Home Blog Page 253

ಡಿ-ಬಾಸ್ ನಾ ನೋಡಿ ಕಲಿಬೇಕು, ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡ್ತಾರೆ, ಅವ್ರನ್ನ ಹೇಗೆ ಸೇಫ್ ಮಾಡ್ತಾರೆ ಅಂತ. ನಾನು ಅದನ್ನ ಕಣ್ಣಾರೆ ಕಂಡಿದ್ದೆನೆ ಎಂದ ನಟಿ ರಚಿತಾ ರಾಮ್.

 

ಕ್ರಾಂತಿ ಸಿನಿಮಾದ ಜರ್ನಿಯಿಂದ ದರ್ಶನ್ ಅವರ ಈ ಗುಣಗಳು ರಚಿತರಾಮ್ ಅವರು ಕಂಡಿದ್ದಂತೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತೂಗುದೀಪ ಪ್ರೊಡಕ್ಷನ್ ಇಂದ ಲಾಂಚ್ ಆದವರು. ದರ್ಶನ್ ಅವರ ಜೊತೆಗೆ ಮೊದಲ ಬಾರಿ ಬುಲ್ ಬುಲ್ ಸಿನಿಮಾದಲ್ಲಿ ನಾಯಕಿಯಾದ ಇವರು ನಂತರ ಅಂಬರೀಶ ಸಿನಿಮಾದಲ್ಲೂ ಕೂಡ ಜೊತೆಯಾದರು ಈಗ ಈ ಇಬ್ಬರ ಕಾಂಬಿನೇಷನ್ ಅಲ್ಲಿ ಕ್ರಾಂತಿ ಸಿನಿಮಾ ಬರುತ್ತಿದೆ.

ಕ್ರಾಂತಿ ಸಿನಿಮಾದ ಜರ್ನಿ ಬಗ್ಗೆ ರಚಿತಾ ರಾಮ್ ಅವರು ತಮ್ಮ ಅಭಿಪ್ರಾಯವನ್ನು, ಕ್ರಾಂತಿ ಸಿನಿಮಾದ ಪ್ರಚಾರದ ಅಂಗವಾಗಿ ಯುಟ್ಯೂಬ್ ಚಾನೆಲ್ ಒಂದರಲ್ಲಿ ಭಾಗಿಯಾಗಿ ಹಂಚಿಕೊಂಡಿದ್ದಾರೆ. ಅವರು ಇಷ್ಟು ವರ್ಷದಲ್ಲಿ ದರ್ಶನ್ ಅವರ ಜೊತೆ ಇದ್ದರೂ ಕೂಡ ಅವರ ಕೆಲವೊಂದು ಗುಣಗಳು ಕ್ರಾಂತಿ ಸಿನಿಮಾದ ಜರ್ನಿಯಲ್ಲಿ ಕಣ್ಣಿಗೆ ಬಿದ್ದದಂತೆ ಆ ಬಗ್ಗೆ ಅವರೇ ಅವರ ಮಾತಿನಲ್ಲಿ ಈ ರೀತಿ ಹೇಳಿದ್ದಾರೆ.

ಕ್ರಾಂತಿ ಸಿನಿಮಾದಲ್ಲಿ ನಾವೆಲ್ಲ ಕೆಲಸ ಮಾಡಿದ್ದೇವೆ ಅಷ್ಟೇ ಆದರೆ ಅದನ್ನು ಮಾರ್ಕೆಟಿಂಗ್ ಮಾಡುತ್ತಿರುವುದು ಪ್ರಮೋಷನ್ ಮಾಡುತ್ತಿರುವುದು ದರ್ಶನ್ ಸರ್ ಅವರ ಸೆಲೆಬ್ರಿಟಿಗಳು. ನಾವು ಈ ಸಿನಿಮಾದ ಹಾಡುಗಳನ್ನು ಒಂದೊಂದು ಸಿಟಿಯಲ್ಲಿ ರಿಲೀಸ್ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು, ಆದರೆ ಅದು ಇಷ್ಟು ಚೆನ್ನಾಗಿ ಮೂಡಿ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ನಾನು ನನ್ನ ಜರ್ನಿಯಲ್ಲಿ ಅಷ್ಟು ಜನ ಸೇರಿರುವುದನ್ನು ನೋಡಿಯೇ ಇರಲಿಲ್ಲ.

ದರ್ಶನ್ ಆವರಿಗೆ 5000, 10,000 ಅಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಾರೆ ಅವರೆಲ್ಲಾ ದೊಡ್ಡ ಸಮುದ್ರದ ರೀತಿ ಕಾಣುತ್ತಿರುತ್ತಾರೆ. ಅಲ್ಲದೆ ದರ್ಶನ್ ಸರ್ ಅವರು ನಮ್ಮನ್ನು ಪ್ರಚಾರಕ್ಕೆ ಎಲ್ಲೇ ಕರೆದುಕೊಂಡು ಹೋದರು ಸ್ಟೇ ಆದ ಜಾಗದಿಂದ ಕಾರ್ಯಕ್ರಮಕ್ಕೆ ಬಸ್ ಅಲ್ಲಿ ಅಥವಾ ಟಿಟಿ ಗಾಡಿಯಲ್ಲಿ ಕಳುಹಿಸಿ ಕೊಡುತ್ತಾರೆ. ಅಲ್ಲೆಲ್ಲಾ ನಾವು ಶಾಲಾ ಮಕ್ಕಳ ರೀತಿ ಒಟ್ಟಿಗೆ ಕೂತು ಹೋಗುತ್ತೇವೆ ಈ ಎಕ್ಸ್ಪೀರಿಯೆನ್ಸ್ ಕೂಡ ಹೊಸದು.

ದರ್ಶನ್ ಸರ್ ಅವರು ರಿಲೀಸ್ ಕಾರ್ಯಕ್ರಮಗಳಲ್ಲಿ ಅವರೇ ನಿರೂಪಣೆ ಕೂಡ ಮಾಡಿದ್ದಾರೆ ಎಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ಸರ್ ಅವರ ಮೇಲೆ ಅವರ ಜರ್ನಿ ಶುರುವಾದ ದಿನದಿಂದಲೂ ಕೂಡ ಪದೇಪದೇ ಪೆಟ್ಟು ಬೀಳುತ್ತಿದೆ. ಆದರೆ ಅವರ ಸೆಲೆಬ್ರಿಟಿಗಳು ಮಾತ್ರ ಅವರನ್ನು ಕೈಬಿಟ್ಟಿಲ್ಲ ಅಷ್ಟರ ಮಟ್ಟಿಗೆ ಅಭಿಮಾನ ಸಂಪಾದಿಸುತ್ತಿದ್ದಾರೆ ದರ್ಶನ್ ಸರ್, ಅವರೇ ಡಿ ಬಾಸ್ ನಿಜವಾದ ಆಸ್ತಿ.

ಇಷ್ಟು ಅಭಿಮಾನಕ್ಕೆ ಅವರ ಡೌನ್ ಟು ಅರ್ಥ್ ಗುಣ. ದರ್ಶನ್ ಸರ್ ಅವರು ಮಾತನಾಡಿರುವುದರಿಂದ ಕೆಲವೊಮ್ಮೆ ವಿವಾದಗಳು ಸೃಷ್ಟಿಯಾಗಿವೆ. ಆದರೆ ಅವರು ಮಗುವಿನ ರೀತಿ ಸ್ವಭಾವದವರು. ಚಿಕ್ಕ ಮಕ್ಕಳೇ ಪ್ರವೋಕ್ ಮಾಡಿದರೆ ಸುಮ್ಮನಿರುವುದಿಲ್ಲ ಅಂತಹದರಲ್ಲಿ ಅವರು ಮಾತನಾಡಿದ್ದನ್ನೇ ದೊಡ್ಡದಾಗಿ ಹೇಳಿ ಅವರ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ನಿಜವಾಗಿಯೂ ದರ್ಶನ್ ತುಂಬಾ ಸರಳ ವ್ಯಕ್ತಿ ಅವರನ್ನು ಹ್ಯಾಂಡಲ್ ಮಾಡುವುದು ಬಹಳ ಈಝಿ.

ಅವರಿಗೆ ಕಾರುಗಳ ಮೇಲೆ ಕ್ರೇಜ್ ಇರಬಹುದು ಆದರೆ ಅವರು ನೆಲದ ಮೇಲೆ ಕೂಡ ಮಲಗುವಷ್ಟು ಸಿಂಪಲ್. ಅವರ ಜೊತೆಗಿದ್ದರೆ ನಮಗೆ ಗೊತ್ತಿಲ್ಲದ ಹಾಗೆ ನಾವು ಕೂಡ ಅವರನ್ನೇ ಫಾಲೋ ಮಾಡಿ ಬಿಡುತ್ತವೆ. ಕ್ರಾಂತಿ ಸಿನಿಮಾದ ಜರ್ನಿ ನನಗೆ ಎಷ್ಟೋ ಬಾರಿ ಆನಂದದ ಕಣ್ಣೀರು ತರಿಸಿದೆ ಮತ್ತು ಇಷ್ಟು ದಿನದ ಜರ್ನಿಯಲ್ಲಿ ಈವರೆಗೆ ನಾನು ಕಲಿಯದ ಪಾಠಗಳನ್ನು ಕಲಿಸಿದೆ. ಈ ಕ್ರಾಂತಿ ಸಿನಿಮಾದಿಂದ ನಾನು ಟೀಮ್ ಅಂದರೆ ಏನು ಎನ್ನುವುದನ್ನು ಕಲಿತೆ ನಾವು ಎಲ್ಲೇ ಪ್ರಚಾರಕ್ಕೆ ಹೋದಾಗಲೂ ಒಂದೇ ಬಣ್ಣದ ಬಟ್ಟೆ ತರಿಸುತ್ತೇವೆ ಅದು ಕೂಡ ನಾವು ಸರ್ ಜೊತೆಗೆ ಇದ್ದೇವೆ ಎನ್ನುವುದನ್ನು ತೋರಿಸುವ ಸಿಂಬಲ್ ಎನ್ನಬಹುದು. ಎಂಬ ಇತ್ಯಾದಿ ಮಾತುಗಳನ್ನು ಹೇಳಿದ್ದಾರೆ. ಅವರ ಈ ಮಾತುಗಳನ್ನು ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ನನ್ನ ಸಿನಿಮಾ ನೋಡ್ದೆ ಇದ್ರೂ ಪರವಾಗಿಲ್ಲ ಅಣ್ಣನ ಕೊನೆ ಸಿನಿಮಾನಾ ದಯವಿಟ್ಟು ನೋಡಿ ಎಂದು ರಿಕ್ವೆಸ್ಟ್ ಮಾಡಿ ವೇದಿಕೆ ಮೇಲೆ ಕಣ್ಣಿರಿಟ್ಟ ನಟ ಧ್ರುವ ಸರ್ಜಾ.

ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಶಿವನಂತೆ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾ ಕೊಟ್ಟು ಅವರ ನಂತರದ ಮತ್ತೊಬ್ಬ ಹ್ಯಾಟ್ರಿಕ್ ಹೀರೋ ಎನಿಸಿಕೊಂಡವರು. ಕನ್ನಡ ಚಲನಚಿತ್ರರಂಗದಲ್ಲಿ ಒಂದು ದಶಕದಿಂದ ಸಕ್ರಿಯರಾಗಿರುವ ಇವರು ಮಾಡಿರುವುದು ಬೆರಳಣಿಕೆ ಅಷ್ಟೇ ಸಿನಿಮಾ ಆದರೂ ಕೂಡ ತಮ್ಮದೇ ಆದ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಧ್ರುವ ಸರ್ಜಾ ಅವರ ಸಿನಿಮಾ ಬಗ್ಗೆ ಕನ್ನಡಿಗರಿಗೆ ಬಹಳ ಕ್ರೇಜ್ ಇದ್ದು ಅವರು ಎಷ್ಟೇ ಸಮಯ ತೆಗೆದುಕೊಂಡು ಸಿನಿಮಾ ಮಾಡಿದರು ಕೂಡ ಅದನ್ನು ಬ್ಲಾಕ್ ಬ್ಲಾಸ್ಟರ್ ಸಿನಿಮವನ್ನಾಗಿಸುತ್ತಾರೆ. ಧ್ರುವ ಸರ್ಜಾ ಅವರು ಅದ್ಧೂರಿ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದರು. ನಂತರ ಬಹದ್ದೂರ್ ಭರ್ಜರಿ ಪೊಗರು ಸಿನಿಮಾಗಳನ್ನು ಕೊಟ್ಟ ಇವರು ಈಗ ಮಾರ್ಟಿನ್ ಮತ್ತು ಕೇಡಿ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅವರ ಕುಟುಂಬ ನಾನಾ ನೋವುಗಳನ್ನು ಕಂಡಿದೆ. ಈಗ ಇದೆಲ್ಲವನ್ನು ಅರಗಿಸಿಕೊಂಡು ವಾತ್ಸವವನ್ನು ಒಪ್ಪಿಕೊಂಡು ನಿತ್ಯ ಬದುಕಿನತ್ತ ಗಮನ ಕೊಟ್ಟಿತ್ತಿದೆ. ಅವರ ಮನೆಗೆ ಈ ವರ್ಷ ಮಹಾಲಕ್ಷ್ಮಿಯ ಆಗಮನವಾಗಿದೆ. ಮಗುವಿನ ನಿರೀಕ್ಷೆಯಲ್ಲಿದ್ದ ಧ್ರುವ ದಂಪತಿಗೆ ಅಕ್ಟೋಬರ್ 2ರಂದು ಹೆಣ್ಣು ಮಗುವಾಗಿದೆ. ಈಗ ಧ್ರುವ ಅವರು ಯಾವುದೇ ವೇದಿಕೆ ಮೇಲೆ ಹೋದರು ಯಾವುದೇ ಸಂದರ್ಶನ ಎದುರಿಸಿದರೂ ಮಗಳ ಬಗ್ಗೆ ಮಾತನಾಡದೆ ಮಾತು ಮುಗಿಸುತ್ತಿಲ್ಲ.

ಹಾಗೆಯೇ ಕನಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಧ್ರುವ ಸರ್ಜಾ ಅವರು ವೇದಿಕೆ ಮೇಲೆ ಮಗಳ ಬಗ್ಗೆ ಹಾಗೂ ಅಣ್ಣನ ಸಿನಿಮಾ ಮತ್ತು ತಮ್ಮ ಸಿನಿಮಾದ ಕುರಿತು ಹಲವು ಮಾತುಗಳನ್ನು ಅಲ್ಲಿದ್ದ ಕನ್ನಡ ಸಿನಿಮಾ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಧ್ರುವ ಸರ್ಜಾ ಅವರು ಈ ಹಿಂದೆ ಕೂಡ ಕನಕೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು.

ಈ ಬಾರಿ ಅದೇ ಹಾದಿಯಲ್ಲಿ ಸೋಮನಹಳ್ಳಿಗೆ ಹೋಗಬೇಕಿದ್ದ ಅವರು ಶಿವಣ್ಣ ಅವರು ಕಾರ್ಯಕ್ರಮಕ್ಕೆ ಬಂದಿದ್ದಾರೆ ಎನ್ನುವ ವಿಷಯ ತಿಳಿದು ಕಾರ್ಯಕ್ರಮಕ್ಕೆ ಬಂದಿದ್ದಾಗಿ ಹೇಳಿ ವೇದಿಕೆ ಮೇಲೆ ಇದಕ್ಕೆ ಅವಕಾಶ ಮಾಡಿಕೊಟ್ಟ ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಸಹೋದರರಿಗೂ ಧನ್ಯವಾದ ಹೇಳಿದ್ದಾರೆ. ಮತ್ತು ಅಲ್ಲಿ ನೆರೆದಿದ್ದ ಎಲ್ಲರನ್ನು ನನ್ನ ಅಕ್ಕತಂಗಿಯರು ಅಣ್ಣತಮ್ಮಂದಿರು ಹಾಗು ತಾಯಿ ಎಂದು ಹೇಳಿ ಮಾತು ಶುರು ಮಾಡಿದ ಅವರು.

ನಾವು ದಾರಿ ಬದಲಾಯಿಸಿಕೊಂಡು ಇಲ್ಲಿಗೆ ಬರುವುದಕ್ಕೆ ಕಾರಣ ಶಿವಣ್ಣ ಅವರೇ ಎಂದು ಅವರೆದುರೇ ಹೇಳಿ ಎಲ್ಲರನ್ನೂ ಶಿವಣ್ಣನ ವೇದ ಸಿನಿಮಾವನ್ನು ನೋಡಿದಿರಾ ಎಂದು ಕೇಳಿದ್ದಾರೆ. ಆ ಸಿನಿಮಾ ನೋಡಿ ಹೆಣ್ಣು ಮಕ್ಕಳ ಗೌರವ ಹೆಚ್ಚಾಗುತ್ತದೆ ಎಂದು ಹೇಳುವುದನ್ನು ಸಹಾ ಮರೆತಿಲ್ಲ. ಈ ವರ್ಷ ಸಂಕ್ರಾಂತಿ ನನಗೆ ಬಹಳ ಸ್ಪೆಷಲ್ ಯಾಕೆಂದರೆ ಕನಕೋತ್ಸವದಲ್ಲಿ ಭಾಗಿ ಆಗಿರುವುದು ಮತ್ತು ನನ್ನ ಮುದ್ದು ಮಗಳ ಜೊತೆ ಮೊದಲ ಸಂಕ್ರಾಂತಿ ಆಚರಿಸುತ್ತಿರುವುದು.

ಹೆಣ್ಣು ಮಕ್ಕಳು ಎಂದ ಮೇಲೆ ಅನೇಕ ಆಚರಣೆಗಳು ಶಾಸ್ತ್ರಗಳು ಇರುತ್ತವೆ. ಹಾಗಾಗಿ ಅವಳ ಜೊತೆ ಸಮಯ ಕಳೆಯುವುದರಲ್ಲಿ ಬ್ಯುಸಿ ಆಗಿಬಿಟ್ಟಿದ್ದೇನೆ. ಈ ತಿಂಗಳ ಅಂತ್ಯದಲ್ಲಿ ನನ್ನ ಮಾರ್ಟಿನ್ ಸಿನಿಮಾ ಟೀಸರ್ ಬಿಡುಗಡೆ ಆಗುತ್ತಿದೆ ನಂತರ ಕೇಡಿ ಬರುತ್ತಿದೆ. ನಿಮ್ಮ ಎಲ್ಲರ ಆಶೀರ್ವಾದ ಇರಲಿ ನನ್ನ ಸಿನಿಮಾ ನೋಡದಿದ್ದರೂ ಪರವಾಗಿಲ್ಲ ನನ್ನ ಅಣ್ಣ ಚಿರುವಿನ ರಾಜಮಾರ್ತಾಂಡ ಸಿನಿಮಾ ಬರುತ್ತಿದೆ ದಯವಿಟ್ಟು ಎಲ್ಲರೂ ಅವನ ಸಿನಿಮಾವನ್ನು ನೋಡಿ ಆಶೀರ್ವದಿಸಿ ಎಂದು ಕೇಳಿಕೊಂಡಿದ್ದಾರೆ.

ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದ ಹಾಗೇ, ಬ್ರೇಕಪ್ ಮಾಡಿಕೊಂಡ ಲವ್ ಬರ್ಡ್ಸ್, ಇವರಿಬ್ಬರೂ ದೂರಗುವುದಕ್ಕೆ ನಿಜವಾದ ಕಾರಣವೇನು ಗೊತ್ತ.?

 

 

ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಗಳಾಗಿದ್ದ ಜಶ್ವಂತ್ ಮತ್ತು ನಂದಿನಿ ಅವರು ಸಮಾನ ಮನಸ್ಕರು, ಸಮಾನ ಆಸಕ್ತರು ಇಬ್ಬರಿಗೂ ಡ್ಯಾನ್ಸ್ ಎಂದರೆ ಕ್ರೇಜ್ ಇದೇ ಕಾರಣ ಇವರಿಬ್ಬರನ್ನು ಒಂದು ಮಾಡಿ ಪ್ರೇಮಿಗಳನ್ನಾಗಿಸಿತ್ತು. ಇವರಿಬ್ಬರು ರೋಡಿಸ್ ಎನ್ನುವ ರಿಯಾಲಿಟಿ ಶೋ ಅಲ್ಲಿ ಕೂಡ ಭಾಗವಹಿಸಿದ್ದರು. ರೋಡಿಸ್ 18ರಲ್ಲಿ ನಂದಿನಿ ವಿನ್ನರ್ ಆಗಿದ್ದರೆ ಜಶ್ವಂತ್ ರನ್ನರ್ ಅಪ್ ಆಗಿದ್ದರು.

ಇವರಿಬ್ಬರು ಈ ಬಾರಿಯ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ಗಳಾಗಿ ಮನೆ ಸೇರಿದ್ದರು, ಓಟಿಟಿಯಲ್ಲಿ ಮೊದಲು ಇವರಿಬ್ಬರನ್ನು ಒಂದೇ ಎಂದು ಪರಿಗಣಿಸಿ ಮನೆಯೊಳಗೆ ಬಿಟ್ಟಿತ್ತಾದರೂ ನಂತರ ಪ್ರತ್ಯೇಕವಾಗಿ ಆಟ ಆಡಲು ಘೋಷಿಸಲಾಗಿತ್ತು. ಆರಂಭದ ದಿನಗಳಲ್ಲಿ ಎಲ್ಲವೂ ಚೆನ್ನಾಗಿತ್ತು ಜಶ್ವಂತ್ ಹಾಗೂ ನಂದಿನಿ ಅವರು ಮನೆ ಒಳಗೂ ಸಹ ಖುಷಿ ಖುಷಿಯಿಂದ ಜೋಡಿ ಹಕ್ಕಿಗಳಂತೆ ಇದ್ದರು.

ಆದರೆ ಕೆಲ ದಿನಗಳ ಬಳಿಕ ಜಶ್ವಂತ್ ಅವರು ಸಾನಿಯಾ ಕಡೆ ಆಕರ್ಷಿತರಾದರು. ಆ ಸಮಯದಲ್ಲಿ ನಂದಿನಿ ಸಹ ಬಹಳ ಮಾನಸಿಕವಾಗಿ ಕಷ್ಟ ಪಟ್ಟರು. ಅದು ಇವರಿಬ್ಬರ ಸಂಬಂಧದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದು ತಿಳಿಯುತ್ತಿದ್ದರೂ ಕೂಡ ಬಿಗ್ ಬಾಸ್ ಮನೆಯಲ್ಲಿರುವಾಗ ಅವರಿಬ್ಬರೂ ಆ ಬಗ್ಗೆ ಏನು ಮಾತನಾಡಿರಲಿಲ್ಲ.

ಆದರೆ ಈಗ ಬಿಗ್ ಬಾಸ್ ಇಂದ ಹೊರಬಂದು ಇಷ್ಟು ದಿನಗಳು ಕಳೆದರೂ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ, ಒಟ್ಟಿಗೆ ಫೋಟೋ ತೆಗೆದುಕೊಂಡಿಲ್ಲ, ಒಬ್ಬರ ಬಗ್ಗೆ ಒಬ್ಬರು ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಮಾತನಾಡಿಲ್ಲ. ಹೀಗಾಗಿ ಇವರಿಬ್ಬರ ನಡುವೆ ಬಿರುಕು ಮೂಡಿದೆ ಎಂದೇ ಎಲ್ಲರೂ ಮಾತನಾಡುತ್ತಿದ್ದರು. ಈಗ ಅದಕ್ಕೆ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕುವ ಮೂಲಕ ನಂದಿನಿ ಅವರ ಸ್ಪಷ್ಟಣೆ ನೀಡಿದ್ದಾರೆ.

