Home Blog Page 280

ರಮ್ಯಾ ನಿರ್ಮಾಣದ ಮೊದಲ ಚಿತ್ರ “ಸ್ವಾತಿ ಮುತ್ತಿನ ಮಳೆ ಹನಿಯೇ” ಸಿನಿಮಾ ಕೇವಲ 42 ದಿನಕ್ಕೆ ಶೂಟಿಂಗ್ ಕಂಪ್ಲೀಟ್ ಆಗಿದೆ, ಇದೇನು ಶಾರ್ಟ್ ಫಿಲಂ ಹಾಂ ಅಂತಿದ್ದಾರೆ ನೆಟ್ಟಿಗರು.!

 

ರಮ್ಯಾ ಅವರು ಯಾವಾಗ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಂ ಬ್ಯಾಕ್ ಮಾಡುತ್ತಾರೆ ಎಂದು ಪದ್ಮಾವತಿಯ ಅಭಿಮಾನಿಗಳು ಸೇರಿದಂತೆ ಇಡಿ ಚಿತ್ರರಂಗವೇ ಕಾಯುತ್ತಿತ್ತು. ದಶಕಗಳಿಂದಲೂ ರಮ್ಯಾ ಅವರಿಗೆ ಸಿನಿಮಾ ಆಫರ್ಗಳು ಹೋಗುತ್ತಲೇ ಇವೆ. ಆದರೆ ರಮ್ಯಾ ಅವರು ಸಿನಿಮಾದಿಂದ ಹೊರ ಉಳಿದು ರಾಜಕೀಯದಲ್ಲಿ ಬಿಸಿ ಆಗಿದ್ದರು. ಇದೀಗ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮನಸ್ಸು ಮಾಡಿದ ರಮ್ಯಾ ಅವರು ತಮ್ಮದೇ ಪ್ರೊಡಕ್ಷನ್ ಸಂಸ್ಥೆ ಒಂದನ್ನು ನಿರ್ಮಿಸಿ.

ಅವರ ನಿರ್ಮಾಣದ ಮೊದಲ ಸಿನಿಮಾಗೆ ತಾವೇ ನಾಯಕಿ ಆಗುತ್ತಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲೆಲ್ಲಾ ಸದ್ದಾಗಿತ್ತು. ಹಾಗೆಯೇ ರಮ್ಯಾ ಅವರು ಆಪಲ್ ಬಾಕ್ಸ್ ಎನ್ನುವ ನಿರ್ಮಾಣ ಸಂಸ್ಥೆಗೆ ಒಡತಿ ಆಗಿ ಅವರ ಮೊದಲ ಸಿನಿಮಾ ಸ್ವಾತಿ ಮುತ್ತಿನ ಮಳೆಹನಿಯೇ ಬಗ್ಗೆ ವಿಜಯದಶಮಿ ದಿನದಂದು ಅನೌನ್ಸ್ ಮಾಡಿದ್ದರು. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅವರು ನಾಯಕನಾಗಿ ಕಾಣಿಸಿ ಕೊಳ್ಳುವುದಲ್ಲದೆ ಇವರೇ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಕೂಡ ಮಾಡುತ್ತಿದ್ದಾರೆ.

ಗರುಡ ಗಮನ ವೃಷಭ ವಾಹನ ಸಿನಿಮಾ ಬಳಿಕ ಸ್ವಾತಿಮುತ್ತಿನ ಮಳೆ ಹನಿಯೇ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು ಆ ಸಿನಿಮಾದಲ್ಲಿ ಇವರ ಜೊತೆ ಕೆಲಸ ಮಾಡಿದ್ದ ತಂಡವೇ ಸ್ವಾತಿ ಮುತ್ತಿನ ಮಳೆ ಹನಿಯಲ್ಲೂ ರಾಜ್ ಶೆಟ್ಟಿ ಅವರಿಗೆ ಕೈ ಜೋಡಿಸುತ್ತಿದೆ. ರಮ್ಯಾ ಅವರನ್ನು ನಿರ್ಮಾಪಕಿ ಆಗಿ ಮತ್ತು ನಾಯಕಿಯಾಗಿ ಸಿನಿಮಾದಲ್ಲಿ ನೋಡಬಹುದು ಎಂದು ಆಸೆಪಟ್ಟಿದ್ದ ಅಭಿಮಾನಿಗಳಿಗೆ ರಮ್ಯಾ ಅವರು ತಾವು ಈ ಸಿನಿಮಾದಲ್ಲಿ ನಾಯಕಿ ಆಗುತ್ತಿಲ್ಲ.

ನಿರ್ಮಾಪಕ ಆಗಿ ಅಷ್ಟೇ ಉಳಿಯುತ್ತಿದ್ದೇನೆ ಎಂದು ಹೇಳುವ ಮೂಲಕ ಹೊಸ ಫೇಸ್ ನಟಿ ಸಿರಿ ರವಿಕುಮಾರ್ ಅವರನ್ನು ತಮ್ಮ ಚಿತ್ರಕ್ಕೆ ಬರಮಾಡಿಕೊಂಡಿದ್ದರು. ಸಿರಿ ರವಿಕುಮಾರ್ ಅವರು ಈಗಾಗಲೇ ಸಕುಟುಂಬ ಸಮೇತ ಎನ್ನುವ ಸಿನಿಮಾದ ಮೂಲಕ ಫೇಮಸ್ ಆಗಿದ್ದಾರೆ. ಅಲ್ಲದೆ ಕನ್ನಡದ ಕೋಗಿಲೆ ಸೀಸನ್ 2 ಕಾರ್ಯಕ್ರಮವನ್ನು ಹೋಸ್ಟ್ ಕೂಡ ಮಾಡಿದ್ದ ಇವರು ಮಾಡೆಲ್ ಆಗಿ ಕೂಡ ಫೇಮಸ್ ಆಗಿದ್ದಾರೆ.

ಕನ್ನಡದ ಕೆಲವು ವೆಬ್ ಸೀರೀಸ್ ಗಳಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾ ಬಗ್ಗೆ ನಿರ್ದೇಶಕರಾದ ರಾಜ್ ಶೆಟ್ಟಿ ಅವರು ಒಂದೇ ಶೆಡ್ಯೂಲ್ ಅಲ್ಲಿ ಚಿತ್ರೀಕರಣ ಕಂಪ್ಲೀಟ್ ಮಾಡುವುದಾಗಿ ಈ ಮೊದಲೇ ಹೇಳಿದ್ದರು. ಆ ಮಾತಿನಂತೇ ಕೇವಲ 42 ದಿನಗಳಲ್ಲಿ ಸಿನಿಮಾದ ಕಂಪ್ಲೀಟ್ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಸಿನಿಮಾದ ಮುಂದಿನ ಕೆಲಸಗಳಷ್ಟೇ ಬಾಕಿ ಇದ್ದು ಆದಷ್ಟು ಬೇಗ ತೆರೆ ಮೇಲೆ ಸಿನಿಮಾ ತರುವ ಪ್ರಯತ್ನವನ್ನು ಇಡಿ ತಂಡ ಮಾಡುತ್ತಿದೆ.

ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದ ವಿಶೇಷತೆ ಏನೆಂದರೆ, ಮೊದಲ ಬಾರಿಗೆ ನಿರ್ಮಾಪಕಿಯಾಗಿ ಈ ಸಿನಿಮಾದ ಮೂಲಕ ರಮ್ಯಾ ಅವರು ಹೊಸ ಜವಾಬ್ದಾರಿ ತೆಗೆದುಕೊಂಡಿದ್ದರೆ ಈಗಾಗಲೇ ತನ್ನ ಟ್ಯಾಲೆಂಟ್ ಇಂದ ಹಲವು ಸಿನಿಮಾಗಳಲ್ಲಿ ಕಮಲ್ ಮಾಡಿರುವ ರಾಜ್ ಬಿ ಶೆಟ್ಟಿ ಅವರ ನಿರ್ದೇಶನದ ಬಗ್ಗೆ ಸಿನಿಪ್ರೇಕ್ಷಕರಿಗೆ ಬಹಳ ನಿರೀಕ್ಷೆ ಇದೆ. ಇದೇ ಕಾರಣಕ್ಕಾಗಿ ಸಿನಿಮಾ ರಿಲೀಸ್ ಆಗುವುದನ್ನು ಕಾಯುತ್ತಿದ್ದಾರೆ.

ಈಗಾಗಲೇ ರಾಜ್ ಶೆಟ್ಟಿ ಅವರಿಗೆ ಪರಭಾಷೆಗಳಿಂದ ಕೂಡ ಆಫರ್ ಗಳು ಬರುತ್ತಿದ್ದು ಇತ್ತೀಚೆಗೆ ಮಲೆಯಾಳಂ ಸಿನಿಮಾ ಒಂದಕ್ಕೆ ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿಗಳು ಹೊರಬೀಳುತ್ತಿವೆ. ಕನ್ನಡದಲ್ಲಿ ದಿನೇ ದಿನೇ ಪ್ರಯೋಗಾತ್ಮಕ ಸಿನಿಮಾಗಳು ಮತ್ತು ಕ್ರಿಯೇಟಿವ್ ಡೈರೆಕ್ಟರ್ಗಳ ಮತ್ತು ಅಭಿನಯದಲ್ಲಿ ಹೊಸ ಟ್ಯಾಲೆಂಟ್ ಗಳ ಪ್ರದರ್ಶನವಾಗುತ್ತಿದ್ದು ಚಂದನ ವನದ ಪಾಲಿಗೆ ಈ ವರ್ಷಗಳು ರಾಜಯೋಗದ ದಿನಗಳಾಗಿವೆ ಎನ್ನಬಹುದು.

ಕಾಂತರಾ ಸಿನಿಮಾಗೆ ಯಾವುದೇ ಗ್ರಾಫಿಕ್ ಬಳಸದೆ, ಅದ್ಭುತವಾಗಿ ಸೀನ್ ಬರಲು ರಿಷಬ್ ಶೆಟ್ಟಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಒಮ್ಮೆ ಈ ಮೇಕಿಂಗ್ ವಿಡಿಯೋ ನೋಡಿ ನಿಜಕ್ಕೂ ಬಾಯಿ ಮೇಲೆ ಬೆರಳಿಡ್ತಿರಾ.

ಕಾಂತಾರ ಕನ್ನಡ ಚಿತ್ರರಂಗದಲ್ಲಿ ಆದರೆ ಆದ ಇತಿಹಾಸವನ್ನು ಸೃಷ್ಟಿ ಮಾಡಿದೆ. ಯಾರ ಬಾಯಲ್ಲಿ ಕೇಳಿದರು ಕಾಂತಾರ ಚಿತ್ರದ್ದೆ ಸುದ್ದಿ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರವು ಪ್ರೇಕ್ಷಕರನ್ನು ಮತ್ತು ಸಿನಿಪಂಡಿತರನ್ನು ವಿಸ್ಮಯಗೊಳಿಸುತ್ತಿದೆ. ಇನ್ನೂ ಅದು ಮುಂದುವರೆಸಿದೆ. ಕನ್ನಡಿಗನ ʼಕಾಂತಾರʼ ದೇಶಾದ್ಯಂತ ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ಒಂದರಂತೆ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ.

ಸಾರ್ವಕಾಲಿಕ ದೊಡ್ಡ ಯಶಸ್ಸಿನತ್ತ ಸಾಗಿರುವ ಕಾಂತಾರ ಸದ್ಯ ದಾಖಲೆ ಸೃಷ್ಟಿಸಿದೆ. ಕಾಂತಾರ ಚಿತ್ರಮಂದಿರಗಳಲ್ಲಿ 7 ವಾರಗಳಿಗಿಂತ ಹೆಚ್ಚು ಕಾಲ ತನ್ನದೇ ಆದ ಸ್ಥಾನವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಖಂಡಿತವಾಗಿಯೂ ಸಂಭ್ರಮಾಚರಣೆಗೆ ಕಾರಣವಾಗಿದೆ. ಹೊಂಬಾಳೆ ಕಾರ್ಯನಿರ್ವಾಹಕ ನಿರ್ಮಾಪಕ ಕಾರ್ತಿಕ್ ಗೌಡ ಅವರು ಚಿತ್ರದ ಇದುವರೆಗಿನ ಅತ್ಯುತ್ತಮ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ವರದಿಯ ಪ್ರಕಾರ, ನವೆಂಬರ್ 18 ರ ಶುಕ್ರವಾರ ಬಿಡುಗಡೆಯಾದ ಸಿನಿಮಾ ಅದೇ ಚಿತ್ರಮಂದಿರಗಳಲ್ಲಿ ಪ್ರದರ್ಶನವನ್ನು ಮುಂದುವರೆಸಿದರೆ, ಚಿತ್ರವು ಮೊದಲ ದಿನ ಬಿಡುಗಡೆಯಾದ ಎಲ್ಲಾ ಪರದೆಗಳಲ್ಲಿ 50 ದಿನಗಳನ್ನು ಪೂರೈಸಿದ ಮೊದಲ ಕನ್ನಡ ಚಲನಚಿತ್ರವಾಗಿ ಇತಿಹಾಸವನ್ನು ಸೃಷ್ಟಿಸುತ್ತದೆ! ತಿರುಗಿ ನೋಡಿದರೆ, ಪ್ರಬಲವಾದ ಕೆಜಿಎಫ್ 2 ಸೇರಿದಂತೆ ಈ ಹಿಂದೆ ಯಾವುದೇ ಕನ್ನಡ ಚಿತ್ರವು ತನ್ನ ಥಿಯೇಟರ್ ಓಟದಲ್ಲಿ ಖಚಿತವಾಗಿ ಹೆಜ್ಜೆ ಹಾಕುವಲ್ಲಿ ಯಶಸ್ವಿಯಾಗಲಿಲ್ಲ.

ಕಾಂತಾರ ಕೂಡ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರವಾಗುವತ್ತ ಬೇಗ ಕಾಲನ್ನು ಹಾಕುತ್ತಿದೆ ಮತ್ತು ಕೆಜಿಎಫ್ 2 ಕ್ಕಿಂತ ಕಡಿಮೆ ಅಂತರದಲ್ಲಿ ಹಿಂದೆ ಇದೆ. ರಿಷಬ್‌ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾವು ಈವರೆಗೂ ಹಲವು ದಾಖಲೆಗಳನ್ನು ಉಡೀಸ್ ಮಾಡಿದೆ. ವಿಶ್ವಾದ್ಯಂತ ಈ ಸಿನಿಮಾದ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಸದ್ಯ ಹೊಸದೊಂದು ದಾಖಲೆ ಈ ಚಿತ್ರದಿಂದ ನಿರ್ಮಾಣವಾಗಿದೆ.

ಕರ್ನಾಟಕದಲ್ಲಿ 25ಕ್ಕೆ 77 ಲಕ್ಷ ‘ಕಾಂತಾರ’ ಸಿನಿಮಾದ ಟಿಕೆಟ್ ಸೇಲ್ ಆಗಿದ್ದವು. ಇದೀಗ ಸಂಖ್ಯೆ ಒಂದು ಕೋಟಿ ತಲುಪಿದೆ. ಹೌದು, ಕರ್ನಾಟಕದಲ್ಲಿ ‘ಕಾಂತಾರ’ ಸಿನಿಮಾದ ಒಂದು ಕೋಟಿ ಟಿಕೆಟ್‌ ಮಾರಾಟವಾಗಿವೆ. ಶಿವ ಎಂಬ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡರೆ, ನಟಿ ಸಪ್ತಮಿ ಗೌಡ, ಲೀಲಾ ಎಂಬ ಪಾತ್ರ ಮಾಡಿದ್ದಾರೆ. ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ದೀಪಕ್‌ ರೈ, ಮಾನಸಿ ಸುಧೀರ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ಧಾರೆ.

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ‘ಕಾಂತಾರ’ ಸಿನಿಮಾದಲ್ಲಿ ಭೂತಕೋಲದ ಮೇಲೆ ಜನರಿಟ್ಟಿರುವ ನಂಬಿಕೆ, ಕಾಡಿನ ಅತಿಕ್ರಮಣ ಕುರಿತಂತೆ ಸಾಕಷ್ಟು ವಿಷಯಗಳಿವೆ. ಜಾನಪದ ಶೈಲಿಯ ದೈವದ ಆಚರಣೆಯನ್ನು ಅದ್ಭುತವಾಗಿ ತೋರಿಸಲಾಗಿದೆ. ಸದ್ಯ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಕಾಂತಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಚಿತ್ರದ ಉತ್ತಮತೆಗಾಗಿ ರಿಷಬ್ ಶೆಟ್ಟಿಯವರು ಯಾವುದೇ ತರಹದ ಗ್ರಾಫಿಕ್ಸ್ ಅನ್ನು ಬಳಸಿಲ್ಲ ಇನ್ನು ಇದಕ್ಕೆ ಉದಾಹರಣೆ ಸಿನಿಮಾದ ಒಂದು ದೃಶ್ಯದಲ್ಲಿ ರಿಷಬ್ ರವರು ಕಂಬಳದಲ್ಲಿ ಕೋಣಗಳ ಸಮನಾಗಿ ಓಡಬೇಕಿತ್ತು, ಅದಕ್ಕೆ ಈ ಸಿನಿಮಾದ ಛಾಯಾಗ್ರಹಕರಾದ ಅರವಿಂದ್ ಕಶ್ಯಪ್ ರವರು ಕೂಡ ಗದ್ದೆಯಲ್ಲಿ ಕ್ಯಾಮರವನ್ನು ಹಿಡಿದುಕೊಂಡು ಛಾಯಾಗ್ರಹಣ ಮಾಡಿದ್ದಾರೆ ಈ ಸಿನಿಮಾದಲ್ಲಿ ನೈಸರ್ಗಿಕವಾಗಿ ಕಾಣುವ ಹಾಗೆ ಛಾಯಾಗ್ರಹಣ ಮಾಡಿದ್ದಾರೆ ಹಾಗೂ ಈ ಎಲ್ಲಾ ಪಾತ್ರಗಳನ್ನು ಉತ್ತಮವಾಗಿ ಮಾಡಲು ಕೂಡ ಬಹಳ ಪರಿಶ್ರಮವನ್ನು ಹಾಕಿದ್ದಾರೆ ಎಂದರೆ ಸುಳ್ಳಾಗುವುದಿಲ್ಲ. ನೀವು ಕೂಡ ಒಮ್ಮೆ ಈ ಮೇಕಿಂಗ್ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಸಚಿವ ಆರ್.ಆಶೋಕ್ ಅಪ್ಪು ಹೆಸರಿನ ರಸ್ತೆ ಉದ್ಘಾಟನೆ ಸಮಾರಂಭಕ್ಕೆ ದರ್ಶನ್ ಕರೆಸುತ್ತೇನೆ ಅಂದಾಗ ಅಶ್ವಿನಿ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಶಾ-ಕ್ ಆಗುತ್ತೆ ಈ ವಿಡಿಯೋ ನೋಡಿ.

 

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಹೆಸರು ಕೇಳುತ್ತಿದ್ದಂತೆ ಹಿಂದೆಲ್ಲಾ ನಗುಮುಖದಿಂದ ಕೂಡಿದ ರಾಜಕುಮಾರನ ನೆನಪಾಗುತ್ತಿತ್ತು. ಆದರೆ ಈಗ ಈ ಸದ್ದು ಕಿವಿಗೆ ಬೀಳುತ್ತಿದ್ದಂತೆ ಅಪ್ಪು ಇಲ್ಲದ ನೋವಿನಿಂದ ಎಲ್ಲರ ಮುಖ ಬಾಡಿ ಹೋಗುತ್ತದೆ. ಅವರು ಇಂದು ದೈಹಿಕವಾಗಿ ನಮ್ಮೊಂದಿಗೆ ಇರದೆ ಇರಬಹುದು ಆದರೆ ಜೊತೆಗಿರದ ಜೀವ ಕೊನೆಯವರೆಗೂ ಜೀವಂತ ಎನ್ನುವ ಅವರದ್ದೇ ಸಿನಿಮಾದ ಸಾಲಿನಂತೆ ಕರ್ನಾಟಕದ ಪ್ರತಿಯೊಬ್ಬರ ಮನಸಿನಲ್ಲೂ ಅಪ್ಪು ಅವರ ನೆನಪು ಶಾಶ್ವತವಾಗಿ ಉಳಿದಿದೆ.

ಒಂದು ವರ್ಷದಿಂದ ಪ್ರತಿನಿತ್ಯ ಒಂದಲ್ಲ ಒಂದು ವಿಷಯಕ್ಕೆ ದಿನಕ್ಕೊಮ್ಮೆ ಆದರೂ ಜನ ಅಪ್ಪು ಅನ್ನು ನೆನೆಯುತ್ತಿದ್ದಾರೆ. ಈಗ ಯಾವುದೇ ಊರಿನ ಹಬ್ಬವಾದರೂ ಅಲ್ಲಿ ಅಪ್ಪು ಫೋಟೋ ಇರುತ್ತದೆ, ಪ್ರತಿ ರೋಡಿನಲ್ಲೂ ಅಪ್ಪು ನಗುಮುಖದಿಂದ ಕೂಡಿದ ಪೋಸ್ಟರ್ ಇರುತ್ತದೆ, ಊರಿನ ಮುಖ್ಯ ರಸ್ತೆಯನ್ನು ಪುನೀತ್ ರಾಜಕುಮಾರ್ ರಸ್ತೆ ಎಂದು ಕರೆಯಲಾಗುತ್ತಿದೆ.

