Home Blog Page 248

ದೊಡ್ಮನೆ ಅಭಿಮಾನಿಗಳಿಗೆ ಸಿಹಿಸುದ್ದಿ, ವಿನಯ್ ರಾಜ್ ಗೆ ಜೋಡಿಯಾದ ನಟಿ ಸ್ವತಿಷ್ಠ ಕೃಷ್ಣ.

 

ಕಮಲ್ ಹಾಸನ್ (Kamal Hasan ) ಅವರ ವಿಕ್ರಂ (Vikram) ಸಿನಿಮಾವನ್ನು ತಮಿಳಿಗರು ಮಾತ್ರವಲ್ಲದೆ ಇದು ಪಾನ್ ಇಂಡಿಯಾ ಸಿನಿಮಾ ಆದ ಕಾರಣ ಭಾರತದಾದ್ಯಂತ ಅನೇಕರು ನೋಡಿದ್ದಾರೆ. ಕಳೆದ ವರ್ಷ ಭಾರತದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು ಎಂದು ಹೆಸರಾಗಿದ್ದ ಈ ಸಿನಿಮಾವನ್ನು ಎಲ್ಲರೂ ಒಪ್ಪಿ ಅಪ್ಪಿಕೊಂಡಿದ್ದಾರೆ. ಈ ಸಿನಿಮಾದ ಇತರೆ ಅಂಶಗಳ ಜೊತೆಗೆ ಆ ಸಿನಿಮಾದಲ್ಲಿ ನಾಯಕ ನಟಿ ಆಗಿದ್ದ ಸ್ವತಿಷ್ಠ ಕೃಷ್ಣ (Swathista Krishna) ಕೂಡ ಹೆಸರುವಾಸಿಯಾಗಿದ್ದಾರೆ.

ಇದರಲ್ಲಿ ಕನ್ನಡಿಗರು ಹೆಮ್ಮೆ ಪಡುವಂತ ವಿಷಯ ಕೂಡ ಇದೆ. ಯಾಕೆಂದರೆ ಸ್ವತಿಷ್ಠ ಕೃಷ್ಣ ಅವರು ಮೂಲತಃ ಕನ್ನಡಿಗರು. ಧಾರವಾಡ ಮೂಲಕ ಸ್ವತಿಷ್ಠ ಕೃಷ್ಣ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲು ಕನಸು ಕಟ್ಟಿಕೊಂಡು ಪ್ರಯತ್ನ ಪಡುತ್ತಿದ್ದರು. ವಿಕ್ರಂ ಸಿನಿಮಾದಿಂದ ಇವರಿಗೆ ದೊಡ್ಡ ಬ್ರೇಕ್ ಕೂಡ ಸಿಕ್ಕಿದೆ. ಇದಾದ ಬಳಿಕ ಒಂದಲ್ಲ ಒಂದು ಸಿನಿಮಾಗಳಲ್ಲಿ ಬಿಝಿಯಾಗಿರುವ ಈಕೆ ಈಗ ಕನ್ನಡದ ಕಡೆಗೂ ಕೂಡ ಧಾವಿಸುತ್ತಿದ್ದಾರೆ.

ಸ್ವತಿಷ್ಠ ಕೃಷ್ಣ ಅವರು ದೊಡ್ಮನೆ (Dodmane) ಕಿರಿಯ ರಾಜಕುಮಾರ ವಿನಯ್ ರಾಜಕುಮಾರ್ (Vinay Raj kumar) ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸಿಂಪಲ್ ಸುನಿ (Simple Suni) ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿರುವುದು ಸ್ವತಿಷ್ಠ ಇರುವುದು ಕನ್ಫರ್ಮ್ ಆಗಿದೆ. ಸಿನಿಮಾ ಕಥೆಗೆ ಕನ್ನಡದ ಹುಡುಗಿಯೇ ಬೇಕು ಎಂದು ನಿರ್ದೇಶಕರು ಹುಡುಕುತ್ತಿದ್ದರಂತೆ. ಜೊತೆಗೆ ಈ ಸಿನಿಮಾದಲ್ಲಿ ಅವರಿರುವ ಬಗ್ಗೆ ಸ್ವತಃ ನಿರ್ದೇಶಕರಾದ ಸಿಂಪಲ್ ಸುನಿ ಅವರೇ ಮಾತನಾಡಿದ್ದು‌.

ನನ್ನ ಎಲ್ಲಾ ಸಿನಿಮಾಗಳಲ್ಲೂ ಕೂಡ ಕನ್ನಡದ ಹುಡುಗಿಯೇ ನಾಯಕಿ ಆಗಿರಬೇಕು, ಇದೇ ನನ್ನ ಮೊದಲ ಆದ್ಯತೆ. ನಾನು ಈ ಕಥೆಗೆ ಹುಡುಗಿಯನ್ನು ಹುಡುಕುತ್ತಿದ್ದಾಗ ವಿಕ್ರಂ ಸಿನಿಮಾದ ಸ್ವತಿಷ್ಠ ಕೃಷ್ಣನವರ ಪಾತ್ರ ನೆನಪಾಯಿತು. ಅದರಲ್ಲಿ ಅದ್ಭುತವಾಗಿ ನಟಿಸಿದ್ದಾರೆ ನನ್ನ ಕಥೆಗೂ ಅವರು ಸೂಟ್ ಆಗುತ್ತಾರೆ ಹಾಗಾಗಿ ಆಯ್ದುಕೊಂಡೆ. ಇವರು ಮೂಲತಃ ಉತ್ತರ ಕನ್ನಡದವರು ಆದಕಾರಣ ಅದು ಸಹ ಪ್ಲಸ್ ಪಾಯಿಂಟ್ ಆಯ್ತು ಎಂದು ಹೇಳಿಕೊಂಡಿದ್ದಾರೆ.

ಮೈಸೂರು ರಮೇಶ್ ಅವರು ಹಣ ಹೂಡಿಕೆ ಮಾಡುತ್ತಿರುವ ಈ ಸಿನಿಮಾಗೆ ವೀರ ಸಮರ್ಥ್ ಅವರು ಸಂಗೀತ ನಿರ್ದೇಶಕರಾಗಿದ್ದು ಸಭಾ ಅವರ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಕಥೆ ಬಗ್ಗೆ ಹೇಳುವುದಾದರೆ ಮ್ಯೂಸಿಕ್ ಲವ್ ಸ್ಟೋರಿ ಸಿನಿಮಾವಂತೆ. ಚಿತ್ರದ ಇನ್ನಿತರ ಪಾತ್ರಗಳ ಬಗ್ಗೆ ಇನ್ನೂ ಫೈನಲ್ ಮಾಡಿಲ್ಲ ಸದ್ಯಕ್ಕೆ ನಾಯಕ ನಾಯಕಿ ಫಿಕ್ಸ್ ಮಾಡಿಕೊಂಡಿರುವ ಇವರು ಸದ್ಯದಲ್ಲೇ ಎಲ್ಲವನ್ನು ತಿಳಿಸುವುದಾಗಿ ಹೇಳಿಕೊಂಡಿದ್ದಾರೆ.

ನಿರ್ದೇಶನದಲ್ಲಿ ಜಾದು ಮಾಡಿರುವ ಸಿಂಪಲ್ ಸುನಿ ಮತ್ತು ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳ ಮೂಲಕ ಹಿಟ್ ಆಗಿರುವ ವಿನಯರಾಜಕುಮಾರ್ ಹಾಗೂ ವಿಕ್ರಂ ಸಿನಿಮಾದಿಂದ ದೇಶದಾದ್ಯಂತ ಫೇಮಸ್ ಆಗಿರುವ ಸ್ವತಿಷ್ಠ ಕೃಷ್ಣ ಈ ಮೂರು ಜನರ ಕಾಂಬಿನೇಷನ್ ಸಿನಿಮಾ ನೋಡಲು ಕನ್ನಡಿಗರು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ.

ದಿನ ರಾಜಕುಮಾರ್ ಅವರು ಈ ಹಿಂದೆ ಅಭಿನಯಿಸಿದ್ದ ರನ್ ಆಂಟೋನಿ, ಸಿದ್ದಾರ್ಥ್ ಮತ್ತು ಅನಂತು ವರ್ಸಸ್ ನುಸ್ರತ್ ಈ ಮೂರು ಸಿನಿಮಾ ಕೂಡ ಬಾಕ್ಸ್ ಆಫೀಸ್ ಅಲ್ಲಿ ಒಳ್ಳೆ ಸದ್ದು ಮಾಡಿತ್ತು. ಹಾಡುಗಳು ಕೂಡ ಹಿಟ್ ಆಗಿ ಬಹಳಷ್ಟು ಹೆಂಗಳೆಯರ ಫೇವರೆಟ್ ಆಗಿತ್ತು. ಸ್ವತಿಷ್ಠ ಕೃಷ್ಣ ಅವರು ಸಹ ವಿಕ್ರಮ್ ಗೃ ಮುಂಚೆ ತಮಿಳಿನ ಸವರಕತ್ತಿ ಮತ್ತು ತೆಲುಗಿನ ಗುಂಡೆ ಕಥಾ ವಂಟಾರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಈ ಚಿತ್ರದ ಮೂಲಕ ಕನ್ನಡಕ್ಕೂ ಎಂಟ್ರಿ ಆಗುತ್ತಿದ್ದಾರೆ. ಸದ್ಯಕ್ಕೆ ಸಿನಿಮಾ ಟೈಟಲ್ ನಿಗದಿ ಆಗಿಲ್ಲ ಆದರೆ ಈ ಪ್ರಾಜೆಕ್ಟ್ ಗೆ ಶುಭವಾಗಲಿ ಎಂದು ನಾವೆಲ್ಲರೂ ಹರಸೋಣ.

ಪಠಾಣ್ ಸಿನಿಮಾದಲ್ಲಿ ಆ ಸೀನ್ ನನ್ಗೆ ಸಿಕ್ಕಾಪಟ್ಟೆ ಇಷ್ಟ ಎಂದು ನಿಸ್ಸಕೊಂಚವಾಗಿ ಹೇಳಿದ ದೀಪಿಕಾ ಪಡುಕೋಣೆ. ಈಕೆ ಮಾತು ಕೇಳಿ ಎಲ್ಲರೂ ನಿಬ್ಬೆರಗು.

ದೀಪಿಕಾ ಪಡುಕೋಣೆ (Deepika Padukone) ಅವರು ಮೂಲತಃ ಕನ್ನಡದ ನಟಿ. ಮಂಗಳೂರು ಮೂಲದವರಾದ ಇವರು ಇಂದು ಬಾಲಿವುಡ್ ನ (Bollywood) ನಂಬರ್ ಒನ್ ಹೀರೋಯಿನ್ ಆಗಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು ಮಾಡೆಲ್ ಕ್ಷೇತ್ರವನ್ನು ಆಯ್ದುಕೊಂಡ ಇವರು ಮೊದಲ ಬಾರಿಗೆ ಕನ್ನಡದ ಐಶ್ವರ್ಯ (Aishwarya) ಸಿನಿಮಾದಲ್ಲಿ ಉಪೇಂದ್ರ (Upendra) ಅವರಿಗೆ ಜೋಡಿಯಾಗಿ ಬಣ್ಣ ಹಚ್ಚಿದ್ದರು.

ಇದಾದ ಬಳಿಕ ಯಾವ ಘಳಿಗೆಯಲ್ಲಿ ಅವರ ಅದೃಷ್ಟ ಬದಲಾಯಿತು ಗೊತ್ತಿಲ್ಲ. ಈಕೆ ಅಲ್ಲಿಯೇ ಬದುಕು ಕಟ್ಟಿಕೊಂಡರು. ಬಾಲಿವುಡ್ ಅಂಗಳದಲ್ಲಿ ಬಾರಿ ಸಂಭಾವನೆ ಪಡೆಯುತ್ತಿರುವ ದೀಪಿಕಾ ಪಡುಕೋಣೆ ಅವರು ಅಲ್ಲಿಯ ನಟ ರಣವೀರ್ ಸಿಂಗ್ (Ranaveer Singh) ಅವರನ್ನು ಕೈ ಹಿಡಿದು ಅಲ್ಲಿಯವರೇ ಆಗಿ ಬಿಟ್ಟಿದ್ದಾರೆ. ಬಹುದಿನಗಳ ನಂತರ ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ (Sharukh khan) ಅವರ ಸಿನಿಮಾ ಪಠಾಣ್ ತೆರೆ ಕಂಡಿದೆ.