ನಂದಿನಿ ಅವರು ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಬರೆದುಕೊಂಡಿರುವ ಅವರ ಬರಹದ ಅರ್ಥ ಈ ರೀತಿ ಇದೆ. ನಾನು ಆ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲ ಎನ್ನುವ ಕಾರಣಕ್ಕೆ ದುಃಖಿತಳಾಗಿಲ್ಲ. ನಾನು ನನ್ನನ್ನು ಪ್ರೀತಿಸುವ ಸ್ನೇಹಿತರು, ಕುಟುಂಬಸ್ಥರು, ನನ್ನ ಕೆರಿಯರ್, ನನ್ನ ಆಸಕ್ತಿಗಳು, ನನ್ನ ಆರೋಗ್ಯ, ನನ್ನ ಸಾಕು ಪ್ರಾಣಿಗಳು, ನನ್ನ ಪರಿಸರ ಇವುಗಳ ಜೊತೆ ಬಹಳ ಸಂತೋಷವಾಗಿದ್ದೇನೆ.

ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಸಿಹಿಯಾದ ಹೃದಯ ಮತ್ತೆ ನನ್ನ ಬಳಿ ಇದೆ. ಈಗ ಏನು ಇದೆಯೋ ಅದರಲ್ಲೇ ಖುಷಿಯಾಗಿದ್ದೇನೆ. ನಾವು ಯಾವಾಗಲೂ ನಮ್ಮನ್ನು ಪ್ರೀತಿಸುವವರು ಚೆನ್ನಾಗಿರಲಿ ಎಂದೆ ಆಸೆ ಪಡುತ್ತೇವೆ. ಅದನ್ನು ಅವರ ಪಕ್ಕದಲ್ಲಿ ಇದ್ದುಕೊಂಡು ಮಾಡಬಹುದು, ದೂರದಲ್ಲಿದ್ದರೂ ಮಾಡಬಹುದು. ನಾನು ಯಾವಾಗಲೂ ಅವರು ಇಷ್ಟ ಬಂದದ್ದನ್ನು ಎಲ್ಲರೂ ಮಾಡಬೇಕು ಎಂದು ಹೇಳುವವಳು ನಾನು.

ಮೊದಲು ಅವರ ಪ್ರಪೋಸಲ್ ಒಪ್ಪಿಕೊಳ್ಳುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡೆ ಆದರೆ ಒಮ್ಮೆ ಪ್ರೀತಿ ಒಪ್ಪಿಕೊಂಡ ಮೇಲೆ ಮತ್ತೆ ಕೈಚೆಲ್ಲಲಿಲ್ಲ. ಆದರೆ ಈಗ ಜಶ್ವಂತ್ ಅದರ ಬಗ್ಗೆ ಸ್ವಲ್ಪ ಸ್ಪೇಸ್ ಕೇಳುತ್ತಿದ್ದಾರೆ ನಾನು ಅದನ್ನು ಗೌರವ ಮಾಡಬೇಕು. ಈಗ ಇದಕ್ಕಾಗಿ ಎಲ್ಲರೂ ಜಶ್ವಂತ್ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಅದರ ಅಗತ್ಯ ಇಲ್ಲ ಎನಿಸುತ್ತದೆ.

ಯಾಕೆಂದರೆ ಅದು ಅವರ ಇಚ್ಛೆ ಅವರ ಅಭಿಪ್ರಾಯ, ಅವನು ಅವರ ಸಾಧನೆ ಮೂಲಕ ಇದೆಲ್ಲಕ್ಕೂ ಉತ್ತರಿಸುತ್ತಾನೆ ಎಂದು ಭಾವಿಸುತ್ತೇನೆ ಆ ದಿನಕ್ಕಾಗಿ ಕಾಯುತ್ತೇನೆ. ನಾವಿಬ್ಬರು ಜೊತೆಯಾಗಿ ಇದ್ದ ದಿನಗಳು ಬಹಳ ಖುಷಿಯಾಗಿ ಇದ್ದೆವು ಒಬ್ಬರಿಗೊಬ್ಬರು ಶಕ್ತಿಯಾಗಿದ್ದೆವು ಹೊಸ ಇತಿಹಾಸವನ್ನೇ ಸೃಷ್ಟಿಸಿದೆವು ಆದರೆ ಈಗ ಬದುಕು ಮುಂದೆ ಸಾಗಲೇಬೇಕು ಎಂಬಿತ್ಯಾದಿ ವಿಷಯಗಳನ್ನು ಬರೆದುಕೊಂಡು ಇಬ್ಬರು ಬೇರೆ ಆಗಿರುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬಹಳ ಕಷ್ಟ ಪಟ್ಟು ಆ ಸಿನಿಮಾ ಹಕ್ಕು ತಂದಿದೆ ಸುದೀಪ್ ಕೊನೆ ಸಮಯದಲ್ಲಿ ಕೈಕೊಟ್ಟು ನನ್ಗೆ ಮೋಸ ಮಾಡ್ಬಿಟ್ರು ಎಂದು ಮಾಧ್ಯಮದ ಮುಂದೆ ಕಣ್ಣಿರಿಟ್ಟ ನಿರ್ದೇಶಕ ಯೋಗಿ ದ್ವಾರಕೀಶ್

 

ನಾನು ಆ ಸಿನಿಮಾ ರೈಟಿಸ್ ತಂದಿದ್ದೆ ಸುದೀಪ್ ಗಾಗಿ ಆದರೆ ಆತ ಮಾಡಲ್ಲ ಎಂದು ಬಿಟ್ಟ ಇದರಿಂದ ನಾನು ಬೆಂಕಿಗೆ ಬಿದ್ದ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡೆ ಎಂದು ಯೋಗಿ ದ್ವಾರಕೀಶ್. ಕನ್ನಡ ಸಿನಿಮಾ ರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರ ಪುತ್ರ ಯೋಗಿ ದ್ವಾರಕೀಶ್ ಕೂಡ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

ಇತ್ತೀಚೆಗೆ ಅವರು ಬಿ ಗಣಪತಿ ಅವರ ಯುಟ್ಯೂಬ್ ಚಾನೆಲ್ ಅಲ್ಲಿ ಸಂದರ್ಶನಕ್ಕೆ ಭಾಗಿಯಾಗಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ವೃತ್ತಿ ಬದುಕಿನ ಏಳು ಬೀಳುಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಮೊದಲು ನಿಂದಲೂ ಇದ್ದದ್ದನ್ನು ಇದ್ದ ಹಾಗೆ ನೇರನುಡಿಯಿಂದ ಮಾತನಾಡುವ ಯೋಗಿ ಅವರು ಇಂದು ಅವರ ಈ ಪರಿಸ್ಥಿತಿಗೆ ಕಾರಣ ಏನು ಎನ್ನುವುದನ್ನು ಮನಬಿಚ್ಚಿ ಮಾತನಾಡಿದ್ದಾರೆ.

ಅವರು ಅವರ ಸೋತ ಸಿನಿಮಾಗಳ ಉದಾಹರಣೆಯೊಂದಿಗೆ ತಮ್ಮ ಈಗಿನ ಪರಿಸ್ಥಿತಿಗೆ ಕಾರಣ ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ದ್ವಾರಕೀಶ್ ಅವರು ಮತ್ತು ಯೋಗಿ ದ್ವಾರಕೇಶ್ ಅವರು ಹಲವಾರು ರಿಮೇಕ್ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಯೋಗಿ ದ್ವಾರಕೀಶ್ ಅವರಿಗೆ ರಿಮೇಕ್ ಸಿನಿಮಾಗಳನ್ನು ಮಾಡುವುದು ಇಷ್ಟ ಇರಲಿಲ್ಲವಂತೆ. ಆದರೆ ಕೆಲವೊಮ್ಮೆ ಜೊತೆಯಲ್ಲಿದ್ದವರ ಒತ್ತಾಯದ ಮೇರೆಗೆ ಅಥವಾ ಭರವಸೆಯೊಂದಿಗೆ ಆ ಸಾಹಸಕ್ಕೆ ಕೈ ಹಾಕಿದ್ದಾರಂತೆ.

ಅದರಿಂದಲೇ ಅವರು ಎಂದು ಕೈಸುಟ್ಟಕೊಳ್ಳಬೇಕಾಗಿಯಿತು ಎನ್ನುವುದನ್ನು ಅಮ್ಮ ಐ ಲವ್ ಯು ಸಿನಿಮಾ ಉದಾಹರಣೆಯೊಂದಿಗೆ ಹೇಳಿದ್ದಾರೆ. ಅಮ್ಮ ಐ ಲವ್ ಯು ಸಿನಿಮಾವನ್ನು ನೋಡಿದ ನನ್ನ ಸ್ನೇಹಿತರು ಈ ಸಿನಿಮಾವನ್ನು ನೀನು ಕನ್ನಡದಲ್ಲಿ ಮಾಡು ಎಂದು ಸಲಹೆ ಕೊಟ್ಟರು. ಆ ಸಿನಿಮಾ ರಿಲೀಸ್ ಆದ ದಿನವೇ ಕನ್ನಡದಲ್ಲೂ ಆ ಸಿನಿಮಾ ಮಾಡುವ ನಿರ್ಧಾರ ಮಾಡಿ ರೈಟ್ಸ್ ಖರೀದಿಸಿ ಬಿಟ್ಟೆ ಆದರೆ ಆ ಸಿನಿಮಾ ಕಥೆ ನೋಡುವಾಗ ನನ್ನ ತಲೆಯಲ್ಲಿ ಇದ್ದಿದ್ದು ಸುದೀಪ್.

ನಾನು ಸುದೀಪ್ ಅವರ ಬಳಿ ಹೋಗಿ ಈ ಕಥೆ ಹೇಳಿದಾಗ ಸುದೀಪ್ ಅವರು ಅದನ್ನು ಮಾಡುವುದಿಲ್ಲ ಎಂದು ಬಿಟ್ಟರು. ಅದು ಅವರ ಆಯ್ಕೆ ಆದರೆ ಆ ಬಳಿಕ ಚಿರು ಅವರ ಬಳಿ ಹೋದೆ. ಚಿರು ಅವರು ಆ ಪಾತ್ರ ನನ್ನ ಕೆಪ್ಯಾಸಿಟಿಗೆ ಅಲ್ಲ ಎಂದು ಹೇಳಿದರು. ಯಶ್ ಅವರ ಬಳಿ ಕೂಡ ಹೋದಾಗ ನಾನು ಮಾಸ್ಟರ್ ಪೀಸ್ ಆದ ಬಳಿಕ ಇಂತಹ ಸಿನಿಮಾಗಳನ್ನು ಮಾಡುವುದು ಕಷ್ಟ ಆದರೆ ರಕ್ಷಿತ್ ಅವರಿಗೆ ಆ ಕಳೆಯಿದೆ ಎಂದು ಅವರ ಬಳಿ ಕಳುಹಿಸಿದರಂತೆ.

ರಕ್ಷಿತ್ ಅವರು ಯೋಗಿ ಅವರಂತೆ ರಿಮೇಕ್ ಸಿನಿಮಾಗಳನ್ನು ಒಪ್ಪಿಕೊಳ್ಳದ ಕಾರಣ ನಾನಾ ಕಲಾವಿದರ ಬಳಿ ಹೋಗಿ ಕೊನೆಗೆ ಅದು ಚಿರು ಅವರ ಬಳಿಯೇ ಬರುತ್ತದೆ. ಚಿರು ಹಾಗೂ ಯೋಗಿಯವರು ಮಾತಾಡಿಕೊಂಡಿದ್ದರು ಸಿನಿಮಾವನ್ನು ಮಾಡೋಣ ರೈಟ್ ಹಾಳಾಗಬಾರದು ಎಂದು ನಿರ್ಧಾರ ಮಾಡಿದರಂತೆ. ಆದರೆ ಆ ಸಿನಿಮಾ ಕನ್ನಡದಲ್ಲಿ ಅಷ್ಟೊಂದು ಯಶಸ್ಸು ಕಾಣಲಿಲ್ಲ ನಂತರ ಆಯುಷ್ಮಾನ್ಭವ ಸಿನಿಮಾ ವಿಚಾರದಲ್ಲೂ ಇದೇ ರೀತಿ ಆಯಿತು.

ಈ ಬಾರಿ ಶಿವಣ್ಣ ನಾನು ಮತ್ತಿತರರು ಸೇರಿಕೊಂಡು ನಿರ್ಧಾರ ಮಾಡಿದೆವು. ಎಲ್ಲವೂ ಸರಿ ಇತ್ತು ಆದರೆ ಅಷ್ಟರಲ್ಲಿ ಕನ್ನಡದಲ್ಲಿ ಕೆಜಿಎಫ್ ಸಿನಿಮಾ ರಿಲೀಸ್ ಆಯ್ತು. ಕೆಜಿಎಫ್ ಇಂದ ಕನ್ನಡದ ಟ್ರೆಂಡ್ ಬದಲಾಯಿತು ಈಗ ಜನ ಸ್ಟ್ರೈಟ್ ಸಿನಿಮಾಗಳನ್ನು ಕೇಳುತ್ತಾರೆ. ರಿಮೇಕ್ ಸಿನಿಮಾಗಳು ಆದರೆ ಸೋಶಿಯಲ್ ಮೀಡಿಯಾದಲ್ಲಿ ಅದರ ಬಗ್ಗೆ ಕಮೆಂಟ್ಸ್ ಗಳು ಬಂದು ಅರ್ಧ ಹೋಪ್ ಅಲ್ಲೇ ಕಳೆದುಕೊಳ್ಳುತ್ತಾರೆ.

ಹೀಗಾಗಿ ಈಗ ಕಂಟೆಂಟ್ ಒರಿಯೆಂಟೆಡ್, ಪ್ಯಾನ್ ಇಂಡಿಯಾ ಟ್ರೆಂಡ್ ಇರುವುದರಿಂದ ನನ್ನ ರಿಮೇಕ್ ಸಿನಿಮಾಗಳು ಸೋತು ಫಿನಾನ್ಷಿಯಲಿ ನಾನು ಸೋಲಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ಅವರ ಈ ಇಂಟರ್ವ್ಯೂ ಅಲ್ಲಿ ಇನ್ನು ಅನೇಕ ವಿಷಯಗಳ ಕುರಿತು ಓಪನ್ ಆಗಿ ಮಾತನಾಡಿದ್ದಾರೆ ಅವುಗಳನ್ನು ಕೇಳಲು ಈ ವಿಡಿಯೋವನ್ನು ನೋಡಿ.

ನಾನು ಡಬ್ಬ ಸಿನಿಮಾ ಮಾಡಿದ್ರು ನನ್ನ ಸೆಲೆಬ್ರಿಟಿಗಳು ನೋಡ್ತಾರೆ‌. ಕ್ರಾಂತಿ ಸಿನಿಮಾದ 4ನೇ ಹಾಡು ಬಿಡುಗಡೆ ಮಾಡುವಾಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್

 

ದರ್ಶನ್ ಅವರ ಯಾವ ಸಿನಿಮಾ ಕೂಡ ಕಳೆದ ವರ್ಷ ರಿಲೀಸ್ ಮಾಡಿಲ್ಲ. ಹೀಗಾಗಿ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಗ್ಗೆ ಎಲ್ಲೆದೆ ವ್ಯಾಪಕವಾಗಿ ಕುತೂಹಲ ವ್ಯಕ್ತವಾಗುತ್ತಿದೆ. ಜನವರಿ 26ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾದ ಪ್ರಚಾರ ಕಾರ್ಯ ಎರಡು ತಿಂಗಳ ಹಿಂದಿನಿಂದಲೇ ಶುರು ಆಗಿದೆ. ನಾಯಕಶನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಹ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದು ಹಲವಾರು ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡುತ್ತಿದ್ದಾರೆ.

ಮೀಡಿಯಾಗಳು ದರ್ಶನ್ ಅವರನ್ನು ಬ್ಯಾನ್ ಮಾಡಿರುವ ಕಾರಣ ದರ್ಶನ್ ಅವರ ಅಭಿಮಾನಿಗಳು ಸಹ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿಯೊಬ್ಬರೂ ಕೂಡ ತಮ್ಮ ಕೈಲಾದ ರೀತಿಯಲ್ಲಿ ವಿಶೇಷವಾಗಿ ವಿಭಿನ್ನವಾಗಿ ಪ್ರೀತಿಯಿಂದ ತಮ್ಮ ಡಿ ಬಾಸ್ ಸಿನಿಮಾಗೆ ಪ್ರಚಾರ ಕೊಡುತ್ತಿದ್ದಾರೆ. ಚಿತ್ರ ತಂಡ ಕೂಡ ನಾನಾ ರೀತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ತನ್ನ ಸಿನಿಮಾದ ಪ್ರಚಾರ ಮಾಡುತ್ತಿದೆ.

ಜನವರಿ 7ರಂದು ಟ್ರೈಲರ್ ಅನ್ನು ಥಿಯೇಟರ್ ಅಲ್ಲಿ ರಿಲೀಸ್ ಮಾಡಲಾಯಿತು. ಅದು ಕೂಡ ಪ್ರಚಾರದ ಒಂದು ಭಾಗವಾಗಿದ್ದು, ಈಗಾಗಲೇ ಟ್ರೈಲರ್ ನೋಡಿದ ಎಲ್ಲರೂ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಕನ್ನಡದಲ್ಲಿ ಶಿಕ್ಷಣದ ವಿಷಯ ಇಟ್ಟುಕೊಂಡು ಕ್ರಾಂತಿ ಮಾಡಲು ಬರುತ್ತಿರುವ ಸಿನಿಮಾ ಇದಾಗಿದ್ದು ಸಿನಿಮಾದ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಎಲ್ಲರ ಆಸಕ್ತಿ ಇಮ್ಮಡಿಗೊಳ್ಳುತ್ತಿದೆ. ಟ್ರೈಲರ್ ಇಂದಲೇ ಇಷ್ಟೊಂದು ಕ್ರೇಜ್ ಹುಟ್ಟು ಹಾಕಿರುವ ಸಿನಿಮಾ ಹಾಡುಗಳು ಕೂಡ ಚಿಂದಿ ಆಗಿವೆ.

ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆಯೊಂದಿಗೆ ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ಮುಂತಾದವರ ಬರಹ ಸಿನಿಮಾ ಹಾಡುಗಳಿಗಿದ್ದು ಹಾಡುಗಳ ರಿಲೀಸ್ ಕಾರ್ಯ ಕೂಡ ವಿಭಿನ್ನ ರೀತಿಯಾಗಿ ಚಿತ್ರತಂಡ ಮಾಡುತ್ತಿದೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ತಮ್ಮ ಸಿನಿಮಾದ ಒಂದೊಂದು ಹಾಡನ್ನು ರಿಲೀಸ್ ಮಾಡಲು ನಿರ್ಧರಿಸಿದ ಚಿತ್ರ ತಂಡ ಮೊದಲನೇ ಹಾಡಾದ ಧರಣಿ ಮಂಡಲ ಮಧ್ಯದೊಳಗೆ ಹಾಡನ್ನು ಮಂಡ್ಯದ ಕೆ ಆರ್ ಪೇಟೆ ಅಲ್ಲಿ ಬಿಡುಗಡೆ ಗೊಳಿಸಿತ್ತು.

ನಂತರ ಎರಡನೇ ಹಾಡಾದ ಬೊಂಬೆ ಬೊಂಬೆ ಹಾಡನ್ನು ಹೊಸಪೇಟೆಯಲ್ಲಿ ರಿಲೀಸ್ ಮಾಡಿತ್ತು. ಮತ್ತು ಮೂರನೇ ಹಾಳಾದ ಪುಷ್ಪವತಿ ಹಾಡನ್ನು ನವ ಜೋಡಿಗೆ ಕೈಯಿಂದ ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಿಸಲಾಯಿತು. ಈಗ ನಾಲ್ಕನೇ ಹಾಡಿನ ಬಗ್ಗೆ ಎಲ್ಲೆಡೆ ಬಹಳ ನಿರೀಕ್ಷೆ ಇದೆ. ಚಿತ್ರತಂಡ ತಾನು ಹೇಳಿದ ರೀತಿಯಲ್ಲಿ ತುಮಕೂರಿನಲ್ಲಿ ನಾಲ್ಕನೇ ಹಾಡನ್ನು ರಿಲೀಸ್ ಮಾಡುವ ಕಾರ್ಯಕ್ರಮ ಏರ್ಪಡಿಸಿದೆ. ಈ ಕಾರ್ಯಕ್ರಮಕ್ಕೆ ದರ್ಶನ್ ಅವರು ಸಹ ಹೋಗಿದ್ದು ಬಸ್ ಮೇಲೆ ನಿಂತು ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ನಾಲ್ಕು ಮಾತುಗಳನ್ನು ಆಡಿದ್ದಾರೆ.

ದರ್ಶನ್ ಅವರು ಎಲ್ಲೇ ಹೋದರು ಅವರನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಸೇರುತ್ತಾರೆ ಈ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದು ಕರೆಯುವ ದರ್ಶನವರು ತಮ್ಮ ಸೆಲೆಬ್ರಿಟಿ ಕುರಿತು ಈ ರೀತಿ ಹೇಳಿದ್ದಾರೆ. ಮೊದಲಿಗೆ ಕಲ್ಪತರು ನಾಡು ತುಮಕೂರಿನ ನನ್ನ ಪ್ರೀತಿಯ ಎಲ್ಲಾ ಸೆಲೆಬ್ರೆಟಿಗಳಿಗೂ ಕೋಟಿ ಕೋಟಿ ಧನ್ಯವಾದಗಳು. ಹಿರಿಯರ ಸಮನಾದವರು ಹಾಗೂ ನಡೆದಾಡುವ ದೇವರಾದ ಶ್ರೀ ಸಿದ್ದಗಂಗಾ ಸ್ವಾಮಿಗಳ ಆಶೀರ್ವಾದದೊಂದಿಗೆ ಮಾತು ಆರಂಭಿಸುತ್ತೇನೆ.

ನನ್ನ ಅಭಿಮಾನಿಗಳ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ನಾನು ಎಂತಹ ಡಬ್ಬ ಸಿನಿಮಾ ಮಾಡಿದರು ಕೂಡ ನನ್ನ ಸೆಲೆಬ್ರಿಟಿಗಳು ನನ್ನನ್ನು ಒಪ್ಪಿಕೊಂಡಿದ್ದಾರೆ, ಗೆಲ್ಲಿಸಿದ್ದಾರೆ. ಆದರೆ ಈ ಬಾರಿ ಕ್ರಾಂತಿ ಸಿನಿಮಾ ಅವರನ್ನು ನಿರಾಸೆಗೊಳಿಸುವುದಿಲ್ಲ ಎಂಬ ಮಾತುಗಳನ್ನು ಸಿನಿಮಾ ಬಗ್ಗೆ ಆಡಿದ್ದಾರೆ. ದರ್ಶನ್ ಅವರು ಹೇಳಿದ ಈ ಮಾತನ್ನು ಕೇಳಿ ದರ್ಶನ್ ವಿರೋಧಿಗಳು ಟ್ರೋಲ್ ಮಾಡುತ್ತಿದ್ದಾರೆ.

