Home Blog Page 256

ಅಂದು ಮಗು ಆಗಿಲ್ಲ ಅಂತ ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ್ದ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿ ಇಂದು ಅದೇ ವೇದಿಕೆಯಲ್ಲಿ ಮಗುವಿಗೆ ನಾಮಕರಣ ಮಾಡಿದ್ದಾರೆ.

 

ರಿಯಾಲಿಟಿ ಶೋಗಳು ಕರ್ನಾಟಕಕ್ಕೆ ಹಲವು ಜನರನ್ನು ಪರಿಚಯಿಸುತ್ತದೆ. ಅದರಿಂದ ಖ್ಯಾತಿ ಪಡೆದವರು ಸಿನಿಮಾ ರಂಗದಲ್ಲಿ, ಧಾರಾವಾಹಿಗಳಲ್ಲಿ ಅಥವಾ ಸಂಗೀತದಲ್ಲಿ ಇನ್ನು ಹೆಚ್ಚಿನ ಅವಕಾಶಗಳನ್ನು ಪಡೆದುಕೊಂಡು ಬೆಳೆಯುತ್ತಾರೆ. ಕಾಮನ್ ಮ್ಯಾನ್ ಆಗಿ ಈ ರೀತಿ ರಿಯಾಲಿಟಿ ಶೋಗಳಿಗೆ ಹೋದವರು ಈಗ ಸೆಲೆಬ್ರಿಟಿಗಳಾಗಿದ್ದರೆ. ಇದೇ ಸಾಲಿಗೆ ಸೇರುತ್ತಾರೆ ಸಮೀರ್ ಆಚಾರ್ಯ ಅವರು. ಇವರು ಕನ್ನಡದ ಬಿಗ್ ಬಾಸ್ ಸೀಸನ್ 5ರಲ್ಲಿ ಭಾಗವಹಿಸಿದ್ದರು.

ಆಗ ಕಾಮನ್ ಮ್ಯಾನ್ ಕೋಟದಿಂದ ಇವರು ಮನೆ ಒಳಗೆ ಕಂಟೆಸ್ಟೆಂಟ್ ಆಗಿ ಹೋಗಿದ್ದರು. ಬಿಗ್ ಬಾಸ್ ಮುಗಿದ ಬಳಿಕ ಇವರು ಕರ್ನಾಟಕದಲ್ಲಿ ಸೆಲೆಬ್ರಿಟಿ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಮೀರ್ ಆಚಾರ್ಯ ಅವರ ಪತ್ನಿ ಶ್ರಾವಣಿ ಅವರು ಕೂಡ ಫುಲ್ ಫೇಮಸ್. ಹಿಂದೆ ಇವರು ನಿರೂಪಕಿ ಆಗಿ ಕೆಲಸ ಮಾಡಿದ್ದರು ಈಗ ಸಮೀರ್ ಆಚಾರ್ಯ ಅವರ ಪತ್ನಿ ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವರ್ಷ ಪ್ರಸಾರವಾದ ರಾಜರಾಣಿ ಸೀಸನ್ ಒಂದರಲ್ಲಿ ಹಲವು ಸೆಲೆಬ್ರಿಟಿ ದಂಪತಿಗಳಿಗೆ ಭಾಗವಹಿಸಲು ಅವಕಾಶ ಕೊಡಲಾಗಿತ್ತು. ಆಗ ಈ ದಂಪತಿಗಳು ಸಹ ಕಂಟೆಸ್ಟೆಂಟ್ಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಲವು ಬಾರಿ ಅವರು ತಮ್ಮ ಮಗುವಿನ ವಿಷಯವನ್ನು ಹೇಳಿಕೊಂಡಿದ್ದರು. ಯಾಕೆಂದರೆ ಈಗಾಗಲೇ ಶ್ರಾವಣಿ ಅವರಿಗೆ ಒಂದು ಬಾರಿ ಗರ್ಭಪಾತ ಆಗಿತ್ತು.

ಅದಾದ ನಂತರ ಎಷ್ಟೇ ಹಂಬಲಿಸಿದ್ದರು ಅವರು ತಾಯಿ ಆಗಿರಲಿಲ್ಲ ಈ ನೋವು ಶ್ರಾವಣಿಗೆ ಮಾತ್ರ ಅಲ್ಲದೆ ಸಮೀರ್ ಅವರನ್ನು ಕಾಡುತ್ತಿತ್ತು. ಟಾಸ್ಕ್ ಮಾಡುವಾಗ, ಪರ್ಫಾರ್ಮೆನ್ಸ್ ಮಾಡುವಾಗ ಅವರು ಮಗು ನೆನೆದು ಕಣ್ಣೀರು ಹಾಕಿರುವ ಸನ್ನಿವೇಶಗಳು ಇವೆ. ಜೊತೆಗೆ ಮನದಾಳದ ಮಾತು ಎನ್ನುವ ಭಾಗದಲ್ಲಿ ಸಹ ಇಬ್ಬರು ಮನಮೆಚ್ಚಿ ಮಗುವಿನ ವಿಷಯವಾಗಿಯೇ ಮಾತನಾಡಿದ್ದರು.

ಶ್ರಾವಣಿ ಅವರಂತೂ ಯಾವಾಗಲೂ ತಮಗೆ ರಾಜಕುಮಾರ ಬೇಕು ಎಂದು ಹೇಳುತ್ತಲೇ ಇದ್ದರು. ಇದನ್ನು ಕಂಡು ಕರ್ನಾಟಕವೇ ಮರುಗಿತ್ತು. ಇಷ್ಟೊಂದು ಬೇಡುತ್ತಿದ್ದಾರಲ್ಲ ದೇವರು ಇವರಿಗೆ ಇನ್ನೂ ಅನುಗ್ರಹ ಮಾಡಲಿಲ್ಲವಲ್ಲ ಎಂದು ಎಲ್ಲರೂ ದೇವರಿಗೆ ಶಪಿಸುತ್ತಿದ್ದರು. ಕೊನೆಗೂ ದೇವರ ಮನಸ್ಸು ಕರಗಿ ಈ ಮುದ್ದಾದ ಜೋಡಿಗೆ ಹೆಣ್ಣು ಮಗುವನ್ನು ಕರುಣಿಸಿದ್ದಾರೆ.

ಸಮೀರ್ ಆಚಾರ್ಯ ಮತ್ತು ಶ್ರಾವಣಿ ಅವರು ಮಗುವನ್ನು ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಕಾರ್ಯಕ್ರಮವಾದ ನಮ್ಮಮ್ಮ ಸೂಪರ್ ಸ್ಟಾರ್ ಗೆ ಕರೆತಂದಿದ್ದಾರೆ. ಅಂದು ನಾವು ಹೇಳಿಕೊಳ್ಳುತ್ತಿದ್ದ ನಮ್ಮ ಕಷ್ಟವನ್ನು ನೋಡಿ ಎಷ್ಟೋ ಜನ ಮರುಗಿದ್ದಾರೆ, ನಮಗಾಗಿ ಪ್ರಾರ್ಥಿಸಿದ್ದಾರೆ ಇಡೀ ಕರ್ನಾಟಕದ ಜನ ನಮ್ಮ ಮೇಲೆ ತೋರಿರುವ ಪ್ರೀತಿ ಹಾಗೂ ಆಶೀರ್ವಾದದ ಫಲಿತಾಂಶ ಎಂದು ಹೇಳಿ ಸೃಜನ್ ತಾರಾ ಹಾಗೂ ಅನು ಪ್ರಭಾಕರ್ ಅವರಿಂದ ಮಗುವಿಗೆ ಸರ್ವಾರ್ಥ ಎಂದು ಹೆಸರಿಡಿಸಿದ್ದಾರೆ.

ತಾರಾ ಅವರು ಮಗುವನ್ನು ತೊಟ್ಟಿಲಲ್ಲಿ ಹಾಕಿ ತುಂಬಿದ್ದಾರೆ ಕೂಡ. ಜೊತೆಗೆ ಈ ಎಪಿಸೋಡ್ ಅಲ್ಲಿ ಮಗುವಿನ ಜರ್ನಿ ಕುರಿತು ಅದರ ಜೊತೆಗಿನ ಭಾವನಾತ್ಮಕ ಸಂಬಂಧದ ಕುರಿತು ತಮ್ಮ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಡೆಲಿವರಿ ಆಗುವವರೆಗೂ ಶ್ರಾವಣಿ ಅವರನ್ನು ತಮ್ಮ ಜೊತೆಗೆ ಇಟ್ಟುಕೊಂಡು ಪ್ರತಿಕ್ಷಣ ಕಷ್ಟ ಸುಖಗಳಲ್ಲಿ ಸಮೀರ್ ಆಚಾರ್ಯ ಅವರು ಜೊತೆಗಿದ್ದರಂತೆ.

ನನ್ನ ಮಗಳು ಹುಟ್ಟಿದ ಸ್ವಲ್ಪ ಹೊತ್ತಿಗೆ ಡಾಕ್ಟರ್ ಹಾರ್ಟ್ ರೇಟ್ ಕಮ್ಮಿ ಇದೆ ಎಂದು ಹೇಳಿ ಬಿಟ್ಟಿದ್ದರು. ನನಗೆ ಗಾಬರಿಯಾಗಿ ಎಲ್ಲ ದೇವರನ್ನು ಬೇಡಿಕೊಂಡಿದ್ದೆ. ನಂತರ ಅವಳು ಅತ್ತ ಮೇಲೆ ನನಗೆ ಸಮಾಧಾನ ಆಯ್ತು ಎಂದು ಆ ಕ್ಷಣವನ್ನು ಕೂಡ ನೆನೆದಿದ್ದಾರೆ. ಈ ಜೋಡಿ ಬದುಕಲ್ಲಿ ಇನ್ನು ಮುಂದೆ ಸಂತಸ ತುಂಬಿ ಬರಲಿ ಎಂದು ಹರಸೋಣ.

ನಾನಿನ್ನು ಅಪ್ಪ ಆಗಿಲ್ಲ ಕಣ್ರೋ, ಮಗು ಮಾಡ್ಕೋಳೋಕೆ ಈಗ್ಲೆ ರೆಡಿ ಇಲ್ಲ, ಸಾಧಿಸೋಕೆ ಬಹಳಷ್ಟಿದೆ. ಚಂದನ್ ಅಪ್ಪ ಆಗ್ತಿದ್ದಾರೆ ಎಂಬ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

 

