Home Blog Page 279

ಡಿಂಗ್ರಿ ನಾಗರಾಜ್ ವಿರುದ್ಧ ನಟಿ ರಾಣಿ ದೌರ್ಜನ್ಯ, ಅ-ಶ್ಲೀ-ಲ ವಿಡಿಯೋ ಮತ್ತು ಮೆಸೇಜ್ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.

 

ಮಹಿಳೆಯರ ಮೇಲೆ ಆಗಿಂದ ಹಾಗೆ ಲೈಂ.ಗಿ.ಕ ದೌ.ರ್ಜ.ನ್ಯ ಕಿರುಕುಳ ಅಶ್ಲೀಲ ವಿಡಿಯೋ ಮತ್ತು ಮೆಸೇಜ್ ಕಳಿಸುವುದನ್ನು ನೀವು ಕೇಳೇ ಇರುತ್ತೀರ. ಇದು ಜನಸಾಮಾನ್ಯರಿಗೆ ಪ್ರತಿನಿತ್ಯವೂ ಕೂಡ ಕಾಡುವಂತ ಒಂದು ಸರ್ವೇ ಸಾಮಾನ್ಯ ತೊಂದರೆಯಾಗಿದೆ ಆದರೆ ನಟಿಯರಿಗೂ ಕೂಡ ಇಂತಹ ಕಿರುಕುಳ ಎದುರಾಗುತ್ತಿದೆ ಅಂದರೆ ನಿಜಕ್ಕೂ ಕೂಡ ಆಶ್ಚರ್ಯವೇ. ಏಕೆಂದರೆ ಸಮಾಜದಲ್ಲಿ ನಟಿಯರಿಗೆ ಉನ್ನತ ಸ್ಥಾನ ಮಾನವಿರುತ್ತದೆ ಅವರಿಗೆ ಚಿಕ್ಕ ಏರುಳಿತ ಕಂಡು ಬಂದರೂ ಕೂಡ ಬಹುದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ.

ಅಷ್ಟೇ ಅಲ್ಲದೆ ನಟಿಯರ ಪಾಲಿಗೆ ಕಾನೂನಾಗಿರಬಹುದು ಅಥವಾ ರಂಗಕ್ಕೆ ಸೇರಿದವರಾಗಿರಬಹುದು ಎಲ್ಲರೂ ಕೂಡ ಸಪೋರ್ಟ್ ಮಾಡುತ್ತಾರೆ ಹಾಗಾಗಿ ನಟಿಯರಿಗೆ ಏನಾದರೂ ಇಂತಹ ವಿಚಾರಕ್ಕೆ ಸಂಬಂಧಪಟ್ಟಂತಹ ತೊಂದರೆಯಾದರೆ ಎಲ್ಲರೂ ಕೂಡ ಒಗ್ಗಟ್ಟಾಗಿ ನಿಲ್ಲುತ್ತಾರೆ. ಆದರೆ ವಿಪರ್ಯಾಸ ಏನೆಂದರೆ ಸದ್ಯಕ್ಕೆ ಚಿತ್ರರಂಗದಲ್ಲಿಯೇ ಇದೀಗ ಕಿತ್ತಾಟ ಶುರುವಾಗಿದೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಎಲ್ಲಾ ರಂಗದಲ್ಲಿಯೂ ಕೂಡ ತಮ್ಮದೇ ಆದಂತಹ ಒಂದು ಸಂಘವನ್ನು ಕಟ್ಟಿಕೊಂಡಿರುತ್ತಾರೆ.

ಅದೇ ರೀತಿ ಕನ್ನಡ ಚಲನಚಿತ್ರ ಮಂಡಳಿಯಲ್ಲಿ ಹಿರಿಯ ಹಾಗೂ ಪೋಷಕ ನಟರ ಸಂಘವನ್ನು ಕಟ್ಟಿಕೊಂಡಿದ್ದರು ಈ ಸಂಘದಲ್ಲಿ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಿದಂತಹ ಹಲವಾರು ನಟ ನಟಿಯರು ಸದಸ್ಯತ್ವವನ್ನು ಪಡೆದುಕೊಂಡಿದ್ದರು. ಪ್ರತಿಬಾರಿಯೂ ಕೂಡ ಏನಾದರೂ ಒಂದು ವಿಚಾರವನ್ನು ಪ್ರಸ್ತಾಪ ಮಾಡಬೇಕಾದರೆ ಅಥವಾ ಹಿರಿಯ ನಟರಿಗೆ ಏನಾದರೂ ತೊಂದರೆಯಾದರೆ ಅದನ್ನು ಬಗೆಹರಿಸುವಂತಹ ಕೆಲಸವನ್ನು ಈ ಸಂಘದಲ್ಲಿ ಮಾಡಲಾಗುತ್ತದೆ.

ಇದರ ಜೊತೆಗೆ ಸಂಘದ ಸದಸ್ಯತ್ವವನ್ನು ಪಡೆಯಬೇಕಾದರೆ ಇಂತಿಷ್ಟು ಪ್ರಮಾಣದ ಹಣವನ್ನು ಕೂಡ ನೀಡಬೇಕಾಗುತ್ತದೆ. ಸದ್ಯಕ್ಕೆ ಸಂಘದಲ್ಲಿ ಇರುವಂತಹ ಅಣವು ದುರ್ಬಳಕೆಯಾಗುತ್ತಿದೆ ಎಂದು ನಟಿ ರಾಣಿ ಅವರು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಡಿಂಗ್ರಿ ನಾಗರಾಜು ಅವರ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಕನ್ನಡ ಚಲನಚಿತ್ರ ಪೋಷಕರ ಸಂಘದಲ್ಲಿ ಗಲಾಟೆ ದೊಡ್ಡದಾಗಿದೆ. ಹಿರಿಯ ನಟರು ಸಂಘದ ಹಣವನ್ನು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ ಹಾಗೂ ಮಹಿಳಾ ಕಲಾವಿದರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಸುದ್ದಿಗೋಷ್ಠಿ ನಡೆಸುವ ಮೂಲಕ ಸಂಪೂರ್ಣ ಮಾಹಿತಿಯನ್ನು ತಿಳಿಸುವುದಾಗಿ ನಟಿಯರು ಹೇಳಿದ್ದಾರೆ. ಅವಾಚ್ಯ ಶಬ್ದಗಳಿಂದ ಅವಮಾನಿಸಿ ನಿಂದುತ್ತಿದ್ದಾರೆ ಜೊತೆಗೆ ಮಹಿಳಾ ಸದಸ್ಯರ ಮೊಬೈಲ್‌ಗೆ ಅಶ್ಲೀಲ ವಿಡಿಯೋವನ್ನು ಕಳುಹಿಸಿ ದೌರ್ಜನ್ಯ ಏಸಗುತ್ತಿದ್ದಾರೆ ಎಂದು ನಟಿ ಶ್ರೀಮತಿ ರಾಣಿ ಮಾತನಾಡಿದ್ದಾರೆ.

“ಈ ರೀತಿ ಅಶ್ಲೀಲ ವಿಡಿಯೋಗಳನ್ನು ಕಳಿಸಬೇಡಿ ಎಂದು ಹೇಳಿದ್ದೆವು. ಕಳೆದ ವರ್ಷ ಕನಿಷ್ಕ ಹೋಟೆಲ್‌ನಲ್ಲಿ ಈ ವಿಚಾರವಾಗಿ 300 ಜನರ ಮಧ್ಯೆ ಜಗಳ ಆಗಿದೆ. ಆಗ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಕಳೆದ ತಿಂಗಳು ನನ್ನನ್ನು ಸಂಘದಿಂದ ಉಚ್ಛಾಟನೆ ಮಾಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಯಾರು ಯಾರನ್ನೋ ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ನಮ್ಮ ಐಡಿಯನ್ನು ಬದಲಾಯಿಸಿದ್ದಾರೆ.

ಏಕವಚನದಲ್ಲಿ ನಮ್ಮನ್ನು ಮಾತನಾಡಿಸುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಅಸಭ್ಯ ಪದ ಬಳಸಿ ನಾವು ಹೇಳುವ ಹಾಗೆ ಕೇಳುವುದಿದ್ದರೆ ಕೇಳಿ, ಇಲ್ಲ ಅಂದರೆ ಹೋಗಿ ಅಂತ ಹೇಳುತ್ತಾರೆ. ಯಾವುದೇ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ನಮ್ಮ ಬಳಿ ಚರ್ಚೆ ಮಾಡದೆ ಅವರೇ ನಿರ್ಧಾರಕ್ಕೆ ಬರುತ್ತಾರೆ. ಏನೇ ಹೇಳಿದರೂ ನೀವು ರಾಜೀನಾಮೆ ಕೊಟ್ಟು ಹೋಗಿ ಅಂತಾರೆ. ನಾನು ಮೊದಲ ಹೆಜ್ಜೆ ತೆಗೆದುಕೊಂಡು ಮುಂದೆ ಬಂದಿದ್ದೇನೆ, ಸಾಕಷ್ಟು ಹಿರಿಯ ಕಲಾವಿದರಿಗೂ ಈ ವಿಷಯವನ್ನು ತಿಳಿಸಿದ್ದೇನೆ” ಎಂದು ರಾಣಿ ಹೇಳಿದ್ದಾರೆ.

16ನೇ ವರ್ಷಕ್ಕೆ ಪ್ರೀತಿ 23ನೇ ವರ್ಷಕ್ಕೆ ಮದುವೆ ಮಾಡಿಕೊಂಡ ಮಾಸ್ಟರ್ ಮಂಜುನಾಥ್ ಲವ್ ಸ್ಟೋರಿ ಎಷ್ಟು ಕ್ಯೂಟ್ ಆಗಿದೆ ಗೊತ್ತಾ.? ಮಂಜುನಾಥ್ ಅವರ ಈ ಲೇಟೆಸ್ಟ್ ವಿಡಿಯೋ ನೋಡಿ.

 

ಮಾಸ್ಟರ್ ಮಂಜುನಾಥ್ ಕರ್ನಾಟಕ ಎಂದೂ ಮರೆಯದ ಬಾಲ ಕಲಾವಿದ. ನೋಡಿ ಸ್ವಾಮಿ ನಾವಿರೋದು ಸಿನಿಮಾದಲ್ಲಿ, ಮಾಲ್ಗುಡಿ ಡೇಸ್ ಅಂತಹ ಅದ್ಭುತ ಧಾರಾವಾಹಿಯಲ್ಲಿ ಶಂಕರ್ ನಾಗ್ ಜೊತೆ, ಮೃಗಾಲಯ ಸಿನಿಮಾದಲ್ಲಿ ಅಂಬರೀಶ್ ಜೊತೆ, ಕಿಂದರಜೋಗಿ ಮತ್ತು ರಣಧೀರ ಸಿನಿಮಾದಲ್ಲಿ ರವಿಚಂದ್ರನ್ ಅವರ ಜೊತೆ, ಲವ್ ಟ್ರೈನಿಂಗ್ ಸಿನಿಮಾದಲ್ಲಿ ಕಾಶಿನಾಥ್ ಅವರ ಜೊತೆ ಹೀಗೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೆ ಭರಪೂರ ಮನೋರಂಜನೆ ನೀಡಿದ ಪ್ರತಿಭೆ ಮಾಸ್ಟರ್ ಮಂಜುನಾಥ್.

ಮಾಸ್ಟರ್ ಮಂಜುನಾಥ್ ಅವರು ಬಾಲ ನಟನಾಗಿ ಬಹಳ ಬೇಡಿಕೆ ಇದ್ದ ಕಾಲದಲ್ಲಿಯೇ ಚಿತ್ರರಂಗ ತೆರೆದು ತಮ್ಮ ವಿದ್ಯಾಭ್ಯಾಸದ ಕಡೆ ಒತ್ತುಕೊಟ್ಟರು. ತುಂಬಾ ಚೆನ್ನಾಗಿ ಅಧ್ಯಯನ ತೊಡಗಿಸಿಕೊಂಡಿದ್ದ ಅವರು ಅಷ್ಟೇ ಬೇಗ ದಾಂಪತ್ಯ ಜೀವನಕ್ಕೆ ಕೂಡ ಕಾಲಿಟ್ಟರು. 16 ವರ್ಷಕ್ಕೆ ಪ್ರೀತಿಯಲ್ಲಿ ಬಿದ್ದ ಇವರು 23 ವರ್ಷಕ್ಕೆ ಮದುವೆಯಾಗಿ ಬಿಟ್ಟಿದ್ದರು.

ಇವರ ಪ್ರೇಮ ಕಥೆ ಯಾವ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ಇವರ ಪ್ರೀತಿ ಶುರು ಆಗಿದ್ದು ಹೇಗೆ ಎಂದರೆ ಮಾಸ್ಟರ್ ಮಂಜುನಾಥ್ ಅವರು ಆಗ ತಾನೇ ಸಿನಿಮಾರಂಗ ಕೈ ಬಿಟ್ಟು ಶಿಕ್ಷಣದ ಕಡೆಗೆ ಮನಸ್ಸು ಕೊಟ್ಟಿದ್ದರು. ಆದರೆ ಶಿಕ್ಷಣದ ಜೊತೆ ಮತ್ತೇನೋ ಕಲಿಬೇಕು ಎನ್ನುವುದು ತುಡಿತ ಅವರ ಮನಸ್ಸಿನಲ್ಲಿ ಇತ್ತು. ಅವರ ಕೊನೆಯ ಸಿನಿಮಾದ ಸ್ವಾತಿ ಕಿರಣ ಸಿನಿಮಾದಲ್ಲಿ ಅವರು ಮುಮ್ಮುಟಿ ಅವರ ಜೊತೆ ಗಾಯಕನಾಗಿ ಕಾಣಿಸಿಕೊಂಡಿದ್ದರು. ಅದೇ ಚಿತ್ರದಲ್ಲಿ ಭರತನಾಟ್ಯದ ನೃತ್ಯವನ್ನು ಕೂಡ ಮಾಡಿದ್ದರು.

ಹೀಗಾಗಿ ಆ ಸಮಯದಲ್ಲಿ ಅವರಿಗೆ ಭರತನಾಟ್ಯದ ಬಗ್ಗೆ ಆಕರ್ಷಣೆ ಉಂಟಾಯಿತು. ಚಿದಂಬರ ಅಲ್ಲಿ ನಟರಾಜನ ಮುಂದೆ ಪ್ರದರ್ಶನ ಮಾಡಬೇಕು ಎನ್ನುವುದು ಅವರ ಕನಸಾಗಿತ್ತು. ಇದಕ್ಕಾಗಿ ಅವರು ಭರತನಾಟ್ಯ ಕಲಿಸುವ ಶಾಲೆಗೆ ಸೇರಿಕೊಂಡರಂತೆ. ಅದೇ ಶಾಲೆಗೆ ಅವರ ಪತ್ನಿ ಆಗಿರುವ ಸ್ವರ್ಣ ಲೇಖ ಅವರು ಕೂಡ ಭರತನಾಟ್ಯ ಕಲಿಯಲು ಸೇರಿಕೊಂಡಿದರಂತೆ.

ಇವರಿಗಿಂತ ಒಂದು ವರ್ಷ ಕಿರಿಯರಾದ ಅವರು ಆ ಹೊತ್ತಿಗಾಗಲೇ ಸ್ಪೋರ್ಟ್ಸ್ ಅಲ್ಲಿ ತಮ್ಮನ್ನು ತೆಗೆಸಿಕೊಂಡು ರಾಷ್ಟ್ರಮಟ್ಟದವರೆಗೂ ಹೆಸರು ಮಾಡಿದ್ದರು. ಹೀಗಾಗಿ ಮಂಜುನಾಥ್ ಅವರು ತಾವು ಕೂಡ ದೇಹ ಕರಗಿಸಲು ಸಹಾಯ ಆಗುತ್ತದೆ ಎಂದು ರನ್ನಿಂಗ್ ಚಾಂಪಿಯನ್ ಸ್ನೇಹ ಮಾಡಿಕೊಡರಂತೆ. ನಂತರ ಸ್ನೇಹ ಪ್ರೀತಿಯಾಗಿ ಬದಲಾಗಿ ವಿಷಯ ಕುಟುಂಬದವರಿಗೆ ತಿಳಿದ ಬಳಿಕ ಹೆಚ್ಚು ಸಮಯ ತಡ ಮಾಡದೆ ಅವರು ಶೀಘ್ರವಾಗಿ ಇಬ್ಬರಿಗೂ ವಿವಾಹ ಮಾಡಿಬಿಟ್ಟರು.

ಅವರು ಮದುವೆಯಾದ ಸಂದರ್ಭದಲ್ಲಿ ಮಾಸ್ಟರ್ ಮಂಜುನಾಥ್ ಅವರು 23 ವರ್ಷದವರಾಗಿದ್ದರೆ, ಸ್ವರ್ಣ ಲೇಖ ಅವರು 22 ವರ್ಷದವರಾಗಿದ್ದರು. ಎಂಟು ವರ್ಷದ ಪ್ರೀತಿಯ ಬಳಿಕ ನವೆಂಬರ್ 10, 1999ರಂದು ಹಸೆಮೆಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ನವೆಂಬರ್ ಹತ್ತಕ್ಕೆ 23 ವರ್ಷಗಳ ವಿವಾಹ ಜೀವನವನ್ನು ಪೂರ್ಣಗೊಳಿಸಲಿದ್ದಾರೆ.

ಅಂದಿನಿಂದ ಒಬ್ಬರ ಆಸಕ್ತಿ ಗಳಿಗೆ ಇನ್ನೊಬ್ಬರ ಸಪೋರ್ಟ್ ಮಾಡುತ್ತಾ ಜೊತೆ ಜೊತೆಗೆ ಇಬ್ಬರು ಓಡುತ್ತಾ ಬಂದಿದ್ದಾರೆ. ಈ ಮುದ್ದಾದ ಜೋಡಿಗಳ ಸವಿ ದಾಂಪತ್ಯಕ್ಕೆ ಸಾಕ್ಷಿಯಾಗಿ ಒಬ್ಬ ಗಂಡು ಮಗ ಕೂಡ ಇದ್ದಾರೆ. ಸದ್ಯಕ್ಕೆ ಸಿನಿಮಾ ಇಂಡಸ್ಟ್ರಿಯಲ್ಲಿ ಎರಡನೇ ಇನ್ನಿಂಗ್ಸ್ ಶುರು ಮಾಡಲು ಪ್ಲಾನ್ ಮಾಡುತ್ತಿರುವ ಮಾಸ್ಟರ್ ಮಂಜುನಾಥ್ ಅವರು ಯಾವ ಉತ್ತಮ. ಕಥೆಯೊಂದಿಗೆ ಮರಳಿ ಬರುತ್ತಾರೆ ಎಂದು ತಿಳಿದಿಲ್ಲ ಆದರೆ ಕನ್ನಡ ಕಲಾಪ್ರೇಕ್ಷಕರು ಮಾತ್ರ ಮತ್ತೊಮ್ಮೆ ಇವರನ್ನು ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಮಾಸ್ಟರ್ ಮಂಜುನಾಥ್ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.

ರಿಷಬ್ ಶೆಟ್ಟಿಗಿಂತ ಅದ್ಭುತವಾಗಿ ಕಾಂತರಾ ಸಿನಿಮಾದ ಕ್ಲೈಮಾಕ್ಸ್ ದೃಶ್ಯ ಮಾಡಿದ ನೂಕುಲು ರಾಜು ಈ ವೈರಲ್ ವಿಡಿಯೋ ನೋಡಿ ನಿಜಕ್ಕೂ ಬೆಚ್ಚಿ ಬೆರಗಾಗುತ್ತೀರಾ.! ಮೈ ಝುಮ್ ಅನ್ನುತ್ತೆ.

 

ಕಾಂತರಾ ಸಿನಿಮಾ ಇದಾಗಲೇ ಕನ್ನಡದಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡಿದೆ ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಸಿನಿಮಾ ದಿನದಿಂದ ದಿನಕ್ಕೆ ಒಂದದು ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಿದೆ ಅಂತಾನೇ ಹೇಳಬಹುದು. ಕಾಂತರಾ ಸಿನಿಮಾವನ್ನು ಕೇವಲ ಕನ್ನಡ ಮಾತ್ರವಲ್ಲದೆ ಇಡಿ ಭಾರತೀಯ ಚಿತ್ರರಂಗ ಹಾಡಿ ಹೊಗಳುತ್ತಿದೆ ನಿಜಕ್ಕೂ ಕೂಡ ಇವರ ಅದ್ಭುತ ಅಭಿನಯವನ್ನು ಎಲ್ಲರೂ ಮೆಚ್ಚಲೇಬೇಕು. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ರಿಷಬ್ ಶೆಟ್ಟಿ ಅವರ ಅಭಿನಯವನ್ನು ಮೀರಿಸುವಂತಹ ವ್ಯಕ್ತಿಯ ಅಭಿನಯದ ವಿಡಿಯೋ ಒಂದು ವೈರಲ್ ಆಗಿದೆ.

ಕಾಂತಾರ ಕೇವಲ 14 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾ ಇಂದು 400 ಕೋಟಿ ಅನ್ನು ತಲುಪಿದೆ ಹೌದು ಇದು ನಿಜಕ್ಕೂ ಕೂಡ ಹೆಮ್ಮೆಯ ಸಂಗತಿ ಹೊಂಬಾಳೆ ಫಿಲಂ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಸಿನಿಮಾ ಇದೀಗ ಎಲ್ಲರ ಮನೆ ಮಾತಾಗಿದೆ. ಅದರಲ್ಲಿಯೂ ಕೂಡ ರಿಷಬ್ ಶೆಟ್ಟಿ ಅವರ ಅಭಿನಯವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ. ತುಳುನಾಡು, ಭೂತಕೋಲ, ಪಂಜುರ್ಲಿ ದೈವ ಹೀಗೆ ನಮ್ಮ ಸಂಸ್ಕೃತಿ ಹಾಗೂ ಹಿಂದೂ ಧರ್ಮಕ್ಕೆ ಸಂಬಂಧ ಪಟ್ಟಂತಹ ಸಾಕಷ್ಟು ವಿಚಾರವನ್ನು ಈ ಸಿನಿಮಾದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅದರಲ್ಲಿಯೂ ಪ್ರಕೃತಿ ಮುಂದೆ ಮನುಷ್ಯನ ಆಟ ನಡೆಯುವುದಿಲ್ಲ ಕೇವಲ ಬುದ್ದಿ ಬಲ ಇದ್ದರೆ ಸಾಲದು ದೈವ ಬಲವು ಇರಬೇಕು ಎಂಬುದನ್ನು ಈ ಸಿನಿಮಾ ಎತ್ತಿ ತೋರಿಸುತ್ತದೆ. ರಿಷಬ್ ಶೆಟ್ಟಿ ಅವರು ಮೂಲತಃ ಕುಂದಾಪುರದವರೇ ಹಾಗಾಗಿ ಅಲ್ಲಿನ ಆಚರಣೆಯ ವಿಚಾರಣೆ ಇದೆಲ್ಲದರ ಬಗ್ಗೆ ಅವರು ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಯಾವ ರೀತಿಯ ನಟನೆ ಮಾಡಬೇಕು ಎಂಬುದನ್ನು ಕರಗತ ಮಾಡಿಕೊಂಡಿದ್ದರು.

