Home Blog Page 259

ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದ ಹಾಗೆಯೇ ದರ್ಶನ್ ವಿರುದ್ಧ ಚಪ್ಪಲಿ ಎಸೆದವನಿಗೆ ಖಡಕ್ ಎಚ್ಚರಿಕೆ ಕೊಟ್ಟ ರೂಪೇಶ್ ರಾಜಣ್ಣ, ಇವರ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ ನೋಡಿ.

 

ಬಿಗ್ ಬಾಸ್ ಮನೆಯಲ್ಲಿ ಸುಮಾರು 100 ದಿನಗಳ ಕಾಲ ಇದ್ದು ಫಿನಾಲೆ ಅಂತಕ್ಕೆ ಬಂದು ನಾಲ್ಕನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದಂತಹ ರೂಪೇಶ್ ರಾಜಣ್ಣ ಅವರು ದರ್ಶನ್ ಮೇಲೆ ಚಪ್ಪಲಿ ಎಸೆದ ವಿಚಾರ ತಿಳಿದು ತಕ್ಷಣವೇ ಲೈವ್ ಬಂದು ದರ್ಶನ್ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ದರ್ಶನ್ ಅವರ ತೇಜೋವಧೆ ಮಾಡುವುದಕ್ಕೆ ಕಾದು ಕುಳಿತಿದ್ದೀರಾ ದರ್ಶನ್ ಒಬ್ಬರನ್ನೇ ನೀವು ಟಾರ್ಗೆಟ್ ಮಾಡ್ತಾ ಇದ್ದೀರಾ.? ಒಂದು ಹೇಳ್ತೀನಿ ಕೇಳಿ ಒಬ್ಬ ಲೈಟ್ ಬಾಯ್ ಆಗಿದ್ದಾಗಲೇ ಅವರನ್ನು ಯಾರು ಏನು ಮಾಡಲಿಕ್ಕೆ ಆಗಲಿಲ್ಲ ಇನ್ನು ಈಗ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ ಹಾಗಾಗಿ ದರ್ಶನ್ ಅನ್ನು ಯಾರು ಏನು ಮಾಡಕ್ಕೆ ಸಾಧ್ಯ ಇಲ್ಲ ಎಂದಿದ್ದಾರೆ.

ಇದರ ಜೊತೆಗೆ ರೂಪೇಶ್ ರಾಜಣ್ಣ ಅವರು ಹಿಂದಿ ಹೇರಿಕೆಯ ವಿರುದ್ಧ ಹೋರಾಟ ಮಾಡುತ್ತಾರೆ ಆ ಸಮಯದಲ್ಲಿ ಕನ್ನಡದ ಸಾಕಷ್ಟು ನಟ ನಟಿಯರು ರಾಜಣ್ಣ ಅವರಿಗೆ ಸಾತ್ ಕೊಡುತ್ತಾರೆ ಸಪೋರ್ಟ್ ಮಾಡುತ್ತಾರೆ. ಇದರ ಜೊತೆಗೆ ರಾಜಣ್ಣ ಅವರು ದರ್ಶನ್ ಆಪ್ತರಿಗೊಬ್ಬರು ಕರೆ ಮಾಡಿ ದಯವಿಟ್ಟು ದರ್ಶನ್ ಸರ್ ಅವರ ಕಡೆಯಿಂದ ಒಂದು ಸ್ಟೇಟ್ಮೆಂಟ್ ಕೊಡಿಸಿ ಕನ್ನಡ ಪರ ಹೋರಾಟಗಾರರ ಪರ ನಿಲ್ಲಲಿ ಎಂದು ಹೇಳುತ್ತಾರೆ. ರಾಜಣ್ಣ ಹಾಗೆ ಹೇಳಿದ ಕೆಲವೇ ಗಂಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಸ್ಟೇಟ್ಮೆಂಟ್ ಕೊಡುತ್ತಾರೆ.

ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಮೊದಲ ಭಾಷೆ ಕನ್ನಡವೇ ಆಗಿರುತ್ತದೆ ಬೇರೆ ಭಾಷೆಗಳಿಗೆ ನಾವು ವಿರೋಧ ಮಾಡುವುದಿಲ್ಲ. ಆದರೆ ನಮ್ಮ ಭಾಷೆಯನ್ನು ಖಂಡನಿಯವಾಗಿ ನೋಡಿದರೆ ನಾವು ಅದನ್ನು ನೋಡುತ್ತಾ ಸುಮ್ಮನೆ ಕೂರುವ ಮಕ್ಕಳೇ ಅಲ್ಲ ಎಂದು ಕಡಕ್ ಎಚ್ಚರಿಕೆ ನೀಡುತ್ತಾರೆ. ಇದಕ್ಕೋಸ್ಕರ ಆದರೂ ನಾನು ದರ್ಶನ್ ಅವರಿಗೆ ಸಪೋರ್ಟ್ ಮಾಡಲೇಬೇಕು, ದರ್ಶನ್ ಇದೇ ಮೊದಲೇನಲ್ಲ ಕನ್ನಡ ಭಾಷೆಯ ಬಗ್ಗೆ ನಾಡಿನ ಬಗ್ಗೆ ಮತ್ತು ಜಲದ ಬಗ್ಗೆ ಮಾತನಾಡಿರುವುದು ಸಾಕಷ್ಟು ಬಾರಿ ಮಾತನಾಡಿದ್ದಾರೆ.

ನಿಮ್ಮೆಲ್ಲರಿಗೂ ಒಂದು ವಿಚಾರ ತಿಳಿದಿಲ್ಲ ನಮ್ಮ ಕನ್ನಡ ಅಭಿಮಾನ ದರ್ಶನ್ ಅವರಿಗೆ ಎಷ್ಟಿದೆ ಅಂದರೆ ಒಮ್ಮೆ ಆಂಧ್ರಪ್ರದೇಶಕ್ಕೆ ಶೂಟಿಂಗ್ ಗೆ ತೆರಳಿದ್ದಾಗ ಅಲ್ಲಿ ಕನ್ನಡ ಚಾನೆಲ್ ಬರುವುದಿಲ್ಲ ಅಂತ ಹೇಳಿದ್ದಕ್ಕೆ ಗಲಾಟೆ ಮಾಡಿ ಶೂಟಿಂಗ್ ಸೆಟ್ ನಿಂದ ಆಚೆ ಬಂದಿದ್ದರು. ಬೇರೆ ರಾಜ್ಯದಲ್ಲೂ ಕೂಡ ನಮ್ಮ ರಾಜ್ಯ ಅಭಿಮಾನವನ್ನು ತೋರಿದ್ದಾರೆ ಕನ್ನಡದ ಅಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ಹಾಗಾಗಿ ನಟ ದರ್ಶನ್ ಅವರ ಮೇಲೆ ಈ ರೀತಿಯಾದಂತಹ ಕೃತ್ಯವನ್ನು ಎಸೆಗಿರುವುದು ನಿಜಕ್ಕೂ ತಪ್ಪು ಅದೇನೇ ಆಗಲಿ ಒಂದು ಮಾತನ್ನು ಹೇಳ್ತೀನಿ ಕೇಳಿ.

ಯಾವಾಗಲೂ ಮಾವಿನ ಮರಕ್ಕೆ ಕಲ್ಲು ಹೊಡೆಯುತ್ತಾರೆ, ಬೇವಿನ ಮರಕ್ಕೆ ಕಲ್ಲು ಹೊಡೆಯುವುದಿಲ್ಲ ಯಾಕೆ ಹೇಳಿ ಮಾವಿನ ಹಣ್ಣು ಎಲ್ಲರಿಗೂ ಸಿಹಿಯನ್ನು ನೀಡುತ್ತದೆ. ಯಾರಿಗೂ ಕೂಡ ಕೆಟ್ಟದ್ದು ಬಯಸುವುದಿಲ್ಲ ಯಾರ ಬಗ್ಗೆಯೂ ಕೂಡ ಕೆಟ್ಟ ಯೋಚನೆ ಮಾಡುವುದಿಲ್ಲ ಹೀಗಾಗಿಯೇ ದರ್ಶನ್ ಅವರಿಗೆ ಚಪ್ಪಲಿ ಎಸೆದಿದ್ದಾರೆ ಎಂದು ರೂಪೇಶ್ ರಾಜಣ್ಣ ಅವರು ಭಾವುಕರಾಗಿದ್ದಾರೆ. ದರ್ಶನ್ ಕೇವಲ ಕನ್ನಡ ನಾಡು ನುಡಿ ಬಗ್ಗೆ ಮಾತ್ರವಲ್ಲದೆ ಇಲ್ಲಿನ ವನ್ಯ ಜೀವಿಗಳ ಬಗ್ಗೆಯೂ ಕೂಡ ಅತೀವ ಆಸಕ್ತಿಯನ್ನು ಹೊಂದಿದ್ದಾರೆ.

ಲಾಕ್ಡೌನ್ ಸಮಯದಲ್ಲಿ ಜನರು ಸಾಕಷ್ಟು ಸಂಕಷ್ಟವನ್ನು ಎದುರಿಸಿದರು ಸಹಾಯ ಮಾಡಿ ಅಂತ ಮನವಿ ಕೋರಿದ್ದರು ಶ್ರೀಮಂತರು ಬಡ ಸಹಾಯ ಮಾಡಿದ್ದಾರೆ. ಆದರೆ ಪ್ರಾಣಿಗಳಲ್ಲಿ ಶ್ರೀಮಂತರು ಬಡವರು ಎಂಬ ಭೇದಭಾವ ಇಲ್ಲ ಆ ಸಮಯದಲ್ಲಿ ಮೃಗಾಲಯ ಬಹಳ ನಷ್ಟದಲ್ಲಿತ್ತು. ಆ ಸಮಯದಲ್ಲಿ ದರ್ಶನ್ ಇಡೀ ಕರ್ನಾಟಕದ ಜನತೆಗೆ ಒಂದು ಕರೆ ಕೊಡುತ್ತಾರೆ ದಯವಿಟ್ಟು ಎಲ್ಲರೂ ಕೂಡ ಒಂದೊಂದು ಪ್ರಾಣಿಯನ್ನು ದತ್ತು ತೆಗೆದುಕೊಳ್ಳಿ ಅಂತ.

ದರ್ಶನ್ ಅವರ ಕರೆಗೆ ಒಗ್ಗೂಡಿದಂತಹ ಕರ್ನಾಟಕದ ಜನರು ಮೃಗಾಲಯದಲ್ಲಿ ಇರುವಂತಹ ಪ್ರಾಣಿಗಳನ್ನು ದತ್ತು ಪಡೆಯುತ್ತಾರೆ ಇದರಿಂದ ಮೃಗಾಲಯಕ್ಕೆ ಸುಮಾರು ಮೂರು ಕೋಟಿ ಹಣ ಸಂಗ್ರಹವಾಗುತ್ತದೆ. ಇದರಿಂದಲೇ ತಿಳಿಯುತ್ತದೆ ಪ್ರಾಣಿಗಳ ಮೇಲೆ ಎಷ್ಟು ಒಲವು ಇತ್ತು ಅಂತ ಇಂತಹ ಮನುಷ್ಯನಿಗೆ ಚಪ್ಪಲಿಯಲ್ಲಿ ಒಡೆದು ಅವಮಾನ ಮಾಡಿದ್ದೀರಲ್ಲ ನಿಜಕ್ಕೂ ನಿಮಗೆ ಒಳ್ಳೆಯದು ಆಗಲ್ಲ ಎಂದು ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಿಂದ ಬಂದ ಕೆಲವೇ ಗಂಟೆಯಲ್ಲಿ ಲೈವ್ ಬಂದು ದರ್ಶನ್ ವಿರುದ್ಧ ಇಂತಹ ಷಡ್ಯಂತ ಮಾಡಿರುವ ಅವರ ಬಗ್ಗೆ ಆ.ಕ್ರೋ.ಶ.ವನ್ನು ವ್ಯಕ್ತಪಡಿಸಿದ್ದಾರೆ.

