Home Blog Page 207

ಬೆನ್ನು, ಸೊಂಟ, ಮಂಡಿ ಏನೇ ನೋವಿರಲಿ ಈ ದೇವಾಲಯಕ್ಕೆ ಭೇಟಿ ನೀಡಿದ್ರೆ ಒಂದೇ ದಿನದಲ್ಲಿ ನೋವು ನಿವಾರಣೆಯಾಗುತ್ತದೆ

 

ಭಕ್ತರ ಬೇಡಿಕೆಯನ್ನು ತಕ್ಷಣ ಸಾಕಾರ ಮಾಡುವ ದೇವರು ಒಬ್ಬನೇ ಸಾಂಬಸದಾಶಿವ ಶಂಕರ. ರಾವಣನಂತಹ ರಾಕ್ಷಸನಿಗೂ ತನ್ನ ಆತ್ಮ ಲಿಂಗವನ್ನೇ ಕೊಟ್ಟಂತಹ ಮಹಾನುಭಾವ ಈ ಹರ. ಅದರಿಂದ ಈತನನ್ನು ತಪಸ್ಸಿಗೆ ಬೇಗನೆ ಒಲಿಯುವ ದೈವ, ಬೇಡಿದ ಭಕ್ತರ ಬೇಡಿಕೆಯನ್ನು ಬಿಡದೆ ನೆರವೇರಿಸುವಾತ ಎನ್ನುತ್ತಾರೆ. ಈ ರೀತಿ ಕರುಣಾಮಯಿ ಭಕ್ತರಪ್ರಿಯ ಶಿವನ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಆತನ ಪವಾಡ ಶಕ್ತಿ ಮತ್ತು ಪ್ರಭಾವ ಎಂತಹದು ಎಂದು ಆತನನ್ನು ಬೇಡುವ ಭಕ್ತರಿಗಷ್ಟೇ ತಿಳಿದಿರುತ್ತದೆ.

ಇಂದಿಗೂ ಸಹ ಈ ಕಲಿಗಾಲದಲ್ಲೂ ಶಿವನ ದೇವಾಲಯದಲ್ಲಿರುವ ಲಿಂಗಸ್ವರೂಪಿ ದೇವರ ಪರಶಿವನನ್ನು ನೋಡುವುದರಿಂದಲೇ ಸಾಕಷ್ಟು ಕಷ್ಟಗಳು ಪಾಪಗಳು ಪರಿಹಾರವಾಗಿ ಜೀವನ ಸಾರ್ಥಕವಾದ ಅನುಭವ ಬರುತ್ತದೆ. ಮಾನಸಿಕವಾಗಿ ನೆಮ್ಮದಿ ತರುವುದರ ಜೊತೆಗೆ ದೈಹಿಕವಾದ ಸಮಸ್ಯೆಗಳನ್ನು ಈಡೇರಿಸುವ ಶಕ್ತಿಯು ಕೂಡ ಓಂಕಾರ ಸ್ವರೂಪಿಗೆ ಇದೆ ಇದು ಆಶ್ಚರ್ಯ ತಂದರು ಕೂಡ ಸತ್ಯ.

ಇದುವರೆಗೂ ಕೂಡ ಶಿವನ ದೇವಾಲಯಕ್ಕೆ ಹೋಗುವುದರಿಂದ ನಮಗೆ ಆತನ ಅನುಗ್ರಹ ಆಗುತ್ತದೆ. ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳು ಪರಿಹಾರ ಆಗುತ್ತವೆ, ಮನಸ್ಸಿಗೆ ಶಾಂತಿ ದೊರೆಯುತ್ತದೆ ಇದನ್ನೆಲ್ಲ ಕೇಳಿದ್ದೆವು. ಆದರೆ ಮೊದಲ ಬಾರಿಗೆ ದೈಹಿಕ ಆರೋಗ್ಯ ಸಮಸ್ಯೆಗೂ ಕೂಡ ಶಿವಲಿಂಗ ದರ್ಶನ ಔಷಧಿ ಆಗುವುದರ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಅಚ್ಚರಿ ಎನಿಸಬಹುದು. ಆದರೆ ಇಂತಹದೊಂದು ಶಿವನ ದೇವಾಲಯ ಬೆಂಗಳೂರಿನಲ್ಲಿಯೇ ಇದೆ.

ರಾಜ್ಯ ರಾಜಧಾನಿಯಲ್ಲಿರುವ ಈ ಶಿವ ದೇವಾಲಯದಲ್ಲಿ ಶಿವನ ದರ್ಶನ ಕಂಡು ದೇಹದಲ್ಲಿರುವ ಬೆನ್ನು ನೋವು ಮೂಳೆ ನೋವು ಮಂಡಿ ನೋವು ಮುಂತಾದ ನೋವುಗಳನ್ನು ನಿವಾರಣೆ ಮಾಡಿಕೊಳ್ಳುವ ಸಲುವಾಗಿಯೇ ಸಾವಿರಾರು ಕಿಲೋಮೀಟರ್ ಗಳಿಂದಲೂ ಕೂಡ ಭಕ್ತರ ದಂಡು ಬರುತ್ತಿದೆ. ದಿನೇ ದಿನೇ ಈ ದೇವಸ್ಥಾನದ ಶಿವನ ಶಕ್ತಿಯ ಪ್ರಖ್ಯಾತಿ ಹೆಚ್ಚುತ್ತಲೇ ಇದೆ.

ಬೆಂಗಳೂರಿನ ಬನಶಂಕರಿ ದೇವಸ್ಥಾನದ ಪ್ರಾಣಾಂಗಣದ ಒಳಗೆ ಇರುವ ಶ್ರೀ ಓಂಕಾರೇಶ್ವರನ ಸನ್ನಿಧಿಯನ್ನು ಬನಶಂಕರಿ ತಾಯಿಯ ಸನ್ನಿಧಾನಕ್ಕೆ ಭೇಟಿ ಕೊಟ್ಟ ಎಲ್ಲರೂ ಕೂಡ ನೋಡಿರುತ್ತಾರೆ. ಬನಶಂಕರಿಗೆ ತಾಯಿಯ ಗರ್ಭಗುಡಿ ಪಕ್ಕದಲ್ಲಿಯೇ ಪ್ರತಿಷ್ಠಾಪನೆ ಆಗಿರುವ ಈ ಓಂಕಾರೇಶ್ವರ ಶಿವಲಿಂಗದ ನ ಪಡೆದರೆ ಸಾಕು ದೇಹದಲ್ಲಿರುವ ಎಲ್ಲಾ ನೋವುಗಳು ಕೂಡ ನಿವಾರಣೆ ಆಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತರ ನಂಬಿಕೆ.

ಬಿಲ್ವಾಣಂ ದರ್ಶನಂ ಪುಣ್ಯಂ, ಸ್ಪರ್ಷನಂ ಪಾಪ ನಾಶನಂ। ಅಘೋರಂ ಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ ॥ ಎನ್ನುವ ಸ್ತೋತ್ರವನ್ನು ನಾವು ಕೇಳುತ್ತೇವೆ. ಈಗ ನನ್ನನ್ನು ದರ್ಶನ ಮಾಡಿದ ಭಕ್ತಾದಿಗಳಿಗಿರುವ ಕೈ ಕಾಲು ನೋವು ಮೂಳೆ ನೋವು ಮಂಡಿ ನೋವು ಬೆನ್ನು ನೋವು ಇನ್ನು ಮುಂತಾದ ದೇಹದಲ್ಲಿ ಆಗಿರುವ ಎಲ್ಲಾ ನೋವುಗಳನ್ನು ಕೂಡ ಈ ಓಂಕಾರೇಶ್ವರ ನಿವಾರಣೆ ಮಾಡುತ್ತಿದ್ದಾರೆ.

ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಓಂಕಾರೇಶ್ವರ ಎದುರು ನಿಂತು ಭಕ್ತಿಯಿಂದ ಪ್ರಾರ್ಥಿಸುವುದರ ಜೊತೆಗೆ ತಪ್ಪದೆ ಮೃತ್ಯುಂಜಯ ಹೋಮ ಹಾಗೂ ಅನ್ನದಾನವನ್ನು ಮಾಡಿಸಬೇಕು. ಅನ್ನದಾನಕ್ಕೆ 200 ರೂಪಾಯಿಗಳು ಹಾಗೂ ಮೃತ್ಯುಂಜಯ ಹೋಮಕ್ಕೆ 400 ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ. ಈ ಓಂಕಾರೇಶ್ವರನ ಪಕ್ಕದಲ್ಲಿಯೇ 12 ಜ್ಯೋತಿರ್ಲಿಂಗ ಸ್ವರೂಪವಾದ ಶಿವಲಿಂಗಗಳನ್ನು ಕಪ್ಪು ಬಣ್ಣದ ಕಲ್ಲಿನಿಂದ ಕೆತ್ತಲಾಗಿದೆ.

ಈ ಶಿವಲಿಂಗಗಳನ್ನು ದರ್ಶನ ಮಾಡುವುದರಿಂದ 13,000 ಲಿಂಗಗಳನ್ನು ಕಂಡಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದೆ. ಪುರಾಣ ಪ್ರಸಿದ್ದಿಯಾದ ಈ ದೇವಾಲಯಕ್ಕೆ ಬೆಂಗಳೂರು ಹಾಗೂ ಬೆಂಗಳೂರಿನ ಹೊರವಲಯದವರೂ ಕೂಡ ಬರುತ್ತಾರೆ. ಈ ರೀತಿ ಆರೋಗ್ಯ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ತಪ್ಪದೆ ಒಮ್ಮೆ ಈ ದೇವಾಲಯಕ್ಕೆ ಭೇಟಿ ಕೊಟ್ಟು, ಈ ರೀತಿಯಾಗಿ ಓಂಕಾರೇಶ್ವರನನ್ನು ಪ್ರಾರ್ಥಿಸಿ.

ರಾಯರ ಮಠದಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ಮನೆಗೆ ತಂದು ಈ ರೀತಿ ಮಾಡಿ, ನಿಮ್ಮ ಕಷ್ಟ ಪರಿಹಾರ ಆಗುವುದರ ಜೊತೆಗೆ ರಾಯರ ಅನುಗ್ರಹ ಕೂಡ ಸಿಗುತ್ತದೆ.!

ಕಲಿಯುಗದಲ್ಲಿ ಭಕ್ತರನ್ನು ಕೈಹಿಡಿದು ಕಾಪಾಡುವ ದೇವರು ಎಂದರೆ ಅದು ಗುರುರಾಯರು. ಗುರುರಾಯರ ಅನುಗ್ರಹ ನರ ಮಾನವರ ಮೇಲೆ ಎಷ್ಟು ಅಗಾಧವಾಗಿದೆ ಎಂದರೆ ಪ್ರತಿದಿನವೂ ಕೂಡ ಗುರುರಾಯರ ಮಠಕ್ಕೆ ಭೇಟಿ ಕೊಡುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಹಾಗೂ ಪ್ರತಿ ಗುರುವಾರವು ರಾಯರ ಮಠಗಳು ತುಂಬಿ ತುಳುಕುತ್ತಿರುವುದೇ ಸಾಕ್ಷಿ.

ಕಷ್ಟ ಹೇಳಿಕೊಂಡು ಬಂದ ಭಕ್ತಾದಿಗಳಿಗೆ ಗುರುಗಳ ಸ್ಥಾನದಲ್ಲಿ ನಿಂತು ಶ್ರೀ ಗುರುರಾಘವೇಂದ್ರ ರಾಯರು ಸಲಹಿ ಪೋಷಿಸುತ್ತಿದ್ದಾರೆ. ರಾಘವೇಂದ್ರ ಮಠಕ್ಕೆ ಗುರುವಾರದಂದು ಭೇಟಿ ಕೊಟ್ಟಾಗ ಪ್ರಸಾದದ ರೂಪದಲ್ಲಿ ಅಕ್ಷತೆಯನ್ನು ಕೊಡುತ್ತಾರೆ. ಆ ಮಂತ್ರಾಕ್ಷತೆಯನ್ನು ರಾಯರ ಆಶೀರ್ವಾದ ಎಂದೇ ಭಾವಿಸಬಹುದು. ಯಾಕೆಂದರೆ ಇದುವರೆಗೂ ಕೂಡ ನಿಮ್ಮನ್ನು ಕಾಡುತ್ತಿರುವ ಯಾವುದೇ ಸಮಸ್ಯೆ ಇದ್ದರೂ ಆ ಮಂತ್ರಾಕ್ಷತೆಗೆಅದನ್ನೆಲ್ಲ ಬಗೆಹರಿಸುವ ಶಕ್ತಿ ತುಂಬಿರುತ್ತದೆ.

