Home Blog Page 252

ಕ್ರಾಂತಿ ಸಿನಿಮಾದ ಶೇಕ್ ಇಟ್ ಪುಷ್ಪವತಿ ಹಾಡಿಗೆ ಡ್ಯಾನ್ಸ್ ಮಾಡಲು ಹೋಗಿ ಮುಗ್ಗರಿಸಿ ಬಿದ್ದ ನಟಿ ಸಂಜನಾ ಗಿರ್ಲಾನಿ ಈ ವೈರಲ್ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗ್ತಿರಾ.

 

ಜನವರಿ 26ರಂದು ರಿಲೀಸ್ ಗೆ ರೆಡಿಯಾಗಿರುವ ಈ ವರ್ಷದ ಮೊದಲ ಸೂಪರ್ ಸ್ಟಾರ್ ಸಿನಿಮಾ ದರ್ಶನ್ ಅವರ ಕ್ರಾಂತಿ ಸಿನಿಮಾದ ಕ್ರೇಜಿ ಈಗಾಗಲೇ ಕರ್ನಾಟಕದಾದ್ಯಂತ ಬಾರಿ ಜೋರಾಗಿದ್ದು ಹಾಡುಗಳಂತೂ ಬಹಳ ಟ್ರೆಂಡಿಂಗ್ ಆಗಿದೆ. ಬೊಂಬೆ ಬೊಂಬೆ ಹಾಡು ಹಾಗೂ ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಚ್ಚು ಜನ ರೀಲ್ಸ್ ಮಾಡುತ್ತಿದ್ದಾರೆ ಅದರಲ್ಲೂ ಪುಷ್ಪವತಿ ಹಾಡಿಗೆ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಈ ಸಾಲಿನಲ್ಲಿ ಸೆಲೆಬ್ರಿಗಳು ಕೂಡ ಸೇರಿದ್ದಾರೆ.

ಈಗಾಗಲೇ ಪ್ರೇಮ್ ಪುತ್ರಿ ಅಮೃತಾ ಅವರು ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗಿದೆ, ರಚಿತಾ ರಾಮ್ ಅವರು ಈ ಸಿನಿಮಾದ ನಾಯಕಿ ಆಗಿದ್ದರು ಈ ಹಾಡಿನಲ್ಲಿ ಇರಲಿಲ್ಲ ಆದರೂ ಕೂಡ ರಚಿತಾ ರಾಮ್ ಅವರು ಪುಷ್ಪವತಿ ಹಾಡಿಗೆ ರೀಲ್ಸ್ ಗಾಗಿ ಹೆಜ್ಜೆ ಹಾಕಿದ್ದಾರೆ. ಇದೀಗ ಸಂಜನಾ ಗರ್ಲಾನಿ ಅವರು ಕೂಡ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ.

ಸಂಜನ ಗರ್ಲಾನಿ ಅವರು ಗಂಡ ಹೆಂಡತಿ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿ ಕೊಟ್ಟು ಹಲವು ವರ್ಷಗಳವರೆಗೆ ನಾಯಕಿಯಾಗಿ, ಸಹಕಲಾವಿದೆಯಾಗಿ, ಅತಿಥಿ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಚಂದನವನದಲ್ಲಿ ಬಿಝಿ ಆಗಿದ್ದರು. ಯಾವಾಗ ಅವಕಾಶಗಳ ಕೊರತೆ ಕಂಡುಬಂತು ಬೇರೆ ಭಾಷೆಗಳನ್ನು ಕಡೆ ಮುಖ ಮಾಡಿದರು. ಇದಾದ ಬಳಿಕ ಅವರ ಮೇಲೆ ಡ್ರ-ಗ್ಸ್ ಆರೋಪ ಬಂದು ಜೈ-ಲು ಸೇರಿದ್ದ ಘಟನೆಯು ನಡೆಯಿತು.

ಇದೆಲ್ಲದರಿಂದ ಸಂಜನಾ ಗಿರ್ಲಾನಿ ಸುಧಾರಿಸಿಕೊಂಡು ಉದ್ಯಮಿ ಒಬ್ಬರ ಕೈ ಹಿಡಿದು ಇತ್ತೀಚೆಗಷ್ಟೇ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ . ಸೋಶಿಯಲ್ ಮೀಡಿಯಾಲಿ ಬಹಳ ಆಕ್ಟಿವ್ ಆಗಿರುವ ಸಂಜನ ಅವರು ತಮ್ಮ ಹೊಸ ಹೊಸ ಫೋಟೋ ಶೂಟ್ ಮತ್ತು ವಿಶೇಷ ಕ್ಷಣಗಳ ಹಾಗೂ ಮಗುವಿನ ಜೊತೆಗಿನ ವಿಡಿಯೋಗಳು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಈಗ ರೀಲ್ಸ್ ಮಾಡುವ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ. ಕ್ರಾಂತಿ ಸಿನಿಮಾದ ಶೇಕ್ ಇಟ್ ಪುಷ್ಪವತಿ ಹಾಡಿಗೆ ಸಂಜನ ರೀಲ್ಸ್ ಮಾಡಿದ್ದಾರೆ. ಆದರೆ ರೀಲ್ಸ್ ಮಾಡುವ ಮುನ್ನ ಅವರು ಜಂಪ್ ಮಾಡಲು ಹೋಗಿ ಮುಗ್ಗರಿಸಿ ಬಿದ್ದಿದ್ದಾರೆ ಆದರೆ ಅದನ್ನು ಎಡಿಟ್ ಮಾಡದೆ ಹಾಗೆಯೇ ಶೇರ್ ಮಾಡಿರುವ ಕಾರಣ ಈಗ ಆ ವಿಡಿಯೋ ಬಹಳ ವೈರಲ್ ಆಗುತ್ತಿದೆ.

ಮೊದಲಿಗೆ ಬಿದ್ದ ಸಂಜನಾ ಅವರು ನಂತರ ಅವರೇ ಎದ್ದು ಈ ಹಾಡಿಗೆ ಹೆಜ್ಜೆ ಹಾಕಿ ಸಿನಿಮಾದಲ್ಲಿರುವ ಸಿಗ್ನೇಚರ್ ಸ್ಟೆಪ್ ಕೂಡ ಕಾಪಿ ಮಾಡಿದ್ದಾರೆ. ಈ ರೀತಿ ರಿಲೀಸ್ ಆಗುವ ಚಿತ್ರಕ್ಕೆ ರೀಲ್ಸ್ ಮಾಡುವ ಟ್ರೆಂಡ್ ಶುರುವಾಗಿದ್ದು ರಕ್ಷಿತ್ ಶೆಟ್ಟಿ ಇಂದ ಹೇಳಬಹುದು. ಯಾಕೆಂದರೆ ಅವರು ಮೊದಲ ಬಾರಿಗೆ ಅವರ ಪಾನ್ ಇಂಡಿಯಾ ಸಿನಿಮಾ ಆಗಿದ್ದ ಶ್ರೀಮನ್ನಾರಾಯಣ ಸಿನಿಮಾದ ಇದು ಚರಿತ್ರೆ ಸೃಷ್ಟಿ ಅವತಾರ ಹಾಡಿಗೆ ಟಿಕ್ಟಾಕ್ ಮಾಡಿ ಹರಿ ಬಿಟ್ಟಿದ್ದರು.

ನಂತರ ಸಿನಿಮಾದ ಕಲಾವಿದರುಗಳೆಲ್ಲಾ ಹಾಗೇ ಮಾಡಿದರು, ಅದು ಟ್ರೆಂಡ್ ಆಗಿ ಟಿಕ್ ಟಾಕ್ ಮಾಡುವವರೆಲ್ಲ ಅದೇ ಸ್ಟೆಪ್ಗಳನ್ನು ಫಾಲೋ ಮಾಡಿದರು. ನಂತರ ಕಳೆದ ವರ್ಷ ಸುದೀಪ್ ಅವರು ಸಹ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳಿಗೂ ಅವರವರ ಸ್ಟೈಲ್ ನಲ್ಲಿ ಮಾಡುವಂತೆ ಹೇಳಿದ್ದರು. ಆದರೆ ಎಲ್ಲರೂ ಅವರ ಸಿಗ್ನೇಚರ್ ಸ್ಟೆಪ್ಗಳನ್ನು ಫಾಲೋ ಮಾಡಿ ಅದನ್ನು ಟ್ರೈ ಮಾಡಿದ್ದರು. ಇದೀಗ ದರ್ಶನ್ ಅವರ ಪುಷ್ಪವತಿ ಹಾಡಿಗೂ ಕೂಡ ಅದೇ ಸಂಪ್ರದಾಯ ಮುಂದುವರಿದಿದ್ದು ಕಾಮನ್ ಮ್ಯಾನ್ ಹಾಗೂ ಸೆಲೆಬ್ರಿಟಿಗಳು ಕೂಡ ಪುಷ್ಪವತಿ ಹಾಡಿಗೆ ರೀಲ್ಸ್ ಮಾಡಲು ಖುಷಿ ಪಡುತ್ತಿದ್ದಾರೆ.

ನನ್ನಷ್ಟು ಬ್ಲಾಕ್ ಮಾರ್ಕ್ ಯಾರೋ ನಟ ಬೇರೆ ಯಾರು ಇಲ್ಲ, ಅದು ನನ್ನ ಬ್ಯಾಡ್ ಲುಕ್ಕೋ or ನನ್ನ ವಿರುದ್ಧ ಬೇರೆ ಅವರು ಮಾಡ್ತ ಇರೋ ಷಡ್ಯಂತರನೋ ಏನೋ ಗೊತ್ತಿಲ್ಲ ಎಂದು ಭಾವುಕರಾದ ದರ್ಶನ್

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿಗೆ ತಕ್ಕಂತೆ ಚಾಲೆಂಜ್ ಮಾಡಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹಠಕ್ಕೆ ಬಿದ್ದು ಅಂದುಕೊಂಡಿದ್ದನ್ನು ಸಾಧಿಸಿ ಇಂದು ಬಾಕ್ಸ್ ಆಫೀಸ್ ಸುಲ್ತಾನ ಆಗಿರುವವರು. ಜೊತೆಗೆ ಸೆಲೆಬ್ರಿಟಿಗಳ ಪ್ರೀತಿಯ ದಚ್ಚು, ಡಿ ಬಾಸ್ ಆಗಿ ಮೆರೆಯುತ್ತಾ ಇರುವ ಇವರು ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬೇರೆ ಯಾರಿಗೂ ಇಲ್ಲದಷ್ಟು ದೊಡ್ಡ ಫ್ಯಾನ್ ಬೇಸ್ ಹೊಂದಿರುವ ಖ್ಯಾತಿಗೆ ಗುರಿಯಾಗಿದ್ದಾರೆ.

ಈಗ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬ ದರ್ಶನ್ ಅಭಿಮಾನಿಗಳು ಕ್ರಾಂತಿ ಸಿನಿಮಾದ ಬಿಡುಗಡೆಗಾಗಿ ಕ್ಷಣಗಣನೆ ಮಾಡುತ್ತಿದ್ದಾರೆ. ಜನವರಿ 26ರಂದು ಕ್ರಾಂತಿ ಸಿನಿಮಾ ಅದ್ದೂರಿಯಾಗಿ ತೆರೆ ಮೇಲೆ ಅಪ್ಪಳಿಸಲಿದೆ, ಅದರ ಪ್ರಯುಕ್ತ ಪ್ರಚಾರ ಕಾರ್ಯದಲ್ಲಿ ತೊಡಗಿರುವ ದರ್ಶನ್ ಅವರು ಈಗಾಗಲೇ ಹಲವು ಸಂದರ್ಶನಗಳನ್ನು ಕೊಟ್ಟಿದ್ದಾರೆ.