ನಾನು ಸೀಗರೇಟ್ ಸೇದೋದು ಅಭಿಮಾನಿಗಳು ನೋಡ್ಬಿಟ್ರೆ ಏನ್ ಮಾಡೋದು ಅಂತ ಅಣ್ಣಾವ್ರು ಎದುರುತ್ತಿದ್ರು. ಸತ್ಯ ಬಾಯ್ಬಿಟ್ಟ ಅಣ್ಣಾವ್ರ ಸಂಗಡಿಗ

ಕನ್ನಡದ ಹೆಸರಾಂತ ನಿರ್ಮಾಪಕ ಹಾಗೂ ಮಾಜಿ ಕನ್ನಡ ಚಲನಚಿತ್ರ ಮಂಡಳಿ ಅಧ್ಯಕ್ಷ ಹಾಗೂ ಮೂರು ಬಾರಿ ದಕ್ಷಿಣ ಚಲನಚಿತ್ರ ಸಂಸ್ಥೆಯ ಅಧ್ಯಕ್ಷರಾಗಿದ್ದ ಕೆಸಿಎನ್ ಚಂದ್ರು ಅವರು ಒಂದು ಖಾಸಗಿ ಯುಟ್ಯೂಬ್ ಚಾನೆಲ್ ಅಲ್ಲಿ ಅಣ್ಣಾವ್ರು ಹಾಗೂ ಅಣ್ಣಾವ್ರ ಜೊತೆಗಿದ್ದ ಒಡನಾಟ ಅನುಬಂಧದ ಬಗ್ಗೆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಈ ಸಂದರ್ಶನದಲ್ಲಿ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಹಾಗೂ ಅವರ ಕುಟುಂಬ ಅವರ ನಿತ್ಯ ಜೀವನ ಹೇಗಿರುತ್ತಿತ್ತು ಎಂಬಿತ್ಯಾದಿ ಹಲವು ವಿಷಯಗಳನ್ನು ಹೇಳಿದ್ದಾರೆ.

ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಇತರರಿಗೆ ತಿಳಿಯದ ಅನೇಕ ವಿಷಯಗಳನ್ನು ಇದರಲ್ಲಿ ಹೇಳಿದ್ದಾರೆ. ಯಾಕೆಂದರೆ ಕೆಸಿಎನ್ ಚಂದ್ರು ಅವರು ಡಾಕ್ಟರ್ ರಾಜಕುಮಾರ್ ಅವರ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದವರು. ತೀರ ಹತ್ತಿರದಿಂದ ಅವರನ್ನು ಬಲ್ಲ ಇವರು ಒಂದು ಹಳೆ ನೆನಪಿನೊಂದಿಗೆ ಅಣ್ಣಾವ್ರ ಸರಳತೆಯನ್ನು ಈ ರೀತಿ ತಿಳಿಸಿದ್ದಾರೆ.

ರಾಜ್ ಕುಮಾರ್ ಅವರು ಕನ್ನಡದ ಮೇರು ನಟ ಕುಲಕಂಠೀರವ ಅಭಿನಯದಲ್ಲಿ ಸರ್ವ ಶ್ರೇಷ್ಠ ಪರಿಪೂರ್ಣ ವ್ಯಕ್ತಿ. ಡಾಕ್ಟರ್ ರಾಜಕುಮಾರ್ ಅವರು ಮೊದಲು ಹೊಟ್ಟೆಪಾಡಿಗಾಗಿ ಬಣ್ಣ ಹಚ್ಚಲು ಶುರು ಮಾಡಿದವರು. ನಂತರ ವೃತ್ತಿಯನ್ನೇ ದೇವರಂತೆ ಪರಿಗಣಿಸಿ ನಟನೆಯನ್ನೇ ಜೀವಾಳ ಮಾಡಿಕೊಂಡರು. ಡಾ.ರಾಜ್‌ಕುಮಾರ್ ಅವರಿಗೆ ಡಾಕ್ಟರ್ ರಾಜಕುಮಾರ್ ಅವರೇ ಸಾಟಿ.

ಭಾರತ ಚಿತ್ರರಂಗದಲ್ಲಿ ಮಾತ್ರ ಅಲ್ಲದೆ ಇಡೀ ವಿಶ್ವದಲ್ಲೇ ಎಲ್ಲಾ ಪಾತ್ರಗಳಿಗೂ ಹೊಂದಬಲ್ಲ ಏಕೈಕ ನಟ ಎಂದರೆ ರಾಜಕುಮಾರ್ ಅವರು. ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ನಟಿಸದ ಪಾತ್ರವೇ ಇಲ್ಲ. ಈ ರೀತಿ ಕಲೆಯಲ್ಲಿ ಮೇರು ಪರ್ವತ ಆಗಿದ್ದ ಡಾಕ್ಟರ್ ರಾಜಕುಮಾರ್ ಅವರು ಸರಳತೆಯಲ್ಲಿ ಅದಕ್ಕೂ ಮಿಗಿಲಾಗಿದ್ದರು.

ಒಮ್ಮೆ ಕೆಸಿಎನ್ ಚಂದ್ರು ಅವರು ಪಾರ್ವತಮ್ಮ ಅವರ ಸಹೋದರಿಯ ಪತಿ ಆಗಿದ್ದ ಶೇಖರ್ ಎನ್ನುವ ನಿರ್ಮಾಪಕರನ್ನು ಕಾಣಲು ಹೋಗಿದ್ದರಂತೆ. ಪಾರ್ವತಮ್ಮ ಅವರು ಕೂಡ ಅಲ್ಲೇ ಸಿಕ್ಕಿ ಒಳಗೆ ಇದ್ದಾರೆ ಹೋಗಿ ಎಂದು ರೂಮಿನ ದಾರಿ ತೋರಿಸಿದ್ದರಂತೆ. ಅವರನ್ನು ಕಾಣಲು ಹೋಗುತ್ತಿದ್ದ ಕೆಸಿಎನ್ ಚಂದ್ರು ಅವರು ಹಾಲಿನಲ್ಲಿ ಯಾರೋ ಚಾಪೆ ದಿಂಬು ಹಾಕಿಕೊಂಡು ಮಲಗಿರುವುದನ್ನು ನೋಡಿ ಅವರನ್ನು ದಾಟಿಕೊಂಡೆ ಹೋಗಿಬಿಟ್ಟಿದ್ದರಂತೆ.

ನಂತರ ರೂಮ್ ನಿಂದ ಆಚೆ ಬಂದಾಗ ತಿಳಿಯಿತು ಅಲ್ಲಿ ಮಲಗಿರುವುದು ಬೇರೆ ಯಾರು ಅಲ್ಲ ಕರ್ನಾಟಕ ರತ್ನ ಅಣ್ಣಾವ್ರು ಎಂದು ತಕ್ಷಣ ಮನಸ್ಸಿನಲ್ಲಿ ಈ ವ್ಯಕ್ತಿ ಆಚೆ ಬಂದರೆ ಇವರನ್ನು ನೋಡಲು ಲಕ್ಷ ಜನ ಸೇರುತ್ತಾರೆ. ಇವರೇನು ಇಷ್ಟು ಸಲೀಸಾಗಿ ನೆಲದ ಮೇಲೆ ಚಾಪೆ ದಿಂಬು ಹಾಕಿಕೊಂಡು ರಂಗನಾಥನ ರೀತಿ ಮಲಗಿದ್ದಾರಲ್ಲ ಎಂದುಕೊಂಡು ಅವರ ಸರಳತೆಯ ಆಳ ತಿಳಿದು ಕೈಮುಗಿದು ನಿಂತು ಬಿಟ್ಟರಂತೆ.

ಅದೇ ರೀತಿ ಅಣ್ಣಾವ್ರು ಅಭಿಮಾನಿಗಳೆ ಆಗಲಿ ಯಾರೇ ಆಗಲಿ ಎದುರಿಗಿದ್ದಾಗ ಅಥವಾ ಜೊತೆಗೆ ಯಾರಾದರೂ ಇದ್ದಾಗ ಧೂಮಪಾನ ಮಾಡುತ್ತಾ ಇರಲಿಲ್ಲವಂತೆ. ಯಾಕೆಂದರೆ ಅಭಿಮಾನಿಗಳನ್ನು ಕಂಡರೆ ಅಷ್ಟು ಗೌರವ ಕೊಡುತ್ತಿದ್ದರಂತೆ. ನನ್ನನ್ನು ಅವರೆಲ್ಲರೂ ಆಸ್ಥಾನದಲ್ಲಿ ಇಟ್ಟಿದ್ದಾರೆ ಅವರು ನನ್ನನ್ನು ಆದರ್ಶವಾಗಿ ತೆಗೆದುಕೊಂಡಿದ್ದಾರೆ ಅವರ ಎದುರಿಗೆ ನಾನು ಈ ರೀತಿ ನಡೆದುಕೊಳ್ಳಬಾರದು ಎನ್ನುತ್ತಿದ್ದರಂತೆ.

ಕೊನೆ ಕೊನೆಗೆ ಅವರು ಧೂಮಪಾನ ಚಟವನ್ನೇ ತ್ಯಜಿಸಿಬಿಟ್ಟರಂತೆ. ಈ ರೀತಿ ಅವರು ಎಲ್ಲೇ ಸ್ಟೇ ಆದರೂ ಹೋಟೆಲ್ ರೂಮ್ ಹಾಗೂ ಊಟದ ರೇಟ್ ತಿಳಿದಾಗ ಅಷ್ಟು ದುಬಾರಿಯಾದ ಸ್ಥಳ ನನಗೆ ಬೇಡ ನಾನು ಎಲ್ಲರಂತೆ ಸಾಮಾನ್ಯ ಸ್ಥಳದಲ್ಲೇ ಇರುತ್ತೇನೆ ಎಂದು ಹೇಳಿ ತಕ್ಷಣವೇ ಖಾಲಿ ಮಾಡಿ ಬಿಡುತ್ತಿದ್ದರಂತೆ. ಈ ರೀತಿ ಅನೇಕ ಘಟನೆಗಳು ಇವೆ ಎನ್ನುವುದನ್ನು ಈ ಇಂಟರ್ವ್ಯೂ ಅಲ್ಲಿ ಕೆಸಿಎನ್ ಚಂದ್ರು ಅವರು ಹೇಳಿಕೊಂಡಿದ್ದಾರೆ.

ಅವಳಿ ಮಕ್ಕಳ ಜೊತೆ ಮೊದಲ ವರ್ಷದ ಸಂಕ್ರಾಂತಿ ಹಬ್ಬ ಆಚರಿಸಿದ ನಟಿ ಅಮೂಲ್ಯ ಈ ಕ್ಯೂಟ್ ವಿಡಿಯೋ ನೋಡಿ.

 

ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಬಾಲ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡು ನಂತರ ಈಗ ನಾಯಕ ನಟಿಯಾಗಿ ಸಕ್ರಿಯರಾಗಿದ್ದಾರೆ. ದರ್ಶನ್, ಸುದೀಪ್ ಮುಂತಾದವರ ಸಿನಿಮಾಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದ ಇವರು ಇಂದು ಕನ್ನಡದ ಸ್ಟಾರ್ ಹೀರೋಗಳಿಗೆ ನಾಯಕ ನಟಿಯಾಗಿ ಹೆಸರು ಮಾಡಿದ್ದಾರೆ. ಚೆಲುವಿನ ಚಿತ್ತಾರ ಎನ್ನುವ ಸಿನಿಮಾ ಮೂಲಕ ನಾಯಕಿಯಾದ ಇವರು ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅತ್ಯುತ್ತಮ ಪೇರ್ ಎನಿಸಿದ್ದಾರೆ.