ಆದರೆ ಕೆಲವು ವಿಧಾನಗಳ ಪ್ರಕಾರ ಅದನ್ನು ಪಾಲಿಸಬೇಕು ಅಷ್ಟೇ. ನೀವೇನಾದರೂ ವಿದ್ಯಾರ್ಥಿಗಳಾಗಿದ್ದರೆ ನಿಮಗೆ ಓದಿನಲ್ಲಿ ಆಸಕ್ತಿ ಬರುತ್ತಿಲ್ಲ ಅಥವಾ ಓದಿದ ಯಾವ ವಿಷಯವನ್ನು ಸಹ ನೆನಪಿನಲ್ಲಿ ಇಟ್ಟುಕೊಳ್ಳಲಾಗುತ್ತಿಲ್ಲ ಎಂದರೆ, ಆಸಕ್ತಿ ಇದ್ದರು ಓದಿನಲ್ಲಿ ತೊಂದರೆಯಾಗುತ್ತಿದೆ ಎಂದಾಗ ಮಂತ್ರಾಕ್ಷತೆಯನ್ನು ತೆಗೆದುಕೊಂಡು ಭಕ್ತಿಯಿಂದ ಗುರು ರಾಘವೇಂದ್ರನ ಭಕ್ತಿಯಿಂದ ಸ್ಮರಿಸಿ ಪ್ರತಿದಿನ ರಾತ್ರಿ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ.

ಮರು ದಿನದಿಂದಲೇ ಒಂದು ಚಮತ್ಕಾರ ಬದಲಾವಣೆ ನಿಮ್ಮ ಬದುಕಿನಲ್ಲಿ ನಡೆಯುತ್ತದೆ ಹಾಗೆ ನೀವೇನಾದರೂ ಹೆಚ್ಚು ವಿದ್ಯಾಭ್ಯಾಸ ಪಡೆದು ಎಲ್ಲಾ ಅರ್ಹತೆಗಳನ್ನು ಹೊಂದಿದ್ದರು ಹತ್ತಿರದಲ್ಲಿ ಉದ್ಯೋಗವಕಾಶ ಕೈ ತಪ್ಪುತ್ತಿದೆ ಎನ್ನುವುದಾದರೆ ಅಂತಹವರು ಹುದ್ದೆಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಹೋದಾಗ ಅಥವಾ ಯಾವುದೇ ಸಂದರ್ಶನವನ್ನು ಎದುರಿಸಲು ಹೋದಾಗ ರಾಯರ ಈ ಮಂತ್ರಾಕ್ಷತೆಯನ್ನು ತೆಗೆದುಕೊಂಡು ಗುರುರಾಯರನ್ನು ಮನಸ್ಸಾರೆ ಸ್ಮರಿಸಿ.

 

ನಿಮ್ಮ ಸಮಸ್ಯೆ ಹೇಳಿಕೊಂಡು ಆ ಅಕ್ಷತೆಯನ್ನು ಮೂರರಿಂದ ನಾಲ್ಕು ಕಾಳುಗಳಷ್ಟು ತಲೆ ಮೇಲೆ ಹಾಕಿಕೊಂಡು ಹೋದರೆ ಆ ಉದ್ಯೋಗ ನಿಮ್ಮ ಕೈತಪ್ಪಿ ಹೋಗುವುದಿಲ್ಲ. ಇದು ಮಾತ್ರ ಅಲ್ಲದೆ ಕುಟುಂಬದ ಅನೇಕ ಕೌಟುಂಬಿಕ ಸಮಸ್ಯೆಗಳಿಗೂ ಕೂಡ ರಾಘವೇಂದ್ರರರ ಅಕ್ಷತೆಯೇ ಒಂದು ಚಮತ್ಕಾರ ಶಕ್ತಿಯಂತೆ, ಅದನ್ನೆಲ್ಲ ಬಗ್ಗೆ ಹರಿಸುವ ದಾರಿ ತೋರಿತ್ತದೆ. ಕುಟುಂಬದಲ್ಲಿ ಪತಿ ಪತ್ನಿ ಮಧ್ಯೆ ಸದಾ ಕಲಹ ಆಗುತ್ತಿದ್ದರೆ, ವಿನಾಕಾರಣ ಭಿನ್ನಾಭಿಪ್ರಾಯ ಮೂಡಿ ಜಗಳ ಆಗುತ್ತಿದ್ದರೆ.

ಆ ಸಮಯದಲ್ಲಿ ಈ ರೀತಿ ಮಾಡಿ ರಾಯರ ಮಂತ್ರಾಕ್ಷತೆಯನ್ನು ತೆಗೆದುಕೊಂಡು ರಾಯರ ಬಳಿ ನಿಮ್ಮ ಕುಟುಂಬದ ಸಮಸ್ಯೆಗಳನ್ನೆಲ್ಲ ಹೇಳಿಕೊಂಡು ಅವರ ಅನುಗ್ರಹಕ್ಕಾಗಿ ಪ್ರಾರ್ಥಿಸಿ. ನಂತರ ಅದನ್ನು ಸಕ್ಕರೆ ಜೊತೆ ಬೆರೆಸಿ ತಲೆಯ ಮೇಲೆ ಹಾಕಿಕೊಳ್ಳಬೇಕು. ಈ ರೀತಿ ಮಂತ್ರಾಕ್ಷತೆಗೆ ಸಕ್ಕರೆಯನ್ನು ಮಿಶ್ರಣ ಮಾಡಿದ ಪ್ರಸಾದರವನ್ನು ಶುದ್ಧ ಮನಸ್ಸಿನಿಂದ ಮತ್ತೊಬ್ಬರ ಕಷ್ಟ ಪರಿಹಾರ ಆಗಲಿ ಎಂದು ಬೇರೆಯವರಿಗೆ ಕೊಡಬೇಕು.

ರಾಯರಿಗೆ ಒಳ್ಳೆಯ ಮನಸ್ಸಿನವರು, ಒಳ್ಳೆಯ ಗುಣ ನಡತೆ ಉಳ್ಳವರು ಹಾಗೂ ಸದಾ ತಮ್ಮಂತೆ ಇತರರನ್ನು ಕಾಣುವವರು, ಇತರ ಕಷ್ಟಗಳಿಗೆ ಕರಗುವವರನ್ನು ಕಂಡರೆ ಬಹಳ ಪ್ರೀತಿ. ಈ ರೀತಿ ಕೊಡುವುದರಿಂದ ಕೊಟ್ಟವರ ಹಾಗೂ ತೆಗೆದುಕೊಂಡವರ ಇಬ್ಬರ ಸಮಸ್ಯೆಗಳು ದೂರವಾಗಿ ಇಬ್ಬರು ನೆಮ್ಮದಿ ಕಾಣುತ್ತಾರೆ. ಅಲ್ಲದೇ ಸದಾ ಕಾಲ ಗುರುರಾಯರ ಅನುಗ್ರಹ ಅವರೆಲ್ಲರ ಮೇಲೆ ಇರುತ್ತದೆ. ಆದ್ದರಿಂದ ಈ ಉಪಯುಕ್ತ ಮಾಹಿತಿಯನ್ನು ಇನ್ನು ಹೆಚ್ಚಿನ ಜನರ ಹಂಚಿಕೊಂಡು ಬೇರೆಯವರ ಸಮಸ್ಯೆಗೆ ಪರಿಹಾರ ಕೊಡುವುದರ ಜೊತೆಗೆ ನೀವು ಸಹ ಗುರುರಾಯರ ಅನುಗ್ರಹಕ್ಕೆ ಪ್ರಾಪ್ತರಾಗಿ.

ಸಾಲಗಾರರಿಗೆ ಭರ್ಜರಿ ಗುಡ್ ನ್ಯೂಸ್ ಇನ್ನು ಮುಂದೆ ಒಂದು ರೂಪಾಯಿ ಕೂಡ ಬಡ್ಡಿ ಕಟ್ಟಬೇಕಾಗಿಲ್ಲ.

ಈಗಿನ ಕಾಲದಲ್ಲಿ ಯಾವುದಾದರೂ ಕಾರಣಕ್ಕಾಗಿ ನಾವು ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಆಗ ಹೆಚ್ಚಿನ ಜನ ಬ್ಯಾಂಕ್ ಗಳ ಮೈಕ್ರೋ ಫೈನಾನ್ಸ್ ಕಂಪನಿಗಳ ಅಥವಾ ಖಾಸಗಿ ಸಂಸ್ಥೆಗಳ ಮೊರೆ ಹೋಗುತ್ತಾರೆ. ಯಾಕೆಂದರೆ ವ್ಯಕ್ತಿಗಳ ಬಳಿ ಸಾಲ ಮಾಡುವುದರಿಂದ ಬಡ್ಡಿದರ ಹೆಚ್ಚಿರುತ್ತದೆ. ಆದ್ದರಿಂದ ಬ್ಯಾಂಕುಗಳ, ಹಣಕಾಸು ಸಂಸ್ಥೆಗಳ ವ್ಯವಹಾರ ಉತ್ತಮ ಎಂದು ಭಾವಿಸಿ ಹಾಗೂ ಅಲ್ಲಿ ಬಡ್ಡಿದರ ಕಡಿಮೆ ಇರುತ್ತದೆ ಎನ್ನುವ ಕಾರಣಕ್ಕೆ ಮತ್ತು EMI ವ್ಯವಸ್ಥೆ ಮುಂತಾದ ಸೌಲಭ್ಯಗಳು ಸಿಗುವ ಕಾರಣ ಬ್ಯಾಂಕ್ ಗಳ ಮೊರೆ ಹೋಗುತ್ತಾರೆ.

ಆದರೆ ಬ್ಯಾಂಕ್ಗಳು ಬಡ್ಡಿ ಹೆಸರಿನಲ್ಲಿ ಜನರ ಜೀವನ ಹಿಂಡಿ ಹಿಪ್ಪೆ ಮಾಡುತ್ತಿವೆ. ಇಷ್ಟ ಬಂದ ರೀತಿ ನಿಯಮ ಮಾಡಿ ಅಥವಾ ನಿಯಮ ಬದಲಾಯಿಸಿ ಗ್ರಾಹಕರಿಗೆ ಸಾಲದ ಹೊರೆ ಹೆಚ್ಚಾಗುವಂತೆ ಮಾಡಿ ನೋವು ಕೊಡುತ್ತಿವೆ. ಮನೆ ಕಟ್ಟಿಸುವುದಕ್ಕೆ ಸಾಲ ಮಾಡಿದವರು, ಸೈಟ್ ಖರೀದಿಸುವುದಕ್ಕೆ ಸಾಲ ಮಾಡಿದವರು, ವಾಹನ ಖರೀದಿಗೆ ಸಾಲ ಮಾಡಿದವರು ಅಥವಾ ತಮ್ಮ ಆಸ್ತಿಯನ್ನೇ ಅಡಮಾನ ಇಟ್ಟು ಸಾಲ ತೆಗೆದುಕೊಂಡಿದ್ದವರಿಗೂ ಕೂಡ ಬ್ಯಾಂಕುಗಳು ಬಡ್ಡಿ ದರದ ಹೆಸರಿನಲ್ಲಿ ಸುಲಿಗೆ ಮಾಡಿ ತಮ್ಮ ಕಂಪನಿಯ ಲಾಭವನ್ನು ಹೆಚ್ಚಿಸಿಕೊಳ್ಳುತ್ತಿವೆ ಹಾಗೂ ಗ್ರಾಹಕರ ಹಿತಾಸಕ್ತಿಯ ಬಗ್ಗೆ ಕಿಂಚಿತ್ತು ಕರುಣೆ ತೋರುತ್ತಿಲ್ಲ.

