Home Blog Page 281

ವೃದ್ಧಾಶ್ರಮಕ್ಕೆ ತೆರಳಿ ಹಿರಿಯರಿಗೆ ಸಿಹಿ, ಊಟ, ಉಡುಗೊರೆ, ಆಶ್ರಮಕ್ಕೆ ಬೇಕಾದ ಸಮಾಗ್ರಿ ನೀಡುವ ಮೂಲಕ ಅರ್ಥಪೂರ್ಣ ಜನ್ಮದಿನ ಆಚರಿಸಿದ ನಟಿ ರಾಧಿಕಾ ಕುಮಾರಸ್ವಾಮಿ.

 

ನವೆಂಬರ್ 11 ರಂದು ಕನ್ನಡದ ನಟಿ ರಾಧಿಕಾ ಕುಮಾರಸ್ವಾಮಿ ಅವರ ಹುಟ್ಟಿದ ಹಬ್ಬ ಇತ್ತು. 36 ವರ್ಷಗಳನ್ನು ಪೂರೈಸುತ್ತಿರುವ ರಾಧಿಕಾ ಕುಮಾರಸ್ವಾಮಿ ಅವರು ಈ ವರ್ಷದ ಹುಟ್ಟುಹಬ್ಬ ಆಚರಣೆಯನ್ನು ಕುಟುಂಬದವರ ಜೊತೆ ಸೇರಿ ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟು ಅಲ್ಲಿ ಇರುವ ನೊಂದ ವೃದ್ಧರ ಜೊತೆ ಆಚರಿಸಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಸೆಲೆಬ್ರೇಶನ್ ಮಾಡಿದ್ದಾರೆ.

ಈ ಬಗ್ಗೆ ತಮ್ಮ instagram ಖಾತೆಯಲ್ಲಿ ವಿಡಿಯೋ ಒಂದನ್ನು ಮಾಡಿ ಹಂಚಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಅವರು ವೃದ್ಧಾಶ್ರಮದಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮಾಡಿದ ಯೋಜನೆ ಬಗ್ಗೆ ಸಾಲು ಸಾಲು ಬರಹಗಳನ್ನು ಬರೆದಿದ್ದಾರೆ. ನನ್ನ ಹುಟ್ಟುಹಬ್ಬವನ್ನು ವೃದ್ಧಾಶ್ರಮದಲ್ಲಿ ಆಚರಿಸಲು ದೇವರು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಾನು ಧನ್ಯವಾದಗಳು ಹೇಳುತ್ತೇನೆ.

ನಾನು ನಮ್ಮ ಅಜ್ಜಿ ಅಮ್ಮ ಅಣ್ಣಂದಿರು ಸೇರಿ ವೃದ್ದಾಶ್ರಮದಲ್ಲಿ ಅವರಿಗೆಲ್ಲಾ ಅಡುಗೆ ಮಾಡಿ ಬಡಿಸಿ ಆಚರಣೆ ಮಾಡಿದೆವು. ಇಂತಹ ಒಂದು ಮರೆಯಲಾಗದ ಅನುಭವವನ್ನು, ದಿನವನ್ನು ನಾನು ಪಡೆದುಕೊಂಡೆ. ಅಲ್ಲಿರುವ ಹಲವರ ಕಣ್ಣುಗಳಲ್ಲಿ ಅವರ ಒಂಟಿತನದ ನೋವು ಕಾಣುತ್ತಿತ್ತು, ಹಲವರು ಅದನ್ನು ನಮ್ಮೊಂದಿಗೆ ಹಂಚಿಕೊಂಡರು. ತಮ್ಮ ಕುಟುಂಬದ ಸದಸ್ಯರಿಂದಲೇ ಪ್ರೀತಿಯಿಂದ ವಂಚಿತರಾಗಿ ಹಲವು ಜನ ಅಲ್ಲಿದ್ದಾರೆ.

ಅವರ ನೋವು ವಿವರಿಸಲಾಗದಷ್ಟು ಆಳವಾಗಿದೆ. ಹಾಗಾಗಿ ನಾನು ಈ ಜನರೇಶನ್ ಎಲ್ಲರಲ್ಲೂ ಕೇಳಿಕೊಳ್ಳುತ್ತಿದ್ದೇನೆ ನಿಮ್ಮ ನಿಮ್ಮ ಮನೆಯಲ್ಲಿ ಇರುವ ವೃದ್ಧರನ್ನು ಪ್ರೀತಿಯಿಂದ ಕಾಣಿ, ಅಕ್ಕರೆಯಿಂದ ಕಾಳಜಿ ಮಾಡಿ ಅವರೆಲ್ಲರೂ ಪ್ರತ್ಯಕ್ಷವಾಗಿ ಕಾಣುತ್ತಿರುವ ದೇವರುಗಳು. ಅವರ ಜೊತೆ ಸಾಧ್ಯವಷ್ಟು ಸಮಯ ಕಳೆಯಿರಿ ಅವರನ್ನು ನೋಯಿಸಬೇಡಿ ಅವರನ್ನು ವೃದ್ದಾಶ್ರಮಕ್ಕೆ ಕಳುಹಿಸಬೇಡಿ ಎಂದು ಅರ್ಥಪೂರ್ಣವಾಗಿ ಪೋಸ್ಟಿಗೆ ಬರಹವನ್ನು ಕೂಡ ಬರೆದಿದ್ದಾರೆ.

ವೃದ್ದಾಶ್ರಮದಲ್ಲಿ ಕೇಕ್ ಕಟ್ ಮಾಡಿ ಅದನ್ನು ವೃದ್ಧರಿಗೆ ತಿನ್ನಿಸುತ್ತಿರುವ ದೃಶ್ಯಗಳು ಮತ್ತು ವೃದ್ಧರ ಜೊತೆ ಕೈ ಹಿಡಿದು ಬೆನ್ನು ಸವರಿ ಮಾತನಾಡಿ ಅವರಿಗೆ ಸಮಾಧಾನ ಮಾಡುತ್ತಿರುವ ದೃಶ್ಯಗಳು ಎಲ್ಲರಿಗೂ ಕೂಡ ಪ್ರತ್ಯೇಕವಾಗಿ ಸಿಹಿತಿಂಡಿಯ ಬಾಕ್ಸ್ ಗಳನ್ನು ನೀಡಿರುವುದು ಆ ವಿಡಿಯೋದಲ್ಲಿ ಸೆರೆಯಾಗಿದೆ. ಇದರೊಂದಿಗೆ ಆಶ್ರಮಕ್ಕೆ ಬೇಕಾದ ಸಾಮಗ್ರಿಗಳು ಮತ್ತು ಆಹಾರದ ಸಾಮಾನುಗಳನ್ನು ಕೂಡ ನಟಿ ಕೊಟ್ಟಿದ್ದಾರೆ.

ಹಲವು ವರ್ಷಗಳವರೆಗೆ ಅಜ್ಞಾತದಲ್ಲಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಇತ್ತೀಚಿಗೆ ಸಾಮಾಜಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬವನ್ನು ಈ ರೀತಿ ಅವರು ನೊಂದವರ ಜೊತೆ ಸಮಯ ಕಳೆಯುತ್ತ ಆಚರಿಸಿರುವುದು ಅವರ ಅಭಿಮಾನಿಗಳಲ್ಲಿ ಅವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದೆ ಅಲ್ಲದೆ ಅನೇಕ ಜನರು ಕೂಡ ಇಂತಹ ವಿಷಯವನ್ನು ಆದರ್ಶವಾಗಿ ತೆಗೆದುಕೊಂಡು ಅವರು ಸಹ ಅವರ ಹುಟ್ಟುಹಬ್ಬವನ್ನು ದುಂದು ವೆಚ್ಚ ಮಾಡದೆ ಈ ರೀತಿ ವೃದ್ಧಾಶ್ರಮ ಅಥವಾ ಅನಾಥಾಶ್ರಮಗಳಲ್ಲಿ ಮಾಡುವ ಯೋಜನೆ ಮಾಡುತ್ತಾರೆ.

ಇದರ ಜೊತೆಗೆ ಅವರು ಮಾಡಿದ ಪೋಸ್ಟಲ್ಲಿ ಅವರು ಹಂಚಿಕೊಂಡಿರುವ ವಿಷಯ ಕೂಡ ಹಲವರ ಮನವನ್ನು ತಟ್ಟಲಿದೆ. ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿರುವುದು ಅಲ್ಲದೆ ಸಮಾಜದಲ್ಲಿ ಆಗುತ್ತಿರುವ ಆಗುಹೋಗುಗಳನ್ನು ಮನದಲ್ಲಿಟ್ಟುಕೊಂಡು ಮನೆಯಲ್ಲಿರುವ ವೃದ್ಧರ ಮೌಲ್ಯ ತಿಳಿಸಿಕೊಡುವ ಪ್ರಯತ್ನವನ್ನು ಮಾಡಿರುವುದು ಶ್ಲಾಘನಾರ್ಹ ಇದನ್ನು ನೋಡಿದ ಬಳಿಕ ಒಂದಷ್ಟು ಮನಗಳಲ್ಲಿ ಮತ್ತು ಮನೆಗಳಲ್ಲಿ ಆದರೂ ಬದಲಾವಣೆ ಕಂಡುಬಂದರೂ ಅದು ಈಕೆ ಮಾಡಿದ ಪ್ರಯತ್ನಕ್ಕೆ ಸಿಕ್ಕ ಸಾರ್ಥಕತೆ.

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಇಂತಹ ಒಳ್ಳೊಳ್ಳೆ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಪ್ರಯತ್ನ ಮಾಡುತ್ತಿರುವುದು ಕರ್ನಾಟಕದ ಪಾಲಿಗೆ ಒಳ್ಳೆಯ ಇನಿಷಿಯೇಟ್ ಆಗಿದೆ. ರಾಧಿಕಾ ಕುಮಾರಸ್ವಾಮಿ ಮಾಡಿದ ಈ ಕಾರ್ಯ ನಿಮಗೆ ಇಷ್ಟ ಆದರೆ ತಪ್ಪದೇ ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ

ನಟಿ ಸ್ನೇಹ ನಿರ್ದೇಶಕ ಪ್ರಸನ್ನ ನಡುವಿನ ವಿ.ಚ್ಛೇ.ದ.ನ ಸುದ್ದಿಗೆ ಸ್ಪಷ್ಟನೆ ನೀಡಿದ ಸ್ನೇಹ, ಇವರಿಬ್ಬರ ಡಿ-ವೋ-ರ್ಸ್ ಗೆ ಕಾರಣವೇನು ಗೊತ್ತಾ.?

ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರ ನಡುವೆಯೇ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಿವೆ ಅದು ಹಿರಿಯರು ನಿಶ್ಚಯಿಸಿದ ಮದುವೆಯೇ ಆಗಿರಲಿ ಅಥವಾ ಅವರೇ ಒಪ್ಪಿಕೊಂಡು ಆದ ಪ್ರೇಮ ವಿವಾಹಗಳೇ ಆಗಿರಲಿ ಅತಿ ಕಡಿಮೆ ಸಮಯದಲ್ಲಿಯೇ ಮೈಲೇಜ್ ಕಳೆದುಕೊಂಡು ಮುರಿದು ಬೀಳುತ್ತಿವೆ ಎನ್ನುವುದು ಬಹಳ ಬೇಸರದ ಸಂಗತಿ ಆಗಿದೆ. ಇದರೊಂದಿಗೆ ತೀರ ಆಶ್ಚರ್ಯ ಎನಿಸುತ್ತಿರುವುದು 10, 15 ವರ್ಷಗಳ ವರೆಗೆ ಒಟ್ಟಿಗೆ ಇದ್ದ ದಂಪತಿಗಳು ಕೂಡ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ಮಾಡಿಕೊಂಡು ವಿ.ಚ್ಛೇ.ದ.ನ.ಕ್ಕಾಗಿ ಕೋರ್ಟ್ ಮೆಟ್ಟಿಲೇರುತ್ತಿರುವುದು.