ರಿಷಬ್ ಶೆಟ್ಟಿಯವರು ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಅದರಲ್ಲೂ ಕೊನೆಯ 20 ನಿಮಿಷಗಳು ಮಾತ್ರ ಮೈ ರೋಮಾಂಚನವಾಗುತ್ತದೆ. ಈ ಸಿನಿಮಾದಲ್ಲಿ ಇವರು ಮಾಡುದಂತಹ ಅಮೋಘ ನಟನೆಯನ್ನು ನೋಡಿದರೆ ನಿಜಕ್ಕೂ ಇವರಿಗೆ ಆಸ್ಕರ್ ಅವಾರ್ಡ್‌ ಅನ್ನೆ ಕೊಡಬೇಕು ಅಂತ ಅನಿಸುತ್ತದೆ‌ ಅಷ್ಟು ಅದ್ಭುತವಾಗಿ ನಟಿಸಿದ್ದಾರೆ‌. ರಿಷಬ್ ಶೆಟ್ಟಿ ಅವರಿಗಿಂತ ಮುಂಚೆ ಯಾರು ಕೂಡ ಇಂತಹದೊಂದು ಪಾತ್ರದಲ್ಲಿ ಅಭಿನಯಿಸಿರಲಿಲ್ಲ ಹಾಗಾಗಿ ಈ ಕೀರ್ತಿ ಗೌರವ ಪ್ರತಿಷ್ಠೆ ಎಲ್ಲವೂ ಕೂಡ ಇವರಿಗೆ ಸಲ್ಲಬೇಕು.

ಇದಿಷ್ಟು ನಿಮಗೆ ಸೇರಿದ ವಿಚಾರವಾದರೆ ಇದೀಗ ಕಾಂತರಾ ಸಿನಿಮಾದ ಕ್ಲೈಮ್ಯಾಕ್ಸ್ ಮಾದರಿಯಲ್ಲೇ ಮತ್ತೊಂದು ವಿಡಿಯೋ ವೈರಲ್ ಆಗಿದೆ ಹೌದು ತೆಲುಗಿನ ಖ್ಯಾತ ರಿಯಾಲಿಟಿ ಶೋ ಆದಂತಹ ಶ್ರೀದೇವಿ ಡ್ರಾಮಾ ಕಂಪನಿಯಲ್ಲಿ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದಲ್ಲಿ ಮಾಡಿರುವ ಅಭಿನಯದಂತೆ ಇಲ್ಲೂ ಕೂಡ ಮಾಡಲಾಗಿದೆ. ಇದನ್ನು ನೋಡುತ್ತಿದ್ದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಏಕೆಂದರೆ ರಿಷಬ್ ಶೆಟ್ಟಿ ಮಾದರಿಯಲ್ಲೇ ಈ ನಟನು ಕೂಡ ಅದ್ಭುತವಾಗಿ ಅಭಿನಯ ಮಾಡಿದ್ದಾನೆ.

ಸದ್ಯಕ್ಕೆ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಶ್ರೀದೇವಿ ಡ್ರಾಮ ಕಂಪನಿ ಶೋ ಸ್ಪರ್ಧಿ ನೂಕರಾಜು ರಿಷಬ್‌ ಶೆಟ್ಟಿಯವರಂತೆ ಅಭಿನಯ ಮಾಡಿದ್ದಾರ ಈ ವಿಡಿಯೋ ನೋಡಿದ ಮೆಚ್ಚಿಕೊಂಡು ವಾವ್ ಎಂದಿದ್ದಾರೆ ಅಷ್ಟೇ ಅಲ್ಲದೆ ರಿಷಬ್ ಶೆಟ್ಟಿಯಂತೆ ಅದ್ಭುತವಾಗಿ ನಟಿಸಿದ್ದಿರಾ ಎಂದ ಹೇಳುತ್ತಿದ್ದಾರೆ. ಆದರೆ, ಈ ಒಂದು ದೃಶ್ಯಕ್ಕೆ ತನ್ನದೆಯಾದ ಮೌಲ್ಯವಿದೆ.

ಇದು ದೈವದ ವಿಚಾರ ಈ ಕುರಿತು ಸಂಪ್ರದಾಯ, ಪದ್ದತಿ, ಆಚಾರ ಇಲ್ಲದಂತೆ ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿರುವ ಈ ವಿಡಿಯೋ ಮುಂದಿನ ದಿನದಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಈ ವಿಡಿಯೋಗೆ ಇದುವರೆಗೂ ಕಾಂತರಾ ಸಿನಿಮಾದ ಚಿತ್ರತಂಡ ಯಾವುದೇ ರೀತಿಯಾದಂತಹ ಅಸ್ತಕ್ಷೇಪ ಮಾಡಿಲ್ಲ ಹಾಗಾಗಿ ರಿಷಬ್ ಶೆಟ್ಟಿ ಈ ವಿಡಿಯೋ ನೋಡಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕಾದು ನೋಡಬೇಕಿದೆ.

ನೂಕುಲು ರಾಜು ಅದ್ಭುತವಾಗಿ ಅಭಿನಯ ಮಾಡಿದಂತಹ ವಿಡಿಯೋ ಈ ಕೆಳಗಿದೆ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ಹಾಗೂ ನಿಮ್ಮ ಪ್ರಕಾರ ರಿಷಬ್ ಶೆಟ್ಟಿ ಅಭಿನಯ ಉತ್ತಮವಾಗಿದೆಯೋ ಅಥವಾ ನೂಕೂಲು ರಾಜು ಅಭಿನಯ ಉತ್ತಮವಾಗಿದೆಯೋ ಎಂಬುದನ್ನು ಕಮೆಂಟ್ ಮಾಡಿ.

 

ರವಿಚಂದ್ರನ್ ಸೊಸೆಯಾಗುತ್ತಿರುವ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ನನ್ನ ಎರಡನೇ ಮಗನನ್ನು ಮದುವೆಯಾಗುತ್ತಿಯಾ ಅಂತ ಕೇಳಿದಕ್ಕೆ ನಾಚಿ ನೀರದ ರಶ್ಮಿಕಾ ಕೊಟ್ಟ ಉತ್ತರವೇನು ಗೊತ್ತ.?

ಈಗಷ್ಟೇ ಕ್ರೇಝಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರ ವಿವಾಹ ಸಂಗೀತ ಅವರೊಂದಿಗೆ ಅದ್ದೂರಿಯಾಗಿ ನೆರವೇರಿದೆ. ಅದರ ಬೆನ್ನೆಲ್ಲೇ ಮತ್ತೊಬ್ಬ ಮಗನ ಮದುವೆ ಸುದ್ದಿಯನ್ನು ಪ್ರಸ್ತಾಪ ಮಾಡಿದ್ದಾರೆ ರವಿಚಂದ್ರನ್. ರವಿಚಂದ್ರನ್ ಸೊಸೆಯಾಗಲು ಈ ಬಾರಿ ಸೆಲೆಕ್ಟ್ ಮಾಡಿರುವುದು ಯಾರನ್ನು ಗೊತ್ತಾ ಕೊಡಗಿನ ಕುವರಿ ನ್ಯಾಷನಲ್ ಕ್ರಶ್ ಎಂದು ಕರೆಸಿ ಕೊಡುತ್ತಿರುವ ರಶ್ಮಿಕಾ ಮಂದಣ್ಣ ಅವರಿಗೆ ತಮ್ಮ ಸೊಸೆ ಆಗುವಂತೆ ಕ್ರೇಜಿಸ್ಟಾರ್ ಆಫರ್ ನೀಡಿದ್ದಾರೆ. ಇದರ ಕುರಿತು ಹೆಚ್ಚಿನ ಮಾಹಿತಿಗೆ ಪೂರ್ತಿ ಓದಿ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದ ಹೆಸರಾಂತ ನಟ ರವಿಚಂದ್ರನ್ ಮತ್ತು ಸುಮತಿ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಮಗಳಿದ್ದಾರೆ. ಮಗಳ ಮದುವೆಯನ್ನು ಸಹ ರವಿಚಂದ್ರನ್ ಅವರು ಬಹಳ ವಿಜೃಂಭಣೆಯಿಂದ ಎಲ್ಲರ ಕಣ್ಣು ಕುಕ್ಕುವಂತೆ ನಡೆಸಿ ಕೊಟ್ಟಿದ್ದರು. ಆ ಮದುವೆಗೆ ಸ್ಯಾಂಡಲ್ ವುಡ್ ನ ಎಲ್ಲಾ ಸ್ಟಾರ್ ಗಳು, ಪರಭಾಷೆಯ ಸಿನಿಮಾ ಸ್ನೇಹಿತರು, ಸಿನಿಮಾ ಕ್ಷೇತ್ರಕ್ಕೆ ಸಂಬಂಧಪಟ್ಟ ತಾಂತ್ರಿಕ ವರ್ಗ ಸೇರಿದಂತೆ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಶೇಕಡವಾರು ಎಲ್ಲರೂ ಬಂದಿದ್ದರು.

ಇದನ್ನು ಹೊರತುಪಡಿಸಿ ಕರ್ನಾಟಕದ ರಾಜಕೀಯ ಮುಖಂಡರುಗಳು ಮತ್ತು ಗಣ್ಯ ವ್ಯಕ್ತಿಗಳು ಕೂಡ ಆಗಮಿಸಿ ವಧು-ವರರನ್ನು ಆಶೀರ್ವದಿಸಿದ್ದರು. ಈ ವರ್ಷ ಕೂಡ ಮೊದಲ ಮಗ ಮನೋರಂಜನ್ ಅವರ ಮದುವೆಯ ಸಂಗೀತ ಅವರೊಂದಿಗೆ ಅಷ್ಟೇ ಸಡಗರದಿಂದ ನೆರವೇರಿತು. ಈ ಮದುವೆ ಸಮಾರಂಭಕ್ಕೆ ಕೂಡ ಚಿತ್ರರಂಗ ಸೇರಿದಂತೆ ರಾಜ್ಯದ ಗಣ್ಯರು ಪಾಲ್ಗೊಂಡು ಸಂಭ್ರಮದ ಭಾಗವಾಗಿದ್ದರು ಈಗ ಕೊನೆ ಮಗನ ಮದುವೆ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ.

ರವಿಚಂದ್ರನ್ ಅವರು ಈ ಬಾರಿ ಸೊಸೆ ಮಾಡಿಕೊಳ್ಳಲು ರಶ್ಮಿಕ ಮಂದಣ್ಣ ಅವರನ್ನು ಕೇಳಿದ್ದಾರೆ ಎನ್ನುವ ಕುರಿತು ಮಾತುಗಳು ಬರುತ್ತಿವೆ. ಅದಕ್ಕೆ ಸಾಕ್ಷಿಯಾಗಿ ವೇದಿಕೆ ಮೇಲೆಯೇ ರವಿಚಂದ್ರನ್ ತಮ್ಮ ಮಗನ ಮದುವೆ ಪ್ರಪೋಸನ್ನು ರಶ್ಮಿಕ ಮಂದಣ್ಣ ಮುಂದೆ ಇಟ್ಟಿದ್ದ ವಿಡಿಯೋ ವೈರಲ್ಲಾಗುತ್ತಿದೆ. ಪುಷ್ಪ 2 ಮತ್ತು ದೃಶ್ಯ 2 ಸಿನಿಮಾಗಳು ಬಿಡುಗಡೆಯಾದ ಸಂದರ್ಭದಲ್ಲಿ ಸಿನಿಮಾಗೆ ಸಂಬಂಧಪಟ್ಟ ಕಾರ್ಯಕ್ರಮದ ಪ್ರಯುಕ್ತವಾಗಿ ರವಿಚಂದ್ರನ್ ಮತ್ತು ರಶ್ಮಿಕ ಇಬ್ಬರು ಕೂಡ ಒಂದೇ ವೇದಿಕೆ ಮೇಲೆ ಸೇರಿದ್ದರು.

ಆ ಸಮಯದಲ್ಲಿ ರಶ್ಮಿಕ ಮಂದಣ್ಣ ಅವರ ಬಗ್ಗೆ ಮಾತನಾಡಿದ ರವಿಚಂದ್ರನ್ ಅವರು ಈ ರೀತಿ ನುಡಿದರು. ಟಿವಿಯಲ್ಲಿ ರಶ್ಮಿಕ ಮಂದಣ್ಣ ಅವರನ್ನು ನೋಡಿದ ನನ್ನ ಮಗ ಹೇಳುತ್ತಿದ್ದ ರಶ್ಮಿಕ ಮಂದಣ್ಣ ಹಾಗೂ ಅವನು ಇಬ್ಬರೂ ಒಂದೇ ಜಿಮ್ ಗೆ ಹೋಗುತ್ತಾರೆ ಎಂದು ಆಗ ತಕ್ಷಣ ನಾನು ಅಷ್ಟು ಮುದ್ದಾದ ಹುಡುಗಿಯನ್ನು ಯಾಕೆ ಬಿಟ್ಟುಕೊಟ್ಟೆ ಎಂದು ಕೇಳಿದೆ ಎಂದು ಅಪ್ಪ ಮಗನ ನಡುವೆ ಆದ ಮಾತು ಕಥೆಯ ಬಗ್ಗೆ ಹೇಳಿದರು.

ಇಷ್ಟಾಗುತ್ತಿದ್ದಂತೆ ರಶ್ಮಿಕ ಮಂದಣ್ಣ ಕಡೆ ನೋಡಿದ ರವಿಚಂದ್ರನ್ ಅವರು ನನ್ನ ಮಗನನ್ನು ಮದುವೆ ಆಗುತ್ತೀಯ ನಮ್ಮ ಮನೆಗೆ ಸೊಸೆಯಾಗಿ ಬರುತ್ತೀಯ ಎಂದು ಕೇಳುತ್ತಾರೆ. ಅವರ ಪ್ರಶ್ನೆಗೆ ನಾಚಿ ನೀರಾದ ರಶ್ಮಿಕ ಮಂದಣ್ಣ ಅವರು ಏನು ಮಾತನಾಡದೆ ನಾಚಿಕೊಂಡು ಸುಮ್ಮನಾಗಿ ಬಿಡುತ್ತಾರೆ. ಇದನ್ನು ಮೌನಂ ಸಮ್ಮತಿ ಲಕ್ಷಣಂ ಎಂದು ಕೊಳ್ಳಬೇಕು ಅಥವಾ ತಮಾಷೆಗಾಗಿ ಮಾಡಿದ್ದನ್ನು ಅವರು ಗಂಭೀರವಾಗಿ ತೆಗೆದುಕೊಳ್ಳದೆ ಸುಮ್ಮನಾದರು ಎನ್ನಬೇಕೋ ಗೊತ್ತಿಲ್ಲ. ಮಾತು ಮಾತಲ್ಲೇ ರವಿಚಂದ್ರನ್ ಅವರು ಸೊಸೆಯಾಗಲು ರಶ್ಮಿಕಾ ಮಂದಣ್ಣ ಅವರನ್ನು ಕೇಳಿದ್ದಂತೂ ನಿಜ ಇದೇ. ಈ ವಿಡಿಯೋ ಬಂದು ಆರು ತಿಂಗಳು ಕಳೆದರೂ ಸಹ ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Nikhil: ಮೊದಲ ಬಾರಿಗೆ ಮಗನ ಫೋಟೋ ಹಂಚಿಕೊಂಡ ನಟ ನಿಖಿಲ್ ಕುಮಾರಸ್ವಾಮಿ, ಈ ವಿಡಿಯೋ ನೋಡಿ ಮಗು ಎಷ್ಟು ಕ್ಯೂಟ್ ಆಗಿದೆ

.

ರಾಜಕೀಯ ದಿಗ್ಗಜರಾದ ಎಚ್‌ ಡಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾಸ್ವಾಮಿಯವರ ಪುತ್ರ ಮತ್ತು ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಮೊಮ್ಮಗ, ನಿಖಿಲ್ ಕುಮಾರಸ್ವಾಮಿ ಅವರು ಕನ್ನಡ ಮತ್ತು ತೆಲುಗು ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ನಟರಾಗಿ ಗುರುತಿಸಿಕೊಂಡಿದ್ದಾರೆ. ನಿಖಿಲ್ ರಾಜಕೀಯದಲ್ಲೂ ಸಕ್ರಿಯರಾಗಿದ್ದು, ಪ್ರಸ್ತುತ ಜೆಡಿಎಸ್ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಸದ್ಯ ನಿಖಿಲ್ ಕುಮಾರ್ ಸ್ವಾಮಿಯವರು ಯದುವೀರ ಚಿತ್ರದ ಶೂಟಿಂಗ್ ನಲ್ಲಿದ್ದು, ಕೆಲ ಪ್ರಾಜೆಕ್ಟ್ ಗಳು ಪೈಪ್ ಲೈನ್ ನಲ್ಲಿವೆ. ನಿಖಿಲ್ 2016 ರಲ್ಲಿ ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಅವರು ಇಲ್ಲಿಯವರೆಗೆ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ.

ಜಾಗ್ವಾರ್ ಚಿತ್ರಕ್ಕಾಗಿ ನಿಖಿಲ್ ಕನ್ನಡದ ಅತ್ಯುತ್ತಮ ಚೊಚ್ಚಲ ನಟನಾಗಿ SIIMA ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇವರು ಜಾಗ್ವಾರ್ ಅಲ್ಲದೆ ಸೀತಾ ರಾಮ ಕಲ್ಯಾಣ, ರೈಡರ್, ಕುರುಕ್ಷೇತ್ರ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿಯವರು ಕೊರೋನ ಸಂದರ್ಭದಲ್ಲಿ ರಾಜಕೀಯ ಮನೆತನದಿಂದ ಬಂದ ರೇವತಿಯವರನ್ನು ಮದುವೆಯಾದರೂ, ಈ ಕಾರಣ ಹೆಚ್ಚು ಜನಗಳನ್ನು ಸೇರಿಸದೆ ಕೇವಲ ಕುಟುಂಬಸ್ಥರ ಜೊತೆಗೆ ಹೊಸ ಜೀವನಕ್ಕೆ ಕಾಲಿಟ್ಟರು.

ಮದುವೆ ಆದ ನಂತರ ಅದ್ದೂರಿಯಾಗಿ ಆರಕ್ಷತೆಯನ್ನು ಕೂಡ ಮಾಡಿಕೊಂಡರು. ರೇವತಿಯವರು ನಿಖಿಲ್ ಕುಮಾರಸ್ವಾಮಿಯವರ ಮುದ್ದಾದ ಜೋಡಿಯು ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿದರು. ರಾಜಕೀಯ ಹಾಗೂ ಸಿನಿಮಾರಂಗಗಳಲ್ಲಿ ಸದಾ ಆಕ್ಟಿವ್ ಆಗಿರುವ ನಿಖಿಲ್ ಕುಮಾರಸ್ವಾಮಿಯವರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲೂ ಅಷ್ಟೇ ಆಕ್ಟಿವ್ ಆಗಿರುತ್ತಾರೆ.

ತಮ್ಮ ಕುಟುಂಬಸ್ಥರ ಹಾಗೂ ಅವರ ವಿಶೇಷ ದಿನಗಳ ಫೋಟೋಗಳನ್ನು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾ ಇರುತ್ತಾರೆ. ಮಗ ಹುಟ್ಟಿದ ಸಂಭ್ರಮಕ್ಕೆ ನಾಲ್ಕು ತಲೆಮಾರಗಳ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ ಇದೇ ಫೋಟೋದಲ್ಲಿ ದೇವೇಗೌಡರು, ಹೆಚ್. ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ನಿಖಿಲ್ ಅವರ ಮಗನು ಕೂಡ ಇದ್ದಾರೆ.

ಈ ಫೋಟೋಗೆ ಹೆಚ್ಚು ಲೈಕ್ಸ್ ಕೂಡ ಬಂದಿದೆ. ಇನ್ನು ನಿಖಿಲ್ ಕುಮಾರಸ್ವಾಮಿಯವರಿಗೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫ್ಯಾನ್ಸ್ ಫಾಲೋವರ್ಸ್ ಕೂಡ ಹೆಚ್ಚು ಇದ್ದಾರೆ. ಇತ್ತೀಚಿಗೆ ಕೆಲವು ದಿನಗಳ ಹಿಂದೆ ಕುಟುಂಬಸ್ಥರು, ರಾಜಕೀಯ ಸ್ನೇಹಿತರು ಹಾಗೂ ನಿಖಿಲ್ ಕುಮಾರಸ್ವಾಮಿಯವರ ಜೊತೆ ತಮ್ಮ ಮಗುವಿನ ನಾಮಕರಣವನ್ನು ಜೋರಾಗಿ ಆಚರಿಸಿದ್ದಾರೆ. ತಮ್ಮ ಮಗನಿಗೆ ಅವ್ಯಾನ್ ದೇವ್ ಎಂದು ಹೆಸರಿಟ್ಟಿದ್ದಾರೆ.

ನವೆಂಬರ್ 14ನೇ ಮಕ್ಕಳ ದಿನಾಚಣೆಯ ದಿನದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಕ್ಕಳ ದಿನಾಚರಣೆಯ ಅಂಗವಾಗಿ ತಮ್ಮ ಮಗನ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಆ ಫೋಟೋದಲ್ಲಿ ಅವ್ಯಾನ್ ರವರು ಬಿಳಿ ಶರ್ಟ್ ಜೊತೆಗೆ ನೀಲಿ ಬಣ್ಣದ ಡೆನಿಮ್ ತೊಟ್ಟಿ ಮಿಂಚುತ್ತಿದ್ದರು. ಇನ್ನು ಇವರ ತಂದೆ ನಿಖಿಲ್ ಹಾಗೂ ತಾಯಿ ರೇವತಿಯವರು ಕೂಡ ತಮ್ಮ ಮಗನ ತರಹ ಬಟ್ಟೆಯನ್ನು ಧರಿಸಿ ಕಂಗೊಳಿಸುತ್ತಿದ್ದರು.

ಇನ್ನು ಈ ಫೋಟೋಗಳು ಹೆಚ್ಚು ವೈರಲ್ ಆಗಿದೆ ಎಂದರೆ ಸುಳ್ಳಲ್ಲ ಹೌದು ಸ್ನೇಹಿತರೆ ಈ ಫೋಟೋಗಳಿಗೆ ಹೆಚ್ಚು ಕಾಮೆಂಟ್ಸ್ ಗಳು ಕೂಡ ಹರಿದು ಬರುತ್ತಿವೆ. ಕೆಲವು ಅಭಿಮಾನಿಗಳು ಅವ್ಯಾನ್ ಅನ್ನು ಜೂನಿಯರ್ ನಿಖಿಲ್ ಎಂದರೆ ಇನ್ನು ಕೆಲವರು ಮಗು ಮುದ್ದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

Darshan: ಕಳೆದು ತಿಂಗಳು 6 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಖರೀಸಿದ ಬೆನ್ನಲ್ಲೇ ಇದೀಗ ಹೆಲಿಕ್ಯಾಪ್ಟರ್ ಕೂಡ ಖರೀದಿಸಿದ ಡಿ ಬಾಸ್. ಇದರ ಬೆಲೆ ಎಷ್ಟು ಗೊತ್ತ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಶೇಷ ವ್ಯಕ್ತಿತ್ವದ ವ್ಯಕ್ತಿ. ಸಿನಿಮಾ ಹೊರತುಪಡಿಸಿ ಬೇರೆ ವಿಷಯಗಳ ಬಗ್ಗೆಯೂ ಅವರಿಗೆ ಇರುವ ಆಸಕ್ತಿ ಗಮನಿಸಿದರೆ ಅವರೆಷ್ಟು ಸ್ಪೆಷಲ್ ಎನ್ನುವುದು ತಿಳಿಯುತ್ತದೆ. ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಸದಾ ಸುದ್ದಿಯಲ್ಲಿರುವ ಸ್ಟಾರ್ ಎಂದರೆ ಅದು ದರ್ಶನ್ ಅವರು. ದರ್ಶನ್ ಅವರ ವಿವಾದಗಳು, ಸಿನಿಮಾ ಅಪ್ಡೇಟ್ಗಳು ಜೊತೆಗೆ ಅವರು ಭಾಗವಹಿಸುವ ಕಾರ್ಯಕ್ರಮಗಳು ಸೇರಿದಂತೆ.

ಯಾವುದೇ ಸಣ್ಣಪುಟ್ಟ ವಿಚಾರ ಆದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಹಳ ಬೇಗ ವೈರಲ್ ಆಗಿಬಿಡುತ್ತದೆ. ಯಾಕೆಂದರೆ ಕರ್ನಾಟಕದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಕೋಟಿಗಟ್ಟಲೆ ಜನರಲ್ಲಿ ಇದೆ ಹೀಗಾಗಿ ಅವರ ಕುರಿತ ಸಣ್ಣ ವಿಷಯ ಬಹುಬೇಗ ಸುದ್ದಿ ಆಗಿಬಿಡುತ್ತದೆ. ಹೀಗೆ ದರ್ಶನ್ ಬಗ್ಗೆ ಮತ್ತೊಂದು ಪ್ರಮುಖ ಸುದ್ದಿಯ ವಿಡಿಯೋ ಒಂದು ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ.

ಅದೇನೆಂದರೆ ಯಾವುದೋ ಕಾರ್ಯಕ್ರಮಕ್ಕೆ ತೆರಳಲು ದರ್ಶನ್ ಅವರು ತಮ್ಮ ಸ್ನೇಹಿತರನ್ನು ಕೂರಿಸಿಕೊಂಡು ಹೆಲಿಕ್ಯಾಪ್ಟರ್ ಅಲ್ಲಿ ಹೋಗುತ್ತಿದ್ದಾರೆ. ಇದನ್ನು ನೋಡಿದ ನೆಟ್ಟಿದರು ದರ್ಶನ್ ಅವರು ಹೆಲಿಕ್ಯಾಪ್ಟರ್ ಖರೀದಿಸಿದ್ದಾರ ಎನ್ನುವ ಗೊಂದಲದಲ್ಲಿ ಇದ್ದಾರೆ. ಯಾಕೆಂದರೆ ದರ್ಶನ್ ಅವರಿಗೆ ದುಬಾರಿ ಬೆಲೆಯ ವಾಹನಗಳನ್ನು ಖರೀದಿಸುವ ಕ್ರೇಜ್ ಇದೆ ಈಗಾಗಲೇ ಅವರಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವ ಹೀರೋ ಬಳಿ ಕೂಡ ಇರದಷ್ಟು ಬಹುದೊಡ್ಡ ಮೌಲ್ಯದ ಕಾರುಗಳು ಇವೆ.

ಇತ್ತೀಚೆಗಷ್ಟೇ ಲೇಟೆಸ್ಟ್ ಡಿಸೈನ್ ಲ್ಯಾಂಬೋರ್ಗಿನಿ ಕಾರನ್ನು ಕೂಡ ಖರೀದಿಸಿದ್ದರು. ಅದರ ಮೌಲ್ಯವೇ ಹತ್ತರಿಂದ ಹನ್ನೆರಡು ಕೋಟಿ ಇತ್ತು. ಇದಕ್ಕೂ ಮುನ್ನ ಮತ್ತೆರಡು ಬೇರೆ ಡಿಸೈನ್ ಲ್ಯಾಂಬೋರ್ಗಿನಿ ಕಾರುಗಳ ಒಡೆಯರು ಕೂಡ ಆಗಿದ್ದಾರೆ. ಲ್ಯಾಂಬೋರ್ಗಿನಿ ಮಾತ್ರವಲ್ಲದೆ ಇನ್ನು ಪ್ರತಿಷ್ಠಿತ ಕಂಪನಿಗಳ ಕಾರುಗಳಿಗೆ ದ್ವಿಚಕ್ರ ವಾಹನಗಳಿಗೆ ಮಾಲೀಕರಾಗಿದ್ದರೆ ಡಿ ಬಾಸ್.

ಪ್ರತಿ ವರ್ಷ ಆಯುಧ ಪೂಜೆಯ ದಿನದಂದು ಅವರು ವಾಹನಗಳಿಗೆ ಪೂಜೆ ಮಾಡಿಸಿ ನಿಲ್ಲಿಸಿರುವ ಸಾಲನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಷ್ಟು ವಿಭಿನ್ನ ಬಗೆಯ ಡಿಸೈನ್ಗಳ ಕಲೆಕ್ಷನ್ ಗಳು ದರ್ಶನ್ ಬಳಿ ಇದೆ. ಹೀಗಾಗಿ ದರ್ಶನ್ ಅವರು ಈಗ ಕಾರ್ ಜೊತೆ ಹೆಲಿಕ್ಯಾಪ್ಟರ್ ಅನ್ನು ಕೂಡ ಖರೀದಿಸಿದ್ದಾರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿದೆ.

ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಆದರೆ ಕೆಲವೊಂದು ಗಾಳಿ ಸುದ್ದಿಗಳ ಪ್ರಕಾರ ದರ್ಶನ್ ಅವರು ತಮ್ಮ ಆತ್ಮೀಯರೊಬ್ಬರ ಹೆಲಿಕ್ಯಾಪ್ಟರ್ ಅನ್ನು ಯಾವುದೋ ಕಾರ್ಯಕ್ರಮಕ್ಕೆ ಹೋಗಲು ಬಾಡಿಗೆಗೆ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಹೆಲಿಕ್ಯಾಪ್ಟರ್ ನ ಒಟ್ಟು ಮೌಲ್ಯ 80 ಕೋಟಿ ರೂ ಆಗಿದ್ದು ಅವರು ಒಂದು ದಿನದ ಬಾಡಿಗೆಯಾಗಿ 2 ಲಕ್ಷ ರೂ ಕೊಟ್ಟು ಈ ಹೆಲಿಕ್ಯಾಪ್ಟರ್ ಅಲ್ಲಿ ಸುತ್ತಾಡಿ ಬಂದಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.

ದರ್ಶನ್ ಅವರು ಮನಸ್ಸು ಮಾಡಿದರೆ ಹೆಲಿಕ್ಯಾಪ್ಟರ್ ಕೂಡ ಅವರ ಮನೆ ಬಂದೆ ಬಂದಿಳಿದು ಬಿಡುತ್ತದೆ ಅಷ್ಟರ ಬಗ್ಗೆ ಇವರು ವಾಹನಗಳ ಬಗ್ಗೆ ಕ್ರೇಝ್ ಹೊಂದಿದ್ದಾರೆ. ವಾಹನಗಳು ಮಾತ್ರವಲ್ಲದೆ ಸಾಕು ಪ್ರಾಣಿಗಳ ಬಗ್ಗೆಯೂ ಕೂಡ ವಿಶೇಷ ಒಲವು ಹೊಂದಿರುವ ಇವರು ಮೈಸೂರಿನ ಬಳಿ ಒಂದು ಸ್ವಂತ ಫಾರಂ ಮಾಡಿ ಅಲ್ಲಿ ಅನೇಕ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಗುತ್ತಿದ್ದಾರೆ. ದರ್ಶನ್ ಅವರಿಗೆ ಕುದುರೆ ಹಸು ಸೇರಿದಂತೆ ಎಲ್ಲಾ ಪ್ರಾಣಿಗಳ ಮೇಲು ಬಹಳ ಪ್ರೀತಿ ಮತ್ತು ದಯೆ ಇದೆ.

Banaaras: ಬನಾರಸ್ ರೀತಿ 4-5 ಸಿನಿಮಾ ಬಂದ್ರೆ ಸಾಕು ನಮ್ಮ ದೇಶದಲ್ಲಿ ಹಿಂದು ಮುಸ್ಲಿಂ ಎಲ್ಲಾ ದ್ವೇಷ ಮರೆತು ಒಂದಗ್ಬಿಡ್ತಾರೆ ಅಂತಿದ್ದಾರೆ ನಿರ್ದೇಶಕ ಜಯತೀರ್ಥ.

 

ಸಿನಿಮಾ ತಯಾರಾಗಿ ರಿಲೀಸ್ ಆಗುವುದು ಎಂದರೆ ಅದು ಆ ಸಿನಿಮಾದ ನಾಯಕ ನಿರ್ದೇಶಕ ನಿರ್ಮಾಪಕ ಸೇರಿದಂತೆ ಇಡೀ ತಂಡಕ್ಕೆ ಅಗ್ನಿಪರೀಕ್ಷೆ. ಆದರೆ ಬಿಡುಗಡೆ ವೇಳೆ ಅಥವಾ ಚಿತ್ರ ಸೆಟ್ಟೇರುತ್ತಿದ್ದಂತೆ ನೆಗೆಟಿವ್ ವೈಬ್ರೇಶನ್ ಅಥವಾ ಕಮೆಂಟ್ ಬಂದು ಬಿಟ್ಟರೆ ಅದನ್ನು ಮುಂದುವರಿಸಿಕೊಂಡು ಹೋಗುವ ಧೈರ್ಯ ಹೆಚ್ಚಿನ ಜನರಲ್ಲಿ ಇರುವುದಿಲ್ಲ. ಹೀಗೆ ಕನ್ನಡದ ಚಿತ್ರ ಒಂದಕ್ಕೆ ಮೊದಲ ದಿನದಿಂದಲೂ ಬಾಯ್ಕಾಟ್ ಮಾಡುವಂತೆ ಒತ್ತಡ ಇತ್ತು.

ರಿಲೀಸ್ ವೇಳೆಯಲ್ಲೂ ಸಿನಿಮಾ ನೋಡುವುದೇ ಇಲ್ಲ ಎಂದು ಹಲವಾರು ಜನರು ವಿರೋಧಿಸಿದ್ದರು. ಇದು ಬೇರಾವ ಸಿನಿಮಾ ಅಲ್ಲ ಅದ್ಬುತ ಪ್ರೇಮ ಕಾವ್ಯದ ಮೂಲಕ ಕನ್ನಡದಲ್ಲಿ ಬಹಳ ದಿನಗಳ ನಂತರ ಟೈಮ್ ಟ್ರಾವೆಲಿಂಗ್ ಕಥೆಯನ್ನು ಕಟ್ಟಿಕೊಟ್ಟಿರುವ ಬನಾರಸ್ ಎನ್ನುವ ಚಿತ್ರ. ಈ ಚಿತ್ರಕ್ಕೆ ಶಾಸಕ ಜಮೀರ್ ಅಹ್ಮದ್ ಅವರ ಪುತ್ರ ಝೈಂದ್ ಖಾನ್ ನಾಯಕರಾಗಿದ್ದಾರೆ.

