Home Blog Page 247

ನಾನು ಮುಸ್ಲಿಂ ಅನ್ನೋ ಕಾರಣಕ್ಕೆ ಹಿಂದುಗಳು ಮನೆ ಬಾಡಿಗೆಗೆ ಕೊಡಲ್ಲ, ಅರ್ಧಂಭರ್ದ ಬಟ್ಟೆ ಹಾಕ್ತಿನಿ ಅಂತ ಮುಸ್ಲಿಂರು ಮನೆ ಕೊಡಲ್ಲ, ನಾನೆಲ್ಲಿಗೆ ಹೋಗ್ಲಿ ಎಂದು ಕಣ್ಣಿರು ಹಾಕ್ತಿರೋ ನಟಿ ಊರ್ಫಿ ಜಾವೇದ್

0

ಮುಂಬೈ ಅಲ್ಲಿ ಮನೆ ಸಿಗದೆ ಅಲೆದಾಡುತ್ತಿದ್ದಾರಂತೆ ಉರ್ಫಿ ಜಾವೇದ್ ಬಟ್ಟೆಯೆಂದರೇ ಅಲರ್ಜಿ ಎನ್ನುವಂತೆ ತಿರುಗಾಡುವ ಸೆಲೆಬ್ರಿಟಿ ಉರ್ಫಿ ಜಾವೇದ್ (Urfi Javed) ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ತಾನು ಉಡುವ ಅರೆಬೆತ್ತಲೆ ಬಟ್ಟಗಳಿಂದಲೇ ಅಥವಾ ವಿಚಿತ್ರ ವಿಚಿತ್ರ ವೇಷಗಳ ಬಟ್ಟೆಯಿಂದ ಮೈಮಾಟ ತೋರಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್ ಕ್ರಿಯೆಟ್ ಮಾಡುವ ಈ ಬೆಡಗಿಗೆ ಈಕೆಯ ಹಾಟ್ ನೆಸ್ ಕಾಲಣಕ್ಕಾಗಿಯೇ ದಾಖಲೆಗಟ್ಟಲೇ ಫಾಲೋವರ್ಸ್ ಹಾಗೂ ಅಭಿಮಾನಿಗಳು ಇದ್ದಾರೆ.

ತಾನು ತೊಡುವ ಬಟ್ಟೆ ವಿಷಯದಿಂದಲೇ ಕುಖ್ಯಾತಿ ಹೊಂದಿ ಎಲ್ಲರಿಗೂ ಚಿರಪಚಿತವಾಗಿರುವ ಉರ್ಫಿ ಜಾವೇದ್ ಈಗ ಅದೇ ಕಾರಣದಿಂದ ಪಜೀತಿಗೆ ಸಿಲುಕ್ಕಿದ್ದಾಳೆ. ಈ ಹಿಂದೆಲ್ಲಾ ತೊಡುತ್ತಿದ್ದ ಅರೆ ಬೆತ್ತಲೆ ಬಟ್ಟೆಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡು ಅವರಿವರಿಂದ ಉಗಿಸಿಕೊಳ್ಳುತ್ತಿದ್ದ ಉರ್ಫಿ ಅದಕ್ಕಿಂತಲೂ ಹೆಚ್ಚಿನ ತೊಂದರೆಗೆ ಬಟ್ಟೆ ಕಾರಣದಿಂದ ಈಡಾಗಿದ್ದಾರೆ. ಉರ್ಫಿ ಗೆ ಅವರು ಹಾಕುತ್ತಿರುವ ಬಟ್ಟೆಯ ಕಾರಣದಿಂದಲೇ ಮುಂಬೈಯಲ್ಲಿ ಮನೆ ಸಿಗುತ್ತಿಲ್ಲವಂತೆ. ಈ ಬಗ್ಗೆ ತಾನೇ ತನ್ನ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಶೇರ್ ಮಾಡುವ ಮೂಲಕ ಫಾಲೋವರ್ಸ್ ಜೊತೆ ಅಳಲನ್ನು ತೋಡಿಕೊಂಡಿದ್ದಾರೆ.

ಅದೇನೆಂದರೆ ಎಲ್ಲರಿಗೂ ಗೊತ್ತಿರುವಂತೆ ಉರ್ಫಿ ಕಡಿಮೆ ಬಟ್ಟೆ ಹಾಕುತ್ತಾರೆ. ಒಂದರ್ಥದಲ್ಲಿ ಬಟ್ಟೆ ಹಾಕಿಲ್ಲದಂತೆ ಇರುತ್ತಾರೆ ಎಂದೇ ಹೇಳಬಹುದು. ಯಾಕೆಂದರೆ ಸ್ಲೀವ್ಲೆಸ್ ಮತ್ತು ನೆಕ್ ಲೆಸ್ ಹಾಗೂ ಷೋಲ್ಡರ್ ಲೆಸ್ ಬಟ್ಟೆ ಹಾಕಿರುವವರನ್ನು ನೋಡಿರುತ್ತೇವೆ ಆದರೆ ಉರ್ಫಿ ಟಾಪ್ ಲೆಸ್ ಆಗಿಯೇ ಕಾಣಿಸಿಕೊಂಡು ಫೇಮಸ್ ಆದವರು. ಈವರೆಗೆ ಆಕೆ ತನ್ನ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿರುವ ಫೋಟೋಗಳನ್ನು ತೆಗೆದು ನೋಡಿದರೆ ಅವರ ವೇಷ ಎಂತದ್ದು ಎಂದು ಎಲ್ಲರಿಗೂ ತಿಳಿಯುತ್ತದೆ.

ಪಡ್ಡೆ ಹೈಕಳಿಂದ ಹಿಡಿದು ಎಲ್ಲರಿಗೂ ಕೂಡ ಉರ್ಫಿ ಚೆನ್ನಾಗಿಯೇ ಗೊತ್ತು. ತಾನು ಮಾಡಿದ ಸಿನಿಮಾಗಳಂದ ಹಾಗೂ ಕಾರ್ಯಕ್ರಮಗಳಿಂದ ಫೇಮಸ್ ಆಗುವ ಬದಲು ಸೋಶಿಯಲ್ ಮೀಡಿಯಾದಿಂದ ಬಟ್ಟೆ ಕಾರಣಕ್ಕಾಗಿ ಫೇಮಸ್ ಆದ ಈಕೆಗೆ ಬಟ್ಟೆಯಿಂದಲೇ ಸಂಕಷ್ಟ ಎದುರಾಗುತ್ತದೆ ಎಂದು ಯಾರೂ ಸಹ ಅಂದುಕೊಂಡಿರಲಿಲ್ಲ ಈಕೆಯ ಹಾಟ್ ಫೋಟೋಗಳನ್ನು ಎಲ್ಲರೂ ಸಹ ಬಾಯಿ ಬಿಟ್ಟುಕೊಂಡು ನೋಡುತ್ತಿರುತ್ತಾರೆ.

ಆದರೆ ಅದೆಲ್ಲ ಫೋಟೋಶೂಟ್ ಗೆ ಸರಿ ಸಾರ್ವಜನಿಕವಾಗಿ ಈ ರೀತಿ ಕಾಣಿಸಿಕೊಂಡರೆ ಎಲ್ಲರಿಗೂ ಮುಜಗರ ಎನಿಸುತ್ತದೆ. ಇದೇ ಕಾರಣಕ್ಕಾಗಿ ಮುಂಬೈಯಲ್ಲಿ ಈಕೆಗೆ ಯಾರು ಸಹಾ ಮನೆ ಬಾಡಿಗೆಗೆ ಕೊಡುತ್ತಿಲ್ಲವಂತೆ. ಮುಂಬೈ ಅಲ್ಲಿ ಬಾಡಿಗೆ ಫ್ಲಾಟ್ ಅಥವಾ ಮನೆಗಾಗಿ ಅಲೆದಾಡುತ್ತಿದ್ದ ಉರ್ಫಿ ಜಾವೇದ್ ಗೆ ಮುಸ್ಲಿಮರು ನೀನು ಮುಸ್ಲಿಂ ಹೆಣ್ಣು ಮಗಳಾಗಿ ಈ ರೀತಿ ಬಟ್ಟೆ ಹಾಕುತ್ತಿದ್ದೀಯ ನಿನಗೆ ಮನೆ ಬಾಡಿಗೆ ಕೊಡುವುದಿಲ್ಲ ಎಂದರೆ, ಹಿಂದೂಗಳು ನೀನು ಮುಸ್ಲಿಂ ಆ ಕಾರಣಕ್ಕಾಗಿ ನಿನಗೆ ಮನೆ ಕೊಡಲ್ಲ ಎಂದು ಹೇಳುತ್ತಿದ್ದಾರಂತೆ.

ಈ ವಿಷಯವನ್ನು ತಾನೇ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮನೆಗಾಗಿ ಮುಂಬೈನಲ್ಲಿ ಬೀದಿ ಬೀದಿ ಅಲೆಯುತ್ತಿರುವ ಕಷ್ಟವನ್ನು ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಉರ್ಫಿಗೆ ಬಹುಕೋಟಿ ಮೊತ್ತದ ಆಸ್ತಿ ಇದೆ ಎಂದು ಹೇಳಲಾಗುತ್ತಿತ್ತು. ಇಷ್ಟು ಹಣ ಇರುವವರು ತಾವೇ ಸ್ವಂತ ಮನೆ ಖರೀದಿಸಬಹುದಲ್ಲ ಎಂದು ಅಭಿಮಾನಿ ಒಬ್ಬರು ಪ್ರಶ್ನೆ ಕೇಳಿದ್ದಾರೆ.

ಮತ್ತೊಬ್ಬಾತ ಸುಮ್ಮನೆ ಇದೆಲ್ಲವನ್ನು ಬಿಟ್ಟು ಮದುವೆ ಆಗಿ ಗಂಡನ ಮನೆಯಲ್ಲಿ ಜೋಪಾನವಾಗಿರಿ ಎಂದು ಸಲಹೆ ಕೊಟ್ಟಿದ್ದಾರೆ. ಸದ್ಯಕ್ಕೆ ಈಕೆ ಮಾಡಿರುವ ಈ ಪೋಸ್ಟಿಗೆ ಈಗಾಗಲೇ ಸಾಕಷ್ಟು ಕಮೆಂಟ್ಸ್ ಗಳು ಬಂದಿದ್ದು ಹೆಚ್ಚಿನ ಜನರು ಇನ್ನು ಮುಂದೆ ಸರಿಯಾಗಿ ಬಟ್ಟೆ ಹಾಕಿ ಎಂದೇ ಸಜೆಶನ್ ಕೊಟ್ಟಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

500ಕ್ಕೂ ಹೆಚ್ಚು ಕನ್ನಡ ಸಿನಿಮಾದಲ್ಲಿ ನಟಿಸಿದ ಮನ್ ದೀಪ್ ರಾಯ್ ವಿ.ಧಿ.ವ.ಶ ಕಂಬನಿ ಮಿಡಿದ ಚಿತ್ರರಂಗ.

0

 

ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಕಳೆದ ಎರಡು ವರ್ಷಗಳಿಂದ ಸಾಕಷ್ಟು ದಿಗ್ಗಜ ನಟ ನಟಿಯರನ್ನು ಹಾಗೂ ಹಿರಿಯ ಕಲಾವಿದರನ್ನು ಕಳೆದುಕೊಂಡಿದ್ದೇವೆ. ಇದೀಗ 2023ರಲ್ಲಿ ಮತ್ತೋರ್ವ ದಿಗ್ಗಜ ನಟನನ್ನು ಕಳೆದುಕೊಂಡು ಚಿತ್ರರಂಗ ಕಂಗಾಲಾಗಿದೆ ಅಂತಾನೆ ಹೇಳಬಹುದು. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮನ್ ದೀಪ್ ರಾಯ್ ಅವರು ಕನ್ನಡದಲ್ಲಿ ಸುಮಾರು 500ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಸ್ಯ ಕಲಾವಿದರಾಗಿ ಪೋಷಕ ಕಲಾವಿದರಾಗಿ ಕನ್ನಡ ಸಿನಿ ರಸಿಕರಿಗೆ ಮನರಂಜನೆಯನ್ನು ನೀಡಿದ್ದಾರೆ.

