Home Blog Page 262

ನನಗೆ ಮಕ್ಕಳು ಬೇಕು, ಆದ್ರೆ ಮಕ್ಕಳ ತಾಯಿ ಮಾತ್ರ ಬೇಡ ವೈರಲ್ ಆಯ್ತು ನಟ ಸಲ್ಮಾನ್ ಖಾನ್ ಮಾತು.

ಹುಟ್ಟು ಹಬ್ಬದ ದಿನವೇ ವೈರಲ್ ಆಯ್ತು ನಟ ಸಲ್ಮಾನ್ ಖಾನ್ ಹೇಳಿದ ಮಾತು

ಬಾಲಿವುಡ್ ನಾ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂಬ ಹೆಸರಿಗೆ ಹೆಗ್ಗಳಿಕೆ ಪಾತ್ರರಾಗಿರುವಂತಹ ಸಲ್ಮಾನ್ ಖಾನ್(Salmankhan) ಅವರು ಇಂದು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಂದರೆ 56 ವರ್ಷಗಳನ್ನು ಸಂಪೂರ್ಣವಾಗಿ ಮುಗಿಸಿ 57ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ಬಾಲಿವುಡ್ ನ ಕಿಂಗ್ ಅಂತಾನೆ ಸಲ್ಮಾನ್ ಖಾನ್ ಹೆಸರುವಾಸಿಯಾಗಿದ್ದಾರೆ. 57 ವರ್ಷವಾದರೂ ಕೂಡ ನಟ ಸಲ್ಮಾನ್ ಖಾನ್ ಮದುವೆಯಾಗದೇ ಇರುವುದು ನಿಜಕ್ಕೂ ಕೂಡ ಅಚ್ಚರಿಯ ಸಂಗತಿ. ಏಕೆಂದರೆ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳ ಕಾಲ ನಟಿಸಿದ್ದಾರೆ ಆದರೆ ಯಾರೊಬ್ಬರೂ ಕೂಡ ಇವರ ಬಾಳ ಸಂಗಾತಿಯಾಗಿ ಬಂದಿಲ್ಲ ಎಂಬುದೇ ವಿಷದ.

ಇವರಿಗೆ ಬಾಳ ಸಂಗಾತಿಯಾಗಿ ಬರದೇ ಇದ್ದರೂ ಕೂಡ ಸಲ್ಮಾನ್ ಖಾನ್ ಡೇಟಿಂಗ್ ಮಾಡಿರುವಂತಹ ನಟಿಯರ ಲಿಸ್ಟ್ ಏನೂ ಕಡಿಮೆ ಇಲ್ಲ ಹೌದು ಸಲ್ಮಾನ್ ಖಾನ್ ಅವರು ಬಾಲಿವುಡ್ ನ ಎಲ್ಲಾ ನಟಿಯರ ಜೊತೆಯೂ ಕೂಡ ಡೇಟಿಂಗ್ ಮಾಡಿದ್ದಾರೆ ಎಂಬ ವಿಚಾರ ನಿಮಗೆ ತಿಳಿದೇ ಇದೆ. ಆದರೆ ಯಾವ ನಟಿಯು ಕೂಡ ಇವರನ್ನು ಮದುವೆಯಾಗಲೇ ಇಲ್ಲ ಇನ್ನು ಮದುವೆಯ ಬಗ್ಗೆ ಹಾಗೂ ಅವರ ಜೀವನದ ಬಗ್ಗೆ ಒಂದಷ್ಟು ಪ್ರಶ್ನೆಯನ್ನು ಸಂದರ್ಶನದಲ್ಲಿ ಕಳೆದ ಬಾರಿ ಕೇಳಲಾಯಿತು.

ಆ ಸಮಯದಲ್ಲಿ ಸಲ್ಮಾನ್ ಖಾನ್ ಅವರು ಹೇಳಿದಂತಹ ಹೇಳಿಕೆಯೊಂದು ಇದೀಗ ವೈರಲ್ ಆಗಿದೆ ಹೌದು. 2019 ರಲ್ಲಿ ನಡೆದಂತಹ ಸಂದರ್ಶನ ಒಂದರಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಒಂದಷ್ಟು ವಿಚಾರವನ್ನು ಹಂಚಿಕೊಂಡಿದ್ದರು. ಆ ವಿಚಾರ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಹೇಳಿದಾದರೂ ಏನು ಎಂಬುದನ್ನು ನೋಡುವುದಾದರೆ. “ನನಗೆ ಮಕ್ಕಳು ಬೇಕು, ಮಕ್ಕಳು ಅಂದರೆ ಬಹಳಾನೇ ಪ್ರೀತಿ ಅವರನ್ನು ಸಾಕುವುದು ಅವರ ಲಾಲನೆ ಪಾಲನೆ ಪೋಷಣೆ ಮಾಡುವುದು ಎಂದರೆ ನನಗೆ ಬಹಳ ಇಷ್ಟ. ಆದರೆ ಮಕ್ಕಳ ತಾಯಿ ಮಾತ್ರ ನನಗೆ ಬೇಡ. ಮಕ್ಕಳಿಗೆ ತಾಯಿಯ ಅವಶ್ಯಕತೆ ಇದ್ದೇ ಇರುತ್ತದೆ ಈ ಕಾರಣಕ್ಕಾಗಿ ನಾನು ಮದುವೆಯಾಗಿಲ್ಲ ಎಂದು ಹೇಳಿದ್ದಾರೆ”.

ಅಷ್ಟೇ ಅಲ್ಲದೆ ಮಕ್ಕಳು ನನ್ನ ಜೊತೆ ಬಂದರು ಆಕೆಯ ತಾಯಿ ಬರಬಾರದು ಆ ಮಗುವನ್ನು ನೋಡಿಕೊಳ್ಳುವುದಕ್ಕೆ ನನ್ನ ಕುಟುಂಬಸ್ಥರಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಜಗತ್ತಿನಲ್ಲಿ ಯಾರು ತಾನೆ ಇದಕ್ಕೆ ಒಪ್ಪಿಕೊಳ್ಳುತ್ತಾರೆ ಹೇಳಿ ಮಕ್ಕಳನ್ನು ಬಿಟ್ಟು ತಾಯಿ ಎಂದಿಗೂ ಕೂಡ ಇರಲಾರಲು ಈ ಕಾರಣಕ್ಕಾಗಿ ನಟ ಸಲ್ಮಾನ್ ಖಾನ್ ಅವರ ಆಸೆ ಆಸೆಯಾಗೆ ಉಳಿದಿದೆ. ಸದ್ಯಕ್ಕೆ ನಟ ಸಲ್ಮಾನ್ ಖಾನ್ ಅವರು ಮಾತನಾಡಿದಂತಹ ವಿಡಿಯೋ ಇಂದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಇನ್ನು ನೆನ್ನೆ ರಾತ್ರಿಯೆಯಿಂದ ಸಲ್ಮಾನ್ ಖಾನ್ ಅವರ ಮನೆ ಮುಂದೆ ಸಾವಿರಾರು ಅಭಿಮಾನಿಗಳು ನೆರೆದಿದ್ದರೆ.

ವಿಶೇಷ ಏನೆಂದರೆ ಈ ಬಾರಿ ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬಕ್ಕೆ ಅವರ ಆತ್ಮೀಯ ಸ್ನೇಹಿತರಾದಂತಹ ಶಾರುಖ್ ಖಾನ್ ಅವರು ಕೂಡ ಆಗಮಿಸಿದ್ದಾರೆ. ಸ್ನೇಹಿತನಿಗೆ ಶುಭಾಶಯಗಳು ಸಲ್ಲಿಸಿ, ಕೆಕ್ ತಿಳಿಸುವಂತಹ ಫೋಟೋಸ್ಗಳು ವೈರಲ್ ಆಗಿದೆ. 57ನೇ ವಸಂತಕ್ಕೆ ಕಾಲಿಟ್ಟಿರುವ ನಟ ಸಲ್ಮಾನ್ ಖಾನ್ ಈ ಬಾರಿಯಾದರೂ ಕೂಡ ಒಂದೊಳ್ಳೆ ಹುಡುಗಿಯನ್ನು ನೋಡಿ ಮದುವೆಯಾಗಲಿ ಎಂಬುವುದು ಅವರ ಸಾಕಷ್ಟು ಅಭಿಮಾನಿಗಳ ಆಶಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಡಾಲಿ ಮಾತನಾಡುತ್ತಿರುವಾಗ ಡಿ ಬಾಸ್, ಡಿ ಬಾಸ್ ಎಂದು ಚೀರಾಡಿದ ಅಭಿಮಾನಿಗಳು ಇದನ್ನು ಕೇಳಿದಂತಹ ನಟ ಧನಂಜಯ್ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ ಆಗುತ್ತೆ

ಡಾಲಿ ಮಾತು ಕೇಳಿ ಶಾ-ಕ್ ಆದ ಅಭಿಮಾನಿಗಳು

 

ನಟ ಡಾಲಿ ಧನಂಜಯ್(Dali Dananjay) ಅಭಿನಯದ ಜಮಾಲಿಗುಡ್ಡ(Jamaligudda) ಸಿನಿಮಾ ಇದೇ ತಿಂಗಳ 30ನೇ ತಾರೀಕು ಕರ್ನಾಟಕದ ಅತ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಕೂಡ ತೆರೆ ಕಾಣಲಿದೆ ಸದ್ಯಕ್ಕೆ ಧನಂಜಯ್ ಅವರು ಈ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ ಅವರು ನಟಿಸಿದ್ದು ರುಕ್ಮಿಣಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧನಂಜಯ್ ಅವರು ಈ ವರ್ಷ ಸಾಲು ಸಾಲು ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ.

ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿವೆ ಹಾಗಾಗಿ ವರ್ಷದ ಕೊನೆಯಲ್ಲಿ ತೆರೆ ಕಾಣಲಿರುವ ಜಮಾಲಿಗುಡ್ಡ ಸಿನಿಮಾ ಕೂಡ ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಅಂತಾನೆ ಹೇಳಬಹುದು. ಇನ್ನು ಕಳೆದ ಒಂದು ತಿಂಗಳಿನಿಂದ ಜಮಾಲಿಗುಡ್ಡ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಭಾಗಿಯಾಗಿರುವಂತಹ ಧನಂಜಯ ಅವರು ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆದಂತಹ ಇವೆಂಟ್ ಒಂದರಲ್ಲಿ ಪಾಲ್ಗೊಂಡಿದ್ದಾರೆ.

ಈ ಸಮಯದಲ್ಲಿ ಜಮಾಲಿ ಗುಡ್ಡದ ಕಥೆಯ ಬಗ್ಗೆ ಹಾಗೂ ಈ ಸಿನಿಮಾದಲ್ಲಿ ಇರುವಂತಹ ವಿಶೇಷ ಪಾತ್ರಗಳ ಬಗ್ಗೆ ಮಾತನಾಡುತ್ತಿರುವಾಗ ಅಲ್ಲಿ ನೆರದಿದ್ದಂತಹ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಜೋರಾಗಿ ಚಿರಚಾಡಿದ್ದಾರೆ. ಧನಂಜಯ್ ಅವರಿಗೆ ಮಾತನಾಡುವುದಕ್ಕೂ ಕೂಡ ಅವಕಾಶ ಕೊಟ್ಟಿಲ್ಲ ಇದನ್ನು ಕೇಳಿಸಿಕೊಂಡಂತಹ ಧನಂಜಯ ಅವರು ದರ್ಶನ್ ಅಭಿಮಾನಿಗಳಿಗೆ ಹೇಳಿದ್ದೇನು ಎಂಬುದನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.

