Friday, June 9, 2023
HomeEntertainmentರಶ್ಮಿಕಾಳಂತೆ ರಿಷಬ್ ಕೂಡ ರಕ್ಷಿತ್ ಶೆಟ್ಟಿಗೆ ಮೋಸ ಮಾಡಿದ್ರಾ.? ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರ ನಡೆದ...

ರಶ್ಮಿಕಾಳಂತೆ ರಿಷಬ್ ಕೂಡ ರಕ್ಷಿತ್ ಶೆಟ್ಟಿಗೆ ಮೋಸ ಮಾಡಿದ್ರಾ.? ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರ ನಡೆದ ರಿಷಬ್ ಶೆಟ್ಟಿ, ಬೇಸರ ವ್ಯಕ್ತ ಪಡಿಸಿದ ನಟ ರಕ್ಷಿತ್ ಶೆಟ್ಟಿ.!

 

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಇಬ್ಬರು ಕೂಡ ಆತ್ಮೀಯ ಸ್ನೇಹಿತರು ಸಿನಿಮಾವನ್ನು ಹೊರತು ಪಡಿಸಿ ವೈಯಕ್ತಿಕ ಜೀವನದಲ್ಲೂ ಕೂಡ ಇವರಿಬ್ಬರು ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಈ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಕಿರಿಕ್ ಪಾರ್ಟಿ ಸಿನಿಮಾದಿಂದ ಒಂದಾದ ಈ ಜೋಡಿ ಇಲ್ಲಿಯವರೆಗೂ ಕೂಡ ಒಟ್ಟಾಗಿ ಬಂದಿದೆ ಒಬ್ಬರ ಸಿನಿಮಾಗೆ ಮತ್ತೊಬ್ಬರು ಸಪೋರ್ಟ್ ಮಾಡುತ್ತಿದ್ದಾರೆ.

ಇನ್ನು ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಸಿನಿಮಾ ಎಲ್ಲೆಡೆ ವಿಜಯೋತ್ಸವವನ್ನು ಸಂಭ್ರಮಿಸುತ್ತಿರುವ ವಿಚಾರ ನಿಮಗೆ ತಿಳಿದೇ ಇದೆ ಕಾಂತರಾ ಸಿನಿಮಾದ ಮೂಲಕ ರಿಷಬ್ ಶೆಟ್ಟಿ ಅವರಿಗೆ ಇದ್ದಂತಹ ನೇಮ್ ಮತ್ತು ಫೇಮ್ ಹೆಚ್ಚಾಗಿದೆ. ಸದ್ಯಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದು ಒಂದರ ಮೇಲೆ ಮತ್ತೊಂದರಂತೆ ಸಿನಿಮಾ ಆಫರ್ ಬರುತ್ತಿದೆ.

ಈಗಾಗಲೇ ತೆಲುಗು ಸಿನಿಮಾದಲ್ಲಿ ನಟನೆ ಮಾಡುವುದಾಗಿ ಹೇಳಿಕೊಟ್ಟಿದ್ದಾರೆ ಬಾಲಿವುಡ್ ಸಿನಿಮಾಗಳಿಂದಲೂ ಕೂಡ ಆಫರ್ ಬರುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಭಾಷೆ ಗಿಂತ ಇದೀಗ ಪರಭಾಷೆಯಲ್ಲಿ ಹೆಚ್ಚು ಆಫರ್ ದೊರೆಯುತ್ತಿದೆ, ಇದು ಒಂದು ಕಡೆ ಖುಷಿಯ ವಿಚಾರವಾದರೆ ಮತ್ತೊಂದು ಕಡೆ ಎಲ್ಲೋ ನಮ್ಮ ಕನ್ನಡ ಭಾಷೆಯನ್ನು ಇವರು ಕೂಡ ಬಿಡಬಹುದು ಎಂಬ ಆತಂಕ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಏಕೆಂದರೆ ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಅಭಿನಯಿಸಲಿದ್ದಾರೆ ಎಂಬ ಪೋಸ್ಟರ್ ಒಂದನ್ನು ಸ್ವತಃ ರಕ್ಷಿತ್ ಶೆಟ್ಟಿ ಅವರ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಚ್ಚಿಕೊಂಡಿದ್ದರು. ಈ ಸಿನಿಮಾದಲ್ಲಿ ನಟ ದಿಗಂತ್ ಹಾಗೂ ಅಚ್ಯೂತ್ ಕುಮಾರ್ ಹಾಗೂ ರಿಷಬ್ ಶೆಟ್ಟಿ ಮೂವರು ಕೂಡ ಇದ್ದಾರೆ ಮೂವರು ಕೂಡ ಕಾರಿನ ಹಿಂಭಾಗದ ಸೀಟ್ ನಲ್ಲಿ ಕುಳಿತುಕೊಂಡಿರುವಂತಹ ಪೋಸ್ಟರ್ ಅನ್ನು ನಾವು ನೋಡಬಹುದು.