ಆ ಬಗ್ಗೆ ಮಾತನಾಡಿರುವ ನಟಿ ಏನು ಹೇಳಿದ್ದಾರೆ ಗೊತ್ತಾ? ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅವರದ್ದು ಹಿಂದಿ ಚಿತ್ರರಂಗದ ಯಶಸ್ವಿ ಜೋಡಿ. ಓಂ ಶಾಂತಿ ಓಂ, ಚೆನ್ನೈ ಎಕ್ಸ್ಪ್ರೆಸ್ ಮುಂತಾದ ಸಿನಿಮಾಗಳಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ಇವರಿಬ್ಬರ್ ಸಿನಿಮಾದಲ್ಲಿ ಇದ್ದರೆ ಗೆದ್ದೇ ಗೆಲ್ಲುತ್ತದೆ ಎನ್ನುವ ವಿಶ್ವಾಸ ಹಲವರಿಗೆ ಜೊತೆಗೆ ದೀಪಿಕಾ ಪಡುಕೋಣೆ ಅವರು ಸಹ ಮದುವೆ ಆದ ಮೇಲೆ ಹೆಚ್ಚಾಗಿ ನಟಿಸಿಲ್ಲ.

ಶಾರುಖ್ ಖಾನ್ ಅವರಂತೂ ಅವರ ಜೀರೋ ಸಿನಿಮಾ ಆದಮೇಲೆ ಅತಿ ದೊಡ್ಡ ಗ್ಯಾಪ್ ತೆಗೆದುಕೊಂಡಿದ್ದಾರೆ. ಬರೋಬ್ಬರಿ ನಾಲ್ಕು ವರ್ಷಗಳ ನಂತರ ಸಿನಿಮಾ ಒಂದನ್ನು ಮಾಡಿದ್ದಾರೆ. ಹಾಗಾಗಿ ಪಠಾಣ್ ಸಿನಿಮಾದ ಬಗ್ಗೆ ಜನರಿಗೆ ಬಹಳ ನಿರೀಕ್ಷೆ ಇದೆ. ಅಲ್ಲದೆ ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್ ರಂಗಕ್ಕೆ ಪಠಾಣ್ ಭರವಸೆಯ ಬೆಳಕಿನಂತೆ ಕಂಗೊಳಿಸುತ್ತಿದೆ. ರಿಲೀಸ್ ಆದ ಮೊದಲ ದಿನವೇ ತಕ್ಕ ಮಟ್ಟಿಗೆ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿರುವ ಈ ಚಿತ್ರದ ಬಗ್ಗೆ ನಾಯಕಿ ದೀಪಿಕಾ ಪಡುಕೋಣೆ ಮಾತನಾಡಿದ್ದಾರೆ.

ಪಠಾಣ್ ಎನ್ನುವ ಶಾರುಖ್ ಖಾನ್ ಚಿತ್ರ ತಯಾರಾಗುತ್ತಿದೆ ಎನ್ನುವುದೇ ಯಾರಿಗೂ ತಿಳಿದಿರಲಿಲ್ಲ. ರಹಸ್ಯವಾಗಿ ಚಿತ್ರೀಕರಣ ನಡೆಸಿ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಬೇಕು ಎಂದುಕೊಂಡಿದ್ದ ಚಿತ್ರತಂಡ ಅಂದುಕೊಂಡಂತೆ ಎಲ್ಲವನ್ನು ಮಾಡಿತ್ತು. ಅಂದು ಶಾರುಖ್ ಖಾನ್ ಅವರ ಟ್ವಿಟರ್ ಖಾತೆಯಿಂದ ಪಠಾಣ್ ಚಿತ್ರದ ಮೊದಲ ಹಾಡು ರಿಲೀಸ್ ಆಗುತ್ತಿದೆ ನೋಡಿ ಎಂದು ಟ್ವೀಟ್ ಆಗುವವರೆಗೂ ಹೆಚ್ಚಿನ ಜನರಿಗೆ ಗೊತ್ತೇ ಇರಲಿಲ್ಲ.

ಆದರೆ ಈ ಚಿತ್ರದ ಈ ಹಾಡು ಫೇಮಸ್ ಆಗುವುದರ ಜೊತೆಗೆ ಅಷ್ಟೇ ವಿವಾದವನ್ನು ಹುಟ್ಟು ಹಾಕಿದೆ. ದೇಶದಾದ್ಯಂತ ಬಹಳ ವಿರೋಧ ಈ ಹಾಡಿನ ಕುರಿತು ಕೇಳಿ ಬಂತು. ಹಾಡಿಗಿಂತ ದೀಪಿಕಾ ಪಡುಕೋಣೆ ಅವರು ಆ ಹಾಡಿನಲ್ಲಿ ಧರಿಸಿದ ಉಡುಪಿನ ಬಗ್ಗೆ ಹೆಚ್ಚು ಚರ್ಚೆ ಆಗಿತ್ತು. ಕೇಸರಿ ಬಣ್ಣದ ಬಿಕಿನಿ ತೊಟ್ಟು ಕುಣಿದಿದ್ದ ದೀಪಿಕಾ ಪಡುಕೋಣೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಿಂದೂ ಸಂಘಟನೆಗಳು ಭಾರಿ ಆ.ಕ್ರೋ.ಶ ಹೊರ ಹಾಕಿದ್ದರು.

ಜೊತೆಗೆ ಸಿನಿಮಾವನ್ನು ಬ್ಯಾನ್ ಮಾಡಬೇಕು ಎನ್ನುವ ಹಂತದವರೆಗೂ ಕೂಡ ಹೋಗಿದ್ದರು. ಈಗ ದೀಪಿಕಾ ಪಡುಕೋಣೆ ಅವರಿಗೆ ಅದೇ ಪ್ರಶ್ನೆಯನ್ನು ಎದುರಾಗಿದೆ. ಪಠಾಣ್ ಚಿತ್ರದ ಬೇಷರಾಮ್ ರಂಗ್ (Bedharam Rang) ಹಾಡು ಹಾಗೂ ಜೂಮ್ ಜಾ ಪಠಾಣ್ (joim ja patan) ಎರಡಲಲ್ಲಿ ನಿಮಗೆ ಯಾವುದು ಇಷ್ಟ ಎಂದು ಕೇಳಿದ ಪ್ರಶ್ನೆಗೆ ನನಗೆ ಎರಡು ಹಾಡು ಕೂಡ ವಿಭಿನ್ನ ಬಗೆಯದ್ದು ಎನ್ನುವುದ ಕಾರಣಕ್ಕೆ ಇಷ್ಟವಾಗಿದೆ. ಆದರೆ ಬೇಷರಾಮ್ ರಂಗ್ ಹಾಡಿನ ಶೂಟಿಂಗ್ ಸಮಯದಲ್ಲಿ ಬಹಳ ಎಂಜಾಯ್ ಮಾಡಿದ್ದೇವೆ ಹಾಗಾಗಿ ಅದು ಇನ್ನು ಹೆಚ್ಚಿಗೆ ಇಷ್ಟ ಎಂದು ವಿವಾದಾತ್ಮಕ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ವಸಿಷ್ಠ ಸಿಂಹ ಹರಿಪ್ರಿಯಾ ಜೋಡಿಗೆ ಸ್ಪೆಷಲ್ ಗಿಫ್ಟ್ ತಂದ ವಂಶಿಕಾ. ಏನದು ಗೊತ್ತ.? ಸಿಂಹಪ್ರಿಯಾ ಮದುವೆಯಲ್ಲಿ ವಂಶಿಕಾ ತಂದ ಗೀಫ್ಟ್ ಹೈಲೇಟ್.

 

ಸದ್ಯಕ್ಕೆ ಕನ್ನಡದ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸಿಂಹಪ್ರಿಯ ಜೋಡಿ ಎಂದು ಹೆಸರಾಗಿರುವ ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ (Vasista Simha) ಅವರದ್ದೇ ಸುದ್ದಿ. ನಿಶ್ಚಿತಾರ್ಥ ಆದ ದಿನದಿಂದಲೂ ಕೂಡ ಬಾರಿ ಸುದ್ದಿ ಅಲ್ಲಿರುವ ಇವರು ಬಹುದಿನಗಳ ಪ್ರೀತಿಗೆ ಬೆಲೆ ಕೊಟ್ಟು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಜೋಡಿ ಹಲವು ವರ್ಷಗಳಿಂದಲೇ ಪ್ರೀತಿಯಲ್ಲಿ ಬಿದ್ದಿತ್ತು ಆದರೆ ನಿಶ್ಚಿತಾರ್ಥ ಆಗುವವರೆಗೂ ಸಹ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ.

ಎಂಗೇಜ್ಮೆಂಟ್ ಗೂ ಎರಡು ದಿನದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿದ್ದರು. ಮೊದಲಿಗೆ ಜನ ಇದನ್ನು ಸಿನಿಮಾಕ್ಕೆ ಸಂಬಂಧಪಟ್ಟಿದ್ದು ಎಂದೇ ನೆಗ್ಲೆಟ್ ಮಾಡಿದ್ದರು. ಆದರೆ ಯಾವಾಗ ಸ್ವತಃ ವಸಿಷ್ಠ ಸಿಂಹ ಅವರೇ ಹರಿಪ್ರಿಯ ಅವರಿಗೆ ಮೂಗು ಚುಚ್ಚಿಸುವ ಶಾಸ್ತ್ರ ಮಾಡಿಸಿದರು ಇಲ್ಲೇನೋ ಸಂಥಿಂಗ್ ಇದೆ ಅನುಮಾನ ಎಲ್ಲರು ತಲೆಯಲ್ಲೂ ಓಡಾಡುತ್ತಿತ್ತು.

ಜೊತೆಗೆ ದಿಢೀರ್ ಎಂದು ನಿಶ್ಚಿತಾರ್ಥ ಆಗಿ ಎಲ್ಲರಿಗೂ ಶಾಕ್ ಕೊಟ್ಟರು. ಅಂದಿನಿಂದ ಇವರ ಮದುವೆ ಯಾವಾಗ ಎನ್ನುವ ಕುತೂಹಲ ಶುರು ಆಗಿತ್ತು ಮತ್ತು ಕಳೆದ ಒಂದು ವಾರದಿಂದ ಸಾಕಷ್ಟು ಸೆಲಬ್ರೆಟಿಗಳ ಮನೆಗೆ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಅವರು ಹೋಗಿ ಇಬ್ಬರ ಮದುವೆಗೆ ಇನ್ವಿಟೇಶನ್ ಕೊಟ್ಟು ಆಹ್ವಾನಿಸಿ ಬಂದಿದ್ದರು. ಇದರಲ್ಲಿ ವಿಶೇಷತೆ ಏನೆಂದರೆ ಪ್ರತಿ ಬಾರಿ ಕೂಡ ಪ್ರತಿಯೊಬ್ಬರ ಮನೆಗೆ ಹೋದಾಗಲೂ ಇವರಿಬ್ಬರು ಒಂದೇ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸುಮಲತಾ ಅಂಬರೀಶ್, ರವಿಚಂದ್ರನ್, ಶಿವರಾಜ್ ಕುಮಾರ್ ಇನ್ನು ಮುಂತಾದ ಅನೇಕ ಕಲಾವಿದರಗಳ ಮನೆಗೆ ಹೋಗಿ ಆಹ್ವಾನಿಸಿ ಬಂದಿದ್ದ ಇವರ ಮದುವೆಗೆ ವಿಶೇಷವಾಗಿ ಪುಟ್ಟ ಅತಿಥಿ ಒಬ್ಬರು ಕೂಡ ಬಂದಿದ್ದಾರೆ. ಕಿರುತೆರೆ ಲೋಕದಲ್ಲಿ ತನ್ನದೇ ಆದ ಜಾದು ಸೃಷ್ಟಿಸಿ ಕನ್ನಡಿಗರನ್ನು ಪಟ ಪಟ ಮಾತಿನಿಂದ ಸೆಳೆಯುತ್ತಿರುವ ವಂಶಿಕ ಆನಂದ್ ಈ ಮದುವೆಗೆ ಹೋಗಿದ್ದಾರೆ ಆನಂದ್ ಅವರನ್ನೇ ಮೀರಿಸುವಷ್ಟರ ಮಟ್ಟಿಗೆ ವಂಶಿಕ ಬೆಳೆಯುತ್ತಿದ್ದಾಳೆ.