ಧನಂಜಯ್ ಮಾತನಾಡುತ್ತಿರುವಂತಹ ಸಂದರ್ಭದಲ್ಲಿ ಡಿ ಬಾಸ್ ಡಿ ಬಾಸ್ ದರ್ಶನ್ ಎಂದು ಕೂಗುತ್ತಿದ್ದಂತಹ ಅಭಿಮಾನಿಗಳ ಮಾತನ್ನು ಕೇಳಿದಂತಹ ಧನಂಜಯ್ ಇನ್ನೂ ಜೋರಾಗಿ ಕಿರಿಕಿ ಇನ್ನೂ ಜೋರಾಗಿ ಡಿ ಬಾಸ್ ಎಂದು ಘೋಷಣೆ ಕೂಗಿ. ಕೇವಲ ಅವರೊಬ್ಬರ ಹೆಸರನ್ನು ಮಾತ್ರವಲ್ಲದೆ ಕನ್ನಡ ಸಿನಿಮಾ ರಂಗದಲ್ಲಿ ಇರುವಂತಹ ಎಲ್ಲಾ ಕಲಾವಿದರ ಹೆಸರನ್ನು ಕೂಗಿ. ನಾವು ಯಾರನ್ನೆಲ್ಲ ನೋಡಿ ಬೆಳೆದಿದ್ದೆವು ಯಾರನ್ನೆಲ್ಲ ನೋಡಿ ಕಲಿತಿದ್ದೆವೋ ಅವರ ಹೆಸರನ್ನೆಲ್ಲ ಜೋರಾಗಿ ಕೂಗಿ ಚಿತ್ರರಂಗ ಇನ್ನು ದೊಡ್ಡದಾಗಿ ಬೆಳೆಯಲಿ ಚಿತ್ರರಂಗದಲ್ಲಿ ಇರುವಂತಹ ಎಲ್ಲಾ ಕುಟುಂಬಸ್ಥರು ಕೂಡ ಒಂದಾಗಲಿ ಎಂದು ಧನಂಜಯ್ ಅವರು ಪ್ರತಿಕ್ರಿಯಿಸಿದ್ದಾರೆ.

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಧನಂಜಯ್ ಅವರು ಮಾತನಾಡಿದಂತಹ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಧನಂಜಯ್ ಅವರು ಪ್ರತಿಕ್ರಿಯಿಸಿದ ಬಗೆಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಸಾಮಾನ್ಯವಾಗಿ ಒಬ್ಬ ಕಲಾವಿದ ಅಥವಾ ಒಬ್ಬ ನಟ ಮಾತನಾಡುವಂತಹ ಸಮಯದಲ್ಲಿ ಬೇರೊಬ್ಬ ನಟನ ಹೆಸರನ್ನು ಹೇಳಿದರೆ ಆತನಿಗೆ ಮುಜುಗರವಾಗಬಹುದು. ಅಷ್ಟೇ ಅಲ್ಲದೆ ತಾನು ಏನನ್ನು ಹೇಳಲು ಹೊರಟಿದ್ದಾನೋ ಅದನ್ನು ಹೇಳದೆ ಇರಬಹುದು ಇದರಿಂದ ಬೇಸರವೂ ಕೂಡ ಉಂಟಾಗಬಹುದು.

ಆದರೆ ಧನಂಜಯ್ ಅವರು ಮಾತ್ರ ತಾಳ್ಮೆಯನ್ನು ಕಳೆದುಕೊಳ್ಳದೆ ಅಭಿಮಾನಿಗಳೊಟ್ಟಿಗೆ ಸೇರಿ ಅವರದ್ದೇ ದಾರಿಯಲ್ಲಿ ಅವರಿಗೆ ಬುದ್ಧಿಯನ್ನು ಕಲಿಸಿದ್ದಾರೆ. ಹೌದು ಕಳೆದ ಒಂದು ವಾರದಿಂದ ಎಲ್ಲೇ ನೋಡಿದರೂ ಕೂಡ ದರ್ಶನ್ ಅಭಿಮಾನಿಗಳದ್ದೆ ಕಾರುಬಾರು. ಅದರಲ್ಲಿಯೂ ಕೂಡ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆತ ಬಿದ್ದ ಮೇಲಂತೂ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ ಅಂತ ಹೇಳಬಹುದು. ಅದೇನೇ ಆಗಲಿ ಅವರವರ ಫ್ಯಾನ್ಸ್ ಅವರವರಿಗೆ ಹೆಚ್ಚು ಸದ್ಯಕ್ಕೆ ನಟ ಧನಂಜಯ್ ಅವರು ಪ್ರತಿಕ್ರಿಯಿಸಿದ ಪರಿ ಮಾತ್ರ ಅದ್ಭುತವಾಗಿದೆ. ನೀವು ಕೂಡ ಧನಂಜಯ್ ಮಾತನಾಡಿದಂತಹ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ.

AnilKumble: ಇಂಗ್ಲೀಷ್ ಜಾಹೀರಾತಿನಲ್ಲಿ ಬಾಲಿವುಡ್ ಹಾಡು ಬೇಡ ಕನ್ನಡದ ಹಾಡು ಹೇಳುತ್ತೇನೆ ಎಂದು ಶಂಕರ್ ನಾಗ್ ಅಭಿನಯದ ಹಾಡು ಹೇಳಿ ಕನ್ನಡಿಗರ ಮನಸ್ಸನ್ನು ಗೆದ್ದ ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ ಕನ್ನಾಡಭಿಮಾನ

ಅನಿಲ್ ಕುಂಬ್ಳೆ (Anil Kumble) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಒಂದು ಕಾಲದಲ್ಲಿ ಕ್ರಿಕೆಟ್(Cricket) ಜಗತ್ತನ್ನು ಆಳುತ್ತಿದ್ದ ವ್ಯಕ್ತಿ ಸದ್ಯಕ್ಕೆ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ಕೋಚ್ ಆಗಿದ್ದಾರೆ. ವಿಶೇಷ ಏನೆಂದರೆ ಅನಿಲ್ ಕುಂಬ್ಳೆ ಕೂಡ ನಮ್ಮ ಕರ್ನಾಟಕದವರೇ ಸಾಮಾನ್ಯವಾಗಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಕೆಲವು ವ್ಯಕ್ತಿಗಳು ಕರ್ನಾಟಕವನ್ನು ತೊರೆದು ಮುಂಬೈ ಅಥವಾ ದೆಹಲಿಯಂತಹ ದೊಡ್ಡ ದೊಡ್ಡ ನಗರ ಪಟ್ಟಣಗಳಲ್ಲಿ ವಾಸ ಮಾಡುತ್ತಾರೆ ಕನ್ನಡ ಮರೆತೆ ಅಲ್ಲೆ ಸೆಟಲ್ ಆಗಿ ಬಿಡುತ್ತಾರೆ. ಆದರೆ ಅನಿಲ್ ಕುಂಬ್ಳೆ ಅವರು ಮಾತ್ರ ತಾವು ಹುಟ್ಟಿ ಬೆಳೆದ ನಾಡನ್ನು ಎಂದಿಗೂ ಕೂಡ ಮರೆತಿಲ್ಲ ಹಾಗೂ ಮರೆಯುವುದಿಲ್ಲ ಎಂಬುದಕ್ಕೆ ಇದೀಗ ಮತ್ತೊಂದು ಸಾಕ್ಷಿ ದೊರೆತಿದೆ.

ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಅನಿಲ್ ಕುಂಬ್ಳೆ ಖ್ಯಾತ ಕ್ರಿಕೆಟಿಗರ್ ಸ್ಪಿನ್ನರ್ ಬ್ಯಾಟ್ಸ್ಮನ್ ಕೂಡ ಹೌದು ಕಳೆದ ಎರಡು ದಶಕಗಳ ಕಾಲ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದರು. ಸದ್ಯಕ್ಕೆ ಕೋಚ್ ಆಗಿ ಈಗಲೂ ಕೂಡ ಕ್ರಿಕೆಟ್ ಸೇವೆಯನ್ನು ಮುಂದುವರಿಸಿದ್ದಾರೆ. ಇನ್ನು ಅನಿಲ್ ಕುಂಬ್ಳೆ ಅವರಿಗೆ ಕನ್ನಡ ಅಭಿಮಾನ ಹಾಗೂ ಕನ್ನಡ ಹಾಡುಗಳ ಮೇಲೆ ಇರುವ ಅಭಿಮಾನ ನಿಮಗೆ ತಿಳಿದೇ ಇದೆ. ಏಕೆಂದರೆ ಕಳೆದ ವರ್ಷ ಸರಿಗಮಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಅನಿಲ್ ಕುಂಬ್ಳೆ ಅವರು ವೇದಿಕೆಯ ಮೇಲೆ ಡಾ. ವಿಷ್ಣುವರ್ಧನ್ ಹಾಗೂ ಭಾರತಿ ಅಭಿನಯದ “ಮಾಮರವೆಲ್ಲೋ ಕೋಗಿಲೆ ಅಲ್ಲೇ” ಎಂಬ ಹಾಡನ್ನು ಹೇಡಿ ಎಲ್ಲರನ್ನೂ ಕೂಡ ರಂಜಿಸಿದರು.

ಅಷ್ಟೇ ಅಲ್ಲದೆ ಕಿಚ್ಚ ಸುದೀಪ್ ಅವರ ಜೊತೆಗೆ ಬಹಳ ಆತ್ಮೀಯ ಒಡನಾಟವನ್ನು ಹೊಂದಿರುವಂತಹ ಅನಿಲ್ ಕುಂಬ್ಳೆ ಅವರು ಆಗಾಗ ಗೆಟ್ ಗೆದರು ಪಾರ್ಟಿ ಹಾಗೂ ಇನ್ನಿತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಅಲ್ಲಿ ಕನ್ನಡ ಹಾಡುಗಳನ್ನು ಹಾಡುವ ಮೂಲಕ ತಮ್ಮ ಭಾಷಾಭಿಮಾನವನ್ನು ತೋರ್ಪಡಿಸುತ್ತಾರೆ. ಸದ್ಯಕ್ಕೆ ಈಗ ಮತ್ತೊಮ್ಮೆ ನಮಗೆ ಕನ್ನಡ ಅಭಿಮಾನ ಎಷ್ಟು ಇದೆ ಎಂಬುದನ್ನು ಅನಿಲ್ ಕುಂಬ್ಳೆ ಅವರು ತೋರಿಸಿದ್ದಾರೆ. ಹೌದು ಪ್ರತಿಷ್ಠಿತ ಇಂಗ್ಲಿಷ್ ಜಾಹೀರಾತು ಒಂದರಲ್ಲಿ ಅನಿಲ್ ಕುಂಬ್ಳೆ ಅವರು ಅಭಿನಯಿಸಿದ್ದಾರೆ. ಈ ಒಂದು ಜಾಹೀರಾತಿನಲ್ಲಿ 80ರ ದಶಕದ ಕಾಸ್ಟ್ಯೂಮ್ ಅನ್ನು ಧರಿಸಿ ಹಿಂದಿ ಹಾಡನ್ನು ಹೇಳಬೇಕು ಎಂದು ನಿರ್ಮಾಪಕರು ಹೇಳುತ್ತಾರೆ.

ಆಗ ಅನಿಲ್ ಕುಂಬ್ಳೆ ”ನೀವು ನನಗೆ 80ರ ದಶಕದ ಹೀರೋನಂತೆ ಕಾಸ್ಟ್ಯೂಮ್‌ ಹಾಕಲು ಹೇಳಿ ಬಾಲಿವುಡ್‌ ಹಾಡಲು ಹೇಳುತ್ತಿದ್ದೀರಿ. ಬಾಲಿವುಡ್‌ ಬೇಡ, 80ರ ಫೇಮಸ್‌ ಕನ್ನಡ ಹಾಡನ್ನು ಹಾಡುತ್ತೇನೆ” ಎಂದು ಡೈಲಾಗ್‌ ಆರಂಭಿಸುವ ಕುಂಬ್ಳೆ, ಕರಾಟೆ ಕಿಂಗ್‌ ಶಂಕರ್‌ನಾಗ್‌ ಅಭಿನಯದ ‘ಗೀತಾ’ ಚಿತ್ರದ ಸಂತೋಷಕ್ಕೆ ಹಾಡು ಸಂತೋಷಕ್ಕೆ ಕುಣಿದು , ತಾಳಕ್ಕೆ ಕುಣಿದು ಎಂದು ಚಿಟಿಕೆ ಹಾಕುತ್ತಾ ಹಾಡು ಹೇಳುವ ಮೂಲಕ ಆಪ್‌ ಕುರಿತು ಮಾತನಾಡುತ್ತಾರೆ. ಸದ್ಯಕ್ಕೆ ಅನಿಲ್ ಕುಂಬ್ಳೆ ಅವರು ಜಾಹೀರಾತಿನಲ್ಲಿ ಕನ್ನಡ ಹಾಡನ್ನು ಹೇಳಿರುವಂತಹ ವಿಡಿಯೋ ಕ್ಲಿಪ್ ವೈರಲ್ ಆಗಿದ್ದು ನೋಡುಗರನ್ನು ಗಮನ ಸೆಳೆದಿದೆ.

ಅಷ್ಟೇ ಅಲ್ಲದೆ ಅನಿಲ್ ಕುಂಬಳೆ ಅವರ ಮೇಲೆ ಇದ್ದಂತಹ ಒಲವು ಗೌರವ ಪ್ರೀತಿ ಇನ್ನಷ್ಟು ಹೆಚ್ಚಾಗಿದೆ. ವಿಶ್ವನಾಥನ್‌ ಆನಂದ್‌ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು ಬಹಳ ವೈರಲ್‌ ಆಗುತ್ತಿದೆ. ”ಅನಿಲ್‌ ಕುಂಬ್ಳೆ, ನೀವು ಮತ್ತೆ ಮತ್ತೆ ಕನ್ನಡ ಪ್ರೀತಿಯನ್ನು ತೋರುತ್ತಲೇ ಇದ್ದೀರಿ. ಎಷ್ಟು ಸಾರಿ ಅಂತ ನಮ್ಮ ಹೃದಯ ಕದಿಯುತ್ತೀರಿ” ಎಂದು ಕ್ರೀಡಾಭಿಮಾನಿಗಳು, ಸಿನಿಪ್ರಿಯರು ಕಮೆಂಟ್ಸ್‌ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ನಿಮಗೋಸ್ಕರ ಸಿಗರೇಟ್ ಸೇದಿದ್ದಿನಿ, ಅದಕ್ಕದ್ರೂ ಸಿನಿಮಾ ನೋಡ್ರೋ ಎಂದು ಮನವಿ ಮಾಡಿದ ನಟಿ ಅದಿತಿ ಪ್ರಭುದೇವ.

ಜಮಾಲಿಗುಡ್ಡ

ನಟಿ ಪ್ರಭುದೇವ(Adithiprabhideva) ಹಾಗೂ ಡಾಲಿ ಧನಂಜಯ್(Dananjay) ಅಭಿನಯದ ಜಮಾಲಿ ಗುಡ್ಡ(Jamaligudda) ಇದೆ ತಿಂಗಳ ಡಿಸೆಂಬರ್ 30 ರಂದು ಕರ್ನಾಟಕದಾದ್ಯಂತ ಎಲ್ಲಾ ಚಿತ್ರಮಂದಿರದಲ್ಲೂ ಕೂಡ ಪ್ರದರ್ಶನ ಕಾಣಲಿದೆ. ಸದ್ಯಕ್ಕೆ ಅದಿತಿ ಪ್ರಭುದೇವ ಹಾಗೂ ಧನಂಜಯ್ ಇಬ್ಬರು ಕೂಡ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಳೆದ ಒಂದು ವಾರದಿಂದಲೂ ಕೂಡ ಎಲ್ಲಾ ಕಡೆ ಭರ್ಜರಿ ವಿಚಾರ ಮಾಡುತ್ತಿದ್ದಾರೆ ಇನ್ನು ಅದಿತಿ ಪ್ರಭುದೇವ ಅವರು ಕಳೆದ ತಿಂಗಳಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆಯಾದ ಹೊಸದರಲ್ಲಿಯೂ ಕೂಡ ತಮ್ಮ ಕುಟುಂಬಕ್ಕೆ ಸಮಯ ನೀಡದೇ ಇದೀಗ ಸಿನಿಮಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಅಂತಾನೆ ಹೇಳಬಹುದು. ಇನ್ನು ಸಿನಿಮಾದ ಬಗ್ಗೆ ಹೇಳುವುದಾದರೆ ನಟಿ ಅದಿತಿ ಪ್ರಭುದೇವ ಅವರು ಜಮಾಲಿ ಗುಡ್ಡ ಸಿನಿಮಾದಲ್ಲಿ ರುಕ್ಮಿಣಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾಮಾಲಿ ಗುಡ್ಡ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಅವರು ಕೃಷ್ಣ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಿತಿ ಪ್ರಭುದೇವ ಅವರಿಗೆ ಇದೊಂದು ವಿಭಿನ್ನ ಪಾತ್ರವಂತೆ ಎಂದು ನೀವು ಅದಿತಿ ಪ್ರಭುದೇವ ಅವರನ್ನು ಈ ರೀತಿ ನೋಡಿರುವುದಕ್ಕೆ ಸಾಧ್ಯನೇ ಇಲ್ಲ.

ಇದರ ಬಗ್ಗೆ ಅದಿತಿ ಪ್ರಭುದೇವ ಅವರ ಪ್ರೆಸ್ ಮೀಟ್ ನಲ್ಲಿ ಹೇಳಿಕೊಂಡಿದ್ದಾರೆ ಇನ್ನು ಜಮಾಲಿ ಗುಡ್ಡ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಎಲ್ಲರಿಂದಲೂ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. ಡಾಲಿ ಧನಂಜಯ್ ಅವರು ಈ ವರ್ಷ ಸುಮಾರು ಏಳರಿಂದ ಎಂಟು ಸಿನಿಮಾದಲ್ಲಿ ನಟಿಸಿದ್ದು ಎಲ್ಲಾ ಸಿನಿಮಾಗಳು ಬಿಡುಗಡೆಯಾಗಿದ್ದು ಉತ್ತಮ ರೀತಿಯಲ್ಲಿ ಪ್ರದರ್ಶನ ಕಂಡಿದೆ. ಹಾಗಾಗಿ ಈ ಸಿನಿಮಾದ ಮೇಲೆಯೂ ಕೂಡ ಬಹಳಷ್ಟು ನೀರಿಕ್ಷೆಯನ್ನು ಇಟ್ಟುಕೊಂಡಿದ್ದಾರೆ ಪ್ರೇಕ್ಷಕರು ಈ ಸಿನಿಮಾವನ್ನು ಯಾವ ರೀತಿ ಕೈಗೆತ್ತಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಚಾರದ ನಡುವೆಯೇ ನಟಿ ಅದಿತಿ ಪ್ರಭುದೇವ ಅವರು ಹೇಳಿದ ಮಾತೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ ಅಭಿಮಾನಿಗಳನ್ನು ಕುರಿತು ಮಾತನಾಡುತ್ತಿರುವಾಗ ನಟಿ ಅದಿತಿ ಪ್ರಭುದೇವ ಅವರು ಈ ಸಿನಿಮಾವನ್ನು ನೀವು ತಪ್ಪದೆ ನೋಡಲೇಬೇಕು ಏಕೆಂದರೆ ನಿಮಗಾಗಿ ಈ ಸಿನಿಮಾದಲ್ಲಿ ನಾನು ಸಿಗರೇಟ್ ಸೇದಿದ್ದೇನೆ ಎಂಬ ಹೇಳಿಕೆ ಒಂದನ್ನು ಕೊಟ್ಟಿದ್ದಾರೆ. ಈವರೆಗೂ ಕೂಡ ನಾನು ಒಂದು ಬಾರಿಯೂ ಸಿಗರೇಟ್ ಅನ್ನು ಕೈಯಲ್ಲಿ ಮುಟ್ಟಿಲ್ಲ. ಆದರೆ ಪಾತ್ರಕ್ಕಾಗಿ ಸಿಗರೇಟ್ ಅನ್ನು ಸೇದಿದ್ದೇನೆ ಇದು ನನ್ನ ಜೀವನದಲ್ಲಿ ಮೊದಲ ಬಾರಿಗೆ ಮಾಡಿದಂತಹ ಪ್ರಯೋಗ ಇದಕ್ಕೋಸ್ಕರನಾದರೂ ಕೂಡ ನೀವು ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡಲೇಬೇಕು ಎಂದು ಅದಿತಿ ಪ್ರಭುದೇವ ಅವರು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಸದ್ಯಕ್ಕೆ ನಟಿ ಅದಿತಿ ಪ್ರಭುದೇವ ಮಾತನಾಡಿದಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಟಿಸಬೇಕಾದರೆ ಹಲವಾರು ರೀತಿಯಾದಂತಹ ಪಾತ್ರಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಯಾವುದೇ ರೀತಿಯಾದಂತಹ ಸನ್ನಿವೇಶ ಬಂದರು ಅದಕ್ಕೆ ನಾವು ಬದ್ಧರಾಗಿರಬೇಕಾಗುತ್ತದೆ ಹಾಗಾಗಿ ನಟಿ ಅದಿತಿ ಪ್ರಭುದೇವ್ ಅವರು ಕೂಡ ತಮ್ಮ ಬದುಕಿನ ಆದರ್ಶಗಳನ್ನು ಬದಿಗಿಟ್ಟು ಸಿನಿಮಾಗಾಗಿ ಇಂತಹದೊಂದು ಮಹತ್ತರವಾದಂತಹ ಪಾತ್ರದಲ್ಲಿ ಅಭಿನಯಿಸುವುದಕ್ಕೆ ಒಪ್ಪಿಕೊಂಡಿದ್ದು ನಿಜಕ್ಕೂ ಆಚರಿಯ ವಿಚಾರವೇ.

ಏಕೆಂದರೆ ಕೆಲವೇ ನಟ ನಟಿಯರು ತಮ್ಮ ಆದರ್ಶದ ವಿರುದ್ಧ ನಡೆದುಕೊಳ್ಳುವುದಿಲ್ಲ ಹಾಗೂ ತಮ್ಮ ಭಾವನೆಗೆ ಧಕ್ಕೆ ತರುವಂತಹ ಪಾತ್ರಗಳಲ್ಲಿಯೂ ಕೂಡ ನಟಿಸುವುದಿಲ್ಲ ಆದರೆ ಇವೆಲ್ಲವನ್ನು ಮೆಟ್ಟು ನಿಂತು ನಟಿ ಅದಿತಿ ಪ್ರಭುದೇವ ಅವರ ಹೊಸದೊಂದು ಪ್ರಯೋಗ ಮಾಡಿದ್ದು ನಿಜಕ್ಕೂ ಖುಷಿ ತರುವ ವಿಚಾರವೇ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಒಂದೇ ವರ್ಷದಲ್ಲಿ 15ಕ್ಕೂ ಹೆಚ್ಚು ಸಿನಿಮಾ ಬಿಡುಗಡೆ ಮಾಡಿ ದಾಖಲೆ ನಿರ್ಮಿಸಿದ್ದ ನಟ ಯಾರು ಗೊತ್ತಾ.?

ಒಂದೇ ವರ್ಷಕ್ಕೆ ಬರೊಬ್ಬರಿ 15 ಸಿನಿಮಾ ರಿಲೀಸ್ ಮಾಡಿದ ನಾಯಕ ನಟ

ಕನ್ನಡ ಚಲನಚಿತ್ರ ರಂಗದಲ್ಲಿ ಹಾಗೂ ಕರ್ನಾಟಕದ ಜನರ ಮನದಲ್ಲಿ ಇಂದು ಅವರು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದಿದ್ದರೂ ಶಾಶ್ವತವಾಗಿ ಸ್ಥಾನವನ್ನು ಗಿಟ್ಟಿಸಿಕೊಂಡಿರುವಂತ ಒಬ್ಬ ಮಹಾನ್ ನಟ ಇದ್ದಾರೆ. ಶಂಕರ್ ನಾಗ್(Shankar Nag) ಅವರ ಆ ಅದ್ಭುತ ಪ್ರತಿಭೆ ಬಗ್ಗೆ ಎಷ್ಟು ಹೇಳಿದರು ಕೂಡ ಕಡಿಮೆಯೇ. ಕಡಿಮೆ ಕಾಲ ಕನ್ನಡ ಕಲಾ ದೇವಿಯ ಸೇವೆ ಮಾಡುವ ಅವಕಾಶ ಸಿಕ್ಕಿದರೂ ಕೂಡ ಇಂದಿಗೂ ಅವರನ್ನೇ ಫೇವರೆಟ್ ಹೀರೋ ಅನ್ನುವಷ್ಟು ಅವರನ್ನೇ ನೆನೆಯುವಷ್ಟು ಅಪಾರ ಕೊಡುಗೆ ಸಲ್ಲಿಸಿ ಹೋಗಿದ್ದಾರೆ.

ಇವರ ಹತ್ತಿರದ ಎಲ್ಲರೂ ಸಹ ಇವರನ್ನು ಪಾದರಸ ಎಂದೇ ಕರೆಯುತ್ತಿದ್ದರು ಆ ರೀತಿ ಸದಾ ಚಟುವಟಿಕೆಯಿಂದ ಕೂಡಿದ ಚೇತನವಾಗಿದ್ದ ಶಂಕರ್ ನಾಗ್ ಅವರು ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಮಾತ್ರವಲ್ಲದೆ ಕರ್ನಾಟಕವನ್ನು ಎಲ್ಲಾ ರೀತಿಯಲ್ಲಿಯೂ ಏಳಿಗೆ ಮಾಡಬೇಕು ಎಂದು ಕನಸು ಕಂಡಿದ್ದ ಒಬ್ಬ ವಿಶೇಷ ವ್ಯಕ್ತಿ. ಶಂಕರ್ ನಾಗರಕಟ್ಟೆ ಎನ್ನುವ ಇವರು ಜನಿಸಿದ್ದು ಉತ್ತರ ಕರ್ನಾಟಕ ಜಿಲ್ಲೆಯ ಒಂದು ಹಳ್ಳಿಯಲ್ಲಿ. ನಂತರ ಮುಂಬೈ ಅಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾಗಲೇ ಮರಾಠಿ ನಾಟಕಗಳತ್ತ ಆಕರ್ಷಿತರಾದರು.

ಅಲ್ಲಿ ಒಂದು ನಾಟಕದಲ್ಲಿ ತೊಡಗಿಸಿಕೊಂಡ ಮೇಲೆ ಕನ್ನಡದಲ್ಲಿ ಗಿರೀಶ್ ಕಾರ್ನಾಡ್ ಅವರ ಒಂದನೊಂದು ಕಾಲದಲ್ಲಿ ಸಿನಿಮಾದಲ್ಲಿ ಅಭಿನಯಿಸುವ ಭಾಗ್ಯ ಪಡೆದುಕೊಂಡರು. ಆನಂತರ ಅವರ ಬದುಕಿನ ದಿಕ್ಕೇ ಬದಲಾಗಿ ಹೋಯಿತು. ಬ್ಯಾಂಕ್ ನೌಕರರಾಗಿದ್ದ ಶಂಕರ್ ನಾಗ್ ಅವರು ತಮ್ಮ ಅಣ್ಣ ಅನಂತ್ ನಾಗ್ ಅವರನ್ನು ಸಹ ಚಿತ್ರರಂಗದತ್ತ ಕರೆ ತಂದರು. ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಕಾರಣ ತಬಲ ಕೊಳಲು ಹೀಗೆ ನಾನಾ ವಾದ್ಯಗಳನ್ನು ನುಡಿಸುವ ಕಲೆ ಕೂಡ ಗೊತ್ತಿತ್ತು. ಹೀಗಾಗಿ ನಾಟಕದಲ್ಲಿ ಇವರು ನೆಲೆಯೂರಲು ಇದೆಲ್ಲ ಅನುಕೂಲಕ್ಕೆ ಬಂತು.

ನಂತರ ತಮ್ಮದೇ ನಿರ್ಮಾಣದಲ್ಲಿ ಮಿಂಚಿನ ಓಟ, ಜನುಮ ಜನುಮದ ಅನುಬಂಧ ಮತ್ತು ಗೀತಾ ಸಿನಿಮಾಗಳನ್ನು ನಿರ್ಮಾಣ ಮಾಡಿದರು. ಆ ಕಾಲದ ನಿರ್ದೇಶಕರುಗಳ ಪಟ್ಟಿಯಲ್ಲಿ ಹೆಸರು ಕೂಡ ಗಿಟ್ಟಿಸಿಕೊಂಡಿದ್ದ ಇವರು ಕ್ರಿಯೇಟಿವ್ ಐಡಿಯಾಸ್ ಗಳನ್ನು ಹೊಂದಿದ್ದರು. ಹೊಸ ಬಗೆಯ ನಿರ್ದೇಶಕ ಎನ್ನುವ ಭರವಸೆಯನ್ನು ಮೂಡಿಸಿದ್ದ ಇವರು ಎಲ್ಲಾ ಝೋನರ್ ನ ಚಿತ್ರಗಳನ್ನು ಸಹ ಮಾಡಿರುವುದನ್ನು ಅವರ ಸಿನಿಮಾಗಳಲ್ಲಿ ಗಮನಿಸಬಹುದು. ಗಿರೀಶ್ ಕಾರ್ನಾಡ್ ಅವರ ನಾಟಕಗಳಾದ ಅಂಜುಮಲ್ಲಿಗೆ ಮತ್ತು ನೋಡಿ ಸ್ವಾಮಿ ನಾವಿರೋದು ಹೀಗೆ ಇವುಗಳನ್ನು ನಿರ್ದೇಶಿಸಿದ ಇವರಿಗೆ ಅಪಾರ ಹೆಸರು ಕೂಡ ಬಂತು.

ದೂರದರ್ಶನದ ಗೆ ಹೆಚ್ಚು ಮಹತ್ವವಿದ್ದ ಕಾಲವಾಗಿದ್ದ ಆ ಸಮಯದಲ್ಲಿ ಮಾಲ್ಗುಡಿ ಡೇಸ್ ಎನ್ನುವ ಸೀರೀಸ್ ಮಾಡಿ ಸಾಧಕ ಎನಿಸಿಕೊಂಡರು. ಇಷ್ಟೆಲ್ಲ ಸಾಧನೆ ಮಾಡಿದ್ದ ಇವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಬಂದಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಇವರು ಮಾಡಿರುವ ಸಿನಿಮಾಗಳು 80ನ್ನು ದಾಟಿವೆ. ಅರುಂಧತಿ ಅವರನ್ನು ವಿವಾಹವಾಗಿ ಕಾವ್ಯ ಎನ್ನುವ ಮಗುವಿಗೆ ತಂದೆ ಕೂಡ ಆಗಿದ್ದ ಇವರು ಆ ದಿನದಲ್ಲೇ ಕರ್ನಾಟಕಕ್ಕೆ ಮೆಟ್ರೋ ತರಸುವ ಕನಸು ಕಂಡಿದ್ದರು.

ಆಟೋ ರಾಜ, ಕರಾಟೆ ಕಿಂಗ್ ಎಂದೆಲ್ಲ ಬಿರುದು ಪಡೆದುಕೊಂಡಿರುವ ಇವರು ಇಂದು ನಮ್ಮೊಂದಿಗೆ ಇಲ್ಲ ಎನ್ನುವುದು ಇಡೀ ಕರ್ನಾಟಕಕ್ಕೆ ದೊಡ್ಡ ನಷ್ಟ. ಇಷ್ಟೆಲ್ಲ ಸಾಧನೆ ಜೊತೆ ಒಂದೇ ವರ್ಷದಲ್ಲಿ 15ಕ್ಕೂ ಹೆಚ್ಚು ಸಿನಿಮಾಗಳನ್ನು ಬಿಡುಗಡೆ ಮಾಡಿದ ನಟ ಎನ್ನುವ ಖ್ಯಾತಿ ಮೊದಲಿಗೆ ಇವರಿಗೆ ಸಲ್ಲುತ್ತದೆ. ಒಂದೇ ವರ್ಷದಲ್ಲಿ ಇವರ ನಗ ಬೇಕಮ್ಮ ನಗಬೇಕು, ರಕ್ತ ತಿಲಕ, ಬೆಂಕಿಯ ಬಲೆ, ಆಕ್ಸಿಡೆಂಟ್, ಕಾಳಿಂಗ ಸರ್ಪ, ಬೆದರು ಬೊಂಬೆ, ಇಂದಿನ ಭಾರತ, ಪವಿತ್ರ ಪ್ರೇಮ, ಗಂಡಬೇರುಂಡ, ಶಪಥ ಇನ್ನೂ ಮುಂತಾದ 15 ಸಿನಿಮಾಗಳು ಬಿಡುಗಡೆ ಆಗಿದ್ದವು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

Amulya: ನಟಿ ಅಮೂಲ್ಯ ಅವಳಿ ಮಕ್ಕಳ ಕ್ರಿಸ್ಮಸ್ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ.? ಈ ಕ್ಯೂಟ್ ವಿಡಿಯೋ ನೋಡಿ.