ಎಲ್ರೂ ಶೂಟಿಂಗ್ ಗಿಂತ ಮೊದಲು ರಿಹರ್ಸಲ್ ಮಾಡಿ ಡ್ಯಾನ್ಸ್ ಮಾಡ್ತಾರೆ. ಆದ್ರೆ ದರ್ಶನ್ ಮಾತ್ರ ಯಾವುದೇ ರಿಹರ್ಸಲ್ ಇಲ್ಲದೆ ಪರ್ಫೆಕ್ಟ್ ಆಗಿ ಡ್ಯಾನ್ಸ್ ಮಾಡ್ತಾರೆ ಎಂದ ನಟಿ ನಿಮಿಕಾ ರತ್ನಾಕರ್.

 

ಸದ್ಯಕ್ಕೆ ಕರ್ನಾಟಕದ ಪುಷ್ಪವತಿ ಎಂದು ಕರೆಸಿಕೊಡುತ್ತಿರುವ ನಟಿ ನಿಮಿಕಾ ರತ್ನಾಕರ್ ಅವರು ಕ್ರಾಂತಿ ಸಿನಿಮಾದ ಹಾಡೊಂದರ ಕುರಿತು ಮಾತನಾಡಿದ್ದಾರೆ. ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಕ್ರಾಂತಿ ಸಿನಿಮಾವು ಈ ವರ್ಷದ ಮೊದಲ ಸ್ಟಾರ್ ಸಿನಿಮಾ ವಾಗಿ ಜನವರಿ 26ರಂದು ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಚಿತ್ರತಂಡವು ಹಮ್ಮಿಕೊಂಡಿದ್ದು ಆಡಿಯೋ ರಿಲೀಸ್ ಅನ್ನು ವಿಶೇಷವಾಗಿ ಮಾಡುತ್ತಿದೆ.

ಕರ್ನಾಟಕದ ಪ್ರಮುಖ ಸಿಟಿಗಳಲ್ಲಿ ಒಂದೊಂದು ಹಾಡನ್ನು ರಿಲೀಸ್ ಮಾಡುವ ಮೂಲಕ ವಿಶೇಷತೆಯನ್ನು ತೋರುತ್ತಿದೆ. ಈ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆ ಎನ್ನುವ ಹಾಡನ್ನು ಹೊಸಪೇಟೆಯಲ್ಲಿ ರಿಲೀಸ್ ಮಾಡಿದ್ದರು. ಅದಾದ ಬಳಿಕ ಹುಬ್ಬಳ್ಳಿಯಲ್ಲಿ ಮೂರನೇ ಹಾಡು ಪುಷ್ಪವತಿ ರಿಲೀಸ್ ಆಗಿದೆ.

ಈ ಹಾಡು ರಿಲೀಸ್ ಆದ ದಿನದಿಂದ ನಿಮಿಕಾ ರತ್ನಾಕರ್ ಅವರು ಕರ್ನಾಟಕದಲ್ಲಿ ಬಹಳ ಫೇಮಸ್ ಆಗುತ್ತಿದ್ದಾರೆ. ಇವರನ್ನು ಎಲ್ಲರೂ ತಮ್ಮ ಕ್ರಷ್ ಎಂದು ಮೀಮ್ಸ್ ಕೂಡ ಮಾಡುತ್ತಿದ್ದಾರೆ. ನಿಮಿಕಾ ರತ್ನಾಕರ್ ಅವರು ಈ ಹಿಂದೆ ರಾಮಧ್ಯಾನ ಮತ್ತು ಅಬ್ಬರ ಎನ್ನುವ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಸಹ ಪುಷ್ಪವತಿ ಹಾಡು ಇವರಿಗೆ ಹೆಚ್ಚಿನ ಹೆಸರು ತಂದು ಕೊಟ್ಟಿದೆ. ಈ ಹಾಡು ರಿಲೀಸ್ ಆದ ಮೇಲೆ ಇವರನ್ನು ಜನ ಪುಷ್ಪವತಿ ಎಂದೇ ಕರೆಯುತ್ತಿದ್ದಾರೆ.

ಈ ಬಗ್ಗೆ ಕೆಲವು ವಿಶೇಷ ವಿಷಯಗಳನ್ನು ಹಂಚಿಕೊಂಡಿರುವ ಅವರು ತಮಗೆ ಚಾನ್ಸ್ ಸಿಕ್ಕ ಕುರಿತು ಹಾಗೂ ದರ್ಶನ್ ಅವರ ಡ್ಯಾನ್ಸ್ ಕುರಿತು ಕೂಡ ಮಾತನಾಡಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಆಗಿದ್ದ ಇವರು ಉದ್ಯೋಗದ ಜೊತೆ ಮಾಡಲಿಂಗ್ ಅಲ್ಲೂ ಕೂಡ ಆಕರ್ಷಣೆ ಹೊಂದಿದ್ದರು. ಇದರ ಸಲುವಾಗಿ ಕೊರಿಯಾಗೆ ಹೋಗಬೇಕಾದ ಸಂದರ್ಭ ಬಂದಾಗ ರಜೆ ಕೊಡದ ಕಾರಣ ತಮ್ಮ ಉದ್ಯೋಗವನ್ನು ತ್ಯಜಿಸಿ ಪೂರ್ಣ ಪ್ರಮಾಣದಲ್ಲಿ ಮಾಡಲಿಂಗ್ ಅಲ್ಲಿ ತೊಡಗಿಸಿಕೊಂಡರು.

ಆದರೆ ಈ ಡ್ಯಾನ್ಸ್ ಅಡಿಶನ್ ಗೆ ಹೋಗುವ ಸಂದರ್ಭದಲ್ಲಿ ಅವರು ದರ್ಶನ್ ಚಿತ್ರದ ಪ್ರಮುಖ ಹಾಡಿಗೆ ಸೆಲೆಕ್ಟ್ ಆಗುತ್ತಾರೆ ಎಂದು ಅಂದುಕೊಂಡಿರಲಿಲ್ಲವಂತೆ. ಇದು ನನ್ನ ಅದೃಷ್ಟ ಎಂದು ಹೇಳಿಕೊಳ್ಳುತ್ತಿರುವ ನಟ ದರ್ಶನ್ ಅವರು ಡ್ಯಾನ್ಸ್ ಕುರಿತು ಈ ರೀತಿ ಹೇಳಿದ್ದಾರೆ. ನಾವೆಲ್ಲರೂ ನಮ್ಮ ಹಾಡಿನ ಶೂಟಿಂಗ್ ಇರುವ ಮೂರು ನಾಲ್ಕು ದಿನಗಳಿಗಿಂತ ಮುಂಚೆಯಿಂದಲೇ ರಿಹರ್ಸಲ್ ಮಾಡಿಕೊಡುತ್ತಿದ್ದೆವು.

ಆದರೆ ದರ್ಶನ್ ಅವರು ಯಾವುದೇ ಅಭ್ಯಾಸ ಮಾಡದೆ ಸ್ಪಾಟ್ ಅಲ್ಲಿ ಬಂದು ಕೊರಿಯೋಗ್ರಾಫರ್ ಏನು ಹೇಳಿಕೊಡುತ್ತಾರೆ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದರು ಎಂದು ಹೇಳಿದ್ದಾರೆ. ಮೂಲತಃ ಮಂಗಳೂರು ಬೆಡಗಿ ಆಗಿರುವ ನಿಮಿಕಾ ರತ್ನಾಕರ್ ಅವರು ತಮ್ಮ ಇಂಜಿನಿಯರಿಂಗ್ ವೃತ್ತಿ ತೊರೆದು ಹಿರೋಯಿನ್ ಆಗಿ ಕನ್ನಡ ಚಲನಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಉಪೇಂದ್ರ ಅವರ ಮುಂದಿನ ಚಿತ್ತವಾದ ತ್ರಿಶೂಲ ಸಿನಿಮಾದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ನಿಮಿಕಾ ಅವರು ಇರಲಿದ್ದಾರೆ ಎನ್ನುವ ಮಾಹಿತಿಗಳು ಕೂಡ ಇವೆ.

ಸದ್ಯಕ್ಕೆ ಇವರು ಅಭಿನಯಿಸಿರುವ ಪುಷ್ಪವತಿ ಹಾಡು ಬಹಳ ಟ್ರೆಂಡಿಂಗ್ ಅಲ್ಲಿ ಇದ್ದು ಎಲ್ಲರೂ ಸಹ ಈ ಹಾಡಿಗೆ ರೀಲ್ಸ್ ಮಾಡಿ ಪ್ರಚಾರ ನೀಡುತ್ತಿದ್ದಾರೆ. ಹಾಡು ನೋಡಿದ ಬಳಿಕ ಕೆಲವರು ಇದರ ಅರ್ಥದ ವಿರುದ್ಧವಾಗಿ ಕೂಡ ಮಾತನಾಡಿ ಹಾಡಿನ ಬಗ್ಗೆ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಈ ಹಾಡು ಸಿನಿಮಾ ಕ್ರೇಝ್ ಹೆಚ್ಚಿಸಿದ್ದು ಎಲ್ಲರೂ ದರ್ಶನ್ ಅವರ ಕ್ರಾಂತಿ ಸಿನಿಮಾ ರಿಲೀಸ್ ಆಗುವುದಕ್ಕಾಗಿ ಕಾಯುತ್ತಿದ್ದಾರೆ.

ರೂಪೇಶ್ ಶೆಟ್ಟಿ ಜೊತೆ ಮದುವೆ ಆಗ್ತೀರಾ ಅಂತ ಮಾಧ್ಯಮದವರು ಕೇಳಿದಾಗ ಸಾನ್ಯಾ ಅಯ್ಯರ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.

 

ಸಾನಿಯಾ ಅಯ್ಯರ್ ಅವರು ಕನ್ನಡದ ಜನರಿಗೆ ಅರಸಿ ಹಾಗೂ ಪುಟ್ಟಗೌರಿ ಮದುವೆ ಧಾರಾವಾಹಿಗಳ ಬಾಲ ನಟಿಯಾಗಿ ಪರಚಿತರಾಗಿದ್ದರು. ಇದೀಗ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಬಿಗ್ ಬಾಸ್ ಸಾನಿಯಾ ಆಗಿ ಫೇಮಸ್ ಆಗುತ್ತಿರುವ ಇವರು ಈ ಬಾರಿಯ ಬಿಗ್ ಬಾಸ್ ಸೀಸನ್ 9ರ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದರು. ಬಿಗ್ ಬಾಸ್ ಶುರು ಆಗುವುದಕ್ಕೂ ಮುನ್ನ ಓಟಿಟಿಯಲ್ಲಿ ಪ್ರಸಾರವಾಗಿದ್ದ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಕೂಡ ತಮ್ಮ ವಾಕ್ ಚಾತುರ್ಯತೆ, ಟ್ಯಾಸ್ಕ್ ಗಳಲ್ಲಿ ಅತ್ಯುತ್ತಮ ಪಾಲ್ಗೊಳ್ಳುವಿಕೆ ಮುಂತಾದ ವಿಷಯಗಳಿಂದ ಓಟಿಟಿಯಲ್ಲಿ ಗೆದ್ದು ದೊಡ್ಡ ಬಿಗ್ ಬಾಸ್ ಮನೆ ಸೇರಿದ್ದರು.

ಆದರೆ ಬಿಗ್ ಬಾಸ್ ಮನೆಯಲ್ಲಿ ಇವರು ಇತರ ವಿಷಯಗಳಿಗಿಂತಲೂ ರೂಪೇಶ್ ಶೆಟ್ಟಿ ಜೊತೆಗಿನ ಸ್ನೇಹ ಸಂಬಂಧ ಕುರಿತಂತೆ ಹೊರಗೆ ಹೆಚ್ಚು ಸುದ್ದಿಯಲ್ಲಿರುತ್ತಿದ್ದರು. ಕಾರ್ಯಕ್ರಮದಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅವರ ನಡುವೆ ಮೊದಲಿಗೆ ಸ್ನೇಹ ಆಗಿತ್ತು, ಅವರಿಬ್ಬರ ಸ್ನೇಹಕ್ಕೆ ನಂದಿನಿ ಹಾಗೂ ಜಶ್ವಂತ್ ಕೂಡ ಜೊತೆ ಆಗಿದ್ದರು ನಂದಿನಿ ಹಾಗೆ ಜಶ್ವಂತ್ ಈ ಮೊದಲೇ ಜೋಡಿ ಆಗಿದ್ದ ಕಾರಣ ಈ ನಾಲ್ಕು ಜನರಲ್ಲಿ ರೂಪೇಶ್ ಮತ್ತು ಸಾನಿಯಾ ಅಯ್ಯರ್ ಇಬ್ಬರೂ ಸಹ ಒಂದು ಜೋಡಿ ಎಂದೇ ಎಲ್ಲರೂ ಮಾತನಾಡುತ್ತಿದ್ದರು.