ಸದ್ಯಕ್ಕೆ ಕನ್ನಡದಲ್ಲಿ ಯಾವ ಸೆಲೆಬ್ರಿಟಿಗೂ ಕೂಡ ಕಡಿಮೆ ಇಲ್ಲದಂತಹ ವಂಶಿಕ ಸಿಂಹ ಪ್ರಿಯ ಜೋಡಿ ಮದುವೆಗೆ ಹೋಗಿ ಹರಸಿದ್ದಾರೆ. ಮಾಸ್ಟರ್ ಆನಂದ್ ಅವರಿಗೂ ಸಹ ಹರಿಪ್ರಿಯ ಹಾಗೂ ವಶಿಷ್ಟ ಸಿಂಹ ಅವರು ಮದುವೆಯ ಕರೆಯೋಲೆ ಕೊಟ್ಟು ಬಂದಿದ್ದರು. ಆ ಕರೆಗೆ ಒಗೊಟ್ಟು ಕುಟುಂಬ ಸಮೇತರಾಗಿ ಆನಂದ್ ಅವರು ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಅವರ ಮದುವೆಗೆ ಬಂದಿದ್ದಾರೆ.

ಕೆಂಪು ಬಣ್ಣದ ಲೆಹಂಗದಲ್ಲಿ ಆನಂದ್ ಪತ್ನಿಯ ಯಶಸ್ವಿನಿ ಕಂಗೊಳಿಸಿದ್ದರೆ ಅದೇ ಕೆಂಪು ಬಣ್ಣದ ಟ್ರಡಿಷನ್ ಹುಡುಗಿಯಲ್ಲೇ ಪುಟ್ಟ ವಂಶಿಕಾ ಕಾಣಿಸಿಕೊಂಡಿದ್ದಾಳೆ ಮತ್ತು ಜೊತೆಗೆ ಕೈಯಲ್ಲಿ ಒಂದು ಉಡುಗೊರೆಯನ್ನು ಸಹ ತಂದು ಮದು ಮಕ್ಕಳ ಕೈಗಿಟ್ಟು ಶುಭಾಶಯಗಳನ್ನು ಕೋರಿದ್ದಾಳೆ ಸಿಂಹ ಪ್ರಿಯ ಜೋಡಿ ಮದುವೆಗೆ ಬಂದಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿತ್ತು. ಜೊತೆಗೆ ಶಿವಣ್ಣ, ಮೈಸೂರಿನ ಶಾಸಕ ಪ್ರತಾಪ್ ಸಿಂಹ ಅವರು ಸಹ ಇವರ ಮದುವೆಗೆ ಹಾಜರಿದ್ದಾರೆ ಎನ್ನುವ ಮಾಹಿತಿ ಬರುತ್ತಿದೆ.

ನೆನ್ನೆಯಿಂದ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಜೋಡಿಯ ಮದುವೆಯ ಎಲ್ಲಾ ಶಾಸ್ತ್ರದ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅರಿಶಿನ ಶಾಸ್ತ್ರ, ತಾಳಿ ಕಟ್ಟುವ ಮುಹೂರ್ತ, ಅರುದಂತಿ ನಕ್ಷತ್ರ ತೋರಿಸುವ ಶಾಸ್ತ್ರ ಮತ್ತು ರಿಸೆಪ್ಶನ್ ಗಳಲ್ಲಿ ಯಾವೆಲ್ಲಾ ಕಲಾವಿದರು ಇದ್ದರು ಎನ್ನುವುದರ ಫೋಟೋಗಳು ಸಹ ಹರಿದಾಡುತ್ತಿವೆ. ಈಗಷ್ಟೇ ಹೊಸ ಬದುಕಿಗೆ ಕಾಲಿಟ್ಟಿರುವ ಇವರ ಬದುಕು ಸುಖಕರವಾಗಿರಲಿ ಎಂದು ನಾವು ಸಹ ಈ ಕಲಾವಿದರಿಗೆ ಹರಿಸೋಣ.

 

ಕ್ರಾಂತಿ 1st ಡೇ ಕಲೆಕ್ಷನ್ ಎಷ್ಟು ಗೊತ್ತ.? ಎಲ್ಲಾ ದಾಖಲೆ ಉಡೀಸ್, ಸಿನಿಮಾ ನೋಡಿದ ಪ್ರೇಕ್ಷಕ ಪ್ರಭುಗಳೇದ್ದೆನು, ಕ್ರಾಂತಿ OTT ಬಿಡುಗಡೆ ಯಾವಾಗ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

(Kranti 1st day collection)ಮೊದಲ ದಿನವೇ ಬಾರಿ ಕಲೆಕ್ಷನ್ ಮಾಡಿದ ಕ್ರಾಂತಿ, ಇದುವರೆಗಿನ ಎಲ್ಲಾ ದಾಖಲೆಗಳು ಉಡೀಸ್, ಕಥೆ ಏನು ಮತ್ತು ಓಟಿಟಿಯಲ್ಲಿ ರಿಲೀಸ್ ಯಾವಾಗ ಎನ್ನುವ ಮಾಹಿತಿ ಇಲ್ಲಿದೆ ನೋಡಿ. ಇಷ್ಟು ದಿನ ದರ್ಶನ್ (Darshan) ಅಭಿಮಾನಿಗಳೆಲ್ಲ ತುದಿಗಾಲಲ್ಲಿ ಕಾಯುತ್ತಿದ್ದ ಸಿನಿಮಾ ಕ್ರಾಂತಿ (Kranti) ಇಂದು ಭರ್ಜರಿಯಾಗಿ ಪ್ರದರ್ಶನಗೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಕ್ರಾಂತಿ ಈ ದಿನ ಬಿಡುಗಡೆ ಆಗಿದ್ದು ಇಷ್ಟು ದಿನ ಇದ್ದ ಜನರ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ.

ಈ ವರ್ಷ ‘ಕ’ ಹೆಸರಿನಿಂದ ಬಿಡುಗಡೆಗೊಂದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿದೆ ಕೆಜಿಎಫ್ 2 (KGF 2) , ಕಾಂತಾರ (Kantara) ಹವಾ ಹೀಗೆ ಮುಂದುವರೆದಿದ್ದು ಕ್ರಾಂತಿ ಸಹ ನಿರೀಕ್ಷೆಗೂ ಮೀರಿ ಓಪನಿಂಗ್ ಪಡೆದುಕೊಂಡಿದೆ. ಈಗ ಎಲ್ಲರೂ ಸಹ ಬಾಕ್ಸಾಫೀಸ್ ಸುಲ್ತಾನನ ಕ್ರಾಂತಿ ಸಿನಿಮಾದ ಮೊದಲನೇ ಕಲೆಕ್ಷನ್ (Collection) ಎಷ್ಟು ಎಂದು ತಲೆಕೆಡಿಸಿಕೊಳ್ಳುತ್ತಿದ್ದು ಅಂಕಿ ಅಂಶಗಳ ಪ್ರಕಾರ ಅದು ಈವರೆಗಿನ ಎಲ್ಲಾ ದಾಖಲೆಗಳನ್ನು ಮುರಿಯುವತ್ತ ಭರದಿಂದ ಸಾಗುತ್ತಿದೆ ಎನ್ನುವುದು ಗೊತ್ತಾಗುತ್ತದೆ.

ಕ್ರಾಂತಿ ಸಿನಿಮಾವು ಕನ್ನಡಿಗರಿಗೆ ಬಹಳ ಹತ್ತಿರವಾಗಿದ್ದು ಸದ್ಯಕ್ಕೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡಿದೆ. ಕ್ರಾಂತಿ ಸಿನಿಮಾದ ಸಾರಾಂಶ ಸರ್ಕಾರಿ ಶಾಲೆಗಳನ್ನು ಉಳಿಸುವ ಕುರಿತದ್ದಾಗಿದೆ ಎಂದು ಈಗಾಗಲೇ ದರ್ಶನ್ ಮತ್ತು ತಂಡ ಸುಳಿವು ಬಿಟ್ಟು ಕೊಟ್ಟಿತ್ತು. ವಿ. ಹರಿಕೃಷ್ಣ (V.Harikrishna) ಅವರ ನಿರ್ದೇಶನ (Direction) ಮತ್ತು ಶೈಲಜನಾಗ್ (Shailaja Nag) ಹಾಗೂ ಬಿ ಸುರೇಶ್ (B.Suresh) ಅವರ ನಿರ್ಮಾಣದಲ್ಲಿ (Production) ತಯಾರಾದ ಈ ಸಿನಿಮಾ ಬಹುತಾರಾಗಣವನ್ನೇ ಹೊಂದಿತ್ತು.

ದರ್ಶನ್, ರಚಿತಾ ರಾಮ್, ನಿಮಿಕಾ ರತ್ನಾಕರ್, ರವಿಚಂದ್ರನ್, ರವಿಶಂಕರ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ನಯನ ಇನ್ನು ಮುಂತಾದ ಅತಿ ದೊಡ್ಡ ತಾರಾ ಬಳಗ ಸಿನಿಮಾದಲ್ಲಿ ಇದೆ. ಎನ್ ಆರ್ ಐ (NRI) ಆಗಿದ್ದ ದರ್ಶನ್ ಬಂದು ಕರ್ನಾಟಕದಲ್ಲಿ ತಾನು ಓದಿದ ಶಾಲೆಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವ ಕಥೆ ಜೊತೆಗೆ ಶಿಕ್ಷಣ ಉದ್ಯಮಿಕರಣವಾಗುತ್ತಿರುವುದರ ಬಗ್ಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಇರುವ ಹುಳುಕುಗಳ ಬಗ್ಗೆ ಬೆಳಕು ಚೆಲ್ಲಿರುವ ಸಿನಿಮಾ ಇದಾಗಿದೆ ಎನ್ನಬಹುದು.

ಜನವರಿ 26 ಅಂದರೆ, ಈ ದಿನ ಬೆಳಗ್ಗೆ ರಿಲೀಸ್ ಆದ ಈ ಸಿನಿಮಾ ಒಂದೇ ದಿನದಲ್ಲಿ 10 ಕೋಟಿ ಕಲೆಕ್ಷನ್ ಗಳಿಸಿದೆ ಎನ್ನುವ ಮಾಹಿತಿಗಳು ಹೊರ ಬೀಳುತ್ತಿವೆ. ಆದರೆ ಶುಕ್ರವಾರ ಬೆಳಗ್ಗೆ ಅಷ್ಟೇ ಇದಕ್ಕೆ ಸ್ಪಷ್ಟತೆ ಅಂಕಿ ಅಂಶಗಳ ಸಮೇತ ಸಿಗಲಿದೆ. ಈಗಾಗಲೇ ನಾಳೆ ಶೋಗಳಿಗೂ ಕೂಡ ಟಿಕೆಟ್ ಬುಕ್ ಆಗಿದ್ದು ಆ ಕಲೆಕ್ಷನ್ 5 ಕೋಟಿ ಇರಲಿದೆ ಎನ್ನುವ ಮಾಹಿತಿ ಇದೆ. ಮತ್ತು ಈ ಭಾನುವಾರದ ಅಂತ್ಯದೊಳಗೆ 30 ರಿಂದ 35 ಕೋಟಿಯನ್ನು ಸಿನಿಮಾ ಗಳಿಸುವ ಸಾಧ್ಯತೆ ಇದೆ.