ಇದನ್ನೆಲ್ಲಾ ಬಹಳ ಸೂಕ್ಷ್ಮ ದೃಷ್ಟಿಯಲ್ಲಿ ಕಂಡಿದ್ದ RBI ಹೊಸತೊಂದು ನಿಯಮ ತರುವ ಮೂಲಕ ಅದಕ್ಕೆಲ್ಲ ಕಡಿವಾಣ ಹಾಕುವ ಪ್ರಯತ್ನ ಮಾಡಿದೆ. ಇತ್ತೀಚೆಗೆ RBI ಹೊಸದೊಂದು ನಿಯಮವನ್ನು ಈ ವಿಷಯಕ್ಕಾಗಿ ರೂಪಿಸಿ ಅದೇ ರೀತಿ ಎಲ್ಲಾ ಬ್ಯಾಂಕುಗಳು, ಹಣಕಾಸಿನ ಸಂಸ್ಥೆಗಳು ಮತ್ತು ಸಾಲ ನೀಡುವ ಮೈಕ್ರೋ ಫೈನಾನ್ಸ್ ಕಂಪನಿಗಳು ಇದನ್ನೇ ಪಾಲಿಸಬೇಕು ಎಂದು ಶರತ್ತು ಹಾಕಿದೆ. ಒಂದು ವೇಳೆ ತಪ್ಪಿದಲ್ಲಿ ಗ್ರಾಹಕರಿಂದ ದೂರು ದಾಖಲಾದರೆ ಅಂತಹ ಕಂಪನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ.

ಈಗ ಬ್ಯಾಂಕುಗಳಲ್ಲಿ ಸಾಲ ಕೊಡಬೇಕು ಎಂದರೆ ಖಂಡಿತವಾಗಿಯೂ ಹಲವು ಕಾಗದ ಪತ್ರಗಳ ದಾಖಲೆ ತೆಗೆದುಕೊಳ್ಳುತ್ತಾರೆ. ಇವುಗಳ ಜೊತೆ ಮೊಬೈಲ್ ಸಂಖ್ಯೆ ಕೂಡ ಒಂದು. ಹೀಗೆ ಮೊಬೈಲ್ ಸಂಖ್ಯೆ ಪಡೆದುಕೊಂಡಿರುವ ಬ್ಯಾಂಕುಗಳೇ ಆಗಲಿ, ಸಾಲ ಕೊಡುವ ಮೈಕ್ರೋ ಫೈನಾನ್ಸ್ ಕಂಪನಿಗಳೇ ಆಗಲಿ ಇನ್ನಿತರ ಸಂಸ್ಥೆಗಳೇ ಆಗಲಿ ಸಾಲಗಾರರಿಗೆ ಅವರು ಸಾಲ ಕಟ್ಟುವ ಸಮಯ ಹಾಗೂ ಬಡ್ಡಿ ಕಟ್ಟುವ ಸಮಯ ಹತ್ತಿರ ಬಂದಾಗ ಮೆಸೇಜ್ ನೋಟಿಫಿಕೇಶನ್ ಕಳಿಸುವ ಮೂಲಕ ಮಾಹಿತಿ ಅವರಿಗೆ ತಲುಪಿಸಬೇಕು ಎಂದು ಹೇಳಿದೆ.

ಯಾಕೆಂದರೆ ಇದುವರೆಗೆ ಸಾಲ ತೆಗೆದುಕೊಂಡ ಗ್ರಾಹಕರು ಒಂದು ವೇಳೆ ಒಂದು, ಎರಡು ದಿನ ಮರೆತು ತಡ ಮಾಡಿದ್ದರು ಕೂಡ ಆ ಸಾಲ ಕೊಟ್ಟ ಕಂಪನಿಗಳು ಅವರ ಬಡ್ಡಿಯ ಮೇಲೂ ಬಡ್ಡಿ ಹಾಕಿ, ಹಣ ಪೀಕುತ್ತಿದ್ದವು. ಇದನ್ನು ನಿಲ್ಲಿಸಲು ಸರ್ಕಾರ ಈ ನಿರ್ಧಾರ ಮಾಡಿದೆ. ಇದರೊಂದಿಗೆ ಒಂದೊಂದು ಕಂಪನಿಗಳು ಹಾಗೂ ಬ್ಯಾಂಕಿನಿಂದ ಬ್ಯಾಂಕಿಗೆ ಒಂದೇ ರೀತಿಯ ಸಾಲಗಳ ಮೇಲೆ ವಿಧಿಸುವ ಬಡ್ಡಿದರದಲ್ಲಿ ಬಹಳ ವ್ಯತ್ಯಾಸ ಇರುತ್ತದೆ.

ಇದಕ್ಕೂ ಕೂಡ ಸರ್ಕಾರ ನಿಯಮ ಹೇರಿದ್ದು ಒಂದೇ ರೀತಿಯ ಸಾಲದ ಮೇಲೆ ಯಾವುದೇ ಹಣಕಾಸು ಸಂಸ್ಥೆ ಆಗಲಿ ಮೈಕ್ರೋ ಫೈನಾನ್ಸ್ ಕಂಪನಿ ಆಗಲಿ ಅಥವಾ ಬ್ಯಾಂಕುಗಳ ಆಗಲಿ ವಿಧಿಸುವ ಬಡ್ಡಿದರ ಒಂದೇ ತೆರನಾಗಿರಬೇಕು ಎಂದಿದೆ. ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ. ಹಾಗೂ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ.

ಈ ಮಹಾಮಂತ್ರವನ್ನು ಒಂದು ಬಾರಿ ಹೇಳಿದ್ರೆ ಸಾಕು ಕಬ್ಬಿಣವೂ ಚಿನ್ನವಾಗುತ್ತದೆ, ಅಸಾಧ್ಯವು ಸಾಧ್ಯವಾಗುತ್ತದೆ. ಹಣಕಾಸಿನ ತೊಂದರೆ ಇದ್ದವರು ಇದನ್ನು ಮಾಡಿ ನಿಮ್ಮ ಕಷ್ಟ ನಿವಾರಣೆಯಾಗುತ್ತದೆ

ಮನುಷ್ಯನ ಎಲ್ಲ ಪೂಜೆ, ಆರಾಧನೆ ವ್ರತ ತಪಗಳ ಮೂಲ ಭಗವಂತನೇ ಆಗಿದ್ದಾನೆ. ಭಗವಂತ ಎನ್ನುವ ಆ ಒಂದು ಹೆಸರಿನ ನಂಬಿಕೆಯಿಂದ ಇಷ್ಟೆಲ್ಲಾ ಜರುಗುತ್ತದೆ. ಆದರೆ ಆ ಹೆಸರಿಗೆ ಎಷ್ಟು ಶಕ್ತಿ ಇದೆ ಎಂದರೆ ಆ ನಂಬಿಕೆಯಿಂದ ಕಲ್ಲು ಕೂಡ ಕರಗುತ್ತದೆ, ಒಣ ಗಿಡ ಕೂಡ ಚಿಗುರುತ್ತದೆ, ವಿಷವು ಕೂಡ ಅಮೃತವಾಗುತ್ತದೆ. ಆ ರೀತಿ ಬಲವಾದ ನಂಬಿಕೆ ಇದ್ದಲ್ಲಿ ಖಂಡಿತ ಅಂತಹ ಅದ್ಭುತಗಳು ನಡೆಯುತ್ತದೆ.

ಇದನ್ನೆಲ್ಲ ಕಂಡ ಮಹಾಶರಣರು ಕೂಡ ತಮ್ಮ ವಚನಗಳಲ್ಲಿ ಇದನ್ನೇ ತಿಳಿಸಿ ಹೋಗಿದ್ದಾರೆ. ನೀನೊಲಿದರೆ ಕೊರಡು ಕೊನರುವುದಯ್ಯ, ನೀನೊಲಿದರೆ ಭಯವು ಹಯನಹುದಯ್ಯ ಕೂಡಲಸಂಗಮದೇವ ಎಂದು. ಹೀಗೆ ದೇವನೊಬ್ಬ ನಾಮ ಹಲವು ಎನ್ನುವುದು ಕೂಡ ಸತ್ಯ. ಯಾವುದೇ ಹೆಸರಿನಿಂದ ಭಗವಂತ ಎಂದು ನಂಬಿಕೆಯಿಂದ ಕರೆದರೂ ಆ ನಂಬಿಕೆ ಎನ್ನುವ ಪಾಸಿಟಿವ್ ಶಕ್ತಿ ನಮ್ಮನ್ನು ಪೊರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಜಗತ್ತಿನಲ್ಲಿ ಎಷ್ಟು ಜನರು ಇದ್ದಾರೆ ಅಷ್ಟೇ ಸಂಖ್ಯೆಯ ದೇವಾನು ದೇವತೆಗಳು ಕೂಡ ಇದ್ದಾರೆ ಎನ್ನುವ ಮಾತು ಇದೆ. ಮತ್ತು ಇದನ್ನೆಲ್ಲ ನಿರ್ವಹಿಸುವ ಎಲ್ಲವನ್ನು ಮೀರಿದ ಪ್ರಬಲ ಶಕ್ತಿ ಇದೆ, ಆದರೆ ಇಚ್ಛೆಯಿಂದ ಇದೆಲ್ಲ ನಡೆಯುತ್ತಿದೆ ಎನ್ನುವುದು ಕೂಡ ನಾವು ಕಾಣದ ಸತ್ಯ. ಯುಗ ಯುಗಾಂತರಗಳಿಂದ, ತಲಾತಲಾಂತರದಿಂದ ಇದನ್ನೇ ಸಾರಿರುವುದರಿಂದ ನಾವು ಕಣ್ಣು ಮುಚ್ಚಿ ಇದನ್ನು ನಂಬಬಹುದಾಗಿದೆ.

ಯಾವಾಗ ಬದುಕಿನಲ್ಲಿ ಎಲ್ಲ ನಂಬಿಕೆಯು ಕಳೆದು ಹೋಗುತ್ತದೆಯೋ ಆಗ ಮನುಷ್ಯ ತನ್ನ ಆಧ್ಯಾತ್ಮದ ಸೆಲೆಯನ್ನು ಹುಡುಕಿ ಹೊರಡುತ್ತಾನೆ. ನಂತರ ಆತನಿಗೆ ನಿಜವಾದ ಆನಂದ ಸಿಗುತ್ತದೆ. ಜ್ಞಾನೋದಯವಾಗಿ ಈ ಪ್ರಪಂಚದಲ್ಲಿ ಇರುವ ಅಗೋಚರ ಶಕ್ತಿಗಳ ಬಗ್ಗೆ ನಂಬಿಕೆ ಬರುತ್ತದೆ. ನಾವು ಎಷ್ಟೇ ಪ್ರಯತ್ನ ಪಟ್ಟರು ಕೂಡ ನಮ್ಮ ಆಯಸ್ಸು ಮುಗಿಯವರೆಗೆ ಈ ಭವ ಬಂಧನದ ಪಾಶದಲ್ಲಿ ಸಿಲುಕಿ ನರಳಲೇಬೇಕು.

ಒಮ್ಮೊಮ್ಮೆ ವಿಧಿಯಾಟದಲ್ಲಿ ಸೋತು ಸಣ್ಣವಾಗುತ್ತವೆ. ಅಂತಹ ಸಮಯದಲ್ಲೆಲ್ಲ ಸಂಕಟ ಬಂದಾಗ ಭಗವಂತನನ್ನು ಮಾತ್ರ ನೆನೆಯಲು ಸಾಧ್ಯ. ಬದುಕಿನ ಈ ಜಂಜಾಟವನ್ನೆಲ್ಲ ನಮ್ಮ ಅಷ್ಟು ಸಾಮರ್ಥ್ಯ ಹಾಕಿ ಎದುರಿಸುವ ಪ್ರಯತ್ನ ಮಾಡಿದರು ಕಾಣದ ಶಕ್ತಿಯಾಗಿ ಆ ಒಂದು ಹೆಸರು ಕೊಡುವ ಬಲವೇ ಬೇರೆ. ಹೆಗಲ ಬಾರ ಬೇಕಾದರೂ ಹಂಚಬಹುದು ಆದರೆ ಮನದ ಭಾರಕೆ ಹೆಗಲಿಲ್ಲ ಎನ್ನುವ ಮಾತು ಇದೆ.