ಇವರಿಬ್ಬರ ನಡವಳಿಕೆ ಕೂಡ ಅದೇ ರೀತಿ ಇರುತ್ತಿತ್ತು. ಸಾಕಷ್ಟು ಬಾರಿ ಮನೆಯ ಸ್ಪರ್ಧಿಗಳು ಸಹ ಈ ವಿಚಾರವಾಗಿ ಧ್ವನಿ ಎತ್ತಿ ಮಾತನಾಡಿದ್ದರು, ಕೆಲವೊಮ್ಮೆ ವಿಷಯ ವಿಪರೀತವಾಗಿ ಹೋದ ಸಂದರ್ಭದಲ್ಲಿ ಸುದೀಪ್ ಅವರೇ ಎಚ್ಚರಿಸಿದ್ದರು. ಮನೆಯಲ್ಲಿ ಇದ್ದಷ್ಟು ದಿನ ರೂಪೇಶ್ ಶೆಟ್ಟಿ ಯನ್ನು ತುಂಬ ಸ್ಪೆಷಲ್ ಎನ್ನುವಂತೆ ಫೀಲ್ ಮಾಡುತ್ತಿದ್ದ ಸಾನಿಯಾ ಅಯ್ಯರ್ ಅವರು ತಮ್ಮನ್ನು ಸಾನಿಯಾ ಶೆಟ್ಟಿ ಎಂದು ಕರೆದರೆ ಹೆಚ್ಚು ಖುಷಿಯಾಗುತ್ತದೆ ಎಂದೇ ಓಪನ್ ಆಗಿ ಸ್ಟೇಟ್ಮೆಂಟ್ ನೀಡಿದ್ದರು.

ಮತ್ತೊಂದು ಸಂದರ್ಭದಲ್ಲಿ ಆರ್ಯವರ್ಧನ್ ಅವರಿಬ್ಬರ ಪ್ರೀತಿಯ ವಿಷಯವಾಗಿ ಕೇಳಿದಾಗ ನನ್ನ ಎಕ್ಸ್ಪೆಕ್ಟೇಶನ್ ಅಲ್ಲಿ ಇರುವ ಹುಡುಗ ರೂಪೇಶ್ ಅಲ್ಲ, ಅವರು ಆ ಲೆವೆಲ್ ಗೆ ರೀಚ್ ಆಗಿಲ್ಲ ಎಂದು ಕೂಡ ಹೇಳಿ ಕನ್ಫ್ಯೂಷನ್ ಕ್ರಿಯೇಟ್ ಮಾಡಿದ್ದರು. ಬಹಳ ಬೇಗ ಸಾನಿಯಾ ಔಟ್ ಆಗಿ ಹೊರಬಿದ್ದರು ಮನೆಯಿಂದ ಹೊರ ಬಂದ ಬಳಿಕ ಅನೇಕ ಸಂದರ್ಶನಗಳಲ್ಲಿ ಭಾಗಿಯಾಗಿದ್ದರು. ಹೀಗೆ ಸಂದರ್ಶನವೊಂದರದಲ್ಲಿ ಸಂದರ್ಶಕರು ನೀವು ರೂಪೇಶ್ ಶೆಟ್ಟಿ ಅವರನ್ನು ಮದುವೆ ಆಗುವ ಬಗ್ಗೆ ಅವರ ಮನೆಯಿಂದ ಆಫರ್ ಬಂದರೆ ಏನು ಮಾಡುತ್ತೀರಾ ಎಂದು ಕೇಳಿದ್ದರು.

ಆ ಪ್ರಶ್ನೆಗೆ ನಾನು ಮತ್ತು ರೂಪೇಶ್ ಶೆಟ್ಟಿ ಈ ರೀತಿ ಯೋಚನೆ ಮಾಡಿಲ್ಲ. ನಮ್ಮಿಬ್ಬರಿಗೂ ಕರಿಯರ್ ಬಹಳ ಮುಖ್ಯ, ನಾನಂತೂ ಐದು ವರ್ಷಗಳ ವರೆಗೆ ಮದುವೆ ವಿಚಾರಕ್ಕೆ ಹೋಗೋದಿಲ್ಲ. ನಾನು ಹೀರೋಯಿನ್ ಆಗುವುದೇ ನನಗೆ ಬಹಳ ಮುಖ್ಯ. ಈ ನಡುವೆ ಕನ್ನಡ ಅಥವಾ ತುಳು ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸುವ ಚಾನ್ಸ್ ಸಿಕ್ಕರೆ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತೇವೆ. ಹಾಗೆಂದು ಮದುವೆ ಆಗುವುದಿಲ್ಲ ಎಂದ ಮಾತ್ರಕ್ಕೆ ನಾನು ರೂಪೇಶ್ ಶೆಟ್ಟಿ ಅವರನ್ನು ದೂರ ಮಾಡಿಕೊಳ್ಳುತ್ತೇನೆ ಎಂದು ಅರ್ಥವಲ್ಲ ಎಂದು ಸಹ ಹೇಳಿದ್ದಾರೆ.

ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಅವರೇ ಆಗಿದ್ದು ಅವರು ಗೆದ್ದ ತಕ್ಷಣವೇ ಸಾನ್ಯಾ ಅವರು ಕುಣಿದು ಕೊಪ್ಪಳಸಿ ತಮ್ಮ ಸಂತೋಷವನ್ನು ಹೊರ ಹಾಕಿದ್ದಾರೆ. ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದ ಹಲವರು ಹೊರಗಡೆ ಸತಿ ಪತಿಗಳಾಗಿದ್ದಾರೆ. ಈ ಜೋಡಿ ಕಥೆ ಏನು ಎಂದು ಎಲ್ಲರೂ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ.

ಕ್ರಾಂತಿ ಸಿನಿಮಾವನ್ನು ವೇದ ಸಿನಿಮಾಗೆ ಹೋಲಿಕೆ ಮಾಡಿ ದರ್ಶನ್ ವಿರುದ್ಧ ಚಾಟಿ ಬೀಸಿದ ಅಹೋರಾತ್ರ.

 

ಸಾಮಾಜಿಕ ಜಾಲತಾಣ ಉಪಯೋಗಿಸುವ ಎಲ್ಲರಿಗೂ ಸಹ ಅಹೋರಾತ್ರ ಅವರ ಹೆಸರು ತಿಳಿದೇ ಇದೆ. ಒಬ್ಬ ಸಾಮಾಜಿಕ ಹೋರಾಟಗಾರನಾಗಿ ವೃಕ್ಷ ರಕ್ಷಕನಾಗಿ ಹೆಣ್ಣು ಮಕ್ಕಳ ಪರ ನಿಲ್ಲುವ ಮಹಿಳಾ ವಾದಿಯಾಗಿ ಇವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಸುದೀಪ್ ಅವರು ರಮ್ಮಿ ಆಟದ ಜಾಹೀರಾತಿನಲ್ಲಿ ಕಾಣಿಸಿಕೊಂಡ ದಿನದಿಂದ ಅವರ ವಿರುದ್ಧವಾಗಿ ಮಾತನಾಡುವ ಮೂಲಕ ಇನ್ನು ಹೆಚ್ಚು ಪ್ರಚಲಿತರಾಗಿದ್ದಾರೆ. ಇದೀಗ ಸುದೀಪ್ ಬಳಿಕ ದರ್ಶನ್ ಮತ್ತು ದರ್ಶನ್ ಅಭಿಮಾನಿಗಳ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆ.ಕ್ರೋ.ಶ.ವನ್ನು ಹೊರ ಹಾಕುತ್ತಿದ್ದಾರೆ.

ಹೆಣ್ಣು ನಿಂದಕರು ರೌಡಿಗಳು ಪೊರ್ಕಿಗಳು ಎಂದೆಲ್ಲಾ ದರ್ಶನ್ ಮತ್ತು ಅವರ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಸಹ ಅಹೋರಾತ್ರ ಅವರಿಗೆ ಕಮೆಂಟ್ ಗಳಲ್ಲಿ ಟಕ್ಕರ್ ನೀಡುತ್ತಿದ್ದು ಇಬ್ಬರ ಸೋಶಿಯಲ್ ಮೀಡಿಯಾ ವಾರ್ ಪ್ರತಿದಿನವೂ ಸಾಗುತ್ತಲೇ ಇದೆ. ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾ ಪ್ರಚಾರ ಮಾಡುವ ವೇಳೆ ಮಾತಿನ ಬರದಲ್ಲಿ ಒಮ್ಮೆ ಅದೃಷ್ಟ ದೇವತೆಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದರು ಅಂದು ಅವರು ಆಡಿದ ಆ ಮಾತುಗಳನ್ನು ಸಾಕಷ್ಟು ಜನ ವಿರೋಧಿಸಿದ್ದರು.

ಆದರೆ ಅಹೋರಾತ್ರ ಅವರು ಅದನ್ನು ಗಂಭೀರವಾಗಿ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರನ್ನು ಏಕವಚನವಾಗಿ ಬೈದಿದ್ದರು. ಅದಾದ ನಂತರ ದರ್ಶನ್ ಅಭಿಮಾನಿಗಳು ಅವರನ್ನು ಖಂಡಿಸಿದ ಕಾರಣ ತಪ್ಪೊಪ್ಪಿಕೊಳ್ಳದೆ ಅಭಿಮಾನಿಗಳನ್ನು ಛೂ ಬಿಡುತ್ತಾರೆ ಎಂದು ಇನ್ನು ಅವರ ಕೋಪ ಜಾಸ್ತಿ ಆಗಿತ್ತು. ಈ ವಿಷಯದಿಂದ ಶುರುವಾದ ಇದು ಈಗಲೂ ಸಹ ಕ್ರಾಂತಿ ಸಿನಿಮಾದ ವಿಷಯದ ತನಕ ಮುಟ್ಟಿದೆ. ಪ್ರತಿದಿನವೂ ಒಂದಲ್ಲ ಒಂದು ವಿಷಯವನ್ನು ಕೆಣಕಿ ದರ್ಶನ್ ಕೆ ಡಿ ಬಾಸ್, ಹೇಡಿ ಬಾಸ್ ಎಂದೆಲ್ಲಾ ಬರಹಗಳನ್ನು ಬರೆಯುತ್ತಲೇ ಇದ್ದಾರೆ.

ಆದರೆ ಶಿವರಾಜಕುಮಾರ್ ಅವರ 125ನೇ ಚಿತ್ರವಾಗಿರುವ ವೇದ ಚಿತ್ರವನ್ನು ನೋಡಿ ಅಹೋರಾತ್ರ ಅವರು ಹೊಗಳುತ್ತಿದ್ದಾರೆ. ವೇದ ಚಿತ್ರವನ್ನು ಕ್ರಾಂತಿ ಸಿನಿಮಾಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಅಪರೂಪಕ್ಕೆ ವೇದ ಸಿನಿಮಾವನ್ನು ನೋಡಿದೆ, ಸಿನಿಮಾ ನೋಡಿದ ಮೇಲೆ ಕಣ್ಣಿನಲ್ಲಿ ನೀರು ತುಂಬಿ ಬಂತು. ಈ ಕಣ್ಣೀರು ಯಾಕಾಗಿ ಬಂತು ಎಂದು ನನಗೆ ತಿಳಿಯುತ್ತಿಲ್ಲ. ಪ್ರತಿ ಮನೆಮನೆಯ ರಸ್ತೆ ರಸ್ತೆಯ ಕಥೆ ವೇದ ಆಗಿದೆ. ಸಿನಿಮಾದಲ್ಲಿ ಹೀರೋ ಶಿವರಾಜ್ ಕುಮಾರ್ ಅವರಲ್ಲ ಹೀರೋಯಿನ್ ಅವರೇ ಸಿನಿಮಾದ ಹೀರೋ.

ಆ ಕಲಾವಿದೆ ಬೆಂಕಿಯಂತೆ ಅಭಿನಯಿಸಿದ್ದಾರೆ ಇಂತಹ ಅದ್ಭುತ ಚಿತ್ರ ಮಾಡಿದ್ದಕ್ಕಾಗಿ ಇಡೀ ಚಿತ್ರತಂಡಕ್ಕೆ ಧನ್ಯವಾದಗಳು. ನೋಡಿದರೆ ಇಂಥಹ ಸಿನಿಮಾವನ್ನು ನೋಡಬೇಕು, ಮಾಡಿದರೆ ಇಂತಹ ಸಿನಿಮಾವನ್ನು ಮಾಡಬೇಕು. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳ ಕುರಿತ ಸಿನಿಮಾ ಇದಾಗಿದೆ ಮನೆ ಮಂದಿಯೆಲ್ಲಾ ಮಕ್ಕಳ ಜೊತೆ ಸೇರಿ ನೋಡಬಹುದಾದ ಸಿನಿಮಾ ಇದಾಗಿದೆ ಎಂದು ಹೊಗಳಿರುವ ಇವರು ಕ್ರಾಂತಿ ಸಿನಿಮಾವನ್ನು ಶಾಲಾ ಮಕ್ಕಳ ಹೆಸರು ಹೇಳಿಕೊಂಡು ಮಾಡುತ್ತಿದ್ದಾರೆ.

ಕ್ರಾಂತಿ ಸಿನಿಮಾದಲ್ಲಿ ಪುಷ್ಪವತಿ ಎನ್ನುವ ಹಾಡನ್ನು ವಿಕೃತ ಮಾಡಿದ್ದಾರೆ. ಮೈನೆರೆದ ಹೆಣ್ಣು ಮಗಳಿಗೆ ಪುಷ್ಪವತಿ ಎಂದು ಕರೆಯುತ್ತಾರೆ ಆಕೆಯನ್ನು ಬಹಳ ಕೆಟ್ಟದಾಗಿ ತೋರಿಸಿ ಹಾಡಿಗೆ ಅಷ್ಟೇ ಕೆಟ್ಟದಾಗಿ ಲಿರಿಕ್ಸ್ ಕೂಡ ಬರೆದಿದ್ದಾರೆ. ಅಕ್ಕನ ಗಂಡನನ್ನು ಬಯಸುವ ಹೆಣ್ಣಿನ ರೀತಿ ಪುಷ್ಪತ್ತಿಯನ್ನು ತೋರಿಸಿದ್ದಾರೆ. ಅದಕ್ಕಾಗಿ ಯೋಗರಾಜ್ ಭಟ್, ದರ್ಶನ್ ಎಲ್ಲರಿಗೂ ನನ್ನ ಧಿಕ್ಕಾರ ಎಂದು ಕ್ರಾಂತಿ ಸಿನಿಮಾದ ವಿರುದ್ಧ ಅಹೋರಾತ್ರ ಆರೋಪ ಮಾಡಿ ಮಾತನಾಡಿದ್ದಾರೆ. ಮಕ್ಕಳ ಹೆಸರು ಕೇಳಿಕೊಂಡು ದರ್ಶನ್ ಅವರು ಜನರನ್ನು ವಶೀಕರಣ ಮಾಡುತ್ತಿದ್ದಾರೆ ಆದರೆ ಸಿನಿಮಾದಲ್ಲಿ ನಿಜವಾದ ಕಥೆ ಬೇರೆ ರೀತಿಯೇ ತೋರುತ್ತಿದೆ ಎಂದೆಲ್ಲಾ ಬರೆಯುತ್ತಿದ್ದಾರೆ. ಇದೆಲ್ಲ ಮುಂದೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಕಾದು ನೋಡಬೇಕಾಗಿದೆ.

3 ಮದುವೆಯಾಗಿರುವ 63 ವರ್ಷದ ನರೇಶ್ ಅನ್ನು 42 ವರ್ಷದ ಪವಿತ್ರ ಲೋಕೇಶ್ ಪ್ರೀತಿಸಿ 4ನೇ ಮದುವೆಗೆ ಒಪ್ಪಿಗೆ ಕೊಟ್ಟಿದ್ದು ಯಾಕೆ ಗೊತ್ತ.?

ಪವಿತ್ರ ಲೋಕೇಶ್ ಗೆ ನರೇಶ್ ಮೇಲೆ ಪ್ರೀತಿ ಆಗಿದ್ದು ಯಾಕೆ ಗೊತ್ತಾ.?

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಹಳ ಬೇಡಿಕೆ ಪೋಷಕ ನಟಿ ಆಗಿರುವ ಪವಿತ್ರ ಲೋಕೇಶ್ ಅವರು ಮೂಲತಃ ಕನ್ನಡದವರೇ, ಆದರೆ ಇದೀಗ ಅವರಿಗೆ ಕನ್ನಡಕ್ಕಿಂತ ತೆಲುಗಿನಲ್ಲಿ ಒಳ್ಳೊಳ್ಳೆ ಆಫರ್ ಗಳು ಬರುತ್ತಿವೆ. ತೆಲುಗಿನ ಸ್ಟಾರ್ ಹೀರೋಗಳಿಗೆ ತಾಯಿಯಾಗಿ ಮತ್ತು ಆ ಸಿನಿಮಾಗಳು ಮುಖ್ಯವಾದ ಪಾತ್ರವಾಗಿ ಹೆಸರು ಮಾಡುತಿದ್ದ ಪವಿತ್ರ ಲೋಕೇಶ್(Pavithra Lokesh) ಅವರು ಕಳೆದ ವರ್ಷ ವಿವಾದದಲ್ಲಿ ಸಿಲುಕಿಕೊಂಡಿದ್ದರು.

ತೆಲುಗಿನ ಖ್ಯಾತ ನಿರ್ಮಾಪಕ ಮತ್ತು ಆಕ್ಟರ್ ಕೂಡ ಆದ ನರೇಶ್ ನಡುವಿನ ಸಂಬಂಧದ ಕುರಿತು ಕನ್ನಡ ಮತ್ತು ತೆಲುಗು ಎರಡು ಬಾಷೆ ಸುದ್ದಿ ಮಾಧ್ಯಮಗಳಲ್ಲಿ ವಿಷಯ ಪ್ರಸಾರವಾಗಿತ್ತು. ಅಲ್ಲದೆ ನರೇಶ್(Naresh) ಅವರ ಕೌಟುಂಬಿಕ ಜಗಳ ಬೀದಿಗೆ ಬಿದ್ದು ಮೈಸೂರಿನ ಹೋಟೆಲ್ ಒಂದರ ಬಳಿ ಹೈಡ್ರಾಮವೇ ನಡೆದಿತ್ತು.

ಇದಾದ ಮೇಲೆ ಪವಿತ್ರ ಲೋಕೇಶ್, ಸುಚೇಂದ್ರ ಪ್ರಸಾದ್, ನರೇಶ್ ಹೀಗೆ ಎಲ್ಲರೂ ಸಹ ಮಾಧ್ಯಮಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಕೆಲ ಮಾಹಿತಿಗಳನ್ನು ನೀಡಿದ್ದರು. ಈಗ ವಿಡಿಯೋ ಒಂದೊಂದು ರಿಲೀಸ್ ಮಾಡಿ ಇಬ್ಬರು ಮದುವೆ ಆಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಹೊಸ ವರ್ಷದ ಪ್ರಯುಕ್ತ ಮಾಡಲಾಗಿರುವ ವಿಡಿಯೋ ಇದಾಗಿದ್ದು ಹೊಸ ಜೀವನಕ್ಕೆ ಇಬ್ಬರು ಕಾಲಿಡುವ ಸೂಚನೆ ಕೊಡುವ ರೀತಿ ಇದೆ. ಈಗಾಗಲೇ ನರೇಶ್ ಅವರಿಗೆ ಎರಡು ವಿವಾಹವಾಗಿದ್ದು ಮಕ್ಕಳು ಸಹ ಇದ್ದಾರೆ.

ಪವಿತ್ರಾ ಅವರೂ ಸಹ ಕನ್ನಡದ ಹೆಮ್ಮೆಯ ಕಲಾವಿದ ಸುಚೇಂದ್ರ ಪ್ರಸಾದ್ ಅವರನ್ನು ಕೈ ಹಿಡಿದಿದ್ದರು, ಅವರಿಗೂ ಸಹ ಇಬ್ಬರು ಮಕ್ಕಳಿದ್ದಾರೆ. ಆದರೆ ಇಬ್ಬರು ಹಿಂದಿನ ಸಂಬಂಧಗಳನ್ನು ಮುರಿದುಕೊಂಡು ಹೊಸ ಜೀವನ ಆರಂಭಿಸುವ ಕಾತುರದಲ್ಲಿದ್ದಾರೆ. ವಿಡಿಯೋದಲ್ಲಿ ಕೇಕ್ ಕಟ್ ಮಾಡಿ ಲಿಪ್ ಕಿಸ್ ಕೂಡ ಮಾಡಿಕೊಂಡಿದ್ದಾರೆ.

ನರೇಶ್ ಅವರಿಗೆ ಬಹಳ ವಯಸ್ಸಾಗಿದೆ ಆದರೂ ಕೂಡ ಪವಿತ್ರ ಲೋಕೇಶ್ ಅವರಿಗೆ ಅವರ ಮೇಲೆ ಪ್ರೀತಿ ಹೇಗಾಯಿತು ಎನ್ನುವುದು ಎಲ್ಲರ ಪ್ರಶ್ನೆ. ಅಪ್ರತಿಮ ಸುಂದರಿ ಹಾಗೂ ಅಷ್ಟೇ ಪ್ರಬುದ್ಧ ಕಲಾವಿದೆ ಆಗಿರುವ ಪವಿತ್ರ ಅವರು ನರೇಶ್ ಅವರನ್ನು ಒಪ್ಪಿಕೊಳ್ಳುವುದಕ್ಕೆ ಕಾರಣ ಇದೆಯಂತೆ. ತೆಲುಗಿನ ಹಲವು ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದಾರೆ, ಸಾಕಷ್ಟು ಸಿನಿಮಾಗಳಲ್ಲಿ ಇಬ್ಬರು ಜೋಡಿಯು ಸಹ ಆಗಿದ್ದಾರೆ.

ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗಿಯಾಗಿದ್ದಾರೆ ಆದರೆ ಎಲ್ಲೂ ಸಹ ಇವರಿಗೆ ಸಂಬಂಧದ ಬಗ್ಗೆ ಸುದ್ದಿ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಕಳೆದ ವರ್ಷ ಭುಗಿಲೆದ್ದ ವಿವಾದ ಈ ಸಂಬಂಧದ ಮೂಲ ಹುಡುಕುವಂತೆ ಮಾಡಿದೆ. ಪವಿತ್ರ ಲೋಕೇಶ್ ಅವರು ಹೇಳಿಕೊಳ್ಳುವಂತೆ ಅವರಿಗೆ ಶಿವ ಎಂದರೆ ತುಂಬಾ ಭಕ್ತಿಯಂತೆ. ಹಾಗಾಗಿ ಮಹದೇವನ ಕುರಿತು ಒಂದು ಕಥೆ ರೆಡಿ ಮಾಡಿಕೊಂಡು ಸಿನಿಮಾ ಮಾಡಲು ನರೇಶ್ ಅವರ ಬಳಿ ಸಹಾಯ ಕೇಳಿದ್ದರಂತೆ.

ನರೇಶ್ ಸಿನಿಮಾ ಮಾಡುವುದಾಗಿ ಭರವಸೆ ನೀಡಿದ್ದು ಮಾತ್ರವಲ್ಲದೆ ಒಂದು ಈಶ್ವರ ದೇವಸ್ಥಾನವನ್ನು ಪವಿತ್ರ ಅವರಿಗೆ ಗಿಫ್ಟ್ ನೀಡಿದ್ದರಂತೆ. ಇದರಿಂದ ಇಬ್ಬರಿಗೂ ಸ್ನೇಹ ಶುರುವಾಗಿ ನಂತರ ಪ್ರೀತಿಯಾಗಿ ಬದಲಾಗಿ ಈಗ ಇಬ್ಬರೂ ಹಸೆಮಣೆ ಏರುವ ತನಕ ಬಂದು ನಿಂತಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಇಬ್ಬರ ಜೋಡಿ ಬಗ್ಗೆ ಬೇರೆ ಬೇರೆ ರೀತಿ ಮಾತು ಕೇಳಿ ಬರುತ್ತಿದ್ದು ನರೇಶ್ ಅವರ ಬಳಿ ಇರುವ ಹಣದ ಆಸೆಯಿಂದ ಪವಿತ್ರ ಲೋಕೇಶ್ ಅವರು ಬಲೆಗೆ ಬಿದ್ದಿದ್ದಾರೆ ಎಂದು ಹೆಚ್ಚಿನ ಜನರು ಮಾತನಾಡುತ್ತಿದ್ದಾರೆ.

ಜನರ ಮಾತಿಗೆ ಮನನೊಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಮಾಸ್ಟರ್ ಆನಂದ್. ವಂಶಿಕಾ ಬೆಳವಣಿಗೆಯೇ ಈ ನೋವಿಗೆ ಕಾರಣವಾಗ್ತಿದಿಯಾ.?

ವೇದಿಕೆ ಮೇಲೆ ಕಣ್ಣೀರಿಟ್ಟ ಮಾಸ್ಟರ್ ಆನಂದ್

ಮಾಸ್ಟರ್ ಆನಂದ್ ಅದ್ಭುತ ಬಾಲ ಕಲಾವಿದ, ಆಂಕರ್, ಡೈರೆಕ್ಟರ್, ಪ್ರೊಡ್ಯೂಸರ್ ಸೈಡ್ ಆಕ್ಟರ್ ಹೀಗೆ ಸಾಕಷ್ಟು ಪ್ರತಿಭೆಯನ್ನು ಒಳಗೊಂಡಿರುವ ಮಾಸ್ಟರ್ ಆನಂದ್ ಚಿಕ್ಕವಯಸ್ಸಿನಿಂದ ಹಿಡಿದು ಇಲ್ಲಿಯವರೆಗೂ ಕೂಡ ತಮ್ಮನ್ನು ತಾವು ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ‌. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಕಾಮಿಡಿ ಕಿಲಾಡಿಗಳು ಎಂಬ ರಿಯಾಲಿಟಿ ಶೋನಲ್ಲಿ ಆಂಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಪ್ರತಿಯೊಂದು ಕಾರ್ಯಕ್ರಮದ ಉಸ್ತುವಾರಿಯನ್ನು ತೆಗೆದುಕೊಳ್ಳುತ್ತಾರೆ ನಿರೂಪಕರಾಗಿ ಕೆಲಸ ಮಾಡುತ್ತಾರೆ.

ಹೊಸ ವರ್ಷದ ಸಂಭ್ರಮ ಆಚರಣೆ ಇದ್ದ ಕಾರಣ ಜೀ ಕುಟುಂಬದಲ್ಲಿ ಆಕ್ಟ್ ಮಾಡುವಂತಹ ಎಲ್ಲಾ ಸೀರಿಯಲ್ ಆಕ್ಟರ್ಸ್ ಗಳನ್ನು ಕೂಡ ಸೇರಿಸಿ ಹೊಸ ವರ್ಷದ ಸಂಭ್ರಮ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ. ಈ ಸಮಯದಲ್ಲಿ ಮಾಸ್ಟರ್ ಆನಂದ್ ಅವರು ಭಾವುಕರಾಗಿ ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ ಅಷ್ಟಕ್ಕೂ ಆನಂದ್ ಅವರು ಈ ವೇದಿಕೆ ಮೇಲೆ ಕಣ್ಣೀರು ಹಾಕುವುದಕ್ಕೆ ಕಾರಣವೇನು ಎಂಬುದನ್ನು ನೋಡುವುದಾದರೆ ಅದು ಅವರ ಮಕ್ಕಳ ಬಗ್ಗೆ.

ಹೌದು ಮಾಸ್ಟರ್ ಆನಂದ ಅವರಿಗೆ ಇಬ್ಬರು ಮಕ್ಕಳಿದ್ದು ಅದರಲ್ಲಿ ಪುತ್ರನೋರ್ವ ಸದ್ಯಕ್ಕೆ ಚಿಕ್ಕಮಂಗಳೂರು ಸಮೀಪದ ಗುರುಕುಲ ಒಂದರಲ್ಲಿ ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ. ಮಗನು ತಂದೆಗಾಗಿ ಪತ್ರ ಒಂದನ್ನು ಬರೆದು ಕಳಿಸಿದರೆ ಈ ಪತ್ರವನ್ನು ನೋಡಿದಂತಹ ಆನಂದ್ ಭಾವುಕರಾಗಿದ್ದಾರೆ. ಆ ಪತ್ರದಲ್ಲಿ ಬರೆದಿದ್ದ ಸಾಲುಗಳಾದರು ಏನು ಎಂಬುದನ್ನು ನೋಡುವುದಾದರೆ.

“ಹರಿ ಓಂ ಅಪ್ಪ. ಹುಟ್ಟುಹಬ್ಬದ ಶುಭಾಶಯಗಳು. ನಾನು ನಿಮ್ಮ ಜೊತೆ ಸಮಯ ಕಳೆಯುತ್ತಿದ್ದೆ. ಗುರುಕುಲಕ್ಕೆ ಬಂದ ಕಾರಣದಿಂದ ನಿಮ್ಮ ಜೊತೆ ಸಮಯ ಕಳೆಯಲಾಗಲಿಲ್ಲ. ಪ್ರತಿ ವರ್ಷ ನಿಮ್ಮ ಹುಟ್ಟುಹಬ್ಬಕ್ಕೆ ಇರುತ್ತಿದ್ದೆ. ನನು ಗುರುಕುಲದ ಅಧ್ಯಾಯನ ಮುಗಿಯುವವರೆಗೂ ನಿಮ್ಮ ಹುಟ್ಟುಹಬ್ಬಕ್ಕೆ ಇರಲಾಗುವುದಿಲ್ಲ. ಹಾಗೆ ನಿಮಗೆ ‘ಹೊಸ ವರ್ಷದ ಶುಭಾಶಯಗಳು’ ನಾನು ನಿಮ್ಮನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ಮನೆಯಲ್ಲಿ ನಾನು ನಿಮ್ಮ ಜೊತೆ ವಿಡಿಯೋ ಗೇಮ್ಸ್‌ ಆಡುತ್ತಿದ್ದಾಗ ಸಿಗುತ್ತಿದ್ದ ಖುಷಿ ಈಗ ಸಿಗುವಿದಿಲ್ಲ. ಐ ಲವ್ ಯು ಅಪ್ಪ” ಎಂದು ಆನಂದ್ ಪುತ್ರ ಪತ್ರ ಬರೆದಿದ್ದಾರೆ.

ಎಷ್ಟೇ ದೊಡ್ಡ ಸೆಲೆಬ್ರಿಟಿ ಆದರೂ ಕೂಡ ಮಕ್ಕಳ ವಿಚಾರ ಬಂದಾಗ ಆತ ಒಬ್ಬ ತಂದೆಯಾಗಿ ಕಾಣುತ್ತಾನೆ ಹೊರತು ಸೆಲೆಬ್ರೆಟಿಯಾಗಿ ಕಾಣುವುದಿಲ್ಲ. ಹಾಗಾಗಿ ಮಗನ ಪತ್ರ ನೋಡುತ್ತಿದ್ದ ಹಾಗೆ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ ಇದರ ಜೊತೆಗೆ ಇತ್ತೀಚಿನ ದಿನದಲ್ಲಿ ಜನರು ಮಾತನಾಡುತ್ತಿರುವಂತಹ ವಿಚಾರವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ವಂಶಿಕ ಸದ್ಯಕ್ಕೆ ಹೆಚ್ಚು ಬೇಡಿಕೆಯಲ್ಲಿ ಇರುವಂತಹ ಬಾಲ ನಟಿ ಸಾಕಷ್ಟು ಪ್ರೋಗ್ರಾಮ್ ಗಳನ್ನು ನಡೆಸಿಕೊಡುತ್ತಿದ್ದಾರೆ ಇದು ಒಂದು ಕಡೆ ವರವಾದರೆ ಮತ್ತೊಂದು ಕಡೆ ಶಾಪವೂ ಕೂಡ ಆಗಿದೆ.

ಮನೆಯಲ್ಲಿ ಎರಡು ಮಕ್ಕಳಿದ್ದಾಗ ನಾರ್ಮಲ್ ಆಗಿ ಹೊಲಿಸುತ್ತಾರೆ. ಅದರಲ್ಲೂ ಮಗಳು ಸ್ವಲ್ಪ ಹೆಸರು ಮಾಡಿದ್ದಾರೆ. ಈ ಹೊಲಿಕೆ ಒಂದು ಕರೆ ಆದ್ರೆ ಕೆಲವರು ನನಗೆ ಹೇಳುತ್ತಾರೆ ಆಕೆ ವಿದ್ಯಾಭ್ಯಾಸದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಯಾವಾಗಲೂ ಆಕ್ಟಿಂಗ್‌ಗೆ ಕಳುಹಿಸುತ್ತೀನಿ ಅದು ಇದು ಅನ್ನೋ ತರ ಮಾತನಾಡುತ್ತಾರೆ. ಹೀಗೆ ಮಾತನಾಡುವವರು ನನ್ನ ಮಗನನ್ನು ನೋಡಿ ತಿಳಿದುಕೊಳ್ಳಬೇಕು ನನ್ನೊಳಗೆ ಒಬ್ಬ ಜವಾಬ್ದಾರಿ ಇರುವ ತಂದೆ ಇದ್ದಾನೆ ಎಂದು.

ಎಲ್ಲಾದಕ್ಕಿಂತ ಮುಖ್ಯವಾಗಿ ನನ್ನ ಮಗಳು ಬಾಲನಟಿ ಆಗುವ ಮುಂಚೆ ನಾನು ಒಬ್ಬ ಬಾಲ ಕಲಾವಿದ ಆಗಿದ್ದೆ ಅನ್ನೋದು ಮರೆತು ಸಲಹೆ ಕೊಡುತ್ತಾರೆ. ಅದು ಬಹಳ ನೋವು ಕೊಡುತ್ತದೆ. ವಿದ್ಯಾಭ್ಯಾಸಕ್ಕೆ ಮೊದಲಿಂದಲ್ಲೂ ನಾನು ಆಧ್ಯತೆ ಕೊಟ್ಟಿರುವೆ. ಹಾಗೆ ನನ್ನ ಮಗಳಿಗೂ ಸಹ ನಾನು ಕೊಡುವೆ. ನನ್ನ ಮಗನಿಗೆ ಈಗ ಕೊಡುತ್ತಿರುವೆ. ಎಲ್ಲವೂ ಭಗವಂತನ ಇಚ್ಛೆ’ ಎಂದ ಅನಂದ್ ಹೇಳಿದ್ದಾರೆ. ಮಾಸ್ಟರ್ ಆನಂದ್ ಮಾತನಾಡಿರುವ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಕರ್ನಾಟಕದಲ್ಲಿ ಈಗ ಶೆಟ್ಟಿಗಳದ್ದೆ ಹವಾ, ಬೆಳ್ಳಿತೆರೆ ಮಾತ್ರವಲ್ಲ ಕಿರುತೆರೆಯಲ್ಲೂ ಇವರದ್ದೇ ಮೇಲುಗೈ. ಕಣ್ಮರೆಯಾಗುತ್ತಿದ್ದಾರ ಬೇರೆ ಕಲಾವಿದರು.?

ನೆಪೋಟಿಸಂ, ಪವರ್, ಬ್ಯಾಕ್ ಗ್ರೌಂಡ್ ಈ ರೀತಿಯಾಗಿ ಸಿನಿಮಾಗೆ ಬಂದು ಜಾಗ ಗಿಟ್ಟಿಸಿಕೊಳ್ಳುವ ಕಾಲ ಮುಗಿದು ಹೋಯಿತು. ಹೀಗೇನಿದ್ದರೂ ಯಾರು ಯಾರನ್ನು ಹೀರೋ ಆಗಿ ಮಾಡುವುದಿಲ್ಲ ಸ್ವ ಪ್ರಯತ್ನದಿಂದ ಕಠಿಣ ಪರಿಶ್ರಮದಿಂದ ಕಂಡ ಕನಸನ್ನು ಸಾಕಾರ ಮಾಡಿಕೊಳ್ಳಬೇಕು. ಈ ರೀತಿ ಹಠಕ್ಕೆ ಬಿದ್ದು ಸಾಧನೆ ಮಾಡುವವರಲ್ಲಿ ಸಿನಿಮಾ ಇಂಡಸ್ಟ್ರಿಯವರ ಹೆಸರನ್ನು ಮೊದಲಿಗೆ ಹೇಳಬಹುದು. ಯಾಕೆಂದರೆ ಸ್ಟಾರ್ ಎಂದ ತಕ್ಷಣ ಜನರು ಕ್ರಿಕೆಟ್ಗಿಂತ ಸಿನಿಮಾವನ್ನೇ ಮೊದಲು ನೆನೆಯುವುದು.

ಈಗ ವಿಷಯವು ಸಹ ಸಿನಿಮಾ ಇಂಡಸ್ಟ್ರಿಯ ಕುರಿತೆ ಆಗಿದೆ. ಸದ್ಯಕ್ಕಿಗ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ವಂತ ಪ್ರತಿಭೆಯಿಂದ ಮೇಲು ಬರುತ್ತಿರುವ ಹೀರೋಗಳ ಸಂಖ್ಯೆ ಹೆಚ್ಚಾಗಿದೆ, ನಿರ್ದೇಶಕರಾಗಿ ಕೂಡ ಹೊಸ ಪ್ರತಿಭೆಗಳು ಹೆಸರು ಮಾಡುತ್ತಿದ್ದಾರೆ. ಈ ಸಾಲಿನಲ್ಲಿ ಕರಾವಳಿ ಭಾಗದ ಶೆಟ್ಟರ ಬಳಗವು ಈ ವರ್ಷ ಬಾರಿ ಸಾಧನೆ ಮಾಡಿದ್ದು ಕಿರುತೆರೆಯಲ್ಲೂ ಸಹ ಈಗ ಶೆಟ್ಟರುಗಳದ್ದೇ ಹವಾ ಆಗಿದೆ.

ಈ ವರ್ಷದ ಆರಂಭದಲ್ಲಿ ಗರುಡ ಗಮನ ವೃಷಭ ವಾಹನ ಸಿನಿಮಾ ನಿರ್ದೇಶನ ಮತ್ತು ಅಭಿನಯವನ್ನು ಸಹ ಮಾಡಿ ರಾಜ್ ಬಿ ಶೆಟ್ಟಿ ಅವರು ಭರವಸೆಯ ಆಕ್ಟರ್ ಮತ್ತು ಡೈರೆಕ್ಟರ್ ಆದರು. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಸಾಥ್ ನೀಡಿದ್ದರು, ಈ ಸಿನಿಮಾ ಅವರಿಗೂ ಸಹ ಅಷ್ಟೇ ಹೆಸರು ತಂದು ಕೊಟ್ಟಿತ್ತು. ನಂತರ ಬಂದಿದ್ದೆ ಚಾರ್ಲಿ 777 ಎನ್ನುವ ಸಿನಿಮಾ ನಾಯಿ ಮರಿಯ ಭಾವನೆಗಳ ಸುತ್ತ ಕಥೆ ಹೆಣೆದಿದ್ದ ಸಿನಿಮಾ. ಈ ಚಿತ್ರದಿಂದ ರಕ್ಷಿತ್ ಶೆಟ್ಟಿ ಅವರು ಇಡೀ ದೇಶವನ್ನೇ ಗೆದ್ದರು.

ಬಹಳ ದಿನದಿಂದ ಇಂತಹ ಒಂದು ಬ್ರೇಕ್ ಗೆ ಕಾಯುತ್ತಿದ್ದ ರಕ್ಷಿತ್ ಶೆಟ್ಟಿ ಅವರಿಗೆ 100 ಕೋಟಿ ಕ್ರೋರ್ ದಾಟಿ ಹಣ ಗಳಿಸಿ ಚಾರ್ಲಿ ಹೊಸ ಹುರುಪನ್ನು ನೀಡಿತು. ನಂತರ ವರ್ಷದ ಅಂತ್ಯದಲ್ಲಿ ಬಂತು ರಿಷಭ್ ಶೆಟ್ಟಿ ಅವರ ನಿರ್ದೇಶನದ ಮತ್ತು ಅವರೇ ನಾಯಕ ನಟನಾಗಿ ಕೂಡ ಅಭಿನಯಿಸಿದ ಕಾಂತರಾ ಸಿನಿಮಾ ಎಷ್ಟರಮಟ್ಟಿಗೆ ಹೆಸರು ಮಾಡಿತು ಎಂದು ಎಲ್ಲರಿಗೂ ತಿಳಿದೇ ಇದೆ.

ಕರಾವಳಿ ಭಾಗದ ಕಾಡಂಚಿನ ಜನರ ಆಚರಣೆ ನಂಬಿಕೆ ದೈವ ಧರ್ಮ ಇಂತಹ ವಿಷಯವನ್ನು ಇಟ್ಟುಕೊಂಡು ಮಾಡಿದ ಸಣ್ಣ ಬಜೆಟಿನ ಸಿನಿಮಾ ಒಂದು ಎಲ್ಲರ ನಿರೀಕ್ಷೆಯನ್ನು ಮೀರಿ ದೇಶ ಮಾತ್ರವಲ್ಲದೆ ದೇಶದ ಗಡಿಯನ್ನು ದಾಟಿ ನಾಲ್ಕು ನೂರು ಕೋಟಿ ಹಣ ಗಳಿಕೆ ಮಾಡಿ ಎಲ್ಲರಿಗೂ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿತು. ಹಾಗಾಗಿ ವರ್ಷ ಪೂರ್ತಿ ಶೆಟ್ಟರುಗಳ ಲಕ್ ಬಹಳ ಚೆನ್ನಾಗಿತ್ತು ಎಂದೇ ಎಲ್ಲರೂ ಮಾತನಾಡುತ್ತಿದ್ದಾರೆ.

ಈಗ ಕಿರುತೆರೆಲ್ಲೊಬ್ಬ ಶೆಟ್ಟರು ಅದೇ ರೀತಿ ಗೆಲುವಿನ ಭಾಗವಾಗಿದ್ದಾರೆ. ರಿಯಾಲಿಟಿ ಶೋಗಳ ಬಾಸ್ ಎಂದು ಕರೆಸಿಕೊಳ್ಳುವ ಬಿಗ್ ಬಾಸ್ ಕಾರ್ಯಕ್ರಮದ 9ನೇ ಆವೃತ್ತಿಯಲ್ಲಿ ರೂಪೇಶ್ ಶೆಟ್ಟಿ ಅವರು ಗೆದ್ದು ಬೀಗಿದ್ದಾರೆ. ತುಳು ಭಾಷೆಯ ಸಿನಿಮಾಗಳಲ್ಲಿ ಹೆಸರು ಮಾಡಿದ ಇವರು ಕನ್ನಡದ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡರು.

ದೊಡ್ಡ ಬಿಗ್ ಬಾಸ್ ಗೆ ಸೆಲೆಕ್ಟ್ ಆಗಿ ಫಿನಾಲೆ ತನಕ ಬಂದಿದ್ದ ಇವರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಈ ಹಿಂದೆ ಕೂಡ ಶೈನ್ ಶೆಟ್ಟಿ ಅವರು ಬಿಗ್ ಬಾಸ್ 7ನೇ ಸೀಸನ್ ಗೆದ್ದಿದ್ದರು ಮತ್ತು 5ನೇ ಸೀಸನ್ ನಲ್ಲಿ ಚಂದನ್ ಶೆಟ್ಟಿ ಅವರ ಗೆದ್ದಿದ್ದರು. ಹಾಗಾಗಿ ಶೆಟ್ಟರ ಬಗ್ಗೆ ಈಗ ಮತ್ತೊಮ್ಮೆ ಅಭಿಮಾನ ಹೆಚ್ಚಾಗುತ್ತಿದ್ದು, ಜನ ಅವರುಗಳ ಬುದ್ಧಿವಂತಿಕೆಗೆ ಮತ್ತು ವ್ಯಕ್ತಿತ್ವಕ್ಕೆ ಫಿದಾ ಆಗುತ್ತಿದ್ದಾರೆ.

ಬಿಗ್ ಬಾಸ್ ನಿಂದ ಗೆದ್ದ ಹಣವನ್ನು ಏನ್ ಮಾಡ್ತಿರ ಅಂತ ಸುದೀಪ್ ಕೇಳಿದಕ್ಕೆ. ನಾನು ಹಣದ ವಿಷಯದಲ್ಲಿ ಯಾರಿಗೂ ಸಹಾಯ ಮಾಡಲ್ಲ ಅಂತ ನೇರವಾಗಿ ಉತ್ತರ ಕೊಟ್ಟ ರೂಪೇಶ್ ಶೆಟ್ಟಿ

ಬಿಗ್ ಬಾಸ್ ಗೆದ್ದಿದ್ದಕ್ಕಾಗಿ ಬಂದ ಹಣದಲ್ಲಿ ಒಂದು ರೂಪಾಯಿ ಕೂಡ ಯಾರಿಗೂ ಕೊಡುವುದಿಲ್ಲ ಎಂದು ನೇರವಾಗಿ ಹೇಳಿದ ರೂಪೇಶ್ ಶೆಟ್ಟಿ.

ಬಿಗ್ ಬಾಸ್ ಕನ್ನಡದ 9ನೇ ಆವೃತ್ತಿಯ ಜಿದ್ದಾಜಿದ್ದಿಯ ಆಟಕ್ಕೆ ನೆನ್ನೆ ತೆರೆ ಬಿದ್ದಿದೆ. ಇಷ್ಟು ದಿನಗಳ ಕಾಲ ಇದ್ದ ಕಂಟೆಸ್ಟೆಂಟ್ ಜಿದ್ದಾಜಿದ್ಧಿ ಸೆಣಸಾಟದಲ್ಲಿ ಅಂತಿಮವಾಗಿ ಒಬ್ಬರು ವಿನ್ ಆಗಿ ಸೀಸನ್ 9 ಅಂತ್ಯಗೊಂಡಿದೆ. ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಿದ್ದ ಪ್ರೇಕ್ಷಕರ ಆಸೆಯಂತೆ ರೂಪೇಶ್ ಶೆಟ್ಟಿ ಅವರು ಈ ಬಾರಿಯ ವಿನ್ನರ್ ಆಗಿದ್ದು ರಾಕೇಶ್ ಅಡಿಗ ಅವರು ರನ್ನರ್ ಅಪ್ ಆಗಿದ್ದಾರೆ. ಬಹಳ ವಿಭಿನ್ನವಾಗಿ ನಡೆಸಿದ ಈ ಬಾರಿಯ ಬಿಗ್ ಬಾಸ್ ಅಲ್ಲಿ ಮೊದಲಿಗೆ 42 ದಿನಗಳ ಒಟಿಟಿ ಬಿಗ್ ಬಾಸ್ ನಡೆಸಲಾಗಿತ್ತು.

ಅದರಲ್ಲಿ ಕಿರುತೆರೆ ಬಿಗ್ ಬಾಸ್ ಅಲ್ಲಿ ಆಡಲು ಅಂತಿಮ ನಾಲ್ಕು ಜನರಿಗೆ ಅವಕಾಶ ನೀಡಲಾಗಿತ್ತು. ರೂಪೇಶ್ ಶೆಟ್ಟಿ, ಸಾನಿಯಾ, ರಾಜೇಶ್ ಅಡಿಗ ಹಾಗೂ ಆರ್ಯವರ್ಧನ್ ಅವರು ಸೆಲೆಕ್ಟ್ ಆಗಿದ್ದರು. ಇವರ ಜೊತೆ ಹಳೆ ಸೀಸನ್ ನ ಕಂಟೆಸ್ಟೆಂಟ್ಗಳು ಮತ್ತು ಹೊಸ 9 ಸೆಲೆಬ್ರಿಟಿಗಳನ್ನು ಸೇರಿಸಿ ದೊಡ್ಡ ಪರಿದೆಯ ಬಿಗ್ ಬಾಸ್ ಅಲ್ಲಿ ಆಡಲು ಬಿಡಲಾಗಿತ್ತು. ಈ ಆಟದಲ್ಲಿ ಓಟಿಟಿ ದಿನದಿಂದ ಅಂತಿಮ ದಿನದವರೆಗೂ ಕೂಡ ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ ಅವರ ನಡುವೆ ಸ್ಪರ್ಧೆ ಇತ್ತು.

