Home Blog Page 255

ಇಂಟರ್ನ್ಯಾಷನಲ್ ಸ್ಟಾರ್ ಆದ ಮೇಲೆ ಸಂಪೂರ್ಣವಾಗಿ ಬದಲಾದ ಯಶ್, ರಾಕಿ ಬಾಯ್ ವರ್ತನೆ ನೋಡಿ ಕೆಂಡಮಂಡಲವಾದ ನೆಟ್ಟಿಗರು ಅಷ್ಟಕ್ಕೂ ಯಶ್ ಮಾಡಿದ್ದೇನು ಗೊತ್ತಾ.?

 

ಇಂಟರ್ನ್ಯಾಷನಲ್ ಸ್ಟಾರ್ ಆದ ಮೇಲೆ ಕನ್ನಡ ಸಿನಿಮಾ ಮರೆತರ ಯಶ್.? RRR ಸಿನಿಮಾಗೆ ಅಭಿನಂದನೆ ಸಲ್ಲಿಸಿ ಕಾಂತರಾ & ವಿಕ್ರಂತ್ ರೋಣ ಪ್ರತಿಕ್ರಿಯೆ ನೀಡಲಿಲ್ಲ.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವಂತಹ ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರು ಕಳೆದ ವರ್ಷ ಕೆಜಿಎಫ್ ಚಾಪ್ಟರ್ 2(KGF Chapter 2) ಸಿನಿಮಾದಲ್ಲಿ ನಟನೆ ಮಾಡಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದ್ದು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಜೊತೆಗೆ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ. ಇನ್ನು ಕೆಜಿಎಫ್ ಸಿನಿಮಾ ಬಿಡುಗಡೆಯಾದ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಸುಮಾರು 1250 ಕೋಟಿ ಕಲೆಕ್ಷನ್ ಮಾಡಿದ್ದು ಆ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪೈಕಿ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಇನ್ನು ಕೆಜಿಎಫ್ ಸಿನಿಮಾವನ್ನು ಹೊರತು ಪಡಿಸಿದರೆ ಎಸ್.ಎಸ್ ರಾಜಮೌಳಿ ಅವರು ನಿರ್ದೇಶನ ಮಾಡಿದಂತಹ ತ್ರಿಬಲ್ ಆರ್ಸಿ(RRR)ನಿಮಾ ಕೆಜಿಎಫ್ ಸಿನಿಮಾ ಗೆ ಪೈಪೋಟಿಯಾಗಿ ನಿಂತಿತ್ತು. ಆದರೆ ಕಲೆಕ್ಷನ್ ವಿಚಾರದಲ್ಲಿ ಮಾತ್ರ ಕೆಜಿಎಫ್ ಸಿನಿಮಾವನ್ನು ಮೀರಿಸಲು ಸಾಧ್ಯವಾಗದೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಜೊತೆಗೆ ನಮ್ಮ ಕನ್ನಡದ ಹೆಮ್ಮೆಯ ಇನ್ನೆರಡು ಸಿನಿಮಾಗಳಾದಂತಹ ಕಾಂತರಾ ಹಾಗೂ ವಿಕ್ರಂತ್ ರೋಣ ಸಿನಿಮಾ ಕೂಡ ಬಿಡುಗಡೆಯಾಗಿದ್ದವು.

ಈಗ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಇದೇ ಸಿನಿಮಾದ ವಿಚಾರಕ್ಕೆ ಟೀಕೆಗೆ ಒಳಗಾಗಿದ್ದಾರೆ ಹೌದು, ತ್ರಿಬಲ್ ಆರ್ ಸಿನಿಮಾದ ಸಕ್ಸಸ್ ನೋಡಿ ಹೊಗಳಿರುವಂತಹ ರಾಕಿಂಗ್ ಸ್ಟಾರ್ ಯಶ್ ಅವರು ಕಾಂತಾರ ಹಾಗೂ ವಿಕ್ರಾಂತ್ ರೋಣ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಿದ್ದು ಅಷ್ಟೆಲ್ಲ ಸಾಧನೆ ಮಾಡಿದರು ಕೂಡ ಯಾವುದೇ ವಿಚಾರವಾಗಿ ಮಾತನಾಡದೆ ಇದೀಗ ಎಲ್ಲರ ಕೆಂಗಳಿಗೆ ಗುರಿಯಾಗಿದ್ದಾರೆ. ತ್ರಿಬಲ್ ಆರ್ ಸಿನಿಮಾ 2023ನೇ ಗೋಲ್ಡನ್ ಗ್ಲೋಬ್ ಅವಾರ್ಡ್ ಕಾರ್ಯಕ್ರಮದಲ್ಲಿ ನಾಟು ನಾಟು ಹಾಡಿಗಾಗಿ ಅತ್ಯುತ್ತಮ ವರ್ಜಿನಲ್ ಹಾಡು ಎಂಬ ಪ್ರಶಸ್ತಿಯನ್ನು ಗೆದ್ದಿದೆ.

ಈ ಕುರಿತಾಗಿ ಯಶ್ ಅವರು ಟ್ವೀಟ್ ಮಾಡಿದ್ದಾರೆ ತ್ರಿಬಲ್ ಆರ್ ಸಿನಿಮಾ ಗೋಲ್ಡನ್ ಗ್ಲೋಬ್ ಅವಾರ್ಡ್ ಗೆದ್ದಿರುವುದು ನನಗೆ ಖುಷಿ ತಂದಿದೆ. ಅಷ್ಟೇ ಅಲ್ಲದೆ ಎಸ್.ಎಸ್ ರಾಜಮೌಳಿ(S.S Rajmouli) ಸರ್ ಆಸ್ಕರ್ ಗೆಲ್ಲುವಂತಹ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೆ ನಾಟು ನಾಟು ಹಾಡಿನಲ್ಲಿ ಹೆಜ್ಜೆ ಹಾಕಿರುವಂತಹ ರಾಮ್ ಚರಣ್ ತೇಜ(Ram Charan Teja) ಹಾಗೂ ಜೂನಿಯರ್ ಎನ್ಟಿಆರ್(Junior NTR) ಅವರಿಗೂ ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ರೀತಿ ಟ್ವಿಟ್ ಮಾಡಿದ್ದನ್ನು ಕಂಡಂತಹ ಕನ್ನಡದ ಕೆಲವು ನೆಟ್ಟಿಗರು ಯಶ್ ವಿರುದ್ಧ ಇದೀಗ ಚಾಟಿಯನ್ನು ಬೀಸಿದ್ದಾರೆ.

ತ್ರಿಬಲ್ ಆರ್ ಸಿನಿಮಾದ ನಾಟು ನಾಟು(Naatu Naatu) ಹಾಡಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್(Golden Glob Award) ಸಿಕ್ಕಿರುವುದಕ್ಕೆ ಹಾಗೂ ರಾಜಮೌಳಿ ಅವರನ್ನು ಆಸ್ಕರ್ ಅವಾರ್ಡ್ ಪಡೆದುಕೊಳ್ಳುವುದಕ್ಕೆ ನೀವು ಅರ್ಹರಾಗಿದ್ದೀರಿ ಎಂಬ ವಿಚಾರಕ್ಕೆ ಟ್ವೀಟ್ ಮಾಡಿರುವಂತಹ ನೀವು ಕಾಂತರಾ(Kantara) ಸಿನಿಮಾ ಹಾಗೂ ವಿಕ್ರಂತ್ ರೋಣ(Vikrant Rona) ಸಿನಿಮಾ ಆಸ್ಕರ್ ಅವಾರ್ಡ್ ಗೆ ಹೋದಾಗ ಯಾಕೆ ಸುಮ್ಮನಿದ್ರಿ.? ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದಕ್ಕೆ ನಮ್ಮ ಕನ್ನಡ ಸಿನಿಮಾಗಳನ್ನೇ ಮರೆತು ಹೋದ್ರಾ ಎಂದು ಫ್ಯಾನ್ಸ್ ಗಳು ಇದೀಗ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದ್ದಾರೆ.ಇದರ ಜೊತೆಗೆ ಕೇವಲ RRR ಸಿನಿಮಾಗೆ ಮಾತ್ರ ನೀವು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದೀರಾ ಎಂದು ನೆಟ್ಟಿಗರು ಕೋಪಗೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರು ನಮ್ಮ ಕಾಂತರಾ ಸಿನಿಮಾ ಹಾಗೂ ವಿಕ್ರಂತ್ ರೋಣ ಸಿನಿಮಾದ ಬಗ್ಗೆಯೂ ಕೂಡ ಟ್ವಿಟ್ ಮಾಡಿದ್ದರೆ ಚೆನ್ನಾಗಿರುತ್ತೆ. RRR ಸಿನಿಮಾಗೆ ಇರುವಂತಹ ಒಲವು ನಮ್ಮ ಕನ್ನಡ ಸಿನಿಮಾಗೆ ಯಾಕೆ ಇಲ್ಲ ಎಂಬುವುದೇ ಇದೀಗ ದೊಡ್ಡ ಪ್ರಶ್ನೆಯಾಗಿದೆ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಬೆಳೆದರು ಕೂಡ ಇಂಟರ್ನ್ಯಾಷನಲ್ ಸ್ಟಾರ್ ಲೆವೆಲ್ ಗೆ ಹೋಗುವುದಕ್ಕೆ ಕಾರಣ ಆಗಿದ್ದು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿನೇ ಎಂಬುವುದನ್ನು ರಾಕಿಂಗ್ ಸ್ಟಾರ್ ಯಶ್ ಅವರು ಮರೆಯಬಾರದಿತ್ತು. ಜೊತೆಗೆ ಎಲ್ಲ ಸಿನಿಮಾವನ್ನು ಕೂಡ ಸಮಾನವಾಗಿ ನೋಡಬೇಕಿತ್ತು ಪಕ್ಷಪಾತಿಯ ನಿಯಮ ಬಿಡಬೇಕಿತ್ತು.

ರಾಕಿಂಗ್ ಸ್ಟಾರ್ ಯಶ್ ಅವರು ತಿಳಿದೋ ಅಥವಾ ತಿಳಿಯದೇನೋ ಈ ರೀತಿ ತಪ್ಪು ಮಾಡಿರಬಹುದು ಆದರೆ ಇವರು ಮಾಡಿರುವಂತಹ ಈ ಕೆಲಸದಿಂದಾಗಿ ಅಭಿಮಾನಿಗಳಂತೂ ಬೇಸರ ವ್ಯಕ್ತಪಡಿಸಿರುವುದಂತೂ ಖಚಿತ. ಇನ್ನೂ ಮುಂದೆ ಆದರೂ ಯಶ್ ಅವರು ಎಚ್ಚೆತ್ತಿಕೊಳ್ಳಲಿ ಬೇರೆ ಸಿನಿಮಾಗಳನ್ನು ಹೊಗಳಲಿ ತಪ್ಪಿಲ್ಲ ಆದರೆ ಮೊದಲು ನಮ್ಮ ಇಂಡಸ್ಟ್ರಿಗೆ ಹಾಗೂ ನಮ್ಮ ಸಿನಿಮಾಗಳಿಗೆ ಆದ್ಯತೆ ಕೊಟ್ಟರೆ ಉತ್ತಮ ಎಂಬುದು ಕೆಲವು ಅಭಿಮಾನಿಗಳ ಅಭಿಪ್ರಾಯವಾಗಿದೆ. ಯಶ್ ಅವರ ಈ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ಗೆ ಹಾರಿದ ನಟಿ ರಾಗಿಣಿ, ಸಿನಿಮಾಗಾಗಿ ಮಾಡಿಸಿದ ಫೋಟೋಶೂಟ್ ವಿಡಿಯೋ ನೋಡಿದ್ರೆ ನಿಜಕ್ಕೂ ಕಳೆದು ಹೋಗ್ತೀರಾ ಅಪ್ಸರೆಯಂತ ಮೈಮಾಟ.