ಅಮೂಲ್ಯ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೇಷನ್

ನಟಿ ಅಮೂಲ್ಯ(Amulya) ಅವರು 2017ರಲ್ಲಿ ಉದ್ಯಮಿ ಹಾಗೂ ಪ್ರಭಾವಿ ರಾಜಕಾರಣಿ ಪುತ್ರನಾದ ಜಗದೀಶ್ ಆರ್ ಚಂದ್ರ ಅವರನ್ನು ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಕೈ ಹಿಡಿದಿದ್ದರು. ಇವರ ವಿವಾಹಕ್ಕೆ ಇಡೀ ಕರ್ನಾಟಕ ಸಾಕ್ಷಿ ಆಗಿತ್ತು. ನಾಲ್ಕು ವರ್ಷಗಳ ಬಳಿಕ ಇದೇ ವರ್ಷ ಮಾರ್ಚ್ 1ನೇ ತಾರೀಕು ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಬದುಕಿನ ಮತ್ತೊಂದು ಮುಖ್ಯ ಅಧ್ಯಾಯವನ್ನು ತೆರೆದುಕೊಂಡರು ನಟಿ ಅಮೂಲ್ಯ ಅವರು. ಓದುವ ವಯಸ್ಸಿಗೆ ಅಭಿನಯದ ಕಡೆಗೆ ವಾಲಿದ ಅಮೂಲ್ಯ ಬಾಲ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

ಸುದೀಪ್, ದರ್ಶನ್, ಧ್ಯಾನ್ ಈ ರೀತಿ ಹಲವು ನಟರ ಸಿನಿಮಾಗಳಲ್ಲಿ ಬಾಲನಟಿ ಆಗಿ ಅಭಿನಯಿಸಿದ್ದ ಇವರು ಚೆಲುವಿನ ಚಿತ್ತಾರ ಎನ್ನುವ ಸಿನಿಮಾದ ಮೂಲಕ ನಾಯಕನಟಿಯಾಗಿ ಕೆರಿಯರ್ ಆರಂಭಿಸಿ ಈಗ ಗೋಲ್ಡನ್ ಕ್ವೀನ್ ಎನ್ನುವ ಬಿರುದು ಪಡೆದುಕೊಂಡಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳನ್ನು ಕೊಟ್ಟಿರುವ ಇವರ ಎಲ್ಲಾ ಸಿನಿಮಾಗಳು ಕೂಡ ಬಹುತೇಕ ಸೂಪರ್ ಹಿಟ್ ಸಿನಿಮಾಗಳೇ. ಚೆಲುವಿನ ಚಿತ್ತಾರ, ಕೃಷ್ಣ ರುಕ್ಕು, ಶ್ರಾವಣಿ ಸುಬ್ರಮಣ್ಯ, ಮುಗುಳುನಗೆ, ಗಜಕೇಸರಿ, ಮಾಸ್ತಿ ಗುಡಿ.

ಈ ರೀತಿ ಸಿನಿಮಾ ಮಾಡಿ ತಮ್ಮ ವೃತ್ತಿ ಜೀವನದಲ್ಲಿ ಒಳ್ಳೆಯ ಹಂತದಲ್ಲಿ ಹೆಸರು ಮಾಡುತ್ತಿದ್ದ ಸಮಯದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡಿದ ಇವರು ಮದುವೆ ಆದಾಗಲಿಂದ ಚಿತ್ರರಂಗದಿಂದ ಸ್ವಲ್ಪ ಬ್ರೇಕ್ ಪಡೆದುಕೊಂಡಿದ್ದಾರೆ. ಆಗಾಗ ರಾಜಕೀಯ ವಿಷಯವಾಗಿ ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಳ್ಳುವ ಇವರು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ಟಿವ್ ಆಗಿದ್ದಾರೆ. ಇಲ್ಲಿಯವರೆಗೆ ತಮ್ಮ ವೈಯಕ್ತಿಕ ವಿಷಯಗಳನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ ಇವರು ಇವರ ಮಕ್ಕಳ ಫೋಟೋಶೂಟ್ ಅನ್ನು ಕೂಡ ಮಾಡಿಸಿ ಅಪ್ಲೋಡ್ ಮಾಡುತ್ತಿರುತ್ತಾರೆ.

ಯಾವುದೇ ವಿಶೇಷ ಸಂದರ್ಭ ಆದರು ಕೂಡ ಅದಕ್ಕೆ ತಕ್ಕಂತಹ ಕಾಶ್ಚ್ಯೂಮ್ ಧರಿಸಿ ಮಕ್ಕಳ ಜೊತೆಗೆ ಫೋಟೋ ತೆಗೆದು ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವ ಅಮೂಲ್ಯ ಅವರು ಈಗ ತಮ್ಮ ಮನೆಯಲ್ಲಿ ಕ್ರಿಸ್ಮಸ್(Christmas) ಹಬ್ಬವನ್ನು ಆಚರಿಸಿರುವ ವಿಡಿಯೋವನ್ನು ಕೂಡ ಮಾಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರ ಮನೆಯಲ್ಲಿ ಕ್ರಿಸ್ಮಸ್ ಹಬ್ಬದ ಸಲುವಾಗಿ ಏನೆಲ್ಲ ಡೆಕೋರೇಷನ್ ಮಾಡಿದ್ದಾರೆ ಎನ್ನುವುದರ ಜೊತೆಗೆ ಮಕ್ಕಳಿಬ್ಬರಿಗೂ ಕೂಡ ಕ್ರಿಸ್ಮಸ್ ಪ್ರಯುಕ್ತ ಸೀಕ್ರೆಟ್ ಸಂತನ ಬಟ್ಟೆ ತೊಡಿಸಿ ಫೋಟೋಶೂಟ್ ಮಾಡಿಸಿದ್ದಾರೆ.

ಇಬ್ಬರು ಮಕ್ಕಳು ಕೂಡ ಮುದ್ದು ಮುದ್ದಾಗಿ ಕಾಣುತ್ತಿತ್ತು ದೇವರೇ ಕಳಿಸಿರುವ ಸೀಕ್ರೆಟ್ ಸಂತನಂತೆ ಇದ್ದಾರೆ. ಅಮೂಲ್ಯ ಅವರನ್ನು ಬಾಲನಟಿಯಾಗಿದ್ದ ಕಾಲದಿಂದ ನೋಡಿರುವ ಕಾರಣ ಅವರೇ ಇನ್ನು ಚಿಕ್ಕವರು ಎನಿಸುತ್ತಾರೆ. ಇದೀಗ ಅವರ ಮಡಿಲಿನಲ್ಲಿ ಇಬ್ಬರು ಮುದ್ದು ಪುಟಾಣಿಗಳು ಇರುವುದನ್ನು ನೋಡುವುದೇ ಒಂದು ಆನಂದ. ಅಥರ್ವ್ ಹಾಗೂ ಆಧವ್ ಎಂದು ಮಕ್ಕಳಿಬ್ಬರಿಗೂ ಹೆಸರು ಇಟ್ಟಿರುವ ಅಮೂಲ್ಯ ದಂಪತಿ ಮಕ್ಕಳ ನಾಮಕರಣ ಕಾರ್ಯಕ್ರಮವನ್ನು ಕೂಡ ಇದೇ ವರ್ಷ ನವೆಂಬರ್ ತಿಂಗಳಿನಲ್ಲಿ ಬಹಳ ಅದ್ದೂರಿಯಾಗಿ ಮಾಡಿದರು.

ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರುಗಳು, ಸ್ಟಾರ್ ನಟರುಗಳು, ಸಹ ಕಲಾವಿದರುಗಳು ಸೇರಿದಂತೆ ರಾಜಕೀಯ ವ್ಯಕ್ತಿಗಳು ಕೂಡ ಭಾಗಿಯಾಗಿದ್ದರು. ಸದ್ಯಕ್ಕೀಗ ಅಮೂಲ್ಯ ಅವರ ಬದುಕು ಎಲ್ಲಾ ಯುವ ನಟಿಯರಿಗೂ ಆದರ್ಶ ದಂತಿದ್ದು ಕೆರಿಯರ್ ಹಾಗೂ ಪರ್ಸನಲ್ ಎರಡೂ ವಿಷಯದಲ್ಲಿ ಕೂಡ ನಟಿ ಮಾದರಿಯಾಗುತ್ತಿದ್ದಾರೆ. ಅವರ ಮುಂದಿನ ಎಲ್ಲ ಯೋಜನೆಗಳಿಗೂ ಶುಭವಾಗಲಿ ಎಂದು ಹರಿಸೋಣ.

Meghana Raj: ಬದುಕಿನಲ್ಲಿ ಮತ್ತೊಂದು ಹೊಸ ನಿರ್ಧಾರ ತೆಗೆದುಕೊಂಡ ನಟಿ ಮೇಘನಾ ರಾಜ್, ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಈ ವಿಶೇಷ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಏನದು ಗೊತ್ತಾ.?

ಕ್ರಿಸ್ಮಸ್ ಹಬ್ಬದ ದಿನದಂದು ಸಿಹಿ ಸುದ್ದಿ ಹಂಚಿಕೊಂಡ ಮೇಘನಾ ರಾಜ್(MeghanaRaj)

ನಟಿ ಮೇಘನ ರಾಜ್ ಕನ್ನಡದ ಪ್ರತಿಭಾನ್ವಿತ ನಟಿ. ಕಲಾವಿದ ದಂಪತಿಗಳ ಕುವರಿಯಾಗಿ ಹುಟ್ಟಿದ ಇವರು ಸೇರಿದ್ದು ಕೂಡ ಮತ್ತಷ್ಟು ಕಲಾವಿದರ ಗುಂಪಿರುವ ಕುಟುಂಬವನ್ನೇ. ನಟಿ ಮೇಘನಾ ರಾಜ್ ಅವರ ಬದುಕಿನಲ್ಲಿ ವಿಧಿ ಎಂತಹ ಬಿರುಗಾಳಿ ಎಬ್ಬಿಸಿದೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಇದೆಲ್ಲದರಿಂದ ಚೇತರಿಸಿಕೊಂಡಿರುವ ಮೇಘನಾ ರಾಜ್ ಕೂಡ ಈಗ ವಾತ್ಸವದ ಕಡೆ ಕೂಡ ಗಮನಹರಿಸುತ್ತಿದ್ದಾರೆ. ಈಗಾಗಲೇ ಕೆರಿಯರ್ ಅಲ್ಲಿ ಸೆಕೆಂಡ್ ಇನ್ನಿಂಗ್ ಶುರು ಮಾಡಿರುವ ಇವರು ಸದ್ಯಕ್ಕೆ ರಿಯಾಲಿಟಿ ಶೋ ಅಲ್ಲಿ ತೀರ್ಪುಗಾರರಾಗಿ ಬಾಗಿ ಆಗುತ್ತಿದ್ದಾರೆ.

ಜೊತೆ ಜೊತೆಗೆ ಸಿನಿಮಾಗಳಲ್ಲೂ ಮತ್ತೆ ತೊಡಗಿಸಿಕೊಳ್ಳುವ ಸೂಚನೆಯನ್ನು ಕೊಟ್ಟಿದ್ದಾರೆ. ಇಷ್ಟೆಲ್ಲಾ ಬಿಝಿ ಶೆಡ್ಯೂಲ್ ನಡುವೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಅವರು ಬಹಳ ಆಕ್ಟಿವ್ ಆಗಿರುತ್ತಾರೆ. ಅಲ್ಲಿ ಅಭಿಮಾನಿಗಳ ಜೊತೆಗೆ ತಮ್ಮ ವೈಯಕ್ತಿಕ ವಿಷಯಗಳ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಡಿಸೆಂಬರ್ 24ರಂದು ಮೇಘನಾ ರಾಜ್ ಅವರು instagram ಅಲ್ಲಿ ತಮ್ಮ ಫಾಲವರ್ಸ್ ಗೆ 25, ಅಂದರೆ ಕ್ರಿಸ್ಮಸ್ ದಿನ ಒಂದು ಸರ್ಪ್ರೈಸ್ ಇರುವುದಾಗಿ ಹೇಳಿದ್ದರು ಎಲ್ಲರೂ ಕೂಡ ಆ ವಿಷಯದ ಬಗ್ಗೆ ಬಾರಿ ಕುತೂಹಲ ಇಟ್ಟುಕೊಂಡಿದ್ದರು.