ಆದರೆ ಮನದ ಭಾರ ಇಳಿಸಿಕೊಳ್ಳಲು ಭಗವಂತನ ಒಂದು ಹೆಸರು ಸಾಕು. ಆ ಹೆಸರನ್ನು ಹಿಡಿದು ಕರೆದರೆ ಸಕಲ ಭಾರಗಳು ಇಳಿದು ಮನಸ್ಸು ಹಾಗೂ ಬದುಕು ಹಗುರಾವುದರಲ್ಲಿ ಯಾವುದೇ ಅನುಮಾನ ಇಲ್ಲ. ಆ ಹೆಸರು ಯಾವುದು ಎಂದರೆ ಅದನ್ನು ಪುರಾಣಗಳಲ್ಲಿ ಆದಿ ಹಾಗೂ ಅಂತ್ಯಗಳಿಲ್ಲದ ಶಕ್ತಿಯ ಹೆಸರು ಎಂದು ಕರೆಯುತ್ತಾರೆ. ಈ ಹೆಸರನ್ನೇ ಶಿವನು ಸಹ ತಾನು ವಿಷ ಕುಡಿದ ಘಳಿಗೆಯಲ್ಲಿ ನೆನೆದಿದ್ದು ಎನ್ನುವ ಮಾತು ಇದೆ.

ಅಂತಹ ಹೆಸರು ಶ್ರೀರಾಮನ ಹೆಸರು ಎನ್ನುವ ನಂಬಿಕೆಯೂ ಇದೆ. ಶ್ರೀರಾಮ ಜಪವನ್ನು ಭಕ್ತಿಯಿಂದ ಮನದಲ್ಲಿ ಧ್ಯಾನಿಸಿದವರಿಗೆ ಎಂತಹ ಕಷ್ಟಗಳು ಕೂಡ ಕರಗಿ ನೀರಾಗಿ ಹೋಗುವುದರಲ್ಲಿ ಅನುಮಾನವೇ ಇಲ್ಲ. ಅವರು ನಡೆಯುವ ಹಾದಿ ಮುಳ್ಳಾದರು ಕೂಡ ರಾಮ ನಾಮ ಜಪ ಮಾಡಿದರೆ ಅದೇ ಹೂವಿನ ಹಾಸಿಗೆ ಆಗಿ ಬದಲಾಗುತ್ತದೆ. ಇಂತಹ ಶಕ್ತಿ ಇರುವ ಶ್ರೀ ರಾಮನ ಹೆಸರನ್ನು ಸದಾ ಧ್ಯಾನ ಮಾಡುತ್ತಾ ಆದಷ್ಟು ದಿನನಿತ್ಯದ ಜಂಜಾಟಗಳಿಂದ ಮುಕ್ತರಾಗೋಣ.

ಸೈನಿಕ ಶಾಲೆಯಲ್ಲಿ ನೇಮಕಾತಿ, ಊಟ ವಸತಿ ಉಚಿತದೊಂದಿಗೆ 50,000 ದವರೆಗೆ ಸಂಬಳ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.

ಕರ್ನಾಟಕದಲ್ಲಿರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸಿಹಿಸುದ್ದಿ. ಯಾಕೆಂದರೆ, ಬಿಜಾಪುರದಲ್ಲಿರುವ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ನೇಮಕಾತಿ ನಡೆಯುತ್ತಿದೆ. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉತ್ತಮ ಮೊತ್ತದ ಮಾಸಿಕ ವೇತನದ ಜೊತೆ ಉಚಿತವಾಗಿ ವಸತಿ ಮತ್ತು ಊಟದ ವ್ಯವಸ್ಥೆಯು ಸಹ ಇರುತ್ತದೆ.

ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಅರ್ಹತೆ ಇರುವ ಎಲ್ಲಾ ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವುದಕ್ಕೆ ಮುನ್ನ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ಆ ಪ್ರಕಾರವಾಗಿ ಅರ್ಹತೆ ಇದ್ದವರು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಕೋರಲಾಗಿದೆ. ಆಕಾಂಕ್ಷಿಗಳಿಗೆ ಅನುಕೂಲತೆ ಮಾಡಿಕೊಳ್ಳುವ ಸಲುವಾಗಿ ಈ ಅಂಕಣದಲ್ಲೂ ಸಹ ಅಧಿಸೂಚನೆಯಲ್ಲಿ ಇರುವ ಎಲ್ಲಾ ಪ್ರಮುಖ ಅಂಶಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಉದ್ಯೋಗ ಸಂಸ್ಥೆ:- ಸೈನಿಕ ಶಾಲೆ
ಉದ್ಯೋಗ ಸ್ಥಳ:- ಬಿಜಾಪುರ
ಒಟ್ಟು ಹುದ್ದೆಗಳ ಸಂಖ್ಯೆ:- 08
ವೇತನ ಶ್ರೇಣಿ:- 60,000 ಮಾಸಿಕವಾಗಿ…

ಹುದ್ದೆಗಳ ವಿವರ:-
● LDC – 1
● ಮ್ಯೂಸಿಕ್ ಟೀಚರ್ – 1
● PEM / PTI & Matron – 1
● ಕೌನ್ಸಲರ್ – 1
● ವಾರ್ಡ್ ಬಾಯ್ಸ್ – 4

ಶೈಕ್ಷಣಿಕ ವಿದ್ಯಾರ್ಹತೆ:-
● LDC – ದ್ವಿತೀಯ ಪಿಯುಸಿ
● ಮ್ಯೂಸಿಕ್ ಟೀಚರ್ – ದ್ವಿತೀಯ ಪಿಯುಸಿ, ಡಿಪ್ಲೋಮೋ, ಪದವಿ
● PEM / PTI & Matron – ದ್ವಿತೀಯ ಪಿಯುಸಿ
● ಕೌನ್ಸಲರ್ – ಪದವಿ ಸ್ನಾತಕೋತ್ತರ ಪದವಿ
● ವಾರ್ಡ್ ಬಾಯ್ಸ್ – ದ್ವಿತೀಯ ಪಿಯುಸಿ.

ವಯೋಮಿತಿ:- ಹುದ್ದೆಗಳಿಗನುಸಾರವಾಗಿ…
● LDC – ಕನಿಷ್ಠ 18 ವರ್ಷಗಳು ಗರಿಷ್ಠ 50 ವರ್ಷಗಳು.
● ಮ್ಯೂಸಿಕ್ ಟೀಚರ್ – ಕನಿಷ್ಠ 18 ವರ್ಷಗಳು ಗರಿಷ್ಠ 50 ವರ್ಷಗಳು.
● PEM / PTI & Matron – ಕನಿಷ್ಠ 18 ವರ್ಷಗಳು ಗರಿಷ್ಠ 50 ವರ್ಷಗಳು.
● ಕೌನ್ಸಲರ್ – ಕನಿಷ್ಠ 21 ವರ್ಷಗಳು, ಗರಿಷ್ಠ 35 ವರ್ಷಗಳು.
● ವಾರ್ಡ್ ಬಾಯ್ಸ್ – ಕನಿಷ್ಠ 18 ವರ್ಷಗಳು ಗರಿಷ್ಠ 50 ವರ್ಷಗಳು.

ಅರ್ಜಿ ಶುಲ್ಕ:-
ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೂ ಕೂಡ 500ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.
ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.

ಅರ್ಜಿ ಶುಲ್ಕ ಪಾವತಿ ವಿಧಾನ:- ಆಫ್ ಲೈನ್ ಮೂಲಕ…

ಅರ್ಜಿ ಸಲ್ಲಿಸುವ ವಿಧಾನ:-
● ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಸವಿವರಗಳನ್ನು ತುಂಬಿಸಬೇಕು.
● ಇದರ ಜೊತೆ ಶೈಕ್ಷಣಿಕ ವಿದ್ಯಾಭ್ಯಾಸ ಮತ್ತು ವಯೋಮಿತಿ ಬಗ್ಗೆ ಕೇಳಲಾದ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಅಧಿಸೂಚನೆಯಲ್ಲಿ ತಿಳಿಸಿರುವ ವಿಳಾಸಕ್ಕೆ ಕಳುಹಿಸಬೇಕು.

ಆಯ್ಕೆ ವಿಧಾನ:-
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆಗಳು ಹಾಗೂ ವೈದ್ಯಕೀಯ ಪರೀಕ್ಷೆಗಳು ಇರುವುದಿಲ್ಲ
● ನೇರ ಸಂದರ್ಶನ ನಡೆಸುವ ಮೂಲಕ ಮತ್ತು ದಾಖಲೆಗಳ ಪರಿಶೀಲನೆ ನಡೆಸುವುದು ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:-
ಪ್ರಿನ್ಸಿಪಲ್,
ಸೈನಿಕ ಶಾಲೆ, ಬಿಜಾಪುರ
ಕರ್ನಾಟಕ – 586108.

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 29 ಏಪ್ರಿಲ್, 2023.
● ಅರ್ಜಿ ಸಲ್ಲಿಕೆಗೆ ಕಡೇ ದಿನಾಂಕ – 20 ಮೇ, 2023.

ತಾತನ ಅಣ್ಣ ಅವರ ಆಸ್ತಿಯನ್ನು ಅಪ್ಪನ ಹೆಸರಿಗೆ ಹಕ್ಕು ಖುಲಾಸೆ ಮಾಡಿ ಹೋಗಿದ್ದರೆ ಮುಂದೆ ತೊಡಕಾಗುವ ಸಾಧ್ಯತೆಗಳು ಇರುತ್ತವೆಯಾ?

ನಮ್ಮ ಭಾರತದಲ್ಲಿ ಆಸ್ತಿಗಳ ವಿಭಜನೆ ವಿಷಯದಲ್ಲಿ ಸಾಕಷ್ಟು ಗೊಂದಲಗಳು ಇವೆ. ಇನ್ನು ಸಹ ನಮ್ಮ ನ್ಯಾಯಾಲಯಗಳಲ್ಲಿ ಹೂಡುವ ಧಾವೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಗೆ ಸಂಬಂಧಪಟ್ಟ ಕೇಸ್ ಗಳೇ ಇರುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಆಸ್ತಿನ ಹಕ್ಕಿನ ಬಗ್ಗೆ ಸಾಮಾನ್ಯ ಜ್ಞಾನವನ್ನು ತಿಳಿದು ಕೊಂಡಿರಲೇಬೇಕು. ಅಂತಹದೊಂದು ಕೇಸಿನ ವಿಷಯವಾಗಿ ಇಲ್ಲಿ ಕೆಲವು ಮಾಹಿತಿಯನ್ನು ತಿಳಿಸಲು ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡಲಾಗಿದೆ.

ಉದಾಹರಣೆಗೆ ಒಂದು ಕೇಸ್ ಅಲ್ಲಿ ಒಬ್ಬ ವ್ಯಕ್ತಿಯ ತಾತನ ಅಣ್ಣ ಅವರ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಅವರ ತಂದೆ ಹೆಸರಿಗೆ ಮಾಡಿ ಹೋಗಿದ್ದಾರೆ ಎಂದೆಟ್ಟು ಕೊಳ್ಳುವುದಾದರೆ ನಂತರ ಅವರ ತಾತನ ಅಣ್ಣನ ಕಡೆಯಿಂದ ಮುಂದೆ ತೊಡಕುಗಳುಂಟಾಗಬಹುದಾ ಎನ್ನುವ ಗೊಂದಲ ಕುರಿತು ಪರಿಹರಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಪಿತ್ರಾರ್ಜಿತ ಆಸ್ತಿಯ ಹಕ್ಕು ಒಬ್ಬ ವ್ಯಕ್ತಿಯ ಎಲ್ಲಾ ಮಕ್ಕಳಿಗೂ ಕೂಡ ಇರುತ್ತದೆ. ಈಗ ವ್ಯಕ್ತಿಯೊಬ್ಬನ ಉದಾಹರಣೆಯೊಂದಿಗೆ ಇದನ್ನು ವಿವರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಉದಾಹರಣೆಗೆ ತೆಗೆದುಕೊಳ್ಳುವುದಾದರೆ ತಾತನ ತಂದೆಗೆ ತಾತ ಹಾಗೂ ಆತನ ಅಣ್ಣ ಇಬ್ಬರು ಮಕ್ಕಳಿದ್ದಾರೆ ಎಂದು ಇಟ್ಟುಕೊಳ್ಳೋಣ. ಪಿತ್ರಾರ್ಜಿತವಾಗಿ ತಾತನ ತಂದೆ ಆಸ್ತಿಯ ಸಮಾನ ಹಕ್ಕು ಅವರಿಗೆ ಬಂದಿರುತ್ತದೆ ಎಂದು ಇಟ್ಟುಕೊಳ್ಳೋಣ.

ಒಂದು ವೇಳೆ ತಾತನ ಅಣ್ಣ ಬೇರೆ ಕುಟುಂಬಕ್ಕೆ ಮನೆ ಅಳಿಯ ಆಗಿ ಹೋದ ಸಂದರ್ಭದಲ್ಲಿ ತನಗೆ ಆಸ್ತಿಯಲ್ಲಿ ಬಿಡಿಗಾಸು ಬೇಡ ಎಂದು ಹಕ್ಕು ಖುಲಾಸೆ ಪತ್ರವನ್ನು ಮಾಡಿ ಆಸ್ತಿ ಹಕ್ಕನ್ನು ಬಿಟ್ಟು ಹೋಗಿದ್ದರೆ ಮುಂದೆ ಅವರ ಕಡೆಯಿಂದ ತಾತನ ಅಣ್ಣನ ಕಡೆಯಿಂದ ಅಥವಾ ತಾತನ ಅಣ್ಣನ ಸಂಬಂಧಿಕರಿಂದ ಏನೇನು ಸಮಸ್ಯೆಗಳು ಆಗಬಹುದು ಎಂದು ತಿಳಿದುಕೊಳ್ಳೋಣ.

ತಾತನ ಅಣ್ಣ ಹಕ್ಕು ಖುಲಾಸೆ ಪತ್ರ ಮಾಡಿ ಆಸ್ತಿಯ ಮೇಲಿನ ಹಕ್ಕನ್ನು ಬಿಟ್ಟುಕೊಟ್ಟ ಸಂದರ್ಭದಲ್ಲಿ ಅವರಿಗೆ ಮದುವೆ ಆಗಿ ಮಕ್ಕಳಿಲ್ಲದೆ ಇದ್ದಾಗ ತಾತನ ತಂದೆಯ ಪಿತ್ರಾರ್ಜಿತ ಆಸ್ತಿಗೆ ತಾತ ಮತ್ತು ಆತನ ಅಣ್ಣ ವಾರಸ್ದಾರರು ಆಗಿರುತ್ತಾರೆ. ಅವರು ರಿಲೀಸ್ ಡೀಡ್ ಮೂಲಕ ಆ ಆಸ್ತಿಯ ಮೇಲಿನ ಹಕ್ಕನ್ನು ಬಿಡುಗಡೆ ಮಾಡಿಕೊಟ್ಟಿದ್ದರೆ ತಾತ ಆ ಹಕ್ಕಿಗೆ ಸಂಪೂರ್ಣ ಹಕ್ಕುದಾರರಾಗುತ್ತಾರೆ.

ನಂತರ ತಾತನಿಗೆ ತಂದೆ ಒಬ್ಬರೇ ಮಗನಾಗಿದ್ದರೆ ಆ ಸಂಪೂರ್ಣ ಆಸ್ತಿಗೆ ಮಗ ವಾರಸುದಾರರಾಗುತ್ತಾರೆ ಅಥವಾ ತಾತನಿಗೆ ಎಷ್ಟು ಜನ ಮಕ್ಕಳಿರುತ್ತಾರೆ ಆ ಆಸ್ತಿಯ ಮೇಲೆ ಸಮಾನವಾದ ಹಕ್ಕು ಇರುತ್ತದೆ. ಒಂದು ವೇಳೆ ತಾತನ ಅಣ್ಣ ಆಸ್ತಿ ಮೇಲಿನ ಹಕ್ಕನ್ನು ಬಿಡುಗಡೆ ಮಾಡಿಕೊಟ್ಟ ಸಂದರ್ಭದಲ್ಲಿ ಒಂದು ವೇಳೆ ಅವರಿಗೆ ಮಕ್ಕಳಿದ್ದ ಸಂದರ್ಭದಲ್ಲಿ ತಾತನ ಅಣ್ಣ ಒಬ್ಬರೇ ಹಕ್ಕು ಖುಲಾಸೆ ಪತ್ರ ಮಾಡಿಕೊಟ್ಟರೆ ಮುಂದೆ ಅವರ ಮಕ್ಕಳು ಈ ಹಕ್ಕು ಖುಲಾಸೆ ಪತ್ರ ನ್ಯಾಯ ಬದ್ದದಲ್ಲ. ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ನ್ಯಾಯದಲ್ಲಿ ಧಾವೆ ಹೂಡಬಹುದು.

ಈ ರೀತಿ ನ್ಯಾಯಾಲಯದಲ್ಲಿ ಇಂದು ಆಸ್ತಿ ವಿಘಟಣೆ ಕಾಯ್ದೆ ಕಾನೂನಿನ ಪ್ರಕಾರ ಅನೇಕ ರೀತಿಯ ನಿಯಮಗಳು ಇರುತ್ತವೆ. ಸಮಸ್ಯೆಯು ಎಷ್ಟು ಸಂಕೀರ್ಣವಾಗಿದೆ ಎನ್ನುವುದರ ಮೇಲೆ, ಅದರ ಬಗೆಗಿನ ಪರಿಹಾರವೂ ಕೂಡ ಇರುತ್ತದೆ. ಈ ವಿಷಯದ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಅಥವಾ ನಿಮ್ಮ ಪರಿಚಯದ ಯಾವುದಾದರು ವಕೀಲರನ್ನು ಸಂಪರ್ಕಿಸಿ ಈ ವಿಷಯದ ಬಗ್ಗೆ ಪೂರ್ತಿ ಮಾಹಿತಿ ಪಡೆದುಕೊಳ್ಳಿ

 

ಮೈತುಂಬಾ ಸಾಲ ಆಗಿದ್ಯಾ.? ಎಷ್ಟೇ ಕಷ್ಟ ಪಟ್ರು ಹಣ ಉಳಿತಾಯ ಮಾಡೋಕೆ ಆಗ್ತಿಲ್ವಾ.? ಚಿಂತೆ ಬಿಡಿ ಉಪ್ಪಿನ ಡಬ್ಬದಲ್ಲಿ ಈ ವಸ್ತು ಹಾಕಿ ಸಾಕು, ನಿಮ್ಮ ಸಾಲವೆಲ್ಲಾ ಬೇಗ ತಿರುತ್ತೆ.

 

 

ಉಪ್ಪಿಗೆ ಒಂದು ಅದ್ಭುತ ಶಕ್ತಿ ಇದೆ. ವಾಸ್ತುಶಾಸ್ತ್ರದಲ್ಲಿ ಉಪ್ಪಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಮನೆ ಜನರ ನಡುವೆ ವೈ ಮನಸು, ಬೇಸರ, ಸದಾ ಕೋಪ ಇರುತ್ತದೆ, ಮನೆಯಲ್ಲಿ ಯಾರಿಗೂ ನೆಮ್ಮದಿ ಇರುವುದಿಲ್ಲ, ಮನೆಗೆ ಬರಬೇಕು ಎಂದು ಯಾರಿಗೂ ಇಷ್ಟ ಆಗುವುದಿಲ್ಲ, ಮನೆಯ ವಾತಾವರಣವೇ ಚೆನ್ನಾಗಿರುವುದಿಲ್ಲ.

ದುಡಿದ ಹಣ ಸ್ವಲ್ಪವೂ ಕೂಡ ಮನೆಯಲ್ಲಿ ಉಳಿಯುವುದಿಲ್ಲ, ಮನೆಯಲ್ಲಿ ಯಾರಿಗೂ ಕೆಲಸ ಮಾಡಲು ಇಷ್ಟ ಇರುವುದಿಲ್ಲ, ಸಣ್ಣ ಸಣ್ಣ ವಿಚಾರಕ್ಕೂ ದೊಡ್ಡ ಕಲಹ, ವಿನಾಕಾರಣ ಜಗಳ, ವಿರಸ, ಸಾಲ ಹೆಚ್ಚಾಗುವುದು, ಅನಾರೋಗ್ಯ ಸಮಸ್ಯೆ ಉಂಟಾಗುವುದು, ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಓದಿನಲ್ಲಿ ಏಕಾಗ್ರತೆ ಬರದೆ ಇರುವುದು ಇನ್ನು ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಇದನ್ನೆಲ್ಲ ತೊಡೆದು ಹಾಕುವ ಶಕ್ತಿ ಉಪ್ಪಿಗೆ ಇದೆ. ನೀವು ಪ್ರತಿದಿನ ಮನೆ ಒರೆಸುವಾಗ ಆ ನೀರಿನ ಜೊತೆ ಒಂದು ಹಿಡಿ ಉಪ್ಪು ಹಾಕಿ ಮನೆ ಒರೆಸಿದರೆ ಸಾಕು. ಮನೆಯಲ್ಲಿರುವ ಎಲ್ಲಾ ನೆಗೆಟಿವ್ ಎನರ್ಜಿಯೂ ದೂರ ಹೋಗಿ ಮನೆ ವಾತಾವರಣವೇ ಸಕಾರಾತ್ಮಕವಾಗಿ ಬದಲಾಗಿ ಹೋಗುತ್ತದೆ. ನಿಮಗೆ ಇರುವ ಎಲ್ಲಾ ಸಮಸ್ಯೆಗಳು ಕೂಡ ಕ್ರಮೇಣ ಕರಗುತ್ತಾ ಬರುತ್ತದೆ.

ಆದರೆ ಯಾವುದೇ ಕಾರಣಕ್ಕೂ ಗ್ರಹಣದ ದಿನ ಹೊರತು ಪಡಿಸಿ ಇನ್ಯಾವುದೇ ಕಾರಣಕ್ಕೂ ಗುರುವಾರದ ದಿನ ಮನೆಯನ್ನು ಒರೆಸಬಾರದು. ಇನ್ನು ಮನೆಯಲ್ಲಿರುವ ಸಾಲ ಬೇಗ ತೀರಬೇಕು ಆರ್ಥಿಕತೆಯಲ್ಲಿ ಉತ್ತಮ ಬೆಳವಣಿಗೆ ಬರಬೇಕು, ಮನೆಗೆ ದನಾಕರ್ಷಣೆ ಉಂಟಾಗಬೇಕು ಎಷ್ಟೇ ಪ್ರಯತ್ನ ಪಟ್ಟರು ಕೂಡ ಹಣ ಉಳಿಯುತ್ತಿಲ್ಲ, ತೆಗೆದುಕೊಂಡಿರುವ ಸಾಲ ತೀರಿಸಲು ಆಗುತ್ತಲೇ ಇಲ್ಲ ಅಂದರೆ ಬೇಗ ಸಾಲ ತೀರಿಸಲು ಈ ಒಂದು ಉಪಾಯವನ್ನು ಉಪ್ಪಿನಿಂದ ಮಾಡಿ ಸಾಕು.