ಅಪ್ಪ ಆಗುವುದರ ಬಗ್ಗೆ ಸ್ಪಷ್ಟನೆ ನೀಡಿದ ಚಂದನ್ ಶೆಟ್ಟಿ. ರಾಪರ್ ಚಂದನ್ ಶೆಟ್ಟಿ ಅವರು ಈಗ ಸಿನಿಮಗಳಿಗೂ ಕೂಡ ಸಂಗೀತ ಸಂಯೋಜನೆ ಮಾಡುತ್ತಿದ್ದು, ಸಿಂಗರ್ ಕೂಡ ಆಗಿದ್ದಾರೆ. ಹೀಗಾಗಿ ಅವರು ಬಹಳ ಬಿಝಿ ಆಗಿದ್ದಾರೆ. ಜೊತೆಗೆ ನಿವೇದಿತ ಗೌಡ ಅವರು ಸಹ ರಿಯಾಲಿಟಿ ಶೋ ಸಿನಿಮಾ youtube ಚಾನೆಲ್ ಮತ್ತು ಇನ್ನಿತರ ಕಾಂಪಿಟೇಶನ್ ಗಳಲ್ಲಿ ಭಾಗವಹಿಸುತ್ತಾ ಅದರ ತಯಾರಿಯಲ್ಲಿ ತೊಡಗಿಕೊಂಡು ಬಿಝಿ ಆಗಿದ್ದಾರೆ. ಇವರಿಬ್ಬರು ಎಷ್ಟೇ ಬ್ಯುಸಿ ಇದ್ದರೂ ಸಹ ಆಗಾಗ ವಿಡಿಯೋ ಮಾಡಿ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಆದರೆ ಇವರು ಏನೇ ಮಾಡಿದರು ಅದು ಟ್ರೋಲ್ ಆಗುತ್ತದೆ ಅಥವಾ ಕಾಂಟ್ರವರ್ಸಿ ಆಗಿಬಿಡುತ್ತದೆ. ಈಗ ಅಂತಹದೇ ಮತ್ತೊಂದು ಎಡವಟ್ಟು ಮಾಡಿಕೊಂಡ ನಂತರ ಚಂದನ್ ಶೆಟ್ಟಿ ಅವರು ಕಮೆಂಟ್ ಮಾಡಿ ಅದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ. ಚಂದನ್ ಶೆಟ್ಟಿ ಅವರು ಫಾದರ್ ಎನ್ನುವುದರ ಕುರಿತು ವಿಡಿಯೋ ಒಂದನ್ನು ಮಾಡಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋದಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರನ್ನು ಇಂಗ್ಲಿಷ್ ಅಕ್ಷರಗಳಾದ ಎಫ್ ಎ ಟಿ (FAT) ಏನು ಎಂದು ಕೇಳುತ್ತಾರೆ ಅದಕ್ಕೆ ನಿವೇದಿತ ಫ್ಯಾಟ್ ಎನ್ನುತ್ತಾರೆ. ನಂತರ ಎಚ್ ಈ ಆರ್(HER) ಏನು ಎಂದು ಕೇಳುತ್ತಾರೆ ಅದಕ್ಕೆ ಕೇಳುತ್ತಾರೆ ಅದಕ್ಕೆ ನಿವೇದಿತ ಹರ್ ಎಂದು ಹೇಳುತ್ತಾರೆ.

ಅವರನ್ನು ಚಂದನ್ ತಮಾಷೆ ಮಾಡುತ್ತಲೇ ಇರುತ್ತಾರೆ ಕ್ಷಣ ಹೊತ್ತಿನಲ್ಲೇ ನಿವೇದಿತ ಅವರಿಗೆ ಫ್ಲಾಶ್ ಆಗಿ ಫಾದರ್(Father) ಎಂದು ಹೇಳುತ್ತಾರೆ ಮತ್ತು ಜೋರಾಗಿ ನಗುತ್ತಾರೆ ಅಲ್ಲಿಗೆ ಆ ವಿಡಿಯೋ ಎಡಿಟಿಂಗ್ ಆಗುತ್ತದೆ. ಅದನ್ನು ಚಂದನ್ ಶೆಟ್ಟಿ ಅವರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದರು ಇವರು ಅಪ್ಲೋಡ್ ಮಾಡಿದ ಈ ವಿಡಿಯೋ ಇಂದ ಸಾಕಷ್ಟು ಜನರಿಗೆ ಕನ್ಫ್ಯೂಸ್ ಆಗಿತ್ತು. ಯಾಕೆಂದರೆ ಮೊದಲಿನಿಂದಲೂ ನಿವೇದಿತ ಹಾಗೂ ಚಂದನ್ ಅವರನ್ನು ಕಂಡಾಗಲಿಲ್ಲ ಜನ ಮತ್ತು ಮೀಡಿಯಾದವರು ಇವರನ್ನು ತಂದೆ-ತಾಯಿ ಯಾವಾಗ ಆಗುತ್ತೀರಾ ಎಂದೇ ಪ್ರಶ್ನಿಸುತ್ತಾ ಇರುತ್ತಾರೆ.

ಇಂತಹ ಸಮಯದಲ್ಲಿ ಈ ವಿಡಿಯೋ ಬಂದಾಗ ಸಹಜವಾಗಿ ಎಲ್ಲರೂ ಅದೇ ವಿಷಯಕ್ಕೆ ಹೇಳಬೇಕು ಎಂದು ಭಾವಿಸಿಕೊಳ್ಳಬಹುದು. ಹೀಗಾಗಿ ಕಮೆಂಟ್ ಗಳಲ್ಲಿ ಎಲ್ಲರೂ ಇಬ್ಬರಿಗೂ ಶುಭಾಶಯ ತಿಳಿಸುತ್ತಿದ್ದರು. ಇದನ್ನು ಗಮನಿಸಿದ ಚಂದನ್ ಶೆಟ್ಟಿ ಅವರು ಆಗುತ್ತಿರುವ ಕನ್ಫ್ಯೂಸ್ ಅನ್ನು ಸರಿ ಮಾಡಲು ಕಮೆಂಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ತಂದೆ ಆದರೆ ಅದನ್ನು ನಿವೇದಿತಾ ರಿವೀಲ್ ಮಾಡಬೇಕು ಆದರೆ ಇದು ನಿಜವಾಗಿಯೂ ತಮಾಷೆಗಾಗಿ ಮಾಡಿದ ವಿಡಿಯೋ ಆಗಿದೆ.

ನನಗೆ ಶುಭಾಶಯ ಹೇಳಲು ಹಲವು ಕರೆಗಳು ಬರುತ್ತಿವೆ ಆದರೆ ನಾವು ಇನ್ನು ಅದರ ಬಗ್ಗೆ ಯೋಚಿಸಿಯೇ ಇಲ್ಲ ನಾವು ಅದಕ್ಕೆ ಇನ್ನೂ ರೆಡಿಯಾಗಿಲ್ಲ. ಈ ಇಂಗ್ಲಿಷ್ ಭಾಷೆಯು ಬಹಳ ಕನ್ಫ್ಯೂಸಿಂಗ್ ಆಗಿದೆ ಅದು ಫಾದರ್ ಫ್ಯಾಟ್ ಹರ್ ಅಲ್ಲ ಎಂದಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಚಂದನ್ ಶೆಟ್ಟಿ ಅವರ ಸ್ಪಷ್ಟನೆ ಇಲ್ಲದೆ ವಿಡಿಯೋವನ್ನು ನೋಡಿದರೆ ಖಂಡಿತವಾಗಿಯೂ ಎಲ್ಲರಿಗೂ ಸಹ ಇದೆ ಅನುಮಾನ ಹುಟ್ಟುತ್ತದೆ ಅದನ್ನು ಅರಿತುಕೊಂಡ ಚಂದನ್ ಶೆಟ್ಟಿ ಅವರು ಬಹಳ ಬೇಗ ಸ್ಪಷ್ಟನೆ ಕೊಟ್ಟು ವಿಷಯವನ್ನು ಇಲ್ಲಿಗೆ ಮುಗಿಸಿದ್ದಾರೆ. ಕರ್ನಾಟಕದ ಜನತೆ ಆಸೆ ಪಡುತ್ತಿರುವ ರೀತಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಆದಷ್ಟು ಬೇಗ ತಂದೆ ತಾಯಿ ಆಗಲಿ ಹಾರೈಸೋಣ.

ಜನವರಿ 26ಕ್ಕೆ ಗಣರಾಜ್ಯೋತ್ಸವ ಇದೆ ಅನ್ನೋದ್ನೆ ಮರೆತು ಬಿಡಿ, ಥಿಯೇಟರ್ ಗೆ ಬಂದು ಕ್ರಾಂತಿ ಸಿನಿಮಾ ನೋಡಿ ಉತ್ಸವ ಮಾಡಿ ಎಂದು ಹೇಳಿಕೆ ಕೊಟ್ಟು ಇಕ್ಕಟಿಗೆ ಸಿಲುಕಿದ ನಟಿ ರಚಿತಾ ರಾಮ್

 

ಸ್ಟಾರ್ ನಟ ಹಾಗೂ ನಟಿಯರು ಎಂದರೆ ಅವರನ್ನು ದೊಡ್ಡ ಸಂಖ್ಯೆಯಲ್ಲಿ ಫಾಲೋ ಮಾಡುವುದು ಹಾಗೂ ಅವರ ಪ್ರತಿಯೊಂದು ವಿಚಾರಗಳನ್ನು ಕೂಡ ತಿಳಿದು ಕೊಳ್ಳುವುದು ಸಹಜ. ಕೇವಲ ತೆರೆ ಮೇಲಿನ ನಟನೆ ಮತ್ತು ಸೌಂದರ್ಯವನ್ನು ಮೆಚ್ಚಿಕೊಂಡು ಇಷ್ಟಪಡು ವಂತಹ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಹಾಗೂ ನಟಿಯರು ಕೇವಲ ತೆರೆ ಮೇಲೆ ಮಾತ್ರ ಅಲ್ಲ. ತೆರೆ ಹಿಂದೆ ಕೂಡ ಒಳ್ಳೆಯತನವನ್ನು ಹೊಂದಿರಬೇಕು ಯಾವುದೇ ವಿಚಾರದ ಬಗ್ಗೆ ವಿರುದ್ಧವಾಗಿ ಮಾತನಾಡ ಬಾರದು. ಅವರ ಮಾತಿನ ಮೇಲೆ ಪ್ರತಿಯೊಬ್ಬರಿಗೂ ತೆರೆ ಮೇಲೆ ಚೆನ್ನಾಗಿ ನಟನೆ ಮಾಡಿ ತೆರೆ ಹಿಂದೆ ಇಲ್ಲ ಸಲಗ ಮಾತುಗಳನ್ನು ಮಾತನಾಡುತ್ತಾ ಕೆಲವೊಂದು ವಿರುದ್ಧ ಮಾತುಗಳನ್ನು ಆಡಿದರೆ ಯಾರಿಗೂ ಕೂಡ ಅದು ಇಷ್ಟವಾಗುವುದಿಲ್ಲ.

ಜೊತೆಗೆ ಒಳ್ಳೆ ಮಾತುಗಳನ್ನು ಮಾತನಾಡುವುದರ ಮುಖಾಂತರ ಅಭಿಮಾನಿಗಳಿಗೆ ಒಳ್ಳೆಯ ಸ್ಪೂರ್ತಿಯಾಗಿರಬೇಕು ಎಂದು ನಿರೀಕ್ಷೆ ಮಾಡುವವರೇ ಜಾಸ್ತಿ. ಇದರ ಜೊತೆ ನಟ ನಟಿಯರು ಇಂತಹ ವಿಷಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿರುತ್ತಾರೆ. ತಮ್ಮ ಅಭಿಮಾನಿಗಳಿಗೆ ಯಾವುದೇ ವಿಷಯದಲ್ಲಿ ಬೇಸರ ಹುಟ್ಟದ ಹಾಗೆ ನಡೆದುಕೊಳ್ಳುತ್ತಿರುತ್ತಾರೆ ಆದರೆ ಕೆಲವೊಮ್ಮೆ ಅವರು ಕೊಡುವಂತಹ ತಲೆಕೊಟ್ಟ ಹೇಳಿಕೆಗಳು ಅಭಿಮಾನಿಗಳನ್ನು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ಕಿಡಿ ಕಾರುವಂತೆ ಬರುತ್ತದೆ.

ಸ್ಟಾರ್ ನಟರುಗಳು ದೇಶ ಹಾಗೂ ನಾಡಿನ ವಿರುದ್ಧವಾಗಿ ತಮಗೆ ತಿಳಿದೋ ಅಥವಾ ತಿಳಿಯದೆಯೋ ಮಾಡುವಂತಹ ಹೇಳಿಕೆಗಳು ಎಷ್ಟೋ ಜನರ ಜೀವನವನ್ನೇ ಹಾಳು ಮಾಡಿದೆ. ಹೆಚ್ಚಾಗಿ ಬಾಲಿವುಡ್ ಗಳಲ್ಲಿ ಕೇಳಿ ಬರುತ್ತಿದ್ದಂತಹ ಈ ಹೇಳಿಕೆಗಳು ಈಗ ಕನ್ನಡ ಚಿತ್ರರಂಗದಲ್ಲೂ ಕೂಡ ಕಾಲಿಟ್ಟಿದೆ ಕ್ರಾಂತಿ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಚಿತ್ರದ ಬಗ್ಗೆ ಮಾತನಾಡುತ್ತಿದ್ದಂತಹ ನಟಿ ರಚಿತಾ ರಾಮ್ ಎಲ್ಲರೂ ಕೂಡ ಸಿನಿಮಾವನ್ನು ನೋಡಿ ಎಂದು ಪ್ರಚಾರ ಮಾಡುವಂತಹ ಸಮಯದಲ್ಲಿ ಗಣ ರಾಜ್ಯೋತ್ಸವವನ್ನು ಮರೆಯಿರಿ ಎಂಬ ಹೇಳಿಕೆಯನ್ನು ಕೊಟ್ಟು ಈಗ ದೇಶ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ದರ್ಶನ್ ಹಾಗೂ ನಟಿ ರಚಿತಾ ರಾಮ್ ನಟನೆಯ ಕ್ರಾಂತಿ ಸಿನಿಮಾ ಇದೇ ಗಣರಾಜ್ಯೋತ್ಸವದ ದಿನ ಬಿಡುಗಡೆಯಾಗುತ್ತಿದೆ ಈ ದಿನ ರಿಲೀಸ್ ಆಗುತ್ತಿರುವ ಕಾರಣ ಚಿತ್ರದ ಬಿಡುಗಡೆಯ ಬಗ್ಗೆ ಮಾತನಾಡಿದ ರಕ್ಷಿತಾ ರಾಮ್. ಇಷ್ಟು ವರ್ಷ ಜನವರಿ 26 ಎಂದರೆ ಗಣರಾಜ್ಯೋತ್ಸವ ಆದರೆ ಈ ವರ್ಷ ರಾಜ್ಯೋತ್ಸವ ಎನ್ನುವುದನ್ನು ಮರೆತು ಬಿಡಿ ಬರೀ ಕ್ರಾಂತಿ ಉತ್ಸವ ಎನ್ನುವ ಹೇಳಿಕೆಯನ್ನು ಕೊಟ್ಟಿದ್ದಾರೆ. ಹೀಗೆ ರಚಿತಾ ರಾಮ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ವೈರಲ್ ಆಗುತ್ತಿದ್ದಂತೆ ಟ್ವಿಟರ್ ನಲ್ಲಿ ನೆಟ್ಟಿಗರು ದೊಡ್ಡ ಮಟ್ಟದಲ್ಲಿ ಕಿಡಿ ಕಾರಿದ್ದಾರೆ ನಿಮ್ಮ ಸಿನಿಮಾ ಬರುತ್ತಿದೆ ಎಂಬ ಕಾರಣಕ್ಕೆ.

ಗಣರಾಜ್ಯೋತ್ಸವ ಮರಿಬೇಕಾ ಗಣರಾಜ್ಯೋತ್ಸವ ಕ್ಕಿಂತ ನಿಮ್ಮ ಚಿತ್ರ ದೊಡ್ಡದ ಅನಕ್ಷರಸ್ತೇ ತರ ಮಾತ ನಾಡಬೇಡಿ ಮೊದಲು ದೇಶ ನಂತರ ಸಿನಿಮಾ ಅಂತ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಕೇವಲ ಅಂದ ಚಂದ ಇದ್ದರೆ ನಟಿಯಾಗಿ ಬಿಡುವುದಿಲ್ಲ ಸ್ವಲ್ಪ ಬುದ್ಧಿಯೂ ಇರಲಿ ಜನರಿಗೆ ಒಳ್ಳೆಯ ಸಂದೇಶವನ್ನು ಕೊಟ್ಟು ಮಾದರಿಯಾಗ ಬೇಕು ನಿಮ್ಮನ್ನು ಅನೇಕರು ಅನುಸರಿಸುತ್ತಿರುತ್ತಾರೆ ನೋಡಿ ವಿಷಯ ತಿಳಿದುಕೊಂಡು ಮಾತನಾಡಿ ಎಂದು ಛಾಟಿ ಬೀಸಿದ್ದಾರೆ. ಇದೇ ರೀತಿಯ ಹೇಳಿಕೆಗಳನ್ನು ನೀಡಿದ ಮೇಲೆಯೇ ಬಾಲಿವುಡ್ ಮಖಾಡೆ ಮಲಗಿದ್ದು ಅಂತ ನೆಟ್ಟಿಗನೋರ್ವ ಕಿಡಿ ಕಾರಿದ್ದಾನೆ.

ಇನ್ನು ಗಣರಾಜ್ಯೋತ್ಸವ ಅಲ್ಲ ಕೇವಲ ಕ್ರಾಂತಿ ಉತ್ಸವ ಎಂದಿರೋ ರಚಿತರಾಮ್ ಅವರಿಗೆ ಪ್ರತಿಕ್ರಿಯೆ ಕೊಟ್ಟಿರುವ ನೆಟ್ಟಿಗರೊಬ್ಬರು ಗಣರಾಜ್ಯೋತ್ಸವ ಮರೆತು ಕ್ರಾಂತಿ ಸಿನಿಮಾ ನೋಡಬೇಕಾ ನೀವೆಲ್ಲ ನಮ್ಮ ದೇಶದಲ್ಲಿ ಇರುವುದಕ್ಕೆ ಅರ್ಹರಲ್ಲ ಪಾಕಿಸ್ತಾನಕ್ಕೆ ಹೋಗಿ ಅಲ್ಲೇ ಕ್ರಾಂತಿ ಉತ್ಸವ ಮಾಡಿ ಅಂತ ಕಿಡಿ ಕಾರಿದ್ದಾರೆ. ಕ್ರಾಂತಿ ಸಿನಿಮಾ ಪ್ರಚಾರ ಮಾಡಿ ಜನರನ್ನು ತನ್ನತ್ತ ಸೆಳೆಯುವುದರ ಬದಲು ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿರುವುದು ನಿಜಕ್ಕೂ ಕೂಡ ದುಃಸ್ಥಿತಿ ಅಂತಾನೆ ಹೇಳಬಹುದು. ರಚಿತಾ ರಾಮ್ ಮಾತಿನ ಬರದಲ್ಲಿ ಈ ರೀತಿ ಹೇಳಿದರೋ ಏನೋ ತಿಳಿದಿಲ್ಲ ಆದರೂ ಕೂಡ ಇದು ಕ್ರಾಂತಿ ಸಿನಿಮಾಗೆ ಮತ್ತೊಂದು ಹೊಡೆತವನ್ನು ತಂದಂತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ. ತಂದೆಯಾಗುತ್ತಿರುವ ವಿಚಾರವನ್ನು ವಿಶೇಷವಾಗಿ ವಿಡಿಯೋ ಮಾಡಿ ಹರಿಬಿಟ್ಟ ಚಂದನ್.

 

ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ಆದಂತಹ ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯ ಕಂಟೆಸ್ಟೆಂಟ್ ಆಗಿದ್ದಂತಹ ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾಗಿರುವ ವಿಚಾರ ನಿಮಗೆ ತಿಳಿದೆ ಇದೆ. ಕಳೆದ ಮೂರು ವರ್ಷದ ಹಿಂದೆ ಮೈಸೂರಿನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ಕೂಡ ಅದ್ದೂರಿಯಾಗಿ ಮದುವೆಯಾಗಿದ್ದರು. ಇವರನ್ನು ಸೋಶಿಯಲ್ ಮೀಡಿಯಾದ ಸೆಲೆಬ್ರಿಟಿ ದಂಪತಿಗಳು ಅಂತಾನೆ ಕರೆಯಬಹುದು.

ಚಂದನ್ ಶೆಟ್ಟಿ ಅವರು ಮ್ಯೂಸಿಕ್ ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ ಅತ್ತ ಕಡೆ ನಿವೇದಿತಾ ಗೌಡ ಅವರು ಕೂಡ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡರು. ತದನಂತರ ರಾಜ ರಾಣಿ ಎಂಬ ರಿಯಾಲಿಟಿ ಶೋನಲ್ಲಿಯೂ ಕೂಡ ಕಾಣಿಸಿಕೊಂಡರು ಒಟ್ಟಾರೆಯಾಗಿ ಹೇಳುವುದಾದರೆ ಗಂಡ ಹೆಂಡತಿ ಇಬ್ಬರೂ ಕೂಡ ಮನರಂಜನೆ ವಿಚಾರದಲ್ಲಿ ಎತ್ತಿದ ಕೈ ಜನರಿಗೆ ಮನರಂಜನೆ ನೀಡುವುದಕ್ಕಾಗಿ ಸದಾ ಕಾಲ ಸಿದ್ದರಾಗಿರುತ್ತಾರೆ.

ಇನ್ನು ವಯಕ್ತಿಕ ವಿಚಾರಕ್ಕೆ ಬರುವುದಾದರೆ ಚಂದನ್ ಹಾಗೂ ನಿವೇದಿತಾ ಗೌಡ ಮದುವೆಯಾಗಿ ಮೂರು ವರ್ಷವಾಗಿದ್ದರು ಕೂಡ ಇನ್ನೂ ಕೂಡ ಗುಡ್ ನ್ಯೂಸ್ ಕೊಟ್ಟಿರಲಿಲ್ಲ. ಸಾಕಷ್ಟು ಅಭಿಮಾನಿಗಳು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಿಗೆ ಮಗುವಿನ ಬಗ್ಗೆಯೇ ಹೆಚ್ಚಿನ ಪ್ರಶ್ನೆಗಳನ್ನು ನೀಡುತ್ತಿದ್ದರು. ಆದರೆ ನಿವೇದಿತಾ ಗೌಡ ಒಮ್ಮೆ ಸಂದರ್ಶನದಲ್ಲಿ ಎಲ್ಲರೂ ಕೂಡ ಮಗುವಿನ ವಿಚಾರವನ್ನು ಮಾತನಾಡುತ್ತಾರೆ.

ಇದು ನಮ್ಮ ವೈಯಕ್ತಿಕ ವಿಚಾರಕ್ಕೆ ಬಿಟ್ಟದ್ದು ಈಗಲೇ ನಾವು ಮಕ್ಕಳು ಮಾಡಿಕೊಳ್ಳುವುದಿಲ್ಲ ಚಂದನ್ ಶೆಟ್ಟಿಗೆ ಸಾಧಿಸಬೇಕಾದಂತಹ ಸಾಕಷ್ಟು ವಿಚಾರಗಳಿದೆ. ಹಾಗೂ ನಾನು ಕೂಡ ನನ್ನ ಲೈಫ್ ನಲ್ಲಿ ಸೆಟಲ್ ಆಗಬೇಕು ನಾವಿಬ್ಬರು ಲೈಫ್ನಲ್ಲಿ ಒಂದೊಳ್ಳೆ ಗೋಲ್ ತಲುಪಿದ ನಂತರವಷ್ಟೇ ಪ್ಲಾನ್ ಮಾಡುತ್ತೇವೆ ಆಗ ನಮ್ಮ ಮಗು ಬರುತ್ತದೆ ಎಂದು ಹೇಳಿದ್ದರು.

