Home Blog Page 203

ಈ ರೀತಿ ಏನಾದರೂ ನೀವು ರಂಗೋಲಿ ಹಾಕಿದ್ರೆ ನಿಮ್ಮ ಮನೆಯಲ್ಲಿ ಕಷ್ಟ ತಪ್ಪೋದಿಲ್ಲ, ಹೊಸ್ತಿಲು ಪೂಜೆ ಮಾಡುವ ಸರಿಯಾದ ವಿಧಾನ ಇದು.!

 

ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನೇಕ ಸ್ಥಳಗಳಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ ಎಂದು ನಂಬಿದ್ದೇವೆ. ಅದರಲ್ಲಿ ಮನೆಯ ಮುಂಭಾಗದಲ್ಲಿರುವ ಹೊಸ್ತಿಲು ಕೂಡ ಒಂದು. ಹೊಸ್ತಿಲು ಇರುವ ಲಕ್ಷಣವನ್ನು ನೋಡಿ ಮನೆಯ ವಾತಾವರಣವನ್ನು ನಿರ್ಧರಿಸಿ ಇಡಬಹುದು. ಯಾಕೆಂದರೆ ಹೊಸ್ತಿಲು ಪೂಜೆ ಮಾಡುವುದರಿಂದ ಆ ಮನೆಯ ಅದೃಷ್ಟವೇ ಬದಲಾಗುತ್ತದೆ ಹಾಗೆಯೇ ಹೊಸ್ತಿಲಿಗೆ ಏನಾದರೂ ತಪ್ಪಾದ ವಿಧಾನದಿಂದ ರಂಗೋಲಿ ಹಾಕಿದರೆ ಪೂಜೆ ಮಾಡಿದರೆ ಕಷ್ಟ ತಪ್ಪಿದ್ದಲ್ಲ.

ಆದ್ದರಿಂದ ಹೊಸ್ತಿಲು ಪೂಜೆ ಮಾಡುವ ಸರಿಯಾದ ವಿಧಾನ ಯಾವುದು, ಯಾವ ರೀತಿ ಅದಕ್ಕೆ ರಂಗೋಲಿ ಹಾಕಬೇಕು ಯಾವ ರೀತಿ ಹಾಕಬಾರದು ಮತ್ತು ಯಾವ ಸಮಯದಲ್ಲಿ ಪೂಜೆ ಮಾಡಬೇಕು ಮತ್ತು ಇದರ ಹಿಂದಿರುವ ಕಾರಣ ಏನು ಇತ್ಯಾದಿ ವಿಷಯಗಳನ್ನು ತಿಳಿದುಕೊಂಡಿರಬೇಕು. ಈ ಅಂಕಣದಲ್ಲೂ ಸಹ ಅದನ್ನೇ ತಿಳಿಸುವ ಪ್ರಯತ್ನ ಮಾಡುತಿದ್ದೇವೆ.

ನಮ್ಮ ಭಾರತದ ಹಿಂದೂ ಕುಟುಂಬದ ಪ್ರತಿಯೊಂದು ಹೆಣ್ಣು ಮಗಳು ಕೂಡ ಹುಟ್ಟಿದಾಗಲಿಂದಲೂ ಇದನ್ನು ಅಭ್ಯಾಸ ಮಾಡಿಕೊಂಡು ಬಂದಿರುತ್ತಾಳೆ. ಯಾಕೆಂದರೆ ಮನೆಯಲ್ಲಿ ಹಿರಿಯರು ಯಾವಾಗಲೂ ಮನೆ ಮುಂದೆ ರಂಗೋಲಿ ಹಾಕುವುದು, ಹೊಸ್ತಿಲು ಪೂಜೆ ಮಾಡುವ ಜವಾಬ್ದಾರಿಯನ್ನು ಆ ಮನೆಯ ಹೆಣ್ಣು ಮಕ್ಕಳಿಗೆ ಕೊಟ್ಟಿರುತ್ತಾರೆ. ಆದರೆ ಗೊತ್ತಿಲ್ಲದೇ ತಪ್ಪು ತಪ್ಪಾಗಿ ಇದನ್ನು ಮಾಡಬಾರದು.

ಹೊಸ್ತಿಲು ಪೂಜೆ ಮಾಡುವ ಸರಿಯಾದ ವಿಧಾನ ಯಾವುದು ಎಂದು ಈಗ ನಾವು ಹೇಳುತ್ತೇವೆ, ಅದೇ ರೀತಿ ಇನ್ನು ಮುಂದೆ ಪಾಲಿಸಿ. ಹೊಸ್ತಿಲ ಎಡಭಾಗದಲ್ಲಿ ಶ್ರೀದೇವಿ ಮತ್ತು ಬಲಭಾಗದಲ್ಲಿ ಭೂದೇವಿ ಮಧ್ಯ ಭಾಗದಲ್ಲಿ ಶ್ರೀ ಲಕ್ಷ್ಮಿ ಸಮೇತ ನಾರಾಯಣಸ್ವಾಮಿ ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಹಾಗಾಗಿ ಹೊಸ್ತಿಲನ್ನು ಯಾರೂ ತುಳಿಯಬಾರದು.

ಯಾವಾಗಲೂ ನೀರಿನಿಂದ ಅಥವಾ ಶುದ್ಧ ಬಟ್ಟೆಯಿಂದ ಸ್ವಚ್ಛ ಮಾಡಬೇಕು. ಮನೆಯಲ್ಲಿ ಕ್ಲೀನ್ ಮಾಡಲು ಬಳಸುವ ಬಟ್ಟೆಗಳಿಂದ ಅಥವಾ ಪೊರಕೆಯಿಂದ ಅಥವಾ ಬಾತ್ರೂಮ್ ಅಲ್ಲಿ ಬಳಸುವ ಮಗ್ ಗಳಿಂದ ಹೊಸ್ತಿಲನ್ನು ತೊಳೆಯಬಾರದು ಗುಡಿಸಬಾರದು. ಮೊದಲಿಗೆ ಹೊಸ್ತಿಲನ್ನು ಒಂದು ತಾಮ್ರದ ಅಥವಾ ಸ್ಟೀಲ್ ಚೊಂಬುಲಿಂದ ನೀರು ಹಾಕಿ ತೊಳೆದುಕೊಳ್ಳಬೇಕು ಅಥವಾ ಬಟ್ಟೆಯಿಂದ ಗುಡಿಸಿ ಶುದ್ಧ ನೀರಿನಲ್ಲಿ ಅದ್ದಿದ ಬಟ್ಟೆಯಿಂದ ಒರೆಸಿಕೊಳ್ಳಬೇಕು.

ರಂಗೋಲಿ ಹಾಕುವಾಗ ಯಾವಾಗಲೂ ಹೊಸ್ತಿನ ಮೇಲೆ 24 ಎಳೆ ರಂಗೋಲಿ ಗಳನ್ನು ಮಾತ್ರ ಹಾಕಬೇಕು. ಬಲ ಭಾಗಕ್ಕೆ ಎಂಟು ಮತ್ತು ಮಧ್ಯಭಾರಕೆ ಎಂಟು ಎಳೆಗಳಾಗಿ ಭಾಗ ಮಾಡಿಕೊಂಡು ಅದರ ನಡುವೆ ಚಿಕ್ಕಚಿಕ್ಕ ರಂಗೋಲಿ ಬಿಡಿಸಬಹುದು. ಯಾವುದೇ ಕಾರಣಕ್ಕೂ ಹೊಸ್ತಿಲಿನ ಮೇಲೆ ಗುಣಾಕಾರ ಚಿಹ್ನೆ ರೀತಿ ಇಂಟು ಮಾರ್ಕ್ ಬರುವ ಎಳೆಗಳನ್ನು ಬಿಡಿಸಬಾರದು, ಆ ರೀತಿಯ ರಂಗೋಲಿಗಳನ್ನು ಬಿಡಿಸುವುದರಿಂದ ಮನೆಗೆ ಕಷ್ಟ ತಪ್ಪಿದ್ದಲ್ಲ ಮತ್ತು ಮನೆಗೆ ಯಾವ ಸಮಸ್ಯೆಯೂ ಕೂಡ ಪರಿಹಾರ ಆಗುವುದಿಲ್ಲ.

ಇದಾದ ಬಳಿಕ ಹೊಸ್ತಿಲಿನ ಕೆಳಭಾಗದ ನೆಲದ ಮೇಲೆ ಕೂಡ ಚಿಕ್ಕ ರಂಗೋಲಿ ಹಾಕಬಹುದು, ಈ ರಂಗೋಲಿಯನ್ನು ಯಾವುದೇ ಕಾರಣಕ್ಕೂ ತುಳಿಯಬಾರದು. ಇದಾದ ಮೇಲೆ ಹೊಸ್ತಿಲಿಗೆ ಅರಿಶಿಣ ಮತ್ತು ಕುಂಕುಮ ಹಚ್ಚಿ ಹೂವಿನಿಂದ ಅಲಂಕರಿಸಬೇಕು. ಇದನ್ನು ಹೆಣ್ಣು ಮಕ್ಕಳು ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲೇ ಮಾಡಬೇಕು. ಯಾಕೆಂದರೆ ಆ ಸಮಯದಲ್ಲಿ ಲಕ್ಷ್ಮಿ ಸಂಚಾರ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಆ ಸಮಯದಲ್ಲಿ ಮನೆ ಹೊಸ್ತಿಲನ್ನು ಈ ರೀತಿ ಸ್ವಚ್ಛವಾಗಿ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದರೆ ಆ ಮನೆಯನ್ನು ಲಕ್ಷ್ಮಿ ಪ್ರವೇಶ ಮಾಡುತ್ತಾಳೆ ಎನ್ನುವುದು ನಂಬಿಕೆ. ಒಂದು ವೇಳೆ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಲು ಆಗದೆ ಇದ್ದವರು ಸಂಜೆ ವೇಳೆ ಕೂಡ ಹೊಸ್ತಿಲು ಪೂಜೆ ಮಾಡಬಹುದು.

ಪದೆ ಪದೇ ಸಿಂಕ್ ಬ್ಲಾಕ್ ಆಗುತ್ತ.? ಚಿಂತೆ ಬಿಡಿ ಖಾಲಿ ಬಾಟಲ್ ನಿಂದ ಈ ರೀತಿ ಮಾಡಿ ಸಾಕು ಇನ್ಯಾವತ್ತು ಸಿಂಕ್ ಬ್ಲಾಕ್ ಆಗುವುದೇ ಇಲ್ಲ.!

 

ಅಡುಗೆ ಮನೆಯ ಸಿಂಕ್ ಬ್ಲಾಕ್ ಆದರೆ ಗೃಹಿಣಿಯರಿಗೆ ಅದೊಂದು ದೊಡ್ಡ ತಲೆನೋವು. ಈ ರೀತಿ ಆಗಿಬಿಟ್ಟರೆ ಅಡುಗೆ ಮನೆಗೆ ಹೋಗಲು ಮನಸಾಗುವುದು ಇಲ್ಲ, ಅಡುಗೆ ಮಾಡುವ ಇಂಟರೆಸ್ಟ್ ಕೂಡ ಬರುವುದಿಲ್ಲ. ಅವರ ಇಡೀ ದಿನದ ಮೂಡ್ ಹಾಳಾಗಿಬಿಡುತ್ತದೆ. ಆದರೆ ಕೆಲವರ ಮನೆಯಲ್ಲಿ ಪದೇ ಪದೇ ಈ ರೀತಿ ಅಡುಗೆ ಮನೆ ಸಿಂಕ್ ಸಮಸ್ಯೆ ಮಾಡುತ್ತಿರುತ್ತದೆ.

ಈ ರೀತಿ ಅಡುಗೆಮನೆ ಸಿಂಗ್ ಬ್ಲಾಕ್ ಆದಾಗ ಇನ್ಫೆಕ್ಷನ್ ಆಗಿ ಆರೋಗ್ಯ ತೊಂದರೆ ಉಂಟಾಗಬಹುದು ಹಾಗಾಗಿ ಅಡಿಗೆಮನೆ ಸಿಂಕ್ ಬ್ಲಾಕ್ ಆಗದ ಹಾಗೆ ಎಚ್ಚರ ವಹಿಸಬೇಕು. ಅಡುಗೆಮನೆ ಸಿಂಕ್ ಮಾತ್ರ ಅಲ್ಲದೆ ವಾಷ್ ಬೇಸಿನ್ ಸಿಂಕ್ ಗಳು, ಬಾತ್ ರೂಮಲ್ಲಿ ಇರುವ ಬೇಸನ್ ಇನ್ಕಳು ಈ ರೀತಿ ಕಟ್ಟಿಕೊಂಡು ನೀರು ಹೊರಹೋಗದೆ ದೊಡ್ಡ ಕಿರಿಕಿರಿಯನ್ನು ಮಾಡುತ್ತವೆ.

ಹಲವು ಕಾರಣಗಳಿಂದ ಈ ರೀತಿ ಅಡುಗೆ ಮನೆಯ ಸಿಂಕ್ ಕಟ್ಟಿಕೊಳ್ಳುತ್ತದೆ. ಒಮ್ಮೊಮ್ಮೆ ಏರ್ ಔಟ್ ಆಗದೆ ಈ ರೀತಿ ಸಮಸ್ಯೆ ಉಂಟಾಗಬಹುದು. ಆಗ ನೀರು ಆಚೆ ಹೋಗದೆ ಸಿಂಕ್ ತುಂಬಾ ತುಂಬಿಕೊಳ್ಳುತ್ತದೆ. ಇದು ಅಡುಗೆ ಮನೆ ಅಂದವನ್ನು ಹಾಳು ಮಾಡಿ ಬಹಳ ಬೇಜಾರು ಮಾಡುತ್ತದೆ.

ಇನ್ನು ಕೆಲವೊಮ್ಮೆ ಅಡಿಗೆ ಮನೆಯಲ್ಲಿ ನಾವು ಬಳಸಿದ ವೇಸ್ಟ್ ಪದಾರ್ಥಗಳು ಸಿಂಕಲ್ಲಿ ಸಿಕ್ಕಿ ಹಾಕಿಕೊಂಡು ಅಥವಾ ಬಹಳ ದಿನಗಳಾದ ಬಳಿಕ ಅದು ಕೊಳೆತು ಗ್ರೀಸ್ ರೀತಿ ಆಗಿ ಸಿಂಕ್ ಕೆಳಗೆ ಇರುವ ಪೈಪ್ ಬಳಿ ಬ್ಲಾಕ್ ಆಗಿಬಿಟ್ಟಿರುತ್ತದೆ. ಆಗಲು ಸಹ ಈ ರೀತಿ ನೀರು ಆಚೆ ಹೋಗಲು ಸಾಧ್ಯ ಆಗದೆ ಕಟ್ಟಿಕೊಳ್ಳುತ್ತದೆ. ಈ ರೀತಿ ಸಿಂಕ್ ಬ್ಲಾಕ್ ಆಗಬಾರದು ಎಂದರೆ ನಾವು ಆದಷ್ಟು ಆಹಾರ ಪದಾರ್ಥಗಳು ಅದರಲ್ಲಿ ಹೋಗುವುದನ್ನು ತಡೆಯಬೇಕು ಆ ರೀತಿ ಆಗದಂತೆ ಮುಂಜಾಗ್ರತೆ ವಹಿಸಬೇಕು.

ಅದು ಒಂದು ವೇಳೆ ನಿಮ್ಮ ಮನೆಯ ಸಿಂಕ್ ಪದೇ ಪದೇ ಈ ರೀತಿ ಕಟ್ಟಿಕೊಳ್ಳುತ್ತಿದೆ ಎಂದರೆ ಅದು ಕಟ್ಟಿಕೊಂಡಾಗ ನಾವು ಹೇಳುವ ಈ ಉಪಾಯಗಳನ್ನು ಮಾಡಿ ಈ ಉಪಾಯಗಳನ್ನು ಸರಿಯಾಗಿ ಪಾಲಿಸಿದರೆ ಇನ್ನು ಮುಂದೆ ಎಂದು ಕೂಡ ಸಿಂಕ್ ಗಳು ಕಟ್ಟಿಕೊಳ್ಳದ ಹಾಗೆ ನೋಡಿಕೊಳ್ಳಬಹುದು. ಒಂದು ಯಾವುದಾದರೂ ಖಾಲಿ ನೀರಿನ ಬಾಟಲ್ ತೆಗೆದುಕೊಳ್ಳಿ ಅದಕ್ಕೆ ಅರ್ಧ ನೀರು ತುಂಬಿಸಿ ಈಗ ಈ ಬಾಟಲಿನ ಬಾಯಿ ಭಾಗವನ್ನು ಸಿಂಕಿನ ಹೋಲ್ಗಳ ಬಳಿ ಇಟ್ಟು ಜೋರಾಗಿ ಪ್ರೆಸ್ ಮಾಡಿ ಆಗ ಏರ್ ಔಟ್ ಆಗಿ ಎಲ್ಲಾ ನೀರು ಸಲೀಸಾಗಿ ಆಚೆ ಹೋಗುತ್ತದೆ.

ಒಂದು ಬಾರಿ ಮಾತ್ರ ಅಲ್ಲದೆ ನಾಲ್ಕೈದು ಬಾರಿ ನೀರು ಹೋಗುವ ತನಕ ಇದೇ ರೀತಿ ಅರ್ಧ ಬಾಟಲ್ ನೀರು ತುಂಬಿ ಹೀಗೆ ಮಾಡುತ್ತಿರಿ. ಮತ್ತೊಂದು ಉಪಾಯ ಇದೆ ಅದೇನೆಂದರೆ ಒಂದು ಪಾತ್ರೆಯಲ್ಲಿ ಬಿಸಿ ನೀರು ತೆಗೆದುಕೊಂಡು ಅದಕ್ಕೆ ಎರಡು ಸ್ಪೂನ್ ವಾಷಿಂಗ್ ಪೌಡರ್ ಹಾಕಿ, ಒಂದು ಚಮಚ ಅಡುಗೆ ಉಪ್ಪನ್ನು ಹಾಕಿ ಈಗ ಇದರಲ್ಲಿ ಅರ್ಧ ಭಾಗವನ್ನು ಸಿಂಕಿನ ಹೋಲ್ ಬಳಿ ಹಾಕಿ ಇನ್ನುಳಿದ ಅರ್ಧ ಭಾಗವನ್ನು ಸಿಂಕಿನ ಕೆಳಗಡೆ ಪೈಪ್ ಹೋಗುವಲ್ಲಿ ಹೋಲ್ ಇರುತ್ತದೆ ಅಲ್ಲಿ ಹಾಕಿ. ಈ ರೀತಿ ಮಾಡಿಕೊಂಡಾಗ ಅಲ್ಲಿ ಯಾವುದೇ ಪದಾರ್ಥಗಳು ಕಟ್ಟಿಕೊಂಡಿದ್ದರು ಕೂಡ ಅದು ಕೊಚ್ಚಿ ಹೋಗುತ್ತದೆ. 15 ದಿನಗಳೊಮ್ಮೆ ಈ ಉಪಾಯ ಮಾಡಿದರೆ ನಿಮ್ಮ ಅಡುಗೆಮನೆ ಸಿಂಕ್ ಎಂದು ಕೂಡ ಕಟ್ಟಿಕೊಳ್ಳುವುದಿಲ್ಲ.

ಹಣದ ಅವಶ್ಯಕತೆ ಬಹಳ ಇದ್ದಾಗ ಈ ಮಂತ್ರ ಪಠಿಸಿ ಸಾಕು, ಧನಪ್ರಾಪ್ತಿ ಮಾಡುವಂತಹ ವಿಶೇಷವಾದ ಮಂತ್ರ ಇದು.

 

ಪ್ರತಿಯೊಬ್ಬರಿಗೂ ಕೂಡ ಅವರ ಜೀವನದಲ್ಲಿ ಹೆಚ್ಚು ಹಣ ಹೊಂದಬೇಕು ಶ್ರೀಮಂತಿಕೆ ಪಡೆಯಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಯಾವುದೇ ಬಿಸಿನೆಸ್ ಆಗಲಿ, ಉದ್ಯೋಗವೇ ಆಗಲಿ ಅದರ ಮುಖ್ಯ ಉದ್ದೇಶ ಹಣ ಗಳಿಕೆಯೇ ಆಗಿದೆ. ಗಳಿಕೆ ಹಾಗಿರುವ ಹಣವನ್ನು ಉಳಿಸಿಕೊಳ್ಳುವುದು ಅಥವಾ ಇನ್ನಷ್ಟು ವೃದ್ಧಿಯಾಗುವಂತೆ ಮಾಡುವುದು ಅದಕ್ಕಾಗಿ ಇನ್ನಷ್ಟು ಆದಾಯ ಮೂಲಗಳನ್ನು ಹುಡುಕುವುದು ಮನುಷ್ಯನ ಸಹಜ ಗುಣ.

ಇದಕ್ಕಾಗಿ ಆತ ಕಷ್ಟಪಟ್ಟು ಹಗಲುರಾತ್ರಿ ಶ್ರಮ ಹಾಕಿ ದುಡಿಯುವುದು ಮಾತ್ರವಲ್ಲದೆ ಪೂಜೆ ಪುನಸ್ಕಾರಗಳನ್ನು ಮಾಡಿ ದೇವರ ಮೊರೆ ಹೋಗುತ್ತಾನೆ. ನಮ್ಮ ದೇಶದಲ್ಲಿ ಹಣವನ್ನು ಲಕ್ಷ್ಮಿಗೆ ಹೋಲಿಸಲಾಗಿದೆ. ಹಣದ ದೇವತೆ ಆಗಿರುವ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇದ್ದವರು ಶ್ರೀಮಂತರಾಗಿರುತ್ತಾರೆ ಅವರ ಜೀವನದಲ್ಲಿ ಏನು ಕೊರತೆ ಇರುವುದಿಲ್ಲ ಎನ್ನುವುದನ್ನು ನಂಬಿಕೊಂಡು ಬರಲಾಗಿದೆ.

ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವುದಕ್ಕಾಗಿ ವ್ರತಗಳನ್ನು ಮಾಡುತ್ತಾರೆ, ಅದ್ದೂರಿಯಾಗಿ ಪೂಜೆ ಪುನಸ್ಕಾರ ಮಾಡಿ ಮಹಾಲಕ್ಷ್ಮಿಯು ಪ್ರಸನ್ನಳಾಗುವಂತೆ ಮಾಡುತ್ತಾರೆ. ಈ ರೀತಿ ಮಹಾಲಕ್ಷ್ಮಿಗೆ ಇಷ್ಟವಾದ ವಸ್ತುಗಳಿಂದ ಅಲಂಕರಿಸಿ ಇಷ್ಟವಾದ ನೈವೇದ್ಯಗಳನ್ನು ಮಾಡಿ, ಮಡಿ ಉಟ್ಟು ಭಕ್ತಿಯಿಂದ ಧ್ಯಾನದಿಂದ ಪ್ರಾರ್ಥಿಸಿದರೆ ಆಗ ಲಕ್ಷ್ಮಿ ದೇವಿ ತೃಪ್ತರಾಗಿ ಅವರು ಜೀವನ ಪರ್ಯಂತ ಶ್ರೀಮಂತರಾಗಿ ಬದುಕುವಂತೆ ಆಶೀರ್ವಾದ ಮಾಡುತ್ತಾರೆ ಎಂದು ಜನರ ನಂಬುತ್ತಾರೆ.

ಇದು ಜನ ಸಾಮಾನ್ಯರ ನಂಬಿಕೆ ಮಾತ್ರ ಅಲ್ಲದೆ ಪುರಾಣಗಳಲ್ಲೂ ಕೂಡ ಈ ಬಗ್ಗೆ ಉಲ್ಲೇಖ ಇದೆ. ನಾವು ಅನೇಕ ದಂತ ಕಥೆಗಳಲ್ಲಿ ಈ ರೀತಿ ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಿ ಅವರ ಕಷ್ಟಗಳನ್ನು ಕಳೆದುಕೊಂಡಿರುವ ಉದಾಹರಣೆಗಳ ಉಪಕಥೆಗಳನ್ನು ಕೇಳಬಹುದು. ಅಂದಿನಿಂದ ಇಂದಿನ ಕಲಿಗಾಲದಲ್ಲೂ ಸಹ ಪೂಜೆ ಪುರಸ್ಕಾರ ಮಾಡಿ, ವೃತ ಮತ್ತು ಆಚರಣೆಗಳನ್ನು ಮಾಡಿ ಮುತ್ತು ಮಂತ್ರಗಳನ್ನು ಪಠಿಸಿ, ದೇವರನ್ನು ಒಲಿಸಿಕೊಳ್ಳುವ ಬಗ್ಗೆ ಇರುವ ನಂಬಿಕೆ ಕಿಂಚಿತ್ತೂ ಕಡಿಮೆ ಆಗಿಲ್ಲ.

ಕಲಿಯುಗದಲ್ಲಿ ಒಂದು ಮಂತ್ರವು ಇಷ್ಟೇ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಕೂಡ ನಿಮಗೆ ಮಹಾಲಕ್ಷ್ಮಿ ಆರಾಧನೆ ಮಾಡಿದ್ದಷ್ಟೇ ಫಲ ದೊರೆಯುತ್ತದೆ. ಇದೊಂದು ವಿಶೇಷವಾದ ಮಂತ್ರ ಆಗಿದೆ. ರಾವಣ ಸಂಹಿತೆಲ್ಲೂ ಕೂಡ ಇದರ ಬಗ್ಗೆ ಉಲ್ಲೇಖ ಇದೆ. ರಾವಣನು ಕಡುಕಷ್ಟದಲ್ಲಿ ಇದ್ದಾಗ ಈ ಮಂತ್ರವನ್ನು ಪಠಿಸಿ ಅತಿ ಶ್ರೀಮಂತನಾದ ಎಂದು ಹೇಳಲಾಗುತ್ತದೆ.

ಜೊತೆಗೆ ಜೀವನದಲ್ಲಿ ಯಾರು ಯಾವುದಕ್ಕೆ ಹೆಚ್ಚು ಹೋರಾಡುತ್ತಿರುತ್ತಾರೆ ಅವರು ಅದನ್ನು ಪಡೆದುಕೊಳ್ಳಬೇಕು ಎಂದರೆ ಈ ಮಂತ್ರವನ್ನು ವಿಧಿ ವಿಧಾನಗಳ ಪ್ರಕಾರ ಪಠಿಸಬೇಕು ಎನ್ನುವ ಮಾತುಗಳು ಇವೆ. ಇಷ್ಟು ಪ್ರಭಾವಶಾಲಿ ಆಗಿರುವ ಈ ಮಂತ್ರ ಯಾವುದು ಎಂದರೆ ಅತಿ ಸರಳವಾದ ಒಂದೇ ಸಾರಿನಲ್ಲಿ ಬರುವ ಮಂತ್ರ ಇದಾಗಿದೆ.

ಓಂ ನಮೋ ವಿಘ್ನ ವಿನಾಶಾಯ ವಿಧಿ ದರ್ಶಿನಾ ಕುರು ಕುರು ಸ್ವಾಹಾ” ಈ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಮಹಾ ಗಣಪತಿ ಹಾಗೂ ತಾಯಿ ಮಹಾಲಕ್ಷ್ಮಿಯ ಸಂಪೂರ್ಣ ಕೃಪಾಕಟಾಕ್ಷ ದೊರೆತು ಕೆಲಸಗಳು ನಿರ್ವಿಘ್ನವಾಗಿ ಸಾಗಿ ಲಾಭ ತಂದುಕೊಡುತ್ತವೆ ಎನ್ನುವುದು ನಂಬಿಕೆ. ಈ ಮಂತ್ರವನ್ನು ದಿನಕ್ಕೆ ಸಾಧ್ಯವಾದರೆ ಹತ್ತು ಸಾವಿರ ಬಾರಿ ಪಠಿಸಬೇಕು. ಹೀಗೆ ಪಠಿಸಿದಾಗ ಇದು ನಿಮಗೆ ಸಿದ್ಧಿ ಆಗುತ್ತದೆ. ಪ್ರತಿದಿನವೂ ಕೂಡ ನಿಮಗೆ ಸಾಧ್ಯವಾದರೆ ಈ ಮಂತ್ರವನ್ನು ಪಠಿಸಿ ಅಥವಾ ಜೀವನದಲ್ಲಿ ತುಂಬಾ ಕಷ್ಟ ಇರುವ ಸಂದರ್ಭದಲ್ಲಿ ಇದನ್ನು ಪಠಿಸಿ ಸಮಸ್ಯೆಯಿಂದ ಹೊರಬನ್ನಿ. ಈ ಉಪಯುಕ್ತ ಮಾಹಿತಿ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಮಾಹಿತಿ ಹಂಚಿಕೊಳ್ಳಿ.

ಭಕ್ತರಿಗೆ ಬಂಗಾರದ ಬಿಸ್ಕೆಟ್ ನೀಡುವ ಏಕೈಕ ದೇವಸ್ಥಾನ ಇದು. ಈ ದೇವಸ್ಥಾನಕ್ಕೆ ಹೋದ ಭಕ್ತರ ಸಂಕಷ್ಟ ನಿವಾರಣೆ ಆಗುವುದು 100% ಸತ್ಯ.

ಸಾಮಾನ್ಯವಾಗಿ ಭಕ್ತರುಗಳು ದೇವಸ್ಥಾನಕ್ಕೆ ಹೋದಾಗ ದೇವರಿಗೆ ತಮ್ಮ ಕೈಲಾದಷ್ಟು ಹಣ ಕಾಣಿಕೆಯಾಗಿ ಹಾಕುತ್ತಾರೆ. ವಿಶೇಷ ಹರಕೆ ಹೊತ್ತಿದ್ದರೆ ಚಿನ್ನ ಮತ್ತು ಬೆಳ್ಳಿಯನ್ನು ಅರ್ಪಿಸುತ್ತಾರೆ. ಆದರೆ ಪ್ರಪಂಚದಲ್ಲಿ ಒಂದು ದೇವಸ್ಥಾನದಲ್ಲಿ ಮಾತ್ರ ಭಕ್ತರಿಗೆ ಚಿನ್ನದ ಬಿಸ್ಕೆಟ್ ಅನ್ನು ಕೊಡಲಾಗುತ್ತದೆ ಇಂತಹ ಒಂದು ದೇವಸ್ಥಾನ ಹಾಗೂ ಆಚರಣೆ ನಿಜವಾಗಲೂ ಭೂಮಿ ಮೇಲೆ ಇದೆಯಾ ಎನ್ನುವ ಆಶ್ಚರ್ಯ ಉಂಟಾದರೂ ಈ ರೀತಿ ಇರುವುದು ಖಂಡಿತ ಸತ್ಯ.

ಯಾಕೆಂದರೆ ಜಪಾನ್ ದೇಶದ ದೇವಸ್ಥಾನ ಒಂದರಲ್ಲಿ ಇಂತಹ ಆಚರಣೆ ಇದೆ. ಈ ದೇವಸ್ಥಾನದ ಬಗ್ಗೆ ಮತ್ತು ಇಲ್ಲಿರುವ ಆಚರಣೆ ಬಗ್ಗೆ ಹಾಗೂ ಬಂಗಾರದ ಬಿಸ್ಕೆಟ್ ಅನ್ನು ಉಡುಗೊರೆಯಾಗಿ ಕೊಡುವ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಿಮಗೂ ಸಹ ಈ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ಈ ಅಂಕಣವನ್ನು ಪೂರ್ತಿಯಾಗಿ ಓದಿ.

ಜಪಾನ್ ದೇಶದ ದೇವರುಗಳಿಗೂ ಹಾಗೂ ಭಾರತ ದೇಶ ದೇವರುಗಳು ಸಾಕಷ್ಟು ಸಾಮ್ಯತೆ ಇದೆ ಎನ್ನುವ ಬಗ್ಗೆ ನಾವು ಕೇಳಿದ್ದೇವೆ. ಜೊತೆಗೆ ನಮ್ಮ ಪುರಾಣಗಳಿಗೂ ಅವರ ಧರ್ಮ ಗ್ರಂಥಗಳಿಗೂ ಸಹ ಹೋಲಿಕೆ ಇದೆ. ನಾವು ಪೂಜಿಸುವ ಸೂರ್ಯದೇವನನ್ನು ಅಲ್ಲಿ ಅಮಾರ್ತಸು ಎಂದು ಕರೆಯುತ್ತಾರೆ. ಜಪಾನ್ ದೇಶದ ಕಿಂಕಾಕು-ಜಿ ಎನ್ನುವ ದೇವಸ್ಥಾನವು ಸಾಕಷ್ಟು ವಿಷಯಗಳಿಂದ ಪ್ರಸಿದ್ಧಿ ಆಗಿದೆ. ಸುಮಾರು 5000 ವರ್ಷಗಳ ಹಿಂದಿಗೆ ಈ ಹೆಸರಿನಲ್ಲಿ ಸೂರ್ಯನ ದೇವಸ್ಥಾನವನ್ನು ಸ್ಥಾಪಿಸಲಾಗಿದೆ.

ಈ ದೇವಸ್ಥಾನ ನಿರ್ಮಾಣ ಮಾಡುವುದಕ್ಕೆ 500 ವರ್ಷಗಳು ಆಯಿತು ಎಂದು ಕಥೆಗಳಲ್ಲಿ ಹೇಳಲಾಗಿದೆ. ಈ ದೇವಸ್ಥಾನವನ್ನು ಬಂಗಾರದ ಲೇಪನಗಳಿಂದ ಅಲ್ಲದೆ ಪೂರ್ತಿ ಬಂಗಾರದಿಂದಲೇ ನಿರ್ಮಿಸಲಾಗಿದೆ ಎನ್ನುವುದು ಕೂಡ ಈ ದೇವಸ್ಥಾನದ ಮತ್ತೊಂದು ವಿಶೇಷತೆ. ಈ ದೇವಸ್ಥಾನವು ಅನೇಕ ಬಾರಿ ಭೂಕಂಪಕ್ಕೆ ಸಿಲುಕಿದೆ ಜಪಾನ್ ದೇಶದಲ್ಲಿ ಭೂಕಂಪ ಎನ್ನುವುದು ಹೊಸದೇನಲ್ಲ ಆದರೂ ಕೂಡ ಪ್ರತಿ ಬಾರಿ ಇದನ್ನು ಮತ್ತೆ ನಿರ್ಮಾಣ ಮಾಡಲಾಗಿದೆ.

ಇದುವರೆಗೆ ಸುಮಾರು 23 ಬಾರಿ ಈ ದೇವಸ್ಥಾನವನ್ನು ಮತ್ತೆ ಸ್ಥಾಪಿಸಲಾಗಿದ್ದು, ಈಗಲೂ ಸಹ ಚಿನ್ನದಿಂದಲೇ ಇದು ಸ್ಥಾಪಿತವಾಗಿದೆ. ಜೊತೆಗೆ ಚಿನ್ನದ ವಿಚಾರದಲ್ಲಿ ಈ ದೇವಸ್ಥಾನದ ಬಗ್ಗೆ ಇರುವ ಮತ್ತೊಂದು ಪ್ರಮುಖವಾದ ವಿಷಯ ಏನೆಂದರೆ ಇಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಚಿನ್ನದ ಉಡುಗೊರೆಯನ್ನು ಭಕ್ತಾದಿಗಳಿಗೆ ನೀಡುತ್ತಾರೆ ಎನ್ನುವುದು. ಈ ದೇವಾಲಯದಲ್ಲಿ ಏಳು ವರ್ಷಗಳಿಗೊಮ್ಮೆ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ, ಈ ಜಾತ್ರೆಯನ್ನು ಒಂದು ರೀತಿಯಲ್ಲಿ ಜಪಾನ್ ದೇಶದ ಹಬ್ಬ ಎಂದು ಹೇಳಬಹುದು.

ಯಾಕೆಂದರೆ 12 ಕೋಟಿ ಜನಸಂಖ್ಯೆ ಇರುವ ಜಪಾನ್ ದೇಶದಲ್ಲಿ ಅಷ್ಟು ಜನರು ಕೂಡ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. 10 ದಿನಗಳ ವರೆಗೆ ನಡೆಯುವ ಈ ಜಾತ್ರೆಗೆ 10 ದಿನಗಳು ಕೂಡ ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಶಾಲಾ ಕಾಲೇಜುಗಳಿಗೂ ರಜೆ ಕೊಡಲಾಗುತ್ತದೆ. ಜಪಾನ್ ದೇಶದವರು ಬೊಂಬೆಗಳ ವೇಷ ಹಾಕಿಕೊಂಡು ಹಬ್ಬದನ್ನು ಎಂಜಾಯ್ ಮಾಡುತ್ತಾರೆ.