ದಿಗಂತ್ ಕೈನಲ್ಲಿ ರೋಸ್ ಹಿಡಿದು ಕುಳಿತುಕೊಂಡಿರುವ ಹಾಗೂ ರಿಷಬ್ ಶೆಟ್ಟಿ ಬೂದು ಗನ್ನಡಿ ಹಿಡಿದುಕೊಂಡು ಏನೋ ನೋಡುತ್ತಿದ್ದಾರೆ ಅತ್ತ ಕಡೆ ಅಚ್ಯೂತ್ ಕುಮಾರ್ ಕೈನಲ್ಲಿ ಎಳನೀರನ್ನು ಹಿಡಿದುಕೊಂಡು ಚಿಲ್ ಮಾಡುತ್ತಿರುವಂತಹ ವಿಭಿನ್ನ ರೀತಿಯ ಪೋಸ್ಟರನ್ನು ಬಿಡುಗಡೆ ಮಾಡಿ. ಪರಂವಾಹ್ ಸ್ಟುಡಿಯೋಸ್​ನ ಮುಂದಿನ ಪ್ರಾಜೆಕ್ಟ್, ಸಾಹಸ ಹಾಸ್ಯ ಚಿತ್ರ “ಬ್ಯಾಚುಲರ್ ಪಾರ್ಟಿ” ಅನ್ನು ಘೋಷಿಸಲು ಖುಷಿ ಪಡುತ್ತಿದ್ದೇವೆ.

ರಿಷಭ್ ಶೆಟ್ಟಿ, ದಿಗಂತ್, ಅಚ್ಚುತಣ್ಣ ತಮ್ಮ ನಿರೂಪಣೆಯೊಂದಿಗೆ ನಮ್ಮನ್ನು ಮೋಜಿನ ಸವಾರಿಗೆ ಕರೆದೊಯ್ಯಲು ಸಿದ್ಧರಾಗಿದ್ದಾರೆ. ಇದು ಸೆವೆನ್ ಆಡ್ಸ್ ಮತ್ತು ಪರಂವಾಹ್‌ನ ಭಾಗವಾಗಿ ನಿಮ್ಮೊಂದಿಗೆ ಸಂತೋಷದಾಯಕ ಪ್ರಯಾಣವಾಗಲಿದೆ. ನಿಮ್ಮ ಚೊಚ್ಚಲ ಪಂದ್ಯಕ್ಕೆ ಶುಭ ಹಾರೈಸುತ್ತೇನೆ. ಯೋಜನೆಯಲ್ಲಿರುವ ಇಡೀ ತಂಡಕ್ಕೆ ನನ್ನ ಶುಭಾಶಯಗಳು ಎಂದು ರಕ್ಷಿತ್ ಶೆಟ್ಟಿ ಶುಭ ಹಾರೈಸಿದ್ದರು.

ಈ ಪೋಸ್ಟರ್ ಲುಕ್ ನೋಡಿದಂತಹ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿ ಬರುವ ಎಲ್ಲಾ ಸಿನಿಮಾ ಕೂಡ ಸೂಪರ್ ಹಿಟ್ ಆಗುತ್ತದೆ. ಹಾಗಾಗಿ ಈ ಸಿನಿಮಾದಿಂದಲೂ ಕೂಡ ಒಂದಷ್ಟು ಮನರಂಜನೆ ಸಿಗುತ್ತದೆ ಅಂತ ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದರು ಆದರೆ ಇದ್ದಕ್ಕಿದ್ದ ಹಾಗೆ ಇದೀಗ ರಿಷಬ್ ಶೆಟ್ಟಿ ಅವರು ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರ ನಡೆದಿದ್ದಾರೆ.

ಇವರಿಬ್ಬರ ನಡುವೆ ಏನು ಮನಸ್ತಾಪ ಉಂಟಾಯಿತು ಎಂದು ತಿಳಿದಿಲ್ಲ ಒಂದು ಕಡೆ ಕಾಂತರಾ ಸಿನಿಮಾದ ಸಕ್ಸಸ್ ನಂತರ ರಿಷಬ್ ಬದಲಾಗಿದ್ದಾರೆ, ಹಾಗಾಗಿ ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರ ಬಂದು ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ವಿಚಾರದ ಬಗ್ಗೆ ರಕ್ಷಿತ್ ಶೆಟ್ಟಿ ಆಗಲಿ ಅಥವಾ ರಿಶಬ್ ಶೆಟ್ಟಿಯಾಗಲಿ ಎಲ್ಲಿಯೂ ಕೂಡ ಬಹಿರಂಗವಾಗಿ ಹೇಳಿಕೆ ನೀಡಿಲ್ಲ.

ಅಭಿಮಾನಿಗಳು ಮತ್ತು ಕೆಲವು ನೆಟ್ಟಗರು ಮಾತ್ರ ರಕ್ಷಿತ್ ಶೆಟ್ಟಿ ಅವರಿಗೆ ಮೊದಲಿನಿಂದಲೂ ಮೋಸವಾಗುತ್ತಿದೆ ಒಂದು ಕಡೆ ರಶ್ಮಿಕಾಳಿಂದ ಮೋಸವಾಗಿದೆ ಮತ್ತೊಂದು ಕಡೆ ಜೀವದ ಗೆಳೆಯ ರಿಷಬ್ ಶೆಟ್ಟಿ ಕೂಡ ಇದೀಗ ಅರ್ಧದಲ್ಲಿ ಕೈ ಬಿಟ್ಟಿರುವುದು ನಿಜಕ್ಕೂ ಕೂಡ ವಿಷಾದಕರ ವಿಚಾರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನದಲ್ಲಿ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರನ್ನು ಬಿಟ್ಟು ಮತ್ಯಾರು ನಟನೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೂ ಕೂಡ ರಕ್ಷಿತ್ ಗೆ ನಿಜಕ್ಕೂ ಕೂಡ ