Home Blog Page 261

ಚಪ್ಪಲಿ ಏಟು ತಿಂದ ನಟ ದರ್ಶನ್ ಮಾತ್ರ ಅಲ್ಲ, ಈ ಹಿಂದೆ ವಿಷ್ಣು ದಾದಾ ಮೇಲೆಯೂ ಕೂಡ ಇಂಥದ್ದೇ ದಾಳಿಯಾಗಿತ್ತು ಆಗ ಅಣ್ಣಾವ್ರು ಹೇಳಿದ್ದೇನು ಗೊತ್ತಾ.?

ಅಂದು ವಿಷ್ಣುವರ್ಧನ್ ಇಂದು ನಟ ದರ್ಶನ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರಿಗೆ ಹೊಸಪೇಟೆಯಲ್ಲಿ ಕಿಡಿಗೇಡಿ ಒಬ್ಬರು ಚಪ್ಪಲಿ ಎಸೆದ ಪ್ರಕರಣ ನಿಮಗೆ ತಿಳಿದೇ ಇದೆ ಆದರೆ ಚಿತ್ರರಂಗದಲ್ಲಿ ಚಪ್ಪಲಿ ಏಟು ತಿಂದ ವ್ಯಕ್ತಿ ದರ್ಶನ್ ಮಾತ್ರವಲ್ಲ. ಹೌದು ಈ ಹಿಂದೆ ವಿಷ್ಣು(Vishnuvardhan) ದಾದಾ ಅವರ ಮೇಲೆಯೂ ಕೂಡ ಇಂಥದ್ದೇ ದಾಳಿಯಾಗಿತ್ತು. ಈ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ ಆದರೂ ಕೂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ವಿಷ್ಣು ದಾದಾ ಅವರಿಗೂ ಕೂಡ ಚಪ್ಪಲಿ ಎಸೆತವನ್ನು ಎಸೆಯಲಾಗಿತ್ತು ಎಂಬ ವಿಚಾರ ವೈರಲ್ ಆಗಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಈಗ ಅಪ್ಪು ಹಾಗೂ ದರ್ಶನ್ ಅವರ ಅಭಿಮಾನಿಗಳ ನಡುವೆ ಯಾವ ರೀತಿ ಫ್ಯಾನ್ ವಾರ್ ಕ್ರಿಯೇಟ್ ಆಗಿದಿಯೋ ಅದೇ ರೀತಿ ಆ ಕಾಲದಲ್ಲಿ ಅಣ್ಣಾವ್ರ(Rajkumar) ಅಭಿಮಾನಿಗಳು ಹಾಗೂ ವಿಷ್ಣು ದಾದಾ ಅವರ ಅಭಿಮಾನಿಗಳ ನಡುವೆಯೂ ಕೂಡ ಫ್ಯಾನ್ ವಾರ್ ಎಂಬುದು ಕ್ರಿಯೇಟ್ ಆಗಿತ್ತು.

ಅಣ್ಣಾವ್ರು ಅಂದಿನ ಕಾಲದಲ್ಲಿ ಅತಿ ಹೆಚ್ಚು ಜನರನ್ನು ಸಂಪಾದನೆ ಮಾಡಿದ ಏಕೈಕ ವ್ಯಕ್ತಿಯಾಗಿದ್ದರು ಇನ್ನು ವಿಷ್ಣು ದಾದಾ ಅವರು ಕೂಡ ಆ ಕಾಲ ಘಟ್ಟದಲ್ಲಿ ಹೆಚ್ಚು ಹೆಸರು ಮಾಡಿದ ನಾಯಕ ನಟರಾಗಿದ್ದರು. ಒಂದು ರೀತಿಯಲ್ಲಿ ಹೇಳಬೇಕಾದರೆ ಅಣ್ಣಾವ್ರ ಸರಿ ಸಮಾನಕ್ಕೆ ನಿಲ್ಲುವಂತಹ ಚಾಕು ಚಕ್ಯತೆಯನ್ನು ಒಳಗೊಂಡಿದ್ದರು. ಅಷ್ಟೇ ಅಭಿಮಾನಿ ಬಳಗವನ್ನು ಕೂಡ ಗಿಟ್ಟಿಸಿಕೊಂಡಿದ್ದರು ಅಣ್ಣಾವ್ರು ಹಾಗೂ ವಿಷ್ಣುದಾದಾ ಇವರಿಬ್ಬರ ನಡುವೆ ಯಾವುದೇ ರೀತಿಯಾದಂತಹ ವೈ ಮನಸು ಮತ್ತು ಮನಸ್ಥ ಇರಲಿಲ್ಲ.

ಇಬ್ಬರೂ ಕೂಡ ಆತ್ಮೀಯ ಸ್ನೇಹಿತರಾಗಿದ್ದರು ಒಬ್ಬರ ಮನೆಗೆ ಮತ್ತೊಬ್ಬರು ಬರುತ್ತಿದ್ದರು ಹೋಗುತ್ತಿದ್ದರು ಆದರೆ ಇವರ ಅಭಿಮಾನಿಗಳಲ್ಲಿ ಮಾತ್ರ ಚಿಕ್ಕದೊಂದು ವೈಮನಸ್ಸು ಇತ್ತು. ವಿಷ್ಣು ಅಭಿಮಾನಿಗಳು ಅಣ್ಣಾವ್ರ ಅಭಿಮಾನಿಗಳ ಮೇಲೆ ಹಾಗೂ ಅಣ್ಣಾವ್ರ ಅಭಿಮಾನಿಗಳು ವಿಷ್ಣು ಅಭಿಮಾನಿಗಳ ಮೇಲೆ ಆಗಿಂದ ಹಾಗೆ ಕಿಡಿ ಕಾರುತಲೆ ಇದ್ದರು. ಇದರ ತೀವ್ರತೆ ಯಾವ ಮಟ್ಟಕ್ಕೆ ಹೋಯಿತು ಅಂದರೆ ಒಮ್ಮೆ ಅಣ್ಣಾವ್ರು ಹಾಗೂ ವಿಷ್ಣುವರ್ಧನ್ ಅವರು ಇಬ್ಬರೂ ಕೂಡ ಒಂದೇ ವೇದಿಕೆಯಲ್ಲಿ ಪ್ರಚಾರ ಮಾಡುತ್ತಿರುತ್ತಾರೆ ಆ ಸಮಯದಲ್ಲಿ ಕಿಡಿಗೇಡಿ ಒಬ್ಬರು ವಿಷ್ಣು ದಾದಾ ಅವರಿಗೆ ಚಪ್ಪಲಿಯನ್ನು ಎಸೆಯುತ್ತಾರೆ.

ಇದನ್ನು ನೋಡಿದಂತಹ ಅಣ್ಣಾವ್ರು ಎದ್ದು ನಿಂತು ದಯವಿಟ್ಟು ಹೀಗೆ ಮಾಡಬೇಡಿ ನಾವು ಕಲಾವಿದರು ಎಲ್ಲರಿಗೂ ಕೂಡ ಅವರದ್ದೇ ಆದ ಗೌರವವಿದೆ. ಈ ರೀತಿಯ ಕೃತ್ಯ ಮಾಡಿ ಕಲಾವಿದರಿಗೆ ಅವಮಾನ ಮಾಡಬೇಡಿ ವಿಷ್ಣು ನಮ್ಮ ಹುಡುಗ ನಮ್ಮ ಮನೆಯವನು ಇದ್ದ ಹಾಗೆ ಆತನ ಮೇಲೆ ಇಷ್ಟೊಂದು ಆ.ಕ್ರೋ.ಶ ಬೇಡ ಎಲ್ಲರನ್ನೂ ಕೂಡ ಸಮಾನರಾಗಿ ಕಾಣಿ ಈತನೆ ಮೇಲೆ ಕರುಣೆ ತೋರಿ ದಯವಿಟ್ಟು ಯಾವುದೇ ಕಾರಣಕ್ಕೂ ಇಂತಹ ಕೃತ್ಯ ಮರುಕಳಿಸದಂತೆ ಅಭಿಮಾನಿಗಳು ನೀವು ನೋಡಿಕೊಳ್ಳಬೇಕು ಎಂದು ಅಣ್ಣಾವ್ರು ತಿಳಿ ಹೇಳುತ್ತಾರೆ ಆದರೂ ಕೂಡ ಈ ಘಟನೆಯಿಂದ ಮನನೊಂದು ವಿಷ್ಣು ಅವರು ಆ ಕಾರ್ಯಕ್ರಮದಿಂದ ಹೊರ ನೆಡೆಯುತ್ತಾರೆ.

ಆದರೆ ಅಂದಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಎಂಬುದು ಇರಲಿಲ್ಲ ಕೇವಲ ಪತ್ರಿಕೆ ಅದನ್ನು ಬಿಟ್ಟರೆ ಟಿವಿ ಮಾಧ್ಯಮ ಮಾತ್ರ ಇತ್ತು ಹಾಗಾಗಿ ಈ ವಿಚಾರ ಹೆಚ್ಚು ಪ್ರಚಲಿತಕ್ಕೆ ಬರಲಿಲ್ಲ. ಒಂದು ವೇಳೆ ಅಂತಹ ಘಟನೆ ಈ ಕಾಲದಲ್ಲಿ ನಡೆದಿದ್ದರೆ ಅದರ ಕಥೆಯೇ ಬೇರೆ ಆಗುತ್ತಿತ್ತು. ಆದರೂ ಕೂಡ ವಿಷ್ಣು ದಾದಾ ಹಾಗೂ ದರ್ಶನ್ ಈ ಇಬ್ಬರು ನಾಯಕನಟರಿಗೆ ಆದಂತಹ ಅವಮಾನ ಮತ್ಯಾರಿಗೂ ಆಗಿಲ್ಲ ಏನಾದರೂ ಅಭಿಮಾನಿಗಳು ತಮ್ಮ ಹಿತಿ ಮಿತಿಯಲ್ಲಿ ಇದ್ದರೆ ಉತ್ತಮ ಎಲ್ಲರಿಗೂ ಅವರದ್ದೇ ಆದ ಗೌರವವಿರುತ್ತದೆ ಹಾಗಾಗಿ ಕಲಾವಿದರಿಗೆ ಇಂಥ ಹೀನ ಕೃತ್ಯ ಮಾಡದೇ ಇರಲಿ ಎಂಬುವುದೇ ನಮ್ಮ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.

ಯಾವನೋ ಅವನು ಬಾಸ್, ಇಲ್ಲಿ ಎಲ್ಲರಿಗೂ ಇರೋದು ಒಬ್ನೇ ಬಾಸ್ ಅಭಿಮಾನಿಗಳ ಮೇಲೆ ಗರಂ ಆದ ಶಿವಣ್ಣ.

ಬಾಸ್ ಬಾಸ್ ಎಂದು ಕೂಗಾಡುತ್ತಿದ್ದಂತಹ ಅಭಿಮಾನಿಗಳ ಮೇಲೆ ಗರಂ ಆದ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸದ್ಯಕ್ಕೆ ತಮ್ಮ 125 ಸಿನಿಮಾ ಆದಂತಹ ವೇದಾ(Vedha) ಸಿನಿಮಾದ ವಿಜಯ ಪ್ರವಾಸದಲ್ಲಿ ನಿರತರಾಗಿದ್ದಾರೆ. ಸಿನಿಮಾ ಅಂದುಕೊಂಡಂತೆ ಅತ್ಯುತ್ತಮವಾಗಿ ಮೂಡಿ ಬಂದಿದ್ದು ಎಲ್ಲಾ ಕಡೆಯಲ್ಲೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಹಾಗಾಗಿ ವೇದ ಸಿನಿಮಾದ ವಿಜಯೋತ್ಸವವನ್ನು ಆಚರಿಸುವುದಕ್ಕೆ ಪ್ರತಿನಿತ್ಯವೂ ಕೂಡ ಒಂದೊಂದು ಊರುಗಳಿಗೆ ತೆರಳಿ ಶಿವಣ್ಣ ಅವರು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಅವರಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ. ಶಿವಣ್ಣ(Shivanna) ಅವರ ಜೊತೆ ವೇದ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿರುವಂತಹ ಗಾನವಿ ಲಕ್ಷ್ಮಣ್(Ganavi Lakshman) ಹಾಗೂ ಶ್ವೇತಾ ಚಂಗಪ್ಪ(Shwetha Changappa) ಇನ್ನು ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್(Aditi Sagar) ಎಲ್ಲರೂ ಕೂಡ ನಿರತರಾಗಿದ್ದಾರೆ.

ಇನ್ನು ಸಿನಿಮಾದ ವಿಜಯೋತ್ಸವದ ಬಗ್ಗೆ ಮಾತನಾಡುತ್ತಿರುವ ಸಮಯದಲ್ಲಿ ಶಿವಣ್ಣ ಅವರಿಗೆ ಮಾತನಾಡುವುದಕ್ಕೂ ಕೂಡ ಅಭಿಮಾನಿಗಳು ಅವಕಾಶ ಕೊಡುವುದಿಲ್ಲ. ಬಾಸ್ ಬಾಸ್ ಎಂದು ಕಿರುಚಾಡುತ್ತಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋಗಳನ್ನು ಬಸ್ ಎಂಬ ಹೆಸರಿನಿಂದ ಕರೆಯುತ್ತಾರೆ. ಹೀಗಾಗಿಯೇ ಡಿ ಬಾಸ್ ಎಂದು ಕರೆಯುವುದನ್ನು ನೀವು ಕೇಳಿದ್ದೀರಾ ಹಾಗಾಗಿ ಶಿವಣ್ಣ ಅವರ ಬಳಿಯೂ ಕೂಡ ಬಾಸ್ ಬಾಸ್ ಎಂದು ಕಿರುಚಾಡುತ್ತಾರೆ.

ಇದರಿಂದ ಕೋಪಕ್ಕೆ ಒಳಗಾದಂತಹ ಶಿವಣ್ಣ ಅವರು ಸುಮ್ಮನೆ ಯಾಕೆ ಬಾಸ್ ಬಾಸ್ ಅಂತ ಹೊಡೆದಾಡುತ್ತೀರಾ. ಬಾಸ್ ಅಂತ ಯಾಕೆ ಸಾ.ಯು.ತ್ತೀರಾ ಇಲ್ಲಿ ಎಲ್ಲರಿಗೂ ಇರೋದು ಒಬ್ಬನೇ ಬಾಸ್ ಅದು ದೇವರು ಅಷ್ಟೇ. ಅಲ್ಲದೆ ಪ್ರತಿಯೊಬ್ಬರಿಗೂ ಕೂಡ ಒಬ್ಬೊಬ್ಬ ಬಾಸ್ ಇರುತ್ತಾರೆ ನಿಮ್ಮ ಮನೆಗೆ ನೀವೇ ಬಾಸ್ ಇನ್ನು ನಿಮ್ಮನ್ನು ನಂಬಿಕೊಂಡಿರುವಂತಹ ಕೆಲಸಗಾರರಿಗೆ ನೀವೇ ಬಾಸ್ ಅಷ್ಟೇ ಯಾಕೆ ನಿಮ್ಮ ಮೇಲೆ ಇರುವಂತಹ ಅಧಿಕಾರಿಗಳು ಬಾಸ್. ಇದನ್ನ ನೀವು ಅರ್ಥಮಾಡಿಕೊಳ್ಳಿ ಅದನ್ನು ಬಿಟ್ಟು ಸಿಕ್ಕ ಸಿಕ್ಕವರನ್ನೆಲ್ಲ ಬಾಸ್ ಅಂತ ಹೇಳಬೇಡಿ ಯಾರಿಗೆ ಯಾರು ಕೂಡ ಬಾಸ್ ಅಲ್ಲ ದೇವರು ನಂಬಿ ಅವನೊಬ್ಬನೇ ನಮ್ಮೆಲ್ಲರಿಗೂ ಪಾಸ್ ಎಂದು ಅಭಿಮಾನಿಗಳಿಗೆ ತಿಳಿ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಬಾಸ್ ಅಂತ ಹೇಳಿಕೊಂಡು ಓಡಾಡಬೇಡಿ ಅಂತಾನೂ ಕೂಡ ಹೇಳಿದ್ದಾರೆ ಸದ್ಯಕ್ಕೆ ಶಿವಣ್ಣ ಅವರು ಹೇಳಿದಂತಹ ಈ ಮಾತು ವೈರಲಾಗಿದೆ. ಈಗಾಗಲೇ ಅಪ್ಪು ಮತ್ತು ದರ್ಶನ್ ಫ್ಯಾನ್ಸ್ ನಡುವೆ ನಡೆಯುತ್ತಿರುವಂತಹ ಹಗ್ಗ ಜಗ್ಗಾಟದ ಬಗ್ಗೆ ನಿಮಗೆ ತಿಳಿದೇ ಇದೆ ಎಲ್ಲರೂ ದರ್ಶನ್ ಬಾಸ್ ಡಿ ಬಾಸ್ ಅಂತ ಹೇಳಿದರೆ. ಇನ್ನು ಕೆಲವರು ಅಪ್ಪು ಬಾಸ್ ಅಂತ ಹೇಳುತ್ತಿದ್ದಾರೆ ಇಬ್ಬರು ಅಭಿಮಾನಿಗಳಿಗೂ ಕೂಡ ಶಿವಣ್ಣ ಅವರು ಈ ರೀತಿಯಾಗಿ ತಿಳಿ ಹೇಳುತ್ತಿದ್ದಾರೆ. ಅದೇನೇ ಆಗಲಿ ಸದ್ಯಕ್ಕೆ ಚಿತ್ರರಂಗದಲ್ಲಿ ಒಬ್ಬ ನಟನ ಇನ್ನೊಬ್ಬನ ವಿರುದ್ಧ ನಿಂತಿರುವುದಂತೂ ಸತ್ಯ. ಆದರೆ ಇವೆಲ್ಲದಕ್ಕೂ ಕೂಡ ಒಂದು ಸುಖಾಂತ್ಯ ಎಂಬುವುದು ದೊರೆಯಲಿ ಎಂಬುದಷ್ಟೇ ನಮ್ಮ ಅಭಿಲಾಷೆ.

ನಿಜ ಹೇಳಬೇಕೆಂದರೆ ಒಬ್ಬ ಹೀರೋ ಮತ್ತೊಬ್ಬ ಹೀರೋ ಜೊತೆ ಜೊತೆ ವೈಯಕ್ತಿಕ ಜೀವನದಲ್ಲಿ ಚೆನ್ನಾಗಿಯೇ ಇರುತ್ತಾರೆ ಆದರೆ ಫ್ಯಾನ್ಗಳು ಮಾತ್ರ ಈ ರೀತಿ ಸಂದರ್ಭವನ್ನು ನಿರ್ಮಾಣ ಮಾಡುತ್ತಾರೆ. ಇದರಿಂದ ನಟರಿಗೂ ಕೂಡ ಮುಜುಗರ ಚಿತ್ರರಂಗಕ್ಕೂ ಕೂಡ ಇದು ಒಂದು ಬಹುದೊಡ್ಡ ಹೊಡೆತ ಅಂದಾನೆ ಹೇಳಬಹುದು. ಸದ್ಯಕ್ಕೆ ಶಿವಣ್ಣ ಅವರು ಹೇಳಿದಂತಹ ಮಾತು ವೈರಲ್ ಆಗಿದೆ ಇದನ್ನು ನೋಡಿದ ಮೇಲೆ ಆದರೂ ಕೂಡ ಅಭಿಮಾನಿಗಳು ನಟರನ್ನು ಬಾಸ್ ಎಂದು ಕರೆಯುವ ಮುನ್ನ ಯೋಚಿಸಲಿ ಎಂಬುದಷ್ಟೇ ನಮ್ಮ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ ಹಾಗೂ ಶಿವಣ್ಣ ಅವರು ಮಾತನಾಡಿದಂತಹ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಜನವರಿ 26ಕ್ಕೆ ಬೆಂಗಳೂರು ಬಂದ್ ಮಾಡ್ತೀವಿ ಅದೇಗೆ ಕ್ರಾಂತಿ ಸಿನಿಮಾ ಬಿಡುಗಡೆ ಮಾಡ್ತಿರೋ ನಾವು ನೋಡೇ ಬಿಡ್ತೀವಿ ಅಪ್ಪು ಅಭಿಮಾನಿಗಳಿಂದ ದರ್ಶನ್ ಗೆ ಖಡಕ್ ಎಚ್ಚರಿಕೆ.

 

ಅಪ್ಪು ಅಭಿಮಾನಿಗಳಿಂದ ಬಂತು ದರ್ಶನ್ ಗೆ ಖಡಕ್ ಎಚ್ಚರಿಕೆ

ಈ ಫ್ಯಾನ್ ವಾರ್ ಗಳಿಗೆ ಕೊನೆ ಎಂಬುದೇ ಇಲ್ಲವಂತಾಗಿದೆ ಹೌದು ದರ್ಶನ್(Darshan) ಮೇಲೆ ಚಪ್ಪಲಿ ಎಸೆತ ಆದ ಪ್ರಕರಣದ ನಂತರ ದಿನದಿಂದ ದಿನಕ್ಕೆ ಫ್ಯಾನ್ ವಾರ್ ಗಳು ಮಿತಿಮೀರಿ ನಡೆಯುತ್ತಿದೆ. ಅದರಲ್ಲಿಯೂ ಕೂಡ ದರ್ಶನ್ ಹುಬ್ಬಳ್ಳಿಗೆ ಹೋಗಿ ಬಂದ ಮೇಲೆ ಅಂತೂ ಇದರ ತೀವ್ರತೆ ಹೆಚ್ಚಾಗಿದೆ. ಹೌದು ಹೊಸಪೇಟೆಯಲ್ಲಿ ನಟ ದರ್ಶನ್ ಅವರ ಮೇಲೆ ಕಿಡಿಗೇಡಿ ಒಬ್ಬರು ಚಪ್ಪಲಿಯನ್ನು ಎಸೆಯುತ್ತಾರೆ ಇದರಿಂದ ದರ್ಶನ್ ಅಭಿಮಾನಿಗಳು ಅಪ್ಪು(Appu) ಅಭಿಮಾನಿಗಳ ಮೇಲೆ ಬಹಳಷ್ಟು ಆ.ಕ್ರೋ.ಶ.ವನ್ನು ವ್ಯಕ್ತಪಡಿಸುತ್ತಾರೆ. ಆದರೆ ಅಪ್ಪು ಅಭಿಮಾನಿಗಳು ನಾವು ಇಂತಹ ಹೀನ ಕೃತ್ಯವನ್ನು ಮಾಡಿಲ್ಲ ಬದಲಾಗಿ ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡೋಣ ಅಂತ ಹೇಳುತ್ತಾರೆ.