ಈ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಒಂದು ಚೀಟಿಯಲ್ಲಿ ಅವರ ವಿವರಗಳನ್ನು ಬರೆದು ಹಾಕಬೇಕು ಈ ರೀತಿ ಬರೆದು ಹಾಕಿದ 5000 ಮಂದಿಗೆ 150 ಗ್ರಾಂ ಬೆಲೆ ಬಾಳುವ ಚಿನ್ನದ ಬಿಸ್ಕೆಟ್ ಗಳನ್ನು ಉಡುಗೊರೆಯಾಗಿ ಕೊಡುತ್ತಾರೆ. ಹಬ್ಬದ ಕೊನೆಗೆ ದಿನ ಅಂದರೆ ಹತ್ತನೇ ದಿನ ಇದನ್ನು ಅನೌನ್ಸ್ ಮಾಡಲಾಗುತ್ತದೆ ಉಡುಗೊರೆ ತೆಗೆದುಕೊಳ್ಳಲು ಅವರಿಲ್ಲದ ಪಕ್ಷದಲ್ಲಿ ಅವರ ವಿಳಾಸಕ್ಕೆ ಕೊರಿಯರ್ ಮೂಲಕ ಕಳುಹಿಸಿ ಕೊಡಲಾಗುತ್ತದೆ. ಜಪಾನ್ ನಲ್ಲಿ 150 ಗ್ರಾಂ ಚಿನ್ನದ ಬಿಸ್ಕೆಟ್ ಬೆಲೆ 6 ಲಕ್ಷಕ್ಕಿಂತ ಅಧಿಕ ಆದರೆ ನಮ್ಮ ಭಾರತ ದೇಶದ ಚಿನ್ನದ ಬೆಲೆ ಪ್ರಕಾರ ಇದರ ಮೌಲ್ಯ ಒಂಬತ್ತು ಲಕ್ಷವನ್ನು ದಾಟುತ್ತದೆ. ಈ ರೀತಿ ಅಚ್ಚರಿಯ ಆಚರಣೆ ಬಗ್ಗೆ ನಿಮ್ಮ ಅಭಿಪ್ರಾಯ ಎನ್ನುವುದನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ.? ಪ್ರತಿಯೊಬ್ಬ ಮಹಿಳೆಯು ತಪ್ಪದೆ ತಿಳಿದುಕೊಳ್ಳ ಬೇಕಾದ ಮಾಹಿತಿ ಇದು.!

 

ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ಅಲ್ಲಿ ಕಳಶ ಪ್ರತಿಷ್ಠಾಪಿಸುತ್ತಾರೆ. ಮನೆಗಳಲ್ಲೂ ಕೂಡ ಕಳಸ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ತಮ್ಮ ತಮ್ಮ ಮನೆ ದೇವರ ಹೆಸರನ್ನು ಹೇಳಿ ಅಥವಾ ಮಹಾಲಕ್ಷ್ಮಿಯ ಸ್ವರೂಪ ಎಂದು ಅಥವಾ ತಾಯಿ ಗೌರಿಯ ಸಂಕೇತ ಎಂದು ಮನೆಯಲ್ಲಿ ಕಳಶಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ರೀತಿ ಕಳಶವು ದೇಶರ ಮನೆಯಲ್ಲಿದ್ದರೆ ಸಾಕ್ಷಾತ್ ತಾಯಿಯೇ ಮನೆಯಲ್ಲಿ ನೆಲೆಸಿದ್ದಾಳೆ ಎನ್ನುವ ಭಾವ. ಆ ನಂಬಿಕೆಯೊಂದಿಗೆ ಪೂಜೆ ಮಾಡಲಾಗುತ್ತದೆ.

ದೇವರ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಈ ಕಳಶವು ಇಡಿ ಮನೆಯ ಏಳಿಗೆಯ ಸಂಕೇತ ಆಗಿರುತ್ತದೆ. ಕಳಶ ಪ್ರತಿಷ್ಠಾಪನೆ ಮಾಡುವುದಕ್ಕೆ ಕಟ್ಟುನಿಟ್ಟಾದ ವಿಧಿವಿಧಾನಗಳು ಇದ್ದು ಆ ಪ್ರಕಾರವಾಗಿ ನಡೆಕೊಂಡುಕೊಂಡಾಗ ಮಾತ್ರ ಆ ಮನೆಗೆ ಶ್ರೇಯಸ್ಸು ಲಭಿಸುತ್ತದೆ. ಕಳಶ ಪ್ರತಿಷ್ಠಾಪನೆ ಮಾಡಿದ ಮೇಲೆ ಅದನ್ನು ವಾರಕೊಮ್ಮೆ ಅವರ ಅನುಕೂಲತೆ ಅಂತೆ ಬದಲಾಯಿಸುತ್ತಾರೆ.

ಒಮ್ಮೆ ಪ್ರತಿಷ್ಠಾಪನೆ ಮಾಡಿದ ಮೇಲೆ ಪ್ರತಿ ದಿನವೂ ಕೂಡ ಅದಕ್ಕೆ ಹೂವಿನಿಂದ ಅಲಂಕರಿಸಿ ಮುಂದೆ ದೀಪಗಳನ್ನು ಇಟ್ಟು ಭಕ್ತಿಯಿಂದ ಪೂಜಿಸುತ್ತಾರೆ. ಸಾಮಾನ್ಯವಾಗಿ ಕಳಸಕ್ಕೆ ಕೆಳಗೆ ಒಂದು ತಟ್ಟೆಯಲ್ಲಿ ಅಕ್ಕಿ ಮತ್ತು ಅದರ ಮೇಲೆ ಒಂದು ತಾಮ್ರದ ಅಥವಾ ಬೆಳ್ಳಿಯ ಅಥವಾ ಹಿತ್ತಾಳೆಯ ಚೊಂಬಿನಲ್ಲಿ ನೀರು ತುಂಬಿ ಅದಕ್ಕೆ ವೀಳ್ಯದೆಲೆ ಅಥವಾ ಮಾವಿನ ಎಲೆಗಳನ್ನು ಹಾಕಿ ಒಂದು ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಅರಿಶಿನ ಕುಂಕುಮ ಹೂ ಅಕ್ಷತೆಗಳಿಂದ ಅಲಂಕರಿಸಲಾಗುತ್ತದೆ.

ಈ ರೀತಿ ಕಳಶಕ್ಕೆ ಇಡುವ ಪ್ರತಿಯೊಂದು ವಸ್ತುವೂ ಕೂಡ ಪವಿತ್ರವಾಗಿದೆಯೇ ಎಂದು ನೋಡಿ ಮಡಿಯಿಂದ ಅದನ್ನು ಇಡಲಾಗುತ್ತದೆ. ಕಳಶಕ್ಕೆ ಇಡುವ ನೀರಿನಿಂದ ಹಿಡಿದು ಬಳಸುವ ಎಲೆಯ ತನಕವೂ ಕೂಡ ಅದು ಒಡೆದಿಡಬಾರದು ನೀರು ಮಡಿಯಾಗಿರಬೇಕು, ಶುದ್ಧವಾಗಿರಬೇಕು ಎಂದೆಲ್ಲ ಮುಂಜಾಗ್ರತೆಯನ್ನು ತೆಗೆದುಕೊಳ್ಳಲಾಗುತ್ತದೆ.

ಈ ರೀತಿ ಎಷ್ಟು ಅಚ್ಚುಕಟ್ಟಾಗಿ ಹಾಗೂ ಭಯ ಭಕ್ತಿಗಳಿಂದ ಪೂಜಿಸುತ್ತೇವೋ ಅಷ್ಟೇ ಪ್ರಕಾರವಾದ ಆಶೀರ್ವಾದ ನಮಗೆ ಸಿದ್ದಿ ಆಗುತ್ತದೆ. ಜೊತೆಗೆ ಮನೆಯಲ್ಲಿರುವ ಕಳಶವೇ ಶಕುನಗಳನ್ನು ಹೇಳುತ್ತದೆ ಎನ್ನುವುದನ್ನು ನಾವು ನಂಬಲೇಬೇಕು. ಯಾಕೆಂದರೆ ಕಳಸದ ಕಾಯಿಯನ್ನು ನೋಡಿಯೇ ಅದನ್ನು ನಿರ್ಧರಿಸಬಹುದು. ಸಾಮಾನ್ಯವಾಗಿ ಮನೆಗಳಲ್ಲಿ ಕಳಸದ ಕಾಯಿಯನ್ನು ಇಟ್ಟಾಗ ಕೆಲವೊಮ್ಮೆ ಅದು ಮೊಳಕೆ ಬಂದಿರುತ್ತದೆ.

ಈ ರೀತಿ ಆದಾಗ ಅಥವಾ ಅದರಲ್ಲಿ ಬಿರುಕು ಮೂಡಿದಾಗ ಜನರು ಗೊಂದಲಕ್ಕೆ ಒಳಾಗುತ್ತಾರೆ ಅದು ಶುಭಸೂಚಕವೋ ಅಥವಾ ಅಶುಭವೋ ಎನ್ನುವುದನ್ನು ತಿಳಿದುಕೊಳ್ಳದೆ ಒದ್ದಾಡುತ್ತಾರೆ. ಅದಕ್ಕಾಗಿ ಈ ಅಂಕಣದಲ್ಲಿ ಅದರ ಬಗ್ಗೆ ಮಾಹಿತಿ ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಮನೆಯಲ್ಲಿ ಕಳಸಕ್ಕೆ ಇಟ್ಟಿರುವ ಕಾಯಿ ಮೊಳಕೆ ಹೊಡೆದರೆ ನೀವು ಭಯಪಡಬೇಕಿಲ್ಲ ಅದರ ಬಗ್ಗೆ ಯಾವುದೇ ಆತಂಕವು ಬೇಕಿಲ್ಲ.

ಯಾಕೆಂದರೆ ಅದು ಮನೆ ಅಭಿವೃದ್ಧಿಯ ಸಂಕೇತವಾಗಿರುತ್ತದೆ. ಕಳಶದ ಕೈ ಮೊಳಕೆ ಹೊಡೆದಂತೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಆಯಸ್ಸು ಆರೋಗ್ಯವೂ ಕೂಡ ಸಮೃದ್ಧಿಯಾಗುತ್ತದೆ ಎನ್ನುವುದರ ಸಂಕೇತ ಅದಾಗಿರುತ್ತದೆ. ಇದನ್ನು ತೆಗೆದ ನಂತರ ಆ ಕಾಯಿಯನ್ನು ನಿಮ್ಮ ಮನೆ ಹಿತ್ತಲಲ್ಲಿ ಅಥವಾ ಜಮೀನಿನಲ್ಲಿ ನೆಟ್ಟು ಬೆಳೆಸಲು ಪ್ರಯತ್ನಿಸಬೇಕು ಸಾಧ್ಯವಾಗದೆ ಇದ್ದವರು ಯಾವುದಾದರೂ ದೇವಸ್ಥಾನಕ್ಕಾದರೂ ಕೊಡಬೇಕು. ಒಂದು ವೇಳೆ ಕಾಯಿ ಬಿರುಕು ಬಿಟ್ಟಿದ್ದರೆ ಆಗಲು ಸಹ ಆತಂಕ ಪಡುವ ಅಗತ್ಯ ಇಲ್ಲಹ ಯಾಕೆಂದರೆ ಮನೆಯ ವಾತಾವರಣದ ಕಾರಣ ಅದು ಆ ರೀತಿ ಆಗಿರುತ್ತದೆ. ಬೇರೆ ದಿನಗಳಲ್ಲಿ ತೆಂಗಿನಕಾಯಿಯನ್ನು ಬದಲಾಯಿಸಲು ತೆಗೆದಾಗ ತೆಗೆದ ಆ ತೆಂಗಿನಕಾಯಿಯಿಂದ ಸಿಹಿ ಪದಾರ್ಥಗಳನ್ನು ಮಾಡಿ ಮನೆಮಂದಿಗೆಲ್ಲಾ ಬಡಿಸಿದರೆ ಒಳ್ಳೆಯದು.

 

ಭಕ್ತರ ಬೇಡಿಕೆ ಕೇಳಿ ಕಣ್ಣೀರು ಸುರಿಸುವ ಆಂಜನೇಯ ದೇವಸ್ಥಾನ ಈ ದೇವಾಲಯದಲ್ಲಿ ಏನೇ ಬೇಡಿಕೊಂಡ್ರು ನೆರವೇರುತ್ತದೆ.

ಬೆಂಗಳೂರು ನಗರದಲ್ಲಿ ಸುಮಾರು 1000ಕ್ಕೂ ಹೆಚ್ಚು ದೇವಾಲಯಗಳಿವೆ. ಬೆಂಗಳೂರಿನಲ್ಲಿ ಶಿವ ಪಾರ್ವತಿ, ವಿಷ್ಣು, ವೆಂಕಟೇಶ್ವರ, ಅಣ್ಣಮ್ಮ ಈ ರೀತಿ ಶಕ್ತಿ ದೇವತೆಗಳಿಂದ ಹಿಡಿದು ಗಣಪತಿ, ನವಗ್ರಹಗಳು ರಾಮ ಸೀತ ಆಂಜನೇಯ ದೇವರ ದೇವಸ್ಥಾನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಬೆಂಗಳೂರಿನಲ್ಲಿರುವ ಒಟ್ಟು ದೇವಾಲಯಗಳಲ್ಲಿ 200 ಹೆಚ್ಚು ಆಂಜನೇಯ ದೇವಾಲಯಗಳೇ ಇವೆ.