ಈ ಸಿನಿಮಾದ ಬಜೆಟ್ 25 ಕೋಟಿ ಆಗಿದ್ದು, ಇದಕ್ಕಿಂತ ಹೆಚ್ಚಿನ ಗಳಿಕೆಯನ್ನು ಸಿನಿಮಾ ಮಾಡಿದರೆ ಅದು ಯಶಸ್ವಿ ಸಿನಿಮಾ ಎಂದು ಕರೆಸಿಕೊಳ್ಳುತ್ತದೆ. ಈ ಎಲ್ಲಾ ಮಾಹಿತಿಯಿಂದ ಕ್ರಾಂತಿ ಗೆದ್ದಿದೆ ಎಂದು ಹೇಳುವುದರಲ್ಲಿ ಅನುಮಾನವೇ ಇಲ್ಲ. ಇದರ ನಡುವೆ ಕ್ರಾಂತಿ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗುವುದರ ಬಗ್ಗೆ ಕೂಡ ಮಾತುಕತೆ ಹರಿದಾಡುತ್ತಿವೆ. ಈ ಬಗ್ಗೆ ತಯಾರಕರು ವಿಷಯ ಹಂಚಿಕೊಳ್ಳದೇ ಇದ್ದರು ಸಿನಿಮಾ ಓಟಿಟಿಯಲ್ಲಿ (OTT) ಫೆಬ್ರವರಿ ಅಂತ್ಯದಲ್ಲಿ ರಿಲೀಸ್ ಆಗಬಹುದು ಎಂದು ಅಂದಾಜಿಸಲಾಗಿದೆ.

ಈಗಾಗಲೇ ಹಲವು ಒಟಿಟಿ ಪ್ಲಾಟ್ಫಾರ್ಮ್ ಗಳು ಇರುವುದರಿಂದ ಝೀಫೈ (Zee5) ಅಥವಾ ಸನ್ ನೆಕ್ಸ್ಟ್ (SunNext) ಗೆ ಈ ರೈಟ್ಸ್ ಸಿಗಬಹುದು ಎನ್ನುವ ಸುಳಿವು ಸಿಗುತ್ತಿದೆ. ಇನ್ನು ಈಗಾಗಲೇ ಸಿನಿಮಾ ನೋಡಿದವರು ಸಿನಿಮಾವನ್ನು ಬಹಳ ಹೊಗಳುತ್ತಿದ್ದು, ತಂಡ ಪಟ್ಟ ಶ್ರಮಕ್ಕೆ ಅಷ್ಟೇ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ ಎಂದು ಹೇಳುತ್ತಿದ್ದಾರೆ. ನೀವು ಸಹ ಇನ್ನು ಸಿನಿಮಾ ನೋಡಿಲ್ಲ ಎಂದರೆ ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಕನ್ನಡ ಸಿನಿಮಾಗಳನ್ನು ಬೆಂಬಲಿಸಿ.

ಸೀರೆಯಲ್ಲಿ ಸಖತ್ ಹಾಟ್ ಆಗಿ ಡ್ಯಾನ್ಸ್ ಮಾಡಿದ ನಟಿ ಐಶ್ವರ್ಯ ಅರ್ಜುನ್, ಈಕೆಯ ಮೈಮಾಟಕ್ಕೆ ಮಾರು ಹೋಗದವರೇ ಇಲ್ಲ ಈ ರೊಮ್ಯಾಂಟಿಕ್ ವಿಡಿಯೋ ಒಮ್ಮೆ ನೋಡಿ.

 

ಮೇಘನಾ ರಾಜ್ (Meghana raj) ಅವರು ಮಗು ಆದ ಬಳಿಕ ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ಆದರೆ ಕಿರುತೆರೆಯಲ್ಲಿ ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿದ್ದಾರೆ. ಇವರು ಫೇಸ್ಬುಕ್ (facebook) ಮತ್ತು ಇನ್ಸ್ಟಾಗ್ರಾಮ್ (instagram) ಅಲ್ಲಿಯೂ ಕೂಡ ತಮ್ಮ ಹೊಸ ಹೊಸ ಫೋಟೋ ಶೂಟ್ಗಳು ತಮ್ಮ ಮಗನ ಕುರಿತ ವಿಚಾರಗಳು ಕುಟುಂಬದ ಕುರಿತ ವಿಚಾರಗಳು ಇವೆಲ್ಲವನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಅವರ ಅಫೀಶಿಯಲ್ ಇನ್ಸ್ಟಾಗ್ರಾಮ್ ಖಾತೆಯಿಂದ ವಿಡಿಯೋ ಒಂದು ಅಪ್ಲೋಡ್ ಆಗಿದೆ ಆದರೆ ಆ ವಿಡಿಯೋ ಈ ಬಾರಿ ಚಿರು (Chiru) ಮತ್ತು ರಾಯನ್ (Rayan) ಬಗ್ಗೆ ಅಲ್ಲದೆ ಐಶ್ವರ್ಯ ಸರ್ಜಾ (Aishwarya Sarja) ಅವರ ಕುರಿತಾಗಿದೆ. ಐಶ್ವರ್ಯ ಸರ್ಜಾ ಅವರು ಮಾಡಿದ ರೀಲ್ಸ್ (reels) ಒಂದನ್ನು ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

ಮೇಘನಾ ರಾಜ್ ಅವರು ಚಿರು ಸರ್ಜಾ ಅವರ ಕೈ ಹಿಡಿದ ದಿನದಿಂದ ಅರ್ಜುನ್ ಸರ್ಜಾ (Arjun Sarja) ಕುಟುಂಬದ ಸದಸ್ಯರಾದರು. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ಹಾಗೂ ಮೇಘನಾ ರಾಜ್ ನಡುವೆ ಉತ್ತಮ ಬಾಂಧವ್ಯವಿದ್ದು ಇಬ್ಬರು ಅಕ್ಕತಂಗಿಯರಿಗಿಂತ ಹೆಚ್ಚು ಅನ್ಯೋನ್ಯವಾಗಿರುತ್ತಾರೆ. ಐಶ್ವರ್ಯ ಸರ್ಜಾ ಕನ್ನಡದಲ್ಲಿ ಪ್ರೇಮ ಬರಹ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಮತ್ತು ತೆಲುಗಿನಲ್ಲಿ ಲಾಂಚ್ ಆಗಲು ಕೂಡ ರೆಡಿ ಆಗುತ್ತಿದ್ದಾರೆ.

ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೂಡ ಇವರ ವಿಡಿಯೋಗಳು ವೈರಲಾಗುತ್ತಿರುತ್ತದೆ. ಹೀಗೆ ಕ್ರೇಜಿಸ್ಟಾರ್ ಕ್ರೇಜಿಸ್ಟಾರ್ ಐ ಲವ್ ಯು ದ ವೇ ಯು ಆರ್ ಎಂದು ರೀಲ್ಸ್ ಮಾಡಿರುವುದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಹಾಡು ಮುಗಿಯುವಷ್ಟರಲ್ಲಿ ಆರಕ್ಕಿಂತ ಹೆಚ್ಚು ಬಟ್ಟೆಗಳನ್ನು ಇವರು ಚೇಂಜ್ ಮಾಡಿದ್ದಾರೆ. ಇದು ಸಕ್ಕತ್ ಇಂಟರೆಸ್ಟಿಂಗ್ ಆಗಿರುವುದರಿಂದ ಈ ಇವರ ಈ ಪ್ರತಿಭೆಗೆ ಮತ್ತು ಕ್ರಿಯೇಟಿವಿಟಿಗೆ ಸಾಕಷ್ಟು ಲೈಕ್ಸ್ ಗಳ ಸುರಿ ಮಳೆ ಕೂಡ ಸಿಕ್ಕಿದೆ.

ಅರ್ಜುನ್ ಸರ್ಜಾ ಅವರು ಕನ್ನಡದ ಹೆಸರಾಂತ ನಟ. ಪ್ರತಾಪ್, ಅಳಿಮಯ್ಯ, ಸಿಂಧೂರ ತಿಲಕ ಮುಂತಾದ ಸಿನಿಮಾಗಳ ಹೀರೋ ಆಗಿರುವ 90 ರ ದಶಕದ ಹ್ಯಾಂಡ್ ಸಮ್ ಹೀರೋ. ಆದರೆ ಇವರ ಕಲೆಯನ್ನು ಕನ್ನಡ ಚಿತ್ರರಂಗಕ್ಕಿಂತ ತಮಿಳು ಚಿತ್ರರಂಗವೇ ಹೆಚ್ಚು ಗುರುತಿಸಿತ್ತು ಎಂದು ಹೇಳಬಹುದು. ಕನ್ನಡಕ್ಕಿಂತ ತಮಿಳಿನಲ್ಲೇ ಹೆಚ್ಚು ಅವಕಾಶಗಳನ್ನು ಪಡೆದು ಫೇಮಸ್ ಆಗಿರುವ ಇವರು ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಕೂಡ ನಟಿಸಿದ್ದಾರೆ.

ಹೀಗೆ ಬಹುಭಾಷಾ ಕಲಾವಿದ ಆಗಿರುವ ಅರ್ಜುನ್ ಸರ್ಜಾ ಕನ್ನಡದ ಹಿರಿಯ ನಟ ರಾಜೇಶ್ (Rajesh) ಅವರ ಪುತ್ರಿ ಆಗಿರುವ ಆಶಾ ರಾಣಿಯವರನ್ನು (Asharani) ಮದುವೆ ಆಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಮೊದಲ ಮಗಳೇ ಐಶ್ವರ್ಯ ಸರ್ಜಾ. ಮಗಳು ಐಶ್ವರ್ಯ ಸರ್ಜಾ ಅವರನ್ನು ಅಲ್ಲದೆ ಅವರ ಸಹೋದರಿ ಮಕ್ಕಳಾದ ಚಿರು ಸರ್ಜಾ ಮತ್ತು ಧ್ರುವ ಸರ್ಜಾ ಅವರನ್ನು ಸಹ ಸಿನಿಮಾ ರಂಗಕ್ಕೆ ಕರೆತಂದದ್ದು ಅರ್ಜುನ್ ಸರ್ಜಾ ಅವರೇ.

ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಅವರನ್ನು ತಮ್ಮ ಮಕ್ಕಳಂತೆ ಇವರು ಸಾಕಿದ್ದಾರೆ ಇದನ್ನು ಮತ್ತು ಧ್ರುವ ಮತ್ತು ಚಿರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಚಿರು ಅ-ಗ-ಲಿ-ಕೆ ನಂತರ ಕೂಡ ಅರ್ಜುನ್ ಸರ್ಜಾ ಕುಟುಂಬ ಮತ್ತು ಮೇಘನಾ ಅವರ ನಡುವೆ ಒಳ್ಳೆ ಬಾಂಧವ್ಯವಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಈ ಕುರಿತು ಅಪಪ್ರಚಾರವೇ ನಡೆಯುತ್ತಿದೆ. ಈಗ ಮೇಘನಾ ರಾಜ್ ಅವರು ಡ್ಯಾನ್ಸಿಂಗ್ ಡಾಲ್ (Dancing doll) ಎಂದು ಶೀರ್ಷಿಗೆ ಕೊಟ್ಟು ಐಶ್ವರ್ಯ ಅವರ ಈ ಡ್ಯಾನ್ಸ್ ವಿಡಿಯೋ ಹಂಚಿಕೊಂಡಿರುವುದು ಅವರಿಬ್ಬರ ನಡುವೆ ಇರುವ ಅನ್ಯೋನ್ಯತೆಗೆ ಸಾಕ್ಷಿ ಆಗಿದೆ ಅನ್ನಬಹುದು.

ದಿನೇ ದಿನೇ ವಿರೂಪವಾಗುತ್ತಿರುವ ದರ್ಶನ್ ಮುಖ, ಒಂದು ಕಾಲದಲ್ಲಿ ಸುರದೃಪಿ ಆಗಿದಂತಹ ದರ್ಶನ್ ಮುಖ ಇದ್ದಕ್ಕಿದ್ದ ಹಾಗೇ ಹದಗೆಡಲು ಕಾರಣವೇನು ಗೊತ್ತ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ಪುರದ್ರೂಪಿ ಚೆಲುವ, ಇದೇ ಕಾರಣ ಲೈಟ್ ಬಾಯ್ ಆಗಿದ್ದ ಅವರು ನಾಯಕ ನಟ ಆಗಲು ಸಾಧ್ಯವಾಯಿತು. ಕಟ್ಟು ಮಸ್ತಾದ ದೇಹ ಆಕರ್ಷಣೀಯ ರೂಪ ಇವರನ್ನು ಇಂದು ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ಸ್ಟಾರ್ ಹೀರೋ ಎನ್ನುವ ಪಟ್ಟಕ್ಕೆ ತಂದು ಕೂರಿಸಿದೆ. ಹೀರೋ ಎಂದರೆ ದರ್ಶನ್ ರೀತಿ ಇರಬೇಕು ಎಂದು ಎಷ್ಟೋ ಜನ ಮಾತನಾಡಿಕೊಂಡಿದ್ದಾರೆ.

ಆದರೆ ಇಷ್ಟೆಲ್ಲ ಹೊಗಳಿಸಿಕೊಳ್ಳುತ್ತಿದ್ದ, ಸುರಸುಂದರಾಂಗನಂತೆ ಇದ್ದ ದರ್ಶನ ಅವರ ಮುಖ ಚಹರೆ ಇತ್ತೀಚೆಗೆ ಕ-ಳೆ-ಗುಂ-ದಿ-ದ ರೀತಿ ಕಾಣುತ್ತಿದ್ದೆ. ಅದರಲ್ಲೂ ಕ್ರಾಂತಿ(Kranthi) ಸಿನಿಮಾದಿಂದ ಈಚೆಗೆ ವೈರಲ್ ಆಗುತ್ತಿರುವ ಅವರ ಫೋಟೋಗಳು ಮತ್ತು ವಿಡಿಯೋಗಳಲ್ಲಿ ದರ್ಶನ್ ಅವರು ತೀರ ವಯಸ್ಸಾದವರಂತೆ ಕಾಣುತ್ತಿದ್ದಾರೆ. ಅವರ ಸಾಮಾನ್ಯ ಫೋಟೋಗಳಲ್ಲಿ ಅವರನ್ನು ಹೀರೋ ಎಂದು ಒಪ್ಪಿಕೊಳ್ಳುವುದೇ ಕಷ್ಟ ಎನ್ನುವ ರೀತಿ ಆಗಿದ್ದಾರೆ.

ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಚರ್ಚೆ ಆಗುತ್ತಿದೆ. ತೆರೆ ಮೇಲೆ ಹೀರೋ ಆಗಿ ಮಿಂಚುತ್ತಿರುವ ದರ್ಶನ್ ಅವರ ಮೇಕಪ್ ಇಲ್ಲದ ಫೋಟೋಗಳನ್ನು ನೋಡಿ ಒಂದು ಕಡೆ ಅಭಿಮಾನಿಗಳು ಬಹಳ ಬೇಸರ ಪಟ್ಟು ಕೊಂಡಿದ್ದರೆ ಮತ್ತೊಂದೆಡೆ ಅದೇ ವಿಷಯವನ್ನು ಇಟ್ಟುಕೊಂಡು ಅವರನ್ನು ಟ್ರೋ-ಲ್ ಮಾಡುವ ಕಿ-ಡಿ-ಗೇ-ಡಿಗಳು ಇದ್ದಾರೆ.

ಈಗ ಎಲ್ಲರನ್ನೂ ಕಾಡುತ್ತಿರುವ ಕಟ್ಟೆ ಕಡೆಯ ಪ್ರಶ್ನೆ ಏನೆಂದರೆ ದರ್ಶನ್ ಅವರು ಹೀಗೇಕೆ ಆಗುತ್ತಿದ್ದಾರೆ ಎನ್ನುವುದು. ಕೆಲವು ಮೂಲಗಳ ಪ್ರಕಾರ ಇದಕ್ಕೆ ಕಾರಣ ಏನು ಎಂದರೆ ಇತ್ತೀಚೆಗೆ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯಕ್ಕಾಗಿ ದರ್ಶನ್ ಅವರು ಅನೇಕ ಕಡೆ, ಬಿಡುವಿಲ್ಲದೆ ಸುತ್ತಾಡುತ್ತಿದ್ದಾರೆ ಹೀಗಾಗಿ ಅವರು ಅವರ ಬ್ಯೂಟಿ ಬಗ್ಗೆ ಆಗಲಿ ಡಯಟ್ ಬಗ್ಗೆ ಆಗಲಿ ಸರಿಯಾಗಿ ಸಮಯ ಕೊಡಲು ಆಗುತ್ತಾ ಇಲ್ಲ ಎನ್ನುವುದು ಮತ್ತು ದರ್ಶನ್ ಅವರು ಇತ್ತೀಚೆಗೆ ಸಾಕಷ್ಟು ವಿ-ವಾ-ದಗಳಲ್ಲಿ ಸಿಕ್ಕಿಕೊಂಡಿದ್ದಾರೆ.

ಪದೇಪದೇ ಅವರನ್ನು ಮೀಡಿಯಾಗಳು ಹಾಗೂ ಬೇರೆ ಸ್ಟಾರ್ಗಳ ಅಭಿಮಾನಿಗಳು ಕೆ-ಣ-ಕು-ತ್ತಿ-ರುವುದರಿಂದ ಬೇಸತ್ತು ಹೋಗಿರುವ ದರ್ಶನ್ ಅವರು ಅದೇ ಚಿಂತೆಯಲ್ಲಿ ಈ ರೀತಿ ಆಗಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ದರ್ಶನ್ ಅವರು ಅತಿಯಾಗಿ ವರ್ಕೌಟ್ ಮಾಡುತ್ತಾರೆ. ಈ ರೀತಿ ದೇಹವನ್ನು ಹೆಚ್ಚು ದಂಡಿಸುತ್ತಾ ಇರುವುದೇ ಇದಕ್ಕೆ ಕಾರಣ ಎನ್ನುವುದು ಮತ್ತೆ ಕೆಲವರ ವಾದವಾಗಿದೆ.

ದರ್ಶನ್ ಅವರು ಸಂಕ್ರಾಂತಿ ಹಬ್ಬದ ದಿನದಂದು youtube ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು ಆ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದರು. ಶೂಟಿಂಗ್ ಇಲ್ಲದೆ ಇರುವಾಗ ನಾರ್ಮಲ್ ಆಗಿ ನಾನು ಹೀಗೆ ಇರುತ್ತೇನೆ ನನ್ನನ್ನು ಹೀಗೆ ತೋರಿಸಿಕೊಳ್ಳಲು ಇಷ್ಟ. ಹಾಗಾಗಿ ಮೇಕಪ್ ಇಲ್ಲದೆ ಬ್ರಷ್ ಕೂಡ ಮಾಡದೆ ನಿಮಗೆ ಇಂಟರ್ವ್ಯೂ ಕೊಡುತ್ತಿದ್ದೇನೆ ಎಂದು ಹೇಳಿದ್ದರು.

ಇದರಿಂದ ದರ್ಶನ್ ಅವರು ಇತ್ತೀಚೆಗೆ ಬ್ಯೂಟಿ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಸಿನಿಮಾ ಶೂಟಿಂಗ್ ಇದ್ದಾಗ ಮಾತ್ರ ಪಾತ್ರಕ್ಕೆ ತಕ್ಕ ಹಾಗೆ ಸಿದ್ಧವಾಗುತ್ತಾರೆ. ಅದರಿಂದ ಆಚೆಗೆ ಬಂದ ಮೇಲೆ ತೀರ ಸಹಜವಾಗಿ ಸಾಮಾನ್ಯರಂತೆ ಇರಲು ಬಯಸುತ್ತಾರೆ. ಹೀಗಾಗಿ ವೈರಲ್ ಆಗುತ್ತಿರುವ ಫೋಟೋಗಳಲ್ಲಿ ಮೇಕಪ್ ಇಲ್ಲದೆ ಇರುವುದರಿಂದ ಹಾಗೆ ಕಾಣಿಸುತ್ತಿದ್ದಾರೆ ಎಂದು ಸಹ ಭಾವಿಸಬಹುದಾಗಿದೆ.

ಆದರೆ ಕಿಡಿಗೇಡಿಗಳು ಇವರ ಕುಡಿತದ ಚಟದಿಂದ ಹೀಗಾಗಿದ್ದಾರೆ ಎನ್ನುತ್ತಿದ್ದಾರೆ. ಮತ್ತೊಂದು ಮಾತು ಏನೆಂದರೆ ಅವರ ಫೇಸ್ ಡಲ್ ಆಗಬಹುದು ಮೇಕಪ್ ಕೂಡ ಮಾಸಿ ಹೋಗಬಹುದು ಆದರೆ ವ್ಯಕ್ತಿತ್ವ ನೋಡಿ ಅವರಿಗೆ ಅಭಿಮಾನಿ ಆಗಿರುವ ಕನ್ನಡದ ಕೋಟ್ಯಾಂತರ ಜನರು ಮಾತ್ರ ದರ್ಶನ್ ಅವರು ಹೇಗೆ ಇದ್ದರು ಒಪ್ಪಿಕೊಳ್ಳುತ್ತಾರೆ ಎನ್ನುವುದಂತು ಸತ್ಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಡಿ-ವೋ-ರ್ಸ್ ಪಡೆದು ಏಕಾಂಗಿಯಾಗಿ ಜೀವನ ನಡೆಸಲು ನಿಜವಾದ ಕಾರಣವೇನು ಎಂಬ ವಿಚಾರವನ್ನು ವಿವರಿಸಿದ ನಟಿ ಸೋನು ಗೌಡ. ಇಂಥ ಪರಿಸ್ಥಿತಿ ಯಾವ ನಟಿಗೂ ಬರದಿರಲಿ

ಇಂತಿ ನಿಮ್ಮ ಪ್ರೀತಿಯ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಲಾಂಚ್ ಆಗಿ ಆ ಚಿತ್ರದ ಪ್ರಾರ್ಥನಾ ಪಾತ್ರವಾಗಿ ಎಲ್ಲರ ಗಮನ ಸೆಳೆದಿದ್ದ ನಟಿ ಸೋನು ಗೌಡ ಅವರು ಈಗಲೂ ಸಹ ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಬಹಳ ಬ್ಯುಸಿ ಇರುವ ನಟಿ. ಇವರ ತಂದೆ ರಾಮಕೃಷ್ಣ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಫೇಮಸ್ ಮೇಕಪ್ ಆರ್ಟಿಸ್ಟ್ ಬಣ್ಣ ಹಚ್ಚುವ ಹುಚ್ಚು ಅಪ್ಪನನ್ನು ನೋಡುತ್ತಲೇ ಈಕೆಗೂ ಹತ್ತಿತ್ತು ಹಾಗಾಗಿ ಇವರು ಸಹ ನಟನೆಯ ಕಡೆಯೇ ಗಮನಕೊಟ್ಟರು.

ಹೆಚ್ಚಾಗಿಯೇ ಅತಿ ಪಾತ್ರಗಳಲ್ಲಿ ಹಾಗೂ ಎರಡನೇ ನಾಯಕಿ ಆಗಿ ನಟಿಸಿರುವ ಇವರು ಬಣ್ಣದ ಲೋಕಕ್ಕೆ ಬಂದ ದಿನದಿಂದಲೂ ಕೂಡ ಒಂದಲ್ಲ ಒಂದು ಪ್ರಾಜೆಕ್ಟ್ಗಳಲ್ಲಿ ನಿರತರಾಗಿದ್ದಾರೆ. ಕೆರಿಯರಲ್ಲಿ ಒಂದು ಮಟ್ಟಕ್ಕೆ ಉತ್ತಮ ಹೆಸರನ್ನು ಮಾಡಿರುವ ಸೋನು ಗೌಡ ಅವರ ವೈಯಕ್ತಿಕ ಬದುಕು ಮಾತ್ರ ವಿವಾದದಿಂದ ಕೂಡಿದೆ. ಇಂತಿ ನಿನ್ನ ಪ್ರೀತಿಯ ಸಿನಿಮಾ ಆದ ತಕ್ಷಣವೇ ಸೋನು ಅವರಿಗೆ ವಿವಾಹವಾಗಿತ್ತು.

