Home Blog Page 246

ಪ್ರೀತ್ಸಿ ಮದ್ವೆ ಆಗಿದ್ರು ಕೂಡ ಯೋಗಿ ಹೆಂಡ್ತಿ ಓಡೋಗಿದ್ದು ಯಾಕೆ ಗೊತ್ತಾ.? ಖಾಸಗಿ ವಿಚಾರ ಹೇಳಿಕೊಂಡು ನೋವು ಹೊರ ಹಾಕಿದ ನಟ ಲೂಸ್ ಮಾದ ಯೋಗಿ.

0

ಲೂಸ್ ಮಾದ ಯೋಗೇಶ್ (Loosemada Yogesh) ಕರ್ನಾಟಕದಲ್ಲಿ ಯೋಗಿ ಅಲಿಯಾಸ್ ಲೂಸ್ ಮಾದ ಎಂದು ಫೇಮಸ್ ಆಗಿರುವವರು. ತಮ್ಮದೇ ಆದ ವಿಶೇಷ ಮ್ಯಾನರಿಸಂ ಹಾಗೂ ವಿಭಿನ್ನ ಬಗೆಯ ಡೈಲಾಗ್ ಡೆಲವರಿ ಯಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಹೀರೋ ಸ್ಥಾನ ಗಿಟ್ಟಿಸಿಕೊಂಡಿರುವ ಇವರು ದುನಿಯಾ (Dhuniya) ಸಿನಿಮಾದ ಮೂಲಕ ಆಕ್ಟಿಂಗ್ ಶುರು ಮಾಡಿದರು. ನಂತರ ಬಂದ ನಂದ ಲವ್ಸ್ ನಂದಿತಾ (Nanda loves Nanditha) ಸಿನಿಮಾದಿಂದ ಸಂಪೂರ್ಣ ನಾಯಕ ನಟಿಯಾಗಿ ಹೊರಹೊಮ್ಮಿದರು.

ಆ ಸಮಯದಲ್ಲಿ ಬಹಳ ಬೇಡಿಕೆಯ ಮತ್ತು ಹೆಂಗಳೆಯರ ನೆಚ್ಚಿನ ನಟನಾಗಿದ್ದ ಇವರು ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ನಂದ ಲವ್ಸ್ ನಂದಿತ, ಅಂಬಾರಿ, ಅಲೆಮಾರಿ, ರಾವಣ, ಪ್ರೀತ್ಸೆ ಪ್ರೀತ್ಸೆ, ಲೂಸ್, ಸಿದ್ಲಿಂಗು ಹೀಗೆ ಅವರು ಕೊಟ್ಟ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ರಮ್ಯಾ, ಮೇಘನಾರಾಜ್, ಶಿವಣ್ಣ, ಪ್ರಕಾಶ್ ರಾಜ್, ಪುನೀತ್ ರಾಜಕುಮಾರ್ ಇಂತಹ ಸ್ಟಾರ್ ಕಲಾವಿದರೊಂದಿಗೆ ತೆರೆ ಹಂಚಿಕೊಂಡ ಹೆಮ್ಮೆಯ ನಟ ಇವರು.

ಮಲ್ಟಿ ಸ್ಟಾರ್ ಸಿನಿಮಾಗಳಲ್ಲೂ ಕೂಡ ಅಭಿನಯಿಸಿರುವ ಇವರು ಪುನೀತ್ ರಾಜಕುಮಾರ್ ಅವರ ಹುಡುಗರು ಮತ್ತು ಯಾರೇ ಕೂಗಾಡಲಿ ಸಿನಿಮಾದಿಂದ ಮತ್ತೊಂದು ಶೇಡ್ ಅಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು. ಇತ್ತೀಚೆಗೆ ಡಾಲಿ ಧನಂಜಯ್ ಅವರೊಂದಿಗೂ ಕೂಡ ಜೈರಾಜ್ ಅವರ ಜೀವನದ ಚಿತ್ರ ಎನಿಸಿಕೊಂಡ ಹೆಡ್ ಅಂಡ್ ಬುಷ್ (Head and bush) ಸಿನಿಮಾದಲ್ಲಿ ಕೂಡ ಮುಖ್ಯ ಪಾತ್ರ ಒಂದನ್ನು ನಿರ್ವಹಿಸಿದ್ದರು. ಶಿವಣ್ಣನ ಜೊತೆಗೂ ಕೂಡ ಲೀಡರ್ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಚಿತ್ರರಂಗದಲ್ಲಿ ನಾಯಕನಾಗಿ ಬೇಡಿಕೆ ಕಡಿಮೆ ಆಗುತ್ತಿದ್ದ ಸಮಯದಲ್ಲಿ ಮಲ್ಟಿ ಸ್ಟಾರ್ (Multi stars) ಸಿನಿಮಾಗಳ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿಸಿರುವ ಇವರನ್ನು ಅಭಿಮಾನಿಗಳು ತಮಿಳಿನ ನಟ ಧನುಷ್ (Dhanush) ಜೊತೆ ಹೋಲಿಕೆ ಮಾಡುತ್ತಾರೆ. ವೈಯಕ್ತಿಕ ಜೀವನದಲ್ಲಿ ಕೂಡ ಯಾವುದೇ ವಿವಾದ ಇಲ್ಲದೆ ಬದುಕುತ್ತಿದ್ದ ಇವರ ದಾಂಪತ್ಯದಲ್ಲಿ ಈಗ ಬಿರುಗಾಳಿ ಎದ್ದಿದೆ. ತನ್ನ ಬಾಲ್ಯ ಸ್ನೇಹಿತೆ ಆಗಿದ್ದ ಸಂಗೀತ (Samgeetha) ಎನ್ನುವವರೊಂದಿಗೆ 2017ರಲ್ಲಿ ಲೂಸ್ ಮಾದ ಯೋಗಿ ಅವರು ಹಸೆಮಣೆ ಏರಿದ್ದರು.

ಈ ಮುದ್ದಾದ ಜೋಡಿಗೆ ಮುದ್ದು ಮಗು ಕೂಡ ಇದೆ. ಆದರೆ ಯೋಗಿ ಅವರ ಪತ್ನಿ ಈಗ ಮನೆ ಬಿಟ್ಟು ಹೋಗಿದ್ದಾರಂತೆ. ಈ ವಿಷಯವನ್ನು ಸ್ವತಃ ಲೂಸ್ ಮಾದ ಯೋಗಿ ಅವರೇ ಹೇಳಿಕೊಂಡಿದ್ದಾರೆ. ಲೂಸ್ ಮಾದ ಯೋಗಿ ಅವರು ನಾನು ಅದು ಮತ್ತು ಸರೋಜಾ ಸಿನಿಮಾ ಬಿಡುಗಡೆ ಸಮಯದಲ್ಲಿ ನೀಡಿದ ಸಂದರ್ಶನ ಒಂದರಲ್ಲಿ ಅವರು ಎಷ್ಟು ಬ್ಯುಸಿ ಇದ್ದಾರೆ ಎನ್ನುವುದನ್ನು ಹೇಳುವಾಗ ಎಲ್ಲಾ ಹೆಂಡತಿಯರಿಗೂ ತಮ್ಮ ಗಂಡ ತಮಗೆ ಮತ್ತು ಮಕ್ಕಳಿಗೆ ಸಮಯ ಕೊಡಬೇಕು ಎನ್ನುವ ಆಸೆ ಇರುತ್ತದೆ.

ಆದರೆ ನಾವು ಸಿನಿಮಾ, ಶೂಟಿಂಗ್ ಅಂತ ಬಿಝಿ ಇರುವ ಕಾರಣ ನನ್ನ ಹೆಂಡತಿ ಕೋಪ ಮಾಡಿಕೊಂಡು ಮಗು ಕರೆಕೊಂಡು ತವರು ಮನೆಗೆ ಹೋಗಿ ಬಿಟ್ಟಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಲೂಸ್ ಮಾದ ಯೋಗಿ ಅವರ ತಂದೆಯು ಕೂಡ ಹೆಸರಾಂತ ಪ್ರೊಡ್ಯೂಸರ್ ಆಗಿದ್ದು, ಅಣ್ಣನು ಸಹ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಇವರ ತಾಯಿ ಅಂಬುಜ (Ambuja) ಅವರು ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಪುನರ್ ವಿವಾಹ, ಚುಕ್ಕಿ, ಯಾರೆ ನೀ ಮೋಹಿನಿ ಇನ್ನು ಮುಂತಾದ ಅನೇಕ ಧಾರಾವಾಹಿಗಳಲ್ಲಿ ಖಡಕ್ ಅತ್ತೆಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಸ-ತ್ತ ನಟರಿಗೆ ಸ್ಮಾರಕ ಯಾಕೆ ಕಟ್ಬೇಕು.? ಕಟ್ಟೊದಾದ್ರೆ ಸ್ವಂತ ಜಾಗದಲ್ಲಿ ಕಟ್ಕೊಳ್ಳಿ ಅದ್ಕೆ ಸರ್ಕಾರದ ಜಾಗ ಕೊಡ್ಬಾರ್ದು. ಹೊಸ ವರಸೆ ತೆಗೆದ ಚೇತನ್ ಅಹಿಂಸಾ

0

ನಟರ ಸ್ಮಾರಕಕ್ಕೆ ಸರ್ಕಾರದ ಹಣ ಬಳಸಬಾರದು ಎಂದು ವಿವಾದ ಮಾಡುತ್ತಿರುವ ಚೇತನ್ ಅಹಿಂಸಾ ಜನವರಿ 29 ರಂದು ಮೈಸೂರಿನಲ್ಲಿ ಕಳೆದ 13 ವರ್ಷಗಳಿಂದ ಹೋರಾಟದಲ್ಲಿ ಉಳಿದಿದ್ದ ವಿಷ್ಣುವರ್ಧನ್ ಅವರ ಸ್ಮಾರಕ (Dr. Vishnuvardhan memorial ) ನಿರ್ಮಾಣ ಆಗಿತ್ತು. ನಿರ್ಮಾಣದ ಹಿಂದೆ ಆಗಿರುವ ಅನೇಕ ಸಂಘರ್ಷ ಪ್ರತಿಭಟನೆ ಮತ್ತು ಮನವಿಯ ಕಥೆ ಎಲ್ಲರಿಗೂ ಗೊತ್ತೇ ಇದೆ. ಕೊನೆಗೂ ವಿಷ್ಣುವರ್ಧನ್ ಅವರ ಕುಟುಂಬದವರ, ಅಭಿಮಾನಿಗಳ ಹಾಗೂ ಆಸೆಯಂತೆ ಮೈಸೂರಿನಲ್ಲಿ ಈ ಸ್ಮಾರಕ ಆಗಿರುವುದು ಇಡೀ ಕರ್ನಾಟಕಕ್ಕೆ ಸಂತಸ ಬಂದಿದೆ.

ಆದರೆ ಸದಾ ಒಂದಲ್ಲ ಒಂದು ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡುವ ಚೇತನ್ ಅಹಿಂಸಾ (Chethan Ahimsa) ಅವರು ಈ ವಿಷಯಕ್ಕೂ ಕೂಡ ಕಿರಿಕ್ ಮಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸರ್ಕಾರದ ಹಣ ಜನರ ಜನಸಾಮಾನ್ಯರ ಹಣವನ್ನು ಈ ರೀತಿ ಸ್ಟಾರ್ ನಟರುಗಳ ಸ್ಮಾರಕ ನಿರ್ಮಾಣಕ್ಕೆ ಉಪಯೋಗಿಸಿ ವ್ಯರ್ಥ ಮಾಡಬಾರದು ಎಂದು ಮನಸೋ ಇಚ್ಛೆ ಬರೆದುಕೊಂಡಿದ್ದಾರೆ.