ಒಂದೊಂದು ದೇವಾಲಯಗಳು ಕೂಡ ಒಂದೊಂದು ರೀತಿಯ ವಿಶೇಷವನ್ನು ಹೊಂದಿದ್ದು ಬಾಣಸವಾಡಿಯಲ್ಲಿರುವ ದೇವಾಲಯವು ತೆಂಗಿನ ಕಾಯಿ ಆಂಜನೇಯ ದೇವಸ್ಥಾನ ಎಂದು ಹೆಸರು ಪಡೆದಿದೆ. ಮೆಜೆಸ್ಟಿಕ್ ಇಂದ 12 ಕಿಲೋಮೀಟರ್ ಅಂತರದಲ್ಲಿರುವ ಬಾಣಸವಾಡಿಯ BBMP ಕಚೇರಿ ಪಕ್ಕ ಈ ದೇವಾಲಯ ಇದೆ. ಇಲ್ಲಿ ನಡೆಯುವ ಒಂದು ವಿಶೇಷ ಪವಾಡದ ಕಾರಣ ಈ ದೇವಾಲಯವನ್ನು ತೆಂಗಿನಕಾಯಿ ಆಂಜನೇಯ ದೇವಾಲಯ ಎಂದು ಕರೆಯುತ್ತಾರೆ.

ಈ ದೇವಸ್ಥಾನವು ಸುಮಾರು 600 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ದೇವಸ್ಥಾನದಲ್ಲಿರುವ ವಿಗ್ರಹ ಸಾಲಿಗ್ರಾಮದಾಗಿದ್ದು ಆಂಜನೇಯನ ಕೂದಲಿನಿಂದ ಆದ ದೇವಸ್ಥಾನ ಇದು ಎಂದು ಪ್ರತೀತಿ ಇದೆ. ರಾಮಾಯಣ ಕಾಲಘಟ್ಟದಲ್ಲಿ ರಾಮ ಸೀತೆ ಲಕ್ಷ್ಮಣ ಮೂರು ಜನರು ಕೂಡ ಈ ದೇವಸ್ಥಾನದ ಜಾಗದಲ್ಲಿ ಸಮಯ ಕಳೆದಿದ್ದರು ಆಗ ಅಲ್ಲಿ ಆಂಜನೇಯನ ಬಾಲದಿಂದ ಒಂದು ಕೂದಲು ಉದುರುತ್ತದೆ.

ನಂತರದ ಸಮಯದಲ್ಲಿ ಇಲ್ಲೇ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಜನ ಮಾತನಾಡುತ್ತಾರೆ. ಪ್ರತಿದಿನವೂ ಕೂಡ ಈ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುತ್ತಾರೆ ಬೆಳಗ್ಗೆ 7:30 ರಿಂದ 12:30 ಹಾಗೂ ಸಂಜೆ 5:30 ರಿಂದ 8:00ವರೆವರೆಗೆ ಈ ದೇವಸ್ಥಾನವು ಓಪನ್ ಇರುತ್ತದೆ. ಈ ದೇವಸ್ಥಾನಕ್ಕೆ ಸ್ಥಳೀಯರು ಮಾತ್ರವಲ್ಲದೇ ವಿದೇಶಿಗರು ಕೂಡ ಭೇಟಿ ಕೊಡುತ್ತಾರೆ.

ಈ ದೇವಸ್ಥಾನದ ವಿಶೇಷತೆ ಈ ರೀತಿ ಬೇರೆ ದೇಶದವರು ಕೂಡ ಆಕರ್ಷಿತರಾಗುವುದಕ್ಕೆ ಕಾರಣವಾಗಿದೆ. ದೇವಸ್ಥಾನದಲ್ಲಿ ನಡೆಯುವ ಒಂದು ಪವಾಡದ ಬಗ್ಗೆ ಅಮೆರಿಕದ ಸುದ್ದಿ ಸೆಂಟ್ರಲ್ ಎನ್ನುವ ಸುದ್ದಿ ಮಾಧ್ಯಮ ಕೂಡ ವರದಿಯನ್ನು ಪ್ರಸಾರ ಮಾಡಿದೆ. ಈ ದೇವಸ್ಥಾನದಲ್ಲಿ ತೆಂಗಿನಕಾಯಿ ಆಂಜನೇಯ ದೇವಸ್ಥಾನ ಎಂದು ಹೆಸರು ಬರಲು ಕಾರಣ ಏನೆಂದರೆ, ಭಕ್ತಾದಿಗಳು ಇಲ್ಲಿಗೆ ಬಂದು ಆಂಜನೇಯನನ್ನು ಪ್ರಾರ್ಥಿಸಿ ಮೂರು ಪ್ರದಕ್ಷಿಣೆ ಹಾಕಿ ದರ್ಶನ ಮಾಡಿ ಕುಳಿತುಕೊಂಡು ಧ್ಯಾನ ಮಾಡಿದರೆ ತೆಂಗಿನಕಾಯಿ ಹೊಡೆಯುವ ಶಬ್ದ ಕೇಳಿಸುತ್ತದೆ ಇದು ನಮ್ಮನ್ನು ರೋಮಾಂಚನ ಮಾಡಿಬಿಡುತ್ತದೆ.

ಈ ರೀತಿ ಆದರೆ ನೀವು ಅಂದುಕೊಳ್ಳುತ್ತಿರುವ ಕೆಲಸ ಆಗುತ್ತದೆ ಎಂದು ಅರ್ಥ. ಒಂದು ವೇಳೆ ಶಬ್ದ ಕೇಳಿಸದಿದ್ದರೆ ಆ ಕೆಲಸ ನಡೆಯುವುದಿಲ್ಲ ಎಂದು ಅರ್ಥ. ಈ ಒಂದು ಅನುಭವವನ್ನು ಇದುವರೆಗೆ ಲಕ್ಷಾಂತರ ಭಕ್ತಾದಿಗಳು ಪಡೆರುವುದರಿಂದ ದಿನೇ ದಿನೇ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ದೇವಸ್ಥಾನದಲ್ಲಿ ಮತ್ತೊಂದು ವಿಶೇಷತೆ ನಡೆಯುತ್ತದೆ. ಏನೆಂದರೆ ಆಂಜನೇಯನ ವಿಗ್ರಹದಲ್ಲಿ ಕಣ್ಣೀರು ಬರುತ್ತದೆ. ಆದರೆ ಇದು ಕಣ್ಣೀರಲ್ಲ ಆನಂದ ಬಾಷ್ಪ ಎಂದು ಆ ನೀರು ಗಂಗಾ ನದಿಯ ನೀರು ಇರಬಹುದು ಎಂದು ಹೇಳುತ್ತಾರೆ.

ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯುವ ಹನುಮ ಜಯಂತಿ ಸಮಯದಲ್ಲಿ ಮಾತ್ರ ಈ ರೀತಿ ಹನುಮನ ವಿಗ್ರಹದಿಂದ ಕಣ್ಣೀರು ಬರುತ್ತದೆ ಈ ಒಂದು ಪವಾಡವನ್ನು ನೋಡಿ ತುಂಬಿ ಕಣ್ತುಂಬಿಕೊಳ್ಳಲು ವಿದೇಶಿಗರು ಕೂಡ ಆ ಸಮಯದಲ್ಲಿ ದೇವಸ್ಥಾನಕ್ಕೆ ಬರುತ್ತಾರೆ. ನೀವು ಸಹ ಬೆಂಗಳೂರಿನವರಾಗಿದ್ದರೆ ಅಥವಾ ಕರ್ನಾಟಕದ ಯಾವುದೇ ಭಾಗದವರಾಗಿದ್ದರು ಜೀವಮಾನದಲ್ಲಿ ಒಮ್ಮೆಯಾದರೂ ಈ ದೇವಸ್ಥಾನಕ್ಕೆ ಭೇಟಿ ಕೊಡಿ.

ಪೋಷಕರ ಗಮನಕ್ಕೆ, ಹೀಗೆ ಹೆಸರಿಟ್ಟು ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಮಕ್ಕಳಿಗೆ ಹೆಸರಿಡುವ ಮುನ್ನ ಈ ಮಾಹಿತಿಯನ್ನು ಒಮ್ಮೆ ನೋಡಿ.

ಹುಟ್ಟುವಾಗ ಯಾರಿಗೂ ಹೆಸರಿರುವುದಿಲ್ಲ ಉಸಿರು ಇರುತ್ತದೆ. ಆದರೆ ಉಸಿರು ನಿಂತ ಮೇಲೂ ಕೂಡ ಉಳಿಯುವಂತದ್ದು ಹೆಸರು. ಹಾಗಾಗಿ ಇಡುವ ಹೆಸರು ಶ್ರೇಷ್ಠವಾಗಿರಬೇಕು, ಆ ಹೆಸರಿನಲ್ಲಿ ಒಂದು ಸ್ಟ್ರೆಂಥ್ ಇರಬೇಕು, ಅದು ಅವರ ಏಳಿಗೆಗೆ ಪೂರಕವಾಗಿರಬೇಕು. ಹಾಗಾಗಿ ನಮ್ಮ ಸಂಸ್ಕೃತಿಯಲ್ಲಿ ಹೆಸರಿಗೆ ವಿಶೇಷವಾದ ಸ್ಥಾನ ಇದೆ. ಹೆಸರು ಇಡುವುದನ್ನು ಕೂಡ ನಾಮಕರಣ ಎನ್ನುವ ಒಂದು ಕಾರ್ಯಕ್ರಮ ಮಾಡಿ ಶಾಸ್ತ್ರೋಕ್ತವಾಗಿ ಇಡಲಾಗುತ್ತದೆ.

ಇದುವರೆಗೂ ಕೂಡ ಎಲ್ಲರೂ ಹೆಸರಿಡುವಾಗ ಮಗು ಹುಟ್ಟಿದ ನಕ್ಷತ್ರ ರಾಶಿ ಇವುಗಳ ಆಧಾರದ ಮೇಲೆ ಹೆಸರು ಇಡುತ್ತಿದ್ದರು. ಇದು ಜನ್ಮನಾಮವಾಗುತ್ತದೆ. ಆದರೆ ಮಗು ಸರ್ವತೋಮುಖವಾಗಿ ಏಳಿಗೆ ಆಗಬೇಕು ಜೀವನದಲ್ಲಿ ಕೀರ್ತಿ ಹೊಂದಬೇಕು ಎಂದರೆ ನ್ಯೂಮರಜಿ ಪ್ರಕಾರ ಹೆಸರಿಡಬೇಕು ಎನ್ನುತ್ತಾರೆ ಸಂಖ್ಯಾಶಾಸ್ತ್ರಜ್ಞರು.

ಸಂಖ್ಯಾಶಾಸ್ತ್ರದಲ್ಲಿ ಮಗು ಹುಟ್ಟಿದ ದಿನಾಂಕ ಬರ್ತ್ ಸಂಖ್ಯೆ ಆದರೆ ದಿನಾಂಕ, ತಿಂಗಳು ವರ್ಷವನ್ನೆಲ್ಲ ಕೂಡಿದಾಗ ಬರುವ ಭಾಗ್ಯ ಸಂಖ್ಯೆಯನ್ನು ಫೇಟ್ ಸಂಖ್ಯೆ ಎನ್ನಲಾಗುತ್ತದೆ. ಇವುಗಳ ಆಧಾರದ ಮೇಲೆ ಆ ಮಗುವಿಗೆ ಒಂದು ಅಲ್ಫಬೆಟ್ ಆರಿಸಿ ಹೆಸರಿಡಲಾಗುತ್ತದೆ. ಈ ರೀತಿ ಇಟ್ಟ ಹೆಸರಿನಿಂದ ಮಕ್ಕಳು ಕೀರ್ತಿ ಹೊಂದುವುದರಲ್ಲಿ ಯಾವುದೇ ಅನುಮಾನ ಇಲ್ಲ ಆದರೆ ಈಗಿನ ಕಾಲದಲ್ಲಿ ತಂದೆ ತಾಯಿಯರು ಫ್ಯಾಷನ್ ಹೆಸರನ್ನು ಇಷ್ಟಪಡುತ್ತಾರೆ.