ಆಗಷ್ಟೇ ನಟಿ ಆಗಿ ಗುರುತಿಸಿಕೊಳ್ಳುತ್ತಿದ್ದ ಇವರು ಮದುವೆ ವಿಷಯ ಹೊರ ಬಿದ್ದರೆ ಚಾನ್ಸ್ ಸಿಗೋದಿಲ್ಲ ಎನ್ನುವ ಕಾರಣಕ್ಕೆ ಅದನ್ನು ಬಹಿರಂಗ ಪಡಿಸಲಿಲ್ಲ. ಹೆಚ್ಚಿನ ಜನಕ್ಕೆ ಸೋನು ಗೌಡ ಅವರಿಗೆ ಮದುವೆ ಆಗಿರುವ ವಿಷಯವೇ ಗೊತ್ತಿರಲಿಲ್ಲ ಯಾಕೆಂದರೆ ಇವರು ಮದುವೆಯನ್ನು ತುಂಬಾ ಸರಳವಾಗಿ ಮಾಡಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಸ್ನೇಹಿತರಷ್ಟೇ ಅವರ ಮದುವೆಗೆ ಹಾಜರಿದ್ದರು ಎಷ್ಟು ತರಾತುರಿಯಲ್ಲಿ ಮದುವೆಯಾದರು ಅಷ್ಟೇ ಬೇಗ ಅವರ ವೈವಾಹಿಕ ಜೀವನ ಕೂಡ ಮುಗಿದು ಹೋಯಿತು.

ನಂತರ ಅವರ ಖಾಸಗಿ ಫೋಟೋಗಳು ವೈರಲ್ ಆದ ಬಗ್ಗೆ ವಿವಾದ ಕೂಡ ಎದ್ದಿತ್ತು. ಸದ್ಯಕ್ಕೆ ಈಗ ಕಹಿ ಘಟನೆಗಳಿಂದ ನಟಿ ಸೋನು ಗೌಡ ಚೇತರಿಸಿಕೊಂಡು ಮತ್ತೆ ಕೆರಿಯರ್ ಕಡೆ ಗಮನ ಕೊಡುತ್ತಿದ್ದಾರೆ. ಆದರೆ ಇದಾಗಿ ವರ್ಷಗಳೇ ಕಳೆದರು ನಟಿಯನ್ನು ಮತ್ತೆ ಕಂಡವರೆಲ್ಲ ಮದುವೆ ಬಗ್ಗೆ ಪ್ರಶ್ನಿಸುತ್ತಾರೆ ಅಥವಾ ಮರು ಮದುವೆ ಯಾವಾಗ ಆಗುತ್ತೀರಾ ಎಂದೇ ಕೇಳುತ್ತಾರೆ. ಇದುವರೆಗೆ ಪ್ರಶ್ನೆಗಳನ್ನು ನಿರ್ಲಕ್ಷಿಸುತ್ತಿದ್ದ ಅವರು ಇದೀಗ ಅದಕ್ಕೆ ಉತ್ತರ ಕೊಡಲು ಶುರು ಮಾಡಿದ್ದಾರೆ.

ಹೀಗೆ ಸಂದರ್ಶನ ಒಂದರಲ್ಲಿ ಮಾತಿಗೆ ಸಿಕ್ಕ ಸೋನು ಗೌಡ ಅವರು ತಮ್ಮ ಮದುವೆ ವಿಚಾರವನ್ನು ಈ ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಹೌದು, ನನಗೆ ಈ ಹಿಂದೆ ಒಂದು ಮದುವೆ ಆಗಿತ್ತು, ಆದರೆ ಆ ಮದುವೆ ಹೆಚ್ಚಿನ ದಿನ ಇರಲಿಲ್ಲ. ಈಗ ನಾನು ವಿ.ಚ್ಛೇ.ದ.ನ ಪಡೆದು ಆ ಸಂಬಂಧದಿಂದ ಹೊರ ಬಂದು ಚೆನ್ನಾಗಿದ್ದೇನೆ. ಮತ್ತೊಂದು ಮದುವೆ ಬಗ್ಗೆ ಎಲ್ಲರೂ ಪ್ರಶ್ನೆ ಮಾಡುತ್ತಾರೆ.

ಆದರೆ ಅದಕ್ಕೆ ನನಗೆ ಸಮಯ ಬೇಕು. ನಾನು ಹೀಗೆಯೇ ಚೆನ್ನಾಗಿದ್ದೇನೆ. ಮಕ್ಕಳು ಚೆನ್ನಾಗಿದ್ದರೆ ನಮ್ಮ ತಂದೆ ತಾಯಿ ಕೂಡ ನಮ್ಮನ್ನು ನೋಡಿಕೊಂಡು ಸಂತೋಷವಾಗಿರುತ್ತಾರೆ. ಜೀವನದಲ್ಲಿ ಏನೇ ಆದರೂ ಸಂತೋಷವಾಗಿರಬೇಕು. ಈಗ ನಾನು ಏಕಾಂಗಿ ಆಗಿಯೇ ಲೈಫ್ ಅನ್ನು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದೇನೆ. ಜೊತೆಗೆ ಕೆರಿಯರ್ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದೇನೆ ಸದ್ಯಕ್ಕಂತೂ ಮದುವೆ ಮಾತು ಇಲ್ಲ ಎಂದಿದ್ದಾರೆ.

ಇತ್ತೀಚೆಗೆ ಸೋನು ಗೌಡ ಅವರು ಕಿರುತೆರೆ ಲೋಕದಲ್ಲೂ ಮಿಂಚಿದ್ದಾರೆ ಝೀ ಕನ್ನಡ ವಾಹಿನಿಯ ನಂಬರ್ ಒನ್ ಸೀರಿಯಲ್ ಆದ ಜೊತೆಯಲ್ಲಿ ಧಾರಾವಾಹಿಯಲ್ಲಿ ರಾಜನಂದಿನಿ ಆಗಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಪ್ರೀತಿ ಗಳಿಸಿದ್ದಾರೆ.

ನಮಾಜ್ ಮಾಡಿ ಕ್ರಾಂತಿ ಸಿನಿಮಾ ಬಿಡುಗಡೆಗೆ ಯಾವುದೇ ತೊಂದರೆ ಬರದಿರಲಿ ಎಂದು ಬೇಡಿಕೊಂಡ ಕುರುಕ್ಷೇತ್ರ ಸಿನಿಮಾದ ಭೀಮಾ ಪಾತ್ರದಾರಿಯ ಬಾಲಿವುಡ್ ನಟ ಡ್ಯಾನೀಶ್ ಅಕ್ತರ್ ಸೈಫಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ (Kranthi) ನಾಳೆ ಬಿಡುಗಡೆ ಆಗುತ್ತಿದೆ. ಬಾಕ್ಸ್ ಆಫೀಸ್ (Box office) ಉಡೀಸ್ ಮಾಡಲು ಇಷ್ಟು ದಿನ ಅವರ ಅಭಿಮಾನಿಗಳೆಲ್ಲಾ ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಈ ಸಿನಿಮಾವು ಸಾಕಷ್ಟು ವಿವಾದಗಳು ಮತ್ತು ಬಂದ ಎಲ್ಲಾ ಅಡೆ ತಡೆಗಳೆಲ್ಲವನ್ನು ಮೀರಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.

ನಾಳೆಯಿಂದ ಕರ್ನಾಟಕದಲ್ಲಿ ಕ್ರಾಂತಿಯೋತ್ಸವ ಬಾರಿ ಜೋರಾಗಿ ನಡೆಯಲಿದ್ದು ದರ್ಶನ್ ಅಭಿಮಾನಿಗಳು ಇದಕ್ಕಾಗಿ ಈಗಾಗಲೇ ಸಜ್ಜಾಗಿದ್ದಾರೆ. ಒಂದು ಕಡೆ ಕ್ರಾಂತಿ ಸಿನಿಮಾಗೆ ದರ್ಶನ್ ಅಭಿಮಾನಿಗಳಿಂದ ಕ್ರಾಂತಿ ಸಿನಿಮಾ ಸೆಟ್ಟೇರಿದ ದಿನದಿಂದಲೂ ಕೂಡ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುವ ಕೆಲಸ ನಡೆಯುತ್ತಲೇ ಇದೆ. ಇನ್ನು ಬಿಡುಗಡೆ ದಿನ ಹತ್ತಿರ ಬರುತ್ತಿದ್ದ ಹಾಗೆ ಅದು ಇನ್ನು ಹೆಚ್ಚಾಗಿದ್ದು ಈಗ ಸಲೆಬ್ರೆಟಿಗಳು ಕೂಡ ದರ್ಶನ್ ಅಭಿಮಾನಿಗಳ ಜೊತೆ ಕ್ರಾಂತಿ ಸಿನಿಮಾದ ಪ್ರಚಾರಕ್ಕೆ ಇಳಿದಿದ್ದಾರೆ.

ದರ್ಶನ್ ಮತ್ತು ಕ್ರಾಂತಿ ಸಿನಿಮಾದ ಇಡೀ ತಂಡ ಈಗಾಗಲೇ ಎರಡು ತಿಂಗಳಿಂದ ಸತತವಾಗಿ ಸಂದರ್ಶನಗಳನ್ನು ಕೊಡುವ ಮೂಲಕ ಕ್ರಾಂತಿ ಸಿನಿಮಾದ ಕ್ರಾಂತಿಯ ವಿಚಾರ ವಿಷಯ ಮತ್ತಿತರ ವಿಷಯಗಳನ್ನೆಲ್ಲಾ ಹೇಳಿ ಯಾಕೆ ಈ ಸಿನಿಮಾ ನೋಡಬೇಕು ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದೆ. ಮತ್ತು ಸಿನಿಮಾದ ಟ್ರೈಲರ್ ಟೀಸರ್ ಮತ್ತು ಹಾಡುಗಳನ್ನು ಕೂಡ ಹಿಂದೆಂದಿಗಿಂತ ಈ ಬಾರಿ ತುಂಬಾ ವಿಶೇಷವಾಗಿ ಬಿಡುಗಡೆ ಮಾಡುವ ಮೂಲಕ ಅದರಿಂದಲೂ ಸಹ ಸಾಧ್ಯವಾದಷ್ಟು ಕ್ರಾಂತಿ ಸಿನಿಮಾಗೆ ಪ್ರಚಾರ ಮಾಡಲು ಪ್ರಯತ್ನ ಪಟ್ಟಿದೆ.

ಇಷ್ಟು ದಿನದ ಎಲ್ಲಾ ಶ್ರಮಕ್ಕೂ ಫಲಿತಾಂಶ ನಾಳೆಯೇ ಹೊರ ಬೀಳಲಿದ್ದು, ಸಿನಿಮಾ ಈವರೆಗಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುವ ಲಕ್ಷಣವನ್ನು ಈಗಾಗಲೇ ತೋರುತ್ತಿದೆ. ಬಲವಾದ ಮೂಲಗಳ ಪ್ರಕಾರ ಈಗಾಗಲೇ ಬಹುತೇಕ ಕಡೆ ಫಸ್ಟ್ ಶೋ ಟಿಕೆಟ್ ಎಲ್ಲಾ ಫುಲ್ ಆಗಿದ್ದು ಮುಂದಿನ ಶೋಗಳಿಗೂ ಈಗಾಗಲೇ ಬುಕ್ ಆಗಿವೆ. ಈಗ ಬೀಟ್ ಟೌನ್ ನಟರೊಬ್ಬರು (Bollywood actor) ದರ್ಶನ್ ಅವರ ಸಿನಿಮಾಗೆ ವಿಶೇಷ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ.