ಕೇವಲ ಬೆಳ್ಳಿತರೆ ಮಾತ್ರವಲ್ಲದೆ ಕಿರುತೆರೆಯಲ್ಲೂ ಕೂಡ ತಮ್ಮದೇ ಚಾಪನ್ನು ಮೂಡಿಸಿದ್ದರು ಹಲವಾರು ಧಾರವಾಹಿಗಳಲ್ಲೂ ಕೂಡ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಕಳೆದ ಒಂದು ವರ್ಷದಿಂದ ವಯೋ ಸಹಜ ಅನಾರೋಗ್ಯ ಕಾಯಿಲೆಯಿಂದ ಬಳಲುತ್ತಿದ್ದಂತಹ ಮನ್ ದೀಪ್ ರಾಯ್ ಅವರು ಇಂದು ತಡೆರಾತ್ರಿ 1 ಗಂಟೆ 45 ನಿಮಿಷದಲ್ಲಿ ತಮ್ಮ ಸ್ವಂತ ನಿವಾಸದಲ್ಲಿ ಹೃ.ದ.ಯ.ಘಾ.ತ.ದಿಂದ ವಿ.ಧಿ.ವ.ಶ.ರಾಗಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಈ ವಿಚಾರ ಕೇಳುತ್ತಿದ್ದ ಹಾಗೆ ಚಿತ್ರರಂಗದವರು ಹಾಗೂ ಕಿರುತೆರೆಗೆ ಸೇರಿದಂತಹ ಎಲ್ಲಾ ನಟ ನಟಿಯರು ಕೂಡ ಸಂತಾಪವನ್ನು ಸೂಚಿಸಿದ್ದಾರೆ.

ತಮ್ಮ 73ನೇ ವಯಸ್ಸಿನಲ್ಲಿ ವಿ.ಧಿ.ವ.ಶ.ರಾಗಿರುವಂತಹ ಮನ್ ದೀಪ್ ರಾಯ್ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದರು. ಮೂಲತಃ ಮುಂಬೈನವರು ಆದರೂ ಕೂಡ ಇವರು ಬಣ್ಣ ಹಚ್ಚಿದ್ದು ಕನ್ನಡದಲ್ಲಿ 1980ರಲ್ಲಿ ಶಂಕರ್ ನಾಗ್ ಹಾಗೂ ಅನಂತನಾಗ್ ಅಭಿನಯದ ಮಿಂಚಿನ ಓಟ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ಅಭಿನಯ ಮಾಡುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ಅಲ್ಲಿಂದ ಪ್ರಾರಂಭವಾದಂತ ಇವರ ಸಿನಿ ಜರ್ನಿ ಕಳೆದ ವರ್ಷದವರೆಗೂ ಕೂಡ ಸಕ್ರಿಯವಾಗಿತ್ತು.

ಆದರೆ ಕಳೆದ ಡಿಸೆಂಬರ್ ನಲ್ಲಿ ಮನ್ ದೀಪ್ ಅವರಿಗೆ ಹೃ.ದ.ಯ.ಘಾ.ತವಾಗುತ್ತದೆ ಕೂಡಲೇ ಇವರನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಚಿಕಿತ್ಸೆಗೆ ಸ್ಪಂದಿಸಿದಂತಹ ಇವರು ಆರೋಗ್ಯವನ್ನು ಚೇತರಿಸಿಕೊಂಡಿದ್ದರು ಎಲ್ಲವೂ ಸರಿ ಹೋಯಿತು ಎಂದು ತಮ್ಮ ಕುಟುಂಬದವರು ಮನೆಗೆ ವಾಪಸ್ ಮರಳಿ ಕರೆದುಕೊಂಡು ಬಂದ ನಂತರ 20 ದಿನಗಳ ಕಾಲ ಲವಲವಿಕೆಯಿಂದ ಇದ್ದರೂ. ಆದರೆ ದುರಾದೃಷ್ಟವೋ ಏನೋ ತಿಳಿದಿಲ್ಲ ಕಳೆದ ರಾತ್ರಿ ಇವರು ಹೃ.ದ.ಯ.ಘಾ.ತದಿಂದ ಇಹಲೋಕವನ್ನು ತ್ಯಜಿಸಿದ್ದಾರೆ.

ಇನ್ನು 80ರ ಕಾಲಘಟ್ಟದಿಂದ ಹಿಡಿದು 22ರ ಕಾಲಘಟ್ಟದವರೆಗೂ ಕೂಡ ಎಲ್ಲಾ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ ಇವರು ಅಣ್ಣಾವ್ರು ಸೇರಿದಂತೆ ವಿಷ್ಣುವರ್ಧನ್, ಅಂಬರೀಶ, ರವಿಚಂದ್ರನ್, ರಮೇಶ್ ಅರವಿಂದ್, ದರ್ಶನ್, ಸುದೀಪ್, ಯಶ್, ಪುನೀತ್ ಹೀಗೆ ಸಾಕಷ್ಟು ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಮನ್ ದೀಪ್ ಸಿಂಗ್ ಅವರು ಚಿತ್ರದಲ್ಲಿ ಇದ್ದಾರೆ ಎಂದರೆ ಅಲ್ಲಿ ಎಂಟರ್ಟೈನ್ಮೆಂಟ್ ಇರುವುದಂತೂ ಪಕ್ಕ ಜನರನ್ನು ನಕ್ಕು ನಲಿಸುವಂತಹ ಹಾಸ್ಯ ಮನೋ ಪ್ರಜ್ಞೆಯನ್ನು ಒಳಗೊಂಡಿದ್ದರು.

ಈಗ ಮನ್ ದೀಪ್ ಅವರು ಇಲ್ಲದೇ ಇರುವುದು ನಿಜಕ್ಕೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಅಂತಾನೆ ಹೇಳಬಹುದು ಏಕೆಂದರೆ ಕಳೆದೆರಡು ವರ್ಷಗಳಿಂದ ಹಲವಾರು ನಟ ನಟಿಯರನ್ನು ಚಿತ್ರರಂಗ ಕಳೆದುಕೊಂಡಿದೆ. ಅದರಲ್ಲಿಯೂ ಕೂಡ ಹಾಸ್ಯ ಪ್ರಧಾನ ಪಾತ್ರದಲ್ಲಿ ಮಿಂಚಿದ್ದಂತಹ ಮೋಹನ್ ಜೂನೇಜ ಆಗಿರಬಹುದು ಬುಲೆಟ್ ಪ್ರಕಾಶ್ ಆಗಿರಬಹುದು ಕರಿಬಸಯ್ಯ ಆಗಿರಬಹುದು ಹೀಗೆ ಒಬ್ಬೊಬ್ಬರಾಗಿ ಹಿರಿಯ ಕಲಾವಿದರು ವಿ.ಧಿ.ವ.ಶ.ರಾಗುತ್ತಿರುವುದು ನಿಜಕ್ಕೂ ಕೂಡ ಸಂತಪದ ವಿಚಾರವೇ. ಅದೇನೆ ಆಗಲಿ ಈ ಹಿರಿಯ ಕಲಾವಿದರಿಗೆ ಗೌರವ ಪೂರ್ವಕವಾಗಿ ಶ್ರದ್ದಾಂಜಲಿಯನ್ನು ಸಲ್ಲಿಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ ಹಾಗೂ ಮನ್ ದೀಪ್ ರಾಯ್ ಅವರಿಗೆ ಕೊನೆಯದಾಗಿ ಅಂತಿಮ ನಮನ ಸಲ್ಲಿಸಿ ಓಂ ಶಾಂತಿ ಎಂದು ಕಾಮೆಂಟ್ ಮಾಡಿ.

ಜಗ್ಗೇಶ್ ಮಾತು ಕೇಳಿ ಮನೆ ಕಳ್ಕೊಂಡೆ, ಸಂಕಷ್ಟದಲ್ಲಿ ಸಿಲುಕಿರುವ ನಟ ಬಾಲರಾಜ್, ಅಣ್ಣಾವ್ರ ತಂಗಿಮಗ ಕಷ್ಟದಲ್ಲಿದ್ರು ರಾಜವಂಶ ಯಾಕೆ ಸಹಾಯ ಮಾಡ್ತಿಲ್ಲ ಗೊತ್ತ.?

0

 

ಹ್ಯಾಟ್ರಿಕ್ ಹೀರೋ ಶಿವಣ್ಣ (Shivanna) ಅವರ ಸಂಯುಕ್ತ (Samyuktha) ಸಿನಿಮಾದ ಮೂರು ನಾಯಕರಲ್ಲಿ ಒಬ್ಬರಾಗಿ ಮತ್ತು ರವಿಚಂದ್ರನ್ (Ravichandran) ಅವರ ಸಿಪಾಯಿ (Sipayi) ಅಂತಹ ಸೂಪರ್ ಹಿಟ್ ಸಿನಿಮಾದಲ್ಲಿ ಅವರಿಗೆ ಎದುರಾಳಿ ಪಾತ್ರದಲ್ಲಿ ಮಿಂಚಿದ್ದ ಬಾಲರಾಜ್ (Balaraj) ಅವರು ಒಂದು ಕಾಲದಲ್ಲಿ ಕನ್ನಡದಲ್ಲಿ ಒಳ್ಳೆ ಹೆಸರು ಪಡೆದಿದ್ದ ನಟ. ಕಾಲಕ್ರಮೇಣ ಅವರಿಗೆ ಅವಕಾಶಗಳು ಕಡಿಮೆ ಆಯ್ತು ಮತ್ತು ಚಿತ್ರರಂಗದಿಂದ ಸ್ವಲ್ಪ ದೂರ ಉಳಿದ ಇವರು ಬೇರೆ ಕೆಲಸಗಳಲ್ಲಿ ನಿರತರಾದರು.

ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ದೂರದ ಸಂಬಂಧಿ ಕೂಡ ಆದ ಇವರು ಮಾಡಿದ ಒಂದೇ ಒಂದು ತಪ್ಪಿನಿಂದಾಗಿ ಇಂದು ಇರಲು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಗಳಿಗೆ ಅಳೆಯುವ ಪರಿಸ್ಥಿತಿಗೆ ತಲುಪಿದ್ದಾರೆ. ಅದೇನೆಂದರೆ ಬಸವೇಶ್ವರನಗರದಲ್ಲಿ ಇವರು ಒಂದು ಸ್ವಂತ ಮನೆ ಕಟ್ಟಿಸಿದ್ದರು ಆದರೆ ಅವರು ಮನೆ ಕಟ್ಟಿಸುವ ವೇಳೆ ವಾಸ್ತು (vasthu) ಬಗ್ಗೆ ತಿಳಿದಿರಲಿಲ್ಲವಂತೆ ಹಾಗಾಗಿ ಇಂಜಿನಿಯರ್ ಹೇಳಿದ ರೀತಿಯಲ್ಲಿ ಅವರ ಮನೆ ನಿರ್ಮಾಣವಾಗಿತ್ತು.

ಆ ಮನೆಯಿಂದಲೇ ಅವರಿಗೆ ಇಂದು ಸಾಕಷ್ಟು ಸಂಕಷ್ಟಗಳು ಎದುರಾಗಿದೆ. ಮನೆಗೆ ಬಂದವರೆಲ್ಲ ವಾಸ್ತು ಬಗ್ಗೆ ಹೇಳುತ್ತಿದ್ದರಂತೆ. ಹಾಗಾಗಿ ವಾಸ್ತುವಿನ ಗಂಧ ಗಾಳಿ ಕೂಡ ಗೊತ್ತಿಲ್ಲದ ಇವರು ಇದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಬೇರೆಯವರನ್ನು ಕೇಳಿದಾಗ ಜಗ್ಗೇಶ್ (Jaggesh) ಅವರಿಗೆ ಇದರ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ಯಾರೋ ಸಲಹೆ ಕೊಟ್ಟರಂತೆ. ಒಮ್ಮೆ ಯಾವುದೊ ಶೂಟಿಂಗ್ ವೇಳೆ ಜಗ್ಗೇಶ್ ಅವರು ಬಾಲರಾಜ್ ಅವರಿಗೆ ಸಿಕ್ಕಾಗ ತಮ್ಮ ಸಮಸ್ಯೆಯನ್ನು ಹೇಳಿಕೊಂಡರಂತೆ.

ದಯವಿಟ್ಟು ಒಮ್ಮೆ ನಮ್ಮ ಮನೆಗೆ ಬಂದು ನೋಡಿ ಸಮಾಧಾನವಾಗುತ್ತದೆ ಎಂದಾಗ ಒಮ್ಮೆ ಜಗ್ಗೇಶ್ ಅವರು ಸಹ ಬಾಲರಾಜ್ ಮನೆಗೆ ಬಂದರಂತೆ. ಮನೆ ಒಳಗೆ ಬರುವ ಮುನ್ನವೇ ಮನೆ ಇರುವ ಅವಸ್ಥೆ ನೋಡಿ ತಕ್ಷಣವೇ ನೀನು ಮನೆ ಖಾಲಿ ಮಾಡು, ಇಲ್ಲದಿದ್ದರೆ ಇನ್ನೂ ದೊಡ್ಡ ಕಷ್ಟಗಳಿಗೆ ಸಿಕ್ಕಿಹಾಕಿಕೊಳ್ಳುತ್ತೀಯ ಎಂದು ಹೇಳಿದರಂತೆ. ಅಂದು ಜಗ್ಗೇಶ್ ಅವರು ಹೇಳಿದ್ದು ಕೂಡ ಸತ್ಯಕ್ಕೆ ಹತ್ತಿರವಾಗಿದ್ದಂತೆ ಯಾಕೆಂದರೆ ಆ ಮನೆ ಕಟ್ಟಿಸಿದಾಗ ಒಂದಲ್ಲ ಒಂದು ಸಮಸ್ಯೆ ಬರುತ್ತಿತ್ತಂತೆ.

ಜೊತೆಗೆ ಅಕ್ಕಪಕ್ಕದ ಮನೆಗಳು ಕೂಡ ನಿರ್ಮಾಣ ಆದ್ದರಿಂದ ಹಾಗೂ ಮನೆಯಲ್ಲಿ ವಾಸ್ತು ಇಲ್ಲದ ಕಾರಣ ಮನಸ್ಸಿಗೆ ನೆಮ್ಮದಿ ಇಲ್ಲದೆ ಅದೇ ಯೋಚನೆ ಮನೆಮಾರಲು ನಿರ್ಧರಿಸಿದರಂತೆ. ಆದರೆ ಇವರು ಮನೆ ಮಾರಿಬೇಕು ಎಂದು ಅಂದುಕೊಂಡ ಮೂರು ವರ್ಷಗಳ ನಂತರ ಆ ಮನೆ ಸೇಲ್ ಆಯ್ತಂತೆ. ಸಹಕಾರಿ ನಗರ, ಬ್ರಿಗೇಡ್ ರೋಡ್, ಯಶವಂತಪುರ ಹೀಗೆ ನಾನು ಕಡೆ ಬಾಡಿಗೆ ಮನೆಗಳಲ್ಲಿ ಇದ್ದು ನನ್ನ ರೀತಿಯ ಸಂಕಷ್ಟಗಳಿಗೆ ಅವರು ಸಿಕ್ಕಿಹಾಕಿ ಕೊಂಡಿದ್ದರಂತೆ.

ಬಸವೇಶ್ವರ ನಗರದ ಸಮೀಪವೇ ಅವರ ಮಾವನ ಮನೆ ಇದ್ದ ಕಾರಣ ಅಲ್ಲೊಂದು ಬಾಡಿಗೆ ಮನೆಯಲ್ಲಿ ಇದ್ದರಂತೆ. ಅರಮನೆ ಕಾರ್ಯಕ್ಕೆ ಮಾವನ ಮನೆಯವರೆಲ್ಲ ಬಂದಿದ್ದಾಗ ಅಲ್ಲಿ ಕಳ್ಳತನವಾಯಿತಂತೆ. ಅವರ ಮನೆಯಲ್ಲಿ ಬಾಲರಾಜ್ ಪತ್ನಿಯದೇ 10 ಲಕ್ಷಕ್ಕಿಂತ ಹೆಚ್ಚು ಮೊತ್ತದ ಒಡವೆ ಇತ್ತಂತೆ. ಸೈಟ್ ಗಳನ್ನು ಮಾರಿ ಒಂದು ಕಡೆ ಹಣ ಡೆಪಾಸಿಟ್ ಮಾಡಿದ್ದಾರಂತೆ ಅಲ್ಲೂ ಕೂಡ ಮೋಸವಾಗಿ ಆ ಕಾಲದಲ್ಲಿ 15 ಲಕ್ಷ ಹಣ ಕಳೆದುಕೊಂಡರಂತೆ. ಇಷ್ಟೆಲ್ಲ ಕಷ್ಟ ನೋಡಿದ್ದೇನೆ ಖಂಡಿತ ಒಂದಲ್ಲ ಒಂದು ದಿನ ನಮಗೂ ಉಳಿತಾಗುತ್ತದೆ ಎನ್ನುವ ಭರವಸೆಯ ಮಾತುಗಳನ್ನು ಆಡುವ ಬಾಲರಾಜ್ ಅವರ ಒಳ್ಳೆತನವನ್ನು ಮೆಚ್ಚಲೇಬೇಕು.

ಕ್ರಾಂತಿಯಲ್ಲಿ ಅಪ್ಪು ಫೋಟೋ ಹಾಕಿಲ್ಲ ಟ್ರಿಬ್ಯೂಟ್ ಕೊಟ್ಟಿಲ್ಲ ಅಂತ ಗಲಾಟೆ ಮಾಡ್ತಿದ್ದಿರಲ್ಲ ಯುವರತ್ನದಲ್ಲಿ ಚಿರು ಹಾಕಿದ್ರಾ ಟ್ರಿಬ್ಯೂಟ್ ಕೊಟ್ರಾ.? ದಚ್ಚು ಅಭಿಮಾನಿಗಳು ಪ್ರಶ್ನೆ.!

0

 

ದಿನದಿಂದ ದಿನಕ್ಕೆ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುತ್ತಿರುವ ವಿಚಾರ ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಕ್ರಾಂತಿ ಸಿನಿಮಾ ಬಿಡುಗಡೆಯಾಗುತ್ತಿದೆ ಎಂಬ ವಿಚಾರವನ್ನು ಕೇಳುತ್ತಿದ್ದ ಹಾಗೆ ಇದರ ಅತಿರೇಕದ ವರ್ತನೆ ಹೆಚ್ಚಾಗುತ್ತದೆ. ಹೌದು ದರ್ಶನ್ ಅವರು ಸಂದರ್ಶನ ಒಂದರಲ್ಲಿ ಮಾತನಾಡುವಂತಹ ಸಮಯದಲ್ಲಿ ಆಯತಪ್ಪಿ ಅಪ್ಪು ಅವರ ಬಗ್ಗೆ ಹೇಳಿದಂತಹ ಹೇಳಿಕೆಯೊಂದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಅಂತಾನೆ ಹೇಳಬಹುದು.

ದರ್ಶನ್ ಅವರು ಅಪ್ಪು ಅವರ ಬಗ್ಗೆ ಯಾವುದೇ ರೀತಿಯಾದಂತಹ ವೈ ಮನಸನ್ನು ಹೊಂದಿಲ್ಲ ಆದರೆ ಕೆಲ ಅಭಿಮಾನಿಗಳು ದರ್ಶನ್ ಅವರು ತಮ್ಮ ಹೇಳಿದಂತಹ ಹೇಳಿಕೆಯನ್ನು ತಿರುಚಿ ಹಾಕಿದ್ದಾರೆ. ಹಾಗಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಗೊಂದಲವನ್ನು ಉಂಟು ಮಾಡಿದೆ ಈ ಗೊಂದಲ ಕ್ರಾಂತಿ ಸಿನಿಮಾವನ್ನು ಸೋಲಿಸಬೇಕು ಎಂಬುವಷ್ಟರ ಮಟ್ಟಿಗೆ ತಲುಪಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಹೌದು ಹೊಸಪೇಟೆಗೆ ಹೋದಾಗ ದರ್ಶನ್ ಅವರಿಗೆ ಚಪ್ಪಲಿಯಲ್ಲಿ ಹೊಡೆದು ನಿಂದಿಸಿದರು.

ಅದಾದ ನಂತರ ಕ್ರಾಂತಿ ಸಿನಿಮಾ ಬಿಡುಗಡೆಯಾಗುವ ದಿನಾಂಕ ಕರ್ನಾಟಕವನ್ನು ಬಂದ್ ಮಾಡುತ್ತೇವೆ ಎಂದು ಹೇಳಿದರು ಇದಿಷ್ಟು ಸಾಲದಕ್ಕೆ ಫಿಲಂ ಚೇಂಬರ್ ಹೋಗಿ ಹೋರಾಟ ಮಾಡಿ ದರ್ಶನ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂಬ ಹೋರಾಟವನ್ನು ಮಾಡಿದರು. ಒಂದಲ್ಲ ಒಂದು ರೀತಿಯಾಗಿ ದರ್ಶನ್ ಅವರು ಸಾಕಾಷ್ಟು ಸಂಕಷ್ಟಗಳನ್ನು ಎದುರಿಸುತ್ತಲೇ ಬಂದಿದ್ದಾರೆ ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಕ್ರಾಂತಿ ಸಿನಿಮಾ ಬಿಡುಗಡೆಯಾದ ನಂತರ ಹೊಸದೊಂದು ವರಸೆಯನ್ನು ತೆಗೆದಿದ್ದಾರೆ ಅಂತ ಹೇಳಬಹುದು.

ಹೌದು ಅಪ್ಪು ಆಗಲಿ ಒಂದು ವರ್ಷವಾಗಿದೆ, ಕಳೆದ ಒಂದು ವರ್ಷದಿಂದ ಬಿಡುಗಡೆಯಾದಂತಹ ಎಲ್ಲಾ ಸಿನಿಮಾದಲ್ಲಿಯೂ ಕೂಡ ಅಪ್ಪು ಅವರ ಫೋಟೋವನ್ನು ಹಾಕಿ ಅವರಿಗೆ ಟ್ರಿಬ್ಯೂಟ್ ಕೊಡುತ್ತಾರೆ ತದನಂತರ ಸಿನಿಮಾ ಪ್ರಾರಂಭವಾಗುತ್ತದೆ. ಆದರೆ ಕ್ರಾಂತಿ ಸಿನಿಮಾದಲ್ಲಿ ಮಾತ್ರ ಎಲ್ಲಿಯೂ ಅಪ್ಪು ಫೋಟೋ ಇಲ್ಲ ಅಷ್ಟೇ ಅಲ್ಲದೆ ಅವರಿಗೆ ಟ್ರಿಬ್ಯೂಟ್ ಕೊಟ್ಟಿಲ್ಲ. ಇವೆಲ್ಲವನ್ನು ನೋಡಿದಂತಹ ಅಪ್ಪು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ ದರ್ಶನ್ ಹಳೆ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅಪ್ಪು ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ದರ್ಶನ್ ಅಭಿಮಾನಿಗಳು ಕೂಡ ಇದೀಗ ಅಪ್ಪು ಅಭಿಮಾನಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಹೌದು, ಅದೇನೆಂದರೆ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಯಾದಂತಹ ಸಮಯದಲ್ಲಿ ಚಿರು ಹಾಗೂ ಸಂಚಾರಿ ವಿಜಯ್ ಅವರು ವಿ.ಧಿ.ವ.ಶ.ರಾಗಿದ್ದರು. ಹಾಗಾಗಿ ಯುವರತ್ನ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಚಿರು & ಸಂಚಾರಿ ವಿಜಯ್ ಅವರ ಫೋಟೋ ಯಾಕೆ ಹಾಕಿಲ್ಲ.? ಅಷ್ಟೇ ಅಲ್ಲದೆ ಅವರಿಗೆ ಟ್ರಿಬ್ಯೂಟ್ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನೆಯನ್ನು ಮಾಡಿದ್ದಾರೆ.

ಜೊತೆಗೆ ನೀವು ಯಾವ ರೀತಿ ವಿಜಯ ಅವರಿಗೆ ಟ್ರಿಬ್ಯೂಟ್ ಕೊಟ್ಟಿಲ್ಲ ಅದೇ ರೀತಿ ನಾವು ಅಪ್ಪು ಅವರಿಗೂ ಕೂಡ ಟ್ರಿಬ್ಯೂಟ್ ಕೊಟ್ಟಿಲ್ಲ ಅಲ್ಲಿಗೆ ಸರಿ ಹೋಯಿತು ನಿಮಗೊಂದು ನ್ಯಾಯ ನಮಗೊಂದು ನ್ಯಾಯಾನ ಎಂದು ಯೋಚನೆ ಮಾಡಿದ್ದಾರೆ. ದಚ್ಚು ಅಭಿಮಾನಿಗಳು ಕೇಳಿದಂತಹ ಪ್ರಶ್ನೆಗೆ ಉತ್ತರ ಕೊಡಲಾಗದೆ ಅಪ್ಪು ಅಭಿಮಾನಿಗಳು ಸುಮ್ಮನಾಗಿದ್ದಾರೆ.

ಆದರೂ ಕೂಡ ಈ ಫ್ಯಾನ್ ವಾರ್ ಎಂಬುವುದು ಎಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಅಂದರೆ ಪ್ರತಿಯೊಂದು ಚಿಕ್ಕಪುಟ್ಟ ವಿಚಾರದಲ್ಲೂ ಕೂಡ ತಪ್ಪನ್ನೇ ಹುಡುಕುವಂತಹ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆ ಅಂತ ಹೇಳಬಹುದು. ಇನ್ನು ಮುಂದೆಯಾದರೂ ಇವೆಲ್ಲವನ್ನೂ ಮರೆತು ಸಹಬಾಳ್ವೆಯಿಂದ ಜೀವನ ನಡೆಸಿದರೆ ಒಳಿತು ಎಂಬುವುದಷ್ಟೇ ನಮ್ಮ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

5 ವರ್ಷ ಪ್ರೀತಿಸಿ, ಬ್ರೇಕಪ್ ಆಗಿ ಡಿಪ್ರೆಶನ್ ಗೆ ಹೋಗಿದ್ದ ಹರಿಪ್ರಿಯಾ ಆ ನೋವಿನಿಂದ ಹೊರಬಂದು ವಸಿಷ್ಠನಾ ಮತ್ತೆ ಪ್ರೀತಿಸಿ ಮದ್ವೆ ಆಗಿದ್ದು ಹೇಗೆ ಗೊತ್ತ.? ಯಾವ ಸಿನಿಮಾಗೂ ಕಮ್ಮಿ ಇಲ್ಲ ಇವರ ಲೈಫ್ ಸ್ಟೋರಿ

0

ಹರಿಪ್ರಿಯ (Haripriya) ಸದ್ಯಕ್ಕೆ ಕನ್ನಡದಲ್ಲಿ ಜನಪ್ರಿಯ ನಟಿ. ಹಾಗೆ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಕೂಡ ಬೇಡಿಕೆ ಇರುವ ನಟಿ. ಚಿಕ್ಕಮಗಳೂರಿನವರಾದ ಇವರು ಶಾಲಾ ಶಿಕ್ಷಣವನ್ನು ಅಲ್ಲೇ ಮುಗಿಸಿ ಬೆಂಗಳೂರಿನ ಕಡೆಗೆ ಬರುತ್ತಾರೆ. ಆದರೆ ಆ ಸಮಯದಲ್ಲಿ ಇವರು ಇಂಡಸ್ಟ್ರಿಗೆ ಹೋಗುತ್ತೇನೆ ಎಂದು ಅಂದುಕೊಂಡೆ ಇರಲಿಲ್ಲವೇ. ಭರತನಾಟ್ಯ ಕಲಾವಿದೆ ಆಗಿದ್ದ ಇವರಿಗೆ ತುಳು ಸಿನಿಮಾದ ನಿರ್ದೇಶಕರು ಒಬ್ಬರು ತಮ್ಮ ಸಿನಿಮಾಗೆ ನಾಯಕಿ ಆಗುವಂತೆ ಆಫರ್ ನೀಡುತ್ತಾರೆ.

 

ಮೊದಲ ಬಾರಿಗೆ ನಾಯಕಿಯಾಗಿ ತುಳು ಭಾಷೆಯ ಬಡಿ (Buddy) ಸಿನಿಮಾಗೆ ಹರಿಪ್ರಿಯಾ ಆಯ್ಕೆ ಆಗುತ್ತಾರೆ. ನಂತರ ಕನ್ನಡದ ಮನಸುಗಳ ಮಾತು ಮಧುರ (manasigala mathu madhura) ಎನ್ನುವ ಸಿನಿಮಾದಲ್ಲಿ ಈಕೆಗೆ ನಟಿಸುವ ಅವಕಾಶ ಸಿಗುತ್ತದೆ, ಆಗಿ ಇನ್ನೂ 17 ವರ್ಷದವರಾಗಿರುತ್ತಾರೆ. ಹರಿಪ್ರಿಯಾ ಅವರ ನಿಜವಾದ ಹೆಸರು ಶ್ರುತಿ ಚಂದ್ರಸೇನಾ (Shruthi Chandrasena) ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದ ಮೇಲೆ ಅವರ ಹೆಸರನ್ನು ಹರಿಪ್ರಿಯಾ ಎಂದು ಬದಲಾಯಿಸಲಾಗುತ್ತದೆ.

ಇವರ ಕಳ್ಳರ ಸಂತೆ ಎನ್ನುವ ಸಿನಿಮಾ ಕೂಡ ಫಿಲಂ ಅವಾರ್ಡ್ ಅಲ್ಲಿ ನಾಮಿನೇಟ್ ಆಗುತ್ತದೆ. ಯಶ್ ಅವರು ಈ ಸಿನಿಮಾದಲ್ಲಿ ಹರಿಪ್ರಿಯವರಿಗೆ ನಾಯಕಿ ಆಗಿರುತ್ತಾರೆ. ಅವಕಾಶಗಳ ಕೊರತೆಯಿಂದ ಬೇರೆ ಭಾಷೆ ಸಿನಿಮಾಗಳಲ್ಲಿ ಅಭಿನಯಿಸಲು ಹೋಗುತ್ತಾರೆ. ನಂತರ ಈಕೆಗೇ ಕನ್ನಡದಲ್ಲಿ ದೊಡ್ಡ ಮಟ್ಟಿಗೆ ಬ್ರೇಕ್ ಕೊಟ್ಟಿದ್ದು ಅಂದರೆ 2014ರಲ್ಲಿ ರಿಲೀಸ್ ಉಗ್ರಂ (Ugram) ಸಿನಿಮಾ.

ಉಗ್ರಂ ಸಿನಿಮಾ ನಿರ್ದೇಶಕರಾದ ಪ್ರಶಾಂತ್ ನೀಲ್, ನಾಯಕರಾದ ಮುರಳಿ ಹಾಗೂ ಹರಿಪ್ರಿಯ ಅವರ ಬದುಕಿನ ತಿರುವನ್ನೇ ಬದಲಾಯಿಸಿ ಬಿಟ್ಟಿತು. ಆನಂತರ ಸಾಲು ಸಾಲು ಸಿನಿಮಾ ಆಫರ್ ಗಳು ಹರಿಪ್ರಿಯಾ ಅವರನ್ನು ಹುಡುಕಿಕೊಂಡು ಬರುತ್ತವೆ ದರ್ಶನ್ ಅವರೊಂದಿಗೆ ಕುರುಕ್ಷೇತ್ರ, ಸುದೀಪ್ ಅವರೊಂದಿಗೆ ರನ್ನ ಧ್ರುವ ಸರ್ಜಾ ಅವರೊಂದಿಗೆ ಭರ್ಜರಿ, ರಿಷಬ್ ಶೆಟ್ಟಿ ಜೊತೆ ಬೆಲ್ ಬಾಟಮ್, ರಕ್ಷಿತ್ ಶೆಟ್ಟಿ ಜೊತೆ ರಿಕ್ಕಿ, ನೀನಾಸಂ ಸತೀಶ್ ಅವರೊಂದಿಗೆ ಪೆಟ್ರೋಮ್ಯಾಕ್ಸ್ ಜಗ್ಗೇಶ್ ಅವರೊಂದಿಗೆ ನೀರ್ ದೋಸೆ ಹೀಗೆ ಕನ್ನಡದ ಬಹುತೇಕ ಎಲ್ಲಾ ಹೆಸರಾಂತ ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುತ್ತಾರೆ ಹರಿಪ್ರಿಯ.

ಇದೆಲ್ಲ ಆಗುವುದರ ನಡುವೆ ಪ್ರೀತಿ ವಿಷಯದಲ್ಲೂ ಕೂಡ ಮೋಸ ಹೋಗಿ ಆಕೆ ಬಹಳ ನೊಂದು ಹೋಗಿರುತ್ತಾರೆ ಈ ವಿಷಯವನ್ನು ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಾನು ಐದು ವರ್ಷಗಳ ನಂಬಿಕೆಯನ್ನು ಮುರಿದುಕೊಂಡು ಬ್ರೇಕ್ ಅಪ್ ಮಾಡಿಕೊಂಡೆ. ಆನಂತರ ಅದರಿಂದ ಆಚೆ ಬರಲು ಬಹಳ ಕಷ್ಟ ಪಟ್ಟೆ, ಆಗ ನನಗೆ ಕಾಣಿಸಿದ್ದು ಒಂದೇ ದಾರಿ ವರ್ಕ್ ಮಾಡಬೇಕು ಎಂದು ಸತತವಾಗಿ ಸಿನಿಮಾಗಳ ಅಭಿನಯಿಸಲು ಶುರು ಮಾಡಿದೆ ಎಷ್ಟರ ಮಟ್ಟಿಗೆ ಎಂದರೆ ಒಂದೇ ವರ್ಷದಲ್ಲಿ 17 ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ.

ಆ ರೀತಿ ನಾನು ಬ್ಯುಸಿ ಆದ ಕಾರಣ ಅದರಿಂದ ಹೊರಬರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಅಂದು ನಟಿ ಮಾಡಿದ ಆ ನಿರ್ಧಾರದಿಂದ ಇಂದು ವಸಿಷ್ಠ ಸಿಂಹ ನಂತಹ ಉತ್ತಮ ವ್ಯಕ್ತಿತ್ವವುಳ್ಳ ಹುಡುಗನ ಕೈ ಹಿಡಿಯುವ ಭಾಗ್ಯ ಪಡೆದುಕೊಂಡಿದ್ದಾರೆ. 2016ರಲ್ಲಿ ವಸಿಷ್ಠ ಸಿಂಹ (Vasista Simha) ಅವರ ಪರಿಚಯವಾಗಿ ಲಾಕ್ಡೌನ್ ಅವಧಿಯಲ್ಲಿ ಅದು ಪ್ರೀತಿಯಾಗಿ ಬದಲಾಗಿರುತ್ತದೆ.

ಮತ್ತು ಕಳೆದ ಡಿಸೆಂಬರ್ ಅಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಈ ಜೋಡಿ ಈ ವರ್ಷದ ಆರಂಭದಲ್ಲಿಯೇ ಮದುವೆ ಮಾಡಿಕೊಂಡಿದ್ದಾರೆ. ಮೊದಲ ಪ್ರೀತಿಯೇ ಎಲ್ಲವೂ ಅಲ್ಲ ಅದರಿಂದ ನೊಂದುಕೊಂಡು ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ ದೇವರು ಅದಕ್ಕಿಂತ ಉತ್ತಮವಾದದ್ದನ್ನು ಅದರ ಮುಂದೆ ಕೊಡುತ್ತಾ.ನೆ ಧೈರ್ಯದಿಂದ ಆಚೆ ಬನ್ನಿ ಎನ್ನುವ ಸಂದೇಶವನ್ನು ಹರಿಪ್ರಿಯಾ ಅವರ ಸ್ಟೋರಿ ನೀಡುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಸ್ವತಃ ಅಣ್ಣಾವ್ರೆ ಉಮಾಶ್ರೀ ಅವರನ್ನು ಕರೆದು ತಮ್ಮ ಜೊತೆ ನಾಯಕಿಯಾಗಿ ನಟಿಸುವಂತೆ ಚಾನ್ಸ್ ಕೊಟ್ಟರು ಅದನ್ನು ಉಮಾಶ್ರೀ ತಿರಸ್ಕರಿಸಿದ್ದೇಕೆ ಗೊತ್ತ.? ಗುಟ್ಟು ರಟ್ಟು ಮಾಡಿದ ಉಮಾಶ್ರೀ

0

 

ಡಾಕ್ಟರ್ ರಾಜಕುಮಾರ್ ಎಂದರೆ ಎಂತಹ ನಟ ಕಲಾ ಕಂಠೀರವ, ನಟನೆಯ ಮೇರು ಪರ್ವತ. ಕರ್ನಾಟಕ ಕಂಡ ಶ್ರೇಷ್ಠ ಕಲಾವಿದ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾದಲ್ಲಿ ಒಂದೇ ಒಂದು ಚಿಕ್ಕ ಪಾತ್ರ ಸಿಗುತ್ತದೆ ಎಂದರು ಕೂಡ ಎಂತಹದೇ ದೊಡ್ಡ ಸಿನಿಮಾ ಇದ್ದರು ಆ ಸಿನಿಮಾಗಳಿಂದ ಬಿಡುವು ಮಾಡಿಕೊಂಡು ಎಲ್ಲರೂ ಅಣ್ಣಾವ್ರ ಸಿನಿಮಾದಲ್ಲಿರಲು ಆಸೆ ಪಡುತ್ತಿದ್ದ ಕಾಲವದು.