ಯಾರು ಇಡದ ಹೆಸರನ್ನು ಇಡಬೇಕು ಎಂದು ಅಥವಾ ಯಾರೋ ಇಟ್ಟಿದ್ದ ಹೆಸರು ಚೆನ್ನಾಗಿದೆ ಎನ್ನುವ ಕಾರಣಕ್ಕೆ ಅಥವಾ ಅವರಿಗೆ ಇಷ್ಟವಾದ ಸೆಲೆಬ್ರಿಟಿ ಹೆಸರು ಅಥವಾ ಇನ್ಯಾರೋ ಆ ಹೆಸರಿನಿಂದ ಕೀರ್ತಿ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಹೆಸರುಗಳನ್ನು ಇಡುತ್ತಾರೆ. ಆ ಹೆಸರುಗಳನ್ನು ಇಟ್ಟುಕೊಂಡು ಅವರು ಕೀರ್ತಿ ಹೊಂದಿದ್ದರು ಕೂಡ ಅದು ಅವರುಗಳ ಜನ್ಮ ದಿನಾಂಕ ಕ್ಕೆ ಅಥವಾ ಭಾಗ್ಯ ಸಂಖ್ಯೆಗೆ ಹೊಂದಿಕೊಂಡಿರುವುದು ಕಾರಣ ಇರಬಹುದು ಆದರೆ ಅದೇ ನಿಮ್ಮ ಹುಟ್ಟಿದ ದಿನಾಂಕಕ್ಕೆ ಹೊಂದಾಣಿಕೆ ಆಗುತ್ತದೆ ಎಂದು ಹೇಳಲು ಬರುವುದಿಲ್ಲ.

ಎಲ್ಲರಿಗೂ ಕೂಡ ಟಿ ಮತ್ತು ಪಿ ಅಕ್ಷರಗಳ ಹೆಸರುಗಳು ಆಗಿ ಬರುವುದಿಲ್ಲ. ಸಂಖ್ಯಾಶಾಸ್ತ್ರದಲ್ಲಿ ಸಾಧಕತಾರೆ, ಬಾಧಕ ತಾರೆ, ಕ್ಷೇಮತಾರೆ ಇವುಗಳನ್ನೆಲ್ಲ ಲೆಕ್ಕ ಹಾಕಿ ಹೆಸರನ್ನು ಇಡುವುದರಿಂದ ಅದು ಅವರಿಗೆ ಅದೃಷ್ಟ ತರುತ್ತದೆ ಎಂದು ಹೇಳಲಾಗುತ್ತದೆ ಈ ಅಂಕಣದಲ್ಲಿ ಯಾವ ಹೆಸರುಗಳನ್ನು ಇಡಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಯಾವ ಹೆಸರುಗಳನ್ನು ಇಡಬಾರದು ಎನ್ನುವುದನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಹೆಸರಿನ ಮಧ್ಯ END, WAR, ASH, NIL ಈ ರೀತಿ ಪದಗಳು ಬರುವ ಹೆಸರುಗಳು ಉದಾಹರಣೆಗೆ ಐಶ್ವರ್ಯ ಮಹೇಶ್ವರಿ ಅನಿಲ್ ಸುನಿಲ್ ಆಶಿತಾ ಈ ರೀತಿ ಹೆಸರುಗಳನ್ನು ಯಾವುದೇ ಕಾರಣಕ್ಕೂ ಮಕ್ಕಳಿಗೆ ಇಡಬಾರದು ಮತ್ತು ಸಾತ್ವಿಕ್ ಎಂದು ಕರೆದಾಗ ಅದರಲ್ಲಿ ಮೊದಲಿಗೆ SAT & ಕೊನೆಯಲ್ಲಿ ವೀಕ್ ಎನ್ನುವುದು ಬರುವುದರಿಂದ ಆ ಮಗು ಎಷ್ಟು ಪ್ರಯತ್ನ ಪಟ್ಟರು ಕೂಡ ಅದೃಷ್ಟ ಕೈ ಹಿಡಿಯುವುದಿಲ್ಲ.

ಹಾಗೆಯೇ ಡಿಂಪಲ್ ಎನ್ನುವ ಅಕ್ಷದಲ್ಲಿ ಡಿಮ್ ಎಂದು ಸ್ಟಾರ್ಟ್ ಆಗುವುದರಿಂದ ವಿಕ್ರಂ ಈ ಹೆಸರಿನಲ್ಲೂ ಕೂಡ ವೀಕ್ ಎನ್ನುವುದು ಇರುವುದರಿಂದ ಈ ಹೆಸರುಗಳನ್ನು ಇಡಬಾರದು. ರಾಜಕುಮಾರ್ ರಜನಿಕಾಂತ್ ವಿಷ್ಣುವರ್ಧನ್ ರಮ್ಯಾ ರಕ್ಷಿತಾ ಮುಂತಾದವರು ಹೆಸರನ್ನು ಬದಲಾಯಿಸಿದ ನಂತರವೇ ಜೀವನದಲ್ಲಿ ಬಹುದೊಡ್ಡ ತಿರುವನ್ನು ಪಡೆದುಕೊಂಡಿದ್ದನ್ನು ನಾವು ನೋಡಿದ್ದೇವೆ. ಆದ್ದರಿಂದ ಬಹಳ ಶಕ್ತಿಯುತವಾದ ಹಾಗೂ ಅರ್ಥ ಬದ್ಧವಾದ ಹೆಸರನ್ನು ಇಡಬೇಕು. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ವಿವರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

https://youtu.be/vM3G-HBsKQw

ಸುಬ್ರಹ್ಮಣ್ಯ ಸ್ವಾಮಿಯ ತಲೆ ಮೇಲೆ ವಿಷ ಹಾಕಿದ್ರೂ ಅಮೃತವಾಗುತ್ತದೆ ಈ ದೇವಾಲಯಕ್ಕೆ ಬಂದರೆ ಎಲ್ಲಾ ರೋಗಗಳಿಗೂ ನಿವಾರಣೆ ಸಿಗುತ್ತದೆ.!

ಸುಬ್ರಹ್ಮಣ್ಯ ಸ್ವಾಮಿಯನ್ನು ಸ್ಕಂದ, ಮುರುಗ ಹೀಗೆಲ್ಲಾ ಕರೆಯುತ್ತಾರೆ. ನಾವು ಕರ್ನಾಟಕದಲ್ಲಿ ಸುಬ್ರಮಣ್ಯ ಸ್ವಾಮಿ ಎಂದು ಪೂಜೆ ಮಾಡುವ ದೇವರನ್ನು ತಮಿಳಿಗರು ಮುರುಗ ಎಂದು ಆರಾಧಿಸುತ್ತಾರೆ. ಈ ಶಿವನ ಪುತ್ರನ ಅನೇಕ ದೇವಾಲಯಗಳು ಭಾರತದಲ್ಲಿ ಇವೆ. ಅದರಲ್ಲೂ ದಕ್ಷಿಣದಲ್ಲಿ ಮುರುಗನಿಗೆ ಭಕ್ತರ ಅತೀ ದೊಡ್ಡ ದಂಡೇ ಇದೆ. ನಮ್ಮ ಪಕ್ಕದ ರಾಜ್ಯವಾದ ತಮಿಳನಾಡಿನಲ್ಲಿ ಕೂಡ ಮುರುಗನನ್ನು ವಿಶೇಷವಾಗಿ ಪೂಜಿಸುತ್ತಾರೆ, ಅಲ್ಲಿ ಮನೆ ಮನೆಗಳಲ್ಲೂ ಕೂಡ ಮುರುಗನ ಭಕ್ತರಿದ್ದಾರೆ.

ದೇವಾಲಯಗಳ ತೊಟ್ಟಿಲು ಎಂದು ಕರೆಸಿಕೊಂಡಿರುವ ತಮಿಳುನಾಡಿನಲ್ಲೂ ಕೂಡ ಅನೇಕ ಪುರಾಣ ಪ್ರಸಿದ್ಧ ದೇವಾಲಯಗಳು ಇವೆ. ಅವುಗಳಲ್ಲಿ ಮುರುಗನ ದೇವಾಲಯಗಳು ಕೂಡ ಸೇರಿವೆ. ಇಂತಹದೇ ಒಂದು ಮುರುಗನ ದೇವಸ್ಥಾನದಲ್ಲಿ ವಿಗ್ರಹದ ಮೇಲೆ ಅಭಿಷೇಕ ಮಾಡಿರುವ ನೀರನ್ನು ಸೇವಿಸಿದರೆ ಸಕಲ ಕಾಯಿಲೆಗಳು ಕೂಡ ವಾಸಿ ಆಗುತ್ತವೆ ಎನ್ನುವ ನಂಬಿಕೆ ಇದೆ.

ಈ ದೇವಸ್ಥಾನ ಇರುವುದು ಕೊಯಂಬತ್ತೂರ್ ಬಳಿ ಇರುವ ಮಲು ಮಂಚಿನ್ ಪಟ್ಟಿ ಬಳಿ. ಇಲ್ಲಿ ಈ ದೇವರನ್ನು ದಂಡೆಯುತ ಪಾನಿ ಮುರುಗನ್ ಸ್ವಾಮಿ ಎಂದು ಕರೆಯುತ್ತಾರೆ. ಬೆಟ್ಟದ ಮೇಲೆ ಸುಬ್ರಮಣ್ಯ ಸ್ವರೂಪನಾದ ಮುರುಗ ನೆಲೆಸಿದ್ದು, ಈ ಬೆಟ್ಟಗಳನ್ನು ಪುರಾಣಗಳಲ್ಲಿ ಮೇಲು ಪರ್ವತ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಶಿವನು ಕೂಡ ಒಂದು ಕಾಲದಲ್ಲಿ ಇಲ್ಲಿಗೆ ಬಂದು ತಪಸ್ಸು ಮಾಡಿ ಹೋಗಿದ್ದಾರೆ ಎಂದು ಕಥೆಗಳು ತಿಳಿಸುತ್ತವೆ.

ಎಲ್ಲಾ ದೇವಾಲಯಗಳು ಕೂಡ ಸಾಲಿಗ್ರಾಮದಿಂದ ಅಥವಾ ಪಂಚಲೋಹಗಳಿಂದ ಅಥವಾ ಕಲ್ಲಿನಿಂದ ವಿಗ್ರಹಗಳನ್ನು ನಿರ್ಮಿಸಿದ್ದರೆ ಈ ದೇವಸ್ಥಾನವಾಗಿರುವ ವಿಗ್ರಹ ಇನ್ನು ವಿಶೇಷವಾಗಿದೆ. ಯಾಕೆಂದರೆ ಈ ವಿಗ್ರಹದಲ್ಲಿ ಐದು ರೀತಿಯ ವಿಷಗಳನ್ನು ಸೇರಿಸಲಾಗಿದೆಯಂತೆ. ಅದರಿಂದ ಈ ವಿಷಯದ ಮೇಲೆ ಏನನ್ನೇ ಹಾಕಿದರೂ ಕೂಡ ಅದು ಅಮೃತವಾಗಿ ಹೊರಹೊಮ್ಮುತ್ತದೆ ಎನ್ನುವುದು ಭಕ್ತಾದಿಗಳ ನಂಬಿಕೆ. ಹಾಗಾಗಿ ದೇವಾಲಯಕ್ಕೆ ದೇಶದ ಎಲ್ಲಾ ಕಡೆಗಳಿಂದಲೂ ಕೂಡ ಭಕ್ತರು ಆಗಮಿಸಿ ಅಭಿಷೇಕ ಮಾಡಿರುವ ತೀರ್ಥವನ್ನು ಪಡೆದುಕೊಳ್ಳಲು ಕಾಯುತ್ತಿರುತ್ತಾರೆ.

ಇದು ಭಾರತದ ಅತಿ ಶ್ರೀಮಂತ ದೇವಾಲಯಗಳಲ್ಲಿ ಒಂದು ಎನ್ನುವ ಹೆಸರನ್ನು ಕೂಡ ಪಡೆದಿದೆ. ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಪಂಚಾಮೃತ. ಇಲ್ಲಿ ಐದು ವಿಶೇಷ ಹಣ್ಣುಗಳಿಂದ ಪಂಚಾಮೃತವನ್ನು ತಯಾರಿಸಲಾಗುತ್ತದೆ ಮತ್ತು ಈ ಪಂಚಾಮೃತವನ್ನು ಆನ್ಲೈನ್ ಅಲ್ಲಿ ಆರ್ಡರ್ ಮಾಡಿದರೆ ಮನೆ ವಿಳಾಸಕ್ಕೆ ತಲುಪಿಸಿಕೊಡುವ ವ್ಯವಸ್ಥೆಯನ್ನು ಕೂಡ ದೇವಸ್ಥಾನದ ಆಡಳಿತ ಮಂಡಳಿ ತೆಗೆದುಕೊಂಡಿದೆ.