ಅದರಂತೆ ಚಂದನ್ ಶೆಟ್ಟಿ ಅವರು ಕೂಡ ಇದೀಗ ತಮ್ಮದೇ ಆದಂತಹ ಸ್ವಂತ ಸ್ಟುಡಿಯೋ ಒಂದನ್ನು ನಿರ್ಮಾಣ ಮಾಡಿದ್ದಾರೆ ಜೊತೆಗೆ ಸೂತ್ರದಾರ ಎಂಬ ಸಿನಿಮಾಗೆ ನಾಯಕ ನಟ ಆಗಿಯೂ ಕೂಡ ಆಯ್ಕೆಯಾಗಿದ್ದಾರೆ. ಮತ್ತೊಂದು ಕಡೆ ನಿವೇದಿತಾ ಗೌಡ ಅವರು ಸ್ವಂತ ಯುಟ್ಯೂಬ್ ಚಾನೆಲ್ ಮುಖಾಂತರ ಹೊಸ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಇಬ್ಬರೂ ಕೂಡ ತಾವು ಅಂದುಕೊಂಡ ರೀತಿಯಲ್ಲಿ ಲೈಫ್ ನಲ್ಲಿ ಸೆಟಲ್ ಆಗಿದ್ದಾರೆ ಹಾಗಾಗಿ ಇದೀಗ ಮೊದಲನೇ ಮಗುವಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಹೌದು ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ ಕೂಡ ಸೋಶಿಯಲ್ ಮೀಡಿಯಾ ಕಥೆಯಲ್ಲಿ ಲೈವ್ ಬಂದು ಮಗುವಿನ ಬಗ್ಗೆ ಸುಳಿ ಒಂದನ್ನು ಕೊಟ್ಟಿದ್ದಾರೆ. ಚಂದನ್ ಶೆಟ್ಟಿ ತಂದೆಯಾಗುತ್ತಿರುವ ವಿಚಾರ ಅಂದರೆ ಫಾದರ್ ಆಗುತ್ತಿರುವಂತಹ ವಿಚಾರವನ್ನು ವಿಶೇಷವಾಗಿ ಅಭಿಮಾನಿಗಳಿಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಚಂದನ್ ಶೆಟ್ಟಿ ಫಾದರ್ ಆಗುತ್ತಿರುವಂತಹ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಈ ವಿಡಿಯೋ ನೋಡುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಸದ್ಯ ಈಗಲಾದರೂ ಫ್ಯೂಚರ್ ಪ್ಲಾನ್ ಮಾಡಿದ್ದೀರಲ್ಲ ಎಂದು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರ ಮುದ್ದಾದ ಮಗು ಬರಲಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ನಟಿ ರಕ್ಷಿತ ಜೊತೆ ಮಿಡ್ ನೈಟ್ ಪಾರ್ಟಿ ಮಾಡಿದ ದರ್ಶನ್, ಪಾರ್ಟಿಲೂ ಕ್ರಾಂತಿ ಹವಾ ಕ್ರಿಯೇಟ್ ಮಾಡಿದ ಡಿ-ಬಾಸ್, ಈ ವಿಡಿಯೋ ನೋಡಿ

.

ದರ್ಶನ್ ಹಾಗೂ ರಕ್ಷಿತಾ ಅವರು ನಮ್ಮ ಸ್ಯಾಂಡಲ್ ವುಡ್ನ ಯಶಸ್ವಿ ಜೋಡಿ. ಇವರಿಬ್ಬರ ಕಾಂಬಿನೇಷನ್ ನ ಎಲ್ಲ ಸಿನಿಮಾಗಳು ಕೂಡ ಸೂಪರ್ ಹಿಟ್ ಮೂವಿಗಳಾಗಿವೆ. ಈಗಲೂ ಕೂಡ ಕರ್ನಾಟಕದ ಬಹುತೇಕ ಮಂದಿ ನಿಮ್ಮ ಫೇವರೆಟ್ ಸೆಲೆಬ್ರಿಟಿ ಜೋಡಿ ಯಾವುದು ಎಂದು ಕೇಳಿದರೆ ದರ್ಶನ್ ಹಾಗೂ ರಕ್ಷಿತಾ ಎಂದೇ ಹೇಳುತ್ತಾರೆ. ದರ್ಶನ್ ಮತ್ತು ರಕ್ಷಿತಾ ಅವರ ಕೆಮಿಸ್ಟ್ರಿ ಅನ್ನು ತೆರೆ ಮೇಲೆ ನೋಡುವುದೇ ಒಂದು ಚೆಂದ.

ಇವರಿಬ್ಬರ ನಡುವೆ ಇಂತಹ ಕೆಮಿಸ್ಟ್ರಿ ಮೂಡಿ ಬರಲು ಕಾರಣ ಅವರಿಬ್ಬರ ನಡುವೆ ಇರುವ ಸ್ನೇಹ ಸಂಬಂಧ. ದರ್ಶನ್ ಅವರು ಸಿನಿಮಾ ಇಂಡಸ್ಟ್ರಿಗೆ ಬರುವ ಮುಂಚೆ ರಕ್ಷಿತಾರ ಉತ್ತಮ ಸ್ನೇಹಿತರಾಗಿದ್ದರು. ದರ್ಶನ್ ಅವರು ರಕ್ಷಿತಾ ಅವರ ತಂದೆ ಗೌರಿಶಂಕರ ಅವರ ಬಳಿ ಅಸಿಸ್ಟೆಂಟ್ ಕ್ಯಾಮರಮನ್ ಆಗಿ ಕೆಲಸ ಮಾಡುತ್ತಿದ್ದರು.

ಒಂದರ್ಥದಲ್ಲಿ ದರ್ಶನ್ ಅವರಿಗೆ ಕೆಲಸ ಹೇಳಿಕೊಟ್ಟಿದ್ದೆ ಗೌರಿಶಂಕರ್ ಅವರು ಎನ್ನಬಹುದು. ಹೀಗಾಗಿ ಸಹಜವಾಗಿ ಅವರ ಕುಟುಂಬಕ್ಕೆ ದರ್ಶನ್ ಅವರು ಆತ್ಮೀಯರು. ಬಳಿಕ ಅವರು ಚಂದನವನದ ಚಾಲೆಂಜಿಂಗ್ ಸ್ಟಾರ್ ಆಗಿ ಬೆಳೆದ ಕಥೆಯೇ ಒಂದು ರೋಚಕ ಮತ್ತು ರಕ್ಷಿತಾ ಅವರು ಜೊತೆ ಜೋಡಿ ಆಗಿ ಸಿನಿಮಾ ಮಾಡಲು ಶುರು ಮಾಡಿದ ಮೇಲೆ ಇನ್ನು ಎತ್ತರದ ಮಟ್ಟಕ್ಕೆ ಇಬ್ಬರು ಬೆಳೆದರು‌

ಕಲಾಸಿಪಾಳ್ಯ, ಸುಂಟರಗಾಳಿ, ಮಂಡ್ಯ ಮತ್ತು ಅಯ್ಯ ಈ ಸಿನಿಮಾಗಳಲ್ಲಿ ಇವರಿಬ್ಬರೂ ಜೋಡಿ ಆಗಿ ಕಾಣಿಸಿಕೊಂಡು ಮೋಡಿ ಮಾಡಿದ್ದರು. ರಕ್ಷಿತಾ ಅವರು ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿಯುವ ನಿರ್ಧಾರ ಮಾಡಿದರು. ನಿರ್ದೇಶಕ ಪ್ರೇಮ್ ಅವರನ್ನು ಕೈಹಿಡಿದ ರಕ್ಷಿತಾ ಅವರು ಮತ್ತೆ ಸಿನಿಮಾ ಮಾಡುವ ಮನಸ್ಸು ಮಾಡಲಿಲ್ಲ.

ಅಕಸ್ಮಾತ್ ಇಂದು ಅವರು ದರ್ಶನ್ ಜೊತೆ ಸಿನಿಮಾ ಮಾಡಿದರೆ ಅದು ಕೂಡ ಸೂಪರ್ ಹಿಟ್ ಹಾಗೆ ಆಗುತ್ತದೆ ಎಂದೆ ಎಲ್ಲರೂ ಮಾತನಾಡುವುದು. ಈಗ ಆಕ್ಟಿಂಗ್ ಇಂದ ದೂರ ಇದ್ದರೂ ಕೂಡ ನಿರ್ಮಾಪಕಿ ಆಗಿ ಸಕ್ರಿಯರಾಗಿದ್ದಾರೆ. ಕಿರುತೆರೆಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರ್ತಿಯಾಗಿ ಭಾಗಿಯಾಗುತ್ತಿದ್ದಾರೆ. ಆ ವೇದಿಕೆಗಳಲ್ಲಿ ದರ್ಶನ್ ಅವರ ಬಗ್ಗೆ ಮಾತನಾಡುವ ಅವಕಾಶ ಸಿಕ್ಕಾಗಲೆಲ್ಲಾ ದರ್ಶನ್ ಅವರ ಜೊತೆ ಎಷ್ಟು ಉತ್ತಮ ಬಾಂಧವ್ಯ ಇತ್ತು ಅವರಿಬ್ಬರ ಸ್ನೇಹ ಎಷ್ಟು ಗಟ್ಟಿ ಎನ್ನುವುದನ್ನು ರಕ್ಷಿತಾ ಅವರು ಹೇಳಿಕೊಳ್ಳುತ್ತಾರೆ.

ಇನ್ನು ದರ್ಶನ್ ಅವರು ಸಹ ತಮ್ಮ ಕುಟುಂಬದವರಂತೆ ರಕ್ಷಿತ ಅವರನ್ನು ಟ್ರೀಟ್ ಮಾಡುತ್ತಾರೆ, ಆತ್ಮ ಸ್ನೇಹಿತೆಯಂತೆ ಅವರನ್ನು ಕಾಣುತ್ತಾರೆ. ಈ ನಡುವೆ ಕಳೆದ ವರ್ಷ ಪ್ರೇಮ್ ಹಾಗೂ ದರ್ಶನ್ ಅವರ ನಡುವೆ ಮನಸ್ತಾಪ ಬಂದ ಸಮಯದಲ್ಲೂ ಕೂಡ ರಕ್ಷಿತಾ ಅವರು ನಾನು ಪ್ರೇಮ್ ಅವರನ್ನು ಬೆಂಬಲಿಸುತ್ತೇನೆ ಹಾಗೆಂದ ಮಾತ್ರಕ್ಕೆ ದರ್ಶನ್ ಅವರ ವಿರುದ್ಧ ಇದ್ದೇನೆ ಎನ್ನುವ ಅರ್ಥ ಅಲ್ಲ ಎಂದು ಹೇಳಿ ಇಬ್ಬರನ್ನೂ ಬಿಟ್ಟುಕೊಡದ ಪರಿಸ್ಥಿತಿಯಲ್ಲಿ ಇರುವುದನ್ನು ವಿವರಿಸಿದ್ದರು.

ನಂತರ ಕೆಲವೇ ದಿನಗಳಲ್ಲಿ ಸ್ನೇಹಿತರಿಬ್ಬರೂ ತಮ್ಮ ನಡುವೆ ಮೂಡಿಬಂದಿದ್ದ ಮನಸ್ತಾಪವನ್ನು ಬಗೆಹರಿಸಿಕೊಂಡು ಮತ್ತೆ ಜೊತೆ ಜೊತೆಯಾಗಿ ಕಾಣಿಸಿಕೊಳ್ಳಲು ಶುರು ಮಾಡಿದರು. ಇದೀಗ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ಎಲ್ಲೆಡೆ ಭರ್ಜರಿಯಾಗಿ ನಡೆಯುತ್ತಿದೆ. ಈ ಪಾರ್ಟಿಗೆ ರಕ್ಷಿತಾ ಅವರನ್ನು ಸಹ ದರ್ಶನ್ ಆಹ್ವಾನಿಸಿದ್ದಾರೆ. ದರ್ಶನ್ ಮತ್ತು ರಕ್ಷಿತಾ ಸೆಲ್ಫಿ ಕ್ಲಿಪ್ಪಿಸಿಕೊಂಡಿರುವುದು ಹಾಗೂ ಕೆಲವು ಫೋಟೋಗಳಲ್ಲಿ ರಕ್ಷಿತಾ ತಮ್ಮ ರಾಣ ಮತ್ತು ದರ್ಶನ್ ಅವರು ಇರುವುದು ಮತ್ತಿತರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇವರ ಸ್ನೇಹ ಹೀಗೆ ಚಿರಕಾಲ ಇರಲಿ ಎಂದು ಅಭಿಮಾನಿಗಳಾದ ನಾವೆಲ್ಲರೂ ಹರಸೋಣ.