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲೂ ಕೂಡ ದರ್ಶನ್ ಅವರು ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟಿದ್ದು ಅವರಿಗೆ ತಮ್ಮ ತೋಟವನ್ನು ಕೂಡ ಪರಿಚಯಿಸಿ ಕೊಟ್ಟಿದ್ದಾರೆ. ಮೈಸೂರಿನ ಬಳಿ ವಿನೀಶ್ ದರ್ಶನ್ ಹೆಸರಿನಲ್ಲಿ ಫಾರ್ಮ್ ಮಾಡಿರುವ ದರ್ಶನ್ ರವರು ಶೂಟಿಂಗ್ ಇಲ್ಲದ ಸಮಯದಲ್ಲಿ ಅತಿ ಹೆಚ್ಚು ಅಲ್ಲೇ ಸಮಯ ಕಳೆಯುತ್ತಾರೆ.

ಈಗ ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಕೂಡ ತಮ್ಮದೇ ಫಾರ್ಮ್ ಅಲ್ಲಿ ತಮ್ಮ ಪ್ರಾಣಿಗಳ ಜೊತೆ ಆಚರಿಸಿರುವ ದರ್ಶನ್ ಅವರು ಅಲ್ಲೇ ಸಂದರ್ಶನ ಕೊಟ್ಟು ಸಂದರ್ಶನ ಕಾರರಿಗೆ ತೋಟ ಹಾಗೂ ಪ್ರಾಣಿಗಳ ಬಗ್ಗೆ ಕೂಡ ಪರಿಚಯ ಮಾಡಿಕೊಟ್ಟಿದ್ದಾರೆ. ಇದೇ ಸಂದರ್ಶನದಲ್ಲಿ ದರ್ಶನವರು ಸಿನಿಮಾ ಜೊತೆ ಸಿನಿಮೇತರ ವಿಷಯದ ಬಗ್ಗೆ ಕೂಡ ಮಾತನಾಡಿ ತಮ್ಮ ವೈಯಕ್ತಿಕ ಜೀವನದ ವಿವಾದಗಳ ಕುರಿತು ಕೂಡ ಮನಬಿಚ್ಚಿ ಮಾತನಾಡಿದ್ದಾರೆ.

ದರ್ಶನ್ ಅವರು ಮೊದಲಿಗೆ ಸೆಲೆಬ್ರಿಟಿಗಳ ಕುರಿತು ಮಾತನಾಡಿ ಹೀಗೆ ಹೇಳಿದ್ದಾರೆ. ಜನ ನನ್ನನು ಯಾಕೆ ಇಷ್ಟಪಡುತ್ತಾರೆ ಎಂದು ಗೊತ್ತಿಲ್ಲ ನನ್ನನ್ನು ನಾನಾಗಿಯೇ ಕಂಡು ಅವರು ಇಷ್ಟ ಪಟ್ಟಿದ್ದಾರೆ ಮತ್ತೆ ನನ್ನ ಹಾಗೂ ಸೆಲೆಬ್ರಿಟಿಗಳ ನಡುವೆ ಯಾವುದೇ ಫಿಲ್ಟರ್ ಇಲ್ಲ ಅದೇ ಅವರಿಗೆ ಇಷ್ಟ ಆಗಿರಬಹುದು. ಈಗ ನಾನು ಇಂಟರ್ವ್ಯೂ ಗೆ ಬರಬೇಕು ಎಂದಿದ್ದರೆ ಟಿಪ್ ಟಾಪ್ ಆಗಿ ರೆಡಿಯಾಗಿ ಬರಬೇಕಿತ್ತು.

ಆದರೆ ನನಗೆ ತುಂಬಾ ಸಹಜವಾಗಿರಲು ಇಷ್ಟ ಹಾಗಾಗಿ ಬ್ರಷ್ ಕೂಡ ಮಾಡದೆ ಹೀಗೆ ಬಂದಿದ್ದೇನೆ ಎಂದಿದ್ದಾರೆ. ದರ್ಶನ್ ಅವರು ಈ ಸಂದರ್ಶನಕ್ಕಾಗಿ ಏನು ರೆಡಿಯಾಗದೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕ್ಯಾಮರಾ ಮುಂದೆ ಕಾಣಿಸಿಕೊಂಡಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಮುಂದುವರೆದು ತಮ್ಮ ಮೇಲೆ ಬರುತ್ತಿರುವ ವಿವಾದಗಳ ಬಗ್ಗೆ ಕೂಡ ಮಾತನಾಡಿದ ದರ್ಶನ್ ಅವರು ನಾನು ನೇರವಾಗಿ ಮಾತನಾಡುವುದಕ್ಕೆ ಈ ರೀತಿ ಆಗುತ್ತಿದೆಯೋ ಏನೋ ಗೊತ್ತಿಲ್ಲ.

ಆದರೆ ಎಲ್ಲರಿಗೂ ಕೂಡ ಬ್ಲಾಕ್ ಮಾರ್ಕ್ ಇರುತ್ತದೆ ಆದರೆ ನನ್ನಷ್ಟು ಬ್ಲಾಕ್ ಮಾರ್ಕ್ ಯಾರ ಮೇಲೂ ಇಲ್ಲ ಅದು ನನ್ನ ಬ್ಯಾಡ್ ಲಕ್ಕೋ ಏನೋ ಗೊತ್ತಿಲ್ಲ ಎಂದಿದ್ದಾರೆ ದರ್ಶನ್ ದರ್ಶನ್ ಅವರ ಬಗ್ಗೆ ಸದಾ ಒಂದಿಲ್ಲ ಒಂದು ವಿವಾದ ಆಗುತ್ತಲೇ ಇರುತ್ತದೆ. ಈಗಾಗಲೇ ಪತ್ನಿ ಜೊತೆಗೆ ಜಗಳದ ವಿಚಾರ ಮತ್ತು ಮೈಸೂರಿನ ಹೋಟೆಲ್ ಒಂದರಲ್ಲಿ ಸಿಬ್ಬಂದಿ ಜೊತೆ ಗಲಾಟೆ.

ಈಗ ಕ್ರಾಂತಿ ಸಿನಿಮಾದ ರಿಲೀಸ್ ವೇಳೆ ಆದ ಹಲ್ಲೆ ಈ ರೀತಿ ಸಾಲು ಸಾಲು ವಿವಾದಗಳು ಒಂದು ರೀತಿ ದರ್ಶನ್ ಅವವನ್ನೇ ಹುಡುಕೊಂಡು ಬರುತ್ತಿದೆಯೇನೋ ಏನೋ ಎಂದು ಬೇಸರ ಕಟ್ಟಿಕೊಳ್ಳುವಂತೆ ಇದೆ .ಆದರೆ ಇದೆಲ್ಲವನ್ನು ಮೀರಿ ಅವರ ಸಂಪಾದಿಸಿರುವ ಅಭಿಮಾನಿಗಳ ಪ್ರೀತಿ ಹಾರೈಕೆ ವಿಶ್ವಾಸ ಅವರ ಮೇಲಿದ್ದು ಈಗ ಎಲ್ಲರ ಚಿತ್ತ ಕ್ರಾಂತಿ ಸಿನಿಮಾದ ಕಡೆ ಇದೆ.

2ನೇ ಮದುವೆ ಆಗಲು ಕೊರಗಜ್ಜನ ಅಪ್ಪಣೆ ಕೇಳಿದ ನಟಿ ಪ್ರೇಮಾ, ದೈವ ಕೊಟ್ಟ ಸೂಚನೆ ಏನು ಗೊತ್ತ.? ಪ್ರೇಮಾ ಆಸೆ ನೆರವೇರಿತ.!

 

2ನೇ ಮದುವೆಗೆ ಅಪ್ಪಣೆ ಕೇಳಲು ಕೊರಗಜ್ಜನ ಸನ್ನಿಧಾನಕ್ಕೆ ಬಂದ ನಟಿ ಪ್ರೇಮಾ. ಮೋಹಕ ತಾರೆ ಪ್ರೇಮ ಅವರು ಕನ್ನಡ ಚಲನಚಿತ್ರರಂಗದ ಸ್ಟಾರ್ ನಟಿಯಾಗಿ ಮೆರೆದವರು. 90ರ ದಶಕದಲ್ಲಿ ಅತಿ ಬೇಡಿಕೆಯ ನಟಿ ಆಗಿದ್ದ ಪ್ರೇಮಾ ಅವರು ಮೊದಲ ಬಾರಿಗೆ ಶಿವಣ್ಣ ಅವರ ಜೊತೆ ಸವ್ಯಸಾಚಿ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುತ್ತಾರೆ. ಆದರೆ ಸವ್ಯಸಾಚಿ ಮುನ್ನ ರಿಲೀಸ್ ಆದ ಉಪೇಂದ್ರ ಅವರ ನಿರ್ದೇಶನದ ಶಿವಣ್ಣ ಅಭಿನಯದ ಓಂ ಸಿನಿಮಾ ಇವರಿಗೆ ದೊಡ್ಡ ಬ್ರೇಕ್ ಕೊಡುತ್ತದೆ.

ಅಂದಿನಿಂದ ತನ್ನ ಸಿನಿ ವೃತ್ತಿಯಲ್ಲಿ ಪ್ರೇಮ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ತಮ್ಮ ಸಿನಿ ಜರ್ನಿಯಲ್ಲಿ ಕನ್ನಡದ ಎಲ್ಲಾ ಸ್ಟಾರ್ ನಟರೊಂದಿಗೆ ಅಭಿನಯಿಸಿದ ಖ್ಯಾತಿ ಪ್ರೇಮ ಅವರಿಗೆ ಇದೆ. ರವಿಚಂದ್ರನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಹಾಗೂ ವಿಷ್ಣುವರ್ಧನ್ ಅವರೊಂದಿಗೆ ಅತ್ಯುತ್ತಮ ಪೇರ್ ಆಗಿದ್ದ ಇವರು ಆ ನಟರೊಂದಿಗೆ ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ.

ಶಿಶಿರ ಕೊನೆ ಸಿನಿಮಾ ಎಂದು ಘೋಷಿಸಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಇವರು ಸಂಪೂರ್ಣವಾಗಿ ಸಿನಿಮಾಗಳಿಂದ ದೂರ ಉಳಿದರು. ವೈವಾಹಿಕ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡಿ ಸಿನಿಮಾದಿಂದ ದೂರ ಉಳಿಯುವುದಾಗಿ ಹೇಳಿಕೊಂಡಿದ್ದ ಪ್ರೇಮಾ ಅವರಿಗೆ ಬದುಕು ಅವರಂದುಕೊಂಡ ರೀತಿ ಇರಲಿಲ್ಲ. ಬದುಕಿನಲ್ಲಿ ಬಂದ ಅನಿರೀಕ್ಷಿತ ತಿರುವುಗಳಿಂದಾಗಿ ನಟಿ ಪ್ರೇಮ ಕಂಗಾಲಾದರು.

ಜೀವನ್ ಅಪ್ಪಚ್ಚು ಅವರ ಜೊತೆಗೆ 2006ರಲ್ಲಿ ವಿವಾಹ ಆಗಿದ್ದ ಅವರ ಮದುವೆ ಬಂಧನ ಕೆಲವೇ ವರ್ಷಗಳಲ್ಲಿ ಅಂತ್ಯವಾಗಿತ್ತು. ಅಂದಿನಿಂದ ನಟಿ ಪ್ರೇಮ ಅವರು ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಪ್ರೇಮ ಅವರು ಎಂದಿಗೂ ತಮ್ಮ ವೈವಾಹಿಕ ಜೀವನದ ಬಗ್ಗೆ ಎಲ್ಲೂ ಕೂಡ ಹೇಳಿಕೊಂಡಿರಲಿಲ್ಲ. ಆದರೆ ಇವರು ಎಲ್ಲೇ ಎದುರಾದರೂ ಕೂಡ ಅದರ ಬಗ್ಗೆಯೇ ಪ್ರಶ್ನೆ ಕೇಳಲಾಗುತ್ತಿತ್ತು.