ಇನ್ನು ಸೆಲೆಬ್ರಿಟಿಗಳ ಪಾಲಿಗಂತೂ ಪ್ರತಿನಿತ್ಯ ನಾವು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಈ ನಟಿಯ ಮದುವೆ ಮುರಿದು ಬಿದ್ದಿತ್ತು, ಈ ಆಟಗಾರರ ವಿ.ಚ್ಛೇ.ದ.ನ.ವಾಯಿತು, ಈ ರಾಜಕಾರಣಿಯ ಡಿ.ವೋ.ರ್ಸ್ ಆಯಿತು ಎಂದು ಓದುತ್ತಲೇ ಇರುತ್ತೇವೆ. ಈಗ ಅಂತಹದೇ ಒಬ್ಬ ಸೆಲೆಬ್ರಿಟಿಯ ಬಗ್ಗೆ ಸುದ್ದಿ ಒಂದು ಹರಿದಾಡುತ್ತಿದೆ. ತೆಲುಗಿನಲ್ಲಿ ಬೇರೆಯಾದ ನಾಗಚೈತನ್ಯ ಮತ್ತು ಸಮಂತ ಜೋಡಿ ಎಲ್ಲರಲ್ಲೂ ಬಹಳ ಆಶ್ಚರ್ಯ ಉಂಟು ಮಾಡಿತ್ತು ಮತ್ತು ಅದೇ ಸಮಯದಲ್ಲಿ ತಮಿಳಿನ ಧನುಷ್ ಮತ್ತು ಐಶ್ವರ್ಯ ಅವರ ಮದುವೆ ಮುರಿದು ಬಿದ್ದಿದ್ದು ಕೂಡ ಅನೇಕರ ಹೃದಯವನ್ನು ಒಡೆದು ಹಾಕಿತ್ತು.

ಇದಾದ ಬಳಿಕ ತಮಿಳಿನ ಮತ್ತೊಬ್ಬ ನಟಿ ತನ್ನ ವಿವಾಹ ಬಂಧನವನ್ನು ಬಿಡಿಸಿಕೊಳ್ಳುತ್ತಿದ್ದಾರೆ ಎನ್ನುವ ವದಂತಿಗಳು ಹರಡಿದೆ. ದಂತ ಸುಂದರಿ ಎಂದೇ ಫೇಮಸ್ ಆಗಿರುವ ನಟಿ ಸ್ನೇಹಾ ಅವರು ಕನ್ನಡ ತಮಿಳು ಸೇರಿದಂತೆ ತೆಲುಗು ಚಲನ ಚಿತ್ರಗಳಲ್ಲೂ ಕೂಡ ಅಭಿನಯಿಸಿದ್ದಾರೆ. ಆದರೆ ಈಕೆ ತಮಿಳು ನಟಿ ಎಂದೇ ಹೆಚ್ಚು ಹೆಸರುವಾಸಿ ಆಗಿರುವುದು. ತಮಿಳುನಾಡಿನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಇವರು ಈಗಲೂ ಕೂಡ ಬಹಳ ಬೇಡಿಕೆ ಉಳಿಸಿಕೊಂಡಿದ್ದಾರೆ. ಇವರು ತಮಿಳಿನ ಫೇಮಸ್ ನಟರಾದ ಪ್ರಸನ್ನ ಎನ್ನುವವರನ್ನು 2011ರಲ್ಲಿ ಪ್ರೀತಿಸಿ ವಿವಾಹವಾದರು.

2007 ರಲ್ಲಿ ಇಬ್ಬರು ಒಟ್ಟಿಗೆ ಅಚ್ಚಮೇಡು ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಆ ಸಮಯದಲ್ಲಿ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದು ನಂತರ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರು ಹಸೆಮಣೆ ಏರಿದ್ದರು. ಈ ಮುದ್ದಾದ ಜೋಡಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಟಿವಿ ಜಾಹೀರಾತುಗಳಲ್ಲೂ ಕೂಡ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹಲವು ಮಂದಿ ಇವರಿಬ್ಬರನ್ನು ಆದರ್ಶ ಜೋಡಿಗಳು ಎಂದು ಭಾವಿಸಿದ್ದರು ಇದೀಗ ಕೆಲವು ದಿನಗಳಿಂದ ನಟಿ ಸ್ನೇಹ ಹಾಗೂ ನಟ ಪ್ರಸನ್ನ ಅವರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದ್ದೆ.

ಇವರಿಬ್ಬರು ಡಿ.ವೋ.ರ್ಸ್ ಪಡೆಯಲು ಓಡಾಡುತ್ತಿದ್ದಾರೆ ಎನ್ನುವ ವಿಷಯ ಬಹಳ ಸುದ್ದಿ ಆಗುತ್ತಿದೆ. ಈ ವಿಷಯ ಸ್ನೇಹ ಅವರ ಕಿವಿಗೆ ಬೀಳುತ್ತಿದ್ದಂತೆ ಆಕೆ ಇದಕ್ಕೆಲ್ಲ ಸ್ಪಷ್ಟನೆ ಕೊಟ್ಟಿದ್ದಾರೆ. ಅದು ಕೂಡ ಪತಿಗೆ ಮುತ್ತನಿಡುತ್ತಿರುವ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ತಮ್ಮ instagram ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ. ಇದೆಲ್ಲ ಸುಳ್ಳು ವದಂತಿ ನಾವಿಬ್ಬರೂ ಬಹಳ ಸಂತೋಷವಾಗಿದ್ದೇವೆ ಎನ್ನುವಂತಹ ಸಂದೇಶವನ್ನು ರವಾನೆ ಮಾಡಿ ಸದ್ದಿಲ್ಲದೆ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಸೆಲೆಬ್ರಿಟಿಗಳ ಪ್ರತಿಯೊಂದು ವಿಷಯವನ್ನು ಕೂಡ ಅಭಿಮಾನಿಗಳು ಫಾಲೋ ಮಾಡುತ್ತಿರುತ್ತಾರೆ. ಸೆಲೆಬ್ರಿಟಿಗಳ ಬದುಕಿನಲ್ಲಿ ಆಗುವ ಅಂಶಗಳು ಅವರನ್ನು ಹಿಂಬಾಲಿಸುವವರ ಮನಸ್ಸಿನಲ್ಲಿ ಬಹಳ ಪರಿಣಾಮ ಬೀರುತ್ತದೆ ಹಾಗಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವವರು ಈ ರೀತಿ ಪ್ರತಿಯೊಂದು ವಿಷಯದಲ್ಲೂ ಕೂಡ ಸರಿಯಾದ ಮಾರ್ಗದಲ್ಲಿ ನಡೆದರೆ ಅದೇ ಆದರ್ಶವನ್ನು ಅವರ ಹಿಂಬಾಲಕರುಗಳು ಕೂಡ ಪಾಲಿಸುತ್ತಾರೆ ಹಾಗಾಗಿ ಆದಷ್ಟು ಸೆಲೆಬ್ರಿಟಿಗಳ ವಿ.ಚ್ಛೇ.ದ.ನ ಪ್ರಕರಣಗಳು ಕಡಿಮೆಯಾಗಲಿ ಎಂದು ಬಯಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಮಗನನ್ನು ಶಾಲೆಯಿಂದ ಬಿಡಿಸಿದ ದರ್ಶನ್, ಸ್ಕೂಲ್ ಫೀಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಗನ ವಿಧ್ಯಾಭ್ಯಾಸ ಅರ್ಧಕ್ಕೆ ನಿಂತಿರೋದೆಕೆ ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು ಗೊತ್ತ.?

 

ಕ್ರಾಂತಿ ಚಿತ್ರದ ಸಲುವಾಗಿ ನಟ ದರ್ಶನ್ ರವರು ಈಗಾಗಲೇ ಬಿಜಿ ಇದ್ದಾರೆ. ಇವರು ಕೆಲಸದಲ್ಲಿ ಬಿಜಿ ಇದ್ದರೂ ಕೂಡ ತಮ್ಮ ಸಂಸಾರಕ್ಕಾಗಿ ಕೆಲವು ಸಮಯವನ್ನು ಎತ್ತಿಡುತ್ತಾರೆ. ಎಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ರವರು ತಮ್ಮ ಮಗ ವಿನಿಷ ಹಾಗೂ ಪತ್ನಿ ವಿಜಯ ಲಕ್ಷ್ಮಿಯವರ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಆದರೆ ಈವರೆಗೂ ಯಾವುದೇ ಕಾರ್ಯಕ್ರಮಗಳಾಗಲಿ, ವೇದಿಕೆಗಳ ಮೇಲೆ ಆಗಲಿ ತಮ್ಮ ಕುಟುಂಬದ ಬಗ್ಗೆ ಎಲ್ಲಿಯೂ ದರ್ಶನ್ ರವರು ಮಾತನಾಡಿಲ್ಲ.

ಆದರೆ ಇತ್ತೀಚಿಗೆ ಕ್ರಾಂತಿ ಚಿತ್ರದ ಬಗ್ಗೆ ಸಂದರ್ಶನವನ್ನು ನೀಡುವಾಗ ಡಿ ಬಾಸ್ ದರ್ಶನ್ ರವರು ತಮ್ಮ ಮಗನ ಬಗ್ಗೆ ಮಾತನಾಡಿರುವುದು ವಿಶೇಷ ಎನಿಸಿದೆ. ತಮ್ಮ ಮಗನ ಬಗ್ಗೆ ಕೆಲವೊಂದು ವಿಷಯಗಳನ್ನು ಮೀಡಿಯಾಗಳ ಮುಂದೆ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಕ್ರಾಂತಿ ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಮಾತನಾಡಿದ ದರ್ಶನ್ ರವರು ಜನವರಿ 26ರಂದು ಗಣರಾಜ್ಯೋತ್ಸವದ ದಿನ ಕ್ರಾಂತಿ ಚಿತ್ರವು ಬಿಡುಗಡೆಯಾಗಲಿದೆ ಎಂದು ಘೋಷಣೆ ಮಾಡಿದ್ದಾರೆ ಈ ಬಗ್ಗೆ ಪ್ರಶ್ನೆಗಳನ್ನೂ ದರ್ಶನ್ ರವರ ಅಭಿಮಾನಿಗಳು ಕೂಡ ಸಂತೋಷ ಪಟ್ಟಿದ್ದಾರೆ.

ದರ್ಶನ್ ರವರಿಗೆ ಅಭಿಮಾನಿಗಳು ದೊಡ್ಡಮಟ್ಟದಲ್ಲಿದ್ದಾರೆ, ಅದರಲ್ಲೂ ಕರ್ನಾಟಕದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಾಯಕ ನಟ ಎಂದರೆ ದರ್ಶನ್ ರವರು. ಇನ್ನು ಕ್ರಾಂತಿ ಚಿತ್ರದ ಪ್ರೇಸ್ ಮೀಟನ್ನು ಮಾಡಿ ಮಾತನಾಡುವಾಗ ದರ್ಶನ್ ರವರು ತಮ್ಮ ಶಾಲೆಯ ಜೀವನದ ಬಗ್ಗೆ ನೆನೆಸಿಕೊಂಡು ಬೇಸರವನ್ನು ವ್ಯಕ್ತಪಡಿಸಿದ್ದರು. ದರ್ಶನ್ ರವರು ಶಾಲೆಗೆ ಹೋಗುತ್ತಿರುವಾಗ 40 ರಿಂದ 60 ಪೈಸೆ ಪ್ಲೀಸ್ ಗಳನ್ನು ಪ್ರತಿ ದಿವಸ ಕಟ್ಟುತ್ತಿದ್ದರಂತೆ.

ಆದರೆ ಈಗಿನ ಕಾಲದ ಮಕ್ಕಳಿಗೆ ಯಾವುದೇ ತರಹದ ಕಷ್ಟವಿಲ್ಲ ಜೊತೆಗೆ ಲಕ್ಷಾಂತರ ರೂಪಾಯಿಗಳನ್ನು ಬರಿ ವಿದ್ಯೆಗಾಗಿ ಖರ್ಚು ಮಾಡುತ್ತಿದ್ದಾರೆ ಎಂದು ಹೇಳುವಾಗ ತಮ್ಮ ಮಗನ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಿದ ವೆಚ್ಚವನ್ನು ದರ್ಶನ್ ರವರು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಮಗನ ಸ್ಕೂಲ್ ಫೀಸ್ ಬಗ್ಗೆ ಮಾತನಾಡಿದ ದರ್ಶನ್ ಅವರು ವಿನಿಶ್ ಸ್ಕೂಲಿಗೆ ಫೀಸ್ ಗಾಗಿ ಸುಮಾರು ಎಂಟು ಲಕ್ಷವನ್ನು ಪ್ರತಿವರ್ಷ ಕಟ್ಟುತ್ತಾರೆ.

ದರ್ಶನ್ ರವರ ಕ್ರಾಂತಿ ಸಿನಿಮಾವು ಇಡೀ ಕರ್ನಾಟಕದ ಎಲ್ಲೆಡೆ ನಿರೀಕ್ಷೆಗಳನ್ನು ಹೆಚ್ಚು ಮಾಡಿದೆ ಈ ಬಗ್ಗೆ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ ಎಂದರೆ ಸುಳ್ಳಾಗುವುದಿಲ್ಲ. ಹೌದು ಸ್ನೇಹಿತರೆ ಕ್ರಾಂತಿ ಚಿತ್ರದ ಬಗ್ಗೆ ಹೆಚ್ಚು ಕುತೂಹಲವಿದ್ದು ನಿರೀಕ್ಷೆಗಳು ಕೂಡ ಹೆಚ್ಚಾಗಿದೆ. ಇನ್ನು ವಿನಿಶ್ ರವರು ಕನ್ನಡ ಚಿತ್ರರಂಗಕ್ಕೆ ತರುತ್ತೀರಾ ಎಂದು ಜನರು ಕೇಳಿದ ಪ್ರಶ್ನೆಗೆ ದರ್ಶನ್ ರವರು ಹೀಗೆ ಉತ್ತರಿಸಿದ್ದಾರೆ.

ವಿನಿಶ್ ಇನ್ನು ಚಿಕ್ಕವನು ಅವನಿನ್ನು ಓದಬೇಕಾಗಿದೆ ಅವನನ್ನು ಈಗಲೇ ಚಿತ್ರರಂಗಕ್ಕೆ ತರಲು ಇಷ್ಟವಿಲ್ಲ ನನ್ನ ಹಾಗೆ ನನ್ನ ಮಗನು ಓದುವುದನ್ನು ಅರ್ಧಕ್ಕೆ ನಿಲ್ಲಿಸುವುದು ನನಗೆ ಇಷ್ಟವಿಲ್ಲ ಅವರು ನಮ್ಮ ಹಾಗೆ ಕಷ್ಟ ಅನುಭವಿಸುವುದು ಇಷ್ಟವಿಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ಡಿ ಬಾಸ್ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರ ಪುತ್ರನಾದ ವಿನೀಶ್ ರವರು ಈಗಾಗಲೇ ಕೆಲವು ಚಿತ್ರಗಳಲ್ಲಿ ಬಾಲ ನಟನಾಗಿ ಅಭಿನಯಿಸಿದ್ದಾರೆ.

ದರ್ಶನ್ ಅಭಿಮಾನಿಗಳು ವಿನೀಶ್ ನನ್ನು ಚೋಟ ಬಾಸ್ ಎಂದು ಕರೆಯುತ್ತಾರೆ. ಇನ್ನು ಈಗಾಗಲೇ ಕ್ರಾಂತಿ ಚಿತ್ರದ ಬಿಡುಗಡೆಯ ಡೇಟ್ ಅನ್ನು ಈಗಾಗಲೇ ರಿವಿಲ್ ಆಗಿದ್ದು ಕರ್ನಾಟಕ ಜನತೆ ಸಿನಿಮಾಗಾಗಿ ಕಾಯುತ್ತಿದೆ. ಕ್ರಾಂತಿ ಸಿನಿಮಾದಲ್ಲಿ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆ ನಡುವಿನ ವ್ಯತ್ಯಾಸವನ್ನು ತೋರಿಸಲಾಗಿದೆ ಹಾಗಾಗಿ ಕೆಲವು ಅಭಿಮಾನಿಗಳು ಈ ಸಿನಿಮಾ ಮಾಡಿರುವ ನೀವು ನಿಮ್ಮ ಮಗನನ್ನು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ಏಕೆ ಸೇರಿಸಬಾರದು ಎಂದು ಪ್ರಶ್ನೆ ಕೇಳಿದ್ದಾರೆ. ಈ ವಿಚಾರದ ಬಗ್ಗೆ ದರ್ಶನವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಮುಂದಿನ ದಿನದಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮೂಲಕ ಮತ್ತೆ ಕಿರುತರೆಯಲ್ಲಿ ನಟನೆ ಮಾಡುತ್ತಿರುವ ಸುಧಾರಾಣಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತ.? ಎಲ್ಲಾ ದಾಖಲೆ ಉಡೀಶ್

ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗೂ ಹಿರಿಯಾ ನಟಿ ಸುಧಾರಾಣಿ ಅವರು ಯಾರಿಗೆ ತಿಳಿದಿಲ್ಲ. ಇವರು ಹದಿಮೂರರನೇ ವಯಸ್ಸಿನಲ್ಲೇ ಸುಧಾರಾಣಿ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ರು. ರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ‘ಆನಂದ್’ ಚಿತ್ರಕ್ಕೆ ಸುಧಾರಾಣಿ ನಾಯಕಿಯಾದರು.

ಸದ್ಯ ಇವರು ಶ್ರೀ ರಸ್ತು ಶುಭಮಸ್ತು ಎನ್ನುವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ಮಾಡಿ ಮತ್ತೆ ಬೆಳ್ಳಿ ತೆರೆಗೆ ಹಿಂತಿರುಗಿದ್ದಾರೆ, ಹೌದು ಗೆಳೆಯರೇ ನಟಿ ಸುಧಾರಾಣಿ ಅವರು ಅದೊಂದು ಕಾಲದಲ್ಲಿ ಅವರು ಒಂದರ ಹಿಂದೆ ಒಂದು ಎಂಬಂತೆ ಚಿತ್ರಗಳನ್ನೂ ಮಾಡಿ ಯಶಸ್ಸಿನ ಹಾದಿಗೆ ಚಿತ್ರಗಳನ್ನು ತಂದು ಅವರದೇ ಆದ ಚಾಪನ್ನು ಕನ್ನಡ ಚಿತ್ರರಂಗದಲ್ಲಿ ಮೂಡಿಸಿದರು. ಸುಧಾರಾಣಿ ಯವರು ಪಂಚಭಾಷೆಗಳಲ್ಲಿ ನಟಿಸಿ ಸೈ ಎನಿಸ್ಕೊಂಡಿದ್ದಾರೆ.

ಕನ್ನಡ ಚಿತ್ರರಂಗವಲ್ಲದೇ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ನಟಿಸಿರುವ ಹಿರಿ-ಕಿರುತೆರೆಯ ಜನಪ್ರಿಯ ನಟಿ ಸುಧಾರಾಣಿ ಅವರು ಜನ ಮೆಚ್ಚಿದ ನಾಯಕಿಯಾದವರು. ಮೂರನೇ ವಯಸ್ಸಿಗೆ ಮಾಡಲಿಂಗ್ ಶುರು ಮಾಡಿದ ಸುಧಾರಾಣಿ, 5 ವರ್ಷ ಇದ್ದಾಗಲೇ ನೃತ್ಯಕ್ಕೆ ಸೇರಿಕೊಳ್ಳುತ್ತಾರೆ. 7 ವರ್ಷವಿದ್ದಾಗ ಮೊದಲ ಶಾರ್ಟ್‌ ಫಿಲ್ಮಂ ಚಿತ್ರೀಕರಣ ಮಾಡಿದ್ದರು. ಕೆಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದ ಸುಧಾರಾಣಿ ಅವರು, ಕೂಚಿಪುಡಿ ಹಾಗೂ ಭರತನಾಟ್ಯ ಕಲಿತ್ತಿದ್ದಾರೆ.

ಈಗ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಅದ್ಬುತ ನಟನೆಯಿಂದ ಇವರು ದಶಕಗಳಿಂದ ಪ್ರೇಕ್ಷಕರ ಪ್ರೀತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈಗ ಕಿರುತೆರೆಯಲ್ಲೂ ಮನಗೆಲ್ಲಲು ರೆಡಿಯಾಗಿದ್ದಾರೆ. ಹೊರಗಿನ ಪ್ರಪಂಚವನ್ನು ಮರೆತು ತನ್ನ ಕುಟುಂಬವೇ ಒಂದು ಪ್ರಪಂಚ ಎಂದು ಬದುಕುತ್ತಿರುವ ಒಂದು ಹೆಣ್ಣು ತಾಯಿಯಾಗಿ, ಸೊಸೆಯಾಗಿ ಮನೆ ಹೀಗೆ ನಿಭಾಯಿಸಿಕೊಂಡು ಹೋಗುತ್ತಾಳೆ ಎಂಬ ಕಥೆಯಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದಾರೆ.

ಈ ಮೂಲಕ ಕಿರುತೆರೆಯತ್ತ ಬಂದಿರುವ ಸುಧಾರಾಣಿ ಈಗ ಬೋಲ್ಡ್ ಆಗಿ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಅನುರಾಗ ಸಂಗಮ, ದೇವತಾ ಮನುಷ್ಯ, ಜೀವನ ಚೈತ್ರ, ಮನ ಮೆಚ್ಚಿದ ಹುಡುಗಿ, ಸಮರ, ಅಸೆಗೊಬ್ಬ ಮೀಸೆಗೊಬ್ಬ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸುಧಾರಾಣಿ ನಟಿಸಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಬೆಟ್ಟದ ಹೂವು ದಾರಾವಾಹಿಯಲ್ಲಿ ದೀಪ್ತಿ ಪಾತ್ರವನ್ನು ನಿರ್ವಹಿಸುತ್ತಿರುವ ಚಂದನ ರಾಘವೇಂದ್ರ ಅವರು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಜೀ ಮರಾಠಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ‘ಅಗ್ಗಾಬಾಯಿ ಸನ್ಬಾಯಿ’ ಎಂಬ ಧಾರಾವಾಹಿಯ ರಿಮೇಕ್ ಆಗಿ ಶ್ರೀರಸ್ತು ಶುಭಮಸ್ತು ಧಾರಾವಾಹಿಯ‌ ಕಥೆ ಇರಲಿದೆ ಎಂದು ಮೂಲಗಳು ಹೇಳುತ್ತಾ ಇವೆ.

ಇದಕ್ಕೆ ಕನ್ನಡದ ಟಚ್ ಕೊಟ್ಟಿ ಜೀ ಕನ್ನಡದಲ್ಲಿ ಪ್ರಸಾರ ಮಾಡುತ್ತಿದ್ದಾರೆ ಸದ್ಯ ಇದಕ್ಕೆ ಅದ್ಭುತವಾದ ರೆಸ್ಪಾನ್ಸ್ ಬಂದಿದ್ದು ವೀಕ್ಷಕರ ಮನಸ್ಸನ್ನು ಗೆದ್ದಿದೆ ಎಂದು ಹೇಳಬಹುದು. ಈ ಧಾರಾವಾಹಿಯಲ್ಲಿ ಸುಧಾರಾಣಿಯವರು ಪಡೆಯುತ್ತಿರುವ ಸಂಭಾವನೆ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಗೊಂದಲಗಳು ಹೆಚ್ಚಾಗಿವೆ, ಈ ಬಗ್ಗೆ ಹೇಳುವುದಾದರೆ ಸುಧಾರಾಣಿಯವರು ಒಂದು ಎಪಿಸೋಡಿಗೆ 40,000 ರೂಗಳನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಸದ್ಯ ಶ್ರೀರಸ್ತು ಶುಭಮಸ್ತು, ಧಾರವಾಹಿಯ ಮೂಲಕ ಕಲಾವಿದರು ತಮ್ಮ ಅಭಿಮಾನಿಗಳನ್ನು ಮತ್ತೆ ಮನರಂಜಿಸುತ್ತಿದ್ದಾರೆ ಎಂದು ಹೇಳಿದರೆ ಸುಳ್ಳಲ್ಲಾ.

ನಿಮ್ಮಂತ ಆಂಕರ್ ಅನ್ನು ನಾನು ನನ್ನ ಜೀವನದಲ್ಲೇ ನೋಡಿಲ್ಲ ಎಂದು ಎಲ್ಲರೆದುರೇ ಅನುಶ್ರೀ ಕಾಲಿಗೆ ಬಿದ್ದ ನಟ ಅಜಯ್ ರಾವ್ ವೈರಲ್ ವಿಡಿಯೋ.

ನವೆಂಬರ್ 11ರಂದು ಬಿಡುಗಡೆ ಆಗುತ್ತಿರುವ ದಿಲ್ ಪಸಂದ್ ಚಿತ್ರವು ಸೆಟ್ಟೇರಿದ ದಿನದಿಂದಲೂ ಕೂಡ ಹೆಸರಿನ ಟೈಟಲ್ ಇಂದಲೇ ಅನೇಕರ ಕುತೂಹಲ ಕೆರಳಿಸಿದೆ. ಸಿನಿಮಾದ ಸಂಪೂರ್ಣ ಕೆಲಸಗಳು ಮುಗಿದಿದ್ದು ಈಗ ಅದರ ಪ್ರಿ ರಿಲೀಸ್ ಇವೆಂಟ್ ಕೂಡ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಅಧಿತಿ ಪ್ರಭುದೇವ್ ಆಗಮಿಸಿದ್ದರು.

ಹಾಗೂ ಚಿತ್ರದ ಪ್ರಮುಖ ಆಕರ್ಷಣೆಯಾದ ಜೊತೆ ಜೊತೆಯಲಿ ಧಾರಾವಾಹಿ ನಾಯಕಿ ಮೇಘಾ ಶೆಟ್ಟಿ ಮತ್ತು ಅಮ್ಮ ಐ ಲವ್ ಯು, ಗುರು ಶಿಷ್ಯರು ಸಿನಿಮಾ ಖ್ಯಾತಿಯ ನಿಶ್ಚಿಕ ನಾಯ್ಡು ಹಾಗೂ ಸಿನಿಮಾ ನಾಯಕ ಡಾರ್ಲಿಂಗ್ ಕೃಷ್ಣ, ಮಿಲನ್ ಕೃಷ್ಣ  ಸೇರಿದಂತೆ ಸಿನಿಮಾದ ಇತರ ಕಲಾವಿದರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿನಿಮಾ ಪ್ರಚಾರ ಕಾರ್ಯ ಆರಂಭಿಸಿದರು.

ಈ ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕದಲ್ಲಿ ನಿರೂಪಣೆಗೆ ಹೆಸರುವಾಸಿ ಆಗಿರುವ ಅನುಶ್ರೀ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ವಿಶೇಷತೆ ಏನೆಂದರೆ ಅನುಶ್ರೀ ಅವರ ಕಾಲಿಗೆ ಅಜಯ್ ಕೃಷ್ಣ ಬಿದ್ದಿದ್ದಾರೆ. ಕಿರುತರೆಯಲ್ಲಿ ತನ್ನ ಚಟಪಟ ಮಾತಿನಿಂದ, ನಗುವಿನಿಂದ, ಅಪ್ಪಟ ಕನ್ನಡದಿಂದ ಎಲ್ಲರ ಗಮನ ಸಳೆಯುತ್ತಿರುವ ನಿರೂಪಕಿ ಅನುಶ್ರೀ ಅವರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಅಲ್ಲಿ ಇತರರ ಕಾಲು ಎಳೆದು ತಮಾಷೆ ಮಾಡುತ್ತಾರೆ.

ಆದರೆ ಅನುಶ್ರೀ ಅವರ ಕಾಲಿಗೆ ಬೀಳುವ ಮೂಲಕ ಅನುಶ್ರೀ ಅವರ ಕಾಲೆಳೆದಿದ್ದಾರೆ. ನಿಮ್ಮಂತಹ ನಿರೂಪಕಿಯನ್ನು ನಾನು ಎಲ್ಲೂ ನೋಡಿಲ್ಲ ಎಂದು ಹೇಳಿ ತಮಾಷೆ ಮಾಡಿದ್ದಾರೆ. ಹಾಗೂ ಅನುಶ್ರೀ ಅವರನ್ನು ನೀವೆಷ್ಟು ಸುಂದರವಾಗಿದ್ದೀರ ಎಂದರೆ ನಾನು ಬೇರೆ ಕಡೆ ನೋಡಿ ಮಾತನಾಡಲು ಆಗುತ್ತಿಲ್ಲ, ಮ್ಯಾಗ್ನೆಟ್ ತರ ನೀವೇ ನನ್ನನ್ನು ಸೆಳೆಯುತ್ತಿದ್ದೀರಾ ನೀವು ನನ್ನನ್ನು ನೋಡಬೇಡಿ ಎಂದು ಹೇಳಿದರು ನಿಮ್ಮ ಮಾತಿಗೆ ಬೆಲೆ ಕೊಡದೆ ನಿಮ್ಮನೆ ನೋಡುತ್ತಾ ಮಾತನಾಡಬೇಕು ಅನಿಸುತ್ತಿದೆ ಎಂದು ತಮಾಷೆ ಮಾಡಿದ್ದಾರೆ.

ಸಿನಿಮಾ ಬಗ್ಗೆ ಕೂಡ ಮಾತನಾಡಿದ ಅಜಯ್ ಕೃಷ್ಣ ಅವರು ಶಿವ ತೇಜಸ್ ಮತ್ತು ನಾನು ತಾಜ್ ಮಹಲ್ ಸಿನಿಮಾ ಮಾಡಿದ ದಿನದಿಂದಲೂ ಪರಿಚಿತರು. ನನ್ನ ಧೈರ್ಯಂ ಸಿನಿಮಾವನ್ನು ಕೂಡ ಇವರೇ ನಿರ್ದೇಶನ ಮಾಡಿದ್ದರು. ದಿಲ್ ಪಸಂದ್ ಚಿತ್ರವು ಇಬ್ಬರು ನಾಯಕಿಯರೊಂದಿಗೆ ತಗಲಿ ಹಾಕಿಕೊಂಡಿರುವ ಒಬ್ಬ ನಾಯಕನ ಕಥೆ ಆಗಿದೆ, ನಿಜ ಜೀವನದಲ್ಲಿ ಇದು ನಿರ್ದೇಶಕರ ಕಥೆಯನ್ನೇ ಹೋಲುತ್ತದೆ ಎಂದು ನಿರ್ದೇಶಕರನ್ನು ಕೂಡ ತಮಾಷೆ ಮಾಡಿದ್ದಾರೆ.

ಈ ಸಿನಿಮಾದಲ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಜಯ್ ರಾವ್ ಅವರು ನಾನು ಈ ಸಿನಿಮಾದ ನಾಯಕನಾಗಬೇಕಿತ್ತು ಆದರೆ ಈಗಾಗಲೇ ಡಾರ್ಲಿಂಗ್ ಕೃಷ್ಣ ಅವರು ಅದಕ್ಕೆ ಒಪ್ಪಿಕೊಂಡಿದ್ದರು. ಹಾಗಾಗಿ ಈ ಅತಿಥಿ ಪಾತ್ರ ಕೂಡ ತುಂಬಾ ವಿಶೇಷವಾಗಿತ್ತು ಹಾಗಾಗಿ ಆ ಅವಕಾಶ ಸಿಕ್ಕ ಕೂಡಲೇ ಸಂತೋಷದಿಂದ ಒಪ್ಪಿಕೊಂಡೆ ಎಂದು ಹೇಳಿದ್ದಾರೆ. ಚಿತ್ರಕಥೆಯು ತುಂಬಾ ಸ್ಪೆಷಲ್ ಆಗಿದೆ, ಹೆಸರಿಗೆ ತಕ್ಕಂತೆ ಕಥೆಯ ಸ್ವಾದವು ಸಿನಿಮಾ ಪ್ರೇಕ್ಷಕರಿಗೆ ರುಚಿಸಲಿದೆ ಎಲ್ಲರೂ ಸಹ ಚಿತ್ರಮಂದಿರದಲ್ಲಿ ತಪ್ಪದೇ ಈ ಸಿನಿಮಾವನ್ನು ನೋಡಿ ಕನ್ನಡ ಸಿನಿಮಾಗಳನ್ನು ಬೆಂಬಲಿಸಿ ಎಂದು ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಮತ್ತೊಬ್ಬ ಅತಿಥಿಯಾಗಿ ಆಗಮಿಸಿದ ಅಧಿತಿ ಪ್ರಭುದೇವ ಅವರು ಕೂಡ ಸಿನಿಮಾ ಬಗ್ಗೆ ಮಾತನಾಡಿ ಸಿನಿಮಾ ಬಹಳ ಚೆನ್ನಾಗಿ ಮೂಡಿ ಬಂದಿದೆ, ಕನ್ನಡದಲ್ಲಿ ಒಂದು ಎಂಟರ್ಟೈನ್ಮೆಂಟ್ ಚಿತ್ರವಾಗಿದೆ. ಅಲ್ಲದೆ ಈ ನಿರ್ದೇಶಕರು ನನ್ನ ಮೊದಲ ಸಿನಿಮಾದ ನಿರ್ದೇಶಕರು ಸಹ ಆಗಿರುವುದರಿಂದ ಆ ಕಾರಣಕ್ಕಾಗಿ ನಾನು ತಪ್ಪಿಸಿಕೊಳ್ಳದೆ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಎಲ್ಲರೆದುರೇ ಸಿಟ್ಟಿಗೆದ್ದು ಸಾಧು ಕೋಕಿಲಾಗೆ ಹೊಡೆದ ನಟ ಪ್ರಜ್ವಲ್, ಮಗನನ್ನು ಸಮಾಧಾನ ಮಾಡಿದ ದೇವರಾಜ್ ಈ ವೈರಲ್ ವಿಡಿಯೋ ನೋಡಿ.

ಅಪ್ಪನ ಎದುರೇ ಸಾಧು ಕೋಕಿಲ ರವರಿಗೆ ಹೊಡೆದ ನಟ ಪ್ರಜ್ವಲ್ ದೇವರಾಜ್ ನಟ ಪ್ರಜ್ವಲ್‌ ದೇವರಾಜ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಮುಂದಿನ ‘ಅಬ್ಬರ’ ಸಿನಿಮಾ ರಿಲೀಸ್‌ಗೆ ರೆಡಿ ಆಗಿದೆ ನವೆಂಬರ್ 18ರಂದು ಈ ಸಿನಿಮಾ ತೆರೆಗೆ ಬರುತ್ತಿದೆ. ಅದಕ್ಕೂ ಮುನ್ನ ಟ್ರೇಲರ್ ರಿಲೀಸ್ ಮಾಡಿ, ಚಿತ್ರದ ಬಗೆಗಿನ ಕುತೂಹಲವನ್ನು ಚಿತ್ರತಂಡ ಹೆಚ್ಚು ಮಾಡಿದೆ. ನಟ ಪ್ರಜ್ವಲ್ ದೇವರಾಜ್ ಅವರ ತಂದೆ, ಹಿರಿಯ ನಟ ದೇವರಾಜ್ ಅವರು ಟ್ರೇಲರ್ ಲಾಂಚ್ ಮಾಡಿ, ಮಗನ ಚಿತ್ರಕ್ಕೆ ಶುಭ ಕೋರಿದ್ದಾರೆ.

ನಂತರ ಚಿತ್ರದ ಬಗ್ಗೆ ಮಾತನಾಡಿದ ದೇವರಾಜ್, ‘ಟ್ರೇಲರ್ ಹಾಗೂ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ. ಮಗನ ಬಗ್ಗೆ ಈ ಚಿತ್ರದ ಮೂವರು ನಾಯಕಿಯರು ಒಳ್ಳೆಯ ಮಾತುಗಳನ್ನು ಹೇಳಿದಾಗ, ಒಬ್ಬ ತಂದೆಯಾಗಿ ನನಗೆ ತುಂಬಾ ಖುಷಿಯಾಯ್ತು. ಕನ್ನಡ ಚಿತ್ರರಂಗಕ್ಕೆ ಈಗ ಶುಕ್ರದೆಸೆ ಬಂದಿದೆ. ಇಡೀ ದೇಶ ಹೊಗಳುತ್ತಿದೆ. ರಾಮ್‌ ನಾರಾಯಣ್ ಜೊತೆ ನಾನೂ ಕೆಲಸ ಮಾಡಿದ್ದೇನೆ. ಅವರು ಬರೆದಿರುವ ಡೈಲಾಗ್‌ಗಳು ತುಂಬಾ ಚೆನ್ನಾಗಿರುತ್ತವೆ. ಅವರು ಹೇಳುವ ಮಾತಲ್ಲಿ ನಾಟಕೀಯತೆ ಕಾಣಲಿಲ್ಲ’ ಎಂದು ಹೇಳಿದರು.

ಈ ಚಿತ್ರದ ಒಂದು ಸನ್ನಿವೇಶದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರು ಸಾಧು ಕೋಕಿಲ ರವರಿಗೆ ಹಾಸ್ಯದ ಸನ್ನಿವೇಶಕ್ಕಾಗಿ ಕೆನ್ನೆಗೆ ಹೊಡೆಯ ಬೇಕಾಗಿರುತ್ತದೆ ಅದಕ್ಕಾಗಿ ಪ್ರಜ್ವಲ್ ದೇವರಾಜ್ ರವರು ತನ್ನ ತಂದೆ ದೇವರಾಜ್ ಅವರ ಮುಂದೆ ಸಿನಿಮಾಗಾಗಿ ನಟಿಸಿದ್ದಾರೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಂಡ ನಟ ಪ್ರಜ್ವಲ್ ದೇವರಾಜ್‌, ‘ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ ಎಕ್ಸೈಟ್‌ಮೆಂಟ್ ಜಾಸ್ತಿ ಇರುತ್ತೆ ಆದರೆ ಈ ಸಿನಿಮಾ ಮಾಡಿದ ಮೇಲೆ ನೆಮ್ಮದಿ ಕಾಣಿಸುತ್ತಿದೆ.

ಈ ಚಿತ್ರ ಇಷ್ಟು ಚೆನ್ನಾಗಿ ಬರಲು ಇಡೀ ತಂಡದ ಶ್ರಮವೇ ಕಾರಣ ನನಗೆ ಈ ಸಿನಿಮಾದಲ್ಲಿ ಮೂರು ವಿಭಿನ್ನವಾದ ಪಾತ್ರಗಳಿದ್ದು, ಕಾಮಿಡಿ, ಎಂಟರ್‌ಟೈನಿಂಗ್ ಜೊತೆಗೆ ಒಂದು ರಿವೆಂಜ್ ಥಾಟ್ ಚಿತ್ರದಲ್ಲಿದೆ. ಅದು ಚಿತ್ರದ ಕೊನೇವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಇರುತ್ತದೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಚಿತ್ರದ ಸಂದೇಶ’ ಎಂದು ಹೇಳಿದರು.

ನವೆಂಬರ್ 18ಕ್ಕೆ ಅಬ್ಬರ ಬಿಡುಗಡೆಯಾಗುತ್ತಿದೆ, ಎಕ್ಸೈಟ್‌ಮೆಂಟ್ ಇದೆ ಒಂದೊಂದು ಸೀನ್‌, ಫೈಟ್‌, ಹಾಡಿಗೆ ಜನ ಏನು ಹೇಳಬಹುದು ಎಂಬ ಕುತೂಹಲವು ಚಿತ್ರತಂಡಕ್ಕೆ ಇದೆ. ಆದರೆ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯಂತೂ ಖಂಡಿತ ಇದೆ ಎಂದು ಡೈನಮಿಕ್ಕಿಂಗ್ ದೇವರಾಜ್ ರವರು ತಿಳಿಸಿದ್ದಾರೆ. ಈ ಸಿನಿಮಾ ಪ್ರತಿ ಹಂತದಲ್ಲೂ ಚೆನ್ನಾಗಿಯೇ ಬಂದಿದೆ ಹಾಡಿನ ಸಮಯದಲ್ಲಿ ನಾಯಕಿ ನಿಮಿಕಾಗೆ ಕಾಲು ಪೆಟ್ಟಾಗಿದ್ದರೂ ತೋರಿಸಿಕೊಳ್ಳದೆ ಅಭಿನಯಿಸಿದ್ದಾರೆ.

ಚಿತ್ರದ ಟೈಟಲ್‌ ಅನ್ನು ಡಾ. ಶಿವರಾಜ್‌ಕುಮಾರ್ ಅವರು ರಿಲೀಸ್ ಮಾಡಿದ್ದರು. ಸದ್ಯ ಟ್ರೈಲರ್ ಅನ್ನು ದೇವರಾಜ್ ಅವರು ರಿಲೀಸ್ ಮಾಡಿದ್ದಾರೆ. ನಿರ್ಮಾಪಕರ ಹೆಸರೂ ಬಸವರಾಜ್, ಸಿನಿಮಾಗೆ ರಾಜ್ ಎನ್ನುವ ಹೆಸರು ಶಕ್ತಿಯಾಗಿ ನಿಂತಿದೆ’ ಎಂದು ಹೇಳೀದರು ನಿರ್ದೇಶಕ ಕೆ. ರಾಮ್ ನಾರಾಯಣ್‌ ರವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ರವಿಶಂಕರ್, ಶೋಭರಾಜ್, ಶಂಕರ್ ಅಶ್ವತ್ಥ್‌, ವಿಕ್ಟರಿ ವಾಸು, ಕೋಟೆ ಪ್ರಭಾಕರ್ ಮಂತಾದವರು ನಟಿಸಿದ್ದಾರೆ.

ಪ್ರಜ್ವಲ್‌ಗೆ ನಾಯಕಿಯರಾಗಿ ನಿಮಿಕಾ ರತ್ನಾಕರ್, ಲೇಖಾಚಂದ್ರ ಹಾಗೂ ರಾಜಶ್ರೀ ಪೊನ್ನಪ್ಪ ಇದ್ದಾರೆ. ಹಾಡುಗಳಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಜೆ.ಕೆ.ಗಣೇಶ್ ಛಾಯಾಗ್ರಹಣ ಮಾಡಿದ್ದು, ಸಿ. ಅಂಡ್ ಎಂ.ಮೂವೀಸ್ ಲಾಂಛನದಲ್ಲಿ ಬಸವರಾಜ್ ಮಂಚಯ್ಯ ಅವರು ಸಿನಿಮಾವನ್ನು ನಿರ್ಮಿಸಿದ್ದಾರೆ. ಪ್ರಜ್ವಲ್ ದೇವರಾಜ್ ಸಾಧುಕೋಕಿಲ ಅವರಿಗೆ ಒಡೆಯುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ ಇದನ್ನು ನೋಡಿದಂತಹ ಅಭಿಮಾನಿಗಳು ನಿಜಕ್ಕೂ ಒಂದು ಕ್ಷಣ ಶಾಕ್ ಆಗಿದ್ದಾರೆ ಆದರೆ ಇದು ಶೂಟಿಂಗ್ ಆಗಿ ಮಾಡಿದ ಸನ್ನಿವೇಶವಾಗಿದೆ ಹಾಗಾಗಿ ಇದನ್ನು ಅಭಿಮಾನಿಗಳು ಅನ್ಯತಾ ಭಾವಿಸಬಾರದು ಎಂದು ಪ್ರಜ್ವಲ್ ದೇವರಾಜ್ ಅವರು ಹೇಳಿಕೆ ಕೊಟ್ಟಿದ್ದಾರೆ.

ಚಿರುನಾ ಕಂಪ್ಲೀಟ್ ಆಗಿ ಮರೆತು ಥೈಲ್ಯಾಂಡ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಟಿ ಮೇಘನಾ ರಾಜ್.!

ಕಳೆದ ಎರಡು ವರ್ಷಗಳ ಹಿಂದೆ ನಟಿನ ಮೇಘನಾ ರಾಜ್ ಅವರ ಅನುಭವಿಸಿದ ಸಂಕಷ್ಟ ಏನು ಎಂಬುದು ನಿಮಗೆ ತಿಳಿದೇ ಇದೆ ಮದುವೆಯಾದ ನಂತರ ಕೇವಲ ಎರಡು ವರ್ಷ ಅಷ್ಟೇ ಮೇಘನಾ ರಾಜ್ ಅವರು ತಮ್ಮ ಪತಿ ಚಿರು ಅವರೊಟ್ಟಿಗೆ ಸಂತೋಷದಿಂದ ಕಾಲ ಕಳೆದರೂ. ತದನಂತರ ಅಲ್ಲಿಂದ ಇಲ್ಲಿಯವರೆಗೂ ಕೂಡ ಪ್ರತಿನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಸಾಕಷ್ಟು ನೋವನ್ನು ಅನುಭವಿಸಿದ್ದಾರೆ ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಮೇಘನಾ ರಾಜ್ ಅವರು ಒಂದಷ್ಟು ವರ್ಷ ಎಲ್ಲದರಿಂದ ದೂರ ಉಳಿದ್ದರು.

ಆದರೆ ತಮ್ಮ ಮಗ ರಾಯನ್ ಗಾಗಿ ಇದೀಗ ಎಲ್ಲವನ್ನು ಮರೆತು ಹೊಸ ಬದುಕನ್ನು ಕಟ್ಟಿಕೊಳ್ಳುವಂತಹ ನಿರ್ಧಾರ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗೂ ಜನಪ್ರಿಯ ನಾಯಕ ನಟಿ ಮೇಘನಾ ರಾಜ್ ರವರು  ತಮ್ಮ ಸಮಯವನ್ನು ಥೈಲ್ಯಾಂಡ್ ನಲ್ಲಿ ಸ್ನೇಹಿತೆಯರ ಜೊತೆ ಕಳೆಯುತ್ತಿದ್ದಾರೆ. ಮೇಘನಾ ಮೇಘನಾ ರಾಜ್ ರವರು ತಮ್ಮ ಸ್ನೇಹಿತೆಯರ ಜೊತೆ ಥೈಲ್ಯಾಂಡ್ ನಲ್ಲಿ ಮೋಜು ಮಾಡುತ್ತಿದ್ದು, ಸದ್ಯ ಇವರ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.

ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ತಮ್ಮದೇ ಆದ ಚಾಪನ್ನು ಮೂಡಿಸಿದ ನಟಿ ಮೇಘನಾ ರಾಜ್, ಲೂಸ್ ಮಾದ ಯೋಗಿ ಅವರು ಅಭಿನಯಿಸಿರುವ ಪುಂಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮೊದಲು ಪಾಧಾರ್ಪಣೆ ಮಾಡಿದರು. ರಾಜಾಹುಲಿ, ಆಟಗಾರ ಇನ್ನು ಹಲವು ಚಿತ್ರಗಳಲ್ಲಿ ಮೇಘನಾ ರವರು ನಟಿಸಿದ್ದಾರೆ.

ಸದ್ಯ ಮೇಘನಾ ರಾಜ್ ಅವರು ಇತ್ತೀಚಿಗೆ ಕಿರುತೆಯ ರಿಯಾಲಿಟಿ ಶೋ ವೇದಿಕೆಗಳ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೇಘನಾ ರಾಜ್ ರವರು ತಮ್ಮ ಪತಿ ಚಿರಂಜೀವಿ ಸರ್ಜಾ ರವರನ್ನು ಕಳೆದುಕೊಂಡು ಈಗಾಗಲೇ ಎರಡು ವರ್ಷವಾಗಿದೆ. ಇತ್ತೀಚೆಗೆ ಅಕ್ಟೋಬರ್ 17 ರಂದು, ಮೇಘನಾ ರಾಜ್ ಅವರು ತಮ್ಮ ದಿವಂಗತ ಪತಿ ಚಿರಂಜೀವಿ ಸರ್ಜಾ ಅವರ ಜನ್ಮದಿನವನ್ನು ಸ್ಮರಿಸುತ್ತಾ ಫೋಟೋ ಶೇರ್ ಮಾಡಿ  ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಪತಿಯ ಅಗಲಿಕೆಯಿಂದ ಮೇಘರಾಜ್ ರವರು ತುಂಬಾ ದಣಿದಿದ್ದರು ನಂತರ ಇವರ ಮಗ ರಾಯನ್ ರವರ ಪಾಲಿಕೆಯಲ್ಲಿ ತಲೀನರಾಗಿದ್ದರು.
ತನ್ನ ಮಗನ ಪಾಲಿಕೆಯಲ್ಲಿ ಬಿಝಿ ಇದ್ದ ಮೇಘನಾ ರವರು ವಕೇಶನ್ಗಾಗಿ ಥೈಲ್ಯಾಂಡ್ ಗೆ ಹಾರಿದ್ದಾರೆ. ತಮ್ಮ ಸ್ನೇಹಿತರ ಜೊತೆ ಸಂತೋಷದ ಸಮಯವನ್ನು ಕಳೆಯುತ್ತಿದ್ದಾರೆ. ಥೈಲ್ಯಾಂಡ್ ಒಂದು ಸುಂದರವಾದ ದೇಶವಾಗಿದೆ ಹಾಗಾಗಿ ಮನಸ್ಸಿನ ಆಯಾಸವನ್ನು ದೂರ ಮಾಡಿಕೊಳ್ಳಲು ಜನರು ಅಲ್ಲಿಗೆ ಹೋಗುತ್ತಾರೆ.

ಇನ್ನು ಮೇಘನಾ ರವರು ಥೈಲ್ಯಾಂಡ್ ನಲ್ಲಿ ಹಾಟಾಗಿ ಫೋಟೋ ತೆಗೆಸಿಕೊಂಡು ಸೋಶಿಯಲ್ ಮೀಡಿಯಾ ಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಥೈಲ್ಯಾಂಡ್ ಪ್ರವಾಸವನ್ನು ಆನಂದಿಸುತ್ತಿದ್ದಾರೆ ಮತ್ತು ಅವರ ಕೆಲವು ಚಿತ್ರಗಳೊಂದಿಗೆ ವೈರಲ್ ಆಗಿದ್ದಾರೆ. ಅವರು ಸುಂದರವಾದ ಬೋಹೀಮಿಯನ್ ಉಡುಪಿನಲ್ಲಿ ಕಾಣಿಸಿಕೊಂಡರು, ಕುತ್ತಿಗೆಯ ಸುತ್ತಲೂ ಕಸೂತಿಯ ವಿವರಗಳನ್ನು ಹೊಂದಿರುವ ಬಿಳಿ ಉಡುಗೆ ಮತ್ತು ದೊಡ್ಡ ಟೋಪಿ ಧರಿಸಿದ್ದಾರೆ.

ಫೋಟೋ ಸರಣಿಯು ಆಹಾರದ ಫೋಟೋಗಳು, ಅವಳ ಪ್ರೀತಿಪಾತ್ರರು ಇತ್ಯಾದಿಗಳನ್ನು ಸಹ ಒಳಗೊಂಡಿದೆ.  ಮೇಘನಾ ರವರು ಹ್ಯಾಟ್ ಒಂದರ ಮೇಲೆ ಮೇಘನಾ ಎಂದು ಬರೆಸಿಕೊಂಡು ಧರಿಸಿದ್ದಾರೆ ಜೊತೆಗೆ ಇನ್ನೊಂದು ಫೋಟೋದಲ್ಲಿ ಸ್ವಿಮ್ ಸೂಟನ್ನು ಧರಿಸಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳಲ್ಲಿ ಮೇಘನಾ ರಾಜ್ ರವರು ಸಕ್ಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮೇಘನಾ ರಾಜ್ ತನ್ನ ಗರ್ಲ್ ಗ್ಯಾಂಗ್ ಜೊತೆಗಿನ ಚಿತ್ರವನ್ನು ಮತ್ತು ಕೆಲವು ಸ್ಥಳೀಯ ಆಹಾರವನ್ನು ಹಂಚಿಕೊಂಡಿದ್ದಾರೆ.

ಮಗ ರಾಯನ್ ಎಲ್ಲಿದ್ದಾನೆ ಎಂದು ಕೇಳುವ ಸಂದೇಶಗಳೊಂದಿಗೆ ಅಭಿಮಾನಿಗಳು ಕಾಮೆಂಟ್ ವಿಭಾಗವನ್ನು ತುಂಬಿದರು. ಸಿನಿಮಾ ವಿಷಯಕ್ಕೆ ಬಂದರೆ ಮೇಘನಾ ರಾಜ್ ಅವರು ತುಂಬಾ ವರ್ಷಗಳಿಂದ ಚಿತ್ರರಂಗಗಳಿಂದ ದೂರವಿದ್ದಾರೆ. ಈ ಬಗ್ಗೆ ಮೇಘನಾ ರವರ ಅಭಿಮಾನಿಗಳು ಕೂಡ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಸದ್ಯ ಪನ್ನಗ ನಾಗಭರಣ ರವರು ಹಾಗೂ ಮೇಘನಾ ರಾಜ್ ರವರ ಕಾಂಬಿನೇಷನಲ್ಲಿ ಚಿತ್ರವೊಂದು ಬರಲಿದ್ದು ಈ ಮೂಲಕ ಮೇಘನಾ ರವರು ಮತ್ತೆ ತೆರೆಯ ಮೇಲೆ ಮಿಂಚಲಿದ್ದಾರೆ. ಹಾಗಾಗಿ ಅಭಿಮಾನಿಗಳು ಮೇಘನಾ ರವರನ್ನು ತೆರೆ ಮೇಲೆ ನೋಡಲು ಇನ್ನು ಸ್ವಲ್ಪ ದಿನಗಳ ಕಾಲ ಕಾಯಬೇಕಾಗಿದೆ.

ಸದ್ಯಕ್ಕೆ ತಮ್ಮ ಬಹುಕಾಲದ ಗೆಳತಿಯ ರೊಟ್ಟಿಗೆ ಎಂಜಾಯ್ ಮಾಡುತ್ತಿರುವಂತಹ ಫೋಟೋಸ್ ಅನ್ನು ನೋಡಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಇದೇ ರೀತಿ ಖುಷಿಯ ಕ್ಷಣಗಳು ತುಂಬಿರಲಿ ಹಳೆಯ ನೋವು ಮರೆತು ಹೊಸ ಜೀವನವನ್ನು ಪ್ರಾರಂಭಿಸಿ ಎಂದು ಅಭಿಮಾನಿಗಳು ಶುಭಾಶಯವನ್ನು ಕೋರಿದ್ದಾರೆ. ಇನ್ನು ಮೇಘನಾ ಸ್ನೇಹಿತರ ಜೊತೆ ಮಾತ್ರ ಈ ಟ್ರಿಪ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ ಮಗ ರಾಯನ್ ಅನ್ನು ಅಜ್ಜಿ ಮತ್ತು ತಾತನ ಜೊತೆ ಬಿಟ್ಟು ಹೋಗಿದ್ದಾರೆ.

ನಟ ದರ್ಶನ್ ಹೆಂಡತಿಯ ಹುಟ್ಟುಹಬ್ಬವನ್ನು ಎಷ್ಟು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ನೋಡಿ, ಪ್ರೀತಿಯ ಪತ್ನಿಗೆ ದರ್ಶನ್ ಕೊಟ್ಟ ಗಿಫ್ಟ್ ಏನು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಪ್ರೀತಿಸಿ ಮದುವೆಯಾಗಿರುವ ಜೋಡಿ ದರ್ಶನ್ ಅವರು ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯ ಮಾಡುವಾಗ ವಿಜಯಲಕ್ಷ್ಮಿ ಅವರು ದರ್ಶನ್ ಅವರಿಗೆ ಕಾಮನ್ ಫ್ರೆಂಡ್ ಆಗಿರುತ್ತಾರೆ. ಇವರಿಬ್ಬರ ನಡುವೆ ಮೊದಲು ಸ್ನೇಹ ವಾಗುತ್ತದೆ ತದನಂತರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಪ್ರೀತಿಸುವುದಕ್ಕೆ ಪ್ರಾರಂಭಿಸುತ್ತಾರೆ.

ತಮ್ಮ ಪ್ರೀತಿಯ ವಿಚಾರವನ್ನು ದರ್ಶನ್ ತಮ್ಮ ಮನೆಯಲ್ಲಿ ಹೇಳಿದಾಗ ಮನೆಯವರು ಒಪ್ಪಿಗೆಯನ್ನು ಸೂಚಿಸುತ್ತಾರೆ ತದನಂತರ ಸಂಪ್ರದಾಯದಂತೆ ಮತ್ತು ಶಾಸ್ತ್ರ ಬದ್ಧವಾಗಿ ಇವರ ಮದುವೆಯನ್ನು ಮಾಡಲಾಗುತ್ತದೆ. ಮದುವೆಯಾದ ನಂತರ ಇವರಿಬ್ಬರೂ ಕೂಡ ಬಹಳ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು ಈ ಪ್ರೀತಿಗೆ ಪ್ರತೀಕವಾಗಿ ಮಗ ವಿನೀಶ್ ಕೂಡ ಹುಟ್ಟಿದ್ದಾರೆ.

ಇನ್ನು ಒಂದು ಕಾಲದಲ್ಲಿ ಚಿಕ್ಕ ಪುಟ್ಟ ಪಾತ್ರದಲ್ಲಿ ಅಭಿನಯಿಸುತ್ತಿದ್ದಂತಹ ನಟ ದರ್ಶನ್ ಅವರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗಿ ಸದ್ಯಕ್ಕೆ ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಒಂದರ ಹಿಂದೆ ಮತ್ತೊಂದರಂತೆ ಹಿಟ್ ಸಿನಿಮಾಗಳನ್ನು ನೀಡುವುದರ ಮೂಲಕ ತಮ್ಮ ಸಂಭಾವನೆ ಮತ್ತು ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಸದ್ಯಕ್ಕೆ ನಟ ದರ್ಶನ್ ಅವರು ಕೈಗೆ ಸಿಗದಂತಹ ವ್ಯಕ್ತಿ ಅಂತ ಹೇಳಬಹುದು ಇನ್ನು ದರ್ಶನ್ ಅವರಿಗೆ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿರುವ ವಿಚಾರವು ಕೂಡ ನಿಮಗೆ ತಿಳಿದೇ ಇದೆ. ಒಟ್ಟಾರೆಯಾಗಿ ಹೇಳುವುದಾದರೆ ಸಿನಿಮಾ ಜೀವನದಲ್ಲಿ ದರ್ಶನ್ ಅರು ಇದೀಗ ಉತ್ತುಂಗ ಶಿಖರದಲ್ಲಿದ್ದಾರೆ ಆದರೆ ಕೆಲವು ಕಾರಣಾಂತರಗಳಿಂದ ಕಳೆದ ಎಂಟು ವರ್ಷದ ಹಿಂದೆ ವಿಜಯಲಕ್ಷ್ಮಿ ಮತ್ತು ದರ್ಶನ್ ಅವರ ಬದುಕಿನಲ್ಲಿ ಬಿರುಕು ಉಂಟಾಗುತ್ತದೆ.

ಇದು ಯಾವ ಮಟ್ಟಕ್ಕೆ ತಲುಪುತ್ತದೆ ಅಂದರೆ ದರ್ಶನ್ ಅವರು ಕೆಲ ದಿನಗಳ ಕಾಲ ಜೈಲು ವಾಸವನ್ನು ಕೂಡ ಅನುಭವಿಸಬೇಕಾಗುತ್ತದೆ ತದನಂತರ ಅಲ್ಲಿಂದ ಹೊರ ಬಂದು ಇಬ್ಬರೂ ಕೂಡ ತಮ್ಮ ತಪ್ಪಿನ ಅರಿವನ್ನು ಮನವರಿಕೆ ಮಾಡಿಕೊಂಡು ಇದೀಗ ಒಟ್ಟಾಗಿ ಸಂಸಾರವನ್ನು ಸಾಗಿಸುತ್ತಿದ್ದಾರೆ‌ ಆದರೆ ದರ್ಶನ್ ಅರಿಗೆ ಕೆಲಸ ಹೆಚ್ಚಾಗಿರುವುದರಿಂದ ತಮ್ಮ ಮಗನಿಗೆ ಮತ್ತು ಹೆಂಡತಿಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ.

ಆದರೂ ಕೂಡ ವಿಶೇಷ ದಿನಗಳಲ್ಲಿ ಮತ್ತು ವಿಶೇಷ ಸಂದರ್ಭದಲ್ಲಿ ಪತ್ನಿ ಮತ್ತು ಮಗನೊಟ್ಟಿಗೆ ಹೆಚ್ಚಿನ ಕಾಲ ಕಳೆಯುತ್ತಾರೆ. ಕಳೆದ ವಾರವಷ್ಟೇ ದರ್ಶನ್ ಅವರ ಮಗ ವಿನೀಶ್ ಅವರ ಹುಟ್ಟುಹಬ್ಬವಿತ್ತು ಹುಟ್ಟು ಹಬ್ಬಕ್ಕೆ ದರ್ಶನ್ ಅವರು ಮನೆಗೆ ಬಂದು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದರಿ. ಅದಾದ ನಂತರ ಈಗ ದರ್ಶನ ಅವರ ಹೆಂಡತಿ ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬ ಹಾಗಾಗಿ ಪತ್ನಿಯ ಹುಟ್ಟುಹಬ್ಬವನ್ನು ದರ್ಶನ್ ಅವರು ಸರ್ಪ್ರೈಸ್ ಆಗಿ ಏರ್ಪಡಿಸಿದ್ದಾರೆ.

ಈ ಸರ್ಪ್ರೈಸ್ ಅನ್ನು ನೋಡಿ ವಿಜಯಲಕ್ಷ್ಮಿ ಅವರು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ ಇನ್ನು ಹೆಂಡತಿ ಕೇಕ್ ಕತ್ತರಿಸುವಂತಹ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಸ್ವತಃ ವಿಜಯಲಕ್ಷ್ಮಿ ಅವರೇ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಇನ್ನು ದರ್ಶನ್ ತಮ್ಮ ಪ್ರೀತಿಯ ಮಡದಿಗೆ ಚಿನ್ನಾಭರಣವನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಆಭರಣ ಎಂದರೆ ತುಂಬಾನೆ ಇಷ್ಟ ಹಾಗಾಗಿ ತಮ್ಮ ಪತ್ನಿಗೆ ಚಿನ್ನದ ನಕ್ಲೆಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ ಅಷ್ಟೇ ಅಲ್ಲದೆ ಈ ದಂಪತಿಗಳಿಗೆ ಎಂದು ಹೀಗೆ ಖುಷಿಯಾಗಿ ಇರಲಿ ಎಂದು ಆಶಿಸಿದ್ದಾರೆ.

ನಟಿ ರಮ್ಯಾ ಧರಿಸಿರುವ ಈ ನಕ್ಲೆಸ್ ಬೆಲೆ ಎಷ್ಟು ಗೊತ್ತಾ.? ನೆಕ್ಲೇಸ್ ನಾ ನಿಖರ ಬೆಲೆ ತಿಳಿದ್ರೆ ನಿಜಕ್ಕೂ ಸುಸ್ತಾಗ್ತಿರಾ.

 

ಕಳೆದ ನಾಲ್ಕೈದು ತಿಂಗಳಿನಿಂದ ನಟಿ ರಮ್ಯಾ ಅವರು ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದ್ದರೆ ಹೌದು ಕಳೆದ ಐದು ವರ್ಷಗಳಿಂದಲೂ ಯಾವುದೇ ಸಿನಿಮಾದಲ್ಲಿ ನಟನೆ ಮಾಡಿದ ಚಿತ್ರರಂಗದಿಂದ ದೂರ ಉಳಿದಿದಂತಹ ನಟಿ ರಮ್ಯಾ ಅವರು ಇತ್ತೀಚಿನ ದಿನದಲ್ಲಿ ಮಾತ್ರ ಸಿನಿಮಾ ರಂಗಕ್ಕೆ ಸಂಬಂಧಪಟ್ಟಂತಹ ಎಲ್ಲಾ ಕಾರ್ಯ ಕಲಾಪಗಳಲ್ಲಿಯೂ ಕೂಡ ಪಾಲ್ಗೊಳ್ಳುತ್ತಿದ್ದಾರೆ.

ಇನ್ನು ಸ್ವಾತಿಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದೇನೆ ಎಂಬ ವಿಚಾರವನ್ನು ವಿಜಯದಶಮಿಯ ದಿನ ಹೇಳಿಕೊಂಡಿದ್ದರು. ಆದರೆ ಈ ಒಂದು ಸಿನಿಮಾವನ್ನು ನಟಿ ರಮ್ಯಾ ಅವರು ಸ್ವತಃ ತಮ್ಮದೇ ಬ್ಯಾನರ್ ಅಡಿಯಲ್ಲಿ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದರು.

ಹಾಗಾಗಿ ಅವರ ಸ್ವಂತ ಸಂಸ್ಥೆ ಆದಂತಹ ಆಪಲ್ ಬಾಕ್ಸ್ ಎಂಬ ನಿರ್ಮಾಣ ಸಂಸ್ಥೆ ಅಡಿಯಲ್ಲಿಯೇ ನಾನು ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವುದು ನನಗೆ ಸರಿ ಕಾಣಿಸುತ್ತಿಲ್ಲ. ಹಾಗಾಗಿ ಈ ಚಿತ್ರಕ್ಕೆ ಬೇರೆ ನಾಯಕ ನಟಿಯನ್ನು ಆಯ್ಕೆ ಮಾಡುತ್ತಿದ್ದೇನೆ ನಾನು ಮತ್ತೊಂದು ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ಕಂಬ್ಯಾಕ್ ಮಾಡುತ್ತೇನೆ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದರು.

ಈ ವಿಚಾರ ಕೇಳಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದರು ಇನ್ನು ಕೆಲವು ಅಭಿಮಾನಿಗಳು ರಮ್ಯಾ ಅವರ ಬರುವಿಕೆಗಾಗಿ ಕಾದಿದ್ದರು ಹಾಗಾಗಿ ಮೊನ್ನೆಯಷ್ಟೇ ಡಾಲಿ ಧನಂಜಯ್ ಅಭಿನಯದ ಉತ್ತರಖಂಡ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಮೊನ್ನೆ ಅದ್ದೂರಿಯಾಗಿ ಮುಹೂರ್ತ ಕಾರ್ಯಕ್ರಮವು ಕೂಡ ಜರುಗಿದೆ ಈ ಕಾರ್ಯಕ್ರಮಕ್ಕೆ ನಟಿ ರಮ್ಯಾ ಅವರು ಬಂದ ಲೂಕ್ ನೋಡಿ ಎಲ್ಲರೂ ಕೂಡ ಫಿದಾ ಆಗಿದ್ದಾರೆ.

ಜರತಾರಿ ಸೀರೆಯನ್ನು ಉಟ್ಟು ಬಂಗಾರದ ನಕ್ಲೇಸ್ ಅನ್ನು ತೊಟ್ಟು ಮದುಮಗಳಂತೆ ಕಾಣಿಸುತ್ತಿದ್ದಾರೆ ರಮ್ಯಾ ಅವರ ಈ ಲುಕ್ ನೋಡಿ ಪಡ್ಡೆ ಹುಡುಗರು ನಿದ್ದೆ ಗಳಿಸಿಕೊಂಡಿರುವುದಂತೂ ಸತ್ಯ. ಕಳೆದ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿ ಇರುವಂತಹ ರಮ್ಯಾ ಅವರಿಗೆ ಅಭಿಮಾನಿ ಬಳಗ ಮಾತ್ರ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಇವರ ನೋಟಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದಾರೆ.

ಅದರಲ್ಲಿಯೂ ಕೂಡ ಈ ರೀತಿ ಸೀರೆಯನ್ನು ಉಟ್ಟು ಆಭರಣ ತೊಟ್ಟು ಕ್ಯಾಮೆರಾ ಮುಂದೆ ಬಂದರೆ ಯಾವ ಹುಡುಗರು ತಾನೆ ಇಷ್ಟ ಪಡುವುದಿಲ್ಲ ಹೇಳಿ ಇದೆಲ್ಲ ಒಂದು ಕಡೆಯಾದರೆ ಇದೀಗ ರಮ್ಯಾ ಅವರು ಧರಿಸಿ ಬಂದ ನಕ್ಲಿಸ್ ವಿಚಾರ ಭಾರಿ ಚರ್ಚೆಗೆ ಗುರಿಯಾಗಿದೆ. ಹೌದು ನಟಿ ರಮ್ಯಾ ಅವರು ಧರಿಸಿದ ನೆಕ್ಲೆಸ್ ಬೆಲೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸಿಕ್ಕಾಪಟ್ಟೆ ಚರ್ಚೆ ಉಂಟಾಗಿದೆ ಕೆಲವು ಮೂಲಗಳ ಪ್ರಕಾರ ನಟಿ ರಮ್ಯಾ ಅವರು ಧರಿಸಿದ ನಕ್ಲೇಸ್ ಬೆಲೆ 20 ಲಕ್ಷ ರೂಪಾಯಿ ಅಂತ ತಿಳಿದು ಬಂದಿದೆ.