ಜೊತೆಗೆ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗುವುದು ಕೂಡ ಅಷ್ಟೇ ಗರ್ವದ ವಿಚಾರ ಆಗಿತ್ತು. ಮತ್ತು ಆ ಸಮಯದಲ್ಲಿ ಅಣ್ಣಾವ್ರು ಒಂದು ಮಾತು ಹೇಳುತ್ತಿದ್ದಾರೆ ಎಂದರೆ ಅದಕ್ಕೆ ಅಷ್ಟೇ ತೂಕ ಇರುತ್ತಿತ್ತು. ಯಾರು ಸಹ ಅದಕ್ಕೆ ಚಕಾರವೆತ್ತದೆ ಅದನ್ನು ಮಾಡುತ್ತಿದ್ದರು. ಅಷ್ಟರಮಟ್ಟಿಗೆ ಅಣ್ಣಾವ್ರು ಎಲ್ಲರಿಂದಲೂ ಪ್ರೀತಿ ಹಾಗೂ ಗೌರವ ಗಳಿಸಿದ್ದರು.

ಇಂತಹ ಅಣ್ಣಾವ್ರ ಸಿನಿಮಾದಲ್ಲಿ ನಾಯಕಿ ಆಗುವಂತೆ ಅಣ್ಣಾವ್ರು ಮತ್ತು ಪಾರ್ವತಮ್ಮ ಅವರೇ ಹೇಳಿದರು ಉಮಾಶ್ರೀ ಅವರು ಮಾತ್ರ ನಟಿಸಲಿಲ್ಲವಂತೆ. ಇದಕ್ಕೆ ಇತ್ತೀಚಿನ ಸಂದರ್ಶನದಲ್ಲಿ ಉಮಾಶ್ರೀ ಅವರು ಬೇಸರಿಸಿಕೊಂಡು ಉತ್ತರಿಸಿದ್ದಾನೆ. ಅದೇನೆಂದರೆ ಉಮಾಶ್ರೀ ಅವರು ಮೂಲತಃ ರಂಗಭೂಮಿಯಿಂದ ಬಂದವರು. ಅಣ್ಣಾವ್ರು ಸಹ ರಂಗಭೂಮಿ ಕಲಾವಿದರೆ ಆದ್ದರಿಂದ ರಂಗಭೂಮಿ ಅಲ್ಲಿ ನಟಿಸುವವರು ಎಂದರೆ ಅಣ್ಣಾವರಿಗೆ ವಿಶೇಷ ಪ್ರೀತಿ.

ಬಿಡುಡು ಆದಾಗಲೆಲ್ಲ ನಾಟಕಗಳನ್ನು ನೋಡುತ್ತಿದ್ದ ಅಣ್ಣಾವ್ರು ಉಮಾಶ್ರೀ ಅವರ ಒಡಲಾಳ ಎನ್ನುವ ನಾಟಕವನ್ನು ನೋಡಿ ಅವರ ಪಾತ್ರವನ್ನು ಬಹಳ ಮೆಚ್ಚಿಕೊಂಡಿದ್ದರಂತೆ. ಜೊತೆಗೆ ಪಾರ್ವತಮ್ಮ ಅವರನ್ನು ಕರೆದು ಆ ಕಲಾವಿದರಿಗೆ ಬಹಳ ಟ್ಯಾಲೆಂಟ್ ಇದೆ ನಮ್ಮ ಸಿನಿಮಾಗೂ ಹಾಕಿಕೊಳ್ಳೋಣ ಕೇಳು ಎಂದು ಹೇಳಿದರಂತೆ. ಪಾರ್ವತಮ್ಮ ಅವರು ಅಣ್ಣಾವ್ರ ಮಾತಿಗೆ ಎಂದು ಎದುರು ಉತ್ತರ ನೀಡುತ್ತಿರಲಿಲ್ಲ.

ಉಮಾಶ್ರೀ ಅವರನ್ನು ಸಂಪರ್ಕಿಸಿ ಆಫರ್ ಕೊಟ್ಟಾಗ ಉಮಾಶ್ರೀ ಅವರು ನಟಿಸುವುದಿಲ್ಲ ಎಂದು ಹೇಳಿದರಂತೆ. ಆದರೆ ಉಮಾಶ್ರೀ ಅವರು ಅದಕ್ಕೆ ಕೊಟ್ಟ ಕಾರಣ ಏನು ಗೊತ್ತಾ ಉಮಾಶ್ರೀ ಅವರಿಗೆ ಆ ಅವಕಾಶ ಸಿಕ್ಕ ಸಮಯದಲ್ಲಿ ಆಗಷ್ಟೇ ಅವರು ಕಾಶಿನಾಥ್ ಅವರ ಅನುಭವ ಸಿನಿಮಾದಿಂದ ಸಿನಿಮಾಲೋಕಕ್ಕೆ ಬಂದಿದ್ದರು ಅನುಭವ ಸಿನಿಮಾದಲ್ಲಿ ಅವರು ನಟಿಸಿದ್ದ ಪಾತ್ರದ ರೀತಿಯೇ ಹೆಚ್ಚು ಅವರಿಗೆ ಬೇಡಿಕೆ ಇತ್ತು.

ಹಾಗಾಗಿ ನಂತರದ ಸಿನಿಮಾ ಪಾತ್ರಗಳು ಕೂಡ ಅದೇ ಜೋನರ್ ನಲ್ಲಿ ಕೂಡಿರುತ್ತಿದ್ದವು ಹೀಗಾಗಿ ಇಂತಹ ಪಾತ್ರಗಳಲ್ಲಿ ಮಾಡಿರುವ ನಾನು ರಾಜ್ ಕುಮಾರ್ ಅವರಿಗೆ ನಾಯಕಿಯಾಗಲು ಹೇಗೆ ಸಾಧ್ಯ. ಅವರ ಸಿನಿಮಾಗಳಿಗೆ ಒಂದು ಅರ್ಥ ಇರುತ್ತದೆ ತತ್ವ ಇರುತ್ತದೆ ಘನತೆ ಕೂಡ ಇರುತ್ತದೆ. ನಾನು ಈಗಾಗಲೇ ಬೇರೆ ಜೋನರ್ ಇಂದ ಕಾಣಿಸಿಕೊಳ್ಳುತ್ತಿದ್ದೇನೆ ಹಾಗಾಗಿ ನಾನು ಅಣ್ಣಾವ್ರಿಗೆ ನಾಯಕಿ ಆಗುವುದು ಬೇಡ ಎನ್ನುವುದು ಉಮಾಶ್ರೀ ಅವರ ನಿಲುವಾಗಿತ್ತಂತೆ.

ಈಗ ಅವರ ಆ ನಿರ್ಧಾರದ ಬಗ್ಗೆ ಉಮಾಶ್ರೀ ಅವರು ಪಶ್ಚಾತಾಪ ಪಡುತ್ತಿದ್ದಾರೆ ನಾನು ಒಂದು ವೇಳೆ ಆ ರೀತಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದರೆ ಅಣ್ಣಾವ್ರ ಒಂದು ಸಿನಿಮಾಗಾದರೂ ನಾಯಕಿ ಆಗಿರುತ್ತಿದ್ದೆ ಎಂದು ಆ ದಿನಗಳನ್ನು ನೆನೆಸಿಕೊಂಡಿದ್ದಾರೆ. ಉಮಾಶ್ರೀ ಅವರು ಅಣ್ಣಾವ್ರ ಸಿನಿಮಾಗಳಿಗೆ ನಾಯಕಿ ಆಗಿದ್ದರೆ ಯಾವ ಸಿನೆಮಾಗೆ ಆಗುತ್ತಿದ್ದರು ಎನ್ನುವ ಕುತೂಹಲ ಈಗ ಕನ್ನಡಿಗರಲ್ಲಿ ಮನೆ ಮಾಡಿದೆ. ನೀವು ಸಹ ಇದುವರೆಗೆ ಉಮಾಶ್ರೀ ಅವರ ಅದ್ಭುತ ಅಭಿನಯವನ್ನು ನೋಡಿದ್ದೀರಿ ಹಾಗೂ ಅಣ್ಣಾವರ ಸಿನಿಮಾಗಳನ್ನು ನೋಡಿದ್ದೀರಿ. ಅಣ್ಣಾವ್ರ ಯಾವ ಸಿನಿಮಾದಲ್ಲಿ ಉಮಾಶ್ರೀ ಇರುತ್ತಿದ್ದರು ಎನ್ನುವುದನ್ನು ಗೆಸ್ ಮಾಡಿ ಕಮೆಂಟ್ ಮೂಲಕ ಉತ್ತರಿಸಿ.

ನಮ್ಮಪ್ಪ 5 ಎಕ್ರೆ ಜಮೀನು ಇಟ್ಟಿದ್ರೆ ಸಾಕಿತ್ತು, ನೆಮ್ದಿ ಆಗಿ ಹಸು, ಹಂದಿ ಸಾಕೊಂಡು ಜೀವ್ನ ಮಾಡ್ತಿದ್ದೆ, ಇಂಡಸ್ಟ್ರಿಗೆ ಬರೋ ಕರ್ಮನೆ ಇರ್ತಾ ಇರ್ಲಿಲ್ಲ ವಿವಾದಗಳಿಂದ ಬೇಸತ್ತ ದರ್ಶನ್ ಮಾತು.

 

ನನ್ನ ತಂದೆ ಐದು ಎಕರೆ ಜಮೀನು ಇಟ್ಟಿದ್ದರು ಸಾಕಾಗುತ್ತಿತ್ತು, ಇಂಡಸ್ಟ್ರಿ ಕಡೆಗೆ ತಲೆಯೂ ಹಾಕುತ್ತಿರಲಿಲ್ಲ ಎಂದ ದರ್ಶನ್, ವಿವಾದಗಳಿಂದ ಮನನೊಂದು ದರ್ಶನ್ ಈ ರೀತಿ ಹೇಳಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ (Darshan) ಅವರು ಬಾಕ್ಸ್ ಆಫೀಸ್ ನ ಸುಲ್ತಾನ, ಚಾಲೆಂಜ್ ಮಾಡಿ ಇಂಡಸ್ಟ್ರಿಗೆ ಬಂದು ಚಾಲೆಂಜಿಂಗ್ ಸ್ಟಾರ್ ಟೈಟಲ್ ಪಡೆದವರು. ಈಗ ಕ್ರಾಂತಿ ಸಿನಿಮಾ ಅವರಿಗೆ ಅತಿ ದೊಡ್ಡ ಸವಾಲು ಹಾಕಿದ್ದು ಇಷ್ಟು ದಿನ ಇದ್ದ ಅಡೆತಡೆ ಎಲ್ಲಾ ಮೆಟ್ಟಿ ನಿಂತು ಒಳ್ಳೆ ಕಲೆಕ್ಷನ್ ಕೂಡ ಗಳಿಸುತ್ತಿದೆ.