ಕುರುಕ್ಷೇತ್ರ (Kurukshethra) ಸಿನಿಮಾದಲ್ಲಿ ದರ್ಶನ್ ಅವರಿಗೆ ಎದುರಾಳಿಯಾಗಿ ಭೀಮ ಪಾತ್ರದಲ್ಲಿ ನಟಿಸಿದ್ದ ಡ್ಯಾನೀಶ್ ಅಕ್ತರ್ ಸೈಫಿ (Danish Akthar saifi) ಎನ್ನುವ ನಟನು ತನ್ನ ನೆಚ್ಚಿನ ತಾರೆ ಡಿ ಬಾಸ್ ಗಾಗಿ ಕ್ರಾಂತಿ ಸಿನಿಮಾದ ಪ್ರಚಾರ ಮಾಡಿದ್ದಾರೆ. ನಮಾಜ್ ಮಾಡುತ್ತಾ ವಿಡಿಯೋ ಒಂದನ್ನು ಮಾಡಿ ಕ್ರಾಂತಿ ಸಿನಿಮಾವನ್ನು ಎಲ್ಲರೂ ನೋಡಿ ಜನವರಿ 26ರಂದು ಬಿಡುಗಡೆ ಆಗುತ್ತಿದೆ. ನಾನು ಕೂಡ ದರ್ಶನ್ ಅವರ ಒಬ್ಬ ಅಪ್ಪಟ ಅಭಿಮಾನಿ.

ಅಲ್ಲಾ ದೇವರು ದರ್ಶನ್ ಅವರಿಗೆ ಒಳ್ಳೆಯದು ಮಾಡಲಿ, ಬಾಕ್ಸ್ ಆಫೀಸ್ ಅಲ್ಲಿ ಕ್ರಾಂತಿ ಸಿನಿಮಾವು ಒಳ್ಳೆ ಕಲೆಕ್ಷನ್ ಮಾಡುತ್ತದೆ ಎನ್ನುವ ನಿರೀಕ್ಷೆ ಇದೆ ಅದರ ಮೇಲೂ ದೇವರ ಆಶೀರ್ವಾದ ಇರಲಿ ದರ್ಶನ್ ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದಾರೆ ಮತ್ತು ಅವರ ಟ್ವಿಟರ್ (Twitter) ಖಾತೆಗೆ ಕ್ರಾಂತಿ ಸಿನಿಮಾದ ಪೋಸ್ಟರ್ ಡಿಪಿ ಆಗಿ ಹಾಕಿಕೊಂಡಿದ್ದಾರೆ.

ದರ್ಶನ್ ಎಂದರೆ ಹಾಗೆ ದರ್ಶನ್ ಅವರ ಬಳಿ ಯಾರಾದರೂ ಒಮ್ಮೆ ಮಾತನಾಡಿದರೆ ಸಾಕು ಅವರ ಮಗು ಹೃದಯ ಎಂತಹದ್ದು ಎಂದು ಎಲ್ಲರಿಗೂ ತಿಳಿಯುತ್ತದೆ ಮತ್ತು ಈಗಾಗಲೇ ದರ್ಶನ್ ಅವರ ಜೊತೆ ಅಭಿನಯಿಸಿರುವ ಎಷ್ಟೋ ನಟರುಗಳು ಅವರ ಗುಣಕ್ಕೆ ಕರಗಿ ಆತ್ಮೀಯರಾಗಿದ್ದಾರೆ. ಇದೇ ಕಾರಣಕ್ಕಾಗಿ ದರ್ಶನ್ ಅವರನ್ನು ಡಿ ಬಾಸ್ ಎಂದು ಕರೆಯುವುದು ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಎಂದರೆ ಅದು ಅಭಿಮಾನಿಗಳ ಪ್ರೀತಿಯ ದಚ್ಚು. ಕ್ರಾಂತಿ ಸಿನಿಮಾ ಬಿಡುಗಡೆ ಆಗಿ ಎಲ್ಲರ ನಿರೀಕ್ಷೆಗೂ ಮೀರಿ ಸಕ್ಸಸ್ ಕಾಣಲಿ ಎಂದು ಕನ್ನಡಿಗರಾಗಿ ನಾವು ಹರಸೋಣ.

 

Haripriya Vasista Simha: ನಟಿ ಹರಿಪ್ರಿಯಾ & ನಟ ವಸಿಷ್ಠ ಸಿಂಹ ಮದುವೆಯ ಅರಶಿಣ ಶಾಸ್ತ್ರದ ಕ್ಯೂಟ್ ವಿಡಿಯೋ. ಈ ಜೋಡಿ ನೋಡಲು ಎರಡು ಕಣ್ಣು ಸಾಲದು ಮದುವೆ ಸಂಭ್ರಮ ಹೇಗೆ ನೆಡೆಯುತ್ತಿದೆ ನೋಡಿ.

ಅರಿಶಿಣ ಶಾಸ್ತ್ರದ ಫೋಟೋಸ್ ಹಂಚಿಕೊಂಡ ಸಿಂಹಪ್ರಿಯ ಜೋಡಿ. ಕಳೆದ ಒಂದು ವರ್ಷದಿಂದ ಸಾಕಷ್ಟು ಸೆಲೆಬ್ರಿಟಿಗಳು (Celebrates) ಮದುವೆ ಬಂಧನಕ್ಕೆ (Marriage) ಒಳಗಾಗುತ್ತಿದ್ದಾರೆ. ಕಳೆದ ವರ್ಷವೇ ಹಲವಾರು ಮಂದಿ ಎಂಗೇಜ್ಮೆಂಟ್ (Engagement) ಮಾಡಿಕೊಂಡು ಮದುವೆಯ ಆಗಿದ್ದರೆ, ವರ್ಷಾಂತದಲ್ಲಿ ನಿಶ್ಚಿತಾರ್ಥ ಮಾಡಿಕೊಂಡವರು ಈ ವರ್ಷದ ಆರಂಭದಲ್ಲೇ ಮದುವೆ ಆಗವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈಗ ವರ್ಷದ ಮೊದಲ ಸೆಲಬ್ರೆಟಿ ಜೋಡಿ ಆಗಿ ಹರಿಪ್ರಿಯ (Haripriya) ಮತ್ತು ವಸಿಷ್ಠ ಸಿಂಹ (Vasista Simha) ಅವರು ಮದುವೆ ಆಗುತ್ತಿದ್ದಾರೆ. ನವಂಬರ್ ತಿಂಗಳ ಅಂತ್ಯದಲ್ಲಿಯೇ ಇವರಿಬ್ಬರ ನಿಶ್ಚಿತಾರ್ಥ ಕೂಡ ಆಗಿತ್ತು, ಆದರೆ ಇವರಿಬ್ಬರು ವರ್ಷದ ಹಿಂದೆ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನುವ ಗುಟ್ಟನ್ನು ಎಲ್ಲೂ ಬಿಟ್ಟು ಕೊಟ್ಟಿರಲಿಲ್ಲ. ತಮ್ಮ ಪ್ರೀತಿ ವಿಷಯವನ್ನು ರಹಸ್ಯವಾಗಿಯೇ ಇಟ್ಟುಕೊಂಡಿದ್ದ ಇಬ್ಬರೂ ಎಂಗೇಜ್ಮೆಂಟ್ ಆಗುವ ಕೆಲ ದಿನಗಳ ಹಿಂದಷ್ಟೇ ಅದನ್ನು ಹಂಚಿಕೊಂಡಿದ್ದಾರೆ.

ಇಬ್ಬರು ಒಟ್ಟಿಗೆ ಸಮಯ ಕಳೆಯುತ್ತಿದ್ದ ಫೋಟೋಗಳು ಹಾಗೂ ವಿಡಿಯೋಗಳನ್ನು ಇಬ್ಬರು ಸಹ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಮೊದಮೊದಲಿಗೆ ಯಾವುದೋ ಸಿನಿಮಾದ ಶೂಟಿಂಗ್ ಇರಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ದಿಢೀರ್ ಎಂದು ನಿಶ್ಚಿತಾರ್ಥ ಆಗುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದರು. ನಾಯಿಮರಿಕೊಟ್ಟು ವಸಿಷ್ಠ ಸಿಂಹ ಅವರು ಪ್ರೀತಿಯ ಪ್ರಪೋಸ್ (love propose) ಮಾಡಿದ ವಿಷಯವನ್ನು ಅದೇ ನಾಯಿಮರಿ ಜೊತೆ ವಿಡಿಯೋ ಮಾಡಿ ಹರಿಪ್ರಿಯಾ ಹರಿಬಿಟ್ಟಿದ್ದರು.

ಆ ಬಳಿಕ ಎಲ್ಲರಿಗೂ ದೃಢಪಟ್ಟಿತ್ತು ಇವರಿಬ್ಬರು ಪ್ರೀತಿಸಿ ಜೋಡಿಯಾಗುತ್ತಿದ್ದಾರೆ ಎಂದು. ಇದಾದ ಬಳಿಕ ಪ್ರತಿದಿನ ಕೂಡ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರ ಜೋಡಿ ಬಗ್ಗೆ ಸಾಕಷ್ಟು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇವೆ. ಕಳೆದ ಒಂದು ವಾರದಿಂದ ಇಬ್ಬರು ಜೋಡಿಯಾಗಿ ಒಂದೇ ರೀತಿಯ ಒಂದೇ ಬಣ್ಣದ ಉಡುಗೆ ತೊಟ್ಟು ಸಾಕಷ್ಟು ಸೆಲೆಬ್ರೆಟಿಗಳ ಮನೆಗೆ ಹೋಗಿ ಸಿಂಹಪ್ರಿಯ ಮದುವೆಗೆ ಆಹ್ವಾನ ಪತ್ರಿಕೆಯನ್ನು ಕೊಟ್ಟು ಬಂದಿದ್ದಾರೆ.

ಶಿವರಾಜಕುಮಾರ್, ರವಿಚಂದ್ರನ್, ಸುಮಲತಾ ಅಂಬರೀಶ್, ಸುದೀಪ್ ಇನ್ನು ಸಾಕಷ್ಟು ತಾರೆಗಳ ಮನೆಗೆ ಇಬ್ಬರು ಒಟ್ಟೊಟ್ಟಿಗೆ ಹೋಗಿ ಮದುವೆ ಓಲೆ (Marriage Invitation) ಹಂಚಿ ಬಂದಿದ್ದ ಫೋಟೋಗಳನ್ನು ಕೂಡ ಶೇರ್ ಮಾಡಿದ್ದರು. ಈ ದಿನ ಅವರ ಅರಿಶಿಣ ಶಾಸ್ತ್ರ ( Yellow ceremony) ನಡೆದಿದೆ, ಅರಿಶಿನ ಶಾಸ್ತ್ರದ ಫೋಟೋಗಳನ್ನು ಕೂಡ ಇಬ್ಬರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುತ್ತಲೂ ಅರಿಶಿನದ ಹೂ ಮತ್ತು ಹಳದಿ ವಸ್ತುಗಳಿಂದ ಅಲಂಕೃತವಾದ ಸೆಟ್ಟಿನಲ್ಲಿ ಬಿಳಿ ಬಟ್ಟೆಯಲ್ಲಿ ರಾಜಕುಮಾರ ಹಾಗೂ ರಾಜಕುಮಾರಿಯಂತೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ಕಂಗೊಳಿಸುತ್ತಿದ್ದಾರೆ.

ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಎಂದೂ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ ಆದರೆ ಇವರಿಬ್ಬರ ನಡುವೆ ಪ್ರೀತಿ ಮೂಡಿದೆ ಎನ್ನುವುದೇ ತುಂಬಾ ಕುತೂಹಲದ ವಿಚಾರ. ಇನ್ನು ಹೇಳಬೇಕು ಎಂದರೆ ವಸಿಷ್ಠ ಸಿಂಹ ಅವರಿಗಿಂತ ಮುಂಚೆಯೇ ಹರಿಪ್ರಿಯಾ ಅವರು ತಮ್ಮ ಕೆರಿಯರ್ ಶುರು ಮಾಡಿದ್ದರು. ಆದರೂ ಹರಿಪ್ರಿಯಾ ಅವರ ಗುಣಕ್ಕೆ ಮನಸೋತು, ಹರಿಪ್ರಿಯಾ ಅವರಿಗೆ ಪ್ರೀತಿಗೆ ಬಿದ್ದು ಅವರ ಮನ ಒಲಿಸಿ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ ಸಿಂಹ. ಈಗ ಇವರು ಕರ್ನಾಟಕದಲ್ಲಿ ಸಿಂಹ ಪ್ರಿಯ ಜೋಡಿ ಎಂದೇ ಹೆಸರಾಗುತ್ತಿದ್ದಾರೆ.