ಬಿಗ್ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿ ಮಗುವಿನ ನಾಮಕರಣ ಕಾರ್ಯಕ್ರಮ, ಮಗುವಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತ.?

 

ಸಮೀರ್ ಆಚಾರ್ಯ ಅವರು ಖ್ಯಾತ ಜ್ಯೋತಿಷಿ. ಇವರು ಉದಯ ಟಿವಿ ಹಾಗೂ ಕಲರ್ಸ್ ಕನ್ನಡ ವಾಹಿನಿ ಮತ್ತು ಸುವರ್ಣ ಟಿವಿ ಮುಂತಾದ ವಾಹಿನಿಗಳಲ್ಲಿ ಜ್ಯೋತಿಷ್ಯದ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ. ಇವರು ಈ ಕಾರ್ಯಕ್ರಮಗಳಿಗೆ ಬರುವ ಮುನ್ನವೇ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಸೀಸನ್ 5ರ ಕಂಟೆಸ್ಟೆಂಟ್ ಆಗಿದ್ದರು. ಬಿಗ್ ಬಾಸ್ ಆ ಸೀಸನ್ ಅಲ್ಲಿ ನಿವೇದಿತ ಗೌಡ, ಚಂದನ್ ಶೆಟ್ಟಿ ಹಾಗೂ ದಿವಾಕರ್ ಮತ್ತು ಸಮೀರ್ ಆಚಾರ್ಯ ಅವರು ಬಹಳ ಆತ್ಮೀಯರಾಗಿದ್ದರು.

ಈ ನಾಲ್ಕು ಜನರಂತೆ ಒಂದು ಗುಂಪು ಎಂದೆ ಮನೆಯ ಇತರ ಸದಸ್ಯರು ಮಾತನಾಡಿಕೊಳ್ಳುತ್ತಿದ್ದರು. ಸಮೀರ್ ಆಚಾರ್ಯ ಅವರು ಬಿಗ್ ಬಾಸ್ ಮನೆಗೆ ಬಂದ ದಿನದಿಂದಲೂ ಕೂಡ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಕಾಮನ್ ಪೀಪಲ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಇವರು ಈಗ ಕರ್ನಾಟಕದ ಒಬ್ಬ ಸೆಲೆಬ್ರಿಟಿ. ಇದಾದ ಬಳಿಕ ಅವರು ಅದೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾದ ರಾಜರಾಣಿ ಸೀಸನ್ ಒಂದರಲ್ಲಿ ಕೂಡ ಕಂಟೆಸ್ಟೆಂಟ್ಗಳಾಗಿ ಭಾಗಿಯಾಗಿದ್ದರು.

ರಾಜ ರಾಣಿ ವೇದಿಕೆಯಲ್ಲಿ ಸಮೀರಾಚಾರ್ಯ ಹಾಗೂ ಶ್ರಾವಣಿ ದಂಪತಿಗಳ ಜೋಡಿಯನ್ನು ನೋಡುವುದೇ ಕಣ್ಣಿಗೆ ಆನಂದ. ಬಹಳ ಸಂಸ್ಕಾರವಂತ ಕುಟುಂಬದಿಂದ ಬಂದಿದ್ದ ಈ ದಂಪತಿಗಳು ಆಡುವ ಪ್ರತಿ ಮಾತು ನಡೆಯುತ್ತಿದ್ದ ನಡೆ-ನುಡಿ ಕರ್ನಾಟಕದ ಎಲ್ಲಾ ಜನರಿಗೂ ಇಷ್ಟವಾಗಿ ಎಲ್ಲರೂ ಇವರನ್ನು ಮೆಚ್ಚಿಕೊಂಡಿದ್ದರು. ಅದೇ ಸಮಯದಲ್ಲಿ ಒಂದು ಎಪಿಸೋಡ್ ಅಲ್ಲಿ ಇಬ್ಬರು ಸಹ ಮನದಲ್ಲಿರುವ ನೋವುಗಳನ್ನು ಹೇಳಿಕೊಳ್ಳುವ ವ್ಯವಸ್ಥೆ ಮಾಡಿಕೊಡಲಾಗಿತ್ತು.

ಅಲ್ಲಿ ತಮಗೆ ಮಗು ಆಗದಿರುವ ಸಮಸ್ಯೆ ಬಗ್ಗೆ ದುಃಖ ತೋಡಿಕೊಂಡಿದ್ದರು ದಂಪತಿಗಳು. ಯಾಕೆಂದರೆ ಈಗಾಗಲೇ ಒಂದು ಮಗುವನ್ನು ಅವರು ಅದು ಕಣ್ಣು ಬಿಡುವ ಮುಂದೆ ಹೊಟ್ಟೆಯಲ್ಲಿಯೇ ಕಳೆದುಕೊಂಡಿದ್ದರು. ಅದಾದ ಬಳಿಕ ಎಷ್ಟು ವರ್ಷ ಆದರೂ ಕೂಡ ಮತ್ತೆ ಮಗು ಆಗಲಿಲ್ಲವಲ್ಲ ಎನ್ನುವ ವೇದನೆಯಲ್ಲಿ ಇದ್ದರು.

ಆ ಎಪಿಸೋಡ್ ನೋಡಿ ಅನೇಕ ಮಂದಿ ಕಣ್ಣೀರು ಇಟ್ಟಿದ್ದರು, ಇತರರು ಭಾವನಾತ್ಮಕವಾಗಿ ಕಣ್ತುಂಬಿಕೊಳ್ಳುವಂತೆ ಮಾಡಿದ್ದ ಈ ಎಪಿಸೋಡ್ ನೋಡಿ ದೇವರಿಗೂ ಮನಸು ಕರಗಿರಬೇಕು. ಈಗ ಅವರಿಬ್ಬರು ತಂದೆ ತಾಯಿ ಆಗಿರುವ ಸಂಭ್ರಮದಲ್ಲಿದ್ದಾರೆ. ಡಿಸೆಂಬರ್ 13ರಂದು ಶ್ರಾವಣಿ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಮತ್ತು ಮಗುವನ್ನು ಸಹ ಕಲರ್ಸ್ ಕನ್ನಡದ ನಮ್ಮಮ್ಮ ಸೂಪರ್ ಸ್ಟಾರ್ ವೇದಿಕೆಗೆ ಕರೆತಂದು ಇದು ಎಲ್ಲವೂ ಅಂದು ನಮಗಾಗಿ ದೇವರಲ್ಲಿ ಕೇಳಿಕೊಂಡ ಎಲ್ಲರ ಆಶೀರ್ವಾದ ಎಂದು ಹೇಳಿ ಮಗುವಿಗೆ “ಸರ್ವಾರ್ಥ” ಎಂದು ಅರ್ಥಪೂರ್ಣವಾಗಿ ಹೆಸರು ಇಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸರ್ವಾರ್ಥ ಅವರ ನಾಮಕರಣದ ವಿಡಿಯೋಗಳು ಹರಿದಾಡುತ್ತಿದ್ದು ಎಲ್ಲರೂ ಮಗುವಿನ ಹೆಸರು ಸ್ಪೆಷಲು ಹಾಗೂ ಸುಂದರವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಶ್ರಾವಣಿ ಅವರು ಸಹ ಸಮೀರ್ ಅವರ ಕೈ ಹಿಡಿಯುವುದು ಮುಂಚೆ ನಿರೂಪಕಿ ಆಗಿ ಕೆಲಸ ಮಾಡಿದ್ದರು. ಇದೀಗ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ಎನ್ನುವ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ದೇವರ ಆಶೀರ್ವಾದದಿಂದ ಇವರ ಕೋರಿಕೆ ನೆರವೇರಿದೆ ಇನ್ನು ಮುಂದೆಯೂ ಜೀವನಪೂರ್ತಿ ಇವರ ಕುಟುಂಬದವರೆಲ್ಲರೂ ಸಂತೋಷದಿಂದ ಇರಲಿ ಎಂದು ಹಾರೈಸೋಣ. ಸಮೀರ್ ಆಚಾರ್ಯ ದಂಪತಿ ಮಗುವಿನ ನಾಮಕರಣ ಶಸ್ತ್ರದ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ದರ್ಶನ್ ವಿರುದ್ಧ ಪಿತೂರಿ ಮಾಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಮುಖ್ಯಮಂತ್ರಿ ಚಂದ್ರ.

 

ಕ್ರಾಂತಿ ಸಿನಿಮಾವು ಜನವರಿ 26ರಂದು ರಿಲೀಸ್ ಆಗುತ್ತಿದೆ. ಚಿತ್ರದ ಹಾಡುಗಳನ್ನು ಈಗಾಗಲೇ ಕರ್ನಾಟಕದ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡಿ, ಟ್ರೈಲರ್ ರಿಲೀಸ್ ಅನ್ನು ಕೂಡ ವಿಭಿನ್ನವಾಗಿ ಮಾಡಲು ನಿರ್ಧರಿಸಿದ ಚಿತ್ರ ತಂಡ ಥಿಯೇಟರ್ ಒಂದರಲ್ಲಿ ಇವೆಂಟ್ ಆಯೋಜಿಸಿ ಎಲ್ಲರನ್ನು ಆಹ್ವಾನಿಸಿದೆ.

ಅಭಿಮಾನಿಗಳು, ಮಾಧ್ಯಮದವರ ಮತ್ತು ಚಿತ್ರದ ಕಲಾವಿದರುಗಳು ಹಾಗೂ ಇನ್ನಿತರ ಅತಿಥಿಗಳ ಸಮ್ಮುಖದಲ್ಲಿ ಕ್ರಾಂತಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈಗಾಗಲೇ ದರ್ಶನ್ ಅವರು ಮತ್ತು ಚಿತ್ರತಂಡ ಕೊಡುತ್ತಿದ್ದ ಸಂದರ್ಶನಗಳಿಂದ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿಕೊಂಡಿದ್ದ ಜನತೆ ಇದು ಶಿಕ್ಷಣದ ಕುರಿತು ಕ್ರಾಂತಿ ಮಾಡಲು ಬಂದಿರುವ ಸಿನಿಮಾ ಎಂದು ಈಗಾಗಲೇ ಸುಳಿವು ಕಂಡುಕೊಂಡಿದೆ.

ಇದೀಗ ಟ್ರೈಲರ್ ನೋಡಿದ ಮೇಲೆ ಇನ್ನು ಹೆಚ್ಚಿನ ವಿಷಯ ಸಿನಿಮಾದಲ್ಲಿ ಇದೆ ಎನ್ನುವುದು ಕ್ರಾಂತಿ ಕುರಿತ ಆಸಕ್ತಿಯನ್ನು ಹೆಚ್ಚು ಮಾಡಿದೆ. ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸಿನಿಮಾ ಎಲ್ಲಾ ಕಲಾವಿದರೂ ಕೂಡ ಬಂದು ಮಾತನಾಡಿದ್ದಾರೆ. ಅದೇ ರೀತಿ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸಿರುವ ಮುಖ್ಯಮಂತ್ರಿ ಚಂದ್ರು ಅವರು ಸಹ ವೇದಿಕೆ ಮೇಲೆ ಬಂದು ದರ್ಶನ್ ಅವರನ್ನು ಕುರಿತಂತೆ ಮತ್ತು ಚಿತ್ರತಂಡದ ಕುರಿತಂತೆ ಹಾಗೂ ಕ್ರಾಂತಿ ಸಿನಿಮಾದ ವಿಷಯವನ್ನು ಸ್ವಲ್ಪ ಹೇಳಿದ್ದಾರೆ.

