Home Blog Page 260

ದರ್ಶನ್ ವಶೀಕರಣ ಮಾಡ್ತಾನೆ, ಡಿ-ಬಾಸ್ ಮೇಲೆ ಗಂಭೀರ ಆರೋಪ ಮಾಡುತ್ತಿರುವ ಅಹೋರಾತ್ರ. ಕ್ರಾಂತಿ ಸಿನಿಮಾಗೆ ಮತ್ತೊಂದು ಕಂಟಕ

ದರ್ಶನ್ ಮೇಲೆ ಮತ್ತೊಂದು ಆರೋಪ

ಅಹೋರಾತ್ರ ಈ ಹೆಸರು ಈಗ ಕರ್ನಾಟಕದಾದ್ಯಂತ ಫೇಮಸ್. ವೃಕ್ಷ ರಕ್ಷಕ, ಮಹಿಳಾ ಪರವಾದಿ, ಸಾಮಾಜಿಕ ಹೋರಾಟಗಾರ, ಜ್ಯೋತಿಷಿ ಈ ರೀತಿ ನಾನಾ ಕೆಲಸಗಳಿಂದ ಫೇಮಸ್ ಆಗಿರುವ ಇವರು ಹೆಚ್ಚು ಜನರಿಗೆ ಪರಿಚಯ ಆಗಿದ್ದು ಸುದೀಪ್ ಅವರ ರಮ್ಮಿ ವಿವಾದದ ವಿಷಯವಾಗಿ ಧ್ವನಿ ಎತ್ತಿದ ನಂತರ. ರಮ್ಮಿ ಎನ್ನುವ ಆನ್ಲೈನ್ ಆಟವನ್ನು ಪ್ರೋತ್ಸಾಹಿಸುತ್ತಿರುವ ಸೆಲೆಬ್ರಿಟಿ ಗಳಿಗೆ ಅದರಲ್ಲೂ ಕನ್ನಡದಲ್ಲಿ ಸುದೀಪ ಅವರು ಆ ಜಾಹೀರಾತಿನಲ್ಲಿ ಅಭಿನಯಿಸಿದಕ್ಕೆ ಬಾರಿ ಆಕ್ರೋಶ ಹೊರಹಾಕಿ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.

ಅಂದಿನಿಂದ ಕಿಚ್ಚನ ಅಭಿಮಾನಿಗಳು ಹಾಗೂ ಅಹೋರಾತ್ರ ಅವರ ಅನುಯಾಯಿಗಳ ನಡುವೆ ಸೋಶಿಯಲ್ ಮೀಡಿಯಾ ವಾರ್ ಶುರು ಆಗಿತ್ತು. ಇದಾದ ನಂತರ ಅನೇಕ ವಿವಾದಗಳು ಭುಗಿಲೆದ್ದಿದ್ದವು ಇದೀಗ ಸುದೀಪ್ ನಂತರ ಯೋಗರಾಜ್ ಭಟ್ ಹಾಗೂ ದರ್ಶನ್ ಅವರ ವಿರುದ್ಧ ಮತ್ತು ಕ್ರಾಂತಿ ಸಿನಿಮಾದ ವಿರುದ್ಧ ಮಾತನಾಡಿ ಅಹೋರಾತ್ರ ಮತ್ತೆ ಸುದ್ದಿ ಆಗುತ್ತಿದ್ದಾರೆ. ಅದರಲ್ಲೂ ದರ್ಶನ್ ಅವರು ವಶೀಕರಣ ಮಾಡುತ್ತಿದ್ದಾರೆ ಎನ್ನುವಷ್ಟರ ಮಟ್ಟಿಗೆ ಗಂಭೀರವಾಗಿ ಆರೋಪ ಹೊರೆಸಿ ಮಾತನಾಡಿದ್ದಾರೆ.

ಇವರ ಮಾತಿನ ಅರ್ಥ ಈ ರೀತಿ ಇದೆ ದರ್ಶನ್ ಅವರು ಕ್ರಾಂತಿ ಸಿನಿಮಾ ವನ್ನು ಅಕ್ಷರ ಕ್ರಾಂತಿ ಕುರಿತು ಮಾಡಿರುವ ಸಿನಿಮಾ, ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವಿನ ವ್ಯತ್ಯಾಸ ಹಾಗೂ ಪ್ರಾಮುಖ್ಯತೆಗಳು ಬಗ್ಗೆ ತಿಳಿಸುವ ಸಿನಿಮಾ ಎಂದೆಲ್ಲಾ ಹೇಳಿಕೊಂಡು ಸುಮ್ಮನೆ ಪ್ರಚಾರಕ್ಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ ಆದರೆ ಸಿನಿಮಾದಲ್ಲಿ ಅದಕ್ಕಿಂತಲೂ ಬೇರೆ ವಿಷಯಗಳ ಬಗ್ಗೆ ಹೆಚ್ಚು ಕೇಂದ್ರೀಕರಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಅದರಲ್ಲೂ ಪುಷ್ಪವತಿ ಎನ್ನುವ ಕ್ರಾಂತಿ ಸಿನಿಮಾದ ಹಾಡು ರಿಲೀಸ್ ಆದ ಮೇಲೆ ಅದು ಇನ್ನು ತಾರಕಕ್ಕೇರಿದೆ.

ಪುಷ್ಪವತಿ ಎಂದು ಮೈ ನೆರೆದ ಹೆಣ್ಣು ಮಕ್ಕಳನ್ನು ಕರೆಯುತ್ತಾರೆ ಆದರೆ ಈ ಹಾಡಿನಲ್ಲಿ ಯೋಗರಾಜ್ ಭಟ್ ಅವರು ಬರೆದಿರುವ ಸಾಲುಗಳು ಅಕ್ಕನ ಗಂಡನನ್ನು ಬಯಸುವ ರೀತಿ ಇದೆ. ಇದು ನಮ್ಮ ಸಂಸ್ಕೃತಿ ಅಲ್ಲ, ಇಂತಹ ಹಾಡುಗಳಿಂದ ಎಂತಹ ಸಂದೇಶ ತಲುಪುತ್ತದೆ ಎಂದು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗೆಯೇ ದರ್ಶನ್ ಅವರನ್ನು ಏಕವಚನದಲ್ಲಿ ನಿಂದಿಸಿರುವ ಅವರು ರೌಡಿ ಬಾಸ್, ಹೇಡಿ ಬಾಸ್ ಎಂದೆಲ್ಲ ಕರೆದಿದ್ದಾರೆ. ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಚಾರದ ಸಮಯದಲ್ಲಿ ಅದೃಷ್ಟ ದೇವತೆಯ ಬಗ್ಗೆ ಆಡು ಭಾಷೆಯಲ್ಲಿ ಕೆಲ ಮಾತುಗಳನ್ನು ಮಾತಿನ ಬರದಲ್ಲಿ ಆಡಿದ್ದರು.

ಅಂದಿನಿಂದ ದೇವತೆಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಇನ್ನು ಸಾಮಾನ್ಯ ಹೆಣ್ಣು ಮಕ್ಕಳ ಕಥೆ ಏನು? ಸಮಾಜದಲ್ಲಿ ಸ್ಟಾರ್ ನಟರಾಗಿರುವ ಇವರೇ ಈ ರೀತಿ ನಡೆದುಕೊಂಡರೆ ಸಮಾಜದ ಗತಿ ಏನು ಎಂದೆಲ್ಲಾ ಅಹೋರಾತ್ರ ಅವರು ಅಂದಿನಿಂದ ದರ್ಶನ್ ಅವರ ವಿರುದ್ಧ ಮಾತನಾಡುತ್ತಲೇ ಬರುತ್ತಿದ್ದಾರೆ. ಈಗ ಅಹೋರಾತ್ರ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ದೊಡ್ಡ ಮಾತಿನ ವಾಗ್ವಾದವೇ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.

ಅಹೋರಾತ್ರ ಮುಂದುವರೆದು ವೇದ ಸಿನೆಮಾಗೆ ಕ್ರಾಂತಿ ಸಿನಿಮಾವನ್ನು ಕಂಪೇರ್ ಮಾಡಿ ಮಾತನಾಡಿದ್ದಾರೆ. ವೇದ ಸಿನಿಮಾದಲ್ಲಿರುವ ಹೆಣ್ಣು ಮಕ್ಕಳ ಕಾಲ ಕೆಳಗೆ ತೂರಿ ಸ್ಟಾರ್ ನಟರು ಪಾಠ ಕಲಿಯಬೇಕು. ಹೆಣ್ಣಿಗೆ ಹೇಗೆ ಗೌರವ ಕಲ್ಲಿಸಿ ಕೊಡಬೇಕು ಎನ್ನುವುದನ್ನು ವೇದ ಸಿನಿಮಾ ತಂಡದಿಂದ ಕಲಿಯಿರಿ ಹಾಗೂ ವೇದ ಸಿನಿಮಾ ಈ ಸಮಾಜಕ್ಕೆ ತಕ್ಕ ಪಾಠ ಕಲಿಸುವ ಸರಿಯಾದ ಸಿನಿಮಾ ಆಗಿದೆ ಎಂದು, ಇಂತಹ ಸಿನಿಮಾ ನೀಡಿದಕ್ಕಾಗಿ ಇಡೀ ತಂಡಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.

ಬಿಗ್ ಬಾಸ್ ವೇದಿಕೆ ಮೇಲೆ ಕಣ್ಣೀರಿಟ್ಟ ಕಿಚ್ಚ ಸುದೀಪ್ ಕಾರಣವೇನು ಗೊತ್ತಾ.?

ಬಿಗ್ ಬಾಸ್ ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ ಕಿಚ್ಚ ಸುದೀಪ್

ನಿನ್ನೆಯಷ್ಟೇ ಬಿಗ್ ಬಾಸ್ ಸೀಸನ್ 9 ಮುಕ್ತಾಯವಾಗಿದೆ ಈ ಬಾರಿಯ ವಿನ್ನರ್ ರೂಪೇಶ್ ಶೆಟ್ಟೆ ಎಂದು ಘೋಷಣೆ ಮಾಡಿದ್ದಾರೆ ರಾಕೇಶ್ ಅಡಿಗ ಅವರು ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಸುಮಾರು 150 ದಿನಗಳಿಂದ ಕಾತುರದಿಂದ ಕಾಯುತ್ತಿದ್ದಂತಹ ಅಭಿಮಾನಿಗಳಿಗೆ ಕೊನೆಗೂ ನೆನ್ನೆ ಒಂದು ಅಂತಿಮ ನಿರ್ಧಾರ ಎಂಬುದು ಸಿಕ್ಕಿದೆ. ಕರಾವಳಿ ಮೂಲದ ರೂಪೇಶ್ ಶೆಟ್ಟಿ ಅವರು ಈ ಬಾರಿಯ ಬಿಗ್ ಬಾಸ್ ಗೆದ್ದಿದ್ದು ಅಲ್ಲಿನ ಜನರಿಗೆ ಬಹಳಷ್ಟು ಖುಷಿ ತಂದುಕೊಟ್ಟಿದೆ. ಮಿನಿ ಬಿಗ್ ಬಾಸ್ ಓಟಿಟಿ ಯಲ್ಲೂ ಕೂಡ ರೂಪೇಶ್ ಶೆಟ್ಟಿ ವಿಜೇತರಾಗಿದ್ದರು ಇದಾದ ನಂತರ ಬಿಗ್ ಬಾಸ್ ಸೀಸನ್ 9 ಪಟ್ಟವನ್ನು ಕೂಡ ತಮ್ಮ ಮುಡುಗೇರಿಸಿಕೊಂಡಿದ್ದಾರೆ.

ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಬಿಗ್ ಬಿಗ್ ಬಾಸ್ ಸೀಸನ್ ಒಂದರಿಂದ ಹಿಡಿದು ಒಂಬತ್ತರ ವರೆಗೂ ಈ ಕಾರ್ಯಕ್ರಮ ಎಷ್ಟು ಅಚ್ಚುಕಟ್ಟಾಗಿ ಮೂಡಿ ಬಂದಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ಕಿಚ್ಚ ಸುದೀಪ್ ಅಂತಾನೇ ಹೇಳಬಹುದು. ಕಿಚ್ಚ ಸುದೀಪ್ ಅವರನ್ನು ಬಿಟ್ಟರೆ ಮತ್ಯಾರು ಈ ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ಸಾಧ್ಯಾನೆ ಇಲ್ಲ ಎಂಬುವಷ್ಟರ ಮಟ್ಟಿಗೆ ಈ ಕಾರ್ಯಕ್ರಮಕ್ಕೆ ಜೀವವನ್ನು ತುಂಬಿದ್ದಾರೆ. ಪ್ರತಿಯೊಂದು ಸಂದರ್ಭದಲ್ಲಿಯೂ ಕೂಡ ನ್ಯಾಯಯುತವಾದಂತ ಹೇಳಿಕೆಯನ್ನೇ ನೀಡಿದ್ದಾರೆ ಕಂಟೆಸ್ಟೆಂಟ್ ಗಳಿಗೆ ಪ್ರೋತ್ಸಾಹ ಉತ್ಸಹವನ್ನು ತುಂಬಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಭಾಗವಹಿಸಿದಂತಹ ಪ್ರತಿಯೊಬ್ಬ ಸ್ಪರ್ದಿಯು ಕೂಡ ತಮ್ಮ ಜರ್ನಿ ವಿಟಿಯನ್ನು ನೋಡುವುದಕ್ಕೆ ಬಹಳ ಕಾತುರದಿಂದ ಕಾದಿರುತ್ತಾರೆ. ಏಕೆಂದರೆ ಈ ಜರ್ನಿ ವಿಟಿಯಲ್ಲಿ ಅವರು ಅನುಭವಿಸಿದಂತಹ ಎಲ್ಲಾ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲಾಗುತ್ತದೆ. ನೋವು ಇರಬಹುದು, ನಲಿವು ಇರಬಹುದು, ಕೋಪ ಇರಬಹುದು, ಬೇಸರ, ಮುನಿಸು ಅಷ್ಟೇ ಯಾಕೆ ಸಂತೋಷದಿಂದ ಕಾಲ ಕಳೆದಂತಹ ಪ್ರತಿಯೊಂದು ಕ್ಷಣವನ್ನು ಕೂಡ ಕ್ಯಾಮೆರಾ ಸೆರೆ ಹಿಡಿದಿರುತ್ತದೆ.

ಹಾಗಾಗಿ ಬಿಗ್ ಬಾಸ್ ಗೆ ಬರುವಂತಹ ಪ್ರತಿಯೊಬ್ಬ ಸ್ಪರ್ದಿಯು ಕೂಡ ತಮ್ಮ ಜರ್ನಿ ವಿಟಿಯನ್ನು ನೋಡುವುದಕ್ಕೆ ಬಹಳಷ್ಟು ಇಷ್ಟ ಪಡುತ್ತಾರೆ ಇದೇ ರೀತಿ ಕಿಚ್ಚ ಸುದೀಪ್ ಕೂಡ ಕಲರ್ಸ್ ಕನ್ನಡ ವಾಹಿನಿಯವರು ಜರ್ನಿ ವಿಟಿಯೊಂದನ್ನು ತಯಾರಿಸಿದರು. ಈ ವಿಟಿಯನ್ನು ನೋಡಿದಂತಹ ಕಿಚ್ಚ ಸುದೀಪ್ ಅವರು ಭಾವುಕರಾಗುತ್ತಾರೆ ಅಷ್ಟೇ ಅಲ್ಲದೆ ಮೊದಲ ಬಾರಿಗೆ ಬಿಗ್ ಬಾಸ್ ವೇದಿಕೆಯಲ್ಲಿ ಕಣ್ಣೀರು ಹಾಕುತ್ತಾರೆ. ಕಿಚ್ಚ ಸುದೀಪ್ ಕಣ್ಣೀರು ಹಾಕಿದ್ದು ನೋಡಿದಂತಹ ಮನೆ ಮಂದಿ ಎಲ್ಲರೂ ಕೂಡ ಒಂದು ಕ್ಷಣ ಆಶ್ಚರ್ಯ ಚಕಿತರಾಗುತ್ತಾರೆ.

ಏಕೆಂದರೆ ಒಬ್ಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಂತಹ ನಿರೂಪಕರಿಗೆ ಇಷ್ಟು ಅತ್ತಿರವಾಗಿರುವಂತಹ ಈ ಶೋ ಅವರ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿರಬಹುದು ಅಂತ. ಇನ್ನೂ ಮಾತನು ಮುಂದುವರಿಸಿದಂತಹ ಕಿಚ್ಚ ಸುದೀಪ್ ಅವರು ಜರ್ನಿ ವಿಟಿ ನೋಡಿದಾಗ ನಿಜಕ್ಕೂ ನನಗೆ ಕಣ್ಣೀರು ಬಂದು ಏಕೆಂದರೆ ನಾನು ಇಲ್ಲಿ ಒಬ್ಬ ಕ್ಯಾರೆಕ್ಟರ್ ಆಗಿ ಗುರುತಿಸಿಕೊಂಡಿಲ್ಲ ಬದಲಾಗಿ ಕಿಚ್ಚ ಸುದೀಪ್ ಆಗಿ ಉಳಿದುಕೊಂಡಿದ್ದೇನೆ. ಎಲ್ಲ ಕಂಟೆಸ್ಟೆಂಟ್ ಗಳಿಗೂ ಇರುವಂತೆ ನನಗೂ ಕೂಡ ಆಸೆ ಇದೆ ಪರ್ಫೆಕ್ಟ್ ಆಗಿ ಇರಬೇಕು ಅಂತ ಪ್ರಯತ್ನ ಪಡುತ್ತೇನೆ.

ಆದರೆ ದಿನ ಕಳೆದಂತೆ ನನ್ನ ಆಸೆ ಕನಸುಗಳೆಲ್ಲವೂ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ ಪ್ರತಿದಿನ ರಾತ್ರಿ ಮಲಗಿ ಬೆಳಗ್ಗೆ ಏಳುವಷ್ಟರ ಹೊತ್ತಿಗೆ ನಾನು ಸಾಮಾನ್ಯ ಮನುಷ್ಯನಂತೆ ಜೀವನ ಸಾಗಿಸಬೇಕು ಎಂಬ ಆಸೆ ಮತ್ತೆ ಹುಟ್ಟುತ್ತದೆ. ಈ ಸೆಲೆಬ್ರಿಟಿ ಜೀವನಕ್ಕಿಂತ ಸಾಮಾನ್ಯ ಮನುಷ್ಯನಾಗಿ ಬದುಕುವುದರಲ್ಲಿ ಹೆಚ್ಚು ಆತ್ಮ ಸಂತೃಪ್ತಿ ಎಂಬುದು ದೊರೆಯುತ್ತದೆ ಎಂದು ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರು ಕಣ್ಣೀರು ಹಾಕಿದ್ದಾರೆ.

ಸದ್ಯಕ್ಕೆ ಕಿಚ್ಚನ ಕಣ್ಣೀರು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇಷ್ಟು ದೊಡ್ಡ ಸ್ಥಾನಕ್ಕೆ ಹೋದರು ಕೂಡ ತಾವು ಸರಳವಾಗಿವೆ ಜೀವನ ನಡೆಸಬೇಕು ಅಂತ ಅಂದುಕೊಳ್ಳುತ್ತಿರುವುದು ನಿಜಕ್ಕೂ ಅಪರೂಪ. ಎಲ್ಲರೂ ಕೂಡ ಸೆಲೆಬ್ರಿಟಿ ಆಗಬೇಕು ಸಿರಿ ಸಂಪತ್ತು ಗಳಿಸಬೇಕು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದುಕೊಳ್ಳಬೇಕು ಅಂತ ಬಯಸುತ್ತಾರೆ. ಆದರೆ ಸುದೀಪ್ ಅವರು ಮಾತ್ರ ಸರಳವಾಗಿಯೇ ಜೀವನ ನಡೆಸಲು ಬಯಸುತ್ತಿದ್ದಾರೆ ಎಂದು ಅಭಿಮಾನಿಗಳೆಲ್ಲರೂ ಕೂಡ ಆಶ್ಚರ್ಯ ಪಟ್ಟಿದ್ದಾರೆ.

ಬಿಗ್ ಬಾಸ್ ಸೀಸನ್ 9 ರ ವಿನ್ನರ್ ರೂಪೇಶ್ ಶೆಟ್ಟಿ. ರನ್ನರ್ ಅಪ್ ಆದ ರಾಕೇಶ್ ಅಡಿಗ.

ಬಿಗ್ ಬಾಸ್ ಟ್ರೋಫಿ ಮುಡಿಗೇರಿಸಿಕೊಂಡ ರೂಪೇಶ್ ಶೆಟ್ಟಿ

ಈ ಬಾರಿಯ ಬಿಗ್ ಬಾಸ್ ಸೀಸನ್ 9.ರ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮಿನಿ ಬಿಗ್ ಬಾಸ್ ಓಟಿಟಿ ಯಲ್ಲಿ ಮೂರನೇ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆಗೆ ಕೊಟ್ಟಂತಹ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅವರು ಇದೀಗ ಬಿಗ್ ಬಾಸ್ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಮಿನಿ ಬಿಗ್ ಬಾಸ್ ಓಟಿಟಿಯಲ್ಲೂ ಕೂಡ ವಿಜೇತರಾಗಿ ಸುಮಾರು 5 ಲಕ್ಷ ರೂಪಾಯಿಗಳು ನಗದು ಬಹುಮಾನವನ್ನು ಪಡೆದುಕೊಂಡಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರಲ್ಲಿಯೂ ಕೂಡ ವಿಜೇತರಾಗಿ 50 ಲಕ್ಷ ರೂಪಾಯಿಗಳ ನಗದು ಬಹುಮಾನ ಹಾಗೂ ಟ್ರೋಫಿ ಇದರ ಜೊತೆಗೆ ಇವರು ನೂರು ದಿನಗಳ ಕಾಲ ಇದ್ದಂತಹ ಸಂಭಾವನೆ ಇವೆಲ್ಲವನ್ನು ಕೂಡ ಪಡೆದುಕೊಂಡಿದ್ದಾರೆ.

ಬಹಳ ಟಫ್ ಕಾಂಪಿಟೇಶನ್ ಕೊಟ್ಟು ರೂಪೇಶ್ ಶೆಟ್ಟಿ ಅವರು ವಿನ್ ಆಗಿದ್ದಾರೆ ಕೆಲವು ಮೂಲಗಳ ಪ್ರಕಾರ ರಾಕೇಶ್ ಅಡಿಗ ವಿನ್ ಆಗಬಹುದು ಅಂತ ಹೇಳುತ್ತಿದ್ದರು. ಇವರನ್ನು ಹೊರತು ಪಡಿಸಿದರೆ ರೂಪೇಶ್ ರಾಜಣ್ಣ ಅವರಿಗೆ ಅತಿ ಹೆಚ್ಚಿನ ಅಭಿಮಾನಿ ಬಳಗ ಇದೆ ಹಾಗಾಗಿ ರಾಜಣ್ಣ ಅವರು ಗೆಲ್ಲಬಹುದು ಅಂತ ಹೇಳುತ್ತಿದ್ದರು. ಇದರ ಜೊತೆಗೆ ದೀಪಿಕಾ ದಾಸ್ ಅವರು ಕೂಡ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಂಡಿದ್ದರು ಮಹಿಳಾ ಸ್ಪರ್ಧೆಗಳಲ್ಲಿ ದೀಪಿಕಾ ದಾಸ್ ಅವರು ಫಿನಾಲೆ ಅಂತಕ್ಕೆ ಬಂದಿದ್ದರು ಆದರೆ ನಾಲ್ಕನೇ ರನ್ನರ್ ಆಗಿ ರೂಪೇಶ್ ರಾಜಣ್ಣ ಮೂರನೇ ರನ್ನರ್ ಅಪ್ ಆಗಿ ದೀಪಿಕಾ ದಾಸ್ ಅವರು ಹೊರ ಬಂದಿದ್ದಾರೆ.

ಇಬ್ಬರು ಹೊರ ಬಂದ ನಂತರ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಅವರ ನಡುವೆ ಜಟಾಪಟಿ ಪ್ರಾರಂಭವಾಗುತ್ತದೆ ಆದರೆ ಅತಿ ಹೆಚ್ಚು ಫ್ಯಾನ್ಸ್ ಫಾಲ್ಲೋರ್ಸ್ ಇರುವ ಕಾರಣ ರೂಪ ಶೆಟ್ಟಿ ಅವರು ಅತಿ ಹೆಚ್ಚು ಪಡೆದು ಬಿಗ್ ಬಾಸ್ ಸೀಸನ್ ೯ ಗೆದ್ದಿದ್ದಾರೆ. ಅಫಿಶಿಯಲ್ ಆಗಿ ಕಲರ್ಸ್ ಕನ್ನಡ ವಾಹಿನಿಯವರು ಈ ಪ್ರೋಗ್ರಾಮನ್ನು ನಡೆಸಿಕೊಡುತ್ತಿರುವುದರಿಂದ ಇನ್ನು ವಿಜೇತರು ಯಾರು ಎಂಬುದನ್ನು ಘೋಷಣೆ ಮಾಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ರೂಪೇಶ್ ಶೆಟ್ಟಿ ಅವರು ಟ್ರೋಫಿಯನ್ನು ಗೆದ್ದಿರುವಂತಹ ಕೆಲವೊಂದಷ್ಟು ಫೋಟೋಸ್ಗಳು ವೈರಲ್ ಆಗಿದೆ ಹಾಗಾಗಿ ಈ ಬಾರಿಯ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಎಂಬುದು ಸಾಬೀತು ಆಗಿದೆ.

ರೂಪೇಶ್ ಶೆಟ್ಟಿ ಅವರು ತುಳುನಾಡಿನ ಫೇಮಸ್ ನಟ ಗಾಯಕ ಕೂಡ ಹೌದು ಹಲವಾರು ಶಾರ್ಟ್ ಫಿಲಂ ಗಳನ್ನು ಮಾಡಿದ್ದಾರೆ ಇದರ ಜೊತೆಗೆ ರೇಡಿಯೋ ಜಾಕಿ ಕೂಡ ಹೌದು ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕಲಾಕ್ಷೇತ್ರದಲ್ಲಿ ತಮ್ಮದೇ ಆದಂತಹ ಕೊಡುಗೆಯನ್ನು ನೀಡಿದ್ದಾರೆ. ತುಳುನಾಡಲ್ಲಿ ಫೇಮಸ್ ಆಗಿದ್ದಂತಹ ಈ ನಟ ಇದೀಗ ಕರ್ನಾಟಕದ ಮನೆ ಮಾತಾಗಿದ್ದಾರೆ ರೂಪೇಶ್ ಶೆಟ್ಟಿಯವರು ಈ ಬಾರಿಯ ಬಿಗ್ ಬಾಸ್ ಗೆಲ್ಲುತ್ತಾರೆ ಅಂತ ಆರ್ಯವರ್ಧನ್ ಗುರೂಜಿ ಅವರು ಹೇಳಿದ್ದರು.

ಮೊದಲ ಬಾರಿಗೆ ಆರ್ಯವರ್ಧನ್ ಗುರೂಜಿ ನುಡಿದಂತಹ ಭವಿಷ್ಯ ಸತ್ಯವಾಗಿದೆ ಎಂದು ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ ಅದೇನೆ ಆಗಲಿ ಸದ್ಯಕ್ಕೆ 100 ದಿನಗಳಿಂದ ಮನೆಯಲ್ಲಿ ಇದು ಎಲ್ಲಾ ಟಾಸ್ಗಳ್ಳಲ್ಲಿಯೂ ಕೂಡ ಉತ್ತಮವಾಗಿ ಆಡಿ ತಮ್ಮದೇ ಆದಂತಹ ಫ್ಯಾನ್ ಬೇಸ್ ಅನ್ನು ಕ್ರಿಯೇಟ್ ಮಾಡಿದಂತಹ ರೂಪೇಶ್ ಶೆಟ್ಟಿ ವಿಜೇತರಗಿರುವುದು ಬಹಳಷ್ಟು ಅಭಿಮಾನಿಗಳಲ್ಲಿ ಸಂತಸ ತಂದಿದೆ ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬೇಕಿತ್ತು ತಪ್ಪದೆ ಕಾಮೆಂಟ್ ಮಾಡಿ.

ಬಿಗ್ ಬಾಸ್ ಮನೆಯಿಂದ ಹೊರ ಬಂದ 3ನೇ ಸ್ಪರ್ಧಿ ದೀಪಿಕಾ ದಾಸ್, ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ನಡುವೆ ನಡೆಯುತ್ತಿದೆ ಜಟಾಪಟಿ ಯಾರಾಗಬಹುದು ಈ ಬಾರಿಯ ಸೀಸನ್ 9ರ ವಿನ್ನರ್.?

 

ಅಭಿಮಾನಿಗಳು ಕೈ ಕೊಟ್ಟರೋ ಅಥವಾ ಅದೃಷ್ಟ ಕೈ ಕೊಟ್ಟಿತೋ

ಬಿಗ್ ಬಾಸ್ ಮನೆಯಿಂದ ಹೊರಬಂದ 3ನೇ ಸ್ಪರ್ಧಿ ದೀಪಿಕಾ ದಾಸ್ ಈ ಬಾರಿಯೂ ಕೂಡ ದೀಪಿಕಾ ದಾಸ್ ಅವರ ಅದೃಷ್ಟ ಕೈ ತಪ್ಪಿದೆ ಹೌದು ಸೀಸನ್ ಏಳರಲ್ಲಿ ಸ್ಪರ್ಧಿಯಾಗಿದ್ದಂತಹ ದೀಪಿಕಾ ದಾಸ್ ಅವರು ಸೀಸನ್ 9ರಲ್ಲೂ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದವರು. ಪ್ರವೀಣರು ಎಂಬ ಪಟ್ಟಿಯಲ್ಲಿ ದೀಪಿಕಾ ದಾಸ್ ಅವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ತಮ್ಮದೇ ಆದಂತಹ ಛಾಪನ್ನು ತೋರಿಸಿದವರು ಅತ್ಯುತ್ತಮ ಆಟಗಾತಿ. ಟಾಸ್ಕ್ ಯಾವುದೇ ಇರಲಿ ಮುನ್ನುಗ್ಗಿ ಗೇಮ್ ಚೇಂಜ್ ಮಾಡುವಂತಹ ಚಾಣಾಕ್ಷತನವನ್ನು ಒಳಗೊಂಡಿದ್ದರು.

ಈ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ಅವರು ತಮ್ಮದೇ ಆದಂತಹ ಟ್ರೇಡ್ ಮಾರ್ಕ್ ಅನ್ನು ಉಳಿಸಿಕೊಂಡಿದ್ದರು ಆದರೆ ಬಿಗ್ ಬಾಸ್ ಸೀಸನ್ 9ರಲ್ಲಿಯೂ ಕೂಡ ಒಂದು ಬಾರಿ ಎಲಿಮಿನೇಟ್ ಆದರೂ ಎಲಿಮಿನೇಟ್ ಆದ ಎರಡೇ ದಿನಕ್ಕೆ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟರು. ನಿಜಕ್ಕೂ ಇದು ಎಲ್ಲರನ್ನೂ ಕೂಡ ಆಶ್ಚರ್ಯ ಚಕಿತವನ್ನಾಗಿವಂತೆ ಮಾಡಿದ್ದು ಏಕೆಂದರೆ ಬಿಗ್ ಬಾಸ್ ಮನೆಗೆ ಹೋಗಬೇಕು ಎಂಬುದು ಸಾಕಷ್ಟು ಜನರ ಕನಸಾಗಿರುತ್ತದೆ. ಒಂದು ಬಾರಿ ಅವಕಾಶ ಸಿಕ್ಕೊತು ಅಂದರೆ ಸಾಕು ಅನ್ನುತ್ತಾರೆ ಆದರೆ ನಟಿ ದೀಪಿಕಾ ದಾಸ್ ಅವರಿಗೆ ಮಾತ್ರ 3 ಬಾರಿ ಅವಕಾಶ ದೊರೆತಿದೆ.

ಹೌದು ಸೀಸನ್ ಏಳರಲ್ಲಿಯೂ ಕೂಡ ಅವಕಾಶ ಗಿಟ್ಟಿಸಿಕೊಂಡರು ಇದಾದ ನಂತರ ಸೀಸನ್ 9ರಲ್ಲಿ ಅವಕಾಶ ಗಿಟ್ಟಿಸಿಕೊಂಡರು ತದನಂತರ ಎಲಿಮಿನೇಟ್ ಆಗಿ ವರ್ಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಒಟ್ಟಾರೆಯಾಗಿ ಮೂರು ಬಾರಿ ಬಿಗ್ ಬಾಸ್ ಮನೆಗೆ ಬರುವಂತಹ ಅವಕಾಶವನ್ನು ಪಡೆದುಕೊಂಡಿದ್ದರು. ಫಿನಲೇ ಅಂತಕ್ಕೂ ಕೂಡ ಸೆಲೆಕ್ಟ್ ಆಗಿದ್ದರು ಆದರೆ ಅಭಿಮಾನಿಗಳು ಕೈಹಿಡಿಯಲಿಲ್ಲವೋ ಅಥವಾ ಅದೃಷ್ಟ ಎಂಬುದು ಕೈ ಹಿಡಿಯಲಿಲ್ಲವೋ ಗೊತ್ತಿಲ್ಲ ಬಿಗ್ ಬಾಸ್ ಮನೆಯಿಂದ ಮೂರನೇ ರನ್ನರ್ ಅಪ್ ಆಗಿ ದೀಪಿಕಾ ದಾಸ್ ಅವರು ಹೊರ ಬಿದ್ದಿದ್ದಾರೆ.

 

ಸದ್ಯಕ್ಕೆ ದೀಪಿಕಾ ದಾಸ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಂತಹ ಕೆಲವೊಂದು ಫೋಟೋಸ್ಗಳು ಮತ್ತು ವಿಡಿಯೋಗಳು ವೈರಲ್ ಆಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ ಏಕೆಂದರೆ ಮಹಿಳಾ ಸ್ಪರ್ಧೆಗಳಲ್ಲಿ ದೀಪಿಕಾ ದಾಸ್ ಅವರು ಸಿಕ್ಕಾಪಟ್ಟೆ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದರು. ಯಾವುದೇ ಗುಂಪಿಗೆ ಸೇರ್ಪಡೆಯಾಗದೆ ಒಂಟಿಯಾಗಿ ತಮ್ಮ ಆಟವನ್ನು ಆಡುತ್ತಿದ್ದರು. ಈ ಕಾರಣಕ್ಕಾಗಿಯೇ ದೀಪಿಕಾ ದಾಸ್ ಅವರನ್ನು ಎಲ್ಲರೂ ಇಷ್ಟ ಪಡುತ್ತಿದ್ದರು ಆದರೆ ಇವರ ಆಟಕ್ಕೆ ತಕ್ಕ ಪರಿಶ್ರಮ ಸಿಕ್ಕಿಲ್ಲ ಎಂಬುದು ಕೆಲವು ಅಭಿಮಾನಿಗಳ ವಾದವಾಗಿದೆ.

ಇನ್ನು ಕೆಲವರ ಪ್ರಕಾರ ಪ್ರತಿಬಾರಿಯೂ ಕೂಡ ಪುರುಷರೇ ವಿನ್ನರಾಗುತ್ತಿದ್ದರೆ ಈ ಬಾರಿ ದೀಪಿಕಾ ದಾಸ್ ಅವರು ವಿನ್ ಆಗಬೇಕು ಅಂತ ಹೇಳುತ್ತಿದ್ದರು. ಆದರೆ ಅವರ ಆಸೆಗೂ ಕೂಡ ಇದೀಗ ತಣ್ಣೀರು ಎರಚಿದಂತಾಗಿದೆ ದೀಪಿಕಾ ದಾಸ್ ಅವರು ಹೊರಬಂದ ನಂತರ ಇದೀಗ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಅವರ ನಡುವೆ ಜಟಾಪಟಿ ನಡೆಯುತ್ತಿದೆ. ಹೌದು ಈ ಇಬ್ಬರು ಕಂಟೆಸ್ಟೆಂಟ್ಗಳಲ್ಲಿ ಒಬ್ಬರು ಈ ಬಾರಿಯ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಅಗಲಿದ್ದಾರೆ, ವಿಶೇಷ ಏನೆಂದರೆ ಈ ಇಬ್ಬರು ಸ್ಪರ್ದಿಗಳು ಕೂಡ ಮಿನಿ ಬಿಗ್ ಬಾಸ್ ಓಟಿಟಿಯಿಂದ ಬಂದವರು. ಅಂದರೆ ಇಲ್ಲಿಯವರೆಗೂ ಸುಮಾರು 150 ದಿನಗಳ ಕಾಲ ಬಿಗ್ ಬಾಸ್ ನಲ್ಲಿ ಕಾಲ ಕಳೆದಿದ್ದಾರೆ ಇವರಿಬ್ಬರಲ್ಲಿ ವಿನ್ನರ್ ಯಾರಾಗಬಹುದು ಎಂಬುವುದೇ ಇದೀಗ ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬೇಕು.

ಬಿಗ್ ಬಾಸ್ ಮನೆಯಿಂದ ಹೊರ ಬಂದ ರೂಪೇಶ್ ರಾಜಣ್ಣ, ವಿನ್ ಆಗಬೇಕಿದ್ದ ಸ್ಪರ್ಧಿ ಎಲಿಮಿನೇಟ್ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು.

ನವೀನರ ಪೈಕಿ ಆಯ್ಕೆ ಆಗಿದ್ದ ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯಿಂದ ಹೊರಗೆ

ಬಿಗ್ ಬಾಸ್ ಗ್ರಾಂಡ್ ಫಿನಾಲೆ ನೆನ್ನೆ ಮತ್ತು ಇವತ್ತು ನಡೆಯುತ್ತಿದೆ ಫಿನಾಲೆ ಹಂತಕ್ಕೆ 5 ಜನ ಸ್ಪರ್ಧಿಗಳು ಆಯ್ಕೆಯಾಗಿದ್ದರು ಮಿನಿ ಬಿಗ್ ಬಾಸ್ ಕಾರ್ಯಕ್ರಮದಿಂದ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಅವರು ಆಯ್ಕೆಯಾದರು. ಪ್ರವೀಣರು ಕಡೆಯಿಂದ ದೀಪಿಕಾ ದಾಸ್ ಹಾಗೂ ದಿವ್ಯ ಉರುಡುಗ ಅವರು ಆಯ್ಕೆಯಾಗಿದ್ದರು ಇನ್ನು ಬಿಗ್ ಬಾಸ್ ಸೀಸನ್ 9ಕ್ಕೆ ಬಂದಂತಹ ನವೀನರ ಪೈಕಿ ರೂಪೇಶ್ ರಾಜಣ್ಣ ಅವರು ಆಯ್ಕೆಯಾಗಿದ್ದರು ಅಲ್ಲಿಗೆ ಒಟ್ಟಾರೆಯಾಗಿ 5 ಜನ ಕಂಟೆಸ್ಟೆಂಟ್ಗಳು ಬಿಗ್ ಬಾಸ್ ಫಿನಾಲೆ ಹಂತಕ್ಕೆ ತಲುಪಿದ್ದರು.

ನೆನ್ನೆಯ ಎಪಿಸೋಡ್ ನಲ್ಲಿ ದಿವ್ಯ ಅವರು ಎಲಿಮಿನೇಷನ್ ಆಗಿದರು. ಐದು ಜನ ಸ್ಪರ್ಧಿಗಳಲ್ಲಿ ನಾಲ್ಕು ಜನ ಉಳಿದುಕೊಂಡರು ಅವರಲ್ಲಿ ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ಮತ್ತು ರೂಪೇಶ್ ಶೆಟ್ಟಿ ಮತ್ತು ದೀಪಿಕಾ ದಾಸ್ ಇದೀಗ ಈ ನಾಲ್ವರಲ್ಲೂ ಕೂಡ ಬಾರಿ ಪೈಪೋಟಿ ಏರ್ಪಟ್ಟಿತ್ತು. ಆದರೆ ಇಂದಿನ ಕಾರ್ಯಕ್ರಮದಲ್ಲಿ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಹೌದು ಫಿನಾಲೆ ಅಂತಕ್ಕೆ ಬಂದಿದ್ದಂತಹ ವ್ಯಕ್ತಿಗಳಲ್ಲಿ ರೂಪೇಶ್ ರಾಜಣ್ಣ ಅವರು ಟಾಪ್ ಫೋರ್ ಲಿಸ್ಟ್ ಗೆ ಸೇರ್ಪಡೆಯಾಗಿದ್ದು ಇದೀಗ ಮನೆಯಿಂದ ಹೊರ ಬಂದಿದ್ದಾರೆ.

ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಂತಹ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಈ ಬಾರಿಯ ನವೀನರು ಸ್ಪರ್ಧಿಗಳಲ್ಲಿ ರೂಪೇಶ್ ರಾಜಣ್ಣ ಅವರು ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಆಗಿದ್ದರು ಅಷ್ಟೇ ಅಲ್ಲದೆ ಯಾವುದೇ ಸಿನಿಮಾ ಬ್ಯಾಗ್ರೌಂಡ್ ಇಲ್ಲದೆ ಸೆಲೆಬ್ರಿಟಿ ಅಲ್ಲದೆ ಇದ್ದರೂ ಕೂಡ ರೂಪೇಶ್ ರಾಜಣ್ಣ ಅವರು ಇಷ್ಟು ದಿನಗಳ ಕಾಲ ತಮ್ಮದೇ ಆದಂತಹ ಟ್ಯಾಲೆಂಟ್ ಅನ್ನು ಬಳಸಿಕೊಂಡು ಅಲ್ಲಿ ಇರುವಂತಹ ಜನರಿಗೆ ಎಂಟರ್ಟೈನ್ಮೆಂಟ್ ಕೊಡುತ್ತಾ ಎಲ್ಲಾ ಟಾಸ್ಕ್ ಗಳಲ್ಲಿಯೂ ಕೂಡ ಉತ್ತಮವಾಗಿ ಸ್ಪರ್ಧೆ ನೀಡಿದರು.

ಈ ಕಾರಣಕ್ಕಾಗಿ ಸಾಕಷ್ಟು ಅಭಿಮಾನಿಗಳು ರೂಪೇಶ್ ರಾಜಣ್ಣ ಅವರು ಈ ಬಾರಿಯ ಬಿಗ್ ಬಾಸ್ ಅನ್ನು ಗೆಲ್ಲಬೇಕು ಎಂದು ಆಸೆ ಇಟ್ಟುಕೊಂಡಿದ್ದರು ಆದರೆ ಇದೀಗ ಅವರೆಲ್ಲರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಕನ್ನಡಪರ ಹೋರಾಟಗಾರರ ಗುಂಪಿನ ಮುಖ್ಯಸ್ಥರಾದಂತಹ ರೂಪೇಶ್ ರಾಜಣ್ಣ ಅವರು ಇಲ್ಲಿಯವರೆಗೂ ಕೂಡ ನಾಡು, ನುಡಿ, ಜಲ ಹಾಗೂ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಹಲವಾರು ಹೋರಾಟಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಅಭಿಮಾನವನ್ನು ಮೈಗೂಡಿಸಿಕೊಂಡಿರುವಂತಹ ಇವರು ಪ್ರತಿ ಬಾರಿಯೂ ಕೂಡ ಕನ್ನಡದ ಬಗ್ಗೆ ಮಾತನಾಡುತ್ತಾರೆ.

ಇವರ ಕನ್ನಡ ಅಭಿಮಾನವನ್ನು ನೋಡಿದಂತಹ ಅದೆಷ್ಟೋ ಸ್ಪರ್ಧಿಗಳು ಈ ಬಾರಿಯ ಬಿಗ್ ಬಾಸ್ ವಿನ್ನರ್ ರೂಪೇಶ್ ರಾಜಣ್ಣ ಅವರಾಗಬೇಕು ಅಂತ ಅಂದುಕೊಂಡಿದ್ದರು. ಆದರೆ ರೂಪೇಶ್ ರಾಜಣ್ಣ ಅವರ ಆಟಕ್ಕೆ ಇದೀಗ ಬ್ರೇಕ್ ಬಿದ್ದಿದೆ ಹೌದು ಬಿಗ್ ಬಾಸ್ ನಾ ನಾಲ್ಕನೇ ರನ್ನರ್ ಅಪ್ ಆಗಿ ರಾಜಣ್ಣ ಅವರು ಹೊರ ಬಿದ್ದಿದ್ದಾರೆ. ಇದೀಗ ಟಾಪ್ ತ್ರೀ ಲಿಸ್ಟ್ ನಲ್ಲಿ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ದೀಪಿಕಾ ದಾಸ್ ಅವರಿದ್ದಾರೆ ಇನ್ನು ಕೆಲವು ಮಾಹಿತಿಗಳ ಪ್ರಕಾರ ಈ ಬಾರಿಯ ವಿನ್ನರ್ ರೂಪೇಶ್ ಶೆಟ್ಟಿ ಆಗುತ್ತಾರೆ ರನ್ನರ್ ಅಪ್ ದೀಪಿಕಾ ದಾಸ್ ಆಗುತ್ತಾರೆ ಅಂತ ಹೇಳುತ್ತಿದ್ದಾರೆ ಆದರೆ ಅಂತಿಮ ನಿರ್ಧಾರ ಯಾವುದು ಎಂಬುದು ಖಚಿತವಾಗಿ ಹೇಳಲಾಗುತ್ತಿಲ್ಲ. ಆದರೂ ಕೂಡ ರೂಪೇಶ್ ರಾಜಣ್ಣ ಅವರು ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು ಎಲ್ಲರನ್ನೂ ಮನರಂಜಿಸಿದ್ದರೂ. ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬೇಕು ತಪ್ಪದೇ ಕಮೆಂಟ್ ಮಾಡಿ.

ದಿವ್ಯ ಉರುಡುಗ & ಅರವಿಂದ್ ಮದುವೆಯಾದ್ರೆ ಡಿ-ವೋ-ರ್ಸ್ ಆಗೋದು ಗ್ಯಾರಂಟಿ ಮತ್ತೊಂದು ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ.

