Home Blog Page 258

ನನ್ಗೂ ಸಂಗಾತಿ ಬೇಕು ಅನ್ಸುತ್ತೆ ಆದ್ರೆ ಈ ವಯಸ್ಸಲ್ಲಿ 2ನೇ ಮದ್ವೆ ಆಗೋದು ಸ್ವಲ್ಪ ಕಷ್ಟ ಜನ ಏನ್ ಅನ್ಕೋತಾರೋ ಅನ್ನೋ ಭಯವಿದೆ ಎಂದ ನಟಿ ಪ್ರಗತಿ.

 

ಪ್ರಗತಿ ಅವರು ಸದ್ಯಕ್ಕೆ ತೆಲುಗು ಸಿನಿಮಾ ರಂಗದ ಬಹು ಬೇಡಿಕೆಯ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದಾರೆ, ನಾಯಕಿ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಇವರು ಸದ್ಯಕ್ಕೆ ಈಗ ಪೋಷಕ ನಟಿಯಾಗಿ ನೆಲೆ ಕಂಡುಕೊಂಡಿದ್ದಾರೆ. 1994ರಲ್ಲಿ ಹೀರೋಯಿನ್ ಆಗಿ ಎಂಟ್ರಿ ಆಗಿದ್ದ ಇವರು ತಮಿಳು ಮತ್ತು ಮಲಯಾಳಂ ಭಾಷೆಯಲ್ಲೂ ಕೂಡ ಅಭಿನಯಿಸಿದ್ದರು ಇದಾದ ಬಳಿಕ ಮದುವೆ ಆಗಿ ವೈಯಕ್ತಿಕ ಜೀವನದ ಕಡೆ ಗಮನ ಹರಿಸಿದ್ದರು.

ಅನೇಕ ವರ್ಷಗಳ ನಂತರ ಮಹೇಶ್ ಬಾಬು ಅವರ ಬಾಬಿ ಸಿನಿಮಾದಲ್ಲಿ ಕಂಬ್ಯಾಕ್ ಮಾಡಿದರು. ಈಗ ಅವರು ತಮ್ಮ ಕೆರಿಯರ್ ಜೊತೆ ಸೋಶಿಯಲ್ ಮೀಡಿಯಾದಲ್ಲೂ ಬಹಳ ಆಕ್ಟಿವ್ ಆಗಿದ್ದಾರೆ. ಅಲ್ಲಿ ಆಗಾಗ ಅವರ ವರ್ಕೌಟ್ ಆಕ್ಟಿವಿಟೀಸ್ ಬಗ್ಗೆ ಪೋಸ್ಟ್ ಮಾಡುತ್ತಾ ಮತ್ತು ಕೆಲವು ಹಾಡಿಗಳಿಗೆ ರೀಲ್ಸ್ ಮಾಡುತ್ತಾ ಫಾಲೋವರ್ಸ್ ಗೆ ರಂಜಿಸುತ್ತಾರೆ.

ಈ ಮಧ್ಯೆ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದು ತಮ್ಮ ವಿವಾಹ ಜೀವನದ ಕುರಿತು ಮತ್ತು ವೈಯಕ್ತಿಕ ಜೀವನದ ಕೆಲವು ಘಟನೆಗಳನ್ನು ನೆನೆದು ಮಾತನಾಡಿದ್ದಾರೆ. ಪ್ರಗತಿ ಅವರಿಗೆ ಬಾಲ್ಯದಲ್ಲಿ ಪೊಲೀಸ್ ಆಗುವ ಆಸೆ ಇತ್ತಂತೆ. ಆದರೆ ಓದಿನಲ್ಲಿ ಬಹಳ ಹಿಂದೆ ಇದ್ದ ಕಾರಣ ಅದು ಎಟುಕದ ಕನಸು ಎನ್ನುವುದನ್ನು ಅರಿತು ನಂತರ ಸಿನಿಮಾ ರಂಗದ ಕಡೆ ಮುಖ ಮಾಡಿದರಂತೆ.

ಅವರೇ ಹೇಳಿಕೊಂಡಂತೆ ಈಗ ಅವರು ಅಭಿನಯದಲ್ಲಿ ಆಸಕ್ತಿಯಿಂದ ನಡೆಸುತ್ತಿದ್ದಾರಂತೆ ಮತ್ತು ತುಂಬಾ ಎಫರ್ಟ್ ಹಾಕುತ್ತಿದ್ದರಂತೆ. ಆದರೆ ಇದನ್ನೇ ತಮ್ಮ ಆರಂಭದ ದಿನಗಳಲ್ಲಿ ಮಾಡುತ್ತಿದ್ದರೆ ಚೆನ್ನಾಗಿರುತ್ತಿತ್ತು, ಇನ್ನು ಹೆಚ್ಚು ಹೆಸರು ಮಾಡುತ್ತಿದ್ದೆ ಎಂದು ಪಶ್ಚತ್ತಾಪ ಪಟ್ಟು ಕೊಂಡಿದ್ದಾರೆ ಮತ್ತು ಮದುವೆ ವಿಷಯದಲ್ಲಿ ಕೂಡ ನಾನು ತಪ್ಪು ಮಾಡಿಬಿಟ್ಟೆ.

ಬಹಳ ಚಿಕ್ಕವಯಸ್ಸಿಗೆ ಅಂದರೆ 20ನೇ ವಯಸ್ಸಿಗೆ ಮದುವೆ ಆದೆ ಆಗ ನನಗೆ ತುಂಬಾ ಇಗೋ ಇತ್ತು ಏನು ಬೇಕಾದರೂ ಮಾಡುತ್ತೇನೆ ಎನ್ನುವ ಆಟಿಟ್ಯೂಡ್ ಇತ್ತು. ಆದರೆ ಆ ನಡವಳಿಕೆಯೇ ನನ್ನ ಇಂದಿನ ಪರಿಸ್ಥಿತಿಗೆ ಕಾರಣ ಅದರಿಂದ ನಾನು ಬಹಳ ಕಷ್ಟವನ್ನು ಅನುಭವಿಸ ಬಿಟ್ಟೆ ಅಂದಿದ್ದಾರೆ. ಈಗ ಸದ್ಯಕ್ಕೆ ಪತಿಯಿಂದ ದೂರವಾಗಿ ಹಲವು ವರ್ಷಗಳಿಂದ ಮಗಳೊಂದಿಗೆ ಜೀವನ ನಡೆಸುತ್ತಿದ್ದಾರೆ.

ಸಿಂಗಲ್ ಮದರ್ ಆಗಿರುವ ಇವರಿಗೆ ಮತ್ತೊಂದು ಮದುವೆ ಕುರಿತಾಗಿ ಕೂಡ ಈ ಸಂದರ್ಶನದಲ್ಲಿ ಪ್ರಶ್ನೆ ಕೇಳಲಾಗಿದೆ. ಅದಕ್ಕಾಗಿ ಅವರು ತುಂಬಾ ಪ್ರಾಮಾಣಿಕವಾಗಿ ಉತ್ತರ ನೀಡಿದ್ದಾರೆ. ನನಗೂ ಕೂಡ ಸಂಗಾತಿ ಬೇಕು ಎಂದು ಅನಿಸುತ್ತದೆ ಆದರೆ ಅವರು ತುಂಬಾ ಮೆಚರ್ಡ್ ಮೈಂಡೆಡ್ ಆಗಿರಬೇಕು.

ಮೊದಲೆಲ್ಲಾ ಆಗಿದ್ದರೆ ನಾನು ಅಡ್ಜಸ್ಟ್ ಮಾಡಿಕೊಂಡು ಇರುತ್ತಿದ್ದೆ ಆದರೆ ಈಗ ನಾನು ಆ ರೀತಿ ಅಡ್ಜಸ್ಟ್ ಆಗಿ ಬೇರೆಯವರಿಗೆ ಹೊಂದಿಕೊಂಡು ಬದುಕುವುದು ಕೂಡ ಬಹಳ ಕಷ್ಟ ಎಂದಿದ್ದಾರೆ. ಹಾಗಾದರೆ ಪ್ರಗತಿ ಮರು ಮದುವೆಯಾಗುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರಾ ಎನ್ನುವ ಅನುಮಾನಗಳು ಕಾಡುತ್ತಿವೆ. ಈಗಾಗಲೇ ಸಿನಿಮಾ ರಂಗದಲ್ಲಿರುವ ಹಲವು ಸೆಲೆಬ್ರೆಟಿಗಳೆಲ್ಲಾ ಎರಡನೇ ಮದುವೆ ಆಗಿದ್ದಾರೆ ಅದರಲ್ಲಿ ಹಲವರು ಎರಡನೇ ಮದುವೆಯಲ್ಲಿ ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ.

ಪ್ರಗತಿ ಅವರು ಈ ನಿರ್ಧಾರ ತೆಗೆದುಕೊಂಡರೆ ಅವರನ್ನು ಮದುವೆಯಾಗಲು ಸಾಕಷ್ಟು ಜನ ಸಾಲು ನಿಲ್ಲುತ್ತಾರೆಂದರೆ ಅದು ಕೂಡ ಸುಳ್ಳಲ್ಲ. ಆದರೆ ನಟಿ ಈಗ ತಮ್ಮ ಅಭಿನಯದ ಬಗ್ಗೆ ಮಾತ್ರ ಗಮನ ಕೊಡುತ್ತಿದ್ದು ಹಾಗೆ ಬದುಕು ಕಳೆಯುವ ನಿರ್ಧಾರ ಮಾಡಿರುವಂತೆ ಕಾಣುತ್ತಿದೆ. ಅವರ ನಿರ್ಧಾರ ಏನೇ ಇದ್ದರೂ ಅವರ ಇಚ್ಛೆ ಅಂತ ಬದುಕೇ ಅವರದ್ದಾಗಲಿ ಎಂದು ಹರಿಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಇಷ್ಟು ವರ್ಷ ಮುಚ್ಚಿಟ್ಟ ಸತ್ಯವನ್ನು ಪುಸ್ತಕದಲ್ಲಿ ಬರೆದು ತನ್ನ ಜೀವನದ ನೋವಿನ ಕಥೆ ಹೇಳಿಕೊಂಡ ನಟಿ ಲೀಲಾವತಿ.

ಲೀಲಾವತಿ ಅವರು ಕನ್ನಡದ ಹೆಸರಾಂತ ಹಿರಿಯ ಕಲಾವಿದೆ. ಕನ್ನಡ ಚಿತ್ರರಂಗ ಇಂದು ಎಷ್ಟೇ ಅಂತರಾಷ್ಟ್ರೀಯ ಮಟ್ಟಕ್ಕೆ ಹೆಸರು ಮಾಡಿದರು ಅದಕ್ಕೆ ಭದ್ರ ಬುನಾದಿ ಹಾಕಿದ ಕಲಾವಿದರಲ್ಲಿ ಲೀಲಾವತಿ ಅವರ ಹೆಸರು ಕೂಡ ಸೇರುತ್ತದೆ ಎಂದರೆ ಆ ಮಾತು ತಪ್ಪಾಗುವುದಿಲ್ಲ. ನಾಟಕಗಳಲ್ಲಿ ಕಪ್ಪು ಬಿಳುಪು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಇವರು ಸುಮಾರು ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ತನ್ನ ವೃತ್ತಿ ಜೀವನದ ಉದ್ದಕ್ಕೂ ಸಿನಿಮಾದ ನಾಯಕಿ ಮಹಾರಾಣಿ, ಬಜಾರಿ ಅತ್ತೆ, ಮುಗ್ಧ ಸೊಸೆ, ಪ್ರೀತಿಯ ಮಡದಿ, ಖಳನಾಯಕಿ, ತಾಯಿ ಹೀಗೆ ನಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಇವರು ಮದುವೆ ಆದ ಬಳಿಕ ಅನುಭವಿಸಿದ ಸಮಸ್ಯೆಗಳು ಹಾಗೂ ಅದರಲ್ಲೂ ಮಗ ವಿನೋದ್ ರಾಜಕುಮಾರ್ ಅವರು ಜನಿಸಿದ ಬಳಿಕ ಕಂಡ ಕಷ್ಟಗಳ ಬಗ್ಗೆ ರವಿ ಬೆಳಗೆರೆ ಅವರು ಬರೆದಿರುವ ರಾಜ್ ಲೀಲಾ ವಿನೋದ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ಈ ಪುಸ್ತಕವು ಬಿಡುಗಡೆ ಆದ ಮೇಲೆ ವಿವಾದದಲ್ಲಿ ಸಿಲುಕಿಕೊಂಡಿತ್ತು ಅಲ್ಲದೆ ಈ ಪುಸ್ತಕದ ಮುಖ ಪುಟದಲ್ಲಿ ಇದ್ದ ರಾಜ್ ಲೀಲಾವತಿ ಮತ್ತು ವಿನೋದ್ ರಾಜ್ ಅವರ ಫೋಟೋ ಇಂದ ಬಹಳ ಕುತೂಹಲ ಉಂಟು ಮಾಡಿ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಹೊಂದಿತ್ತು. ಈ ಪುಸ್ತಕದಲ್ಲಿ ರಾಜ್ ಕುಮಾರ್ ಅವರ ಜೀವನದ ಕುರಿತು ಮತ್ತು ಅವರ ಸಂಬಂಧದ ಹಲವು ವಿಷಯಗಳನ್ನು ಬರೆಯಲಾಗಿದೆ.

ಈ ಪುಸ್ತಕಕ್ಕೆ ಮಾಹಿತಿಯನ್ನು ಸ್ವತಃ ಲೀಲಾವತಿ ಅವರೇ ಕೊಟ್ಟಿದ್ದು ಅವರು ಹೇಳಿದ್ದ ವಿಷಯವನ್ನು ಅದೇ ರೀತಿ ಅಚ್ಚಿಳಿಸಲಾಗಿದೆ ಯಾವುದೇ ವಿಷಯವನ್ನು ಕೂಡ ಮುಚ್ಚಿಡಿದ ಇವರು ಒಮ್ಮೆ ಸಾ.ಯು.ವ ಬಗ್ಗೆ ನಿರ್ಧಾರ ಮಾಡಿದ ವಿಷಯವನ್ನು ಕೂಡ ಅದರಲ್ಲಿ ಹೇಳಿಕೊಂಡಿದ್ದಾರೆ. ವಿನೋದ್ ರಾಜಕುಮಾರ್ ಅವರು ಹೊಟ್ಟೆಯಲ್ಲಿರುವಾಗ ಲೀಲಾವತಿ ಅವರಿಗೆ ಅವಕಾಶಗಳು ಹೆಚ್ಚಾಗಿ ಸಿಗುತ್ತಿರಲಿಲ್ಲವಂತೆ.

ಅಲ್ಲದೆ ಗರ್ಭಿಣಿ ಆಗಿದ್ದ ಅವರಿಗೆ ಆ ಸಮಯದಲ್ಲಿ ಅವರು ಹಣಕಾಸಿನ ಸಮಸ್ಯೆಯನ್ನು ಕೂಡ ಅನುಭವಿಸಿದ್ದಾರಂತೆ. ಎಷ್ಟರ ಮಟ್ಟಿಗೆ ಎಂದರೆ ಕೋಳಿ ಮೊಟ್ಟೆಯನ್ನು ತಿನ್ನಲು ಹಣ ಇಲ್ಲದ ಕಾರಣ ಬಯಕೆ ಆದ ಕೋಳಿಮೊಟ್ಟೆ ತಿನ್ನುವ ಆಸೆಯನ್ನು ಈಡೇರಿಸಿಕೊಳ್ಳಲು ಕಡಿಮೆ ಬೆಲೆಗೆ ಸಿಗುವ ಬಾತುಕೋಳಿ ಮೊಟ್ಟೆಯನ್ನು ತಿಂದಿದ್ದಾರಂತೆ. ಮಗು ಚಿಕ್ಕವರಾಗಿದ್ದಾಗ ಮನೆ ಕೆಲಸದವರು ಕೂಡ ಕೆಲಸ ಬಿಟ್ಟು ಹೋದರಂತೆ.

ಮನೆಯನ್ನು ನಡೆಸಲು ತೀರ ಹಣಕಾಸಿನ ಅಭಾವ ಉಂಟಾದ ಸಂದರ್ಭದಲ್ಲಿ ಒಂದು ಸಮಯದಲ್ಲಿ ಮಗುವನ್ನು ಸಾ.ಯಿ.ಸಿ ತಾವು ಕೂಡ ಸಾ.ಯು.ವ ನಿರ್ಧಾರವನ್ನು ಮಾಡಿದ್ದರಂತೆ. ಒಂದು ದಿನ ವಿನೋದ್ ರಾಜಕುಮಾರ್ ಅವರನ್ನು ತೊಟ್ಟಿಲಿನಲ್ಲಿ ಹಾಕಿ ಜೋರಾಗಿ ತೂಗುತ್ತಿದ್ದರಂತೆ. ಅಳುತ್ತಿದ್ದ ವಿನೋದ್ ರಾಜ್ ಅವರು ತಕ್ಷಣ ಸುಮ್ಮನಾಗಿ ಅವರನ್ನೇ ದಿಟ್ಟಿಸಿ ನೋಡುತ್ತಿದ್ದರಂತೆ.

ಆಗ ಅವರು ತಮ್ಮ ಸಾ.ಯು.ವ ನಿರ್ಧಾರವನ್ನು ಕೈ ಬಿಟ್ಟು ಜೀವನದಲ್ಲಿ ಏನೇ ಸಮಸ್ಯೆ ಬಂದರೂ ಛಲದಿಂದ ಬದುಕುತ್ತೇನೆ ನಿನ್ನನ್ನು ಸಹ ಅದೇ ರೀತಿ ಬೆಳೆಸುತ್ತೇನೆ ಎಂದು ದೊಡ್ಡ ನಿರ್ಧಾರ ಮಾಡಿ ಮತ್ತೆ ಚಿತ್ರ ರಂಗಕ್ಕೆ ಮರಳುವ ನಿರ್ಧಾರ ಮಾಡಿದರಂತೆ. ಈಗ ಚಿತ್ರರಂಗದ ಸಹವಾಸವೇ ಬೇಡ ಎಂದು ಅಮ್ಮ ಮಗ ಇಬ್ಬರೂ ಕೂಡ ಕೃಷಿ ಮಾಡುವ ನಿರ್ಧಾರ ಮಾಡಿ ನೆಲಮಂಗಲ ಸಮೀಪ ಜಮೀನು ಖರೀದಿಸಿ ಕೃಷಿ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಈ ಪುಸ್ತಕದಲ್ಲಿ ಇವರ ಬದುಕಿನ ಕುರಿತು ಹಲವು ಮಾಹಿತಿ ಇದ್ದು ರಾಜ್ ಲೀಲಾ ಮತ್ತು ವಿನೋದರ ಕುರಿತ ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ.

ತುಳು ಜನರು ಹೆಣ್ಣಿಗೆ ಬಹಳಷ್ಟು ಗೌರವ ನೀಡ್ತಾರೆ. ಅವತ್ತು ಬೆಡ್ ರೂಂ ನಲ್ಲಿ ಸಾನ್ಯಾ ಜೊತೆ ಆದ ಘಟನೆ ಹೇಳ್ತಿನಿ ಕೇಳಿ ಆಮೇಲೆ ನಿರ್ಧಾರ ಮಾಡಿ ನಾನು ಮಾಡಿದ್ದು ತಪ್ಪ ಅಥವಾ ಸರಿ ನಾ ಅಂತ.

 

ರೂಪೇಶ್ ಶೆಟ್ಟಿ ಅವರು ಈ ವರ್ಷದ ಬಿಗ್ ಬಾಸ್ ಕಾರ್ಯಕ್ರಮದ ವಿನ್ನರ್ ಹಾಕಿ ಹೊರಬಂದಿದ್ದಾರೆ. ಇವರು ಓಟಿಟಿಗೆ ಪ್ರವೇಶ ಪಡೆದ ದಿನದಿಂದಲೇ ಹಲವಾರು ಜನರು ಇವರೇ ವಿನ್ನರ್ ಆಗುತ್ತಾರೆ ಎಂದು ಊಹಿಸಿದ್ದರು. ಎಲ್ಲರ ನಿರೀಕ್ಷೆಯಂತೆ ತಮ್ಮ ಅತ್ಯುತ್ತಮ ವ್ಯಕ್ತಿತ್ವ ಹಾಗೂ ಉತ್ತಮ ಆಟದಿಂದ ರೂಪೇಶ್ ಶೆಟ್ಟಿ ಅವರು ವಿನ್ ಆಗಿದ್ದಾರೆ. ಗೆದ್ದು ಬಂದ ಬಳಿಕ ಹಲವು ಸಂದರ್ಶನಗಳಲ್ಲೂ ಭಾಗಿಯಾಗುತ್ತಿದ್ದಾರೆ.

ಈ ಸಂದರ್ಶನದಲ್ಲಿ ಬಿಗ್ ಬಾಸ್ ದಿನದ ಕ್ಷಣಗಳ ಕುರಿತು, ಅಲ್ಲಿ ಆದ ಫ್ರೆಂಡ್ಶಿಪ್ ಪ್ರೀತಿ ಜಗಳ ನೋವು ನಲಿವು ಆಟ ಎಲ್ಲದರ ಕುರಿತು ಮಾತನಾಡಿದ್ದಾರೆ. ಜೊತೆಗೆ ಎಲ್ಲರ ಕೋಪಕ್ಕೆ ಗುರಿ ಆಗಿದ್ದ ಕ್ಯಾಪ್ಟನ್ ಬೆಡ್ರೂಮ್ ವಿಷಯದ ಬಗ್ಗೆ ಸ್ಪಷ್ಟತೆ ಕೂಡ ಕೊಟ್ಟಿದ್ದಾರೆ. ಒಟಿಟಿ ಶೋ ಮುಗಿದ ಬಳಿಕ ಬಿಗ್ ಮನೆ ಬಿಗ್ಬಾಸ್ ಗೆ ಹೋದ ಮೂರನೇ ವಾರದಲ್ಲಿ ಕ್ಯಾಪ್ಟನ್ ರೂಮ್ ಅನ್ನು ಆರ್ಯವರ್ಧನ್ ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅವರು ಬಳಸಿಕೊಂಡಿದ್ದರು.