ಇಷ್ಟರ ಮಟ್ಟಿಗೆ ಕರ್ನಾಟಕದ ಜನರಿಂದ ಪ್ರೀತಿ ಗಳಿಸಿರುವ ಅಪ್ಪು ತಾನು ಮಾಡುತ್ತಿದ್ದ ಸಮಾಜ ಸೇವೆ, ಸಿನಿಮಾಗೆ ಸಂಬಂಧಪಟ್ಟ ಜವಾಬ್ದಾರಿ ಇದೆಲ್ಲವನ್ನು ಪತ್ನಿಯ ಹೆಗಲಿಗೆ ಹೊರಿಸಿ ಅಪ್ಪ-ಅಮ್ಮನ ಮಡಿಲಿನಲ್ಲಿ ಮೌನವಾಗಿ ಲೀನವಾಗಿದ್ದಾರೆ. ಇದೀಗ ಅಪ್ಪು ಅವರ ಎಲ್ಲಾ ಕನಸುಗಳನ್ನು ನನಸು ಮಾಡುವ ನಿರ್ಧಾರ ಮಾಡಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಜನಸಾಮಾನ್ಯರ ಕಷ್ಟ ಸುಖ ಆಲಿಸಿ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಆಸೆಯಿಂದ ನಿರ್ಮಿಸಿದ್ದ ಪಿಆರ್ ಕೆ ಪ್ರೊಡಕ್ಷನ್ ಅನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಅಶ್ವಿನಿ ಅವರು ಆ ಮೂಲಕ ಅಪ್ಪು ಅವರು ಅಂದುಕೊಂಡಿದ್ದ ಹಾಗೆ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

ಹಿಂದೆಲ್ಲ ಅಪ್ಪು ಇರುವ ತನಕ ಅಪ್ಪು ಜೊತೆಗೆ ಎಲ್ಲಾ ಕಾರ್ಯಕ್ರಮಕ್ಕೂ ಹೋಗುತ್ತಿದ್ದರೂ ಎಂದು ಕ್ಯಾಮರಾ ಮುಂದೆ ಮಾತನಾಡದೇ ನಾಚಿಕೆಯಿಂದ ಅಪ್ಪು ಹಿಂದೆ ನಿಲ್ಲುತ್ತಿದ್ದ ಅಶ್ವಿನಿ ಅವರು ಇದೀಗ ದೊಡ್ಡ ಮನೆಯ ಸೊಸೆಯಾಗಿ ತನ್ನೆಲ್ಲ ನೋವನ್ನು ನುಂಗಿಕೊಂಡು ಗಟ್ಟಿಗಿತ್ತಿಯಂತೆ ಅಪ್ಪು ಹೆಸರು ಉಳಿಸುವ ಕೆಲಸಕ್ಕೆ ಪಣತೊಟ್ಟಿದ್ದಾರೆ. ಅದಕ್ಕಾಗಿ ಯಾವುದೇ ಕಾರ್ಯಕ್ರಮದ ಆಹ್ವಾನ ಬಂದರು ತಪ್ಪದೆ ಪಾಲ್ಗೊಂಡು ನಡೆಸಿಕೊಟ್ಟು ಬರುತ್ತಾರೆ.

ಇದೇ ರೀತಿ ಇತ್ತೀಚೆಗೆ ಸಾಯಿ ಸಂಗಮ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್ ಸೆಂಟರ್ ಎನ್ನುವ ಆಸ್ಪತ್ರೆಯೊಂದರ ಉದ್ಘಾಟನೆ ಸಮಾರಂಭಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಸಚಿವ ಆರ್.ಅಶೋಕ್ ಅವರನ್ನು ಅತಿಥಿಯಾಗಿ ಕರೆಸಲಾಗಿತ್ತು. ಈ ಕಾರ್ಯಕ್ರಮಕ್ಕೂ ಕೂಡ ಹೋಗಿ ಕಾರ್ಯಕ್ರಮ ನಡೆಸಿಕೊಟ್ಟ ಸಮಯದಲ್ಲಿ ಆರ್ ಅಶೋಕ್ ಅವರು ಅಶ್ವಿನಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ಹಾಗೆಯೇ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ರಸ್ತೆ ಉದ್ಘಾಟನೆ ಮಾಡುವುದಾಗಿ ಈಗಾಗಲೇ ಹೇಳಿದ್ದೇವೆ. ಈ ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಅತಿಥಿಯಾಗಿ ಕರೆಸೋಣ ಎಂದುಕೊಂಡಿದ್ದೇವೆ ಎಂದಾಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದಯವಿಟ್ಟು ಕರೆಸಿ ನಿಮಗೆ ಯಾರು ಸರಿ ಅನಿಸುತ್ತಾರೆ ಅವರನ್ನು ಕರೆಸಿ, ನನ್ನದೇನು ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ.

ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿತ್ತು ದಚ್ಚು ಬಂದು ಈ ಕಾರ್ಯಕ್ರಮವನ್ನು ನಡೆಸಿಕೊಡಬೇಕು ಎಂದು ಅಪ್ಪು ಅಭಿಮಾನಿಗಳು ಕೇಳುತ್ತಿದ್ದಾರೆ. ಅಪ್ಪು ಹಾಗೂ ದರ್ಶನ್ ಅವರ ಕುಟುಂಬದ ನಡುವೆ ತಂದೆಯ ಕಾಲದಿಂದಲೂ ಕೂಡ ಉತ್ತಮ ಸ್ನೇಹವಿತ್ತು, ಈಗ ದರ್ಶನ್ ಅವರು ಸಹ ತಮ್ಮ ಸ್ನೇಹಿತನನ್ನು ಕಳೆದುಕೊಂಡ ನೋವಿನ ಭಾರವನ್ನು ಎದೆಯಲೊತ್ತು ತಿರುಗುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಅವರೇ ಅತಿಥಿಯಾಗಿ ಬಂದರೆ ಇಬ್ಬರ ಅಭಿಮಾನಿಗಳಿಗೂ ಬಹಳ ಸಂತೋಷ ಆಗುತ್ತದೆ.

ಎಲ್ಲರ ಗಮನ ಸೆಳೆಯುತಿದೆ ವೇದಿಕೆ ಮೇಲೆ ನಟಿ ರಚಿತಾ ರಾಮ್ ಮಾಡಿದ ಈ ಡ್ಯಾನ್ಸ್

 

ಕರ್ನಾಟಕದ ಮತ್ತೊಬ್ಬ ಸ್ಟಾರ್ ಮತ್ತು ಭರವಸೆಯ ಖಳದಾಯಕ ಆಗಿ ಹೊರಹೊಮ್ಮಿರುವ ಅಭಿನಯ ರಾಕ್ಷಸ ಡಾಲಿ ಧನಂಜಯ್ ಅವರ ಸಿನಿಮಾಗಳು ಯಾವಾಗ ಚಿತ್ರೀಕರಣ ಮುಕ್ತಾಯಗೊಳ್ಳುತ್ತವೆ ಎಂದು ಊಹಿಸುವುದೇ ಅಸಾಧ್ಯ. ಕಳೆದ ವರ್ಷ ಕೂಡ ಅತಿ ಹೆಚ್ಚು ಸಿನಿಮಾದಲ್ಲಿ ನಟಿಸಿದ ಖ್ಯಾತಿ ಪಡೆದ ಈ ನಟ ಈ ವರ್ಷವೂ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ರಿಲೀಸ್ ಹಂತಕ್ಕೆ ತಂದಿದ್ದಾರೆ.

ಈಗಷ್ಟೇ ಅವರ ಮಾನ್ಸೂನ್ ರಾಗವನ್ನು ಎಂಜಾಯ್ ಮಾಡುತ್ತಿದ್ದ ಜನರಿಗೆ ಹೆಡ್ ಬುಷ್ ಸಿನಿಮಾ ಮೂಲಕ ಭೂಗತ ಜಗತ್ತಿನ ದೊರೆ ಒಬ್ಬನ ಕಥೆಯನ್ನು ಎಳೆಹಳೆಯಾಗಿ ಬಿಚ್ಚಿಡಲು ಬರುತ್ತಿದ್ದಾರೆ. ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ಜಯರಾಜ್ ಅವರ ಜೀವನಾಧಾರಿತ ಸಿನಿಮಾ ಮಾಡಲಾಗಿದ್ದು ಡಾಲಿ ಧನಂಜಯ್ ಅವರೇ ಜಯರಾಜ್ ಪಾತ್ರದಲ್ಲಿ ಅಭಿನಯಿಸಿ ಈ ಸಿನಿಮಾಕ್ಕೆ ಹೂಡಿಕೆ ಕೂಡ ಮಾಡಿದ್ದಾರೆ.

ಈ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಅದ್ದೂರಿಯಾಗಿ ಮಾಡಲಾಯಿತು. ದಾವಣಗೆರೆಯ ಲಕ್ಷಾಂತರ ಜನರ ನಡುವೆ ಹೆಡ್ ಬುಷ್ ಸಿನಿಮಾ ತಂಡ ಈ ಕಾರ್ಯಕ್ರಮ ನಡೆಸಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಈ ಹಿಂದಿನ ಸಿನಿಮಾಗಳಲ್ಲಿ ಡಾಲಿ ಧನಂಜಯ್ ಅವರ ಜೊತೆಗೆ ನಟಿಸಿದ್ದ ಅನೇಕ ನಾಯಕಿಯರು ಬಂದಿದ್ದರು.

ಅಮೃತ ಅಯ್ಯರ್, ಸಪ್ತಮಿ ಗೌಡ, ಪಾಯಲ್ ಮತ್ತು ರಚಿತಾ ರಾಮ್ ಹಾಗೂ ರಮ್ಯಾ ಅವರು ಕೂಡ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದು ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ವೇದಿಕೆ ಮೇಲೆ ರಚಿತರಾಮ್ ಅವರು ಬಂದಾಗ ಅಭಿಮಾನಿಗಳಿಂದ ಬಾರಿ ಶಿಳ್ಳೆ ಚಪ್ಪಾಳೆ ಕೇಕೆ ಕೇಳಿ ಬರುತ್ತಿತ್ತು. ಅಭಿಮಾನಿಗಳ ಪ್ರೀತಿಗೆ ಅಷ್ಟೇ ಹಿತವಾಗಿ ಪ್ರತಿಕ್ರಿಸುತ್ತಿದ್ದ ರಚಿತಾ ರಾಮ್ ಅವರನ್ನು ಅಭಿಮಾನಿಗಳು ನೃತ್ಯ ಮಾಡುವಂತೆ ಒತ್ತಾಯಿಸುತ್ತಿದ್ದರು.

ಅದಕ್ಕೆ ಮಣಿದ ರಚಿತಾ ರಾಮ್ ಅವರು ಡಾಲಿ ಹಾಗೂ ಅವರ ಮುಖ್ಯ ಭೂಮಿಯಲ್ಲಿ ಮೂಡಿ ಬಂದ ಮಾನ್ಸೂನ್ ರಾಗದ ಮ್ಯೂಸಿಕಲ್ ಹಿಟ್ ಬೀಟ್ ಒಂದಕ್ಕೆ ಸ್ಟೇಜ್ ಮೇಲೆ ಡಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿ ರಂಜಿಸಿದ್ದಾರೆ. ಕೆಂಪು ಬಣ್ಣದ ಸಲ್ವಾರ್ ತೊಟ್ಟು ಮಿಂಚುತ್ತಿದ್ದ ರಚಿತಾ ರಾಮ್ ಅವರು ಈ ಹಾಡಿಗೆ ಹೆಜ್ಜೆ ಹಾಕುತ್ತಾ ಅಪ್ಸರೆಯ ರೀತಿ ಕಾಣುತ್ತಿದ್ದರು. ಅವರ ಈ ನೃತ್ಯವನ್ನು ನೋಡಿ ದಾವಣಗೆರೆ ಜನರು ಫಿದಾ ಆಗಿ ಅವರು ಕೂಡ ನಿಂತಲ್ಲಿಯೇ ಕುಣಿಯುತ್ತಿದ್ದರು.