ಶುಕ್ರವಾರದಂದು ನೀವು ಎಂದಿನಂತೆ ಮನೆ ಶುದ್ಧಗೊಳಿಸಿ ದೇವರ ಪೂಜೆ ಮಾಡಿ. ಲಕ್ಷ್ಮಿಯನ್ನು ಆರಾಧಿಸಿದ ನಂತರ ಒಂದು ಗಾಜಿನ ಬಟ್ಟಲಿನಲ್ಲಿ ಉಪ್ಪನ್ನು ಇಡಿ. ಆ ಉಪ್ಪಿನ ಜೊತೆ ಆರು ಲವಂಗವನ್ನು ಇಡಿ, ಗಾಜಿನ ಬಟ್ಟಲು ಬಿಟ್ಟು ಬೇರೆ ಯಾವುದೇ ಪ್ಲಾಸ್ಟಿಕ್ ಲೋಹ ಇತ್ಯಾದಿಗಳ ಬಟ್ಟಲನ್ನು ಬಳಸುವಂತಿಲ್ಲ. ಇಟ್ಟು ನಂತರ ಲಕ್ಷ್ಮಿಯನ್ನು ಮನಸಾರೆ ಪ್ರಾರ್ಥಿಸಿ.

ಈ ಮನೆಯಲ್ಲಿರುವ ನೆಗೆಟಿವ್ ಎನರ್ಜಿಗಳು ಉಪ್ಪಿನಲ್ಲಿ ಹೀರಿಕೊಳ್ಳಲಿ ಹಾಗೂ ಪಾಸಿಟಿವ್ ಎನರ್ಜಿಯನ್ನು ಆ ಲವಂಗಕ್ಕೆ ಕೊಡಿ ನನ್ನ ಸಾಲ ಬೇಗ ತೀರಿ ಹೋಗಬೇಕು, ನಾನು ಮನೆ ಕಟ್ಟಬೇಕು ಎಂದುಕೊಂಡ ಕೆಲಸ ಬೇಗ ಆಗಬೇಕು, ನಮ್ಮ ಮನೆ ಹಣದ ಪರಿಸ್ಥಿತಿ ಸುಧಾರಿಸಬೇಕು ಎಂದು ಪ್ರಾರ್ಥಿಸಿಕೊಳ್ಳಿ.

ಮರುದಿನ ಶನಿವಾರ ಎಂದಿನಂತೆ ಪೂಜಾ ಕಾರ್ಯ ಎಲ್ಲಾ ಮಾಡಿದ ಬಳಿಕ ಮತ್ತೊಮ್ಮೆ ಲಕ್ಷ್ಮಿ ಪ್ರಾರ್ಥಿಸಿ ಇಟ್ಟಿದ್ದ ಉಪ್ಪನ್ನು ಅಡುಗೆ ಮನೆ ಸಿಂಕಿನಲ್ಲಿ ಹಾಕಿ ಕರಗಿಸಿಬಿಡಿ. ಒಂದು ವೇಳೆ ಅಡುಗೆ ಮನೆಯಲ್ಲಿ ಸಿಂಕ್ ವ್ಯವಸ್ಥೆ ಇಲ್ಲ ಅಂದರೆ ಮನೆಯಿಂದ ಹೊರಗೆ ತಂದು ಅದನ್ನು ಬೇರೆ ನೀರಿನ ಜೊತೆ ಹಾಕಿ ಕರಗಲು ಬಿಡಿ, ಅದು ಕರಗಿದ ಬಳಿಕ ಯಾರು ತುಳಿಯದ ಜಾಗದಲ್ಲಿ ಅದನ್ನು ಹಾಕಿ ಮತ್ತು ಲವಂಗವನ್ನು ಕೂಡ ಯಾರು ತುಳಿಯದ ಜಾಗದಲ್ಲಿ ಹಾಕಿ.

ಲವಂಗವನ್ನು ಮಣ್ಣಿನ ಒಳಗಡೆ ಯಾವುದಾದರೂ ಗಿಡದ ಬುಡದಲ್ಲಿ ಯಾರಿಗೂ ಕಾಣದಂತೆ ಹಾಕಿದರೆ ಇನ್ನು ಹೆಚ್ಚಿನ ಫಲ ಸಿಗುತ್ತದೆ. ಈ ರೀತಿ ಮಾಡಿದರೆ ವಾರದಿಂದ ವಾರಕ್ಕೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಆಶ್ಚರ್ಯಕರ ರೀತಿಯಲ್ಲಿ ನಿಮ್ಮ ಸಾಲವೆಲ್ಲ ತೀರಿ ಹೋಗುತ್ತದೆ.

ದೇವರ ಕೋಣೆಯಲ್ಲಿ ಈ ಒಂದು ವಸ್ತು ಇಟ್ಟರೆ ಸಾಕು, ನಿಮ್ಮ ಮನೆಯ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ.

 

 

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಕಷ್ಟಗಳು ಇದ್ದೇ ಇರುತ್ತವೆ. ಸಮಸ್ಯೆಗಳು ಬರುವುದು ಹೊಸದೇನಲ್ಲ ಹಾಗೆ ಅವುಗಳನ್ನು ನಿವಾರಿಸಿಕೊಂಡು ಬದುಕಿನಲ್ಲಿ ಮುಂದೆ ಹೋಗುವುದು ಮುಖ್ಯ. ಈ ರೀತಿ ನಮಗೆ ಯಾವುದೇ ಸಮಸ್ಯೆಗಳು ಆದಾಗ ಯಾವುದೇ ರೀತಿಯ ಹಣ ಖರ್ಚು ಆಗದಂತೆ ಮನೆಯಲ್ಲೇ ಸಿಗುವ ಕೆಲವು ವಸ್ತುಗಳಿಂದ ಪರಿಹಾರ ಮಾಡಿಕೊಳ್ಳಬಹುದು.

ಇದಕ್ಕೆ ತಂತ್ರ ಎಂದು ಕರೆಯುತ್ತಾರೆ. ಈ ತಂತ್ರಗಳನ್ನು ಮಾಡುವುದರಿಂದ ಯಾವುದೇ ರೀತಿಯಅಡ್ಡ ಪರಿಣಾಮ ಆಗುವುದಿಲ್ಲ. ಬದಲಾಗಿ ಪರಿಣಾಮಕಾರಿಯಾಗಿ ಅತಿ ಶೀಘ್ರವಾಗಿ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ಹೆಚ್ಚು ಖರ್ಚು ಇಲ್ಲದೆ ಚಿಕ್ಕ ಚಿಕ್ಕ ವಸ್ತುಗಳನ್ನು ಉಪಯೋಗಿಸುವ ಮೂಲಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಅತಹದೇ ಒಂದು ತಂತ್ರದ ಬಗ್ಗೆ ಇಂದು ನಾವು ತಿಳಿಸಿ ಕೊಡುತ್ತಿದ್ದೇವೆ. ನಿಮ್ಮ ಮನೆಯಲ್ಲಿ ನೆಗೆಟಿವ್ ವೈಬ್ರೇಶನ್ ಇದೆ ಎಂದು ನಿಮಗೆ ಅನಿಸಿದರೆ, ಮನೆಯ ವಾತಾವರಣ ಚೆನ್ನಾಗಿಲ್ಲ ಅನಿಸಿದರೆ, ಎಷ್ಟೇ ದುಡಿಯುತ್ತಿದ್ದರು ಹಣ ಕೈ ಸೇರುತ್ತಿಲ್ಲ ಎನ್ನುವುದಾದರೆ, ಬಂದ ಹಣ ಕೈಯಲ್ಲಿ ಉಳಿಯದೆ ವಿನಾಕಾರಣ ಖರ್ಚಾಗುತ್ತಿದೆ, ಮನೆಯಲ್ಲಿ ಒಂದು ರೀತಿಯ ವಿಚಿತ್ರ ವಾತಾವರಣ, ಮನೆಗೆ ಏನೇ ಮಾಡಿದರೂ ಸಾಕಾಗುತ್ತಿಲ್ಲ.

ಏನೇ ತಂದರೂ ಸಾಕಾಗುತ್ತಿಲ್ಲ, ಮನೆಯಲ್ಲಿರುವ ಎಲ್ಲರ ನಡುವೆ ಒಂದಲ್ಲ ಒಂದು ಮನಸ್ತಾಪ ವಿನಾಕಾರಣ ಜಗಳ ಕೋಪ ಈ ರೀತಿ ಏನೇ ಇದ್ದರೂ ಈ ಒಂದು ಉಪಾಯದಿಂದ ಇದನ್ನೆಲ್ಲ ಪರಿಹಾರ ಮಾಡಬಹುದು. ಈ ಒಂದು ಉಪಾಯ ನೀವು ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಆರೋಗ್ಯ ಸಕಲ ಸಂಪತ್ತು ಐಶ್ವರ್ಯ ಎಲ್ಲವೂ ಕೂಡ ತುಂಬಿ ತುಳುಕಾಡುತ್ತದೆ. ಸುಲಭವಾಗಿ ಈ ಒಂದು ಪ್ರಯೋಗವನ್ನು ಮಾಡಿ.

ಇದಕ್ಕೆ ಹೆಚ್ಚಿಗೆ ಏನು ಮಾಡುವ ಅಗತ್ಯ ಇಲ್ಲ. ನಿಮ್ಮ ಮನೆಯ ದೇವರ ಕೋಣೆಯಲ್ಲಿ ಒಂದು ವಸ್ತು ಇಟ್ಟರೆ ಸಾಕು. ಅದು ಯಾವುದೆಂದರೆ ಜೇನುತುಪ್ಪ, ಜೇನುತುಪ್ಪ ತುಂಬಿದ ಬಾಟಲಿಯನ್ನು ದೇವರ ಮನೆಯಲ್ಲಿ ಇಡಿ. ಅದರಲ್ಲೂ ಶುದ್ದ ಜೇನು ತುಪ್ಪ, ಕೆಮಿಕಲ್ ರಹಿತವಾದ ಜೇನುತುಪ್ಪವಾಗಿದ್ದರೆ ಇನ್ನೂ ಒಳ್ಳೆಯದು. ಆ ಬಾಟಲ್ ತುಂಬಿರಬೇಕು, ಅಂಗಡಿಯಿಂದ ಖರೀದಿಸಿ ತಂದರೆ ಬಾಟಲ್ ಓಪನ್ ಮಾಡದೆ ಅದರಲ್ಲಿ ಒಂದು ಚೂರು ಕೂಡ ನೀವು ಬಳಸದೆ ಅದನ್ನು ಹಾಗೆ ಇಡಿ.

ನೀವು ನಿಮ್ಮ ಶಕ್ತಿಯನುಸಾರ ಚಿಕ್ಕದಾದರೂ ಇಡಬಹುದು ಅಥವಾ ದೊಡ್ಡ ಬಾಟೆಲ್ ಕೂಡ ಇಡಬಹುದು. ಎಷ್ಟೇ ದಿನಗಳಾದರೂ ಕೂಡ ಅದು ಅಲ್ಲಿಯೇ ಇರಲಿ. ಪ್ರತಿ ಬಾರಿ ದೇವರ ಮನೆ ಕ್ಲೀನ್ ಮಾಡುವಾಗ ಅದನ್ನು ತೆಗೆದರು ಮತ್ತೆ ಅಲ್ಲೇ ಇಡಿ ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಸಂಪತ್ತು ವೃದ್ದಿ ಆಗುತ್ತದೆ.