ಆದರೂ ಕೂಡ ಮನನೊಂದಂತಹ ದರ್ಶನ್ ಅಭಿಮಾನಿಗಳು ಅಪ್ಪು ಅಭಿಮಾನಿಗಳ ವಿರುದ್ಧ ಹಾಗೂ ರಾಜ್ಯ ವಂಶದ ಬಗ್ಗೆ ಅವಹೇಳನಕಾರಿ ಪೋಸ್ಟರ್ ಗಳನ್ನು ಮತ್ತು ಹವ್ಯಾಚ್ಯ ಶಬ್ದಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಬಳಕೆ ಮಾಡುತ್ತಿದ್ದಾರೆ ಎಂಬುದು ಅಪ್ಪು ಅಭಿಮಾನಿಗಳ ವಾದವಾಗಿದೆ. ಹಾಗಾಗಿ ದಿನದಿಂದ ದಿನಕ್ಕೆ ಈ ಒಂದು ಪ್ರಕರಣ ಹೆಚ್ಚಾಗುತ್ತಲೇ ಇರುವುದರಿಂದ ಇದೀಗ ಕರ್ನಾಟಕದಾದ್ಯಂತ ಡಾ. ರಾಜಕುಮಾರ್(Dr.RajKumar) ಅಭಿಮಾನಿಗಳ ಸಂಘ ಹಾಗೂ ಶಿವರಾಜಕುಮಾರ್(Shiva Rajkumar) ಸೇನೆ, ರಾಘವೇಂದ್ರ ರಾಜಕುಮಾರ್ ಅಭಿಮಾನಿ ಬಳಗ ಹಾಗೂ ಅಪ್ಪು(Puneeth Rajkumar) ಅಭಿಮಾನಿ ಬಳಗ ಈ ನಾಲ್ವರು ಅಭಿಮಾನಿ ಸಂಘಗಳು ಒಟ್ಟಾಗಿ ಬೆಂಗಳೂರಿನ ಗಾಂಧಿನಗರದಲ್ಲಿ ಇರುವಂತಹ ಫಿಲಂ ಚೇಂಬರ್ ಬಳಿ ನೆನ್ನೆ ಅಂದರೆ ಡಿಸೆಂಬರ್ 29ನೇ ತಾರೀಕು ಬೃಹತ್ ಪ್ರತಿಭಟನೆಯನ್ನು ಮಾಡಿದ್ದಾರೆ.

ಅಷ್ಟೇ ಅಲ್ಲದೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದರ್ಶನ್ ಅವರ ವಿರುದ್ಧ ದೂರನ್ನು ಸಲ್ಲಿಸಿದರೆ ದರ್ಶನ್ ಅಭಿಮಾನಿಗಳು ರಾಜ ವಂಶದ ಬಗ್ಗೆ ಅವಹೇಳನಕಾರಿ ಪೋಸ್ಟರ್ ಗಳನ್ನೂ ಹಾಕಿದ್ದಾರೆ. ದರ್ಶನ್ ಕೂಡ ಇದಕ್ಕೆ ಮರು ಪ್ರತಿಕ್ರಿಯೆ ನೀಡುತ್ತಿಲ್ಲ ತಮ್ಮ ಅಭಿಮಾನಿಗಳಿಗೆ ಅವರು ಬುದ್ಧಿವಾದವನ್ನು ಹೇಳಬೇಕಿತ್ತು ಆದರೂ ಕೂಡ ಅವರು ಆ ಕೆಲಸವನ್ನು ಮಾಡಿಲ್ಲ. ಬದಲಾಗಿ ಹುಬ್ಬಳ್ಳಿಯಲ್ಲಿ ಶರ್ಟ್ ಕಲರ್ ಮೇಲೆ ಎತ್ತಿ ನಮ್ಮನ್ನು ನೋಡಿ ಉರಿದುಕೊಳ್ಳುವವರಿಗೆ ಇನ್ನಷ್ಟು ಉರಿಸೋಣ ಎಂದು ಪ್ರಚೋದನಾತ್ಮಕ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಇದರಿಂದ ಅಭಿಮಾನಿಗಳ ವರ್ತನೆ ಇನ್ನಷ್ಟು ಹೆಚ್ಚಾಗಿದೆ ಇವೆಲ್ಲದಕ್ಕೂ ನೀವು ಕಡಿವಾಣ ಹಾಕಲೇಬೇಕು ಇಲ್ಲವಾದರೆ ನಾವು ಇನ್ನಷ್ಟು ಉಗ್ರ ಹೋರಾಟ ಮತ್ತು ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಅಷ್ಟೇ ಅಲ್ಲದೆ 26ನೇ ತಾರೀಕಿನಂದು ಕ್ರಾಂತಿ ಸಿನಿಮಾ ಬಿಡುಗಡೆ ಮಾಡುತ್ತೇವೆ ಅಂತ ದರ್ಶನ್ ಹಾಗೂ ಕ್ರಾಂತಿ ಸಿನಿಮಾದವರು ಹೇಳಿಕೊಂಡಿದ್ದಾರೆ. ನೀವು ಅಪ್ಪು ಅಭಿಮಾನಿಗಳಿಗೆ ಹೀಗೆಯೇ ನಿಂದಿಸುತ್ತಾ ಬಂದರೆ ಅದೇಗೆ ಸಿನಿಮಾವನ್ನು ರಿಲೀಸ್ ಮಾಡುತ್ತಿರ ನಾವು ನೋಡೇ ಬಿಡುತ್ತೇವೆ. ಕ್ರಾಂತಿ(Kranti) ಸಿನಿಮಾ ಬಿಡುಗಡೆಯಾಗುವ ದಿನಾಂಕದಂದು ಅಂದರೆ ಜನವರಿ 26ನೇ ತಾರೀಕಿನಂದು ಬೆಂಗಳೂರನ್ನು ಬಂದ್ ಮಾಡಿಸ್ತೀವಿ, ಎಲ್ಲಾ ಥಿಯೇಟರ್ ಗಳನ್ನು ಮುಚ್ಚಿಸುತ್ತೇವೆ ಈ ಸಿನಿಮಾವನ್ನು ಹೇಗೆ ರಿಲೀಸ್ ಮಾಡಿಸುತ್ತಿರೋ ನಾವು ನೋಡೇ ಬಿಡುತ್ತೇವೆ ಎಂದು ದರ್ಶನ್ ಅವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ನೀವು ನಿಮ್ಮ ಅಭಿಮಾನಿಗಳಿಗೆ ಕರೆದು ಬುದ್ಧಿವಾದವನ್ನು ಹೇಳಬೇಕು, ಈ ರೀತಿ ಪ್ರಚೋದನಾತ್ಮಕ ಹೇಳಿಕೆಯನ್ನು ಎಲ್ಲೂ ಕೂಡ ನೀಡಬಾರದು, ಇದು ನಿಮಗೆ ಕೊನೆ ಅವಕಾಶ ನೀವು ಇದೇ ರೀತಿ ಮುಂದುವರಿಸಿದರೆ ನಮ್ಮ ಇನ್ನೊಂದು ವರಸೆಯನ್ನು ನೋಡಬೇಕಾಗುತ್ತದೆ ಎಂದು ಅಪ್ಪು ಅಭಿಮಾನಿಗಳು ಸಂಜೆ ಮತ್ತು ಅವರ ಅಭಿಮಾನಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಕೇವಲ ಈ ಇದಿಷ್ಟು ಮಾತ್ರವಲ್ಲದೆ ದರ್ಶನ್ ಅವರ ಸುಮಾರು 80 ಜನ ಅಭಿಮಾನಿಗಳ ಮೇಲೆ ದೂರು ದಾಖಲಿಸಿದ್ದು ಸಾವಿರದ ಇಪ್ಪತ್ತು ಕೇಸ್ ಗಳನ್ನು ಅವರ ಮೇಲೆ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾರು ಅವಹೇಳನಕಾರಿ ಪೋಸ್ಟರ್ ಹಾಕಿದ್ದರು ಅವರ ಅಕೌಂಟ್ ಗಳನ್ನು ಬ್ಯಾನ್ ಮಾಡಿಸಿದ್ದಾರೆ. ಒಂದು ವೇಳೆ ಬೆಂಗಳೂರು ಬಂದ್ ಮಾಡಿಸಿದರೆ ಕ್ರಾಂತಿ ಸಿನಿಮಾದ ಗತಿ ಏನು ಎಂಬುವುದೇ ಇದೀಗ ದರ್ಸನ್ ಅವರ ಅಭಿಮಾನಿಗಳ ದೊಡ್ಡ ಪ್ರಶ್ನೆಯಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಕಿಚ್ಚನ ಕಂಪ್ಲೀಟ್ ಜಾತಕ ನನ್ನ ಬಳಿ ಮಾತ್ರ ಇರೋದು ಇದೆ, ಬಿಗ್ ಬಾಸ್ ಮನೆಯಿಂದ ಹೊರ ಬರುತಿದ್ದ ಹಾಗೇ ಸುದೀಪ್ ಬಗ್ಗೆ ಮಾತನಾಡಿದ ಆರ್ಯವರ್ಧನ್.

ಬಿಗ್ ಬಾಸ್ ಮನೆಯಿಂದ ಹೊರಬಂದ ಆರ್ಯವರ್ಧನ್ ಕಿಚ್ಚನ ಕುರಿತು ಹೇಳಿದ ಮಾತು ವೈರಲ್

ನಾನು ಎಂದರೆ ನಂಬರ್ ಎಂದರೆ ನಾನು ಎಂದು ಹೇಳುವ ನಂಬರ್ ಗುರೂಜಿ ಎಂದೇ ಖ್ಯಾತ ಆಗಿರುವ ಆರ್ಯ ವರ್ಧನ್(Aryavardhan Guruji) ಅವರು ಕನ್ನಡ ಕಿರುತೆರೆಯ ಫೇಮಸ್ ಫೇಸ್. ಹಲವಾರು ಜ್ಯೋತಿಷ್ಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಇವರು ಬಿಗ್ ಬಾಸ್ ಗೆ ಹೋದ ಬಳಿಕ ಬಿಗ್ ಬಾಸ್(Big boss season 9) ಆರ್ಯವರ್ಧನ್ ಎಂದೆ ಫೇಮಸ್ ಆಗಿದ್ದಾರೆ. ಈ ಬಾರಿ 9ನೇ ಸೀಸನ್ ಗು ಮುನ್ನ ಓ.ಟಿ.ಟಿ ಸೀಸನ್ ಅಲ್ಲಿ ಮನೆ ಒಳಗೆ ಹೋಗಿ ಕಡೆಯ ನಾಲ್ಕು ಜನರಲ್ಲಿ ಒಬ್ಬರಾಗಿ ಗೆದ್ದು ಅಧಿಕೃತ 9ನೇ ಆವೃತ್ತಿಯ ಬಿಗ್ ಬಾಸ್ ಕಂಟೆಸ್ಟೆಂಟ್ ಆಗಿ ಮನೆ ಸೇರಿದ್ದರು. ಒಟಿಟಿ ದಿನಗಳಿಂದಲೂ ಸಹ ಆರ್ಯವರ್ಧನ್ ಅವರು ಟಾಸ್ಕಳಲ್ಲಿ ಸಾಧ್ಯವಾದಷ್ಟು ಪಾಲ್ಗೊಳ್ಳುತ್ತಿದ್ದಾರೆ.

ಅದರಲ್ಲೂ ಅಡುಗೆ ಮನೆಯ ಮಹಾರಾಜರ ಆಗಿಬಿಟ್ಟದ್ದಾರೆ ಎನ್ನಬಹುದು. ಇಡೀ ಮನೆಗೆ ಇರುವಷ್ಟು ದಿನ ಹೊಟ್ಟೆ ತುಂಬಾ ಊಟ ರುಚಿ ರುಚಿಯಾಗಿ ಮಾಡಿ ಬಡಿಸಿದ ಕ್ರೆಡಿಟ್ ಇವರಿಗೆ ಸಲ್ಲಬೇಕು. ಅಡುಗೆ ಮನೆ ಇತರ ಚಟುವಟಿಕೆಗಳ ಜೊತೆಗೆ ಅವರು ಎಂಟರ್ಟೈನ್ ವಿಷಯದಲ್ಲಿ ಕೂಡ ಎತ್ತಿದ ಕೈ ವಾರಂತ್ಯದಲ್ಲಿ ಕಿಚ್ಚನ ಪಂಚಾಯಿತಿ ಕಟ್ಟೆಯಲ್ಲಿ ಸಪ್ಪೆ ಮೊರೆ ಹಾಕಿ ಮುಗ್ದನಂತೆ ಕುಳಿತುಕೊಳ್ಳುತ್ತಿದ್ದ ಇವರು ಇನ್ನುಳಿದ ವಾರದ ಐದು ದಿನಗಳಲ್ಲಿ ಮನೆ ತುಂಬಾ ಬಹಳ ಸೌಂಡ್ ಮಾಡುತ್ತಿದ್ದರು. ಅತಿಯಾಗಿ ಯಾರೊಂದಿಗೂ ಜಗಳಕ್ಕೆ ಹೋಗದೇ ಹೋದರು ಸಹ ಆಗಾಗ ಅವರ ವಿಷಯ ಬಂದಾಗ ಬಹಳ ಜೋರಾಗಿ ಜಗಳ ಆಡುತ್ತಿದ್ದರು.