ಆದರೆ ವಿಷ್ಣುವರ್ಧನ್ ಅವರ ಜೀವನದುದ್ದಕ್ಕೂ ನೋಡುವುದಾದರೆ ಅವರಿಗೆ ಸಾಕಷ್ಟು ಅನ್ಯಾಯವಾಗಿದೆ ಎನ್ನುವುದು ಇಲ್ಲಿಯ ಪ್ರತಿಯೊಬ್ಬರ ಅಭಿಮಾನಿಗೂ ಗೊತ್ತು. ಅವರಿಗೆ ಸಂದ ಬೇಕಾದ ಅನೇಕ ಅವಾರ್ಡ್ ಗಳನ್ನು ತಪ್ಪಿಸಲಾಗಿದೆ ಹಾಗೂ ಒಂದಲ್ಲ ಒಂದು ವಿಚಾರದಿಂದ ಅವರಿಗೆ ಅವಮಾನ ಹಾಗೂ ನೋವನ್ನುಂಟು ಮಾಡಲಾಗಿದೆ. ಕೊನೆಗೆ ಸ್ಮಾರಕದ ವಿಚಾರವನ್ನು ಕೂಡ 13 ವರ್ಷದವರೆಗೆ ಎಳೆದು ತಂದು ಮೂರ್ನಾಲ್ಕು ಸರ್ಕಾರಗಳು ಬದಲಾದರು ಅದನ್ನು ಸರಿಯಾಗಿ ನಿರ್ವಹಿಸಲಾಗಿರಲಿಲ್ಲ.

ಬೆಂಗಳೂರಿನಲ್ಲಿ ಅವರ ಪುಣ್ಯಭೂಮಿ ಹಾಗೂ ಸ್ಮಾರಕ ಆಗಬೇಕು ಎನ್ನುವ ಹಠ ಇದ್ದರೂ ಕೂಡ ಅದು ಸಾಧ್ಯವೇ ಆಗುವುದಿಲ್ಲ ಎನ್ನುವ ವಿಷಯ ತಿಳಿದ ಮೇಲೆ ಬೇಸರದೊಂದಿಗೆ ಮೈಸೂರಿನಲ್ಲಿ ಈ ಕಾರ್ಯಕ್ಕೆ ಕೈ ಹಾಕಲಾಗಿದೆ. 2010ರಲ್ಲಿ ಇದಕ್ಕಾಗಿಯೇ ವಿಷ್ಣುವರ್ಧನ್ ಸ್ಮಾರಕ ಪ್ರತಿಷ್ಠಾಪನೆ ಟಸ್ಟ್ ಎಂದು ಸರ್ಕಾರ ಒಂದು ಟ್ರಸ್ಟ್ ರಚಿಸಿ ಟ್ರಸ್ಟ್ ಗೆ ಬಂದ ಹಣದಿಂದ ಈ ಸ್ಮಾರಕ ನಿರ್ಮಿಸಿದೆ. ಇದು ಕರುನಾಡಿನ ಎಲ್ಲರಿಗೂ ತಿಳಿದಿರುವ ವಿಚಾರ.

ಆದರೆ ಕನ್ನಡರಿಗೆ ಮನೋರಂಜಿಸುವ ಸಲುವಾಗಿ ಇಷ್ಟು ವರ್ಷ ಕಲಾ ಸೇವೆ ಮಾಡಿ ರಂಜಿಸಿದ ಒಬ್ಬ ಹೆಮ್ಮೆಯ ಕಲಾವಿದನಿಗೆ ಇದು ಸೇರುವುದರಲ್ಲಿ ಯಾವ ಅನ್ಯಾಯವು ಇಲ್ಲ ಅನ್ನುವುದು ಅಷ್ಟೇ ನಿಜ. ಆದರೆ ಚೇತನ್ ಅಹಿಂಸಾ ಅವರು ಈ ವಿಷಯದ ಬಗ್ಗೆ ಬರೆದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಯಾಂಡಲ್ ನಟ ಹಾಗೂ ಸಾಮಾಜಿಕ ಹೋರಾಟಗಾರ ಎಂದು ಗುರುತಿಸಿಕೊಂಡಿರುವ ಚೇತನ್ ಅಹಿಂಸವರು ಯಾವುದೇ ಕಾರಣಕ್ಕೂ ಸರ್ಕಾರಿ ಜಾಗವನ್ನು ಸ್ಟಾರ್ ನಟರ ಸ್ಮಾರಕ ನಿರ್ಮಾಣಕ್ಕೆ ನೀಡಬಾರದು ಎಂದು ಟ್ವೀಟ್ ಮಾಡಿದ್ದಾರೆ.

ಚಲನಚಿತ್ರ ನಟರ ಸ್ಮಾರಕ ನಿರ್ಮಾಣಗಳಿಗೆ ಕರ್ನಾಟಕ ಸರ್ಕಾರವು ಸಾರ್ವಜನಿಕರ ಹಣ ಸಂಪನ್ಮೂಲ ಹಾಗೂ ಜಾಗ ಬಳಸಬಾರದು. ಕನ್ನಡಿಗರಂತೆ ಕೆಲಸ ಮಾಡಿ ಸಂಪಾದಿಸುವ ಫಿಲಂ ಸ್ಟಾರ್ ಗಳು ಈಗಾಗಲೇ ಅನಗತ್ಯ ಪ್ರಚಾರ ಹಾಗೂ ಚಲನಚಿತ್ರದ ಕಾರಣದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಎಂಬಿತ್ಯಾದಿಯಾಗಿ ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಅಷ್ಟೇ ಕಾಂತರಾ ಸಿನಿಮಾದ ಬಗ್ಗೆ ಕೂಡ ವಿವಾದ ಮಾಡಿಕೊಂಡಿದ್ದ ಇವರು ಈ ಬಾರಿ ವಿಷ್ಣುವರ್ಧನ್ ಅವರ ಸ್ಮಾರಕ ವಿಚಾರಕ್ಕೆ ತಲೆ ಹಾಕಿರುವುದರಿಂದ ಅನೇಕರು ಇವರ ಮೇಲೆ ಸಿಟ್ಟಿಗೆದ್ದಿದ್ದಾರೆ. ಇಲ್ಲಿಯ ನಾಗರಿಕ ಹಕ್ಕು ನಿಮಗಿಲ್ಲ ಅಂದಮೇಲೆ ಇಲ್ಲಿನ ಆಂತರಿಕ ವಿಷಯಕ್ಕೆ ತಲೆ ಹಾಕಬಾರದು ಎಂದು ಕಮೆಂಟ್ ಮಾಡುವ ಮೂಲಕ ತಿರುಗೇಟು ಸಹ ನೀಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

400 ಸಿನಿಮಾ ಮಾಡಿದ್ರು ಕೂಡ ನಾನು ಶ್ರೀಮಂತೆ ಅಲ್ಲ. ನಾನು ಕೂಡ ಆರ್ಥಿಕ ಸಂಕಷ್ಟದಲ್ಲಿದಿನಿ. ನನ್ ಅತ್ರ ಇರೋ ಆಸ್ತಿ ಹಾಗೂ ಸಾಲ ಎಷ್ಟು ಗೊತ್ತ.?

0

ನಾವೆಲ್ಲ ಅಂದುಕೊಂಡಿರುತ್ತೇವೆ ತೆರೆ ಮೇಲೆ ನಾಯಕ ಅಥವಾ ನಾಯಕಿ ಆಗಿ ಕಾಣಿಸಿಕೊಳ್ಳುವವರು ವೈಯಕ್ತಿಕ ಬದುಕಿನಲ್ಲೂ ಅದೇ ರೀತಿ ಇರುತ್ತಾರೆ ಎಂದು. ಆದರೆ ಅದೊಂದು ವೃತ್ತಿ ಅಷ್ಟೇ, ಬಣ್ಣ ಹಚ್ಚಿ ರಾಜನು ಕೂಡ ಆಗಬಹುದು ಅಧಿಕಾರಿಯೂ ಆಗಬಹುದು ಆದರೆ ಬಣ್ಣ ತೊಳೆದ ಬಳಿಕ ವೈಯಕ್ತಿಕ ಬದುಕಿನಲ್ಲಿ ಏನು ಬದಲಾಗಿ ಇರುವುದಿಲ್ಲ. ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲೇ ತೆಗೆದುಕೊಂಡರೆ ಹಲವು ದಶಕಗಳಿಂದ ಹಲವಾರು ಸಹ ಕಲಾವಿದರಗಳು ದಶಕಗಳಿಂದ ಪಾತ್ರ ಮಾಡುತ್ತಲೇ ಬಂದಿದ್ದಾರೆ.

ಇಲ್ಲಿ ಬೆರಳಣಿಕೆ ಅಷ್ಟು ಜನ ಮಾತ್ರ ಸೆಟಲ್ ಆಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಹೊರತು ಅದೆಷ್ಟೋ ಸಹ ಕಲಾವಿದರು ಇನ್ನೂ ಒಪ್ಪತ್ತಿನ ಊಟಕ್ಕೂ ಕೂಡ ಕಷ್ಟಪಡುತ್ತಿದ್ದಾರೆ. ಎಷ್ಟೋ ಜನರು ಸ್ವಂತ ಮನೆಗೂ ಇಲ್ಲದೆ ಇನ್ನೂ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಎಷ್ಟೋ ಜನ ಫೇಮಸ್ ಆದವರು ಸಹ ಇದೆ ಪಾಡಿನಲ್ಲಿ ಇದ್ದಾರೆ ಎನ್ನುವುದೇ ಬಹಳ ಆಶ್ಚರ್ಯ ಎನಿಸುತ್ತದೆ ಇದಕ್ಕೆ ಹಾಸ್ಯ ಕಲಾವಿದೆ ಉಮಾಶ್ರೀ (Comedy actress Umashree) ಅವರು ಕೂಡ ಏನು ಹೊರತೇನಲ್ಲ.

ಉಮಾಶ್ರೀ ಅವರಿಗೆ ಈವರೆಗೆ ಮಾಡಿರುವುದು ಬರೋಬ್ಬರಿ 400 ಚಲನಚಿತ್ರಗಳು. ಅಲ್ಲದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಸಚಿವೆ (Women and child welfare minister) ಕೂಡ ಆಗಿದ್ದರು. ಈಕೆ ನಟಿಸಿರುವುದು ಬರಿ ಸೈಡ್ ರೋಲ್ ಅಲ್ಲವೇ ಅಲ್ಲ. ಸಿನಿಮಾಗಳಲ್ಲಿ ತನ್ನದೇ ಆದ ರೀತಿಯಲ್ಲಿ ಹಾಸ್ಯಕ್ಕೆ ಬೆಂಚ್ಮಾರ್ಕ್ ಹಾಕಿ ಹೋಗಿದ್ದಾರೆ. ಅನುಭವ ಸಿನಿಮಾದ ಆ ಪಾತ್ರದಿಂದ ಹಿಡಿದು ಪುಟ್ನಂಜ ಸಿನಿಮಾದ ಪುಟ್ಮಲ್ಲಿ ಪಾತ್ರ, ಸಿಪಾಯಿ ಸಿನಿಮಾದ ಸೌಂದರ್ಯ ಅವರ ತಾಯಿಯ ಪಾತ್ರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ತಾಯಿಯ ಪಾತ್ರ ಹೀಗೆ ಆಕೆ ಇಂತಹ ವಿಶೇಷ ಪಾತ್ರಗಳಿಗೆ ಜೀವ ತುಂಬಿದವರು.