ಹಾಗೆ ಜೇನುತುಪ್ಪದ ಇನ್ನೊಂದು ಉಪಾಯ ಏನೆಂದರೆ ನೀವು ಯಾವುದೇ ಒಂದು ಶುಭಕಾರ್ಯ ಶುರು ಮಾಡಿದಾಗ,ನೀವು ಸೈಟ್ ಖರೀದಿಸಲು ಸೈಟ್ ವಿಸಿಟ್ ಗೆ ಹೋದಾಗ, ಮನೆ ಕಟ್ಟಿಸುವ ಕೆಲಸಕ್ಕಾಗಿ ಲೋನ್ ತೆಗೆದುಕೊಳ್ಳಲು ಬ್ಯಾಂಕುಗಳಿಗೆ ಹೋದಾಗ, ನಿಮ್ಮ ಮನೆಯ ಮಗಳ ಅಥವಾ ಮಗನಿಗೆ ವಧುವರರನ್ನು ಹುಡುಕಲು, ಮದುವೆ ಮಾತುಕತೆಗೆ ಮಾಡಲು ಹೋದಾಗ, ಕೆಲಸ ಹುಡುಕಲು ಹೋದಾಗ,

ಇಂಟರ್ವ್ಯೂಗೆ ಹೋದಾಗ ಅಥವಾ ಹೊಸ ಕೆಲಸಕ್ಕೆ ಹೋಗುವಾಗ, ಪರೀಕ್ಷೆ ಬರೆಯಲು ಹೋಗುವಾಗ ಹೀಗೆ ಯಾವುದೇ ಕೆಲಸಕ್ಕೆ ಹೋಗುವಾಗಲೂ ಕೂಡ ಒಂದು ಸ್ವಲ್ಪ ಜೇನುತುಪ್ಪವನ್ನು ಸೇವಿಸಿ ಹೋಗಿ. ದೇವರ ಮನೆಯಲ್ಲಿರುವ ಆ ಬಾಟಲಿಯಲ್ಲಿ ಓಪನ್ ಮಾಡಿ ತಿನ್ನಬಾರದು ಪ್ರತ್ಯೇಕವಾಗಿ ಮತ್ತೊಂದು ಬಾಟಲಿ ಜೇನುತುಪ್ಪವನ್ನು ನಿಮ್ಮ ಮನೆಯಲ್ಲಿ ಇಟ್ಟು ಕೊಂಡಿರಬೇಕು. ಅದದಿಂದ ತೆಗೆದುಕೊಂಡು ಸ್ವಲ್ಪ ಸೇವಿಸಿ ನೀವು ಹೋಗುವ ಕೆಲಸ ಆಗುತ್ತದೆ.

ನಿಮ್ಮ ಮನೆ, ಸೈಟ್, ಜಮೀನು ಇನ್ನಿತರ ಆಸ್ತಿ ಸೇಲ್ ಆಗುತ್ತಿಲ್ಲವೇ.? ಚಿಂತೆ ಬಿಡಿ ಈ ಉಪಾಯ ಮಾಡಿ ನೋಡಿ ವಾರದೊಳಗೆ ಶುಭಸುದ್ದಿ ಕೇಳಿ ಬರುತ್ತದೆ.

 

ಜಮೀನು ಖರೀದಿಸುವುದು ಒಂದು ಕಷ್ಟ, ಆಮೇಲೆ ಕಷ್ಟ ಬಂದಾಗ ಅದನ್ನು ಮಾರಾಟ ಮಾಡುವುದು ಇನ್ನೊಂದು ರೀತಿಯ ಸಮಸ್ಯೆ. ಜೀವನದಲ್ಲಿ ಕೆಲವೊಮ್ಮೆ ತಾನು ಸಂಪಾದಿಸಿದ ಅಥವಾ ತನಗೆ ಯಾರಾದರೂ ಉಡುಗೊರೆ ರೂಪದಲ್ಲಿ ಕೊಟ್ಟ ಆಸ್ತಿಯನ್ನು ಮಾರಿಕೊಳ್ಳುವ ಸಂದರ್ಭ ಬರುತ್ತದೆ. ಆಗ ಆ ಆಸ್ತಿ ಮಾರಾಟದ ಬಗ್ಗೆ ಎಷ್ಟೇ ಪ್ರಚಾರ ಮಾಡಿದರು, ಯಾರಿಗೆ ತಿಳಿಸಿದರು, ಮಧ್ಯವರ್ತಿಗಳನ್ನು ಸಂಪರ್ಕಿಸಿದರೂ ಅಥವಾ ಜಾಹೀರಾತನ್ನೇ ಕೊಟ್ಟರು ಖರೀದಿಗೆ ಯಾರು ಮುಂದೆ ಬರುತ್ತಿರುವುದಿಲ್ಲ.

ಕೆಲವೊಮ್ಮೆ ನೀವು ಮಾರಾಟ ಮಾಡಲು ಹೋದ ಸಮಯದಲ್ಲಿಯೇ ಅದು ವ್ಯಾಜ್ಯಕ್ಕೆ ತಿರುಗಿ ಬಿಡಬಹುದು. ನೀವು ಊಹೆ ಮಾಡದ ರೀತಿಯಲ್ಲಿ ಆ ಆಸ್ತಿಯ ಕುರಿತು ಸಮಸ್ಯೆಗಳು ಎದುರಾಗಬಹುದು. ಅದುವರೆಗೆ ಕೂಡ ಕಾಡದ ಆಸ್ತಿ ಹಕ್ಕಿನ ಕುರಿತ ಸಮಸ್ಯೆಗಳು, ತಕರಾರುಗಳು ಶುರು ಆಗಿ ಇದೇ ಅಪಪ್ರಚಾರವಾಗಿ ಯಾರು ಆಸ್ತಿ ಖರೀದಿಸಲು ಬರದೆ ಹೋಗುವ ರೀತಿ ಆಗಿ ಬಿಡಬಹುದು.

ಇಂತಹ ಸಮಸ್ಯೆಗಳಲ್ಲಿ ಸಿಲುಕಿಕೊಂಡಾಗ ಅದಕ್ಕೆ ಎಷ್ಟೇ ಪ್ರಯತ್ನ ಮಾಡಿದರು ಪರಿಹಾರ ಸಿಗುತ್ತಿಲ್ಲ ಎಂದರೆ ಭೂತಶಾಸ್ತ್ರದ ಮೂಲಕ ಕೆಲವು ಗಿಡಮೂಲಿಕೆಗಳನ್ನು ಬಳಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಈ ಮೇಲೆ ತಿಳಿಸಿದ ಜಮೀನು ತೋಟ ಸೈಟು ಮನೆ ಮಾರಾಟದ ವಿಷಯ ಮಾತ್ರ ಅಲ್ಲದೆ ನೀವು ಹೊಸ ಮನೆ ಕಟ್ಟಿದಾಗ ಬಾಡಿಗೆಗೆ ಯಾರು ಬರುತ್ತಿಲ್ಲ ಎಂದರೆ.

ಅಥವಾ ನೀವು ಯಾವುದಾದರೂ ಆಫೀಸನ್ನು ಬೇರೆಯವರಿಗೆ ವರ್ಗಾಯಿಸಬೇಕು ಅದನ್ನು ಬೇರೆಯವರ ಸುಪರ್ದಿಗೆ ಕೊಟ್ಟು ಮುಕ್ತರಾಗಬೇಕು ಎಂದು ಬಯಸಿದರೆ‌. ಆಗಲು ಸಹ ಅದನ್ನು ಮಾಡಲು ಆಗುತ್ತಿಲ್ಲ ಎಂದರೆ ಈ ರೀತಿ ಯಾವುದೇ ಸಂದರ್ಭದಲ್ಲಿಯೂ ಭೌತಶಾಸ್ತ್ರದ ಈ ಪ್ರಯೋಗಗಳನ್ನು ಮಾಡಿ ಗಿಡಮೂಲಿಕೆಗಳಿಂದಲೇ ಈ ಸಮಸ್ಯೆ ಪರಿಹಾರ ಆಗುವ ರೀತಿ ಮಾಡಿಕೊಳ್ಳಬಹುದು.

ಭೂತಶಾಸ್ತ್ರ ಎಂದು ಕೂಡಲೇ ಎಲ್ಲರೂ ನೆಗೆಟಿವ್ ಆಗಿ ಥಿಂಕ್ ಮಾಡುತ್ತಾರೆ. ಭೂತಶಾಸ್ತ್ರ ಎಂದರೆ ಅದೊಂದು ಕೆಟ್ಟ ಕಾರ್ಯವಲ್ಲ. ಆದರೆ ಯಾವ ರೀತಿ ಯಾವ ವಸ್ತುಗಳನ್ನು ಉಪಯೋಗಿಸಿಕೊಂಡು ಯಾವ ಕಾರಣಕ್ಕಾಗಿ ಮಾಡುತ್ತಿದ್ದೇನೆ ಎನ್ನುವುದು ಮುಖ್ಯ ಆಗುತ್ತದೆ ಅಷ್ಟೇ. ಕೆಲವೊಂದು ಗಿಡ ಮೂಲಿಕೆಗಳಿಗೆ ವಿಶೇಷ ಶಕ್ತಿ ಇರುತ್ತದೆ. ಇದನ್ನು ಭೂತಶಾಸ್ತ್ರ ಅಲ್ಲದೆ ಆಯುರ್ವೇದದಲ್ಲಿ ಕೂಡ ಬಳಸಿ ವ್ಯಕ್ತಿ ಒಬ್ಬನ ಆರೋಗ್ಯ ಸಮಸ್ಯೆಗಳನ್ನು, ಮಾನಸಿಕ ಸಮಸ್ಯೆಗಳನ್ನು ದೂರ ಮಾಡಲಾಗುತ್ತದೆ.

ಅದೇ ರೀತಿಯ ಗಿಡಮೂಲಿಕೆಗಳನ್ನು ಬಳಸಿಕೊಂಡು ಭೂತಶಾಸ್ತ್ರದ ಮೂಲಕ ಸಹ ಅವರ ಈ ರೀತಿಯ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುತ್ತದೆ. ಹಾಗಾಗಿ ಇದನ್ನು ಸಂಪೂರ್ಣವಾಗಿ ನೆಗೆಟಿವ್ ತಂತ ಎಂದು ಹೇಳಲು ಆಗುವುದಿಲ್ಲ. ಬೆನ್ನತ್ತಿ, ಎಡಮುರಿ, ಬಲಮುರಿ, ಮುಷ್ಟಿ, ವಿಷಮುಷ್ಟಿ ಮುಂತಾದ ಗಿಡಮೂಲಿಕೆಗಳ ಸಹಾಯದಿಂದ ಆಸ್ತಿಗಳನ್ನು ಖರೀದಿ ಮಾಡುವ ರೀತಿ ಹಾಗೂ ಖರೀದಿ ಮಾಡಿರುವ ಆಸ್ತಿಯನ್ನು ಮಾರಾಟ ಆಗುವ ಹಾಗೆ ಮಾಡಿ ನಿಶ್ಚಿಂತೆಯಾಗಿರಬಹುದು.

ಆದರೆ ಯಾವ ಸಮಯದಲ್ಲಿ ಬೇಕಾದರೂ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ. ಒಂದು ಶುಭ ದಿನದಂದು ಒಂದು ಸರಿಯಾದ ವಿಧಾನದಲ್ಲಿ ಹೋಗಿ ಈ ಗಿಡಮೂಲಿಕೆಗಳನ್ನು ಸಂಗ್ರಹಿಸಿ ತಂದು ನಂತರ ಅವುಗಳಿಂದ ಮಾಡಬೇಕಾದ ಪ್ರಯೋಗವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಅಥವಾ ಭೂತಶಾಸ್ತ್ರ ಪರಿಣಿತದಿಂದ ಇದಕ್ಕೆ ಪರಿಹಾರವನ್ನು ಮಾಡಿಸಿಕೊಂಡು ಅದನ್ನು ತಂದ ಮೇಲೆ ಅದೇ ರೀತಿ ಅದನ್ನು ಅನುಷ್ಠಾನ ಮಾಡಿಕೊಂಡು ಪಾಲಿಸಿದಾಗ ಮಾತ್ರ ಇದಕ್ಕೆ ಪರಿಹಾರ ನೂರಕ್ಕೆ ನೂರರಷ್ಟು ಸಿದ್ಧಿ ಆಗುವುದು.