ಆದಷ್ಟು ಬಿಟ್ಟು ಮನೆಯವರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವಲ್ಲಿ ಇವರೇ ಮೊದಲಿಗರು ಇವರು ಆಡುವ ಮಾತುಗಳು ಕೊಡುವ ಕಂಟೆಂಟ್ ಗಳು ಹಾಗೂ ಪಂಚಿಂಗ್ ಡೈಲಾಗ್ ಗಳು ಬಿಗ್ ಬಾಸ್ ಮನೆ ತುಂಬಾ ಬಹಳ ಫೇಮಸ್ ಆಗಿವೆ. ಅಲ್ಲಿರುವ ಕಂಟೆಸ್ಟೆಂಟ್ಗಳಲ್ಲಿ ಬಹುತೇಕ ಎಲ್ಲರೂ ಇವರನ್ನು ಮಗುವಿನಂತ ಮನಸಿನವರು ಎಂದು ಒಪ್ಪಿಕೊಂಡಿದ್ದಾರೆ. ಇದೀಗ ಇನ್ನೇನು ಫಿನಾಲೆಗೆ ಕ್ಷಣಗಣನೆ ಆಗುವ ಸಂದರ್ಭದಲ್ಲಿ ಔಟ್ ಆಗಿ ಮನೆಯಿಂದ ಹೊರ ಬಿದ್ದಿರುವ ಆರ್ಯವರ್ಧನ್ ಅವರು ನ್ಯೂಸ್ ಚಾನೆಲ್ ಒಂದಕ್ಕೆ ಸಂದರ್ಶನಕ್ಕೆ ಸಿಲುಕಿದ್ದು ಇಷ್ಟು ದಿನದ ಬಿಗ್ ಬಾಸ್ ಕಾರ್ಯಕ್ರಮ ಅಲ್ಲಿದ್ದ ಕಂಟೆಸ್ಟ್ ಗಳು ಜೊತೆಗೆ ಕಿಚ್ಚ ಸುದೀಪ್ ಅವರ ಬಗ್ಗೆ ಕೂಡ ಮಾತನಾಡಿದ್ದಾರೆ.

ಬಿಗ್ ಬಾಸ್ ಮನೆ ಒಳಗೆ ಹೋಗುವ ಮುನ್ನವೆ ನನಗೆ ಲೆಕ್ಕಚಾರ ತಿಳಿದಿತ್ತು, ಕಳೆದ ಸೀಸನ್ ಗಳಲ್ಲಿ ನಾನು ಹೇಳಿದವರೆ ವಿನ್ ಆಗಿದ್ದಾರೆ ಈ ಬಗ್ಗೆ ನಾನು ಚಾನಲ್ ಜೊತೆ ಕೂಡ ಹಲವು ಬಾರಿ ಚರ್ಚೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ನಾನು ಔಟ್ ಆಗುತ್ತೇನೆ ಎಂದು ನನಗೂ ಗೊತ್ತಿತ್ತು, ಈ ಬಾರಿ ಸೀಸನ್ 9 ಕ್ಕೆ ನಾಲ್ಕನೇ ಅವನಾಗಿ ಎಂಟ್ರಿ ಕೊಟ್ಟಿದ್ದೆ ತಪ್ಪಾಯ್ತು ಎಂದಿದ್ದಾರೆ. ಸುದೀಪ್ ಅವರ ಬಗ್ಗೆಯೂ ಕೂಡ ಮಾತನಾಡಿ ಈ ಒಂಬತ್ತನೇ ಸೀಸನ್ ಅವರಿಗೆ ಆಗಿ ಬರುವುದಿಲ್ಲ.

ಯಾಕೆಂದರೆ ಅವರು ಎರಡರ ಕಾಂಬಿನೇಷನ್ ಅವರು ಎರಡು ಮತ್ತು ಒಂಬತ್ತು ಆಗುವುದಿಲ್ಲ ಹಾಗೂ ಎರಡು ನಾಲ್ಕು ಇವೆರಡಕ್ಕೂ ಆಗುವುದಿಲ್ಲ ಎಂದು ಹೇಳುತ್ತಾ ಮಾತಿನ ಬರದಲ್ಲಿ ಕಿಚ್ಚ ಸುದೀಪ್(Kiccha Sudeep) ಅವರ ಜಾತಕ ನನ್ನ ಕೈಲಿ ಇದೆ ಕರ್ನಾಟಕದಲ್ಲಿ ನನ್ನ ಹತ್ತಿರ ಮಾತ್ರ ಅವರ ಹುಟ್ಟಿದ ಸಮಯದ ಸಮೇತವಾಗಿ ಜಾತಕ ಇರುವುದು ಎಂದು ನುಡಿಯುತ್ತಿದ್ದಾರೆ. ವಿಷಯದ ಕುರಿತು ಇನ್ನು ಮುಂದುವರೆದು ಸುದೀಪ್ ಅವರ ಬಗ್ಗೆ ಮತ್ತು ನಂಬರ್ ಗಳ ಬಗ್ಗೆ ಏನೇನು ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ವಿಷ್ಣು ಅಭಿನಯದ ಬಂಧನ ಸಿನಿಮಾಗೆ ಮೊದಲು ಆಯ್ಕೆ ಆಗಿದ್ದ ನಟ ಯಾರು ಗೊತ್ತಾ.? ಆ ನಟ ಬಂಧನ ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ ಗೊತ್ತ ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

ಬಂಧನ ಸಿನಿಮಾಗೆ ಮೊದಲು ಆಯ್ಕೆ ಆಗಿದ್ದ ನಟ

ಡಾಕ್ಟರ್ ವಿಷ್ಣುವರ್ಧನ್(Vishnuvardhan) ಹಾಗೂ ಸುಹಾಸಿನಿ(Suhasini) ಅಭಿನಯದ ಬಂಧನ(Bandana) ಸಿನಿಮಾ ಅಂದಿನ ಕಾಲದಲ್ಲಿ ಬಹುದೊಡ್ಡ ಮಟ್ಟಿಗೆ ಹೆಸರು ಮಾಡಿದ ಸಿನಿಮಾ. ಅದರಲ್ಲಿಯೂ ಕೂಡ ಈ ಸಿನಿಮಾದಲ್ಲಿ ವಿಷ್ಣು ದಾದಾ ಅಭಿನಯಿಸಿದಂತಹ ಪ್ರತಿಯೊಂದು ಸೀನ್ ಕೂಡ ಈಗಲೂ ನಮ್ಮ ಕಣ್ಣ ಮುಂದೆ ಬರುತ್ತದೆ ಅಷ್ಟರ ಮಟ್ಟಿಗೆ ಇವರು ಆ ಪಾತ್ರಕ್ಕೆ ಜೀವವನ್ನು ತುಂಬಿದ್ದಾರೆ. ಆದರೆ ಸಾಕಷ್ಟು ಜನರಿಗೆ ಒಂದು ವಿಚಾರ ತಿಳಿದೇ ಇಲ್ಲ ಹೌದು ಬಂಧನ ಸಿನಿಮಾಗೆ ಮೊದಮೊದಲು ವಿಷ್ಣುವರ್ಧನ್ ಆಯ್ಕೆ ಆಗಿರಲಿಲ್ಲ ಬದಲಾಗಿ ಈ ಸಿನಿಮಾವನ್ನು ಬೇರೊಬ್ಬ ನಟನಿಗೆ ನಾಯಕ ನಟನಾಗಿ ಪಾತ್ರ ಮಾಡುವಂತೆ ಹೇಳಿದ್ದರಂತೆ.

ಆದರೆ ಆ ನಟ ನಾನು ಬಂಧನ ಸಿನಿಮಾದಲ್ಲಿ ನಟನೆ ಮಾಡಲು ಸಾಧ್ಯವಿಲ್ಲ ಎಂದು ರಿಜೆಕ್ಟ್ ಮಾಡಿದ್ದರಂತೆ ಈ ವಿಚಾರ ಇದೀಗ ರಿವಿಲ್ ಆಗಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ 1984ರಲ್ಲಿ ತೆರೆಕಂಡ ಬಂಧನ ಸಿನಿಮಾ ಅಂದಿನ ಕಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದಂತಹ ಸಿನಿಮಾ ಈಗಲೂ ಕೂಡ ಬಂಧನ ಸಿನಿಮಾ ಅಂದರೆ ಸಿನಿ ಪಕ್ಷಕರು ಅಷ್ಟೇ ಉತ್ಪ್ರಕ್ಷೆಯಿಂದ ಈ ಸಿನಿಮಾವನ್ನು ವೀಕ್ಷಣೆ ಮಾಡುತ್ತಾರೆ. ಇನ್ನು ಈ ಸಿನಿಮಾವನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದು ರಾಜೇಂದ್ರ ಸಿಂಗ್ ಬಾಬು ಅವರು. ಇನ್ನು ಬಂಧನ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದ ನಟ ಯಾರು ಎಂಬುದನ್ನು ನೋಡುವುದಾದರೆ ಅದು ನಮ್ಮ ರೆಬಲ್ ಸ್ಟಾರ್ ಅಂಬರೀಶ್(Ambareesh).

ಹೌದು ರಾಜೇಂದ್ರ ಸಿಂಗ್ ಬಾಬು(Rajendra Singh Babu) ಹಾಗೂ ಅಂಬರೀಶ್ ಅವರು ಆತ್ಮೀಯ ಸ್ನೇಹಿತರು ಒಮ್ಮೆ ರಾಜೇಂದ್ರ ಸಿಂಗ್ ಅವರು ಅಂಬರೀಶ್ ಅವರ ಮನೆಗೆ ಭೇಟಿ ನೀಡಿ ನಾನೊಂದು ಸಿನಿಮಾವನ್ನು ಮಾಡಬೇಕೆಂದಿದ್ದೇನೆ ಕಥೆಯೂ ಕೂಡ ಸಿದ್ದವಾಗಿದೆ ಇದನ್ನು ಒಮ್ಮೆ ನೀನು ಕೇಳು ಎಂದು ಬಂಧನ ಸಿನಿಮಾದ ಕಥೆಯನ್ನು ಹೇಳುತ್ತಾರಂತೆ. ಸಿನಿಮಾದ ಕಥೆಯನ್ನು ಕೇಳಿ ಅಂಬರೀಶ್ ಮೆಚ್ಚಿಕೊಳ್ಳುತ್ತಾರಂತೆ ತದನಂತರ ರಾಜೇಂದ್ರ ಸಿಂಗ್ ಅವರು ಈ ಸಿನಿಮಾದ ನಾಯಕ ನಟ ನೀನೆ ಎಂದು ಹೇಳುತ್ತಾರಂತೆ ಆಗ ಅಂಬರೀಶ್ ಅವರು ಇದಕ್ಕೆ ಸುತಾರಂ ಒಪ್ಪುವುದಿಲ್ಲವಂತೆ.