ಅಷ್ಟು ಮಾತ್ರ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಈ ವಿಡಿಯೋ ಬಹಳ ವೈರಲ್ ಆಗಿದ್ದು ರಚ್ಚು ಅಭಿಮಾನಿಗಳೆಲ್ಲರೂ ಇದನ್ನು ಹೆಚ್ಚಾಗಿ ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಸ್ವತಃ ರಚಿತಾ ರಾಮ್ ಅವರೇ ಈ ವಿಡಿಯೋವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಈ ಹಾಡಿಗೆ ರಚಿತಾರಾಮ್ ಅವರು ಹೆಜ್ಜೆಗಳು ಸಾಥ್ ನೀಡಿದ್ದು, ಅಷ್ಟೇ ಸುಂದರವಾಗಿ ಕೂಡ ಕಾಣುತ್ತಿದ್ದಾರೆ.

ಹೆಜ್ಜೆಗೆ ತಕ್ಕ ಹಾಗೆ, ರಾಗ ರಾಗಕ್ಕೆ ತಕ್ಕ ಹಾಗೆ ಸಂಗೀತ. ಸಿನಿಮಾದ ಆ ಹಾಡಿನ ಮೋಡಿಯೋ ಅಥವಾ ರಚಿತಾ ರಾಮ್ ಅವರ ನೃತ್ಯದ ಮೈಮಾಟವೋ ಗೊತ್ತಿಲ್ಲ ನೋಡುತ್ತಿದ್ದ ಹಾಗೆ ನೋಡುಗರೂ ಕೂಡ ಮೈಮರೆತು ತಾವು ಈ ಬೀಟ್ ಕೇಳುತ್ತಾ ಎರಡು ಹೆಜ್ಜೆ ಹಾಕಬೇಕು ಎನಿಸುವಂತಿದೆ. ರಚಿತರಾಮ್ ಅವರು ಎಷ್ಟು ಚೆನ್ನಾಗಿ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ ಎನ್ನುವುದನ್ನು ನೋಡಲು ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ

ದರ್ಶನ್ 56ನೇ ಸಿನಿಮಾಗೆ ನಟಿಯಾಗಿದ್ದ ಮಾಲಶ್ರೀ ಮಗಳು ರಾಧನಾ ಡಿ-ಬಾಸ್ ಗೆ ಕೈ ಕೊಟ್ಟು ಇದೀಗ ಧೃವ ಸರ್ಜಾ ಸಿನಿಮಾಗೆ ನಟಿಯಾಗುತ್ತಿದ್ದಾರೆ ಯಾಕೆ ಗೊತ್ತ.?

 

ಮಾಲಾಶ್ರೀ ಅವರ ಬದುಕು ಸಿನಿಮಾಗಾಗಿ ಮುಡಿಪಾಗಿಟ್ಟಿತ್ತು ಎಂದು ಹೇಳಬಹುದು. ಯಾಕೆಂದರೆ ಒಂದು ದಶಕದಲ್ಲಿ ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ನಾಯಕಿ ಮಾತ್ರ ಅಲ್ಲದೆ ನಾಯಕರಂತೆ ಮಿಂಚಿದವರು. ಖಡಕ್ ಪೊಲೀಸ್ ಅಧಿಕಾರಿ ಪಾತ್ರಗಳಲ್ಲಿ, ಹೆಣ್ಣು ಮಕ್ಕಳಿಗಾಗುವ ಅನ್ಯಾಯದ ವಿರುದ್ಧ ತಿರುಗಿ ಬೀಳುವ ಗಟ್ಟಿಗಿತ್ತಿ ಪಾತ್ರದಲ್ಲಿ ಮತ್ತು ಬೆಳ್ಳಿ ಕಾಲುಂಗುರ ಸಿನಿಮಾದಂತಹ ಮುಗ್ಧ ಹಳ್ಳಿ ಹುಡುಗಿ ಪಾತ್ರದಲ್ಲಿ ಹೀಗೆ ನಾನಾ ಪಾತ್ರಗಳನ್ನು ಮಾಡುತ್ತಾ ಕನ್ನಡಿಗರ ಮನ ಸೆಳೆದಿದ್ದ ಕನಸಿನ ರಾಣಿ ಇವರು.

ಇವರ ಕೈ ಹಿಡಿದಿದ್ದು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕ ಎನ್ನುವ ಖ್ಯಾತಿಗೆ ಒಳಗಾಗಿದ್ದ ನಿರ್ಮಾಪಕ ಕೋಟಿ ರಾಮ್ ಅವರ ಜೊತೆ. ಕೋಟಿರಾಮ್ ಅವರು ಕೂಡ ಕನ್ನಡದ ಅದೆಷ್ಟು ನಾಯಕರುಗಳಿಗೆ ಹಣ ಹೂಡಿ ಅವರೆಲ್ಲ ಸೂಪರ್ ಸ್ಟಾರ್ಗಳು ಆಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

ಅವರ ನಿರ್ಮಾಣದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹಲವು ಬೆಸ್ಟ್ ಸಿನಿಮಾಗಳು ಕೊಡುಗೆಯಾಗಿ ಬಂದಿವೆ. ಇದೀಗ ಇವರಿಬ್ಬರ ಮುದ್ದಿನ ಮಗಳು ರಾಧನ ರಾಮ್ ಕೂಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲು ಅಖಾಡಕ್ಕೆ ಇಳಿಯುತ್ತಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ಅಭಿನಯಿಸಬೇಕು ಎನ್ನುವ ಇಚ್ಛೆಯಿಂದ ಮುಂಬೈ ಅಲ್ಲಿ ಹೋಗಿ ಅನೇಕ ಕೋಚಿಂಗ್ ಗಳನ್ನು ಕೂಡ ತೆಗೆದುಕೊಂಡು ತಯಾರಾಗಿ ಬಂದಿರುವ ರಾಧನ ರಾಮ್ ಅವರ ಮೊದಲ ಸಿನಿಮಾವು ಕನ್ನಡದ ಸ್ಟಾರ್ ನಟನೊಂದಿಗೆ ಎನ್ನುವುದು ಎಲ್ಲರಿಗೂ ತಿಳಿದಿದೆ.

ನಮ್ಮೆಲ್ಲರ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಸಿನಿಮಾವಾದ ಡಿ-56 ಎನ್ನುವ ಸಿನಿಮಾದಲ್ಲಿ ರಾಧನ ರಾಮ್ ಅವರು ಡಿ ಬಾಸ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಈಗಾಗಲೇ ಡಿ-56 ಸಿನಿಮಾ ತಂಡದಿಂದ ಅಧಿಕೃತವಾಗಿ ತಿಳಿಸಿ ಆಗಿದೆ. ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಮೂಲಕ ರಾಧನಾರಾಮ್ ನಾಯಕಿ ಆಗಿ ಲಾಂಚ್ ಅಗಲಿದ್ದಾರೆ.

ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದಿದ್ದು ಕ್ರಾಂತಿ ಸಿನಿಮಾ ಮುಗಿದ ಬಳಿಕ ಈ ಸಿನಿಮಾದ ಶೂಟಿಂಗ್ ಶುರುವಾಗಬೇಕಿದೆ. ಇದೇ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟನೊಂದಿಗೆ ಅಭಿನಯಿಸುವ ಅದೃಷ್ಟವನ್ನು ತನ್ನ ಮೊದಲ ಸಿನಿಮಾ ರಿಲೀಸ್ ಆಗುವ ಮುನ್ನವೇ ರಾಧನ ಪಡೆದುಕೊಂಡಿದ್ದಾರೆ. ಅದು ಕೂಡ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟು ಹ್ಯಾಟ್ರಿಕ್ ಸಕ್ಸಸ್ ಪಡೆದ ಸ್ಟಾರ್ ಹೀರೋ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರೊಂದಿಗೆ.

ಧ್ರುವ ಸರ್ಜಾ ಅವರು ತಮ್ಮದೇ ಆದ ವಿಭಿನ್ನ ಬಗೆಯ ಅಭಿನಯದಿಂದ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅದ್ಧೂರಿ, ಬಹದ್ದೂರ್, ಭರ್ಜರಿ, ಪೊಗರು ಅಂತಹ ಚಿತ್ರಗಳನ್ನು ಕೊಟ್ಟಿರುವ ಅವರ ಮುಂದಿನ ಸಿನಿಮಾ ಬಗ್ಗೆ ಎಲ್ಲರಲ್ಲೂ ನಿರೀಕ್ಷೆ ಇದೆ. ಈಗಾಗಲೇ ಸದ್ದಿಲ್ಲದೆ ಪ್ರೇಮ್ ಅವರ ನಿರ್ದೇಶನದಲ್ಲಿ ಧ್ರುವ ನಟಿಸುತ್ತಿರುವ ಕೇಡಿ ಎನ್ನುವ ಚಿತ್ರದ ಮುಹೂರ್ತವು ನಡೆದಿದ್ದು ಅದರ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಏರ್ಪಡಿಸಿ ಎಲ್ಲರಿಗೂ ವಿಷಯ ತಿಳಿಸಲಾಗಿದೆ.

ಇದು ಸುದ್ದಿಯಾಗುತ್ತಿದ್ದಂತೆ ಸಿನಿಮಾ ನಾಯಕಿ ಯಾರು ಎನ್ನುವ ವಿಷಯ ಎಲ್ಲೆಡೆ ಚರ್ಚೆ ಆಗುತ್ತಿತ್ತು, ಗಾಂಧಿನಗರದ ಮೂಲಗಳ ಪ್ರಕಾರ ರಾಧನ ರಾಮ್ ಅವರು ಈ ಸಿನಿಮಾಗೆ ನಾಯಕಿ ಆಗಿರಲಿದ್ದಾರಂತೆ. ಜೋಗಿ ಪ್ರೇಮ್ ಅವರ ತಂಡವು ಈಗಾಗಲೇ ಈ ಸಿನಿಮಾ ಗೆ ಅವರನ್ನು ಅಪ್ರೋಚ್ ಮಾಡಿ ಮಾಲಶ್ರೀ ಅವರನ್ನು ಹಾಗೂ ಅವರ ಮಗಳು ರಾಧನ ರಾಮ್ ಅವರನ್ನು ಒಪ್ಪಿಸಿದ್ದಾರಂತೆ. ಹೀಗೆ ತನ್ನ ಮೊದಲ ಎರಡು ಸಿನಿಮಾಗಳಿಗೂ ಸ್ಟಾರ್ ನಟರಿಗೆ ನಾಯಕಿ ಆಗುವ ಅದೃಷ್ಟ ಪಡೆದುಕೊಂಡ ಲಕ್ಕಿ ಗರ್ಲ್ ರಾಧನಾ ರಾಮ್ ಆಗಿದ್ದಾರೆ.

ನಿಶ್ವಿಕಾ ನಾಯ್ಡುಗೆ ಮೀಡಿಯಾ ಮುಂದೆನೇ ಕಿಸ್ ಕೊಟ್ಬಿಟ್ರು ನಟಿ ಮೇಘಾ ಶೆಟ್ಟಿ ವೈರಲ್ ವಿಡಿಯೋ ನೋಡಿ ಎಲ್ರೂ ಶಾ-ಕ್

 

ಕನ್ನಡದಲ್ಲೊಂದು ಮಾತಿದೆ ಎರಡು ಜಡೆಗಳು ಕೂಡುವುದಿಲ್ಲ ಎಂದು. ಮನೆ ಒಳಗಿನ ಸಂಬಂಧಗಳಲ್ಲಾಗಲಿ ಅಥವಾ ಮನೆ ಹೊರಗಿನ ಪ್ರಪಂಚದಲ್ಲೇ ಆಗಲಿ ಎಲ್ಲಾದರೂ ಇಬ್ಬರು ಮಹಿಳೆಯರು ಒಟ್ಟಿಗೆ ಇದ್ದಾಗ ಅಲ್ಲಿ ಹೊಂದಾಣಿಕೆ ಅವರಿಬ್ಬರಲ್ಲಿ ಕಂಡುಬರುವುದಿಲ್ಲ. ಸಿನಿಮಾ ವಿಚಾರದಲ್ಲೂ ಕೂಡ ಇಬ್ಬರು ನಾಯಕಿಯರು ಒಂದೇ ಸಿನಿಮಾದಲ್ಲಿ ಇದ್ದಾಗ ಅವರಿಬ್ಬರು ಶೂಟಿಂಗ್ ಸೆಟ್ ಅಲ್ಲಿ ಅಥವಾ ಡಬ್ಬಿಂಗ್ ಮಾಡುವಾಗ ಕಿತ್ತಾಡಿಕೊಂಡು ಸುದ್ದಿಯಾಗಿರುವ ಅನೇಕ ಉದಾಹರಣೆಗಳು ಇವೆ.

ಆದರೆ ಅದಕ್ಕೆಲ್ಲ ಅನ್ವರ್ಥಕವಾಗಿ ನಡೆದುಕೊಳ್ಳುತ್ತಿದೆ ದಿಲ್ ಪಸಂದ್ ಸಿನಿಮಾದ ಟೀಮ್. ದಿಲ್ ಪಸಂದ್ ಕನ್ನಡದ ಒಂದು ಅದ್ಭುತ ಎಂಟರ್ ಟೈನಿಂಗ್ ಸಿನಿಮಾ ಆಗಿದ್ದು ಇದೇ ನವೆಂಬರ್ 11ರಂದು ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರು ನಾಯಕನಾಗಿದ್ದು, ಈ ನಾಯಕನಿಗೆ ಜೊತೆಯಲ್ಲಿ ಧಾರಾವಾಹಿ ಖ್ಯಾತಿಯ ಮೇಘ ಶೆಟ್ಟಿ ಮತ್ತು ನಿಷ್ವಿಕ ನಾಯ್ಡು ಅವರಿಬ್ಬರು ನಾಯಕಿಯರಾಗಿದ್ದಾರೆ.

ಕಿರುತೆರೆ ಜನರಿಗೆ ಅನು ಆಗಿ ಪರಿಚಿತರಾಗಿರುವ ಮೇಘ ಶೆಟ್ಟಿ ಅವರ ಮೊದಲ ಕನ್ನಡ ಸಿನಿಮಾ ಇದಾಗಿದ್ದು ಈ ಸಿನಿಮಾದಲ್ಲಿ ಮಿಂಚು ಎನ್ನುವ ಅಪ್ಪಟ ಹಳ್ಳಿ ಟ್ರೆಡಿಷನಲ್ ಕುಟುಂಬದ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಿಶ್ಚಿಕ ನಾಯ್ಡು ಅವರು ಸಖತ್ ಬೋಲ್ಡ್ ಹಾಗೂ ಸ್ಟ್ರಾಂಗ್ ವಿಮೆನ್ ಆಗಿ ಸದಾ ನಗು ನಗುತ್ತಿರುವ ಕೃಷ್ಣನ ಕಾಡುವ ನಾಯಕಿಯಾಗಿದ್ದಾರೆ. ಸಿನಿಮಾದ ಪ್ರೀಮಿಯಂ ಶೋ ಅನ್ನು ಇಬ್ಬರು ಒಟ್ಟಿಗೆ ನೋಡಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಈ ಸಿನಿಮಾ ಬಗ್ಗೆ ಮಾತನಾಡುವಾಗ ಮೇಘ ಶೆಟ್ಟಿ ಅವರು ಮೊದಲಿಗೆ ಮಾತನಾಡಿ ಸಿನಿಮಾ ಬಹಳ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಎಲ್ಲರೂ ಕೂಡ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಒಂದು ಇನ್ನೋಸೆಂಟ್ ಹುಡುಗಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ, ನಿಶ್ಚಿಕ ನಾಯ್ಡು ಅವರ ಪಾತ್ರ ನನಗಿಂತ ಬಹಳ ಎಂಟರ್ಟೈನಿಂಗ್ ಆಗಿದೆ.

ಡಬ್ಬಿಂಗ್ ಸಮಯದಲ್ಲಿ ನಾವು ಸಿನಿಮಾವನ್ನು ನೋಡಲು ಆಗಲಿಲ್ಲ ಹಾಗಾಗಿ ಇಂದು ಸಿನಿಮಾವನ್ನು ಆಡಿಯನ್ಸ್ ಆಗಿ ಎಂಜಾಯ್ ಮಾಡಿದ್ದೇವೆ. ಸಿನಿಮಾವನ್ನು ಎಲ್ಲರೂ ಮೆಚ್ಚುತ್ತಾರೆ ಎನ್ನುವ ನಂಬಿಕೆ ಇದೆ ನಮ್ಮ ತಂಡಕ್ಕೆ ಶುಭವಾಗಲಿ ಎಂದು ಹೇಳುತ್ತಾ ಕ್ಯಾಮರ ಮುಂದೆಯೇ ಪಕ್ಕದಲ್ಲಿದ್ದ ಕೋ ಆರ್ಟಿಸ್ಟ್ ನಿಶ್ಚಿಕ ನಾಯ್ಡು ಅವರಿಗೆ ಮುತ್ತನಿಟ್ಟಿದ್ದಾರೆ.

ನಿಶ್ಚಿಕ ನಾಯ್ಡು ಅವರು ಸಿನಿಮಾದಲ್ಲಿ ಬಹಳ ತರ್ಲೆ ಹುಡುಗಿ ಆಗಿದ್ದರೂ ಅವರ ಖುಷಿಯ ಹಿಂದಿರುವ ನೋವಿನ ಕಥೆಯೇ ದಿಲ್ ಪಸಂದ್ ಚಿತ್ರದ ಟ್ವಿಸ್ಟ್ ಆಗಿದೆಯಂತೆ. ಈ ಚಿತ್ರದಲ್ಲಿ ರಂಗಾಯಣ ರಘು ಅವರು ಡಾರ್ಲಿಂಗ್ ಕೃಷ್ಣ ಅವರ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲ, ಗಿರಿ, ಅಚ್ಯುತ್ ಕುಮಾರ್ ಸೇರಿದಂತೆ ಉಳಿದ ಕಲಾವಿದರು ಕೂಡ ಅತ್ಯುತ್ತಮವಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಜೊತೆಗೆ ಅಜಯ್ ರಾವ್ ಅವರು ಸ್ಪೆಷಲ್ ಪಾತ್ರವೊಂದನ್ನು ನಿಭಾಯಿಸಿದ್ದು ಕೆಲವೇ ನಿಮಿಷಗಳು ಸಿನಿಮಾದಲ್ಲಿ ಕಾಣಿಸಿಕೊಂಡರು ನೆನಪಿರುವಂತಹ ಪಾತ್ರ ಮಾಡಿದ್ದಾರಂತೆ. ಶಿವ ತೇಜಸ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ಶುಭವಾಗಲಿ. ಈಗ ನಮ್ಮ ಕನ್ನಡದ ಸಿನಿಮಾಗಳು ದೇಶದಾದ್ಯಂತ ಮತ್ತು ದೇಶದ ಗಡಿಯನ್ನು ಕೂಡ ದಾಟಿ ಹೆಸರು ಮಾಡುತ್ತಿವೆ. ದಿಲ್ ಪಸಂದ್ ಚಿತ್ರ ಕೂಡ ಇದೇ ರೀತಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳಲಿ. ಒಂದು ಒಳ್ಳೆಯ ಗಟ್ಟಿ ಕಥೆಯನ್ನು ಹೊಂದಿರುವ ಈ ಸಿನಿಮಾ ತಂಡಕ್ಕೆ ಒಳಿತಾಗಲಿ ಎಂದು ಹಾರೈಸೋಣ. ಈ ವಿಚಾರ ಇಷ್ಟ ಆಗಿದ್ರೆ ತಪ್ಪದೆ ಲೈಕ್ ಕೊಟ್ಟು ಶೇರ್ ಮಾಡಿ

Meghana Raj: ಮಗುನ ತಂದೆ-ತಾಯಿ ಬಳಿ ಬಿಟ್ಟು ಥೈಲ್ಯಾಂಡ್ ನಲ್ಲಿ ಮೇಘಾನ ಮೋಜು ಮಸ್ತಿ ಮಾಡುಳುತ್ತಿದ್ದಾಳೆ ಎಂದವರಿಗೆ ಸುಂದರ್ ರಾಜ್ ಖಡಕ್ ಆಗಿ ಹೇಳಿದ್ದೇನು ಗೊತ್ತ.?

ನಟಿ ಮೇಘನಾ ರಾಜ್ ಜೀವನದಲ್ಲಿ ನಡೆಯಬಾರದ ಕಹಿ ಘಟನೆ ಒಂದು ನಡೆದು ಹೋಗಿದೆ. ಹತ್ತು ವರ್ಷಗಳ ಕಾಲ ಪ್ರೀತಿಸಿ, ಪರಸ್ಪರ ಅರ್ಥ ಮಾಡಿಕೊಂಡು ಎರಡು ಕುಟುಂಬಗಳ ಒಪ್ಪಿಗೆಯ ಮೇಲೆ ಕೈ ಹಿಡಿದಿದ್ದ ಪ್ರೇಮಿಯನ್ನು ಮದುವೆ ಆದ ಎರಡೇ ವರ್ಷಗಳಲ್ಲಿ ಮೇಘನಾ ಕಳೆದುಕೊಂಡಿದ್ದಾರೆ ಚಿರಂಜೀವಿ ಸರ್ಜಾ ಅವರು ಇದ್ದಕ್ಕಿದ್ದ ಹಾಗೆ ಅಕಾಲಿಕ ಮೃ.ತ್ಯು.ವಿ.ಗೆ ಈಡಾದರು ಆ ಸಮಯದಲ್ಲಿ ಮೇಘನಾ ರಾಜ್ ಅವರು ಆರು ತಿಂಗಳ ಗರ್ಭಿಣಿಯಾಗಿದ್ದರು.