ಹಾಗೆಯೇ ಮಾಡಿದ ತಕ್ಷಣವೇ ಫಲಕಾರಿ ಆಗಿಬಿಡುತ್ತದೆ ಎನ್ನುವುದು ಸುಳ್ಳು. ಅದರದ್ದೇ ಆದ ಸಮಯ ತೆಗೆದುಕೊಳ್ಳುತ್ತದೆ. ನೀವು ಪ್ರಯೋಗ ಮಾಡಿ ನೋಡಿ, ಕೆಲ ಸಮಯ ಆದ ನಂತರ ನ ಇದು ಎಷ್ಟು ಚಮತ್ಕಾರಿಯಾಗಿ ಕೆಲಸ ಮಾಡಿದೆ ಎನ್ನುವುದು ಅರಿವಾಗಿ ಆಶ್ಚರ್ಯ ಆಗುತ್ತದೆ.

ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲವೇ, ವಿದ್ಯಾರ್ಜನೆಯಲ್ಲಿ ಅಡಚಣೆಯೇ, ಏಕಾಗ್ರತೆಯಲ್ಲಿ ಕೊರತೆಯೇ ಈ ದೇವಾಲಯಕ್ಕೆ ಭೇಟಿ ಒಮ್ಮೆ ಭೇಟಿ ನೀಡಿ. ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ.

 

ವಿದ್ಯೆಗೆ ಅಧಿಪತಿ ವಿನಾಯಕ ಮತ್ತು ತಾಯಿ ಸರಸ್ವತಿಯು ವಿದ್ಯಾದೇವತೆ ಎನ್ನುವುದು ನಮಗೆ ಗೊತ್ತಿದೆ. ಹಾಗೆಯೇ ವಿಷ್ಣುವಿನ ಒಂದು ಅವತಾರ ಕೂಡ ವಿದ್ಯೆ ಹಾಗೂ ಜ್ಞಾನಕ್ಕೆ ಹೆಸರಾಗಿದೆ. ವಿಷ್ಣುವು ಆರಂಭ ಕಾಲದಲ್ಲಿ ಎತ್ತಿದ ಹಯಗ್ರೀವ ಅವತಾರವನ್ನು ಜ್ಞಾನ ಮತ್ತು ಬುದ್ಧಿವಂತಿಕೆಯ ಅವತಾರ ಎಂದೇ ನಂಬಲಾಗಿದೆ. ಶ್ವೇತ ವರ್ಣದ ಕುದುರೆಯ ಮುಖವನ್ನು ಮತ್ತು ಮಾನವನ ದೇಹವನ್ನು ಅವತಾರದಲ್ಲಿ ವಿಷ್ಣು ಹೊಂದಿದ್ದಾರೆ.

ಜ್ಞಾನ ಮತ್ತು ಬುದ್ಧಿವಂತಿಕೆಯಿಂದ ರಕ್ಕಸರನ್ನು ಸಂಹಾರ ಮಾಡಿ ವೇದಗಳನ್ನು ವಾಪಸ್ಸು ಪಡೆದ ಕಾರಣದಿಂದ ಈ ಖ್ಯಾತಿ ಬಂದಿದೆ. ಕಥೆಯ ಹಿನ್ನೆಲೆ ಏನೆಂದರೆ ಪ್ರಳಯ ಆದ ನಂತರ ಶ್ರೀ ವಿಷ್ಣು ಮತ್ತೆ ಭೂಮಿಯನ್ನು ಸೃಷ್ಟಿಸುವ ಕಾರಣಕ್ಕಾಗಿ ನಾಭಿ ಮೂಲಕ ಬ್ರಹ್ಮನನ್ನು ಸೃಷ್ಟಿಸಿ ಅವರಿಗೆ ವೇದಗಳು ಮತ್ತು ಅವುಗಳ ಸಾರವನ್ನೆಲ್ಲಾ ತಿಳಿಸಿ ಮುಂದಿನ ಸೃಷ್ಟಿಯ ಜವಾಬ್ದಾರವನ್ನು ಕೊಟ್ಟಿದ್ದರು. ಕಾಲ ಕ್ರಮೇಣ ಬ್ರಹ್ಮನಿಗೆ ಇದರ ಬಗ್ಗೆ ಅಹಂಕಾರ ಬರುತ್ತದೆ.

ಆಗ ಮಹಾವಿಷ್ಣುವೇ ಮಧು ಮತ್ತು ಕೈಟಭ ಎನ್ನುವ ರಾಕ್ಷಸರನ್ನು ಕಿವಿ ಧೂಳಿನಿಂದ ಸೃಷ್ಟಿಸುತ್ತಾರೆ ಆ ರಾಕ್ಷಸರು ಬ್ರಹ್ಮನಿಂದ ವೇದಗಳನ್ನು ಕದ್ದು ಪಾತಾಳ ಲೋಕಕ್ಕೆ ಹೋಗಿ ಅಡಗಿ ಕೊಳ್ಳುತ್ತಾರೆ. ಅದರಿಂದ ಬ್ರಹ್ಮ ದೇವರಿಗೆ ಸೃಷ್ಟಿಕಾರ್ಯ ಮುಂದುವರಿಸಲು ಆಗುವುದಿಲ್ಲ. ಬ್ರಹ್ಮದೇವರು ವಿಷ್ಣುವಿನ ಬಳಿ ತೆರಲಿ ತಮ್ಮ ಕಷ್ಟವನ್ನು ಹೇಳಿಕೊಂಡು ಸಹಾಯ ಕೇಳುತ್ತಾರೆ.

ಆಗ ಪ್ರಸನ್ನರಾದ ವಿಷ್ಣುವೇ ಈ ಹಯಗ್ರೀವ ಅವತಾರ ತಾಳಿ ಪಾತಾಳ ಲೋಕದತ್ತ ಮುಖವನ್ನು ಮಾಡಿ ಜೋರಾಗಿ ಉಸಿರೆಳೆದು ಕೊಂಡಾಗ ಮಧು ಮತ್ತು ಕೈಟಭ ರಾಕ್ಷಸರು ವೇದದ ಸಮೇತ ಮೇಲೆ ಬರುತ್ತಾರೆ. ಲಕ್ಷ್ಮಿ ಸಮೇತರದ ಹಯಗ್ರೀವರು ಅವರ ಸಂಹಾರ ಮಾಡಿ ವೇದಗಳನ್ನು ಬ್ರಹ್ಮರಿಗೆ ಹಿಂತಿರುಗಿಸುತ್ತಾರೆ. ಬುದ್ಧಿವಂತಿಕೆಯಿಂದ ಈ ಕಾರ್ಯ ಜಯಿಸಿದ ಕಾರಣ ಬುದ್ಧಿವಂತಿಕೆ ಮತ್ತು ಜ್ಞಾನದ ಅವತಾರ ಎಂದು ಈ ಅವತಾರವನ್ನು ಭಾವಿಸಲಾಗಿದೆ. ಹಯಗ್ರೀವ ಅವತಾರದಲ್ಲಿ ವಿಷ್ಣು ವನ್ನು ಪೂಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ ಎನ್ನುವುದನ್ನು ನಂಬಲಾಗಿದೆ.

ಹಯಗ್ರೀವರ ಶಕ್ತಿಶಾಲಿ ಮಂತ್ರವಾದ ಜ್ಞಾನಾನಂದಮಯಂ ದ್ವಂದ್ವ ನಿರ್ಮಲ ಸ್ಫಟಿಕಾಕೃತಿಂ। ಆಧಾರಂ ಸರ್ವವಿದ್ಯಾನಾಮ್ ಹಯಗ್ರೀವಂ ಉಪಾಸ್ರಹೇ॥ ಈ ಶ್ಲೋಕವನ್ನು ಪ್ರತಿದಿನವೂ ವಿದ್ಯಾಭ್ಯಾಸ ಆರಂಭಿಸುವ ಮುನ್ನ ಹೇಳುವುದರಿಂದ ಅವರು ವಿದ್ಯೆಯಲ್ಲಿ ಕೀರ್ತಿಗಳಿಸುತ್ತಾರೆ ಹಾಗೂ ಅಪಾರಜ್ಞಾನವನ್ನು ಸಂಪಾದನೆ ಮಾಡಲು ಅವರಿಗೆ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿರುವ ಒಂದು ಹಯಗ್ರೀವ ದೇವಾಲಯವು ಕೂಡ ಹೀಗೆ ವಿದ್ಯೆ ಮತ್ತು ವಿದ್ಯಾರ್ಥಿಗಳಿಂದ ಬಹಳ ಫೇಮಸ್ ಆಗಿದೆ.

ಪ್ರತಿದಿನವೂ ಈ ದೇವಾಲಯಕ್ಕೆ ನೂರಾರು ವಿದ್ಯಾರ್ಥಿಗಳು ಭೇಟಿ ಕೊಡ್ತಾರೆ. ಅದರಲ್ಲೂ ಪರೀಕ್ಷೆ ಸಮಯದಲ್ಲಂತೂ ಭಕ್ತಾದಿಗಳ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ದೇವಾಲಯಕ್ಕೆ ಹಾಲ್ ಟಿಕೆಟ್ ದೇವಸ್ಥಾನ ಎಂದು ಕೂಡ ಹೆಸರಾಗಿದೆ. ಲಕ್ಷ್ಮಿ ಸಮೇತವಾಗಿ ಹಯಗ್ರೀವ ದೇವರು ಬೆಂಗಳೂರಿನ ಮೆಜೆಸ್ಟಿಕ್ ಅಲ್ಲಿ ನೆಲೆಸಿದ್ದಾರೆ.

ಇಲ್ಲಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಬಂದು ತಮ್ಮ ಹಾಲ್ ಟಿಕೆಟ್ ಪೂಜೆ ಮಾಡಿಸಿಕೊಂಡು ಹೋದರೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಾರೆ ಹಾಗೂ ಅವರು ಓದಿರುವುದೆಲ್ಲಾ ನೆನಪಿಗೆ ಬರುತ್ತದೆ ಎನ್ನುವ ನಂಬಿಕೆ ಇದೆ ಮತ್ತು ಪ್ರತಿ ಗುರುವಾರ ಈ ದೇವಾಲಯದಲ್ಲಿ 46 ಏಲಕ್ಕಿಗಳನ್ನು ಪೋಣಿಸಿರುವ ಹಾರವನ್ನು ತಂದು ಹಯಗ್ರೀವನಿಗೆ ಅರ್ಪಿಸಿ ಈ ಮೇಲೆ ತಿಳಿಸಲಾದ ಆ ಶ್ಲೋಕವನ್ನು ಹೇಳುತ್ತಾ ಪ್ರದಕ್ಷಿಣೆ ಹಾಕುವುದರಿಂದ ಕೂಡ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಬರುತ್ತದೆ ಎನ್ನುವ ಪ್ರತೀತಿ ಇದೆ.

ಪ್ರತಿ ಗುರುವಾರ ಈ ದೇವಾಲಯದಲ್ಲಿ ದೇವರಿಗೆ ಜೇನುತುಪ್ಪ ಅಭಿಷೇಕ ಮಾಡುತ್ತಾರೆ. ಅದನ್ನು ಪ್ರಸಾದವಾಗಿ ಸ್ವೀಕರಿಸಿ ವಿದ್ಯಾರ್ಥಿಗಳು 48 ದಿನಗಳವರೆಗೆ ಪ್ರತಿದಿನ ಮುಂಜಾನೆ ಭಕ್ತಿಯಿಂದ ಮೇಲಿನ ಶ್ಲೋಕವನ್ನು ಹೇಳುತ್ತಾ ಇದನ್ನು ಸ್ವೀಕರಿಸಿದರೆ ಅವರು ಓದಿನಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ. ಲಕ್ಷ್ಮಿ ಸಮೇತ ಹಯಗ್ರೀವ ನೆಲೆಸಿರುವ ಈ ದೇವಾಲಯಕ್ಕೆ ಭೇಟಿ ಕೊಡುವುದರಿಂದ ವಿದ್ಯೆ ಜೊತೆ ಸಂಪತ್ತು ಕೂಡ ಪ್ರಾಪ್ತಿಯಾಗುತ್ತದೆ. ಆದ್ದರಿಂದ ತಪ್ಪದೇ ಒಮ್ಮೆ ಈ ದೇವಾಲಯಕ್ಕೆ ಭೇಟಿ ಕೊಡಿ.