ಏಕೆಂದರೆ ಬಂಧನ ಸಿನಿಮಾದ ಪಾತ್ರ ಮಾಡಬೇಕಾದರೆ ಸಾಫ್ಟ್ ನೆಸ್ ಇರಬೇಕು ಆದರೆ ನಾನು ರೆಬೆಲ್ ಇಂತಹ ಸಾಫ್ಟ್ ನೆಸ್ ಕ್ಯಾರೆಕ್ಟರ್ ಮಾಡುವುದಕ್ಕೆ ಸೂಟೆಬಲ್ ವ್ಯಕ್ತಿ ನಾನಲ್ಲ, ನನ್ನ ಬದಲು ಈ ಸಿನಿಮಾಗೆ ವಿಷ್ಣುವರ್ಧನ್ ಅವರನ್ನು ಆಯ್ಕೆ ಮಾಡಿಕೋ ಈ ಸಿನಿಮಾ ಅದ್ಬುತವಾಗಿ ಮೂಡಿ ಬರುತ್ತದೆ, ವಿಷ್ಣು ಈ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಾನೆ ಎಂದು ಸಲಹೆ ನೀಡಿದರಂತೆ. ಅವರ ಸಲಹೆಯಂತೆ ವಿಷ್ಣುವರ್ಧನ್ ಅವರ ಮನೆಗೆ ಭೇಟಿ ನೀಡಿದಂತಹ ರಾಜೇಂದ್ರ ಸಿಂಗ್ ಅವರು ಬಂಧನ ಸಿನಿಮಾದ ಕಥೆಯನ್ನು ವಿಷ್ಣು ದಾದಾಗೆ ಹೇಳುತ್ತಾರಂತೆ ಕಥೆಯನ್ನು ಕೇಳಿ ಇಷ್ಟ ಪಟ್ಟ ವಿಷ್ಣು ದಾದಾ ಈ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಡುತ್ತಾರಂತೆ.

ಅಂದುಕೊಂಡಂತೆ ಬಂಧನ ಸಿನಿಮಾದ ಶೂಟಿಂಗ್ ಸಂಪೂರ್ಣ ಮುಕ್ತಾಯವಾಗಿ ಪ್ರದರ್ಶನವೂ ಕೂಡ ಕಂಡಿತು ಅಂದಿನ ಕಾಲದಲ್ಲಿ ಸುಮಾರು 100 ದಿನಗಳ ಕಾಲ ಈ ಸಿನಿಮಾ ಪ್ರದರ್ಶನ ಕಂಡಿದು ಎಲ್ಲರಿಂದಲೂ ಕೂಡ ಮೆಚ್ಚುಗೆಯನ್ನು ಪಡೆದಿತ್ತು. ಒಂದು ವೇಳೆ ಈ ಒಂದು ಪಾತ್ರದಲ್ಲಿ ಅಂಬರೀಶ್ ಅವರು ಅಭಿನಯಿಸಿದ್ದರೆ ಸಿನಿಮಾ ಅದೇಗೆ ಮೂಡಿ ಬರುತ್ತಿತ್ತೋ ಏನೋ ತಿಳಿದಿಲ್ಲ. ಆದರೆ ವಿಷ್ಣು ದಾದಾ ಅಭಿನಯಿಸಿದ್ದು ಮಾತ್ರ ಇಂದಿಗೂ ಕನ್ನಡಿಗರ ಕಣ್ಣಲ್ಲಿ ಕಟ್ಟಿದ ಹಾಗಿದೆ ಇಲ್ಲಿ ನಾವು ಅಂಬರೀಶ್ ಅವರ ಗುಣವನ್ನು ಮೆಚ್ಚಲೇಬೇಕು ಸಾಮಾನ್ಯವಾಗಿ ಇಂದಿನ ಕಾಲದ ನಟರು ಯಾವುದೇ ಕಥೆಯನ್ನಾದರೂ ಕೂಡ ಬಹಳ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ.

ಚಾನ್ಸ್ ಸಿಕ್ಕರೆ ಸಾಕು ಎಲ್ಲವನ್ನು ನಾನೇ ಮಾಡುತ್ತೇನೆ ಅಂತ ಹೇಳುತ್ತಾರೆ ಆದರೆ ಅಂಬರೀಶ್ ಅವರು ಮಾತ್ರ ತಮಗೆ ಸೂಟೆಬಲ್ ಆಗುವಂತಹ ಪಾತ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈ ಕಾರಣಕ್ಕಾಗಿಯೇ ಬಂಧನ ಸಿನಿಮಾದ ಆಫರ್ ಎಂದು ರಿಜೆಕ್ಟ್ ಮಾಡಿ ಆ ಸಿನಿಮಾಗೆ ವಿಷ್ಣುವರ್ಧನ್ ಅವರನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ಕೊಟ್ಟರಂತೆ. ಈಗಿನ ಕಾಲದಲ್ಲಿ ಯಾವ ನಟರು ತಾನೇ ಈ ರೀತಿ ಮಾಡುತ್ತಾರೆ ಹೇಳಿ ಅದೇನೇ ಆಗಲಿ ಎಷ್ಟೇ ವರ್ಷ ಆದರೂ ಕೂಡ ಬಂಧನ ಸಿನಿಮಾ ಯವರ್ ಗ್ರೀನ್ ಆಗಿಯೇ ಉಳಿದುಕೊಳ್ಳುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ ಹಾಗೂ ಬಂಧನ ಸಿನಿಮಾದಲ್ಲಿ ಅಂಬಿ ಅಭಿನಯಿಸಬೇಕಿತ್ತ ಅಥವಾ ವಿಷ್ಣು ಅಭಿನಯಿಸಿದ್ದೆ ಒಳ್ಳೆದ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡ ನಟ ಲೋಕೇಶ್ ಹಾಗೂ ನಟಿ ರಚನಾ

 

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಮತ್ತೊಂದು ತಾರಾ ಜೋಡಿ

ನಮ್ಮ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಈ ವರ್ಷ ಮದುವೆಯಾದಂತಹ ಸಾಕಷ್ಟು ಜೋಡಿಗಳನ್ನು ನೀವು ನೋಡಿದ್ದೀರಾ ಅದರಲ್ಲಿಯೂ ಕೂಡ ಕಳೆದ ಎರಡು ತಿಂಗಳಿನಿಂದ ಸಾಕಷ್ಟು ನಟ ನಟಿಯರು ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ನೀಡಿದ್ದಾರೆ. ಸಾಮಾನ್ಯವಾಗಿ ತಾವು ಯಾವ ವೃತ್ತಿಯನ್ನು ಮಾಡುತ್ತಾರೋ ಅದೇ ವೃತ್ತಿಯಲ್ಲಿ ಇರುವಂತಹ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಇತ್ತೀಚಿನ ದಿನದಲ್ಲಿ ಟ್ರೆಂಡ್ ಆಗಿದೆ. ಅದರಲ್ಲಿಯೂ ಕೂಡ ನಟ ನಟಿಯರು ಭಾಗಶಹ ಅವರದ್ದೇ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಹುಡುಗಿಯನ್ನು ಅಥವಾ ಹುಡುಗನನ್ನು ಮದುವೆಯಾಗುತ್ತಿರುವ ವಿಚಾರ ನಿಮಗೆ ತಿಳಿದೇ ಇದೆ.

ಕಳೆದ ತಿಂಗಳಂತೂ ಸಾಲು ಸಾಲು ಎಂಗೇಜ್ಮೆಂಟ್ ಗಳಾಗಿವೆ ಹೌದು ಸತ್ಯ ಸಿರಿಯಲ್ ನಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವಂತಹ ಸಾಗರ್ ಬಿಳಿ ಗೌಡ ಅವರು ತಮ್ಮ ಬಹುಕಾಲದ ಗೆಳತಿ ಆದಂತಹ ಸಿರಿ ಅವರನ್ನು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇದಾದ ನಂತರ ಪಾರು ಧಾರವಾಹಿಯಲ್ಲಿ ಪ್ರೀತಮ್ ಎಂಬ ಪಾತ್ರದಲ್ಲಿ ನಟಿಸುತ್ತಿರುವಂತಹ ಸಿದ್ದು ಮೂಲಿಮನಿ ಅವರು ಗಟ್ಟಿಮೇಳ ಧಾರವಾಹಿಯಲ್ಲಿ ಅದಿತಿ ಪಾತ್ರದಲ್ಲಿ ನಟಿಸುತ್ತಿರುವಂತಹ ಪ್ರಿಯಾ ಆಚಾರ್ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ನಂತರ ಪಾರು ಧಾರವಾಹಿಯಲ್ಲಿ ನಟನೆ ಮಾಡುತ್ತಿರುವಂತಹ ಆದಿತ್ಯ ಅಲಿಯಾ ಶರತ್ ಅವರು ತಮ್ಮ ಬಹುಕಾಲದ ಗೆಳತಿಯೊಟ್ಟಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ಇದಿಷ್ಟು ಮಾತ್ರವಲ್ಲದೆ ಬೆಳ್ಳಿ ತೆರೆಗೆ ಸಂಬಂಧಿಸಿದ ಹಾಗೆ ನಮ್ಮ ಜೂನಿಯರ್ ರೆಬಲ್ ಸ್ಟಾರ್ ಅವರು ಕೂಡ ತಮ್ಮ ಬಹುಕಾಲದ ಗೆಳತಿ ಅವಿವ ಬಿದ್ದಪ್ಪ ಅವರ ಜೊತೆ ಕಳೆದ ವಾರ ಅಷ್ಟೇ ಅದ್ದೂರಿಯಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ಇವರ ಸಾಲಿಗೆ ಮತ್ತೋರ್ವ ನಟ ನಟಿಯರು ಕೂಡ ಸೇರ್ಪಡೆಯಾಗುತ್ತಿದ್ದಾರೆ ಹೌದು ಕಿರುತೆರೆಯಲ್ಲಿ ಖ್ಯಾತ ನಟ ಆಗಿ ಗುರುತಿಸಿಕೊಂಡಿರುವಂತಹ ಲೋಕೇಶ್ ಬಸವಹಟ್ಟಿ ಹಾಗೂ ರಚನಾ ದಶರಥ(Rachana Dasarath) ಅವರು ಇದೀಗ ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇವರಿಬ್ಬರ ಫೋಟೋಸ್ಗಳು ವೈರಲ್ ಆಗಿದೆ ಇವರ ಅಭಿಮಾನಿಗಳು ಕೂಡ ಈ ನೂತನ ದಂಪತಿಗಳಿಗೆ ಶುಭವನ್ನು ಕೋರಿದ್ದಾರೆ.

ಹಾಸ್ಯ ನಟ ಲೋಕೇಶ್‌ ಬಸವಟ್ಟಿ(Lokesh Basavatti) ಅವರು ಎಂಗೇಜ್‌ ಮೆಂಟ್‌ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟನಾ ಸಂಸ್ಥೆ ಸೇರಿ ಅಭಿನಯಿಸಲು ಪ್ರಾರಂಭಿಸಿದ ಲೋಕೇಶ್‌ ಬಸವಟ್ಟಿ ಅವರು ‘ಪಾಯಿಂಟ್‌ ಪರಿಮಳಾ’, ‘ಪಾರ್ವತಿ ಪರಮೇಶ್ವರ’ ಹಾಗೂ ‘ಸಿಲ್ಲಿ ಲಲ್ಲಿ’ ಧಾರಾವಾಹಿಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದರು. ಇವರಿಗೆ ಪಾರ್ವತಿ ಪರಮೇಶ್ವರ ಧಾರಾವಾಹಿ ಹೆಸರು ತಂದುಕೊಟ್ಟಿತು. ಇನ್ನು ‘ಚತುರ್ಭುಜ’ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ನಟನೆ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಲೋಕೇಶ್‌ ಅವರು ಬಣ್ಣದ ಲೋಕದಲ್ಲೇ ತಮ್ಮ ಜೋಡಿಯನ್ನು ಆರಿಸಿಕೊಂಡಿದ್ದಾರೆ.