ಮುಖ್ಯಮಂತ್ರಿ ಚಂದ್ರು ಅವರು ಮಾತು ಶುರು ಮಾಡಿ ಈ ವಿಷಯಗಳನ್ನು ಹಂಚಿಕೊಂಡರು. ನಾನು ದರ್ಶನ್ ಅವರನ್ನು ಬಹಳ ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ, ದರ್ಶನ್ ಅವರ ತಂದೆಯ ಜೊತೆ ಹಲವು ಸಿನಿಮಾಗಳನ್ನು ಮಾಡಿದ್ದೇನೆ. ಆಗಿನ ದಿನಗಳಿಂದಲೂ ಕೂಡ ದರ್ಶನ್ ನನಗೆ ಗೊತ್ತು. ಈಗಿನ ಇಕ್ಕಟ್ಟು ಮತ್ತು ಬಿಕ್ಕಟ್ಟು ಪರಿಸ್ಥಿತಿಗಳ ನಡುವೆ ಎಲ್ಲವನ್ನು ಸಂಭಾಳಿಸಿಕೊಂಡು, ತನಗೆ ಇರುವ ಕ್ರೇಜ್ ಹಾಗೂ ತನ್ನ ಮೇಲೆ ಅಭಿಮಾನಿಗಳು ಹೊಂದಿರುವ ಹುಚ್ಚು ಅಭಿಮಾನವನ್ನು ನಿಭಾಯಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ಸೇವೆ ಮಾಡುತ್ತಿರುವ ಒಬ್ಬ ಶ್ರೇಷ್ಠ ನಟ ಈತ.

ದರ್ಶನ್ ಬಗ್ಗೆ ನಾನು ಹೇಳುವುದಕ್ಕಿಂತ ಹೆಚ್ಚಿನ ವಿಷಯ ಈಗಾಗಲೇ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಆದರೆ ಈ ಬಾರಿ ಅವರು ಮಾಡಿರುವ ಸಿನಿಮಾ ಬಗ್ಗೆ ಖಂಡಿತವಾಗಿಯೂ ಮಾತನಾಡಲೇಬೇಕು. ಸಿನಿಮಾ ಹೆಸರು ಕ್ರಾಂತಿ ಎನ್ನುವುದು ಎಲ್ಲರಿಗೂ ತಿಳಿದಿದೆ ಮತ್ತು ಇದು ಶಿಕ್ಷಣದ ಕ್ರಾಂತಿ ಕುರಿತ ವಿಷಯ ಎನ್ನುವುದು ಸಹ ಜನರಿಗೆ ತಿಳಿದಿದೆ. ಈಗಿನ ಸಮಾಜದ ಆಗುಹೋಗುಗಳ ಮತ್ತು ಹೀಗಿರುವ ವ್ಯವಸ್ಥೆಯ ಕುರಿತಾಗಿ ಕಟುವಾಗಿ ಟೀಕಿಸುವ ಸಿನಿಮಾ ಇದಾಗಿದ್ದು.

ಈ ಸಿನಿಮಾ ನೋಡಿದ ಮೇಲೆ ಬಡ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎಲ್ಲರ ಮನವು ಯೋಚಿಸುವಂತಾಗುತ್ತದೆ. ಒಂದು ಸಮಸ್ಯೆಯ ಮೂಲ ಹುಡುಕುದರ ಜೊತೆಗೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಆದರೆ ಪರಿಹಾರ ಸಿಗದೇ ಹೋದರೆ ಅದು ಹೇಗೆ ಪರಿವರ್ತನೆಗೆ ಕಾರಣವಾಗುತ್ತದೆ ಎನ್ನುವದನ್ನು ಹೇಳುವ ಸಿನಿಮಾ ಇದಾಗಿದೆ. ಇಡೀ ಭಾರತದಾದ್ಯಂತ ಇದು ಒಂದು ರೆವಲ್ಯೂಷನ್ ತರುವ ಪ್ರಯತ್ನವೂ ಆಗಿದೆ.

ಇಲ್ಲಿ ಯಾರನ್ನು ಕೂಡ ಉದ್ದೇಶಪೂರ್ವಕವಾಗಿ ಟೀಕಿಸಿಲ್ಲ, ವ್ಯಕ್ತಿ ಹೆಸರು ಹೇಳಿಕೊಂಡು ನಿಂದಿಸಿಲ್ಲ. ಯಾವ ಸಂದೇಶ ತಲುಪಿಸಬೇಕು ಅದನ್ನೆಲ್ಲ ಸಿನಿಮಾ ಮೂಲಕ ಮನೋರಂಜನ ಜೊತೆ ಸಂದೇಶವನ್ನು ಕೊಟ್ಟು ದಾಟಿಸಲಾಗಿದೆ. ಸಿನಿಮಾದಲ್ಲಿ ನಾನು ದರ್ಶನ್ ಅವರ ತಾತ ಅಂದರೆ ರವಿಚಂದ್ರನ್ ಅವರ ಅಪ್ಪನ ಪಾತ್ರ ಮಾಡಿದ್ದೇನೆ ಕುಡುಕನ ಪಾತ್ರ ಆಗಿದ್ದರೂ ಕೂಡ ನಾನು ಕೂಡ ಸಿನಿಮಾದ ಭಾಗವಾಗಿ ಒಂದೊಳ್ಳೆ ಸಾರಾಂಶ ಸಾರಿದ್ದೇನೆ ಎನ್ನುವ ತೃಪ್ತಿ ನನಗಿದೆ. ದರ್ಶನ್ ಅವರ ಈ ಸಿನಿಮಾ ನೂರು ದಿನಗಳಿಗಿಂತ ಹೆಚ್ಚು ದಿನ ಭರ್ಜರಿಯಾಗಿ ಪ್ರದರ್ಶನ ಕಾಣಲಿ, ಇನ್ನು ಇದೇ ರೀತಿಯ ಹತ್ತು ಹಲವು ಅವಕಾಶಗಳನ್ನು ದರ್ಶನ್ ಪಡೆಯಲಿ ಎಂದು ಹರಿಸುತ್ತೇನೆ ಎಂದಿದ್ದಾರೆ.

 

75 ದಿನ ಪೈಟಿಂಗ್ ಸೀನ್ ಮಾಡ್ದೆ, 25 ದಿನ ಸಾಂಗ್ ಶೂಟ್ ಮಾಡ್ದೆ ಅಂತ ಹೇಳೋ ಶೋಕಿ ನನ್ಗೂ ಇಲ್ಲ, ದರ್ಶನ್ ಗೂ ಇಲ್ಲ. ಯಾವ ಸಿನಿಮಾದ ಬಗ್ಗೆ ಗೊತ್ತಾ ಇವರು ಮಾತನಾಡಿದ್ದು.?

 

ಶೈಲಜಾ ನಾಗ್ ಹಾಗೂ ಬಿ ಸುರೇಶ್ ಅವರು ನಿರ್ಮಾಣ ಮಾಡಿ ನಿರ್ದೇಶನ ಮಾಡುತ್ತಿರುವ ಕ್ರಾಂತಿ ಈ ವರ್ಷದ ಬಹು ನಿರೀಕ್ಷಿತ ಚಿತ್ರ. ಇದೇ ಜನವರಿ 26ರಂದು ಈ ವರ್ಷದ ಪ್ರಥಮ ಸ್ಟಾರ್ ಸಿನಿಮಾ ಆಗಿ ರಿಲೀಸ್ ಆಗುತ್ತಿರುವ ಕ್ರಾಂತಿ ಸಿನಿಮಾದ ಬಗ್ಗೆ ಈಗಾಗಲೇ ಹೈಪ್ ಕ್ರಿಯೇಟ್ ಆಗಿದೆ. ದಿನೇ ದಿನೇ ನಾನಾ ವಿಷಯಗಳಿಂದ ಕ್ರಾಂತಿ ಕುರಿತ ಕುತೂಹಲ ಹೆಚ್ಚಾಗುತ್ತಿದ್ದು ಇದೀಗ ಟ್ರೈಲರ್ ಕೂಡ ರಿಲೀಸ್ ಮಾಡಲಾಗಿದೆ.

ಹಲವು ದಿನಗಳಿಂದ ಈ ಸಿನಿಮಾದ ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೇರಿದಂತೆ ನಿರ್ಮಾಪಕ ಶೈಲಜಾ ನಾಗ್, ಬಿ ಸುರೇಶ್, ಹರಿಕೃಷ್ಣ, ರಚಿತಾ ರಾಮ್ ಮುಂತಾದ ಎಲ್ಲರೂ ಸಿನಿಮಾ ಬಗ್ಗೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗ ಟೈಲರ್ ರಿಲೀಸ್ ಆದ ಮೇಲೆ ಮತ್ತೊಮ್ಮೆ ಸುದ್ದಿಗೋಷ್ಠಿಯಲ್ಲಿ ಕರೆಸಿ ಸಿನಿಮಾ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಇದೇ ಇಂಟರ್ವ್ಯೂ ಅಲ್ಲಿ ಶೈಲಜಾ ನಾಗ್ ಅವರು ಬಹಳ ಖಾರವಾಗಿ ಪ್ರಶ್ನೆ ಒಂದಕ್ಕೆ ಉತ್ತರಿಸಿದ್ದಾರೆ. ಅವರು ಮಾತನಾಡಿರುವ ವಿಡಿಯೋ ಬೈಟಿಂಗ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಬಹುಶಃ ಸಿನಿಮಾದಲ್ಲಿ ದರ್ಶನ್ ಎನ್ನುವ ಕಾರಣಕ್ಕೆ ಅಷ್ಟು ಅದ್ದೂರಿಯಾಗಿ ಮಾಡಿದ್ದೀರಾ ಎನ್ನುವ ಪ್ರಶ್ನೆಯನ್ನು ಕೇಳಿರಬಹುದು ಅದಕ್ಕಾಗಿ ಈ ರೀತಿ ಉತ್ತರ ಬಂದಿರಬಹುದು ಎಂದು ಊಹಿಸಲಾಗಿದೆ.

ಈ ಬೈಟಿಂಗ್ ಅಲ್ಲಿ ಶೈಲಜಾ ನಾಗ್ ಅವರು ಸ್ವಲ್ಪ ಕೋಪಗೊಂಡ ಉತ್ತರಿಸಿದ್ದಾರೆ ಅವರು ಆಡಿರುವ ಮಾತುಗಳು ಹೀಗಿವೆ. ಆ ರೀತಿ ಶೋಕಿ ನನಗೂ ಇಲ್ಲ ದರ್ಶನ್ ಗೂ ಇಲ್ಲ. ನಾನು ಸಹ ಧಾರಾವಾಹಿಗಳಲ್ಲಿ ನಟನೆ ಮಾಡಿಕೊಂಡು ತಂತ್ರಜ್ಞೆ ಆಗಿ ಕೆಲಸ ಮಾಡಿಕೊಂಡು ನಿರ್ದೇಶನ ಮಾಡಿಕೊಂಡು ಬಂದವಳು. ನನಗೆ ಕಸಗುಡಿಸುವುದಕ್ಕೂ ಬರುತ್ತದೆ, ವ್ಯಾಪಾರ ಮಾಡುವುದಕ್ಕೂ ಬರುತ್ತದೆ.