ಸಿನಿಮಾ ಬಗ್ಗೆ ಬೇರೇನು ಸಮಸ್ಯೆ ಇಲ್ಲದಿದ್ದರೂ ಝೈದ್ ಖಾನ್ ಅವರು ನಾಯಕ ಎನ್ನುವ ವಿಷಯವನ್ನು ಇಟ್ಟುಕೊಂಡು ರಾಜಕೀಯವಾಗಿ ಹಾಗೂ ಧರ್ಮದ ವಿಚಾರದಲ್ಲಿ ತಗಾದೆ ತೆಗೆದು ಚಿತ್ರ ತಡೆಯುವಂತೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದರು. ಇದೆಲ್ಲದ ನಡುವೆ ನವೆಂಬರ್ 4ರಂದು ಬಿಡುಗಡೆಯಾದ ಬನಾರಸ್ ಚಿತ್ರವು ಮೆಲ್ಲಮೆಲ್ಲಗೆ ಅರ್ಧದಷ್ಟು ಚಿತ್ರಗಳನ್ನು ಮಂದಿರಗಳನ್ನು ಪಡೆದುಕೊಳ್ಳುತ್ತಾ ಕಲೆಕ್ಷನ್ ವಿಚಾರದಲ್ಲೂ ಕೂಡ ಸಮಾಧಾನಕರ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

ಈಗ ಸಿನಿಮಾ ಎರಡನೇ ವಾರಕ್ಕೆ ಮುನ್ನುಗುತ್ತಿದ್ದೆ ಇನ್ನೂ ಸಹ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ನಟ ಝೈಂದ್ ಖಾನ್ ಮತ್ತು ನಿರ್ದೇಶಕ ಜಯತೀರ್ಥ ಅವರು ತಮ್ಮ ಹೆಗಲಿಗೆ ಹೊತ್ತುಕೊಂಡು ಸಿನಿಮಾವನ್ನು ಜವಾಬ್ದಾರಿತವಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಸಂದರ್ಶನಕ್ಕೆ ಸಿಕ್ಕ ಜಯತೀರ್ಥ ಅವರು ಸಿನಿಮಾ ಕುರಿತಂತೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಈವರೆಗೆ ಮಾಡಿರುವ ಕಲೆಕ್ಷನ್ ಮತ್ತು ಸಿನಿಮಾ ಬಗ್ಗೆ ಮೊದಲ ದಿನದಿಂದ ಬಂದ ಅಡೆತಡೆ ಹಾಗೂ ಈಗ ಸಿನಿಮಾ ಪಡೆದುಕೊಳ್ಳುವ ರೆಸ್ಪಾನ್ಸ್ ಬನಾರಸ್ ಸಿನಿಮಾದ ಕುರಿತು ತಮಗಾದ ಅದ್ಭುತ ಅನುಭವ ಎಲ್ಲದರ ಕುರಿತು ಹಂಚಿಕೊಂಡಿದ್ದಾರೆ. ಜಯತೀರ್ಥ ಅವರು ಕರ್ನಾಟಕದ ಪ್ರವಾಸ ಮಾಡುತ್ತಾ, ಸಾಧ್ಯವಾದಷ್ಟು ಎಲ್ಲಾ ಚಿತ್ರಮಂದಿರಗಳಿಗೂ ಭೇಟಿ ಕೊಡುತ್ತಿದ್ದಾರೆ.

ಈ ಸಮಯದಲ್ಲಿ ಶಿರಾ ಪಟ್ಟಣದ ಚಿತ್ರಮಂದಿರ ಒಂದಕ್ಕೆ ಹೋಗಿದ್ದಾಗ ರೈತರ ಗುಂಪೊಂದು ಅಲ್ಲಿ ಸಿನಿಮಾ ನೋಡಲು ಬಂದಿತ್ತಂತೆ. ಆಗ ಸಿನಿಮಾ ನೋಡಿದ ರೈತರು ಹೇಳಿದ್ದು ಇಷ್ಟೇ. ಈ ಚಿತ್ರದ ಕಥೆ ನಮಗೆಲ್ಲ ಬಹಳ ಇಷ್ಟ ಆಗಿದೆ ಇದೇ ರೀತಿ ನಾಲ್ಕೈದು ಸಿನಿಮಾ ಕನ್ನಡದಲ್ಲಿ ಬಂದುಬಿಟ್ಟರೆ ಹಿಂದೂ ಮುಸ್ಲಿಂ ಎಲ್ಲರೂ ಒಂದಾಗಿ ಬಿಡುತ್ತಾರೆ ಎಂದ ಮಾತು ಇನ್ನೂ ನನ್ನ ಮನಸಲ್ಲಿ ಹಾಗೆ ಕೂತಿದೆ ಎಂದು ತಮಗಾದ ಅನುಭವವನ್ನು ಜಯತೀರ್ಥ ಅವರು ಹೇಳಿಕೊಂಡಿದ್ದಾರೆ.

ಇನ್ನು ಸಿನಿಮಾ ವಿಚಾರ ಹೇಳುವುದಾದರೆ ಝೈಂದ್ ಖಾನ್ ಅವರ ಅಭಿನಯ ಮತ್ತು ಇಂಪ್ರೂವ್ಮೆಂಟ್ ನೋಡಿದರೆ, ಧರ್ಮದ ವಿಚಾರವಾಗಿ ಅವರನ್ನು ಭೇದ ಮಾಡುವುದು ಬಿಟ್ಟು ನಮ್ಮವರು ಎಂದು ಕಾಣಬೇಕು ಅವರೀಗ ನಮ್ಮವರೇ ಆಗಿದ್ದಾರೆ ಅನಿಸುತ್ತದೆ. ರಾಜಕೀಯ ವ್ಯಕ್ತಿಯ ಮಗನಾದ ಕಾರಣ ದೊಡ್ಡ ಬಜೆಟ್ ನ ಮಾಸ್ ಸಿನಿಮಾದ ಮೂಲಕ ಲಾಂಚ್ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.

ಆದರೆ ಇವರು ಕ್ಲಾಸ್ ಕಥೆಯನ್ನು ಎತ್ತಿಕೊಂಡು ಉತ್ತಮ ಚಿತ್ರಕಥೆಯೊಂದಿಗೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವುದು ಒಳ್ಳೆಯ ನಡಿಗೆ ಆಗಿದೆ. ಬನಾರಸ್ ಖಂಡಿತವಾಗಿಯೂ ಕನ್ನಡಿಗರಿಗೆ ನಿರಾಸೆ ಉಂಟುಮಾಡದ ಸಿನಿಮಾವಾಗಿದೆ. ಹೆಚ್ಚಿನ ಮಂದಿ ಚಿತ್ರಮಂದಿರದೆಡೆ ಧಾವಿಸಲಿ ಸಿನಿಮಾ ತಂಡಕ್ಕೆ ಶುಭವಾಗಲಿ ಎಂದು ಹಾರೈಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

Dhruva Sarja: ಮುದ್ದು ಮಗಳಿಗೆ ನಾಮಕರಣ ಮಾಡುವ ಸಂಭ್ರಮದಲ್ಲಿ ಓಡಾಡುತ್ತಿರುವ ಧ್ರುವ ಸರ್ಜಾ, ಮಗುವಿಗೆ ಯಾವ ಹೆಸರಿಡುತ್ತಿದ್ದಾರೆ ಗೊತ್ತ.?

 

ಸರ್ಜಾ ಕುಟುಂಬವು ಕಳೆದ ಕೆಲವು ದಿನಗಳಿಂದ ತಮ್ಮ ಕುಟುಂಬದಲ್ಲಿ ನಡೆದ ಕಹಿ ಘಟನೆಗಳಿಂದ ಕುಗ್ಗಿ ಹೋಗಿತ್ತು. ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಕುಟುಂಬ ದೊಡ್ಡ ಆ.ಘಾ.ತ.ಕ್ಕೆ ಒಳಗಾಗಿತ್ತು, ಇದಾದ ಬಳಿಕ ಅರ್ಜುನ್ ಸರ್ಜಾ ಅವರು ಮಾತೃ ವಿಯೋಗವನ್ನು ಕೂಡ ಅನುಭವಿಸ ಬೇಕಾಯಿತು. ಇದೀಗ ಎಲ್ಲಾ ಸೂತಕಗಳ ಛಾಯೆಯಿಂದ ನೋ.ವಿನಿಂದ ನ.ರ.ಳಿ ಹೋಗಿದ್ದ ಕುಟುಂಬದಲ್ಲಿ ಸಣ್ಣ ಭರವಸೆಯ ನಗುವೊಂದು ಹೊರಹೊಮ್ಮಿದೆ.

ಧ್ರುವ ಸರ್ಜಾ ಮತ್ತು ಪ್ರೇರಣ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಮನೆಯಲ್ಲಿ ಸಂತಸದ ವಾತಾವರಣವನ್ನು ನಿರ್ಮಿಸಿದ್ದಾರೆ. ಈಗಾಗಲೇ ಮಗುವಿನ ವಿಚಾರದಲ್ಲಿ ಧ್ರುವ ದಂಪತಿಗೆ ಬಹಳ ನೋವಾಗಿತ್ತು. ಪ್ರೇರಣಾ ಅವರು ತಮ್ಮ ಎರಡು ಮಗುವನ್ನು ಹೊಟ್ಟೆಯಲ್ಲೇ ಕಳೆದು ಕೊಂಡಿದ್ದರು. ಹಾಗಾಗಿ ಮಗುವಿನ ಬಗ್ಗೆ ಕೂಡ ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದ ಪ್ರೇರಣಾಗೆ ದೈವಾನುಗ್ರಹದಿಂದ ಹೆಣ್ಣು ಮಗುವಿಗೆ ತಾಯಿಯಾಗುವ ಭಾಗ್ಯ ಲಭಿಸಿದೆ.

ಈ ಹಿಂದೆ ತನ್ನ ಮಗುವಿಗೆ ಏನು ಆಗದಂತೆ ಎಲ್ಲವೂ ಸಲೀಸಾಗಿ ಜರುಗಲಿ ಎಂದು ಪೂಜೆ ಒಂದನ್ನು ಕೂಡ ಧ್ರುವ ದಂಪತಿ ಮಾಡಿಸಿದ್ದರು. ಇದಾದ ಬಳಿಕ ಅದ್ದೂರಿಯಾಗಿ ಇವರ ಸೀಮಂತ ಕಾರ್ಯಕ್ರಮ ಕೂಡ ಜರುಗಿತ್ತು. ಇಡೀ ಚಿತ್ರರಂಗದ ಎಲ್ಲಾ ಕಲಾವಿದರು ಕೂಡ ಬಂದು ಪ್ರೇರಣ ಅವರಿಗೆ ಹರಸಿ ಹಾರೈಸಿ ಹೋಗಿದ್ದರು.

ಮತ್ತು ಅಕ್ಟೋಬರ್ ಎರಡನೇ ತಾರೀಖಿನಂದು ಮನೆಗೆ ಮಹಾಲಕ್ಷ್ಮಿ ಆಗಮನ ಕೂಡ ಆಯಿತು. ಇದೀಗ ಧ್ರುವ ಸರ್ಜಾ ಅವರು ತಂದೆ ಆಗಿರುವ ಸಂತಸವನ್ನು ಎಂಜಾಯ್ ಮಾಡುತ್ತಿದ್ದಾರೆ ಸದ್ಯಕ್ಕೆ ತಮ್ಮ ಸಿನಿಮಾಗಳಲ್ಲಿ ಪ್ರಾಜೆಕ್ಟ್ಗಳಲ್ಲಿ ಬಿಝಿ ಕೂಡ ಕುಟುಂಬಕ್ಕಾಗಿ ಸಮಯ ಮೀಸಲಿಡುತ್ತಿರುವ ಇವರು ಮಗಳಿಗೆ ನಾಮಕರಣ ಮಾಡುವ ಯೋಜನೆಯಲ್ಲಿದ್ದಾರೆ.