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮತ್ತೊಂದು ಹೇಳಿಕೆ ನೀಡಿ ಟ್ರೋಲ್ ಆದ ಗುರೂಜಿ

ನಾನು ಅಂದ್ರೆ ನಂಬರ್ ನಂಬರ್ ಅಂದ್ರೆ ನಾನು ಎಂದು ಎಲ್ಲಾ ಕಡೆ ಹೇಳಿಕೊಂಡು ಬರುತ್ತಿರುವ ಆರ್ಯವರ್ಧನ್ ಗುರೂಜಿ ಈ ವಾರ ಮಿಡ್ ನೈಟ್ ಎಲಿಮಿನೇಷನ್ ಆಗಿರುವ ವಿಚಾರ ನಿಮಗೆ ತಿಳಿದೇ ಇದೆ. ಮಿನಿ ಬಿಗ್ ಬಾಸ್ ಓ ಟಿ ಟಿ ಯಲ್ಲಿ ಸುಮಾರು 45 ದಿನಗಳ ಕಾಲ ಪೂರೈಸಿ ಬಿಗ್ ಬಾಸ್ ಸೀಸನ್ ೯ ರಲ್ಲಿಯೂ ಕೂಡ ಸುಮಾರು 95 ದಿನಗಳ ಕಾಲ ವಾಸ ಮಾಡಿದಂತಹ ಗುರೂಜಿ ಅಚಾನಕ್ಕಾಗಿ ಮಿಡ್ ನೈಟ್ ಎಲಿಮಿನೇಷನ್ ಆಗಿದ್ದಾರೆ. ಇನ್ನು ನಂಬರ್ ಗಳ ಬಗ್ಗೆ ಸಂಖ್ಯಾಶಾಸ್ತ್ರದಲ್ಲಿ ಬಹಳಷ್ಟು ತಿಳಿದುಕೊಂಡಿರುವ ಆರ್ಯವರ್ಧನ್ ಗುರೂಜಿ ನಂಬರ್ ಗಳ ಮೇಲೆ ಬಹಳಷ್ಟು ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ನಮ್ಮ ಜೀವನದಲ್ಲಿ ಏನೇ ನಡೆದರೂ ಕೂಡ ಅವೆಲ್ಲದಕ್ಕೂ ನಂಬರ್ ಮುಖ್ಯ ಎಂದು ಹೇಳಿಕೊಂಡು ಬಂದಿದ್ದಾರೆ ಹೀಗಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಮತ್ತೊಂದು ರೋಚಕ ಮಾಹಿತಿ ಒಂದನ್ನು ಬಿಚ್ಚಿಟ್ಟಿದ್ದಾರೆ. ಹೌದು, ಅದು ಅರವಿಂದ್ ಹಾಗೂ ದಿವ್ಯ ಉರುಡುಗ ಅವರ ಮದುವೆಯ ಬಗ್ಗೆ. ಬಿಗ್ ಬಾಸ್ ನಿಂದ ಎಲಿಮಿನೇಷನ್ ಆದ ನಂತರ ಹಲವಾರು ಖಾಸಗಿ ಚಾನೆಲ್ ಗಳಿಗೆ ಆರ್ಯವರ್ಧನ್ ಗುರೂಜಿ ಇಂಟರ್ವ್ಯೂ ಕೊಟ್ಟಿದ್ದಾರೆ ಈ ಇಂಟರ್ವ್ಯೂ ಒಂದರಲ್ಲಿ ಅರವಿಂದ್ ಹಾಗೂ ದಿವ್ಯ ಅವರ ಬಗ್ಗೆ ಪ್ರಶ್ನೆಯನ್ನು ಕೇಳಲಾಗುತ್ತದೆ.

ಆ ಸಮಯದಲ್ಲಿ ಇವರಿಬ್ಬರು ಮದುವೆಯಾದರೆ ಖಂಡಿತವಾಗಿಯೂ ಕೂಡ ಡಿ.ವ.ರ್ಸ್ ಆಗುತ್ತದೆ ಏಕೆಂದರೆ ರಾಂಗ್ ನಂಬರ್ ಬೆಸ್ಟ್ ಫ್ರೆಂಡ್ ಆಗಿರುವುದಕ್ಕೆ ಸಾಧ್ಯ ಬೆಸ್ಟ್ ಪಾರ್ಟ್ನರ್ ಆಗುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಏಕೆಂದರೆ ಅರವಿಂದ್ ಅವರ ಹುಟ್ಟಿದ ದಿನಾಂಕ ಹಾಗೂ ದಿವ್ಯ ಅವರ ಹುಟ್ಟಿದ ದಿನಾಂಕ ಇವೆರಡನ್ನು ಹೋಲಿಕೆ ಮಾಡಿ ನೋಡಿದಾಗ ಇವರಿಬ್ಬರು ಬೆಸ್ಟ್ ಫ್ರೆಂಡ್ ಆಗಿ ಇರುವುದಕ್ಕೆ ಮಾತ್ರ ಸಾಧ್ಯ ದಂಪತಿಗಳಾಗುವುದಕ್ಕೆ ಸಾಧ್ಯವಿಲ್ಲ. ಹಾಗೂ ಒಂದು ವೇಳೆ ಇವರಿಬ್ಬರು ಮದುವೆಯಾದರೆ ಮದುವೆಯಾದ ಒಂದೇ ವರ್ಷಕ್ಕೆ ಖಂಡಿತವಾಗಿಯೂ ಕೂಡ ಬೇರೆ ಆಗುತ್ತಾರೆ ಎಂದು ಹೇಳಿದ್ದಾರೆ.

ಈ ವಿಚಾರವನ್ನು ಆರ್ಯವರ್ಧನ್ ಇದೇ ಮೊದಲೆನಲ್ಲ ಹೇಳಿರುವುದು ಇದಕ್ಕಿಂತ ಮುಂಚೆ ಬಿಗ್ ಬಾಸ್ ಮನೆಯಲ್ಲಿ ದಿವ್ಯ ಅವರ ಎದುರುಗಡೆಯೇ ಹೇಳಿದ್ದರು. ಆ ಸಮಯದಲ್ಲಿ ಕೋಪಗೊಂಡಂತಹ ದಿವ್ಯ ಅಲ್ಲಿಂದ ಎದ್ದು ಹೊರಟು ಹೋಗಿದ್ದರು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಬೆಸ್ಟ್ ಕಫಲ್ ಅಂತ ಅನಿಸಿಕೊಂಡಿದ್ದಂತಹ ದಿವ್ಯ ಹಾಗೂ ಅರವಿಂದ್ ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲು ಈ ವಿಚಾರವನ್ನು ವ್ಯಕ್ತಪಡಿಸಿದ್ದಾರೆ ಮುಂದಿನ ದಿನದಲ್ಲಿ ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿರುವಂತಹ ಈ ಜೋಡಿ ಇನ್ನೇನು ಮದುವೆಯಾಗಬೇಕಿದೆ ಅಷ್ಟರ ಒಳಗೆ ಇದೀಗ ಆರ್ಯವರ್ಧನ್ ಹೇಳಿದಂತಹ ಮಾತನ್ನು ಕೇಳಿ ದಿವ್ಯ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಅತ್ತಕಡೆ ಅರವಿಂದ್ ಅವರು ಕೂಡ ಬಹಳಷ್ಟು ನೊಂದುಕೊಂಡಿದ್ದಾರೆ.

ಮದುವೆ ಆಗುವುದಕ್ಕಿಂತ ಮುಂಚೆ ಇಂತಹ ಅಪಶಕುನ ಆಡಿರುವ ಆರ್ಯವರ್ಧನ್ ಗುರೂಜಿಯ ಮಾತು ಕೇಳಿ ಸೋಶಿಯಲ್ ಮೀಡಿಯಾದಲ್ಲಿ ಬಹುತೇಕ ನೆಗೆಟಿವ್ ಕಾಮೆಂಟ್ಸ್ ಗಳು ಬರುತ್ತಿದೆ. ಇನ್ನು ಕೆಲವು ಜನ ಆರ್ಯವರ್ಧನ್ ಹೇಳಿರುವಂತಹ ಈ ಜ್ಯೋತಿಷ್ಯವನ್ನು ಯಾರು ನಂಬಬೇಡಿ ಈತ ಬುರುಡೆ ಬಿಡುತ್ತಿದ್ದಾನೆ ಎಂದು ಹೇಳುತ್ತಿದ್ದಾನೆ. ಎರಡು ಮನಸ್ಸುಗಳು ಸೇರಿದರೆ ಸಾಕು ನಂಬರ್ ಮದುವೆಯನ್ನು ನಿರ್ಧಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ ಆದರೆ ಆರ್ಯವರ್ಧನ್ ಮಾತ್ರ ತಾವು ಹೇಳಿದಂತಹ ಹೇಳಿಕೆಗೆ ಬದ್ಧವಾಗಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಮೆಂಟ್ ಮಾಡಿ.

ಲಿಪ್ ಕಿಸ್ ಮಾಡುವ ಮೂಲಕ ಮದುವೆ ಡೇಟ್ ಅನೌನ್ಸ್ ಮಾಡಿದ ನಟ ನರೇಶ್ ಮತ್ತು ಪವಿತ್ರ ಲೋಕೇಶ್, ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ

ವೈರಲ್ ಆಯ್ತು ನಟ ನರೇಶ್ & ಪವಿತ್ರ ಲೋಕೇಶ್ ವಿಡಿಯೋ

ನಟಿ ಪವಿತ್ರ ಲೋಕೇಶ್ ಹಾಗೂ ನರೇಶ್ ವಿಚಾರ ನಿಮಗೆ ತಿಳಿದಿದೆ ಏಕೆಂದರೆ ಕಳೆದ ಆರು ತಿಂಗಳಿನಿಂದಲೂ ಕೂಡ ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹಾರಿದಾಡುತ್ತಿದ್ದವು. ಅಷ್ಟೇ ಅಲ್ಲದೆ ಇದಕ್ಕೆ ಪುಷ್ಟಿ ನೀಡುವಂತಹ ಫೋಟೋಸ್ ಮತ್ತು ವೀಡಿಯೋಸ್ಗಳು ಕೂಡ ವೈರಲ್ ಆಗಿದ್ದವು ಇನ್ನು ನರೇಶ್ ಅವರ ಮೂರನೇ ಹೆಂಡತಿ ರಮ್ಯಾ ರಘುಪತಿಯವರು ಕೂಡ ಮಾಧ್ಯಮದ ಮುಂದೆ ಬಂದು ಪವಿತ್ರ ಲೋಕೇಶ್ ನನ್ನ ಗಂಡನನ್ನು ಮದುವೆಯಾಗುತ್ತಿದ್ದಾಳೆ. ನರೇಶ್ ನನಗೆ ವಿ.ಚ್ಚೇ.ದ.ನ. ಕೊಟ್ಟಿಲ್ಲ ಈ ಮದುವೆ ಆಗುವುದಕ್ಕೆ ನಾನು ಬಿಡುವುದಿಲ್ಲ ಅಂತ ಹೇಳಿದ್ದರು ಆದರೆ ನರೇಶ್ ಮತ್ತು ಪವಿತ್ರ ಲೋಕೇಶ್ ಮಾತ್ರ ನಾವಿಬ್ಬರು ಆತ್ಮೀಯ ಸ್ನೇಹಿತರು ನಮ್ಮ ನಡುವೆ ಪ್ರೀತಿ ಪ್ರೇಮ ಏನು ಇಲ್ಲ ಅಂತ ಹೇಳಿದ್ದರು.