ಗಣೇಶ್ ಅವರ ಜೊತೆ ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ಇವರಿಬ್ಬರದು ಕನ್ನಡ ಚಿತ್ರರಂಗದ ಯಶಸ್ವಿ ಜೋಡಿ ಆಗಿದೆ. ಜೊತೆಗೆ ಚಿರಂಜೀವಿ ಸರ್ಜಾ, ಪ್ರೇಮ್, ಅಜಯ್ ರಾವ್, ರಾಕಿಂಗ್ ಸ್ಟಾರ್ ಯಶ್, ದುನಿಯಾ ವಿಜಯ್ ಇನ್ನು ಮುಂತಾದ ಅನೇಕ ನಟರ ಜೊತೆ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಅಮೂಲ್ಯ ಅವರು ತಮ್ಮ ವೃತ್ತಿ ಜೀವನದ ಉದ್ದಕ್ಕೂ ಬರಿ ಯಶಸ್ಸನ್ನೇ ಕಂಡಿದ್ದಾರೆ ಅವರು ಮಾಡಿರುವ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ.

ಇಂಡಸ್ಟ್ರಿಯಲ್ಲಿ ಒಳ್ಳೆ ಸ್ಥಾನದಲ್ಲಿ ಇದ್ದಾಗಲೇ ವೈಯಕ್ತಿಕ ಜೀವನದ ಕಡೆ ಮುಖ ಮಾಡಿದ ಇವರು 2017ರಲ್ಲಿ ರಾಜಕೀಯ ಕುಟುಂಬ ಮೂಲದ ಮತ್ತು ಉದ್ಯಮಿ ಆಗಿರುವ ಜಗದೀಶ್ ರಾಮಚಂದ್ರ ಅವರನ್ನು ಕೈ ಹಿಡಿದಿದ್ದಾರೆ. ಈ ಮುದ್ದು ಜೋಡಿ ಇನ್ನೆರಡು ಮುದ್ದು ಮಕ್ಕಳನ್ನು ಪಡೆದಿದ್ದು ಅವಳಿ ಗಂಡು ಮಕ್ಕಳಿಗೆ ಅಥರ್ವ ಹಾಗೂ ಆಧವ್ ಎಂದು ನಾಮಕರಣ ಮಾಡಿದ್ದಾರೆ. ಕಳೆದ ವರ್ಷ ಶಿವರಾತ್ರಿ ಹಬ್ಬದಂದು ಅಮೂಲ್ಯ ಅವರು ಅವಳಿ ಗಂಡು ಮಕ್ಕಳಿಗೆ ಜನ್ಮ ಕೊಟ್ಟಿದ್ದರು. ವರ್ಷದಿಂದ ಅವರು ಸೋಶಿಯಲ್ ಮೀಡಿಯಾ ಗಳಲ್ಲಿ ತಮ್ಮ ಮಕ್ಕಳ ಬಗ್ಗೆ ವಿಷಯ ಹಂಚಿಕೊಳ್ಳುತ್ತಲೇ ಇದ್ದಾರೆ.

ಅಮೂಲ್ಯ ಅವರು ಮದುವೆಯಾದ ಬಳಿಕ ಯಾವ ಸಿನಿಮಾದಲ್ಲೂ ಕೂಡ ನಟಿಸಿಲ್ಲ. ಆದರೆ ಸೋಶಿಯಲ್ ಮೀಡಿಯಾ ಮೂಲಕ ಮತ್ತು ರಾಜಕೀಯ ಪ್ರಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ವರ್ಷ ಎಲ್ಲಾ ಹಬ್ಬಗಳಿಗೂ ಕೂಡ ಮಕ್ಕಳ ಜೊತೆ ಫೋಟೋ ಶೂಟ್ ಮಾಡಿಸಿಕೊಂಡು ಅವುಗಳನ್ನು ಅಪ್ಲೋಡ್ ಮಾಡುತ್ತಾ ಅಭಿಮಾನಿಗಳಿಗೆಲ್ಲರಿಗೂ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದ ಅವರು ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಕೂಡ ಅದೇ ರೀತಿ ಆಚರಿಸಿದ್ದರು.

ಇದೀಗ ಸಂಕ್ರಾಂತಿ ಸುಗ್ಗಿ ಸಂಭ್ರಮದ ಹಬ್ಬವನ್ನು ಕೂಡ ಮಕ್ಕಳ ಜೊತೆ ಹಳ್ಳಿ ಸೊಗಡಿನಲ್ಲಿ ಫೋಟೋ ಶೂಟ್, ಅದನ್ನು ಅಪ್ಲೋಡ್ ಮಾಡಿ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ. ಅವರು ಹಂಚಿಕೊಂಡಿರುವ ಈ ಫೋಟೋಗಳಲ್ಲಿ ಪತಿ ಜಗದೀಶ್ ರಾಮಚಂದ್ರ ಅವರು ಮತ್ತು ಅಮೂಲ್ಯ ಅವರು ಹಾಗೂ ಇವರಿಬ್ಬರ ಮುದ್ದು ಎರಡು ಗಂಡು ಮಕ್ಕಳು ಕಾಣಿಸುತ್ತಾರೆ. ಒಂದು ಫೋಟೋದಲ್ಲಿ ಪತಿಯ ತೋಳಿನಲ್ಲಿ ಒಂದು ಮಗು ಹೆಗಲ ಮೇಲೆ ಒಂದು ಮಗು ಇಟ್ಟು ಅಮೂಲ್ಯ ಪಕ್ಕದಲ್ಲಿ ನಿಂತಿದ್ದಾರೆ. ಮತ್ತೊಂದು ಫೋಟೋದಲ್ಲಿ ಕರುವಿನ ಮೇಲೆ ಮಗುವನ್ನು ಕೂರಿಸಿ ಫೋಟೋಶೂಟ್ ಮಾಡಿಸಿದ್ದಾರೆ.

ಗೋಲ್ಡನ್ ಕ್ವೀನ್ ಎಂದು ಖ್ಯಾತಿ ಹೊಂದಿರುವ ಅಮೂಲ್ಯ ಅವರು ಗೋಲ್ಡನ್ ಉಡುಗೆಯಲ್ಲಿ ಕಂಗೊಳಿಸುತ್ತಿದ್ದಾರೆ. ಟ್ರೆಡಿಶನಲ್ ಆಗಿ ಗೋಲ್ಡನ್ ಕಲರ್ ಚೂಡಿದಾರ್ ತೊಟ್ಟು ಮಕ್ಕಳಿಗೂ ಸಹ ಅದೇ ಗೋಲ್ಡನ್ ಬಣ್ಣದ ಟ್ರೇಡಿಷನ್ ಬಟ್ಟೆ ಹಾಕಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಮುದ್ದಾದ ಕುಟುಂಬಕ್ಕೆ ಕನ್ನಡಿಗರ ಆಶೀರ್ವಾದ ಸಿಗಲಿ ಇನ್ನೂ ಅಮೂಲ್ಯ ಅವರ ಅಭಿಮಾನಿಗಳು ಅವರನ್ನು ತೆರೆ ಮೇಲೆ ನೋಡಲು ಇಚ್ಚಿಸುತ್ತಿದ್ದಾರೆ ಅವರಿಗೆ ಸಿನಿಮಾಗಳಲ್ಲಿ ಇನ್ನಷ್ಟು ಭವಿಷ್ಯ ಸಿಗಲಿ ಎಂದು ಹಾರೈಸೋಣ.

ವಿಷ್ಣು ಸ-ಮಾ-ಧಿ ”ನೆಲಸಮ”, ಸ್ಮಾರಕ ನಿರ್ಮಾಣವಾಗುತ್ತಿದೆ ಎಂಬ ಖುಷಿಯಲ್ಲಿದ್ದ ವಿಷ್ಣು ಅಭಿಮಾನಿಗಳಿಗೆ ಬೇಸರದ ಸುದ್ದಿ.

 

ತೆರೆ ಮೇಲೆ ಸಾಹಸ ಸಿಂಹನಾಗಿ ಜಯ ಸಿಂಹನಾಗಿ ಯಜಮಾನನಾಗಿ ಕೋಟಿಗೊಬ್ಬನಾಗಿ ಯಶಸ್ಸು ಕಂಡಿದ್ದ ಅಭಿನವ ಭಾರ್ಗವ ವಿಷ್ಣು ದಾದಾ ವೈಯುಕ್ತಿಕ ಬದುಕಿನಲ್ಲಿ ಕಂಡಿದ್ದೆಲ್ಲಾ ಬರಿ ಕಷ್ಟವೇ. ಸಿನಿಮಾ ಇಂಡಸ್ಟ್ರಿಗೆ ಬಂದ ಮೇಲೂ ಕೂಡ ನಾನಾ ರೀತಿ ವಿವಾದಗಳನ್ನು ಎದುರಿಸಿದ, ಸಂಕಷ್ಟಗಳನ್ನು ಜಯಿಸಿದ ವಿಷ್ಣುವರ್ಧನ್(Vishnu Smaraka) ಅವರು ಸ-ತ್ತ ಮೇಲೂ ಕೂಡ ನೆಮ್ಮದಿ ಕಂಡಿಲ್ಲ ಎಂದೇ ಹೇಳಬಹುದು. ಯಾಕೆಂದರೆ ಅವರು ಸ-ತ್ತ ಮೇಲೆ ಅವರ ಸ.ಮಾ.ಧಿ ವಿಷಯದಲ್ಲಿ ಇನ್ನೂ ವಿವಾದ.

ಇದೆ ವಿಷ್ಣುವರ್ಧನ್(Vishnu Vardhan) ಅವರು ನಮ್ಮನ್ನೆಲ್ಲ ಆಗಲಿ 13 ವರ್ಷಗಳೇ ಕಳೆದಿವೆ, 13 ವರ್ಷಗಳಿಂದ ನಾಲ್ಕೈದು ಮಂದಿ ಮುಖ್ಯ ಮಂತ್ರಿಗಳಾಗಿದ್ದಾರೆ, ಕರ್ನಾಟಕದ ಮೂರು ಪಕ್ಷಗಳ ನಾಯಕರುಗಳ ಕೂಡ ಮಂತ್ರಿಗಳಾಗಿದ್ದಾರೆ ಆದರೂ ಸಹ ಸರ್ಕಾರದಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಡಲು ಆಗುತ್ತಿಲ್ಲ.

ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಅಭಿಮಾನ್ ಸ್ಟುಡಿಯೋದಲ್ಲಿ ಮಾಡಬೇಕು ಎನ್ನುವುದು ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಸೆ. ಯಾಕೆಂದರೆ ಬೆಂಗಳೂರಿನಲ್ಲಿಯೇ ವಿಷ್ಣುವರ್ಧನ್ ಅವರ ಪುಣ್ಯಭೂಮಿ ಇದ್ದರೆ ಅವರ ಅಭಿಮಾನಿಗಳು ಇಲ್ಲಿಗೆ ಬಂದು ಪೂಜೆ ಮಾಡಬಹುದು, ಸಮಯ ಕಳೆದು ಹೋಗಬಹುದು ಎನ್ನುವುದು ಕುಟುಂಬದವರ ಹಾಗೂ ಅಭಿಮಾನಿಗಳ ಇಚ್ಛೆ ಆದರೆ ಈ ಸ್ಥಳ ಬಾಲಣ್ಣ ಅವರ ಕುಟುಂಬಕ್ಕೆ ಸೇರಿದ್ದಾಗಿದೆ.

ಅದಕ್ಕಾಗಿ ಅವರು ಸ್ಥಳ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ ಆದರೆ ಹಿಂದೆ ಒಂದು ಸಮಯದಲ್ಲಿ 10 ಕುಂಟೆ ಜಾಗವನ್ನು ಕೊಡುವುದಾಗಿ ಒಪ್ಪಿಕೊಂಡು ಪತ್ರಕ್ಕೆ ಸಹಿ ಮಾಡಿದ್ದರಂತೆ. ಆದರೆ ಈಗ ಅದಕ್ಕೂ ಸಹ ತಕರಾರು ಎತ್ತಿದ್ದಾರೆ. ವಿಷ್ಣುವರ್ಧನ್ ಅವರ ಸ.ಮಾ.ಧಿ ಬಳಿ ಯಾರು ಸಹ ಬರುವುದಿಲ್ಲ ಮತ್ತು ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಅವರ ಸ್ಮಾರಕ ಇಲ್ಲಿ ಕಟ್ಟುವುದು ಇಷ್ಟವೇ ಇಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರಂತೆ.