ಇದೀಗ ಅವರ ಸರ್ಪ್ರೈಸ್ ಹೊರ ಬಂದಿದ್ದು ಮೇಘನಾ ರಾಜ್ ಅವರು ಯುಟ್ಯೂಬ್ ಚಾನೆಲ್ ( YouTube Channel) ಅನ್ನು ಓಪನ್ ಮಾಡಿರುವುದಾಗಿ ವಿಷಯ ಗೊತ್ತಾಗಿದೆ. ಅಫೀಷಿಯಲ್ ಆಗಿ ಇದನ್ನು ಸ್ವತಃ ಅವರೇ ಅನೌನ್ಸ್ ಕೂಡ ಮಾಡಿದ್ದಾರೆ. ಮೇಘನಾ ರಾಜ್ ಅವರು ಸದಾ ಚಟುವಟಿಕೆಯಿಂದ ಇರುವ ವ್ಯಕ್ತಿತ್ವದವರು ಬಾಲ್ಯದಿಂದಲೂ ಅಭಿನಯವನ್ನೇ ಉಸಿರಾಗಿಸಿಕೊಂಡ ಇವರು ಈಗಾಗಲೇ ಅನೇಕ ನಾಟಕಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಸಿನಿಮಾ ರಂಗದಲ್ಲಿ ಕಾಲಿಟ್ಟ ಮೇಲೆ ಕನ್ನಡ ತೆಲುಗು ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲೂ ನಾಯಕ ನಟಿ ಆಗಿ ಕಾಣಿಸಿಕೊಂಡಿದ್ದಾರೆ.

ಈಗ ಕನ್ನಡ ಮತ್ತು ಮಲಯಾಳಂ ರಂಗದಲ್ಲಿ ಬಹಳ ಬೇಡಿಕೆಯ ನಟಿ ಆಗಿರುವ ಇವರು ನಿರ್ಮಾಪಕಿ ಕೂಡ ಆಗುತ್ತಿರುವ ಬಗ್ಗೆ ಗಾಂಧಿನಗರದಲ್ಲಿ ಸುದ್ದಿ ಇದೆ. ಮೇಘನಾ ರಾಜ್ ಅವರ ಮುಂದಿನ ಸಿನಿಮಾ ಅವರದ್ದೇ ಹೋಂ ಪ್ರೊಡಕ್ಷನ್ ಅಲ್ಲಿ ಬರಲಿದೆ. ಇದಕ್ಕೆ ಪಾರ್ಟ್ನರ್ ಆಗಿ ಪನ್ನಗಾಭರಣ ಅವರು ಇರಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಹರಿದಾಡಿತ್ತು. ಈ ಬಗ್ಗೆ ಎಲ್ಲೂ ಕೂಡ ಮೇಘನಾ ರಾಜ್ ಅವರು ಸ್ಪಷ್ಟನೆ ನೀಡಿಲ್ಲ ಹಾಗಾಗಿ ಇದನ್ನು ಸದ್ಯಕ್ಕೆ ಊಹಾಪೋಹ ಎಂದಷ್ಟೇ ಅಂದುಕೊಳ್ಳಲಾಗಿದೆ.

ಆದರೆ ಯೂಟ್ಯೂಬ್ ಚಾನೆಲ್ ಓಪನ್ ಆಗಿರುವುದರ ಬಗ್ಗೆ ಮೇಘನಾ ಅವರೇ ಸಿಹಿ ಸುದ್ದಿ ನೀಡಿದ್ದಾರೆ. ಮೇಘನಾ ರಾಜ್ ಅವರು ಕನ್ನಡದಲ್ಲಿ ಒಳ್ಳೊಳ್ಳೆ ಪ್ರಾಜೆಕ್ಟ್ಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ಅವರ ಇರುವುದೆಲ್ಲವ ಬಿಟ್ಟು, ಎಂ ಎಂ ಸಿ ಎಚ್ ಮುಂತಾದ ಸಿನಿಮಾಗಳು ಮಹಿಳಾ ಪ್ರಧಾನ ಸಿನಿಮಾಗಳಾಗಿದ್ದು ಇಂತಹ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಹಾಗೂ ವಿಶೇಷ ಪಾತ್ರಗಳಲ್ಲಿ ಮೇಘನಾ ರಾಜ್ ಅವರನ್ನು ಕಾಣಲು ಅಭಿಮಾನಿಗಳು ಆಸೆಪಡುತ್ತಾರೆ.

ಇದೇ ರೀತಿಯ ಮತ್ತಷ್ಟು ಪ್ರಾಜೆಕ್ಟ್ ಗಳು ಅವರಿಗೆ ದೊರೆಯಲ್ಲಿ ಇನ್ನಷ್ಟು ಹೊಸ ಬಗೆಯ ಚಾಲೆಂಜಿಂಗ್ ಪಾತ್ರಗಳು ಮತ್ತು ಅರ್ಥಪೂರ್ಣ ಕಥೆಗಳು ಮೇಘನಾರಾಜ್ ಪಾಲಿಗೆ ದಕ್ಕು ಅವರ ವೈಯಕ್ತಿಕ ಜೀವನದ ಎಲ್ಲಾ ದುಃಖವನ್ನು ಮರೆತು ಬೆಳೆಯಲಿ ಅವರಿಗೂ ಮತ್ತು ಮಗ ರಾಯನ್ ಅವರಿಗೂ ಒಳ್ಳೆಯದಾಗಲಿ ಎಂದು ಹರಸೋಣ.

 

ಫಿನಾಲೆ ವಾರಕ್ಕೆ ಕಾಲಿಟ್ಟ ಏಕೈಕ ವ್ಯಕ್ತಿ ರೂಪೇಶ್ ರಾಜಣ್ಣ, ಬಿಗ್ ಬಾಸ್ ಟಾಪ್ 5 ರಲ್ಲಿ ಆಯ್ಕೆ

ಫಿನಾಲೆ ವಾರಕ್ಕೆ ಸೆಲೆಕ್ಟ್ ಆದ ರೂಪೇಶ್ ರಾಜಣ್ಣ

ಕನ್ನಡದ ಬಿಗ್ ಬಾಸ್ ಸೀಸನ್ 9 ಕ್ಷಣ ಕ್ಷಣಕ್ಕೂ ರಂಗೇರುತ್ತಿದೆ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಅಂತ್ಯದ ವಾರಗಳವರೆಗೂ ಬಂದು ತಲುಪು ಬಿಟ್ಟಿದೆ. ಈ ಬಾರಿ ಕಳೆದ ಎಲ್ಲಾ ಸೀಸನ್ ಗಿಂತ ಬಹಳ ವಿಶೇಷವಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರಣ ಬಿಗ್ ಬಾಸ್ ಸೀಸನ್ 9 ಆರಂಭವಾಗುವುದಕ್ಕೂ ಮುಂಚೆ ಒಟಿಟಿಯಲ್ಲಿ ಒಂದು ಮಿನಿ ಬಿಗ್ ಬಾಸ್ ನಡೆಸಲಾಗಿತ್ತು. ಇದರಲ್ಲಿ ಗೆದ್ದ ನಾಲ್ಕು ಮಂದಿಯನ್ನು ಪ್ರವೀಣರ ಪಟ್ಟಿಯಲ್ಲಿ 9ನೇ ಆವೃತ್ತಿಯ ದೊಡ್ಡ ಪರದೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಕಳುಹಿಸಲಾಗಿತ್ತು.

ಮತ್ತು ಐದು ಜನ ಹಳೆಯ ಬಿಗ್ ಬಾಸ್ ಸ್ಪರ್ಧಿಗಳನ್ನು ಕೂಡ ಎರಡನೇ ಬಾರಿ ಮನೆ ಒಳಗೆ ಕಂಟೆಸ್ಟೆಂಟ್ ಆಗಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. 18 ಮಂದಿ ಬೇಕಾಗಿದ್ದ ಈ ಆಟಕ್ಕೆ ನವೀನರ ಪಟ್ಟಿಯಲ್ಲಿ 9 ಸೆಲಬ್ರೆಟಿಗಳನ್ನು ಆಟವಾಡಲು ಕಳುಹಿಸಲಾಗಿತ್ತು. ಪ್ರವೀಣರ ಹಾಗೂ ನವೀನರ ಕಾಂಬಿನೇಷನ್ ಅಲ್ಲಿ ಮನೆ ತುಂಬಾ ಕಲರವದಿಂದ ಕೂಡಿತ್ತು. ಎಲ್ಲಾ ಸೀಸನ್ ನಂತೆ ಕೋಪ, ಆಕ್ರೋಶ, ಆಟಿಟ್ಯೂಡ್, ಜಗಳ, ಗಲಾಟೆ, ನಗು, ದುಃಖ, ಕಾಮಿಡಿ, ಭಾವನಾತ್ಮಕ ಕ್ಷಣಗಳು, ಸ್ನೇಹ, ಪ್ರೀತಿ, ಫ್ಲರ್ಟ್ ಎಲ್ಲವೂ ಕೂಡ ತುಂಬಿಕೊಂಡಿತ್ತು.

ಪ್ರತಿ ವಾರ ಮನೆಯಿಂದ ಒಬ್ಬೊಬ್ಬ ಕಂಟೆಸ್ಟ್ ಆಚೆ ಹೋಗುತ್ತಿದ್ದಂತೆ ಈಗ ಮನೆ ಯಾಕೋ ಅನಿಸುತ್ತಿದೆ. ಆರಂಭದಲ್ಲಿ ಕಿಚ್ಚನ ಪಂಚಾಯಿತಿ ಕಟ್ಟೆ ಕಾರ್ಯಕ್ರಮದಲ್ಲಿ ಸೋಫಾ ಪೂರ್ತಿ ಕುಳಿತುಕೊಂಡು ತುಂಬಿದ ಕುಟುಂಬದಂತೆ ಕಾಣುತ್ತಿದ್ದ ಮನೆ ಈಗೀಗ ಮೂಲೆ ಮೂಲೆಯಲ್ಲಿ ಒಬ್ಬೊಬ್ಬರು ಕೂತು ಮುಖ ಮುಖ ನೋಡುವಷ್ಟು ಖಾಲಿ ಖಾಲಿ ಎನಿಸುತ್ತಿದೆ. ಎಲ್ಲದಕ್ಕೂ ಅಂತ್ಯ ಇರುವ ರೀತಿ ಕಾರ್ಯಕ್ರಮದ ಅಂತಿಮ ದಿನಗಳು ಕೂಡ ಹತ್ತಿರ ಆಗಿದೆ.

ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಚರ್ಚೆ ಆಗಿದ್ದು ನೋಡುಗರು ತಮ್ಮ ಪ್ರಕಾರ ಯಾರು ಈ ಬಾರಿಯ ವಿನ್ನರ್ ಎನ್ನುವುದನ್ನು ಹೇಳಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಸೀಸನ್ ಮೂರರಲ್ಲಿ ಶೃತಿ ಅವರು ವಿನ್ ಆಗಿದ್ದು ಬಿಟ್ಟರೆ ಬಳಿಕ ಯಾವುದೇ ಮಹಿಳಾ ಕಂಟೆಸ್ಟೆಂಟ್ ವಿನ್ ಆಗಿರಲಿಲ್ಲ. ಹಾಗಾಗಿ ಈ ಬಾರಿ ದೀಪಿಕಾ ದಾಸ್ ಅವರು ಗೆಲ್ಲಲು ಅರ್ಹಸ್ಪರ್ಧಿ ಎಂದು ಮಾತನಾಡಿಕೊಳ್ಳುತ್ತಿರುವ ನೆಟ್ಟಿಗರು ಅವರೇ ವಿನ್ನರ್ ಆಗಿರಬಹುದು ಎಂದು ಊಹಿಸುತ್ತಿದ್ದಾರೆ. ಇದು ಪ್ರವೀಣರ ಪಟ್ಟಿಯ ವಿಷಯವಾದರೆ ನವೀನರ ಪಟ್ಟಿಯಿಂದ ಈಗಾಗಲೇ ವಿನ್ನರ್ ಘೋಷಣೆ ಆಗಿದೆ.

ಯಾಕೆಂದರೆ ಈಗಾಗಲೇ ನವೀನರಾಗಿ ಮನೆ ಒಳಗೆ ಹೋಗಿದ್ದ ದರ್ಶ್, ಐಶ್ವರ್ಯ ಪಿಸ್ಸೆ, ಅಮೂಲ್ಯಗೌಡ, ಕಾವ್ಯಶ್ರೀ, ವೈರಲ್ ಹುಡುಗ ನವಾಜ್, ನೇಹ ಗೌಡ, ಮಯೂರಿ, ವಿನೋದ್ ಗೊಬ್ಬರಗಾಲ ಮತ್ತು ರೂಪೇಶ್ ರಾಜಣ್ಣ ಅವರಲ್ಲಿ ರೂಪೇಶ್ ರಾಜಣ್ಣ ಅವರನ್ನು ಬಿಟ್ಟು ಎಲ್ಲರೂ ಸಹ ಮನೆಯಿಂದ ಔಟ್ ಆಗಿ ಬಂದಿದ್ದಾರೆ. ಈಗ ಸದ್ಯಕ್ಕೆ ಮನೆ ಒಳಗಿರುವ ಆರು ಮಂದಿಯಲ್ಲಿ ರೂಪೇಶ್ ರಾಜಣ್ಣ ಮಾತ್ರ ಹೊಸ ಕಂಟೆಸ್ಟ್ಮೆಂಟ್ ಆಗಿ ಮನೆ ಒಳಗೆ ಹೋಗಿದ್ದವರಲ್ಲಿ ಉಳಿದಿರುವವರು.

ಆರ್ಯವರ್ಧನ್, ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಅವರು ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಿಂದ ಬಂದಿದ್ದವರಾಗಿದ್ದಾರೆ ದೀಪಿಕಾ ದಾಸ್ ಹಾಗೂ ದಿವ್ಯ ಹುಡುಗ ಅವರು ಹಳೆಯ ಸೀಸನ್ ಇಂದ ಬಂದಿರುವವರು. ಅಂತಿಮ ಐದು ಸ್ಪರ್ಧಿಗಳಲ್ಲಿ ರೂಪೇಶ್ ರಾಜಣ್ಣ ಕೂಡ ಇರಲಿದ್ದಾರೆ ಎನ್ನುವ ನಂಬಿಕೆ ಹಲವರಿಗಿದೆ ಮತ್ತು ರೂಪೇಶ್ ರಾಜಣ್ಣ ಅವರು ಫಿನಾಲೆಯಲ್ಲಿ ಗೆಲ್ಲದೆ ಹೋದರು ನವೀನ ಪಟ್ಟಿಯಿಂದ ಕೊನೆವರೆಗೂ ಉಳಿದುಕೊಂಡ ಸ್ಪರ್ಧಿ ಇರುವುದರಿಂದ ಈಗ ಅವರು ಗೆದ್ದಂತೆಯೇ ಲೆಕ್ಕ. ಬಾರಿ ಕುತೂಹಲ ಸೃಷ್ಟಿಸಿರುವ ಈ ಸೀಸನ್ ವಿನ್ನರ್ ಯಾರಾಗುತ್ತಾರೆ ಕಾದು ನೋಡೋಣ. ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬೇಕು ತಪ್ಪದೇ ಕಮೆಂಟ್ ಮಾಡಿ

ಚಪ್ಪಲಿ ಎಸೆದವನಿಗೆ ಕಲಾರ್ ಮೇಲೆ ಎತ್ತಿ ಡಿ ಬಾಸ್ ಕೊಟ್ಟ ಖಡಕ್ ಎಚ್ಚರಿಕೆ ಏನು ಗೊತ್ತ.? ಹೊಸಪೇಟೆಲಿ ನೆಡೆದ ಘಟನೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ. ಡಿ ಬಾಸ್ ಮಾತು ಕೇಳಿ ನಲುಗಿದ ಇಂಡಸ್ಟ್ರಿ

ಚಪ್ಪಲಿ ಎಸೆದವನಿಗೆ ಡಿ ಬಾಸ್ ಹುಬ್ಬಳ್ಳಿಯಲ್ಲಿ ತಮ್ಮದೇ ಸ್ಟೈಲ್ ನಲ್ಲಿ ಹೇಗೆ ಟಾಂಗ್ ಕೊಟ್ರು ಗೊತ್ತಾ.?

ಕಳೆದ ವಾರ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಪ್ರಚಾರಕ್ಕೆಂದು ಹೋಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಊರಿಗೆ ಚಪ್ಪಲಿ ಎಸೆದು ಅವಮಾನ ಮಾಡಿದ ಘಟನೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಕಳೆದೊಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆ ಆಗುತ್ತಿರುವ ಮತ್ತು ನಾನಾ ರೂಪ ಪಡೆದುಕೊಂಡು ಸ್ಟಾರ್ ವಾರ್ ಮತ್ತೊಮ್ಮೆ ಶುರು ಆಗಿ ಫ್ಯಾನ್ಸ್ ಕೆಸರೆರಚಾಟ ಕೂಡ ಬಲು ಜೋರಾಗಿ ನಡೆಯುತ್ತಿದೆ. ಈ ಘಟನೆ ಬಗ್ಗೆ ದರ್ಶನ್ ಅವರು ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ್ದಾರೆ. ಜನವರಿ 26ರಂದು ರಾಜ್ಯದಾದ್ಯಂತ ತೆರೆ ಕಾಣುತ್ತಿರುವ ಕ್ರಾಂತಿ ಸಿನಿಮಾದ ಎರಡನೇ ಹಾಡು ಪುಷ್ಪವತಿಯನ್ನು ರಿಲೀಸ್ ಮಾಡಲು ಹುಬ್ಬಳ್ಳಿ ಸಿಟಿಗೆ ಇಡೀ ಕ್ರಾಂತಿ ಚಿತ್ರ ತಂಡ ಹೋಗಿತ್ತು.

ಈ ಸಮಯದಲ್ಲಿ ವೇದಿಕೆ ಮೇಲೆ ಮಾತನಾಡಲು ಶುರು ಮಾಡಿದ ದರ್ಶನ್ ಅವರು ಹಿಂದಿನ ಘಟನೆಯ ಬಗ್ಗೆ ಮ ಕೂಡ ಮಾತನಾಡಿ ಫ್ಯಾನ್ಸ್ ಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ. ದರ್ಶನ್ ಅವರ ಮೇಲಾದ ಈ ಹ.ಲ್ಲೆ.ಯ ಕಾರಣದಿಂದ ದರ್ಶನ್ ಅವರಷ್ಟೇ ಅವರ ಅಭಿಮಾನಿಗಳು ಸಹ ನೊಂದು ಕೊಂಡಿದ್ದಾರೆ. ಅದಕ್ಕಾಗಿ ಘಟನೆ ಕುರಿತು ಮಾತನಾಡಿದ ದರ್ಶನ್ ಅವರು ಒಬ್ಬರನ್ನು ಹಾಳು ಮಾಡಬೇಕು ಎಂದು ನೂರು ಜನ ಇದ್ದರೆ ಕಾಪಾಡಲು ಅಭಿಮಾನಿಗಳ ರೀತಿ ನಿಮ್ಮಂತ ಲಕ್ಷಾಂತರ ಜನರು ಇರುತ್ತಾರೆ. ಅಷ್ಟೇ ಸಾಕು ಏನೇ ಬಂದರು ನೋಡಿಕೊಳ್ಳೋಣ ಇದುವರೆಗೂ ಕೂಡ ಈ ಘಟನೆ ಬಗ್ಗೆ ಮಾತನಾಡಿ ಪ್ರೋವಾಕ್ ಮಾಡಬಾರದು ಎಂದುಕೊಂಡಿದ್ದೆ.

ಈಗ ನಿಮ್ಮೆಲ್ಲರ ಪ್ರೀತಿ ಅಭಿಮಾನ ನೋಡಿ ಮಾತನಾಡಬೇಕು ಅನಿಸುತ್ತಿದೆ. ಮೊನ್ನೆ ಆ ರೀತಿ ಚಪ್ಪಲಿ ಎಸೆದಿದ್ದರೆ ಏನಾಯ್ತು ಇಂದು ನನ್ನ ಅಭಿಮಾನಿಗಳೆಲ್ಲ ಹೂವಿನಲ್ಲಿ ಮುಳುಗಿಸಿದ್ದಾರೆ ಇದಕ್ಕಿಂತ ಇನ್ನೇನು ಬೇಕು ಅದೇ ನನಗೆ ಸಾಕು ಎಂದಿದ್ದಾರೆ. ಈ ರೀತಿ ಮಾಡುವುದರಿಂದ ನಾನು ಬೇಜಾರು ಮಾಡಿಕೊಳ್ಳುವುದಿಲ್ಲ, ನೊಂದುಕೊಳ್ಳುವುದಿಲ್ಲ, ನನ್ನನ್ನು ಯಾರು ಕುಗ್ಗಿಸಲು ಸಾಧ್ಯವಿಲ್ಲ ನಾವು ಸಹ ಉರಿಸಬೇಕು ಎಂದು ನಿಂತರೆ ಯಾವ ಲೆವೆಲ್ ಗೆ ಬೇಕಾದರೂ ಹೋಗುತ್ತೇವೆ ಆದರೆ ನಾವು ಹೀಗೆಲ್ಲ ಮಾಡಬಾರದು ನಮ್ಮ ಕೆಲಸ ಮಾತಾಡಬೇಕು ಕೆಲಸದಿಂದ ಅಂತವರಿಗೆಲ್ಲ ಉತ್ತರ ಕೊಡಬೇಕು ಎಂದು ಅಭಿಮಾನಿಗಳಿಗೆಲ್ಲಾ ಹೇಳಿದ್ದಾರೆ.

