು ಪ್ರತಿದಿನ ಎರಡು ಸಲ ಹಲ್ಲುಜ್ಜಿದರೆ ಹಲ್ಲು ಫಳಫಳ ಹೊಳೆಯುತ್ತವೆ.

* ಸ್ವಲ್ಪ ಬಾದಾಮಿ ಕುಟ್ಟಿ ತೆಗೆದ ನಂತರ ಅದರ ಹೊರಗಿನ ಗಟ್ಟಿಯಾದ ಸಿಪ್ಪೆಯನ್ನು ಸುಟ್ಟು ಅದರ ಬೂದಿಯಿಂದ ಹಲ್ಲುಗಳನ್ನು ಉಜ್ಜಿದರೆ ಹಲ್ಲುಗಳು ಗಟ್ಟಿಯಾಗುತ್ತವೆ.
* ಈ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಬೇಕು ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ದಿನವು ಈ ಪುಡಿಯಿಂದ ಉಜ್ಜಿದರೆ ಹಲ್ಲುಗಳು ಬೆಳ್ಳಗಾಗುತ್ತವೆ.
* ರಸ ತೆಗೆದ ನಿಂಬೆ ಹೋಳಿಗೆ ನಾಲ್ಕು ತೊಟ್ಟು ಸಾಸಿವೆ ಎಣ್ಣೆ ಸ್ವಲ್ಪ ಉಪ್ಪು ಚಿಮುಕಿಸಿ ಹಲ್ಲುಜ್ಜಿದರೆ ಹಲ್ಲುಗಳ ಮೇಲಿನ ಹಳದಿ ಬಣ್ಣ ಹೊರಟು ಹೋಗುತ್ತದೆ.

*ನಿಂಬೆರಸ ಮತ್ತು ಉಪ್ಪಿನ ಮಿಶ್ರಣದಿಂದ ಹಲ್ಲುಜ್ಜುವುದರಿಂದ ಹಲ್ಲುಗಳ ಹೊಳಪು ಹೆಚ್ಚುತ್ತದೆ.
* ಪುದಿನಾ ಸೊಪ್ಪನ್ನು ಬಾಯಲ್ಲಿ ಹಾಕಿ ಜಗಿಯುತ್ತಿದ್ದರೆ ಬಾಯಿಯ ದುರ್ಗಂದ ದೂರವಾಗುತ್ತದೆ ಮತ್ತು ಹಲ್ಲು ಗಟ್ಟಿಯಾಗುತ್ತದೆ.
* ಉಪ್ಪಿನ ಪುಡಿಯಿಂದ ಹಲ್ಲು ಉಜ್ಜಿದರೆ ಹಲ್ಲಿನಲ್ಲಿ ಹುಳುಕು ಉಂಟು ಮಾಡುವ ಕ್ರಿಮಿಗಳು ನಾಶವಾಗಿ ಹಲ್ಲು ಗಟ್ಟಿಯಾಗುತ್ತದೆ ಹಾಗೂ ಶುಭ್ರವಾಗಿ ಕಾಣುತ್ತದೆ.

* ಪ್ರತಿದಿನ ಊಟದ ನಂತರ ಸೇಬನ್ನು ಹಲ್ಲಿನಿಂದ ಕಚ್ಚಿ ತಿನ್ನುವುದರಿಂದ ಹಲ್ಲುಗಳು ಮಿಂಚಿನಂತೆ ಹೊಳೆಯುತ್ತವೆ. ಗಜ್ಜರಿಯನ್ನು ಕಚ್ಚಿ ತಿನ್ನುವುದ ರಿಂದ ಹಲ್ಲುಗಳು ಹೊಳೆಯುತ್ತದೆ.
* ಉಪ್ಪು, ಬೇಕಿಂಗ್ ಪೌಡರ್ ಸಮಪ್ರಮಾಣದಲ್ಲಿ ಬೆರೆಸಿ ದಿನವೂ ಎರಡು ಹೊತ್ತು ಹಲ್ಲಿಗೆ ತಿಕ್ಕಿದರೆ ಹುಟ್ಟಿನಿಂದ ಬಂದಂತಹ ಕಂದುಬಣ್ಣ ಕೂಡ ನಿವಾರಣೆಯಾಗಿ ಹಲ್ಲು ಹೊಳೆಯುತ್ತವೆ.

* ತೆಂಗಿನ ಚಿಪ್ಪನ್ನು ಸುಟ್ಟು ಕರಕು ಮಾಡಿ ಅದನ್ನು ಉಪ್ಪಿನ ಜೊತೆಗೆ ಹಲ್ಲುಜ್ಜಲು ಬಳಸಿದರೆ ಹಲ್ಲು ವಸಡು ಗಟ್ಟಿಯಾಗುತ್ತದೆ.
* ಭತ್ತದ ಹೊಟ್ಟನ್ನು ಸುಟ್ಟು ಬೂದಿಮಾಡಿ ಅದಕ್ಕೆ ಅಡುಗೆ ಉಪ್ಪು, ಮತ್ತು ಸ್ವಲ್ಪ ನಿಂಬೆರಸ ಇವುಗಳನ್ನು ಸೇರಿಸಿ ಅದರಿಂದ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲಿನ ಹೊಳಪು ಹೆಚ್ಚುತ್ತದೆ.

ನಿಮ್ಮ ಜಮೀನ ನಾ ಕಾಲುದಾರಿ ನಕ್ಷೆಯನ್ನು ಮೊಬೈಲ್ ನಲ್ಲೆ ನೋಡುವ ವಿಧಾನ.!

 

ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ಹೋಗುವಂತಹ ದಾರಿಯ ಸಮಸ್ಯೆಗಳಿಗೆ ಸಾಕಷ್ಟು ಜಗಳ ಆಗಿರುವುದನ್ನು ನಾವು ಕೇಳಿರಬಹುದು ಹಾಗೂ ಕೆಲವೊಮ್ಮೆ ನೋಡಿರಬಹುದು. ಯಾವುದೇ ಜಮೀನಾಗಲಿ ಅಥವಾ ಹೊಲ ಆಗಲಿ ಆ ರಸ್ತೆ ಅಥವಾ ದಾರಿ ಇಲ್ಲದೆ ಜಮೀನು ಇರುವುದಿಲ್ಲ.

ನಮ್ಮ ಭಾರತ ದೇಶದಲ್ಲಿರುವಂತಹ ಪ್ರತಿಯೊಂದು ಜಮೀನುಗಳಿಗೂ ತನ್ನದೇ ಆದ ಪ್ರತ್ಯೇಕವಾದ ದಾರಿಯ ವ್ಯವಸ್ಥೆ ಇದ್ದೇ ಇರುತ್ತದೆ. ಆದರೆ ಇದು ನಮಗೆ ಸಮರ್ಪಕವಾಗಿ ಗೊತ್ತಿ ಲ್ಲದೆ ಇರುವುದರ ಕಾರಣದಿಂದ ದಿನೇ ದಿನೇ ಜಮೀನಿನ ಮಾಲೀಕರ ಜೊತೆ ಹಾಗೂ ರಸ್ತೆ ಇರುವ ಜಮೀನಿನ ಮಾಲೀಕರ ಜೊತೆ ಹಾಗೂ ಅಕ್ಕ ಪಕ್ಕದ ಜನರೊಂದಿಗೆ ಜಗಳ ಆಡುವುದು ಸಹ ಉಂಟು.

ಆದರೆ ನಮ್ಮ ಜಮೀನಿನ ಮ್ಯಾಪ್ ನ ಪ್ರಕಾರ ಅಂದರೆ ಕಂದಾಯ ಇಲಾಖೆಯ ರೆವೆನ್ಯೂ ಡಿಪಾರ್ಟ್ಮೆಂಟ್ ಭೂಮಾಪನ ಮತ್ತು ಭೂ ದಾಖಲೆಗಳ ಮ್ಯಾಪ್ ನ ಪ್ರಕಾರ ನಮ್ಮ ಜಮೀನುಗಳಿಗೆ ರಸ್ತೆ ಅಥವಾ ಕಾಲುದಾರಿ ಎಲ್ಲಿ ಇದೆ ಎಂದು ತಿಳಿದುಕೊಳ್ಳಲು ನಾವು ಹೆಚ್ಚು ಶ್ರಮ ಪಡುವ ಅವಶ್ಯಕತೆ ಇಲ್ಲ.

ಬದಲಿಗೆ ಅದನ್ನು ನಾವೇ ನಮ್ಮ ಮನೆಯಲ್ಲಿ ಯೇ ಕುಳಿತು ನಮ್ಮ ಮೊಬೈಲ್ ಮೂಲಕ ನೋಡಬಹುದು. ದಿನೇ ದಿನೇ ತಂತ್ರಜ್ಞಾನ ಬೆಳೆದಂತೆ ಇಲಾಖೆಗಳು ಕೂಡ ಸಾಕಷ್ಟು ದಾಖಲೆಗಳು ಮತ್ತು ವಿವರಗಳನ್ನು ಡಿಜಿಟಲ್ ರೂಪದಲ್ಲಿ ಎಲ್ಲಾ ಸಾರ್ವಜನಿಕರಿಗೆ ಒದಗಿಸಿಕೊಡುತ್ತಾ ಇದೆ.