ಈ ಸಾ.ವ.ನ್ನು ಕಂಡು ಹಾಗೂ ಮೇಘನಾ ರಾಜ್ ಅವರ ಅಂದಿನ ಪರಿಸ್ಥಿತಿ ಕಂಡು ಇಡೀ ಕರುನಾಡೆ ಮರುಗಿತ್ತು. ಈಗಲೂ ಸಹ ಮೇಘನಾ ರಾಜ್ ಅವರ ಕುರಿತ ಸುದ್ದಿಗಳನ್ನು ಓದುವಾಗ ಎಷ್ಟೋ ಹೆಣ್ಣು ಮಕ್ಕಳ ಕಣ್ಣಾಲಿ ತುಂಬುತ್ತದೆ. ಇಡೀ ಕರುನಾಡಿಗೆ ಒಂದೇ ಆಸೆ ಮೇಘನಾ ರಾಜ್ ತಮ್ಮ ಬಾಳಲ್ಲಿ ಆದ ಕಹಿ ಘಟನೆಯಿಂದ ಆದಷ್ಟು ಬೇಗ ಹೊರಬರಲಿ ಮೊದಲಿನಂತೆ ಲವಲವಿಕೆಯಿಂದ ಚಿತ್ರರಂಗದಲ್ಲಿ ಒಳ್ಳೊಳ್ಳೆ ಸಿನಿಮಾಗಳ ಮೂಲಕ ಕಾಣಿಸಿಕೊಳ್ಳಲಿ ಎಂದು.

ಅದಕ್ಕೆ ತಕ್ಕ ಹಾಗೆ ಮೇಘನಾ ರಾಜ್ ಅವರಿಗೆ ಕನ್ನಡದ ಜೊತೆ ಮಲಯಾಳಂ ಚಿತ್ರರಂಗದಲ್ಲೂ ಕೂಡ ಬಹಳ ಬೇಡಿಕೆ ಇದೆ. ಇದಲ್ಲದೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ ಅಲ್ಲೂ ಕೂಡ ಆಗಾಗ ಆಫರ್ ಗಳು ಬರುತ್ತವೆ. ಆದರೆ ಚಿರಂಜೀವಿ ಅವರ ಅಗಲಿಕೆಯ ನಂತರ ಮೇಘನಾ ರಾಜ್ ಅವರು ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದರು.

ಅಲ್ಲದೆ ಮಗುವಿನ ಷೋಷಣೆಗೆ ಸಮಯ ಮೀಸಲಾಗಿಟ್ಟಿದ್ದ ಇವರು ತಮ್ಮ ಮಗುವಿಗೆ ಒಂದು ವರ್ಷ ಆದ ಬಳಿಕವಷ್ಟೇ ಕ್ಯಾಮರ ಎದುರಿಸುತ್ತೇನೆ ಎಂದು ಹೇಳಿಕೊಂಡಿದ್ದರು. ಆ ಮಾತಿನಂತೆಯೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡರು. ಈಗ ಒಳ್ಳೊಳ್ಳೆ ಕಥೆಗಳು ಇವರನ್ನು ಹುಡುಕಿ ಬರುತ್ತಿರುವ ಕಾರಣ ಮತ್ತೆ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ನಿರ್ಧಾರ ಮಾಡಿದ್ದಾರೆ.

ಇದರ ನಡುವೆ ಚಿರಂಜೀವಿ ಅವರ ಸಾ.ವಿ.ನ ನೋವು ಇನ್ನೂ ಇವರನ್ನು ಕಾಡುತ್ತಿದೆ ಹಾಗಾಗಿ ಇವರಿಬ್ಬರು ಒಟ್ಟಿಗೆ ಓಡಾಡಿದ್ದ ಜಾಗದಲ್ಲೆಲ್ಲಾ ಮತ್ತೆ ಸಮಯ ಕಳೆಯಲು ಇವರು ಬಯಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ತಮ್ಮ ಗೆಳತಿಯರೊಂದಿಗೆ ಥೈಲ್ಯಾಂಡ್ ಪ್ರವಾಸಕ್ಕೆ ಮೇಘನಾ ರಾಜ್ ಹೋಗಿದ್ದಾರೆ. ಯಾವ ವಿಷಯವನ್ನು ಹಂಚಿಕೊಳ್ಳದ ಅವರು ಸ್ನೇಹಿತರೊಂದಿಗೆ ಕಳೆದ ಸುಂದರ ಕ್ಷಣಗಳ ಫೋಟೋವನ್ನು ಇನ್ಸ್ಟಾಗ್ರಾಮಲ್ಲಿ ಶೇರ್ ಮಾಡಿದ್ದರು.

ತಕ್ಷಣವೇ ಸೋಶಿಯಲ್ ಮೀಡಿಯಾ ಗಳಲ್ಲಿ ತಂದೆ ತಾಯಿ ಬಳಿ ಮಗು ಬಿಟ್ಟು ಮೇಘನಾ ಮಜಾ ಮಾಡಲು ಥೈಲ್ಯಾಂಡ್ ಗೆ ಹೋಗಿದ್ದಾರೆ ಎಂದು ಶೀರ್ಷಿಕೆ ಕೊಟ್ಟು ಬರೆದಿದ್ದಾರೆ. ಇದನ್ನು ಕಂಡ ಅವರ ತಂದೆ ಸುಂದರ್ ರಾಜ್ ಈ ಬಗ್ಗೆ ಕಿಡಿ ಕಾಡಿದ್ದಾರೆ ನೆನ್ನೆ ಮಕ್ಕಳ ದಿನಾಚರಣೆ ಪ್ರಯುಕ್ತ ಕನ್ನಡ ಚಲನಚಿತ್ರ ಮಂಡಳಿಯು ಬಾಲ ಕಲಾವಿದರಾಗಿ ಕನ್ನಡದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಏರ್ಪಡಿಸಿತ್ತು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮೇಘನಾ ಅವರ ತಂದೆ ಸುಂದರ್ ರಾಜ್ ಅವರು ಮಾತನಾಡುವಾಗ ಇತರ ವಿಷಯಗಳ ಜೊತೆಗೆ ಈ ವಿಷಯವನ್ನು ಸಹ ಹೇಳಿಕೊಂಡು ಹೆಣ್ಣೆತ್ತ ತಂದೆಯ ಮನದ ನೋವನ್ನು ಹೊರಹಾಕಿದ್ದಾರೆ. ಅವಳ ಬಾಳಲ್ಲಿ ಆದ ಕಹಿ ಘಟನೆಯಿಂದ ಹೊರಬರುವ ಪ್ರಯತ್ನ ಮಾಡುತ್ತಿದ್ದೇವೆ. ಈ ರೀತಿಯಲ್ಲಾ ಶೀರ್ಷಿಕೆ ಕೊಟ್ಟು ಬರೆಯುತ್ತಿರುವುದು ನಮ್ಮ ಭಾವನೆಗಳ ಮೇಲೆ ಮನಸ್ಸಿನ ಮೇಲೆ ತುಂಬಾ ದುಷ್ಪರಿಣಾಮ ಬೀರಲಿದೆ ಎಂದು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

Ashwini Watch : ಸರಳತೆಗೆ ಹೆಸರುವಾಸಿಯಾಗಿರುವ ಅಪ್ಪು ಪತ್ನಿ ಅಶ್ವಿನಿ ಧರಿಸಿರುವ ಈ ವಾಚ್ ಬೆಲೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ.

 

ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪ್ರೀತಿಸಿ ಕೈಹಿಡಿದ ಧರ್ಮಪತ್ನಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುಟುಂಬವನ್ನು ಬಹಳ ಪ್ರೀತಿಸುತ್ತಿದ್ದರು ಅಣ್ಣಂದಿರು, ಅಣ್ಣನ ಮಕ್ಕಳು, ಅತ್ತಿಗೆ ಹೀಗೆ ಹಿಡಿ ಕುಟುಂಬವನ್ನು ಮನದಲ್ಲೇ ತುಂಬಿಕೊಂಡಿದ್ದ ಅವರು ಮಡದಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.

ಸಮಯ ಸಿಕ್ಕಾಗಲಿಲ್ಲ ಪತ್ನಿ ಹಾಗೂ ಮಕ್ಕಳನ್ನು ವಿದೇಶಕ್ಕೆ ಪ್ರವಾಸ ಕರೆದುಕೊಂಡು ಹೋಗುತ್ತಿದ್ದರು. ಪ್ರತಿನಿತ್ಯವೂ ಕೂಡ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದರು ಮತ್ತು ಮಡದಿಯ ವಿಚಾರದಲ್ಲಂತೂ ಯಾವುದೇ ಕಾರ್ಯಕ್ರಮಕ್ಕೆ ಹೋದರು ಜೊತೆಗೆ ಕರೆದುಕೊಂಡು ಹೋಗುವುದು, ಪತ್ನಿಯ ಹುಟ್ಟುಹಬ್ಬದ ಸೇರಿದಂತೆ ಮದುವೆ ವಾರ್ಷಿಕೋತ್ಸವ ಇತ್ಯಾದಿ ಸಂಗತಿಗಳನ್ನು ಕೂಡ ನೆನಪಿನಲ್ಲಿಟ್ಟುಕೊಂಡು ಆಚರಿಸಿ ಉಡುಗೊರೆ ಕೊಡುವುದು, ಹೀಗೆ ಒಬ್ಬ ಆದರ್ಶ ಪತಿಯಾಗಿ ಆದರ್ಶ ತಂದೆಯಾಗಿ ಬದುಕಿದರು.

ಸಿನಿಮಾ ಇಂಡಸ್ಟ್ರಿಯಲ್ಲೇ ಮಾದರಿ ಕುಟುಂಬ ಎಂದರೆ ಅದು ರಾಜವಂಶ. ಆದರೆ ಈ ವಂಶದ ಕೀರ್ತಿ ಕಲಶದ ಮೇಲೆ ಯಾರ ಕಣ್ಣು ಬಿತ್ತೋ ಏನೋ ಪುನೀತ್ ರಾಜಕುಮಾರ್ ಅವರು ಅಕಾಲಿಕ ಮೃತ್ಯುವಿಗೆ ಈಡಾಗಿ ಪ್ರೀತಿಯ ಮಡದಿ ಮತ್ತು ಮಕ್ಕಳನ್ನು ಹಾಗೂ ಅಣ್ಣಂದಿರನ್ನು ಅಗಲಿದ್ದಾರೆ. ಅವರ ಈ ಸಾವು ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಮಾತ್ರ ಅಲ್ಲದೆ ಇಡೀ ಕರ್ನಾಟಕದ ಪ್ರತಿಯೊಬ್ಬರ ಮನದ ದುಃಖವಾಗಿದೆ.

ಇನ್ನೂ ಕೂಡ ಕನ್ನಡಿಗರೆಲ್ಲರೂ ಆ ನೋವಿನಿಂದ ಚೇತರಿಸಿಕೊಳ್ಳದೆ ಒದ್ದಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಹುಟ್ಟುವಾಗಲೇ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದಂತಹ ಅದೃಷ್ಟ ವ್ಯಕ್ತಿ ಎನ್ನಬಹುದು. ಅತಿ ಚಿಕ್ಕ ವಯಸ್ಸಿನಲ್ಲಿ ಅವರಿಗೆ ಅಭಿನಯ ಎನ್ನುವುದು ರಕ್ತಗತವಾಗಿ ಬಂದಿದ್ದ ಕಾರಣ ಬಾಲ್ಯದಲ್ಲಿಯೇ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡ ಭಾಗ್ಯವಂತ.

ಬೆಳೆದ ಮೇಲೂ ಕೂಡ ಪುನೀತ್ ರಾಜಕುಮಾರ್ ಅವರು ಆಯ್ದುಕೊಳ್ಳುತ್ತಿದ್ದ ಸಿನಿಮಾ ಕಥೆಗಳು ಸಮಾಜಕ್ಕೆ ಸಂದೇಶವಾಗಿ ಇರುತ್ತಿತ್ತು. ಸಿನಿಮಾ ಮಾತ್ರವಲ್ಲದೇ ಅವರು ಸಾಮಾಜಿಕ ಕಾರ್ಯಗಳಲ್ಲಿ ಜನಪರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಅಪ್ಪು ಅವರ ಮೇಲೆ ಜನರಿಗೆ ಇಷ್ಟು ಪ್ರೀತಿ ಗೌರವ ಉಂಟಾಗಲು ಕಾರಣವಾಗಿದೆ.

ರೈತರ ಬಗ್ಗೆ ಅನಾಥರ ಬಗ್ಗೆ ಹಾಗೂ ನೊಂದ ಹೆಣ್ಣು ಮಕ್ಕಳ ಪಾಲಿಗೆ ದೈವದಂತಿದ್ದರು ಪುನೀತ್ ರಾಜಕುಮಾರ್. ಈಗ ಅವರ ಅನುಪಸ್ಥಿತಿಯಲ್ಲಿ ಅವರೆಲ್ಲಾ ಕೆಲಸ ಕಾರ್ಯಗಳನ್ನು ಅಶ್ವಿನಿ ಪುನೀತ್ ಅವರೇ ನೋಡಿಕೊಳ್ಳುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪಿ ಆರ್ ಕೆ ಪ್ರೊಡಕ್ಷನ್ ಸ್ಥಾಪಿಸಿ ಆ ಮೂಲಕ ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವ ಪ್ರಯತ್ನ ಮಾಡಿದ್ದರು.

ಈಗ ಆ ಹೊಣೆಯನ್ನು ಕೂಡ ಅಶ್ವಿನ್ ಅವರ ಹೊತ್ತಿದ್ದು ಅಷ್ಟೇ ಅಚ್ಚುಕಟ್ಟಾಗಿ ಪುನೀತ್ ಅವರ ಎಲ್ಲಾ ಕನಸುಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪುನೀತ್ ಅವರು ಇರುವಷ್ಟು ದಿನ ಕ್ಯಾಮರಾ ಮುಂದೆ ಕಾಣಿಸಿಕೊಳ್ಳದೆ ಮಾತನಾಡದೆ ಮನೆಯಿಂದ ಆಚೆ ಬರದೇ ಇದ್ದ ಅಶ್ವಿನಿ ಅವರು ಇದೀಗ ಗಟ್ಟಿಗಿತ್ತಿಯಂತೆ ಅಪ್ಪು ಅವರ ಹೆಸರುಳಿಸುವ ಕಾರಣದಿಂದ ಅವರೆಲ್ಲಾ ಜವಾಬ್ದಾರಿಯನ್ನು ಹೇಗಲಿಗೇರಿಸಿಕೊಂಡಿದ್ದಾರೆ.

ಇವರ ಈ ಪ್ರಯತ್ನಕ್ಕೆ ಇಡಿ ಕುಟುಂಬವೇ ಸಪೋರ್ಟ್ ಮಾಡುತ್ತಿದೆ ಇತ್ತೀಚೆಗೆ ಹೆಚ್ಚಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದುಬಾರಿ ವಾಚ್ ಅನ್ನು ಧರಿಸುತ್ತಿದ್ದಾರೆ. ಈಗ ಎಲ್ಲಾ ಕಡೆ ಅವರ ವಾಚ್ ನ ಬೆಲೆಯು ಬಗ್ಗೆ ಚರ್ಚೆ ಆಗುತ್ತಿದೆ. ಪ್ರತಿಷ್ಠಿತ ರೋಲೆಕ್ಸ್ ಕಂಪನಿಯ ವಾಚನ್ನು ಇವರು ಧರಿಸುತ್ತಿದ್ದು ಇದರ ಬೆಲೆ ಬರೋಬ್ಬರಿ 10 ಲಕ್ಷ ರೂ ಆಗಿದೆ.

ಗಾಯಕ ಹೇಮಂತ್ ಮಗನ ನಾಮಕರಣ ಶಾಸ್ತ್ರಕ್ಕೆ ಯಾರೆಲ್ಲ ಸೆಲೆಬ್ರಿಟಿಗಳು ಬಂದಿದ್ರು ನೋಡಿ, ಮುದ್ದಿನ ಮಗನಿಗೆ ಇಟ್ಟಿರುವ ಹೆಸರೇನು ಗೊತ್ತಾ.?

 

ಕನ್ನಡದ ಹೆಮ್ಮೆಯ ಹಿನ್ನೆಲೆ ಗಾಯಕ ಹೇಮಂತ್ ಕುಮಾರ್ ಅವರು ವಿಚ್ಛೇದನವಾದ 13 ವರ್ಷಗಳ ಬಳಿಕ 2021 ರಲ್ಲಿ ಮರು ಮದುವೆ ಆದರು. ಕೃತಿಕಾ ಎನ್ನುವವರನ್ನು ಕೈಹಿಡಿದ ಹೇಮಂತ್ ಕುಮಾರ್ ಅವರು ಇದೀಗ ವೈಯಕ್ತಿಕ ಜೀವನದಲ್ಲಿ ಬಹಳ ಸಂತೋಷದಿಂದ ಇದ್ದಾರೆ. ಸಾಂಸಾರಿಕ ಜೀವನದಲ್ಲಿ ಹೊಸ ಅಧ್ಯಾಯ ಬರೆದಿರುವ ಹೇಮಂತ್ ಕುಮಾರ್ ಅವರ ಕುಟುಂಬಕ್ಕೆ ಮತ್ತೊಬ್ಬ ಸದಸ್ಯರ ಆಗಮನ ವಾಗಿದೆ.

ಗಂಡು ಮಗುವಿನ ಆಗಮನವು ದಂಪತಿಗಳ ಖುಷಿಯನ್ನು ಇಮ್ಮಡಿಗೊಳಿಸಿದ್ದು ಇದೀಗ ಅದ್ದೂರಿಯಾಗಿ ಮಗನ ನಾಮಕರಣ ಕಾರ್ಯಕ್ರಮವನ್ನು ಕೂಡ ಹೇಮಂತ್ ಕುಮಾರ್ ದಂಪತಿ ಮಾಡಿದ್ದಾರೆ. ಈ ಕಾರ್ಯಕ್ರಮದ ಸಂಬಂಧಿತ ಫೋಟೋ ಒಂದನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಹೇಮಂತ್ ಅವರು ಅದಕ್ಕೆ ಕೆಲ ಅಡಿ ಬರಹವನ್ನು ಬರೆದಿದ್ದಾರೆ.

ಎಲ್ಲರಿಗೂ ನಮಸ್ಕಾರ, ನಮ್ಮ ಮನೆಯರಸನ ನಾಮಕರಣ ಕಾರ್ಯಕ್ರಮವು ದೈವಾನುಗ್ರಹದಿಂದ ಎಲ್ಲಾ ಹಿರಿಯರ, ಬಂಧು ಮಿತ್ರರ, ಚಿತ್ರರಂಗದ ತಾರೆಯರ ಸಮ್ಮುಖದಲ್ಲಿ ನೆರವೇರಿದೆ. ನಮ್ಮ ಪುತ್ರನಿಗೆ ಶ್ರೇಯಾಂಕ್ ಎಂದು ನಾಮಕರಣ ಮಾಡಿದ್ದೇವೆ. ನಿಮ್ಮೆಲ್ಲರ ಉಪಸ್ಥಿತಿ ನಮ್ಮ ಮನ ತುಂಬಿಸಿದೆ. ನಿಮ್ಮೆಲ್ಲರ ಪ್ರೀತಿಗೆ ಸದಾ ಚಿರಋಣಿ ಇಂತಿ ನಿಮ್ಮ ಹೇಮಂತ್ ಮತ್ತು ಕೃತಿಕಾ ಎಂದು ಪತ್ನಿ ಹಾಗೂ ಮಗುವಿನ ಜೊತೆಗೆ ಫೋಟೋ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ.

ಇದನ್ನು ನೋಡಿದ ಅಭಿಮಾನಿಗಳು ಮಗನ ಹೆಸರು ತುಂಬಾ ಚೆನ್ನಾಗಿದೆ ನಿಮ್ಮ ಜೀವನದಲ್ಲಿ ಮತ್ತಷ್ಟು ಖುಷಿ ಸಂತೋಷ ಎಲ್ಲಾ ತುಂಬಿ ಬರಲಿ ಎಂದು ಹಾರೈಸಿದ್ದಾರೆ. ಹಾಗೂ ಮಗುವಿಗೂ ಕೂಡ ದೇವರು ಆಯಸ್ಸು ಆರೋಗ್ಯ ಶ್ರೇಯಸ್ಸನ್ನು ಕೊಡಲಿ ಎಂದು ಅನೇಕ ಅಭಿಮಾನಿಗಳು ಮತ್ತು ನೆಟ್ಟಿಗರು ಕಮೆಂಟಲ್ಲಿ ಮಗುವಿಗೂ ಕೂಡ ಆಶೀರ್ವದಿಸಿದ್ದಾರೆ.

ಹೇಮಂತ್ ಕುಮಾರ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಹೆಮ್ಮೆಯ ಗಾಯಕರಲ್ಲಿ ಒಬ್ಬರು. ದಕ್ಷಿಣ ಕನ್ನಡದ ಗಾಯಕರುಗಳಲ್ಲಿ ಮೊದಲ ಬಾರಿಗೆ ಫಿಲಂ ಫೇರ್ ಅವಾರ್ಡ್ ಪಡೆದ ಗಾಯಕ ಎಂದರೆ ಅದು ಹೇಮಂತ್ ಕುಮಾರ್. ಬಾಲ್ಯದಿಂದಲೇ ಹೇಮಂತ್ ಅವರಿಗೆ ಸಂಗೀತದ ಬಗ್ಗೆ ಆಕರ್ಷಣೆ ಇತ್ತು. ಇವರ ತಾಯಿಯೂ ಕೂಡ ಸಂಗೀತಗಾರರಾಗಿದ್ದರಿಂದ ಅವರೇ ಮೊದಲ ಗುರುವಾಗಿ ಇವರ ಸಂಗೀತ ಅಭ್ಯಾಸಕ್ಕೆ ನೆರವಾದರು.