ಇತ್ತೀಚಿಗೆ ತೆಲುಗು ಸಂದರ್ಶನದಲ್ಲಿ ಮೊದಲ ಬಾರಿಗೆ ತಮ್ಮ ಮದುವೆ ಮೌನ ಮುರಿದು ವಿಚ್ಛೇದನ ಆಗಿರುವ ವಿಷಯವನ್ನು ಅವರು ಹಂಚಿಕೊಂಡಿದ್ದಾರೆ. ಆ ಮದುವೆ ನನ್ನ ತಪ್ಪು ನಿರ್ಧಾರವಾಗಿತ್ತು ಎಂದು ಸಹ ಅವರು ಹೇಳಿದ್ದಾರೆ. ವಿಚ್ಛೇದನ ಆದ ಮೇಲೂ ಇವರಿಗೆ ಹಲವಾರು ಸಿನಿಮಾ ಆಫರ್ ಗಳು ಹೋಗಿದ್ದರೂ ಕೂಡ ನಾನು ಮತ್ತೆ ಸಿನಿಮಾ ಮಾಡುತ್ತೇನೆ ಎಂದರೆ ಪಾತ್ರ ಗಟ್ಟಿಯಾಗಿರಬೇಕು ಎನ್ನುವ ಕಾರಣ ಕೊಟ್ಟು ಹಲವು ಆಫರ್ ಗಳನ್ನು ತಿರಸ್ಕಾರ ಮಾಡಿದ್ದಾರೆ.

ಬರೋಬ್ಬರಿ ಎಂಟು ವರ್ಷಗಳ ನಂತರ ಅವರು ಮತ್ತೆ ಕಂಬ್ಯಾಕ್ ಮಾಡಿದ್ದು ಉಪೇಂದ್ರ ಅವರ ಮತ್ತೆ ಬಾ ಉಪೇಂದ್ರ ಎನ್ನುವ ಸಿನಿಮಾ ಮೂಲಕ. ನಟಿ ಪ್ರೇಮ ಅವರ ಮೇಲೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಗಾಸಿಪ್ ಗಳು ಹರಿದಾಡುತ್ತಲೇ ಇರುತ್ತವೆ . ಇದೀಗ ಅಂತಹದ್ದೇ ಒಂದು ಸುದ್ದಿ ಕುರಿತು ಫೋಟೋಗಳು ವೈರಲ್ ಆಗುತ್ತಿದೆ.

ಪ್ರೇಮ ಅವರು ಎರಡನೇ ಮದುವೆ ಆಗಲು ಅಪ್ಪಣೆ ಕೇಳಲು ಕೊರಗಜ್ಜನ ಬಳಿ ಹೋಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನೊಂದು ಮೂಲಗಳ ಪ್ರಕಾರ ಈಗಾಗಲೇ ಹುಡುಗನೂ ನಿಶ್ಚಯವಾಗಿದ್ದು ಅದೇ ಹುಡುಗನನ್ನು ಮದುವೆಯಾಗಲು ಅಪ್ಪಣೆ ಕೇಳುವುದಕ್ಕಾಗಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಕ್ಕೆ ಸಂಬಂಧಪಟ್ಟ ಹಾಗೆ ಅವರು ತಮ್ಮ ಅಯ್ಯಪ್ಪ ಹಾಗೂ ತಮ್ಮನ ಪತ್ನಿ ಯೊಂದಿಗೆ ಕಾಪುವಿನ ಕೊರಗಜ್ಜನ ದೇವಸ್ಥಾನ ಹಾಗೂ ಅಲ್ಲೇ ಇರುವ ಅಯ್ಯಪ್ಪ ದೇವಸ್ಥಾನ ಇವರು ಭೇಟಿಯಾಗಿರುವ ಸಂದರ್ಭದಲ್ಲಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ ಅವರ ನಿರ್ಧಾರ ಏನಿದ್ದರೂ ಇನ್ನಾದರೂ ಜೀವನ ಸುಖಕರವಾಗಿರಲಿ ಎಂದು ಹಾರೈಸೋಣ.

ಅಮಿತಾ ಬಚ್ಚನ್ ಮನೆಯಲ್ಲಿ ಬಿರುಕು. ಸೊಸೆ & ಮಗಳ ನಡುವೆ ಜಗಳ ಮನನೊಂದ ಅಮಿತಾ ಬಚ್ಚನ್ ಆಸ್ತಿ ಪಾಲು ಮಾಡಿದ್ದಾರೆ ಯಾರ್ಯಾರಿಗೆ ಎಷ್ಟೆಷ್ಟು ಆಸ್ತಿ ಸಿಗಲಿದೆ ಗೊತ್ತ.?

 

ಸಂಬಂಧಗಳು ಎನ್ನುವುದು ಎಲ್ಲರ ಬದುಕಿನಲ್ಲೂ ಕೂಡ ಒಂದೇ ರೀತಿ. ಅದು ಸಾಮಾನ್ಯರ ಕುಟುಂಬದಲ್ಲಿ ಆಗಲಿ ಸೆಲೆಬ್ರೆಟಿಗಳ ಕುಟುಂಬದಲ್ಲೇ ಆಗಲಿ ಸಣ್ಣ ಪುಟ್ಟ ಮನಸ್ತಾಪಗಳು ಭಿನ್ನಾಭಿಪ್ರಾಯಗಳು ಎಲ್ಲಾ ಸಂಬಂಧಗಳ ನಡುವೆ ಇದ್ದೇ ಇರುತ್ತದೆ. ಕೆಲವರು ಇದನ್ನು ನಾಜುಕಾಗಿ ಮ್ಯಾನೇಜ್ ಮಾಡಿಕೊಂಡು ಹೋರಗೆ ಗೊತ್ತಾಗದಂತೆ ಮುಚ್ಚಿಟ್ಟುಕೊಂಡು ಬದುಕಿದ್ದರೆ ಕೆಲವರು ಇದ್ದದ್ದನ್ನು ಇದ್ದಹಾಗೆ ಹೊರ ಜಗತ್ತಿಗೆ ತೋರಿಸಿಕೊಳ್ಳುತ್ತಾರೆ.

ಇದರಿಂದ ಸಾಬೀತಾಗುವುದು ಏನೆಂದರೆ ಭಾವನೆಗಳು ಎಲ್ಲಾ ಕಡೆ ಒಂದೇ ಎಲ್ಲರೂ ಸಹ ಮನುಷ್ಯರೇ ಆಗಿರುವುದರಿಂದ ಕೆಲವು ರೀತಿಯ ಮನುಷ್ಯ ಸಹಜ ಗುಣಗಳು ಸೆಲೆಬ್ರೆಟಿಗಳ ಬದುಕಿನಲ್ಲಿ ಸಹ ಇರುತ್ತದೆ, ಅವರೇನು ಸಾಮಾನ್ಯಗಿಂತ ಹೊರತೇನೆಲ್ಲ ಎನ್ನುವುದು. ಅಂದಹಾಗೆ ಈ ವಿಷಯ ಈಗ ಸಂಬಂಧಪಟ್ಟಿರುವುದು ಬಾಲಿವುಡ್ನ ಬಿಗ್ ಬಿ ಕುಟುಂಬದ ವಿಷಯದ ಸಲುವಾಗಿ.

ಹಿಂದಿಯ ನಂಬರ್ ಒನ್ ಸೂಪರ್ ಸ್ಟಾರ್ ಎನಿಸಿಕೊಂಡ ಅಮಿತಾ ಬಚ್ಚನ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಆನೇಕ ದಶಕಗಳು ಆಗಿವೆ. ಹಿಂದಿಯ ಬಹುತೇಕ ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿ ಸಾಕಷ್ಟು ಹಿಟ್ ಸಿನಿಮಾ ಕೊಟ್ಟಿದ್ದಾರೆ. 80 ಹರೆಯದಲ್ಲೂ ಸಹ ಬಹಳ ಬೇಡಿಕೆ ನಟನಾಗಿರುವ ಇವರು ಕಿರುತೆರೆ ಕಾರ್ಯಕ್ರಮಗಳಿಗೂ ಹೋಸ್ಟ್ ಆಗಿದ್ದಾರೆ ಮತ್ತು ಕೆಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗುತ್ತಾರೆ.

ಜೊತೆಗೆ ಹಲವು ಕಂಪನಿಗಳ ಜಾಹೀರಾತುಗಳಿಗೆ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಅಮಿತಾ ಬಚ್ಚನ್ ಅವರು ಹಲವು ವಿಷಯಗಳಲ್ಲಿ ಎಲ್ಲರಿಗೂ ಆದರ್ಶವಾಗಿದ್ದಾರೆ. ಆದರೆ ಸಂಸಾರದ ವಿಷಯದಲ್ಲಿ ಇವರು ಸಹ ಹಲವು ವಿವಾದಗಳನ್ನು ಎದುರಿಸಿದ್ದಾರೆ. ಇದೀಗ ಮಕ್ಕಳ ಮೊಮ್ಮಕ್ಕಳ ಜೊತೆ ಸುಖೀ ಕುಟುಂಬದಲ್ಲಿದ್ದ ಇವರ ದೊಡ್ಡ ಮನೆಯಲ್ಲಿ ಸಣ್ಣ ಬಿರುಕೊಂದು ಮೂಡಿ ಈಗ ಪರಸ್ಪರ ಬೇರೆ ಆಗಿ ಬದುಕು ನಡೆಸುವ ನಿರ್ಧಾರ ತೆಗೆದುಕೊಳ್ಳುವಷ್ಟರ ಮಟ್ಟಿಗೆ ವಿಷಯ ಬಂದು ನಿಂತಿದೆ.

ಅಮಿತಾಭ್ ಅವರ ಮನೆಯಲ್ಲಿ ಪತ್ನಿ ಮಗ ಸೊಸೆ ಮೊಮ್ಮಗಳು ಹಾಗೂ ಪುತ್ರಿ ಎಲ್ಲರ ಸಹ ಒಟ್ಟಾಗಿ ಜೀವಿಸುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಹಾಗೂ ಮಗಳು ಶ್ವೇತ ಬಚ್ಚನ್ ಅಮಿತಾಭ್ ಅವರಿಗೆ ಎರಡು ಕಣ್ಣುಗಳಿದ್ದಾಗೆ. ಸೊಸೆಯಾಗಿ ಬಂದಿರುವ ಐಶ್ವರ್ಯ ಅವರನ್ನು ಸಹ ಅಮಿತಾಭ್ ಮಗಳಂತೆ ಕಾಣುತ್ತಾರೆ. ಆದರೆ ಇಲ್ಲಿ ಸಮಸ್ಯೆ ಇರುವುದು ಅತ್ತಿಗೆ ಐಶ್ವರ್ಯ ರೈ ಹಾಗೂ ನಾದಿನಿ ಶ್ವೇತಾ ಬಚ್ಚನ್ ಅವರ ನಡುವೆ. ಅನೇಕ ಬಾರಿ ಇವರಿಬ್ಬರ ನಡುವೆ ಸರಿ ಇಲ್ಲ ಎನ್ನುವುದು ಸಾಬೀತಾಗಿದೆ.

ಕರಣ್ ಜೋಹರ್ ಅವರ ಕಾರ್ಯಕ್ರಮದಲ್ಲಿ ಶ್ವೇತ ಬಚ್ಚನ್ ಬಳಿ ಐಶ್ವರ್ಯ ರೈ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು ಐಶ್ವರ್ಯ ರೈ ಅವರ ಯಾವ ವಿಷಯ ನಿಮಗೆ ಇಷ್ಟ ಆಗೋದಿಲ್ಲ ಎನ್ನುವ ಪ್ರಶ್ನೆಗೆ ಅವರಿಗೆ ಟೈಮ್ ಮ್ಯಾನೇಜ್ಮೆಂಟ್ ಮಾಡಲು ಬರುವುದಿಲ್ಲ. ಅವರು ಶೀಘ್ರವಾಗಿ ಕಾಲ್ ಬ್ಯಾಕ್ ಮಾಡುವುದಿಲ್ಲ ಆ ವಿಷಯ ನನಗೆ ಹಿಡಿಸುವುದಿಲ್ಲ ಎಂದು ಶ್ವೇತಾ ನೇರವಾಗಿ ಹೇಳಿ ಬಿಟ್ಟಿದ್ದರು.

ಇನ್ನು ಕಾರ್ಯಕ್ರಮ ಒಂದರಲ್ಲಿ ಮಾಧ್ಯಮದವರ ಎದುರಿಗೆ ಐಶ್ವರ್ಯ ರೈ ಹಾಗೂ ಶ್ವೇತಾ ಇಬ್ಬರು ಎದುರ ಬದುರಾದರು ಮುಗುಳ್ನಗೆ ಸಹ ಬೀರದೆ ನಿರ್ಲಕ್ಷಿಸಿ ನಡೆದಿದ್ದು ಕಂಡ ಮೇಲಂತೂ ಇದು ಜಗಜ್ಜಾಹೀರಾಯಿತು. ಈಗ ಇದು ಆಸ್ತಿ ಪಾಲು ಮಾಡಿಕೊಂಡು ಪರಸ್ಪರ ಬೇರಾಗಿ ಬದುಕು ಮಟ್ಟಕ್ಕೆ ತಲುಪಿದೆ ಎನ್ನುವ ಮಾಹಿತಿ ಬಲವಾದ ಮೂಲಗಳಿಂದ ತಿಳಿದು ಬಂದಿದೆ.

ಇದರ ಪ್ರಕಾರ ಅಮಿತಾ ಬಚ್ಚನ್ ಅವರ ಒಟ್ಟು 2800 ಕೋಟಿ ಮೌಲ್ಯದ ಆಸ್ತಿಯಲ್ಲಿ ಅಭಿಷೇಕ್ ಒಬ್ಬರಿಗೆ ಹಕ್ಕಿರುವುದಿಲ್ಲ ಶ್ವೇತ ಬಚ್ಚನ್ ಅವರಿಗೂ ಸಹ 1400 ಕೋಟಿಗಳ ಸಮಪಾಲು ಆಸ್ತಿ ಹೋಗಲಿದೆ ಎನ್ನುವ ವಿಷಯ ತಿಳಿದು ಬಂದಿದೆ. ಆದರೆ ಅವರ ಕುಟುಂಬದವರು ಮಾತ್ರ ಇನ್ನು ಈ ವಿಷಯಗಳ ಕುರಿತು ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.

ನಾನೇನು ಬೇರೆ ದೇಶಕ್ಕೆ ಜೈಕಾರ ಹಾಕಿದ್ನಾ, ದರ್ಶನ್ ಬಿಟ್ಟರೆ ನೆಕ್ಸ್ಟ್ ನನ್ನೆ ಟಾರ್ಗೆಟ್ ಮಾಡ್ತಿದ್ದಾರೆ ಎಂದು ತಿರುಗಿ ಬಿದ್ದ ರಚಿತಾ ರಾಮ್.

 

ರಚಿತಾ ರಾಮ್ ಅವರು ಕ್ರಾಂತಿ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಹೇಳಿಕೆಯೊಂದನ್ನು ನೀಡಿದ್ದರು. ಅದೇನೆಂದರೆ ಪ್ರತಿವರ್ಷ ಕೂಡ ಜನವರಿ 26 ಎಂದರೆ ಅದು ಗಣರಾಜ್ಯೋತ್ಸವ ಎಂದೇ ಹೇಳಲಾಗುತ್ತಿತ್ತು ಅದರ ಆಚರಣೆ ಇತ್ತು ಆದರೆ ಈ ವರ್ಷ ಗಣರಾಜ್ಯೋತ್ಸವ ಮರೆತು ಎಲ್ಲರು ಕ್ರಾಂತಿ ಉತ್ಸವ ಮಾಡೋಣ ಎಂದಿದ್ದರು.

ಅವರ ಆ ಹೇಳಿಕೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆ ಆರಂಭವಾಗಿ ಸಾಕಷ್ಟು ಜನ ರಚಿತಾ ರಾಮ್ ಅವರನ್ನು ದೇಶಕ್ಕಿಂತ ನಿನಗೆ ನಿನ್ನ ಸಿನಿಮಾವೇ ಹೆಚ್ಚಾಯ್ತಾ ಎಂದು ಕಮೆಂಟ್ ಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಮತ್ತು ಇದೇ ವಿಷಯದ ಕುರಿತಾಗಿ ಅವರ ವಿರುದ್ಧ ಹಲವು ಮಂದಿ ಸಿಡಿದೆದ್ದು ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಲಾಯಿತು.

ಇದಾದ ಬಳಿಕ ಮೊದಲ ಬಾರಿ ರಚಿತಾರಾಮ್ ಅವರು ಅಂದು ಅವರು ಹೇಳಿದ ಆ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಕನ್ನಡ ಪಿಚ್ಚರ್ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ರಚಿತಾ ರಾಮ್ ಅವರು ಮಾತನಾಡಿದ್ದಾರೆ. ಹೊಸಪೇಟೆಯಲ್ಲಿ ಆಡಿಯೋ ರಿಲೀಸ್ ವೇಳೆ ದರ್ಶನ್ ಅವರ ಮೇಲೆ ಆದ ಚಪ್ಪಲಿ ಎಸೆತ, ಮೈಸೂರಿನ ಹೋಟೆಲ್ ಅಲ್ಲಿ ಆದ ಮಾತಿನ ಚಕಮಕಿಯ ಆಡಿಯೋ ಗಲಾಟೆ ಮತ್ತು ಕ್ರಾಂತಿ ಸಿನಿಮಾಗೆ ಎದುರಾಗಿರುವ ಚಾಲೆಂಜ್ ಗಳು ಎಲ್ಲದರ ಕುರಿತು ಮಾತಿಗಿಳಿದ ರಚಿತಾ ರಾಮ್ ಅವರು.

ಅಂದು ಟ್ರೈಲರ್ ರಿಲೀಸ್ ದಿನ ಅವರು ಹೇಳಿದ ಹೇಳಿಕೆ ಕುರಿತು ಕೂಡ ಮಾತನಾಡಿದ್ದಾರೆ. ನಾನು ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದೇನೆ ಎಂದು ಸುಮ್ಮನೆ ಬಂದು ಪ್ರಚಾರ ಮಾಡಿ ಹೋಗುತ್ತಿಲ್ಲ ನಾನು ನನ್ನ ಸಿನಿಮಾ ಎಂದು ಸಿನಿಮಾವನ್ನು ನೋಡುತ್ತಿದ್ದೇನೆ. ಬಿಡುವಿಲ್ಲದಂತೆ ಸಾಕಷ್ಟು ಪ್ರಚಾರಗಳಲ್ಲಿ ಓಡಾಡುತ್ತಿದ್ದೇನೆ. ಯಾಕೆಂದರೆ ದರ್ಶನ್ ಅವರ ಜೊತೆಗೆ ನನಗೆ ಇದು ಮೂರನೇ ಸಿನಿಮಾ. ಅಲ್ಲದೆ ಅವರನ್ನು ತುಂಬಾ ಹತ್ತಿರದಿಂದ ಬಲ್ಲೆ ಇದುವರೆಗೆ ನಾನು ನೋಡಿರದ ವಿಷಯಗಳನ್ನು ಕ್ರಾಂತಿ ಸಿನಿಮಾದಲ್ಲಿ ನೋಡಿದೆ.

ಯಾಕೆಂದರೆ ತೆರೆ ಹಿಂದೆ ಹಾಗೂ ತೆರೆ ಮೇಲೆ ಕೂಡ ಕ್ರಾಂತಿ ಸಿನಿಮಾಗೆ ಮೊದಲ ದಿನದಿಂದ ಎಷ್ಟೊಂದು ಅಡೆತಡೆ ಆಗಿದೆ ಎನ್ನುವುದನ್ನು ಕಂಡು ತುಂಬಾ ನೋವು ಅನುಭವಿಸಿದ್ದೇನೆ. ಈಗ ಕ್ರಾಂತಿ ಸಿನಿಮಾ ನನ್ನ ಜವಾಬ್ದಾರಿ ನಾನು ಅಂದು ಟ್ರೈಲರ್ ರಿಲೀಸ್ ಆದ ಎಕ್ಸೈಟ್ಮೆಂಟ್ ಅಲ್ಲಿ ಇದ್ದೆ ನಾನು ಖಂಡಿತವಾಗಿಯೂ ಆ ಮಾತುಗಳನ್ನು ಆಡಿದೆ ಆದರೆ ಅದು ಫಂಬಲ್ ಆಗಿ ಆದ ಮಿಸ್ಟೇಕ್ ಮಾತನಾಡುವಾಗ ಮಿಸ್ಟೇಕ್ ಮಾಡಿದ್ದಾರೆ.

ನಾನು ಅಂದು ಆಡಿದ ಆ ಮಾತು ತಪ್ಪು ಎನಿಸಿದರೆ ಎಲ್ಲಾ ಮಾಧ್ಯಮದವರು ಕೂಡ ಎದುರಿಗೆ ಇದ್ದರು ಇನ್ನೂ ಸಾಕಷ್ಟು ಜನರು ಇದ್ದರು ಯಾರಾದರೂ ಒಂದು ಮಾತು ಹೇಳಬಹುದಿತ್ತು. ಅದಾದ ಮೇಲೆ ಎಷ್ಟೋ ಸಮಯದವರೆಗೆ ನಾನು ಅಲ್ಲೇ ಇದ್ದೆ ಆಗಲು ಸಹ ಯಾರು ಮಾತನಾಡಲಿಲ್ಲ. ನಾನು ಎಂದೂ ನನ್ನ ಸಿನಿಮಾವೇ ದೊಡ್ಡದು ಎಂದು ಹೇಳಿಲ್ಲ. ಇದುವರೆಗೂ ಕೂಡ ನನ್ನ ದೇಶ, ನನ್ನ ಭಾಷೆ, ನನ್ನ ಕರ್ನಾಟಕ, ನನ್ನ ಸಂಸ್ಕೃತಿ, ನನ್ನ ಸಂಪ್ರದಾಯ ಇದರ ವಿರುದ್ಧ ಹೋದವಳು ಅಲ್ಲ.

ನಾನು ಬೇರೆ ದೇಶಕ್ಕೆ ಜೈಕಾರ ಹಾಕಲಿಲ್ಲ ಆದರೂ ಕೂಡ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಅದು ಯಾಕೆ ಎಂದು ಗೊತ್ತಾಗುತ್ತಿಲ್ಲ. ನಾನು ಖಂಡಿತವಾಗಿಯೂ ಉದ್ದೇಶ ಪೂರ್ವಕವಾಗಿ ಗಣರಾಜ್ಯೋತ್ಸವಕ್ಕೆ ಅವಮಾನ ಮಾಡಲು ಈ ರೀತಿ ಮಾತನಾಡಿರಲಿಲ್ಲ ಮಾತಿನ ಭರದಲ್ಲಿ ಆ ರೀತಿ ಆಗಿದೆ ಇಂದು ಉತ್ತರ ಕೊಟ್ಟಿದ್ದಾರೆ.

ಕುಚಿಕೋ ಗೆಳಯನಿಗಾಗಿ ಸ್ವತಃ ಸುದೀಪ್ ಅವರೆ ಡಿ ಬಾಸ್ ಅವರ ಕ್ರಾಂತಿ ಸಿನಿಮಾ ಪ್ರೋಮೊಷನ್ ಮಾಡುತ್ತಿದ್ದಾರೆ.

 

ಕರ್ನಾಟಕದಾದ್ಯಂತ ಈಗ ಕ್ರಾಂತಿ ಸಿನಿಮಾದ ಸಂಭ್ರಮವೇ ಮನೆ ಮಾಡಿದೆ, ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಇದನ್ನು ನಾನಾ ರೀತಿಯಲ್ಲಿ ಚಿತ್ರತಂಡ ಈಗಾಗಲೇ ಪ್ರಮೋಷನ್ ಮಾಡುತ್ತಿದೆ. ಟೈಲರ್, ಟೀಸರ್, ಆಡಿಯೋ ಲಾಂಚ್ ಎಲ್ಲವನ್ನು ಸಹ ವಿಭಿನ್ನ ಬಗೆಯಲ್ಲಿ ಮಾಡಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ತೊಡಗಿಕೊಂಡಿದ್ದರೆ.

ಇತ್ತ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ದಚ್ಚುಗಾಗಿ ತಾವು ಸಿನಿಮಾ ಪ್ರಚಾರ ಮಾಡುವುದರ ಕಡೆ ಬಿಝಿ ಆಗಿದ್ದಾರೆ. ಕ್ರಾಂತಿ ಸೆಟ್ಟೇರಿದ ಸಿನಿಮಾದಿಂದಲೂ ಸಹ ಮಾಧ್ಯಮಗಳಿಗೆ ಸೆಡ್ಡು ಹೊಡೆದು ದರ್ಶನ್ ಅವರ ಬೆನ್ನಿಗೆ ನಿಂತಿರುವ ಅವರ ಸೆಲೆಬ್ರಿಟಿಗಳು ಪ್ರತಿಯೊಬ್ಬರೂ ಕೂಡ ವಿಭಿನ್ನ ಬಗೆಯಲ್ಲಿ ತಮಗೆ ತಿಳಿದಂತೆ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ ಈಗ ಸಿನಿಮಾ ಬಗ್ಗೆ ಪ್ರಚಾರ ಮಾಡುವಂತೆ ಇತರೆ ಸ್ಟಾರ್ಗಳ ಬಳಿ ಕೇಳಲು ಸಹ ಹೋಗುತ್ತಿದ್ದಾರೆ.

ಅದರಲ್ಲಿ ಮುಖ್ಯವಾಗಿ ಸುದೀಪ್ ಅವರು ಒಂದು ಕಾಲದಲ್ಲಿ ದರ್ಶನ್ ಅವರೆಗೆ ಬಹಳ ಆತ್ಮೀಯರಾಗಿದ್ದವರು. ಅಂಬರೀಶ್ ಹಾಗೂ ವಿಷ್ಣುವರ್ಧನ್ ಅವರನ್ನು ಬಿಟ್ಟರೆ ಕನ್ನಡ ಚಿತ್ರರಂಗದ ದಿಗ್ಗಜರುಗಳು ಎಂದು ಇವರನ್ನೇ ಕರೆಯಲಾಗುತ್ತಿತ್ತು. ದರ್ಶನ್ ಅವರು ಕೌಟುಂಬಿಕ ಕಲಹದ ಹಿನ್ನೆಲೆ ಜೈಲು ಸೇರಿದ ಸಂದರ್ಭದಲ್ಲಿ ಅವರ ಸಾರಥಿ ಸಿನಿಮಾದ ಸಾರಥ್ಯ ವಹಿಸಿಕೊಂಡು ಅವರಿಗೆ ಜೊತೆಯಾಗಿ ನಿಂತದ್ದು ಸುದೀಪ್ ಅವರು.

ಸ್ವತಃ ಇದನ್ನು ದರ್ಶನ ಅವರ ಸಹೋದರ ದಿನಕರ್ ಅವರೇ ಹಲವು ಇಂಟರ್ವೂಳಲ್ಲಿ ಹೇಳಿಕೊಂಡಿದ್ದಾರೆ. ನಂತರದ ದಿನಗಳಲ್ಲಿ ಇಬ್ಬರು ಸಹ ಅಣ್ಣತಮ್ಮಂದಿರಕ್ಕಿಂತ ಹೆಚ್ಚಾಗಿ ಒಂದೇ ಕಡೆ ಊಟ ಮಾಡಿ, ಒಂದೇ ಕಾರಿನಲ್ಲಿ ಓಡಾಡಿಕೊಂಡು, ಬೈಕ್ನಲ್ಲಿ ರಾಲಿ, ಟ್ರಿಪ್ ಹೀಗೆಲ್ಲ ಜೊತೆ ಜೊತೆಯಾಗಿ ಹೋಗುತ್ತಿದ್ದರು. ಆದರೆ ಅದು ಯಾವ ಕೆಟ್ಟ ದೃಷ್ಟಿ ಇವರ ಸ್ನೇಹದ ಮೇಲೆ ಬಿತ್ತು ಗೊತ್ತಿಲ್ಲ. ಮಧ್ಯೆ ಇದ್ದವರ ಕಾಣದ ಕೈಗಳ ಆಟದಿಂದ ಆಪ್ತ ಸ್ನೇಹಿತರು ದೂರ ದೂರವಾಗಿದ್ದಾರೆ.

ಆದರೂ ಕೂಡ ಇಬ್ಬರ ಮನಸ್ಸಿನಲ್ಲಿ ಸ್ನೇಹ ಕಡಿಮೆ ಆಗಿಲ್ಲ. ಈಗಲೂ ಸಹ ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ ಆದ ದರ್ಶನ್ ಅವರ ಮೇಲಿನ ಹಲ್ಲೆಯ ಕುರಿತು ಕೂಡ ಸುದೀಪ್ ಅವರು ಧ್ವನಿ ಎತ್ತಿದ್ದಾರೆ. ಅವರ ಟ್ವೀಟ್ಗೆ ದರ್ಶನ್ ಅವರು ಕೂಡ ರೀ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ. ಹೀಗಾಗಿ ಮತ್ತೆ ಇವರಿಬ್ಬರ ನಡುವೆ ಸ್ನೇಹ ಚಿಗರೊಡೆಯುತ್ತದೆಯಾ ಮತ್ತೆ ಒಂದಾಗುತ್ತಾರಾ ಎಂದು ಇಬ್ಬರ ಅಭಿಮಾನಿಗಳು ಸಹ ಹಾತೊರೆಯುತ್ತಿದ್ದಾರೆ.

ಹಾಗಾಗಿ ಇಬ್ಬರನ್ನು ಒಂದು ಮಾಡಬೇಕು ಎಂದು ನಿರ್ಧರಿಸುವ ದರ್ಶನ್ ಅಭಿಮಾನಿ ಒಬ್ಬ ಸುದೀಪ್ ಅವರ ಮನೆ ಬಳಿ ಹೋಗಿ ತಮ್ಮ ಡಿ ಬಾಸ್ ಸಿನಿಮಾವನ್ನು ಪ್ರಚಾರ ಮಾಡುವಂತೆ ಕೇಳಿಕೊಳ್ಳಲು ಹೋಗಿದ್ದಾರೆ. ಆದರೆ ಆ ಸಂದರ್ಭದಲ್ಲಿ ಸುದೀಪ್ ಅವರು ಅಂದು ಅವರ ಮನೆಯಲ್ಲಿ ಇಲ್ಲದ ಕಾರಣ ಆ ಕೆಲಸ ಆಗಿಲ್ಲ. ಆದರೆ ಖಂಡಿತವಾಗಿಯೂ ಸುದೀಪ್ ಅವರು ಅಂದು ಆ ಅಭಿಮಾನಿಗೆ ಸಿಕ್ಕಿದರೆ ಕ್ರಾಂತಿ ಸಿನಿಮಾದ ಕುರಿತು ಮಾತನಾಡುತ್ತಿದ್ದರು ಎನ್ನುವುದು ಎಲ್ಲರಿಗೂ ತಿಳಿದಿದೆ.

ಇನ್ನು ಸಹ ಸಿನಿಮಾ ಬಿಡುಗಡೆಗೆ ಬಹಳ ಸಮಯವಿದೆ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದೀಪ್ ಅವರ ಮೇಲೆ ಮುಂದೆ ದರ್ಶನ್ ಅಭಿಮಾನಿ ಪ್ರಚಾರಕ್ಕಾಗಿ ಕೇಳಲು ಹೋಗಿದ್ದ ವಿಡಿಯೋ ಅವರಿಗೆ ತಲುಪಿದರೆ ಸುದೀಪ್ ಅವರು ಈ ಕುರಿತು ಮಾತನಾಡಬಹುದು ಎಂದು ಎಲ್ಲರೂ ಎದುರು ನೋಡುತ್ತಿದ್ದಾರೆ. ಆದಷ್ಟು ಬೇಗ ಇವರಿಬ್ಬರ ನಡುವಿನ ಮನಸ್ತಾಪ ದೂರವಾಗಲಿ, ಕ್ರಾಂತಿ ಸಿನಿಮಾಗೆ ಗೆಲುವಾಗಲಿ ಎಂದು ಅಭಿಮಾನಿಗಳಾಗಿ ನಾವೆಲ್ಲ ಹರಸೋಣ.

ಇಂಡಸ್ಟ್ರಿಯಲ್ಲಿ ಒಂದೇ ಒಂದೂ ದುಶ್ಚಟ ಇಲ್ದೆ ಇರುವ ಏಕೈಕ ವ್ಯಕ್ತಿ ಅಂದ್ರೆ ಇವರೊಬ್ರು ಮಾತ್ರ ಎಂದು ಹೇಳಿದ ಸಾಧುಕೋಕಿಲ. ಆ ವ್ಯಕ್ತಿ ಯಾರು ಗೊತ್ತ.?

ಸಾಧು ಕೋಕಿಲ ಅವರು ಹಲವು ದಶಕಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯ ಕಾಮಿಡಿ ಕಲಾವಿದನಾಗಿ ಸಂಗೀತ ನಿರ್ದೇಶಕನಾಗಿ ಪೋಷಕ ಪಾತ್ರಧಾರಿಯಾಗಿ ಗಾಯಕನಾಗಿ ಮತ್ತು ಸಿನಿಮಾ ನಿರ್ಮಾಪಕನಾಗಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಇಷ್ಟು ದಿನದ ಅವರ ಈ ಜರ್ನಿಯಲ್ಲಿ ಸಾಕಷ್ಟು ಕಲಾವಿದರುಗಳನ್ನು, ತಂತ್ರಜ್ಞರನ್ನು ಅವರು ಕಂಡಿದ್ದಾರೆ. ಜನವರಿ 26 ರಂದು ಬಿಡುಗಡೆ ಆಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಕ್ರಾಂತಿ ಸಿನಿಮಾದಲ್ಲೂ ಕೂಡ ಸಾಧು ಕೋಕಿಲ ಅವರು ಕಾಮಿಡಿ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ.

ಎಲ್ಲಾ ಕಲಾವಿದರಂತೆ ಸಾಧು ಅವರು ಸಹ ಕ್ರಾಂತಿ ಸಿನಿಮಾದ ಪ್ರಚಾರದ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದಾರೆ. ಹೀಗೆ ಸಂದರ್ಶನ ಒಂದರಲ್ಲಿ ಸಾಧುಕೋಕಿಲ ಅವರನ್ನು ಕ್ರಾಂತಿ ಸಿನಿಮಾದ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಗಿದೆ ಜೊತೆಗೆ ಸಿನಿಮಾದ ಇತರ ಕೆಲಸಗಳಾದ ನಿರ್ದೇಶನ ಸಂಗೀತ ಇನ್ನಿತರ ವಿಷಯಗಳ ಬಗ್ಗೆಯೂ ಕೂಡ ಪ್ರಶ್ನೆ ಕೇಳಲಾಗಿದೆ.

ಅದಕ್ಕೆಲ್ಲ ಸಾಧುಕೋಕಿಲ ಅವರು ಸಮಾಧಾನಕರವಾದ ಉತ್ತರವನ್ನು ಕೊಟ್ಟು ಇದುವರೆಗೆ ಇಂಡಸ್ಟ್ರಿ ಅವರ ಬಗ್ಗೆ ತಿಳಿಯದಿರುವ ವಿಷಯಗಳನ್ನು ಸಹ ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಕ್ರಾಂತಿ ಸಿನಿಮಾದ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ವಿ.ಹರಿಕೃಷ್ಣ ಅವರನ್ನು ಕುರಿತು ಪ್ರಶ್ನೆ ಕೇಳಲಾಗಿದೆ, ಅವರ ಬಗ್ಗೆಯೂ ಸಹ ಸಾಧು ಕೋಕಿಲ ಅವರು ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಾರೆ. ಸಾಧು ಕೋಕಿಲ ಅವರು ವಿ ಹರಿಕೃಷ್ಣ ಅವರ ಬಗ್ಗೆ ಹಾಗೂ ಅವರ ನಿರ್ದೇಶನದ ಬಗ್ಗೆ ಹೇಳಿದ ಮಾತುಗಳು ಈ ರೀತಿ ಇದ್ದವು.

ಸಂಗೀತ ನಿರ್ದೇಶಕನೊಬ್ಬನಿಗೆ ಸಿನಿಮಾ ನಿರ್ದೇಶನ ಮಾಡುವುದು ಬಹಳ ಸುಲಭ ಯಾಕೆಂದರೆ ಈಗಾಗಲೇ ನಾವು ಸಂಗೀತ ನಿರ್ದೇಶಕರಾಗಿ ಹಲವು ಸಿನಿಮಾಗಳನ್ನು ನೋಡಿರುತ್ತೇವೆ. ನಾವು ಸಂಗೀತ ನಿರ್ದೇಶನ ಮಾಡುವಾಗಲೇ ಸಿನಿಮಾದ ವಿಷಯಗಳನ್ನು ಗಮನಿಸಿರುವುದರಿಂದ ನಿರ್ದೇಶಕನೊಬ್ಬ ಕ್ಯಾಮರ ಎಲ್ಲಿ ಇಡುತ್ತಾನೆ ಯಾವ ಲೆನ್ಸ್ ಬಳಸಿದ್ದಾನೆ ಅವನ ತಲೆಯಲ್ಲಿ ಈ ದೃಶ್ಯ ತೆಗೆಯುವಾಗ ಏನು ಓಡುತ್ತಿರಬಹುದು ಈ ಸಿನಿಮಾ ಗೆಲ್ಲುತ್ತದಾ ಇಲ್ಲವಾ ಏನು ಬದಲಾಯಿಸಬಹುದು ಇತ್ಯಾದಿ ವಿಚಾರಗಳೆಲ್ಲ ನಮ್ಮಲ್ಲೂ ಓಡುತ್ತಿರುತ್ತವೆ.

ನಾವು ಪ್ರಾಕ್ಟಿಕಲ್ ಆಗಿ ಎಲ್ಲವನ್ನೂ ತಿಳಿದುಕೊಂಡಿರುತ್ತೇವೆ. ಸ್ವಲ್ಪ ಥಿಯಾರಿಟಿಕಲ್ ಆಗಿ ಕಲಿಯುವುದು ಬಾಕಿ ಇರುತ್ತದೆ ಅದನ್ನು ಸಹ ಆಸಕ್ತಿಯಿಂದ ಕಲಿತುಬಿಟ್ಟರೆ ಸಂಗೀತ ನಿರ್ದೇಶಕನಾಗುವವನು ಸಿನಿಮಾ ನಿರ್ದೇಶಕರು ಸಹ ಆಗಬಹುದು. ಇದೇ ದಾರಿಯಲ್ಲಿ ನಾನು ಕೂಡ ಬಂದಿದ್ದು. ವಿ ಹರಿಕೃಷ್ಣ ಈಗಾಗಲೇ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ, ಈಗಿನ ಜನರೇಶನಲ್ಲಿ ನಂಬರ್ ಒನ್ ಸಂಗೀತ ನಿರ್ದೇಶಕ ಯಾರು ಎಂದು ಕೇಳಿದರೆ ವಿ. ಹರಿಕೃಷ್ಣ ಎಂದು ಎಲ್ಲರೂ ಹೇಳುವುದು.

ನಾನು ಈ ವಿಷಯದಲ್ಲಿ ಸೀನಿಯರ್ ಇರಬಹುದು ಅವರು ಜೂನಿಯರ್ ಇರಬಹುದು ಅಷ್ಟೇ ಆದರೆ ನನಗೂ ಹೆಚ್ಚಿನ ಟ್ಯಾಲೆಂಟ್ ಅವರಿಗಿದೆ. ಹಾಗಾಗಿ ಕ್ರಾಂತಿಯಿಂದ ಹರಿಕೃಷ್ಣ ಯಶಸ್ವಿ ಸಿನಿಮಾ ನಿರ್ದೇಶನ ಆಗುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ ಈಗಾಗಲೇ ಯಜಮಾನ ಸಿನಿಮಾದಲ್ಲೂ ಸಹ ನೀವು ಅವರ ಕೆಲಸವನ್ನು ನೋಡಿದ್ದೀರಾ ಎಂದು ಉದಾಹರಣೆಯನ್ನು ಕೊಟ್ಟಿದ್ದಾರೆ.

ಹರಿಕೃಷ್ಣ ಅವರ ಬಗ್ಗೆ ಕಡಿಮೆ ಮಾತನಾಡುತ್ತಾರೆ ಎನ್ನುವ ಆರೋಪ ಎಲ್ಲೆಡೆ ಇದೆ ಇದರ ಬಗ್ಗೆ ಕೂಡ ಸಾಧುಕೋಕಿಲ ಅವರು ಮಾತನಾಡಿದ್ದು ಹರಿಕೃಷ್ಣ ಮೊದಲ ದಿನದಿಂದಲೂ ಹಾಗೆ ಅವರಿಗೆ ಗೊತ್ತಿರುವುದು ಎರಡೇ ಒಂದು ಕೆಲಸ ಮತ್ತೊಂದು ಊಟ. ಈ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದೇ ಒಂದು ಕೆಟ್ಟ ಅಭ್ಯಾಸ ಇಲ್ಲದ ಒಬ್ಬನೇ ಒಬ್ಬ ವ್ಯಕ್ತಿ ಅಂದರೆ ಅದು ಹರಿಕೃಷ್ಣ ಮಾತ್ರ ಎಂದು ಹೇಳಿದ್ದಾರೆ.

ಕೊಟ್ಟ ಡೇಟ್ ನಾ ಇದ್ದಕ್ಕಿದ್ದಂತೆ ಸುದೀಪ್ ಕ್ಯಾನ್ಸಲ್ ಮಾಡ್ತಾರೆ, ನನ್ಗೆ ಬಂದಿದ್ದ ಕೋಪದಲ್ಲಿ ಸುದೀಪ್ ಗೆ ಹಿಗ್ಗಾ ಮುಗ್ಗ ಬೈದಿದ್ದಿನಿ.

 

ಹುಚ್ಚ ಸಿನಿಮಾ ನಂತರ ಕೊಟ್ಟಿದ್ದ ಡೇಟ್ ಕ್ಯಾನ್ಸಲ್ ಮಾಡಿಕೊಂಡಿದ್ದಕ್ಕಾಗಿ ಸುದೀಪ್ ಅವರಿಗೆ ಬಾಯಿಗೆ ಬಂದ ಹಾಗೆ ಅಂದಿದ್ದ ಡೇವಿಡ್. ಸುದೀಪ್ ಅವರು ಇನ್ನು ಕನ್ನಡ ಚಿತ್ರರಂಗದಲ್ಲಿ ಸ್ಟ್ರಗಲ್ ಮಾಡುತ್ತಿದ್ದ ದಿನಗಳು ಅವು. ಅದಾಗಲೇ ಪೊಲೀಸ್ ಸ್ಟೋರಿ ಅಂತಹ ಸಿನಿಮಾಗಳನ್ನು ಮಾಡಿ ನಿರ್ದೇಶಕರಾಗಿ ಹೆಸರು ಮಾಡಿದ್ದರು ಡೇವಿಡ್ ಅವರು. ಅವರಿಗೆ ಶೋಭರಾಜ್ ಅವರಿಂದ ಸುದೀಪ್ ರ ಪರಿಚಯ ಆಗುತ್ತದೆ.

ಸುದೀಪ್ ಅವರ ತಂದೆಯ ಸರೋವರ ಹೋಟೆಲ್ ಅಲ್ಲಿ ಅದೆಷ್ಟೋ ದಿನಗಳು ಒಟ್ಟಿಗೆ ಕೂತು ಎಲ್ಲಾ ಭಾಷೆಗಳ ಸಿನಿಮಾ ಕುರಿತು ಚರ್ಚೆ ಮಾಡಿರುತ್ತಾರೆ. ಸಿನಿಮಾ ಬಗ್ಗೆ ಇಬ್ಬರಿಗೂ ಆಕರ್ಷಣೆ ಆಸಕ್ತಿ ಇದ್ದ ಕಾರಣ ಅದೇ ಇವರಿಬ್ಬರ ಫ್ರೆಂಡ್ ಶಿಪ್ ಅನ್ನು ಅದು ಗಟ್ಟಿಗೊಳಿಸಿರುತ್ತದೆ. ಚಂದನ್ ಫಿಲಂ ಸುರೇಶ್ ಎನ್ನುವವರನ್ನು ಒಪ್ಪಿಸಿ ಸುದೀಪ್ ಅವರಿಗಾಗಿ ಒಂದು ಕಥೆಯನ್ನು ಸಹ ಎಸ್ ಎಸ್ ಡೇವಿಡ್ ಅವರು ರೆಡಿ ಮಾಡಿರುತ್ತಾರೆ.

ಆದರೆ ಅದರ ಬಜೆಟ್ ವಿಷಯದಲ್ಲಿ ಕಾಂಪ್ರಮೈಟ್ ಆಗದ ಕಾರಣ ಚಂದನ್ ಫಿಲಂ ಸುರೇಶ್ ಅವರು ಒಪ್ಪಿಕೊಳ್ಳುವುದಿಲ್ಲ. ಆ ಸಮಯದಲ್ಲಿ 80 ರಿಂದ ಒಂದು ಕೋಟಿ ಅಷ್ಟು ಸಿನಿಮಾಗೆ ಬಜೆಟ್ ಬಿದ್ದಿರುತ್ತದೆ. ಅವರನ್ನು ಕನ್ವೆನ್ಸ್ ಮಾಡುವ ಕಾರಣದಿಂದ ಸುದೀಪ್ ಅವರು ನನ್ನ ತಂದೆಯ ಜೊತೆ ಮಾತನಾಡಿ 25 ಲಕ್ಷ ಇನ್ವೆಸ್ಟ್ ಮಾಡುತ್ತೇನೆ ಎಂದರು ಸಹ ಆ ಪ್ರಾಜೆಕ್ಟ್ ಓಕೆ ಆಗುವುದೇ ಇಲ್ಲ. ನಂತರ ಸುದೀಪ್ ಅವರು ಹುಚ್ಚ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗುತ್ತಾರೆ.

ಆ ಸಿನಿಮಾ ಶೂಟಿಂಗ್ ಅರ್ಧ ಆಗಿರುತ್ತದೆ ಆ ಸಮಯದಲ್ಲಿ ಮತ್ತೊಮ್ಮೆ ಪ್ರೊಡ್ಯೂಸರನ್ನು ಹಿಡಿದುಕೊಂಡು ಸುದೀಪ್ ಅವರಿಗಾಗಿ ಮತ್ತೊಂದು ಕಥೆ ರೆಡಿ ಮಾಡಿಕೊಂಡು ಅವರ ಬಳಿ ಹೋಗುತ್ತಾರೆ ಡೇವಿಡ್. ಅಂದು ಸುದೀಪ್ ಅವರ ಎಂಗೇಜ್ಮೆಂಟ್ ಇರುತ್ತದೆ, ಅದೇ ದಿನ ಕಥೆ ಕೇಳಿದ ಸುದೀಪ್ ಅವರು ಸಿನಿಮಾ ಮಾಡುವುದಾಗಿ ಒಪ್ಪಿಕೊಳ್ಳುತ್ತಾರೆ ಆ ಸಮಯದಲ್ಲಿ ಹುಚ್ಚ ಹಿಟ್ ಆಗುತ್ತದೆ ಎನ್ನುವ ಭರವಸೆ ಎಲ್ಲರಲ್ಲೂ ಇರುತ್ತದೆ.

ಹೀಗಾಗಿ ಆದಷ್ಟು ಬೇಗ ಸಿನಿಮಾ ಶುರು ಮಾಡಬೇಕು ಎನ್ನುವ ನಿರ್ಮಾಪಕರ ಒತ್ತಾಯದ ಮೇರೆಗೆ ಅಡ್ವಾನ್ಸ್ ಸಹ ಕೊಟ್ಟು ಡೇಟ್ಸ್ ಬಗ್ಗೆ ಮಾತನಾಡಲು ಸುದೀಪ್ ಅವರ ಬಳಿಗೆ ಸಹಾಯಕರನ್ನು ಕಳುಹಿಸುತ್ತಾರೆ. ಆದರೆ ಸುದೀಪ್ ಅವರು ಶೂಟಿಂಗ್ ಅಲ್ಲಿ ಬ್ಯುಸಿ ಇದ್ದ ಕಾರಣ ಅವರ ತಂದೆ ಅಡ್ವಾನ್ಸ್ ತೆಗೆದುಕೊಳ್ಳದೆ ಸುದೀಪ್ ಅವರು ನಿಮ್ಮ ಜೊತೆ ಮಾತನಾಡಬೇಕು ಎಂದು ಹೇಳಿ ಕಳುಹಿಸಿರುತ್ತಾರೆ.

