Sunday, June 4, 2023
HomeEntertainmentಒಂದೇ ವರ್ಷದಲ್ಲಿ 15ಕ್ಕೂ ಹೆಚ್ಚು ಸಿನಿಮಾ ಬಿಡುಗಡೆ ಮಾಡಿ ದಾಖಲೆ ನಿರ್ಮಿಸಿದ್ದ ನಟ ಯಾರು ಗೊತ್ತಾ.?

ಒಂದೇ ವರ್ಷದಲ್ಲಿ 15ಕ್ಕೂ ಹೆಚ್ಚು ಸಿನಿಮಾ ಬಿಡುಗಡೆ ಮಾಡಿ ದಾಖಲೆ ನಿರ್ಮಿಸಿದ್ದ ನಟ ಯಾರು ಗೊತ್ತಾ.?

ಒಂದೇ ವರ್ಷಕ್ಕೆ ಬರೊಬ್ಬರಿ 15 ಸಿನಿಮಾ ರಿಲೀಸ್ ಮಾಡಿದ ನಾಯಕ ನಟ

ಕನ್ನಡ ಚಲನಚಿತ್ರ ರಂಗದಲ್ಲಿ ಹಾಗೂ ಕರ್ನಾಟಕದ ಜನರ ಮನದಲ್ಲಿ ಇಂದು ಅವರು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದಿದ್ದರೂ ಶಾಶ್ವತವಾಗಿ ಸ್ಥಾನವನ್ನು ಗಿಟ್ಟಿಸಿಕೊಂಡಿರುವಂತ ಒಬ್ಬ ಮಹಾನ್ ನಟ ಇದ್ದಾರೆ. ಶಂಕರ್ ನಾಗ್(Shankar Nag) ಅವರ ಆ ಅದ್ಭುತ ಪ್ರತಿಭೆ ಬಗ್ಗೆ ಎಷ್ಟು ಹೇಳಿದರು ಕೂಡ ಕಡಿಮೆಯೇ. ಕಡಿಮೆ ಕಾಲ ಕನ್ನಡ ಕಲಾ ದೇವಿಯ ಸೇವೆ ಮಾಡುವ ಅವಕಾಶ ಸಿಕ್ಕಿದರೂ ಕೂಡ ಇಂದಿಗೂ ಅವರನ್ನೇ ಫೇವರೆಟ್ ಹೀರೋ ಅನ್ನುವಷ್ಟು ಅವರನ್ನೇ ನೆನೆಯುವಷ್ಟು ಅಪಾರ ಕೊಡುಗೆ ಸಲ್ಲಿಸಿ ಹೋಗಿದ್ದಾರೆ.

ಇವರ ಹತ್ತಿರದ ಎಲ್ಲರೂ ಸಹ ಇವರನ್ನು ಪಾದರಸ ಎಂದೇ ಕರೆಯುತ್ತಿದ್ದರು ಆ ರೀತಿ ಸದಾ ಚಟುವಟಿಕೆಯಿಂದ ಕೂಡಿದ ಚೇತನವಾಗಿದ್ದ ಶಂಕರ್ ನಾಗ್ ಅವರು ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಮಾತ್ರವಲ್ಲದೆ ಕರ್ನಾಟಕವನ್ನು ಎಲ್ಲಾ ರೀತಿಯಲ್ಲಿಯೂ ಏಳಿಗೆ ಮಾಡಬೇಕು ಎಂದು ಕನಸು ಕಂಡಿದ್ದ ಒಬ್ಬ ವಿಶೇಷ ವ್ಯಕ್ತಿ. ಶಂಕರ್ ನಾಗರಕಟ್ಟೆ ಎನ್ನುವ ಇವರು ಜನಿಸಿದ್ದು ಉತ್ತರ ಕರ್ನಾಟಕ ಜಿಲ್ಲೆಯ ಒಂದು ಹಳ್ಳಿಯಲ್ಲಿ. ನಂತರ ಮುಂಬೈ ಅಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾಗಲೇ ಮರಾಠಿ ನಾಟಕಗಳತ್ತ ಆಕರ್ಷಿತರಾದರು.

ಅಲ್ಲಿ ಒಂದು ನಾಟಕದಲ್ಲಿ ತೊಡಗಿಸಿಕೊಂಡ ಮೇಲೆ ಕನ್ನಡದಲ್ಲಿ ಗಿರೀಶ್ ಕಾರ್ನಾಡ್ ಅವರ ಒಂದನೊಂದು ಕಾಲದಲ್ಲಿ ಸಿನಿಮಾದಲ್ಲಿ ಅಭಿನಯಿಸುವ ಭಾಗ್ಯ ಪಡೆದುಕೊಂಡರು. ಆನಂತರ ಅವರ ಬದುಕಿನ ದಿಕ್ಕೇ ಬದಲಾಗಿ ಹೋಯಿತು. ಬ್ಯಾಂಕ್ ನೌಕರರಾಗಿದ್ದ ಶಂಕರ್ ನಾಗ್ ಅವರು ತಮ್ಮ ಅಣ್ಣ ಅನಂತ್ ನಾಗ್ ಅವರನ್ನು ಸಹ ಚಿತ್ರರಂಗದತ್ತ ಕರೆ ತಂದರು. ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಕಾರಣ ತಬಲ ಕೊಳಲು ಹೀಗೆ ನಾನಾ ವಾದ್ಯಗಳನ್ನು ನುಡಿಸುವ ಕಲೆ ಕೂಡ ಗೊತ್ತಿತ್ತು. ಹೀಗಾಗಿ ನಾಟಕದಲ್ಲಿ ಇವರು ನೆಲೆಯೂರಲು ಇದೆಲ್ಲ ಅನುಕೂಲಕ್ಕೆ ಬಂತು.