ನಮ್ಮಲ್ಲಿ ವಿಷ್ಣುವರ್ಧನ್ ಅವರ ಕಾಲದಿಂದ ಹಿಡಿದು ಈಗಿನ ಯಶ್ ಅವರವರೆಗೂ ಸಾಕಷ್ಟು ತಾರೆಗಳು ತಮ್ಮ ರಂಗದಲ್ಲಿರುವ ಆಯ್ದುಕೊಂಡು ಸಂಗಾತಿ ಮಾಡಿಕೊಂಡಿದ್ದಾರ ಮತ್ತು ಸಾಕಷ್ಟು ವರ್ಷಗಳವರೆಗೆ ಸುಖೀ ದಾಂಪತ್ಯವನ್ನು ನಡೆಸಿದ್ದಾರೆ. ಈಗ ಹೊಸ ಬದುಕಿನ ಹೊಸಿಲಲ್ಲಿ ನಿಂತಿರುವ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಕೂಡ ಅವರಂತೆ ಮಾದರಿ ಜೋಡಿಗಳಾಗಿ ನೂರು ಕಾಲ ಜೊತೆಯಾಗಿ ಸುಖವಾಗಿ ಬಾಳಲಿ ಎಂದು ಹರಸೋಣ.

ಎಲ್ರೂ ಐ ಸ್ಟಾಂಡ್ ವಿತ್ ದರ್ಶನ್ ಅಂತಾರೆ, ಅಪ್ಪು ಏನ್ ತಪ್ಪು ಮಾಡಿದ್ರು.? ಒಬ್ಬರಾದ್ರು ಐ ಸ್ಟಾಂಡ್ ವಿತ್ ಅಪ್ಪು ಅನ್ಲಿಲ್ವಲ್ಲ ಎಂದು ರೊಚ್ಚಿಗೆದ್ದ ನಟ ಪ್ರಥಮ್.

 

ಒಳ್ಳೆ ಹುಡುಗ (Olle hudga) ಎಂದು ಹೆಸರು ತೆಗೆದುಕೊಂಡು ಈಗ ಕರ್ನಾಟಕದ ಅಳಿಯ (Karnatakada Aliya) ಆಗಲು ಹೊರಟಿರುವ ಪ್ರಥಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿ ಇದ್ದಾರೆ. ಸಿನಿಮಾ ಇಂಡಸ್ಟ್ರಿ ಬಗ್ಗೆ ವಿಪರೀತ ಆಸಕ್ತಿ ಹೊಂದಿರುವ ಇವರು ಇಲ್ಲಿನ ಎಲ್ಲಾ ನಟರುಗಳ ವಿಚಾರಗಳನ್ನು ಕೂಡ ತಿಳಿದುಕೊಂಡಿರುತ್ತಾರೆ. ಹಾಗಾಗಿ ಯಾವುದಾದರೂ ವಿವಾದ ಆದ ತಕ್ಷಣ ಅದರ ಬಗ್ಗೆ ಮಾತಿಗೆ ಇಳಿಯುತ್ತಾರೆ.

ಆದರೆ ಈಗ ದರ್ಶನ್ ಅವರ ಮೇಲೆ ಆದ ಚಪ್ಪಲಿ ಎಸೆತದ ವಿಷಯದ ಕುರಿತು ಅವರು ಯಾವುದೇ ಪೋಸ್ಟ್ ಹಾಕಿಲ್ಲ. ಎಲ್ಲಾ ಸೆಲೆಬ್ರಿಟಿಗಳು ಕೂಡ ಐ ಸ್ಟಾಂಡ್ ವಿತ್ ದರ್ಶನ್ ( I stand with Darshan) ಎಂದು ತಮ್ಮ ನಿಲುವನ್ನು ತಿಳಿಸುತ್ತಿದ್ದರೂ ಪ್ರಥಮ ಅವರ ಕಡೆಯಿಂದ ಒಂದೇ ಒಂದು ಮಾತು ಕೂಡ ಬಂದಿಲ್ಲ. ಅದರ ಬಗ್ಗೆ ನಟಭಯಕರ (Nata Bhayankara) ಸಿನಿಮಾದ ಸಂದರ್ಶನದಲ್ಲಿ ಪ್ರಥಮ್ ಅವರನ್ನು ಪ್ರಶ್ನಿಸಲಾಗಿದೆ.

ಈ ಪ್ರಶ್ನೆಗೆ ಪ್ರಥಮ್ ಕೊಟ್ಟ ಸ್ಪಷ್ಟನೆ ಈ ರೀತಿ ಇತ್ತು ಐ ಸ್ಟಾಂಡ್ ವಿತ್ ದರ್ಶನ್ ಎಂದು ನಾನು ಯಾಕೆ ಹಾಕಿಲ್ಲ ಎಂದರೆ ಅದನ್ನು ತಮಾಷೆಯಾಗಿ ಹೇಳಬಹುದು. ನಾನು ನಿಲ್ಲಲು ಇಷ್ಟಪಡುವುದಿಲ್ಲ ಯಾಕೆಂದರೆ ಓಡಾಡಿ ಸುಸ್ತಾಗಿದೆ ಕಾಲು ನೋವು ಬರುತ್ತದೆ. ಅದಕ್ಕಾಗಿ ಐಸ್ ಸಿಟ್ ವಿತ್ ದರ್ಶನ್ ಅಷ್ಟೇ. ಆದರೆ ಸೀರಿಯಸ್ ಆಗಿ ಹೇಳುವುದಾದರೆ ಅಂದು ಆದ ಇನ್ಸಿಡೆಂಟ್ ಬಗ್ಗೆ ನಾನು ಕೂಡ ಕಡಾ ಖಂಡಿತವಾಗಿ ಖಂಡಿಸುತ್ತೇನೆ.

ಯಾವೊಬ್ಬ ಕಲಾವಿದನಿಗೂ ಕೂಡ ಈ ರೀತಿ ಮಾಡಬಾರದು. ದರ್ಶನ್ ಅವರ ಕುಟುಂಬವೇ ಕಳೆದ 50 ವರ್ಷಗಳಿಂದ ಕನ್ನಡಿಗನನ್ನು ಸಂತೋಷಪಡಿಸುವುದಕ್ಕಾಗಿ ಸಿನಿಮಾ ರಂಗದಲ್ಲಿ ಇದೆ. ಈ ರೀತಿ ಚಪ್ಪಲಿ ಎಸೆಯುವುದು ಜನಗಳಿಗೆ ಮೋಸ ಮಾಡುವವರು, ಕೊಲೆ ಮಾಡುವವರು, ಹೆಣ್ಣುಮಕ್ಕಳಿಗೆ ತೊಂದರೆ ಕೊಡುವವರು ಇಂಥವರಿಗೆ ಮಾತ್ರ. ಅಂಥ ತಪ್ಪೇನು ದರ್ಶನ್ ಅವರು ಮಾಡಿಲ್ಲವಲ್ಲ.

ದರ್ಶನ್ ಅವರ ತಪ್ಪು ಏನು ಎಂದರೆ ಅವರು ಇದ್ದದ್ದನ್ನು ಇದ್ದ ಹಾಗೆ ನೇರವಾಗಿ ಹೇಳಿಬಿಡುತ್ತಾರೆ. ಅವರಿಗೆ ಇಷ್ಟವಾಗದ ವಿಷಯವನ್ನು ನೇರವಾಗಿ ಹೇಳುತ್ತಾರೆ. ಅದು ಒಳ್ಳೆಯದೇ ಅಲ್ವಾ ಮನಸ್ಸಿನಲ್ಲಿ ಇಟ್ಟುಕೊಂಡು ಮೇಲ್ಗಡೆ ಒಳ್ಳೆಯವರಾಗಿ ತೋರಿಸಿಕೊಳ್ಳುವವರ ನಡುವೆ ದರ್ಶನ್ ಬೇರೆ ರೀತಿ ಅನಿಸುತ್ತಿರಬಹುದು. ಅದು ಬಿಟ್ಟರೆ ದರ್ಶನ್ ಅವರಲ್ಲಿ ಒಂದೇ ಒಂದು ಕೆಟ್ಟ ಗುಣ ಕೂಡ ಇಲ್ಲ.

ಮತ್ತೊಂದು ವಿಷಯವೇನೆಂದರೆ ಎಲ್ಲರೂ ದರ್ಶನ್ ಪರವಾಗಿ ನಿಲ್ಲುತ್ತೇನೆ ಎಂದು ಹೇಳುತ್ತಿದ್ದಾರಲ್ಲ ಹಾಗಾದರೆ ಪುನೀತ್ (Puneeth) ಅವರ ತಪ್ಪು ಈ ವಿಷಯದಲ್ಲಿ ಏನಿದೆ. ಸುಖಾ ಸುಮ್ಮನೆ ಎಲ್ಲರೂ ಅಣ್ಣಾವ್ರ ಕುಟುಂಬದ ಹೆಸರು ಹಾಗೂ ಪುನೀತ್ ಅವರ ಹೆಸರನ್ನು ತೆಗೆಯುತ್ತಿದ್ದಾರೆ. ಆ ಮನುಷ್ಯ ಸತ್ತು ಒಂದು ಕಾಲು ವರ್ಷ ಆಗಿದೆ ಒಂದು ಕಾಲು ವರ್ಷದಿಂದ ಅವರೇನಾದರೂ ಬಂದು ಈ ರೀತಿ ಮಾಡಿ ಎಂದು ಹೇಳಿ ಹೋಗಿದ್ದರಾ.?

ನಾವೇನು ಮಾಡುತ್ತೇವೆ ಅಂದರೆ ಯಾವ ವಿಷಯಕ್ಕೆ ಪ್ರಚಾರ ಹೆಚ್ಚಿಸಿ ಸಿಗುತ್ತದೆ ಅದರ ಹಿಂದೆ ಹೋಗುತ್ತಿದ್ದೇವೆ ಹೊರತು ಅದರ ಕುರಿತು ಯೋಚಿಸುತ್ತಿಲ್ಲ. ಕಳೆದ ಒಂದು ಕಾಲು ವರ್ಷದಿಂದ ಅಣ್ಣಾವ್ರ ಕುಟುಂಬಕ್ಕೆ ಎಷ್ಟು ನೋವಿದೆ ಎಷ್ಟು ಅವಮಾನಗಳನ್ನು ಅವರು ಪಟ್ಟಿದ್ದಾರೆ. ಯಾರ ಫ್ಯಾನ್ ಆದರೂ ಆಗಿ ಆದರೆ ಇನ್ನೊಬ್ಬರ ಫ್ಯಾನ್ ಅನ್ನು ಕೂಡ ಗೌರವಿಸಿ. ನಿಮ್ಮ ಸ್ಟಾರ್ ಅನ್ನು ಎಷ್ಟಾದರೂ ಮೆರೆಯಿಸಿ ಆದರೆ ಮತ್ತೊಬ್ಬ ಸ್ಟಾರ್ ಪಕ್ಕದಲ್ಲಿದ್ದರೆ ಅವರಿಗೂ ಪ್ರೀತಿ ಕೊಡುವುದನ್ನು ಕಲಿಯಿರಿ, ಇಷ್ಟಾದರೆ ಸಾಕು.

ವ್ಯಕ್ತಿ ಇಲ್ಲ ಅಂದ ಮಾತ್ರಕ್ಕೆ ಅವರ ಸಾಧನೆ ಇಲ್ಲ ಎಂದು ಅಲ್ಲ ಅವರು ಮಾಡಿದ್ದು ಎಲ್ಲ ಮರೆತು ಹೋಗುವುದಿಲ್ಲ. ನಮ್ಮಲ್ಲಿ ಈ ರೀತಿ ಬೆಳವಣಿಗೆ ಆಗುತ್ತಿರುವುದು ನಿಜಕ್ಕೂ ಬಹಳ ಬೇಸರ ತರುತ್ತಿದೆ ಎಂದಿದ್ದಾರೆ. ಪ್ರಥಮ್ ಅವರ ಈ ಸ್ಟೆಟ್ಮೆಂಟ್ ಗೆ ನಿಮ್ಮ ಪ್ರತಿಕ್ರಿಯೆ ಏನು ? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.