ಕ್ಯಾಪ್ಟನ್ ಬೆಡ್ ಮೇಲೆ ಮಲಗಿ ಮೂರು ಜನ ಮಾತನಾಡುತ್ತಿದ್ದರು. ಆದರೆ ಈ ರೀತಿ ಕ್ಯಾಪ್ಟನ್ ರೂಮ್ ಅನ್ನು ಟಾಸ್ಕ್ ನಡೆದ ವೇಳೆ ಬೇರೆ ಬಾತ್ ರೂಮ್ಗಳನ್ನು ಮುಚ್ಚಿದಾಗ ಮಾತ್ರ ಬಳಸಬೇಕಾಗಿತ್ತು. ಆದರೆ ಎಲ್ಲವೂ ಮುಗಿದ ಬಳಿಕ ಕ್ಯಾಪ್ಟನ್ ರೂಮ್ ಇಂದ ಆಚೆ ಬರದೇ ಅಲ್ಲೇ ಮೂರು ಜನ ಇದ್ದದ್ದನ್ನು ಕಂಡು ಸುದೀಪ್ ಕೋಪಗೊಂಡಿದ್ದರು. ಅದರ ಬಗ್ಗೆ ಬಹಳ ಖಾರವಾಗಿ ಆ ವಾರದ ಪಂಚಾಯಿತಿ ಕಟ್ಟೆಯಲ್ಲಿ ಮೂರು ಜನರನ್ನು ತರಾಟೆಗೂ ತೆಗೆದುಕೊಂಡಿದ್ದರು.

ಆ ಸಂದರ್ಭದಲ್ಲಿ ರೂಪೇಶ್ ಶೆಟ್ಟಿ ಅವರು ಕಣ್ಣೀರು ಕೂಡ ಹಾಕಿದ್ದರು ಆ ದಿನ ಆ ಘಟನೆ ನಡೆದಾಗ ನನ್ನ ಬಗ್ಗೆ ಏನು ಅಭಿಪ್ರಾಯ ಹೊರ ಬರುತ್ತಿದೆ ನಾನು ಎಲ್ಲ ತಪ್ಪು ಮಾಡಿದೆ ಎನ್ನುವ ಭಯ ಕಾಡುತ್ತಿತ್ತು. ತುಳು ಜನರು ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಎಷ್ಟು ಬೆಲೆ ಕೊಡ್ತಾರೆ ಅಂತ ಎಲ್ಲರಿಗೆ ತಿಳಿದಿದೆ. ಅದೇ ರೀತಿ ಹೆಣ್ಣು ಮಕ್ಕಳಿಗೂ ಗೌರವ ಕೊಡುತ್ತಾರೆ ಅಂದು ಸುದೀಪ್ ಅವರು ಹೇಳಿದ ಆ ಮಾತುಗಳನ್ನು ಕೇಳಿ ನಾನು ಹೊರಗೆ ಹೇಗೆ ಬಿಂಬಿತವಾಗುತ್ತಿದ್ದೇನೆ.

ಇಷ್ಟು ದಿನದ ನನ್ನ ವ್ಯಕ್ತಿತ್ವಕ್ಕೆ ಇದು ಕಪ್ಪು ಚುಕ್ಕೆ ಆಗುತ್ತದೆಯೇ ಎನ್ನುವ ಭಯ ಕಾಡಿತ್ತು. ಅದೇ ಬೇಸರದಲ್ಲಿ ಮನೆಯಿಂದ ಹೊರ ಹೋಗುವ ನಿರ್ಧಾರ ಕೂಡ ಮಾಡಿದ್ದೆ. ಆದರೆ ಸುದೀಪ್ ಅವರು ನನಗೆ ಎಲ್ಲವನ್ನು ವಿವರಿಸಿ ಸಮಾಧಾನ ಪಡಿಸಿದರು. ಅಂದು ಅವರು ನನ್ನನ್ನು ಎಚ್ಚರಿಸಿದ್ದರು ಅಷ್ಟೇ ಆ ಘಟನೆ ಆದ ಬಳಿಕ ಆ ರೀತಿ ಎಲ್ಲೂ ಮತ್ತೆ ಮುಂದುವರೆದಂತೆ ನಾನು ನಡೆದುಕೊಂಡೆ.

ಬಿಗ್ ಬಾಸ್ ಮನೆಗೆ ಹೋದಾಗ ಎರಡು ಮೂರು ವಾರಗಳ ಕಾಲ ಮನೆಯ ಕ್ಯಾಮರಗಳ ಕುರಿತು ಕಾನ್ಶಿಯಸ್ ಆಗಿರುತ್ತೇವೆ. ಬಳಿಕ ಮನೆಯಲ್ಲಿ ಹೆಚ್ಚು ದಿನ ಕಳೆಯುತ್ತಿದ್ದಂತೆ ಕ್ಯಾಮರಾ ಇರುವುದನ್ನೇ ನಾವು ಮರೆತು ಬಿಡುತ್ತೇವೆ ಹಾಗೂ ಹೊರಗಡೆ ಜನರು ನಮ್ಮನ್ನು ನೋಡುತ್ತಿದ್ದಾರೆ ಎನ್ನುವುದು ಸಹ ಮರೆತು ಹೋಗುತ್ತದೆ. ಸಾನಿಯಾ ನನ್ನ ಬೆಸ್ಟ್ ಫ್ರೆಂಡ್ ಆಗಿದ್ದರಿಂದ ಅಷ್ಟು ಸಲಿಗೆ ನಮ್ಮ ನಡುವೆ ಇದ್ದಿದ್ದರಿಂದ ಆ ರೀತಿ ನಡೆದುಕೊಂಡೆ ಅಷ್ಟೇ ಎಂದಿದ್ದಾರೆ. ಆ ಸೀನ್ ನೋಡಿ ದಯವಿಟ್ಟು ನಮ್ಮ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಬೇಡಿ ಎಂದು ರೂಪೇಶ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

ನಾನು ಬಿಗ್ ಬಾಸ್ ಗೆಲ್ಲೋಕೆ ಅದೊಂದು ದೈವ ಶಕ್ತಿಯೇ ಕಾರಣ. ರೂಪೇಶ್ ಶೆಟ್ಟಿ ನಂಬಿದ ದೈವ ಯಾವುದು ಗೊತ್ತ.?

 

ದಿನ ದಿನಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದ್ದ ಬಿಗ್ ಬಾಸ್ ಸೀಸನ್ 9 ರ ಕಾರ್ಯಕ್ರಮ ಮುಗಿದಿದ್ದು, ಅಂತಿಮವಾಗಿ ರೂಪೇಶ್ ಶೆಟ್ಟಿ ಅವರು ಈ ಸೀಸನ್ ನ ವಿನ್ನರ್ ಆಗುವ ಮೂಲಕ ಬಿಗ್ ಆಟಕ್ಕೆ ತೆರೆ ಬಿದ್ದಿದೆ. ಬಿಗ್ ಬಾಸ್ ಓ ಟಿ ಟಿ ಕಾರ್ಯಕ್ರಮ ಶುರುವಾದ ದಿನದಿಂದಲೂ ರೂಪೇಶ್ ಶೆಟ್ಟಿ ಅವರ ಬಗ್ಗೆ ಪ್ರೇಕ್ಷಕರಿಗೆ ಬಹಳ ಹೋಪ್ ಇತ್ತು, ಈಗ ಅದು ನಿಜ ಆಗಿದ್ದು ಸೀಸನ್ 9ರ ಬಿಗ್ ಮನೆ ಆಟದಲ್ಲೂ ತಮ್ಮ ಅತ್ಯುತ್ತಮ ಆಟದಿಂದ ರೂಪೇಶ್ ಶೆಟ್ಟಿ ಅವರೇ ವಿನ್ ಆಗಿದ್ದಾರೆ.

ಇಷ್ಟು ದಿನಗಳ ಬಿಗ್ ಬಾಸ್ ಆಟದ ಕುರಿತು ಆಟದಲ್ಲಿನ ಏಳು ದಿನಗಳು ಮತ್ತು ಮನೆಯಲ್ಲಿನ ಇತರ ಅನುಭವಗಳ ಜೊತೆಗೆ ತಮ್ಮ ಸೀಕ್ರೆಟ್ ಆಫ್ ಸಕ್ಸಸ್ ಏನು ಎನ್ನುವುದನ್ನು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಕೊರಗಜ್ಜನ ಕಾರ್ಣಿಕದ ಬಗ್ಗೆ ಎಲ್ಲರಿಗೂ ತಿಳಿದಿದೆ. ಕರಾವಳಿ ಭಾಗದ ನಂಬಿಕೆ ದೈವ ಆಗಿರುವ ಕೊರಗಜ್ಜ ಭಕ್ತಿಯಿಂದ ಕೈ ಮುಗಿದು ಕೇಳಿಕೊಂಡವರಿಗೆ ಬೇಡಿದ್ದನ್ನು ಕೊಡುವ ದೈವ.

ರಕ್ಷಿತಾ ಅವರ ಸಲಹೆ ಮೇರೆಗೆ ವೇದ ಸಿನಿಮಾ ರಿಲೀಸ್ ಮುನ್ನ ದಿನ ಶಿವ ರಾಜ್ ಕುಮಾರ್ ಅವರು ಈ ಕ್ಷೇತ್ರಕ್ಕೆ ಭೇಟಿಕೊಟ್ಟು ಹರಕೆ ಕಟ್ಟಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೇ ಸಾಕಷ್ಟು ಉದಾಹರಣೆಗಳು ಕೊರಗಜ್ಜನ ಮಹಿಮೆ ಬಗ್ಗೆ ಸಿಗುತ್ತದೆ. ಅಂತಹದೇ ಮತ್ತೊಂದು ಉದಾಹರಣೆಯನ್ನು ತಮ್ಮ ಜೀವನದಲ್ಲಿ ನಡೆದ ಕಥೆಯನ್ನು ವಿವರಿಸಿ ಹೇಳಿದ್ದಾರೆ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅವರು.

ರೂಪೇಶ್ ಶೆಟ್ಟಿ ಅವರನ್ನು ಈಗ ಹಲವು ಮಾಧ್ಯಮಗಳು ಸಂದರ್ಶನ ಮಾಡುತ್ತಿದೆ. ಅದರಲ್ಲಿ ಒಂದು ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಗೆಲುವಿನ ನಿರೀಕ್ಷೆ ಇತ್ತಾ ಎಂದು ಅವರನ್ನು ಪ್ರಶ್ನಿಸಲಾಗಿದೆ. ಅದಕ್ಕೆ ರೂಪೇಶ್ ಅವರು ಈ ರೀತಿ ಉತ್ತರಿಸಿದ್ದಾರೆ. ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ನಾನು ಬಹಳ ಚಟುವಟಿಕೆಯಿಂದ ಪಾಲ್ಗೊಳ್ಳುತ್ತಿದ್ದೆ. ಆದರೆ ದೊಡ್ಡ ಪರದೆಯ ಬಿಗ್ ಬಾಸ್ ಗೆ ಬಂದ ಮೇಲೆ ಮಧ್ಯದಲ್ಲಿ ಸ್ವಲ್ಪ ದಿನ ನಾನು ತುಂಬಾ ಡಲ್ ಆಗಿ ಹೋದೆ.

ಆಗ ನಾನು ಕೊರಗಜ್ಜನನ್ನು ಬೇಡಿಕೊಂಡೆ ನಾನು ಎಲ್ಲೂ ಯಾರಿಗೂ ಮೋಸ ಮಾಡಿಲ್ಲ, ಯಾರ ಭಾವನೆಗಳು ನೋವು ಮಾಡಿಲ್ಲ, ಯಾವ ಸ್ಟ್ಯಾಟರ್ಜಿ ಕೂಡ ಮಾಡಿಲ್ಲ, ನಾನು ಇದ್ದಹಾಗೆ ನಡೆದುಕೊಂಡು ನನ್ನ ಅತ್ಯುತ್ತಮವನ್ನು ಕೊಡಲು ಪ್ರಯತ್ನ ಮಾಡುತ್ತಿದ್ದೇನೆ. ಆದರೂ ಇಷ್ಟು ಡಲ್ ಆಗುತ್ತಿದ್ದೇನೆ. ದಯವಿಟ್ಟು ನನ್ನನ್ನು ಗೆಲ್ಲಿಸು ಎಂದು ಕೇಳಿಕೊಂಡಿದ್ದೆ ಅದಕ್ಕೆ ಕೊರಗಜ್ಜ ನನಗೆ ಆಶೀರ್ವದಿಸಿದ್ದಾರೆ.

ಅದಾದ ಬಳಿಕ ಎರಡು ಬಾರಿ ಅತ್ಯುತ್ತಮ ಹಾಗೂ ಒಂದು ಬಾರಿ ಕಿಚ್ಚನ ಚಪ್ಪಾಳೆ ಪಡೆದು ಅಂತಿಮವಾಗಿ ನಾನು ವಿನ್ನರ್ ಆಗಿದ್ದೇನೆ. ಇದಕ್ಕೆಲ್ಲ ಕೊರಗಜ್ಜನ ಆಶೀರ್ವಾದವೇ ಕಾರಣ ಕಷ್ಟಪಟ್ಟು ಕೆಲಸ ಮಾಡಿ ಕೈಮುಗಿದು ಬೇಡಿಕೊಂಡರೆ ಖಂಡಿತವಾಗಿ ಆಶೀರ್ವಾದ ಮಾಡುತ್ತಾರೆ ಎಂದು ರೂಪೇಶ್ ಶೆಟ್ಟಿ ಅವರು ಹೇಳಿದ್ದಾರೆ. ಜೊತೆಗೆ ಮನೆಯ ಬಗ್ಗೆ ಮಾತನಾಡಿ ನಮಗೆ ಕ್ಯಾಪ್ಟನ್ ಆಗಲು ಇರುವುದು ಟಾಸ್ಕ್ ಒಂದೇ ದಾರಿ.

ಆ ಕಾರಣಕ್ಕಾಗಿ ನಾವು ಚೆನ್ನಾಗಿ ಆಡಬೇಕು ಆದರೆ ನಮ್ಮ ಆಟ ಯಾವ ರೀತಿ ಇದೆ ಎಂದು ಹೊರಗಡೆಯಿಂದ ಪ್ರೇಕ್ಷಕರು ನೋಡುತ್ತಿರುತ್ತಾರೆ, ಅವರ ಅಭಿಪ್ರಾಯ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗೆ ಬಿಗ್ ಬಾಸ್ ಆಟ ಒಂದು ರೀತಿ ನಮ್ಮ ಊಹೆಗೂ ನಿಲುಕದ್ದು ಎಂದಿದ್ದಾರೆ. ಕೆಲವೊಮ್ಮೆ ಮನುಷ್ಯನ ಪ್ರಯತ್ನದ ಜೊತೆಗೆ ದೈವ ಬಲವು ಇದ್ದರೆ ಯಾವುದೇ ಸ್ಪರ್ಧೆಯಾದರೂ ಸರಿ ಬದುಕಾದರೂ ಸರಿ ಅದನ್ನು ಗೆಲ್ಲಬಹುದು ಎಂಬುದಕ್ಕೆ ಇದೀಗ ರೂಪೇಶ್ ಶೆಟ್ಟಿಯವರೇ ನೈಜ ಉದಾಹರಣೆ ಕೊರಗಜ್ಜನ ಮೇಲೆ ನಿಮಗೆ ನಂಬಿಕೆ ಇದ್ದರೆ ತಪ್ಪದೇ ಜೈ ಕೊರಗಜ್ಜ ಎಂದು ಕಮೆಂಟ್ ಮಾಡಿ.

ಪ್ರಜ್ವಲ್ ದೇವರಾಜ್ ಹೆಂಡ್ತಿ ರಾಧಿಕಾ ಮಾಡ್ತಿರೋ ವರ್ಕೌಟ್ ವಿಡಿಯೋ ನೋಡಿ ಫಿದಾ ಆದ ಪಡ್ಡೆ ಹುಡುಗರು.

 

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಅವರು ಕೂಡ ಪ್ರಜ್ವಲ್ ಅವರಂತೆಯೇ ಕನ್ನಡ ಚಿತ್ರರಂಗದ ಫೇಮಸ್ ಫೇಸ್. ರಾಗಿಣಿ ಚಂದ್ರನ್ ಅವರು ಖ್ಯಾತ ಯೋಗಾಪಟು, ಹಾಗೂ ಡ್ಯಾನ್ಸರ್ ಮಾಡಲಿಂಗ್ ಹಾಗೂ ನಟನೆಯನ್ನೂ ಮಾಡಿ ಕರ್ನಾಟಕದಲ್ಲಿ ಗುರುತಿಸಿಕೊಂಡಿದ್ದಾರೆ. ರಾಗಿಣಿ ಚಂದ್ರನ್ ಅವರು ಪ್ರಜ್ವಲ್ ದೇವರಾಜ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಶಾಲಾ ದಿನಗಳಿಂದಲೂ ಕೂಡ ಇವರಿಬ್ಬರಿಗೂ ಪರಿಚಯ ಇದೆ.

ರಾಗಿಣಿ ಚಂದ್ರನ್ ಅವರು ಯಾವ ಹೀರೋಯಿನ್ ಗಿಂತಲೂ ಕಡಿಮೆ ಇಲ್ಲದ ಗ್ಲಾಮರ್ ಹೊಂದಿದ್ದಾರೆ ಅಲ್ಲದೆ ಅದೇ ರೀತಿ ಬಾಡಿ ಕೂಡ ಮೈನ್ಟೈನ್ ಮಾಡಿದ್ದಾರೆ. 30ರ ಹರೆಯದವರಾಗಿದ್ದರು ಕೂಡ ರಾಗಿಣಿ ಅವರು 18ರ ಚೆಲುವೆಯಂತೆ ಬಳಕುತ್ತಿದ್ದಾರೆ. ಇದಕ್ಕೆಲ್ಲ ಅವರ ಡಯಟ್ ಹಾಗೂ ವರ್ಕೌಟ್ ಎಂದರೆ ತಪ್ಪಾಗಲಾರದು ರಾಗಿಣಿ ಅವರು ಹಲವು ವರ್ಷಗಳಿಂದ ಡ್ಯಾನ್ಸಿಂಗ್ ಅಲ್ಲಿ ತೊಡಗಿಕೊಂಡಿದ್ದಾರೆ.

ಕಥಕ್, ಜುಂಬ ನೃತ್ಯ ಶೈಲಿಯಲ್ಲಿ ಪರಿಣಿತಿ ಕೂಡ ಪಡೆದಿದ್ದಾರೆ. ಈಗ ಅವರು ಅನ್ರಿದಮಿಕ್ ಎನ್ನುವ ಡ್ರಾನ್ಸ್ ಕ್ಲಾಸ್ ಕೂಡ ನಡೆಸುತ್ತಿದ್ದಾರೆ. ಜೊತೆಗೆ ಯೋಗದಲ್ಲೂ ಕೂಡ ಸಾಕಷ್ಟು ಅಭ್ಯಾಸ ಮಾಡಿರುವ ಇವರು ಹಲವು ವರ್ಷಗಳಿಂದ ಈ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಇಂದಿಗೂ ಅವರು ಚಿರ ಚಲುವೆಯಂತೆ ಮಿಂಚಲು ಯೋಗಾಭ್ಯಾಸವೇ ಕಾರಣ ಇತ್ತೀಚೆಗೆ ರಾಗಿಣಿ ಅವರು ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

ಈ ವಿಡಿಯೋವನ್ನು ನೋಡಿದರೆ ತಿಳಿಯುತ್ತದೆ ತಮ್ಮ ಫಿಸಿಕ್ಸ್ ಮೆಂಟೇನ್ ಮಾಡಲು ರಾಗಿಣಿ ಅವರು ಜಿಮ್ ಅಲ್ಲಿ ಎಷ್ಟು ಬೆವರಿಸುತ್ತಾರೆ ಎಂದು. ಇವರ ಈ ತಯಾರಿ ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿ ಇವರು ಕನ್ನಡದ ಸ್ಟಾರ್ ನಟಿ ಆಗಿ ಬೆಳೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನಿಸುತ್ತಿದೆ. ರಾಗಿಣಿ ಅವರು ಎಂದು ಸಹ ತಾವು ನಟಿಯಾಗುತ್ತೇನೆ ಎಂದು ಅಂದುಕೊಂಡವರಲ್ಲವಂತೆ ಅಚಾನಕ್ಕಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಈಗ ನಟಿಯಾಗಿ ಮಾಡಲ್ ಆಗಿ ಫೇಮಸ್ ಆಗಿದ್ದಾರೆ.

2014 ರಲ್ಲಿ ಪ್ರಜ್ವಲ್ ದೇವರಾಜ್ ಅವರನ್ನು ವಿವಾಹವಾಗಿರುವ ರಾಗಿಣಿ ಚಂದ್ರನವರು 2017ರಲ್ಲಿ ರಿಷಭಪ್ರಿಯ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಇದಾದ ನಂತರ ಲಾ ಎನ್ನುವ ಕಂಟೆಂಟ್ ಓರಿಯಂಟ್ ಕನ್ನಡ ಸಿನಿಮಾದಲ್ಲೂ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು 2020ರಲ್ಲಿ ವಿಜಯದಶಮಿ ಎನ್ನುವ ಸಿನಿಮಾವನ್ನು ಪ್ರಜ್ವಲ್ ಜೊತೆ ಮಾಡಬೇಕಿತ್ತು, ಆ ಸಿನಿಮಾ ಕೂಡ ಸೆಟ್ಟೇರಿದ್ದು ಸದ್ಯಕ್ಕೆ ಅದರ ಬಗ್ಗೆ ಸುದ್ದಿ ಇಲ್ಲ.

ಪ್ರಜ್ವಲ್ ದೇವರಾಜ್ ಅವರ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದಲ್ಲೂ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಿಂದ ಕೂಡ ಇವರಿಗೆ ಆಫರ್ ಬಂದಿದೆ. ಆದರೆ ಅವರು ಕನ್ನಡದಲ್ಲಿ ಅಭಿನಯಿಸುವ ಆಸೆಯಿಂದ ಇವುಗಳನ್ನೆಲ್ಲ ಪಕ್ಕಕ್ಕಿಟ್ಟಿದ್ದಾರೆ. ರಾಗಿಣಿ ಅವರು ನಟಿಯಾಗುವುದಕ್ಕಿಂತ ಮುಂಚೆ ಮಾಡಲಾಗಿ ಹಲವು ಆಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ರೂ ಇನ್ಸ್ಟಂಟ್ ಕಾಫಿ, ಕೃಷ್ಣ ತುಳಸಿ ಸೋಪ್, ತಂಗಂ ಜೆವೆಲ್ಲೆರ್ಸ್ ಅಭಿರಾಮ್ ಜುವೆಲರ್ಸ್ ಈ ರೀತಿ ಹಲವು ಜಾಹಿರಾತುಗಳಿಗೆ ಫೇಸ್ ಆಗಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಸಹ ಕನ್ನಡದ ಫೇಮಸ್ ನಟ ಮಾಡಿದ್ದು ಕೆಲವೇ ಸಿನಿಮಾಗಳು ಆದರೂ ಕೂಡ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಕರ್ನಾಟಕದಲ್ಲಿ ಗಳಿಸಿದ್ದಾರೆ. ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ ಆದಷ್ಟು ಬೇಗ ಇದು ನೆರವೇರಲಿ ಎಂದು ಹಾರೈಸೋಣ.

ನರೇಶ್ ಜೊತೆ 4ನೇ ಮದುವೆಗೆ ಒಪ್ಪಿರುವ ನಟಿ ಪವಿತ್ರ ಲೋಕೇಶ್ ನರೇಶ್ ಗೆ ಹಾಕಿರುವ ಕಂಡಿಷನ್ ಏನು ಗೊತ್ತ.? ಇವರ ಒಳ ಒಪ್ಪಂದದ ವಿಚಾರ ಕೇಳಿದ್ರೆ ನಿಜಕ್ಕೂ ನಿಂತಲೇ ತಲೆ ತಿರುಗುತ್ತೆ.

 

ಮದುವೆ ಎನ್ನುವುದು ಎರಡು ಜೀವಗಳ ನಡುವೆ ಬೆಸೆಯುವ ಒಂದು ಶ್ರೇಷ್ಠವಾದ ಸಂಬಂಧ. ಬದುಕು ಪೂರ್ತಿ ಜೊತೆಗಿರುವ ಈ ಒಪ್ಪಂದದ ಬಗ್ಗೆ ಬರೀ ಮಾತಿನಲ್ಲಿ ವಿವರಿಸುವುದು ಕಷ್ಟ. ಆದರೆ ಇಂದು ಮದುವೆ ಸಹ ಬಿಸಿನೆಸ್ ಗೆ ಇಳಿದಿರುವುದು ನಮ್ಮ ದೇಶದ ಸಂಸ್ಕೃತಿಗೆ ಮಾ.ರ.ಕ.ವಾ.ದ ವಿಷಯ. ಈಗಾಗಲೇ ಅನೇಕ ಪ್ರಕರಣಗಳನ್ನು ಅದರಲ್ಲೂ ಸೆಲೆಬ್ರೆಟಿಗಳ ಮದುವೆ ವಿಚಾರದಿಂದ ಜನರು ಮದುವೆ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ.

ಅಂತಹದೇ ಮತ್ತೊಂದು ಮದುವೆ ಈಗ ಜರಗುತ್ತಿದ್ದು ಒಪ್ಪಂದದೊಂದಿಗೆ ಪವಿತ್ರ ಲೋಕೇಶ್ ಅವರು ನರೇಶ್ ಅವರನ್ನು ಮದುವೆ ಆಗುತ್ತಿದ್ದಾರಂತೆ. ಕಳೆದ ಒಂದು ವರ್ಷದಿಂದ ಕನ್ನಡ ಹಾಗು ತೆಲುಗು ಮಾಧ್ಯಮಗಳಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಅವರ ಸಂಬಂಧದ ಕುರಿತು ಹಲವು ಸುದ್ದಿಗಳು ಪ್ರಸಾರ ಆಗಿದೆ. ನರೇಶ್ ಅವರ ಪತ್ನಿ ರಮ್ಯಾ ಅವರೇ ಮೈಸೂರಿನ ಹೋಟೆಲ್ ರೂಮ್ ಮೇಲೆ ದಾಳಿ ನಡೆಸಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರು ಸಿಕ್ಕಿ ಬೀಳುವಂತೆ ಮಾಡಿದ್ದರು.

ಇದಾದ ನಂತರ ವಿಷಯ ಪವಿತ್ರ ಲೋಕೇಶ್ ಅವರನ್ನು ಸಿನಿಮಾಗಳಿಂದ ಬ್ಯಾನ್ ಮಾಡುವ ತನಕ ತಲುಪಿತ್ತು. ಆದರೆ ಈಗ ಇವರಿಬ್ಬರು ಹೊಸ ವರ್ಷದಲ್ಲಿ ವಿಶೇಷವಾದ ವಿಡಿಯೋ ಮಾಡಿ ಹಂಚಿಕೊಂಡು ನಾವಿಬ್ಬರು ಮದುವೆ ಆಗುತ್ತಿದ್ದೇವೆ ಎನ್ನುವುದರ ಸೂಚನೆ ನೀಡಿದ್ದಾರೆ. ಹೊಸ ವರ್ಷಕ್ಕೆ ಕೇಕ್ ಕಟ್ ಮಾಡುವುದರೊಂದಿಗೆ ಶುರುವಾಗುವ ಈ ವಿಡಿಯೋ ಪರಸ್ಪರ ಇಬ್ಬರು ಲಿಪ್ ಕಿಸ್ ಮಾಡಿಕೊಳ್ಳುವ ಮೂಲಕ ಅಂತ್ಯವಾಗುತ್ತಿದೆ.

ಜೊತೆಗೆ ಇದಕ್ಕೆ ಅವರೇ ಹೊಸ ವರ್ಷದಲ್ಲಿ ಹೊಸ ಜೀವನವನ್ನು ಆರಂಭಿಸುವ ರೀತಿ ಬರೆದುಕೊಂಡು ಹಂಚಿಕೊಂಡಿದ್ದಾರೆ. ಎಲ್ಲರೂ ಇವರಿಬ್ಬರು ಮದುವೆ ಆಗುತ್ತಿದ್ದಾರೆ ಎನ್ನುವ ವಿಷಯದ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಪವಿತ್ರ ಲೋಕೇಶ್ ಅವರು ಸ್ಪಷ್ಟನೆ ನೀಡಿದ್ದು ಇಬ್ಬರು ಸಹ ಈ ವರ್ಷ ಮದುವೆ ಆಗುತ್ತಿದ್ದೇವೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಪವಿತ್ರ ಲೋಕೇಶ್ ಅವರು ಮದುವೆ ಆಗುವ ಸತ್ಯ ಅಷ್ಟೇ ಹೇಳಿದ್ದಾರೆ.

ಬಲವಾದ ಮೂಲಗಳ ಪ್ರಕಾರ ಈ ಮದುವೆ ನಡೆಯುವುದಕ್ಕೂ ಮುನ್ನ ಒಪ್ಪಂದ ಒಂದು ಇಬ್ಬರ ನಡುವೆ ಆಗುತ್ತಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಎರಡು ಮದುವೆಗಳನ್ನು ಮುರಿದುಕೊಂಡಿರುವ ನರೇಶ್ ಅವರು ಪವಿತ್ರ ಲೋಕೇಶ್ ಅವರ ಜೊತೆಗಿನ ಮದುವೆಯನ್ನು ಮುರಿದುಕೊಂಡರೆ ಎಷ್ಟು ಮೊತ್ತದ ಹಣವನ್ನು ಪರಿಹಾರವಾಗಿ ನೀಡಬೇಕು ಎನ್ನುವ ಒಪ್ಪಂದದ ನಂತರ ಈ ಮದುವೆ ನಡೆಯಲಿದೆಯಂತೆ.

ಇದಕ್ಕೆ ಸಂಬಂಧ ಪಟ್ಟ ಹಾಗೆ ಪವಿತ್ರ ಲೋಕೇಶ್ ಅವರ ಜೊತೆ ಆಗುತ್ತಿರುವ ಈ ಮದುವೆಯನ್ನು ನರೇಶ್ ಅವರು ಮುರಿದುಕೊಂಡರೆ 100 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡಬೇಕು. ಜೊತೆಗೆ ಪವಿತ್ರ ಲೋಕೇಶ್ ಅವರು ಇರುವವರೆಗೂ ಪ್ರತಿ ತಿಂಗಳು 5 ಲಕ್ಷವನ್ನು ಸಹ ಅವರಿಗೆ ಕೊಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾರಂತೆ. ನರೇಶ್ ಅವರು ಇದಕ್ಕೆ ಒಪ್ಪಿಕೊಂಡ ನಂತರ ಇವರಿಬ್ಬರ ಮದುವೆ ನಡೆಯುವುದಂಯಂತೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ಈ ವಿಷಯ ಹೊರ ಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇವರ ಸಂಬಂಧ ಹಾಗೂ ಮದುವೆ ವಿಷಯ ಕುರಿತಾಗಿ ಚರ್ಚೆಗಳು ಜೋರಾಗಿತ್ತು ಎಲ್ಲರೂ ಪವಿತ್ರ ಲೋಕೇಶ್ ಅವರನ್ನು ಹಣದ ಆಸೆಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ದೂಷಿಸುತ್ತಿದ್ದಾರೆ. ಅದೇನೇ ಇದ್ದರೂ ಇವರಿಬ್ಬರ ನಡುವಿನ ಸಂಬಂಧ ಎಷ್ಟು ದಿನ ಉಳಿಯುತ್ತದೆ ಎಂದು ಕಾದು ನೋಡೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ಉತ್ತರಿಸಿ

ಕಷ್ಟದಲ್ಲಿ ಇರುವ ರವಿಚಂದ್ರನ್ ಗೆ ಸಹಾಸ ಮಾಡಲು K.D ಸಿನಿಮಾದಲ್ಲಿ ಅವಕಾಶ ನೀಡಿದ ಡೈರೆಕ್ಟರ್ ಪ್ರೇಮ್, ಆದ್ರೆ ರವಿ ಸರ್ ಡಿಮ್ಯಾಂಡ್ ಸಂಭಾವನೆ ಎಷ್ಟು ಗೊತ್ತ.?

 

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕರ್ನಾಟಕ ಕಂಡ ಒಬ್ಬ ಕನಸುಗಾರ. ಇವರು ಹುಟ್ಟಿದ್ದೇ ಸಿನಿಮಾಗಾಗಿ ಎನ್ನುವ ರೀತಿ ಬದುಕು ಪೂರ್ತಿ ಸಿನಿಮಾಗಾಗಿ ಅರ್ಪಿಸಿಕೊಂಡವರು. ಇವರ ಕೆರಿಯರ್ ನ ಆರಂಭಿಕ ದಿನದಲ್ಲಿ ಇವರು ಮುಟ್ಟಿದ್ದೆಲ್ಲ ಚಿನ್ನ ಆಗಿರುತ್ತಿತ್ತು. ಪ್ರೇಮಲೋಕ, ರಣಧೀರ, ಯುಗಪುರುಷ, ಅಂಜದಗಂಡು ಸಿನಿಮಾದಿಂದ ಹಿಡಿದು ಪುಟ್ನಂಜ, ಚಿಕ್ಕೆಜಮಾನ್ರು, ಸಿಪಾಯಿ, ಹಳ್ಳಿಮೇಷ್ಟ್ರು ,ಮಾಂಗಲ್ಯಂ ತಂತುನಾನೇನ, ಕನಸುಗಾರ ಇನ್ನು ಮುಂತಾದ ಅನೇಕ ಸೂಪರ್ ಹಿಟ್ ಗಳನ್ನು ಕನ್ನಡಕ್ಕೆ ನೀಡಿರುವ ಇವರ ಈ ಸಾಧನೆಗೆ ಇವರೇ ಸಾಟಿ.