ಜೊತೆಗೆ ಕಾರ್ಯಕ್ರಮದಲ್ಲಿ ಪುಷ್ಪವತಿ ಹಾಡನ್ನು ವಿಶೇಷವಾಗಿ ರಿಲೀಸ್ ಮಾಡಿಸಿದ್ದಾರೆ ದಚ್ಚು. ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ನಡೆದ ದಿನ ಮದುವೆಯೊಂದು ನಡೆದಿತ್ತು. ಮದುವೆಯಾದ ನವ ದಂಪತಿಗಳಿಬ್ಬರೂ ಸಹ ದರ್ಶನ್ ಅವರ ಅತಿ ದೊಡ್ಡ ಅಭಿಮಾನಿಗಳಾಗಿದ್ದು ಮದುವೆ ಮನೆಯಿಂದ ಸೀದಾ ಕಾರ್ಯಕ್ರಮ ನೋಡಲು ಬಂದಿದ್ದರು. ಇದು ತಿಳಿದ ತಕ್ಷಣ ದರ್ಶನ್ ಅವರು ಅವರಿಬ್ಬರನ್ನು ವೇದಿಕೆಯ ಮೇಲೆ ಕರೆಸಿ ಶುಭ ಹಾರೈಸಿ ಅವರಿಂದಲೇ ಪುಷ್ಪವತಿ ಹಾಡನ್ನು ರಿಲೀಸ್ ಮಾಡಿಸಿದ್ದಾರೆ.

ಮಧು ಮಕ್ಕಳಿಬ್ಬರು ಸಹ ಮಾತನಾಡಿ ಈಗಾಗಲೇ ಡಿ ಬಾಸ್ ಬಾಕ್ಸಾಫೀಸ್ ಸುಲ್ತಾನ ಎಂದು ಹೆಸರಾಗಿದ್ದಾರೆ, ಕ್ರಾಂತಿ ಸಿನಿಮಾ ಕೂಡ ಅದಕ್ಕಿಂತ ಹೆಚ್ಚಿನ ಹೆಸರನ್ನು ಗಳಿಸಲಿ ಕಲೆಕ್ಷನ್ ಮಾಡಲಿ ಎಂದು ಹರಸಿದ್ದಾರೆ. ಮತ್ತು ನಾವಿಬ್ಬರು ದರ್ಶನ್ ಅವರ ಹುಚ್ಚು ಅಭಿಮಾನಿಗಳು ನಮ್ಮ ಮದುವೆಗೆ ಇಂತಹ ದೊಡ್ಡ ಗಿಫ್ಟ್ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಸಂತಸಪಟ್ಟಿದ್ದಾರೆ. ದರ್ಶನ್ ಅವರ ವೈಯಕ್ತಿಕ ವಿಚಾರಗಳು ಏನೇ ಇದ್ದರೂ ಸಹ ಅವರು ಕನ್ನಡದ ಒಬ್ಬ ಸ್ಟಾರ್ ನಟ. ಇನ್ನೆಂದು ಅವರಿಗೆ ಈ ರೀತಿ ಬಹಿರಂಗವಾಗಿ ಅವಮಾನ ಆಗದೇ ಇರಲಿ ಮತ್ತು ಅವರ ಕ್ರಾಂತಿ ಸಿನಿಮಾಗೆ ಇನ್ನಷ್ಟು ಒಳಿತಾಗಲಿ ಎಂದು ಹರಸೋಣ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

ಬಿಗ್ ಬಾಸ್ ಫಿನಾಲೆಗೆ ಇಬ್ಬರು ಫೈನಾಲಿಸ್ಟ್ ಹೆಸರುಗಳನ್ನು ಘೋಷಣೆ ಮಾಡಿದ ಕಿಚ್ಚ ಸುದೀಪ್. ಆ ಅದೃಷ್ಟವಂತ ಇಬ್ಬರು ವ್ಯಕ್ತಿ ಯಾರು ಗೊತ್ತ.?

ಬಿಗ್ ಬಾಸ್ ಫೈನಲಿಸ್ಟ್

ಬಿಗ್ ಬಾಸ್ ಪ್ರಾರಂಭವಾಗಿ ಈಗಾಗಲೇ ಎರಡು ವಾರೆ ತಿಂಗಳು ಕಳೆದೆ ಹೋಗಿದೆ ಇನ್ನೂ ಒಂದು ವಾರ ಮಾತ್ರ ಬಿಗ್ ಬಾಸ್ ಫಿನಾಲೆಗೆ ಬಾಕಿ ಉಳಿದಿದೆ. ಕಳೆದ ವಾರ ಅನುಪಮಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿದ್ದರು ಈ ವಾರ ಡಬಲ್ ಎಲಿಮಿನೇಷನ್ ಹೌದು. ನೆನ್ನೆ ಅಮೂಲ್ಯ ಗೌಡ ಅವರು ಎಲಿಮಿನೇಷನ್ ಆಗಿದ್ದಾರೆ ಇವರ ಜೊತೆಗೆ ಅರುಣ್ ಸಾಗರ್ ಅವರು ಕೂಡ ಎಲಿಮಿನೇಷನ್ ಆಗುವುದರ ಮೂಲಕ ಎಲ್ಲರಲ್ಲೂ ಕೂಡ ಅಚ್ಚರಿ ಮೂಡಿಸಿದ್ದಾರೆ.

ಏಕೆಂದರೆ ಅರುಣ್ ಸಾಗರ್ ಕೊನೆಯವರೆಗೂ ಇರುತ್ತಾರೆ ಅಂತ ಸಾಕಷ್ಟು ಜನ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮೊದಲ ಸೀಸನ್ ಗೆಲ್ಲಬಹುದು ಎಂಬುದು ಊಹೆಯಾಗಿತ್ತು, ಆದರೆ ಇದೀಗ ಎಲ್ಲರ ಊಹೆಗೆ ಕಂಗತ್ತರಿ ಬಿದ್ದಿದೆ. ಹೌದು ಯಾರು ನಿರೀಕ್ಷೆ ಮಾಡಿರದಂತಹ ಎಲಿಮಿನೇಷನ್ ನೆನ್ನೆ ನಡೆದಿದೆ ಅಮೂಲ್ಯ ಹಾಗೂ ಅರುಣ್ ಸಾಗರ್ ಇಬ್ಬರೂ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಇದೀಗ ಬಿಗ್ ಬಾಸ್ ಮನೆಯಲ್ಲಿ ಆರು ಜನ ಸ್ಪರ್ಧಿಗಳು ಮಾತ್ರ ಬಾಕಿ ಉಳಿದಿದ್ದಾರೆ.

ಹೌದು ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯ ಉರುಡುಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ, ಮಾತ್ರ ಇದೀಗ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದಾರೆ. ಹೊಸ ವರ್ಷದ ದಿನ ಅಥವಾ ಡಿಸೆಂಬರ್ 31 ನೇ ತಾರೀಕು ಬಿಗ್ ಬಾಸ್ ಗ್ರಾಂಡ್ ಫಿನಾಲೆ ನಡೆಯಲಿದೆ ಬಿಗ್ ಬಾಸ್ ಮನೆಯಲ್ಲಿ ಈಗ ಆರು ಜನ ಸದಸ್ಯರಿದ್ದು. ಈ ವಾರದಲ್ಲಿ ಮಿಡ್ ನೈಟ್ ಎಲಿಮಿನೇಷನ್ ನಡೆಯುತ್ತದೆ ಅಂದರೆ ಆರು ಜನ ಸ್ಪರ್ಧಿಯಲ್ಲಿ ಒಬ್ಬ ಸ್ಪರ್ಧಿ ಮಿಡ್ ನೈಟ್ ಎಲಿಮಿನೇಷನ್ ಆಗುತ್ತಾರೆ. ಅಂದರೆ ಇವರು ಬಿಗ್ ಬಾಸ್ ವೇದಿಕೆಗೆ ಹೋಗುವುದಿಲ್ಲ ಬದಲಾಗಿ ನೇರವಾಗಿ ತಮ್ಮ ಮನೆಗೆ ಹೋಗುತ್ತಾರೆ. ಫಿನಾಲೆ ದಿನ ಕಿಚ್ಚ ಸುದೀಪ್ ಅವರ ಜೊತೆ ಮಾತನಾಡಲಿದ್ದಾರೆ ಹಾಗಾಗಿ ಈ ವಾರ ಹೈ ವೋಲ್ಟೇಜ್ ಶೋ ಇರೋದಂತು ಖಚಿತ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಇಲ್ಲಿಯವರೆಗೂ ಸ್ಪರ್ಧಿಸಿದಂತಹ 17 ಜನರ ಪೈಕಿ ಬಾಕಿ ಉಳಿದಿರುವಂತಹ ಆರು ಜನರಲ್ಲಿ ಇಬ್ಬರೂ ಫೈನಲ್ ಲಿಸ್ಟ್ ಹೆಸರುಗಳನ್ನು ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ. ಅಂದರೆ ಈ ವಾರ ನಡೆಯುವಂತಹ ಮಿಡ್ ನೈಟ್ ಎಲಿಮಿನೇಷನ್ ನಿಂದ ಇಬ್ಬರು ಸ್ಪರ್ಧಿಗಳು ಬಚವಾಗುತ್ತಾರೆ. ಇವರು ನೇರವಾಗಿ ಹಂತಕ್ಕೆ ತಲುಪುತ್ತಾರೆ ಅಷ್ಟಕ್ಕೂ ಇಬ್ಬರು ಅದೃಷ್ಟವಂತ ಸ್ಪರ್ಧಿಗಳು ಯಾರು ಎಂಬುದನ್ನು ನೋಡುವುದಾದರೆ. ಬಿಗ್ ಬಾಸ್ ಸೀಸನ್ ೯ ಪ್ರಾರಂಭವಾಗುವುದಕ್ಕಿಂತ ಮುಂಚೆ ಮಿನಿ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಬಂದಂತಹ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಇವರಿಬ್ಬರನ್ನು ಕೂಡ ಟಾಪ್ ಫೈನಲ್ ಲಿಸ್ಟ್ ಐದರಲ್ಲಿ ಆಯ್ಕೆ ಮಾಡಲಾಗಿದೆ.

ಈಗಾಗಲೇ ಫೈನಲ್ ಲಿಸ್ಟ್ ಗಳಲ್ಲಿ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಹೆಸರು ಇರುವುದರಿಂದ ಇನ್ನೂ ಮೂರು ಜನ ಮಾತ್ರ ಈ ಫಿನಾಲೆ ಹಂತಕ್ಕೆ ಬರಲಿದ್ದಾರೆ. ಹಾಗಾಗಿ ಬಾಕಿ ಉಳಿದಿರುವಂತಹ ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ದಿವ್ಯ ಉರುಡುಗ ಈ ನಾಲ್ಕು ಜನರಲ್ಲಿ ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಕೆಲವು ಮಾಹಿತಿಗಳ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ರಾಕೇಶ್ ಅಡಿಗ ಆಗಬಹುದು ಅಂತ ಹೇಳುತ್ತಿದ್ದಾರೆ. ಆದರೆ ಬಿಗ್ ಬಾಸ್ ಯಾವ ಸಮಯದಲ್ಲಿ ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಯಾರಿಂದಲೂ ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ ಫಿನಾಲೆವರೆಗೂ ಕಾಯಲೇಬೇಕು. ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ಅನ್ನು ಯಾರು ಗೆಲ್ಲಬೇಕು ಎಂಬುದನ್ನು ತಪ್ಪದೇ ಕಮೆಂಟ್ ಮಾಡಿ.