Home Blog Page 254

ತಲೆಯಲ್ಲಿ ಕೂದ್ಲೇ ಇಲ್ಲ ನೀನು ನನ್ನ ಮದ್ವೆ ಅಗ್ತಿಯಾ.? ಮದ್ವೆ ಪ್ರೋಪೊಸಲ್ ನಿರಾಕರಿಸಿದ ಆಂಕರ್ ಅನುಶ್ರೀ. ಅಷ್ಟಕ್ಕೂ ಅನುಶ್ರೀ ನಾ ಮದ್ವೆ ಆಗ್ತೀನಿ ಅಂತ ಹೇಳಿದ್ದ ಭೂಪ ಯಾರು ಗೊತ್ತ.?

 

ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಜಾದು ಮಾಡಿರುವ ನಿರೂಪಕಿ ಅನುಶ್ರೀ ಅವರು ಎಲ್ಲೇ ಹೋದರು ಕೂಡ ಅವರ ಮದುವೆ ಬಗ್ಗೆ ಸುದ್ದಿ ಆಗುತ್ತಾರೆ. ಅವರು ನಿರೂಪಣೆ ಮಾಡುವ ಕಾರ್ಯಕ್ರಮಗಳ ವೇದಿಕೆಯಾಗಲಿ, ಮಾಧ್ಯಮದವರ ಮುಂದೆ ಆಗಲಿ ಸದಾ ಕಾಲ ಈಕೆಗೆ ಈ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ ಆದರೆ ಮೊದಲ ಬಾರಿಗೆ ಅವರೇ ಅವರ ಮದುವೆ ಬಗ್ಗೆ ತಮಾಷೆ ಮಾಡಿಕೊಂಡಿದ್ದಾರೆ.

ಈಗ ವಾರದಿಂದ ಜರುಗುತ್ತಿರುವ ಚಿಕ್ಕಬಳ್ಳಾಪುರದ ಉತ್ಸವದಲ್ಲಿ ನಾನಾ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಯೋಜಿಸಲಾಗಿದ್ದು ಕೃಷಿ ಮೇಳ, ಉದ್ಯೋಗ ಮೇಳ, ರಕ್ತದಾನ ಶಿಬಿರ, ಫಲ ಪುಷ್ಪ ಮೇಳ ಹಾಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳು ಮನರಂಜನ ಕಾರ್ಯಕ್ರಮಗಳು ಎಲ್ಲವನ್ನು ಜಿಲ್ಲಾ ಕೇಂದ್ರ ಸಹಯೋಗದೊಂದಿಗೆ ನಡೆಸಲಾಗುತ್ತಿದೆ.

ಇದರಲ್ಲಿ ದರ್ಶನ್, ಸುದೀಪ್ ಮತ್ತು ಇತರ ಸ್ಟಾಥ್ ಗಳು ಹಾಗೂ ತೆಲುಗು ಸ್ಟಾರ್ ಗಳು ಸೇರಿದಂತೆ ಅನೇಕರು ಬಾಗಿಯಾಗಿ ಕಾರ್ಯಕ್ರಮವನ್ನು ಇನ್ನಷ್ಟು ಮೆರಗುಗೊಳಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಹೊಣೆಯನ್ನು ಅನುಶ್ರೀ ಯವರು ಹೊತ್ತುಕೊಂಡಿದ್ದರು. ತಮ್ಮ ಲವಲವಿಕೆ ಮಾತುಗಳಿಂದ ಪ್ರೇಕ್ಷಕರನ್ನು ಮನರಂಜನೆ ಗೊಳಿಸುವ ಅನುಶ್ರೀ ಅವರು ಹೀಗೆ ಮಾತಿನ ಮಧ್ಯೆ ಅಲ್ಲಿದ್ದ ಯುವತಿ ಒಬ್ಬರನ್ನು ಬಹಳ ಸುಂದರವಾಗಿದ್ದೀರ ಎಂದು ಹೊಗಳಿದ್ದಾರೆ.

ಮತ್ತು ಆಕೆಯನ್ನು ಮದುವೆ ಆಗಿದೆಯಾ ಅಂತ ಕೇಳಿದರೆ ಯುವತಿ ಇಲ್ಲ ಮೇಡಂ ಇನ್ನು ಸಿಂಗಲ್ ಎಂದು ಉತ್ತರ ಕೊಟ್ಟಿದ್ದಾರೆ. ನಾನು ಕೂಡ ಇನ್ನು ಸಿಂಗಲ್ ನನ್ನನ್ನು ಎಲ್ಲರೂ ಮದುವೆ ಬಗ್ಗೆ ಕೇಳುತ್ತಾರೆ ಇಬ್ಬರೂ ಸಹ ಚಿಕ್ಕಬಳ್ಳಾಪುರದಲ್ಲಿ ಯಾರಾದರೂ ಒಳ್ಳೆ ಹುಡುಗರು ಸಿಗುತ್ತಾರೆ ಎಂದು ಹುಡುಕೋಣವ ಎಂದು ಕೇಳಿದ್ದಾರೆ. ಮತ್ತೆ ವೇದಿಕೆ ಮೇಲೆ ಬಂದು ಯಾರಾದರೂ ನನ್ನನ್ನು ಮದುವೆ ಆಗುತ್ತೀರಾ ಕೈ ಮೇಲೆ ಮಾಡಿ ಎಂದು ಕೇಳುತ್ತಾರೆ.

ಅವರು ಇಷ್ಟು ಹೇಳುತ್ತಿದ್ದೆ ಅಲ್ಲಿ ನೆರೆದಿದ್ದ ಯುವಕರು ಅಂಕಲ್ಗಳು ಎಲ್ಲರೂ ಸಹ ಅವರನ್ನು ಮದುವೆಯಾಗಲು ಮುಗಿಬಿದ್ದು ಪ್ರತಿಕ್ರಿಸುತ್ತಾರೆ. ಆ ಪೈಕಿ ಪ್ರತಿಯೊಬ್ಬರ ಬಳಿ ಹೋಗಿ ಅವರನ್ನು ವಿಚಾರಣೆ ಮಾಡಿ ಅವರುಗಳ ಬಗ್ಗೆ ಕಾಮೆಂಟ್ ಕೊಟ್ಟಿದ್ದಾರೆ. ಅದರಲ್ಲಿ ಒಬ್ಬರಿಗೆ ನೀವು ಅಂಕಲ್ ರೀತಿ ಇದ್ದೀರಾ ಮೊಮ್ಮಕ್ಕಳ ಮದುವೆಗೆ ಬಂದಿದ್ದಾರೆ ಅನಿಸುತ್ತದೆ ನಿಮಗೀಗ ನನ್ನ ಜೊತೆ ಮದುವೆ ಬೇಕಾ ಅಂತ ಕೇಳಿದ್ದಾರೆ.

ಮತ್ತೆ ಇನ್ನೊಬ್ಬ ಹುಡುಗನ ಬಳಿ ಹೋಗಿ ನಿನ್ನ ತಲೆಯಲ್ಲಿ ಕೂದಲೇ ಇಲ್ಲ ನೀನು ನನ್ನನ್ನು ಮದುವೆಯಾಗುತ್ತೀಯಾ ಅಂತ ಹೇಳಿ ಅದಕ್ಕೆ ಕಾಂತರಾ ಸಿನಿಮಾದ ಫೇಮಸ್ ಡೈಲಾಗ್ ಅದು ಕಾಡಿನಲ್ಲಿ ಸೊಪ್ಪು ಸಿಗುತ್ತದೆ ಈ ಡೈಲಾಗ್ ಹೊಡೆದು ಕಾಲು ಎಳೆದಿದ್ದಾರೆ. ಮತ್ತೊಬ್ಬ ಹುಡುಗನನ್ನು ನೋಡಿ ನೀನು ನೋಡಲು ಸುಮಾರಾಗಿ ಇದ್ದೀಯ ನಿನ್ನ ಜೊತೆ ಬೇಕಾದರೆ ಯೋಚಿಸಬಹುದು ಆದರೆ ಮದುವೆ ಎನ್ನುವುದು ಈ ತಕ್ಷಣಕ್ಕೆ ನಿರ್ಧಾರ ತೆಗೆದುಕೊಳ್ಳುವುದಲ್ಲ ಇದು ಸ್ವಲ್ಪ ಯೋಚನೆ ಮಾಡಿ ಹೇಳುತ್ತೇನೆ ಎಂದು ಹೇಳಿ ತಮಾಷೆಯಾಗಿ ಮದುವೆ ವಿಚಾರದಿಂದ ಜಾರಿಕೊಂಡಿದ್ದಾರೆ.

ಸದ್ಯಕ್ಕೆ ಅನುಶ್ರೀ ಅವರ ಮದುವೆ ವಿಚಾರ ಒಂದು ತಮಾಷೆಯ ಸಂಗತಿ ಆಗಿದ್ದು ಈಗ ಅವರೇ ಅದನ್ನು ಕಾಮಿಡಿ ಕಂಟೆಂಟ್ ಮಾಡಿಕೊಂಡಿದ್ದಾರೆ. ಶೀಘ್ರವೇ ಅವರಿಗೆ ಮದುವೆಯಾಗಿ ಇದರಿಂದ ತಪ್ಪಿಸಿಕೊಳ್ಳಲಿ ಅವರಿಗೆ ಶೀಘ್ರಮೇವ ಕಲ್ಯಾಣ ಪಾಪ್ತಿರಸ್ತು ಎಂದು ಹಾರೈಸೋಣ. ಅವರ ಈ ತಮಾಷೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಚಿಕ್ಕಬಳ್ಳಾಪುರ ಉತ್ಸವದಲ್ಲಿ ಅನುಶ್ರೀ ಅವರು ಎಷ್ಟು ಚೆನ್ನಾಗಿ ಕಾಮಿಡಿ ಮಾಡಿದ್ದಾರೆ ಎಂದು ನೀವು ಸಹ ನೋಡಿ.

64ನೇ ವಯಸ್ಸಿನಲ್ಲಿ 3ನೇ ಮದುವೆ ಆಗುತ್ತಿರುವ ನಟಿ ಜಯಸುಧಾ, ಆ ಲಕ್ಕಿ ಮ್ಯಾನ್ ಯಾರು ಗೊತ್ತ.?

 

ಜಯಸುಧ ಅವರು ತಮಿಳು ಚಿತ್ರರಂಗದಲ್ಲಿ ಖ್ಯಾತ ತಾರೆ. ತಮಿಳು ಮಾತ್ರವಲ್ಲದೆ ತೆಲುಗು ಕನ್ನಡ ಹೀಗೆ ನಾನಾ ಭಾಷೆಗಳಲ್ಲಿ ಅಭಿನಯಿಸಿರುವ ಇವರು ಕನ್ನಡದಲ್ಲೂ ಸಹ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೀ ತಂದ ಕಾಣಿಕೆ ಸಿನಿಮಾದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆ ನಟಿಯಾಗಿ ಮೊದಲ ಬಾರಿಗೆ ಕನ್ನಡದಲ್ಲಿ ಕಾಣಿಸಿಕೊಂಡ ಅವರು ನಂತರ ಇತ್ತೀಚೆಗೆ ತಾಯಿಯ ಮಡಿಲು, ಭೂಪತಿ, ವಜ್ರಕಾಯ ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಟಿ ಮಾತ್ರ ಅಲ್ಲದೆ ಜಯಸುಧಾ ಅವರು ರಾಜಕೀಯದಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಆಂಧ್ರಪ್ರದೇಶದ ವಿಧಾನಸಭಾ ಸದಸ್ಯರಾಗಿ ಕೂಡ ಆಯ್ಕೆ ಆಗಿದ್ದ ಅವರು ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. 64 ವರ್ಷ ವಯಸ್ಸಿನಲ್ಲಿ ಜಯಸುಧಾ ಅವರು ಮೂರನೇ ಹಾಗೂ ಮೂಲಕ ಈಗ ಗಾಸಿಪ್ ಗೆ ಗುರಿ ಆಗಿದ್ದಾರೆ. ಜಯಸುಧಾ ಅವರು ತಮಿಳಿನ ಖ್ಯಾತ ನಿರ್ಮಾಪಕರಾದ ವಡ್ಡೆ ರಮೇಶ್ ಅವರ ಜೊತೆ ವಿವಾಹ ಆಗಿದ್ದರು.

ಆದರೆ ಹೊಂದಾಣಿಕೆ ಕೊರತೆಯ ಕಾರಣದಿಂದಾಗಿ ಕೆಲವೇ ವರ್ಷಗಳಲ್ಲಿ ಅವರ ಮದುವೆ ಮುರಿದು ಬಿತ್ತಿತ್ತು. ಇದಾಗ ಬಳಿಕ ಬಾಲಿವುಡ್ ನ ಖ್ಯಾತ ನಟ ಜಿತೇಂದ್ರ ಕಪೂರ್ ಅವರ ಸೋದರ ಸಂಬಂಧಿ ಆದ ನಿತಿನ್ ಕಪೂರ್ ಅವರನ್ನು 1985ರಲ್ಲಿ ಎರಡನೇ ವಿವಾಹವಾಗಿದ್ದರು. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ನಿಹಾರ್ ಕಪೂರ್ ಮತ್ತು ಶ್ರೇಯಾನ್ ಕಪೂರ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಈಕೆಯ ಬದುಕಿನಲ್ಲಿ ಎಲ್ಲವೂ ಸರಿಯಿದೆ ಎಂದುಕೊಳ್ಳುವಷ್ಟರಲ್ಲಿ 2017ರಲ್ಲಿ ನಿತಿನ್ ಕಪೂರ್ ಅವರು ಆ.ತ್ಮ.ಹ.ತ್ಯೆ ಮಾಡಿಕೊಂಡರು.

 

ಆ ಬಳಿಕ ಒಂಟಿಯಾಗಿದ್ದ ಜಯಸುಧಾ ಅವರು ಈಗ ಉದ್ಯಮಿಯೊಡನೆ ಮೂರನೇ ಮದುವೆ ಆಗುತ್ತಿದ್ದಾರೆ ಎಂದು ಗಾಳಿ ಸುದ್ದಿ ಒಂದು ಹರಿದಾಡುತ್ತಿದೆ. ಜಯಸುಧಾ ಅವರು ಮಾತ್ರವಲ್ಲದೆ ಹಲವಾರು ಸೆಲೆಬ್ರಿಟಿಗಳ ಕಥೆ ಇದೇ ರೀತಿ ಇರುತ್ತದೆ. ಬಣ್ಣದ ಪ್ರಪಂಚದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಆಸೆಪಟ್ಟು ಬರುವ ಎಷ್ಟೋ ಜನರ ವೈವಾಹಿಕ ಬದುಕು, ಈ ರೀತಿ ನಾನು ರೀತಿ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ.

ಅದರಲ್ಲೂ ಹೆಚ್ಚಾಗಿ ನಟಿಮಣಿಯರ ದಾಂಪತ್ಯ ಮುರಿದು ಬೀಳುತ್ತಿರುವುದು ಸರ್ವೆ ಸಾಮಾನ್ಯ ಎನ್ನುವ ರೀತಿ ಆಗಿಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಇನ್ನೂ ಹೆಚ್ಚಾಗುತ್ತಿದ್ದು ಹಿಂದಿನ ನಟಿಯರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು ಎಂದರೆ ಈಗ ಅವರ ಸ್ಥಿತಿಯು ಹೀಗೆ ಆಗಿದೆ. ಜನರು ತೆರೆ ಮೇಲೆ ಕಂಡು ಇವರನ್ನು ರೋಲ್ ಮಾಡಲ್ ರೀತಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಈ ರೀತಿ ತೆರೆ ಮೇಲೆ ಸ್ಟಾರ್ ಆಗಿ ಮಿಂಚಿದವರ ವೈಯಕ್ತಿಕ ಬದುಕು ಮಾತ್ರ ಅಷ್ಟಕಷ್ಟೇ ಆಗುತ್ತಿದೆ.

ಬೆರಳೆಣಿಕೆ ಅಷ್ಟು ನಟಿಯರು ಮಾತ್ರ ಎರಡರಲ್ಲೂ ಸಕ್ಸಸ್ ಕಾಣುತ್ತಿದ್ದಾರೆ. ಅದನ್ನು ಹೊರತುಪಡಿಸಿ ಬಹುತೇಕ ನಟಿಯರ ಬದುಕು ಕಣ್ಣೀರಿನಲ್ಲಿ ಕೈ ತೊಳೆಯುವ ರೀತಿಯೇ ಆಗಿಬಿಡುತ್ತದೆ. ಈ ಹಿಂದೆ ರಮ್ಯಾ ಹಾಗೂ ಅವರ ಪತಿ ಕೃಷ್ಣ ಅವರ ನಡುವೆ ಸಂಬಂಧ ಸರಿ ಇಲ್ಲ ಎಂದು ಸುದ್ದಿ ಆಗಿತ್ತು ನಂತರ ಮೀನಾ ಅವರನ್ನು ಕುರಿತು ಪತಿ ಅಗಲಿಕೆಯಿಂದ ಒಂಟಿಯಾಗಿರುವ ಮೀನ ಅವರಿಗೆ ಕುಟುಂಬಸ್ಥರು ಮರು ಮದುವೆ ಆಗಲು ಒತ್ತಾಯಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

ಈಗ ಜಯಸುಧಾ ಅವರ ಬಗ್ಗೆ ಹಬ್ಬುತ್ತಿರುವ ಸುದ್ದಿ ಬಗ್ಗೆ ಅವರೇ ಸ್ಪಷ್ಟನೆ ಕೊಡಬೇಕಿದೆ. ಇದು ನಿಜ ಆದರೆ ಎಲ್ಲವನ್ನು ಧೈರ್ಯದಿಂದ ಎದುರಿಸಿ ಮತ್ತೊಮ್ಮೆ ಬದುಕಿನಲ್ಲಿ ಹೊಸ ಅಧ್ಯಾಯ ಬರೆಯಲು ಜಯಪ್ರಧಾ ಅವರು ನಿರ್ಧರಿಸಿದ್ದರೆ ಅವರ ಇಚ್ಛೆಯಂತೆಯೇ ಬದುಕು ಸಾಗಲಿ. ಸಿನಿಮಾಗಳಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲಿ ಸಹ ಅವರು ಇನ್ನಷ್ಟು ಹೆಸರು ಮಾಡಿ ಸಾಕಷ್ಟು ಜನರ ಬದುಕಿಗೆ ದೀಪವಾಗಲಿ ಎಂದು ಹರಸೋಣ.

ಚಪ್ಪಲಿಯಲ್ಲಿ ಹೊಡೆಯೋಕೆ ಅಂಥದ್ದೇನ್ ಮಾಡಿದ್ದೆ.? ಹೊಸಪೇಟೆಲಿ ನೆಡೆದ ಘಟನೆ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ದರ್ಶನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.

 

ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್(Darshan) ಹೀಗೆ ನಾನಾ ಟೈಟಲ್ಗಳ ಜೊತೆ ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ಸ್ಟಾರ್ ಹೀರೋ ಎನ್ನುವ ಗರಿಮೆ ಹೊಂದಿರುವ ನಟ ದರ್ಶನ್(D Bos ಅವರಿಗೆ ಕರ್ನಾಟಕದಲ್ಲಿ ಕೋಟಿಗಟ್ಟಲೆ ಹುಚ್ಚು ಅಭಿಮಾನಿಗಳು ಇದ್ದಾರೆ. ತಮ್ಮ ಅಭಿಮಾನಿಗಳನ್ನು ಸಹ ದರ್ಶನವರು ಅಷ್ಟೇ ಪ್ರೀತಿಸುತ್ತಾರೆ ಹಾಗೂ ಅವರನ್ನೇ ಸೆಲೆಬ್ರಿಟಿಗಳು ಎಂದು ಕರೆಯುತ್ತಾರೆ.

ಹೀಗೆ ದರ್ಶನ್(Challenging Star Darshan) ಅವರ ಮತ್ತು ಅವರ ಅಭಿಮಾನಿಗಳ ನಡುವೆ ಇರುವ ಬಾಂಧವ್ಯ ಎಂತದ್ದು ಎಂದು ಬರಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ದರ್ಶನ್ ಅವರನ್ನು ಹೀರೋ ಎನ್ನುವುದಕ್ಕಿಂತ ಅವರು ನೇರ ನುಡಿ, ನೇರ ವ್ಯಕ್ತಿತ್ವದ ವ್ಯಕ್ತಿದವರು ಎನ್ನುವುದಕ್ಕೆ ಹೆಚ್ಚು ಜನ ಇಷ್ಟ ಪಡುತ್ತಾರೆ. ಅಂಬರೀಶ್ ಅವರನ್ನು ಬಿಟ್ಟರೆ ಈ ರೀತಿ ಹೀರೋಗಳಲ್ಲಿ ಇದ್ದದ್ದನ್ನು ಇದ್ದಂತೆ ಹಾಗೆ ಹೇಳುವ ಗಟ್ಸ್ ಇರುವುದು ದರ್ಶನ್ ಅವರಿಗೆ ಮಾತ್ರ.

ಯಾರಿಗೂ ಕೇರ್ ಮಾಡದ ಅಟಿಟ್ಯೂಡ್ ಇರುವ ಇವರು ಈಗಾಗಲೇ ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಇದರ ನಡುವೆ ಕ್ರಾಂತಿ ಸಿನಿಮಾ ಆಡಿಯೋ ಲಾಂಚ್ ಅಲ್ಲಿ ಆದ ಘಟನೆ ಅವರ ಅಭಿಮಾನಿಗಳನ್ನು ತೀರಾ ಕೆಣಕಿದೆ. ಕ್ರಾಂತಿ(Kranti) ಸಿನಿಮಾ ಸದ್ಯಕ್ಕೆ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ. ಇದರ ಆಡಿಯೋ ರಿಲೀಸ್ ಅನ್ನು ಸ್ವಲ್ಪ ವಿಭಿನ್ನವಾಗಿ ಮಾಡಲು ರಾಜ್ಯದ ಪ್ರಮುಖ ನಗರಗಳಲ್ಲಿ ಒಂದೊಂದು ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತು.

ಇದೇ ರೀತಿ ಹೊಸಪೇಟೆಯಲ್ಲಿ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡಲು ಹೋದಾಗ ಕಿಡಿಗೇಡಿ ಒಬ್ಬರು ದರ್ಶನ ಅವರ ಮೇಲೆ ಚಪ್ಪಲಿ ಎಸೆದಿದ್ದರು. ಈ ಘಟನೆ ಆದ ಬಳಿಕ ದರ್ಶನ್ ಅವರ ಅಭಿಮಾನಿಗಳು ಇದಕ್ಕೆ ಸಾಕಷ್ಟು ವಿರೋಧ ಮಾಡಿ ದೊಡ್ಡ ಗಲಾಟೆಯನ್ನೇ ಮಾಡಿದರು. ದರ್ಶನ್ ಅವರು ಅದಾದ ಮೇಲೆ ಹಲವು ವೇದಿಕೆಗಳಲ್ಲಿ ನೇರವಾಗಿ ಘಟನೆ ವಿಷಯ ತೆಗೆದುಕೊಳ್ಳದೆ ಹೋದರು ಪರೋಕ್ಷವಾಗಿ ಅಭಿಮಾನಿಗಳನ್ನು ಸಮಾಧಾನಪಡಿಸಿದ್ದರು.

ಆದರೆ ಇದೇ ಮೊದಲ ಬಾರಿಗೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ದರ್ಶನ್ ಅವರು ಈ ಘಟನೆ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ರಾಗ ರಾಮ್ ಸ್ಟೋರಿ ಬಾಕ್ಸ್ ಎನ್ನುವ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ಕೊಟ್ಟಿದ್ದಾರೆ. ಇದರಲ್ಲಿ ನಿರೂಪಕ ಮಯೂರ್ ಎನ್ನುವವರು ದರ್ಶನ್ ಅವರನ್ನು ಅಂದಿನ ಆ ಘಟನೆ ಕುರಿತು ಪ್ರಶ್ನೆ ಕೇಳಿದ್ದಾರೆ ಮತ್ತು ಫ್ಯಾನ್ಸ್ ವಾರ್ ಬಗ್ಗೆ ಕೂಡ ಕೇಳಿದ್ದಾರೆ ದರ್ಶನ್ ಅವರು ಕೊಟ್ಟಿರುವ ಉತ್ತರ ಮನ ಮುಟ್ಟುವಂತಿತ್ತು. ಈಗಾಗಲೇ ಆ ವಿಡಿಯೋದ ಪ್ರೋಮೋ ಬಹಳ ಸದ್ದು ಮಾಡುತ್ತಿದ್ದು ಆ ಇಂಟರ್ವ್ಯೂ ಅನ್ನು ನೋಡಲು ಅಭಿಮಾನಿಗಳು ಕಾತುರ ವ್ಯಕ್ತಪಡಿಸುತ್ತಿದ್ದಾರೆ.

ಈ ಪ್ರೋಮೊದಲ್ಲಿ ದರ್ಶನ್ ಹಾಡಿರುವ ಮಾತುಗಳು ಈ ರೀತಿ ಇವೆ ಚಪ್ಪಲಿಯಲ್ಲಿ ಹೊಡಿಸಿಕೊಳ್ಳುವ ಅಂತಹ ತಪ್ಪು ನಾನೇನು ಮಾಡಿದ್ದೆ.? ಚಿಟಿಕೆ ಸದ್ದು ಚೆನ್ನಾಗಿದೆ ಚಪ್ಪಾಳೆ ಸದ್ದು ಚೆನ್ನಾಗಿದೆ ಆದರೆ ಒಂದು ಕಡೆಯಿಂದ ಚಪ್ಪಾಳೆ ಹೊಡೆಯಲು ಸಾಧ್ಯ ಇಲ್ಲ ಅಲ್ಲವಾ. ನಾನು ಹಾರವನ್ನು ಯಾವ ರೀತಿ ಹಾಕಿಸಿಕೊಳ್ಳುತ್ತಿದ್ದೇನೋ ಇದನ್ನು ಸಹ ಅಷ್ಟೇ ಪ್ರೈಡ್ ಯಿಂದ ತೆಗೆದುಕೊಂಡಿದ್ದೇನೆ. ಇದುವರೆಗೂ ನಾನು ಚಾಲೆಂಜಿಂಗ್ ಸ್ಟಾರ್ ಆಗಿ ಹಾಗೂ ದರ್ಶನ್ ಆಗಿ ಯಾರಿಗೂ ಮೋಸ ಮಾಡಿಲ್ಲ. ನಾನು ನೆನ್ನೆ ಮೊನ್ನೆ ಬಂದು ಸ್ಟಾರ್ ಆದವನಲ್ಲ ಈ ಸಾಮ್ರಾಜ್ಯ ಕಟ್ಟಲು ನನಗೆ 25 ವರ್ಷದ ಶ್ರಮ ಇದೆ ಎಂದು ಹೇಳಿದ್ದಾರೆ. ಈ ಮಾತುಗಳಿಂದ ಅವರ ಇಂಟರ್ವ್ಯೂ ನೋಡುವ ಕಾತುರ ಇನ್ನೂ ಹೆಚ್ಚಾಗುತ್ತಿದೆ.

ಆದಿಲ್ ಒತ್ತಾಯಕ್ಕೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಮದುವೆಯದೆ, ಫಾತಿಮ ಅಂತ ಹೆಸರು ಬದಲಿಸಿದೆ, ಆದ್ರೆ ಈಗ ಆದಿಲ್ ನನ್ಗೆ ಮೋಸ ಮಾಡ್ತ ಇದಾನೆ ಎಂದು ಕಣ್ಣೀರು ಹಾಕ್ತಿರೋ ನಟಿ ರಾಖಿ ಸಾಮಂತ್.

0
ಮೋಸ ಮಾಡಿದನಾ ಮೈಸೂರು ಪ್ರಿಯತಮ, ಮದುವೆ ಬಗ್ಗೆ ಮೌನ ಮುರಿದ ರಾಖಿ ಸಾವಂತ್.?

ರಾಖಿ ಸಾವಂತ್(Rakhi Sawant) ಅವರು ಮೈಸೂರು ಮೂಲದ ಆದಿಲ್ ಎನ್ನುವವರನ್ನು ಪ್ರೀತಿಸುತ್ತಿದ್ದಾರೆ. ಇವರಿಬ್ಬರೂ ಡೇಟಿಂಗ್ ಅಲ್ಲಿ ಇದ್ದಾರೆ ಮದುವೆ ಆಗಲಿದ್ದಾರೆ ಎನ್ನುವ ಕುರಿತು ಸಾಕಷ್ಟು ಸುದ್ದಿಗಳು ಸದ್ದು ಮಾಡಿದ್ದವು. ಈಗ ಇದ್ದಕ್ಕಿದ್ದಂತೆ ಇಬ್ಬರ ಮದುವೆ ಆಗಿರುವ ವಿಷಯ ಅದಕ್ಕೆ ಸಂಬಂಧಪಟ್ಟ ಪುರಾವೆಗಳು ಹೊರ ಬಿದ್ದಿವೆ. ಅದಕ್ಕೂ ಮೀರಿ ಆಶ್ಚರ್ಯಕರ ವಿಷಯವೇನೆಂದರೆ ಆದಿಲ್ ಅವರು ಅದು ಈಗ ರಾಖಿ ಸಾವಂತ್ ಅವರನ್ನು ನಿರಾಕರಿಸುತ್ತಿದ್ದಾರಂತೆ.

ಈ ಕುರಿತು ರಾಖಿ ಸಾವಂತ್ ಅವರೇ ಸಂದರ್ಶನ ಒಂದನ್ನು ನೀಡಿದ್ದು ತಮ್ಮ ಖಾತೆಯಿಂದ ಮದುವೆ ಫೋಟೋಗಳನ್ನು ವೈರಲ್ ಮಾಡಿಕೊಂಡಿರುವುದರ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ನಾನೇ ನನ್ನ ಫೋಟೋಗಳನ್ನು ಅಪ್ಲೋಡ್ ಮಾಡಿದ್ದೇನೆ ಯಾಕೆಂದರೆ ಈಗ ಆದಿದ್ ನನ್ನನ್ನು ಮದುವೆ ಆಗಿಲ್ಲ ಎಂದು ಹೇಳುತ್ತಿದ್ದೇನೆ. ಇದನ್ನು ಬಿಟ್ಟು ನನಗೆ ಬೇರೆ ದಾರಿ ಇರಲಿಲ್ಲ ಅದಕ್ಕಾಗಿಯೇ ಈ ರೀತಿ ಮಾಡಿದೆ ಎಂದು ಹೇಳುತ್ತಿದ್ದಾರೆ.

ಇವರು ತೋರಿಸುತ್ತಿರುವ ಪುರಾಣಗಳ ಪ್ರಕಾರ ಕಳೆದ ವರ್ಷವೇ ಅವರಿಬ್ಬರಿಗೂ ಮದುವೆ ಆಗಿದೆ. ಆದಿಲ್ ಅವರ ಆಜ್ಞೆ ಮೇರೆಗೆ ರಾಖಿ ಸಾವಂತ್ ಅವರು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರಂತೆ. ರಾಖಿ ಸಾವಂತ್ ಅವರ ಹೆಸರು ಈಗ ರಾಖಿ ಸಾವಂತ್ ಫಾತಿಮಾ ಎಂಬುದಾಗಿದೆ. ರಾಖಿ ಸಾವಂತವರು ಹೇಳುತ್ತಿರುವ ಮಾತಿನ ಪ್ರಕಾರ ಬಿಗ್ ಬಾಸ್ ಗೆ ಹೋಗಿ ಬಂದ ಮೇಲೆ ಆದಿಲ್ ಅವರು ಬದಲಾಗಿದ್ದಾರಂತೆ ಹೀಗಾಗಿ ಅವರಿಗೆ ಇದನ್ನು ಸಹಿಸಲಾಗದೆ ಈ ರೀತಿ ಮಾಡಿದ್ದಾರಂತೆ.

ಮದುವೆ ಕುರಿತು ಈಗ ಆದಿಲ್ ಏನು ಸಹ ಮಾತನಾಡುತ್ತಾ ಇಲ್ಲವಂತೆ ಆದರೆ ಇವರು ವೈರಲ್ ಮಾಡಿರುವ ಫೋಟೋಗಳಲ್ಲಿ ಮದುವೆ ಸರ್ಟಿಫಿಕೇಟ್ ಕೂಡ ಇರುವುದನ್ನು ನಾವು ಕಾಣಬಹುದು. ರಾಖಿ ಸಾವಂತ್ ಅವರು ಮದುವೆ ಆಗಿರುವುದು ನಿಜ ಎಂದು ಹೇಳುತ್ತಿದ್ದು ಮೌಲಾನ ನಿಕಾಹ್ ಮಾಡಿಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ನಾನು ಕೋರ್ಟಿಗೆ ಕೊಟ್ಟಿದ್ದೇನೆ ನನ್ನ ಹಿಂದು ಕಾನೂನಿನ ಪ್ರಕಾರವೇ ಮದುವೆ ನಡೆದಿದೆ ಬಿ ಎಂ ಸಿ ಅಧಿಕಾರಿಗಳೇ ಬಂದು ಸಹಿ ಹಾಕಿಸಿದ್ದಾರೆ ಎನ್ನುತ್ತಿದ್ದಾರೆ.

ರಾಖಿ ಸಾವಂತ್ ಅವರ ತಾಯಿಯ ಆರೋಗ್ಯವು ಕೂಡ ಬಹಳ ಕೆಟ್ಟದ್ದು ಬ್ರೇನ್ ಕ್ಯಾನ್ಸರಿಂದ ಬಾಳುತ್ತಿದ್ದಾರೆ ಇದನ್ನು ಸಹ ಹೇಳಿಕೊಂಡಿರುವ ಸಾವಂತ್ ಒಂದು ಕಡೆ ನನ್ನ ತಾಯಿ ಅನಾರೋಗ್ಯದಲ್ಲಿ ಇದ್ದಾರೆ ಒಂದು ಕಡೆ ಆದಿಲ್ ನನ್ನನ್ನು ಈ ರೀತಿ ನಿರಾಕರಿಸುತ್ತಿದ್ದಾನೆ. ಈ ರೀತಿ ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಈ ರೀತಿ ಆಗುವುದು ನನಗೆ ಇಷ್ಟವಿರಲಿಲ್ಲ ಎಂದು ನೋವಿನಿಂದ ಮಾತನಾಡಿದ್ದಾರೆ.

ಅವನಿಗಾಗಿ ನಾನು ಎಲ್ಲವನ್ನು ಬಿಟ್ಟೆ ಅವನನ್ನು ನಂಬಿದ್ದೆ ಆದರೆ ಈಗ ಯಾಕೆ ಅವನು ಈ ರೀತಿ ನಿರಾಕರಿಸುತ್ತಿದ್ದಾನೆ ಎನ್ನುವುದೇ ನನಗೆ ಅರ್ಥ ಆಗಿಲ್ಲ. ಈಗಲೂ ಸಹ ಅವನು ನನ್ನನ್ನು ಬಹಳ ಪ್ರೀತಿಸುತ್ತಾನೆ ಆದರೆ ಅವರ ಕುಟುಂಬದ ಜನರ ಒತ್ತಡದಿಂದ ಈ ರೀತಿ ಮಾಡಿರಬಹುದು ಎಂದು ಸಹ ಕುಟುಂಬದವರ ಮೇಲು ಆರಂಭಿಸುತ್ತಿದ್ದಾರೆ.

ಸೆಲೆಬ್ರಿಟಿಗಳ ಬದುಕೆ ಹೀಗೆ ಯಾವ ಸಂಬಂಧ ಯಾವಾಗ ಯಾವ ರೀತಿ ತಿರುಗು ಪಡೆದುಕೊಳ್ಳುತ್ತದೆ ಹಾಗೂ ಮುರಿದು ಬಿಡುತ್ತದೆ ಎನ್ನುವುದನ್ನು ಊಹಿಸಲು ಅಸಾಧ್ಯ. ರಾಖಿ ಸಾವಂತ್ ಅವರು ಕನ್ನಡಿಗನ ಕೈ ಹಿಡಿಯುತ್ತಿದ್ದಾರೆ ಎಂದು ಹಲವು ಜನ ಖುಷಿ ಪಟ್ಟಿದ್ದರು ಆದರೆ ಈಗ ದೂರಗಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ‌? ತಪ್ಪದೆ ಕಾಮೆಂಟ್ ಮಾಡಿ.

ಪ್ರೀತಿಯ ಅಣ್ಣನಿಗೋಸ್ಕರ ಬೈಕ್ ನಲ್ಲಿ ಕ್ರಾಂತಿ ಸಿನಿಮಾ ಪ್ರಮೋಷನ್ ಮಾಡುತ್ತಿರುವ ಅಭಿಷೇಕ್ ಅಂಬರೀಶ್ ವಿಡಿಯೋ ನೋಡಿ.

 

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ(Kranti Kannada Cinema) ಸಿನಿಮಾ ಇದೇ ತಿಂಗಳ ಜನವರಿ 26ನೇ ತಾರೀಕಿನಂದು ದೇಶಾದ್ಯಂತ ಬಿಡುಗಡೆಯಾಗುತ್ತಿರುವ ವಿಚಾರ ನಿಮಗೆ ತಿಳಿದೇ ಇದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಆದರೂ ಕೂಡ ಸುಮಾರು ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಕ್ರಾಂತಿ ಸಿನಿಮಾದ ಪ್ರಮೋಷನ್ ಗಾಗಿ ದರ್ಶನ್ ಕಳೆದ ಎರಡು ತಿಂಗಳಿನಿಂದ ಸಾಕಷ್ಟು youtube ಚಾನೆಲ್ ಗಳಿಗೆ ಹಾಗೂ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವ ವಿಚಾರ ನಿಮಗೆ ತಿಳಿದೇ ಇದೆ.

ಕೇವಲ ಇದಿಷ್ಟು ಮಾತ್ರವಲ್ಲದೆ ತನ್ನ ಸೆಲೆಬ್ರಿಟಿಗಳು ಇರುವಂತಹ ಜಾಗಕ್ಕೆ ನಟ ದರ್ಶನ್ ಅವರೇ ಕುದ್ದು ಹೋಗಿ ಅವರ ಸಿನಿಮಾ ಸಾಂಗ್ ಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಈಗಾಗಲೇ ಮೈಸೂರಿನ ಕೆಆರ್ ಪೇಟೆಯಲ್ಲಿ ಮೊದಲ ಹಾಡು ಹಾಗೂ ಹೊಸಪೇಟೆಯಲ್ಲಿ ಎರಡನೇ ಹಾಡು ಹುಬ್ಬಳ್ಳಿಯಲ್ಲಿ ಮೂರನೇ ಹಾಡು ಬಿಡುಗಡೆಯಾಗಿದೆ ನಾಲ್ಕನೇ ಹಾಡನ್ನು ತುಮಕೂರಿನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಶಿಕ್ಷಣದ ಬಗ್ಗೆ ಅತ್ಯುತ್ತಮ ಸಿನಿಮಾ ಮಾಡಿರುವಂತಹ ದರ್ಶನ್ ಅವರ ಕ್ರಾಂತಿ ಸಿನಿಮಾದಲ್ಲಿ ಬಹು ತಾರ ಬಳಗವಿದೆ ಹೌದು ನಾಯಕ ನಟಿಯಾಗಿ ರಚಿತಾ ರಾಮ್ ಅವರು ಕಾಣಿಸಿಕೊಂಡರೆ. ದರ್ಶನ್ ಅವರ ತಂದೆಯ ಪಾತ್ರದಲ್ಲಿ ಡಾಕ್ಟರ್ ರವಿಚಂದ್ರನ್ ಹಾಗೂ ಸುಮಲತಾ ಅಂಬರೀಶ್, ಬಿ ಸುರೇಶ್, ರವಿಶಂಕರ್, ಗಿರಿಜಾ ಲೋಕೇಶ್ ಸೇರಿದಂತೆ ಸಾಕಷ್ಟು ಕಲಾವಿದರನ್ನು ಈ ಸಿನಿಮಾದಲ್ಲಿ ನಾವು ಕಾಣಬಹುದಾಗಿದೆ ಇನ್ನು ಕ್ರಾಂತಿ ಸಿನಿಮಾ ಬಿಡುಗಡೆಯಾಗುವುದಕ್ಕಿಂತ ಮುಂಚೆಯೇ ಸಾಕಷ್ಟು ಕಾಂಟ್ರವರ್ಸಿ ಮಾಡಿಕೊಂಡಿರುವ ವಿಚಾರ ನಿಮಗೆ ತಿಳಿದೇ ಇದೆ.

ಆದರೂ ಕೂಡ ದರ್ಶನ್ ಅಭಿಮಾನಿಗಳು ಎಂದಿಗೂ ಅವರ ಕೈ ಬಿಡುವುದಿಲ್ಲ ಇದರ ಜೊತೆಗೆ ದರ್ಶನ್ ಅವರ ದೊಡ್ಡ ಬೆನ್ನೆಲುಬಾಗಿ ನಿಂತಿರುವವರು ಕಲಾವಿದರು. ಹೌದು ಕೇವಲ ಫ್ಯಾನ್ಸ್ ಗಳು ಮಾತ್ರವಲ್ಲದೆ ಇದೀಗ ನಟ ನಟಿಯರು ಕೂಡ ದರ್ಶನ್ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡಿದರು.

ಇದಾದ ನಂತರ ಅಭಿಷೇಕ್ ಅಂಬರೀಶ್(Abhishek Ambareesh) ಕೂಡ ತಮ್ಮ ಪ್ರೀತಿಯ ಅಣ್ಣನಿಗಾಗಿ ಕ್ರಾಂತಿ ಸಿನಿಮಾದ ಪೋಸ್ಟರ್ ಅನ್ನು ಅಂಟಿಸಿರುವಂತಹ ಬೈಕ್ ನಲ್ಲಿ ರಾಲಿ ಮಾಡುವ ಮೂಲಕ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯ ಮಾಡುತ್ತಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅಂಬರೀಶ್ ಅವರ ದೊಡ್ಡ ಮಗ ಇದ್ದಂತೆ ಈ ವಿಚಾರವನ್ನು ಸಾಕಷ್ಟು ಬಾರಿ ಸುಮಲತಾ ಅಂಬರೀಶ್ ಅವರು ಕೂಡ ಹೇಳಿಕೊಂಡಿದ್ದಾರೆ. ದರ್ಶನ್ ನನ್ನ ಮೊದಲ ಮಗ ಅಭಿಷೇಕ್ ಎರಡನೇ ಮಗ ಅಂತ ಈ ಕಾರಣಕ್ಕಾಗಿ ಅಭಿಷೇಕ್ ಅಂಬರೀಶ್ ತಮ್ಮ ಪ್ರೀತಿಯ ಅಣ್ಣನಿಗೆ ಬೈಕ್ ನಲ್ಲಿ ರಾಲಿ ಮಾಡುವುದರ ಮೂಲಕ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ.

ಅದೆಷ್ಟೇ ಅಡೆತಡೆಗಳು ಬಂದರೂ ಕೂಡ ಅವೆಲ್ಲವನ್ನು ಮೆಟ್ಟಿ ನಿಂತಿ ಕ್ರಾಂತಿ ಕನ್ನಡದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಅಂತಾನೇ ಹೇಳಬಹುದು. ಸರ್ಕಾರಿ ಶಾಲೆಯ ಮಕ್ಕಳ ದುಸ್ಥಿತಿ ಹಾಗೂ ಶಿಕ್ಷಣ ಆದ ವ್ಯವಸ್ಥೆ ಹಾಗೂ ಹಿಂದಿನ ಕಾಲದಲ್ಲಿ ಶಿಕ್ಷಣ ಇಷ್ಟು ದುಬಾರಿಯಾಗುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕ್ರಾಂತಿ ಸಿನಿಮಾದಲ್ಲಿ ನೀಡಲಾಗಿದೆ. ಹಾಗಾಗಿ ಮುಂದಿನ ಪೀಳಿಗೆಗೆ ಕ್ರಾಂತಿ ಸಿನಿಮಾದಿಂದ ಕಲಿಯುವುದು ಸಾಕಷ್ಟಿದೆ ಎಂಬುವುದು ಚಿತ್ರತಂಡದ ವಾದವಾಗಿದೆ. ಅಭಿಷೇಕ್ ಅಂಬರೀಶ್ ಬೈಕ್ ನಲ್ಲಿ ರಾಲಿ ಮಾಡಿದಂತಹ ವಿಡಿಯೋ ಈ ಕೆಳಗಿದೆ ನೋಡಿ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ.

 

ಸ್ಯಾಂಡಲ್ ವುಡ್ ನಟ & ನಿರ್ಮಾಪಕ ಗುರುಪ್ರಸಾದ್ ಅವರನ್ನು ಪೋಲಿಸರು ಈಗಷ್ಟೇ ಬಂಧಿಸಿದ್ದಾರೆ. ಕಾರಣವೇನು ಗೊತ್ತಾ.?

 

ನಿರ್ದೇಶಕ ಗುರುಪ್ರಸಾದ್(Guru Prasad) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಮಠ ಸಿನಿಮಾ ಎಂದ ತಕ್ಷಣ ನಮ್ಮ ಕಣ್ಮುಂದೆ ಬರುವಂತಹ ವ್ಯಕ್ತಿ ಅಂದರೆ ಅದು ನಿರ್ದೇಶಕ ಗುರುಪ್ರಸಾದ್ ಅಂತಾನೆ ಹೇಳಬಹುದು. ಕನ್ನಡದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಅದರಲ್ಲಿಯೂ ಕೂಡ “ಎದ್ದೇಳು ಮಂಜುನಾಥ” ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಸಿನಿಮಾ ಅಂತಾನೆ ಹೇಳಬಹುದು.

ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಹಾಗೂ ಡೈರೆಕ್ಟರ್ ಆಗಿ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕೇವಲ ಇದಿಷ್ಟು ಮಾತ್ರವಲ್ಲದೆ ಬಿಗ್ ಬಾಸ್ ಸೀಸನ್ ಎರಡರಲ್ಲಿಯೂ ಕೂಡ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಂಡರು. ಇಲ್ಲಿಂದ ಹೊರ ಬಂದ ನಂತರ ಸಣ್ಣಪುಟ್ಟ ಸಿನಿಮಾಗಳಲ್ಲಿ ಕೆಲಸ ಮಾಡಿಕೊಳ್ಳುತ್ತಿದ್ದರು. ಆದರೆ ಅದೃಷ್ಟ ಎಂಬುವುದು ಇವರ ಕೈಹಿಡಿಯಲಿಲ್ಲ ಸಾಕಷ್ಟು ಸಿನಿಮಾಗಳನ್ನು ಮಾಡಿದರು ಅವೆಲ್ಲವೂ ಕೂಡ ಫ್ಲಾಫ್ ಆಯಿತು.

ಒಂದರ ಮೇಲೆ ಮತ್ತೊಂದರಂತೆ ಸೋಲುಗಳನ್ನು ಕಂಡಂತಹ ಗುರುಪ್ರಸಾದ್(Guruprasad) ಅವರು ಸಿನಿಮಾ ರಂಗದಿಂದ ದೂರ ಉಳಿಯುವಂತಹ ಯೋಚನೆ ಮಾಡುತ್ತಾರೆ. ಆದರೂ ಕೂಡ ಚಿತ್ರರಂಗ ಇವರನ್ನು ಕೈ ಬೀಸಿ ಕರೆಯುತ್ತದೆ ತದನಂತರ ಹೊಸ ಸಿನಿಮಾ ಒಂದನ್ನು ನಿರ್ದೇಶನ ಮಾಡುವ ಸಲುವಾಗಿ ಗುರುಪ್ರಸಾದ್ ಬಳಿ ಕೆಲಸ ಮಾಡುತ್ತಿದ್ದಂತಹ ಶ್ರೀನಿವಾಸ್ ಎಂಬ ವ್ಯಕ್ತಿಯ ಬಳಿ ಸುಮಾರು 30 ಲಕ್ಷ ರೂಪಾಯಿಗಳ ಸಾಲವನ್ನು ಪಡೆಯುತ್ತಾರೆ.

ಹಲವು ದಿನಗಳಾದರೂ ಕೂಡ ಗುರುಪ್ರಸಾದ್(Director Guru Prasad) ಅವರು ಶ್ರೀನಿವಾಸ್ ಅವರ ಬಳಿ ಪಡೆದುಕೊಂಡಿದಂತಹ 30 ಲಕ್ಷ ರೂಪಾಯಿ ಹಣವನ್ನು ಹಿಂತಿರುಗಿಸಿ ನೀಡಿಲ್ಲ. ಹಾಗಾಗಿ ಶ್ರೀನಿವಾಸ್ ಗುರು ಪ್ರಸಾದ್ ವಿರುದ್ಧ ನನಗೆ ವಂಚನೆ ಮಾಡಿದ್ದಾರೆ ಅಷ್ಟೇ ಅಲ್ಲದೆ ಹಣವನ್ನು ಕೇಳಿದ್ದಕ್ಕೆ ನನ್ನ ಮೇಲೆ ಸುಳ್ಳು ಕೇಸ್ ದಾಖಲೆ ಮಾಡಿದ್ದಾರೆ ಎಂದು ಶ್ರೀನಿವಾಸ್ ದೂರು ನೀಡಿದ್ದಾರೆ‌. ಈ ಪ್ರಕರಣದ ಹಿನ್ನೆಲೆಯಲ್ಲಿ ಕೋರ್ಟ್ ನಿಂದ ಎನ್.ಬಿ ಡಬ್ಲ್ಯು ಜಾರಿ ಆಗಿತ್ತು. ಎನ್.ಐ ಆಕ್ಟ್ ಅಡಿ ಗುರುಪ್ರಸಾದ್ ವಿರುದ್ದ ಚೆಕ್ ಬೌನ್ಸ್ ಕೇಸ್ ನಲ್ಲಿ ವಾರೆಂಟ್ ಜಾರಿ ಆಗಿತ್ತು.

ಹಾಗಾಗಿ ಗುರುಪ್ರಸಾದ್ ಅವರ ವಿರುದ್ಧ ಚೆಕ್ ಬೌನ್ಸ್ ದೂರನ್ನು ದಾಖಲೆ ಮಾಡಿದ್ದಾರೆ ಶ್ರೀನಿವಾಸ್ ಅವರು ನೀಡಿದಂತಹ ಕಂಪ್ಲೇಂಟ್ ನಾ ಆಧಾರದ ಮೇಲೆ ಗುರುಪ್ರಸಾದ್ ಅವರನ್ನು ಗಿರಿ ನಗರ ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಹಾಜರು ಪಡಿಸುವುದಕ್ಕಿಂತ ಮುಂಚೆ ಅವರಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ ವೈದ್ಯಕೀಯ ಪರೀಕ್ಷೆ ನಡೆದ ನಂತರವಷ್ಟೇ ಗುರುಪ್ರಸಾದ್ ಅವರನ್ನು ಕೋರ್ಟ್ ಗೆ ಹಾಜರುಪಡಿಸಲಾಗುತ್ತದೆ.

ಈ ಸಿನಿಮಾ ರಂಗ ಎಂಬುವುದು ಏಳು ಬೀಳಿನ ಆಟ ಇಲ್ಲಿ ಯಾರು ಬೇಕಾದರೂ ಗೆಲಬಹುದು ಯಾರು ಬೇಕಾದರೂ ಸೋಲಬಹುದು ಅಷ್ಟೇ ಅಲ್ಲದೆ ಈ ದಿನ ಸಿರಿವಂತನಾಗಿದ್ದವನು ಮುಂದೊಂದು ದಿನ ಬೇರೆಯವರ ಮುಂದೆ ಕೈ ಚಾಚುವಂತಹ ಪರಿಸ್ಥಿತಿಯು ಕೂಡ ಏರ್ಪಡಬಹುದು. ಸದ್ಯಕ್ಕೆ ಗುರುಪ್ರಸಾದ್ ಅವರ ಬದುಕಿನಲ್ಲಿಯೂ ಕೂಡ ಇದೇ ಆಗಿರುವುದು ಇದೆ, ಒಂದು ಕಾಲದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಂತಹ ವ್ಯಕ್ತಿ.

ಈಗ ಅದೇ ಸಿನಿಮಗಳಿಂದಲೇ ಸೋಲನ್ನು ಅನುಭವಿಸಿ ಇದೀಗ ಮತ್ತೊಬ್ಬರ ಮುಂದೆ ಕೈ ಚಾಚುವಂತಹ ಪರಿಸ್ಥಿತಿ ಏರ್ಪಟ್ಟಿದೆ. ಇದರ ಎಷ್ಟರ ಮಟ್ಟಿಗೆ ತೀವ್ರತೆ ಎಷ್ಟರ ಮಟ್ಟಿಗೆ ಇದೆ ಎಂದರೆ ತನ್ನ ಕೈ ಕೆಳಗೆ ಕೆಲಸ ಮಾಡುತ್ತಿದ್ದಂತಹ ವ್ಯಕ್ತಿಯ ಬಳಿಯೇ ಹಣವನ್ನು ಪಡೆದಿದ್ದಾರೆ. ಮತ್ತೆ ಆ ಹಣವನ್ನು ಹಿಂತಿರುಗಿಸಲಾಗಿದೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ನಿಜಕ್ಕೂ ಕೂಡ ಇದು ಚಿತ್ರರಂಗಕ್ಕೆ ಒಂದು ಕಪ್ಪು ಚುಕ್ಕಿ ಅಂತಾನೆ ಹೇಳಬಹುದು, ಆದಷ್ಟು ಬೇಗ ಗುರುಪ್ರಸಾದ್ ಅವರು ತಮಗೆ ಬಂದಿರುವಂತಹ ಸಂಕಷ್ಟವನ್ನು ದೂರ ಮಾಡಿಕೊಂಡು ಬಿಡುಗಡೆಯಾಗಲಿ ಎಂಬುವುದಷ್ಟೇ ಅಭಿಮಾನಿಗಳ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

 

ಅಣ್ಣವ್ರು ಹೆಸರೇಲಿ ಕೆಲಸವನ್ನು ಬೆದರಿಸಿ ಮಾಡಿಸಿಕೊಳ್ಳುತ್ತಿದ್ರು. ಇದಕ್ಕೆಲ್ಲಾ ಪಾವರ್ತಮ್ಮನವರೇ ಕುಮ್ಮಕ್ಕು ಕೊಡ್ತಿದ್ರು. ಸತ್ಯ ಬಿಚ್ಚಿಟ್ಟ ಹಿರಿಯ ಕಲಾವಿದ

ಕನ್ನಡ ಚಿತ್ರರಂಗದ ಹೆಸರು ಇಂದು ಇಂಟರ್ನ್ಯಾಷನಲ್ ಮಟ್ಟದಲ್ಲಿ ಬೆಳೆಯುತ್ತಿದ್ದರು ಕೂಡ ಇದಕ್ಕೆ ಭದ್ರಬುನಾದಿ ಹಾಕಿದ್ದು ರಾಜಕುಮಾರ್ ಅವರ ಕಾಲಘಟ್ಟ ಎಂದರೆ ಆ ಮಾತು ಸುಳ್ಳಾಗುವುದಿಲ್ಲ. ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಸೇರಿದಂತೆ ಕನ್ನಡ ಚಲನಚಿತ್ರ ರಂಗದಲ್ಲಿ ಆ ಸಮಯದಲ್ಲಿ ಇದ್ದ ನಿರ್ಮಾಪಕರು ನಿರ್ದೇಶಕರು ಇತರ ಸಹಕಲಾವಿದರು ಇವರೆಲ್ಲರ ಕಠಿಣ ಪರಿಶ್ರಮದಿಂದ ಇಂದು ನಮ್ಮ ಭಾರತದ ಹಲವು ಫಿಲಂ ಇಂಡಸ್ಟ್ರಿಗಳಲ್ಲಿ ಕನ್ನಡದ ಸ್ಥಾನವು ಕೂಡ ಮೇಲ್ಮಟ್ಟದಲ್ಲಿದೆ.

ಈ ಬಗ್ಗೆ ವಿಶೇಷ ಸಂದರ್ಶನ ಒಂದರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಮತ್ತು ಮೂರು ಬಾರಿ ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಸಂಸ್ಥೆಯ ಅಧ್ಯಕ್ಷರಾಗಿದ್ದ ಕೆ ಸಿ ಎನ್ ಚಂದ್ರು ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಹೆಚ್ಚಾಗಿ ಡಾಕ್ಟರ್ ರಾಜಕುಮಾರ್ ಅವರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಏನು ಎನ್ನುವುದನ್ನು ತಿಳಿಸಿದ್ದಾರೆ.

ಕೆ ಸಿ ಎನ್ ಚಂದ್ರು ಅವರ ಜೊತೆ ರಾಜಕುಮಾರ್ ಅವರಿಗೆ ಬಹಳ ಉತ್ತಮವಾದ ಬಾಂಧವ್ಯ ಇತ್ತು. ಬಬ್ರುವಾಹನ, ಹುಲಿಯ ಹಾಲಿನ ಮೇವು ಸೇರಿದಂತೆ ಹಲವು ಬ್ಲಾಕ್ ಬ್ಲಾಸ್ಟರ್ ಅಣ್ಣಾವ್ರ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಕೆಸಿಎನ್ ಚಂದ್ರು ಅವರು. ಪ್ರದರ್ಶಕರು ಮತ್ತು ವಿತರಕರು ಹಾಗೂ ಚಿತ್ರೋದ್ಯಮಿಗಳು ಆದಕಾರಣ ಎರಡು ಕುಟುಂಬದವರ ನಡುವೆ ಬಹಳ ಆತ್ಮೀಯತೆ ಇತ್ತು ಹೀಗಾಗಿ ಏನೇ ವಿಷಯ ಇದ್ದರೂ ಮುಕ್ತವಾಗಿ ಮಾತನಾಡುವ ಸಲುಗೆಯೂ ಇತ್ತು

ಹೀಗಾಗಿ ಚಲನಚಿತ್ರ ಮಂಡಳಿಗೆ ಸಮಸ್ಯೆ ಇದ್ದರೆ ಡಾಕ್ಟರ್ ರಾಜಕುಮಾರ್ ಅವರ ಬಳಿಗೆ ಹೋದಾಗ ಪಾರ್ವತಮ್ಮ ಅವರೇ ಮಾರ್ಗದರ್ಶನ ನೀಡುತ್ತಿದ್ದರಂತೆ. ಈ ಮಾತನ್ನು ಉದಾಹರಣೆಯೊಂದಿಗೆ ಅವರು ಹೇಳಿಕೊಂಡಿದ್ದಾರೆ ಎಷ್ಟೋ ಬಾರಿ ಡಾಕ್ಟರ್ ರಾಜಕುಮಾರ್ ಅವರಿಗೆ ಕೆಲವೊಂದು ವಿಷಯಗಳು ಮುಟ್ಟುತ್ತಿರಲಿಲ್ಲ, ಪಾರ್ವತಮ್ಮ ಅವರು ನಮಗೆ ಸಪೋರ್ಟ್ ಮಾಡಿ ಸಮಸ್ಯೆ ಬಗೆಹರಿಸಿ ಕೊಡುತ್ತಿದ್ದರು. ನೀವು ಸರ್ಕಾರಕ್ಕೆ ನಿಮ್ಮ ಮನವಿ ಸಲ್ಲಿಸಿ ಅವರ ಬಳಿ ಸಹಾಯ ಕೇಳಿ ನಮ್ಮ ಚಿತ್ರರಂಗಕ್ಕಾಗಿ ಏನು ಮಾಡುತ್ತಿದ್ದೀರಾ ಎಂದು ಕೇಳಿ.

ನಿಮಗೆ ಆಗಬೇಕಾದ ಕೆಲಸಗಳು ನಡೆಯದಿದ್ದಾಗ ಈ ಕೆಲಸ ಆಗದಿದ್ದರೆ ಡಾಕ್ಟರ್ ರಾಜಕುಮಾರ್ ಅವರು ಬೀದಿಗೆ ಇಳಿಯುತ್ತಾರೆ ಎಂದು ಹೇಳಿ ಆಗ ಆಗುತ್ತದೆ ಎಂದು ಕುಮ್ಮಕು ಕೊಡುತ್ತಿದ್ದರಂತೆ. ಅದೇ ರೀತಿ ಇವರು ಸಹ ಹೋಗಿ ಚಿತ್ರ ರಂಗಕ್ಕಾಗಿ ಈ ಸಹಾಯ ಮಾಡಿ ಇಲ್ಲದಿದ್ದರೆ ನಾವು ಒಪ್ಪಿಸಿದ್ದೇವೆ ಅಣ್ಣಾವ್ರು ನಮಗೆಲ್ಲ ಬೆಂಬಲವಾಗಿದ್ದರೆ ಅವರ ಜೊತೆಗೂಡಿ ನಾವು ಹೋರಾಟಕ್ಕೆ ಇಳಿಯುತ್ತೇವೆ ಎಂದು ಹೇಳುತ್ತಿದ್ದರಂತೆ. ಈ ರೀತಿ ಹೇಳಿ ಹಲವು ಕೆಲಸಗಳನ್ನು ಚಿತ್ರರಂಗಕ್ಕಾಗಿ ಮಾಡಿಸಿಕೊಂಡಿದ್ದಾರಂತೆ.

ಒಮ್ಮೆ ಡಾಕ್ಟರ್ ರಾಜಕುಮಾರ್ ಅವರನ್ನು ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ವಿಧಾನಸೌಧಕ್ಕೆ ಆಹ್ವಾನಿಸಿದ್ದರಂತೆ. ಆಗಲು ಸಹ ಅಣ್ಣಾವ್ರು ನಾನೇನೋ ಬರುತ್ತೇನೆ ಆದರೆ ಬರುವುದರಿಂದ ನಮ್ಮ ಚಿತ್ರರಂಗಕ್ಕೆ ಏನು ಮಾಡಿಕೊಡುತ್ತೀರಾ ಎಂದು ಕೇಳಿದ್ದರಂತೆ ಯಾಕೆಂದರೆ ರಾಜಕುಮಾರ್ ಅವರಿಗೆ ರಾಜಕೀಯ ಹಾಗೂ ರಾಜಕೀಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ಅಷ್ಟೊಂದು ಆಸಕ್ತಿಯೇ ಇರಲಿಲ್ಲ ಆದರೆ ರಾಜಕೀಯ ಇಲ್ಲದೆ ಕಲಾವಿದರಿಗಾಗಿ ಸಹಾಯ ಮಾಡುತ್ತಿದ್ದರಂತೆ.

ಕಲ್ಯಾಣ್ ಕುಮಾರ್ ಅವರ ಅಂತಿಮ ದಿನಗಳಲ್ಲಿ ಡಾಕ್ಟರ್ ರಾಜಕುಮಾರ್ ಅವರ ಕುಟುಂಟ ಧನ ಸಹಾಯ ಮಾಡಿದೆಯಂತೆ. ಮತ್ತು ಪಂಡರಿ ಬಾಯಿ ಅವರ ಆರೋಗ್ಯ ಕೆಟ್ಟಿದ್ದಾಗ ಪ್ರತಿ ವಾರ ಕೂಡ ಯಾರ ಬಳಿಯಾದರೂ ಹಣ ಕೊಟ್ಟು ಕಳುಹಿಸಿ ಅವರ ಆರೋಗ್ಯ ವಿಚಾರಿಸಿಕೊಂಡು ಬರಲು ಹೇಳಿ ಕಳುಹಿಸುತ್ತಿದ್ದಾರಂತೆ. ಈ ರೀತಿ ಕೇವಲ ಒಂದೆರಡು ಅಲ್ಲ ಹಲವಾರು ಕಲಾವಿದರ ಕುಟುಂಬಕ್ಕೆ ದೊಡ್ಮನೆ ಆಸರೆಯಾಗಿ ನಿಂತಿತ್ತು ಎನ್ನುವುದನ್ನು ನೆನೆಸಿಕೊಂಡಿದ್ದಾರೆ ಕೆಸಿಎನ್ ಚಂದ್ರು ಅವರು.

ಪವಿತ್ರ ಲೋಕೇಶ್ ಅನ್ನು 4ನೇ ಮದುವೆ ಆಗುವುದಕ್ಕೆ ನಟ ನರೇಶ್ ತನ್ನ 3ನೇ ಪತ್ನಿ ರಮ್ಯಾಗೆ ವಿ.ಚ್ಛೇ.ದ.ನ ನೀಡಲು ಆಫರ್ ಮಾಡಿರುವುದು ಎಷ್ಟು ಕೋಟಿ ಗೊತ್ತಾ.? ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗ್ತೀರಾ.

 

ಪವಿತ್ರ ಲೋಕೇಶ್ ಹಾಗೂ ನರೇಶ್ ಅವರ ನಡುವೆ ಇರುವಂತಹ ಸಂಬಂಧ ಇದೀಗ ಖಚಿತವಾಗಿರುವ ವಿಚಾರ ನಿಮಗೆ ತಿಳಿದೇ ಇದೆ. ಕಳೆದ ಆರು ತಿಂಗಳ ಹಿಂದೆ ಎಷ್ಟೇ ನಮ್ಮಿಬ್ಬರಿಗೂ ಯಾವುದೇ ಸಂಬಂಧವಿಲ್ಲ ನಾವಿಬ್ಬರು ಸ್ನೇಹಿತರಷ್ಟೇ ಅಂತ ಹೇಳಿದ್ದ ಪವಿತ್ರ ಲೋಕೇಶ್ ಇದೇ ವರ್ಷದ ಹೊಸ ವರ್ಷದ ದಿನದಂದು ನರೇಶ್ ಗೆ ಲಿಪ್ ಕಿಸ್ ಮಾಡುವ ಮೂಲಕ ಹಾಗೂ ಕೇಕ್ ಕತ್ತರಿಸುವ ಮೂಲಕ ನಾವಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ ಎಂಬ ಅಧಿಕೃತ ಮಾಹಿತಿಯನ್ನು ವಿಡಿಯೋ ಶೇರ್ ಮಾಡುವುದರ ಮೂಲಕ ವ್ಯಕ್ತಪಡಿಸಿದ್ದರು.

ಈ ವಿಡಿಯೋ ನೋಡುತ್ತಿದ್ದ ಹಾಗೆ ಎಲ್ಲರೂ ಕೂಡ ಒಂದು ಕ್ಷಣ ಆಶ್ಚರ್ಯ ಚಕಿತರಾದರು ಇದ್ದಕ್ಕಿದ್ದ ಹಾಗೆ ಪವಿತ್ರ ಇಷ್ಟು ಬದಲಾಗುವುದಕ್ಕೆ ಸಾಧ್ಯವೇನು ಎಂಬ ಅನುಮಾನವನ್ನು ವ್ಯಕ್ತಪಡಿಸಿದರು. ಏಕೆಂದರೆ ಇದಾಗಲೇ ಪವಿತ್ರ ಲೋಕೇಶ್ ಗೆ ಎರಡು ಮದುವೆಯಾಗಿದ್ದು ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಅವೆಲ್ಲವನ್ನು ತೊರೆದು ಇದೀಗ ನರೇಶ್ ಅವರನ್ನು ಮೂರನೇ ಮದುವೆಯಾಗುತ್ತಿರುವುದು ನಿಜಕ್ಕೂ ಕೂಡ ಅದು ದುಸ್ಥಿತಿ ಅಂತಾನೆ ಹೇಳಬಹುದು.

ಅತ್ತ ಕಡೆ ನರೇಶ್ ಕೂಡ ತನ್ನ ಮೂರು ಜನರನ್ನು ಮದುವೆಯಾಗಿದ್ದು ಇದೀಗ ಪವಿತ್ರ ಅವರನ್ನು ನಾಲ್ಕನೇ ಮದುವೆಯಾಗುವುದಕ್ಕೆ ಸಿದ್ಧರಾಗಿದ್ದಾರೆ. ಇಬ್ಬರು ಹೆಂಡತಿಯರಿಗೆ ವಿ.ಚ್ಛೇ.ದ.ನ ಕೊಟ್ಟು ರಮ್ಯಾ ರಘುಪತಿಯನ್ನು ಮದುವೆಯಾಗಿದ್ದಾರೆ ಆದರೆ ಪವಿತ್ರ ಲೋಕೇಶ್ ಅವರನ್ನು ಮದುವೆಯಾಗಬೇಕೆಂದರೆ ರಮ್ಯಾ ರಘುಪತಿ ಅವರಿಗೆ ವಿ.ಚ್ಛೇ.ದ.ನ ನೀಡಬೇಕಾಗುತ್ತದೆ. ಆದರೆ ರಮ್ಯಾ ರಘುಪತಿ ಅವರು ಮಾತ್ರ ಯಾವುದೇ ಕಾರಣಕ್ಕೂ ನಾನು ನರೇಶ್ ಗೆ ವಿ.ಚ್ಛೇ.ದ.ನ ನೀಡುವುದಿಲ್ಲ ಒಂದು ವೇಳೆ ವಿ.ಚ್ಛೇ.ದ.ನ ನೀಡಿದರೆ ಪವಿತ್ರ ಲೋಕೇಶ್ ಅನ್ನು ಮದುವೆಯಾಗುತ್ತೇನೆ.

ಹಾಗಾಗಿ ಅದೆಷ್ಟೇ ಕಷ್ಟ ಆದರೂ ಸರಿ ನಾನು ವಿ.ಚ್ಛೇ.ದ.ನ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ. ಇತ್ತ ಕಡೆ ಪವಿತ್ರ ಲೋಕೇಶ್ ಕೂಡ ನರೇಶ್ ಗೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ ನೀವು ವಿ.ಚ್ಛೇ.ದ.ನ ನೀಡದೆ ಇದ್ದರೆ ನಾನು ನಿಮ್ಮನ್ನು ಮದುವೆ ಆಗಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಇದೆಲ್ಲದರಿಂದ ಬೇಸತ್ತಂತಹ ನರೇಶ್ ಅವರು ಇದೀಗ ಒಂದು ನಿರ್ಧಾರಕ್ಕೆ ಬಂದಿದ್ದಾರೆ ಹೌದು ರಮ್ಯಾ ರಘುಪತಿ ಅವರಿಗೆ ವಿ.ಚ್ಛೇ.ದ.ನ ನೀಡುವುದಕ್ಕೆ ಒತ್ತಾಯ ಮಾಡಿದ್ದು ನೀನು ನನಗೆ ವಿ.ಚ್ಛೆ.ದ.ನ ನೀಡಿದರೆ 200 ಕೋಟಿ ಜೀವನಾಂಶ ನೀಡುತ್ತೇನೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಆದರೆ ರಮ್ಯಾ ರಘುಪತಿ ಅವರು ಮಾತ್ರ ನೀನು ಎಷ್ಟೇ ಕೋಟಿ ರೂಪಾಯಿ ಆಫರ್ ನೀಡಿದರು ಕೂಡ ನಾನು ವಿ.ಚ್ಛೇ.ದ.ನ ನೀಡುವುದಿಲ್ಲ ಎಂದು ಖಡಕ್ಕಾಗಿ ಹೇಳಿ ಬಿಟ್ಟಿದ್ದಾರೆ. ಇದೀಗ ನರೇಶ ಅವರ ಪರಿಸ್ಥಿತಿ ನಿಜಕ್ಕೂ ಕೂಡ ಶೋಚನೀಯ ಅಂತ ಹೇಳಬಹುದು ಒಂದು ಕಡೆ ಮೂರನೇ ಹೆಂಡತಿಯ ಜೊತೆಗೂ ಬಳಲಾಗುತ್ತಿಲ್ಲ. ಅತ್ತ ಕಡೆ ಪವಿತ್ರ ಲೋಕೇಶ್ ಅವರನ್ನು ನಾಲ್ಕನೇ ಮದುವೆ ಆಗಲು ಕೂಡ ಸಾಧ್ಯವಾಗುತ್ತಿಲ್ಲ ಕೋರ್ಟ್ ನಲ್ಲಿ ಇವರ ಪ್ರಕರಣ ಇತ್ಯರ್ಥವಾಗಿಲ್ಲ.

ನರೇಶ್ ಗೆ ರಮ್ಯಾ ರಘುಪತಿಯಿಂದ ಬಿಡುಗಡೆ ಬೇಕಿದೆ ಆದರೆ ರಮ್ಯಾ ರಘುಪತಿ ಅವರು ಮಾತ್ರ ಯಾವುದೇ ಕಾರಣಕ್ಕೂ ವಿ.ಚ್ಛೇ.ದ.ನ ನೀಡುವುದಿಲ್ಲ. ನಾನು ನನ್ನ ಮಗನಿಗೆ ಮಾತನ್ನು ಕೊಟ್ಟಿದ್ದೇನೆ ವಿ.ಚ್ಛೇ.ದ.ನ ನೀಡುವುದಿಲ್ಲ ಎಂದು ಹಾಗಾಗಿ ನರೇಶ್ ಎಷ್ಟೇ ಬಾರಿ ಕೋರ್ಟ್ ನಲ್ಲಿ ಅಪಿಲ್ ಹಾಕಿದ್ದರು ಕೂಡ ನಾನು ಅವೆಲ್ಲವನ್ನು ವಜಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೂ ಕೂಡ ಇಲ್ಲಿ ನರೇಶ್ ಇನ್ನೂರು ಕೋಟಿ ರೂಪಾಯಿಗಳ ಆಫರ್ ನೀಡಿದ್ದು ಮಾತ್ರ ನಿಜಕ್ಕೂ ಕೂಡ ಎಲ್ಲರೂ ಒಂದು ಕ್ಷಣ ಬಿಚ್ಚಿ ಬಿರುಗಾಗುವಂತೆ ಮಾಡಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ

ಲೈವ್ ಬಂದು ಕಣ್ಣೀರು ಹಾಕಿದ ನಟಿ ಸುಧಾರಾಣಿ ನನ್ನ ಗಂಗಮ್ಮ ತಪ್ಪಿಸಿಕೊಂಡಿದ್ದಾಳೆ. ದಯವಿಟ್ಟು ಯಾರಿಗಾದರೂ ಸಿಕ್ಕರೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಈ ಗಂಗಮ್ಮ ಯಾರು ಗೊತ್ತ.?

ಲೈವ್ ನಲ್ಲಿ ಬಂದು ರಿಕ್ವೆಸ್ಟ್ ಮಾಡುತ್ತಿರುವ ಸುಧಾರಾಣಿ(Sudharani) ಕಾರಣವೇನು ಗೊತ್ತಾ? ಸೋಶಿಯಲ್ ಮೀಡಿಯ ಬಂದ ಮೇಲೆ ಲೈವ್ ಎನ್ನುವ ಪದ ಹೆಚ್ಚು ಜನಪ್ರಿಯವಾಗುತ್ತಿದೆ. ಇಂದು ಜನ ತಮ್ಮ ವಿಷಯವನ್ನು ಎಲ್ಲರಿಗೂ ತಿಳಿಸಲು ಮೊದಲಿನಂತೆ ಎಲ್ಲೂ ಹರಸಾಹಸ ಪಡ ಬೇಕಾಗಿಲ್ಲ. ಸೋಶಿಯಲ್ ಮೀಡಿಯಾಗೆ ಬಂದು ಲೈವ್ ಮಾಡಿದರೆ ಸಾಕು ಕ್ಷಣಮಾತ್ರದಲ್ಲೇ ವೈರಲ್ ಆಗಿ ಸುದ್ದಿ ಎಲ್ಲಾ ಕಡೆ ಮುಟ್ಟುತ್ತದೆ.

ಹಾಗಾಗಿ ಸಾಮಾನ್ಯರೇ ಇರಲಿ ಸೆಲೆಬ್ರಿಟಿಗಳೇ ಇರಲಿ ಆಗಾಗ ವಿಶೇಷ ವಿಷಯದ ಬಗ್ಗೆ ಎಲ್ಲರಿಗೂ ಸುದ್ದಿ ಮುಟ್ಟಿಸಬೇಕು ಎಂದರೆ ಈಝಿಯಾಗಿ ಲೈವ್ ಗೆ ಬಂದು ಬಿಡುತ್ತಾರೆ. ಈಗ ಎಲ್ಲರಂತೆ ಹಿರಿಯ ನಟಿ ಸುಧಾರಾಣಿ ಅವರು ಸಹ ಲೈವ್ ಅಲ್ಲಿ ಬಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಸುಧಾರಾಣಿ ಅವರು ಈಗಲೂ ಸಹ ಸಿನಿಮಾ ಹಾಗೂ ಕಿರುತೆರೆಯಲ್ಲಿ ಬಹಳ ಬೇಡಿಕೆ ಇರುವ ನಟಿ.

ಒಂದಾದರ ಮೇಲೆ ಒಂದರಂತೆ ಕಿರುತೆರೆಯಲ್ಲಿ ಇವರ ಧಾರಾವಾಹಿಗಳು ಬರುತ್ತವೆ ಇರುತ್ತವೆ. ರಥಸಪ್ತಮಿ, ಜೊತೆ ಜೊತೆಯಲಿ ಈಗ ಶ್ರೀರಸ್ತು ಶುಭಮಸ್ತು ಹೀಗೆ ಒಂದಲ್ಲ ಒಂದು ಧಾರಾವಾಹಿಗಳು ಇವರನ್ನು ಜನರಿಗೆ ಹತ್ತಿರವಾಗಿಸುತ್ತಿವೆ. ಇದರ ಜೊತೆಗೆ ಸಿನಿಮಾಗಳಲ್ಲೂ ಕೂಡ ಸುಧಾರಾಣಿ ಅವರು ಬಿಝಿ ಆಗಿರುತ್ತಾರೆ. ಪೋಷಕ ಪಾತ್ರಗಳಲ್ಲಿ ಈಗಿನ ಹೀರೋಗಳಿಗೆ ಅಮ್ಮ ಆಗಿ ಮಿಂಚುತ್ತಿರುವ ಸುಧಾರಾಣಿ ಅವರು ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ ಆಗಿ ಇರುತ್ತಾರೆ.

ತಮ್ಮ ಮನೆಯ ವಿಶೇಷ ಸಂದರ್ಭಗಳ ಪ್ರಯುಕ್ತ ಅಥವಾ ಮನೆಯಲ್ಲಿ ಆಚರಿಸುವ ಹಬ್ಬ ಆಚರಣೆಗಳ ಕುರಿತು ಮತ್ತು ಇನ್ನಿತರ ವಿಷಯಗಳ ಕುರಿತು ಪೋಸ್ಟ್ಗಳನ್ನು ಹಾಕಿ ಅಭಿಮಾನಿಗಳ ಜೊತೆಗೆ ಕಷ್ಟ ಸುಖವನ್ನು ಹಂಚಿಕೊಳ್ಳುತ್ತಾರೆ. ಇದೀಗ ಮೊದಲ ಬಾರಿಗೆ ಅವರು ಲೈವ್ ಅಲ್ಲಿ ಬಂದು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ. ತಮ್ಮ ದುಃಖವನ್ನು ಹೇಳಿಕೊಳ್ಳುತ್ತಿರುವ ಜೊತೆಗೆ ತಮಗೆ ಸಹಾಯ ಮಾಡಬೇಕು ಎಂದು ಎಲ್ಲರಲ್ಲೂ ಮನವಿ ಸಹಾ ಸಲ್ಲಿಸುತ್ತಿದ್ದಾರೆ.

ಅಷ್ಟಕ್ಕೂ ನಟಿ ಸುಧಾರಾಣಿ ಅವರಿಗೆ ಬಂದಿರುವ ಕಷ್ಟವಾದರೆ ಏನು ಎಂದರೆ ಅವರ ಮನೆಯಲ್ಲಿ ಗಂಗಮ್ಮ ಎನ್ನುವ ಹೆಸರಿನ ಪುಟ್ಟ ನಾಯಿಮರಿ ಇತ್ತು. ಈ ನಾಯಿಮರಿ ಅನ್ನು ಸುಧಾರಣಿ ಅವರು ಬಹಳ ಹಚ್ಚಿಕೊಂಡಿದ್ದರಂತೆ. ಸುಧಾರಣೆಯವರು ಮಾತ್ರ ಅಲ್ಲದೆ ಅವರ ಕುಟುಂಬದ ಎಲ್ಲ ಸದಸ್ಯರ ಜೊತೆ ನಾಯಿ ಚೆನ್ನಾಗಿ ಹೊಂದಿಕೊಂಡಿದ್ದಂತೆ.