ಇಂತಹ ಸಮಯದಲ್ಲಿ ದರ್ಶನ್ ಅವರು ಒಂದು ಶಾ.ಕಿಂ.ಗ್ ಹೇಳಿಕೆ ನೀಡಿದ್ದಾರೆ. ನನ್ನ ತಂದೆ ಐದು ಎಕರೆ ಜಮೀನು ಮಾಡಿದ್ದರೂ ಸಾಕಾಗಿತ್ತು ಹಸು ಹಂದಿ ಸಾಕಿಕೊಂಡು ಇರುತ್ತಿದ್ದೆ ಎಂದಿದ್ದಾರೆ. ಅವರು ಈ ರೀತಿ ಮಾತಾಡಲು ಹಿಂದಿರುವ ಕಾರಣ ಏನೆಂದರೆ ದರ್ಶನ್ ಅವರಿಗಿರುವ ಪ್ರಾಣಿಗಳ ಕ್ರೇಝ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ದರ್ಶನ್ ಅವರು ಟಿ ನರಸೀಪುರ ಬಳಿ ಹಳೆ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಒಂದು ಫಾರಂ ಹೌಸ್ (Farm house) ನಿರ್ಮಿಸಿದ್ದಾರೆ. ಅದು ಈಗ ಒಂದು ಮಿನಿ ಝೂ ತರಹ ಆಗಿದೆ ಎನ್ನಬಹುದು.

ಅಲ್ಲಿ ಹಲವಾರು ಪ್ರಾಣಿ ಪಕ್ಷಿಗಳನ್ನು ಸಾಗುತ್ತಿದ್ದಾರೆ ಮತ್ತು ಸಮಯ ಸಿಕ್ಕಾಗೆಲ್ಲಾ ಹೆಚ್ಚು ಅಲ್ಲಿನ ಪ್ರಾಣಿ ಪಕ್ಷಿಗಳ ಜೊತೆ ಕಾಲ ಕಳೆಯುವ ಇವರು ಅವರ ಇಷ್ಟದ ವೃತ್ತಿ ಯಾವುದು ಎಂದು ಕೇಳಿದಾಗ ಝೂ ಅಲ್ಲಿ ಏನು ಕೆಲಸ ಕೊಟ್ಟರು ಮಾಡುತ್ತೇನೆ ಅಂತಲೂ ಒಮ್ಮೆ ಹೇಳಿಕೊಂಡಿದ್ದರು. ಇಷ್ಟು ಪ್ರಾಣಿಗಳನ್ನು ಇಷ್ಟಪಡುವ ಇವರಿಗೆ ಆ ಆಸಕ್ತಿ ಎಲ್ಲಿಂದ ಹುಟ್ಟಿಕೊಂಡಿತು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ ಇದರ ಹಿಂದಿನ ಕಥೆಯನ್ನು ದರ್ಶನ್ ಅವರೀಗ ಹೇಳಿಕೊಂಡಿದ್ದಾರೆ.

ದರ್ಶನ್ ಚಿಕ್ಕವರಿದ್ದಾಗ ಅವರ ಮನೆಯಲ್ಲಿ ರಾಜು ಗೌಡ ಎನ್ನುವವರು ಇದ್ದರಂತೆ. ಅವರ ಮಗ ವಿಕ್ಕಿ ದರ್ಶನ್ ಅವರ ಜೊತೆ ಯಾವಾಗಲೂ ಆಟವಾಡುತ್ತಿದ್ದರಂತೆ. ಪ್ರತಿದಿನ ಸಂಜೆ ಬಂದು ವಿಕ್ಕಿಯನ್ನು ಫಾರ್ಮ್ ಹೌಸಿಗೆ ಹೋಗೋಣ ಬಾ ಎಂದು ಅವರು ಕರೆದುಕೊಂಡು ಹೋಗುತ್ತಿದ್ದರಂತೆ. ಅವರ ಜೊತೆ ಹೋಗಿ ಹೋಗಿ ಫಾರ್ಮ್ ಹೌಸ್ ನೋಡಿ ದರ್ಶನವರೆಗೂ ಕೂಡ ನಾನು ಇದೇ ರೀತಿ ತೋಟ ಮಾಡಿ ಪ್ರಾಣಿ ಪಕ್ಷಿಗಳನ್ನು ಸಾಕಬೇಕು ಎನ್ನುವ ಹಂಬಲ ಬಾಲ್ಯದಿಂದಲೇ ಹುಟ್ಟಿಕೊಂಡಿತ್ತಂತೆ.

ಆದರೆ ಆರ್ಥಿಕವಾಗಿ ಆಗ ದರ್ಶನ್ ಕುಟುಂಬ ಸಂಕಷ್ಟದಲ್ಲಿದ್ದ ಕಾರಣ ಅದು ಸಾಧ್ಯವಾಗಲಿಲ್ಲ. ಆದರೆ ಆ ಸಮಯದಲ್ಲಿ ಅವರು ಹಸುಗಳನ್ನು ಸಾಕುತ್ತಿದ್ದರು. ಒಂದು ಸಮಯಕ್ಕೆ ಅವರ ಕುಟುಂಬ ನಿರ್ವಹಣೆಗೆ ಆ ಹಸುಗಳೇ ಸಹಾಯ ಮಾಡಿದ್ದು ಎಂದರು ಸಹ ಹೇಳಬಹುದು. ಇತ್ತೀಚೆಗೆ ದರ್ಶನ್ ಅವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ಯುಟ್ಯೂಬ್ ಚಾನೆಲ್ ಗೆ ಅವರ ಫಾರ್ಮ್ ಟೂರ್ ಮಾಡಿ ಇಂಟರ್ವ್ಯೂ ಕೊಟ್ಟಿದ್ದರು. ಹಾಗೇ ಈ ಮಾತುಗಳನ್ನು ಹೇಳಿಕೊಂಡರು ಫಾರ್ಮ್ ಹೌಸ್ ಮಾಡಬೇಕು ಎನ್ನುವ ಆಸೆ ಇಂಡಸ್ಟ್ರಿಗೆ ಬರುವ ಮುಂಚೆನೆ ಇತ್ತು.

ಆದರೆ ವಿಧಿ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂತು. ಒಂದು ಸಮಯದಲ್ಲಿ ತೋಟ ಖರೀದಿಸಿ ಹಸು ಹಂದಿ ಸಾಕುವುದಕ್ಕೂ ಕೂಡ ನಿರ್ಧಾರ ಮಾಡಿದ್ದೆ. ನನ್ನ ತಂದೆ ಐದೇ ಐದು ಎಕರೆ ಜಮೀನು ಮಾಡಿದ್ದರೆ ನಾನು ಇಂಡಸ್ಟ್ರಿ ಕಡೆಗೆ ತಲೆಹಾಕುತ್ತಲೇ ಇರಲಿಲ್ಲ ಹಸು ಹಂದಿ ಸಾಕಿಕೊಂಡು ಆರಾಮಾಗಿ ಇರುತ್ತಿದ್ದೆ.

ಹೇಗೂ ಹಸುಗಳನ್ನು ಕಟ್ಟುತ್ತಿದ್ದೆ ಹೋಟೆಲ್‌ಗಳ ಮುಂದೆ ಡಸ್ಟ್ಬಿನ್ ಇಟ್ಟರೆ ಆಹಾರ ಹಂದಿಗಳಿಗೆ ಆಗುತ್ತದೆ ಹೇಗೋ ಜೀವನ ಸಾಗುತ್ತದೆ ಬಿಡು ಎಂದು ನಿರ್ಧಾರ ಮಾಡಿ ಬಿಟ್ಟಿದ್ದೆ. ಆದರೆ ಬಣ್ಣದ ಋಣ ಇಲ್ಲಿಯವರೆಗೂ ಕರೆದು ತಂದಿದೆ ನಾನು ಫಾರ್ಮ್ ಹೌಸ್ ಅನ್ನು ಶಾಸ್ತ್ರಿ ಸಿನಿಮಾದ ಸಮಯದಲ್ಲೇ ಕೊಂಡುಕೊಂಡಿದ್ದು ನನ್ನ ಆಸೆಯಂತೆ ಈಗ ಅಲ್ಲಿ ಪ್ರಾಣಿ ಪಕ್ಷಿಗಳನ್ನು ಸಾಗುತ್ತಿದ್ದೇನೆ ಎಂದು ತಮ್ಮ ಫಾರ್ಮ್ ಹೌಸ್ ಕಥೆ ಹೇಳಿಕೊಂಡಿದ್ದಾರೆ.

ಕ್ರಾಂತಿ ಅಪ್ಪುಗೆ ಟ್ರಿಬ್ಯೂಟ್ ಕೊಟ್ಟಿಲ್ಲ, ಎಲ್ಲಾ ಕನ್ನಡ ಸಿನಿಮಾದಲ್ಲೂ ಅಪ್ಪು ಫೋಟೋ ಇರುತ್ತೆ ಕ್ರಾಂತಿಯಲ್ಲಿ ಮಾತ್ರ ಯಾಕಿಲ್ಲ.? ಸೇಡು ತೀರಿಸಿಕೊಳ್ತಿದ್ದಾರ ದರ್ಶನ್.? ಅಭಿಮಾನಿಗಳ ಪ್ರಶ್ನೆ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಬಿಡುಗಡೆಯಾಗಿ ಇನ್ನೇನು ಮೂರು ದಿನಗಳಾಗಿದೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಸದ್ದು ಮಾಡುತ್ತಿದೆ ಎಂದು ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಕ್ರಾಂತಿ ಸಿನಿಮಾ ಸೆಟ್ಟೇರಿದ ಕಾಲದಿಂದ ಹಿಡಿದು ಬಿಡುಗಡೆಯಾಗುವ ತನಕ ಒಂದಲ್ಲ ಒಂದು ವಿವಾದಾತ್ಮಕ ಸಂಕಷ್ಟಗಳಿಗೆ ಸಿಲುಕಿಕೊಂಡಿರುವಂತಹ ವಿಚಾರ ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಅಪ್ಪು ಅಭಿಮಾನಿಗಳನ್ನು ಎದುರು ಹಾಕಿಕೊಂಡು ಸಾಕಷ್ಟು ಸಂಕಷ್ಟವನ್ನು ಅನುಭವಿಸಿದ್ದಾರೆ.

ಅಷ್ಟೇ ಅಲ್ಲದೆ ಕನ್ನಡದ ಯಾವ ನಟನಿಗೂ ಕೂಡ ಆಗದಂತಹ ಅನ್ಯಾಯ ನಟ ದರ್ಶನ್ ಅವರಿಗೆ ಆಗಿದೆ ಹೊಸಪೇಟೆಯಲ್ಲಿ ಸಿನಿಮಾದ ಹಾಡು ಒಂದನ್ನು ಬಿಡುಗಡೆ ಮಾಡುವಂತಹ ಸಂದರ್ಭದಲ್ಲಿ ಕಿಡಿಗೆಡಿ ಒಬ್ಬರು ದರ್ಶನ್ ಮೇಲೆ ಚಪ್ಪಲಿ ಎಸೆತವನ್ನು ಎಸೆದಿದ್ದಂತಹ ವಿಚಾರ ನಿಮಗೆ ತಿಳಿದೇ ಇದೆ. ಆದರೂ ಕೂಡ ಅವೆಲ್ಲವನ್ನು ಸಹಿಸಿಕೊಂಡು ಅಲ್ಲಿಂದ ಶಾಂತ ರೀತಿಯಲ್ಲಿ ದರ್ಶನ್ ಅವರು ಹಿಂತಿರುಗಿ ಬಂದರು. ಕೆಲವು ಅಭಿಮಾನಿಗಳು ಇವೆಲ್ಲವನ್ನು ದರ್ಶನ್ ಅವರು ಈ ಘಟನೆ ಮರೆತಿದ್ದಾರೆ ಅಂತ ಅಂದುಕೊಂಡಿದ್ದರು.

ಆದರೆ ಕ್ರಾಂತಿ ಸಿನಿಮಾದ ಮೂಲಕ ದರ್ಶನ್ ಇದ್ಯಾವುವುದನ್ನು ಕೂಡ ಮರೆತಿಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ಆಗಲಿ ಒಂದು ವರ್ಷವಾಗಿದೆ ಈ ಒಂದು ವರ್ಷದಲ್ಲಿ ಬಿಡುಗಡೆಯಾದಂತಹ ಎಲ್ಲಾ ಸಿನಿಮಾದಲ್ಲಿಯೂ ಕೂಡ ಅಪ್ಪು ಅವರ ಫೋಟೋವನ್ನು ಹಾಕಿ ಮೊದಲು ಅವರಿಗೆ ಟ್ರಿಬ್ಯೂಟ್ ಕೊಡುತ್ತಾರೆ ಸಿನಿಮಾ ಪ್ರಸಾರ ಮಾಡುವುದಕ್ಕಿಂತ ಮುಂಚೆ ಈ ಕೆಲಸ ಆಗುತ್ತದೆ.