ಶೂಟಿಂಗ್ ನಲ್ಲಿದ್ದ ಸುದೀಪ್ ಅವರನ್ನು ಸಂಪರ್ಕಿಸಲು ಎಸ್ಎಸ್ ಡೇವಿಡ್ ಅವರು ಕರೆ ಮಾಡಿ ಪ್ರಯತ್ನ ಪಟ್ಟರು ಶಾರ್ಟ್ ಅಲ್ಲಿ ಇದ್ದ ಕಾರಣ ಸುದೀಪ್ ಅವರು ಮಾತನಾಡಿರುವುದಿಲ್ಲ. ನಂತರ ಅವರೇ ಬಂದು ಕರೆ ಮಾಡಿ ಹುಚ್ಚ ಆದ ನಂತರ ಹೋಂ ಬ್ಯಾನರ್ ಅಲ್ಲಿ ಸಿನಿಮಾ ಸ್ಟಾರ್ಟ್ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ನೀವು ನನ್ನ ಹಿತೈಷಿಗಳು ದಯವಿಟ್ಟು ಯಾವುದೇ ಕಾರಣಕ್ಕೂ ಬೇಸರ ಮಾಡಿಕೊಳ್ಳಬೇಡಿ ಮುಂದೊಂದು ದಿನ ಈ ಸ್ಕ್ರಿಪ್ ಮಾಡೋಣ ಅಥವಾ ನಮ್ಮ ಸಿನಿಮಾ ಆದಮೇಲೆ ಮಾಡೋಣ ಈಗ ನನಗೆ ಡೇಟ್ಸ್ ಕೊಡಲು ಆಗುವುದಿಲ್ಲ ಎಂದು ಬಿಡುತ್ತಾರೆ.

ಆ ಕೋಪದಲ್ಲಿ ಸುದೀಪ್ ಅವರನ್ನು ಬಾಯಿಗೆ ಬಂದ ಹಾಗೆ ಡೇವಿಡ್ ಅವರು ಬೈದಿರುತ್ತಾರಂತೆ. ಆ ಬಗ್ಗೆ ಇಂದು ಪಶ್ಚತ್ತಾಪ ಪಟ್ಟುಕೊಳ್ಳುತ್ತಿರುವ ಡೇವಿಡ್ ಅವರು ಸುದೀಪ್ ಅವರು ನಿಜವಾಗಲೂ ವಿಶೇಷ ವ್ಯಕ್ತಿತ್ವದವರು ಅಂದು ನಾನು ಆ ಕೋಪದಲ್ಲಿ ಅಷ್ಟು ಮಾತನಾಡಿದರು ಸಹ ಇಂದಿಗೂ ಅದನ್ನು ಸ್ವಲ್ಪವೂ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ ಅದಾದ ಬಳಿಕವೂ ಸಹ ನನ್ನ ಜೊತೆ ಏನು ಆಗಿಲ್ಲ ಎನ್ನುವಂತೆ ಸಹಜವಾಗಿದ್ದಾರೆ.

ಮತ್ತು ಅವರ ತಿರುಪತಿ ಸಿನಿಮಾಗೆ ಸ್ಕ್ರಿಪ್ಟ್ ರೆಡಿ ಮಾಡಿದ್ದೆ ನಾನು ಆದರೆ ರೆಡಿ ಮಾಡುವ ವೇಳೆ ನನಗೆ ಸುದೀಪ್ ಅವರು ಹೀರೋ ಎನ್ನುವುದು ಗೊತ್ತಿರಲಿಲ್ಲ. ಕಥೆ ಹೇಳುವ ಸಮಯದಲ್ಲಿ ನಿರ್ದೇಶಕರು ಹಾಗೂ ನಿರ್ವಾಕಪಕರು ನೀವೇ ಬಂದು ಕಥೆ ಹೇಳಬೇಕು ಎಂದು ಹೇಳಿದಾಗ ಸುದೀಪ್ ಅವರಿಗೆ ಬೇಸರ ಮಾಡಿದ್ದೇನೆ ನಾನು ಬರುವುದಿಲ್ಲ ಎಂದರು ಸುದೀಪ್ ಅವರೇ ನನಗೆ ಹೇಳಿ ಕಳುಹಿಸಿ ಕರೆಸಿಕೊಂಡಿದ್ದರು ಎಂದು ಇತ್ತೀಚೆಗೆ ಪಿ ಗಣಪತಿ ಅವರ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ ಡೇವಿಡ್ ಅವರು.

ಫಿಲ್ಮ್ ಚೇಂಬರ್ ನಲ್ಲಿ ವಿಷ್ಣು ಬಯೋಡೇಟಾನೇ ಇಲ್ಲ ಅದ್ಕೆ ಪದ್ಮಶ್ರೀ ಅವಾರ್ಡ್ ಗೆ ಶಿಫಾರಸ್ಸು ಮಾಡಲ್ಲ. ಶಾ-ಕಿಂಗ್ ಹೇಳಿಕೆ ನೀಡಿದ ನಟಿ ಜಯಮಾಲ

ವಿಷ್ಣು ದಾದಾ ಅವರಿಗೆ ಪದ್ಮಶ್ರೀ ಯಾಕೆ ಕೊಡಲಿಲ್ಲ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ಜಯಮಾಲಾ ಕೊಟ್ಟ ಬಾಲಿಶ ಉತ್ತರ ಏನು ಗೊತ್ತಾ ಕರ್ನಾಟಕ ತಾಯಿ ಕಂಡ ಈ ನೆಲದ ಶ್ರೇಷ್ಠ ಪುತ್ರರಲ್ಲಿ ಕನ್ನಡ ಚಲನಚಿತ್ರ ರಂಗದ ಮೇರು ನಟ ಅಭಿನಯ ಭಾರ್ಗವ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರು ಕೂಡ ಒಬ್ಬರು.

ಇಡೀ ಕರ್ನಾಟಕದ ಏಳು ಕೋಟಿ ಕನ್ನಡಿಗರ ಆಸ್ತಿ ಅವರು, ಒಬ್ಬ ಸಿನಿಮಾ ಸೂಪರ್ ಸ್ಟಾರ್ ಎನ್ನುವ ಮಾತ್ರಕ್ಕೆ ಅವರಿಗೆ ಅಭಿಮಾನಿಗಳು ಆದವರಿಗಿಂತ ಅವರ ವ್ಯಕ್ತಿತ್ವವನ್ನು ಕಂಡು ಅಭಿಮಾನ ಹೆಚ್ಚಿಸಿಕೊಂಡವರೇ ಹೆಚ್ಚು. ತಮ್ಮ ಇಡೀ ಬದುಕನನ್ನೇ ಒಬ್ಬ ಸಂತನಂತೆ ಕಳೆದ ಈ ಅಭಿನವ ಸಂತ ತೆರೆ ಮೇಲೆ ಕೋಟಿಗೊಬ್ಬನಾಗಿ ವಿಷ್ಣು ದಾದನಾಗಿ ಮೆರೆದು, ಪ್ರೀತಿಯ ಅಭಿಮಾನಿಗಳ ಹೃದಯ ಸಾಹುಕಾರನಾಗಿ ಯಜಮಾನ ಎಂದು ಕರೆಸಿಕೊಂಡಿದ್ದರೂ ವೈಯಕ್ತಿಕ ಬದುಕಿನಲ್ಲಿ ಮಾತ್ರ ದುರಂತ ನಾಯಕನೇ ಸರಿ.

ವಿಷ್ಣುವರ್ಧನ್ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ದಿನದಿಂದಲೂ ಸಹಾ ಅವರಿಗೆ ಕನ್ನಡ ಚಲನಚಿತ್ರ ರಂಗ ಮತ್ತು ಸರ್ಕಾರ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕೊಡಬೇಕಾದ ಗೌರವ ಕೊಟ್ಟಿಲ್ಲ ಎನ್ನುವುದು ನಾನಾ ಘಟನೆಗಳಿಂದ ಸಾಬೀತಾಗಿದೆ. ಅದರಲ್ಲೂ ಕೆಲವು ಉದಾಹರಣೆಗಳನ್ನು ಹೇಳುವುದಾದರೆ ವಿಷ್ಣುವರ್ಧನ್ ಅವರು ತೀರಿಕೊಂಡ ವರ್ಷ ಅಂದರೆ 2019ರಲ್ಲಿ ಕನ್ನಡ ಚಿತ್ರರಂಗ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತದೆ.

ಅರಮನೆ ಮೈದಾನದ ಅಂಗಳದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಆ ಕಾರ್ಯಕ್ರಮದಲ್ಲಿ ಕನ್ನಡದ ಎರಡು ಕಣ್ಣುಗಳಲ್ಲಿ ಒಂದು ಎನಿಸಿಕೊಂಡಿದ್ದ ವಿಷ್ಣುವರ್ಧನ್ ಅವರು ಸಹ ಇರುತ್ತಾರೆ. ಆದರೆ ಕಾರ್ಯಕ್ರಮದ ಉದ್ಘಾಟನೆ ವೇಳೆ ವೇದಿಕೆ ಮೇಲೆ ಯಾರು ಸಹ ಅವರನ್ನು ಆಹ್ವಾನಿಸುವುದಿಲ್ಲ. ಬೇರೆ ಬೇರೆ ಕಲಾವಿದರುಗಳು, ಮುಖ್ಯಮಂತ್ರಿಗಳು ಎಲ್ಲರೂ ಸೇರಿ ಕಾರ್ಯಕ್ರಮ ಮಾಡುತ್ತಿದ್ದರೂ ಏಕಾಂಗಿಯಾಗಿ ವೇದಿಕೆ ಕೆಳಗೆ ದಾದಾ ನಿಂತಿರುತ್ತಾರೆ.

ಅಂದು ಅವರು ಒಂದೇ ಒಂದು ಕರೆ ಕೊಟ್ಟಿದ್ದರು ಇಡೀ ಅವರ ಅಭಿಮಾನಿ ಬಳಗವೇ ಸಿಡಿದೇಳುತ್ತಿತ್ತು. ಆದರೆ ಕಾರ್ಯಕ್ರಮ ಚೆನ್ನಾಗಿ ಆದರೆ ಸಾಕು ಎಂದು ಈ ಹೃದಯವಂತ ನಗುನಗುತ ಮೌನವಾಗಿ ನಿಂತಿದ್ದರು. ಯಾಕೆಂದರೆ ಇದೆಲ್ಲವೂ ಅವರಿಗೆ ಅಭ್ಯಾಸವಾಗಿ ಹೋಗಿತ್ತು. ಇದಕ್ಕಿಂತಲೂ ತೀರ ಕಡಿಮೆಯಾಗಿ ಅವರನ್ನು ನಡೆಸಿಕೊಂಡಿದ್ದಾರೆ. ಅದೇ ವರ್ಷ ವಿಷ್ಣುವರ್ಧನ್ ಅವರು ಕಣ್ಮುಚ್ಚುತ್ತಾರೆ.

ಇಹ ಲೋಕದ ಯಾತ್ರೆ ಮುಗಿಸಿದ ಸಿರಿವಂತ ದೈವ ಮಾನವನಂತೆ ಸ್ವರ್ಗಸ್ತರಾಗುತ್ತಾರೆ. ಮುಂದಿನ ವರ್ಷಗಳಲ್ಲಿ ಅಭಿಮಾನಿಗಳೆಲ್ಲಾ ದಾದನ ಹೆಸರನ್ನು ಯಾಕೆ ಪದ್ಮಶ್ರಿಗೆ ಶಿಫಾರಸ್ಸು ಮಾಡುತ್ತಿಲ್ಲ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸರ್ಕಾರಕ್ಕೆ ಈ ಕುರಿತು ಮನವಿ ಮಾಡಿ ಎಂದು ಕೇಳಲು ಹೋಗುತ್ತಾರೆ. ಆಗ ಅಂದಿನ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ಜಯಮಾಲಾ ಅವರು ನಾವು ಇನ್ನೂ ಅವರ ಹೆಸರನ್ನು ಶಿಫಾರಸು ಮಾಡದೆ ಇರುವುದಕ್ಕೆ ಕೊಟ್ಟ ಕಾರಣ ನಮ್ಮ ಬಳಿ ವಿಷ್ಣುವರ್ಧನ್ ಅವರ ಬಯೋಡೇಟಾ ಇಲ್ಲ ಎನ್ನುವುದು.