ಅದಕ್ಕೆ ಎಲ್ಲರೂ ಪ್ರೀತಿಯಿಂದ ಗಂಗಮ್ಮ ಎಂದು ಕರೆಯುತ್ತಿದ್ದರಂತೆ, ಇದೀಗ 15 ದಿನಗಳಿಂದ ಗಂಗಮ್ಮ ಕಾಣೆಯಾಗಿತ್ತು ಅದು ಎಲ್ಲರಿಗೂ ದುಃಖವನ್ನುಂಟು ಮಾಡಿದೆ. ಅದರ ಸಲುವಾಗಿ ಈಗಾಗಲೇ ನಾಯಿಗಳನ್ನು ಸಾಕುವ ತಾಣ ಪೊಲೀಸ್ ದೂರು ಹೀಗೆ ಹಲವು ಪ್ರಯತ್ನ ಮಾಡಿ ಏನಾಗಿದೆ ಎಂದು ಕಂಡು ಹಿಡಿಯಲು ನೋಡಿದರೂ ಯಾವುದೇ ಪ್ರಯೋಜನ ಆಗಿಲ್ಲವಂತೆ. ಹಾಗಾಗಿ ಇದಕ್ಕೆ ಲೈವ್ ಬಂದರೆ ಒಳ್ಳೆ ಉಪಾಯ ಎಂದು ನಟಿ ಸುಧಾರಾಣಿ ಅವರ ಈ ರೀತಿ ಬಂದಿದ್ದಾರೆ.

ಲೈವ್ ಅಲ್ಲಿ ಬಂದು ತಮ್ಮ ನಾಯಿಯ ಮರಿಯ ಕುರಿತು ವಿಷಯ ತಿಳಿಸಿ ದಯವಿಟ್ಟು ಯಾರಾದರೂ ನಮ್ಮ ನಾಯಿ ಮರಿ ಕುರಿತು ಸುಳಿವು ಸಿಕ್ಕರೆ ಮಾಹಿತಿ ಕೊಡಿ. ಅಲ್ಲದೆ ಬಿಬಿಎಂಪಿ ಅವರು ಏನಾದರೂ ನಾಯಿಗಳನ್ನು ಶಿಫ್ಟ್ಯಾ ಮಾಡುವಾಗ ನಮ್ಮ ಗಂಗಮ್ಮ ನಿಮ್ಮ ಬಳಿ ಸೇರಿದೆ ಎಂದು ದಯವಿಟ್ಟು ನೋಡಿ ವಿಚಾರಿಸಿ. ಈಗಾಗಲೇ ನಾನು ಸಾಕಷ್ಟು ಅಲೆದಾಡಿದ್ದೇನೆ ಈಗಲೂ ಹುಡುಕಾಡುತ್ತಿದ್ದೇನೆ. ಕುಟುಂಬಸ್ಥರೆಲ್ಲರೂ ತುಂಬಾ ನೋವಿನಲ್ಲಿ ಇದ್ದೇವೆ. ದಯವಿಟ್ಟು ನಮ್ಮ ನಾಯಿಮರಿ ನಮಗೆ ಸಿಗುವಂತೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

 

ಕೊನೆಗೂ ನಿರ್ಮಾಣವಾಯ್ತು ವಿಷ್ಣು ಸ್ಮಾರಕ ಅಭಿಮಾನಿಗಳ ಮೊಗದಲ್ಲಿ ಸಂತಸ. ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿರುವ ಮುಖ್ಯ ಅತಿಥಿ ಯಾರು ಗೊತ್ತಾ.?

 

ಡಾ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಂತಸದ ವಿಚಾರ ಹೌದು ಬಹಳಷ್ಟು ವರ್ಷಗಳಿಂದ ಅಭಿಮಾನಿಗಳ ಮನಸ್ಸಿನಲ್ಲಿ ಇದ್ದಂತಹ ನೋವಿಗೆ ಇದೀಗ ವಿದಾಯ ಸಿಗುತ್ತಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ವಿಷ್ಣು ಅವರು ನಮ್ಮನ್ನು ಅಗಲಿ 12 ವರ್ಷಗಳ ಕಳೆದು ಹೋಗಿದೆ ಆದರೂ ಕೂಡ ಅವರ ಸ್ಮಾರಕ ನಿರ್ಮಾಣವಾಗಿಲ್ಲ ಎಂಬ ವಿಚಾರಕ್ಕೆ ಆಗಾಗ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದರು. ಸ್ಮಾರಕ ವಿಚಾರದಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದರು.

ಒಂದು ಕಡೆ ಭಾರತಿ ವಿಷ್ಣುವರ್ಧನ್ ಹಾಗೂ ಅವರ ಅಳಿಯ ಆದಂತಹ ಅನಿರುಧ್ ಅವರು ಕೂಡ ಸಾಕಷ್ಟು ಬಾರಿ ಈ ವಿಚಾರವನ್ನು ಸರ್ಕಾರದ ಗಮನಕ್ಕೂ ಕೂಡ ತಂದಿದ್ದರು. ಆದರೆ ಸರ್ಕಾರದ ನಿರ್ಲಕ್ಷತನವೋ ಅಥವಾ ದುರಾದೃಷ್ಟ ಏನೋ ತಿಳಿದಿಲ್ಲ ದಾದಾ ಅವರ ಸ್ಮಾರಕ ನಿರ್ಮಾಣವಾಗುತ್ತಿರಲಿಲ್ಲ. ಆದರೆ ಈ ಬಾರಿ ದಾದಾ ಅವರ ಸ್ಮಾರಕ ನಿರ್ಮಾಣವಾಗಿದೆ ಹೌದು ಮೈಸೂರಿನಲ್ಲಿ ಇದೇ ತಿಂಗಳ 29ನೇ ತಾರೀಕು ವಿಷ್ಣು ದಾದಾ ಅವರ ಸ್ಮಾರಕ ಉದ್ಘಾಟನೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಈ ವಿಚಾರ ಕೇಳುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಹರ್ಷವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ನಮ್ಮ ಎಷ್ಟೋ ವರ್ಷದ ಕನಸು ಈಗ ಈಡೇರುತಿದೆ ಎಂದು ಸಂತಸ ಗೊಂಡಿದ್ದಾರೆ. ಮೈಸೂರಿನಲ್ಲಿ ಸುಮಾರು ಎರಡೂವರೆ ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಿದೆ ವಿಷ್ಣು ವರ್ಧನ್ ಅವರಿಗೆ ಸಂಬಂಧಿಸಿದ ಗ್ಯಾಲರಿ, ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ, ಹೀಗೆ ಈ ಸ್ಮಾರಕದಲ್ಲಿ ಹತ್ತು ಹಲವು ವಿಶೇಷತೆಗಳಿವೆ.

ಅಂದುಕೊಂಡಂತೆ ಆಗಿದ್ದರೆ 2022ನೇ ಇಸ್ವಿ ಡಿಸೆಂಬರ್ 18 ನೇ ತಾರೀಖಿನಂದೆ ವಿಷ್ಣು ಅವರ ಸ್ಮಾರಕ ಲೋಕಾರ್ಪಣೆ ಯಾಗಬೇಕಿತ್ತು ಈ ವಿಚಾರವನ್ನು ಕುದ್ದು ಮುಖ್ಯಮಂತ್ರಿ ಅವರೇ ತಿಳಿಸಿದ್ದರೂ. ಆದರೆ ಕೆಲವು ಕಾರಣಾಂತರಗಳಿಂದ ಸ್ಮಾರಕ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಹಾಗಾಗಿ ಇದೇ ಜನವರಿ 29ಕ್ಕೆ (January 29th) ವಿಷ್ಣು ಸ್ಮಾರಕ ಉದ್ಘಾಟನೆ ಆಗಲಿದೆ.

ಈ ಒಂದು ಸಂತಸದ ವಿಚಾರವನ್ನು ಡಾಕ್ಟರ್ ವಿಷ್ಣುವರ್ಧನ್ ಅವರ ಅಳಿಯ ಆದಂತಹ ಅನಿರುಧ್ ಅವರು ಈಗಷ್ಟೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳೆಲ್ಲರಿಗೂ ಕೂಡ ಈ ಸಂತಸದ ಸುದ್ದಿ ಕೇಳಿ ಹರ್ಷ ವ್ಯಕ್ತಪಡಿಸಿದ್ದಾರೆ. ಅನಿರುಧ್ ಅವರು ಕೂಡ “ನಮ್ಮೆಲ್ಲರ ಪ್ರೀತಿಯ ಅಪ್ಪಾಜಿ ಅವರ ಸ್ಮಾರಕ ಇದೇ ತಿಂಗಳ 29ರಂದು ಉದ್ಘಾಟನೆಯಾಗಲಿದೆ ಈ ವಿಚಾರವನ್ನು ಈಗಷ್ಟೇ ಮುಖ್ಯಮಂತ್ರಿಗಳಾದಂತಹ ಬಸವರಾಜು ಬೊಮ್ಮಾಯಿಯವರು ತಿಳಿಸಿದ್ದಾರೆ. ಈ ವಿಚಾರ ಕೇಳುತ್ತಿದ್ದ ಹಾಗೆ ಅದೆಷ್ಟೋ ವರ್ಷದ ಕನಸು ನನಸಾಗುತ್ತಿದೆ ಎಂಬ ಸಂತಸ ನನ್ನಲ್ಲೂ ಕೂಡ ಮೂಡಿದೆ.

ಇನ್ನು ಈ ಒಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರಬೇಕು ಅಭಿಮಾನಿಗಳನ್ನು ಅಪ್ಪಾಜಿಯವರು ಎಷ್ಟು ಪ್ರೀತಿಸುತ್ತಿದ್ದರು ಎಂಬ ವಿಚಾರ ನಿಮಗೆ ತಿಳಿದೇ ಇದೆ. ಹಾಗಾಗಿ ನೀವು ಉದ್ಘಾಟನಾ ಸಮಾರಂಭಕ್ಕೆ ಬಂದರೆ ಅಪ್ಪಾಜಿ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಹಾಗೂ ಮೇಲೆ ಇರುವಂತಹ ಅಪ್ಪಾಜಿ ಇವೆಲ್ಲವನ್ನೂ ನೋಡಿ ಕಣ್ಣು ತುಂಬಿಕೊಳ್ಳುತ್ತಾರೆ ಎಂಬ ನಂಬಿಕೆಯಲ್ಲಿ ನಾನಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿ ಈ ಕಾರಣಕ್ಕಾಗಿ ಎರಡು ವಾರಗಳಿಗಿಂತ ಮುಂಚೆ ಈ ಒಂದು ವಿಚಾರವನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ನಟ ಅನಿರುದ್ಧ ಅವರು ಹೇಳಿಕೊಂಡಿದ್ದಾರೆ.

ಇನ್ನು ವಿಷ್ಣು ಅವರ ಈ ಒಂದು ಸ್ಮಾರಕದಲ್ಲಿ ನೀವು ಸಾಕಷ್ಟು ಸರ್ಪ್ರೈಸ್ ಗಳನ್ನು ಕಾಣಬಹುದಾಗಿದೆ ಎಂದು ಕೂಡ ಹೇಳಿಕೊಂಡಿದ್ದಾರೆ. ಇವೆಲ್ಲವನ್ನು ಕೇಳುತ್ತಿದ್ದರೆ ಅದ್ಭುತವಾಗಿಯೇ ವಿಷ್ಣು ಅವರ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ ಎಂಬುದು ತಿಳಿದು ಬರುತ್ತದೆ. ಅದೇನೇ ಆಗಲಿ ಅಪ್ಪಾಜಿ ಅವರ ಸ್ಮಾರಕ ಈಗಲಾದರೂ ಕೂಡ ನಿರ್ಮಾಣವಾಯಿತಲ್ಲ ಎಂಬುದಷ್ಟೇ ನಮಗೆ ಖುಷಿ ತರುವ ವಿಚಾರ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