ಅಪ್ಪು ಅಗಲಿದ ನಂತರ ಬಿಡುಗಡೆಯಾಗಿರುವ ಪ್ರತಿಯೊಂದು ಸಿನಿಮಾದಲ್ಲಿಯೂ ಕೂಡ ಇದೇ ಕೆಲಸ ನಡೆದಿದೆ. ಆದರೆ ಇದೇ ಮೊದಲ ಬಾರಿಗೆ ಕ್ರಾಂತಿ ಸಿನಿಮಾದಲ್ಲಿ ಅಪ್ಪು ಅವರ ಫೋಟೋ ಇಲ್ಲ ಹಾಗೂ ಟ್ರಿಬ್ಯೂಟ್ ಕೂಡ ಕೊಟ್ಟಿಲ್ಲ. ಇದನ್ನು ನೋಡಿದಂತಹ ಕೆಲ ಅಭಿಮಾನಿಗಳು ದರ್ಶನ್ ಅವರು ದ್ವೇಷ ಸಾಧಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಹೊಸಪೇಟೆಯಲ್ಲಿ ಅವರಿಗೆ ಆದಂತಹ ಅವಮಾನವನ್ನು ಈ ರೀತಿ ತೀರಿಸಿಕೊಳ್ಳುತ್ತಿದ್ದಾರೆ ಎಂದು ಮಾತನಾಡುತ್ತಿದ್ದಾರೆ.

ಒಂದು ವೇಳೆ ಕ್ರಾಂತಿ ಸಿನಿಮಾದಲ್ಲಿ ಅಪ್ಪು ಅವರ ಭಾವಚಿತ್ರವನ್ನು ಹಾಕಿ ಟ್ರಿಬ್ಯೂಟ್ ಕೊಟ್ಟಿದ್ದರೆ ಇದೆಲ್ಲದಕ್ಕೂ ಕೂಡ ಒಂದು ಅಂತ್ಯ ಎಂಬುದು ಸಿಗುತ್ತಿತ್ತು. ಆದರೆ ದರ್ಶನ್ ಹಾಗೂ ಚಿತ್ರತಂಡ ಈ ಕೆಲಸವನ್ನು ಯಾಕೆ ಮಾಡಿಲ್ಲ ಎಂಬುದೇ ತಿಳಿದಿಲ್ಲ, ಅವರು ಮಾಡಿದಂತಹ ಒಂದು ಎಡವಟ್ಟಿನಿಂದಾಗಿ ಇದೀಗ ಮತ್ತೆ ಅಪ್ಪು ಅಭಿಮಾನಿಗಳು ಕೆರಳಿದ್ದಾರೆ. ಅಷ್ಟೇ ಅಲ್ಲದೆ ಕ್ರಾಂತಿ ಸಿನಿಮಾದ ವಿರುದ್ಧ ಘೋಷಣೆಯನ್ನು ಕೂಗುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ದರ್ಶನ್ ಏನೇ ಮಾಡಿದರು ಕೂಡ ಸಿಕ್ಕಾಪಟ್ಟೆ ವಿವಾದವಾಗುತ್ತಿದೆ ಅವರು ಮಾತನಾಡುವಂತಹ ವಿಚಾರವೇ ಆಗಿರಬಹುದು, ನಡೆದುಕೊಳ್ಳುವಂತಹ ರೀತಿ ಆಗಿರಬಹುದು ಎಲ್ಲವೂ ಕೂಡ ಕಾಂಟ್ರವರ್ಸಿಗೆ ಒಳಗಾಗುತ್ತಿದೆ. ಕ್ರಾಂತಿ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಅಭಿಮಾನಿಗಳು ಇದನ್ನು ನೋಡುತ್ತಾರೆ ಅಂತ ಅಂದುಕೊಂಡಿದ್ದರು. ಆದರೆ ಚಿತ್ರತಂಡ ಅಪ್ಪು ಅವರಿಗೆ ಟ್ರಿಬ್ಯೂಟ್ ಕೊಡದೆ ಇರುವ ಕಾರಣವೇ ಈ ಸಿನಿಮಾ ಥಿಯೇಟರ್ ನಲ್ಲಿ ಖಾಲಿ ಹೊಡೆಯುತ್ತಿದೆ ಎಂದು ಕೆಲವು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಕಾಲ ಮೀರಿಲ್ಲ ಈಗಲಾದರೂ ಕ್ರಾಂತಿ ಸಿನಿಮಾದಲ್ಲಿ ಅಪ್ಪು ಅವರಿಗೆ ಟ್ರಿಬ್ಯೂಟ್ ಕೊಟ್ಟರೆ ಖಂಡಿತವಾಗಿಯೂ ಈ ಸಿನಿಮಾ ಸಕ್ಸಸ್ ಕಾಣುತ್ತದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತದೆ ಎಂಬುವುದು ಅಪ್ಪು ಅಭಿಮಾನಿಗಳ ವಾದವಾಗಿದೆ, ಈ ವಿಚಾರವನ್ನು ದರ್ಶನ್ ಅಥವಾ ಕ್ರಾಂತಿ ಸಿನಿಮಾದ ಚಿತ್ರತಂಡ ಯಾವ ರೀತಿ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

50 ಕೋಟಿ ಸಂಭಾವನೆ ಕೊಡ್ತಿನಿ ಅಂದ್ರು ಪನ್ ಮಸಾಲಾ ಜಾಹೀರಾತು ನಿರಾಕರಿಸಿದ್ದ ಯಶ್ ಪೆಪ್ಸಿ ಜಾಹೀರಾತಿಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ.?

0

ಕನ್ನಡ ತಾಯಿಯ ಹೆಮ್ಮೆಯ ಪುತ್ತನೊಬ್ಬ ಇಂದು ಇಂಟರ್ನ್ಯಾಷನಲ್ ಸ್ಟಾರ್ ಆಗಿರುವುದು ಕರ್ನಾಟಕದ ಪ್ರತಿಯೊಬ್ಬರಿಗೂ ಕೂಡ ಸಂತೋಷದ ವಿಷಯ. ಮೈಸೂರಿನಲ್ಲಿ ಹುಟ್ಟಿದ ಯಶ್ (Yash) ಎನ್ನುವ ಈ ಪ್ರತಿಭೆ ಇಂದು ದೇಶದ ಗಡಿ ದಾಟಿ ಇಂಟರ್ನ್ಯಾಷನಲ್ ಲೆವೆಲ್ ಅಲ್ಲಿ ಹೆಸರು ಮಾಡುತ್ತಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ಭಾರತದಾದ್ಯಂತ ಜಾದು ಮಾಡಿದ್ದ ಈತ ಕೆಜಿಎಫ್ ಟೂ ಇಂದ ಇಂಟರ್ನ್ಯಾಷನಲ್ ಸ್ಟಾರ್ ಆದರು.

ಈಗ ಇವರ ಹಿರಿಮೆಗೆ ಮತ್ತೊಂದು ಗರಿ ಏರಿದ್ದು ಮೊದಲ ಬಾರಿಗೆ ಕನ್ನಡದ ನಟ ಇಂಟರ್ನ್ಯಾಷನಲ್ ಬ್ರಾಂಡಿಗೆ ಬ್ರಾಂಡ್ ಅಂಬಾಸಿಡರ್ ( Brand Ambassador) ಆಗಿದ್ದಾರೆ ಎನ್ನುವ ದಾಖಲೆ ಬರೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಭಾರತದಾದ್ಯಂತ ರಾಕಿ ಭಾಯ್ ಆಗಿ ಗುರುತಿಸಿಕೊಂಡಿದ್ದಾರೆ. ಇವರ ಕ್ರೇಝ್ ಎಷ್ಟರಮಟ್ಟಿಗೆ ಇದೆ ಎನ್ನುವುದಕ್ಕೆ ಪೆಪ್ಸಿ (Pepsi) ಕಂಪನಿಯು ಇವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಹ್ವಾನಿಸಿರುವುದೇ ಸಾಕ್ಷಿ.

ಎರಡು ದಿನಗಳ ಹಿಂದಷ್ಟೇ ಯಶ್ ಅವರು instagram ನಲ್ಲಿ ಸ್ಟೈಲ್ ಆಗಿ ಪೆಪ್ಸಿ ಕುಡಿಯುತ್ತಿರುವ ಫೋಟೋ ಹಾಕಿಕೊಂಡಿದ್ದರು. ಅವರ ಆ ಸ್ಟೈಲ್ ನೋಡಿ ಫ್ಯಾನ್ ಫಿದಾ ಆಗಿ ಹೋಗಿದ್ದರು. ಅಲ್ಲಿ ಮತ್ತೊಂದು ವಿಷಯವೂ ಕೂಡ ಇತ್ತು ಅದೇನೆಂದರೆ ಪೆಪ್ಸಿ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಯಶ್ ಅವರು ಸೆಲೆಕ್ಟ್ ಆಗಿರುವುದು. ಈ ಹಿಂದೆ ಟಿಎಂಟಿ ಸ್ಟೀಲ್, ರಾಮರಾಜ್ ಮತ್ತು ಫ್ರೀಡಂ ಸನ್ ಫ್ಲವರ್ ಆಯಿಲ್ ಇತ್ಯಾದಿ ಜಾತಿರಾತುಗಳಲ್ಲಿ ಕಾಣಿಸಿಕೊಂಡಿದ್ದ ಯಶ್ ಅವರು ಮೊದಲ ಬಾರಿಗೆ ಇಂಟರ್ನ್ಯಾಷನಲ್ ಆಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಯಶ್ ಅವರು ಇದಕ್ಕಾಗಿ ಪಡೆದಿರುವ ಸಂಭವನೆ ಏನಿರಬಹುದು ಎನ್ನುವ ಊಹಾಪೋಹದ ಚರ್ಚೆ ಕೂಡ ಜೋರಾಗಿ ನಡೆಯುತ್ತಿದೆ ಅದರ ನಿಖರ ಮಾಹಿತಿ ಇಲ್ಲಿದೆ ನೋಡಿ. ಯಶ್ ಅವರು ಸದ್ಯಕ್ಕೆ ಸಿನಿಮಾಗಳಿಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ, ಜೊತೆಗೆ ತಮ್ಮದೇ ಆದ ಶೇರ್ಸ್ ಕೂಡ ಹೊಂದಿದ್ದಾರೆ. ಹಾಗಾಗಿ ಇಂಟರ್ನ್ಯಾಷನಲ್ ಸ್ಟಾರ್ ಆಗಿರುವ ಇವರು ಈಗ ಒಂದು ಜಾಹಿರಾತಿನಲ್ಲಿ ಭಾಗವಹಿಸುವುದು ಎಂದರೆ ಅದು ಸುಲಭದ ವಿಷಯ ಅಲ್ಲ.

ಹಾಗಾಗಿ ಬಾರಿ ಮೊತ್ತದ ಸಂಭಾವನೆಯನ್ನು ಇವರು ಪಡೆದಿರುತ್ತಾರೆ ಎನ್ನುವ ಮಾಹಿತಿ ಇದೆ. ಆದರೆ ಯಾರು ಕೂಡ ಇನ್ಕಮ್ ಟ್ಯಾಕ್ಸ್ ವಿಚಾರವಾಗಿರುವುದರಿಂದ ತಾವು ಪಡೆದಿರುವ ಹಣವನ್ನು ಘೋಷಿಸಿಕೊಳ್ಳುವುದಿಲ್ಲ. ಆಪ್ತ ವಲಯದವರಿಂದ ತಿಳಿದು ಬಂದಿರುವ ವಿಷಯ ಏನೆಂದರೆ, ಬೇರೆ ಜಾಹೀರಾತುಗಳಿಗೆ ಎರಡು ಕೋಟಿ ಸಂಭಾವನೆ ಪಡೆಯುತ್ತಿದ್ದ ಯಶ್ ಅವರು ಪೆಪ್ಸಿ ಜಾಹೀರಾತಿಗಾಗಿ 10 ಕೋಟಿ ಅನ್ನು ಸಂಭಾವನೆ ಆಗಿ ಪಡೆದಿದ್ದಾರಂತೆ.