ಒಂದು ಅರ್ಥದಲ್ಲಿ ನಾಯಕಿಯರಿಗಿಂತ ಹೆಚ್ಚು ಸಿನಿಮಾವನ್ನು ಆಕ್ರಮಿಸಿಕೊಂಡವರು ಎಂದರು ತಪ್ಪಾಗಲಾರದು. ಇತ್ತೀಚಿಗೆ ಸೂಪರ್ ಹಿಟ್ ಆದ ರತ್ನನ್ ಪ್ರಪಂಚ (Rathnan Prapancha) ಸಿನಿಮಾದ ಅಸ್ತಿತ್ವವೇ ಇವರೆನ್ನುವ ರೀತಿ ಆ ಸಿನಿಮಾದಲ್ಲಿ ಇವರ ಅಭಿನಯ ಹಾಗೂ ಪಾತ್ರ ಇತ್ತು. ಜೊತೆಗೆ ಕಿರುತೆರೆ ಧಾರಾವಾಹಿಗಳಲ್ಲೂ ಕೂಡ ಬಣ್ಣ ಹಚ್ಚುತ್ತಿರುವ ಇವರು ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸದ್ಯಕ್ಕೆ ಜೀ ಕನ್ನಡ ವಾಹಿನಿಯ ನಂಬರ್ ವನ್ ಸೀರಿಯಲ್ ಆಗಿರುವ ಪುಟ್ಟಕ್ಕನ ಮಕ್ಕಳು (Puttakkana makkalu) ಸೀರಿಯಲ್ ನ ಮೇನ್ ರೋಡ್ ಅಲ್ಲಿ ನಟಿಸುತ್ತಿದ್ದಾರೆ.

ಇವರು ಇಷ್ಟು ವರ್ಷದಿಂದ ಅಭಿನಯದಲ್ಲಿ ತೊಡಗಿಕೊಂಡರೂ ಕೂಡ ಶ್ರೀಮಂತೆ ಅಲ್ಲವಂತೆ ಇದನ್ನು ಅವರೇ ಇತ್ತೀಚಿನ ಅವರ ಇಂಟರ್ವ್ಯೂ ಅಲ್ಲಿ ಹೇಳಿಕೊಂಡಿದ್ದಾರೆ. ನ್ಯೂಸ್ ಫಸ್ಟ್ ಚಾನೆಲ್ (News 1st channel) ನಡೆಸಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಇವರು ಆ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಈ ಸಂದರ್ಶನದಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆದಿದ್ದು ಸಂದರ್ಶನ ಕಾರರು ನಿಮಗೆ ಸಾಕಷ್ಟು ಕೌಟುಂಬಿಕ ಸಮಸ್ಯೆಗಳು ಆರ್ಥಿಕ ಸಮಸ್ಯೆಗಳು ಕಾಡುತ್ತಿವೆ ಆದರೂ ಪಾತ್ರ ಎನ್ನುವ ವಿಷಯ ಬಂದಾಗ ನಂಬಲು ಅಸಾಧ್ಯ ಎನ್ನುವ ರೀತಿ ಕಣ್ಣಿಗೆ ಕಟ್ಟುವ ಹಾಗೆ ಅಭಿನಯಿಸಿ ಬಿಡುತ್ತೀರಲ್ಲ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಅದಕ್ಕೆ ಉಮಾಶ್ರೀ ಅವರು ನಮ್ಮ ಸೆಟ್ಟಿನಲ್ಲಿರುವ ಎಲ್ಲರೂ ಕೂಡ ಇದನ್ನೇ ಹೇಳುತ್ತಿರುತ್ತಾರೆ. ಲೈಟ್ ವರ್ಕ್ ಮತ್ತು ಶೂಟಿಂಗ್ ಗೆ ರೆಡಿ ಮಾಡಿಕೊಳ್ಳುವ ತನಕ ನಾನು ಜಾಲಿಯಾಗೆ ಇರುತ್ತೇನೆ ಒಮ್ಮೆ ಆಕ್ಷನ್ ಎಂದು ಹೇಳಿದ ಮೇಲೆ ಅದು ಹೇಗೆ ಪಾತ್ರ ನನ್ನಲ್ಲಿ ತುಂಬಿಕೊಳ್ಳುತ್ತದೆ ಗೊತ್ತಿಲ್ಲ ಎಲ್ಲವೂ ತಾಯಿ ಸರಸ್ವತಿಯ ಆಶೀರ್ವಾದದಿಂದ ಎಂದು ಹೇಳಿಕೊಂಡಿದ್ದಾರೆ.

ನಟಿ ಹರಿಪ್ರಿಯಾ & ವಸಿಷ್ಠ ಆರತಕ್ಷತೆ ಕಾರ್ಯಕ್ರಮಕ್ಕೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ ಕಂಪ್ಲೀಟ್ ವಿಡಿಯೋ ಇಲ್ಲಿದೆ.

ಸ್ಯಾಂಡಲ್ ವುಡ್ ನ ಕಂಚಿನ ಕಂಠದ ಖಡಕ್ ವಿಲ್ಲನ್ ಮತ್ತು ಮುದ್ದು ಹೃದಯದ ಹೀರೋ ಹಾಗೂ ಗಾಯಕ ಕೂಡ ಆಗಿ ಹೆಸರುವಾಸಿ ಆಗಿರುವ ವಸಿಷ್ಠ ಸಿಂಹ (Vasista Simha) ಅವರು ಸ್ಟಾರ್ ಹೀರೋಯೆನ್ ಪಡ್ಡೆ ಹೈಕಳ ಫ್ರೆಂಡ್ ಹರಿಪ್ರಿಯ (Haripriya) ಅವರನ್ನು ವರಿಸಿದ್ದಾರೆ. ಎರಡು ವರ್ಷಗಳ ಪ್ರೀತಿಯನ್ನು ಮದುವೆ ಎಂಬ ಸಂಬಂಧದ ಮೂಲಕ ಶಾಶ್ವತವಾಗಿ ಇರಿಸಿಕೊಳ್ಳಲು ಸ ತಿಪತಿಯಾಗಿ ಜೋಡಿಯಾಗಿದ್ದಾರೆ.

ವಶಿಷ್ಠ ಸಿಂಹ ಅವರ ಇಚ್ಛೆಯಂತೆ ಮೈಸೂರಿನ ಸಚ್ಚಿದಾನಂದ ಆಶ್ರಯದಲ್ಲಿ (Sachchidananda Ashrama) ಬಹಳ ಸರಳವಾಗಿ ಇಬ್ಬರು ಮದುವೆ ಮಾಡಿಕೊಂಡರು. ತೀರ ಆತ್ಮೀಯರು ಹಾಗೂ ಕೆಲವರಿಗಷ್ಟೇ ಇರಲಿ ಆಹ್ವಾನ ಇತ್ತು ಹಾಗಾಗಿ ಎಲ್ಲರಿಗಾಗಿ ಈಗ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಂಹ ಪ್ರಿಯ ಜೋಡಿಯ ಮದುವೆ ಕುರಿತ ಸಾಕಷ್ಟು ಫೋಟೋಗಳು ಹಾಗೂ ವಿಡಿಯೋಗಳು ಲಭ್ಯವಿದೆ.

ಈಗ ಆರತಕ್ಷತೆ ವಿಡಿಯೋಗಳು ಕೂಡ ಹರಿದಾಡುತ್ತಿದ್ದು ತಮ್ಮ ನೆಚ್ಚಿನ ಹೀರೋ ಹೋಗಿದ್ದಾರಾ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ. ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಅವರ ಅರತಕ್ಷತೆ ಕಾರ್ಯಕ್ರಮಕ್ಕೆ ಹಿರಿಯ ನಟಿ ಗಿರಿಜಾ ಲೋಕೇಶ್ ಹಾಗೂ ಅವರ ಪುತ್ರ ಸೃಜನ್ ಲೋಕೇಶ್ ಅವರು ಹೋಗಿದ್ದಾರೆ. ಸೃಜನ್ ಲೋಕೇಶ್ ಹಾಗು ಹರಿಪ್ರಿಯಾ ಅವರು ಜೋಡಿಯಾಗಿ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದಲ್ಲಿ ಅಭಿನಯಿಸಿದ್ದರು.

ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿಶೆಟ್ಟಿ ಅವರು ಕೂಡ ಇವರ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಬೆಲ್ ಬಾಟಮ್ ಎನ್ನುವ ರಿಷಬ್ ಶೆಟ್ಟಿ ಅವರ ನಿರ್ದೇಶನ ಹಾಗೂ ನಟನೆ ಸಿನಿಮಾದಲ್ಲಿ ಕೂಡ ಹರಿಪ್ರಿಯಾ ಅವರು ನಾಯಕಿ ಆಗಿದ್ದರು. ಜೊತೆಗೆ ರಕ್ಷಿತ್ ಹಾಗೂ ಹರಿಪ್ರಿಯಾ ಅವರ ಅಭಿನಯದ ರಿಕ್ಕಿ ಸಿನಿಮಾವನ್ನು ಕೂಡ ರಿಷಬ್ ಶೆಟ್ಟಿ ಅವರೇ ನಿರ್ದೇಶನ ಮಾಡಿದ್ದರು. ಹೀಗಾಗಿ ಇವರಿಬ್ಬರ ನಡುವೆ ಉತ್ತಮ ಸ್ನೇಹ ಬಂಧವಿದೆ.

ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಅವರ ಪತ್ನಿ ಸಹ ಇವರ ರಿಸೆಪ್ಷನ್ ಕಾರ್ಯಕ್ರಮಕ್ಕೆ ಹೋಗಿದ್ದಾರೆ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಅವರು ಸಹ ಇವರ ಅರತಕ್ಷತೆ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಹಿರಿಯ ನಟ ದೊಡ್ಡಣ್ಣ ಸಹ ಕುಟುಂಬ ಸಮೇತ ಈ ಕಾರ್ಯಕ್ರಮಕ್ಕೆ ಹಾಜರಿದ್ದಾರೆ. ಹಿರಿಯ ನಟ ಶ್ರೀನಾಥ್ ಮತ್ತು ಅವರ ಪತ್ನಿ ಕೂಡ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ಕಾರ್ಯಕ್ರಮಕ್ಕೆ ಹೋಗಿರುವ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನೆನಪಿರಲಿ ಪ್ರೇಮ್ ಅವರು ಸಹ ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಆಕ್ಟರ್ ತಬಲ ನಾಣಿ ಹಾಗೂ ಅವಿನಾಶ್ ಮತ್ತು ಮಾಳ್ವಿಕ ಅವಿನಾಶ್ ದಂಪತಿಗಳು ಕೂಡ ಈ ಕಾರ್ಯಕ್ರಮಕ್ಕೆ ಹೋಗಿದ್ದಾರೆ.

ಕಾಮಿಡಿ ಕಿಂಗ್ ಶರಣ್ ಅವರು ಸಹೋದರಿ ಶೃತಿ ಮತ್ತು ಅವರ ಮಗಳು ಗೌರಿ ಅವರ ಜೊತೆ ಹೋಗಿದ್ದಾರೆ. ಇವರ ಜೊತೆ ಇನ್ನೂ ಅನೇಕ ಕನ್ನಡ ಚಲನಚಿತ್ರರಂಗದ ಕಲಾವಿದರುಗಳು, ಸ್ಟಾರ್ ಹೀರೋಗಳು, ಹೀರೋಯಿನ್ ಗಳು, ನಿರ್ದೇಶಕರುಗಳು, ತಂತ್ರಜ್ಞರು ಮತ್ತು ನಿರ್ಮಾಪಕರು ಸೇರಿದಂತೆ ಇಡೀ ಇಂಡಸ್ಟ್ರಿಯೇ ಕುಟುಂಬದಂತೆ ಹೋಗಿ ಈ ನವದಂಪತಿಗೆ ಆಶೀರ್ವದಿಸಿದ್ದಾರೆ. ಈ ವಿಡಿಯೋ ಸಂಪೂರ್ಣವಾಗಿ ನೋಡಿ ನೀವು ಕೂಡ ಸಿಂಹ ಪ್ರಿಯ ಜೋಡಿಗೆ ಶುಭಾಶಯಗಳು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಬಟ್ಟೆ ಹಾಕೋಕೆ ಬೇಜಾರು ಅಂತ ನ್ಯೂಸ್ ಪೇಪರ್ ನಲ್ಲೆ ಡ್ರೆಸ್ ಮಾಡಿ ಹಾಕೊಂಡ ನಿವೇದಿತಾ ಗೌಡ. ಈ ವಿಡಿಯೋ ನೋಡಿದ್ರೆ ಪಕ್ಕಾ ಶಾ-ಕ್ ಆಗ್ತೀರಾ.

ನಿವೇದಿತ ಗೌಡ ಅವತಾರ ನೋಡಿ ಮತ್ತೊಬ್ಬ ಉರ್ಫಿ ಜಾವೇದ್ ಎಂದ ನೆಟ್ಟಿದರು ನಿವೇದಿತ ಗೌಡ ( Niveditha Gowda) ಸದಾ ಒಂದಲ್ಲ ಒಂದು ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಲೇ ಇರುತ್ತಾರೆ. ಟ್ರೆಂಡಿಂಗ್ ವೀಡಿಯೋಸ್ ಗಳಿಗೆ ರೀಲ್ಸ್ ಮಾಡುತ್ತಾ ಮತ್ತು ಕಿರುತೆರೆ ಶೋಗಳಲ್ಲಿ ಬಾಗಿಯಾಗಿ ಎಲ್ಲರಿಗೂ ಮನರಂಜನೆ ಕೊಡುವ ಇವರ ಹೊಸ ಹೊಸ ಅವತಾರಗಳನ್ನು ಕಂಡು ಜನ ಗೇಲಿ ಮಾಡುತ್ತಿರುತ್ತಾರೆ. ಟ್ರೋಲ್ ಮಾಡುವವರಿಗೆ ಕೂಡ ಕೂಡ ಟಾಪಿಕ್ ಆಗುವ ನಿವೇದಿತಾ ಗೌಡ ಅವರ ಹಲವು ವಿಷಯಗಳನ್ನು ಈವರಿಗೂ ಟ್ರೋಲ್ (Troll) ಮಾಡಲಾಗಿದೆ.

ತಮ್ಮ ಯುಟ್ಯೂಬ್ ಚಾನೆಲ್ ಅಲ್ಲಿ ಮುದ್ದೆ ಮಾಡುವುದು ಹಾಗೂ ಮುದ್ದೆ ತಿನ್ನುವುದನ್ನು ವಿಡಿಯೋ ಮಾಡಿದ್ದ ನಿವೇದಿತಾ ಗೌಡ ಅವರ ಆ ವಿಡಿಯೋ ನೋಡಿ ಸಾಕಷ್ಟು ಜನ ಅವರನ್ನು ಖಂಡಿಸಿದ್ದರು, ಮುಂದುವರೆದು ಮಜಾ ಟಾಕೀಸ್ ಅಲ್ಲಿ ಕೂಡ ಅವರು ಮುದ್ದೆಯನ್ನು ತಿಂದ ಪರಿಯನ್ನು ನೋಡಿ ಹಿಗ್ಗ ಮುಗ್ಗಾ ಬೈದಿದ್ದರು. ಹೀಗೆ ಮಿತಿ ಇರದಂತೆ ಸಾಕಷ್ಟು ವಿಚಾರಗಳು ನಿವೇದಿತಾ ಗೌಡ ಅವರನ್ನು ಟ್ರೋಲ್ ಮಾಡಲು ಕಾರಣವಾಗಿದೆ.

ಇದು ಹೀಗೆ ಮುಂದುವರೆಯುತ್ತಿದ್ದು ಇತ್ತೀಚೆಗೆ ಇವರು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುವ ಹೊಸ ಹೊಸ ಫೋಟೋ ಶೂಟ್ಗಳು ಹಾಗೂ ಇನ್ಸಾಗಂ ರಿಲ್ಸ್ ಗಳಿಂದ ಟೋಲ್ಸ್ ಗೆ ಒಳಗಾಗುತ್ತಿದ್ದಾರೆ. ಈಗ ಹೊಸ ಅವತಾರದಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿರುವ ಇವರನ್ನು ಆ ಗೆಟಪ್ ಅಲ್ಲಿ ಕಂಡ ಜನ ಉರ್ಫಿ ಜಾವೇದ್ (Urfi Javed) ಅವರಿಗೆ ಹೋಲಿಸಿ ಬಿಟ್ಟಿದ್ದಾರೆ. ಉರ್ಫಿ ಜಾವೇದ್ ಕೂಡ ತಾವು ಹಾಕುವ ಬಟ್ಟೆಗಳಿಂದ ಟ್ರೋಲ್ ಆಗುತ್ತಾರೆ ಹಾಗೂ ಇವರು ವಿಚಿತ್ರ ಕ್ರೇಝ್ ಒಂದನ್ನು ಬಟ್ಟೆಗಳ ವಿಚಾರವಾಗಿ ಹೊಂದಿದ್ದಾರೆ.

ಚಿತ್ರ ವಿಚಿತ್ರವಾದ ಬಟ್ಟೆ ಹಾಗೂ ತುಂಬಾ ಹಾಟ್ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುವ ಉರ್ಫಿ ಜಾವೇದವರನ್ನು ನಿವೇದಿತವರಿಗೆ ಯಾಕೆ ಹೋಲಿಕೆ ಮಾಡಲಾಗಿದೆ ಎಂದರೆ ನಿವೇದಿತ ಕೂಡ ಇತ್ತೀಚಿಗೆ ಚಿಕ್ಕ ಚಿಕ್ಕ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅವರ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಫೋಟೋಗಳಲ್ಲಿ ಅತಿ ಹೆಚ್ಚು ಎಕ್ಪೋಸ್ ಆಗುತ್ತಿದ್ದು ಈ ಬಾರಿ ಹೊಸ ಬಟ್ಟೆ ಪ್ರಯೋಗವನ್ನು ಕೂಡ ಮಾಡಿದ್ದಾರೆ.

ಅದೇನೆಂದರೆ ನ್ಯೂಸ್ ಪೇಪರ್ ಕಟ್ ಮಾಡಿ ಅದನ್ನು ಫ್ರಾಕ್ ಮಾಡಿಕೊಂಡು ಟಿ-ಶರ್ಟ್ ಮೇಲೆ ಧರಿಸಿ ಮ್ಯೂಸಿಕ್ ಒಂದಕ್ಕೆ ರೀಲ್ಸ್ ಮಾಡಿದ್ದಾರೆ. ನಿವೇದಿತರ ಈ ಅವತಾರ ನೋಡಿ ಮೆಚ್ಚಿಕೊಂಡಿದ್ದವರಿಗಿಂತ ಅವರನ್ನು ನಿಂದಿಸುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಕಾಮೆಂಟ್ಗಳಲ್ಲಿ ಮನಸೋ ಇಚ್ಛೆ ನಿವೇದಿತಾ ಅವರಿಗೆ ತಮ್ಮ ಅನಿಸಿಕೆಯನ್ನು ಹೇಳಲಾಗುತ್ತಿದ್ದು ಮುಂದುವರೆದು ಇದೇ ಕಾರಣಕ್ಕಾಗಿ ಅವರನ್ನು ಉರ್ಫಿ ಜಾವೇದ್ ಆಗಲು ಹೊರಟಿದ್ದೀರಾ ಎಂದು ಕೇಳಿದ್ದಾರೆ.

ಸದ್ಯಕ್ಕೆ ಕಲರ್ಸ್ ಕನ್ನಡ (colors kannada) ವಾಹಿನಿಯ ಪ್ರಸಾರವಾಗುತ್ತಿರುವ ಗಿಚ್ಚ ಗಿಲಿ ಗಿಲಿ (gichha gili gili) ಕಾಮಿಡಿ ಶೋ ನಿವೇದಿತಾ ಗೌಡ ಅವರ ನಿಜ ಟ್ಯಾಲೆಂಟ್ ಅನ್ನು ಹೊರಹಾಕಿದೆ. ಈ ಬಾರಿ ಸೀಸನ್ 2 ಅಲ್ಲೂ ಕೂಡ ಮೆಂಟರ್ ಆಗಲು ಬಂದಿರುವ ನಿವೇದಿತ ಗೌಡ ಅವರು ಗೆಸ್ಟ್ ರೋಲ್ಗಳಲ್ಲಿ ಬಂದು ಹೆಚ್ಚು ಮನರಂಜಿಸುತ್ತಿದ್ದಾರೆ.

ಅಲ್ಲಿ ಪಾತ್ರಗಳಿಗೆ ತಕ್ಕ ವೇಷ ಹಾಕುವ ನಿವೇದಿತ ಗೌಡ ಅವರು ಆಡುವ ಮಾತುಗಳ ಎಡವಟ್ಟಿನಿಂದ ಟ್ರೋಲ್ ಆಗುತ್ತಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಬಟ್ಟೆ ವಿಚಾರಕ್ಕಾಗಿ ಸುದ್ದಿ ಆಗುತ್ತಿದ್ದಾರೆ. ಇತ್ತೀಚೆಗೆ ಗಿಚ್ಚ ಗಿಲಿ ಗಿಲಿ ವೇದಿಕೆ ಮೇಲೆ ತಾವು ಪ್ರೆಗ್ನೆಂಟಾಗಿದ್ದೇನೆ ಎಂದು ಹೇಳಿದ್ದನ್ನು ನೆಟ್ಟಿದವರು ಕಮೆಂಟ್ ಗಾಗಿ ಈ ರೀತಿ ಹೇಳಿದ್ದಾರೆ ಎಂದು ಆಕ್ಷೇಪ ಮಾಡಿದ್ದರು.

ನನ್ಗೆ ಮದ್ವೆ ಮುಖ್ಯ ಅಲ್ಲ ಅಂದ ಮೋಹಕ ತಾರೆ, ಮದ್ವೆಗಿಂತ ರಮ್ಯಗೆ ಯಾವ್ದು ಮುಖ್ಯ ಗೊತ್ತ.?

0

ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯಾ (Ramya) ಅವರು ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಈ ಬಾರಿ ನಿರ್ಮಾಪಕಿಯಾಗಿ ಹಾಗೂ ನಾಯಕಿಯಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಆಪಲ್ ಬಾಕ್ಸ್ (Apple Box) ಎನ್ನುವ ಸಂಸ್ಥೆಯನ್ನು ನಿರ್ಮಿಸಿ ಸ್ವಾತಿ ಮುತ್ತಿನ ಮಳೆ ಹನಿ ಸಿನಿಮಾಗೆ ನಿರ್ಮಾಪಕಕ ಆಗಿರುವ ರಮ್ಯಾ ಅವರು ಉತ್ತರಕಾಂಡ (Uththara Kanda) ಸಿನಿಮಾದಲ್ಲಿ ನಟಭಯಂಕರ ಡಾಲಿ ಧನಂಜಯ್ (Dolly Dhananjay) ಅವರಿಗೆ ಜೋಡಿಯಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ.

ಈಗಾಗಲೇ ಇದರ ಪೋಸ್ಟರ್ ಹಾಗೂ ಟೀಸರ್ ಕೂಡ ರಿಲೀಸ್ ಆಗಿದೆ. ರಮ್ಯಾ ಅವರು ಇಷ್ಟು ದೊಡ್ಡ ಬ್ರೇಕ್ ತೆಗೆದುಕೊಂಡಿದ್ದರೂ ಕೂಡ ಅವರ ಅಭಿಮಾನಿಗಳ ಸಂಖ್ಯೆ ಕೊಂಚವೂ ಕಡಿಮೆ ಆಗಿಲ್ಲ. ರಾಜಕೀಯದ ಕಡೆಗೆ ಹೋಗಿದ್ದ ರಮ್ಯಾ ಅವರು ಮತ್ತು ಯಾವಾಗ ಇಂಡಸ್ಟ್ರಿ ಗೆ ಬರ್ತಾರೆ ಎಂದು ಅವರೆಲ್ಲರೂ ಕಾದು ಕುಳಿತಿದ್ದರು. ರಮ್ಯಾ ಅವರು ಈ ವರ್ಷ ಕಂಬ್ಯಾಕ್ ಆಗುತ್ತಿರುವುದು ಅವರ ಅಭಿಮಾನಿಗಳಿಗೆ ಅತೀವ ಸಂತಸ ಉಂಟು ಮಾಡಿದೆ.

ಜೊತೆಗೆ ರಮ್ಯಾ ಅವರ ಮದುವೆ (Marriage) ವಿಚಾರವಾಗಿ ಕೂಡ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದೆ. ಯಾಕೆಂದರೆ ರಮ್ಯಾ ಅವರ ಸಮಕಾಲೀನ ತಾರೆಗಳಾದ ರಕ್ಷಿತ ಹಾಗೂ ರಾಧಿಕಾ ಕುಮಾರಸ್ವಾಮಿ ಮುಂತಾದವರೆಲ್ಲ ಮದುವೆ ಮಾಡಿಕೊಂಡು ಮಕ್ಕಳ ಜೊತೆ ಸಂತೋಷವಾಗಿ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ ರಮ್ಯಾ ಅವರು ಇನ್ನೂ ಮದುವೆ ಆಗದೆ ಇರುವುದಕ್ಕೆ ಅಭಿಮಾನಿಗಳು ಅವರನ್ನು ಪ್ರಶ್ನಿಸುತ್ತಿದ್ದಾರೆ.

ಈಗ ಪ್ರಶ್ನೆಯನ್ನು ರಮ್ಯಾ ಅವರಿಗೆ ಕಾರ್ಯಕ್ರಮ ಒಂದರಲ್ಲಿ ಕೇಳಲಾಗಿದೆ ಕಾರ್ಯಕ್ರಮದಲ್ಲಿ ರಮ್ಯಾ ಅವರು ಮಾತನಾಡುತ್ತಿದ್ದಾಗ ಅವರ ಅಭಿಮಾನಿ ಒಬ್ಬಾತ ಪ್ರಶ್ನೆ ಮಾಡಿ ಮದುವೆ ಯಾವಾಗ ಆಗುತ್ತೀರಾ ಎಂದು ಕೇಳುತ್ತಾರೆ? ನಾನು ಮದುವೆ ಆಗಬೇಕ ಎಂದು ರಮ್ಯಾ ಮರು ಪ್ರಶ್ನಿಸಿದಾಗ ಬೇಡ ಬಿಡಿ ನೀವು ಹೀಗೆ ಇದ್ದು ಬಿಡಿ ಎಂದು ಉತ್ತರ ಕೊಟ್ಟಿದ್ದಾರೆ. ಅದಕ್ಕೆ ರಮ್ಯಾ ಅವರು ಹೌದು ಮದುವೆ ಆಗುವುದು ಮುಖ್ಯನಾ? ಸಂತೋಷವಾಗಿರುವುದು ಮುಖ್ಯ ? ಹೇಳಿ ಎಂದು ಕೇಳಿದ್ದಾರೆ.

ಮದುವೆ ನನಗೆ ಒಂದು ಮುಖ್ಯ ವಿಷಯ ಅಲ್ಲ, ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾಗಬೇಕು, ಶಿಕ್ಷಣ ಪಡೆದುಕೊಳ್ಳಬೇಕು, ಇಷ್ಟು ಇದ್ದರೆ ಸಾಕು ಯಾರದ್ದೋ ಒತ್ತಾಯಕ್ಕೆ ಮದುವೆ ಆಗುವ ಅವಶ್ಯಕತೆ ಇಲ್ಲ. ನನಗೆ ಇನ್ನೂ ಸಹ ಆ ರೀತಿ ಹುಡುಗ ಸಿಕ್ಕಿಲ್ಲ, ಯಾರಾದರೂ ಸೋಲ್ಮೇಟ್ ರೀತಿ ಫೀಲ್ ಮಾಡಿಸುವವರು ಸಿಕ್ಕರೆ ನೋಡೋಣ ಸದ್ಯಕ್ಕಂತು ಆ ಬಗ್ಗೆ ಯೋಚಿಸಿಲ್ಲ ಎಂದು ರಮ್ಯಾ ಉತ್ತರಿಸಿದ್ದಾರೆ.

ಈಗಲೂ ಸಹ ಇಂಡಸ್ಟ್ರಿಯಲ್ಲಿ ನಟಿಯಾಗಿ ಬಾರಿ ಬೇಡಿಯಲ್ಲಿರುವ ರಮ್ಯಾ ಅವರು ತಮ್ಮ ಕೆರಿಯರ್ ನೋಡಿಕೊಂಡು ಹೀಗೆ ಇದ್ದುಬಿಡುತ್ತಾರಾ ಎನ್ನುವ ಅನುಮಾನ ಮತ್ತು ಕಳವಳ ಸಾಕಷ್ಟು ಅಭಿಮಾನಿಗಳಲ್ಲಿ ಉಂಟಾಗಿದ್ದರೆ ಅವರ ಮೇಲ್ ಫ್ಯಾನ್ಸ್ ಗೆ ಇದೊಂತರ ಖುಷಿ ಸುದ್ದಿ ಆಗಿದೆ ಎಂದು ಹೇಳಬಹುದು. ಮೋಹಕ ತಾರೆ ರಮ್ಯಾ ಅವರು ಏನೇ ನಿರ್ಧಾರ ತೆಗೆದುಕೊಂಡರೂ ಕೂಡ ಅವರ ಅಭಿಮಾನಿಗಳು ಅದನ್ನು ಒಪ್ಪಿ ಕೊಳ್ಳುತ್ತಾರೆ.

ಅದು ಮದುವೆ ವಿಚಾರವಾಗವೇ ಆಗಲಿ, ಸಿನಿಮಾ ವಿಚಾರವಾಗಲಿ ಅಥವಾ ರಾಜಕೀಯ ವಿಚಾರ ಆದರೂ ಅಭಿಮಾನಿಗಳಿಂದ ಅವರಿಗೆ ಸಪೋರ್ಟ್ ಇದ್ದೇ ಇರುತ್ತದೆ. ರಮ್ಯಾ ಅವರು ಮೆಚ್ಚಿವಂಥ ಹುಡುಗ ಆದಷ್ಟು ಬೇಗ ಅವರಿಗೆ ಸಿಗಲಿ ಎಲ್ಲರಂತೆ ಅವರು ಸಹ ಮದುವೆ, ಬಂಧನಕ್ಕೆ ಒಳಗಾಗಿ ಸಂತೋಷದಿಂದ ಜೀವನ ನಡೆಸಲಿ ಎಂದು ಅಭಿಮಾನಿಗಳಾಗಿ ನಾವು ಸಹ ಹಾರೈಸೋಣ.

ಮಂದೀಪ್ ರೈ ಅಂತಿಮ ದರ್ಶನಕ್ಕೆ ಬಂದಿದ್ದು ಕೇವಲ 20 ಜನ ವಿಪರ್ಯಾಸ ಅಂದ್ರೆ ಯಾವ ಹೀರೋ ಕೂಡ ಹೋಗಿಲ್ಲ, 500 ಸಿನಿಮಾದಲ್ಲಿ ನಟಿಸಿದ್ದ ನಟನಿಗೆ ಚಿತ್ರರಂಗ ಕೊಟ್ಟ ಗೌರವ ಇದೇನಾ.?

0

 

ಇತ್ತೀಚಿಗೆ ನಾವು ಚಿತ್ರರಂಗದ ಒಂದೊಂದೇ ಮುತ್ತುಗಳನ್ನು ಕಳೆದು ಕೊಳ್ಳುತ್ತಿದ್ದೇವೆ. ಈಗ ನಾಲ್ಕೈದು ದಿನಗಳ ಹಿಂದೆ ಹಿರಿಯ ನಟ ಲಕ್ಷ್ಮಣ್ ಅವರು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಈಗ ಅದೇ ದಾರಿಯಲ್ಲಿ ಮತ್ತೊಬ್ಬ ಹಿರಿಯ ಕಲಾವಿದ ಮಂದೀಪ್ ರಾಯ್ (Mandip Roy) ಅವರು ಹೋಗುತ್ತಿದ್ದು ನಮ್ಮ ನೆಚ್ಚಿನ ಹಾಸ್ಯ ಕಲಾವಿದ ಇನ್ನಿಲ್ಲವಲ್ಲ ಎನ್ನುವ ನೋವನ್ನು ಹೆಚ್ಚು ಮಾಡುತ್ತಿದೆ.

ನಮ್ಮ ಬಾಲ್ಯದ ದಿನಗಳಲ್ಲಿ ಬರುತ್ತಿದ್ದ ಟಿವಿ ಸಿನಿಮಾಗಳಲ್ಲಿ ನಟಿಸಿ ನಮ್ಮನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದ ವಿಶೇಷ ಹಾವಭಾವದ ಶ್ರೇಷ್ಠ ಕಲಾವಿದ ಮಂದೀಪ್ ರಾಯ್ ಅವರು ವಯೋಸಹಜ ಕಾಯಿಲೆಯಿಂದ ಅಸುನೀಗಿದ್ದಾರೆ. 500ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿ ಅತಿ ಹೆಚ್ಚು ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಂದೀಪ್ ರಾಯ್ ಅವರು ಕನ್ನಡ ಚಿತ್ರರಂಗದ ಒಂದು ಭಾಗ. ಈಗ ಇವರ ಸಾ.ವು ಇಡೀ ಕರ್ನಾಟಕಕ್ಕೆ ತುಂಬಲಾಗದ ನ.ಷ್ಟ ಆಗಿದೆ.

ಮಂದೀಪ್ ರಾಯ್ ಅವರಿಗೆ ಹಿಂದಿನ ದಿನ ಎದೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಹೋಗಿ ಇಸಿಜಿ ಮಾಡಿಸಿ ಮರಳಿ ಮನೆಗೆ ಕರೆದುಕೊಂಡು ಬಂದು ಸುಧಾರಿಸಿಕೊಂಡಿದ್ದಾರೆ ಎಂದು ಅಂದುಕೊಳ್ಳುವಷ್ಟರಲ್ಲಿ ಪ್ರಾ.ಣ ಬಿಟ್ಟಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 500 ಚಿತ್ರಗಳಿಗೆ ಬಣ್ಣ ಹಚ್ಚಿರುವ ಮಂದೀಪ್ ರಾಯ್ ಅವರ ಅಂತಿಮ ದರ್ಶನಕ್ಕೆ ಕನ್ನಡ ಚಿತ್ರರಂಗದಿಂದ ಬಂದಿದ್ದ ಕಲಾವಿದ ಸಂಖ್ಯೆ ಕೇವಲ 20 ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಕ್ಕೆ ಕಾರಣ ಆಗಿದೆ.

ಮಂದೀಪ್ ಅವರ ಅಂತಿಮ ದರ್ಶನದ ಮತ್ತು ಅಂತ್ಯ ಸಂಸ್ಕಾರದ ವಿಡಿಯೋಗಳು ಸಾಮಾಜಿಕ ಜಾಲತಾಣವಾದಲ್ಲಿ ಹರಿದಾಡುತ್ತಿದ್ದಂತೆ ಬಳಕೆದಾರರು ಈ ವಿಷಯದ ಕುರಿತು ಕಿಡಿ ಕಾರುತ್ತಿದ್ದಾರೆ. ನೆನ್ನೆ ಮೊನ್ನೆ ಹುಟ್ಟಿಕೊಂಡ ಸ್ಟಾರ್ ಮದುವೆಗೆ ಆದರೆ ಕುಟುಂಬ ಸಮೇತ ದಂಡು ದಂಡಾಗಿ ಹೋಗುತ್ತಿರಿ. ಇವರು ಸಹಾ ಕನ್ನಡ ತಾಯಿ ಸೇವೆ ಮಾಡಿಲ್ವಾ ಪದೇ ಪದೇ ಯಾಕೆ ಹೀರೋಗಳಿಗೆ ಒಂದು ತರಹ, ಸಹ ಕಲಾವಿದರಿಗೆ ಒಂದು ಮಾಡುತ್ತೀರಲ್ಲಾ ಎಂದು ಪ್ರಶ್ನಿಸಿದ್ದಾರೆ.