ಆದರೆ ಸಾಕಷ್ಟು ಜನರು ತಮ್ಮ ಜಮೀನುಗಳಿಗೆ ಯಾವ ಬದಿಯಿಂದ ರಸ್ತೆ ದಾರಿ ಇದೆ ಅಂತ ತಿಳಿದುಕೊಳ್ಳದೆ ಸುಮ್ಮನೆ ದಿನನಿತ್ಯ ಅವರಿವರ ಜೊತೆ ಜಗಳ ಆಡುವಂತಹ ಸನ್ನಿವೇಶವನ್ನು ನಾವು ಕಾಣಬಹುದು. ಇತ್ತೀಚಿನ ದಿನದಲ್ಲಿ ಪ್ರತಿಯೊಂದು ಆಸ್ತಿಗಳ ಬೆಲೆಯೂ ಕೂಡ ಹೆಚ್ಚಾಗು ತ್ತಿದ್ದು ಅದರ ಆಸೆ ಕೂಡ ಪ್ರತಿಯೊಬ್ಬರಲ್ಲಿಯೂ ಕೂಡ ಹೆಚ್ಚಾಗುತ್ತಲಿದೆ ಎಂದೇ ಹೇಳಬಹುದು.

ಹೌದು ರಸ್ತೆ ಬದಿಯಲ್ಲಿ ಇರುವಂತಹ ಜಮೀನು ಗಳವರು ತಮ್ಮ ಹಿಂದಿನ ಜಮೀನುಗಳವರಿಗೂ ಕೂಡ ಓಡಾಡುವುದಕ್ಕೆ ಅವಕಾಶ ಇರುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ಮೊದಲೇ ಹೇಳಿದಂತೆ ಪ್ರತಿಯೊಂದು ಆಸ್ತಿಯ ಬೆಲೆ ಹೆಚ್ಚಾಗುತ್ತಿದ್ದು ಅದರಲ್ಲಿ ಬೇರೆ ಯಾರು ಬರಬಾರದು ಇದು ನನಗೆ ಸೇರಿದ್ದು ಎನ್ನುವಂತಹ ಕೆಟ್ಟ ಆಲೋಚನೆಯನ್ನು ಇಟ್ಟುಕೊಂಡು.

ಅವರು ತಮ್ಮ ಹಿಂದಿನ ಜಮೀನಿನವರಿಗೆ ಯಾವುದೇ ರೀತಿಯಲ್ಲಿಯೂ ಕೂಡ ಅನುಕೂಲವಾಗುವಂತೆ ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಓಡಾಡುವುದಕ್ಕೂ ಕೂಡ ಅವರಿಗೆ ಅವಕಾಶ ಕೊಡುವುದಿಲ್ಲ. ಇದು ನನ್ನ ಜಾಗ ನಿನಗೆ ಇಲ್ಲಿ ಓಡಾಡುವುದಕ್ಕೆ ಹಕ್ಕು ಇಲ್ಲ ಎಂದು ಹೇಳುತ್ತಾರೆ.

ಆದರೆ ಕೆಲವೊಂದಷ್ಟು ಜನರು ಈ ರೀತಿಯಾಗಿ ಜೋರು ಮಾಡಿದರೆ ಅವರ ಬಾಯಿಗೆ ಹೆದರಿಕೊಂಡು ಸುಮ್ಮನಾಗುತ್ತಾರೆ. ಆದರೆ ಇನ್ನು ಮುಂದೆ ಈ ರೀತಿಯ ಪರಿಸ್ಥಿತಿ ಇರುವುದಿಲ್ಲ. ಬದಲಿಗೆ ಎಲ್ಲ ಜಮೀನಿನ ವರು ಕೂಡ ತಮ್ಮ ಜಮೀನಿಗೆ ಹೋಗುವಂತಹ ದಾರಿ ಎಷ್ಟಿದೆ ಹಾಗೂ ಯಾವ ದಾರಿಯಲ್ಲಿ ನೀವು ನಿಮ್ಮ ಜಮೀನಿಗೆ ಹೋಗಬೇಕು ಎನ್ನುವುದನ್ನು ನೀವೇ ನಿಮ್ಮ ಮೊಬೈಲ್ ಮೂಲಕ ನೋಡಿಕೊಳ್ಳಬಹುದು.