ಈ ಪ್ರಕರಣ ತಣ್ಣಗಾಗುತ್ತಿದ್ದ ಹಾಗೆ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ ಹೌದು ಅದು ಪವಿತ್ರ ಲೋಕೇಶ್ ಅವರನ್ನು ನರೇಶ್ ಅವರು ಮದುವೆಯಾಗುತ್ತಿದ್ದಾರೆ ಎಂಬ ವಿಚಾರ. ವಿಡಿಯೋ ಒಂದರಲ್ಲಿ ನರೇಶ್ ಪವಿತ್ರ ಲೋಕೇಶ್ ಅವರಿಗೆ ಕೇಕ್ ಕಟ್ ಮಾಡಿ ತಿನಿಸುತ್ತಿದ್ದಾರೆ ಅಷ್ಟೇ ಅಲ್ಲದೆ 2022 ಮುಕ್ತಾಯವಾಗಿ 2023ಕ್ಕೆ ಸ್ವಾಗತ ಕೋರುತ್ತಿದ್ದಾರೆ. ವಿಶೇಷ ಏನೆಂದರೆ ನರೇಶ್ ಅವರ ಪವಿತ್ರ ಲೋಕೇಶ್ ಅವರಿಗೆ ಲಿಪ್ ಕಿಸ್ ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ ಮದುವೆ ಡೇಟ್ ಅನ್ನು ಆದಷ್ಟು ಬೇಗ ಅನೌನ್ಸ್ಮೆಂಟ್ ಮಾಡುತ್ತೇವೆ ಎಂಬುದನ್ನು ಕೂಡ ಹೇಳಿಕೊಂಡಿದ್ದಾರೆ.

ಈ ವಿಡಿಯೋ ನೋಡುತ್ತಿದ್ದ ಹಾಗೆ ಎಲ್ಲರೂ ಆಶ್ಚರ್ಯ ವ್ಯಕ್ತ ಪಡಿಸುತ್ತಿದ್ದಾರೆ ಏಕೆಂದರೆ ಕಳೆದ ಆರು ತಿಂಗಳ ಹಿಂದೆ ನಾವಿಬ್ಬರು ಸ್ನೇಹಿತರಷ್ಟೇ ನಮ್ಮ ನಡುವೆ ಏನು ಇಲ್ಲ ಅಂತ ಹೇಳಿದ್ದ ನರೇಶ್ ಇದೀಗ ಪವಿತ್ರ ಲೋಕೇಶ್ ಅವರಿಗೆ ಸಿಹಿ ತಿನಿಸಿ ಕಿಸ್ ಕೊಟ್ಟಂತಹ ದೃಶ್ಯವನ್ನು ನೋಡಿ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ. ಇತ್ತ ಕಡೆ ಪವಿತ್ರ ಲೋಕೇಶ್ ಅವರಿಗೂ ಕೂಡ ಇದು ಮೊದಲನೇ ಮದುವೆ ಏನಲ್ಲ ಈಗಾಗಲೇ ಎರಡು ಮದುವೆಯಾಗಿ ಇಬ್ಬರಿಂದಲೂ ಕೂಡ ದೂರ ಉಳಿದಿದ್ದಾರೆ. ಹಾಗಾಗಿ ಒಂದು ವೇಳೆ ನರೇಶ ಮತ್ತು ಪವಿತ್ರ ಲೋಕೇಶ್ ಮದುವೆ ಆದರೆ ನರೇಶ್ ಗೆ ಇದು ನಾಲ್ಕನೇ ಮದುವೆ ಹಾಗೂ ಪವಿತ್ರ ಲೋಕೇಶ್ ಗೆ ಇದು ಮೂರನೇ ಮದುವೆಯಾಗುತ್ತದೆ.

ನಟ ನಟಿಯರಿಗೆ ಮದುವೆ ಎಂಬುದು ಇತ್ತೀಚಿನ ದಿನದಲ್ಲಿ ಲೆಕ್ಕಕ್ಕೆ ಇಲ್ಲದಂತಾಗಿದೆ ಹೌದು ಈ ವರ್ಷ ಮದುವೆಯಾಗುತ್ತಾರೆ ಮುಂದಿನ ವರ್ಷ ವಿ.ಚ್ಛೇ.ದ.ನ ಕೊಡುತ್ತಾರೆ ಇದು ಸರ್ವೇ ಸಾಮಾನ್ಯವಾಗಿದೆ. ಆದರೂ ಕೂಡ ನಮ್ಮ ಕನ್ನಡ ನಟಿಯೊಬ್ಬರು ತೆಲುಗು ಚಿತ್ರರಂಗಕ್ಕೆ ಹೋಗಿ ಈ ರೀತಿ ಮಾಡುತ್ತಿದ್ದಾರೆ ಅಂದರೆ ಅದನ್ನು ನಂಬಲು ಅಸಾಧ್ಯ ಆದರೂ ಕೂಡ ಸದ್ಯಕ್ಕೆ ದೊರೆತಿರುವ ವಿಡಿಯೋ ಮಾಹಿತಿ ನೋಡಿದ ಮೇಲೆ ಎಲ್ಲರೂ ಕೂಡ ಇದನ್ನು ನಂಬಲೇ ಬೇಕಾದಂತಹ ಅನಿವಾರ್ಯ ಎದುರಾಗಿದೆ. ನರೇಶ್ ರಮ್ಯಾ ರಘುಪತಿ ಅವರಿಗೆ ವಿ.ಚ್ಛೇ.ದ.ನ ಕೊಟ್ಟರ ಇಷ್ಟು ಬೇಗ ಮದುವೆ ಡೇಟ್ ಅನೌನ್ಸ್ ಮಾಡಿದರ ಎಂಬುವುದು ಎಲ್ಲರಲ್ಲೂ ಕಾಡುತ್ತಿರುವ ಕಟ್ಟೆ ಕಡೆಯ ಪ್ರಶ್ನೆಯಾಗಿದೆ.

ಅದೇನೇ ಆಗಲಿ ಸದ್ಯ ಕಂದು ನರೇಶ್ ಅವರ ಜೊತೆಗೆ ಓಡಾಡುತ್ತಿರುವಂತಹ ಪವಿತ್ರ ಲೋಕೇಶ್ ಅವರು ಕರ್ನಾಟಕವನ್ನು ಮರೆತು ತೆಲಗಿನಲ್ಲಿ ಸೆಟಲ್ ಆಗಿದ್ದಾರೆ. ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಮುಂದಿನ ದಿನದಲ್ಲಿ ನರೇಶ್ ಅವರನ್ನು ಮದುವೆಯಾಗಿ ಅಲ್ಲೆ ಸೆಟಲ್ ಆಗಬಹುದು ಎಂಬುದು ಕೆಲವರ ಅಭಿಪ್ರಾಯವಾಗಿದೆ. ನರೇಶ್ ಮತ್ತು ಪವಿತ್ರ ಲೋಕೇಶ್ ಗೆ ಸಂಬಂಧಿಸಿದಂತಹ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಕರ್ನಾಟಕಕ್ಕೆ ಇರೋದು ಒಂದೇ ರಾಜವಂಶ ಅದು ಮೈಸೂರಿನ ಒಡೆಯರ್ ವಂಶ, ದರ್ಶನ್ ಅಭಿಮಾನಿಗಳಿಂದ ಅಪ್ಪು ಅಭಿಮಾನಿಗಳಿಗೆ ಎಚ್ಚರಿಕೆ.

ರಾಜವಂಶಕ್ಕೆ ಹೋಲಿಕೆ ಮಾಡಬೇಡಿ ದರ್ಶನ್ ಫ್ಯಾನ್ಸ್ ವಾದ

ಸೋಶಿಯಲ್ ವಿಡಿಯೋದಲ್ಲಿ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಚರ್ಚೆ ಮಾಡುತ್ತಾ ಇರುವುದರ ಬಗ್ಗೆ ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಪ್ರಕರಣ ನಡೆದ ಮೇಲಂತೂ ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೌದು ದರ್ಶನ್ ಅಭಿಮಾನಿಗಳು ಹೊಸ ಪೇಟೆಯಲ್ಲಿ ದರ್ಶನ್ ಅವರಿಗೆ ಆದ ಅಪಮಾನಕ್ಕೆ ನೇರವಾಗಿ ಅಪ್ಪು ಅಭಿಮಾನಿಗಳೇ ಕಾರಣ ಎಂದು ಹೇಳುತ್ತಿದ್ದಾರೆ.

ಅಷ್ಟೇ ಅಲ್ಲದೆ ತಪ್ಪಿತಸ್ಥರು ಯಾರೇ ಇದ್ದರೂ ದರ್ಶನ್ ಅವರಿಗೆ ಕ್ಷಮೆ ಕೇಳಬೇಕು ಅಂತ ಹೇಳುತ್ತಿದ್ದರು ಆದರೆ ಅಪ್ಪು ಅಭಿಮಾನಿಗಳು ಮಾತ್ರ ನಾವು ಇಂತಹ ಹೀನ ಕೃತ್ಯವನ್ನು ನಾವು ಮಾಡಿಲ್ಲ ಅಪ್ಪು ಅಭಿಮಾನಿಗಳು ಸತ್ಕಾರ್ಯವನ್ನು ಮಾಡುತ್ತಿರೋ ಹೊರತು ಇಂತಹ ಕೆಟ್ಟ ಕೆಲಸಕ್ಕೆ ಕೈ ಹಾಕುವುದಿಲ್ಲ. ಅಪ್ಪು ಅವರ ಒಳ್ಳೆಯ ಸಮಾಜಮುಖಿ ಸೇವೆಗಳನ್ನು ನಡೆಸಿಕೊಂಡು ಹೋಗುತ್ತೇವೆ ಅಷ್ಟೇ ಎಂದು ಹೇಳಿದ್ದಾರೆ ಆದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಅಪ್ಪು ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಹಾಗೂ ಅಪ್ಪು ಅಭಿಮಾನಿಗಳು ದರ್ಶನ್ ಅವರನ್ನು ಮತ್ತು ಅವರ ಅಭಿಮಾನಿಗಳನ್ನು ಅವಹೇಳನ ಕರೆ ಮಾಡುತ್ತಾ ಇರುವುದರ ಬಗ್ಗೆ ನಿಮಗೆ ತಿಳಿದೇ ಇದೆ.

ಅದರಲ್ಲಿಯೂ ಅಪ್ಪು ಅಭಿಮಾನಿಗಳು ರಾಜವಂಶದ ಬಗ್ಗೆ ಎಂದಿಗೂ ಮಾತನಾಡಬೇಡಿ ಕರ್ನಾಟಕಕ್ಕೆ ಇರುವುದು ಒಂದೇ ರಾಜವಂಶ ಅದು ನಮ್ಮ ಡಾಕ್ಟರ್ ರಾಜಕುಮಾರ್ ಅವರ ವಂಶದಲ್ಲಿ ಇರುವಂತಹ ಎಲ್ಲರೂ ಕೂಡ ಸದ್ಗುಣವನ್ನು ಬೆಳೆಸಿಕೊಂಡು ಬಂದವರು ಸರಳತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ರಾಜವಂಶದ ಬಗ್ಗೆ ಮಾತನಾಡಬೇಕಾದರೆ ಯೋಗ್ಯತೆ ಇರಬೇಕು. ಅಷ್ಟೇ ಅಲ್ಲದೆ ಇನ್ನೊಮ್ಮೆ ರಾಜವಂಶದ ಬಗ್ಗೆ ಮಾತನಾಡಿದರೆ ಇದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕಡಕ್ ಎಚ್ಚರಿಕೆ ನೀಡಿದರೂ.