ಕೊನೆ ಪಕ್ಷ ಅವರ ಜೊತೆ ಸಿನಿಮಾ ಮಾಡಿದ್ದ ಅವರ ಜೊತೆ ತೆರೆ ಹಂಚಿಕೊಂಡಿದ್ದ ಹೀರೋಗಳು ಆದರೂ ಹೋಗಬಹುದಿತ್ತಲ್ಲ? ಇದೇನಾ ನೀವು ಹಿರಿಯರಿಗೆ ತೋರುತ್ತಿರುವ ಗೌರವ? ಎತ್ತ ಸಾಗುತ್ತಿದೆ ನಮ್ಮ ಕರ್ನಾಟಕ ಸಂಸ್ಕೃತಿ ಎಂದು ಪ್ರಶ್ನೆ ಎತ್ತಿದ್ದಾರೆ. ಹಾಗಾದರೆ ನಮ್ಮ ಇಂಡಸ್ಟ್ರಿಯಲ್ಲಿ ಹೀರೋ ಆದವರಿಗೆ ಮಾತ್ರ ಬೆಲೆ ಅವರನ್ನು ಕಳೆದುಕೊಂಡಾಗ ಮಾತ್ರ ನಷ್ಟ ಆಗುತ್ತಿದೆಯಾ ಇವರು ಸಹ ಸಿನಿಮಾದ ಭಾಗವೇ ಅಲ್ಲವೇ ಇವರಿಲ್ಲದೆ ಸಿನಿಮಾ ಆಗಿ ಹೋಯ್ತಾ.

ಪದೇ ಪದೇ ತಪ್ಪು ತಿದ್ದಿಕೊಳ್ಳದೆ ಈ ರೀತಿ ವರ್ತಿಸುತ್ತಿದ್ದೀರಲ್ಲ ಎಲ್ಲಿ ಹೋಗಿದ್ದೀರ ದೊಡ್ಡ ದೊಡ್ಡ ಕಲಾವಿದರು ಎನಿಸಿಕೊಂಡವರು ಯಾಕೆ ಯಾರು ಮಾತನಾಡುತ್ತಿಲ್ಲ ಎಂದು ಕೇಳುತ್ತಿದ್ದಾರೆ. ಇವರ ಈ ಬೇಸರದಲ್ಲೂ ಅರ್ಥವಿದೆ ಅನಿಸುತ್ತಿದೆ. ಯಾಕೆಂದರೆ ಯಾವುದಾದರೂ ಸ್ಟಾರ್ ಹೀರೋಗಳ ಸಂತೋಷದ ಕೂಟದಲ್ಲಿ ಎಲ್ಲರೂ ಇರುತ್ತಾರೆ. ಆದರೆ ಯಾವುದೋ ಹಿರಿಯ ಕಲಾವಿದನ ಕೊನೆಯ ವಿದಾಯ ಹೇಳುವ ಸಮಯದಲ್ಲಿ ಯಾರು ಪತ್ತೆಗೆ ಇರುವುದಿಲ್ಲ ಎನ್ನುವುದು ಇವರ ಕೋಪಕ್ಕೆ ಕಾರಣವಾಗಿತ್ತು.

ಲಕ್ಷ್ಮಣ್ ಅವರು ಮ.ರ.ಣ ಹೊಂದಿದ ದಿನವೂ ಕೂಡ ಇದೇ ವಿಷಯ ಚರ್ಚೆಯಾಗಿತ್ತು, ಆಗ ಅದು ದೊಡ್ಡದಾಗದೆ ಹೋದರು ಈಗ ಮಂದೀಪ್ ಅವರ ಸಾ.ವಿ.ನ.ಲ್ಲೂ ಕೂಡ ಇದೇ ರೀತಿ ಬೇಧ ಭಾವ ಮಾಡುತ್ತಿರುವುದು ಕಂಡು ಜನತೆ ಈಗ ಚಿತ್ರರಂಗದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇನ್ನಾದರೂ ಈ ವಿಷಯ ಅವರಿಗೆ ಮುಟ್ಟಿ ಅರ್ಥ ಕೊಳ್ಳುತ್ತಾರಾ ಎಂದು ಕಾದು ನೋಡೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

ಚೆನ್ನಾಗ್ ಉಂಡ್ಕೊಂಡು ತಿನ್ಕೊಂಡು ಇದ್ದವ್ನೇ, ಹೊಂಟೋದ ಇನ್ ನಾನ್ ಯಾವ್ ಲೆಕ್ಕ ಜಿಮ್ ಬಗ್ಗೆ ಭಯ ಬೇಡ ಎಂದ ದರ್ಶನ್. ಕ್ರಾಂತಿಗಾಗಿ ಎಷ್ಟು ಕೆ.ಜಿ ತೂಕ ಇಳಿಸಿದ್ದಿನಿ ಗೊತ್ತ.?

0

 

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಖಡಕ್ ಪೊಲೀಸ್ ಪಾತ್ರಕ್ಕೂ ಸೈ, ರೈತನ ಪಾತ್ರಕ್ಕೂ ಜೈ. ಆರಡಿ ಹೈಟು ಕಟ್ಟು ಮಸ್ತಾದ ದೇಹ ಅದಕ್ಕೆ ತಕ್ಕನಾದ ಧ್ವನಿ ಮತ್ತು ಆಟಿಟ್ಯೂಡ್. ಇಂತಹ ಒಂದು ವಿಶೇಷ ಹಾಗೂ ಅಪರೂಪದ ಬಾಡಿ ಹೊಂದಿದ್ದ ಕಾರಣವೇ ಅವರಿಗೆ ಕುರುಕ್ಷೇತ್ರದ ದುರ್ಯೋಧನನ ಪಾತ್ರ ಮತ್ತು ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪಾತ್ರ ಮಾಡುವಂತಹ ಭಾಗ್ಯ ದೊರಕಿತು.

ದರ್ಶನ್ ಅವರ ಕ್ರಾಂತಿ (Kranthi) ಸಿನಿಮಾದಲ್ಲಿ ಅವರ ಸಿಕ್ಸ್ ಪ್ಯಾಕ್ ಅನ್ನು ಓಪನ್ ಶರ್ಟ್ ಅಲ್ಲಿ ತೋರಿಸಲಾಗಿದೆ ಇದೇ ರೀತಿ ಹಿಂದೆ ಐರಾವತ ಸಿನಿಮಾದಲ್ಲಿ ಕೂಡ ತೋರಿಸಲಾಗಿತ್ತು. ಆಗ ಎಲ್ಲರೂ ಅದನ್ನು ಗ್ರಾಫಿಕ್ ಎಂದು ಅನುಮಾನಿಸಿದ್ದರು, ಈಗ ಆ ಪ್ರಶ್ನೆಗೆ ಡಿ ಬಾಸ್ ನೇರವಾಗಿ ಉತ್ತರಿಸಿ ಆಡಿಕೊಳ್ಳುವವರ ಬಾಯಿ ಮುಚ್ಚಿಸಿದ್ದಾರೆ. ಫ್ರಾಂಕ್ ಕಾಲ್ ಮಾಡುತ್ತಾ ಎಲ್ಲರನ್ನೂ ನಗಿಸುವ ಕಲರ್ ಕಾಗೆ ಆರ್ ಜೆ ಸುನಿಲ್ (R.J Suneel) ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಸಂದರ್ಶನ ನೀಡಿದ ದರ್ಶನ್ ಅವರು ಈ ಕುರಿತು ಮಾತನಾಡಿದ್ದಾರೆ.

ಸುನಿಲ್ ಅವರು ಜಿಮ್ ಬಗ್ಗೆ ಪ್ರಶ್ನಿಸಿ ಈಗಿನ ಕಾಲದಲ್ಲಿ ಎಲ್ಲರೂ ಬಾಡಿ ಬಿಲ್ಡ್ ಮಾಡಲು ಆಸೆ ಪಡುತ್ತಾರೆ ಆದರೆ ಹೆಚ್ಚು ವರ್ಕೌಟ್ ಮಾಡುವುದರಿಂದ ಸಮಸ್ಯೆ ಆಗುತ್ತದೆ ಎಂದು ಆ ಬಗ್ಗೆ ಭಯ ಬೀಳುತ್ತಾರೆ. ಇದರ ಬಗ್ಗೆ ನಿಮಗೆ ಹೇಗೆ ಅನಿಸುತ್ತದೆ ಎಂದು ಪ್ರಶ್ನೆ ಕೇಳಿದಾಗ ದರ್ಶನ್ ಅವರ ಹಿಂದಿನ ಘಟನೆಯನ್ನು ವಿವರಿಸಿ ಅದಕ್ಕೆ ಉತ್ತರ ನೀಡಿದ್ದಾರೆ ನಾನು ಕ್ರಾಂತಿ ಸಿನಿಮಾದಲ್ಲೂ ಕೂಡ ಸಿಕ್ಸ್ ಪ್ಯಾಕ್ ತೋರಿಸಿದ್ದೇನೆ.

ಅದಕ್ಕಾಗಿ ಲಾಕ್ಡೌನ್ ಇಂದ ಈ ತನಕ ಬರೋಬ್ಬರಿ 45 ರಿಂದ 48 ಕೆಜಿ ಇಳಿಸಿ ಕೊಂಡಿದ್ದೇನೆ, ಅದು ಪಾತ್ರದ ಕಾರಣ. ಆದರೆ ಇದನ್ನು ಕೆಲವರು ಸುಲಭವಾಗಿ ಗ್ರಾಫಿಕ್ಸ್ (Graphics) ಎಂದು ಹೇಳಿ ಬಿಡುತ್ತಾರೆ. ಹೌದು ಟೆಕ್ನಾಲಜಿ ಬೆಳದಿದೆ ಗ್ರಾಫಿಕ್ ಮೂಲಕ ಸಿಕ್ಸ್ ಏನು 8 ಪ್ಯಾಕ್ 10 ಪ್ಯಾಕ್ ಬೇಕಾದರೂ ತೋರಿಸಬಹುದು. ಆದರೆ ಸಿನಿಮಾದ ಪೋಸ್ಟರ್ ಹಾಗೂ ಟ್ರೈಲರ್ ಗಳಲ್ಲಿ ಜನರು ನೋಡಿರುತ್ತಾರೆ ಸಿನಿಮಾ ಆದ ಮೇಲೆ ಪ್ರಚಾರಕ್ಕೆ ಹೋದಾಗ ಜನ ನೇರವಾಗಿ ನೋಡುತ್ತಾರೆ.

ಆಗ ಅವರು ಫೇಕ್ ಎಂದು ಮಾತನಾಡಿ ಕೊಳ್ಳುವುದಿಲ್ಲವಾ? ಆ ಪಾತ್ರಕ್ಕೆ ತಕ್ಕ ಹಾಗೆ ಡೆಡಿಕೇಶನ್ ಬೇಕು ಹಾಗಾಗಿ ಆ ಸಮಯ ಬಂದಾಗ ಹಾಗೆ ತಯಾರಾಗುತ್ತೇನೆ. ಆ ಬಗ್ಗೆ ಭಯ ಏನೂ ಇಲ್ಲ. ಉಂಡುಕೊಂಡು ತಿಂದುಕೊಂಡು ಚೆನ್ನಾಗಿ ಇದ್ದವರೆ ಸಂಜೆ ವೇಳೆಗೆ ಹೋಗಿ ಬಿಟ್ಟಿರುತ್ತಾರೆ ಎಂದು ನಾವು ಕೇಳಿಲ್ವಾ? ಬೆಳಗ್ಗೆ ಚೆನ್ನಾಗಿ ಇರುತ್ತಾರೆ, ಮಧ್ಯಾಹ್ನದ ವೇಳೆಗೆ ಸ್ವಲ್ಪ ಹೆಚ್ಚು ಕಮ್ಮಿ, ಸಾಯಂಕಾಲ ಹೊರಟೆ ಹೋದ ಎಂದು ಸುದ್ದಿ ಬಂದಿರುತ್ತದೆ.