ನಾವು ಸೂಕ್ಷ್ಮತೆಯನ್ನು ಅರಿತವರು ಕಂಟೆಂಟ್ ನಮಗೆ ಮುಖ್ಯ ಹಣ ಅಲ್ಲ ಮತ್ತು ಯಜಮಾನ ಸಿನಿಮಾ ಆಗಲಿ ಕ್ರಾಂತಿ ಸಿನಿಮಾ ಆಗಲಿ, ಸಿನಿಮಾ ಗೆ ಏನು ಬೇಕೋ ಅದನ್ನು ನಾವು ಕೊಡುತ್ತೇವೆ. ದರ್ಶನ್ ಅವರೂ ಕೂಡ ಎಪ್ಪತೈದು ದಿನ ಫೈಟಿಂಗ್ 25 ದಿನ ಡ್ಯಾನ್ಸ್ ಎಂದುಕೊಂಡು ಭಾಗಿಯಾಗುವಂತಹ ನಟ ಅಲ್ಲ. ಸಿನಿಮಾ ಕಥೆ ಕೇಳಿದ ದಿನದಿಂದಲೇ ಆ ಪಾತ್ರಕ್ಕೆ ಬೇಕಾದ ತಯಾರಿಯಲ್ಲಿ ಅವರು ತೊಡೆದುಕೊಳ್ಳುತ್ತಾರೆ.

ಒಂದರ್ಥದಲ್ಲಿ ಪಾತ್ರವೇ ಅವರಾಗಿ ಬಿಡುತ್ತಾರೆ ಹಾಗಾಗಿ ಆ ಪಾತ್ರಕ್ಕೆ ಅವರಿಗೆ ಸೈಕಲ್ ಬೇಕಾದ್ರೆ ಸೈಕಲ್, ಏರೋಪ್ಲೇನ್ ಬೇಕಾದರೆ ಏರೋಪ್ಲೇನ್ ಆ ರೀತಿ ವ್ಯವಸ್ಥೆ ಮಾಡುತ್ತೇವೆ ಹೊರತು ದುಡ್ಡು ಹಾಕಿ ದುಡ್ಡು ತೆಗೆಯುವುದಕ್ಕೆ ಅಲ್ಲ. ನಾವು ಖಂಡಿತವಾಗಿಯೂ ಕಂಟೆಂಟ್ ಗೆ ಹೆಚ್ಚು ಗಮನ ಕೊಟ್ಟಿರುವುದು ಮತ್ತು ನೀವೆಲ್ಲಾ ಈ ರೀತಿ ಪ್ರಶ್ನೆ ಕೇಳುವುದಕ್ಕಾಗಿ ನಾನು ಹೇಳುತ್ತಿದ್ದೇನೆ ದರ್ಶನ್ ಅಂತಹ ಒಬ್ಬ ಮೇರು ನಟ ಸೂಪರ್ ಸ್ಟಾರ್ ಇಟ್ಟುಕೊಂಡು ನಾವು ಐದು, ಹತ್ತು ಕೋಟಿ ಸಿನಿಮಾ ಮಾಡುವುದಕ್ಕೆ ಆಗುತ್ತದೆಯೇ.

ನಾವು ಸಹ ಅವರಿಗೆ ತಕ್ಕ ಹಾಗೆ ಜೊತೆಗೆ ಪಾತ್ರದ ಅವಶ್ಯಕತೆ ಅರಿತು ಮಾಡಬೇಕು. ದೊಡ್ಡ ಬಜೆಟ್ ಸಿನಿಮಾ ಮಾಡಿದರೆ ದೊಡ್ಡ ಹಿಟ್ ಆಗುವುದು ಎನ್ನುವ ಜಮಾನ ಹೋಗಿ ಎಷ್ಟೋ ವರ್ಷ ಆಯ್ತು. ಈಗ ನೀವೇ ಕಂಡಿದ್ದೀರಾ ಸಣ್ಣ ಬಜೆಟಿನ ಸಿನಿಮಾ ಕೂಡ ಎಷ್ಟು ಕೋಟಿ ಗಳಿಕೆ ಕಾಣುತ್ತಿದೆ ಎಂದು ಕಾರಣ ಸಿನಿಮಾ ಕಂಟೆಂಟ್. ನಮ್ಮ ಸಿನಿಮಾದಲ್ಲಿ ಸಹಾ ಹಣ ಎನ್ನುವುದು ಬಿಟ್ಟು ಕಂಟೆಂಟ್ ಎನ್ನುವುದಕ್ಕೆ ಬೆಲೆ ಕೊಟ್ಟಿರುವುದು ಎನ್ನುವುದು ಇದರಿಂದ ಸ್ಪಷ್ಟ ಎಂದಿದ್ದಾರೆ.

ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾದ ಕ್ಲೈಮಾಕ್ಸ್ ಫೈಟಿಂಗ್ ಸೀನ್ ಅನ್ನು ಚಿತ್ರೀಕರಣ ಮಾಡುವುದಕ್ಕೆ ಬರೋಬ್ಬರಿ 57 ದಿನ ತೆಗೆದುಕೊಂಡಿರುವ ವಿಚಾರ ನಿಮಗೆ ತಿಳಿದೇ ಇದೆ. ಈ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಶೈಲಜಾ ನಾ್ ಅಗವರು ಆ ರೀತಿ ಪ್ರತಿಕ್ರಿಯೆ ನೀಡಿದರು ಏನೋ ತಿಳಿದಿಲ್ಲ ಆದರೆ. ಕ್ರಾಂತಿ ಸಿನಿಮಾದ ಬರುವುದಕೆಗಾಗಿ ಸಾಕಷ್ಟು ಜನ ಅಭಿಮಾನಿಗಳು ಕಾತುರದಿಂದ ಕಾದಿರುವುದಂತೂ ಸತ್ಯ ದರ್ಶನ್ ಈ ಬಾರಿ ಕ್ರಾಂತಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಸಾಕಷ್ಟು ಎದುರೇಟನ್ನು ತಡೆಹಿಡಿಯಬೇಕಿದೆ.

ಕ್ರಾಂತಿ ಸಿನಿಮಾ ಟ್ರೈಲರ್ ಲಾಂಚ್ ಮಾಡುವ ಸಮಯದಲ್ಲಿ ಬೇಸರ ಮಾಡಿಕೊಂಡು ವೇದಿಕೆಯಿಂದ ಕೆಳಗಿಳಿದ ದರ್ಶನ್ ಕಾರಣವೇನು ಗೊತ್ತ.?

ಇಡೀ ಕರ್ನಾಟಕ ಕಾಯುತ್ತಿರುವ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಈ ವರ್ಷದ ಮೊದಲ ಸ್ಟಾರ್ ಸಿನಿಮಾ ಆಗಿ ಜನವರಿ 26ರಂದು ರಾಜ್ಯದಾದ್ಯಂತ ತೆರೆ ಕಾಣುತ್ತಿದೆ. ಈಗಾಗಲೇ ಸಿನಿಮಾ ಬಗ್ಗೆ ಸಿನಿಮಾ ಹಾಡುಗಳ ಬಗ್ಗೆ ಪ್ರಚಾರ ಮಾಡುತ್ತಿರುವ ಸಿನಿಮಾ ತಂಡ ನಾನಾ ಬಗೆಯಲ್ಲಿ ಜನರಿಗೆ ಕ್ರಾಂತಿ ಸಿನಿಮಾದ ವಿಷಯ ತಿಳಿಸುವ ಕೆಲಸ ಮಾಡುತ್ತಿದೆ. ಇದರ ಪ್ರಯುಕ್ತ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಒಂದೊಂದು ಹಾಡನ್ನು ರಿಲೀಸ್ ಮಾಡಿತ್ತು.

ಇದೀಗ ಟೈಲರ್ ರಿಲೀಸ್ ಅನ್ನು ಕೂಡ ಹೊಸ ರೀತಿ ಪ್ರಯೋಗದಲ್ಲಿ ಮಾಡಿ ರಾಜ್ಯದಲ್ಲೇ ಮೊದಲ ಬಾರಿಗೆ ಥಿಯೇಟರ್ ಅಲ್ಲಿ ಸಿನಿಮಾ ಟೈಲರ್ ರಿಲೀಸ್ ಮಾಡಿದ ಸಿನಿಮಾ ಎನ್ನುವ ಖ್ಯಾತಿಗೆ ಒಳಗಾಗಿದೆ. ಕ್ರಾಂತಿ ಸಿನಿಮಾ ರಿಲೀಸ್ ಅನ್ನು ರಾಜ್ಯದ ನಾನಾ ಥಿಯೇಟರ್ ಗಳಲ್ಲಿ ಏರ್ಪಡಿಸಲಾಗಿತ್ತು ಈ ಇವೆಂಟನ್ನು ಚಿತ್ರತಂಡವು ಅದ್ದೂರಿಯಾಗಿ ನಡೆಸಿಕೊಟ್ಟಿದೆ.

ಚಿತ್ರದ ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರುಗಳ ದಂಡೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕಾರ್ಯಕ್ರಮ ಯಶಸ್ವಿ ಆಗಿದೆ. ಈ ಇವೆಂಟ್ ಅಲ್ಲಿ ದರ್ಶನ್ ಅವರ ಸಹ ಮಾತನಾಡಿ ಅಭಿಮಾನಿಗಳಿಗೆ ಖುಷಿಪಡಿಸಿದ್ದಾರೆ ದರ್ಶನ್ ಅವರು ಯಾವುದಾದರೂ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದರೆ ಅಲ್ಲಿ ಅವರ ಕೋಟ್ಯಾಂತರ ಅಭಿಮಾನಿಗಳು ಸೇರಿರುತ್ತಾರೆ. ದರ್ಶನ್ ಅವರನ್ನು ನೋಡುವುದಕ್ಕೆ ಆಸೆ ಪಡುವ ಅಭಿಮಾನಿಗಳು ಮತ್ತು ಅವರ ಮಾತುಗಳನ್ನು ಕೇಳಲು ಕಾಯುತ್ತಿರುವ ಅಭಿಮಾನಿಗಳು ಕೂಡ ಇರುತ್ತಾರೆ.

ಹಾಗಾಗಿ ದರ್ಶನ್ ಎಲ್ಲೇ ಮಾತನಾಡುತ್ತಿದ್ದಾರೆ ಎಂದರು ಎಲ್ಲರ ಕಿವಿ ನೆಟ್ಟಗಾಗುತ್ತದೆ. ಆದರೆ ಅದು ಯಾಕೋ ಕ್ರಾಂತಿ ಸಿನಿಮಾ ಟ್ರೈಲರ್ ರಿಲೀಸ್ ವೇದಿಕೆ ಮೇಲೆ ದರ್ಶನ್ ಅವರು ಎರಡೇ ಎರಡು ಮಾತನಾಡಿ ತಮ್ಮ ಮಾತನ್ನು ಮುಗಿಸಿ ವೇದಿಕೆಯಿಂದ ಕೆಳಗಿಳಿದು ಬಿಟ್ಟಿದ್ದಾರೆ. ದರ್ಶನ್ ಅವರು ಈ ರೀತಿ ಮಾಡುತ್ತಾರೆ ಎಂದು ಯಾರೂ ಕೂಡ ಊಹೆ ಮಾಡಿರಲಿಲ್ಲ. ಚಿತ್ರಕ್ಕೆ ಸಂಬಂಧಪಟ್ಟ ಕೆಲವರು ಮಾತನಾಡಿದ ಮೇಲೆ ದರ್ಶನವರನ್ನು ಕೂಡ ವೇದಿಕೆಗೆ ಆಹ್ವಾನಿಸಲಾಗುತ್ತದೆ.