ಅಷ್ಟೇ ಅಲ್ಲದೆ ಡಿಸೆಂಬರ್ 29 ನೇ ತಾರೀಕು ಬೆಂಗಳೂರಿನ ಗಾಂಧಿನಗರದಲ್ಲಿ ಇರುವಂತಹ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋಗಿ ಅಪ್ಪು ಅಭಿಮಾನಿಗಳು ದರ್ಶನ್ ಅಭಿಮಾನಿಗಳ ವಿರುದ್ಧ ದೂರು ದಾಖಲು ಮಾಡಿದರು. ದರ್ಶನ್ ಅವರನ್ನು ಕರೆಸಿ ಅವರಿಗೆ ಬುದ್ಧಿವಾದ ಹೇಳಬೇಕು ಇನ್ನು ಮುಂದೆ ಈ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ದರ್ಶನ್ ಅವರಿಗೆ ನೀವು ಎಚ್ಚರಿಕೆ ನೀಡದೇ ಇದ್ದರೆ ಅವರ ಅಭಿಮಾನಿಗಳ ಹಾರಾಟ ಇನ್ನಷ್ಟು ಜೋರಾಗುತ್ತದೆ. ಅಷ್ಟೇ ಅಲ್ಲದೆ ರಾಜವಂಶದ ಬಗ್ಗೆ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಪೋಸ್ಟರ್ ಗಳನ್ನೂ ಹಾಕುತ್ತಿದ್ದಾರೆ ಇವೆಲ್ಲವನ್ನು ಮಾಡುತ್ತಿದ್ದರೆ ಅದನ್ನು ನೋಡಿಕೊಂಡು ಸುಮ್ಮನೆ ಇರುವುದಕ್ಕೆ ಸಾಧ್ಯವಿಲ್ಲ ಇದು ನಿಮಗೆ ಕೊನೆಯ ಎಚ್ಚರಿಕೆ ಈ ಬಾರಿ ನೀವು ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಫಿಲಂ ಚೇಂಬರ್ ಗೆ ಮನವಿ ಸಲ್ಲಿಸಿದರು.

ಇದರ ಆಧಾರದ ಮೇಲೆ ಫಿಲಂ ಚೇಂಬರ್ ನ ಮುಖ್ಯಸ್ಥರಾದಂತಹ ಭಾಮಾ ಹರೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ಆದಂತಹ ಸುಂದರ್ ರಾಜ್ ಅವರು ಕೂಡ ಪ್ರಕರಣಕ್ಕೆ ಸಂಬಂಧ ಪಟ್ಟಂತಹ ಮನವಿಯನ್ನು ಸ್ವೀಕಾರ ಮಾಡಿ ದರ್ಶನ್ ಅವರನ್ನು ಕರೆಸಿ ಮಾತನಾಡುವಂತಹ ಪ್ರಯತ್ನ ನಾವು ಮಾಡುತ್ತೇವೆ ಹಾಗೂ ದರ್ಶನ್ ಅಭಿಮಾನಿಗಳು ಇನ್ನು ಮುಂದೆ ಈ ರೀತಿಯ ಪೋಸ್ಟಲ್ ಗಳನ್ನು ಹಾಕಬೇಡಿ ಕೆಟ್ಟ ಕಮೆಂಟ್ಗಳನ್ನು ಮಾಡಬೇಡಿ ಅಂತ ತಿಳಿ ಹೇಳಿದರು. ಆದರೆ ಇದೀಗ ದರ್ಶನ್ ಅಭಿಮಾನಿಗಳು ಮತ್ತೊಂದು ಅಭಿನಯ ಪ್ರಾರಂಭಿಸಿದ್ದಾರೆ ಹೌದು ಅಪ್ಪು ಅಭಿಮಾನಿಗಳು ಕರ್ನಾಟಕದಲ್ಲಿ ಇರುವುದು ಒಂದೇ ವಂಶ ಅದು ರಾಜವಂಶ ಅವರ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಿದ್ದರು.

ಹಾಗಾಗಿ ದರ್ಶನ ಅಭಿಮಾನಿಗಳು ಕರ್ನಾಟಕಕ್ಕೆ ಇರುವುದು ಒಂದೇ ವಂಶ ಹೌದು ಅದು ಮೈಸೂರಿನ ಒಡೆಯರ್ ವಂಶ ಅದು ನಮ್ಮ ನಿಜವಾದ ರಾಜವಂಶ ಅದನ್ನು ಬಿಟ್ಟು ಬೇರೆ ವಂಶದವರನ್ನು ರಾಜವಂಶಕ್ಕೆ ಹೋಲಿಕೆ ಮಾಡಬೇಡಿ ಎಂದು ಪೋಸ್ಟರ್ ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಈ ರೀತಿಯ ಪೋಸ್ಟರ್ ಗಳನ್ನು ನೋಡಿದಂತಹ ಅಪ್ಪು ಅಭಿಮಾನಿಗಳು ಇನ್ನಷ್ಟು ಆ.ಕ್ರೋ.ಶ.ವನ್ನು ವ್ಯಕ್ತಪಡಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಕಡಿಮೆಯಾಗಬೇಕಾದಂತಹ ಕೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಆದಷ್ಟು ಬೇಗ ಈ ಇಬ್ಬರು ಅಭಿಮಾನಿಗಳು ಸಮಾಧಾನವನ್ನು ತಂದುಕೊಳ್ಳಲಿ ಫ್ಯಾನ್ ವಾರ್ ಅನ್ನು ಬಿಟ್ಟು ಸಹಬಾಳ್ವೆಯಿಂದ ಸಮಾಜದಲ್ಲಿ ಜೀವನ ಸಾಗಿಸಲಿ ಎಂಬುವುದೇ ನಮ್ಮ ಆಶಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ.

ಬಿಗ್ ಬಾಸ್ ಸೀಸನ್ 9 ರ ವಿನ್ನರ್ ಆಗಿ ಹೊರ ಹೊಮ್ಮಿದ ರೂಪೇಶ್ ಶೆಟ್ಟಿ, ರನ್ನರ್ ಅಪ್ ಆದ ಎರಡನೇ ವ್ಯಕ್ತಿ ಯಾರು ಗೊತ್ತಾ.?

ಪ್ರವೀಣರು ನವೀನರ ನಡುವೆ ಗೆದ್ದು ಬಂದ ಮಿನಿ ಬಿಗ್ ಬಾಸ್ ಓ ಟಿ ಟಿ ಸ್ಪರ್ಧಿ

ಈ ಬಾರಿಯ ಬಿಗ್ ಬಾಸ್(Bigboss season 9) ಬಹಳ ವಿಶೇಷ ಅಂತಾನೆ ಹೇಳಬಹುದು ಏಕೆಂದರೆ ಸೀಜನ್ ಒಂದರಿಂದ ಹಿಡಿದು ಸೀಸನ್ ಎಂಟರವರೆಗೂ ಕೂಡ ಬಿಗ್ ಬಾಸ್ ಅನ್ನು ಕರಾರು ಹೊಕ್ಕಾಗಿ ನಡೆಸಿಕೊಂಡು ಬರುತ್ತಿದ್ದರು. ಅಂದರೆ 17 ಅಥವಾ 19 ಕಂಟೆಸ್ಟೆಂಟ್ಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗುತ್ತಿತ್ತು ಪ್ರತಿ ವಾರವೂ ಕೂಡ ಒಬ್ಬೊಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬರುತ್ತಿದ್ದರು. ಆದರೆ ಈ ಬಾರಿಯ ಬಿಗ್ ಬಾಸ್ ಅನ್ನು ಬಹಳ ವಿಶೇಷವಾಗಿ ವಿನ್ಯಾಸ ಮಾಡಿದ್ದಾರೆ ಹೌದು.

ಮೊದಮೊದಲು ಓಟಿಟಿಯಲ್ಲಿ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಎಂದು ಆಯೋಜಿಸಿ ಅದರಲ್ಲಿ 18 ಜನ ಕಂಟೆಸ್ಟೆಂಟ್ಗಳನ್ನು ಮನೆ ಒಳಗೆ ಹಾಕಿದರು ತದನಂತರ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಕೊನೆಗೆ ಐದು ಜನ ಆಯ್ಕೆಯಾದರು. ಈ ಐದು ಜನರನ್ನು ಬಿಗ್ ಬಾಸ್ 9 ರ ಕಂಟೆಸ್ಟೆಂಟ್ ಆಗಿ ಸೇರ್ಪಡೆ ಮಾಡಿದರು ತದನಂತರ ಸೀಸನ್ 1 ರಿಂದ ಸೀಸನ್ ಎಂಟರವರೆಗೆ ಭಾಗವಹಿಸಿದಂತಹ ಕಂಟೆಸ್ಟ್ ಗಳನ್ನು ಆಯ್ಕೆ ಮಾಡಿಕೊಂಡರು ಅವರ ಪೈಕಿ ಅರುಣ್ ಸಾಗರ್, ದೀಪಿಕಾ ದಾಸ್, ದಿವ್ಯ ಉರುಡುಗ, ಅನುಪಮಾ ಗೌಡ, ಇವರನ್ನು ಪ್ರವೀಣರು ಎಂದು ಆಯ್ಕೆ ಮಾಡಿಕೊಂಡರು ಅಲ್ಲಿಗೆ 9 ಜನ ಕಂಟೆಸ್ಟೆಂಟ್ಗಳ ಜೊತೆಗೆ ಇನ್ನೂ 9 ಜನ ಹೊಸ ಆಯ್ಕೆ ಮಾಡಿಕೊಳ್ಳುವುದರ ಮೂಲಕ ಹೊಸದಾಗಿ ಬಿಗ್ ಬಾಸ್ ಸೀಸನ್ 9ರಂದು ಪ್ರಾರಂಭ ಮಾಡಿದರು.

ಬಿಗ್ ಬಾಸ್ ಸೀಸನ್ ೯ ನೂರು ದಿನಗಳನ್ನು ಪೂರೈಸಿ ಇದೀಗ ಫಿನಾಲೆ ಅಂತಕ್ಕೆ ಬಂದಿದೆ ಹೌದು ಫಿನಾಲೆಗೆ ಒಟ್ಟು ಐದು ಜನ ಕಂಟೆಸ್ಟೆಂಟ್ಗಳು ಆಯ್ಕೆಯಾಗಿದ್ದಾರೆ. ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಮಿನಿ ಬಿಗ್ ಬಾಸ್ ಕಾರ್ಯಕ್ರಮದಿಂದ ಬಂದವರು. ದಿವ್ಯ ಹುಡುಗ ಮತ್ತು ದೀಪಿಕಾ ದಾಸ್ ಹಳೆಯ ಕಂಟೆಸ್ಟೆಂಟ್ಗಳು ಹೊಸದಾಗಿ ಮನೆಗೆ ಬಂದಂತಹ ರೂಪೇಶ್ ರಾಜಣ್ಣ ಈ ಐದು ಜನರು ಕೂಡ ಫಿನಾಲೆಗೆ ತಲುಪಿದ್ದಾರೆ. ಇಂದು ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಬಿಗ್ ಬಾಸ್ ಫಿನಾಲೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಆದರೆ ಟಿವಿಯಲ್ಲಿ ಬಾಸ್ ವಿನ್ನರ್ ಯಾರು ಎಂಬುದನ್ನು ಇನ್ನು ತಿಳಿಸಿಲ್ಲ ಆದರೆ ಕೆಲವು ಮೂಲಗಳ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ಆಗಿದ್ದಾರೆ.