ಹಾಗಾಗಿ ದೇವರು ಎಲ್ಲರಿಗೂ ಒಂದು ಟೈಮ್ ಫಿಕ್ಸ್ ಮಾಡಿರುತ್ತಾರೆ ಅಲ್ಲಿಯವರೆಗೂ ಏನು ಆಗುವುದಿಲ್ಲ ಅದನ್ನು ಮೈಂಡಲ್ಲಿ ಇಟ್ಟುಕೊಂಡು ಅಲ್ಲಿಯವರೆಗೂ. ನಾವು ಆರಾಮಾಗಿ ಇರಬೇಕು. ಸುಮ್ಮನೆ ಎಲ್ಲಾದಕ್ಕೂ ಟೆನ್ಶನ್ ಮಾಡಿಕೊಳ್ಳಬಾರದು ಕುಡುಕರು ಕೂಡ ಎಷ್ಟೋ ವರ್ಷಗಳ ಕಾಲ ಆರೋಗ್ಯವಾಗಿ ಬದುಕಿರೋ ಉದಾಹರಣೆ ಇಲ್ಲವೇ ಎಂದು ದರ್ಶನ್ ಮರು ಪ್ರಶ್ನಿಸಿದ್ದಾರೆ.

ದರ್ಶನ್ ಅವರು ಮೊದಲೇ ನಾನ್ ವೆಜ್ ಪ್ರಿಯರು ಹಾಗೂ ಅವರಿಗೆ ಸ್ವಲ್ಪ ಮಧ್ಯದ ಚಟವೂ ಇದೆ ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾಗಿ ಎಂದು ಸಹ ದರ್ಶನ್ ಅವೆರಡನ್ನು ಬಿಟ್ಟು ಇರಲಾರರು. ಆದರೆ ಸಿನಿಮಾ ಎಂದು ಬಂದಾಗ ಆ ಪಾತ್ರಕ್ಕೆ ಅವಶ್ಯಕತೆ ಇರುವಾಗ ಅದಕ್ಕೆ ತಕ್ಕ ಹಾಗೆ ವರ್ಕ್ ಔಟ್ ಮಾಡಿ ದೇಹವನ್ನು ದಂಡಿಸಿಕೊಳ್ಳುವ ಕಲೆಯನ್ನು ಕೂಡ ಕರಗತ ಮಾಡಿಕೊಂಡಿದ್ದಾರೆ ಈ ಚಾಲೆಂಜಿಂಗ್ ಸ್ಟಾರ್. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.

0

 

ವಿಷ್ಣುವರ್ಧನ್ (Vishnuvardhan) ತೆರೆ ಮೇಲೆ ರಾಜನಂತೆ ಅಬ್ಬರಿಸಿದ ಸಾಹಸಸಿಂಹ ಆದರೆ ತೆರೆ ಹಿಂದೆ ವೈಯುಕ್ತಿಕ ಬದುಕಿನಲ್ಲಿ ಇಂಡಸ್ಟ್ರಿಗೆ ಕಾಲಿಟ್ಟ ದಿನದಿಂದಲೂ ಅವರ ಅಂತ್ಯದ ದಿನದವರೆಗೂ ಹಾಗೂ ಈಗ ಸಾವನ್ನಪ್ಪಿ ದಶಕವೇ ಕಳೆದಿದರೂ ಇಲ್ಲಿಯವರೆಗೂ ಇನ್ನೂ ಸ್ಮಾರಕದ ವಿಚಾರದ ವಿಚಾರದ ತನಕವೂ ಕೂಡ ಹಲವು ವಿವಾದಗಳಲ್ಲಿ ಸಿಲುಕಿಕೊಂಡ ದುರಂತ ನಾಯಕ.

ಅಭಿಮಾನಿಗಳ ಹೋರಾಟ ಕುಟುಂಬದವರ ಕೋರಿಕೆ ಸರ್ಕಾರದ ಹಗ್ಗ ಜಗ್ಗಾಟ ಮತ್ತು ಇನ್ನಿತರ ಕಣ್ಣಾ ಮುಚ್ಚಾಲೆ ಎಲ್ಲವನ್ನು ಮೀರಿ ಇಂದು ವಿಷ್ಣುವರ್ಧನ್ ಅವರ ಸ್ಮಾರಕ (Memorial) ಮೈಸೂರಿನಲ್ಲಿ (Mysore) ನಿರ್ಮಾಣ ಆಗಿದೆ. ಆದರೆ ಬೆಂಗಳೂರಿನಲ್ಲಿ (Bangalore) ಅವರ ಪುಣ್ಯಭೂಮಿ ಆಗಬೇಕು ಸ್ಮಾರಕ ಆಗಬೇಕು ಅನ್ನೋದು ಅವರ ಕೋಟ್ಯಾನು ಕೋಟಿ ಅಭಿಮಾನಿಗಳ ಆಸೆ. ಆದರೆ ಅದು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆ. ಇದಕ್ಕೆ ಅವರ ಅಳಿಯ ಅನಿರುದ್ಧ್ (Anirudh) ಅವರ ಉತ್ತರ ಹೀಗಿತ್ತು.

ಇಂದು ಮೈಸೂರಿನಲ್ಲಿ ನಡೆದ ಸ್ಮಾರಕ ಉದ್ಘಾಟನೆ ಸಮಾರಂಭ ಕುರಿತು ಹಾಗೂ ಬೆಂಗಳೂರಿನಲ್ಲಿ ಯಾಕೆ ಸ್ಮಾರಕ ಇನ್ನು ಆಗಿಲ್ಲ ಎನ್ನುವ ಕನ್ನಡಿಗರ ಪ್ರಶ್ನೆಗಳೂ ಮಾಧ್ಯಮದವರ ಜೊತೆ ಮಾತನಾಡಿದ ಅನಿರುದ್ಧ್ ಅವರು ಈ ರೀತಿ ಉತ್ತರ ಕೊಟ್ಟಿದ್ದಾರೆ. ನಮಗೂ ಸಹ ಬೆಂಗಳೂರಿನಲ್ಲಿ ಅವರ ಪುಣ್ಯ ಭೂಮಿ ಇರುವಲ್ಲಿ ಸ್ಮಾರಕ ಆಗಬೇಕು ಎನ್ನುವ ಆಸೆ ಇದೆ. ಎಲ್ಲರಿಗೂ ಗೊತ್ತಿರುವ ಹಾಗೆ 2010 ರಲ್ಲೇ ರಾಜ್ಯ ಸರ್ಕಾರ (State Government) ಕೂಡ ವಿಷ್ಣುವರ್ಧನ್ ಸ್ಮಾರಕ ಪ್ರತಿಷ್ಠಾಪನ ಟ್ರಸ್ಟ್ ( Vishnuvardhan Smaraka prathistapana Trust) ಮಾಡಿತ್ತು.

ಅದಕ್ಕೆ ಅಧ್ಯಕ್ಷರು ಮುಖ್ಯಮಂತ್ರಿಗಳೇ (Chief Minister) ಆಗಿದ್ದರು ನಾನು ಹಾಗೂ ಭಾರತೀಯಮ್ಮ ಅದರ ಸದಸ್ಯರಾಗಿದ್ದವು. ಮುಖ್ಯ ಮಂತ್ರಿಗಳೇ ಅಧ್ಯಕ್ಷರಾಗಿದ್ದರು ಸಹ ಅಲ್ಲಿ ಪುಣ್ಯಭೂಮಿ ಮತ್ತು ಸ್ಮಾರಕ ಮಾಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಅದಕ್ಕಾಗಿ ಅಭಿಮಾನಿಗಳು ಮತ್ತು ನಾವುಗಳು ಸಾಕಷ್ಟು ಹೋರಾಟ ಮಾಡಿದ್ದೇವೆ, ಸಂಘರ್ಷಗಳು ನಡೆದು ವಿವಾದಗಳು ಆಗಿವೆ.

ಅಕ್ಕ-ಪಕ್ಕ ಮತ್ತು ಬೇರೆಡೆ ಹಾಗೂ ಮೈಸೂರಿನಲ್ಲಿ ಎಂದು ಹೀಗೆ ಸ್ಥಳಗಳು ಬದಲಾಗುತ್ತಲೇ ಇದ್ದವು ನಾವು ಕೂಡ ಆರುವರೆ ವರ್ಷಗಳ ಕಾಲ ಅದೇ ಸುಧೀರ್ಘಾವಧಿ ಆಯ್ತು ಆದರೂ ತಾಳ್ಮೆಯಿಂದ ಕಾದೆವು. ಅಭಿಮಾನಿಗಳಿಗೆ ಸಹ ಒಂದು ಕಡೆ ಬೇಸರ ಇದೆ, ಬೆಂಗಳೂರಿನಲ್ಲೇ ಆಗಬೇಕಿತ್ತು ಎಂದು. ಇನ್ನು ಎಷ್ಟು ದಿನ ಕಾಯುವುದು ಅಭಿಮಾನಿಗಳನ್ನು ಕೂಡ ಕರೆಸಿ ಒಂದು ಸಮಯ ಕೊಟ್ಟೆವು.

ಇಲ್ಲಿಯವರೆಗೂ ನೀವು ಪ್ರಯತ್ನ ಮಾಡಿ ನಮಗಿಂತ ನೀವು ಒಂದು ಹೆಜ್ಜೆ ಮುಂದಿದ್ದೀರ ಎಂದು ಗೊತ್ತಾದರೂ ನಾವು ಮತ್ತೆ ಹೋರಾಟಕ್ಕೆ ಇಳಿಯುತ್ತೇವೆ, ಇಲ್ಲವಾದರೆ ದಯವಿಟ್ಟು ನಮಗೆ ಮೈಸೂರಿನಲ್ಲಿ ಸ್ಮಾರಕ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡೆವು. ಎಲ್ಲರಿಗೂ ತಿಳಿಯಿತು ಯಾರೇ ಬಂದರೂ ಸಹ ಮುಖ್ಯಮಂತ್ರಿಗಳೇ ನಮ್ಮ ಜೊತೆ ಇದ್ದರೂ ಅದು ಸರಕಾರದ ಯೋಜನೆ ಆಗಿದ್ದರೂ ಅಲ್ಲಿ ಸ್ಮಾರಕ ಮಾಡಲು ಆಗೋದೇ ಇಲ್ಲ ಎಂದು.

ಹಾಗಾಗಿ ಈಗ ನಾವು ಮೈಸೂರಿನಲ್ಲಿ ಮಾಡಿದ್ದೇವೆ ಇದು ಸಂಪೂರ್ಣವಾಗಿ ಸರ್ಕಾರದ ಯೋಜನೆಯಾಗಿದೆ. ನಾಗರೀಕರ ಹಣದಿಂದ ನಿರ್ಮಾಣವಾಗಿ, ಕನ್ನಡಿಗರಿಗೆ ಹಾಗೂ ವಿಷ್ಣುವರ್ಧನ್ ಅವರಿಗೆ ಇದನ್ನು ಅರ್ಪಿಸಲಾಗಿದೆ. ಏನೇ ಆದಾಯ ಬಂದರು ಅದು ಪ್ರತಿಷ್ಠಾಪನ ಟ್ರಸ್ಟಿಗೆ ಹೋಗುತ್ತದೆ. ಅದನ್ನು ಇಲ್ಲಿಯ ನಿರ್ವಹಣೆಗಾಗಿ ಬಳಸಿಕೊಳ್ಳುತ್ತಾರೆ. ಬೆಂಗಳೂರು ಹಾಗೂ ಮೈಸೂರು ಎರಡು ಕಣ್ಣುಗಳು ಇದ್ದ ಹಾಗೆ ಬೆಂಗಳೂರಿನಲ್ಲಿ ಬಾಲಣ್ಣ ಅವರ ಕುಟುಂಬದವರನ್ನು ಸಹ ಸಂಪರ್ಕಿಸಿ ನಾವು ಕೇಳಿಕೊಂಡಿದ್ದೇವೆ.