ಆದರೆ ಅದು ಯಾಕೋ ಕಳೆದ ಕೆಲವು ವರ್ಷಗಳಿಂದ ರವಿಚಂದ್ರನ್ ಅವರ ಯಾವ ಚಿತ್ರವೂ ಅಷ್ಟೊಂದು ದೊಡ್ಡ ಮಟ್ಟದ ಹಿಟ್ ಆಗುತ್ತಿಲ್ಲ. ಇದರಿಂದ ರವಿಚಂದ್ರನ್ ಅವರೂ ಸಹಾ ಬೇಸತ್ತು ಹೋಗಿದ್ದಾರೆ. ಆದರೆ ಸಿನಿಮಾ ಮಾಡುವ ಸ್ಪೂರ್ತಿ ಮಾತ್ರ ಕಡಿಮೆ ಮಾಡಿಕೊಂಡಿಲ್ಲ. ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂಡ ಪಾಲ್ಗೊಳ್ಳುತ್ತಿದ್ದ ಇವರು ಅದೇ ಕಾರ್ಯಕ್ರಮದ ಎಪಿಸೋಡ್ ಒಂದರಲ್ಲಿ ತುಂಬಾ ಭಾವನಾತ್ಮಕವಾಗಿ ಮಾತನಾಡಿದ್ದರು.

ಇತ್ತೀಚೆಗೆ ಅವರು ತಮ್ಮ ಇಷ್ಟದ ಮನೆಯನ್ನು ಮಾರಿ ಬೇರೆ ಫ್ಲಟ್ ಗೆ ಶಿಫ್ಟ್ ಆಗಿದ್ದಾರೆ. ಇದಕ್ಕೆ ಮಾಧ್ಯಮಗಳು ನಾನಾ ಬಣ್ಣ ಕೊಟ್ಟು ಪ್ರಚಾರ ಮಾಡುತ್ತಿರುವ ವಿಷಯವನ್ನು ಹೇಳಿಕೊಂಡು ಎಲ್ಲಕ್ಕಿಂತಲೂ ದುಃಖವಾಗುತ್ತಿರುವುದು ನನ್ನ ಪ್ರೇಕ್ಷಕರಿಗೆ ನೆಚ್ಚಿನ ಸಿನಿಮಾ ಕೊಡಲು ಆಗುತ್ತಿಲ್ಲ ಎನ್ನುವುದು ಎಂದಿದ್ದ ರವಿಚಂದ್ರನ್ ಅವರಿಗೆ ಈಗ ಕೇಡಿ ಚಿತ್ರತಂಡವು ತನ್ನ ಸಿನಿಮಾಗೆ ವಿಶೇಷವಾದ ಪಾತ್ರಕ್ಕೆ ಆಹ್ವಾನಿಸಿದೆ. ಕೇಡಿ ದಿ ಡೆವಿಲ್ ಎನ್ನುವ ಚಿತ್ರವನ್ನು ಜೋಗಿ ಪ್ರೇಮ್ ಅವರು ನಿರ್ದೇಶಿಸುತ್ತಿದ್ದು ಆಕ್ಷನ್ ಪ್ರಿನ್ಸ್ ಧ್ರುವ ಅವರು ಹೀರೋ ಆಗಿದ್ದಾರೆ.

ರೌಡಿಸಂ ಕುರಿತ ಚಿತ್ರ ಇದಾಗಿದ್ದು ಚಿತ್ರದಲ್ಲಿ ಹಲವು ಸೆಲೆಬ್ರಿಗಳು ಇರುವ ನಿರೀಕ್ಷೆ ಇದೆ. ಈಗಾಗಲೇ ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಅವರು ಮತ್ತು ಕರ್ನಾಟಕದಿಂದ ಹೋಗಿ ಅಲ್ಲಿ ಹೆಸರು ಮಾಡಿದ ಶಿಲ್ಪಶೆಟ್ಟಿ ಅವರು ಈ ಸಿನಿಮಾದಲ್ಲಿ ಇರುವುದು ಬಹುತೇಕ ಕನ್ಫರ್ಮ್ ಆಗಿದೆ. ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಕೂಡ ಬಹಳ ಅದ್ದೂರಿಯಾಗಿ ನಡೆದಿದ್ದು ಕೆವಿಎನ್ ಸಂಸ್ಥೆಯು ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ರಗಡ್ ಲುಕ್ಕಿನಲ್ಲಿ ಧ್ರುವ ಸರ್ಜಾ ಅವರು ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಸಿನಿಮಾ ಕುರಿತು ಹಬ್ಬುತ್ತಿರುವ ಸುದ್ದಿಗಳನ್ನು ನೋಡಿ ಪ್ರೇಕ್ಷಕರು ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈಗ ರವಿಚಂದ್ರನ್ ಅವರು ಸಹ ಈ ಸಿನಿಮಾ ಗೆ ಸೇರಿರುವುದು ತಿಳಿದು ಬಂದಿದ್ದು ಹಾಗೆ ಅವರ ಹೊಸ ಲುಕ್ ಕೂಡ ರಿಲೀಸ್ ಆಗಿದೆ. ಹಣೆಯಲ್ಲಿ ವಿಭೂತಿ ಇಟ್ಟು, ಕಣ್ಣಿಗೆ ಸ್ಟೈಲಿಶ್ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕಾರೆನೊಳಗೆ ಸೂಟು ಬೂಟು ಹಾಕಿಕೊಂಡು ಕುಳಿತಿರುವ ಇವರ ಗೆಟಪ್ ಬಹಳ ವಿಭಿನ್ನವಾಗಿದೆ.

ಇವರ ಈ ಹೊಸ ಲುಕ್ ಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇವರ ಪಾತ್ರದ ಕುರಿತು ತಿಳಿದುಕೊಳ್ಳಲು ಕಾತುರರಾಗಿದ್ದಾರೆ ಮತ್ತು ರವಿಚಂದ್ರನ್ ಅವರಿಗೆ ಈ ಸಮಯದಲ್ಲಿ ಸಿಕ್ಕಿರುವ ಈ ಅವಕಾಶ ಬಹಳ ಅಮೂಲ್ಯದ್ದಾಗಿದೆ. ಅದಕ್ಕಾಗಿ ಅವರು ಪಡೆಯುತ್ತಿರುವ ಸಂಭಾವನೆ ಕೂಡ ಸುದ್ದಿ ಆಗಿದೆ. ತಾವು ಅಷ್ಟು ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ ಕೂಡ ರವಿಚಂದ್ರನ್ ಅವರ ಈ ಸಿನಿಮಾಗಾಗಿ ಕೇವಲ ಒಂದು ಕೋಟಿ ರೂಪಾಯಿಗಳನ್ನು ಮಾತ್ರ ಸಂಭಾವನೆಯಾಗಿ ಪಡೆಯುತ್ತಿದ್ದಾರಂತೆ. ಇದರಿಂದಲಾದರೂ ಇವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ

ಸ್ಟಾರ್ ಗಳ ಹಿಂದೆ ಯಾಕೆ ಯಾವಗ್ಲೂ ಇರ್ತಿರಾ.? ನಿಮ್ ಲೈಫ್ ನೀವು ನೋಡ್ಕೋಳೋದು ಕಲಿರಿ. ಅಪ್ಪು, ದರ್ಶನ್ ಹೆಸರಲ್ಲಿ ಫ್ಯಾನ್ಸ್ ವಾರ್ ಮಾಡೋರಿಗೆ ತಿರುಗೇಟು ಕೊಟ್ಟ ಡಾರ್ಲಿಂಗ್ ಕೃಷ್ಣ

 

 

ಕನ್ನಡ ಕಿರುತೆರೆಯ ಕೃಷ್ಣ ರುಕ್ಮಿಣಿ ಎನ್ನುವ ಸೂಪರ್ ಹಿಟ್ ಧಾರಾವಾಹಿ ಕೃಷ್ಣ ಪಾತ್ರಧಾರಿಯಾಗಿ ಕನ್ನಡದ ಜನತೆಗೆ ಪರಿಚಿತರಾಗಿದ್ದ ಸುನಿಲ್ ಅವರು ನಂತರ ತಮ್ಮ ಮೊದಲ ಸಿನಿಮಾ ವಾದ ಮದರಂಗಿ ಚಿತ್ರದ ಡಾರ್ಲಿಂಗ್ ಡಾರ್ಲಿಂಗ್ ಹಾಡಿನಿಂದ ಇನ್ನಷ್ಟು ಫೇಮಸ್ ಆದರು. ಈಗ ಹೆಚ್ಚಿನ ಜನ ಅವರನ್ನು ಡಾರ್ಲಿಂಗ್ ಕೃಷ್ಣ ಎಂದೇ ಗುರುತಿಸುತ್ತಿದ್ದಾರೆ.

ಕಳೆದ ಒಂದು ದಶಕದಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋ ಆಗಿ ಗುರುತಿಸಿಕೊಂಡಿರುವ ಇವರು ಲವ್ ಮಾಕ್ಟೇಲ್ ಸಿನಿಮಾದಿಂದ ಮತ್ತೊಮ್ಮೆ ಬ್ರೇಕ್ ಪಡೆದುಕೊಂಡರು. ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಡಾರ್ಲಿಂಗ್ ಕೃಷ್ಣ ಅವರ ಮತ್ತೊಂದು ಚಿತ್ರ ರಿಲೀಸ್ ಗೆ ನಿಂತಿದೆ. ಕಳೆದ ವರ್ಷ ಲಕ್ಕಿ ಮ್ಯಾನ್ ಮತ್ತು ದಿಲ್ ಪಸಂದ್ ಈ ಮೂರು ಚಿತ್ರಗಳು ಬಿಡುಗಡೆಯಾಗಿ ಮೂರು ಕೂಡ ತಕ್ಕಮಟ್ಟಿಗೆ ಹೆಸರು ಮಾಡಿದ್ದವು.

ಇದೀಗ ಅವರ ಬಹು ನಿರೀಕ್ಷಿತ ಚಿತ್ರ ಮಿ.ಬ್ಯಾಚುಲರ್ ರಿಲೀಸ್ ಹಂತಕ್ಕೆ ಬಂದಿದೆ ಸಿನಿಮಾ ಕುರಿತಾದ ಸಂದರ್ಶನದಲ್ಲಿ ಭಾಗಿಯಾಗಿರುವ ಡಾರ್ಲಿಂಗ್ ಕೃಷ್ಣ ಅವರು ಸಂದರ್ಶಕರು ಕೇಳಿರುವ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇವರನ್ನು ಇಂಟರ್ವ್ಯೂ ಮಾಡುತ್ತಿದ್ದವರು ಈಗಿನ ಪ್ರಸ್ತುತ ಸಂಗತಿಯನ್ನು ಕುರಿತು ಕೆದಕಿದ್ದಾರೆ ಅದನ್ನು ಪರೋಕ್ಷವಾಗಿ ಸ್ಟಾರ್ ಗಳ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಕೇಳಿದ್ದಾರೆ.

ಇದಕ್ಕೆ ತಾಳ್ಮೆಯಿಂದ ಹಾಗೂ ಜಾಳ್ಮೆಯಿಂದ ಉತ್ತರ ಕೊಟ್ಟಿರುವ ಡಾರ್ಲಿಂಗ್ ಕೃಷ್ಣ ಅವರ ಮಾತುಗಳು ಎಲ್ಲೆಡೆ ವೈರಲ್ ಆಗುತ್ತಿದ್ದು ಇದನ್ನು ಎಲ್ಲರೂ ಸಹ ಮೆಚ್ಚಿ ಕೊಂಡಾಡುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರು ಸ್ಟಾರ್ ವಾರ್ ಕುರಿತು ಆಡಿದ ಮಾತುಗಳು ಈ ರೀತಿ ಇದೆ. ಪ್ರತಿಯೊಬ್ಬ ಕಲಾವಿದನು ಸಹ ತನ್ನ ಚಿತ್ರವನ್ನು ಜನರು ನೋಡಲಿ ಎನ್ನುವ ಆಸೆಯಿಂದ ಪ್ರತಿ ಬಾರಿ ಹೊಸದೊಂದು ಹುರುಪಿನಲ್ಲಿ ಹೊಸ ರೀತಿ ತಯಾರಿಗಳೊಂದಿಗೆ ಸಿನಿಮಾ ಮಾಡುತ್ತಾನೆ.

