Home Blog Page 278

Nithya Menen: ಮದುವೆಗೂ ಮುನ್ನ ಗರ್ಭಿಣಿ ಆಗಿರುವ ನಟಿ ನಿತ್ಯಾ ಮೆನನ್ ಬೇಬಿ ಬಂಪ್ ಫೋಟೋಶೂಟ್ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗುತ್ತೆ.

 

ಈಗ ಸಿನಿಮಾ ಪ್ರಪಂಚದ ಟ್ರೆಂಡ್ ಬದಲಾಗಿದೆ ಸಿನಿಮಾದಲ್ಲಿ ನಾಯಕನೊಬ್ಬನ ಪಾತ್ರಕ್ಕೆ ಎಷ್ಟು ಅಭಿಮಾನಿಗಳ ಹುಟ್ಟಿಕೊಳ್ಳುತ್ತಾರೆ ಈಗ ನಾಯಕಿಯರು, ನಿರ್ದೇಶಕರು, ಗಾಯಕ-ಗಾಯಕಿಯರಿರಿಗೂ ಕೂಡ ಅವರ ಟ್ಯಾಲೆಂಟಿಗೆ ತಕ್ಕ ಹಾಗೆ ಮೆಚ್ಚಿ ಅಭಿಮಾನಿಗಳು ಆಗುವವರ ಪಟ್ಟಿ ಬೆಳೆಯುತ್ತಿದೆ. ಇಂತಹ ಅಭಿಮಾನಿಗಳು ತಮ್ಮ ಜೀವನದಷ್ಟೇ ಅವರ ಫೇವರೆಟ್ ಅಕ್ಟರ್ ಜೀವನದ ವಿಷಯಗಳನ್ನು ಬಹಳ ಹತ್ತಿರವಾಗಿ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ.

ಅವರ ಹುಟ್ಟುಹಬ್ಬ, ಅವರ ಕುಟುಂಬದ ವಿಚಾರ, ಅವರ ಮದುವೆ ಮತ್ತು ಮಕ್ಕಳ ವಿಷಯ ಎಲ್ಲದಕ್ಕೂ ವಿಶೇಷ ಆಸಕ್ತಿ ತೋರುತ್ತಾರೆ. ಅಭಿಮಾನಿಗಳ ಜೊತೆ ಏನೂ ವಿಷಯವನ್ನು ಹಂಚಿಕೊಳ್ಳದೆ ಶಾಕ್ ಆಗುವ ರೀತಿ ಮದುವೆಯದು ಅಥವಾ ಮಕ್ಕಳದು ಫೋಟೋ ತೆಗೆಸಿ ಹಾಕಿಬಿಟ್ಟರೆ ಇಂತಹ ಪಾಲವರ್ಸ್ ಮನಸ್ಸಿಗೆ ಎಷ್ಟು ಬೇಸರ ಆಗುವುದಿಲ್ಲ. ಅಂತಹ ಒಂದು ಕೆಲಸವನ್ನು ಮಾಡಿದ್ದಾರೆ ಭಾರತ ಚಲನಚಿತ್ರ ರಂಗದ ಹೆಸರಾಂತ ನಟಿ ಒಬ್ಬರು.

ಮೈನಾ ಎನ್ನುವ ಕನ್ನಡ ಚಿತ್ರದ ಮೂಲಕ ಕನ್ನಡದಲ್ಲಿ ಮುದ್ದುಮುಖದ ಚೆಲುವೆಯಾಗಿ ಗುರುತಿಸಿಕೊಂಡು ಕೋಟಿಗೊಬ್ಬ 2 ರಲ್ಲಿ ಸುದೀಪ್ ಅವರಿಗೆ ಜೊತೆಯಾದ ನಿತ್ಯ ಮೆನನ್ ಅವರು ಇಂತಹ ಒಂದು ಕೆಲಸವನ್ನು ಮಾಡಿದ್ದಾರೆ. ನಿತ್ಯ ಮೆನನ್ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಚಿತ್ರರಂಗದಲ್ಲೂ ಕೂಡ ಬಹಳ ಹೆಸರು ಮಾಡಿರುವ ನಟಿ ಮತ್ತು ಬಾಲಿವುಡ್ ಅಂಗಳದಲ್ಲೂ ಸಹ ಎರಡು ಸಿನಿಮಾಗಳನ್ನು ಮಾಡಿರುವ ಇವರು ಅಲ್ಲಿಯೂ ಕೂಡ ಚಿರಪಚಿತರು.

ಇಂತಹ ನಟಿ ಈಗ ಮದುವೆಯಾಗದೆ ತಾನು ಗರ್ಭಿಣಿ ಆಗಿರುವ ಫೋಟೋ ಶೂಟ್ ಮಾಡಿಸಿಕೊಂಡು ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆದರೆ ಇದನ್ನು ನೋಡಿದ ಮೊದಲ ಬಾರಿಗೆ ಅಭಿಮಾನಿಗಳು ಇದರಲ್ಲಿ ಏನೋ ಗಿಮಿಕ್ ಇರಬೇಕು ಎಂದು ಊಹೆ ಮಾಡಿದ್ದಾರೆ. ಯಾಕೆಂದರೆ ಈ ಹಿಂದೆ ಕೂಡ ನಟಿ ನಿತ್ಯ ಮೆನನ್ ಅವರ ಖಾತೆಯಲ್ಲಿ ಮತ್ತು ಪಾರ್ವತಿ ಮೆನನ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಮ್ಮೆಲೇ ಒಂದೇ ದಿನ ಅವರಿಬ್ಬರು ಪ್ರಗ್ನೆಂಟ್ ಆಗಿರುವ ಪ್ರೆಗ್ನೆನ್ಸಿ ಕಂಫಾರ್ಮ್ ಕಿಟ್ ಫೋಟೋ ಒಂದು ಅಪ್ಲೋಡ್ ಆಗಿತ್ತು.

ಅದೇ ದಿನ ಬಾಲಿವುಡ್ ನ ನಿರ್ದೇಶಕಿ ಒಬ್ಬರು ಮತ್ತು ಗಾಯಕಿ ಒಬ್ಬರೂ ಕೂಡ ಅದೇ ರೀತಿಯ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದರು. ಇದಕ್ಕೆಲ್ಲ ಏನೋ ನಂಟು ಉಂಟು ಹಾಗಾಗಿ ಎಲ್ಲರೂ ಕೂಡ ಈ ರೀತಿ ಮಾಡಿದ್ದಾರೆ, ಇದರಲ್ಲಿ ಬಹುತೇಕ ಕೆಲವರಿಗೆ ಮದುವೆ ಆಗಿಲ್ಲ ಎಂದು ಜನ ಅರಿತಿದ್ದರು. ಈಗ ಅದು ಬಹಿರಂಗವಾಗಿ ಘೋಷಣೆ ಆಗಿದೆ ಇದು ಸೋನಿ ಮ್ಯಾಕ್ಸ್ ಅಲ್ಲಿ ಬಿಡುಗಡೆ ಆಗಲಿರುವ ವಂಡರ್ ವುಮನ್ ಎನ್ನುವ ಸಿನಿಮಾಗೆ ಸಂಬಂಧ ಪಟ್ಟಿದ್ದಾಗಿದೆ.

ಈ ಸಿನಿಮಾ ಗರ್ಭಿಣಿ ಆಗಿರುವ ಮಹಿಳೆಯ ಭಾವನಾತ್ಮಕ ಸಂಘರ್ಷದ ಸಾರವನ್ನು ತಿಳಿಸುವ ಸಿನಿಮಾ ಆಗಿದ್ದು ಈಗಾಗಲೇ ಬಾಲಿವುಡ್ ಅಲ್ಲಿ ಅನೇಕ ಮಹಿಳಾ ಪ್ರಧಾನ ಚಿತ್ರಗಳು ಬಿಡುಗಡೆ ಆಗಿದ್ದು ಗೆದ್ದಿವೆ ಅದೇ ಸಾಲಿನಲ್ಲಿ ಗರ್ಭಿಣಿ ಮಹಿಳೆಯರ ಕಷ್ಟ ಸುಖವನ್ನು ಎಲ್ಲರಿಗೂ ಪರಿಚಯಿಸುವ ಪ್ರಯತ್ನ ಇದಾಗಿದೆ. ಈ ಚಿತ್ರದಲ್ಲಿ ಬೇರೆ ಬೇರೆ ಬ್ಯಾಗ್ರೌಂಡ್ ಹೊಂದಿರುವ ಏಳು ಗರ್ಭಿಣಿಯರು ಒಂದೇ ಸೂರಿನಲ್ಲಿ ಒಂದಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಸಿನಿಮಾದಲ್ಲಿ ನಿತ್ಯ ಮೆನನ್ ಮತ್ತು ಪಾರ್ವತಿ ಅವರು ಕೂಡ ಇರಲಿದ್ದು ನಿತ್ಯಾ ಮೆನನ್ ಈಗ ಹಂಚಿಕೊಂಡಿರುವ ಫೋಟೋಗಳು ಈ ಸಿನಿಮಾಗೆ ಸಂಬಂಧಪಟ್ಟ ಹಾಗೆ ಫೋಟೋಶೂಟ್ ಮಾಡಿಸಿದ್ದ ಫೋಟೋಗಳಾಗಿವೆ.

Urfi Javed: ಮೊಬೈಲ್ ಫೋನ್ ಮೂಲಕ ಖಾಸಗೀ ಅಂಗ ಮರೆ ಮಾಚಿದ ನಟಿ ಉರ್ಫಿ ಜಾವೇದ್, ಈಕೆ ಅವತಾರ ನೋಡಿ ಸುಸ್ತಾದ ಅಭಿಮಾನಿಗಳು.

 

ಉರ್ಫಿ ಜಾವೇದ್ ಈ ನಟಿಯನ್ನು ನಟಿ ಎನ್ನುವುದಕ್ಕಿಂತ ವಿವಾದಾತ್ಮಕ ನಟಿ ಅಥವಾ ಟೋಲಿಂಗ್ ನಟಿ ಎಂದು ಕರೆದರೆ ಆ ಹೆಸರು ಹೆಚ್ಚು ಹೊಂದುತ್ತದೆ. ಯಾಕೆಂದರೆ ಸದಾ ಕಾಲ ತನ್ನ ವಿಚಿತ್ರ ಗೆಟಪ್ ಗಳಿಂದ ವಿವಾದ ಮಾಡಿಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಚರ್ಚೆ ಆಗುವ ಮತ್ತು ಟ್ರೋಲಿಗೂ ಒಳಗಾಗುವ ಈ ನಟಿ ಅದೆಷ್ಟೇ ಬಾರಿ ಟ್ರೋಲ್ ಆದರೂ ತನ್ನ ಚಾಳಿಯನ್ನು ಮಾತ್ರ ಬಿಡುವುದಿಲ್ಲ.

ಈಕೆ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಫೋಟೋಗಳು ಹಾಗೂ ವಿಡಿಯೋಗಳನ್ನು ನೋಡಿದರೆ ಈಕೆಗೆ ಬಟ್ಟೆ ಧರಿಸುವುದು ಕಷ್ಟವೋ ಅಥವಾ ಭಾರವೋ ಎನಿಸುವ ರೀತಿ ಇರುತ್ತದೆ. ತುಂಡು ಉಡುಗೆಗಳನ್ನು ಹಾಕಿಕೊಂಡು ಅಥವಾ ಟಾಪ್ ಲೆಸ್ ಬಟ್ಟೆಗಳನ್ನು ಹಾಕಿಕೊಂಡು ಫೋಟೋಶೂಟ್ ಮಾಡಿಸಿ ಆ ಹಸಿಬಿಸಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹೈಕಳ ನಿದ್ದೆಗೆಡಿಸುವ ಈಕೆ ಈ ಬಾರಿ ಇನ್ನೂ ಮುಂದುವರಿದ ಹಂತ ತಲುಪಿದ್ದಾರೆ.

ಈಕೆ ಫೋಟೋ ಶೂಟಿನ ಹುಚ್ಚಿಗೆ, ಗೋಣಿ ಚೀಲವನ್ನು ಬಿಡದೆ ಕಾಸ್ಟ್ಚೂಮ್ ಮಾಡಿಸಿಕೊಂಡಿರುವ ಈಕೆ ಹೀಗೆ ಚಿತ್ರ ವಿಚಿತ್ರಗಳ ಫೋಟೋ ಶೂಟ್ ಇಂದಲೇ ಕುಖ್ಯಾತಿ ಆದವರು. ಕಾಸ್ಟ್ಯೂಮ್ ವಿಚಾರ ಮಾತ್ರವಲ್ಲದೆ ತನ್ನ ಖಾಸಗಿ ಅಂಗಾಗಳನ್ನು ಪ್ರದರ್ಶನ ಮಾಡಿ ಅದನ್ನೇ ಬಂಡವಾಳವಾಗಿಟ್ಟುಕೊಂಡು ಹೆಚ್ಚು ಲೈಕ್ಸ್ ಮತ್ತು ವಿವ್ಯೂ ಪಡೆದು ಸೆನ್ಸೇಷನ್ ಕ್ರಿಯೇಟ್ ಮಾಡುವ ಸೆಲೆಬ್ರಿಟಿ ಹಿಂದಿಯ ಬಿಗ್ ಬಾಸ್ ಮಾಜಿ ಸ್ಪರ್ಧೆ ಕೂಡ ಆಗಿರುವ ಈಕೆ ಹಾಕುವ ಬಟ್ಟೆ ಇಂದಲೇ ಹೆಚ್ಚು ಫೇಮಸ್.

ಈ ಹಿಂದೆ ಸಾಕಷ್ಟು ಬಾರಿ ಇದೇ ರೀತಿ ವಿಚಿತ್ರ ವಿಚಿತ್ರ ಫೋಟೋಶೂಟ್ ಗಳನ್ನು ಮಾಡಿಸಿಕೊಂಡು ಸುದ್ದಿಯಾಗಿ ಟ್ರೋಲಿಗೂ ಒಳಗಾಗಿದ್ದ ಇವರ ಹಳೆ ಫೋಟೋಶೂಟ್ಗಳನ್ನು ನೋಡಿದರೆ ಶಾಕ್ ಆಗುವುದು ಗ್ಯಾರಂಟಿ. ಟಾಪ್ ಲೆಸ್ ಬಟ್ಟೆ ತೊಟ್ಟು ಮುಂಭಾಗವನ್ನು ಬೇರೆಯವರ ಕೈಯಿಂದ ಮುಚ್ಚಿಸಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದ ಆ ಫೋಟೋಗಳು ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಅಲ್ಲದೆ ಇದೇ ರೀತಿ ಮತ್ತೊಂದು ಬಾರಿ ಮೇಲ್ಭಾಗದ ಬಟ್ಟೆ ಇಲ್ಲದೆ ಅಂಗಾತ ಮಲಗಿ ಸ್ಟಿಕರ್ಸ್ ಇಂದ ಎದೆ ಭಾಗ ಕವರ್ ಮಾಡಿದ್ದೆ ಈಕೆಯ ಅವತಾರಕ್ಕೆ ನೆಟ್ಟಿಗರು ಗರಂ ಆಗಿ ಉತ್ತರ ಕೊಟ್ಟಿದ್ದರು. ಯಾರು ಏನೇ ಅಂದರೂ ಕೂಡ ತಲೆಕೆಡಿಸಿಕೊಳ್ಳದೆ ಕೇರ್ ಮಾಡದೆ ಮತ್ತೆ ಮತ್ತೆ ಇದೇ ರೀತಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಮತ್ತು ಬಲವಾದ ಮಾಹಿತಿಗಳ ಪ್ರಕಾರ ಈಕೆ ಇಂತಹ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದರಿಂದ ಈಕೆಯ ಫಾಲೋವರ್ಸ್ ಕೂಡ ಹೆಚ್ಚಾಗಿದ್ದು ಆ ಮೂಲಕ ತಿಂಗಳಿಗೆ ಲಕ್ಷಗಟ್ಟಲೆ ವರ್ಷಕ್ಕೆ ಕೋಟಿಗಟ್ಟಲೆ ಹಣವನ್ನು ಗಳಿಸುವ ಈಕೆ ಈಗಾಗಲೇ ಕೋಟ್ಯಾಂತರ ಮೌಲ್ಯದ ಆಸ್ತಿಗೆ ಒಡತಿ ಆಗಿದ್ದಾರೆ.

ನೆನ್ನೆಯಿಂದ ಉರ್ಫಿ ಜಾವೇದ್ ಅವರ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದ್ದು, ಈ ಬಾರಿ ಕೂಡ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಮುಂಭಾಗದಲ್ಲಿ ಎರಡು ಫೋನ್ ಗಳನ್ನು ಎದೆ ಮೇಲೆ ನೇತು ಹಾಕಿಕೊಂಡು ಮುಚ್ಚಿಕೊಳ್ಳುವ ನಾಟಕವಾಡಿದ್ದಾರೆ. ಈಕೆ ಇದನ್ನು ಮಾರುದ್ದದ ಅಡಿ ಬರೆಯುವ ಮೂಲಕ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾಳೆ.

ಅವಳು ಬರೆದ ಬರಹದಲ್ಲಿ ಪ್ರಮುಖ ಅಂಶ ಹೀಗಿತ್ತು. ಸಭ್ಯತೆ ಹಾಗೂ ಅಶ್ಲೀಲತೆ ಎನ್ನುವುದು ಜನರಿಂದ ಜನರಿಗೆ ಬೇರೆ ಆಗಿರುತ್ತದೆ. ಕೆಲವರಿಗೆ ಬೋಲ್ಡ್ ಅಥವಾ ಅಶ್ಲೀಲತೆ ಎಂದ ತಕ್ಷಣ ಕೆಲವರಿಗೆ ಬಿಕಿನಿ ಎನಿಸುತ್ತದೆ ಮತ್ತು ಕೆಲವರಿಗೆ ಉರ್ಫಿ ಜಾವೇದ್. ಆದರೆ ನಾನು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ಅರ್ಥದಲ್ಲಿ ಬರೆದಿದ್ದಾರೆ. ಮತ್ತು ಫುಲ್ ಚಾರ್ಜೆಡ್ ಎಂದು ಕೂಡ ಈಕೆ ಹಾಕಿರುವುದು ಟ್ರೋಲಿಗರನ್ನು ಕೆಣಕುವಂತೆ ಮಾಡಿದೆ.

ಬಹು ನಿರೀಕ್ಷಿತ “ಸಿಂಧೂರ ಲಕ್ಷ್ಮಣ” ಸಿನಿಮಾದಲ್ಲಿ ಅಭಿನಯಿಸಬೇಕಿದ್ದ ದರ್ಶನ್ ಜಾಗಕ್ಕೆ ಡಾಲಿ ಧನಜಂಯ್ ಆಯ್ಕೆಯಾಗಿದ್ದಾರೆ ಕಾರಣವೇನು ಗೊತ್ತ.?

 

ದರ್ಶನ್ ಅವರ ರಾಬರ್ಟ್ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಸಿಂಧೂರ ಲಕ್ಷ್ಮಣ ಸಿನಿಮಾದ ಬಗ್ಗೆ ಮಾತುಕತೆ ಶುರು ಆಗಿತ್ತು. ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಅವರೇ ಸಿಂಧೂರ ಲಕ್ಷ್ಮಣ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು ಮತ್ತು ದರ್ಶನ್ ಅವರೇ ಈ ಸಿನಿಮಾದಲ್ಲಿ ನಾಯಕನಾಗಬೇಕು ಎಂದು ಕೂಡ ಅವರು ಆಸೆ ಪಟ್ಟಿದ್ದರು.

ಸುಧೀರ್ ಅವರ ಪುತ್ರ ತರುಣ್ ಸುಧೀರ್ ಅವರೇ ಸಿಂಧೂರ ಲಕ್ಷ್ಮಣ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎನ್ನುವ ಮಾತುಗಳು ಹರಿದಾಡಿದ್ದವು. ಆದರೆ ಕಳೆದ ವರ್ಷ ದರ್ಶನ್ ಮತ್ತು ಉಮಾಪತಿ ಮದುವೆ ಇದ್ದ ಸ್ನೇಹ ಬಿರುಕು ಬಿಟ್ಟಿದೆ. ಇವರಿಬ್ಬರು ಈಗ ಕಿತ್ತಾಕೊಂಡಿಕೊಂಡುವ ಕಾರಣ ಒಬ್ಬರಿಗೊಬ್ಬರು ಮುಖ ನೋಡಿದಷ್ಟು ದೂರವಾಗಿ ಹೋಗಿದ್ದಾರೆ ಹಾಗಾಗಿ ದರ್ಶನ್ ಈ ಚಿತ್ರದಲ್ಲಿ ಯಲ್ಲಿ ಇರುತ್ತಾರೋ ಇಲ್ಲವೋ ಎನ್ನುವ ಅನುಮಾನಗಳು ಎಲ್ಲರಿಗೂ ಇದೆ.

ಆದರೆ ನಿರ್ಮಾಪಕ ಉಮಾಪತಿ ಮಾತ್ರ ಸಿನಿಮಾ ಇಂದ ಹಿಂದೆ ಹೋಗುವ ಲಕ್ಷಣಗಳು ಕಾಣುತ್ತಿಲ್ಲ. ಬದಲಾಗಿ ಸಿನಿಮಾದ ನಾಯಕನನ್ನು ಬದಲಾಯಿಸಿದರೂ ಸಿನಿಮಾ ಮಾಡಿ ತೀರುವ ದೃಢ ನಿರ್ಧಾರದಲ್ಲಿದ್ದಾರೆ. ಹಾಗಾದರೆ ಸಿನಿಮಾದಲ್ಲಿ ಸಿಂಧೂರ ಲಕ್ಷ್ಮಣ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಡಾಲಿ ಧನಂಜಯ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ.

ಗಾಂಧಿನಗರದಲ್ಲಿ ಹರಿದಾಡುತ್ತಿರುವ ಗಾಳಿ ಸುದ್ದಿಗಳ ಪ್ರಕಾರ ಡಾಲಿ ಧನಂಜಯ ಅವರನ್ನೇ ಸಿಂಧೂರ ಲಕ್ಷ್ಮಣ ಪಾತ್ರದಲ್ಲಿ ಕಾಣಲು ಚಿತ್ರತಂಡ ನಿರ್ಧರಿಸಿದೆಯಂತೆ. ಆದರೆ ಈ ಬಗ್ಗೆ ಡಾಲಿ ಧನಂಜಯ್ ಆಗಲಿ ನಿರ್ಮಾಪಕ ಉಮಾಪತಿ ಆಗಲಿ ನಿರ್ದೇಶಕರಾದ ತರುಣ್ ಆಗಲಿ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ ಆದರೆ ಈ ಬಗ್ಗೆ ಇದೇ ನಿಜ ಎನ್ನುವ ಮಟ್ಟಿಗೆ ಸುದ್ದಿ ಹರಿದಾಡುತ್ತಿರುವುದಂತೂ ನಿಜ.

ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಪಾಲಿನ ಜನರಿಗೆ ಸಿಂಧೂರ ಲಕ್ಷ್ಮಣ ಎಂದರೆ ಒಂದು ಹೆಮ್ಮೆ. ಸ್ವತಂತ್ರ ಸೇನಾನಿ ಸಿಂಧೂರ ಲಕ್ಷ್ಮಣ ಅವರು ಬ್ರಿಟಿಷರಿಗೆ ಬೆವರಳಿಸಿದ ಒಬ್ಬ ದಂಡನಾಯಕ, ಬಡವರನ್ನು ಶೋಷಣೆ ಮಾಡುತ್ತಿದ್ದ ಬ್ರಿಟಿಷರ ಕಾಯ್ದೆಗಳ ವಿರುದ್ಧ ಬಂಡಾಯ ಎದ್ದು ಶ್ರೀಮಂತರ ದವಲತ್ತಿನ ಎದುರು ನಿಂತು ಹೋರಾಟ ಮಾಡಿದ ದಟ್ಟ ಧೈರ್ಯವಂತ.

ಸಿಂಧೂರ ಲಕ್ಷ್ಮಣನನ್ನು ಉತ್ತರ ಕರ್ನಾಟಕದ ಮಂದಿ ಬಹಳ ಗೌರವಿಸುತ್ತಾರೆ, ದೇವರ ಸಮಾನವಾಗಿ ಕಾಣುತ್ತಾರೆ. ಇವರ ಕಥೆ ಕುರಿತಾಗಿ ಸಾಕಷ್ಟು ನಾಟಕಗಳು ಕೂಡ ರಂಗಭೂಮಿ ಕಲಾವಿದರಿಂದ ಮೂಡಿಬಂದಿವೆ. ನಮ್ಮ ಕರ್ನಾಟಕದ ಹೆಮ್ಮೆಯ ಕಲಾವಿದ ದಿವಂಗತ ಸುಧೀರ್ ಅವರು ಕೂಡ ಸಿಂಧೂರ ಲಕ್ಷ್ಮಣ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು.

ಈಗಾಗಲೇ ಸಂಗೊಳ್ಳಿ ರಾಯಣ್ಣನಂತಹ ಪಾತ್ರ ಮಾಡಿ ಗೆದ್ದಿರುವ ದರ್ಶನ್ ಅವರು ಈ ಪಾತ್ರ ಮಾಡಿದರೆ ಚೆನ್ನಾಗಿ ಹೊಂದಿಕೆ ಆಗುತ್ತದೆ ಎನ್ನುವುದು ಎಲ್ಲರ ಅನಿಸಿಕೆ ಆಗಿತ್ತು. ಇದಕ್ಕೆ ದರ್ಶನವರು ಕೂಡ ಒಪ್ಪಿದರು, ನಂತರ ಆದ ಬೆಳವಣಿಗೆಗಳಿಂದ ಡಾಲಿ ಹೆಸರು ಕೇಳಿ ಬರುತ್ತಿದ್ದು ಡಾಲಿ ಸಹಾ ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಒಪ್ಪಿಕೊಂಡು ಬಿಜಿ ಆಗಿ ಹೋಗಿದ್ದಾರೆ.

ಇದೆಲ್ಲ ಮುಗಿದ ಬಳಿಕ ಲಕ್ಷ್ಮಣ ಚಿತ್ರ ಸೆಟ್ಟಿರುವ ಸಾಧ್ಯತೆ ಇದೆ ಇತ್ತ ನಿರ್ಮಾಪಕ ಉಮಾಪತಿ ಅವರು ಕೂಡ ಚುನಾವಣೆ ಅಲ್ಲಿ ನಿಲ್ಲುವ ಕಡೆ ಹೆಚ್ಚು ಆಸಕ್ತಿ ವಹಿಸುತ್ತಿದ್ದು ಇದೆಲ್ಲ ಮುಗಿದ ಬಳಿಕ ಅವರು ಸಹ ಈ ಬಗ್ಗೆ ಗಮನ ಹರಿಸಲಿದ್ದಾರೆ. ಉಗ್ರಂ ಮತ್ತು ಕೆಜಿಎಫ್ ಚಾಪ್ಟರ್ ಒನ್ ನಲ್ಲಿ ಕೆಲಸ ಮಾಡಿದ್ದ ಪುನೀತ್ ನಾಗವರ್ಮ ಅವರು ಕಥೆ ಕುರಿತು ಸಂಶೋಧನೆ ನಡೆಸುತ್ತಿದ್ದು ಅತ್ಯುತ್ತಮ ಸ್ಕ್ರೀನ್ ಪ್ಲೇ ರೆಡಿ ಮಾಡುತ್ತಿದ್ದಾರೆ. ಅಂದುಕೊಂಡಂತೆ ಎಲ್ಲವೂ ಆದರೆ ಮತ್ತೊಬ್ಬ ಸ್ವತಂತ್ರ ಸೇನಾನಿಯ ದೃಶ್ಯ ವೈಭವವನ್ನು ಸಿನಿಮಾ ಮಂದಿರದಲ್ಲಿ ನೋಡಿ ಕಣ್ತುಂಬಿಕೊಂಡು ಧನ್ಯರಾಗುವ ಭಾಗ್ಯ ಕನ್ನಡದ ಸಿನಿ ಪ್ರೇಕ್ಷಕರಿಗೆ ಸಿಗಲಿದೆ.

Jaggesh: ನನ್ನ ಮಗನ ಕಾರು ಅ.ಪ.ಘಾ.ತ.ಕ್ಕೆ “ಬುಧಭಕ್ತಿ” ಕಾರಣ, ನನ್ನ ತಮ್ಮ ಕೋಮಲ್ ಸಿನಿಮಾಗಳು ಸೋಲುವುದಕ್ಕೆ “ಕೇತುದಸೆ” ಕಾರಣ ಎಂದ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಅವರು ದೈವ ಭಕ್ತರು ಎಂಬ ವಿಚಾರ ತಿಳಿದೇ ಇದೆ ಇದರ ಜೊತೆಗೆ ಇವರು ಭವಿಷ್ಯ ರಾಶಿ ಹಾಗೂ ಜಾತಕವನ್ನು ಅಪಾರವಾಗಿ ನಂಬುತ್ತಾರೆ ಎಂಬುದಕ್ಕೆ ಇದೀಗ ಮತ್ತೊಂದು ಸಾಕ್ಷಿ ದೊರಕಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ವರ್ಷ ನಟ ಜಗ್ಗೇಶ್ ಅವರ ದ್ವಿತೀಯ ಪುತ್ರ ಯತಿರಾಜ್ ಅವರ ಕಾರು ಅ.ಪ.ಘಾ.ತ.ವಾ.ದ ವಿಚಾರ ತಿಳಿದೇ ಇದೆ. ಈ ಕಾರು ಎಷ್ಟರ ಮಟ್ಟಿಗೆ ಅ.ಪ.ಘಾ.ತ.ವಾ.ಗಿ.ತ್ತು ಅಂದರೆ ಈ ಕಾರನ್ನು ಮತ್ತೆ ರೆಡಿ ಮಾಡಲು ಕೂಡ ಸಾಧ್ಯವಾಗುವುದಿಲ್ಲ ಅಷ್ಟೊಂದು ಡ್ಯಾಮೇಜ್ ಆಗಿತ್ತು.

ವಿಚಿತ್ರ ಏನೆಂದರೆ ಇವರ ಪುತ್ರನಿಗೆ ಕಿಂಚಿತ್ತು ಕೂಡ ಗಾಯ ಆಗಿರಲಿಲ್ಲ ಮತ್ತು ಜಗ್ಗೇಶ್ ಪುತ್ರ ಈ ಸಮಯದಲ್ಲಿ ನಡೆದುಕೊಂಡಂತಹ ರೀತಿ ಬಹಳನೆ ವಿಚಿತ್ರವಾಗಿತ್ತು ಇವರು ನಡೆದುಕೊಂಡ ರೀತಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಈ ಸಮಯದಲ್ಲಿ ನಟ ಜಗ್ಗೇಶ್ ಅವರು ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ ಆದರೆ ಯತಿರಾಜ ಅವರಿಗೆ ನಿನಗೆ ಸಮಯ ಸರಿಯಾಗಿಲ್ಲ ಬುಧ ಭಕ್ತಿ ಇದೆ ಹಾಗಾಗಿ ನೀನು ತುಂಬಾ ಹುಷಾರಾಗಿ ಇರಬೇಕು ಎಂದು ಮುಂಚೆಯೇ ಎಚ್ಚರಿಕೆ ನೀಡಿದರಂತೆ.

ಈ ಕಾರಣಕ್ಕಾಗಿಯೇ ಕೊರೋನಾ ಟೈಮ್ ನಲ್ಲಿ ಲಾಕ್ ಡೌನ್ ಇದ್ದಾಗ ಕಾರಣ ಯತಿರಾಜ್ ಅವರು ಮನೆಯಿಂದ ಹೊರ ಹೋಗುವುದಕ್ಕೆ ಬಹಳ ಭಯ ಪಡುತ್ತಿದ್ದರಂತೆ. ಅನವಶ್ಯಕವಾಗಿ ಎಲ್ಲಿಗೂ ಕೂಡ ಹೋಗುತ್ತಿರಲಿಲ್ಲವಂತೆ ಆದರೆ ಅದೊಂದು ದಿನ ಮಾತ್ರ ತನ್ನ ಸ್ನೇಹಿತನಿಗೆ ಕರೆ ಮಾಡಿ ಬಿರಿಯಾನಿ ಮಾಡು ತಿನ್ನಬೇಕು ಅಂತ ಅನಿಸುತ್ತಿದೆ ಎಂದು ಹೇಳಿ ಕಾರ್ ನಿಂದ ಹೊರಟು ಫಾರ್ಮರ್ಸ್ ಕಡೆಗೆ ಹೋದರಂತೆ. ಬುಧ ಭಕ್ತಿ ಇರುವ ಕಾರಣ ಆತನ ಗ್ರಹ ಗತಿಗಳು ಸರಿಯಾಗಿ ಇಲ್ಲದೆ ಇರುವುದರಿಂದ ಕಾರು ಅ.ಪ.ಘಾ.ತ.ವಾ.ಗಿ.ದೆ ಎಂದು ಹೇಳಿದ್ದಾರೆ.

ನಿಜಕ್ಕೂ ಅವರು ಹೇಳಿದಂತಹ ಈ ಮಾತು ಇದೀಗ ಸಂಚಲನವನ್ನು ಮೂಡಿಸುತ್ತಿದೆ ಇದು ಒಂದು ಕಡೆಯಾದರೆ ಮತ್ತೊಂದು ಕಡೆ ನಟ ಜಗ್ಗೇಶ್ ಅವರ ತಮ್ಮ ಕೋಮಲ್ ಅವರ ಬಗ್ಗೆಯೂ ಕೂಡ ಭವಿಷ್ಯ ನುಡಿದಿದ್ದರಂತೆ. ಹೌದು ಕೋಮಲ್ ಅವರಿಗೆ ಕೇತು ಗ್ರಸ್ತ ಇರುವುದರಿಂದ ಆದ ಯಾವುದೇ ಸಿನಿಮಾ ಮಾಡಿದರು ಕೂಡ ಹಿಟ್ ಆಗುವುದಿಲ್ಲ ಇದರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂಬ ವಿಚಾರ ಜಗ್ಗೇಶ್ ಅವರಿಗೆ ಮೊದಲೇ ತಿಳಿದಿತ್ತಂತೆ.

ಈ ಕಾರಣಕ್ಕಾಗಿಯೇ ನಟ ಕೋಮಲ್ ಅವರಿಗೆ ನೀನು ಏಳು ವರ್ಷಗಳ ಕಾಲ ಸಿನಿಮಾದಲ್ಲಿ ನಟನೆ ಮಾಡಬೇಡ ಎಂದು ಬುದ್ಧಿವಾದ ಹೇಳಿದರಂತೆ. ಅಣ್ಣನ ಮಾತಿಗೆ ಕಟ್ಟು ಬಿದ್ದಂತಹ ಕೋಮಲ್ ಅವರು ಅವರ ಆಜ್ಞೆಯಂತೆ ಸಿನಿಮಾ ರಂಗದಿಂದ ಬರೋಬ್ಬರಿ ಏಳು ವರ್ಷಗಳ ಕಾಲ ದೂರ ಉಳಿದಿದ್ದರೂ. ಇದೀಗ ಕೋಮಲ್ ಅವರ ಕೇತು ಗ್ರಸ್ತ ಸಮಯ ಮುಗಿದಿದೆ ಹಾಗಾಗಿ ಇನ್ನು ಮುಂದೆ ಕೋಮಲ್ ಯಾವುದೇ ಸಿನಿಮಾ ಮಾಡಿದರು ಕೂಡ ಸೂಪರ್ ಹಿಟ್ ಆಗುತ್ತದೆ ಕೋಮಲನ್ನು ಯಾರಿಂದಲೂ ಕೂಡ ತಡೆದು ನಿಲ್ಲಿಸಲು ಸಾಧ್ಯವಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ‌.

ಇದಕ್ಕೆ ಪುಷ್ಟಿ ನೀಡಲು ಇದೀಗ ನಮೋ ಭೂತಾತ್ಮ ಭಾಗ 2 ಎಂಬ ಸಿನಿಮಾದ ಚಿತ್ರೀಕರಣದಲ್ಲಿ ಕೋಮಲ್ ಅವರು ಪಾಲ್ಗೊಂಡಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ನಟ ನಟಿಯರು ಕೂಡ ಹೇಗೆ ದೇವರನ್ನು ನಂಬುತ್ತಾರೋ ಅದೇ ರೀತಿ ಭವಿಷ್ಯ ಜಾತಕ ಹಾಗೂ ರಾಶಿ ಫಲಗಳನ್ನು ನಂಬುತ್ತಾರೆ ಎಂಬುದಕ್ಕೆ ಜಗ್ಗೇಶ್ ಅವರೇ ಇದೀಗ ನೈಜ ಉದಾರಣೆ ಅಂತ ಹೇಳಬಹುದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

Kiccha Sudeep: ಇಲ್ಲ ಅಂದಿದ್ರೆ ಇಂದು ಕನ್ನಡ ಚಿತ್ರರಂಗದಲ್ಲಿ ಈ ಸೆಲೆಬ್ರಿಟಿಗಳೇ ಇರುತ್ತಿರಲಿಲ್ಲ ಬದುಕು ಕಟ್ಟಿಕೊಟ್ಟ ಕಿಚ್ಚನ ಬಗ್ಗೆ ಈ ಸೆಲೆಬ್ರಿಟಿಗಳು ಹೇಳಿದ್ದೇನು ಗೊತ್ತ.?

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು ದಾನ ಧರ್ಮ ಮಾಡಿದರಲ್ಲೂ ಕೂಡ ಎತ್ತಿದ ಕೈ ಆದರೆ ಬಲಗೈನಲ್ಲಿ ಕೊಟ್ಟದ್ದು ಎಡಗೈಗೂ ಕೂಡ ತಿಳಿಯಬಾರದು ಎಂಬ ಗಾದೆ ಮಾತಿನ ಪ್ರಕಾರವೇ ಕಿಚ್ಚ ಸುದೀಪ್ ನಡೆದುಕೊಳ್ಳುತ್ತಾರೆ. ಇಲ್ಲಿಯವರೆಗೂ ಕಿಚ್ಚ ಸುದೀಪ್ ಅವರು ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಆದರೆ ತಾವು ಮಾಡಿದಂತಹ ಸಹಾಯವನ್ನು ಎಲ್ಲಿಯೂ ಕೂಡ ತೋರ್ಪಡಿಸಿಕೊಳ್ಳುವುದಿಲ್ಲ.

ಆದರೆ ಸಹಾಯ ಪಡೆದ ವ್ಯಕ್ತಿಗಳು ಇದೀಗ ಕಿಚ್ಚ ಸುದೀಪ್ ಅವರ ಬಗ್ಗೆ ಒಂದೊಂದೇ ವಿಚಾರವನ್ನು ರಿವೀಲ್ ಮಾಡಿದ್ದಾರೆ ಈ ವಿಚಾರ ಕೇಳಿದರೆ ನಿಜಕ್ಕೂ ಕೂಡ ಆಶ್ಚರ್ಯ ಅನ್ನಿಸುತ್ತದೆ. ಹೌದು, ಚಿತ್ರರಂಗ ಅಂದ ಮೇಲೆ ಅಲ್ಲಿ ಭೇದ ಭಾವ ಇರುತ್ತದೆ ಮೇಲು ಕೇಳು ಎಂಬ ಭಾವನೆಯ ಕೂಡ ಮೂಡುತ್ತದೆ. ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಎಂದಿಗೂ ಕೂಡ ಸಹಕಲಾವಿದರು ಮತ್ತು ಟೆಕ್ನಿಷಿಯನ್ ಗಳನ್ನು ಕೀಳು ಮಟ್ಟದಲ್ಲಿ ನೋಡಿಲ್ಲ.

ಅದರಲ್ಲಿಯೂ ಕೂಡ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂದು ಆತರೆಯುತ್ತಾರೆ ಇದೇ ಕಾರಣಕ್ಕಾಗಿ ಕೆಂಪೇಗೌಡ ಸಿನಿಮಾ ಖ್ಯಾತಿಯ ರವಿಶಂಕರ್ ಅವರಿಗೆ ಅವಕಾಶವನ್ನು ಕೊಟ್ಟು ಆರ್ಮುಗಂ ಎಂಬ ಪಾತ್ರದಲ್ಲಿ ಅಭಿನಯಿಸುವುದಕ್ಕೆ ಚಾನ್ಸ್ ನೀಡುತ್ತಾರೆ. ಈ ಸಿನಿಮಾದಿಂದ ಇವರಿಗೆ ಯಶಸ್ಸು ಕೀರ್ತಿ ದೊರೆಯುತ್ತದೆ ಇದೊಂದೇ ಒಂದು ಸಿನಿಮಾದಲ್ಲಿ ನಟನೆ ಮಾಡಿದ ನಂತರ ರವಿಶಂಕರ್ ಅವರ ಸಂಪೂರ್ಣ ಜೀವನವೇ ಬದಲಾಗುತ್ತದೆ.

ಸುಮಾರು ಒಂದುವರೆ ಸಾವಿರ ಸಿನಿಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದ ರವಿಶಂಕರ್ ಅವರಿಗೆ ತೆರೆ ಮೇಲೆ ನಟಿಸಲು ಎಲ್ಲಿಯೂ ಕೂಡ ಅವಕಾಶ ದೊರೆಯುವುದಿಲ್ಲ. ಆ ಸಮಯದಲ್ಲಿ ಕಿಚ್ಚ ಸುದೀಪ್ ತಮ್ಮ ಸಿನಿಮಾದಲ್ಲಿ ಅವಕಾಶ ನೀಡುತ್ತಾರೆ ಸದ್ಯಕ್ಕೆ ರವಿಶಂಕರ್ ಬಹು ಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅರ್ಜುನ್ ಜನ್ಯ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ಮ್ಯೂಸಿಕ್ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.

ಸಂಗೀತ ಮಾಂತ್ರಿಕ ಅಂತಾನೆ ಇವರನ್ನು ಕರೆಯುತ್ತಾರೆ ಆದರೆ ಅರ್ಜುನ್ ಜನ್ಯ ಅವಕಾಶಕ್ಕಾಗಿ ಗಾಂಧಿನಗರದ ಬೀದಿ ಬೀದಿಗಳಲ್ಲಿ ಅಲೆದಾಡುವಂತಹ ಸಂದರ್ಭದಲ್ಲಿ ಯಾರು ಕೂಡ ಇವರಿಗೆ ಅವಕಾಶ ನೀಡುವುದಿಲ್ಲ. ಆ ಸಮಯದಲ್ಲಿ ಕಿಚ್ಚ ಸುದೀಪ್ ಇವರನ್ನು ಗುರುತಿಸಿ ಅವರನ್ನು ಮನೆಗೆ ಕರೆಸಿ ಸಿನಿಮಾದಲ್ಲಿ ಹಾಡು ಕಂಪೋಸ್ ಮಾಡುವುದಕ್ಕೆ ಚಾನ್ಸ್ ನೀಡುತ್ತಾರೆ. ಅಂದು ಕಿಚ್ಚ ಸುದೀಪ್ ಕೊಟ್ಟ ಚಾನ್ಸ್ ಇಂದು ಅರ್ಜುನ್ ಜನ್ಯ ಅವರ ಭವಿಷ್ಯವನ್ನೇ ಬದಲಾಯಿಸಿದೆ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆ ಇರುವಂತಹ ಮ್ಯೂಸಿಕ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ.

ಮೂರನೆಯದಾಗಿ ಡಾನ್ಸ್ ಮಾಸ್ಟರ್ ಹರ್ಷ ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಾಶಿ ಎಂಬ ಸಿನಿಮಾದಲ್ಲಿ ಡ್ಯಾನ್ಸ್ ಮಾಸ್ಟರ್ ಹರ್ಷ ಅವರು ಸುದೀಪ್ ಅವರ ತಮ್ಮನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ಹರ್ಷ ಅವರು ಡಾನ್ಸ್ ಮಾಸ್ಟರ್ ಉತ್ತಮ ನೃತ್ಯಗಾರ ಆಗಿದ್ದರೂ ಕೂಡ ಇವರಿಗೆ ಎಲ್ಲಿಯೂ ಕೂಡ ಚಾನ್ಸ್ ದೊರೆಯುವುದಿಲ್ಲ ಆ ಸಮಯದಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕಿಚ್ಚ ಸುದೀಪ್ ಅವರು ಇವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಇಲ್ಲಿಂದ ಹರ್ಷ ಅವರು ಡಾನ್ಸ್ ಮಾಸ್ಟರ್ ಆಗಿ ಕೊರಿಯೋಗ್ರಾಫರ್ ಆಗಿ ಮತ್ತು ನಿರ್ದೇಶಕರಾಗಿಯೂ ಕೂಡ ಕನ್ನಡದಲ್ಲಿ ಈವರೆಗೂ ಒಳ್ಳೊಳ್ಳೆ ಸಿನಿಮಾವನ್ನು ನೀಡಿದ್ದಾರೆ. ಎಲ್ಲೇ ಹೋದರು ಕೂಡ ಹರ್ಷ ಮಾಸ್ಟರ್ ಮೊದಲು ಕಿಚ್ಚ ಸುದೀಪ್ ಅವರಿಗೆ ಸ್ಮರಿಸಿ ತದನಂತರ ಅಷ್ಟೇ ಅವರ ಮಾತನ್ನು ಪ್ರಾರಂಭಿಸುತ್ತಾರೆ. ಇನ್ನು ಕನ್ನಡದಲ್ಲಿ ಅದ್ಭುತ ಹಾಡುಗಳನ್ನು ಹೇಳಿರುವಂತಹ ವಿಜಯ್ ಪ್ರಕಾಶ್ ಅಂದರೆ ಎಲ್ಲರಿಗೂ ಕೂಡ ಅಚ್ಚು ಮೆಚ್ಚು.

ಆದರೆ ವಿಜಯ ಪ್ರಕಾಶ ಅವರಿಗೆ ಕೆಂಪೇಗೌಡ ಸಿನಿಮಾದಲ್ಲಿ ಹಾಡು ಹೇಳುವ ಮೂಲಕ ಮೊಟ್ಟಮೊದಲ ಬಾರಿಗೆ ಚಾನ್ಸ್ ಕೊಟ್ಟ ನಟ ಅಂದರೆ ಅದು ಕಿಚ್ಚ ಸುದೀಪ್ ಅಂತಾನೇ ಹೇಳಬಹುದು. ಹೀಗೆ ಒಬ್ಬರಲ್ಲ ಇಬ್ಬರಲ್ಲ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕಲಾವಿದರಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟು ಇಂದು ಅವರ ಜೀವನವನ್ನು ಹಸನಾಗಿರುವ ಏಕೈಕ ವ್ಯಕ್ತಿ ಅಂದರೆ ಅದು ಕಿಚ್ಚ ಸುದೀಪ್ ನಿಜಕ್ಕೂ ಕೂಡ ಇವರು ಮಾಡಿರುವ ಸಹಾಯವನ್ನು ಇಂದಿಗೂ ಈ ಸೆಲೆಬ್ರಿಟಿಗಳು ಸ್ಮರಿಸಿಕೊಳ್ಳುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

ಕುಡಿದ ಮತ್ತಲ್ಲಿ, ಪೋಲಿಸ್ ಗೆ ಅವಾಜ್ ಹಾಕಿ ನಡು ರಸ್ತೆಯಲ್ಲೆ ರಂಪಾಟ ಮಾಡಿದ ನಟಿ ಆಶಿಕಾ‌ ರಂಗನಾಥ್ ವೈರಲ್ ವಿಡಿಯೋ.

 

ಕನ್ನಡದ ನಟ ಹಾಗೂ ನಟಿಮಣಿಯರು ಹೇಗೆ ತಮ್ಮ ಸಿನಿಮಾಗಳ ಮೂಲಕ ದೇಶದಾದ್ಯಂತ ಹೆಸರು ಮಾಡುತ್ತಿದ್ದಾರೋ ಅದೇ ರೀತಿ ವಿವಾದಗಳಿಂದ ಕೂಡ ಗಳಿಸಿಕೊಂಡಿದ್ದ ಹೆಸರಿನ ಮೇಲೆ ಕಪ್ಪು ಚುಕ್ಕೆ ಬರೆಸಿಕೊಳ್ಳುತ್ತಿದ್ದಾರೆ. ಕೌಟುಂಬಿಕ ಕಲಹಗಳನ್ನು ಬೀದಿಗೆ ತಂದು ಆದಿ ಬೀದಿ ರಾಂಪಾಟ ಮಾಡಿಕೊಂಡು ಪೊಲೀಸ್ ಸ್ಟೇಷನ್ ಮೆಟ್ಟಿಲೇರುವುದು.

ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದು ಮಾಡಿಕೊಂಡು ಮೀಡಿಯಾ ಮುಂದೆ ಬರುವ ಹಾಗೆ ಮಾಡಿಕೊಳ್ಳುವುದು, ನಿರ್ದೇಶಕರೊಂದಿಗೆ ಜಗಳ, ಸಹ ಕಲಾವಿದರಾಗಳ ಜೊತೆಗೆ ಮನಸ್ತಾಪ, ನಿರ್ಮಾಪಕರಿಗೆ ಕೊಡುತ್ತಿರುವ ಕಾಟಗಳು ಹೀಗೆ ಹೆಸರು ಬಂದ ಬಳಿಕ ಅದನ್ನು ಉಳಿಸಿಕೊಂಡು ಹೋಗುವ ಬದಲು ಮಿತಿಮೀರಿದ ದುರ್ವರ್ತನೆಯಿಂದ ಗಳಿಸಿದ ಖ್ಯಾತಿಯನ್ನು ಮಣ್ಣು ಪಾಲು ಮಾಡಿಕೊಳ್ಳುತ್ತಿದ್ದಾರೆ.

ಒಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಕನ್ನಡದ ಸಿನಿಮಾಗಳ ಖ್ಯಾತಿ ಹೆಚ್ಚುತ್ತಿದ್ದರೆ ಈ ರೀತಿ ಗಲಾಟೆಗಳ ವಿಷಯದಿಂದ ಚಂದನವನದ ಹೆಸರು ಹಾಳಾಗುತ್ತಿರುವುದು ಬೇಸರ ಪಡುವ ರೀತಿ ಆಗಿದೆ. ಸ್ಟಾರ್ ನಟರುಗಳು ಕೂಡ ಈ ವಿವಾದ ಆಗುವ ಸಾಲಿನಲ್ಲಿ ಸೇರಿದ್ದಾರೆ. ದರ್ಶನ್ ಅಂತಹ ದೊಡ್ಡ ಕಲಾವಿದರು ಕೂಡ ಹೆಂಡತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಮತ್ತು ರೆಸ್ಟೋರೆಂಟ್ ಅಲ್ಲಿ ಕೆಲಸಗಾರರಿಗೆ ಹೊಡೆದು ಗಲಾಟೆ ಮಾಡಿಕೊಂಡು ಕುಡಿದ ಮತ್ತಿನಲ್ಲಿ ಅವಾಂತರ ಮಾಡಿಕೊಂಡರು ಎಂದು ಸುದ್ದಿ ಆಗುವಂತೆ ಮಾಡಿಕೊಂಡಿದ್ದಾರ.

ಒರಟ ಸಿನಿಮಾ ಖ್ಯಾತಿಯ ಪ್ರಶಾಂತ್ ಅವರು ಕೂಡ ಈ ಹಿಂದೆ ಕೌಟುಂಬಿಕ ಕಲಹದ ವಿಚಾರದಲ್ಲಿ ಸುದ್ದಿಯಾಗಿದ್ದರು. ನಟ ದುನಿಯಾ ವಿಜಯ್ ಅವರ ಸಂಸಾರದ ಕಥೆಯಂತೂ ಕನ್ನಡದ ಜನತೆಗೆ ಮೀಡಿಯಾದಲ್ಲಿ ನೋಡಿ ನೋಡಿ ಬೇಸತ್ತು ಹೋಗಿದ್ದಾರೆ. ರಾಂಬೊ ಸಿನಿಮಾ ಕಥೆಯ ನಾಯಕಿ ಮಾಧುರಿ ಅವರು ಸಹ ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಹೋಗಿ ಗಲಾಟೆ ಮಾಡಿದ್ದರು.

ಈ ಸಾಲು ಇಷ್ಟಕ್ಕೆ ನಿಲ್ಲುವುದಿಲ್ಲ. ಹೀಗೆ ಪಾರ್ಟಿಗಳಲ್ಲಿ ಕುಡಿದ ಮತ್ತಿನಲ್ಲಿ ಮಾಡಿಕೊಳ್ಳುವ ಅವಾಂತರಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಹಾಕಿ ಎಷ್ಟೋ ನಟ ನಟಿಯರು ತಲೆತಗ್ಗಿಸುವಂತೆ ಆಗಿದೆ. ಇನ್ನು ಕೆಲವರು ಕಲಾವಿದರು ಎನ್ನುವ ಗರ್ವದಿಂದ ಕುಡಿದ ಮತ್ತಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಾನ್ಸೆನ್ಸ್ ಕ್ರಿಯೇಟ್ ಮಾಡುವವರು ಇದ್ದಾರೆ. ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ಹಾಗೂ ಗಟ್ಟಿಮೇಳ ಧಾರಾವಾಹಿ ಇತರ ಕಲಾವಿದರಲ್ಲ ಸೇರಿ ಕೆಂಗೇರಿಯ ಹೋಟೆಲ್ ಒಂದರಲ್ಲಿ ಗಲಾಟೆ ಮಾಡಿ ಬಂದಿದ್ದರು.

ನಂತರ ವಿವರಣೆ ಕೊಟ್ಟರು ಸಹ ಅವರು ಮಾಡಿದ ಗಲಾಟೆ ಮುಚ್ಚಿ ಹೋಗುವುದಿಲ್ಲ. ಇದೇ ಮೊದಲಲ್ಲ ರಕ್ಷ್ ಅವರು ಈ ಹಿಂದೆ ಪುಟ್ಟಗೌರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸಮಯದಲ್ಲೂ ಕುಡಿದು ಕಾರು ಚಲಾವಣೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟು ನಂತರ ಪೊಲೀಸ್ ಕಸ್ಟಡಿಕೆ ಒಳಗಾಗಿದ್ದರು. ನಂತರ ಧಾರಾವಾಹಿ ನಿರ್ದೇಶಕರೇ ಬಿಡಿಸಿಕೊಂಡು ಬಂದಿದ್ದ ಸುದ್ದಿಯು ಕೂಡ ಮಾಧ್ಯಮದಲ್ಲಿ ಪ್ರಸಾರವಾಗಿತ್ತು.

ಈಗ ಮತ್ತೊಬ್ಬ ಕನ್ನಡದ ಫೇಮಸ್ ನಟಿ ಕೂಡ ಹೀಗೆ ಗಲಾಟೆ ಮಾಡಿದ್ದಾರೆ. ಅವರು ಬೇರಾರು ಅಲ್ಲ ಚುಟು ಚುಟು ಹಾಡು ಖ್ಯಾತಿಯ ಆಶಿಕಾ ರಂಗನಾಥ್ ಅವರು. ಆಶಿಕಾ ಈಗ ಕನ್ನಡದಲ್ಲಿ ಒಳ್ಳೊಳ್ಳೆ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರು ಕುಡಿದು ಎಲ್ಲರಿಗೂ ಬೈಯುತ್ತಾ ಕೆಟ್ಟದಾಗಿ ಸನ್ನೆ ಮಾಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ಕ್ಷಣವೇ ಅನಿಸುತ್ತದೆ ಇದು ಸಿನಿಮಾ ಶೂಟಿಂಗ್ ಇರಬಹುದು ಎಂದು. ಹಲವರ ಊಹೆ ಪ್ರಕಾರ ಇದು ರೆಮೋ ಸಿನಿಮಾದ ಶೂಟಿಂಗ್ ಅಲ್ಲಿ ಸಿನಿಮಾದ ಕಥೆಯ ಸನ್ನಿವೇಷಕ್ಕಾಗಿ ಅಭಿನಯ ಮಾಡಿರುವ ವಿಡಿಯೋ ಆಗಿದೆ.

ರಶ್ಮಿಕಾಳಂತೆ ರಿಷಬ್ ಕೂಡ ರಕ್ಷಿತ್ ಶೆಟ್ಟಿಗೆ ಮೋಸ ಮಾಡಿದ್ರಾ.? ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರ ನಡೆದ ರಿಷಬ್ ಶೆಟ್ಟಿ, ಬೇಸರ ವ್ಯಕ್ತ ಪಡಿಸಿದ ನಟ ರಕ್ಷಿತ್ ಶೆಟ್ಟಿ.!

 

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಇಬ್ಬರು ಕೂಡ ಆತ್ಮೀಯ ಸ್ನೇಹಿತರು ಸಿನಿಮಾವನ್ನು ಹೊರತು ಪಡಿಸಿ ವೈಯಕ್ತಿಕ ಜೀವನದಲ್ಲೂ ಕೂಡ ಇವರಿಬ್ಬರು ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಈ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಕಿರಿಕ್ ಪಾರ್ಟಿ ಸಿನಿಮಾದಿಂದ ಒಂದಾದ ಈ ಜೋಡಿ ಇಲ್ಲಿಯವರೆಗೂ ಕೂಡ ಒಟ್ಟಾಗಿ ಬಂದಿದೆ ಒಬ್ಬರ ಸಿನಿಮಾಗೆ ಮತ್ತೊಬ್ಬರು ಸಪೋರ್ಟ್ ಮಾಡುತ್ತಿದ್ದಾರೆ.

ಇನ್ನು ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಸಿನಿಮಾ ಎಲ್ಲೆಡೆ ವಿಜಯೋತ್ಸವವನ್ನು ಸಂಭ್ರಮಿಸುತ್ತಿರುವ ವಿಚಾರ ನಿಮಗೆ ತಿಳಿದೇ ಇದೆ ಕಾಂತರಾ ಸಿನಿಮಾದ ಮೂಲಕ ರಿಷಬ್ ಶೆಟ್ಟಿ ಅವರಿಗೆ ಇದ್ದಂತಹ ನೇಮ್ ಮತ್ತು ಫೇಮ್ ಹೆಚ್ಚಾಗಿದೆ. ಸದ್ಯಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದು ಒಂದರ ಮೇಲೆ ಮತ್ತೊಂದರಂತೆ ಸಿನಿಮಾ ಆಫರ್ ಬರುತ್ತಿದೆ.

ಈಗಾಗಲೇ ತೆಲುಗು ಸಿನಿಮಾದಲ್ಲಿ ನಟನೆ ಮಾಡುವುದಾಗಿ ಹೇಳಿಕೊಟ್ಟಿದ್ದಾರೆ ಬಾಲಿವುಡ್ ಸಿನಿಮಾಗಳಿಂದಲೂ ಕೂಡ ಆಫರ್ ಬರುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಭಾಷೆ ಗಿಂತ ಇದೀಗ ಪರಭಾಷೆಯಲ್ಲಿ ಹೆಚ್ಚು ಆಫರ್ ದೊರೆಯುತ್ತಿದೆ, ಇದು ಒಂದು ಕಡೆ ಖುಷಿಯ ವಿಚಾರವಾದರೆ ಮತ್ತೊಂದು ಕಡೆ ಎಲ್ಲೋ ನಮ್ಮ ಕನ್ನಡ ಭಾಷೆಯನ್ನು ಇವರು ಕೂಡ ಬಿಡಬಹುದು ಎಂಬ ಆತಂಕ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಏಕೆಂದರೆ ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಅಭಿನಯಿಸಲಿದ್ದಾರೆ ಎಂಬ ಪೋಸ್ಟರ್ ಒಂದನ್ನು ಸ್ವತಃ ರಕ್ಷಿತ್ ಶೆಟ್ಟಿ ಅವರ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಚ್ಚಿಕೊಂಡಿದ್ದರು. ಈ ಸಿನಿಮಾದಲ್ಲಿ ನಟ ದಿಗಂತ್ ಹಾಗೂ ಅಚ್ಯೂತ್ ಕುಮಾರ್ ಹಾಗೂ ರಿಷಬ್ ಶೆಟ್ಟಿ ಮೂವರು ಕೂಡ ಇದ್ದಾರೆ ಮೂವರು ಕೂಡ ಕಾರಿನ ಹಿಂಭಾಗದ ಸೀಟ್ ನಲ್ಲಿ ಕುಳಿತುಕೊಂಡಿರುವಂತಹ ಪೋಸ್ಟರ್ ಅನ್ನು ನಾವು ನೋಡಬಹುದು.

ದಿಗಂತ್ ಕೈನಲ್ಲಿ ರೋಸ್ ಹಿಡಿದು ಕುಳಿತುಕೊಂಡಿರುವ ಹಾಗೂ ರಿಷಬ್ ಶೆಟ್ಟಿ ಬೂದು ಗನ್ನಡಿ ಹಿಡಿದುಕೊಂಡು ಏನೋ ನೋಡುತ್ತಿದ್ದಾರೆ ಅತ್ತ ಕಡೆ ಅಚ್ಯೂತ್ ಕುಮಾರ್ ಕೈನಲ್ಲಿ ಎಳನೀರನ್ನು ಹಿಡಿದುಕೊಂಡು ಚಿಲ್ ಮಾಡುತ್ತಿರುವಂತಹ ವಿಭಿನ್ನ ರೀತಿಯ ಪೋಸ್ಟರನ್ನು ಬಿಡುಗಡೆ ಮಾಡಿ. ಪರಂವಾಹ್ ಸ್ಟುಡಿಯೋಸ್​ನ ಮುಂದಿನ ಪ್ರಾಜೆಕ್ಟ್, ಸಾಹಸ ಹಾಸ್ಯ ಚಿತ್ರ “ಬ್ಯಾಚುಲರ್ ಪಾರ್ಟಿ” ಅನ್ನು ಘೋಷಿಸಲು ಖುಷಿ ಪಡುತ್ತಿದ್ದೇವೆ.

ರಿಷಭ್ ಶೆಟ್ಟಿ, ದಿಗಂತ್, ಅಚ್ಚುತಣ್ಣ ತಮ್ಮ ನಿರೂಪಣೆಯೊಂದಿಗೆ ನಮ್ಮನ್ನು ಮೋಜಿನ ಸವಾರಿಗೆ ಕರೆದೊಯ್ಯಲು ಸಿದ್ಧರಾಗಿದ್ದಾರೆ. ಇದು ಸೆವೆನ್ ಆಡ್ಸ್ ಮತ್ತು ಪರಂವಾಹ್‌ನ ಭಾಗವಾಗಿ ನಿಮ್ಮೊಂದಿಗೆ ಸಂತೋಷದಾಯಕ ಪ್ರಯಾಣವಾಗಲಿದೆ. ನಿಮ್ಮ ಚೊಚ್ಚಲ ಪಂದ್ಯಕ್ಕೆ ಶುಭ ಹಾರೈಸುತ್ತೇನೆ. ಯೋಜನೆಯಲ್ಲಿರುವ ಇಡೀ ತಂಡಕ್ಕೆ ನನ್ನ ಶುಭಾಶಯಗಳು ಎಂದು ರಕ್ಷಿತ್ ಶೆಟ್ಟಿ ಶುಭ ಹಾರೈಸಿದ್ದರು.

ಈ ಪೋಸ್ಟರ್ ಲುಕ್ ನೋಡಿದಂತಹ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿ ಬರುವ ಎಲ್ಲಾ ಸಿನಿಮಾ ಕೂಡ ಸೂಪರ್ ಹಿಟ್ ಆಗುತ್ತದೆ. ಹಾಗಾಗಿ ಈ ಸಿನಿಮಾದಿಂದಲೂ ಕೂಡ ಒಂದಷ್ಟು ಮನರಂಜನೆ ಸಿಗುತ್ತದೆ ಅಂತ ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದರು ಆದರೆ ಇದ್ದಕ್ಕಿದ್ದ ಹಾಗೆ ಇದೀಗ ರಿಷಬ್ ಶೆಟ್ಟಿ ಅವರು ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರ ನಡೆದಿದ್ದಾರೆ.

ಇವರಿಬ್ಬರ ನಡುವೆ ಏನು ಮನಸ್ತಾಪ ಉಂಟಾಯಿತು ಎಂದು ತಿಳಿದಿಲ್ಲ ಒಂದು ಕಡೆ ಕಾಂತರಾ ಸಿನಿಮಾದ ಸಕ್ಸಸ್ ನಂತರ ರಿಷಬ್ ಬದಲಾಗಿದ್ದಾರೆ, ಹಾಗಾಗಿ ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರ ಬಂದು ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ವಿಚಾರದ ಬಗ್ಗೆ ರಕ್ಷಿತ್ ಶೆಟ್ಟಿ ಆಗಲಿ ಅಥವಾ ರಿಶಬ್ ಶೆಟ್ಟಿಯಾಗಲಿ ಎಲ್ಲಿಯೂ ಕೂಡ ಬಹಿರಂಗವಾಗಿ ಹೇಳಿಕೆ ನೀಡಿಲ್ಲ.

ಅಭಿಮಾನಿಗಳು ಮತ್ತು ಕೆಲವು ನೆಟ್ಟಗರು ಮಾತ್ರ ರಕ್ಷಿತ್ ಶೆಟ್ಟಿ ಅವರಿಗೆ ಮೊದಲಿನಿಂದಲೂ ಮೋಸವಾಗುತ್ತಿದೆ ಒಂದು ಕಡೆ ರಶ್ಮಿಕಾಳಿಂದ ಮೋಸವಾಗಿದೆ ಮತ್ತೊಂದು ಕಡೆ ಜೀವದ ಗೆಳೆಯ ರಿಷಬ್ ಶೆಟ್ಟಿ ಕೂಡ ಇದೀಗ ಅರ್ಧದಲ್ಲಿ ಕೈ ಬಿಟ್ಟಿರುವುದು ನಿಜಕ್ಕೂ ಕೂಡ ವಿಷಾದಕರ ವಿಚಾರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನದಲ್ಲಿ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರನ್ನು ಬಿಟ್ಟು ಮತ್ಯಾರು ನಟನೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೂ ಕೂಡ ರಕ್ಷಿತ್ ಗೆ ನಿಜಕ್ಕೂ ಕೂಡ ಅನ್ಯಾಯವಾಗಿದೆ ಎಂಬುದು ಕೆಲವು ಅಭಿಮಾನಿಗಳ ಅಭಿಪ್ರಾಯವಾಗಿದೆ.

ಸದ್ದಿಲ್ಲದೆ ಕಿರುತೆರೆ ನಟಿ ಸುಕೃತ ಕೈ ಹಿಡಿತಿರೋ ನಟ ಶೈನ್ ಶೆಟ್ಟಿ, ದೀಪಿಕಾ ದಾಸ್ ಗತಿಯೇನು ಅಂತಿದ್ದಾರೆ ನೆಟ್ಟಿಗರು.!

ಕಿರುತೆರೆ ನಟಿ ಸುಕೃತ ಜೊತೆ ಬಿಗ್ ಬಾಸ್ ಸೀಸನ್ 7 ವಿನ್ನರ್ ನಟ ಶೈನ್ ಶೆಟ್ಟಿ ಮದುವೆ ಫಿಕ್ಸ್ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಎಂದರೆ ಯಾರಿಗೆ ತಿಳಿದಿಲ್ಲ, ಹೌದು ಶೈನ್ ಶೆಟ್ಟಿ ಅವರು ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಆಗಿದ್ದರು. ಇವರಿಗೆ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದರಿಂದ ಇವರು ಇನ್ನು ಹೆಚ್ಚು ಜನಪ್ರಿಯತೆಯನ್ನು ಕಂಡರು. ಅಂದಿನಿಂದ ಇವರ ಖ್ಯಾತಿಯೂ ಏರಿದೆ ಎಂದರೆ ಸಲ್ಲಾಗುವುದಿಲ್ಲ. ಇದಲ್ಲದೆ ಹುಡುಗಿಯರ ಮನಸನ್ನು ಗೆದ್ದಿರುವ ಯೂಥ್ ಐಕಾನ್ ಎಂದರೆ ತಪ್ಪಾಗುವುದಿಲ್ಲ, ಹೌದು ಶೈನ್ ಶೆಟ್ಟಿ ಹುಡುಗಿಯರ ಮನಸನ್ನು ತಮ್ಮ ಮಾತಿನ ಶೈಲಿಯಿಂದ ಗೆದ್ದಿದ್ದಾರೆ.

ಶೈನ್ ಶೆಟ್ಟಿ ಅವರು ಈಗಾಗಲೇ ಬಿಗ್ ಬಾಸ್ನಲ್ಲಿ ಸದಸ್ಯರಾಗಿದ್ದರು, ಅವರು ಬಿಗ್ ಬಾಸ್ನಲ್ಲಿ ಇರಬೇಕಾದರೆ, ದೀಪಿಕಾ ದಾಸ್ ರವರ ಜೊತೆ ತುಂಬಾ ಹತ್ತಿರವಾಗಿದ್ದರು, ಅಲ್ಲದೇ ಬಿಗ್ ಬಾಸ್ ಇಂದ ಹೊರಗಡೆ ಬಂದ ಮೇಲೂ ಕೂಡ ದೀಪಿಕಾ ದಾಸ್ ಅವರ ಜೊತೆ ಚೆನ್ನಾಗಿದ್ದ ಕಾರಣ ಶೈನ್ ಶೆಟ್ಟಿ ಅವರು ದೀಪಿಕರವರನ್ನು ಮದುವೆ ಆಗುತ್ತಿದ್ದಾರೆ ಎಂದು ವದಂತಿಗಳು ಹರಿದಾಡಿದ್ದಾವು.

ಆದರೆ ಇದಕ್ಕೆ ಎಲ್ಲಾ ತೆರೆ ಎಳೆದಂತೆ ಶೈನ್ ಶೆಟ್ಟಿ ಅವರು ಸುಕೃತಾ ನಾಗ್ ರಾವರನ್ನು ವಿವಾಹವಾಗಲಿದ್ದಾರೆ ಎಂದು ಮೀಡಿಯಾಗಳ ಮುಂದೆ ಹೇಳಿದ್ದಾರೆ. ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ಎರಡು ದಿನಗಳವರೆಗು ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಧಾರವಾಹಿಯ ಸದಸ್ಯರು, ಬಿಗ್ ಬಾಸ್ ನ ಹಳೆಯ ಸದಸ್ಯರು, ಚಿತ್ರರಂಗದ ಕಲಾವಿದರು ಹಾಗೂ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದವರು ಈ ಎಲ್ಲರೂ ಅನುಭಂದ ಅವಾರ್ಡ್ಸ್ನಲ್ಲಿ ಪಾಲ್ಗೊಂಡಿದ್ದರು.

ಅವಾರ್ಡ್ಸ್ ಗೆ ಸಂಬಂಧಿಸಿದಂತೆ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದ್ದು ಈ ಪ್ರೋಮೊದಲ್ಲಿ ಶೈನ್ ಶೆಟ್ಟಿ ಮೇಲೆ ಹುಡುಗಿಯೊಬ್ಬಳು ಬೀಳುತ್ತಾಳೆ ಆಗ ಶೈನ್ ಶೆಟ್ಟಿ ನನಗಾಗಲೇ ಸುಕೃತ ಎನ್ನುವ ಹುಡುಗಿಯೊಂದಿಗೆ ಮದುವೆ ಫಿಕ್ಸ್ ಆಗಿದೆ ಎಂದು ಹೇಳುತ್ತಾರೆ. ಈ ಸುಕೃತಾ ಎಂದರೆ ಯಾರು ಇರಬಹುದು ಈ ಮೊದಲು ಅಗ್ನಿಸಾಕ್ಷಿಯ ಅಂಜಲಿ ಪಾತ್ರ ಮಾಡುತ್ತಿದ್ದ ಸುಕೃತರವರು ಅಗ್ನಿಸಾಕ್ಷಿ ಧಾರಾವಾಹಿ ನಂತರ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣದ ಧಾರವಾಹಿಯಲ್ಲಿ ನೆಗಟಿವ್ ಪಾತ್ರವನ್ನು ಮಾಡುತ್ತಿದ್ದಾರೆ.

ಇನ್ನು ಶೈಕ್ಷಣಿಯವರು ಬಹಳ ಟ್ಯಾಲೆಂಟ್ ಇದ್ದು, ಸುಕೃತ ರವರನ್ನು ಪ್ರೀತಿಯಿಂದ ಮುದ್ದಾಗಿ ಚಿನ್ನು ಮುದ್ದು ಎಂದು ಫೋನಿನಲ್ಲಿ ಮಾತನಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಇವರಿಬ್ಬರು ಕನ್ನಡ ಕಿರುತೆರೆಯ ಜೋಡಿಗಳಲ್ಲಿ ಒಂದಾಗಬಹುದು ಎಂದು ವದಂತಿಗಳು ಹೇಳುತ್ತೇವೆ ಸಂಚಿಕೆಯವರು ಕೂಡ ಒಬ್ಬ ಒಳ್ಳೆಯ ಕಲಾವಿದ ಎಂದರೆ ತಪ್ಪಾಗುವದಿಲ್ಲ, ಹೌದು ಸ್ನೇಹಿತರೆ ಬಿಗ್ ಬಾಸ್ ಗು ಮೊದಲೇ ಇವರು ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.

ಲಕ್ಷ್ಮಿ ಬಾರಮ್ಮ, ಮೀರಾ ಮಾಧವ ಇನ್ನು ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ತದನಂತರ ಬಿಗ್ ಬಾಸ್ ಇಂದ ಹೊರಗಡೆ ಇಂದ ಬಂದ ಮೇಲೆ ಯಾವುದೇ ಧಾರಾವಾಹಿಗಳಲ್ಲಿ ಅಭಿನಯಿಸಿಲ್ಲ, ಆದರೆ ಇವರು ಕೆಲವು ರೀಯಾಲಿಟಿ ಶೋಗಳಿಗೆ ನಿರೂಪಣೆ ಮಾಡಿದ್ದರು ಅಲ್ಲದೆ ಕೆಲವೊಂದು ಜಾಹೀರಾತುಗಳಿಗೆ ಸ್ಟೈಲ್ ಐಕಾನ್ ಆಗಿ ಕಾಣಿಸಿಕೊಂಡಿದ್ದಾರೆ.

ಸದ್ಯ ಇತ್ತೀಚೆಗೆ ಜನರ ಮನಸನ್ನು ಕದ್ದಿರುವ ಕಾಂತಾರ ಚಿತ್ರದಲ್ಲಿ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಮನಸನ್ನು ಕದ್ದಿದ್ದಾರೆ. ಇವರ ಮದುವೆ ವಿಚಾರವಾಗಿ ಮಹಿಳಾ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ ಎಂದರೆ ಸುಳ್ಳಲ್ಲ. ಈ ವಿಚಾರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ನಿಶ್ಚಿತಾರ್ಥದ ವಿಡಿಯೋ ಹಂಚಿಕೊಂಡ ಸತ್ಯ ಧಾರವಾಹಿ ಹೀರೋ ಕಾರ್ತಿಕ್ ಅಲಿಯಾಸ್ ಸಾಗರ್, ಪ್ರೀತಿಸಿದ ಹುಡುಗಿ ಕೈ ಹಿಡಿದ ಅಮುಲ್ ಬೇಬಿ.

ಸಾಗರ್ ಬಿಳಿ ಗೌಡ ಕನ್ನಡದ ಕಿರುತೆರೆಯ ಫೇಮಸ್ ಫೇಸ್, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಎನ್ನುವ ಧಾರಾವಾಹಿಯಲ್ಲಿ ಕಾರ್ತಿಕ್ ಎನ್ನುವ ಪಾತ್ರ ಮಾಡುತ್ತಿರುವ ಇವರ ನಿಜ ನಾಮಧೇಯ ಸಾಗರ್ ಬಿಳಿ ಗೌಡ ಎಂದು ಇದಕ್ಕೂ ಮುನ್ನ ಹಲವು ಸೀರಿಯಲಲ್ಲಿ ನಟಿಸಿದ್ದರೂ ಕಿನ್ನರಿ ಎನ್ನುವ ಧಾರವಾಹಿ ಮತ್ತು ಸತ್ಯ ಧಾರವಾಹಿ ಮೂಲಕ ಇವರು ಹೆಚ್ಚು ಗುರುತಿಸಿಕೊಂಡರು.

ಕಿನ್ನರಿ ಧಾರಾವಾಹಿಯಲ್ಲಿ 2ನೇ ನಾಯಕನಾಗಿದ್ದರ ಇವರು ಸತ್ಯ ಧಾರವಾಹಿ ಮೂಲಕ ಸ್ವತಂತ್ರ ನಾಯಕನಾಗಿ ಕಾಣಿಸಿಕೊಂಡರು. ಇವರು ಸದ್ಯಕ್ಕೆ ಕನ್ನಡ ಕಿರುತೆರೆ ಪ್ರೇಕ್ಷಕರ ಪ್ರೀತಿಯ ಅಮೂಲ್ ಬೇಬಿ. ಅಮೂಲ್ ಬೇಬಿ ನಿಕ್ ನೇಮ್ ಜೊತೆಗೆ ಮುದ್ದು ಮುದ್ದಾಗಿ ಪೆದ್ದು ತನದ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿರುವ ಇವರು ಇದೀಗ ತಮ್ಮ ಜೀವನದ ಬಹುದೊಡ್ಡ ಅಧ್ಯಾಯವನ್ನು ಬರೆಯುತ್ತಿದ್ದಾರೆ.

ವಿವಾಹ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗ ಆಗಿದ್ದು, ಜೀವನದ ಬಹುದೊಡ್ಡ ಪಾಲು ವಿವಾಹ ಜೀವನದ ಆಗಿರುತ್ತದೆ. ಹೀಗಾಗಿ ಬಹಳ ಸಮಯ ತೆಗೆದು ಕೊಂಡು ತಮ್ಮ ಸರಿ ಹೊಂದುವ ಜೋಡಿಯ ಕೈ ಹಿಡಿಯುವ ಸಲುವಾಗಿ ಎಲ್ಲರೂ ಕಾಯುತ್ತಾರೆ. ಆದರೆ ಸಾಗರ್ ಅವರ ಪಾಲಿಕೆ ಬಹುಬೇಗ ಈ ಅದೃಷ್ಟ ಒಲಿದಿದೆ. ಇನ್ನೂ ಎಳೆ ವಯಸಿನ ಹುಡುಗನಂತಿರುವ ಇವರಿಗೆ ಈಗಾಗಲೇ ಕಂಕಣ ಭಾಗ್ಯ ಕೂಡಿ ಬಂದಿದೆ.

ಅದು ಕೂಡ ತನ್ನ ವೃತ್ತಿಗೆ ಸರಿಹೊಂದುವ ಸಂಗಾತಿಯ ಜೊತೆ. ಸಿರಿ ರಾಜು ಎನ್ನುವ ಕಿರುತೆರೆ ನಟಿ ಜೊತೆ ಸಾಗರ್ ಗೌಡ ಅವರು ಸದ್ದಿಲ್ಲದ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಸಿರಿ ರಾಜು ಅವರು ಕೂಡ 2018ರಲ್ಲಿ ತೆರೆಕಂಡ ರಾಘವಾಂಕ ಪ್ರಭು ಅವರ ನಿರ್ದೇಶನದ ಇದಂ ಶ್ರೀಮಂತರಾಗಬೇಕು ಜೀವನಂ ಎನ್ನುವ ಸಿನಿಮಾ ಮೂಲಕ ಹೆಸರು ಮಾಡಿದ್ದರು.

ಇದಾದ ಬಳಿಕ ಅನೇಕ ಕನ್ನಡ ಧಾರವಾಹಿ ಕೂಡ ಭಾಗವಹಿಸಿದ್ದ ಇವರು ಚಂದನವನದ ಬಣ್ಣದ ಲೋಕದಲ್ಲಿ ಮಿನುಗಲು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಇದೇ ಸಮಯಕ್ಕೆ ಸಾಗರ್ ಅವರ ಭೇಟಿ ಆಗಿದ್ದು ಇವರಿಬ್ಬರ ಸಂಬಂಧದ ಬಗ್ಗೆ ಇನ್ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಮಾಡಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ.