ಲೋಕೇಶ್‌ ಬಸವಟ್ಟಿ ಅವರು ರಚನಾ ದಶರಥ್ ಅವರನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ರಚನಾ ಅವರು ಸ್ಯಾಂಡಲ್‌ ವುಡ್‌ ನಲ್ಲಿ ಸಕ್ರಿಯರಾಗಿದ್ದಾರೆ. ‘ಯೋಗಿ ದುನಿಯಾ’, ‘ಸಮರ್ಥ’, ‘ಮಾತು ಕಥೆ’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೂಲತಃ ರಚನಾ ನೇಪಾಳಿಯವರಾದರೂ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಮಾಡೆಲಿಂಗ್‌ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ರಚನಾ ಹಾಗೂ ಲೋಕೇಶ್‌ ಬಸವಟ್ಟಿ ಎಂಗೇಜ್‌ ಮೆಂಟ್‌ ಮಾಡಿಕೊಂಡಿದ್ದಾರೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇನ್ನು ಮದುವೆಯ ದಿನಾಂಕವನ್ನು ಈ ಜೋಡಿ ತಿಳಸಬೇಕಿದೆ. ಒಟ್ಟಾರೆಯಾಗಿ ಹೇಳುವುದಾದರೆ ಈ ವರ್ಷದ ಕೊನೆಯಲ್ಲಿ ಸಾಲು ಸಾಲು ಎಂಗೇಜ್ಮೆಂಟ್ ಮಾಡಿಕೊಂಡಿರುವ ನಟ ನಟಿಯರು ಮುಂದಿನ ವರ್ಷದ ಆರಂಭದಲ್ಲಿ ಮದುವೆಯಾಗುತ್ತಿದ್ದಾರೆ.

 

ಧನಂಜಯ್ ಅವರಿಗೆ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಅನುಶ್ರೀ ಡಾಲಿ ಕೊಟ್ಟ ಉತ್ತರ ನೋಡಿ ತಬ್ಬಿಬ್ಬಾದ ಅನುಶ್ರೀ.

ಮದುವೆ ಗುಟ್ಟು ಬಿಟ್ಟುಕೊಟ್ಟ ಡಾಲಿ ಧನಂಜಯ್

ಧನಂಜಯ್(Dananjay) ಅವರ ಬಹು ನಿರೀಕ್ಷಿತ ಸಿನಿಮಾ ಜಮಾಲಿಗುಡ್ಡ(JamaliGudda) ಇದೇ ತಿಂಗಳು 30ನೇ ತಾರೀಕು ಕರ್ನಾಟಕದಾದ್ಯಂತ ರಿಲೀಸ್ ಆಗುತ್ತಿದೆ. ಹಾಗಾಗಿ ಕಳೆದ ಭಾನುವಾರ ಅಂದರೆ ಕ್ರಿಸ್ಮಸ್ ಹಬ್ಬದ ದಿನ 25ನೇ ತಾರೀಕು ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಜಮಾಲಿ ಗುಡ್ಡದ ಪ್ರಮೋಷನ್ ಕಾರ್ಯವನ್ನು ಏರ್ಪಡಿಸಲಾಗಿದ್ದು. ಈ ಒಂದು ಕಾರ್ಯಕ್ರಮಕ್ಕೆ ಜಮಾಲಿ ಗುಡ್ಡ ಸಿನಿಮಾದ ನಾಯಕ ನಟರಾದಂತಹ ಡಾಲಿ ಧನಂಜಯ್ ಹಾಗೂ ನಾಯಕ ನಟಿ ಆದಂತಹ ಅತಿಥಿ ಪ್ರಭುದೇವ ಹಾಗೂ ಚಿತ್ರತಂಡಕ್ಕೆ ಸೇರಿದಂತಹ ಸಾಕಷ್ಟು ಕಲಾವಿದರು ನಿರ್ಮಾಪಕರು ಮತ್ತು ನಿರ್ದೇಶಕರು ಎಲ್ಲರೂ ಕೂಡ ಭಾಗವಹಿಸುತ್ತಾರೆ.

ಸಿನಿಮಾದ ಕುರಿತು ಒಂದಷ್ಟು ಮಾತನ್ನು ಹೇಳುತ್ತಾರೆ ಅಷ್ಟೇ ಅಲ್ಲದೆ ಧನಂಜಯ್ ಅವರು ಇಲ್ಲಿ ಒಂದು ಸಿನಿಮಾದಲ್ಲಿ ಪ್ರಯೋಗಾತ್ಮಕ ಪಾತ್ರವನ್ನು ನಿರ್ವಹಿಸಿದ್ದರಂತೆ. 90 ರ ದಶಕದಲ್ಲಿ ನಡೆಯುವಂತಹ ಕಾಲಾನುಗಟ್ಟವನ್ನು ಈ ಸಿನಿಮಾದ ಮುಖ್ಯ ಭೂಮಿಕೆಯನ್ನಾಗಿ ಇಟ್ಟುಕೊಂಡು ಸಿನಿಮಾವನ್ನು ಚಿತ್ರೀಕರಣ ಮಾಡಿದ್ದಾರಂತೆ ನಟಿ ಅದಿತಿ ಪ್ರಭುದೇವ ಅವರು ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ಧನಂಜಯ್ ಅವರ ಆರು ಸಿನಿಮಾಗಳು ಬಿಡುಗಡೆಯಾಗಿದ್ದವು ಇದೀಗ 7ನೇ ಸಿನಿಮಾ ಜಮಾಲಿಗುಡ್ಡ ಸಿನಿಮಾವಾಗಿದೆ. ಈ ವರ್ಷದ ಕೊನೆಯಲ್ಲಿ ಮೂಡಿಬರುವಂತಹ ಸಿನಿಮಾ ಹೇಗಿರಲಿದೆ ಎಂಬುದನ್ನು ನೋಡುವುದಕ್ಕೆ ಪ್ರೇಕ್ಷಕರೆಲ್ಲರೂ ಕಾತುರದಿಂದ ನಿಂತಿರುವುದು ಸತ್ಯ.

ಇನ್ನು ಸಿನಿಮಾದ ಜೊತೆ ಜೊತೆಗೆ ವೈಯಕ್ತಿಕ ಜೀವನದ ಬಗ್ಗೆಯೂ ಕೂಡ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಡಾಲಿ ಧನಂಜಯ್ ಅವರ ಆತ್ಮೀಯ ಸ್ನೇಹಿತರಾದಂತಹ ವಸಿಷ್ಟ ಸಿಂಹ ಅವರು ಕಳೆದ ತಿಂಗಳಷ್ಟೇ ತಮ್ಮ ಬಹುಕಾಲದ ಗೆಳತಿ ನಟಿ ಹರಿಪ್ರಿಯಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಇವರ ಮದುವೆ ನೆರವೇರಲಿದೆ ಸ್ನೇಹಿತನ ನಿಶ್ಚಿತಾರ್ಥ ಆಗುತ್ತಿದ್ದ ಹಾಗೆ ಎಲ್ಲೆಡೆ ಇದೀಗ ಡಾಲಿ ಅವರ ಮದುವೆ ಮಾತುಕತೆಯ ವಿಚಾರದ ಬಗ್ಗೆಯೇ ಪ್ರಸ್ತಾವನೆ ಮಾಡುತ್ತಿದ್ದಾರೆ.

ಹೌದು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಯಾರನ್ನು ಮದುವೆಯಾಗುತ್ತಿದ್ದಾರೆ ಯಾರನ್ನು ಪ್ರೀತಿಸುತ್ತಿದ್ದಾರೆ ಎಂಬ ವಿಚಾರವನ್ನು ತಿಳಿದುಕೊಳ್ಳುವಂತಹ ಕುತೂಹಲ ಸಾಕಷ್ಟ ಜನರಿಗೆ ಇರುತ್ತದೆ. ಹಾಗಾಗಿಯೇ ಆ್ಯಂಕರ್ ಅನುಶ್ರೀ(Anushree) ಅವರು ಕೂಡ ಈ ಕಾರ್ಯಕ್ರಮವನ್ನು ಮುನ್ನಡೆಸಿ ಕೊಡಬೇಕಾದರೆ ಧನಂಜಯ್ ಅವರನ್ನು ನಿಮ್ಮ ಮದುವೆ ಯಾವಾಗ ನಿಮ್ಮ ಗೆಳೆಯ ಚಿಟ್ಟೆ ಅಂದರೆ ವಸಿಷ್ಟ ಸಿಂಹ ಈಗಾಗಲೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆಯನ್ನು ಕೇಳುತ್ತಾರೆ. ಅನುಶ್ರೀ ಕೇಳಿದಂತಹ ಪ್ರಶ್ನೆಗೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಅಂತಾನೆ ಮೊದಮೊದಲು ಧನಂಜಯ್ ಅವರಿಗೆ ತಿಳಿಯುವುದಿಲ್ಲ.

ತದನಂತರ ಸ್ವಲ್ಪ ಯೋಚನೆ ಮಾಡಿ ಅನುಶ್ರೀ ಅವರು ಯಾವಾಗ ಮದುವೆ ಮಾಡಿಕೊಳ್ಳುತ್ತಾರೋ ಅದರ ನಂತರ ನಾನು ನನ್ನ ಮದುವೆ ದಿನಾಂಕವನ್ನು ಘೋಷಣೆ ಮಾಡುತ್ತೇನೆ ಎಂದು ತಕ್ಷಣ ಹೇಳಿ ಬಿಡುತ್ತಾರೆ. ಈ ಮಾತನ್ನು ಕೇಳಿದಂತಹ ಫ್ಯಾನ್ಸ್ ಮತ್ತು ಅನುಶ್ರೀ ಸಿಕ್ಕಾಪಟ್ಟೆ ನಗುತ್ತಾರೆ ತದನಂತರ ಅನುಶ್ರೀ ಹಾಗಾದರೆ ನೀವು ಇನ್ನೊಂದಷ್ಟು ವರ್ಷ ಬ್ಯಾಚುಲರ್ ಆಗಿಯೇ ಇರಬೇಕಾಗುತ್ತದೆ ಎಂದು ಹೇಳುತ್ತಾರೆ. ನಟಿ ಅನುಶ್ರೀ ಅವರು ಕೂಡ ಇನ್ನು ಮದುವೆಯಾಗದೆ ಇರುವ ವಿಚಾರ ನಿಮಗೆ ತಿಳಿದೇ ಇದೆ.

ಇವರ ಮದುವೆ ಮಾತುಕತೆಯ ಬಗ್ಗೆ ಆಗಾಗ ಚರ್ಚೆಯಾಗುತ್ತದೆ ಆದರೆ ಇವರು ತಮ್ಮ ದಂಪತ್ಯ ಜೀವನದ ಬಗ್ಗೆ ಯೋಚಿಸಿಲ್ಲ ಸದ್ಯಕ್ಕೆ ಹೊಸ ಮನೆಯನ್ನು ಕಟ್ಟುವಂತಹ ಆಸೆ ಕನಸನ್ನು ಹೊಂದಿದ್ದಾರೆ ಹಾಗಾಗಿ ಆ ಕಡೆ ಗಮನ ನೀಡುತ್ತಿದ್ದಾರೆ. ಈ ಒಂದು ಕಾರ್ಯ ಸಂಪೂರ್ಣವಾದ ನಂತರ ವೈಯಕ್ತಿಕ ಜೀವನದ ಬಗ್ಗೆ ಚಿಂತೆ ಮಾಡುವುದಾಗಿ ಇಂಟರ್ವ್ಯೂ ಒಂದರಲ್ಲಿ ಹೇಳಿಕೊಂಡಿದ್ದರು. ಹಾಗಾಗಿಯೇ ಧನಂಜಯ್ ಅವರಿಗೆ ನೀವು ಇನ್ನೊಂದಷ್ಟು ವರ್ಷ ಕಾಯಬೇಕಾಗುತ್ತದೆ ಎಂದು ಅನುಶ್ರೀ ಹೇಳಿದ್ದಾರೆ.

ದರ್ಶನ್ ಕರೆದು ಎಚ್ಚರಿಕೆ ನೀಡಿ. ಫಿಲಂ ಚೇಂಬರ್ ಗೆ ದೂರು ನೀಡುತ್ತಿರುವ ರಾಜವಂಶದ ಅಭಿಮಾನಿಗಳು, ನಾಳೆ ಬೆಂಗಳೂರಿನಲ್ಲಿ ಅಪ್ಪು ಅಭಿಮಾನಿಗಳ ಬೃಹತ್ ಸಮಾವೇಶ.