ಈ ಜಾಗಕ್ಕೆ ಯಾರಾದರೂ ಬಂದರೆ ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಡುವುದಾಗಿ ಕೂಡ ಅವಾಜ್ ಹಾಕುತ್ತಿದ್ದಾರಂತೆ. ಇದರಿಂದ ರೊಚ್ಚಿ ಗೆದ್ದಿರುವ ವಿಷ್ಣುದಾದಾ ಅಭಿಮಾನಿ ಹಾಗೂ ಡಾಕ್ಟರ್ ವಿಷ್ಣುವರ್ಧನ್ ಸೇವಾ ಸಮಿತಿಯ ಅಧ್ಯಕ್ಷರು ಆಗಿರುವ ವೀರಕಪುತ್ರ ಶ್ರೀನಿವಾಸ್ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅವರು ಒಂದು ವಿಡಿಯೋ ಮಾಡಿ ಹರಿಬಿಟ್ಟು ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಅದೇನೆಂದರೆ ಬಾಲಣ್ಣ ಅವರಿಗೆ ಈ ಆಸ್ತಿ ಪಿತ್ರಾರ್ಜಿತವಾಗಿ ಬಂದಿಲ್ಲ, ಅದನ್ನು ಸಹ ಸರ್ಕಾರದವರೇ ಕೊಟ್ಟಿರುವುದು. ಬಾಲಣ್ಣ ಕುಟುಂಬದ ಕಡೆಯವರು ಬೇಕೆಂದಲೇ ಈ ರೀತಿ ಕಿರಿಕ್ ಮಾಡುತ್ತಿದ್ದಾರೆ. ನಮಗೆಲ್ಲರಿಗೂ ವಿಷ್ಣು ಸ್ಮಾರಕ ಇಲ್ಲೇ ಆಗಬೇಕು ಎನ್ನುವ ಇಚ್ಛೆ ಇದೆ. ಅಕಸ್ಮಾತ್ ಅವರ ಸಮಾಧಿಯನ್ನು ತೆರೆವು ಮಾಡುತ್ತಾರೆ ಎಂದು ಹರಿದಾಡುತ್ತಿರುವ ವಿಷಯ ನಿಜ ಆದರೆ ಅಭಿಮಾನಿಗಳೆಲ್ಲ ಸೇರಿ ಇಲ್ಲೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಷಯದ ಕುರಿತು ವಿಷ್ಣುವರ್ಧನ್ ಅವರ ಅಳಿಯ ಆಗಿರುವ ಅನಿರುದ್ಧ್ ಅವರು ಸಹ ವಿಡಿಯೋ ಒಂದನ್ನು ಮಾಡಿ ವಿಷ್ಣುವರ್ಧನ್ ಅವರ ಸ.ಮಾ.ಧಿ.ಯನ್ನು ತೆರೆವು ಮಾಡುತ್ತೇವೆ ಎಂದು ಮಾತನಾಡುತ್ತಿದ್ದಾರೆ. ನಮ್ಮ ಕುಟುಂಬದವರಿಗೆ ಅಭಿಮಾನ್ ಸ್ಟುಡಿಯೋದಲ್ಲಿಯೇ ಅವರ ಪುಣ್ಯಭೂಮಿ ಆಗಬೇಕು ಎಂದು ಆಸೆ ಇರುವುದು, ಈ ವಿಷಯದಲ್ಲಿ ನಾವು ಎಂದಿಗೂ ಅಭಿಮಾನಿಗಳ ಜೊತೆ ಇರುತ್ತೇವೆ ಎಂದು ಮಾತನಾಡಿದ್ದಾರೆ.

ಸಿನಿಮಾಗಳಲ್ಲಿ ಸ್ಟಾರ್ ಆಗಿದ್ದರು ಕೂಡ ಸಾ.ವಿ.ನ.ಲ್ಲೂ ನೆಮ್ಮದಿ ಕಾಣದ ಈ ದುರಂತ ನಾಯಕನ ಸ.ಮಾ.ಧಿ ವಿಚಾರದ ವಿವಾದ ಆದಷ್ಟು ಬೇಗ ಇತ್ಯಾರ್ಥವಾಗಲಿ, ಈ ವರ್ಷವಾದರೂ ಅವರ ಸ್ಮಾರಕ ಅಲ್ಲೇ ಆಗಲಿ ಎಂದು ಕನ್ನಾಡಿಭಿಮಾನಿಗಳೆಲ್ಲಾ ಕೇಳಿಕೊಳ್ಳೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ಉತ್ತರಿಸಿ.

ಗಂಗಮ್ಮ ಕಳೆದು ಹೋಗಿದ್ದಾಳೆ ಅಂತ ಕಣ್ಣಿರಿಟ್ಟ ಸುಧಾರಾಣಿ ಇಂದು ಲೈವ್ ಬಂದು ಹಬ್ಬದ ದಿನವೇ ಗಂಗಮ್ಮ ಮರಳಿ ಸಿಕ್ಕಿದ್ದಾಳೆ ಎಂದು ಖುಷಿ ಪಟ್ಟಿದ್ದಾರೆ ಅಷ್ಟಕ್ಕೂ ಈ ಗಂಗಮ್ಮ ಯಾರು ಗೊತ್ತ.?

 

ಕನ್ನಡದ ಹಿರಿಯ ನಟಿ ಸುಧಾರಾಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿ ಇದ್ದಾರೆ. ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಹೊಸ ಸಿನಿಮಾ ಅಥವಾ ಧಾರಾವಾಹಿ ಶೂಟಿಂಗ್ ಬಗ್ಗೆ ಹಬ್ಬ ಆಚರಣೆಯ ವಿಚಾರದ ಬಗ್ಗೆ ಫೋಟೋ ಹಂಚಿಕೊಂಡು ಖುಷಿ ಮತ್ತು ದುಃಖ ಎರಡನ್ನು ತಮ್ಮ ಇಂಟರ್ನೆಟ್ ಫ್ರೆಂಡ್ ಜೊತೆ ಹಂಚಿಕೊಳ್ಳುತ್ತಾರೆ.

ಸದಾ ಸಂತೋಷ ಸುದ್ದಿ ಹಂಚಿಕೊಳ್ಳುತ್ತಿದ್ದ ಸುಧಾರಾಣಿ ಅವರು ಮೊನ್ನೆ ಬಹಳ ಬೇಸರದಿಂದ ಫೇಸ್ಬುಕ್ ಲೈವ್ ಬಂದಿದ್ದರು. ಕಾರಣ ಇಷ್ಟೇ ಅವರ ಮನೆಯ ಗಂಗಮ್ಮ ಎನ್ನುವ ಮುದ್ದಿನ ನಾಯಿಯು ಕಾಣೆ ಆಗಿತ್ತು ಇದರ ಬಗ್ಗೆ ಎಲ್ಲೇ ವಿಚಾರಿಸಿದರೂ ಮಾಹಿತಿ ಸಿಗುತ್ತಿರಲಿಲ್ಲ ಪೊಲೀಸ್ ಕಂಪ್ಲೇಂಟ್ ಕೊಟ್ಟರು ಪ್ರಯೋಜನವಾಗುತ್ತಿಲ್ಲ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದರು.

ದಯವಿಟ್ಟು ಬಿಬಿಎಂಪಿ ಸಿಬ್ಬಂದಿ ಅಥವಾ ಬೆಂಗಳೂರಿನ ನಾಗರಿಕರು ಅಥವಾ ಯಾರೇ ಆದರೂ ಸಹ ನಮ್ಮ ಗಂಗಮ್ಮ ನ ಸುಳಿವು ಸಿಕ್ಕರೆ ದಯವಿಟ್ಟು ತಿಳಿಸಿ, ನಮಗೆ ಸಂಪರ್ಕಿಸಿ ಎಂದು ಗಂಗಮ್ಮನ ಫೋಟೋ ಕೂಡ ಹಂಚಿಕೊಂಡಿದ್ದರು. ಇದು ಆ ಸಮಯದಲ್ಲಿ ವರ್ಕೌಟ್ ಆಗುತ್ತದಾ? ಇಲ್ಲವಾ ಎಂದು ಅನುಮಾನದಲ್ಲಿಯೇ ಇತ್ತು. ಆದರೆ ಇದೀಗ ಅವರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದು.

ಈ ವಿಡಿಯೋ ನೋಡಿದ ವ್ಯಕ್ತಿ ಒಬ್ಬರು ಗಂಗಮ್ಮ ನಾಯಿಯನ್ನು ಗುರುತಿಸಿ, ಸೇಫ್ ಆಗಿ ತಂದು ಸುಧಾರಾಣಿ ಅವರ ಬಳಿ ತಲುಪಿಸಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಲೈವ್ ಬಂದ ಸುಧಾರಾಣಿ ಅವರು ತಮ್ಮ ನಾಯಿಯ ಜೊತೆಯೇ ಕೂತು ವಿಡಿಯೋ ಮಾಡಿದ್ದಾರೆ. ನಮ್ಮ ಮನೆಗೆ ನನ್ನ ಮುದ್ದಿನ ನಾಯಿ ಬಂದಿದೆ ಕೊನೆಗೂ ನನ್ನ ಗಂಗಮ್ಮ ಸಿಕ್ಕೇಬಿಟ್ಟರು. ಇದಕ್ಕೆ ಕಾರಣರಾದ ಅಮರ್ ದಿಪ್ ಸಿಂಗ್, ಶಬ್ಬೀರ್ ಪಾಷ ಮತ್ತು ಪೂಜಾ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ನಾನು ಮೊನ್ನೆ ಬಂದ ಲೈವಿನಿಂದ ಪ್ರಯೋಜನ ಆಯಿತು ನಾನು ಹಾಕಿದ್ದ ಫೋಟೋ ನೋಡಿ ಅಮರದೀಪ್ ಸಿಂಗ್ ಅನ್ನುವವರು ಗಂಗಮ್ಮನನ್ನು ಗುರುತಿಸಿ ತಮ್ಮ ಸ್ನೇಹಿತರಿಗೂ ತೋರಿಸಿದ್ದಾರೆ. ಎಲ್ಲರೂ ಕಂಫರ್ಮ್ ಮಾಡಿದ ಬಳಿಕ ಕೆಲಸದಲ್ಲಿದ್ದರೂ ಸಹ ಮ್ಯಾನೇಜರ್ ಬಳಿ ಅನುಮತಿ ಕೇಳಿ ಗಂಗಮ್ಮ ಮತ್ತೆ ಮಿಸ್ ಆಗಬಾರದು ಎಂದು ಗಂಗಮ್ಮ ಅನ್ನು ಒಂದು ಕಡೆ ಹಾಕಿ ಕಾಯುತ್ತಾ ಕುಳಿತಿದ್ದರು.

ಇಂದು ನನಗೆ ಗಂಗಮ್ಮ ಸಿಗಲು ಬಹಳ ಸಹಾಯ ಮಾಡಿದರು ಅವರು ನನಗೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕಿಸಿ ಮಾಹಿತಿ ತಿಳಿಸಲು ಪ್ರಯತ್ನಿಸಿದರು. ನಾನು ಅದಕ್ಕೆ ಉತ್ತರಿಸುವ ಮುನ್ನವೇ ಅದನ್ನು ಗಮನಿಸುವ ಮೊದಲೇ ನನ್ನ ಪ್ರೀತಿಯ ಪೂಜಾ ಇದಕ್ಕೆಲ್ಲ ನೆರವಾಗಿ ಇಂದು ಗಂಗಮ್ಮ ಮನೆಸೇರಲು ಕಾರಣಕರ್ತರಾದರು. ಇವರೆಲ್ಲರ ಜೊತೆ ನನ್ನ ಈ ಸಮಸ್ಯೆಗೆ ನನ್ನ ಇನ್ಸ್ಟಾ ಫ್ಯಾಮಿಲಿ ಎಲ್ಲರೂ ಸಹ ಪ್ರಾರ್ಥಿಸಿದ್ದಾರೆ.