ಹೌದು ಈ ರೀತಿ ನೋಡಿಕೊಳ್ಳುವುದರಿಂದ ನೀವು ಬೇರೆಯವರ ಜೊತೆ ವಿನಾ ಕಾರಣ ಜಗಳ ಆಡುವಂತಹ ಪರಿಸ್ಥಿತಿ ಬರುವುದಿಲ್ಲ. ಭೂ ಮಾಪನ ಇಲಾಖೆಯು ಈ ಒಂದು ಮೂಲ ವೆಬ್ಸೈಟ್ ಅನ್ನು ಬಿಡುಗಡೆ ಮಾಡಿದ್ದು ಅಲ್ಲಿ ನೀವು ಚೆಕ್ ಮಾಡುವುದರ ಮೂಲಕ ಅಂದರೆ ಅಲ್ಲಿ ಕೇಳುವಂತಹ ನಿಮ್ಮ ಜಮೀನಿನ ಸಂಖ್ಯೆ ಹಾಗೂ ಕೆಲವೊಂದಷ್ಟು ದಾಖಲೆಗಳನ್ನು ಹಾಕುವುದರ ಮೂಲಕ ನಿಮ್ಮ ಜಮೀನಿಗೆ ಯಾವ ಮುಖಾಂತರ ರಸ್ತೆ ಇದೆ ಎನ್ನುವುದನ್ನು ಅಲ್ಲೇ ನೀವು ತಿಳಿದುಕೊಳ್ಳ ಬಹುದು.

ಚುನಾವಣೆಗೂ ಮುನ್ನವೇ ಗೃಹಿಣಿಯರು ರೈತರು ಮತ್ತು ಸ್ವಂತ ಮನೆ ಇಲ್ಲದವರಿಗೆ ವಿಶೇಷ ಯೋಜನೆಗಳ ಘೋಷಣೆ ಮಾಡಿದ ಕೇಂದ್ರ ಸರ್ಕಾರ.!

 

ದೇಶದ ಹಲವು ರಾಜ್ಯಗಳಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ಇದೆ, ಅದು ಮುಗಿಯುತ್ತಿದ್ದಂತೆ ಲೋಕಸಭಾ ಚುನಾವಣೆಯು (Lokasabha election-2023) ಕೂಡ ಅದರ ಬೆನ್ನೆಲೆ ಬರುತ್ತದೆ. ಹಾಗಾಗಿ ದೇಶದಾದ್ಯಂತ ಪಕ್ಷದ ಬಲವರ್ಧನೆ ಮಾಡಿಕೊಳ್ಳಲು ರಾಜಕೀಯ ಪಕ್ಷಗಳು ಸಾಕಷ್ಟು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿವೆ.

ಆದರೆ ಕೇಂದ್ರದಲ್ಲಿ ಈಗಾಗಲೇ ಎರಡು ಬಾರಿ ಅಧಿಕಾರ ಗೆದ್ದಿರುವ ಮೋದಿ ನೇತೃತ್ವದ NDA ಸರ್ಕಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಜನಪರ ಯೋಜನೆಗಳನ್ನು ಜಾರಿಗೆ ತರುವ ಮುನ್ನ ಪರೋಕ್ಷವಾಗಿ ಮತ ಬೇಟೆಯಾಡುತ್ತಿದ್ದಾರೆ.

ಇದರ ಪ್ರಯುಕ್ತ ಕೆಲವು ವಿಶೇಷವಾದ ಯೋಜನೆಗಳ ಘೋಷಣೆಯಾಗಿದ್ದು ಗೃಹಿಣಿಯರು, ರೈತರು, ಸ್ವಂತ ಮನೆ ಕನಸು ಹೊಂದಿರುವವರು ಎಲ್ಲರನ್ನು ಅನ್ವಯಿಸಿ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ ಇವುಗಳ ವಿವರ ಇಲ್ಲಿದೆ ನೋಡಿ.

1. ಪ್ರಧಾನ ಮಂತ್ರಿ ಉಜ್ವಲ್ ಯೋಜನೆ (PMUY) ಫಲಾನುಭವಿಗಳಿಗೆ ಕೆಲ ತಿಂಗಳ ಹಿಂದೆ ಪ್ರತಿ ಬುಕ್ಕಿಂಗ್ ಮೇಲೆ 200 ರೂ. ಸಬ್ಸಿಡಿ ನೀಡಲಾಗಿತ್ತು. ಈಗ ಅದನ್ನು 300ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸಚಿವ ಸಂಪುಟದಲ್ಲಿಯೇ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕುರ್ ರವರೇ ಈ ಬಗ್ಗೆ ಮಾಹಿತಿ ಹಂಚಿ ಕೊಂಡಿದ್ದಾರೆ.