 

ವೀರಮದಕರಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದಂತಹ ರಾಗಿಣಿ ಅವರು ಸದ್ಯಕ್ಕೆ ಸಾಕಷ್ಟು ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಅಂತಾನೆ ಹೇಳಬಹುದು. ಏಕೆಂದರೆ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 15 ವರ್ಷವಾದರೂ ಕೂಡ ಇನ್ನು ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ.

ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸಿದ್ದಾರೆ‌. ಸದ್ಯಕ್ಕೆ ರಾಗಿಣಿ ಅವರು ಬಾಲಿವುಡ್ ಹಾರರ್ ಥ್ರಿಲ್ಲರ್ ಸಿನಿಮಾ ಒಂದರಲ್ಲಿ ನಾಯಕನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇದಕ್ಕಿಂತ ಮುಂಚೆ ರಾಗಿಣಿ ಅವರು ಬಾಲಿವುಡ್ ನಟ ಶಾಹಿದ್ ಕಪೂರ್ ಜೊತೆಗೆ ‘ರಾ ರಾಜ್‌ಕುಮಾರ್’ ಸಿನಿಮಾದಲ್ಲಿ ಒಂದು ಹಾಡಿಗೆ ಡ್ಯಾನ್ಸ್ ಮಾಡಿದ್ದ ಅವರು, ಇದೀಗ ಪೂರ್ಣ ಪ್ರಮಾಣದಲ್ಲಿ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರೆ.

ಹಿಂದಿ ಸಿನಿಮಾಗಳ ನಿರ್ದೇಶಕ ಆಯುರ್ ಶರ್ಮಾ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಹಾರರ್, ಥ್ರಿಲ್ಲರ್ ಮಾದರಿಯ ಸಿನಿಮಾವಾಗಿದ್ದು, ‘ವಾಲ್ಕರ್ ಹೌಸ್’ ಎಂದು ನಾಮಕರಣ ಮಾಡಲಾಗಿದೆ ಮೊದಲ ಹಂತದ ಶೂಟಿಂಗ್ ಮಾತ್ರ ಲಂಡನ್‌ನಲ್ಲಿ ಮುಗಿದಿದೆ. ಸಂಪೂರ್ಣ ಶೂಟಿಂಗ್ ಆದಮೇಲೆ ಮತ್ತೊಮ್ಮೆ ಬೆಂಗಳೂರಿಗೆ ಚಿತ್ರತಂಡದ ಜೊತೆಗೆ ಬರುವೆ. ಈ ಸಿನಿಮಾದಲ್ಲಿ ನಾನು ಲಂಡನ್‌ನಲ್ಲಿ ವಾಸಿಸುವ ಬರಹಗಾರ್ತಿ ಪಾತ್ರ ಮಾಡುತ್ತಿದ್ದೇನೆ.

ಹಿಂದಿ ಮತ್ತು ಬೆಂಗಾಲಿ ಸಿನಿಮಾಗಳ ನಟ ಪರಂಬಾತ್ರಾ ಚಟರ್ಜಿ ನನ್ನೊಂದಿಗೆ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಇನ್ನೂ ಅನೇಕ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಎಂದು, ರಾಗಿಣಿ ದ್ವಿವೇದಿಯವರು ಇತ್ತೀಚಿಗಷ್ಟೇ ನಡೆದಂತಹ ಸಂದರ್ಶನ ಒಂದರಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಈ 2022 ನನಗೆ ಖುಷಿ ತಂದ ವರ್ಷ ಅಂತಾನೇ ಹೇಳಬಹುದು ಏಕೆಂದರೆ 2021 ರಲ್ಲಿ ನಾನು ಸಾಕಷ್ಟು ನೋವನ್ನು ಅನುಭವಿಸಿದೆ.

ಚಿತ್ರರಂಗದಲ್ಲಿ ಆಗಿರಬಹುದು ವೈಯಕ್ತಿಕ ಜೀವನದಲ್ಲಿ ಆಗಿರಬಹುದು ಸಾಕಷ್ಟು ಏಳು ಬೀಳುಗಳನ್ನು ಕಂಡೆ. ಆದರೆ ಅವೆಲ್ಲವನ್ನು ಕೂಡ ಈಗ ಮೆಟ್ಟಿ ನಿಂತು ನನ್ನ ವೃತ್ತಿ ಜೀವನಕ್ಕೆ ಹಿಂತಿರುಗಿದ್ದೇನೆ ಸಾಕಷ್ಟು ಆಫರ್ ಗಳು ಬಂದಿದೆ ಹಿಂದಿ ಸಿನಿಮಾ ಮಾತ್ರವಲ್ಲದೆ ತಮಿಳಿನಾ ಮೂರು ಸಿನಿಮಾದಲ್ಲಿ ನಟಿಸುತ್ತಿದೆ. ಜೊತೆಗೆ ಮಲಯಾಳಂ ನ ಒಂದು ಸಿನಿಮಾದಲ್ಲಿ ನಟಿಸುತ್ತಿದೆ ಹಾಗೂ ತೆಲುಗಿನ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದೇನೆ.

ಇವೆರಡರ ಜೊತೆಗೆ ಸ್ಯಾಂಡಲ್ವುಡ್ ನಲ್ಲಿ ಎರಡು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದಕ್ಕೆ ಸಹಿಯನ್ನು ಹಾಕಿದ್ದೇನೆ ಒಟ್ಟಾರೆಯಾಗಿ ಹೇಳುವುದಾದರೆ ಈ ವರ್ಷ ಏಳರಿಂದ ಎಂಟು ಸಿನಿಮಾದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ ಎಂದು ರಾಗಿಣಿಯವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ 2021 ರಲ್ಲಿ ನಟಿ ರಾಗಿಣಿ ಅವರು ಡ್ರ-ಗ್ಸ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದರು ಈ ಕಾರಣಕ್ಕಾಗಿ ಅವರು ಜೈಲು ವಾಸವನ್ನು ಕೂಡ ಅನುಭವಿಸಿದ್ದರು.

ಸಾಕಷ್ಟು ಜನರು ಇನ್ನು ಮುಂದೆ ರಾಗಿಣಿಯವರಿಗೆ ಇನ್ನು ಮುಂದೆ ಚಿತ್ರರಂಗದಲ್ಲಿ ಅವಕಾಶ ದೊರೆಯುವುದಿಲ್ಲ ಇಲ್ಲಿಗೆ ಇವರ ಕೆರಿಯರ್ ಮುಗಿಯಿತು ಅಂತಾನೆ ಭಾವಿಸಿದ್ದರು. ಆದರೆ ಪ್ರತಿಭೆ ಮತ್ತು ಕಲೆ ಇದ್ದರೆ ಅವಕಾಶ ಎಂಬುದು ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಇದೀಗ ನಟಿ ರಾಗಿಣಿ ಅವರೇ ನೈಜ ಉದಾಹರಣೆ ಅಂತ ಹೇಳಬಹುದು.

ಸಾಕಷ್ಟು ವಿವಾದಗಳಿದ್ದರೂ ಅವೆಲ್ಲವನ್ನು ಮೆಟ್ಟು ನಿಂತು ಈಗ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಸಾಲು ಸಾಲು ಸಿನಿಮಾದಲ್ಲಿ ನಟಿಸಿದ್ದಾರೆ ಹಾಗೂ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಆಫರ್ ಗಳು ಬರುತ್ತಿದೆ. ಒಟ್ಟಾರೆಯಾಗಿ ನಮ್ಮ ಕನ್ನಡದ ನಟಿ ಬೇರೆ ಭಾಷೆಗಳಲ್ಲಿ ಹೋಗಿ ಸಾಧಿಸಿದರೆ ಅದು ನಮ್ಮ ಚಿತ್ರರಂಗಕ್ಕೆ ಕೊಡುಗೆ ಅಂತಾನೆ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಬ್ಲಾಕ್ ಮೇಲ್ ಮಾಡಿ ಉಪ್ಪಿ ನನ್ನ ಮದುವೆಯಾದ್ರು, ಕೊನೆಗೂ ಸತ್ಯ ಬಾಯ್ಬಿಟ್ಟ ಪ್ರಿಯಾಂಕ ಉಪೇಂದ್ರ.

ಪ್ರಿಯಾಂಕ ಉಪೇಂದ್ರ(Priyanka Upendra) ಬಹುಭಾಷ ನಟಿ ನೋಡುವುದಕ್ಕೆ ಸ್ಪುರಧ್ರೂಪಿ ಚೆಲುವೆ, ಅಷ್ಟೇ ಅಭಿನಯ ಚತುರೆ. ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಬೆಂಗಾಲಿ ಹೀಗೆ ನಾನಾ ಭಾಷೆಗಳಲ್ಲಿ ನಟಿಸಿರುವ ಇವರು ಈಗಲೂ ಸಹ ಬೇಡಿಕೆ ಅಲ್ಲಿ ಇರುವ ನಟಿ. ನಟಿ ಪ್ರಿಯಾಂಕ ಉಪೇಂದ್ರ ಅವರು ಕನ್ನಡದಲ್ಲಿ ಮೊದಲ ಬಾರಿಗೆ h20 ಎನ್ನುವ ಉಪೇಂದ್ರ ಅವರ ನಿರ್ದೇಶನ ಮತ್ತು ನಟನೆಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಾರೆ.

ಇದಾದ ಬಳಿಕ ವಿಷ್ಣುವರ್ಧನ್ ರವಿಚಂದ್ರನ್ ಶಿವರಾಜಕುಮಾರ್ ಹೀಗೆ ಆ ಸಮಯದ ಎಲ್ಲ ಸ್ಟಾರ್ ನಟರೊಂದಿಗೆ ನಾಯಕಿ ಆಗಿ ಅಭಿನಯಿಸಿದ್ದಾರೆ. 2003 ರಲ್ಲಿ ಅವರನ್ನು ಮದುವೆ ಆದ ಮೇಲೆ ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಳ್ಳುತ್ತಾರೆ. ಇವರ ಸುಖಿ ದಾಂಪತ್ಯಕ್ಕೆ 20 ವರ್ಷ ಸಮೀಪಿಸುತ್ತಿದ್ದು ಇಲ್ಲಿಯವರೆಗೂ ಸಂತೋಷದಿಂದ ಜೀವನ ನಡೆಸಿದ್ದಾರೆ. ಐಶ್ವರ್ಯ ಹಾಗೂ ಆಯುಷ್ಯ ಎನ್ನುವ ಇಬ್ಬರು ಮಕ್ಕಳು ಇವರಿಗಿದ್ದಾರೆ.

ಈಗ ಕೆರಿಯರ್ ಅಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಪ್ರಿಯಾಂಕ ಉಪೇಂದ್ರ ಅವರು ಈಗಲೂ ಸಹ ಬಹಳ ಬೇಡಿಕೆಯಲ್ಲಿರುವ ನಟಿ. ಈಗಲೂ ಸಹ ಇವರು ಲೀಡ್ ರೋಲ್ಗಳಲ್ಲಿ ಮತ್ತು ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚಿಗಷ್ಟೇ ಅವರ ಸಿನಿ ಜರ್ನಿಯಲ್ಲಿ 50 ಚಿತ್ರಗಳು ಕಂಪ್ಲೀಟ್ ಆಗಿದ್ದು 51ನೇ ಚಿತ್ರವಾಗಿ ಮಿಸ್ ನಂದಿನಿ ಸೆಟ್ ಏರಿದೆ.

ಈ ಸಿನಿಮಾದ ಕುರಿತ ಸಂದರ್ಶನ ಒಂದದಲ್ಲಿ ನಟಿ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಪ್ರಿಯಾಂಕ ಉಪೇಂದ್ರ ಅವರಿಗೆ ಇದುವರೆಗೆ ಯಾರ ಜೊತೆ ನಟಿಸಿಲ್ಲ ಆ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ನಟಿಸುವ ಆಸೆ ಇದೆಯಂತೆ ಮತ್ತು ಉಪ್ಪಿ ಅವರ ನಿರ್ದೇಶನದಲ್ಲಿ ಒಂದೊಳ್ಳೆ ಸಿನಿಮಾ ಮಾಡುವ ಆಸೆ ಇದೆಯಂತೆ. ಆದರೆ ಉಪೇಂದ್ರ ಅವರು ಆ ಬಗ್ಗೆ ಗಮನ ಕೊಡುತ್ತಾ ಇಲ್ಲ ಎಂದು ಕೂಡ ಆರೋಪ ಮಾಡಿದ್ದಾರೆ.

ಉಪೇಂದ್ರ ಅವರು ಈಗ ಯುಐ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಸಿನಿಮಾ ಆದ ಬಳಿಕ 8 ವರ್ಷಗಳವರೆಗೆ ಅವರು ಮತ್ತೆ ನಿರ್ದೇಶನ ಮಾಡುವುದಿಲ್ಲ ಎನ್ನುವುದು ಅವರ ನಿರ್ಧಾರವಾಗಿದೆ. ಇದು ಪ್ರಿಯಾಂಕ ಅವರಿಗೂ ಸಹ ತಿಳಿದಿರುವ ವಿಷಯ, ಹೀಗಾಗಿ ನನಗೂ ಸಹ ಆ ಸಿನಿಮಾದಲ್ಲಿ ಒಂದು ಒಳ್ಳೆ ರೋಲ್ ಕೊಡಿ ಅಥವಾ ಪುಟ್ಟ ಪಾತ್ರವನ್ನು ಆದರೂ ಕೊಡಿ ಎಂದು ಪ್ರಿಯಾಂಕ ಅವರು ಕೇಳುತ್ತಿದ್ದರು ಸಹ ಉಪೇಂದ್ರ ಅವರು ಅವರ ಸಿನಿಮಾದಲ್ಲಿ ಪ್ರಿಯಾಂಕ ಅವರಿಗೆ ಅವಕಾಶ ಕೊಡುತ್ತಾ ಇಲ್ಲವಂತೆ.

ಈ ಬಗ್ಗೆ ತಮಾಷೆಯಾಗಿ ಉಪೇಂದ್ರ ಅವರ ಕಾಲೆಳೆಯುತ್ತಿರುವ ನಟಿ ಪ್ರಿಯಾಂಕ ಅವರು ಬಹುದಿನಗಳ ಬಳಿಕ ಮದುವೆ ಸುದ್ದಿಯ ಬಗ್ಗೆ ಕೂಡ ಮಾತನಾಡಿದ್ದಾರೆ. ಅದೇನೆಂದರೆ ಸಂದರ್ಶಕರು ನೀವು ಇದುವರೆಗೆ ಕೇಳಿದ ನಿಮ್ಮ ಕುರಿತ ಗಾಸಿಪ್ ಗಳಲ್ಲಿ ಬಹಳ ಆಶ್ಚರ್ಯ ಎನಿಸಿದ್ದು ಯಾವುದು ಎಂದು ಕೇಳಿದ್ದಾರೆ. ಅದಕ್ಕೆ ಪ್ರಿಯಾಂಕ ಉಪೇಂದ್ರ ಅವರು ಒಮ್ಮೆ ನಾನು ಉಪೇಂದ್ರ ಅವರನ್ನು ಬ್ಲಾಕ್ ಮೇಲ್ ಮಾಡಿ ಮದುವೆ ಆಗಿದ್ದೇನೆ ಎಂದು ಗಾಳಿ ಸುದ್ದಿ ಆಗಿತ್ತು, ಅದು ನನಗೆ ಬಹಳ ಆಶ್ಚರ್ಯ ಎನಿಸಿತು.

ಯಾಕೆಂದರೆ ನಾನು ನೋಡುವುದಕ್ಕೆ ಇಷ್ಟು ಸುಂದರವಾಗಿದ್ದೇನೆ ನಾನು ಒಂದು ಸ್ಮೈಲ್ ಕೊಟ್ಟರೆ ಸಾಕು ಉಪ್ಪಿ ಬಿದ್ದು ಹೋಗುತ್ತಾರೆ. ಹೀಗಿರುವಾಗ ನಾನು ಯಾಕೆ ಅವರನ್ನು ಬ್ಲಾಕ್ ಮೇಲ್ ಮಾಡಿ ಮದುವೆ ಆಗಬೇಕು. ಎಲ್ಲರೂ ಯಾಕೆ ಆ ರೀತಿ ಗಾಸಿಪ್ ಮಾಡಿದರು ಎನ್ನುವುದೇ ನನಗೆ ಅರ್ಥ ಆಗಿಲ್ಲ ಹಾಗಾಗಿ ಬಹಳ ತಮಾಷೆ ಎನಿಸಿತು ಎಂದು ಹೇಳಿಕೊಂಡಿದ್ದಾರೆ. ಇನ್ನು ಉಪೇಂದ್ರ ಅವರು ಈಗ ಅವರ ಮತ್ತು ಸುದೀಪ್ ಕಾಂಬಿನೇಷನ್ ಬಹು ನಿರೀಕ್ಷಿತ ಚಿತ್ರವಾದ ಕಬ್ಜಾ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳಲ್ಲಿ ಬಹಳ ಬಿಸಿ ಆಗಿದ್ದಾರೆ.

ಇದಾದ ನಂತರ ಅವರು ಕಟ್ಟಿರುವ ಪ್ರಜಾಕೀಯ ಪಕ್ಷವನ್ನು ಬೆಳೆಸುವ ಜವಾಬ್ದಾರಿಯು ಅವರಿಗಿದೆ. ಚುನಾವಣೆ ಕೂಡ ಹತ್ತಿರವಾಗುತ್ತಿದೆ, ಈಗಾಗಲೇ ಪ್ರಜಾಕೀಯ ಪಕ್ಷಕ್ಕೆ ಲಕ್ಷಾಂತರ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಈಗ ಉಪೇಂದ್ರ ಅವರು ಎತ್ತ ಗಮನ ಕೊಡುತ್ತಾರೆ ಎನ್ನುವುದೇ ಎಲ್ಲರ ಕುತೂಹಲ. ನಟಿ ಪ್ರಿಯಾಂಕ ಉಪೇಂದ್ರ ಅವರು ಮದುವೆಯಾದ ದಿನದಿಂದಲೂ ಸಹ ಉಪೇಂದ್ರ ಅವರ ಎಲ್ಲಾ ಕನಸುಗಳಿಗೂ ಸಹಕಾರ ಕೊಡುತ್ತಾ ಬಂದಿದ್ದಾರೆ. ಇನ್ನು ಮುಂದೆಯೂ ಸಹ ಅವರ ಜೊತೆಗಿದ್ದು ಜೊತೆಗೆ ತಾವು ಸಹ ಒಳ್ಳೆ ಸಿನಿಮಾಗಳಲ್ಲಿ ಅಭಿನಯಿಸಿ ಇನ್ನಷ್ಟು ಹೆಸರು ಮಾಡಲಿ ಎಂದು ಅಭಿಮಾನಿಗಳಾಗಿರುವ ನಾವೆಲ್ಲ ಅವರ ಕುಟುಂಬದವರಿಗೆ ಹರಸೋಣ.

ನಾಯಿ ಮರಿ ಕೊಟ್ಟು ನಟಿ ಹರಿಪ್ರಿಯಾ ನಾ ಪಟಾಯಿಸಿಕೊಂಡೆ ಅಂದವರಿಗೆ ಮುಟ್ಟಿ ನೋಡಿಕೋಳ್ಳುವ ಹಾಗೇ ಉತ್ತರ ಕೊಟ್ಟ ನಟ ವಸಿಷ್ಠ ಸಿಂಹ.

 

ಈ ವರ್ಷದ ಮೊದಲ ತಾರಾ ಜೋಡಿ ಆಗಿ ವಸಿಷ್ಠ ಸಿಂಹ ಹಾಗೂ ನಾಯಕ ನಟಿ ಹರಿಪ್ರಿಯಾ ಅವರು ಹಸಿಮಣೆ ಏರುತ್ತಿದ್ದಾರೆ. ಕಳೆದ ವರ್ಷ ನವೆಂಬರ್ ಅಂತ್ಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಗಳು ಜನವರಿ ತಿಂಗಳಿನಲ್ಲಿಯೇ ಮದುವೆ ಆಗಲು ನಿರ್ಧಾರ ಮಾಡಿ ಅದರ ಕೆಲಸಗಳಲ್ಲಿ ಬಿಸಿ ಆಗಿದ್ದಾರೆ. ಈ ಮಧ್ಯೆ ಸಂದರ್ಶನ ಒಂದರಲಿ ಸಿಕ್ಕು, ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಟಿ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಅವರು ಜೊತೆಜೊತೆಯಾಗಿ ಓಡಾಡಿರುವ ಫೋಟೋಗಳು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು‌. ಆಗ ಬಹುತೇಕ ಎಲ್ಲರೂ ಇದು ಯಾವುದು ಸಿನಿಮಾ ಶೂಟಿಂಗ್ ಇರಬೇಕು ಎಂದೇ ಅಂದುಕೊಂಡಿದ್ದರು. ಆದರೆ ದಿಢೀರ್ ಎಂದು ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಇವರಿಬ್ಬರ ನಡುವೆ ಪ್ರೀತಿ ಇತ್ತು ಎನ್ನುವ ವಿಷಯ ರಿವಿಲ್ ಆಗಿದೆ.

ಈ ಪ್ರೀತಿ ಬಗ್ಗೆ ಎಂಗೇಜ್ಮೆಂಟ್ ಆದ ಬಳಿಕ ಇಬ್ಬರು ಸಹ ಪೋಸ್ಟ್ ಹಾಕಿಕೊಳ್ಳುತ್ತಾ ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ವಸಿಷ್ಠ ಅವರು ನಾಯಿಮರಿ ಗಿಫ್ಟ್ ಕೊಟ್ಟಿದ್ದನ್ನು ಹರಿಪ್ರಿಯ ಹೇಳಿಕೊಂಡಿದ್ದರು. ಈಗ ಸಂದರ್ಶನದಲ್ಲಿ ಅದೇ ಪ್ರಶ್ನೆಯನ್ನು ಸಂದರ್ಶನಕಾರರು ವಸಿಷ್ಠ ಸಿಂಹ ಅವರಿಗೆ ಕೇಳಿದ್ದಾರೆ. ಅದಕ್ಕೆ ವಸಿಷ್ಠ ಸಿಂಹ ಅವರು ಬರೀ ನಾಯಿ ಮರಿಕೊಟ್ಟು ಪಠಾಯಿಸಿಕೊಂಡಿಲ್ಲ ಗುರು ಅದಕ್ಕಾಗಿ ಬಹಳ ಕಷ್ಟ ಪಟ್ಟಿದ್ದೇನೆ.

ಎಲ್ಲರೂ ಇದನ್ನು ಹೇಳುತ್ತಾರೆ ಅಷ್ಟೆಲ್ಲಾ ಕಷ್ಟ ಪಟ್ಟಿದ್ದು ವ್ಯರ್ಥಾನ ಎನಿಸಿಬಿಡುತ್ತದೆ ಆದರೆ ನಾನು ಅವರಿಗೆ ನಾಯಿಮರಿ ಗಿಫ್ಟಾಗಿ ಕೊಟ್ಟಿದ್ದು ನಿಜ ಆದರೆ ನಾನು ಗಿಫ್ಟ್ ಕೊಟ್ಟ ಸಮಯದಲ್ಲಿ ಅದರ ಮೇಲೆ ಹಾರ್ಟ್ ಶೇಪ್ ಇತ್ತು ಅನ್ನುವುದನ್ನು ಅಬ್ಸರ್ವ್ ಮಾಡಿರಲಿಲ್ಲ. ಅವರ ಮನೆಯಲ್ಲಿ ಲಕ್ಕಿ ಎನ್ನುವ ನಾಯಿಮರಿ ಇತ್ತು ಅದಕ್ಕೆ ಕ್ಯಾನ್ಸರ್ ಆಗಿ ತೀರಿ ಹೋಯಿತು. ಆ ಸಮಯದಲ್ಲಿ ಅವರು ಬಹಳ ದುಃಖದಲ್ಲಿ ಇದ್ದರು ಯಾಕೆಂದರೆ ಅವರಿಗೆ ನಾಯಿಮರಿ ಎಂದರೆ ತುಂಬಾ ಇಷ್ಟ

ಅವರ ಮನೆಯಲ್ಲಿ ಹ್ಯಾಪಿ ಎನ್ನುವ ಇನ್ನೊಂದು ನಾಯಿಮರಿ ಇದೆ ಅದರ ಜೊತೆಗೆ ಆಗಲಿ ಎಂದು ನಾನು ಕ್ರಿಸ್ಟಲ್ ಎನ್ನುವ ನಾಯಿ ಮರಿಯನ್ನು ಗಿಫ್ಟ್ ಕೊಟ್ಟೆ. ಕ್ರಿಸ್ಟಲ್ ಮತ್ತು ಹ್ಯಾಪಿ ಇಬ್ಬರದ್ದು ಸಹ ಡಿಸೆಂಬರ್ 6 ಡೇ ಇರುವುದು ಆಗ ಅವರು ಪ್ರೀತಿಗೆ ಕನ್ನಡಿ ಎಂದಿದ್ದರು. ಆ ಸಮಯದಲ್ಲಿ ಅದು ಬಹಳ ಗೊಂದಲ ಕೂಡ ಉಂಟು ಮಾಡಿತ್ತು. ನಮ್ಮಿಬ್ಬರ ನಡುವೆ ಮೊದಲಿಗೆ ಸ್ನೇಹ ಉಂಟಾಗಿತ್ತು ಆಕ್ಟಿಂಗ್ ಅಲ್ಲಿ ಅವರೇ ನನ್ನ ಸೀನಿಯರ್ ಮತ್ತು ನನ್ನ ಫೇವರೆಟ್ ನಟಿ ಕೂಡ.

ನನ್ನ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಆಕ್ಟಿಂಗ್ ನೋಡಿ ಅವರೇ ಬಂದು ನನ್ನನ್ನು ಮಾತನಾಡಿಸಿದ್ದರು. ಆ ಸಮಯದಲ್ಲಿ ಇವರೆಷ್ಟು ಒಳ್ಳೆಯವರು ಎನ್ನುವ ಅಭಿಪ್ರಾಯ ಮೂಡಿತು. ನಂತರ ಅದು ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಈಗ ಮದುವೆ ಹಂತಕ್ಕೆ ಬಂದು ತಲುಪಿದೆ. ನಾನು ಮೈಸೂರಿನಲ್ಲಿ ಮದುವೆ ಆಗಲು ನಿರ್ಧಾರ ಮಾಡಿದ್ದೇನೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಮ್ಮ ಮದುವೆಗೆ ಸಿದ್ಧತೆ ನಡೆಯುತ್ತಿದೆ.

ನನ್ನ ಹುಟ್ಟೂರು ಮೈಸೂರು ನಾನು ಬೆಳೆದಿದ್ದು ಕಾಲೇಜು ಎಲ್ಲವೂ ಸಹ ಅಲ್ಲೇ ಆಗಿದ್ದು. ನನ್ನ ತಾಯಿ ಹೋದಾಗ ಚಾಮುಂಡಿ ತಾಯಿಯನ್ನು ನಾನು ನೋಡುತ್ತಿದ್ದೆ. ಈಗ ಅವರ ಊರಿನಲ್ಲಿ ಮದುವೆಯಾಗುವ ಇಚ್ಛೆ ಇದೆ ನನ್ನ ತಾಯಿ ಸ್ಥಾನಕ್ಕೆ ನನ್ನ ನೋವುಗಳಲ್ಲಿ ಜೊತೆಯಾಗಲು ಹರಿಪ್ರಿಯಾ ಅವರು ಬರುತ್ತಿದ್ದಾರೆ ಎನ್ನುವುದು ಬಹಳ ಖುಷಿ ಆಗಿದೆ ಎಂದಿದ್ದಾರೆ.

ನಟಿ ರಮ್ಯ ಮೂಲಕ ರಾಜಕೀಯಕ್ಕೆ ಕಿಚ್ಚ ಸುದೀಪ್ ಅವರನ್ನು ಕರೆತರಲು ಗಾಳ ಹಾಕಿದ ಪಕ್ಷ, ಇದಕ್ಕೆ ಕಿಚ್ಚ ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತ.?

0

 

ರಾಜಕೀಯಕ್ಕೆ(Politics) ಬರುವ ಸೂಚನೆ ಕೊಟ್ರ ಕಿಚ್ಚ ಸುದೀಪ್ ಈ ಕುರಿತ ಒಂದು ಸುದ್ದಿ ಕಳೆದೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆ ಆಗುತ್ತಿದೆ. ಮೀಡಿಯ ಹಾಗು ಸೋಶಿಯಲ್ ಮೀಡಿಯಾಗಳು ಈ ವಿಷಯದ ಹಿಂದೆ ಬಹಳ ಬಿದ್ದಿವೆ. ಇದರ ಸತ್ಯಾನುಸತ್ಯತೆ ತಿಳಿದುಕೊಳ್ಳಲು ಜನರು ಬಹಳ ಕುತೂಹಲ ತೋರುತ್ತಿದ್ದಾರೆ ರಾಜ್ಯದಲ್ಲಿ ಈಗಾಗಲೇ ಮುಂದಿನ ಚುನಾವಣೆಗಾಗಿ ತಯಾರಿ ಕೂಡ ಬಾರಿ ಜೋರಾಗಿದೆ.

ಪ್ರತಿನಿತ್ಯ ಕೂಡ ರಾಜಕೀಯ ವಲಯದಲ್ಲಿ ನಾನಾ ಕಸರತ್ತುಗಳು ನಡೆಯುತ್ತಿದ್ದು ಈಗಾಗಲೇ ಗೆಲುವಿನ ಪಟ್ಟಗಾಗಿ ತೆರೆ ಹಿಂದಿನ ತಯಾರಿ ಜೋರಾಗಿದೆ. ಇದರ ಒಂದು ಭಾಗವಾಗಿ ಕಿಚ್ಚ ಸುದೀಪ್(Kiccha Sudeep) ಅವರು ರಾಜಕೀಯಕ್ಕೆ ಎಂಟ್ರಿ ಆಗುತ್ತಿದ್ದಾರೆ ಎನ್ನುವ ಗುಸುಗುಸು ಕೂಡ ಭುಗಿಲೆದ್ದಿದೆ. ಅದರಲ್ಲೂ ಕಾಂಗ್ರೆಸ್(Congress) ಪಾಳಯದಲ್ಲಿ ಕಿಚ್ಚ ಸುದೀಪ್ ಅವರು ಗುರುತಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ನೆನ್ನೆಯಿಂದ ಬಹಳ ಸುದ್ದಿ ಆಗುತ್ತಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ(Vikrant Rona) ಸಿನಿಮಾದ ನಂತರ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಬಹಳ ಬಿಸಿ ಆಗಿದ್ದಾರೆ. ಇದರ ನಡುವೆ ಬಿಗ್ ಬಾಸ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಿದ್ದಾರೆ, ಡಿಸೆಂಬರ್ 30ಕ್ಕೆ ಈ ಕಾರ್ಯಕ್ರಮ ಮುಗಿದಿರುವುದರಿಂದ ಈಗ ಸ್ವಲ್ಪ ಬ್ರೇಕ್ ಅಲ್ಲಿ ಇದ್ದಾರೆ. ಇದರ ನಡುವೆ ನೆನ್ನೆ ಅಷ್ಟೇ ಚಿಕ್ಕಬಳ್ಳಾಪುರದ ಉತ್ಸವದಲ್ಲೂ ಭಾಗಿಯಾಗಿದ್ದರು.

ಆದರೆ ಇದ್ದಕ್ಕಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಸುದೀಪ್ ಅವರ ಹೆಸರು ಕೇಳಿ ಬರುತ್ತಿದೆ ರಾಜಕೀಯ ಸೇರಲಿದ್ದಾರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಪಾಲ್ಗೊಂಡಿದ್ದಾರೆ. ಇದರ ಸಲುವಾಗಿ ರಮ್ಯಾ ಅವರ ಕಡೆಯಿಂದ ಸುದೀಪ್ ಅವರನ್ನು ಸಂಪರ್ಕಿಸಲಾಗಿದೆ, ಈಗಾಗಲೇ ಹೈಕಮಾಂಡ್ ಬಳಿ ಒಂದು ಸುತ್ತಿನ ಮಾರ್ತಿಕತೆ ಸಹ ಆಗಿದೆ ಸುದೀಪ್ ಅವರು ಮುಂದಿನ ಚುನಾವಣೆ ಎದುರಿಸುವದಂತು ಖಚಿತ ಎಂಬಿತ್ಯಾದಿ ಮಾತುಗಳು ಬಹಳ ಚರ್ಚೆ ಆಗುತ್ತಿವೆ.

ಸುದೀಪ್ ಅವರು ಈಗಾಗಲೇ ನಾನು ರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕ್ರಿಕೆಟ್ ಅಡುಗೆ ಸಿನಿಮಾ ಸಂಗೀತ ನಿರ್ಮಾಪಣೆ ನಿರ್ದೇಶನ ಹೀಗೆ ಸಕಲ ಕಲಾವಲ್ಲಭ ಆಗಿರುವ ಸುದೀಪ ಅವರು ಮೊದಲಿನಿಂದಲೂ ರಾಜಕೀಯದಿಂದ ದೂರ ಇದ್ದವರು. ಆದರೆ ಇದ್ದಕ್ಕಿದ್ದಂತೆ ಅವರ ಹೆಸರು ಈ ರೀತಿ ಪ್ರಸ್ತಾಪವಾಗುತ್ತಿದೆ ಎನ್ನುವುದರ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಒಂದು ವೇಳೆ ಈ ಮಾತು ನಿಜವಾದರೆ ಅವರಿಗೆ ಬಿಜೆಪಿಯಲ್ಲೂ ಸಹ ಆತ್ಮೀಯರು ಇದ್ದಾರೆ.

ಅವರು ಕಾಂಗ್ರೆಸ್ ಗೆ ಹೋಗುತ್ತಾರೆ ಎನ್ನುವ ಬಗ್ಗೆ ಬಲವಾದ ಯಾವ ಆಧಾರವೂ ಇಲ್ಲ. ಸುದೀಪ್ ಅವರಂತೂ ಸಿನಿಮಾಗಳಲ್ಲೇ ಬಹಳ ಬಿಝಿ ಇದ್ದಾರೆ. ಮೊದಲಿಂದಲೂ ಹೀರೋ ಹಾಗೆ ಇರಬೇಕು ಎಂದು ಆಸೆ ಪಟ್ಟವರು ಈಗ ರಾಜಕೀಯಕ್ಕೆ ಹೋಗುತ್ತಿದ್ದಾರೆ ಎಂದರೆ ಕೊಂಚ ಆಶ್ಚರ್ಯ ಕೂಡ ತರುತ್ತದೆ. ಈ ವಿಷಯದ ಕುರಿತು ಸುದೀಪ್ ಅವರು ಆಗಲಿ ರಮ್ಯಾ ಅವರೇ ಆಗಲಿ ಅಥವಾ ಕಾಂಗ್ರೆಸ್ ಪಕ್ಷದ ನಾಯಕರೇ ಆಗಲಿ ಯಾವುದೇ ಸ್ಪಷ್ಟನೆ ಕೊಡದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಇದರ ಬಗ್ಗೆ ಚರ್ಚೆ ಜೋರಾಗಿದೆ.

ಕಾಮೆಂಟ್ಗಳಲ್ಲಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಯಾವುದೇ ಕಾರಣಕ್ಕೂ ನೀವು ರಾಜಕೀಯಕ್ಕೆ ಮಾತ್ರ ಬರಬೇಡಿ ಎನ್ನುವ ಸಲಹೆ ಕೂಡ ಕೊಡುತ್ತಿದ್ದಾರೆ. ಈಗಾಗಲೇ ಉಪೇಂದ್ರ ದರ್ಶನ್ ಯಶ್ ಅಭಿಷೇಕ್ ಅಂಬರೀಶ್ ಶಿವರಾಜ್ ಕುಮಾರ್ ರಮ್ಯಾ ರಕ್ಷಿತಾ ಹೀಗೆ ಕನ್ನಡದ ಹಲವು ಸೆಲೆಬ್ರಿಟಿಗಳು ರಾಜಕೀಯದಲ್ಲಿ ಸಕ್ರಿಯ ರಾಗಿದ್ದಾರೆ. ಈಗ ಸುದೀಪ್ ಅವರು ಕೂಡ ಆ ಕಡೆ ಮನಸ್ಸು ಮಾಡುತ್ತಿದ್ದಾರ ಎನ್ನುವ ಅನುಮಾನವೂ ಇದೆ. ಈ ವಿಷಯದಲ್ಲಿ ಅವರ ಕಡೆಯಿಂದಲೇ ಸ್ಪಷ್ಟನೆ ಸಿಗುವವರೆಗೂ ಕಾದು ನೋಡಬೇಕು ಅಷ್ಟೇ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ನಟಿ ಪ್ರಿಯಾ ಹಾಗೂ ನಟ ಸಿದ್ದು ಈ ಕ್ಯೂಟ್ ವಿಡಿಯೋ ನೋಡಿ.

 

ನಮ್ಮ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ಸಾಕಷ್ಟು ಜೋಡಿಗಳು ನಿಶ್ಚಿತಾರ್ಥ ಮಾಡಿಕೊಂಡಿರುವ ಹಾಗೂ ಮದುವೆ ಆಗಿರುವ ವಿಚಾರ ನಿಮಗೆ ತಿಳಿದೇ ಇದೆ. ಹೌದು ಅಭಿಷೇಕ್ ಅಂಬರೀಶ್ ಹಾಗೂ ಅವಿವ ಬಿದ್ದಪ್ಪ ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ತದನಂತರ ಪಾರು ಸೀರಿಯಲ್ ನಾಯಕ ನಟ ಶರತ್ ನಿಶ್ಚಿತಾರ್ಥ ಮಾಡಿಕೊಂಡರು, ಇದಾದನಂತರ ಸತ್ಯ ಸೀರಿಯಲ್ ನಾ ಕಾರ್ತಿಕ್ ಅಲಿಯಾಸ್ ಸಾಗರ್ ಬಿಳಿ ಗೌಡ ಹಾಗೂ ಸಿರಿ ಅವರು ನಿಶ್ಚಿತಾರ್ಥ ಮಾಡಿಕೊಂಡರು.

ಆದರೆ ಹೆಚ್ಚು ಸದ್ದು ಮಾಡಿದ ಜೋಡಿ ಅಂದರೆ ನಟಿ ಪ್ರಿಯಾ ಹಾಗೂ ನಟ ಸಿದ್ದು ಮೂಲಿ ಮನಿ ಅವರ ನಿಶ್ಚಿತಾರ್ಥ ಅಂತಾನೆ ಹೇಳಬಹುದು. ಏಕೆಂದರೆ ಈ ಇಬ್ಬರು ಕಲಾವಿದರು ಕೂಡ ಕಳೆದ ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಆದರೆ ಇವರು ಪ್ರೀತಿಸುತಿರುವಂತಹ ವಿಚಾರವನ್ನು ಎಲ್ಲಿಯೂ ಕೂಡ ಬಿಟ್ಟು ಕೊಟ್ಟಿರಲಿಲ್ಲ ಇದಕ್ಕಿದ್ದ ಹಾಗೆ ನಿಶ್ಚಿತಾರ್ಥ ಮಾಡಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟರು.

ಇನ್ನು ಸಿದ್ದು ಹಾಗೂ ಪ್ರಿಯ ಆಚಾರ್ ಅವರ ಕ್ಯೂಟ್ ಲವ್ ಸ್ಟೋರಿ ಕೇಳಿದರೆ ಎಂತವರಾದರೂ ಕೂಡ ಫಿದಾ ಆಗುತ್ತಾರೆ ಹೌದು ಇವರು ಕೂಡ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ‌. ಆದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಡ್ಯಾನ್ಸಿಂಗ್ ಕಾರ್ಯಕ್ರಮ ಒಂದರಲ್ಲಿ ಇಬ್ಬರೂ ಕೂಡ ಪರಸ್ಪರ ಭೇಟಿಯಾಗುತ್ತಾರೆ. ತದನಂತರ ಇಬ್ಬರು ಸ್ನೇಹಿತರಾಗುತ್ತಾರೆ ಈ ಸ್ನೇಹ ಯಾವ ಮಟ್ಟಕ್ಕೆ ತಿರುಗುತ್ತದೆ ಅಂದರೆ ಇಬ್ಬರಿಗೂ ಕೂಡ ತಿಳಿಯುವುದಿಲ್ಲ ಒಬ್ಬರನ್ನೊಬ್ಬರು ಆಳವಾಗಿ ಗಾಢವಾಗಿ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ತಿಳಿಯುವುದೇ ಇಲ್ಲವಂತೆ. ಆದರೆ ಕೋ ಇನ್ಸಿಡೆಂಟ್ ಏನೆಂದರೆ ಇವರಿಬ್ಬರ ನಡವಳಿಕೆಯನ್ನು ನೋಡಿ ಇವರ ಮನೆಯವರೆ ಇವರಿಬ್ಬರಿಗೂ ಮದುವೆ ಮಾಡಬೇಕು ಎಂದು ತೀರ್ಮಾನಿಸುತ್ತಾರಂತೆ.

ಈ ವಿಚಾರವನ್ನು ಸಿದ್ದು ಮೂಲಿಮನಿ ಹಾಗೂ ಪ್ರಿಯ ಆಚಾರ್ ಇತ್ತೀಚಿಗಷ್ಟೇ ನಡೆದಂತಹ ಜೀ ಕನ್ನಡ ವಾಹಿನಿ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಹೌದು ಪ್ರಿಯಾ ಗಟ್ಟಿಮೇಳ ಧಾರಾವಾಹಿಯಲ್ಲಿ ಅದಿತಿ ಎಂಬ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ ಇದಕ್ಕಿಂತ ಮೊದಲು ಸಾಕಷ್ಟು ಸಿರಿಯಲ್ ಗಳಲ್ಲಿ ಸೈಡ್ ಆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಡಾನ್ಸ್ ನಲ್ಲಿಯೂ ಕೂಡ ಅತೀವ ಆಸಕ್ತಿಯನ್ನು ಒಳಗೊಂಡಿದ್ದಾರೆ ಇನ್ನು ಸಿದ್ದು ಅವರು ಕೂಡ ಪಾರು ಧಾರವಾಹಿಯಲ್ಲಿ ಪ್ರೀತಮ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಕೇವಲ ಸೀರಿಯಲ್ ಮಾತ್ರವಲ್ಲದೆ ಸಿನಿಮಾದಲ್ಲಿಯೂ ಕೂಡ ಅಭಿನಯಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಪ್ರಿಯಾ ಹಾಗೂ ಸಿದ್ದು ಇಬ್ಬರೂ ಕೂಡ ಬೆಳ್ಳಿತೆರೆ ಹಾಗೂ ಕಿರುತರೆ ಎರಡರಲ್ಲೂ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅಂದುಕೊಂಡ ಹಾಗೆ ಕಳೆದ ತಿಂಗಳಷ್ಟೇ ಅದ್ದೂರಿಯಾಗಿ ದಾವಣಗೆರೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಈ ನಿಶ್ಚಿತಾರ್ಥಕ್ಕೆ ಪಾರು ಸೀರಿಯಲ್ ನಾ ತಂಡ ಹಾಗೂ ಗಟ್ಟಿಮೇಳ ಸೀರಿಯಲ್ ತಂಡದವರು ಆಗಮಿಸಿದ್ದರು ಫೋಟೋಗಳು ಕೂಡ ವೈರಲ್ ಆಗಿದ್ದವು. ಇದನ್ನು ನೋಡಿದಂತಹ ಅಭಿಮಾನಿಗಳು ಇವರಿಬ್ಬರಿಗೂ ಶುಭವಾಗಲಿ ಎಂದು ಹಾರೈಸಿದರು ಇದೀಗ ಪ್ರಿಯಾ ಹಾಗೂ ಸಿದ್ದು ಇಬ್ಬರೂ ಕೂಡ ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ

ಹೌದು ಪ್ರಿಯಾ ಮತ್ತು ಸಿದ್ದು ಇಬ್ಬರು ಕೂಡ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ ಈ ವಿಡಿಯೋ ಮತ್ತು ಫೋಟೋಸ್ಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲರಿಂದಲೂ ಕೂಡ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಎಲ್ಲವೂ ಅಂದುಕೊಂಡ ಮಾದರಿಯಲ್ಲಿ ನಡೆದರೆ ಫೆಬ್ರವರಿ ತಿಂಗಳಲ್ಲಿ ಪ್ರಿಯಾ ಹಾಗೂ ಸಿದ್ದು ಇಬ್ಬರೂ ಕೂಡ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನಲ್ಲಿ ಸಕ್ಕತ್ತಾಗಿ ಮಿಂಚಿರುವಂತಹ ಪ್ರಿಯಾ ಹಾಗೂ ಸಿದ್ದು ಅವರ ಫೋಟೋಸ್ ಈ ಕೆಳಗಿನ ವಿಡಿಯೋದಲ್ಲಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ.

ಒಟ್ಟಿಗೆ ಕ್ರಾಂತಿ ಸಿನಿಮಾ ಪ್ರಚಾರ ಮಾಡುತ್ತಿರುವ ಡಿ ಬಾಸ್ ಮತ್ತು ಕಿಚ್ಚ ಸುದೀಪ್ ಈ ವಿಡಿಯೋ ನೋಡಿ ನಿಜಕ್ಕೂ ಬೆಚ್ಚಿ ಬೀಳ್ತಿರಾ.

 

ಕ್ರಾಂತಿ ಸಿನಿಮಾ ಕರ್ನಾಟಕದಲ್ಲಿ ಹೊಸದೊಂದು ಕ್ರಾಂತಿ ಸೃಷ್ಟಿ ಮಾಡಿರುವುದಂತೂ ನಿಜ ಕ್ರಾಂತಿ ಸಿನಿಮಾದಿಂದ ದರ್ಶನ್ ಅವರು ಸಾಕಷ್ಟು ಕಾಂಟ್ರವರ್ಸಿಗೆ ಸಿಲುಕಿದ್ದಾರೆ. ತಮ್ಮ ಮಾತಿನಿಂದಲೇ ಹಲವಾರು ಸಮಸ್ಯೆಗಳನ್ನು ಕೂಡ ಹುಟ್ಟಿ ಹಾಕಿಕೊಂಡಿದ್ದಾರೆ ಆದರೂ ಕೂಡ ಇವರ ಅಭಿಮಾನಿಗಳು ಎಂದಿಗೂ ಇವರ ಕೈ ಬಿಡುವುದಿಲ್ಲ. ವಿಶೇಷ ಏನೆಂದರೆ ಕ್ರಾಂತಿ ಸಿನಿಮಾದ ಮೂಲಕ ಮತ್ತೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಕೂಡ ಒಂದಾಗುತ್ತಿರುವುದು ನಿಜಕ್ಕೂ ಸಂತೋಷದ ವಿಚಾರವೇ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಐದು ವರ್ಷಗಳಿಂದ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಕೂಡ ಬೇರೆಯಾಗಿದ್ದರು ಅಂದರೆ ಯಾವುದೇ ಸಿನಿಮಾದಲ್ಲಿ ಇರಬಹುದು, ಕುಟುಂಬದ ಕಾರ್ಯಕ್ರಮದಲ್ಲಿ ಇರಬಹುದು ಅಥವಾ ಇನ್ನಿತರ ಕಾರ್ಯ ಚಟುವಟಿಕೆಯಲ್ಲಿ ಇರಬಹುದು ಎಲ್ಲಿಯೂ ಕೂಡ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಅಷ್ಟೇ ಯಾಕೆ ಸೋಶಿಯಲ್ ಮೀಡಿಯಾದಿಂದಲೂ ಕೂಡ ದೂರವಿದ್ದರೂ ಸಾಮಾನ್ಯವಾಗಿ ಸ್ನೇಹಿತರಾದವರು ಒಂದಲ್ಲ ಒಂದು ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ.

ಪರಸ್ಪರ ಮಾತನಾಡುತ್ತಾರೆ ಎಷ್ಟೇ ಬಿಜಿ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಂತೂ ಟಚ್ ನಲ್ಲಿ ಇರುತ್ತಾರೆ ಇದ್ಯಾವುದರಲ್ಲೂ ಜೊತೆಗಿಲ್ಲ ಅಂದರೆ ಅವರು ಇಬ್ಬರೂ ಕೂಡ ಮನಸ್ತಾಪ ಮಾಡಿಕೊಂಡಿದ್ದಾರೆ ಅಥವಾ ಅವರ ಸಂಬಂಧದಲ್ಲಿ ಏನು ಹದಗಿಟ್ಟಿದೆ ಎಂಬುದಾಗಿ ಎಲ್ಲರೂ ಕೂಡ ಭಾವಿಸುತ್ತಾರೆ. ಕಿಚ್ಚ ಸುದೀಪ್ ಮತ್ತು ದರ್ಶನ್ ನಡುವೆಯೂ ಕೂಡ ಇಂಥದ್ದೇ ಒಂದು ವಾತಾವರಣ ನಿರ್ಮಾಣವಾಗಿತ್ತು. ಐದು ವರ್ಷದಿಂದಲೂ ಇಬ್ಬರು ಪರಸ್ಪರ ಭೇಟಿಯಾಗಿರಲಿಲ್ಲ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ.

ಆದರೆ ಹೊಸಪೇಟೆಯಲ್ಲಿ ನಟ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಪ್ರಕರಣವನ್ನು ಕೇಳುತ್ತಿದ್ದ ಹಾಗೆ ಕಿಚ್ಚ ಸುದೀಪ್ ತಮ್ಮ ಜೀವದ ಗೆಳೆಯರ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ದೀರ್ಘ ಸಾಲುಗಳನ್ನು ಬರೆದುಕೊಂಡರು. ನಾವಿಬ್ಬರು ಜೊತೆಯಾಗಿ ಇಲ್ಲದೆ ಇದ್ದರೂ ಮಾತನಾಡದೆ ಇದ್ದರೂ ಕೂಡ ಇಂತಹ ಘಟನೆ ನಡೆದಾಗ ಅದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಾಗುವುದಿಲ್ಲ. ನಾನು ಈ ಘಟನೆಯನ್ನು ಖಂಡಿಸುತ್ತೇನೆ ಇಂತಹ ಘಟನೆ ಯಾವ ನಟನಿಗೂ ಆಗಬಾರದು ಕಲಾವಿದರಿಗೆ ಗೌರವ ಕೊಡಿ ಎಂದು ಬರೆದುಕೊಂಡಿದ್ದರು.

ಇದನ್ನು ನೋಡುತ್ತಿದ್ದ ಹಾಗೆ ದರ್ಶನ್ ಅವರು ಕೂಡ ಆಶ್ಚರ್ಯ ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ಐದು ವರ್ಷದಿಂದಲೂ ಕೂಡ ಯಾವುದೇ ರೀತಿಯಾದಂತಹ ಸಂದೇಶ ಕಳುಹಿಸದ ದರ್ಶನ್ ಕಿಚ್ಚ ಸುದೀಪ್ ಅವರು ಮಾಡಿದಂತಹ ಟ್ವಿಟ್ ನೋಡಿ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ರೀ ಟ್ವಿಟ್ ಮಾಡಿದ್ದಾರೆ. ಇದನ್ನು ನೋಡುತ್ತಿದ್ದ ಹಾಗೆ ಕರುನಾಡ ಜನತೆ ನಿಜಕ್ಕೂ ಕೂಡ ಒಂದು ಕ್ಷಣ ಅಚ್ಚರಿಗೆ ಒಳಗಾಗುತ್ತಾರೆ. ಏಕೆಂದರೆ ಕಠಿಣ ಪರಿಸ್ಥಿತಿ ಬಂದಾಗಲೂ ಕೂಡ ದರ್ಶನ್ ಕಿಚ್ಚ ಸುದೀಪ್ ಅವರ ಜೊತೆ ಮಾತನಾಡಿರಲಿಲ್ಲ ಮೀಡಿಯಾದವರು ಕೂಡ ಸಾಕಷ್ಟು ಬಾರಿ ಈ ಪ್ರಶ್ನೆಯನ್ನು ಕೇಳಿದರು ಆಗಲು ಕೂಡ ಎಲ್ಲರಿಗೂ ಕಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು.

ಆದರೆ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಮಾತ್ರ ಕಿಚ್ಚ ಸುದೀಪ್ ಅವರ ಮೇಲೆ ಇದ್ದಂತಹ ಮುನಿಸು ಅಥವಾ ಕೋಪ ಇವೆಲ್ಲವನ್ನು ಕೂಡ ಸಂಪೂರ್ಣವಾಗಿ ಬಿಟ್ಟಿದ್ದಾರೆ. ಸಂದರ್ಶನ ಒಂದರಲ್ಲಿ ಕಿಚ್ಚ ಸುದೀಪ್ ಅವರ ಹೆಸರನ್ನು ಹೇಳುತ್ತಾರೆ ತದನಂತರ ಕಿಚ್ಚ ಸುದೀಪ್ ಮಾಡಿದ್ದಂತಹ ಟ್ವಿಟ್ ಗೆ ರೀ ಟ್ವಿಟ್ ಮಾಡುತ್ತಿದ್ದಾರೆ. ಇವೆಲ್ಲವನ್ನು ನೋಡುತ್ತಿದ್ದರೆ ಇವರಿಬ್ಬರು ಮೊದಲಿನಂತೆ ಒಂದಾಗಬಹುದು ಎಂಬುವುದು ಎಲ್ಲರ ಅಭಿಪ್ರಾಯವಾಗಿದೆ. ಇದಕ್ಕೆ ಪುಷ್ಟಿ ನೀಡಲು ಅಭಿಮಾನಿಗಳು ಕೂಡ ಹಲವಾರು ರೀತಿಯ ಫೋಟೋಗಳನ್ನು ಎಡಿಟ್ ಮಾಡಿದ್ದಾರೆ.

ಅದರಲ್ಲಿ ನೆನ್ನೆಯಷ್ಟೇ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ದರ್ಶನ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಕೂಡ ಒಟ್ಟಾಗಿ ನಿಂತಿರುವಂತಹ ಫೋಟೋ ಒಂದನ್ನು ಎಡಿಟ್ ಮಾಡಿದ್ದಾರೆ. ಈ ಫೋಟೋ ನೋಡುತ್ತಿದ್ದ ಹಾಗೆ ಎಲ್ಲರೂ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದನ್ನು ನೋಡಿದರೆ ಯಾರಿಂದಲೂ ಕೂಡ ಎಡಿಟೆಡ್ ಫೋಟೋ ಅಂತ ಕಂಡು ಹಿಡಿಯುವುದಕ್ಕೆ ಸಾಧ್ಯವಿಲ್ಲ ಇಬ್ಬರೂ ಕೂಡ ನೈಜವಾಗಿಯೇ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಅಷ್ಟರ ಮಟ್ಟಿಗೆ ಈ ಫೋಟೋ ಕಾಣುತ್ತಿದೆ ಈ ಕಲ್ಪನೆ ನಿಜವಾಗಿದ್ದರೆ ಅದೆಷ್ಟು ಚೆನ್ನಾಗಿರುತ್ತೆ ಎಂದು ಸಾಕಷ್ಟು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಸನ್ಯಾಸತ್ವ ಸ್ವೀಕರಿಸಿದ ನಟಿ ಚಿತ್ಕಾಲ ಬಿರದಾರ್ ಕಾರಣವೇನು ಗೊತ್ತ.?

ಅಮ್ಮಮ್ಮ ಪಾತ್ರ ಮುಗಿದ ಬಳಿಕ ಸನ್ಯಾಸಿನಿ ಆದ್ರಾ ಚಿತ್ಕಲಾ ಬಿರಾದರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರವಾಹಿ ನೋಡುಗರ ನಂಬರ್ ಒನ್ ಫೇವರೆಟ್ ಧಾರಾವಾಹಿ. ಇದು ಶುರುವಾದ ಮೊದಲ ದಿನದಿಂದಲೂ ಕೂಡ ಬಹಳಷ್ಟು ವಿಷಯಗಳಿಂದ ಎಲ್ಲರ ಮನ ಗೆದ್ದಿದೆ. ಮೊದಲನೆಯದಾಗಿ ನಾಯಕಿಯು ಇಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸುವುದು ಹಾಗೂ ನಾಯಕನ ಆಟಿಟ್ಯೂಡ್ ಹಾಗೂ ನಾಯಕನ ತಾಯಿಯಾದ ಅಮ್ಮಮ್ಮ ಪಾತ್ರ ಮತ್ತು ಸಾನಿಯಾ ಹಾಗೂ ವರು ಅವರ ಕುತಂತ್ರ ಧಾರಾವಾಹಿಯಲ್ಲಿ ಚೆನ್ನಾಗಿ ವರ್ಕ್ ಆಗುತ್ತಿದೆ.

ಅಮ್ಮಮ್ಮ ಪಾತ್ರ ಮಾಡಿರುವ ಚಿತ್ಕಲಾ ಬಿರಾದರ್ ಅವರು ಈ ಧಾರವಾಹಿಯಿಂದ ಇಡೀ ಕರ್ನಾಟಕದಾದ್ಯಂತ ಅಮ್ಮಮ್ಮ ಎಂದು ಫೇಮಸ್ ಆಗಿದ್ದಾರೆ. ಇದೀಗ ಧಾರವಹಿಯು ಕ್ಲೈಮಾಕ್ಸ್ ಹಂತ ತಲುಪಿದ್ದು ಈಗಾಗಲೇ ತಿಂಗಳ ಹಿಂದೆ ಚಿತ್ಕಲಾ ಬಿರಾದರ್ ಅವರ ಪಾತ್ರವು ಮುಗಿದಿದೆ. ಸೌಪರ್ಣಿಕಾ ಹೆಸರಿಗೆ ತಮ್ಮೆಲ್ಲ ಆಸ್ತಿಯನ್ನು ಬರೆದು ಮರಣ ಹೊಂದಿದ್ದಾರೆ, ಇನ್ನು ಭೂಮಿ ಅಮ್ಮಮ್ಮನ ಕನಸಿನಂತೆ ಅಮ್ಮಮ್ಮನ ಹಾದಿ ಮಾರ್ಗದರ್ಶನದಂತೆ ಜವಾಬ್ದಾರಿಗಳನ್ನು ಹೊತ್ತುಕೊಂಡು ನಿಭಾಯಿಸುತ್ತಿದ್ದಾರೆ.

ಆದರೆ ಅಮ್ಮಮ್ಮ ಪಾತ್ರ ಮುಗಿದಿರೋದು ಧಾರಾವಾಹಿ ಅಭಿಮಾನಿಗಳಿಗೆ ಬಹಳ ಬೇಸರ ತರಿಸಿದೆ. ಈ ಧಾರಾವಾಹಿ ತಂಡವು ಕೂಡ ಅಮ್ಮಮ್ಮನ ಕೊನೆ ಎಪಿಸೋಡ್ ಗಳಲ್ಲಿ ಅವರನ್ನು ಕಣ್ಣೀರು ಹಾಕಿ ಬಿಳ್ಕೊಟ್ಟಿದ್ದಾರೆ. ಈ ಎಲ್ಲಾ ವಿಡಿಯೋಗಳನ್ನು ಚಿತ್ಕಲಾ ಹಾಗೂ ತಂಡವು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು. ಈಗ ಸನ್ಯಾಸಿನಿ ಅವತಾರದಲ್ಲಿ ಚಿತ್ಕಲಾ ಅವರು ಮತ್ತೊಂದು ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ ಇದನ್ನು ನೋಡಿದ ಅವರ ಫಾಲೋವರ್ಸ್ ಗಳು ಇದೇನಿದು ಎಂದು ಆಶ್ಚರ್ಯಪಟ್ಟಿದ್ದಾರೆ.

ಅದಕ್ಕೆ ಕನ್ನಡತಿಯಿಂದ ಸನ್ಯಾಸಿನಿ ಕಡೆಗೆ, ಧಾರಾವಾಹಿಯಿಂದ ಸಿನಿಮಾ ತಂಡದ ಜೊತೆಗೆ ಎನ್ನುವ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಇದರಿಂದ ಈಗ ಅವರು ಬೇರೆ ಯಾವುದೇ ಸಿನಿಮಾದಲ್ಲಿ ಸನ್ಯಾಸಿನಿ ಪಾತ್ರ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಈಗ ಅವರು ಹಿರಿತೆರೆಯಲ್ಲೂ ಗುರುತಿಸಿಕೊಳ್ಳುತ್ತಿದ್ದು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವರ್ಷ ತೆರೆಕಂಡ ಹಲವು ಸಿನಿಮಾಗಳಲ್ಲಿ ಇವರು ಸಹ ಪಾತ್ರ ಮಾಡಿದ್ದಾರೆ. ವಿಕ್ರಂತ್ ರೋಣ ಸಿನಿಮಾದಲ್ಲಿ ನಾಯಕಿಯ ತಾಯಿಯ ಪಾತ್ರ ಹಾಗೂ ದಿಲ್ ಪಸಂದ್ ಚಿತ್ರದಲ್ಲಿ ಮೇಘಾ ಶೆಟ್ಟಿ ಅವರ ತಾಯಿಯ ಪಾತ್ರ ಹೀಗೆ ನಾನಾ ಪಾತ್ರಗಳಲ್ಲಿ ಸಣ್ಣ ಪಾತ್ರವಾದರೂ ಸಿನಿಮಾದ ಭಾಗ ಎನಿಸಿಕೊಂಡಿದ್ದಾರೆ.

ಈ ಹಿಂದೆ ಅವರು ಅಗ್ನಿಸಾಕ್ಷಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಪೋಷಕ ಪಾತ್ರ ಮಾಡಿದ್ದರು. ಆದರೆ ಕನ್ನಡತಿ ಇವರಿಗೆ ಇವರ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್ ಎನ್ನಬಹುದು. ಏಕೆಂದರೆ ಈ ಧಾರಾವಾಹಿಯಲ್ಲಿ ಈ ಪಾತ್ರ ತುಂಬಾ ಗಟ್ಟಿಯಾಗಿತ್ತು. ರತ್ನಮಾಲ ಎನ್ನುವ ಹಸಿರುಪೇಟೆ ಒಬ್ಬ ಮಹಿಳೆ ಬೆಂಗಳೂರಿಗೆ ಬಂದು ಕಾಫಿ ಕೆಫೆ ಮತ್ತು ಇತರ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಅದನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದ ಅವರ ತಾಳ್ಮೆ ಜಾಣ್ಮೆ ಬುದ್ಧಿವಂತಿಕೆ ಆ ಪಾತ್ರದ ಪ್ಲಸ್ ಪಾಯಿಂಟ್ ಆಗಿತ್ತು ಹಾಗೂ ಅಮ್ಮಮ್ಮನ ಬಾಯಿಯಿಂದ ಬರುತ್ತಿದ್ದ ಪ್ರತಿ ಮಾತು ಕೂಡ ಅರ್ಥಪೂರ್ಣವಾಗಿ ವೇದದಂತಿರುತ್ತಿತ್ತು.

ಹಾಗಾಗಿ ಆ ಸಂಭಾಷಣೆಯನ್ನು ಕೇಳಲು ಪ್ರೇಕ್ಷಕರು ಅರ್ಧಗಂಟೆ ಟಿವಿ ಮುಂದೆ ಮಂತ್ರಮುಗ್ಧರಾಗಿ ಕುಳಿತು ಬಿಡುತ್ತಿದ್ದರು. ಈಗ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಅವರ ಅಭಿಮಾನಿಗಳು instagram ನಲ್ಲಿ ಆ ಕುರಿತು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ನೀವೇ ಇಲ್ಲ ಅಂದಮೇಲೆ ನಾವು ಇನ್ನೆಲ್ಲಿ ಹೋಗುವುದು ನೀವು ನಮ್ಮ ಗುರು ನೀವೆಲ್ಲೋ ನಾವು ಅಲ್ಲೇ ಎಂದು ಒಬ್ಬ ಫಾಲೋವರ್ ತಮಾಷೆಯಾಗಿ ಕಮೆಂಟ್ ಮಾಡಿದ್ದರೆ ಮತ್ತೊಬ್ಬರು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ನೀವು ಇಲ್ಲದೆ ಕನ್ನಡತಿ ಬೋರಾಗಿತ್ತಿದೆ ಎಂದು ಹೇಳಿದ್ದಾರೆ. ಅಮ್ಮಮ್ಮನ ಪಾತ್ರದಂತೆ ಹಲವು ಪಾತ್ರಗಳು ಅವರ ಪಾಲಿಗೆ ದೊರಕಲಿ ಎಂದು ಹರಸೋಣ.

ನನಗೆ ಬಂದ ಪರಿಸ್ಥಿತಿ ಯಾರಿಗೂ ಬರದಿರಲಿ ಎಂದು ವೇದಿಕೆ ಮೇಲೆ ಕಣ್ಣಿರಿಟ್ಟ ನಟಿ ಸಮಂತಾ ಕಾರಣವೇನು ಗೊತ್ತ.? ಅಪ್ಸರೆಯಂತಿದ್ದ ನಟಿಯ ಈಗಿನ ಸ್ಥಿತಿ ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ.

 

ಶಾಕುಂತಲ(Shakunthala Trailer) ಟ್ರೈಲರ್ ರಿಲೀಸ್ ವೇದಿಕೆ ಮೇಲೆ ಭಾವುಕರಾಗಿ ಕಣ್ಣೀರಿಟ್ಟ ನಟಿ ಸಮಂತ(Samantha Ruth Prabhu), ನನಗೆ ಬಂದ ಸ್ಥಿತಿ ಬೇರೆ ಯಾರಿಗೂ ಬರದಿರಲಿ ಎಂದು ಟ್ವೀಟ್ ಮಾಡಿದ್ದು ಯಾಕೆ ಗೊತ್ತಾ.? ನಟಿ ಸಮಂತ(Samantha) ಋತು ಪ್ರಭು ಅವರು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಮೊದಲೆಲ್ಲಾ ಸಿನಿಮಾ ವಿಷಯ ಆಗಿ ಚರ್ಚೆ ಆಗುತ್ತಿದ್ದ ಇವರು ಈಗ ಟ್ರೋಲ್ ಕಂಟೆಂಟ್ ಆಗಿ ಬಿಟ್ಟಿದ್ದಾರೆ.

ಸಮಂತ ಅವರು ಮದುವೆ ಮುರಿದುಕೊಂಡ ವಿಷಯ ಇಟ್ಟುಕೊಂಡು ಅಂದಿನಿಂದ ಇವರನ್ನು ಟ್ರೋಲಿಗರು ಮನ ಬಂದಂತೆ ಟ್ರೋಲ್ ಮಾಡುತ್ತಲೇ ಇದ್ದಾರೆ. ಇದು ಸಮಂತ ಅವರಿಗೂ ತಲುಪಿದ್ದು ಕೆಲವು ಬಾರಿ ಅದಕ್ಕೆ ತಿರುಗೇಟು ಸಹ ನೀಡಿದ್ದಾರೆ. ಈಗ ಬಹು ದಿನಗಳ ನಂತರ ಸಮಂತ ಋತು ಪ್ರಭು ಅವರು ಶಾಕುಂತಲ ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಸಮಂತಾ ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವುದು, ಅದರ ಚಿಕಿತ್ಸೆಗಾಗಿ ವಿದೇಶದಲ್ಲಿ ಇದ್ದಿದ್ದು ಇನ್ನೂ ಸಹ ಅದರಿಂದ ಸಂಪೂರ್ಣವಾಗಿ ಹೊರಬರದೆ ಇರುವುದು ಎಲ್ಲರಿಗೂ ಗೊತ್ತಿರುವ ಸುದ್ದಿಯೇ ಇದರ ನಡುವಲ್ಲಿಯೇ ಅವರು ಅವರ ಯಶೋಧ ಸಿನಿಮಾದ ಶೂಟಿಂಗ್ ಮುಗಿಸಿ ಮತ್ತು ಪ್ರಚಾರ ಕೆಲಸಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದರು.

ಮತ್ತೆ ಅವರು ಈಗ ಶಾಕುಂತಲ ಸಿನಿಮಾಗಾಗಿ ಓಡಾಡುತ್ತಿದ್ದಾರೆ ತಮ್ಮ ಅನಾರೋಗ್ಯದ ಪರಿಸ್ಥಿತಿಯಲ್ಲೂ ಕೂಡ ಚಿತ್ರತಂಡದ ಜೊತೆಗಿದ್ದು ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇದನ್ನೇ ನೆನೆದು ಶಾಕುಂತಲಾ ಟ್ರೈಲರ್ ರಿಲೀಸ್ ಕಾರ್ಯಕ್ರಮದ ವೇದಿಕೆ ಮೇಲೆ ಈ ಚಿತ್ರದ ನಿರ್ದೇಶಕರಾದ ಗುಣ ಅವರು ಸಮಂತ ಅವರನ್ನು ಗುಣಗಾನ ಮಾಡಿ ಈ ಸಿನಿಮಾದಲ್ಲಿ ಹೀರೋ ಸಮಂತ ಅವರೇ, ಅವರಿಂದಲೇ ಈ ಸಿನಿಮಾಗೆ ಶಕ್ತಿ ಅಂದೆಲ್ಲಾ ಮಾತನಾಡಿದ್ದಾರೆ ಇದನ್ನು ಕೇಳಿದ ತಕ್ಷಣವೇ ಸಮಂತ ಅವರು ಭಾವುಕರಾಗಿ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.

ಸಮಂತ ಅವರ ಮನದ ಒಳಗಿನ ನೋವು ಸಂಕಟ ಏನಿತ್ತು ಗೊತ್ತಿಲ್ಲ ಆದರೆ ಅಲ್ಲಿದ್ದವರೆಲ್ಲ ಸಮಂತ ಅವರನ್ನು ಗಟ್ಟಿಯಾಗಿರಬೇಕು ಎಂದು ಸಂತೈಸಿದ್ದಾರೆ. ಅವರು ಆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಫೋಟೋವನ್ನು ಇಟ್ಟುಕೊಂಡು ಟ್ರೋಲಿಗರು ಮೀಮ್ಸ್ ಮಾಡಿ ಹರಿ ಬಿಟ್ಟಿದ್ದಾರೆ. ಸಮಂತ ಅವರು ಮೊದಲ ಬ್ಯೂಟಿ ಮತ್ತು ಶೈನ್ ಅನ್ನು ಕಳೆದುಕೊಂಡಿದ್ದಾರೆ. ವಿ.ಚ್ಛೇ.ದ.ನ ಆದ ಬಳಿಕ ಅವರು ಅವರ ಕೆರಿಯರ್ ಅಲ್ಲಿ ಎಲ್ಲೋ ತಲುಪುತ್ತಾರೆ ಎಂದು ಅಂದುಕೊಂಡಿದ್ದೆವು.

ಆದರೆ ಮಯೋಸಿಟಿಸ್ ಕಾಯಿಲೆ ಅವರನ್ನು ಬೆಂಡಾಗಿಸುತ್ತಿದೆ ಎಂದು ಸೇರಿಸಿದ್ದಾರೆ. ಇದನ್ನು ಸಮಂತ ಅವರು ಮತ್ತೆ ಟ್ವೀಟ್ ಮಾಡಿ ನನ್ನ ರೀತಿ ವರ್ಷಗಟ್ಟಲೆ ಚಿಕಿತ್ಸೆಗೆ ಅಲೆಯುವ ಹಾಗೂ ಮೆಡಿಕೇಶನ್ ಅಲ್ಲಿ ಇರುವ ಪರಿಸ್ಥಿತಿ ಯಾರಿಗೂ ಬರದಿರಲಿ ಎಂದು ಟ್ಯಾಗ್ ಲೈನ್ ಬರೆದು ಹಂಚಿಕೊಂಡಿದ್ದಾರೆ. ಪರೋಕ್ಷವಾಗಿ ಸ್ಯಾಮ್ ತಮ್ಮನ್ನು ಟೀಕಿಸುತ್ತಿರುವವರಿಗೂ ಕೂಡ ಒಳ್ಳೆಯದನ್ನೇ ಬಯಸುತ್ತಿದ್ದಾರೆ ಎನ್ನಬಹುದು.

ಇದರಿಂದ ಅವರು ಒಳಗೆ ಎಷ್ಟು ಕುಗ್ಗಿ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ. ಸಮಂತ ಹಾಗೂ ನಾಗಚೈತನ್ಯ ಅವರು ಇನ್ನು ಸಹ ಸಂಪರ್ಕದಲ್ಲಿದ್ದಾರೆ, ನಾಗಚೈತನ್ಯ ಮತ್ತು ಅವರ ತಂದೆ ಸಮಂತ ಆರೋಗ್ಯ ವಿಚಾರಿಸುತ್ತಾರೆ ಎಂದೆಲ್ಲಾ ಸುದ್ದಿಗಳು ಹರಿದಾಡಿದ್ದರೂ ಸಹ ಇದರ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

ಆದರೆ ಸಮಂತ ಮತ್ತು ನಾಗಚೈತನ್ಯ ಅಭಿಮಾನಿಗಳು ಮಾತ್ರ ನೀವಿಬ್ಬರು ಮತ್ತೆ ಒಂದಾಗಬೇಕು ಸಮಂತ ಅವರಿಗೆ ಈಗ ನಾಗಚೈತನ್ಯ ಪ್ರೀತಿಯ ಅವಶ್ಯಕತೆ ಇದೆ ಎಂದೆಲ್ಲಾ ರಿಕ್ವೆಸ್ಟ್ ಮಾಡುತ್ತಿದ್ದಾರೆ. ಮುಂದೆ ಆದರೂ ಇವರಿಬ್ಬರೂ ಒಂದಾಗಿ ಮೊದಲನಂತೆ ಸಂತಸದಿಂದ ಇರಲಿ ಸಮಂತ ಅವರು ತಮ್ಮ ಸಮಸ್ಯೆಯಿಂದ ಹೊರಬಂದು ಮತ್ತೆ ಬಣ್ಣದ ಲೋಕದಲ್ಲಿ ಮಿನುಗಲಿ ಎಂದು ಅಭಿಮಾನಿಗಳಾಗಿ ನಾವೆಲ್ಲಾ ಹಾರೈಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.

ಮದುವೆಗೂ ಮುನ್ನವೇ ಮಗುವಿಗೆ ಅಪ್ಪ ಅಮ್ಮ ಆದ ಬಿಗ್ ಬಾಸ್ ಸ್ಪರ್ಧಿಗಳು.

 

ಪ್ರಪಂಚದಲ್ಲಿ ಇರುವ ಪ್ರತಿಯೊಬ್ಬರ ಬದುಕಿನಲ್ಲೂ ಸಾಕಷ್ಟು ಬದಲಾವಣೆಗಳು ಆಗುತ್ತಲೇ ಇರುತ್ತವೆ. ಎಷ್ಟೋ ಹೊಸ ವಿಚಾರಗಳು ಅಥವಾ ಎಷ್ಟು ಹಳೇ ವಿಚಾರಗಳಿಗೆ ವಿದಾಯ ಅಥವಾ ಯಾವುದೋ ಟರ್ನಿಂಗ್ ಪಾಯಿಂಟ್ ಮತ್ತದೇನೋ ವಿಶೇಷ ಸಂದರ್ಭಗ ಇದೆಲ್ಲ ಸರ್ವೇ ಸಾಮಾನ್ಯವಾಗಿ ಜರುಗುತ್ತಲೇ ಇರುತ್ತವೆ. ಆದರೆ ಹಲವರ ಕುರಿತು ಹೊರ ಜಗತ್ತಿಗೆ ತಿಳಿಯದೇ ಹೋದರು ಸೆಲೆಬ್ರೆಟಿಗಳ ಸಣ್ಣ ಪುಟ್ಟ ವಿಚಾರ ಕೂಡ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿ ಬಿಡುತ್ತದೆ.

ಅದರಲ್ಲೂ ಬಣ್ಣದ ಪ್ರಪಂಚದಲ್ಲಿ ಗುರುತಿಸಿಕೊಂಡಿರುವ ಸ್ಟಾರ್ಗಳ ಮೇಲೆ ಎಲ್ಲರ ಕಣ್ಣು ಎಂದೇ ಹೇಳಬಹುದು. ಕೆಲವರು ಅಭಿಮಾನಕ್ಕಾಗಿ ಸಣ್ಣ ಪುಟ್ಟ ವಿಷಯವನ್ನು ಕೂಡ ದೊಡ್ಡದಾಗಿ ಸಂಭ್ರಮಿಸಿ ತಮ್ಮ ನೆಚ್ಚಿನ ನಟರ ಬಗ್ಗೆ ತಿಳಿದುಕೊಳ್ಳಲು ಆಸೆಪಟ್ಟರೆ ಮತ್ತೆ ಕೆಲವರು ಅವರ ವೈಯಕ್ತಿಕ ವಿಚಾರಗಳನ್ನು ಕೆಣಕಿ ಗಾಸಿಪ್ ಮಾಡುವುದಕ್ಕಾಗಿಯೇ ಕಾಯುತ್ತಾ ಇರುತ್ತಾರೆ.

ಅದರಲ್ಲೂ ಸೋಶಿಯಲ್ ಮೀಡಿಯ ಬಂದ ಮೇಲೆ ಬಹಳ ಬೇಗ ವಿಷಯಗಳು ಜಗಜ್ಡಾಹಿರಾಗಿ ಬಿಡುತ್ತಿದೆ. ಅದರಲ್ಲಿ ಈಗ ಬಿಗ್ ಬಾಸ್ ಸ್ಪರ್ಧಿಗಳ ಬಗೆಗಿನ ವಿಶೇಷ ಸುದ್ದಿ ಒಂದು ಬಾರಿ ಸದ್ದು ಮಾಡುತ್ತಿದೆ. ಅದೇನು ಎಂದರೆ ಮದುವೆ ಆಗುವುದಕ್ಕೂ ಮುನ್ನವೇ ಮಗುವನ್ನು ದತ್ತು ಪಡೆದುಕೊಂಡು ಇವರಿಬ್ಬರೂ ತಂದೆ ತಾಯಿ ಆಗಿದ್ದಾರೆ ಎಂದು. ಅಷ್ಟಕ್ಕೂ ಯಾರು ಈ ಜೋಡಿ ಎಂದರೆ ತೆಲುಗು ಬಿಗ್ ಬಾಸ್ ಐದನೇ ಸೀಸನ್ ಸ್ಪರ್ಧಿ ಆಗಿದ್ದ ಸಿರಿ ಹನುಮಂತು ಮತ್ತು ಬಿಗ್ ಬಾಸ್ 6ನೇ ಸೀಸನ್ ನ ಕಂಟೆಸ್ಟೆಂಟ್ ಆಗಿರುವ ಶ್ರೀಹಾನ್ ಅವರು.

ಸಿರಿ ಹನುಮಂತು ಅವರು ಮೂಲತಃ ಧಾರಾವಾಹಿ ಹಾಗೂ ಸಿನಿಮಾ ಕಲಾವಿದೆ ಮತ್ತು ಮ್ಯೂಸಿಕ್ ಅಲ್ಲಿ ಕೂಡ ಹೆಸರು ಮಾಡಿದ್ದಾರೆ. ಶ್ರೀಹಾನ್ ಅವರು ಸಹ ಯೂಟ್ಯೂಬ್ ಸ್ಟಾರ್ ಮತ್ತು ತೆಲುಗು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಕಲಾವಿದ. ಸೋಶಿಯಲ್ ಮೀಡಿಯಾ ಉಪಯೋಗಿಸುವ ಹಲವು ಜನರಿಗೆ ಇವರಿಬ್ಬರ ಪರಿಚಯ ಇದ್ದೇ ಇರುತ್ತದೆ. ಈ ಜೋಡಿಗಳು ಬಹಳ ದಿನಗಳಿಂದ ಪ್ರೀತಿಯಲ್ಲಿ ಇದ್ದರು ಕೆಲವೊಮ್ಮೆ ಮನಸ್ತಾಪ ಉಂಟಾಗಿ ಬೇರೆ ಆಗುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು.

ಆದರೆ ಬಂದ ಮನಸ್ತಾಪವನ್ನು ಬಹಳ ಬೇಗ ಸುಧಾರಿಸಿಕೊಂಡು ಮತ್ತೆ ಒಂದಾಗಿದ್ದಾರೆ. ಹಾಗಾಗಿ ಇವರಿಬ್ಬರು ಮದುವೆ ಆಗೇ ಆಗುತ್ತಾರೆ ಎನ್ನುವ ಸುದ್ದಿಗಳು ಬಹಳ ಗಟ್ಟಿ ಆಗಿವೆ. ಇವರು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಹಿಂದೆ ಸಿರಿ ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಶ್ರೀಹಾನ್ ಒಂದು ದಿನದ ವಿಶೇಷ ಅತಿಥಿಯಾಗಿ ಮನೆ ಒಳಗೆ ಎಂಟ್ರಿ ಆಗಿದ್ದರು ಈಗ ಶ್ರೀಹಾನ್ ಮನೆ ಒಳಗೆ ಕಂಟೆಸ್ಟೆಂಟ್ ಆಗಿರುವಾಗಲೂ ಸಹ ಸಿರಿ ಹನುಮಂತು ಅವರಿಗೆ ಕೆಲವು ಸಮಯ ಮನೆ ಒಳಗೆ ಇರಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಅಲ್ಲಿಗೆ ಇವರಿಬ್ಬರು ದತ್ತು ತೆಗದುಕೊಂಡಿರುವ ಸಾಕು ಮಗ ಚೈತು ಅವರನ್ನು ಸಹ ಸಿರಿ ಕಳೆದುಕೊಂಡು ಹೋಗಿದ್ದಾರೆ. ಚೈತು ಅವರು ಯಾವಾಗಲೂ ಸಿರಿ ಜೊತೆಗೆ ಇರುತಾರಂತೆ ಅವರು ಸಿರಿ ಅವರನ್ನು ಅಮ್ಮ ಎಂದೇ ಕರೆಯುತ್ತಾರೆ ಹಾಗೂ ಶ್ರೀಹಾನ್ ಅವರನ್ನು ಅಪ್ಪ ಎಂದು ಕರೆಯುತ್ತಾರಂತೆ. ಶ್ರೀಹಾನ್ ಅವರು ಆರನೇ ಸೀಸನ ರನ್ನರ್ ಆಗಿದ್ದಾರೆ. ಅದನ್ನು ಸಿರಿ ಅವರು ಬಹಳ ಆನಂದದಿಂದ ಸಂಭ್ರಮಿಸಿದ್ದು ವಿಶೇಷವಾಗಿ ಮನೆಗೆ ಬರ ಮಾಡಿಕೊಂಡಿದ್ದಾರೆ ಈ ವಿಡಿಯೋದಲ್ಲಿ ಸಹ ಚೈತು ಅವರು ಇರುವುದನ್ನು ಕಾಣಬಹುದಾಗಿದೆ. ಸದ್ಯದಲ್ಲೇ ಇವರಿಬ್ಬರು ಮದುವೆ ಕೂಡ ಹಾಕಿ ಅಧಿಕೃತವಾಗಿ ದಂಪತಿಗಳಾಗಲಿದ್ದಾರೆ ಎನ್ನುವ ಸುದ್ದಿಯು ಸಹ ಇದೆ.