ನಂತರ ತಮ್ಮದೇ ನಿರ್ಮಾಣದಲ್ಲಿ ಮಿಂಚಿನ ಓಟ, ಜನುಮ ಜನುಮದ ಅನುಬಂಧ ಮತ್ತು ಗೀತಾ ಸಿನಿಮಾಗಳನ್ನು ನಿರ್ಮಾಣ ಮಾಡಿದರು. ಆ ಕಾಲದ ನಿರ್ದೇಶಕರುಗಳ ಪಟ್ಟಿಯಲ್ಲಿ ಹೆಸರು ಕೂಡ ಗಿಟ್ಟಿಸಿಕೊಂಡಿದ್ದ ಇವರು ಕ್ರಿಯೇಟಿವ್ ಐಡಿಯಾಸ್ ಗಳನ್ನು ಹೊಂದಿದ್ದರು. ಹೊಸ ಬಗೆಯ ನಿರ್ದೇಶಕ ಎನ್ನುವ ಭರವಸೆಯನ್ನು ಮೂಡಿಸಿದ್ದ ಇವರು ಎಲ್ಲಾ ಝೋನರ್ ನ ಚಿತ್ರಗಳನ್ನು ಸಹ ಮಾಡಿರುವುದನ್ನು ಅವರ ಸಿನಿಮಾಗಳಲ್ಲಿ ಗಮನಿಸಬಹುದು. ಗಿರೀಶ್ ಕಾರ್ನಾಡ್ ಅವರ ನಾಟಕಗಳಾದ ಅಂಜುಮಲ್ಲಿಗೆ ಮತ್ತು ನೋಡಿ ಸ್ವಾಮಿ ನಾವಿರೋದು ಹೀಗೆ ಇವುಗಳನ್ನು ನಿರ್ದೇಶಿಸಿದ ಇವರಿಗೆ ಅಪಾರ ಹೆಸರು ಕೂಡ ಬಂತು.

ದೂರದರ್ಶನದ ಗೆ ಹೆಚ್ಚು ಮಹತ್ವವಿದ್ದ ಕಾಲವಾಗಿದ್ದ ಆ ಸಮಯದಲ್ಲಿ ಮಾಲ್ಗುಡಿ ಡೇಸ್ ಎನ್ನುವ ಸೀರೀಸ್ ಮಾಡಿ ಸಾಧಕ ಎನಿಸಿಕೊಂಡರು. ಇಷ್ಟೆಲ್ಲ ಸಾಧನೆ ಮಾಡಿದ್ದ ಇವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಬಂದಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಇವರು ಮಾಡಿರುವ ಸಿನಿಮಾಗಳು 80ನ್ನು ದಾಟಿವೆ. ಅರುಂಧತಿ ಅವರನ್ನು ವಿವಾಹವಾಗಿ ಕಾವ್ಯ ಎನ್ನುವ ಮಗುವಿಗೆ ತಂದೆ ಕೂಡ ಆಗಿದ್ದ ಇವರು ಆ ದಿನದಲ್ಲೇ ಕರ್ನಾಟಕಕ್ಕೆ ಮೆಟ್ರೋ ತರಸುವ ಕನಸು ಕಂಡಿದ್ದರು.

ಆಟೋ ರಾಜ, ಕರಾಟೆ ಕಿಂಗ್ ಎಂದೆಲ್ಲ ಬಿರುದು ಪಡೆದುಕೊಂಡಿರುವ ಇವರು ಇಂದು ನಮ್ಮೊಂದಿಗೆ ಇಲ್ಲ ಎನ್ನುವುದು ಇಡೀ ಕರ್ನಾಟಕಕ್ಕೆ ದೊಡ್ಡ ನಷ್ಟ. ಇಷ್ಟೆಲ್ಲ ಸಾಧನೆ ಜೊತೆ ಒಂದೇ ವರ್ಷದಲ್ಲಿ 15ಕ್ಕೂ ಹೆಚ್ಚು ಸಿನಿಮಾಗಳನ್ನು ಬಿಡುಗಡೆ ಮಾಡಿದ ನಟ ಎನ್ನುವ ಖ್ಯಾತಿ ಮೊದಲಿಗೆ ಇವರಿಗೆ ಸಲ್ಲುತ್ತದೆ. ಒಂದೇ ವರ್ಷದಲ್ಲಿ ಇವರ ನಗ ಬೇಕಮ್ಮ ನಗಬೇಕು, ರಕ್ತ ತಿಲಕ, ಬೆಂಕಿಯ ಬಲೆ, ಆಕ್ಸಿಡೆಂಟ್, ಕಾಳಿಂಗ ಸರ್ಪ, ಬೆದರು ಬೊಂಬೆ, ಇಂದಿನ ಭಾರತ, ಪವಿತ್ರ ಪ್ರೇಮ, ಗಂಡಬೇರುಂಡ, ಶಪಥ ಇನ್ನೂ ಮುಂತಾದ 15 ಸಿನಿಮಾಗಳು ಬಿಡುಗಡೆ ಆಗಿದ್ದವು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