ಆ ಸಿನಿಮಾವನ್ನು ಪ್ರೇಕ್ಷಕರು ಥಿಯೇಟರ್ ಅಲ್ಲಿ ಬಂದು ನೋಡಿದರೆ ಅದೇ ಅವನ ಪಾಲಿಗೆ ಆನಂದ ಅದರಲ್ಲೂ ಹಲವರು ಕೆಲವರನ್ನು ತಮ್ಮ ಫೇವರೆಟ್ ಹೀರೋಗಳು ಫೇವರೆಟ್ ಸ್ಟಾರ್ ಎಂದೆಲ್ಲ ಕಾಯ್ದುಕೊಳ್ಳುತ್ತಾರೆ ಅದು ಕೂಡ ಒಂದು ರೀತಿ ಸಂತಸದ ವಿಷಯವೇ ಆದರೆ ಆ ಸಂತಸ ಥಿಯೇಟರ್ ಅಲ್ಲಿ ಹೋಗಿ ಆ ಹಿರೋವಿನ ಸಿನಿಮ ನೋಡುವುದಕ್ಕೆ ಸೀಮಿತವಾಗಿರಬೇಕು.

ಕುಟುಂಬ ಸಮೇತವಾಗಿ ಸ್ನೇಹಿತರ ಜೊತೆ ಹೀಗೆ ಅವರ ಇಷ್ಟದ ಹೀರೋ ಸಿನಿಮಾವನ್ನು ಎಷ್ಟು ಬಾರಿಯಾದರೂ ಥಿಯೇಟರ್ ನಲ್ಲಿ ನೋಡಲಿ ಅದನ್ನು ಬಿಟ್ಟು ಆಚೆಗಿನ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಯಾಕೆಂದರೆ ಸಿನಿಮಾ ಮುಗಿದ ಮೇಲೆ ಅವರಿಗೂ ಒಂದು ಬದುಕಿದೆ ಸ್ಟಾರ್ಗಳ ಬಗ್ಗೆ ತಲೆ ಕೆಡಿಸಿಕೊಂಡು ಅವರ ಹಿಂದೆ ಯಾಕೆ ನಿಂತುಕೊಳ್ಳುತ್ತೀರಿ.?

ಪ್ರತಿಯೊಬ್ಬರಿಗೂ ಸಹ ತಮ್ಮದೇ ಆದ ಒಂದು ವೈಯಕ್ತಿಕ ಜೀವನ ಇದೆ ಮನೆ ಈಹೆಂಡತಿ ಮಕ್ಕಳು ಸ್ನೇಹಿತರು ಹೀಗೆ ಅವರಿಗೂ ಬದುಕಿದ ಪ್ರತಿಯೊಬ್ಬರು ಸಹ ಜೀವನದಲ್ಲಿ ಸಾಧನೆ ಮಾಡಬೇಕು ಅದನ್ನು ಬಿಟ್ಟು ಸ್ಟಾರ್ಗಳ ಹಿಂದೆ ನಿಂತುಕೊಂಡರೆ ಅವರುಗಳು ಸ್ಟಾರ್ ಆಗುತ್ತಿರುತ್ತಾರೆ. ನಾವು ಸ್ಟಾರ್ ಆಗುವುದಿಲ್ಲ. ಸಿನಿಮಾಗೆ ಬರುವ ಮುಂಚೆ ನಾನು ಮತ್ತು ಒಬ್ಬರ ಫ್ಯಾನ್ ಆಗಿದ್ದೆ ಆದರೆ ಅಷ್ಟಕ್ಕೆ ನಿಂತುಕೊಂಡಿದ್ದರೆ ಇಂದು ನಾನು ಕಟ್ ಔಟ್ ಹಾಕಿಸಿಕೊಳ್ಳಲು ಆಗುತ್ತಿರಲಿಲ್ಲ ಎಂದು ಉತ್ತರಿಸಿದ್ದಾರೆ. ಇವರ ಈ ಪ್ರಬುದ್ಧ ಮಾತುಗಳಿಂದ ಆದರೂ ಸದ್ಯದ ಪರಿಸ್ಥಿತಿ ತಿಳಿ ಆದರೆ ಇನ್ನಷ್ಟು ಜನ ಅರಿತುಕೊಂಡರೆ ಅಷ್ಟೇ ಸಾಕು.

ಕನ್ನಡ ವರ್ಣಮಾಲೆಯನ್ನು ಕುತ್ತಿಗೆ ಮೇಲೆ ವಿಭಿನ್ನವಾಗಿ ಟ್ಯಾಟೋ ಹಾಕಿಸಿಕೊಂಡ ನಟಿ ಮನ್ವಿತಾ ಕಾಮತ್

 

ಚಂದನ ವನದಲ್ಲಿ ಟಗರು ಪುಟ್ಟಿ ಎಂದು ಕರೆಸಿಕೊಳ್ಳುತ್ತಿರುವ ಮನ್ವಿತಾ ಹರೀಶ್ ಅವರು ಈಗಿನ ಯುವ ಪೀಳಿಗೆಯ ಫೇವರಿಟ್ ನಟಿ. ಕೆಂಡಸಂಪಿಗೆ ಸಿನಿಮಾದ ಗೌರಿ ಅಂತಹ ಹುಚ್ಚು ಪ್ರೇಮಿಯ ಪಾತ್ರಕ್ಕೂ ಸೈ, ಅಪ್ಪ ಐ ಲವ್ ಯು ಎಂದು ಹಾಡನ್ನು ಹಾಡುವ ಟ್ರಡಿಷನಲ್ ಹುಡುಗಿ ಆಗುವುದಕ್ಕೂ ಜೈ ಎನ್ನುವ ಮನ್ವಿತ ಹರೀಶ್ ಅವರು ಅಪ್ರತಿಮ ಸೌಂದರ್ಯ ಜೊತೆಗೆ ಅಷ್ಟೇ ಟ್ಯಾಲೆಂಟೆಡ್ ನಟಿ ಕೂಡ ಹೌದು. ಮನ್ವಿತ ಹರೀಶ್ ಅವರು ನಟಿಸಿರುವುದು ಕೆಲವೇ ಸಿನಿಮಾಗಳು ಆದರೂ ಕೂಡ ಎಲ್ಲರೂ ಗುರುತಿಸುವ, ಇಷ್ಟಪಡುವ, ನೆನಪಿನಲ್ಲಿ ಇಟ್ಟುಕೊಳ್ಳುವ ರೀತಿಯ ಕ್ಯಾರೆಕ್ಟರ್ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸಿನಿಮಾ ಜೊತೆಗೆ ಮಾಡಲಿಂಗ್ ಅಲ್ಲೂ ಆಸಕ್ತಿ ಹೊಂದಿರುವ ಇವರು ಆ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಆಗಾಗ ಪೋಸ್ಟ್ ಗಳನ್ನು ಹಾಕಿ ತಮ್ಮ ಫಾಲವರ್ಸ್ ಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಅವರ ಖಾತೆಯಿಂದ ಹೊಸ ಫೋಟೋ ಪೋಸ್ಟ್ ಆಗಿದ್ದು. ಅದರಲ್ಲಿ ಅವರ ಕುತ್ತಿಗೆಯಲ್ಲಿ ಟ್ಯಾಟು ಇರುವುದು ಕಂಡು ಬಂದಿದೆ. ಸ್ವತಃ ಅವರೇ ಅದನ್ನು ಶೀರ್ಷಿಕೆಯೊಂದಿಗೆ ಬರೆದು ಹಂಚಿಕೊಂಡಿದ್ದು ಹೇಗಿದೆ ನನ್ನ ಕಾಜಲ್ ಶೇಡ್ ಟ್ಯಾಟೂ ಎಂದು ಕೇಳಿದ್ದಾರೆ.

ಟ್ಯಾಟು ಹಾಕಿಸಿಕೊಳ್ಳುವುದು ಈಗ ಟ್ರೆಡಿಂಗ್ ಆಗಿದೆ. ಈಗಿನ ಕಾಲದ ಎಲ್ಲಾ ಯುವಕರು ಸಹ ಸಣ್ಣದೋ ಅಥವಾ ದೊಡ್ಡದೋ ಟ್ಯಾಟು ಹಾಕಿಸಿಕೊಂಡಿಯೇ ಇರುತ್ತಾರೆ. ಇನ್ನು ಕೆಲವರು ಮುಂದುವರೆದು ಕೆಲವು ವಿಶೇಷ ಅರ್ಥಗಳನ್ನು ಸೂಚಿಸುವ ಚಿಹ್ನೆಗಳನ್ನು ಸಂಕೇತಗಳನ್ನು ಟ್ಯಾಟು ಹಾಕಿಸಿಕೊಳ್ಳುತ್ತಾರೆ. ಹಲವರಿಗೆ ಇಷ್ಟದ ದೇವರ ಚಿತ್ರವನ್ನೇ ಅಥವಾ ತನ್ನ ನೆಚ್ಚಿನ ಹೀರೋ ಸಿನಿಮಾ ಹೆಸರನ್ನು ಸ್ಟೈಲಾಗಿ ಅಥವಾ ಹೀರೋ ಫೇಸ್ ಅನ್ನೇ ಅಚ್ಚಿಸಿಕೊಳ್ಳುವ ಹುಚ್ಚು ಇದೆ.

ಕಳೆದ ತಿಂಗಳಷ್ಟೇ ಕಿರುತೆರೆಯ ನಟಿ ವೈಷ್ಣವಿ ಗೌಡ ಅವರು ಸಹ ಒಂದು ವಿಶೇಷವಾದ ಟ್ಯಾಟು ಹಾಕಿಸಿಕೊಂಡು ಅದನ್ನು ಅದರ ಅರ್ಥದ ಸಹಿತ ತಿಳಿಸಿ ಹಂಚಿಕೊಳ್ಳುವ ಮೂಲಕ ಸುದ್ದಿ ಆಗಿದ್ದರು. ಅವರ ಟ್ಯಾಟು ಬಹಳ ಆಕರ್ಷಣೀಯವಾಗಿತ್ತು. ಅದಾದ ಬಳಿಕ ಹಲವರು ಅದನ್ನೇ ಫಾಲೋ ಮಾಡಿದ್ದಾರೆ. ಇದೀಗ ನಟಿ ಮನ್ವಿತ ಹರೀಶ್ ಅವರು ಹಾಕಿಸಿಕೊಂಡಿರುವ ಟ್ಯಾಟೂ ಕೂಡ ಫೇಮಸ್ ಆಗುತ್ತಿದೆ. ಮನ್ವಿತ ಹರೀಶ್ ಅವರು ಕಾಜಲ್ ಶೇಡ್ ಅಲ್ಲಿ ಟ್ಯಾಟು ಹಾಕಿಸಿಕೊಂಡಿದ್ದಾರೆ ಅವರುಸಿಕೊಂಡು ಸ್ಟೈಲಿಶ್ ಆಗಿ ಟ್ಯಾಟು ಹಾಕಿಸಿಕೊಂಡಿದ್ದಾರೆ.

ಇದನ್ನು ಅವರು ಪೋಸ್ಟ್ ಮಾಡಿದ ತಕ್ಷಣವೇ 4000ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ ಮತ್ತು ಹಲವರು ಕಾಮೆಂಟ್ ಗಳಲ್ಲಿ ಇವರ ಕನ್ನಡ ಅಭಿಮಾನದ ಕುರಿತು ಖುಷಿಪಟ್ಟು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈಗ ಅವರ ಹೊಸ ಫೋಟೋಗಳಲ್ಲಿ ಕುತ್ತಿಗೆ ಮೇಲೆ ಟ್ಯಾಟು ಇರುವುದನ್ನು ಕಾಣಬಹುದಾಗಿದೆ. ನಟಿ ಮನ್ವಿತ ಅವರು ಕಳೆದ ಕೆಲವು ದಿನಗಳಿಂದ ಸಿನಿಮಾಗಳ ಕುರಿತ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ರಾಮ್ ಕುಮಾರ್ ಜೊತೆ ಶಿವ 143 ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ಮತ್ಯಾವ ಅವರ ಸಿನಿಮಾಗಳು ಬಿಡುಗಡೆ ಆಗಿಲ್ಲ.

ಆದರೆ ಕೈಯಲ್ಲಿ ಬಹಳ ಆಫರ್ ಗಳು ಇದ್ದು ಆ ಕುರಿತ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ. ಕನ್ನಡದ ಹೆಮ್ಮೆಯ ನಟಿ ಎಂದು ಕರೆಸಿಕೊಳ್ಳುತ್ತಿರುವ ಈ ಕನ್ನಡ ಅಭಿಮಾನಿ ಹಾಗೂ ಅಚ್ಚ ಕನ್ನಡತಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಇನ್ನಷ್ಟು ಒಳ್ಳೊಳ್ಳೆ ಆಫರ್ಗಳು ಸಿಗಲಿ ಕನ್ನಡ ಖ್ಯಾತಿಯನ್ನು ವಿಶ್ವದಾದ್ಯಂತ ಪಸರಿಸುವಂತಹ ಪಾತ್ರಗಳು ಈಕೆ ಪಾಲಿಗೆ ದಕ್ಕಲಿ ಎಂದು ಹರಸೋಣ.

ಕ್ರಾಂತಿ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗುವುದಕ್ಕಿಂತ ಮುಂಚೆಯೇ ಓ.ಟಿ.ಟಿ ದಿನಾಂಕ ಘೋಷಣೆ. ಬ್ಯಾನ್ ಬಯಕೆ ಹೆದರಿ ಈ ರೀತಿ ಮಾಡ್ತಿದ್ದಾರ‌.?

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ ಬಹುಕೋಟಿ ವೆಚ್ಚದಲ್ಲಿ ಈ ಮಾಸ್ ಎಂಟಟೈನರ್ ಸಿನಿಮಾ ನಿರ್ಮಾಣವಾಗಿದೆ ಈಗಾಗಲೇ ಈ ಚಿತ್ರದ ಹಾಡುಗಳು ರಿಲೀಸ್ ಆಗಿ ಸಿನಿಮಾದ ಮೇಲೆ ಇರುವಂತಹ ನಿರೀಕ್ಷೆಯನ್ನು ಜಾಸ್ತಿ ಮಾಡಿದೆ ಈಗ ಸಿನಿಮಾ OTT ಸ್ಕ್ರಿಮಿಂಗ್ ಬಗ್ಗೆ ಕೂಡ ಸುಳಿವು ಸಿಕ್ಕಿದೆ.

ಮೊದಲೆಲ್ಲಾ ಸಿನಿಮಾಗಳು ಥಿಯೇಟರ್ ನಲ್ಲಿ ಒಳ್ಳೆಯ ಪ್ರದರ್ಶನವನ್ನು ನೀಡಿದ ಮೇಲೆ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಈಗ ಟಿವಿಗೂ ಮುಂಚೆ ಡಿಜಿಟಲ್ ಪ್ಲಾಂಟ್ ಫಾರ್ಮ್ ಗಳಲ್ಲಿ ಎಂಟ್ರಿ ಕೊಡುತ್ತದೆ OTT ಚಂದಾದಾರರು ತಮಗೆ ಇಷ್ಟವಾದ ಸಮಯದಲ್ಲಿ ಸಿನಿಮಾವನ್ನು ನೋಡಬಹುದು ಯಾವುದೇ ಸಿನಿಮಾಗಲಿ ಒಂದುವರೆ ತಿಂಗಳು ಕಳೆದ ನಂತರ OTT ಗೆ ಬರುತ್ತದೆ.

ಕ್ರಾಂತಿ ಸಿನಿಮಾ ಎಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ ರಾಬರ್ಟ್ ಸಿನಿಮಾದ ನಂತರ ದರ್ಶನ್ ನಟನೆ ಮಾಡಿರುವ ಮತ್ತೊಂದು ಫ್ಯಾಮಿಲಿ ಎಂಟ ಟೈನರ್ ಸಿನಿಮಾ ಕ್ರಾಂತಿ ರಚಿತಾರಾಮ್ ಉಮಾಶ್ರೀ ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಮಂತ್ರಿ ಚಂದ್ರು ಸೇರಿದ ಹಾಗೆ ಬಾರಿ ತಾರಾ ಗಣ ಈ ಚಿತ್ರದಲ್ಲಿ ಇದೆ ಕ್ರಾಂತಿ ಸಿನಿಮಾದ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುವ ಸುಳಿವು ಸಿಗುತ್ತಿದೆ.

ಈಗಾಗಲೇ ಭಾರಿ ಮೊತ್ತಕ್ಕೆ ಡಿಜಿಟಲ್ ರೈಟ್ಸ್ ಮಾರಾಟವಾಗಿದೆ ಎನ್ನಲಾಗುತ್ತಿದೆ ಐದು ಭಾಷೆಗಳಲ್ಲಿ ಈ ಸಿನೆಮಾ ತೆರೆ ಮೇಲೆ ಬರುತ್ತಿದ್ದು ಈ ಹಿಂದೆ ಯಜಮಾನ ಸಿನಿಮಾವನ್ನು ನಿರ್ಮಿಸಿದಂತಹ ಅದೇ ತಂಡ ಈ ಚಿತ್ರಕ್ಕೂ ಕೂಡ ಕೆಲಸ ಮಾಡಿದೆ ಆ ಸಿನಿಮಾ ಕೂಡ ಪ್ರೈಮ್ ನಲ್ಲಿ ಪ್ರಸಾರವಾಗಿತ್ತು ಒಂದಷ್ಟು ಷರತ್ತುಗಳನ್ನು ವಿಧಿಸಿ OTT ಸಂಸ್ಥೆಗಳು.

ಸಿನಿಮಾ ಸ್ಟ್ರೀಮಿಂಗ್ ಕೊಂಡುಕೊಳ್ಳುತ್ತಾರೆ ಅದಲ್ಲದೆ ಮೊದಲೇ ಈ ಚಿತ್ರ ಯಾವ ಸಮಯದಲ್ಲಿ ಹಾಕಬೇಕು ಎನ್ನುವುದು ಮೊದಲೇ ಒಪ್ಪಂದವಾಗಿರುತ್ತದೆ ಸಾಮಾನ್ಯವಾಗಿ ಎಲ್ಲ ಚಿತ್ರಗಳು ಥಿಯೇಟರ್ ನಲ್ಲಿ ತೆರೆಕಂಡು ಏಳು ತಿಂಗಳ ನಂತರ OTT ಗೆ ಬರುತ್ತದೆ ಇತ್ತೀಚೆಗೆ ಕಾಂತಾರ ಸಿನಿಮಾ 50 ದಿನಗಳ ನಂತರವೂ ಭರ್ಜರಿ ಪ್ರದರ್ಶನವನ್ನು ಕಂಡಿತ್ತು.

ಕ್ರಾಂತಿ ಸಿನಿಮಾ ಮಾರ್ಚ್ ಕೊನೆಯ ವಾರದ ವೇಳೆಗೆ ವೀಕ್ಷಣೆಗೆ ಸಿಗುತ್ತದೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಕ್ರಾಂತಿ ಚಿತ್ರದ 3 ಹಾಡುಗಳನ್ನು ಅಭಿಮಾನಿಗಳಿಂದಲೇ ರಿಲೀಸ್ ಮಾಡಿಸಲಾಗಿತ್ತು ಮೈಸೂರಿನಲ್ಲಿ ಚಿತ್ರದ ಥೀಮ್ ಸಾಂಗ್ ಧರಣಿ ಬಿಡುಗಡೆಯಾಗಿತ್ತು ಹೊಸಪೇಟೆಯಲ್ಲಿ ಬೊಂಬೆ ಬೊಂಬೆ ಮೆಲೋಡಿ ಸಾಂಗ್ ಲೋಕಾರ್ಪಣೆಯಾಗಿದ್ದರೆ

ಇನ್ನು ಹುಬ್ಬಳ್ಳಿಯಲ್ಲಿ ಐಟಂ ಸಾಂಗ್ ಪದ್ಮಾವತಿ ಸೌಂಡ್ ಮಾಡಿತ್ತು ಇದೇ ಶನಿವಾರ ಬೆಂಗಳೂರಿನಲ್ಲಿ ದೊಡ್ಡ ಇವೆಂಟ್ ನಲ್ಲಿ ಕ್ರಾಂತಿ ಆಕ್ಷನ್ ಫ್ಯಾಕ್ಟ್ ಟ್ರೈಲರ್ ರಿಲೀಸ್ ಆಗಲಿದೆ ಜನವರಿ 26 ನೇ ತಾರೀಖು ಕ್ರಾಂತಿ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ ದರ್ಶನ್ ಅವರು ಈ ಸಿನಿಮಾದಲ್ಲಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟು ಐದು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ ಶೈಲಜಾ ನಾಗ್ ಸುರೇಶ್ ಈ ಚಿತ್ರದ ನಿರ್ಮಾಣ ಕಾರ್ಯವನ್ನು ಮಾಡಿದ್ದಾರೆ ವಿ ಹರಿಕೃಷ್ಣ ಅವರ ಸಂಗೀತವಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೋಸ್ಟ್ ಎಸ್ಪೆಕ್ಟೆಡ್ ಸಿನಿಮಾ ಇದು ಅಂತಾನೇ ಹೇಳಬಹುದು. ಏಕೆಂದರೆ ಈ ಸಿನಿಮಾ ಬಿಡುಗಡೆಗೆ ಸಾಕಷ್ಟು ಅಡೆತಡೆಗಳು ನಿರ್ಮಾಣವಾಗಿದೆ. ಅವೆಲ್ಲವನ್ನು ದಾಟಿ ಚಿತ್ರರಂಗದಲ್ಲಿ ಸಿನಿಮಾ ಯಾವ ರೀತಿ ಪ್ರಸಾರವಾಗಲಿದೆ ಹಾಗೂ ಪ್ರೇಕ್ಷಕರು ಈ ಸಿನಿಮಾವನ್ನು ಯಾವ ರೀತಿ ಕೈಗೆತ್ತಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸಿನಿಮಾ ಚೆನ್ನಾಗಿ ಮೂಡಿ ಬಂದರೆ ಥಿಯೇಟರ್ ನಲ್ಲಿ ಓಡುತ್ತದೆ ಇಲ್ಲವಾದರೆ ಸಿನಿಮಾ ಬಿಡುಗಡೆಯಾದ ಕೇವಲ ಒಂದೇ ತಿಂಗಳಿಗೆ ಓಟಿಟಿಗೆ ಬರುವುದಂತೂ ಖಚಿತ.