ಬೆಂಗಳೂರಿನ ರಾಮಯ್ಯ ಇನ್ಸ್ಟಿಟ್ಯೂಟ್ ಅಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದರು ಕೂಡ ಹೇಮಂತ್ ಅವರಿಗೆ ಸಂಗೀತದ ಬಗ್ಗೆ ಹೆಚ್ಚು ಒಲವು ಇತ್ತು. ಹೀಗಾಗಿ ಶಿಕ್ಷಣ ಮುಗಿದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಧನೆ ಮಾಡುವ ಸಲುವಾಗಿ ಹಂಸಲೇಖ ಅವರೊಂದಿಗೆ ಅಸಿಸ್ಟೆಂಟ್ ಆಗಿ ಸೇರಿಕೊಂಡರು. ಹಂಸಲೇಖ ಅವರ ಪ್ರೀತಿಯ ಹಾಗೂ ಆತ್ಮೀಯ ಶಿಷ್ಯನಾಗಿರುವ ಹೇಮಂತ್ ಕುಮಾರ್ ಅವರು ಈವರೆಗೆ ಕನ್ನಡದಲ್ಲಿ ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಅದರಲ್ಲೂ ದರ್ಶನ್ ಸಿನಿಮಾದ ಹಾಡುಗಳು ಹೇಮಂತ್ ಅವರ ಹಾಡುಗಾರಿಕೆ ಇಲ್ಲದೆ ಪೂರ್ತಿ ಆಗುವುದೇ ಇಲ್ಲ ಎಂದು ಹೇಳಬಹುದು. ಅಷ್ಟರಮಟ್ಟಿಗೆ ದರ್ಶನ್ ಅವರಿಗೆ ಹೇಮಂತ್ ಅವರ ವಾಯ್ಸ್ ಸೂಟ್ ಆಗುತ್ತದೆ. ಜೊತೆಗೆ ಕುಹೂ ಕುಹೂ ಕೋಗಿಲೆ ಎನ್ನುವ ಉದಯ ಟಿವಿಯ ಕಾರ್ಯಕ್ರಮದಲ್ಲಿ ಮತ್ತು ಜೀ ಕನ್ನಡ ವಾಹಿನಿಯ ಗಾನಸುಧ ಮತ್ತು ಸರಿಗಮಪ ಕಾರ್ಯಕ್ರಮಗಳನ್ನು ಕೂಡ ಹೇಮಂತ್ ಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಸಿನಿಮಾದಲ್ಲೂ ಕೂಡ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿ ಕೊಳ್ಳುತ್ತಿರುವ ಹೇಮಂತ್ ಕುಮಾರ್ ಅವರು ರಮೇಶ್ ಅರವಿಂದ್ ಅವರ 100 ಎನ್ನುವ ಸಿನಿಮಾದಲ್ಲೂ ಕೂಡ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

ಪಡ್ಡೆ ಹುಡುಗುರ ನಿದ್ದೆ ಕೆಡಿಸುವಂತಿದೆ ನಟ ಪ್ರಜ್ವಲ್ ಹೆಂಡತಿ ರಾಗಿಣಿ ಮಾಡಿರುವ ಈ ಹಾಟ್ ಡ್ಯಾನ್ಸ್.

 

ಕನ್ನಡ ಚಿತ್ರರಂಗದ ಡೈನಾಮಿಕ್ ಹೀರೋ ದೇವರಾಜ್ರವರ ಪುತ್ರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ರವರು ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ. ರಾಗಿಣಿ ಪ್ರಜ್ವಲ್ ದೇವರಾಜ್ ಹಾಗು ಪ್ರಜ್ವಲ್ ದೇವರಾಜ್ ಇಬ್ಬರೂ ಕೂಡ ಕನ್ನಡ ಚಿತ್ರರಂಗದ ಸುಂದರವಾದ ದಂಪತಿಗಳು ಎಂದು ಹೇಳಬಹುದು. ಚಿಕ್ಕ ವಯಸ್ಸಿನಿಂದ ಜೊತೆಯಲ್ಲಿ ಬೆಳೆದು ಸ್ನೇಹಿತರಾಗಿದ್ದರು.

ನಂತರ ಸ್ನೇಹವು ಪ್ರೀತಿಗೆ ತಿರುಗಿ ಇವರಿಬ್ಬರ ಮಧ್ಯ ಪ್ರೀತಿ ಶುರುವಾಯಿತು. ಬಹಳ ದಿನದಿಂದ ಒಬ್ಬರು ಇನ್ನೊಬ್ಬರನ್ನು ತಿಳಿದಿರುವ ಕಾರಣ ಇವರೊಬ್ಬರ ಮಧ್ಯೆ ಯಾವುದೇ ತರಹದ ವೈ ಮನಸು ಬಂದಿಲ್ಲ, ಇನ್ನು ಒಬ್ಬರು ಇನ್ನೊಬ್ಬರಿಗೆ ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ಸಮಯದಲ್ಲೂ ಪ್ರೋತ್ಸಾಹ ನೀಡಿ ಬೆನ್ನೆಲುಬಾಗಿ ನಿಲ್ಲುತ್ತಾರೆ ಈ ಕಾರಣ ಈ ಸಿನಿ ತಾರೆಯರ ಜೋಡಿಯು ಎಷ್ಟೋ ಜೋಡಿಗಳಿಗೆ ಮಾದರಿಯಾಗಿದೆ.

ಪ್ರಜ್ವಲ್ ದೇವರಾಜ್ ಅವರು ಮದುವೆಯಾಗಿ ಏಳು ವರ್ಷಗಳಾಗಿವೆ. ಇವರಿಬ್ಬರು 2015 ರಲ್ಲಿ ವಿವಾಹವಾದರು ಆ ಸಂದರ್ಭದಲ್ಲಿ ಎಷ್ಟೋ ಅಭಿಮಾನಿಗಳು ಕೂಡ ಬೇಸರಗೊಂಡಿದ್ದಾರೆ ಏಕೆಂದರೆ ಪ್ರಜ್ವಲ್ ದೇವರಾಜ್ ಅವರ ಮಹಿಳಾ ಅಭಿಮಾನಿಗಳಿಗೆ ಇದರಿಂದ ಕೊಂಚ ಬೇಸರವಾಗಿತ್ತು ಈ ಬಗ್ಗೆ ಹಲವು ಕಮೆಂಟ್ಸ್ ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಆದರೆ ರಾಗಿಣಿಯವರು ಪ್ರಜ್ವಲ್ ದೇವರಾಜ್ ಅವರಿಗೆ ಉತ್ತಮವಾದ ಸಂಗಾತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಹೌದು ಸ್ನೇಹಿತರೆ ರಾಗಿಣಿ ಪ್ರಜ್ವಲ್ ದೇವರಾಜ್ ಅವರು ಒಬ್ಬ ಮೋಡಲ್ ಹಾಗೂ ಖಾಸಗಿ ಜಾಹೀರಾತುಗಳಲ್ಲಿ ಅಭಿನಯಿಸುತ್ತಾರೆ. ಇನ್ನು ರಾಗಿಣಿ ಪ್ರಜ್ವಲ್ ದೇವರಾಜ್ ಅವರು ಆರೋಗ್ಯಕ್ಕಾಗಿ ಎಷ್ಟು ಬೇಕೋ ಅಷ್ಟು ಆಹಾರ ಹಾಗೂ ವ್ಯಾಯಾಮಗಳ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ.

ಪುನೀತ್‌ ರಾಜ್‌ಕುಮಾರ್‌ ಬ್ಯಾನರ್‌ನ ‘ಲಾ’ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿದ ಚೆಲುವೆ ರಾಗಿಣಿ ಚಂದ್ರನ್‌. ಮಾಡೆಲ್‌, ಡ್ಯಾನ್ಸರ್‌, ಟ್ರೈನರ್‌ ಆಗಿಯೂ ಗುರುತಿಸಿಕೊಂಡವರು. ಡ್ಯಾನ್ಸ್‌, ಯೋಗ, ಫಿಟ್‌ನೆಸ್‌ ಕಲಿಸಿಕೊಡೋ ರಾಗಿಣಿ ಅವರ ಸ್ಟುಡಿಯೋ ‘ಉರ್ಹಿತ್‌ ಮಿಕ್ಸ್‌. ರಾಗಿಣಿಯವರು ಈ ಮೂಲಕ 6 ರಿಂದ 60 ವರ್ಷ ವರೆಗೂ ಇರುವ ಎಲ್ಲ ವಯಸ್ಸಿಗರಿಗೂ ಡ್ಯಾನ್ಸ್ ಹಾಗೂ ಫಿಟ್ನೆಸ್ ಅನ್ನು ಹೇಳಿ ಕೊಡುತ್ತಾರೆ.

ವರ್ಕೌಟ್‌ಗೆ ಸಂಬಂಧಿಸಿ ಏನೇನೆಲ್ಲ ಪ್ರಯೋಗ ಮಾಡಿ ಸೈ ಎನಿಸಿಕೊಂಡಿದ್ದಾರೆ ರಾಗಿಣಿ. ವಾಟರ್‌ ಬಾಟಲ್‌ಗಳನ್ನೇ ವೈಟ್‌ ಲಿಫ್ಟಿಂಗ್‌ ಬಳಸಿಕೊಂಡಿದ್ದಾರೆ. ಎರಡು ಲೀಟರ್‌ ವಾಟರ್‌ ಬಾಟಲ್‌ಗೆ ನೀರು ತುಂಬಿಸಿ ಅದರಲ್ಲೇ ವೈಟ್‌ ಲಿಫ್ಟಿಂಗ್‌ ಮಾಡುತ್ತಾರೆ. ಮನೆಯ ಮೆಟ್ಟಿಲುಗಳ ಮೇಲೆ ಏರೋಬಿಕ್ಸ್‌ ಪ್ರಯೋಗ, ದಿಂಬು ಬಳಸಿ, ಟವಲ್‌ ಬಳಸಿ ಸಖತ್‌ ಮಜವಾಗಿ ವರ್ಕೌಟ್‌ ಮಾಡೋದು ಕಲಿತಿದ್ದಾರೆ.

ಇನ್ನು ರಾಗಿಣಿ ಪ್ರಜ್ವಲ್ ರವರಿಗೆ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ಫ್ಯಾನ್ ಫಾಲೋವರ್ಸ್ ತುಂಬಾ ಹೆಚ್ಚಾಗಿದ್ದು, ಅವರ ಅಭಿಮಾನಿಗಳು ಕೂಡ ಹೆಚ್ಚು ಇದ್ದಾರೆ. ಹಾಗಾಗಿ ರಾಗಿಣಿಯವರು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಇತ್ತೀಚಿಗೆ ಇವರು ಮಾಡಿರುವ ರೀಲ್ಸ್ ಒಂದು ವೈರಲ್ ಆಗಿದೆ ಈ ವಿಡಿಯೋದಲ್ಲಿ ಕಾಂತಾರ ಚಿತ್ರದ ಸಿಂಗಾರ ಸರಿಯೇ ಎಂಬ ಹಾಡಿಗೆ ಕುಣಿದು ಇನ್ಸ್ಟಾಗ್ರಾಮ್ ರಿಲ್ಸ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಜೊತೆಯಲ್ಲಿ ಯು_ರಿಧಮಿಕ್ಸ್ ಅನ್ನು ಸೇರಲು ಪೋಸ್ಟನ್ನು ಹಾಕಿದ್ದಾರೆ ಈ ವಿಡಿಯೋ ಬಗ್ಗೆ ಕೆಲವರು, ರಾಗಿಣಿ ಹಾಕಿರೋ ಬಟ್ಟೆಯ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ನಾಟ್ಯದೇವತೆಯೆಂದು ಹೊಗಳಿದ್ದಾರೆ, ಒಟ್ಟಿನಲ್ಲಿ ತಮ್ಮ ನೃತ್ಯದ ಮೂಲಕ ಅಭಿಮಾನಿಗಳನ್ನು ಮನರಂಜಿಸುತ್ತಿರುವುದು ಸುಳ್ಳಲ್ಲ.