ಅಂತಿಮವಾಗಿ ಸುದೀಪ್ ಅವರ ಅಕ್ಕ ಪಕ್ಕದಲ್ಲಿರುವ ಸ್ಪರ್ಧಿಗಳು ಇವರೇ ಆಗಿ ಗೆಲ್ಲುವುದು ಯಾರು ಎನ್ನುವ ವಿಚಾರಕ್ಕೆ ಬಹಳ ಕುತೂಹಲ ಸಹಾ ಉಂಟಾಗಿತ್ತು. ಟಾಸ್ಕ್ ಗಳಲ್ಲಿ ಇಬ್ಬರ ಪಾಲ್ಗೊಳ್ಳುವಿಕೆ ಅತ್ಯುತ್ತಮವಾಗಿತ್ತು, ಎಂಟರ್ಟೈನ್ಮೆಂಟ್ ವಿಷಯದಲ್ಲಿ ಕೂಡ ಇಬ್ಬರು ಹಾಡು ಹಾಡುತ್ತಾ, ಒಂದಲ್ಲ ಒಂದು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಮನೋರಂಜಿಸುತ್ತಿದ್ದರು. ಸಹ ಕಂಟೆಸ್ಟೆಂಟ್ ಗಳ ಜೊತೆಗಿನ ಹೊಂದಾಣಿಕೆ ವಿಷಯದಲ್ಲಿ ಇಬ್ಬರೂ ಸಮಾನವಾಗಿದ್ದರು.

ಆದರೆ ಅಂತಿಮವಾಗಿ ಸುದೀಪ ಅವರು ಮೇಲೆ ಎತ್ತುವ ಕೈ ಶೆಟ್ಟಿ ಅವರದ್ದಾಗಿದ್ದು ಇವರಿಗೆ ಬಿಗ್ ಬಾಸ್ ಟ್ರೋಫಿ ಜೊತೆ ಬರೋಬ್ಬರಿ 60 ಲಕ್ಷ ಹಣವನ್ನು ಬಹುಮಾನವಾಗಿ ನೀಡಲಾಗಿದೆ. ಸಹಜವಾಗಿ ಗೆದ್ದ ಬಳಿಕ ಪ್ರತಿಬಾರಿ ಕೇಳುವಂತೆ ಈ ಬಾರಿ ಕೂಡ ಸುದೀಪ್ ಅವರು ಗೆದ್ದ ಹಣದಿಂದ ಏನು ಮಾಡುತ್ತೀರಿ ಎಂದು ರೂಪೇಶ್ ಶೆಟ್ಟಿ ಅವರನ್ನು ಕೇಳಿದ್ದಾರೆ. ಅದಕ್ಕೆ ರೂಪೇಶ್ ಶೆಟ್ಟಿ ಅವರು ನನಗೆ ಹಣದ ಅವಶ್ಯಕತೆ ಬಹಳ ಇದೆ ಸರ್ ನನಗೆ ಸಿನಿಮಾ ಮಾಡಬೇಕು ಎನ್ನುವ ಕ್ರೇಝ್ ಇದೆ. ಸಿನಿಮಾಕ್ಕಾಗಿಯೇ ನಾನು ಇಷ್ಟು ದೂರ ಬಂದಿರುವುದು ಕಷ್ಟ ಪಡುತ್ತಿರುವುದು ಹಣ ಸಿಕ್ಕಿರುವುದಕ್ಕಿಂತ ಬಿಗ್ ಬಾಸ್ ಟ್ರೋಫಿ ಸಿಕ್ಕಿರುವುದು ನನಗೆ ಬಹಳ ಖುಷಿ ನೀಡಿದೆ.

ಅಲ್ಲದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನನ್ನ ಹೆಸರು ಸದಾ ಕಾಲ ಇರುತ್ತದೆ ಎನ್ನುವ ಹೆಮ್ಮೆ ಕೂಡ ನನಗಿದೆ. ನಾನು ಗೆದ್ದಿರುವ ಈ 60 ಲಕ್ಷ ಹಣದಲ್ಲಿ ಕಷ್ಟ ಎಂದು ಬಂದರೆ ಯಾರಿಗೂ ಸಹ ಹಣ ಕೊಡುವ ಮನಸ್ಸು ನನಗಿಲ್ಲ ಹಾಗಾಗಿ ಇದನ್ನು ಯಾವುದಾದರೂ ಒಳ್ಳೆಯ ಸಾಧನೆಗೆ ಬಳಸಿಕೊಳ್ಳುತ್ತೇನೆ ಎಂದು ನೇರವಾಗಿ ಉತ್ತರ ಕೊಟ್ಟಿದ್ದಾರೆ. ಈ ಹಿಂದೆ ಬಿಗ್ ಬಾಸ್ ಸೀಸನ್ ಮೂರರಲ್ಲಿ ವಿನ್ನರ್ ಆಗಿದ್ದ ಒಳ್ಳೆ ಹುಡುಗ ಪ್ರಥಮ್ ಅವರು ತಾವು ಗೆದ್ದ ಅಷ್ಟು ಹಣವನ್ನು ಸಹ ಜನಸೇವೆಗಾಗಿ ಕೊಡುವುದಾಗಿ ನೀಡುವುದಾಗಿ ವೇದಿಕೆಯಲ್ಲೇ ಹೇಳಿದ್ದರು. ಈ ಬಾರಿ ಸಹಾ ಕಂಟೆಸ್ಟೆಂಟ್ ರೂಪೇಶ್ ರಾಜಣ್ಣ ಅವರು ಸಹ ತಾವು ವಿನ್ ಆದರೆ ಅಷ್ಟೂ ಹಣವನ್ನು ಕರ್ನಾಟಕದ ಏಳಿಗೆಗಾಗಿ ಹಾಗೂ ಕನ್ನಡಕ್ಕಾಗಿ ಬಳಸಿಕೊಳ್ಳುವುದಾಗಿ ಆಶ್ವಾಸನೆ ನೀಡಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಹಿತೇಶ್

ಹೊಸ ವರ್ಷದ ದಿನವೇ ಹೊಸ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ…

ನೆನ್ನೆ ಅಷ್ಟೇ ಮುಗಿದ 2020ರ ವರ್ಷದಲ್ಲಿ ಕನ್ನಡದ ಹಲವು ಸೆಲೆಬ್ರಿಟಿಗಳು ಮದುವೆ ಆಗಿದ್ದಾರೆ. ಕೆಲವರು ನಿಶ್ಚಿತಾರ್ಥ ಮಾಡಿಕೊಂಡು ಮುಂದಿನ ವರ್ಷ ಹಸೆಮಣೆ ಇರುವ ಸುಳಿವು ನೀಡಿದ್ದಾರೆ. ವರ್ಷದ ಕೊನೆಯ ತಿಂಗಳಿನಲ್ಲಂತೂ ತರಾತುರಿಯಲ್ಲಿ ಹಲವರ ವಿವಾಹ ನಡೆದಿದೆ. ನಟಿ ಅಧಿತಿ ಪ್ರಭುದೇವ್ ಅವರ ವಿವಾಹ ಕೂಡ ಕಳೆದ ತಿಂಗಳು ಜರುಗಿತ್ತು ಮತ್ತು ಅಭಿಷೇಕ ಅಂಬರೀಶ್ ಅವರು ಸಹ ಡಿಸೆಂಬರ್ ತಿಂಗಳಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡರು.

ಧನುರ್ಮಾಸ ಶುರುವಾಗುತ್ತದೆ ಎನ್ನುವ ಆತುರದಲ್ಲಿ ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಕೂಡ ಮನೆಯಲ್ಲಿಯೇ ಎಂಗೇಜ್ಮೆಂಟ್ ಮಾಡಿಕೊಂಡು ಮುಂದಿನ ವರ್ಷ ಅದ್ದೂರಿಯಾಗಿ ಮದುವೆ ಆಗುವ ಬಗ್ಗೆ ಸುದ್ದಿ ಕೊಟ್ಟಿದ್ದಾರೆ. ಈ ರೀತಿ ಸಿನಿಮಾ ನಟರು ಮಾತ್ರವಲ್ಲದೇ ಧಾರಾವಾಹಿ ಕಲಾವಿದರು ಕೂಡ ಸದ್ದಿಲ್ಲದೆ ಹೊಸ ಜೀವನ ಶುರು ಮಾಡುತ್ತಿದ್ದಾರೆ.

ಗಟ್ಟಿಮೇಳ ಖ್ಯಾತಿಯ ಅಧಿತಿ ಅಲಿಯಾಸ್ ಪೂಜ ಹಾಗೂ ಪಾರು ಧಾರವಾಹಿಯಲ್ಲಿ ಆದಿ ತಮ್ಮ ಪ್ರೀತು ಪಾತ್ರಧಾರಿ ಇಬ್ಬರು ನವೆಂಬರ್ ತಿಂಗಳಿನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡರು ಈಗಿವರು ಮದುವೆ ತಯಾರಿಯಲ್ಲಿ ಇದ್ದಾರೆ. ಗಟ್ಟಿಮೇಳ ಧಾರಾವಾಹಿಯ ಸುಹಾಸಿನಿ ಪಾತ್ರಧಾರಿ ಸ್ವಾತಿ ಕೂಡ ವರ್ಷದ ಕೊನೆಯಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟರು. ಇದೀಗ ವರ್ಷದ ಆರಂಭದ ದಿನವೇ ಮತ್ತೊಬ್ಬ ಝೀ ಕನ್ನಡದ ಪ್ರತಿಭೆ ಜೀವನದ ಹೊಸ ಅಧ್ಯಾಯ ಶುರು ಮಾಡಿದ್ದಾರೆ.

ಕಾಮಿಡಿ ಕಿಲಾಡಿಗಳು ಎನ್ನುವ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ಈಗ ಕರ್ನಾಟಕದ ಪೂರ್ತಿ ಪ್ಯಾಕು ಪ್ಯಾಕು ಎಂದು ಕರೆಸಿಕೊಳ್ಳುತ್ತಿರುವ ಹಿತೇಶ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿತೇಶ್ ಅವರು ಮೂಲತಃ ಮಂಗಳೂರು ಕಡೆಯವರು ಹಿತೇಶ್ ಪೂಜಾರಿ ಎನ್ನುವುದು ಇವರ ಪೂರ್ತಿ ಹೆಸರು. ತಮ್ಮ ಬಾಲ್ಯದ ಗೆಳತಿ ಹಾಗೂ ಪ್ರೇಯಸಿ ಆದ ಸ್ವಾತಿ ಪೂಜಾರಿ ಅವರನ್ನು ಪ್ರೀತಿಸಿ ಕುಟುಂಬಸ್ಥರು ಹಾಗೂ ಗುರುಹಿರಿಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಕೈ ಹಿಡಿದಿದ್ದಾರೆ.

ಕಳೆದ ವರ್ಷ ಇವರಿಬ್ಬರ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಈಗ ವರ್ಷದ ಮೊದಲ ದಿನವೇ ಮದುವೆ ಆಗಿದ್ದಾರೆ ಈ ವಿವಾಹ ವಾರ್ಷಿಕೋತ್ಸವಕ್ತವಾಗಿ ಹಾಗೂ ಅದ್ದೂರಿಯಾಗಿ ನಡೆದಿದೆ. ಸದ್ಯಕ್ಕೆ ಅವರ ಮದುವೆಯ ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಮದುಮಕ್ಕಳಿಬ್ಬರು ಕೆಂಪು ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದಾರೆ. ಈ ವಿಡಿಯೋಗಳಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ಮಡೆನೂರು ಮನು, ಮಿಂಚು ಸೇರಿದಂತೆ ಹಲವು ಕಲಾವಿದರುಗಳು ಕಾಣಿಸಿರುತ್ತಾರೆ.