2. ಇದರೊಂದಿಗೆ ನಗರ ಭಾಗದಲ್ಲಿ ವಾಸಿಸುವವರಿಗೂ ಕೂಡ ಅತಿ ದೊಡ್ಡ ರಿಯಾಯಿತಿ ನೀಡಲು ಮುಂದಾಗಿರುವ ಪ್ರಧಾನಮಂತ್ರಿಗಳು ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ರೀತಿಯಲ್ಲಿಯೇ ಮತ್ತೊಂದು ಯೋಜನೆಯನ್ನು ಜಾರಿಗೆ ತರುವ ಸಿದ್ಧತೆ ಮಾಡಿಕೊಂಡಿದ್ದಾರೆ.

ಈ ಹೊಸ ಯೋಜನೆಯ ಪ್ರಕಾರ ಇನ್ನು ಮುಂದೆ ಯಾರಾದರೂ ನಗರ ಪ್ರದೇಶಗಳಲ್ಲಿ ವಾಸಕ್ಕಾಗಿ ಸ್ವಂತ ಮನೆ ಖರೀದಿಗೆ ಅಥವಾ ನಿರ್ಮಾಣಕ್ಕೆ ಸಾಲ ಪಡೆದುಕೊಂಡರೆ 50 ಲಕ್ಷದ ಸಾಲದ ವರೆಗೆ ವಾರ್ಷಿಕವಾಗಿ 3 ರಿಂದ 6% ವರೆಗೆ ಅವರಿಗೆ ಬಡ್ಡಿಯಲ್ಲಿ ಸಹಾಯಧನ ಸಿಗಲಿದೆ ಈ ರೀತಿಯ ಯೋಚನೆಯು ಶೀಘ್ರದಲ್ಲೇ ಜಾರಿಯಾಗಲು ಸಿದ್ಧವಾಗಿದೆ.

3. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಂತ ಉದ್ಯೋಗ ಆರಂಭಿಸುವವರಿಗೆ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದು ಸಹಾಯ ಮಾಡಿದ್ದಾರೆ. ಈಗ ಪ್ರಧಾನ ಮಂತ್ರಿ ಸ್ವನಿಧಿ (PM Swanidhi Scheme) ಯೋಜನೆ ಎನ್ನುವ ಹೆಸರಿನಲ್ಲಿ ದೇಶದ ಯುವಜನತೆಗೆ ನೆರವಾಗುತ್ತಿದ್ದಾರೆ.

ಈ ಯೋಜನೆಯಲ್ಲಿ ಪ್ರಯೋಜನ ಪಡೆದು ಸ್ವಂತ ಬಿಸಿನೆಸ್ ಆರಂಭಿಸುವ ಫಲಾನುಭವಿಗಳು 50,000ದವರೆಗೆ 0% ಪಡ್ಡಿದರದಲ್ಲಿ ಸಾಲ ಪಡೆಯುವುದು, ಇದರಲ್ಲಿ 25 ಸಾವಿರ ಸಬ್ಸಿಡಿ ಇರುತ್ತದೆ. ಅತಿ ಕಡಿಮೆ ಕಾಗದ ಪತ್ರಗಳಲ್ಲಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಕೇಳಲಾಗುವ ದಾಖಲೆಗಳನ್ನು ಸಲ್ಲಿಸಿ ಅರ್ಹರು ಸಾಲ ಪಡೆದು ತಮ್ಮ ಬಿಸಿನೆಸ್ ಕನಸು ನನಸು ಮಾಡಿಕೊಳ್ಳಬಹುದು.

4. ರೈತರ ಬಗ್ಗೆ ಕೂಡ ಅಪಾರವಾದ ಕಾಳಜಿ ಹೊಂದಿರುವ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (PMKSY) ಯೋಜನೆಯಡಿ ನೀಡುತ್ತಿರುವ ವಾರ್ಷಿಕ 6,000ರೂ. ಸಹಾಯಧನವನ್ನು 8,000ರೂ. ಗೆ ಹೆಚ್ಚಿಸಲು ನಿರ್ಧರಿಸಿದೆ ಎನ್ನುವ ಮಾಹಿತಿ ಕೂಡ ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆ ಜಾರಿಗೆ ತಂದಿದ್ದರು, ಈವರೆಗೆ 14 ಕಂತುಗಳು ಯಶಸ್ವಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪಿದೆ, 15ನೇ ನಿರೀಕ್ಷೆಯಲ್ಲಿರುವ ರೈತರಿಗೆ ಈ ರೀತಿ ಸಿಹಿ ಸುದ್ದಿ ಕೊಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.