ಹೌದು ಈ ಹಿಂದೆ ಮಿನಿ ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಕೂಡ ರೂಪೇಶ್ ಶೆಟ್ಟಿ ಅವರು ವಿಜೇತರಾಗಿ 5 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಪಡೆದಿದ್ದರು. ಇದೀಗ ಮತ್ತೊಮ್ಮೆ ಬಿಗ್ ಬಾಸ್ ಸೀಸನ್ 9 ರಂದು 50 ಲಕ್ಷ ರೂಪಾಯಿಗಳ ನಗದು ಬಹುಮಾನ ಹಾಗೂ ಒಂದು ಟ್ರೋಫಿ ಹಾಗೂ 15 ವಾರದ ಸಂಭಾವನೆಯನ್ನು ತೆಗೆದುಕೊಂಡು ಮನೆಗೆ ಹೋಗುತ್ತಿದ್ದಾರೆ. ನಿಜಕ್ಕೂ ಈ ಬಾರಿಯ ಬಿಗ್ ಬಾಸ್ ಒಂದು ರೋಚಕ ಅಂತಾನೆ ಹೇಳಬಹುದು ಪ್ರವೀಣರ ನಡುವೆ ನವೀನರ ನಡುವೆ ಮಿನಿ ಬಿಗ್ ಬಾಸ್ ಕಾರ್ಯಕ್ರಮದಿಂದಲೂ ಕೂಡ ಜೊತೆಗೆ ಹೆಜ್ಜೆ ಹಾಕಿದಂತಹ ರೂಪೇಶ್ ಶೆಟ್ಟಿ ಅವರು ಗೆದ್ದಿದ್ದು ಆಶ್ಚರ್ಯ ಸಂಗತಿ.

ರೂಪೇಶ್ ಶೆಟ್ಟಿ ಅವರು ತುಳುನಾಡಿನ ಫೇಮಸ್ ನಟ, ಗಾಯಕ, ರೇಡಿಯೋ ಜಾಕಿ, ಮಾಡೆಲ್ ಕೂಡ ಹೌದು ಸಾಕಷ್ಟು ಪರಿ ಶ್ರಮಪಟ್ಟು ಈ ಹಂತಕ್ಕೆ ಬಂದಿದ್ದಾರೆ. ಹಲವಾರು ಅಭಿಮಾನಿ ಬಳಗವನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ ಸದ್ಯಕ್ಕೆ ರೂಪ ಶೆಟ್ಟಿ ವಿನ್ನರ್ ಆಗಿ ಹೊರ ಹೊಮ್ಮಿದ್ದು ಎಲ್ಲರ ಮುಖದಲ್ಲೂ ಕೂಡ ಮಂದಹಾಸ ಬೀರುವಂತೆ ಮಾಡಿದೆ. ಇನ್ನು ರನ್ನರ್ ಅಪ್ ಆಗಿ ಹೊರಹೊಮ್ಮಿದ ವ್ಯಕ್ತಿ ರೂಪೇಶ್ ರಾಜಣ್ಣ ಎಂದು ಹೇಳಲಾಗುತ್ತಿದೆ.

ಕಡಲ ತೀರದಲ್ಲಿ ರೋಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ ನಟಿ ಹರಿಪ್ರಿಯ ಹಾಗೂ ನಟ ವಸಿಷ್ಠ ಸಿಂಹ ಈ ಕ್ಯೂಟ್ ವಿಡಿಯೋ ನೋಡಿ.

ಹರಿಪ್ರಿಯಾ(Haripriya) ವಶಿಷ್ಠ ಸಿಂಹ(Vasista Simha)

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಕನ್ನಡದ ಹೆಸರಾಂತ ಕಲಾವಿದರುಗಳು. ಇತ್ತೀಚೆಗೆ ಹರಿಪ್ರಿಯಾ ಅವರು ಕನ್ನಡದ ಸ್ಟಾರ್ ನಟಿ ಪಟ್ಟದಲ್ಲಿದ್ದಾರೆ. ವಸಿಷ್ಟ ಸಿಂಹ ಅವರು ಸಹ ತಮ್ಮ ವಿಶೇಷ ಕಂಠ ಹಾಗೂ ಅಭಿನಯದಿಂದ ಖಳನಾಯಕನಾಗಿ ಮಲ್ಟಿ ಸ್ಟಾರ್ ಹೀರೋ ಆಗಿ ಕನ್ನಡ ಚಲನಚಿತ್ರ ರಂಗದಲ್ಲಿ ಬಹಳ ಬಿಝಿ ಆಗಿದ್ದಾರೆ. ಇವರಿಬ್ಬರು ಈ ವರ್ಷ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡು ಕರ್ನಾಟಕದ ಕಲಾಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಿದ್ದಾರೆ.

ಯಾರು ಸಹ ಇವರಿಬ್ಬರೂ ಮದುವೆ ಆಗುತ್ತಾರೆ ಎಂದು ಊಹಿಸಿಯೇ ಇರಲಿಲ್ಲ. ಇವರ ಎಂಗೇಜ್ಮೆಂಟ್ ಆಗುವ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರು ಒಟ್ಟೊಟ್ಟಿಗೆ ಓಡಾಡುತ್ತಿರುವ ವಿಡಿಯೋಗಳು ಒಟ್ಟೊಟ್ಟಿಗೆ ತೆಗೆಸಿಕೊಂಡಿರುವ ಫೋಟೋಗಳು ಎಲ್ಲವೂ ಸಹ ವೈರಲ್ ಆಗಿದ್ದವು, ಆಗ ಎಲ್ಲರೂ ಇದು ಯಾವುದು ಸಿನಿಮಾ ಚಿತ್ರೀಕರಣದ ಸಮಯ ಇರಬೇಕು ಅಥವಾ ಸಿನಿಮಾ ಪ್ರಚರದ ಸ್ಟಾಟರ್ಜಿ ಇರಬೇಕು ಎಂದೇ ಊಹಿಸಿದ್ದರು.

ಆದರೆ ದಿಢೀರ್ ಎಂದು ಧನುರ್ಮಾಸ ಆರಂಭವಾಗುವ ಕೆಲ ದಿನಗಳ ಮುಂದೆ ಹರಿಪ್ರಿಯ ಅವರ ಮನೆಯಲ್ಲಿಯೇ ಎಂಗೇಜ್ಮೆಂಟ್ ಮಾಡಿಕೊಂಡು ಅಧಿಕೃತವಾಗಿ ಇಬ್ಬರು ಮುಂದಿನ ವರ್ಷ ಹಸಮಣೆ ಏರುವುದನ್ನು ದೃಢಪಡಿಸಿದ್ದಾರೆ. ಅಂದಿನಿಂದ ಇವರಿಬ್ಬರ ಲವ್ ಸ್ಟೋರಿ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚಾಗಿದೆ. ದಿನಕ್ಕೊಂದು ವಿಷಯವನ್ನು ವಿಶೇಷವಾಗಿ ಹಂಚಿಕೊಳ್ಳುತ್ತಿರುವ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಅವರು ತಮ್ಮಿಬ್ಬರದ ಲವ್ ಸ್ಟೋರಿ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.

ಹರಿಪ್ರಿಯಾ ಅವರು ತಮ್ಮ instagram ಖಾತೆಯಲ್ಲಿ ವಸಿಷ್ಠ ಸಿಂಹ ಅವರು ಅವರ ಹುಟ್ಟುಹಬ್ಬಕ್ಕೆ ಗಿಫ್ಟ್ ಮಾಡಿದ್ದ ಕ್ರಿಸ್ಟಲ್ ಎನ್ನುವ ನಾಯಿಮರಿ ಕುರಿತಾದ ವಿಡಿಯೋ ಶೇರ್ ಮಾಡಿ ಅದರಲ್ಲಿರುವ ಹಾರ್ಟ್ ಸಿಂಬಲ್ ಅನ್ನು ತೋರಿಸಿ ನಾಯಿ ಪುಟ್ಟ ಮರಿ ಆಗಿದ್ದಾಗ ಗಿಫ್ಟ್ ಕೊಟ್ಟಾಗ ಎಷ್ಟು ಚಿಕ್ಕದಾಗಿ ಹಾರ್ಟ್ ಸಿಂಬಲ್ ಇತ್ತು ಅದೇ ಪ್ರೀತಿಯ ಸೂಚನೆಯಾಗಿತ್ತು. ಅದೀಗ ಮಚ್ಚೆ ದೊಡ್ಡದಾಗಿ ಕಾಣುವಂತೆ ಪ್ರೀತಿಯು ದೊಡ್ಡದಾಗಿ ಬೆಳೆದಿದೆ ಎನ್ನುವ ಕುರಿತು ಭಾವನಾತ್ಮಕವಾಗಿ ಹೇಳಿಕೊಂಡಿದ್ದರು.

ಟ್ರೋಲಿಗರು ಸಹ ವಸಿಷ್ಟ ಸಿಂಹ ಹಾಗೂ ಹರಿಪ್ರಿಯ ಜೋಡಿ ಹಲವಾರು ಬಗೆಯ ಮೀಮ್ಸ್ ಮತ್ತು ಟ್ರೋಲ್ ಗಳನ್ನು ಪಾಸಿಟಿವ್ ರೀತಿಯಾಗಿ ಮಾಡುತ್ತಿದ್ದಾರೆ. ಇದೀಗ ಅವರ ಮತ್ತೊಂದು ವಿಡಿಯೋ ಹೊರ ಬಿದ್ದಿದೆ. ಈ ವಿಡಿಯೋ ದಲ್ಲಿ ಯಾವುದೋ ಬೀಚ್ ಅಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಏಕಾಂತದಲ್ಲಿ ಸಮಯ ಕಳೆದಿರುವ ಕ್ಷಣಗಳು ಸೆರೆ ಆಗಿವೆ.

ಅಂದರೆ ಇಬ್ಬರು ಸಹ ಕೈ ಕೈ ಹಿಡಿದು ಬೀಚ್ ಮೇಲೆ ಓಡಾಡುತ್ತಿರುವುದು ಒಬ್ಬರು ಕಣ್ಣನ್ನು ಒಬ್ಬರು ನೋಡುತ್ತಾ ಕಳೆದೋಗಿರುವುದು ಈ ರೀತಿ ಕ್ಷಣಗಳ ವಿಡಿಯೋ ಸೆರೆ ಹಾಕಿದೆ. ಇದು ಪ್ರಿ ವೆಡ್ಡಿಂಗ್ ಶೂಟ್ ಗಾಗಿ ಮಾಡಿಸಿರುವುದಾ ಅಥವಾ ಇವರೇ ನೆನಪಾಗಿ ಮಾಡಿಟ್ಟುಕೊಂಡಿರುವುದಾ ಗೊತ್ತಿಲ್ಲ. ಆದರೆ ಯಾವುದೇ ಸಿನಿಮಾದ ರೋಮ್ಯಾಂಟಿಕ್ ಗೀತೆಗೂ ಇಲ್ಲದಂತೆ ವಿಡಿಯೋ ಹೊರ ಬಿದ್ದಿದ್ದೆ , ಅದೇ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಅಲ್ಲಿ ಇದೆ.

ಈ ಹಾಡಿಗೆ ಹಲವರು ಹಲವು ಬಗೆಯ ಶೀರ್ಷಿಕೆ ಕೊಟ್ಟು ವೈರಲ್ ಕೂಡ ಮಾಡುತ್ತಿದ್ದಾರೆ. ಸಿಂಹಕ್ಕೆ ಕೂಡ ಲವ್ ಸಾಂಗ್ ಬರ್ತಾ ಇದೆ ಎಂದು ಕೆಲವರು ಬರೆದುಕೊಂಡಿದ್ದರೆ ಇನ್ನು ಅನೇಕ ಅಭಿಮಾನಿಗಳು ಸ್ಟೋರಿಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಇದೀಗ ಮದುವೆ ಆದ ಬಳಿಕ ಇವರಿಬ್ಬರು ಒಟ್ಟಿಗೆ ಹೀರೋ ಆಗಿ ಸಿನಿಮಾ ಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಗಲಿ ಎಂದು ಸಹ ಹಲವರು ಹೇಳುತ್ತಿದ್ದಾರೆ. ಈ ಮುದ್ದಾದ ವಿಡಿಯೋವನ್ನು ನೀವು ಸಹ ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.