ಆ ಉತ್ತರ ಕೇಳಿದ ಯಾರಿಗೆ ಆದರೂ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. 200 ಸಿನಿಮಾ ಗಳಲ್ಲಿ ನಟಿಸಿರುವ ನೂರಾರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಈ ಕಲಾಸರಸ್ವತಿ ಪುತ್ರನ ಬಯೋಡೇಟಾ ಕನ್ನಡ ವಾಣಿಜ್ಯ ಮಂಡಳಿಯಲ್ಲಿ ಇಲ್ಲ ಎಂದರೆ ಅದಕ್ಕೆ ಯಾವ ಅರ್ಥವೂ ಇಲ್ಲ. ಹೀಗೆ ಅವರನ್ನು ಬದುಕನುದ್ದಕ್ಕೂ ಎಲ್ಲರೂ ನೋಯಿಸಿದ್ದಾರೆ ಸ-ತ್ತ ಮೇಲೆ ಸಹ ಅವರ ಸಮಾಧಿ ವಿಚಾರದಲ್ಲೂ ಇದೇ ರೀತಿ ತಕರಾರು ನಡೆಯುತ್ತಿದೆ.

ಅಭಿಮಾನ್ ಸ್ಟುಡಿಯೋದಲ್ಲಿಯೇ ಅವರ ಸ್ಮಾರಕ ಆಗಬೇಕು ಎನ್ನುವುದು ಕುಟುಂಬಸ್ಥರು ಹಾಗೂ ಅಭಿಮಾನಿಗಳ ಇಚ್ಛೆ. ಆದರೆ ಸರ್ಕಾರ ಆ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸದೆ ಬೇರೆ ಕಡೆ ಸ್ಥಳ ಕೊಡುತ್ತೇವೆ, ಸ್ಮಾರಕವನ್ನೇ ಬೇರೆ ಕಡೆ ಶಿಫ್ಟ್ ಮಾಡುತ್ತೇವೆ ಎಂಬಿತ್ಯಾದಿ ವಾಯ್ದೆ ಹೇಳಿಕೊಂಡು ಮುಂದೂಡುತ್ತಲೇ ಇದೆ. ವಿಷ್ಣುವರ್ಧನ್ ಅವರಿಗೆ ಇವರೆಲ್ಲರಿಂದ ಅನ್ಯಾಯ ಆಗಿದ್ದರೂ ಕೂಡ ಅಭಿಮಾನಿಗಳ ಹೃದಯದಲ್ಲಿ ಮಾತ್ರ ಇವರು ಸೂರ್ಯ ಚಂದ್ರ ಇರುವವರೆಗೂ ಈ ಸಾಹುಕಾರ ಶಾಶ್ವತವಾಗಿ ನೆಲೆಸಿರುತ್ತಾರೆ.

ದರ್ಶನ್ ಸುದೀಪ್ ಇಬ್ಬರು ಮೊದಲಿನ ರೀತಿ ಒಂದಾಗ್ತಾರ ಅಂತ ಕೇಳಿದಕ್ಕೆ ರವಿಶಂಕರ್ ಹೇಳಿದ್ದೇನು ಗೊತ್ತ.? ಒಂದು ಕ್ಷಣ ಎಲ್ಲರೂ ಮೂಖ ವಿಸ್ಮಿತ

 

ರವಿಶಂಕರ್ ಅವರು ಕನ್ನಡದ ಸಿನಿಮಾಗಳಲ್ಲಿ ಖಳನಾಯಕನಾಗಿ ನಾಯಕ ನಟನಾಗಿ ಪೋಷಕ ಪಾತ್ರದಾರಿಯಾಗಿ ಕಾಮಿಡಿ ಆಕ್ಟರ್ ಆಗಿ ಕಳೆದ ಒಂದು ದಶಕದಲ್ಲಿ ನಾನಾ ರೀತಿ ನಮ್ಮನ್ನು ಮನೋರಂಜಸಿದ್ದಾರೆ. ಇವರನ್ನು ನಮ್ಮ ಇಂಡಸ್ಟ್ರಿಗೆ ಕರೆ ತಂದಿದ್ದೇ ಕಿಚ್ಚ ಸುದೀಪ್ ಅವರು. ಇದನ್ನು ಅವರೇ ಎಷ್ಟೋ ಬಾರಿ ಹಲವು ವೇದಿಕೆಗಳಲ್ಲಿ ಹೇಳಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕೆಂಪೇಗೌಡ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ರವಿಶಂಕರ್ ಅವರು ಸುದೀಪ್ ಅವರ ಆತ್ಮೀಯರು. ಈಗ ದರ್ಶನ್ ರ ಕ್ರಾಂತಿ ಸಿನಿಮಾದಲ್ಲೂ ಕೂಡ ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಬಗ್ಗೆ ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದು ದರ್ಶನ್ ಮತ್ತು ಸುದೀಪ್ ಅವರ ಫ್ರೆಂಡ್ ಶಿಪ್ ಬಗ್ಗೆ ಕೂಡ ಮಾತನಾಡಿದ್ದಾರೆ ಮತ್ತು ಕೆಲವು ಹಳೆ ವಿಷಯಗಳ ನೆನಪು ಮಾಡಿಕೊಂಡು ಅವುಗಳ ಅನುಭವಗಳನ್ನು ಹಚ್ಚಿಕೊಂಡಿದ್ದಾರೆ.

ರವಿಶಂಕರ್ ಅವರು ಹೇಳಿದ್ದು ಈ ರೀತಿ ನಾನು ಸುದೀಪ್ ಅವರಿಂದ ಇಲ್ಲಿಗೆ ಬಂದದ್ದಾದರೂ ಇಂದು ದರ್ಶನ್ ಜೊತೆ ಪುನೀತ್ ಜೊತೆ ಶಿವಣ್ಣ ಯಶ್ ಹೀಗೆ ಬಹುತೇಕ ಎಲ್ಲರ ಜೊತೆಗೆ ಸಿನಿಮಾ ಮಾಡಿದ್ದೇನೆ. ಇದು ನನ್ನ ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ಒಬ್ಬೊಬ್ಬ ಸ್ಟಾರ್ ಗೂ ಕೂಡ ಅವರದ್ದೇ ರೀತಿಯ ಒಂದೊಂದು ಸ್ಟೈಲ್ ಇರುತ್ತದೆ. ಹಾಗೆ ದರ್ಶನ್ ಅವರದು ಒಂದು ರೀತಿ ಸುದೀಪ್ ಅವರದೇ ಒಂದು ರೀತಿ‌.

ಒಟ್ಟಿನಲ್ಲಿ ನೋಡುಗರನ್ನು ಮೆಚ್ಚಿಸಬೇಕು ಅಷ್ಟೇ ಎಂದ ಅವರು ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ ದರ್ಶನ್ ಅವರಿಗಾದ ಅವಮಾನದ ಘಟನೆ ಬಗ್ಗೆ ಕೂಡ ಮಾತನಾಡಿದ್ದಾರೆ. ದರ್ಶನ್ ಅವರಂತಹ ಮೇರುನಟ ಈ ಒಂದು ಘಟನೆಗೆ ರಿಯಾಕ್ಟ್ ಮಾಡಿರುವ ರೀತಿಗೆ ಕೈ ಮುಗಿಯಬೇಕು. ಯಾಕೆಂದರೆ ದರ್ಶನ್ ಅವರೇ ಹೇಳಿದ್ದಾರೆ. ಹಾರ ಹಾಕುವ ಕೈಗಳು ಈ ರೀತಿ ಮಾಡಿದ್ದಾವೆ ಎಂದರೆ ಅದನ್ನು ಕೂಡ ಅದೇ ಪ್ರೈಡ್ ಅಲ್ಲಿ ತೆಗೆದುಕೊಳ್ಳುತ್ತೇನೆ ಎಂದು ಅದು ಎಲ್ಲರಿಗೂ ಬರುವುದಿಲ್ಲ ಈ ವಿಷಯದಲ್ಲಿ ನಾನು ಎಂದಿಗೂ ಕೂಡ ದರ್ಶನ್ ಅವರ ಪರವಾಗಿ ಇದ್ದೇನೆ.

ನಾವೆಲ್ಲಾ ಬಣ್ಣ ಹಚ್ಚುವುದೇ ಸೆಲೆಬ್ರಿಟಿಗಳಿಗಾಗಿ ಅವರನ್ನು ಮನೋರಂಜಿಸುವ ಸಲುವಾಗಿ. ದರ್ಶನ್ ಅವರಿಗೆ ಮಾತ್ರವಲ್ಲ ಯಾರಿಗೂ ಕೂಡ ಈ ರೀತಿ ಆಗಬಾರದು ಎಂದಿದ್ದಾರೆ. ಮತ್ತು ದರ್ಶನ್ ಅವರ ಹಾಗೂ ಸುದೀಪ್ ಅವರ ಫ್ರೆಂಡ್ಶಿಪ್ ಬಗ್ಗೆ ಕೂಡ ಪ್ರಶ್ನೆ ಬಂದಾಗ ರವಿಶಂಕರ್ ಅವರು ಈ ರೀತಿ ಉತ್ತರಿಸಿದ್ದಾರೆ. ಹೇಗೆ ಸುದೀಪ್ ಅವರು ದರ್ಶನ್ ಅವರ ಪರವಾಗಿ ರಾಗಿ ನಿಂತು ಟ್ವಿಟ್ ಮಾಡಿದರು, ದರ್ಶನ್ ಅವರು ರಿಪ್ಲೈ ಮಾಡಿದಾಗ ಕರ್ನಾಟಕ ಅದನ್ನು ಹೇಗೆ ಅದನ್ನು ಸೆಲೆಬ್ರೇಟ್ ಮಾಡಿದರೂ ನಾನು ಕೂಡ ಅವರಿಬ್ಬರ ಜೊತೆಗಾರನಾಗಿ ಅಷ್ಟೇ ಖುಷಿ ಪಟ್ಟೆ.

ಅವರಿಬ್ಬರೂ ಪ್ರೊಫೆಷನಲ್ ಡೀಸೆನ್ಸಿ ಮೇಂಟೇನ್ ಮಾಡುತ್ತಿದ್ದಾರೆ. ಅವರಿಬ್ಬರ ನಡುವೆ ಇರುವ ಗಾಢಸ್ನೇಹ ಎಂತದ್ದು ಎಂದು ನಾನು ಇಬ್ಬರನ್ನು ಹತ್ತಿರದಿಂದ ಬಲ್ಲೆ. ನಾವು ಆ ದಿನಗಳಲ್ಲಿ ಒಟ್ಟಿಗೆ ಒಂದು ಬೈಕ್ ರೈಡ್ ಕೂಡ ಮಡಿಕೇರಿಗೆ ಹೋಗಿದ್ದೆವು. ಆ ಸಮಯದಲ್ಲಿ ಕಳೆದ ಒಂದೊಂದು ದಿನ ಒಂದೊಂದು ಕ್ಷಣವೂ ಕೂಡ ಕೊನೆವರೆಗೆ ನನಗೆ ನೆನಪಿನಲ್ಲಿ ಇರುತ್ತದೆ. ಮತ್ತೆ ಆ ದಿನಗಳು ಬರಲಿ ಎನ್ನುವುದೇ ಎಲ್ಲರಂತೆ ನನ್ನ ಆಸೆ ಕೂಡ. ಆದರೆ ಅದು ಅವರ ವೈಯಕ್ತಿಕ ಅದು ಅವರ ಕಡೆಯಿಂದಲೇ ಬರುವವರೆಗೆ ನಾವು ಬಲವಂತವಾಗಿ ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ನಾನು ಸಹ ಆ ದಿನಗಳಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.