ವರ್ಷಕ್ಕೆ ಒಂದೂವರೆ ಕೋಟಿಗಿಂತಲೂ ಹೆಚ್ಚು ಜನರು ಈ ದೇವಸ್ಥಾನಕ್ಕೆ ಭೇಟಿಕೊಡುತ್ತಾರೆ ಇದರಲ್ಲಿ ದಕ್ಷಿಣ ಭಾರತದ ಸೆಲೆಬ್ರಿಟಿಗಳು ಕೂಡ ಸೇರಿದ್ದಾರೆ ಮತ್ತು ಇನ್ನು ಈ ಪ್ರಸಾದಕ್ಕೆ ಆನ್ಲೈನ್ ನಲ್ಲಿ ಬರುವ ಆರ್ಡರ್ ಸಂಖ್ಯೆ ಎಲ್ಲರ ಹುಬ್ಬೇರಿಸುವಂತಿದೆ. ದಿನಕ್ಕೆ 50,000 ದಿಂದ 60,000 ಆರ್ಡರ್ಗಳು ಈ ಪ್ರಸಾದಕ್ಕಾಗಿ ಬರುತ್ತವೆ ಎನ್ನುವ ವಿಷಯವನ್ನು ಅಂಕಿ ಅಂಶಗಳು ತಿಳಿಸುತ್ತವೆ.

ವಿಶೇಷದಲ್ಲಿ ವಿಶೇಷವಾಗಿರುವ ಈ ಮುರುಗನ್ ದೇವಸ್ಥಾನದಲ್ಲಿ ನಾನ ರೀತಿಯ ಸೇವೆಗಳನ್ನು ಭಕ್ತಾದಿಗಳು ಹರಕೆ ಕಟ್ಟಿಕೊಂಡು ಮಾಡುತ್ತಾರೆ ಮತ್ತು ನಂಬಿ ಬರುವ ಎಲ್ಲಾ ಭಕ್ತರಿಗೂ ಕೂಡ ಸ್ಕಂದನು ಆಶೀರ್ವಾದ ಮಾಡುತ್ತಾರೆ ಮತ್ತು ಅವರ ಸಂಕಷ್ಟಗಳನ್ನು ಪರಿಹಾರ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಈ ದೇವಸ್ಥಾನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ದೇವಸ್ಥಾನದ ಅಫೀಷಿಯಲ್ ವೆಬ್ಸೈಟ್ನಲ್ಲಿ ವಿವರಗಳಿವೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು. ನೀವು ಸಹ ಸುಬ್ರಮಣ್ಯ ಭಕ್ತರಾಗಿದ್ದರೆ ತಪ್ಪದೆ ಒಮ್ಮೆಯಾದರೂ ಈ ದೇವಾಲಯಕ್ಕೆ ಭೇಟಿ ನೀಡಿ.

ಮಕ್ಕಳಾಗಿಲ್ಲ ಅನ್ನೋ ಕೊರಗು ದೂರ ಮಾಡಿಸುತ್ತೆ ಈ ದೇವಸ್ಥಾನ, ಇಲ್ಲಿಗೆ ಭೇಟಿದ್ರೆ ಸಂತಾನ ಫಲ ಪಡೆಯಬಹುದು ಜೊತೆಗೆ ಹಲವು ರೋಗಗಳನ್ನು ದೂರಮಾಡುತ್ತದೆ..!

ನಮಗೆ ತೊಂದರೆಯಾದಾಗ ನಾವು ಬೇಗ ದೇವರ ಮೊರೆ ಹೋಗ್ತೀವಿ. ನಮ್ಮೆಲ್ಲಾ ಕಷ್ಟಗಳಿಗೂ ದೇವರು ಪರಿಹಾರ ನೀಡ್ತಾನೆ ಅನ್ನೋದು ಎಲ್ಲರ ನಂಬಿಕೆ. ಇಲ್ಲೊಂದು ದೇವಸ್ಥಾನವಿದೆ, ಈ ದೇವಾಲಯವು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಈ ದೇವಾಲಯ ಇರೋದಾದ್ರೂ ಎಲ್ಲಿ, ಈ ದೇವಾಲಯದ ಹೆಸರೇನು, ವಿಶೇಷತೆ ಏನು, ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಳೆಯ ಐತಿಹಾಸಿಕ ಹಿನ್ನಲೆ ಹೊಂದಿರುವ ಏಕೈಕ ದೇವಾಲಯವಿದು. ಈ ದೇವಾಲಯಕ್ಕೆ ʻಮರೋಳಿ ಶ್ರೀ ಸೂರ್ಯ ನಾರಾಯಣ ದೇವಾಲಯʼ ಎಂಬುದಾಗಿ ಕರೆಯಲಾಗುತ್ತದೆ. ಈ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮರೋಳಿ ಮತ್ತು ಬೆಳ್ತಂಗಡಿಯ ನಾರಾವಿಯಲ್ಲಿ ಶ್ರೀ ಸೂರ್ಯನಾರಾಯಣ ದೇವಸ್ಥಾನವಾಗಿದೆ.

ಈ ದೇವಾಲಯ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಮದುವೆಯಾಗಿ ಬಹುಕಾಲದವರೆಗೆ ಮಕ್ಕಳು ಆಗದೆ ಇದ್ರೆ ಈ ಸೂರ್ಯ ನಾರಾಯಣನ ಸನ್ನಿದಿಗೆ ಬಂದು ಪೂಜೆ ಸಲ್ಲಿಸಿ ಬೇಡಿಕೊಂಡರೆ ಮಕ್ಕಳಾಗುತ್ತವೆ ಅನ್ನೋದು ಇಲ್ಲಿಯ ಭಕ್ತರ ನಂಬಿಕೆಯಾಗಿದೆ. ಅಷ್ಟೇ ಅಲ್ಲದೇ, ಈ ರೀತಿ ಮಕ್ಕಳ್ಳನ್ನು ಪಡೆದ ಅದೆಷ್ಟೋ ಉದಾರಣೆಗಳಿವೆ. ದೈಹಿಕವಾಗಿ ಸಮಸ್ಯೆ ಇದ್ರೆ ನಿವಾರಣೆಯಾಗುತ್ತವೆ ಅನ್ನೋದು ಸ್ಥಳೀಯ ಭಕ್ತರ ಮಾತಾಗಿದೆ. ತಲೆನೋವು, ದೃಷ್ಟಿ ದೋಷ ಇರುವವರು ಸಹ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಪರಿಹಾರವನ್ನು ಕಾಣಬಹುದಾಗಿದೆ. ಇಲ್ಲಿ ಪ್ರಾರ್ಥಿಸಿ ಕೊಂಡವರಲ್ಲಿ ಯಾವುದಾದರು ವಿಶೇಷ ಅಭಿವ್ಯಕ್ತಿ ಸಾಮಥ್ಯವಿದ್ದಲ್ಲಿ ಅದು ನೂರುಪಟ್ಟು ವೃದ್ಧಿಸುತ್ತದೆ ಎಂಬ ಪ್ರತೀತಿಯಿದೆ.

ದೇವಸ್ಥಾನದ ವಿಳಾಸ: ಶ್ರೀ ಸೂರ್ಯನಾರಾಯಣ ದೇವಸ್ಥಾನ, ಮರೋಳಿ, ಮಂಗಳೂರು 575 005 ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ ರಾಜ್ಯ ಪೂಜಾ ಸಮಯ: ಬೆಳಿಗ್ಗೆ : 6:00 ಗಂಟೆಗೆ, ಮದ್ಯಾಹ್ನ : 12:00 ಗಂಟೆಗೆ, ಸಾಯಂಕಾಲ : 8:00 ಗಂಟೆಗೆ. ಮರೋಳಿ ಸೂರ್ಯನಾರಾಯಣ ದೇವಸ್ಥಾನಕ್ಕೆ ಒಂದು ವಿಶೇಷ ಐತಿಹ್ಯ ಇದೆ. ಆದಿಯಲ್ಲಿ ಇದು ಒಂದು ಗುಹೆ, ಅರಣ್ಯ, ಜಲಚರಗಳಿಂದ ಕೂಡಿದ ಪ್ರಕೃತಿ ರಮಣೀಯ ಪ್ರದೇಶ. ಆ ಸಮಯದಲ್ಲಿ ಮಹಾ ತಪಸ್ವಿ ಋಷಿಯೊಬ್ಬರಿಗೆ ಗೋಲಾಕೃತಿಯೊಂದು ಪ್ರಕಾಶ ರೂಪದಲ್ಲಿ ಕಾಣಿಸಿ, ಶ್ರೀ ಸೂರ್ಯನಾರಾಯಣ ದೇವರ ಆವಿರ್ಭಾವ ಆಯಿತು ಎಂದು ಪ್ರತೀತಿ.

ಸಂಸ್ಕ್ರತದಲ್ಲಿ ʻಮರಾಲಿʼ ಎಂದರೆ ಸಾತ್ವಿಕ-ಸುಂದರ ಎಂದು ಅರ್ಥ. ಮರಾಲ ಋಷಿಯ ಕತೆಯು ಇದೆ. ಸುಮಾರು 1200 ವರ್ಷಗಳ ಹಿಂದೆ ತಪಸ್ವಿಗಳಿಂದ ಸ್ಥಾಪನೆಗೊಂಡಿತ್ತು ಎನ್ನಲಾದ ಶ್ರೀ ಸೂರ್ಯನಾರಾಯಣ ಕ್ಷೇತ್ರವು ಕ್ರಿಶ.16ನೇ ಶತಮಾನದಲ್ಲಿ ಯುದ್ಧ ಮತ್ತು ರಾಜಾಶ್ರಯದ ಕೊರತೆಯಿಂದಾಗಿ ಜೀರ್ಣಾವಸ್ಥೆಯನ್ನು ತಲುಪಿತ್ತು. ಕಾಲಾಂತರದಲ್ಲಿ ಇಲ್ಲಿ ಯಾವುದೋ ರಾಜರುಗಳ ನಡುವೆ ಯುದ್ಧವಾಗಿ ಈ ದೇವಸ್ಥಾನ ನಿರ್ನಾಮವಾಯಿತು.

ಮುಂದೆ ಒಂದು ದಿನ ದೇವಸ್ಥಾನವೇ ಇಲ್ಲದ ಈಗಿನ ಶೂನ್ಯವಾಗಿದ್ದ ಸ್ಥಳದಲ್ಲಿ ಎರಡು ಗುತ್ತು ಮನೆಯ ಮಾತೆಯವರು ಈ ಸ್ಥಳದಲ್ಲಿ ಹಾಯ್ದು ಹೋಗುವ ಸಂದರ್ಭ ಕತ್ತಲಾಯಿತು. ಆಗ ಗೋಲರೂಪದಲ್ಲಿ ಪ್ರಭೆಯೊಂದು ಮಾತೆಯರಿಗೆ ಕಂಡು ದಿಗ್ಭಮೆಗೊಂಡು, ವಿಷಯ ತಿಳಿದ ರಾಣಿಯು ಅಲ್ಲೇ ದೇವಸ್ಥಾನ ಪುನಃ ನಿರ್ಮಾಣ ಮಾಡುವ ಸಂಕಲ್ಪ ಮಾಡಿದಳು. ಇದಕ್ಕೆ ಸಂವಾದಿಯಾಗಿ ಜೈನರಾಣಿಯೊಬ್ಬಳು ಈಗ ಇರುವ ದೇವಸ್ಥಾನವನ್ನು ಪುನಃ ನಿರ್ಮಾಣ ಮಾಡಿದಳು ಎಂಬುದು ಇತಿಹಾಸ.

ಹರಿ, ಹರ, ಬ್ರಹ್ಮ ಹಾಗೂ ಶಕ್ತಿ ಸಾನ್ನಿಧ್ಯವನ್ನು ಹೊಂದಿರುವ ಶ್ರೀ ಸೂರ್ಯನಾರಾಯಣ ಸ್ವಾಮಿ ದೇವಾಲಯವು ಪವಿತ್ರ ಕ್ಷೇತ್ರವಾಗಿದ್ದು ಈ ದೇವಾಲಯದ ಶಕ್ತಿಯನ್ನು ನಂಬಿ ಬಂದ ಭಕ್ತರಿಗೆ ಈ ಕ್ಷೇತ್ರದ ದೇವರು ಉನ್ನತಿಯನ್ನು ದಯಪಾಲಿಸಿದ ಸಾಕಷ್ಟು ಉದಾಹರಣೆಗಳು ಇವೆ.