ಮೊದಲಿಗೆ ವೇದಿಕೆ ಮೇಲೆ ಹೋಗುವ ದರ್ಶನ್ ಅವರು ಸುಮಲತಾ ಅವರಿಗೆ ಮತ್ತು ಗಿರಿಜಾ ಲೋಕೇಶ್ ಅವರಿಗೆ ನಮಸ್ಕಾರ ಹೇಳುತ್ತಾ ಈ ಸಿನಿಮಾಗಾಗಿ ಕೆಲಸ ಮಾಡಿದ ಪ್ರತಿಯೊಬ್ಬ ವ್ಯಕ್ತಿಗೂ ಮತ್ತು ಎಲ್ಲಾ ಕಲಾವಿದರುಗಳಿಗೂ ಧನ್ಯವಾದಗಳು, ಈ ಕಾರ್ಯಕ್ರಮಕ್ಕೆ ಸ್ವಾಗತ ಎಂದು ಹೇಳುತ್ತಾ ಮಾತು ಶುರು ಮಾಡುತ್ತಾರೆ. ದರ್ಶನ್ ಅವರು ಇನ್ನೇನು ಹೇಳುತ್ತಾರೆ ಎಂದು ಕಾಯುತ್ತಿದ್ದ ಎಲ್ಲರಿಗೂ ಕ್ಷಣದಲ್ಲೇ ನಿರಾಸೆ ಆಗಿದೆ.

ನಾನು ಈಗಾಗಲೇ 20 ರಿಂದ 30 ಚಾನೆಲ್ ಅಲ್ಲಿ ಕ್ರಾಂತಿ ಸಿನಿಮಾ ಬಗ್ಗೆ ಮಾತನಾಡಿದ್ದೇನೆ ಹಾಗಾಗಿ ಈಗ ಕ್ರಾಂತಿ ಎಂದರೆ ಏನು ಎನ್ನುವ ಸುಳಿದು ಎಲ್ಲರಿಗೂ ಸಿಕ್ಕಿದೆ ಆದರೆ ಎಲ್ಲರೂ ಇಮ್ಯಾಜಿನ್ ಮಾಡಿರುವುದು 0.01% ಮಾತ್ರ ಸಿನಿಮಾದಲ್ಲಿ ಅದಕ್ಕಿಂತಲೂ ಮಿಗಿಲಾದ ವಿಷಯ ಇದೆ. ಹಾಗಾಗಿ ಎಲ್ಲರೂ ಥಿಯೇಟರ್ ಅಲ್ಲಿ ಬಂದು ಕ್ರಾಂತಿ ಸಿನಿಮಾವನ್ನು ನೋಡಿ ಎಂದು ಹೇಳುತ್ತಾ ವೇದಿಕೆಯಿಂದ ಕೆಳಗಿಳಿದು ಬಿಡುತ್ತಾರೆ. ಕ್ಷಣ ಎಲ್ಲರೂ ಕೂಡ ಮೌನವಾಗಿ ಅವರನ್ನೇ ನೋಡುತ್ತಿರುತ್ತಾರೆ.

ದರ್ಶನ್ ಅವರು ಕಳೆದ ಬಾರಿ ಆದ ಆ ಬೇಸರದಿಂದ ಹೊರ ಬಂದಿಲ್ಲವೋ ಅಥವಾ ಇನ್ನು ಎಲ್ಲರಿಗೂ ಮಾತನಾಡಲು ಅವಕಾಶ ಸಿಗಲಿ ಎಂದು ಈ ರೀತಿ ಮಾಡಿದ್ದಾರೋ ಅರ್ಥವಾಗುತ್ತಿಲ್ಲ ಆದರೆ ದರ್ಶನ್ ಮಾತು ಕೇಳಲು ಆಸೆ ಪಟ್ಟವರಿಗಂತೂ ಬೇಸರ ಆಗಿರುವುದು ನಿಜ. ಸಿನಿಮಾ ಸಕ್ಸಸ್ಫುಲ್ ಆಗಲಿ ಡಿ ಬಾಸ್ ನೋವೆಲ್ಲಾ ಸಕ್ಸಸ್ ಇಂದ ನಿವಾರಣೆ ಆಗಲಿ ಎಂದು ಹರಸೋಣ.

ಗೀತಾಕ್ಕ ತಲೆ ಕೂದಲು ಬಾಚಿ ಸರಳತೆ ಮೆರೆದ ಶಿವಣ್ಣ, ಸ್ಟಾರ್ ನಟನಾಗಿದ್ದರು ಹೆಂಡತಿ ಸೇವೆ ಮಾಡಿ ಮಾದರಿಯಾದ ಶಿವಣ್ಣ. ಈ ವೈರಲ್ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

 

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ ವೇದ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವೇದ ಸಿನಿಮಾದ ವಿಜಯೋತ್ಸವವನ್ನು ಆಚರಿಸಲು ಶಿವಣ್ಣ ಹಾಗೂ ಗೀತಾ ಹಾಗೂ ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡಿರುವಂತಹ ಗಾನವಿ ಲಕ್ಷ್ಮಣ್ ಹಾಗೂ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಶ್ವೇತಾ ಚಂಗಪ್ಪ ಸೇರಿದಂತೆ ಚಿತ್ರ ಡೈರೆಕ್ಟರ್ ಆದಂತಹ ಹರ್ಷ ಹಾಗೂ ಇನ್ನಿತರ ಪ್ರತಿದಿನವೂ ಕೂಡ ಒಂದೊಂದು ಪ್ರದೇಶಗಳಿಗೆ ಹೋಗಿ ವೇದ ಸಿನಿಮಾದ ವಿಜಯೋತ್ಸವದ ಆಚರಿಸುತ್ತಿದ್ದಾರೆ.

ವೇದಾ ಸಿನಿಮಾವನ್ನು ಸ್ವತಃ ಶಿವರಾಜ್ ಕುಮಾರ್ ಅವರ ಧರ್ಮಪತ್ನಿ ಗೀತಾ ಅವರೇ ನಿರ್ಮಾಣ ಮಾಡಿದ್ದಾರೆ ಹೌದು ಗೀತಾ ಪಿಕ್ಚರ್ ಬ್ಯಾನರ್ ಅಡಿಯಲ್ಲಿ ಶಿವಣ್ಣ ಅವರ 125ನೇ ಸಿನಿಮಾ ಬಿಡುಗಡೆಯಾಗಿರುವುದು ಎಲ್ಲರಲ್ಲೂ ಕೂಡ ಸಂತಸವನ್ನು ತಂದಿದೆ. ಈ ಕಾರಣಕ್ಕಾಗಿಯೇ ದೀತಕ್ಕ ಅವರು ಕೂಡ ಚಿತ್ರಕಂಡದ ಜೊತೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ ಕನ್ನಡ ಮಾತ್ರವಲ್ಲದೆ ಸುಮಾರು ಐದು ಭಾಷೆಯಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

ಈ ದಿನ ಕೂಡ ಶಿವಣ್ಣ ಅವರು ಶಿವಮೊಗ್ಗಗೆ ತೆರಳಿ ವೇದ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ. ಪ್ರಚಾರ ಕಾರ್ಯ ಮುಗಿದ ನಂತರ ಶಿವಣ್ಣ ಹಾಗೂ ಗೀತಕ್ಕ ಅವರು ಹೋಗಿದ್ದಾರೆ. ಇದೇ ಸಮಯದಲ್ಲಿ ಶಿವಣ್ಣ ಅವರು ಗೀತಕ್ಕ ಅವರ ತಲೆ ಬಾಚಿದ್ದಾರೆ ಶಿವಣ್ಣ ಅವರು ಗೀತಕ್ಕ ಅವರ ತಲೆ ಬಚುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಏಕೆಂದರೆ ಕಳೆದ ಒಂದು ತಿಂಗಳ ಹಿಂದೆ ಗೀತಕ್ಕ ಅವರು ತಮ್ಮ ಕೈಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದಾರೆ ಹಾಗಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವರ ಎಡಗೈ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಹಾಗಾಗಿ ಶಿವಣ್ಣ ಅವರು ಗೀತಕ್ಕ ಅವರ ಸಂಪೂರ್ಣ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಹೆಂಡತಿಯ ಸೇವೆಯನ್ನು ಮಾಡಿದ್ದಾರೆ ನಿಜಕ್ಕೂ ಕೂಡ ಇದು ಮೆಚ್ಚುವಂತಹ ವಿಷಯವೇ ಬೇರೆ ನಟರಾಗಿದ್ದರೆ ಹೆಂಡತಿಯನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದರೇನು.

ಆದರೆ ಶಿವಣ್ಣ ಅವರು ಮಾತ್ರ ತಾವು ಎಲ್ಲೇ ಹೋದರು ಕೂಡ ಗೀತಕ್ಕ ಅವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಅನಾರೋಗ್ಯ ಇದ್ದರೂ ಕೂಡ ಅವರನ್ನು ಮಗುವಿನಂತೆ ಲಾಲನೆ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಸ್ಟಾರ್ ನಟನಾಗಿದ್ದರೂ ಕೂಡ ಅದನ್ನೆಲ್ಲ ಮರೆತು ತಾನೊಬ್ಬ ಗಂಡ ಪತ್ನಿಯ ಕಷ್ಟದ ಸಮಯದಲ್ಲಿ ಜೊತೆಗೆ ನಿಲ್ಲಬೇಕು ಆಕೆಗೆ ಸಹಾಯ ಮಾಡಬೇಕು ಎಂಬ ಮನೋಗುಣವನ್ನು ಮೈಗೂಡಿಸಿಕೊಂಡಿದ್ದಾರೆ.

ದೊಡ್ಮನೆಯ ಸರಳತೆಯ ಬಗ್ಗೆ ಹಾಗೂ ದೊಡ್ಮನೆಯಾ ಸದ್ಗುಣಗಳ ಬಗ್ಗೆ ಹೆಚ್ಚಾಗಿ ಹೇಳಬೇಕಾದ ಅಗತ್ಯವೇ ಇಲ್ಲ ಆದರೆ ಶಿವಣ್ಣ ಅವರು ಮಾಡಿದಂತಹ ಈ ಕೆಲಸ ಇದೀಗ ಎಲ್ಲರಿಗೂ ಸ್ಪೂರ್ತಿ ಅಂತಾನೆ ಹೇಳಬಹುದು. ಇದನ್ನು ನೋಡಿದಂತಹ ಎಷ್ಟೋ ಗಂಡಸರು ತಮ್ಮ ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳಬಹುದು ಹೆಂಡತಿಯನ್ನು ಸಮಾನನಾಗಿ ಕಾಣಬಹುದು. ಹಾಗೂ ಪತ್ನಿಗೆ ಆರೋಗ್ಯದ ಸಮಯದಲ್ಲಿ ಪತಿಯ ನೆರವು ಬೇಕಾಗುತ್ತದೆ ಎಂಬುದನ್ನು ಈ ವಿಡಿಯೋ ಸಾಬೀತು ಪಡಿಸುತ್ತದೆ.

ಸದ್ಯಕ್ಕೆ ಶಿವಣ್ಣ ಅವರು ಗೀತಕ್ಕ ಅವರಿಗೆ ತಲೆ ಬಾಚುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಎಲ್ಲರಿಂದಲೂ ಕೂಡ ಮೆಚ್ಚುಗೆಯ ಮಹಾಪೂರವನ್ನು ಪಡೆದುಕೊಳ್ಳುತ್ತಿದೆ. ನೀವು ಕೂಡ ಶಿವಣ್ಣ ಅವರು ತಲೆ ಬಾಚುತ್ತಿರುವಂತಹ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ.

https://fb.watch/hV6DiyQWSp/