ಅದು ನಿಮ್ಮದೇ ಸ್ವಂತ ಆಸ್ತಿಯಾಗಿದ್ದರೂ ಇನ್ನೊಬ್ಬ ಕಲಾವಿದ ಕುಟುಂಬಕ್ಕಾಗಿ ಕೊಟ್ಟು ನಿಮ್ಮ ಹೃದಯ ಶ್ರೀಮಂತಿಕೆ ತೋರಿಸಿ ಎಂದು ಅಕಸ್ಮಾತ್ ಅವರು ದೊಡ್ಡ ಮನಸ್ಸು ಮಾಡಿದರೆ ಅಲ್ಲಿಯೂ ಕೂಡ ಆಗುತ್ತದೆ ಎಂದು ಹೇಳಿದ್ದಾರೆ. ಮತ್ತು ಕೋರ್ಟಿನಿಂದ ಆದೇಶ ಆಗಿದೆಯಂತೆ ಕುಟುಂಬಸ್ಥರ ಒಪ್ಪಿಗೆ ಇದ್ದರೆ ಅದನ್ನು ಹೊಡೆದ ಹಾಕಬಹುದು ಎಂದು ಖಂಡಿತವಾಗಿಯೂ ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ ಎನ್ನುವುದನ್ನು ಸಹ ಅನಿರುದ್ಧ ಅವರು ಸ್ಪಷ್ಟ ಪಡಿಸಿದ್ದಾರೆ.

ಬಿಗ್ ಬಾಸ್ ನಿಂದ ಗೆದ್ದ 60 ಲಕ್ಷ ಹಣವನ್ನೆಲ್ಲಾ ದಾನ ಮಾಡುತ್ತಿರುವ ನಟ ರೂಪೇಶ್ ಶೆಟ್ಟಿ. ಇದ್ದಕ್ಕಿದ್ದ ಹಾಗೇ ರೂಪೇಶ್ ಇಂಥ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತ.?

0

 

ಬದುಕಿನಲ್ಲಿ ಹಣ ಎಲ್ಲರಿಗೂ ಬಹಳ ಅವಶ್ಯಕತೆಯ ವಸ್ತು. ಅದು ಈಗಿನ ಕಾಲದಲ್ಲಿ ಹಣ ಇಲ್ಲದಿದ್ದರೆ ಏನು ಕೂಡ ಮಾಡಲಾಗುವುದಿಲ್ಲ. ದಿನ ಸಾಗುವುದಕ್ಕು, ಸಾಧನೆ ಮಾಡುವುದಕ್ಕೂ ಹಣವೇ ಸಾಧನ. ಈ ಹಣದ ಸಂಪಾದನೆಯ ಹಿಂದೆಯೇ ಎಲ್ಲರೂ ಓಡಾಡುತ್ತಿರುತ್ತಾರೆ. ಯಾವುದೇ ರಂಗ ತೆಗೆದುಕೊಂಡರು ಅದರ ಅಂತ್ಯ ಹಣ ಸಂಪಾದನೆಯ ಆಗಿರುತ್ತದೆ. ಹಣದ ಈ ಕಾರಣದಿಂದಲೇ ಇಂದು ದೇಶದಾದ್ಯಂತ ಇಷ್ಟು ಚಟುವಟಿಕೆಗಳು ನಡೆಯುತ್ತಿರುವುದು.

ಇಲ್ಲಿ ಪ್ರತಿಯೊಂದು ಶ್ರಮಕ್ಕೂ ಕೂಡ ತನ್ನದೇ ಆದ ಬೆಲೆ ಇದೆ, ಹೆಚ್ಚಿನ ಶ್ರಮಕ್ಕೆ ಹಣದ ಮೂಲಕವೇ ಬೆಲೆ ಕಟ್ಟಲಾಗುತ್ತಿದೆ. ಇದಕ್ಕೆ ಕಿರುತೆರೆಗಳು ಹೊರತೆನಲ್ಲ. ಕಿರುತೆರೆಯಲ್ಲಿ ನಾನಾ ರಿಯಾಲಿಟಿ ಶೋಗಳು ಬರುತ್ತವೆ ಅದರಲ್ಲಿ ಕಂಟೆಸ್ಟೆಂಟ್ಗಳಾಗಿ ಹೋಗುವವರಿಗೆ ಒಂದು ಲೆಕ್ಕ, ಗೆದ್ದ ಮೇಲೆ ಗೆದ್ದ ಸರ್ಧಿಗೆ ಬರುವ ಹಣದ ಮೊತ್ತವೆ ಒಂದು ಲೆಕ್ಕವಾಗಿ ಗೆದ್ದವರ ಕೈ ಸೇರುತ್ತದೆ. ಇಂತಹ ಎಲ್ಲಾ ಶೋ ಗಳ ಬಾಸ್ ಬಿಗ್ ಬಾಸ್. (BigBoss)

ಈ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೆದ್ದವರಿಗೆ ಬರೋಬ್ಬರಿ 60 ಲಕ್ಷಗಳ ಮೊತ್ತದ ಹಣ ಬಹುಮಾನವಾಗಿ ಸಿಗುತ್ತದೆ. ಕೆಲವೊಮ್ಮೆ ಇದು ಸೀಸನ್ ಗಳಿಗೆ ಅನುಗುಣವಾಗಿ ಹೆಚ್ಚಾಗಬಹುದು ಮತ್ತು ಅವರವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ವಾರಕ್ಕೆ ಸಂಭಾವನೆಯನ್ನು ಸಹ ಪಡೆಯುತ್ತಿರುತ್ತಾರೆ. ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ 100 ದಿನಗಳ ಆಟ ಆಗಿರುತ್ತದೆ.

100 ದಿನಗಳವರೆಗೂ ಮನೆಯಲ್ಲಿದ್ದು ಮನೆಯ ಎಲ್ಲಾ ಏರಿಳಿತಗಳನ್ನೂ ಸಹಿಸಿಕೊಂಡು ಮೇಲಿದ್ದವರು ಈ ಐವತ್ತು ಕೋಟಿಗಳನ್ನು ಪಡೆಯುತ್ತಾರೆ. ಇಲ್ಲಿ ಬರುವ ಹೆಚ್ಚಿನ ಜನ ತಮ್ಮ ವ್ಯಕ್ತಿತ್ವವನ್ನು ತೋರಿಸುವುದಕ್ಕೆ, ಅಥವಾ ತಮ್ಮನ್ನು ತಾವು ಹುಡುಕುವುದಕ್ಕೆ ಬರುತ್ತೇವೆ ಎಂದು ಹೇಳಿಕೊಳ್ಳುವುದರ ಜೊತೆಗೆ ಹಣವೂ ಒಂದು ಕಾರಣ ಆಗಿರುತ್ತದೆ. ನಮ್ಮ ಕನ್ನಡದ ಈ ಬಿಗ್ ಬಾಸ್ ಕಾರ್ಯಕ್ರಮ ಕೂಡ ಒಂಬತ್ತು ಆವೃತ್ತಿಗಳನ್ನು ಸಕ್ಸಸ್ ಫುಲ್ ಆಗಿ ಮುಗಿಸಿದೆ.

9ನೇ ಆವೃತ್ತಿಯಲ್ಲಿ ರೂಪೇಶ್ ಶೆಟ್ಟಿ (Roopesh Shetty) ಅವರು ವಿನ್ನರ್ ಆಗಿ 60 ಲಕ್ಷಗಳನ್ನು ಗಳಿಸಿದ್ದಾರೆ. ಈಗ ಅವರು ಗೆದ್ದ ಹಣವನ್ನು ಒಂದು ಒಳ್ಳೆ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ. ಈ ಸೀಸನ್ ನಲ್ಲಿ ಮನೆಯಲ್ಲಿ ಇದ್ದ ಒಂದು ಸಮಯದಲ್ಲಿ ಗೆದ್ದ ಹಣದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ಯಾರು ಯಾರು ಹಣ ಬಂದರೆ ಏನು ಮಾಡುತ್ತಿರಾ ಎಂದು ಕೇಳಿದ ಪ್ರಶ್ನೆಗೆ ನೇರವಾಗಿ ರೂಪೇಶ್ ಶೆಟ್ಟಿ ಅವರು ನನಗೆ ಹಣದ ಅವಶ್ಯಕತೆ ಬಹಳ ಇದೆ.

ನಾನು ಇದಕ್ಕಾಗಿ ಕಷ್ಟಪಟ್ಟಿದ್ದೇನೆ, ನಾನು ಇನ್ನು ಬೆಳೆಯಬೇಕು ಹಾಗಾಗಿ ಸಂಪೂರ್ಣವಾಗಿ ಇದನ್ನು ನನ್ನ ಮುಂದಿನ ಏಳಿಗೆಗೆ ಬಳಸಿಕೊಳ್ಳುತ್ತೇನೆ ಎಂದು ಧೈರ್ಯವಾಗಿ ಹಾಗೂ ನೇರವಾಗಿ ಹೇಳಿದ್ದರು. ಆದರೆ ಮನೆಯಿಂದ ಆಚೆ ಬಂದ ಬಳಿಕ ಅವರ ನಡವಳಿಕೆ ಬದಲಾಗಿದೆ ಈ ಬಾರಿ ಅವರು ತಮ್ಮಂತೆ ಕಷ್ಟದಲ್ಲಿರುವ ಇತರರಿಗೆ ಕೈಜೋಡಿಸುವ ನಿರ್ಧಾರ ಮಾಡಿ ಗೆದ್ದ ಹಣದ ಅರ್ಧದಷ್ಟು ಧಾರಾಳವಾಗಿ ದಾನ ಮಾಡಿದ್ದಾರೆ.

ರೂಪೇಶ್ ಶೆಟ್ಟಿಯವರು 5000 ಗಳಂತೆ 450 ಕುಟುಂಬಗಳಿಗೆ ಹಣ ಹಂಚಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇದಕ್ಕೆ ಸಾಕ್ಷಿಯಾಗಿ ವೇದಿಕೆ ಮೇಲೆ ಅವರು ನಿಂತು ಪ್ರತಿಯೊಬ್ಬರನ್ನು ಕಳೆದು ಎನ್ವಿಲಪ್ ಒಳಗೆ ಹಣ ಹಾಕಿ ಕೊಟ್ಟಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಸದ್ಯಕ್ಕೆ ಈ ವಿಡಿಯೋ ಒಂದೇ ಸಾಕ್ಷಿಯಾಗಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಸ್ಪಷ್ಟನೆ ಸಿಗುತ್ತದೆಯಾ ಕಾದು ನೋಡಬೇಕಾಗಿದೆ. ಏನೇ ಆದರೂ ತಾವು ಕಷ್ಟದಲ್ಲಿದ್ದರೂ ತಮ್ಮಂತೆ ಇತರರಿಗೂ ಮಿಡಿದಿರುವ ರೂಪೇಶ್ ಶೆಟ್ಟಿ ಅವರ ಹೃದಯವಂತಿಕೆಯನ್ನು ಮೆಚ್ಚಲೇಬೇಕು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.