ದರ್ಶನ್ ವಿರುದ್ಧ ದೂರ ನೀಡುತ್ತಿರುವ ಅಪ್ಪು ಅಭಿಮಾನಿಗಳು

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಮೇಲೆ ಹೊಸಪೇಟೆಯಲ್ಲಿ ನಡೆದಂತಹ ಘಟನೆ ಇದೀಗ ಎಲ್ಲೆಲ್ಲೋ ಹೋಗುತ್ತಿದೆ ಹೌದು ದರ್ಶನ್ ಅವರು ಕ್ರಾಂತಿ ಸಿನಿಮಾದ ಎರಡನೇ ಹಾಡು ಆದಂತಹ ಬೊಂಬೆ ಎಂಬ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಾರೆ. ಈ ಸಮಯದಲ್ಲಿ ಈ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಬಂದಿರುತ್ತಾರೆ ಅದರಲ್ಲಿ ಕಿಡಿಗೇಡಿ ಒಬ್ಬರು ದರ್ಶನ್ ಮೇಲೆ ಚಪ್ಪಲಿಯನ್ನು ಎಸೆಯುತ್ತಾರೆ. ಆದರೆ ಈ ಒಂದು ಕೃತ್ಯವನ್ನು ಮಾಡಿರುವುದು ಅಪ್ಪು(Puneeth) ಅಭಿಮಾನಿ ಎಂಬುವುದು ದರ್ಶನ್ ಫ್ಯಾನ್ ಗಳ ವಾದವಾಗಿದೆ.

ಆದರೆ ಈ ಮಾತನ್ನು ಅಪ್ಪು ಅಭಿಮಾನಿಗಳು ಒಪ್ಪುತ್ತಿಲ್ಲ ದಿನದಿಂದ ದಿನಕ್ಕೆ ಇದರ ವಾದ ಮತ್ತು ವಿವಾದಗಳು ಹೆಚ್ಚಾಗುತ್ತದೆ ಇವೆಲ್ಲವನ್ನು ನೋಡಿದಂತಹ ಅಪ್ಪು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ರಾಜವಂಶದ ಬಗ್ಗೆ ಹಾಗೂ ಅಪ್ಪುವಿನ ಬಗ್ಗೆ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇವೆಲ್ಲವನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ದರ್ಶನ್ ಅವರು ತಮ್ಮ ಅಭಿಮಾನಿಗಳಿಗಂತು ಬುದ್ಧಿ ಹೇಳುತ್ತಿಲ್ಲ. ಹಾಗಾಗಿ ದರ್ಶನ್ ಅವರ ವಿರುದ್ಧವೇ ಇದೀಗ ನಾವು ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗಿದೆ ಎಂದು ತೀರ್ಮಾನಿಸಿದಂತಹ ಅಪ್ಪು ಅಭಿಮಾನಿಗಳು ನಾಳೆ ಅಂದರೆ 29 ನೇ ತಾರೀಕು ಬೆಂಗಳೂರಿನ ಗಾಂಧಿನಗರದಲ್ಲಿ ಇರುವಂತಹ ಚಲನಚಿತ್ರ ವಾಣಿಜ್ಯ ಮಂಡಳಿ ಫಿಲಂ ಚೇಂಬರ್ಸ್ ಗೆ ಹೋಗಿ ದರ್ಶನ್ ಅವರ ವಿರುದ್ಧ ದೂರನ್ನು ದಾಖಲಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ದರ್ಶನ್ ಅವರನ್ನು ನೀವು ಕರೆಸಿ ಅವರಿಗೆ ಬುದ್ಧಿವಾದವನ್ನು ಹೇಳಬೇಕು ಅವರ ಅಭಿಮಾನಿಗಳನ್ನು ಹದ್ದು ಬಸ್ತಿನಲ್ಲಿ ಇಡುವಂತೆ ಮನವಿ ಮಾಡಿ ಎಂದು ಅಪ್ಪು ಅಭಿಮಾನಿಗಳು ಸಮಾಲೋಚನೆ ಮಾಡಿದ್ದಾರೆ. ಹೀಗಾಗಿ ಕರ್ನಾಟಕದಾದ್ಯಂತ ಇರುವಂತಹ ಎಲ್ಲಾ ಅಪ್ಪು ಅಭಿಮಾನಿ ಬಳಗ ಹಾಗೂ ರಾಜವಂಶದ ಅಭಿಮಾನಿಗಳನ್ನು ಈ ಒಂದು ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೆ ಕರೆ ಕೊಟ್ಟಿದ್ದಾರೆ. ಇದಕ್ಕೆ ಸಾತ್ ನೀಡುವುದಕ್ಕೆ ಹಲವಾರು ಕನ್ನಡ ಪರ ಹೋರಾಟ ಸಂಘಗಳು ಕೂಡ ಮುಂದಾಗಿದೆ ಇನ್ನು ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಎರಡು ವಾರವಾದರೂ ಕೂಡ ಈ ಒಂದು ಗಲಾಟೆಗೆ ಸುಖಂತ್ಯ ಎಂಬುದೇ ದೊರೆತಿಲ್ಲ.

ದರ್ಶನ್ ಅವರು ಈ ವಿಚಾರವನ್ನು ಮರೆತು ಹೋಗಿದ್ದಾರೆ ಅಂತ ಸಾಕಷ್ಟು ಜನ ಅಂದುಕೊಂಡಿದ್ದರು ಆದರೆ ಹುಬ್ಬಳ್ಳಿಯಲ್ಲಿ ಅವರು ಪುಷ್ಪವತಿ(Pushpavathi) ಎಂಬ ಹಾಡನ್ನು ರಿಲೀಸ್ ಮಾಡಲು ಹೋದಾಗ ಶರ್ಟ್ ಕಾಲರ್ ಅನ್ನು ಮೇಲೆ ಎತ್ತಿ ನಮ್ಮನ್ನು ಉರಿದುಕೊಳ್ಳುವವರಿಗೆ ಇನ್ನಷ್ಟು ಉರಿಸೋಣ ಎಂದು ಪ್ರಚೋದನಾತ್ಮಕ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಇದನ್ನು ನೋಡಿದಂತಹ ದರ್ಶನ್ ಅಭಿಮಾನಿಗಳು ಇನ್ನಷ್ಟು ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಫ್ಯಾನ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾಗಿ ಇದರಿಂದ ಮನ ನೋಂದಂತಹ ಕೆಲವು ಅಪ್ಪು ಅಭಿಮಾನಿಗಳು ಏನಾದರೂ ಮಾಡಿ ಇದೆಲ್ಲದಕ್ಕೂ ಕೂಡ ಒಂದು ಅಂತ್ಯ ಹಡಲೇಬೇಕು ಎಂದು ನಾಳೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ನಡೆಸುತ್ತಿದ್ದಾರೆ.

ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿ ನ್ಯಾಯಾಂಗಕ್ಕೂ ಕೂಡ ಒಪ್ಪಿಸಿದ್ದಾರೆ. ಇನ್ನು ಕೆಲವು ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ ಇದೆಲ್ಲದರ ನಡುವೆ ಮತ್ತೆ ಅಪ್ಪು ಮತ್ತು ದರ್ಶನ್ ಫ್ಯಾನ್ ಗಳ ವರ್ ಮಿತಿಮೀರಿ ನಡೆಯುತ್ತಿರುವುದರಿಂದ ಇವೆಲ್ಲವುದಕ್ಕೂ ಕಡಿವಾಣ ಹಾಕುವುದಕ್ಕೆ ಫಿಲಂ ಚೇಂಬರ್ ಗೆ ಮನವಿ ಮಾಡುತ್ತಿದ್ದಾರೆ. ಫಿಲಂ ಚೇಂಬರ್ ನವರು ಯಾವ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ ಇನ್ನು ಮುಂದೆಯಾದರೂ ಫ್ಯಾನ್ ವಾರ್ ಎಂಬುದು ಕಡಿಮೆಯಾದರೆ ಸಾಕು ಎಂಬುವುದು ನಮ್ಮ ಆಶಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

 

ಶೇಕ್ ಇಟ್ ಪುಷ್ಪವತಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನಟಿ ರಚಿತ ರಾಮ್ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ನೀವು ನಿಂತಲ್ಲೇ ಹೆಜ್ಜೆ ಹಾಕ್ತೀರಾ.

ಶೇಕ್ ಇಟ್ ಪುಷ್ಪವತಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ(Kranti) ಸಿನಿಮಾ ಇದೆ ಜನವರಿ 26ನೇ ತಾರೀಕು ಕರ್ನಾಟಕದಾದ್ಯಂತ ಎಲ್ಲ ಚಿತ್ರ ಮಂದಿರದಲ್ಲಿಯೂ ಕೂಡ ಬಿಡುಗಡೆಯಾಗಲಿದೆ. ಸದ್ಯಕ್ಕೆ ನಟಿ ರಚಿತಾ ರಾಮ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಳೆದ ಒಂದು ತಿಂಗಳಿನಿಂದ ಎಲ್ಲಾ ಕಡೆ ಎಲ್ಲವೂ ಕೂಡ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡುತ್ತಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕ್ರಾಂತಿ ಸಿನಿಮಾದ ಮೊದಲ ಹಾಡು ಧರಣಿ ಸಾಂಗ್ ಅನ್ನು ಮೈಸೂರಿನ ಕೆಆರ್ ಪೇಟೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.

ಇದಾದ ನಂತರ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆ ಎಂಬ ಹಾಡನ್ನು ಹೊಸಪೇಟೆಯಲ್ಲಿ ರಿಲೀಸ್ ಮಾಡಿದರು ಇದಾದ ನಂತರ ಕ್ರಾಂತಿ ಸಿನಿಮಾದ ಮೂರನೇ ಹಾಡು ಆದಂತಹ ಪುಷ್ಪವತಿ(Pushpavathi) ಎಂಬ ಹಾಡನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಿದರು. ಈಗಾಗಲೇ ಬಿಡುಗಡೆಯಾಗಿರುವಂತಹ ಮೂರು ಸಾಂಗ್ ಗಳು ಕೂಡ ಹಿಟ್ ಆಗಿವೆ ಅದರಲ್ಲಿಯೂ ಕೂಡ ಮಾಸ್ ಮತ್ತು ಕ್ಲಾಸ್ ಲುಕ್ಕನ್ನು ಒಳಗೊಂಡಿರುವಂತಹ ಪುಷ್ಪವತಿ ಹಾಡು ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸುವಂತಿದೆ.

ಇನ್ನು ಈ ಪುಷ್ಪವತಿ ಎಂಬ ಹಾಡನ್ನು ಯೋಗರಾಜ್ ಭಟ್ ಅವರು ಬರೆದಿದ್ದು ಈ ಹಾಡಿಗೆ ವಿ ಹರಿಕೃಷ್ಣ ಅವರು ಜೀವ ತುಂಬಿದ್ದಾರೆ ಹೌದು. ಯೋಗರಾಜ್ ಭಟ್ ಮತ್ತು ಹರಿಕೃಷ್ಣ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವಂತಹ ಪುಷ್ಪವತಿ ಹಾಡು ಇದೀಗ ಎಲ್ಲರ ಮನಸ್ಸಿನಲ್ಲಿಯೂ ಕೂಡ ಗುಂಗುಟ್ಟುತ್ತಿದೆ. ಅಷ್ಟರ ಮಟ್ಟಿಗೆ ಈ ಹಾಡು ಮೂಡಿ ಮಾಡಿದೆ ಅದರಲ್ಲಿಯೂ ಕೂಡ ಅಧಿಹರಿಯದ ಹುಡುಗರು ಮತ್ತು ಹುಡುಗಿಯರು ಎಲ್ಲರೂ ಕೂಡ ಈ ಹಾಡಿಗೆ ಹೆಜ್ಜೆ ಹಾಕುತ್ತಿರುವುದನ್ನು ನೀವು ನೋಡೇ ಇದ್ದೀರಾ.