ಸೂರ್ಯ ಮಂಡಲದ ಪ್ರಧಾನ ದೇವರು ಶ್ರೀ ಸವಿತೃ ಸೂರ್ಯನಾರಾಯಣ. ನಮಗೆ ನಿತ್ಯ ಕಾಣುವ ದೇವರು. ಏಳು ಕುದುರೆಗಳ ರಥವನ್ನು ಏರಿ ಅರುಣನನ್ನು ಸಾರಥಿಯಾಗಿಟ್ಟುಕೊಂಡು ನಿತ್ಯ ಸಂಚಾರಿ ಎಂದು ಪ್ರತೀತಿ. ಸೌರಮಾನ ಪಂಥದವರಿಗೆ ಇವನು ಮೂಲ ಆಕಾರ, ಇವನು ಕಳಿಂಗ ದೇಶೋದ್ಭವ. ಹುಟ್ಟಿದ ದಿನ ಪ್ರಭಾವ ನಾಮ ಸಂವತ್ಸರ ಮಾಘಮಾಸ ಶುಕ್ಲ ಪಕ್ಷ ಸಪ್ತಮಿ. ಅದುವೇ ನಾವು ಆಚರಿಸುವ ರಥಸಪ್ತಮಿಯ ಮಹಾರಥೋತ್ಸವ.

ಭಾರತ ದೇಶದಲ್ಲಿ ಸೂರ್ಯನ ಆರಾಧನೆ ಸನಾತನವಾದದ್ದು. ರಾಮಾಯಣದಲ್ಲಿ ರಾವಣವಧಾ ಪ್ರಸಂಗದಲ್ಲಿ ಶ್ರೀ ಸೂರ್ಯಮಂತ್ರ ಆದಿತ್ಯಹೃದಯದ ಪ್ರಭಾವ, ಮುಂದೆ ಮಹಾಭಾರತದಲ್ಲಿ ಭಗವಾನ್ ಶ್ರೀಕೃಷ್ಣ ಸೂರ್ಯದೇವರಿಗೆ ಕೊಡುತ್ತಿದ್ದ ಪ್ರಾತಃ ಅರ್ಘ್ರ್ಯವೇ ಗಯನ ಪ್ರಕರಣಕ್ಕೆ ಕಾರಣ ಎನ್ನುವುದರಿಂದ ಶ್ರೀ ಸೂರ್ಯನ ಆರಾಧನೆ ಅನಾದಿಕಾಲದಿಂದಲೂ ಇತ್ತು ಎಂಬುದು ಜನಜನಿತ. ಋಷಿ ಮುನಿಗಳು ಅವರ ನಿತ್ಯಾನುಷ್ಠಾನದಲ್ಲಿ ಪ್ರಾತಃ ಸಂಧ್ಯೆಯನ್ನು ಶ್ರೀ ಸೂರ್ಯದೇವರಿಗೆ ಅರ್ಘ್ರ್ಯ ಕೊಟ್ಟು ಪ್ರಾರಂಭಿಸಿ, ಮನಸ್ಸಿನ ಹತೋಟಿಗೆ ಹಾಗೂ ಬುದ್ಧಿಯ ವಿಕಾಸವನ್ನು ಅಪೇಕ್ಷಿಸುವ ಮಹಾಗಾಯತ್ರಿ ಮಂತ್ರವನ್ನು ಪಠಿಸುವುದು ಶ್ರೀ ಸೂರ್ಯನ ಕುರಿತದ್ದೇ ಆಗಿದೆ.

ಈ ಮಾತ್ರೆಗಳಿಂದ 90% ರೋಗಗಳು ಬರುತ್ತೆ ಹುಷಾರ್…! ನೋವು ಅಂತ ಮಾತ್ರೆ ಸೇವನೆ ಮಾಡೋಕ್ಕಿಂತ ಮುಂಚೆ ಸ್ವಲ್ಪ ಯೋಚಿಸಿ.!

ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ಕಾಯಿಲೆ ಮನುಷ್ಯನನ್ನು ಬಾಧಿಸುತ್ತಿದೆ. ಹುಟ್ಟಿದ ಚಿಕ್ಕ ಮಗುವಿನಿಂದ ಹಿಡಿದು ವೃದ್ಧರವರಿಗೆ ಆನೇಕರು ತನಗೆ ಆ ನೋವು ಅಥವಾ ಈ ಆರೋಗ್ಯ ಸಮಸ್ಯೆ ಎಂದು ದೂರು ಹೇಳಬಹುದನ್ನು ನಾವು ಕೇಳಿದ್ದೇವೆ. ಜೊತೆಗೆ ಪ್ರತಿಯೊಂದು ಆಸ್ಪತ್ರೆ ಮತ್ತು ಕ್ಲಿನಿಕ್ ಅಲ್ಲಿ ರೋಗಿಗಳ ದಂಡೆ ಇರುತ್ತದೆ.

ಸಾಮಾನ್ಯವಾಗಿ ಯಾವುದೇ ರೀತಿಯ ದೈಹಿಕ ಸಮಸ್ಯೆಗೆ ನಾವು ತಕ್ಷಣ ಮೊರೆ ಹೋಗುವುದು ವೈದ್ಯರ ಬಳಿ ಅಥವಾ ಮಾತ್ರೆಗಳ ಮೇಲೆ. ಬಿಪಿ, ಶುಗರ್, ಥೈರಾಯ್ಡ್, ಜ್ವರ, ನೆಗಡಿ ಹೀಗೆ ಎಲ್ಲದಕ್ಕೂ ಕೂಡ ಮಾತ್ರೆಗಳನ್ನು ಸೇವಿಸುತ್ತೇವೆ. ಮಾತ್ರೆಗಳು ಇಂದು ನಮ್ಮ ದಿನನಿತ್ಯದ ಆಹಾರ ಸೇವನೆಯಲ್ಲಿ ಒಂದು ಜಾಗವನ್ನು ಗಿಟ್ಟಿಸಿಕೊಂಡಿವೆ. ಆದರೆ ಇದೆಲ್ಲವೂ ರಾಸಾಯನಿಕಯುಕ್ತ ಔಷಧಿ ಆಗಿವೆ. ಇದರ ಸೇವನೆ ಆದ ತಕ್ಷಣವೇ ಕಾಯಿಲೆ ವಾಸಿ ಆಗುವುದು ನಿಜ ಆದರು ಕೂಡ ಅದರ ಬಗ್ಗೆ ಚಿಂತೆ ಮಾಡಲೇ ಬೇಕಾಗಿದೆ.

ಯಾಕೆಂದರೆ ಜ್ವರದ ಮಾತ್ರೆ ತೆಗೆದುಕೊಂಡಾಗ ಅದು ಜ್ವರವನ್ನು ಮಾತ್ರ ಕಡಿಮೆ ಮಾಡುತ್ತದೆ. ಹಾಗೆಯೇ ಯಾವುದೇ ನೋವಿಗೆ ಸಮಸ್ಯೆಗೆ ಮಾತ್ರೆ ತೆಗೆದುಕೊಂಡಾಗಲೂ ಆ ರೋಗವನ್ನು ಅದು ಪರಿಹಾರ ಮಾಡುತ್ತದೆ. ಹಾಗೆ ಒಂದು ವೇಳೆ ಅದು ಸರಿಯಾಗಿ ಕೆಲಸ ಮಾಡಿಲ್ಲ ಎಂದಾಗ ಡೋಸ್ ಹೆಚ್ಚಿಗೆ ಕೊಡುತ್ತೇವೆ ಆಗ ಅದು ಸರಿ ಹೋಗುತ್ತದೆ. ಇದು ಹೇಗೆ ಸಾಧ್ಯವಾಯಿತು ಎಂದು ನೋಡುವುದಾದರೆ ಇದೆಲ್ಲವೂ ದೇಹದ ಮೇಲೆ ಬೀಳುವ ಒತ್ತಡ ಆಗಿದೆ.

ಈಗ ನಾವು ಸೇವಿಸುತ್ತಿರುವ ರಾಸಾಯನಿಕ ಔಷಧಿಗಳು ಇತ್ತೀಚೆಗೆ ಬಂದಿರುವುದು ಆದರೆ ಮಾನವನ ದೇಹವು ಲಕ್ಷಾಂತರ ವರ್ಷದ ಹಿಂದೆಯೇ ರಚನೆ ಆಗಿದೆ. ಹಿಂದೆಲ್ಲಾ ಆಯುರ್ವೇದ ಪದ್ಧತಿಯಲ್ಲಿ ಮಾತ್ರ ಔಷಧಿಗಳನ್ನು ಸೇವಿಸುತ್ತಿದ್ದರು ಅದು ಪ್ರಕೃತಿದತ್ತವಾಗಿ ಇರುತ್ತಿತ್ತು.

ಯಾಕೆಂದರೆ ನಮ್ಮ ದೇಹವು ಕೂಡ ಪ್ರಕೃತಿಗೆ ಹೊಂದಿಕೊಂಡಿತ್ತು. ನಮ್ಮ RNA, DNA ಮತ್ತು ಡೀಪ್ ಮೆಮೊರಿಯಲ್ಲಿ ನಮ್ಮ ದೇಹವು ಪ್ರಕೃತಿಗೆ ಅಥವಾ ಆಯುರ್ವೇದ ಪದ್ಧತಿಗೆ ಸ್ಪಂದಿಸುತ್ತದೆ. ನೈಸರ್ಗಿಕವಾಗಿರುವ ಔಷಧಿಗೆ ದೇಹದಲ್ಲಿರುವ ಸಮಸ್ಯೆ ಪರಿಹಾರ ಮಾಡುವ ಶಕ್ತಿ ಇದೆ ಎನ್ನುವುದು ರೆಕಾರ್ಡ್ ಆಗಿದೆ. ಆದರೆ ಕೆಮಿಕಲ್ ಯುಕ್ತ ಮಾತ್ರೆಗಳನ್ನು ನಾವು ಇತ್ತೀಚೆಗೆ ಸೇವಿಸುತ್ತೇವೆ. ಹೀಗಾಗಿ ಒಮ್ಮೊಮ್ಮೆ ಅವು ಸರಿಯಾಗಿ ವರ್ಕ್ ಆಗುವುದಿಲ್ಲ.

ಯಾಕೆಂದರೆ ಯಾವುದೇ ಒಂದು ಹೊರಗಿನ ಅಪರಿಚಿತ ಆಹಾರ ದೇಹಕ್ಕೆ ಪ್ರವೇಶ ಆದಾಗ ಒಳಗಿರುವ ರಚನೆ ಅದಕ್ಕೆ ಸ್ಪಂದಿಸುವುದಿಲ್ಲ, ಆಗ ಹೆಚ್ಚಿನ ಡೋಸ್ ಕೊಟ್ಟು ಅದು ವರ್ಕ್ ಆಗುವ ಹಾಗೆ ಮಾಡಲಾಗುತ್ತದೆ. ಇದನ್ನೇ ದೇಹದ ಮೇಲೆ ಬೀಳುವ ಒತ್ತಡ ಎಂದು ಹೇಳಬಹುದು ಇದರಿಂದ ಅಡ್ಡ ಪರಿಣಾಮ ಆಗದೇ ಇರುವುದಿಲ್ಲ.

ಈ ಹೈ ಡೋಸ್ ಬಗ್ಗೆ ವಿವರವಾಗಿ ಹೇಳುವುದಾದರೆ ಯಾವುದೇ ಒಂದು ಔಷಧಿಯನ್ನು ದೇಹಕ್ಕೆ ನೀಡಿದಾಗ ಮೊದಲಿಗೆ ಲಿವರ್ ಗುರುತಿಸಿ ಹಿಡಿಯುತ್ತದೆ ಆಗ ಅದು ವರ್ಕ್ ಆಗದು ರಕ್ತ ಜೊತೆ ಸೇರಲು ಅದು ಬಿಡುವುದಿಲ್ಲ ನಂತರ ಡೋಸೇಜ್ ಮಾಡಿದಾಗ ಲಿವರ್ ಕಂಟ್ರೋಲ್ ಇಂದ ಅದು ತಪ್ಪುತ್ತದೆ. ಆಗ ಅದು ದೇಹ ಪ್ರವೇಶಿಸಿ ಪ್ರತಿಕ್ರಿಸುತ್ತದೆ.

ಮೊದಲಿಗೆ ಆರೋಗ್ಯ ಸುಧಾರಿಸಿದರೂ ಕೂಡ ಬಹಳ ದಿನಗಳ ನಂತರ ಅದು ಅದರ ಸೈಡ್ ಎಫೆಕ್ಟ್ ಕಾಣಿಸಿಕೊಳ್ಳಲು ಶುರು ಆಗುತ್ತದೆ. ಹಾಗಾಗಿ ಎಲ್ಲಾ ಕೆಮಿಕಲ್ ಯುಕ್ತ ಮಾತ್ರೆ ಮತ್ತು ಔಷಧಿಗಳಿಗೆ ಪರಿಣಾಮ ಇದೇ ರೀತಿ ಇರುತ್ತದೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಇವುಗಳ ಸೇವನೆ ಮುನ್ನ ಮತ್ತೊಮ್ಮೆ ಮಗದೊಮ್ಮೆ ಯೋಚಿಸಿ ಸೇವನೆ ಮಾಡಬೇಕು. ಈ ವಿಚಾರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