ಸಿರಿ ರಾಜು ಅವರ ಇನ್ಸ್ಟಾಗ್ರಾಂ ಖಾತೆಯಿಂದ ಅವರಿಬ್ಬರ ಎಂಗೇಜ್ಮೆಂಟ್ ಮತ್ತು ಇಬ್ಬರ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳು ಶೇರ್ ಆಗುತ್ತಿದ್ದಂತೆ ಅವರ ಆತ್ಮೀಯರು ಹಾಗೂ ಅಭಿಮಾನಿಗಳು ಮತ್ತು ಸ್ನೇಹಿತರು ಈ ಜೋಡಿಗೆ ಶುಭ ಹಾರೈಸಿದ್ದಾರೆ. ತಮ್ಮ ಇನಿಯನ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿರುವ ಸಿರಿ ರಾಜು ಅವರು ಅದಕ್ಕೆ ಸವಿ ಬರಹ ಕೂಡ ಬರೆದಿದ್ದಾರೆ.

ವಿಧಿ ಅದರ ಆಟವನ್ನು ತನ್ನ ಪಾಡಿಗೆ ತಾನು ನಡೆಸುತ್ತಿರುತ್ತದೆ ಈ ವಿಧಿಯಾಟದಲ್ಲಿ ನಾನು ಸಾಗರ್ ಎನ್ನುವ ಅದ್ಭುತ ವ್ಯಕ್ತಿಯನ್ನು ಪರಿಚಯವಾಗಿ ಅದು ಮದುವೆಯಾಗುವ ಮೂಲಕ ನಾವಿಬ್ಬರು ಒಂದಾಗುವಂತೆ ಆಗಿದೆ ಎಂದು ಬರೆದು ಕೊಂಡಿದ್ದಾರೆ. ಇದರೊಂದಿಗೆ ಅವರು ಹಂಚಿಕೊಂಡಿರುವ ಸ್ವೀಟ್ಸ್ ಫೋಟೋಶೂಟ್ ಫೋಟೋಗಳು ಕೂಡ ಬಹಳ ಮುದ್ದಾಗಿದ್ದು ಶೇರ್ ಆದ ಕೆಲವೇ ಕ್ಷಣಗಳಲ್ಲಿ ಅತಿ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ಗಳನ್ನು ಪಡೆಯುತ್ತಿದೆ.

ನೋಡಿದ ಪ್ರತಿಯೊಬ್ಬರು ಕೂಡ ಈ ಮುದ್ದಾದ ಜೋಡಿಯನ್ನು ಹಾಡಿ ಹೊಗಳಿ ಹಾರೈಸುತ್ತಿದ್ದಾರೆ. ಈಗಷ್ಟೇ ತನ್ನ ವೃತ್ತಿ ಜೀವನದಲ್ಲಿ ಸತ್ಯ ಅಂತಹ ಪ್ರಾಜೆಕ್ಟ್ ಮೂಲಕ ಬೆಳೆಯುತ್ತಿರುವ ಸಾಗರ್ ಅವರಿಗೆ ಮತ್ತು ಸಿರಿ ಅವರಿಗೂ ಕೂಡ ವೈಯಕ್ತಿಕ ಜೀವನದ ಜೊತೆಗೆ ವೃತ್ತಿ ಜೀವನದಲ್ಲೂ ಶುಭವಾಗಲಿ ಎಂದು ಹರಸೋಣ.

Vijay Devarakonda: ಅಂಗಾಂಗ ದಾನ ಮಾಡಲು ಮುಂದಾದ ನಟ ವಿಜಯ್ ದೇವರಕೊಂಡ

 

ನಾವು ಸ.ತ್ತ ಮೇಲೆ ಮತ್ತೆ ಬದುಕಬೇಕು ಎಂದರೆ ನಮ್ಮ ಅಂಗಾಂಗಗಳನ್ನು ದಾನ ಮಾಡುವುದಷ್ಟೆ ನಮಗೆ ದಾರಿ. ನಾವು ಸ.ತ್ತ ಮೇಲೆ ಅಂಗಾಂಗಗಳನ್ನು ಮಣ್ಣಿಗೆ ಹಾಕುವ ಬದಲು ಪರರಿಗೆ ಬಳಸಿದರೇ ನಮ್ಮ ದೇಹಕ್ಕೂ ಒಂದು ಅರ್ಥ ಸಿಗುತ್ತದೆ. ಹಾಗಾದರೆ ಅಂಗಾಂಗ ದಾನವೆಂದರೇನು, ಅಂಗಾಂಗ ದಾನವು ಒಬ್ಬ ವ್ಯಕ್ತಿಯು ತನ್ನ ಸ್ವಂತ ಅಂಗವನ್ನು ತೆಗೆದುಹಾಕಲು ಮತ್ತು ಇನ್ನೊಬ್ಬ ವ್ಯಕ್ತಿಗೆ ಕಸಿ ಮಾಡಲು ಕಾನೂನುಬದ್ಧವಾಗಿ ಅನುಮತಿಸುವ ಪ್ರಕ್ರಿಯೆಯಾಗಿದ್ದು.

ದಾನಿ ಜೀವಂತವಾಗಿರುವಾಗ ಅಥವಾ ಸ.ತ್ತಿರುವಾಗ ಒಪ್ಪಿಗೆಯ ಮೂಲಕ ಮುಂದಿನ ಸಂಬಂಧಿಕರ ಒಪ್ಪಿಗೆಯೊಂದಿಗೆ. ದಾನವು ಸಂಶೋಧನೆಗಾಗಿ ಇರಬಹುದು ಅಥವಾ ಸಾಮಾನ್ಯವಾಗಿ, ಆರೋಗ್ಯಕರ ಕಸಿ ಮಾಡಬಹುದಾದ ಅಂಗಗಳು ಮತ್ತು ಅಂಗಾಂಶಗಳನ್ನು ಇನ್ನೊಬ್ಬ ವ್ಯಕ್ತಿಗೆ ಕಸಿ ಮಾಡಲು ದಾನ ಮಾಡಬಹುದು. ಸಾಮಾನ್ಯ ಕಸಿಗಳಲ್ಲಿ ಮೂತ್ರ ಪಿಂಡಗಳು, ಹೃದಯ, ಯಕೃತ್ತು, ಮೇದೋಜೀರಕ ಗ್ರಂಥಿ, ಕರುಳುಗಳು, ಶ್ವಾಸಕೋಶಗಳು, ಮೂಳೆಗಳು, ಮೂಳೆ ಮಜ್ಜೆ, ಚರ್ಮ ಮತ್ತು ಕಾರ್ನಿಯಾಗಳು ಸೇರಿವೆ.

ಕೆಲವು ಅಂಗಗಳು ಮತ್ತು ಅಂಗಾಂಶಗಳನ್ನು ಜೀವಂತ ದಾನಿಗಳಿಂದ ದಾನ ಮಾಡಬಹುದು. ನಾವು ಸಾಮಾನ್ಯವಾಗಿ ಡಾಕ್ಟರ್ ರಾಜಕುಮಾರ್ ಅವರು ನೇತ್ರದಾನವನ್ನು ಹೆಚ್ಚು ಮಾಡುವಂತೆ ಜನರಿಗೆ ಸಲಹೆ ನೀಡಿದರು. ಇದು ಎಷ್ಟು ಜನರಿಗೂ ಕೂಡ ನೇತ್ರದಾನ ಮಾಡುವಂತೆ ಮಾಡಿದೆ. ಇನ್ನೂ ಅವರ ಕುಟುಂಬದ ಪುನೀತ್ ರಾಜಕುಮಾರ್ ಅವರು ಕೂಡ ಇದಕ್ಕೆ ಉದಾಹರಣೆಯಾಗಿದ್ದಾರೆ ಇತ್ತೀಚಿಗೆ ಸಂಚಾರಿ ವಿಜಯ್ ಅವರು ಕೂಡ ಅಂಗಾಂಗ ದಾನಗಳಿಗೆ ಮಾದರಿಯಾಗಿದ್ದು ಇದೇ ರೀತಿ ವಿಜಯದೇವರಕೊಂಡ ಅವರು ಕೂಡ ಅಂಗಾಂಗ ದಾನ ಮಾಡಲು ಸಹಿ ಹಾಕಿದ್ದಾರೆ.

ಹೌದು ಸ್ನೇಹಿತರೆ ತೆಲುಗು ನಟ ವಿಜಯ ದೇವರಕೊಂಡ ಅವರು ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಟಾಲಿವುಡ್‌ ಸ್ಟಾರ್‌ ನಟ ವಿಜಯ್‌ ದೇವರಕೊಂಡ ಬರೀ ತೆಲುಗು ಪ್ರೇಕ್ಷರಿಗಷ್ಟೇ ಅಲ್ಲ, ಕನ್ನಡಿಗರು ಸೇರಿದಂತೆ ಫ್ಯಾನ್‌ ಇಂಡಿಯಾ ಮಟ್ಟದಲ್ಲಿ ಅಭಿಮಾನಿ ಬಳಗ ಹೊಂದಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ವಿಜಯ್‌, ಸ.ತ್ತ ನಂತರವೂ ಬದುಕಲು ನಾನು ಇಷ್ಟ ಪಡುತ್ತೇನೆ. ಅದಕ್ಕಾಗಿ ಅಂಗಾಂಗ ದಾನ ಮಾಡಲಿದ್ದೇನೆ. ಆರ್ಗನ್‌ ಡೊನೇಟ್‌ ದಾಖಲೆಗಳಿಗೆ ಸಹಿ ಹಾಕುವ ಕೆಲಸ ಈಗಾಗಲೇ ಮುಗಿದಿದೆ ಎಂದು ತಿಳಿಸಿದರು.

ವಿಜಯ್ ದೇವರಕೊಂಡವರಿಗೆ ಅಂಗಾಂಗ ದಾನ ಮಾಡಲು ಯೋಚನೆ ಆದರೂ ಹೇಗೆ ಬಂದಿರುವುದು ಎಂದು ವಿಚಾರಿಸಿದಾಗ ವಿಜಯ್ ಅವರಿಗೆ ವೈದ್ಯ ವಿದ್ಯಾರ್ಥಿಗಳನ್ನು ನೋಡಿ ಅವರ ಜೊತೆ ಮಾತನಾಡುವಾಗ ಇಂತಹದೊಂದು ಯೋಚನೆ ಬಂದಿದೆ ಎಂದು ತಿಳಿಸಿದ್ದಾರೆ. ವಿಜಯ್ ದೇವರಕೊಂಡ ರವರ ಈ ಮಹಾ ನಿರ್ಧಾರವು ಎಷ್ಟು ನಟ ನಟಿಯರಿಗೆ ಮಾದರಿಯಾಗಿದೆ ಅದಲ್ಲದೆ ವಿಜಯ್ ದೇವರಕೊಂಡ ಅಭಿಮಾನಿಗಳಿಗೂ ಕೂಡ ದೊಡ್ಡ ಪ್ರೇರಣೆಯಾಗಿದ್ದಾರೆ.

ಇನ್ನು ವಿಜಯ್‌ ದೇವರಕೊಂಡ ರವರ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸ್ಟಾರ್‌ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ʼಲೈಗರ್ʼ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿದೆ. ವಿಜಯ್ ಚಿತ್ರಕ್ಕಾಗಿ ಬಹಳಷ್ಟು ಶ್ರಮಿಸಿದ್ದರು ಅದ್ರೆ, ಸಿನಿಮಾದ ಕಥೆ ಜನರಿಗೆ ಇಷ್ಟವಾಗಲಿಲ್ಲ ಅನಿಸುತ್ತೆ. ಪ್ರಸ್ತುತ, ವಿಜಯ್ ದೇವರಕೊಂಡ ಸಮಂತಾ ಅವರೊಂದಿಗೆ ಮುಂಬರುವ ಖುಷಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಅಂಗಾಂಗ ದಾನ ಮಾಡುವುದು ನಿಮ್ಮ ಪ್ರಕಾರ ಸರಿ ಅನಿಸಿದರೆ ಈ ಒಂದು ಲೇಖನಕ್ಕೆ ಲೈಕ್ ಕೊಟ್ಟು ಶೇರ್ ಮಾಡಿ.