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಇನ್ಸ್ಟಾಗ್ರಾಮ್ ರೀಲ್ಸ್ ಗಳಲ್ಲಿ ದರ್ಶನ್ ಅಭಿನಯದ ಪುಪ್ಷವತಿ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ದರ್ಶನ್ ಅವರು ಈ ಹಾಡಿಗೆ ಹಾಕಿರುವಂತಹ ಹೂಕ್ ಸ್ಟೆಪ್ ಅಂತೂ ಹೇಳುವ ಹಾಗೆಯೇ ಇಲ್ಲ ಈ ಹಾಡನ್ನು ನೋಡುತ್ತಿದ್ದರೆ ಎದ್ದುನಿಂತು ಕುಣಿಯುವಂತೆ ಮಾಡುತ್ತದೆ. ಇನ್ನು ವಿಶೇಷ ಏನೆಂದರೆ ಈ ಹಾಡಿನಲ್ಲಿ ಬೇರೆ ನಟಿ ಕಾಣಿಸಿಕೊಂಡಿದ್ದು ರಚಿತಾ ರಾಮ್ ಅವರು ಮಾತ್ರ ಈ ಹಾಡಿನಿಂದ ಹೊರ ಬಿದ್ದಿದ್ದಾರೆ. ಹಾಗಾಗಿ ಈ ವಿಚಾರ ನಟಿ ರಚಿತಾ ರಾಮ್ ಅವರಿಗೂ ಕೂಡ ಬೇಸರ ತಂದಿದೆ ಎಂದು ಏಕೆಂದರೆ ಇಷ್ಟು ಸುಂದರವಾದ ಹಾಡಿನಲ್ಲಿ ನಾನಿಲ್ಲವಲ್ಲ ಎಂಬ ಕೊರಗು ಅವರಿಗೆ ಇದೆಯಂತೆ ಈ ವಿಚಾರವನ್ನು ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

ಆದರೂ ಕೂಡ ಇದೀಗ ನಟಿ ರಚಿತಾ ರಾಮ್ ಅವರು ಕ್ರಾಂತಿ ಸಿನಿಮಾದ ಪುಷ್ಪವತಿ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಈ ವಿಡಿಯೋವನ್ನು ಸ್ವತಃ ರಚಿತಾ ರಾಮ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಚ್ಚು ಅವರು ಮಾಡಿರುವ ಈ ಡ್ಯಾನ್ಸ್ ಅನ್ನು ನೋಡುವುದಕ್ಕೆ ನಿಜಕ್ಕೂ ಎರಡು ಕಣ್ಣು ಸಾಲದು ನಿಜ ಹೇಳಬೇಕೆಂದರೆ ಈ ಹಾಡಿಗೆ ದರ್ಶನ್ ಮತ್ತು ರಚಿತಾ ರಾಮ್ ಅವರೇ ಹೆಜ್ಜೆ ಹಾಕಿದ್ದರೆ ಇನ್ನೂ ಕೂಡ ಚೆನ್ನಾಗಿ ಮೂಡಿ ಬರುತ್ತಿತ್ತು ಎಂಬುವುದು ಕೆಲವು ಅಭಿಮಾನಿಗಳ ಅಭಿಪ್ರಾಯವಾಗಿದೆ.

ಅದೇನೇ ಆಗಲಿ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿ ಇರುವ ಹಾಡುಗಳ ಪೈಕಿ ಮೊದಲ ಸ್ಥಾನವನ್ನು ಪುಷ್ಪವತಿ ಹಾಡು ಗಳಿಸಿಕೊಂಡಿರುವುದು ನಿಜಕ್ಕೂ ಸಂತಸದ ವಿಚಾರವೇ. ನಟಿ ರಚಿತಾ ರಾಮ್ ಅವರು ಮಾಡಿದಂತಹ ಡಾನ್ಸ್ ಈ ಕೆಳಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಮೆಂಟ್ ಮಾಡಿ.

ವೇದ ಸಿನಿಮಾದಲ್ಲಿ ಖಡಕ್ ಪಾತ್ರದಲ್ಲಿ ನಟಿಸುವುದಕ್ಕೆ ನಟಿ ಶ್ವೇತಾ ಚಂಗಪ್ಪ ಪಡೆದ ಸಂಭಾವನೆ ಎಷ್ಟು ಗೊತ್ತಾ.?

 

ಶ್ವೇತಾ ಚಂಗಪ್ಪ ಇನ್ ವೇದ ಸಿನಿಮಾ

ನಟಿ ಶ್ವೇತಾ ಚಂಗಪ್ಪ(Shwetha Changapa) ಅವರು ಡಾ. ಶಿವರಾಜ್ ಕುಮಾರ್(Shiva Rajkumar) ಅವರ 125 ಸಿನಿಮಾ ಆದಂತಹ ವೇದ(Vedha) ಸಿನಿಮಾದಲ್ಲಿ ಪ್ರಮುಖ ಒಂದರಲ್ಲಿ ಅಭಿನಯಿಸಿದ್ದಾರೆ. ವೇದ ಸಿನಿಮಾ ಬಿಡುಗಡೆಯಾಗಿ ಒಂದು ವಾರವಾಗಿದ್ದು ಕರ್ನಾಟಕದಾದ್ಯಂತ ಅದ್ದೂರಿ ಪ್ರದರ್ಶನ ಕಾಣುತ್ತಿದೆ ವಿಶೇಷ ಏನೆಂದರೆ ಕರ್ನಾಟಕವನ್ನು ಹೊರತುಪಡಿಸಿ ಹೊರ ರಾಜ್ಯವಾದಂತಹ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿಯೂ ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಶಿವಣ್ಣ ಅವರ ಮಾಸ್ ಲುಕ್ ನೋಡಿದಂತಹ ಎಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಶ್ವೇತಾ ಚಂಗಪ್ಪ ಹಾಗೂ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಹಾಗೂ ಗಾನವಿ ಲಕ್ಷ್ಮಣ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಬಹುತೇಕರು ತಮ್ಮ ಪಾತ್ರಕ್ಕೆ ಜೀವ ತುಂಬಿ ಅದಕ್ಕೆ ಒಳ್ಳೆಯ ಬೆಲೆ ನೀಡಿದ್ದಾರೆ. ಚಿತ್ರ ಅದ್ಭುತವಾಗಿ ಮೂಡಿ ಬಂದ ಕಾರಣ ಎಲ್ಲೆಡೆ ವಿಜಯದ ಪ್ರದರ್ಶನವನ್ನು ಕಾಣುತ್ತಿದೆ. ಇನ್ನು ಶಿವರಾಜ್ ಕುಮಾರ್ ಅವರ(Shiva Rajkumar 125th Cinema) 125 ಸಿನಿಮಾ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವುದು ವಿಶೇಷ.

ಮೊದಲಿನಿಂದಲೂ ಕೂಡ ಒಂದು ನಿರ್ಮಾಣ ಸಂಸ್ಥೆಯನ್ನು ತೆರೆಯಬೇಕು ಎಂಬ ಆಸೆ ಗೀತಾ ಅವರ ಮನಸ್ಸಿನಲ್ಲಿ ಇತ್ತು ಇದಕ್ಕೆ ಸಾತ್ ನೀಡುವುದಕ್ಕೆ ಶಿವರಾಜ್ ಕುಮಾರ್ ಅವರು ಮುಂದಾಗುತ್ತಾರೆ. ಅಷ್ಟೇ ಅಲ್ಲದೆ ಗೀತಾ ಪಿಕ್ಚರ್ಸ್(Geetha Pitchers) ಬ್ಯಾನರ್ ಅಡಿಯಲ್ಲಿ ಅವರದ್ದೇ ಆದ ಸಿನಿಮಾ ಮೊದಲಿಗೆ ರಿಲೀಸ್ ಆಗಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಅದರಂತೆ ಶಿವರಾಜಕುಮಾರ್ ಅವರ 125ನೇ ಸಿನಿಮಾ ಗೀತಾ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾಗಿದೆ.

ಇನ್ನೂ ಈ ಸಿನಿಮಾದಲ್ಲಿ ಇರುವ ಶ್ವೇತಾ ಚಂಗಪ್ಪ ಅವರು ಆಂಕರಿಂಗ್ ಆಗಿ ಸದ್ಯಕ್ಕೆ ಝೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಸೂಪರ್ ಕಿಂಗ್ಸ್ ಎಂಬ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿದ್ದಾರೆ. ಆಂಕರಿಂಗ್ ಜೊತೆ ಜೊತೆಯಲ್ಲಿ ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿದ್ದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಏಕೆಂದರೆ ಶ್ವೇತ ಚಂಗಪ್ಪ ಅವರು ದರ್ಶನ್ ಅಭಿನಯದ ಸಿನಿಮಾದಲ್ಲಿ ನಟನೆ ಮಾಡಿದನ್ನು ಬಿಟ್ಟರೆ ಮತ್ಯಾವ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಮಾಸ್ ರಗಡ್ ಲುಕ್ ನಲ್ಲಿ ಅಭಿನಯ ಮಾಡುವುದರ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಇನ್ನು ನಟಿ ಶ್ವೇತಾ ಚಂಗಪ್ಪ ಅವರು ವೇದ ಸಿನಿಮಾದಲ್ಲಿ ಖಡಕ್ ಪಾತ್ರದಲ್ಲಿ ಅಭಿನಯಿಸಿದಕ್ಕೆ ಪಡೆದುಕೊಂಡಂತಹ ಸಂಭವನೆ ವೈರಲ್ ಆಗಿದೆ ಹೌದು. ನಟಿ ಶ್ವೇತಾ ಚಂಗಪ್ಪ ಅವರು ವೇದಾ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಬರೋಬ್ಬರಿ 10 ಲಕ್ಷ ರೂಪಾಯಿಗಳ ಸಂಭಾವನೆಯನ್ನು ಪಡೆದಿದ್ದಾರಂತೆ. ಇನ್ನು ಈ ವಿಚಾರ ತಿಳಿಯುತ್ತಿದ್ದ ಹಾಗೆ ನಟಿ ಶ್ವೇತ ಚಂಗಪ್ಪ ಅವರು ಅಭಿನಯಿಸಿದಂತಹ ಆ ಪಾತ್ರಕ್ಕೆ 10 ಲಕ್ಷ ಅಲ್ಲ 20 ಲಕ್ಷ ಕೊಟ್ಟರೂ ಕೂಡ ಕಡಿಮೆ ಅಂತ ಹೇಳಿದ್ದಾರೆ. ಇನ್ನು ವೇದ ಸಿನಿಮಾದ ಕ್ಲೈಮಾಕ್ಸ್ ಎಂಡ್ ಆಗುವುದಿಲ್ಲ ಬದಲಿಗೆ ವೇದ ಪಾರ್ಟ್ 2 ಸಿನಿಮಾ ಕೂಡ ಬರುತ್ತದೆ ಎಂಬುದನ್ನು ಈ ಸಿನಿಮಾದ ಸ್ವಿಕೆಯಲ್ಲಿ ನಾವು ನೋಡಬಹುದಾಗಿದೆ.

ಮುಂದಿನ ವರ್ಷ ವೇದ ಪಾರ್ಟ್ 2 ಚಿತ್ರೀಕರಣ ನಡೆಯಲ್ಲಿದ್ದು ಅಲ್ಲಿಯೂ ಕೂಡ ನಟಿ ಶ್ವೇತ ಚಂಗಪ್ಪ ಅವರು ಅಭಿನಯಿಸಿಲಿದ್ದಾರೆ ಸದ್ಯಕ್ಕೆ ನಟಿ ಶ್ವೇತಾ ಚಂಗಪ್ಪ ಅವರು ಕಿರುತರ ಜೊತೆಗೆ ಬೆಳ್ಳಿತೆರೆಯ ನಂಟು ಬೆಳೆಸಿಕೊಂಡಿದ್ದಾರೆ. ಇನ್ನಷ್ಟು ಸಿನಿಮಾದಲ್ಲಿ ಅಭಿನಯಿಸಲಿ ಉತ್ತಮ ಪಾತ್ರದಲ್ಲಿ ಕಾಣಿಸಿಕೊಳ್ಳಲಿ ಎಂಬುವುದಷ್ಟೇ ನಮ್ಮ ಆಶಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.