ಸರ್ಜಾ ಕುಟುಂಬದಿಂದ ಬಂದ ಮಾಹಿತಿಗಳ ಪ್ರಕಾರ ಮುಂದಿನ ತಿಂಗಳಿನಲ್ಲೇ ಧ್ರುವ ದಂಪತಿಯ ಮುದ್ದಾದ ಹೆಣ್ಣು ಮಗುವಿನ ನಾಮಕರಣ ಶಾಸ್ತ್ರವು ಅದ್ದೂರಿಯಾಗಿ ನಡೆಯಲಿದ್ದು ಈ ಮಗುವಿಗೆ ಎ ಅಥವಾ ಅ ಅಕ್ಷರದಿಂದ ಹೆಸರು ಇಡಬೇಕು ಎಂದು ದಂಪತಿ ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಗಳು ಕೂಡ ಸಿಗುತ್ತಿವೆ. ಧ್ರುವಗೆ ತಂದೆ ಆಗಿರುವುದು ಎಷ್ಟು ಖುಷಿ ಇದೆ ಎಂದರೆ ತಮ್ಮ ಮಡದಿಗೆ ಹೆರಿಗೆ ಆದ ತಕ್ಷಣ ಸಂದರ್ಶನ ಮಾಡಲು ಬಂದ ಮಾಧ್ಯಮದವರ ಎದುರಿಗೆ ಅವರ ಕೊಟ್ಟ ಉತ್ತರವೇ ಅವರ ಮನಸ್ಸಿನ ಸಂತಸ ಮತ್ತು ನೋವು ಎರಡನ್ನು ತಿಳಿಸುತ್ತಿತ್ತು.

ಅವರೇ ಹೇಳಿಕೊಂಡ ಪ್ರಕಾರ ಈಗಾಗಲೇ ನಾವು ಮಗುವಿನ ವಿಷಯದಲ್ಲಿ ಬಹಳ ನೋಂದಿದ್ದೆವು. ಆದರೆ ಯಾರು ಕೂಡ ಈ ರೀತಿ ಆದಾಗ ಹೋಪ್ ಕಳೆದುಕೊಳ್ಳಬೇಡಿ ಖಂಡಿತ ಎಲ್ಲರಿಗೂ ಒಳ್ಳೆಯದಾಗುತ್ತದೆ ಎನ್ನುವ ಭರವಸೆಯ ನುಡಿಯನ್ನು ತಮ್ಮಂತೆ ನೊಂದವರಿಗೂ ಸಹ ನುಡಿದಿದ್ದರು. ಧ್ರುವ ಸರ್ಜಾ ಅವರು ಸಿನಿಮಾಗಳಲ್ಲಿ ಎಷ್ಟೇ ಮಾಸ್ ಆಗಿ ಕಾಣಿಸಿಕೊಂಡರೂ ಕೂಡ ವೈಯಕ್ತಿಕವಾಗಿ ಬಹಳ ಸಾಫ್ಟ್ ಹೃದಯ ಹೊಂದಿರುವ ಮನುಷ್ಯ ಎನ್ನುವುದು ಎಲ್ಲರಿಗೂ ಗೊತ್ತಿದೆ.

ಅವರು ಭಾವನಾತ್ಮಕವಾಗಿ ತಮ್ಮ ಹತ್ತಿರದವರ ಜೊತೆ ಬಹಳ ಅನ್ಯೋನ್ಯ ಸಂಬಂಧವನ್ನು ಹೊಂದಿರುತ್ತಾರೆ. ಈಗಾಗಲೇ ಅವರ ಅಣ್ಣನ ಅಗಲಿಕೆಯು ಅವರನ್ನು ಅರ್ಧ ಕುಗ್ಗಿಸಿದೆ. ಅಣ್ಣನ ಮಗ ರಾಯನ್ ಸರ್ಜಾ ಆಗಮದ ನಂತರ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡಿದ್ದರು. ಈಗ ಮುದ್ದು ಮಗುವಿನ ಮುಖ ನೋಡಿ ಆ ನೋವನ್ನು ಅರಗಿಸಿಕೊಳ್ಳಲಿ ಎಂದು ಬಯಸೋಣ. ಈ ವಿಚಾರ ಇಷ್ಟ ಆಗಿದ್ರೆ ತಪ್ಪದೆ ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸತ್ಯ ಧಾರವಾಹಿ ನಟ ಕಾರ್ತಿಕ್ ಅಲಿಯಾಸ್ ಸಾಗರ್ ಬಿಳಿಗೌಡ, ಮೊದಲ ಬಾರಿಗೆ ತಾವು ಮದುವೆಯಾಗುವ ಹುಡುಗಿ ಫೋಟೋ ರಿವೀಲ್ ಮಾಡಿದ್ದಾರೆ.

ಸಾಗರ್ ಬಿಳಿ ಗೌಡ ಕನ್ನಡದ ಕಿರುತೆರೆಯ ಫೇಮಸ್ ಫೇಸ್, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಎನ್ನುವ ಧಾರಾವಾಹಿಯಲ್ಲಿ ಕಾರ್ತಿಕ್ ಎನ್ನುವ ಪಾತ್ರ ಮಾಡುತ್ತಿರುವ ಇವರ ನಿಜ ನಾಮಧೇಯ ಸಾಗರ್ ಬಿಳಿ ಗೌಡ ಎಂದು ಇದಕ್ಕೂ ಮುನ್ನ ಹಲವು ಸೀರಿಯಲಲ್ಲಿ ನಟಿಸಿದ್ದರೂ ಕಿನ್ನರಿ ಎನ್ನುವ ಧಾರವಾಹಿ ಮತ್ತು ಸತ್ಯ ಧಾರವಾಹಿ ಮೂಲಕ ಇವರು ಹೆಚ್ಚು ಗುರುತಿಸಿಕೊಂಡರು.

ಕಿನ್ನರಿ ಧಾರಾವಾಹಿಯಲ್ಲಿ 2ನೇ ನಾಯಕನಾಗಿದ್ದರ ಇವರು ಸತ್ಯ ಧಾರವಾಹಿ ಮೂಲಕ ಸ್ವತಂತ್ರ ನಾಯಕನಾಗಿ ಕಾಣಿಸಿಕೊಂಡರು. ಇವರು ಸದ್ಯಕ್ಕೆ ಕನ್ನಡ ಕಿರುತೆರೆ ಪ್ರೇಕ್ಷಕರ ಪ್ರೀತಿಯ ಅಮೂಲ್ ಬೇಬಿ. ಅಮೂಲ್ ಬೇಬಿ ನಿಕ್ ನೇಮ್ ಜೊತೆಗೆ ಮುದ್ದು ಮುದ್ದಾಗಿ ಪೆದ್ದು ತನದ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿರುವ ಇವರು ಇದೀಗ ತಮ್ಮ ಜೀವನದ ಬಹುದೊಡ್ಡ ಅಧ್ಯಾಯವನ್ನು ಬರೆಯುತ್ತಿದ್ದಾರೆ.

ವಿವಾಹ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗ ಆಗಿದ್ದು, ಜೀವನದ ಬಹುದೊಡ್ಡ ಪಾಲು ವಿವಾಹ ಜೀವನದ ಆಗಿರುತ್ತದೆ. ಹೀಗಾಗಿ ಬಹಳ ಸಮಯ ತೆಗೆದು ಕೊಂಡು ತಮ್ಮ ಸರಿ ಹೊಂದುವ ಜೋಡಿಯ ಕೈ ಹಿಡಿಯುವ ಸಲುವಾಗಿ ಎಲ್ಲರೂ ಕಾಯುತ್ತಾರೆ. ಆದರೆ ಸಾಗರ್ ಅವರ ಪಾಲಿಕೆ ಬಹುಬೇಗ ಈ ಅದೃಷ್ಟ ಒಲಿದಿದೆ. ಇನ್ನೂ ಎಳೆ ವಯಸಿನ ಹುಡುಗನಂತಿರುವ ಇವರಿಗೆ ಈಗಾಗಲೇ ಕಂಕಣ ಭಾಗ್ಯ ಕೂಡಿ ಬಂದಿದೆ.

ಅದು ಕೂಡ ತನ್ನ ವೃತ್ತಿಗೆ ಸರಿಹೊಂದುವ ಸಂಗಾತಿಯ ಜೊತೆ. ಸಿರಿ ರಾಜು ಎನ್ನುವ ಕಿರುತೆರೆ ನಟಿ ಜೊತೆ ಸಾಗರ್ ಗೌಡ ಅವರು ಸದ್ದಿಲ್ಲದ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಸಿರಿ ರಾಜು ಅವರು ಕೂಡ 2018ರಲ್ಲಿ ತೆರೆಕಂಡ ರಾಘವಾಂಕ ಪ್ರಭು ಅವರ ನಿರ್ದೇಶನದ ಇದಂ ಶ್ರೀಮಂತರಾಗಬೇಕು ಜೀವನಂ ಎನ್ನುವ ಸಿನಿಮಾ ಮೂಲಕ ಹೆಸರು ಮಾಡಿದ್ದರು.

ಇದಾದ ಬಳಿಕ ಅನೇಕ ಕನ್ನಡ ಧಾರವಾಹಿ ಕೂಡ ಭಾಗವಹಿಸಿದ್ದ ಇವರು ಚಂದನವನದ ಬಣ್ಣದ ಲೋಕದಲ್ಲಿ ಮಿನುಗಲು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಇದೇ ಸಮಯಕ್ಕೆ ಸಾಗರ್ ಅವರ ಭೇಟಿ ಆಗಿದ್ದು ಇವರಿಬ್ಬರ ಸಂಬಂಧದ ಬಗ್ಗೆ ಇನ್ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಮಾಡಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ.

ಸಿರಿ ರಾಜು ಅವರ ಇನ್ಸ್ಟಾಗ್ರಾಂ ಖಾತೆಯಿಂದ ಅವರಿಬ್ಬರ ಎಂಗೇಜ್ಮೆಂಟ್ ಮತ್ತು ಇಬ್ಬರ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳು ಶೇರ್ ಆಗುತ್ತಿದ್ದಂತೆ ಅವರ ಆತ್ಮೀಯರು ಹಾಗೂ ಅಭಿಮಾನಿಗಳು ಮತ್ತು ಸ್ನೇಹಿತರು ಈ ಜೋಡಿಗೆ ಶುಭ ಹಾರೈಸಿದ್ದಾರೆ. ತಮ್ಮ ಇನಿಯನ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿರುವ ಸಿರಿ ರಾಜು ಅವರು ಅದಕ್ಕೆ ಸವಿ ಬರಹ ಕೂಡ ಬರೆದಿದ್ದಾರೆ.

ವಿಧಿ ಅದರ ಆಟವನ್ನು ತನ್ನ ಪಾಡಿಗೆ ತಾನು ನಡೆಸುತ್ತಿರುತ್ತದೆ ಈ ವಿಧಿಯಾಟದಲ್ಲಿ ನಾನು ಸಾಗರ್ ಎನ್ನುವ ಅದ್ಭುತ ವ್ಯಕ್ತಿಯನ್ನು ಪರಿಚಯವಾಗಿ ಅದು ಮದುವೆಯಾಗುವ ಮೂಲಕ ನಾವಿಬ್ಬರು ಒಂದಾಗುವಂತೆ ಆಗಿದೆ ಎಂದು ಬರೆದು ಕೊಂಡಿದ್ದಾರೆ. ಇದರೊಂದಿಗೆ ಅವರು ಹಂಚಿಕೊಂಡಿರುವ ಸ್ವೀಟ್ಸ್ ಫೋಟೋಶೂಟ್ ಫೋಟೋಗಳು ಕೂಡ ಬಹಳ ಮುದ್ದಾಗಿದ್ದು ಶೇರ್ ಆದ ಕೆಲವೇ ಕ್ಷಣಗಳಲ್ಲಿ ಅತಿ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ಗಳನ್ನು ಪಡೆಯುತ್ತಿದೆ.