ಎಲ್ಲರಿಗೂ ಸಹ ಕೋಟಿ ಕೋಟಿ ಧನ್ಯವಾದಗಳು ಎಂದು ಸುಧಾರಾಣಿ ಅವರು ಇಂದು ಸಂತೋಷದಿಂದ ಮತ್ತೊಮ್ಮೆ ವಿಡಿಯೋ ಮಾಡಿ ಹಾಕಿದ್ದಾರೆ. ಸೆಲೆಬ್ರಿಟಿಗಳಲ್ಲಿ ಬಹುತೇಕರು ಪೆಟ್ ಪ್ರಿಯರು. ಅದರಲ್ಲೂ ನಟಿಯರಂತೂ ನಾಯಿ ಮರಿಗಳಿಗೆ ಬಹಳ ಹತ್ತಿರವಾಗಿರುತ್ತಾರೆ. ನಟಿ ರಮ್ಯಾ, ಸುಧಾರಾಣಿ, ದೀಪಿಕಾ ದಾಸ್, ರಾಪಿಡ್ ರಶ್ಮಿ ಈ ರೀತಿ ನಾಯಿ ಮರಿಗಳನ್ನು ಬಹಳ ಹಚ್ಚಿಕೊಳ್ಳುವ ಸೆಲೆಬ್ರಿಟಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಅವರು ಅದನ್ನು ಪ್ರಾಣಿ ಎಂದು ನೋಡದೆ ತಮ್ಮ ಕುಟುಂಬದ ಸದಸ್ಯರು ಎಂದು ಕಂಡಿರುತ್ತಾರೆ. ಅವರನ್ನು ಕಳೆದುಕೊಳ್ಳುವ ದುಃಖ ಬರಿ ಮಾತಲ್ಲಿ ವಿವರಿಸಲಾಗದು ಇಂದು ಗಂಗಮ್ಮ ಸೇಫ್ ಆಗಿ ಸುಧಾರಾಣಿ ಅವರ ಮನೆ ಸೇರಿರುವುದು ಎಲ್ಲರಿಗೂ ಸಮಾಧಾನ ತಂದಿದೆ.

ವಿಜಯ್ ಜೊತೆ ಒಂದು ಬಾರಿ ಸೆ-ಕ್ಸ್ ಮಾಡಬೇಕು, ಮಾಧ್ಯಮದ ಮುಂದೆ ನಾಚಿಕೆ ಬಿಟ್ಟು ಮನದಾಸೆ ಹೊರ ಹಾಕಿದ ನಟಿ ರೇಷ್ಮಾ.

 

ಕೆಲವು ತಾರೆಗಳು ಏನೇ ಮಾತನಾಡಿದರು ಅದು ಟ್ರೋಲ್ ಆಗುತ್ತದೆ. ಆದರೆ ಕೆಲವರು ಕಂಟೆಂಟ್ ಆಗಲಿ ಅಂತಲೇ ಹೇಳಿಕೆಗಳನ್ನು ಕೊಟ್ಟುಬಿಡುತ್ತಾರೆ. ಈ ರೀತಿ ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರಾಗಿರುವ ತಮಿಳಿನ ಕಲಾವಿದೆ ರೇಷ್ಮಾ ಪಸಲುಪೇಟೆ(Reshma Pasalupetel) ಅವರು ಮತ್ತೊಮ್ಮೆ ಅದೇ ರೀತಿಯ ಸ್ಟೇಟ್ಮೆಂಟ್ ಒಂದನ್ನು ಕೊಟ್ಟಿದ್ದಾರೆ. ಈ ಬಾರಿ ಅವರು ಹೇಳಿರುವ ಈ ಸ್ಟೇಟ್ಮೆಂಟ್ ಕೇಳಿ ಇಡೀ ಚಿತ್ರರಂಗವೇ ತಲ್ಲಣಗೊಂಡಿದೆ. ರೇಷ್ಮಾ ಪಸಲುಪೇಟೆ ಅವರ ಸದ್ಯಕ್ಕೆ ತಮಿಳಿನ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿಯಲ್ಲಿ ಪಾತ್ರ ಮಾಡುತ್ತಿದ್ದಾರೆ.

ವಿಜಯ್ ಟಿವಿ ಅಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಗೆ ಕಿರತೆರು ಪ್ರೇಕ್ಷಕರ ಫಿದಾ ಆಗಿದ್ದು, ಹಲವು ಮಂದಿ ಈಗ ಈ ಧಾರಾವಾಹಿಗೆ ಅಭಿಮಾನಿಗಳಾಗಿದ್ದಾರೆ. ಈ ಧಾರಾವಾಹಿಯು ರೇಷ್ಮ ಅವರಿಗೂ ಕೂಡ ಬಹಳ ಹೆಸರು ತಂದು ಕೊಟ್ಟಿದೆ. ಈ ಧಾರಾವಾಹಿಯಲ್ಲಿ ಪಾತ್ರ ಮಾಡುವ ಮೊದಲೇ ರೇಷ್ಮೆ ಪಸಲುಪೇಟೆ ಅವರು ನಿರೂಪಕಿಯಾಗಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿದ್ದರು. ಜೊತೆಗೆ ಸಿನಿಮಾ ರಂಗದಲ್ಲೂ ಕೂಡ ಮಿಂಚುವ ಕನಸು ಕಂಡಿದ್ದ ಇವರು ಅಲ್ಲೂ ಅದೃಷ್ಟ ಪರೀಕ್ಷೆಕೊಂಡಿದ್ದರು.

ಆದರೆ ಹಿರಿತೆರೆಗಿಂತ ಈಕೆಗೆ ಕಿರುತೆರೆಯೇ ಅದೃಷ್ಟದಾಯಕವಾಗಿದ್ದು ಹೆಚ್ಚಾಗಿ ಕಿರುತೆರೆಯಲ್ಲಿ ಸಕ್ರಿಯವಾಗಿರುತ್ತಾರೆ. ತಮಿಳಿನ ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಕೂಡ ಕಂಟೆಸ್ಟೆಂಟ್ ಆಗಿ ಭಾಗವಹಿಸಿದ್ದ ಇವರು ಬಿಗ್ ಬಾಸ್ ಇಂದ ಬಂದ ಮೇಲೆ ಇನ್ನು ಹೆಚ್ಚು ಫೇಮಸ್ ಆದರು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಕೂಡ ಅಲ್ಲೂ ಸಹ ಸದಾ ವಿವಾದಗಳಿಂದ ಹಾಗೂ ಕಿರಿಕ್ ಗಳಿಂದಲೇ ಈಕೆ ಹೈಲೈಟ್ ಆಗಿದ್ದರು ಈಗ ಬಿಗ್ ಬಾಸ್ ರೇಷ್ಮಾ ಪಸಲ್ ಪೇಟೆಯಿಂದ ಇವರು ಖ್ಯಾತಿಯಾಗಿದ್ದಾರೆ.

ರೇಷ್ಮಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯವಾಗಿದ್ದಾರೆ ಇವರ instagram ಖಾತೆಯಲ್ಲಿ ಆಗಾಗ ಹೊಸ ಫೋಟೋ ಅಪ್ಲೋಡ್ ಮಾಡುತ್ತಲೇ ಇರುಲ ಇವರ ಬೋಲ್ಡ್ ಲುಕ್ ಗೆ ಲಕ್ಷಾಂತರ ಸಂಖ್ಯೆಯಲ್ಲಿ ಫಾಲವಸ್ಗಳು ಇದ್ದಾರೆ. ಪಾತ್ರಗಳಲ್ಲಿ ಮಾತ್ರವಲ್ಲದೆ ಮಾತುಗಳಲ್ಲೂ ಸಹ ಈಕೆ ಬಹಳ ಬೋಲ್ಡ್ ಆಗಿದ್ದು ಈಗಾಗಲೇ ನಾನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಾರೆ.

ಈ ಹಿಂದೆ ಈಕೆ ತಮಿಳು ತಮಿಳ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಾತುಗಳಿಂದ ಟ್ರೋಲ್ ಆಗಿದ್ದರು. ಈಗ ವಯಸ್ಕರ ಶೋ ಎನಿರುವ ಪಾಡ್ ಕಾಸ್ಟ್ ಅಲ್ಲಿ ಕೂಡ ಅದೇ ರೀತಿ ಬೋಲ್ಡ್ ಮಾತುಗಳನ್ನಾಡಿ ವೈರಲ್ ಆಗಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿರೂಪಕರು ಸಾಕಷ್ಟು ಪ್ರಶ್ನೆಗಳನ್ನು ರೇಷ್ಮಾ ಅವರಿಗೆ ಕೇಳಿದ್ದರು ಅವೆಲ್ಲಕ್ಕೂ ಉತ್ತರ ಕೊಡುತ್ತಾ ಬಂದ ರೇಷ್ಮಾ ಅವರು ಕೊನೆಯಲ್ಲಿ ಪ್ರಶ್ನೆ ಒಂದನ್ನು ಎದುರಿಸುತ್ತಾರೆ.

ಆ ಪ್ರಶ್ನೆ ಈ ರೀತಿ ಇತ್ತು ಗನ್ ಪಾಯಿಂಟ್ ಇಟ್ಟು ಸೆ-ಕ್ಸ್ ಮಾಡುತ್ತೀರಾ ಎಂದು ಈಕೆಗೆ ಪ್ರಶ್ನಿಸಲಾಗಿತ್ತು, ಅದಕ್ಕೆ ಆಕೆ ಉತ್ತರ ನೀಡದೆ ಮೌನವಾಗಿದ್ದರು. ಆಗ ಪ್ರಶ್ನೆ ಬದಲಾಯಿಸಿ ಯಾವ ನಟನ ಜೊತೆ ಸೆಕ್ಸ್ ಮಾಡಲು ಇಷ್ಟಪಡುತ್ತೀರಾ ಅಂದಿದ್ದಕ್ಕೆ ತಡ ಮಾಡದೆ ವಿಜಯ್ ದಳಪತಿ(Vijay Thalapathy) ಅವರ ಹೆಸರು ಹೇಳಿದ್ದಾರೆ ಈ ಮಾತುಗಳು ಹೇಳಿ ಈಗ ತಮಿಳು ಚಿತ್ರರಂಗ ಶಾ-ಕ್ ಆಗಿದೆ. ಎಲ್ಲರೂ ಈಕೆಯನ್ನು ದಿವಂಗತ ಸಿಲ್ಕ್ ಸ್ಮಿತಾ ಮತ್ತು ಮೊಘಲ್ ಕಿಮ್ ಕರ್ದಾಶಿಯನ್ ಅವರ ಜೊತೆ ಹೋಲಿಕೆ ಮಾಡುತ್ತಾರಂತೆ ಇದನ್ನು ಸಹ ಆ ಇಂಟರ್ವ್ಯೂ ಅಲ್ಲಿ ಮಾತಿನ ಮಧ್ಯೆ ಅವರು ಹೇಳಿಕೊಂಡಿದ್ದಾರೆ. ಈಗ ಇವರು ಸಿಲ್ಕ್ ಸ್ಮಿತಾ ಅವರಂತೆಯೇ ಸಖತ್ ಬೋಲ್ಡ್ ನಟಿ ಎನಿಸಿಕೊಂಡಿದ್ದಾರೆ.