ಎಲ್ಲರೂ ಸಹ ಸ್ವಾತಿ ಹಾಗೂ ಹಿತೇಶ್ ಅವರ ಮದುವೆಗೆ ಸಾಕ್ಷಿಯಾಗಿದ್ದು ಅನುಶ್ರೀ ಹಾಗೂ ಶಿವಣ್ಣ ಕೂಡ ಮದುವೆಗೆ ಹಾಜರಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ತೆರೆಕಂಡ ಕಾಮಿಡಿ ಕಿಲಾಡಿಗಳು ಎನ್ನುವ ಹಾಸ್ಯ ಕಾರ್ಯಕ್ರಮವು ಹಲವು ಜನ ಕಾಮಿಡಿ ಪ್ರತಿಭೆಗಳಿಗೆ ವೇದಿಕೆ ಗಿಟ್ಟಿಸಿ ಕೊಟ್ಟಿದ್ದು ಕರ್ನಾಟಕದಾದ್ಯಂತ ಇವರನ್ನು ಫೇಮಸ್ ಮಾಡಿದೆ. ಜೊತೆಗೆ ಮತ್ತಷ್ಟು ಕಾರ್ಯಕ್ರಮಗಳಲ್ಲಿ ಹಳೆಯ ಕಂಟೆಸ್ಟೆಂಟ್ಗಳಿಗೆ ಮತ್ತೊಮ್ಮೆ ಕಾಣಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೆ.

ಕಾಮಿಡಿ ಕಿಲಾಡಿಗಳು, ಡಿಕೆಡಿ, ಕಾಮಿಡಿ ಚಾಂಪಿಯನ್ ಜೊತೆಗೆ ಹೊಸ ಕಾಮಿಡಿ ಕಿಲಾಡಿಗಳು ಸೀಸನ್ ಹೀಗೆ ಎಲ್ಲದರಲ್ಲೂ ಸಹ ಹಿತೇಶ್ ಅವರು ಕಾಣಿಸಿರುತ್ತಾರೆ. ಈಗ ಎಲ್ಲಾ ಚಾನೆಲ್ ಅಲ್ಲೂ ಸಹ ಹಿತೇಶ್ ಅವರು ಕಾಣಿಸಿಕೊಳ್ಳುತ್ತಿದ್ದು ಸಿನಿಮಾ ಕಡೆ ಕೂಡ ಮುಖ ಮಾಡಿದ್ದಾರೆ. ಈಗ ಹೊಸ ಜೀವನ ಆರಂಭ ಮಾಡಿರುವ ಹಿತೇಶ್ ಅವರಿಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಹಾಗೂ ಕೆರಿಯರ್ ಎರಡರಲ್ಲೂ ಸಹ ಹೇಳಿಕೆ ಸಿಗಲಿ ಎಂದು ಹಾರೈಸೋಣ ಹಾಗೂ ಸ್ವಾತಿ ಮತ್ತು ಹಿತೇಶ್ ಅವರ ಜೋಡಿ ಬಹಳ ಮುದ್ದಾಗಿತ್ತು ಮದುವೆಯ ಶುಭಾಶಯಗಳು ತಿಳಿಸೋಣ.

ದರ್ಶನ್ ಈ ರೀತಿ ಬೆಳೆದಿದ್ದಾನೆ ಎಂಬುದಕ್ಕೆ ರಾಜಕುಮಾರ್ ಕುಟುಂಬದವರೇ ಕಾರಣ. ದರ್ಶನ್ ತಾಯಿ ಮೀನಾ ಮಾತಾನಾಡಿರುವ ವಿಡಿಯೋ ವೈರಲ್

ದರ್ಶನ್ ಅವರ ಈ ಸ್ಥಿತಿಗೆ ಯಾರು ಕಾರಣ ಎಂದು ಶಾ-ಕಿಂ-ಗ್ ಹೇಳಿಕೆ ಕೊಟ್ಟ ಮೀನ ತೂಗುದೀಪ್…

ದರ್ಶನ್ ಅವರು ಸದಾ ಒಂದಲ್ಲ ಒಂದು ವಿಚಾರವಾಗಿ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗಾಗಲೇ ಹಲವು ವಿಷಯಗಳಲ್ಲಿ ಇವರ ಹೆಸರು ಸುದ್ದಿಯಲ್ಲಿ ಇತ್ತು, ಇದೀಗ ಸುದ್ದಿ ಮಾಧ್ಯಮದಿಂದಲೇ ಇವರನ್ನು ಬ್ಯಾನ್ ಮಾಡುವ ತನಕ ಅವರ ಗಲಾಟೆಗಳು ಜೋರಾಗಿದೆ. ಈ ವರ್ಷ ಜನವರಿ 26ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ ಮಾಧ್ಯಮಗಳು ಎಲ್ಲೂ ಈ ಬಗ್ಗೆ ಪ್ರಚಾರ ಮಾಡುತ್ತಿಲ್ಲ ಹಾಗು ದರ್ಶನ್ ಅವರ ಯಾವುದೇ ಸುದ್ದಿಯನ್ನು ಪ್ರಸಾರ ಮಾಡುತ್ತಿಲ್ಲ ಇದಕ್ಕೆ ಸೆಡ್ಡು ಹೊಡೆದು ನಿಂತಿರುವ ದರ್ಶನ್ ಅಭಿಮಾನಿಗಳು.

ತಾವೇ ಸೋಶಿಯಲ್ ಮೀಡಿಯಾಗಳ ಮೂಲಕ ವಾಹನಗಳಲ್ಲಿ ಪೋಸ್ಟರ್ ಅಟಿಸುವ ಮೂಲಕ ಊರು ಊರಲ್ಲಿ ದರ್ಶನ್ ಕ್ರಾಂತಿ ಸುದ್ದಿ ಹಂಚುವ ಮೂಲಕ ಕಾಂತಿ ಸಿನಿಮಾಕ್ಕೆ ಪ್ರಚಾರ ನೀಡಿ ಸಿನಿಮಾವನ್ನು ಗೆದ್ದೇ ಗೆಲ್ಲುತ್ತೇವೆ ಎಂದು ತೊಡೆತಟ್ಟಿ ನಿಂತಿದ್ದಾರೆ. ಇದರ ಅಂಗವಾಗಿ ಕಳೆದ ತಿಂಗಳಿನಿಂದ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ಸಾಗುತ್ತಿದೆ. ದರ್ಶನ್ ಹಾಗೂ ಇಡೀ ಕ್ರಾಂತಿ ಚಿತ್ರ ತಂಡ ಕರ್ನಾಟಕದ ಹಲವು ಕಡೆ ಹೋಗಿ ಸಿನಿಮಾಗೆ ಪ್ರಚಾರ ನೀಡುತ್ತಿದೆ.

ಅಲ್ಲದೆ ಅಭಿಮಾನಿಗಳ ಎದುರೇ ಕ್ರಾಂತಿ ಸಿನಿಮಾದ ಹಾಡುಗಳನ್ನು ರಿಲೀಸ್ ಮಾಡುತ್ತಿದೆ. ಮೊದಲಿಗೆ ಧರಣಿ ಮಂಡಲ ಎನ್ನುವ ಹಾಡನ್ನು ರಿಲೀಸ್ ಮಾಡಿದ ತಂಡವು ಹೊಸಪೇಟೆಯಲ್ಲಿ ಬೊಂಬೆ ಬೊಂಬೆ ಹಾಡು ಹಾಗೂ ಹುಬ್ಬಳ್ಳಿಯಲ್ಲಿ ಪುಷ್ಪವತಿ ಹಾಡನ್ನು ರಿಲೀಸ್ ಮಾಡಿದೆ. ಆದರೆ ಹೊಸಪೇಟೆಯಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಕಿಡಿಗೇಡಿಗಳು ದರ್ಶನ್ ಅವರಿಗೆ ಚಪ್ಪಲಿ ಎಸೆದು ಸ್ಟಾರ್ ನಟನೊಬ್ಬನಿಗೆ ಅವಮಾನ ಆಗುವಂತೆ ನಡೆದುಕೊಂಡು ಅದಕ್ಕೆ ನಾನಾ ಅರ್ಥಗಳು ಬರುವಂತೆ ಸಂಚು ಮಾಡುತ್ತಿದ್ದಾರೆ.

ದರ್ಶನ್ ಅವರೇ ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದರು ಸಹ ಅಭಿಮಾನಿಗಳ ಮಾತ್ರ ಇದಕ್ಕೆ ಅವರು ಕಾರಣ ಇವರು ಕಾರಣ ಎಂದು ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಹಾಗೂ ದೊಡ್ಡಮನೆ ಕುಟುಂಬಕ್ಕೂ ಈ ಘಟನೆಗೂ ಲಿಂಕ್ ಇದೆ ಎಂದು ಚರ್ಚೆ ನಡೆಯುತ್ತಿದೆ. ಇದಕ್ಕೆ ಹಳೆಯ ನಾನಾ ಘಟನೆಗಳನ್ನು ಸೇರಿಸಿ ಬಣ್ಣ ಹಚ್ಚುವ ಪ್ರಯತ್ನವೂ ನಡೆಯುತ್ತಿದೆ.

ಇದರಲ್ಲಿ ಸತ್ಯನುಸತ್ಯತೆ ಏನು ಎನ್ನುವುದು ಇಡೀ ಕರ್ನಾಟಕಕ್ಕೆ ತಿಳಿದಿದೆ, ಈಗ ದರ್ಶನ್ ಅವರ ತಾಯಿ ಕೂಡ ಈ ಘಟನೆ ಬಗ್ಗೆ ಮಾತನಾಡಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.  ದರ್ಶನ್ ಅವರು ಇಂದು ಈ ರೀತಿ ಪರ್ಸನಾಲಿಟಿ ಹೊಂದಿದ್ದಾರೆ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಎಂದರೆ ಅದಕ್ಕೆ ರಾಜಕುಮಾರ್ ಕುಟುಂಬದವರೇ ಕಾರಣ, ಅವರು ಕೊಟ್ಟ ಬೆಂಬಲ ಸಹಕಾರದಿಂದ ನಾವು ಇಂದು ಈ ರೀತಿ ಬದುಕುತ್ತಿದ್ದೇವೆ. ಅದಕ್ಕಾಗಿ ನಾವು ಎಂದೆಂದಿಗೂ ಅವರಿಗೆ ಚಿರಋಣಿ ಎಂದಿದ್ದಾರೆ.

ಜೊತೆಗೆ ಸಿನಿಮಾದಿಂದ ಪತಿ ಹಾಗೂ ಮಗನನ್ನು ಹೊರ ಹಾಕುವ ಮೂಲಕ ವಂಚನೆ ಮಾಡಿದ್ದ ಸಂದರ್ಭದಲ್ಲಿ  ಅಂದು ಪಾರ್ವತಮ್ಮ ಅವರ ಬಳಿ ಅವರು ಅವರ ದುಃಖವನ್ನು ಹೇಳಿಕೊಂಡಿದ್ದ ವಿಚಾರವನ್ನು ನೆನೆದು ಹಂಚಿಕೊಂಡಿದ್ದಾರೆ. ದರ್ಶನ್ ಅವರು ಸಹ ದೊಡ್ಮನೆ ಬಗ್ಗೆ ನಾನಾ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಇದರಿಂದಲೇ ತಿಳಿಯುತ್ತದೆ ದರ್ಶನ್ ಹಾಗೂ ಪುನೀತ್ ಅವರ ಕುಟುಂಬಕ್ಕೆ ಎಷ್ಟು ಅವಿನಾಭವ ಸಂಬಂಧ ಇದೆ ಎಂದು ಆದರೆ ಕೆಲವು ಕಿಡಿಗೇಡಿಗಳು ಹಾಗೂ ನಖಲಿ ಅಭಿಮಾನಿಗಳಿಂದ ಸ್ಟಾರ್ ವಾರ್. ಶುರುವಾಗಿದೆ ಶೀಘ್ರದಲ್ಲೇ ಎಲ್ಲವೂ ಇತ್ಯರ್ಥ ಆಗಲಿ ಎಂದು ಹರಸೋಣ.