ಯಶ್ ಅವರ ಜಾಹೀರಾತಿನ ಬಗ್ಗೆ ಸಿಕ್ಕಿರುವ ಮತ್ತೊಂದು ಮಾಹಿತಿ ಏನೆಂದರೆ, ಅವರ ಕೆಜಿಎಫ್ ಚಾಪ್ಟರ್ 1 ಹಿಟ್ ಆಗಿದ್ದ ವೇಳೆ ಅವರಿಗೆ ಪಾನ್ ಮಸಾಲ (Pan Masala) ಜಾಹೀರಾತು ನಲ್ಲಿ ಭಾಗವಹಿಸಿ ಎಂದು ಆಹ್ವಾನ ನೀಡಲಾಗಿತ್ತಂತೆ. ಆದರೆ ಅದು ಆರೋಗ್ಯಕ್ಕೆ ಹಾನಿಕರ ಅಭಿಮಾನಿಗಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕಾಗಿ ಒಂದೇ ಮಾತಿನಲ್ಲಿ ಆಗಲ್ಲ ಎಂದು ಹೇಳಿಬಿಟ್ಟರಂತೆ.

ಅದಕ್ಕಾಗಿ ಡಬಲ್ ಡಿಜಿಟ್ ಅಷ್ಟು ಸಂಭಾವನೆ ಕೊಡುವುದಾಗಿ ಕೂಡ ಕಂಪನಿ ಆಫರ್ ಮಾಡಿದರೂ ಯಶ್ ಒಪ್ಪಿಲ್ಲ. ಯಶ್ ಅವರು ಯಾವುದೇ ವಿಚಾರ ಒಪ್ಪಿಕೊಂಡರು ಅಳೆದು ತೂಗಿ ಸಮಾಧಾನ ಆದರೆ ಮಾತ್ರ ಮಾಡುತ್ತಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಯಶ್ ಅವರು ಪೆಪ್ಸಿ ಜಾಹೀರಾತಿನಲ್ಲಿ ಭಾಗವಹಿಸುವ ಬದಲು ಕರ್ನಾಟಕದ ರೇಷ್ಮೆ ಅಥವಾ ಎಳನೀರು ಅಥವಾ ಕಬ್ಬಿನ ಹಾಲು ಇಂತಹ ನಮ್ಮ ದೇಸಿಯ ಪದಾರ್ಥಗಳನ್ನು ಪ್ರೋತ್ಸಾಹಿಸುವಂತಹ ಜಾಹೀರಾತಿನಲ್ಲಿ ಭಾಗವಹಿಸಬೇಕೀತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

ವಯಸ್ಸು 45 ಆಗಿದ್ರು ಸೃಜನ್ ಲೋಕೇಶ್ ಅಕ್ಕ ಪೂಜಾ ಇನ್ನು ಮದುವೆ ಆಗಿಲ್ಲ.! ಪೂಜಾ ಲೋಕೇಶ್ ಗೆ ಮೋಸ ಮಾಡಿದ್ಯಾರು ಗೊತ್ತ.?

0

 

ಜೀವನದಲ್ಲಿ ಅವಕಾಶ ಎನ್ನುವುದು ಒಮ್ಮೆ ಮಾತ್ರ ಸಿಗುವುದು. ಸಿಕ್ಕ ಅವಕಾಶವನ್ನು ಯಾರು ಕೈ ತುಂಬಾ ಬಾಚಿಕೊಳ್ಳುತ್ತಾರೋ ಅವರೇ ಬೆಳೆದು ನಿಲ್ಲುವುದು. ಬದುಕು ಎಂದರೆ ಹಾಗೆ ಭಗವಂತ ಎಲ್ಲರಿಗೂ ಎಲ್ಲ ಸಮಯಗಳಲ್ಲೂ ಅವಕಾಶ ಕೊಡುವುದಿಲ್ಲ. ಕೆಲವರಿಗೆ ಅವಕಾಶ ಕೊಟ್ಟಂತೆ ಕೊಟ್ಟು ಇನ್ನೊಂದು ಕೈಯಿಂದ ಕಿತ್ತು ಕೊಂಡಿದ್ದೇ ಹೆಚ್ಚು. ನಮ್ಮ ಎಲ್ಲಾ ಕಷ್ಟಗಳು ತೀರಿತು ಇನ್ನು ಮುಂದೆ ಎಲ್ಲವೂ ಒಳ್ಳೇದಾಗುತ್ತದೆ ಎಂದು ಬೊಗಸೆ ಕಣ್ಣಿನಿಂದ ಕಾಯುತ್ತಿದ್ದವರು ಹೇಳ ಹೆಸರಿಲ್ಲದಂತೆ ಮರೆಯಾಗಿದ್ದು ಇದೆ.

ಇವುಗಳಿಗೆಲ್ಲಾ ಸದ್ಯಕ್ಕಿರುವ ಪ್ರತ್ಯಕ್ಷ ಉದಾಹರಣೆ ಸೃಜನ್ ಲೋಕೇಶ್ ಅವರ ಅಕ್ಕ ಪೂಜಾ ಲೋಕೇಶ್ (Pooja Lokesh) . ಕಾಲೇಜು ಹೋಗುತ್ತಿದ್ದ ವಯಸ್ಸಿನಲ್ಲಿಯೇ ಸಿನಿಮಾ ಹೀರೋಯಿನ್ ಆಗಿ ಸೆಲೆಕ್ಟ್ ಆದರು. ತಂದೆ ತಾತ ಅಮ್ಮ ಹೀಗೆ ಎಲ್ಲರೂ ಕೂಡ ಪ್ರಖ್ಯಾತ ಕಲಾವಿದರು ಗಳೇ ,ಸುಬ್ಬಯ್ಯ ನಾಯ್ಡು (Subbai naidu) ಅವರ ಮೊಮ್ಮಗಳಾದ ಲೋಕೇಶ್ ಹಾಗೂ ಗಿರಿಜಮ್ಮನ ಪ್ರೀತಿಯ ಪುತ್ರಿ ನೋಡಲು ಚೆಲುವೆ ಜೊತೆಗೆ ಅಭಿನಯ ಅನ್ನುವುದು ರಕ್ತಗತವಾಗಿಯೇ ಬಂದಿತ್ತು.

ಹೀಗಾಗಿ ಬಣ್ಣದ ಲೋಕದ ಅವಕಾಶ ಸಿಕ್ಕ ತಕ್ಷಣ ನನ್ನ ಅದೃಷ್ಟ ಇಲ್ಲೇ ಇರಬೇಕು ಎಂದು ಓಕೆ ಅಂದುಬಿಟ್ಟರು. ಪೂಜಾ ಲೋಕೇಶ್ ಮೊದಲಿಗೆ ದೇವರಾಜ್ ಅವರೊಂದಿಗೆ ಹುಲಿಯ (Huliya) ಸಿನಿಮಾದಲ್ಲಿ ನಾಯಕ ನಟಿಯಾಗಿ ಅಲ್ಲದಿದ್ದರೂ ಅದಕ್ಕೆ ಸಮಾನವಾದ ಪಾತ್ರದಲ್ಲಿ ಅಭಿನಯಿಸಿದರು. ನಂತರ ರಮೇಶ್ ಅರವಿಂದ್ ಅವರೊಂದಿಗೆ ಉಲ್ಟಾ ಪಲ್ಟಾ (ulta palta) ಸಿನಿಮಾದ ನಾಯಕಿ ಆದರು. ಇಂದಿಗೂ ಕೂಡ ಸೂಪರ್ ಹಿಟ್ ಹಾಡಾಗಿರುವ ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು ಎಂದು ರಾಮಕುಮಾರ್ ಅವರೊಂದಿಗೆ ನೃತ್ಯ ಮಾಡಿದ್ದ ಇವರು ಆ ಕಾಲದ ಸಮಕಾಲೀನ ನಟಿಯರಾದ ಸುಧಾರಾಣಿ ಶ್ರುತಿ ಪ್ರೇಮ ಇವರಂತೆ ಹೆಸರು ಮಾಡಬೇಕಿತ್ತು.

ಅದರೆ ಆರಂಭದ ಎರಡು ಮೂರು ಸಿನಿಮಾಗಳು ಹಿಟ್ ಆದರೂ ಪೂಜಾ ಗೆ ಮಾತ್ರ ಸಿನಿಮಾ ಅವಕಾಶಗಳು ಬರಲೇ ಇಲ್ಲ. ಜೊತೆಗೆ ಇಲ್ಲಸಲ್ಲದ ಗಾಸಿಪ್ಗಳು ಹರಡತೊಡಗಿದ್ದವು. ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ಪೂಜಾ ಅವಕಾಶಗಳಿಗಾಗಿ ಕಾದು ನೋಡುತ್ತಲೇ ಇದ್ದರು. ಯಾವಾಗ ಕನ್ನಡದಲ್ಲಿ ಇವರ ಕಲೆಯನ್ನು ಗುರುತಿಸದೆ ನೆಗ್ಲೆಟ್ ಮಾಡಿದರು ಬೇರೆ ಚಿತ್ರರಂಗದ ಕಡೆ ಇವರು ಸಹ ವಲಸೆ ಹೋಗಬೇಕಾಯಿತು.

ನಂತರ ತಮಿಳು ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಂಡ ಇವರ ಬದುಕಿನ ಚಿತ್ರಣವೇ ಬದಲಾಗಿ ಹೋಯಿತು. ಕುಂಕುಮಂ, ಮಹಾಭಾರತಂ, ಅಂಜಲಿ ಹೀಗೆ ತಮಿಳಿನಲ್ಲೇ ಸುಮಾರು 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಇವರು ಕಾಣಿಸಿಕೊಂಡು ಮನೆಮನೆ ಮಾತಾಗಿದ್ದಾರೆ. ಮತ್ತೊಮ್ಮೆ ಕನ್ನಡದಲ್ಲಿ ಟೈಗರ್ ಗಲ್ಲಿ ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡಿದರು ಅದೂ ಸಹಾ ಸದ್ದು ಮಾಡಲಿಲ್ಲ.

ಮಜಾ ಟಾಕೀಸ್ ಅಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಪೂಜಾ ಲೋಕೇಶ್ ಅವರು ಆ ಕಾರ್ಯಕ್ರಮಕ್ಕೆ ಸೃಜನ್ ಲೋಕೇಶ್ ಅವರಿಗೆ ಕಾಸ್ಟ್ಚೂಮ್ ಡಿಸೈನರ್ ಆಗಿ ಕೂಡ ಕೆಲಸ ಮಾಡಿದ್ದಾರೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಗಿರಿಜಮ್ಮ, ಸೃಜನ್ ಮತ್ತು ಸುಜನ್ ಪತ್ನಿ ಗ್ರೀಷ್ಮ ಹಾಗೂ ಅವರ ಮಗನೊಂದಿಗೆ ವಿಡಿಯೋಗಳನ್ನು ಮಾಡುತ್ತಿರುತ್ತಾರೆ.

ಇನ್ನು ಚಿರ ಯುವತಿಯಂತೆ ಕಾಣುತ್ತಿರುವ ಪೂಜಾರ ವಯಸ್ಸು 45 ವರ್ಷ ಆದರೂ ಕೂಡ ಒಬ್ಬಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ. ಮದುವೆ ಆಗಿಲ್ಲ ಎನ್ನುವ ಮಾತ್ರಕ್ಕೆ ಆ ವಿಚಾರದಲ್ಲಿ ಇವರ ಹೆಸರು ಯಾರ ಜೊತೆಗೂ ಕೂಡ ಥಳಕು ಹಾಕಿಕೊಂಡಿಲ್ಲ. ಏಕಾಂಗಿಯಾಗಿ ಬದುಕು ನಡೆಸುವ ನಿರ್ಧಾರ ಮಾಡಿರುವ ಪೂಜಾ ಲೋಕೇಶ್ ಅವರು ಯಾಕೆ ಮದುವೆ ಬಂಧನಕ್ಕೆ ಬೀಳಲಿಲ್ಲ ಎನ್ನುವುದು ಇನ್ನೂ ಗುಟ್ಟಾಗಿದೆ. ಅವರ ವೈಯಕ್ತಿಕ ನಿರ್ಧಾರಗಳು ಏನೇ ಇದ್ದರೂ ನಗುನಗುತ್ತಾ ಬದುಕು ಕಳೆಯಲಿ ಎನ್ನುವುದಷ್ಟೇ ನಮ್ಮ ಅಭಿಲಾಷೆ.