ಈ ಬೆಲೆಯನ್ನು ಕೇಳಿದಂತಹ ಅಭಿಮಾನಿಗಳು ನಿಜಕ್ಕೂ ದಂಗಾಗಿದ್ದಾರೆ ಅಷ್ಟೇ ಅಲ್ಲದೆ ಸಾಮಾನ್ಯ ವರ್ಗದ ಜನರಿಗೆ 20 ಲಕ್ಷ ಅಂದರೆ ನಿಜಕ್ಕೂ ಕೂಡ ದೊಡ್ಡ ಮೊತ್ತವೇ ಈ ಹಣದಲ್ಲಿ ಅವರು ಜೀವನ ಪೂರ್ತಿ ಜೀವನ ಸಾಗಿಸುತ್ತಾರೆ. ಅದೇನೇ ಆಗಲಿ ಸದ್ಯ ಕಂತು ನಟಿಯ ರಮ್ಯಾ ಅವರ ಧರಿಸಿದ ನೆಕ್ಲೆಸ್ ಎಲ್ಲರ ಗಮನ ಸೆಳೆಯುತ್ತಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಸ್ನೇಹಿತೆಯ ಗಂಡನನ್ನೆ ಪಟಾಯಿಸಿ ಮದುವೆಯಾಗುತ್ತಿರುವ ನಟಿ ಹನ್ಸಿಕಾ, ಅಂದು ತಾನೇ ಮುಂದೆ ನಿಂತು ಮದುವೆ ಮಾಡಿದ್ದ ಹನ್ಸಿಕಾ ಇಂದು ಸ್ನೇಹಿತೆ ಬಾಳಿಗೆ ಮುಳ್ಳದ್ಲು.

ಜಗತ್ತು ಬದಲಾಗುತ್ತಿದ್ದ ಹಾಗೆ ಈ ಭಾವನೆ ಸ್ನೇಹ ಸಂಬಂಧ ಎಲ್ಲವೂ ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಈ ವಿಷಯವನ್ನು ಪ್ರಸ್ತಾಪಿಸಲು ಕಾರಣ ಏನೆಂದರೆ ಹನ್ಸಿಕಾ ಅವರ ಮದುವೆಯ ವಿಷಯ. ಹನ್ಸಿಕಾ ಭಾರತದ ಹೆಸರಾಂತ ನಟಿ ಹಾಗೂ ಕನ್ನಡದಲ್ಲಿ ಬಿಂದಾಸ್ ಸಿನಿಮಾದಲ್ಲಿ ಬಿಂದಾಸ್ ಆಗಿ ಪುನೀತ್ ಅವರ ಜೊತೆ ಅಭಿನಯಿಸಿರುವ ನಟಿ. ಈ ನಟಿ ಈಗ ತಮ್ಮ ಗೆಳತಿಯ ಗಂಡನ್ನನ್ನೇ ಪ್ರೀತಿಸಿ ಮದುವೆಯಾಗುತ್ತಿದ್ದಾರೆ.

ತನ್ನ ಗೆಳತಿಯ ಮದುವೆ ಅಂದರೆ ಭಾವಿ ಪತಿಯ ಮೊದಲ ಮದುವೆಯಲ್ಲಿ ಹನ್ಸಿಕ ಅವರು ಭಾಗವಹಿಸಿದ್ದರು ಆ ಮದುವೆಯ ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಕುಣಿದು ಕುಪ್ಪಳಿಸಿದ್ದರು. ಇಬ್ಬರಿಗೂ ಕೂಡ ಮನಃಸ್ಪೂರ್ತಿಯಾಗಿ ಹರಸಿ ಹಾರೈಸಿ ಬಂದಿದ್ದರು. ಇದೀಗ ಅದೇ ಗೆಳತಿಯ ಗಂಡನನ್ನೇ ಹಂಸಿಕ ಮೊಟ್ವಾನಿ ಅವರು ಮದುವೆ ಆಗುತ್ತಿದ್ದಾರೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದು ಕೆಲವರು ಹನ್ಸಿಕ ಅವರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ನೇಹಕ್ಕೆ ಬೆಲೆಯೇ ಇಲ್ಲವೇ ಸಂಬಂಧಿಗಳಿಗೆ ಅರ್ಥವೇ ಇಲ್ಲವೇ ಎನ್ನುವ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಹನ್ಸಿಕಾ ಅವರ ಬಗ್ಗೆ ಹೇಳುವದಾದರೆ ಬಾಲ ನಟಿ ಹಾಕಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು, ಶಕಲಕ ಬೂಮ್ ಭೂಮ್ ಎನ್ನುವ ಧಾರಾವಾಹಿಯಲ್ಲಿ ಪಾತ್ರ ಮಾಡಿದ್ದರು. ಬಳಿಕ 2003ರಲ್ಲಿ ಕೊಯಿ ಮಿಲ್ಕಯ ಎನ್ನುವ ಸಿನಿಮಾದಲ್ಲಿ ಹೃತಿಕ್ ರೋಷನ್ ಅವರ ಜೊತೆ ಬಾಲ ನಟಿಯಾಗಿ ಸ್ಕ್ರೀನ್ ಶೇರ್ ಮಾಡಿರುತ್ತಾರೆ.

ಆ ಸಿನಿಮಾದಲ್ಲಿ ಹನ್ಸಿಕ ಅವರ ಟ್ಯಾಲೆಂಟ್ ಅನ್ನು ಕೂಡ ಅನೇಕರು ಗುರುತಿಸಿರುತ್ತಾರೆ. ಇದಾದ ಬಳಿಕ 3 ವರ್ಷಗಳಲ್ಲೇ ಅಂದರೆ ಹನ್ಸಿಕ ಅವರಿಗೆ 15 ವರ್ಷಗಳಿದ್ದಾಗ ಇವರು ನಾಯಕಿ ಆಗಿ ತೆಲುಗಿನ ದೇಶಮುದ್ರು ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ನಟಿಯಾಗಿ ಕಾಣಿಸಿಕೊಂಡ ಇವರನ್ನು ನೋಡಿ ಎಲ್ಲರೂ ಶಾ.ಕ್ ಆಗುತ್ತಾರೆ.

ಕಾರಣ ಏನೆಂದರೆ ಕೊಯಿ ಮಿಲ್ಗಯ ಸಿನಿಮಾ ಬಂದಾಗ ಪುಟ್ಟ ಬಾಲೆಯಂತೆ ಇದ್ದ ಹನ್ಸಿಕ ಮೊಟ್ವಾಣಿ ಅವರು ದೇಶಮುದ್ರು ಸಿನಿಮಾದಲ್ಲಿ ಮೈ ಕೈ ತುಂಬಿಕೊಂಡು ದೊಡ್ಡ ನಟಿಯಂತೆ ಆಗಿಬಿಟ್ಟಿರುತ್ತಾರೆ. ಯಾರು ಕೂಡ ಅವರನ್ನು ಹದಿನೈದು ವರ್ಷದವರು ಎಂದು ಗುರಿತುಸಲಾಗದಷ್ಟು ಇವರ ದೇಹ ಬದಲಾವಣೆ ಆಗಿರುತ್ತದೆ. ಒಬ್ಬ ನಟಿ ಯಾವ ರೀತಿ ಬಾಡಿ ಹೊಂದಿರಬೇಕು ಅದೇ ರೀತಿ ಹನ್ಸಿಕ ಬದಲಾಗಿರುತ್ತಾರೆ.

ಈ ವಿಷಯದ ಬಗ್ಗೆ ನಂತರ ತಿಳಿದುಬಂದ ಸತ್ಯ ಅಂಶವೇನೆಂದರೆ, ಹನ್ಸಿಕ ಮುಟ್ವಾನಿ ಅವರ ತಾಯಿ ವೈದ್ಯ ಆಗಿದ್ದು ಹಾರ್ಮೋನ್ ಗಳ ವಿಚಾರದ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿತ್ತು. ಅವರೇ ಈ ರೀತಿ ಹಾರ್ಮೋನ್ಸ್ ಇಂಜೆಕ್ಷನ್ ಮಾಡಿ ಹನ್ಸಿಕ ಅವರನ್ನು ಆ ರೀತಿ ತಯಾರಿ ಮಾಡಿದ್ದಾರೆ ಎಂದು ಸಾಕಷ್ಟು ವಿವಾದಗಳು ಆ ಬಗ್ಗೆ ಎದ್ದವು. ಹನ್ಸಿಕ ಅವರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಭಾರತೀಯ ಚಿತ್ರರಂಗದ ಪ್ರಮುಖ ಭಾಷೆಗಳ ಪ್ರಮುಖ ನಟಗಳಿಗೆ ನಾಯಕ ನಟಿಯಾಗಿ ಮಿಂಚಲು ಆರಂಭಿಸಿದರು.

ಯಾವಾಗಲೂ ಅವರ ಮದುವೆ ವಿಷಯ ಸುದ್ದಿ ಆಗುತ್ತಿತ್ತು ಇದುವರೆಗೆ ಈ ವಿಚಾರವಾಗಿ ಎಲ್ಲೂ ಮಾತನಾಡಿರದ ಅವರು ಮದುವೆ ಆಗುವುದರ ಬಗ್ಗೆ ಇತ್ತೀಚೆಗೆ ಸುಳಿವು ಬಿಟ್ಟಿಕೊಟ್ಟಿದ್ದರು. ಹುಡುಗ ಯಾರು ಬಗ್ಗೆ ಎಲ್ಲರಿಗೂ ಕುತೂಹಲ ಇತ್ತು. ಹನ್ಸಿಕ ಸುಹಾನ್ ಕತ್ತುರಿಯ ಎನ್ನುವ ಬಿಸಿನೆಸ್ ಮ್ಯಾನ್ ಅನ್ನು ಡಿಸೆಂಬರ್ 4ರಂದು ಮದುವೆ ಆಗುವುದಾಗಿ ತಿಳಿಸಿದರು.

ಸೋಶಿಯಲ್ ಮೀಡಿಯಾದ ಸುಹಾಲ್ ಕತೂರಿಯ ಬೇರೆ ಹುಡುಗಿಯನ್ನು ಮದುವೆಯಾಗುತ್ತಿರುವುದು ಆ ಮದುವೆಯಲ್ಲಿ ಹನ್ಸಿಕ ಭಾಗಿಯಾಗಿರುವ ಎಲ್ಲಾ ವಿಡಿಯೋಗಳು ಹೊರ ಬರಲಾರಂಭಿಸಿದ್ದವು. ಸುಹಾಲ್ ಮೊದಲ ಮದುವೆ ಹನ್ಸಿಕಾ ಸ್ನೇಹಿತೆ ರಿಂಕಿ ಎನ್ನುವವರ ಜೊತೆ ನಡೆದಿತ್ತು ಬಳಿಕ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟು ಬೇರೆ ಆಗಿದ್ದು ಇದೀಗ ಹನ್ಸಿಕಾ ಕೈಯನ್ನು ಹಿಡಿಯುತ್ತಿದ್ದಾರೆ. ಈ ವಿಷಯದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.