ನೋಡಿದ ಪ್ರತಿಯೊಬ್ಬರು ಕೂಡ ಈ ಮುದ್ದಾದ ಜೋಡಿಯನ್ನು ಹಾಡಿ ಹೊಗಳಿ ಹಾರೈಸುತ್ತಿದ್ದಾರೆ. ಈಗಷ್ಟೇ ತನ್ನ ವೃತ್ತಿ ಜೀವನದಲ್ಲಿ ಸತ್ಯ ಅಂತಹ ಪ್ರಾಜೆಕ್ಟ್ ಮೂಲಕ ಬೆಳೆಯುತ್ತಿರುವ ಸಾಗರ್ ಅವರಿಗೆ ಮತ್ತು ಸಿರಿ ಅವರಿಗೂ ಕೂಡ ವೈಯಕ್ತಿಕ ಜೀವನದ ಜೊತೆಗೆ ವೃತ್ತಿ ಜೀವನದಲ್ಲೂ ಶುಭವಾಗಲಿ ಎಂದು ಹರಸೋಣ.

ರವಿ ಬೆಳಗೆರೆ ಸಾ-ಯು-ವ ಮುನ್ನ ದರ್ಶನ್ ಬಗ್ಗೆ ಹೇಳಿದ್ದೇನು ಗೊತ್ತ‌.? ಎರಡು ವರ್ಷದ ಬಳಿಕ ಬಯಲಿಗೆ ಬಂತು ಸತ್ಯಾಂಶ ಈ ವಿಚಾರ ನೋಡಿ ಇಡೀ ಚಿತ್ರರಂಗವೇ ಶಾ-ಕ್

 

ನಮ್ಮಲ್ಲಿ ಹಿರಿಯರಾಗುತ್ತಿದ್ದಂತೆ ಅನುಭವ ಹೆಚ್ಚು, ಅವರು ಬದುಕನ್ನು ಹೆಚ್ಚು ನೋಡಿರುತ್ತಾರೆ, ಜನರನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವರ ವ್ಯಕ್ತಿತ್ವವನ್ನು ಗುರುತಿಸುತ್ತಾರೆ ಎಂದು ಹೇಳಿ ಹಿರಿಯರು ಯಾರೇ ಆದರೂ ಅವರ ಮಾತುಗಳಿಗೆ ಬೆಲೆ ಕೊಡುತ್ತೇವೆ. ಇನ್ನು ಅವರು ಪತ್ರಕರ್ತರು, ಸಾಹಿತಿಗಳು, ಬರಹಗಾರರು ಆದರಂತೂ ಅವರು ಬರೆದ ಬರಹಗಳನ್ನು ಅಕ್ಷರಶಃ ಸತ್ಯದಂತೆ ನಾವು ಕಾಣುತ್ತೇವೆ.

ಹೀಗೆ ತಮ್ಮದೇ ಆದ ವಿಭಿನ್ನ ಬರಹದ ಮೂಲಕ ಇದ್ದದ್ದನ್ನು ಇದ್ದ ಹಾಗೆ ಹೇಳಿ ಸತ್ಯಾಂಶ ಹೊರಹಾಕಿ ಬರೆಯುವ ಮೂಲಕ ಫೇಮಸ್ ಆದವರು ರವಿ ಬೆಳಗೆರೆ ಅವರು. ಇಂದು ಓ ಮಲ್ಲಿಗೆ ,ಹಾಯ್ ಬೆಂಗಳೂರು ಈ ಹೆಸರುಗಳನ್ನು ಕೇಳಿದ ತಕ್ಷಣವೇ ನೆನಪಾಗುವುದು ರವಿ ಬೆಳಗೆರೆ ಎನ್ನುವ ದಿಟ್ಟ ಬರಹಗಾರ. ಚೂರಿಗಿಂತ ಆಳವಾಗಿ ತನ್ನ ಲೇಖನಿಯಿಂದಲೇ ಇರಿದು ವ್ಯಕ್ತಿತ್ವವನ್ನು ಹೊರತಂದು ಸಮಾಜಕ್ಕೆ ಮುಖವಾಡ ಕಳಚಿಟ್ಟು ತೋರಿಸುತ್ತಿದ್ದವರು ರವಿ ಬೆಳಗೆರೆ.

ಇವರು ರಾಜಕಾರಣಿಗಳು, ಅಧಿಕಾರಿಗಳು, ಸಿನಿಮಾ ರಂಗದವರು ಹಾಗೆ ಯಾವ ಸೆಲೆಬ್ರಿಟಿಗಳನ್ನು ಕೂಡ ಬಿಟ್ಟಿಲ್ಲ. ಎಲ್ಲರ ಬಗ್ಗೆಯೂ ಕೂಡ ಮಾಹಿತಿ ಹೊಂದಿದ್ದ ಇವರು ಅವಕಾಶ ಸಿಕ್ಕಾಗಲಿಲ್ಲ ಎಲ್ಲರ ಬಗ್ಗೆ ಕೂಡ ಮಾತನಾಡಿ ಅವರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಫಿಲ್ಟರ್ ಇಲ್ಲದೆ ಕಕ್ಕಿ ಬಿಡುತ್ತಿದ್ದರು ಇಂದು ರವಿ ಬೆಳಗೆರೆ ಅವರು ಇಲ್ಲವಾಗಿ ಎರಡು ವರ್ಷ ಕಳೆದಿವೆ.

ಆದರೆ ಅವರ ಕೊನೆಯ ದಿನಗಳ ಸಂದರ್ಶನಗಳಲ್ಲಿ ಅಂದರೆ ಎರಡು ವರ್ಷದ ಹಿಂದಿನ ಸಂದರ್ಶನದಲ್ಲಿ ದರ್ಶನ್ ಬಗ್ಗೆ ಅವರು ಏನು ಹೇಳಿದ್ದರು ಎನ್ನುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದ್ದು ದಚ್ಚು ಅಭಿಮಾನಿಗಳೆಲ್ಲ ಬಹಳ ಕಾತುರದಿಂದ ರವಿ ಬೆಳಗೆರೆ ಏನು ಹೇಳಿದ್ದರು ಎನ್ನುವುದನ್ನು ಕೇಳುತ್ತಿದ್ದಾನೆ. ಹಿಂದೊಮ್ಮೆ ದುನಿಯಾ ವಿಜಯ್ ಅವರ ಸಿನಿಮಾ ಒಂದರ ವಿವಾದ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಕುಳಿತಿದ್ದ ಅಣಜಿ ನಾಗರಾಜ್, ರವಿ ಬೆಳಗೆರೆ ಮತ್ತು ದುನಿಯಾ ವಿಜಯ್ ಅವರ ನಡುವೆ ಮಾತಿಗೆ ಮಾತು ಬೆಳೆದಿತ್ತು.

ಆ ವಾಗ್ವಾದಕ್ಕೆ ದರ್ಶನ್ ಅವರ ಹೆಸರನ್ನು ಎಳೆ ತಂದ ತಕ್ಷಣ ದುನಿಯಾ ವಿಜಯ್ ದರ್ಶನ್ ಅವರಿಗೆ ಕರೆ ಮಾಡಿ ರವಿ ಬೆಳಗೆರೆ ಮೀಡಿಯಂ ಮುಂದೆ ಕೂತು ನೀನು ನಿನ್ನ ಹೆಂಡತಿಗೆ ಹೊಡೆದ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಹೇಳಿದಾಗ ದರ್ಶನ್ ಕೂಡ ಒಂದು ನಿಮಿಷ ಹಿಂದೆ ಮುಂದೆ ನೋಡದೆ ಅದಕ್ಕೆ ಸರಿಯಾಗಿ ಖಡಕ್ ಉತ್ತರ ಕೊಟ್ಟಿದ್ದರು.

ರವಿ ಬೆಳಗೆರೆ ಅವರು ಮೊದಲಿಂದ ದುನಿಯ ವಿಜಯ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ. ದರ್ಶನ್ ಅವರು ಹೆಂಡತಿಗೆ ಹೊಡೆದ ಸಮಯದಿಂದ ದರ್ಶನ್ ಕಡೆಗೂ ಅದೇ ಬಗೆಯ ಅಭಿಪ್ರಾಯವಿತ್ತು. ಆದರೆ ಕೊನೆಯಲ್ಲಿ ಅವರು ಹಾಡಿರುವ ಮಾತುಗಳು ಮಾತ್ರ ದರ್ಶನ್ ಅವರ ಪರವಾಗಿ ಇವೆ.

ಸಂದರ್ಶಕರು ಒಬ್ಬರು ಯಾವಾಗಲೂ ಯಾಕೆ ನೀವು ದರ್ಶನ್ ಅವರ ಹೆಸರನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತೀರಾ ಎಂದು ಪ್ರಶ್ನೆ ಕೇಳಿದಾಗ ದರ್ಶನ್ ಒಬ್ಬ ಹ್ಯಾಂಡ್ಸಮ್ ಬಾಯ್, ಚೆನ್ನಾಗಿ ಬೆಳೆಯುತ್ತಿರುವ ಹುಡುಗ. ಅವನಿಗೆ ಏಕಗ್ರತೆ ಸ್ವಲ್ಪ ಕಡಿಮೆ ಇದೆ, ಇನ್ನು ಸ್ವಲ್ಪ ಕಠಿಣ ಪರಿಶ್ರಮ ಪಟ್ಟರೆ ನಂಬರ್ ಒನ್ ಸ್ಥಾನದಲ್ಲಿ ಕಡೆಯವರೆಗೂ ಅವನೇ ಉಳಿದುಕೊಳ್ಳುತ್ತಾನೆ ಎಂದು ದರ್ಶನ್ ಬಗ್ಗೆ ಹೊಗಳಿದ್ದಾರೆ. ರವಿ ಬೆಳಗೆರೆ ಅವರ ಬಾಯಿಂದ ಈ ಮಾತು ಬಂದಿರುವುದು ಆಶ್ಚರ್ಯ ಆದರೂ ದರ್ಶನ್ ಅವರ ಬಗ್ಗೆ ಅವರು ಹೇಳಿರುವ ಈ ಮಾತುಗಳಂತೂ ಸುಳ್ಳಲ್ಲ.

ಈಗಾಗಲೇ ದರ್ಶನ್ ಅವರು ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಮಾಧ್ಯಮಗಳೇ ಅವರನ್ನು ಹೊರಗಿಟ್ಟರು ಅಭಿಮಾನಿಗಳೆಲ್ಲ ಸೇರಿ ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ ಅಷ್ಟರ ಮಟ್ಟಿಗೆನ ಪ್ರೀತಿಯನ್ನು ಕನ್ನಡದಲ್ಲಿ ಗಳಿಸಿರುವ ಇವರ ಕ್ರಾಂತಿ ಸಿನಿಮಾ ಜನವರಿಯಲ್ಲಿ ರಿಲೀಸ್ ಆಗುತ್ತಿದ್ದು ಕ್ರಾಂತಿ ತಂಡಕ್ಕೆ ಶುಭವಾಗಲಿ ಎಂದು ಹಾರೈಸೋಣ.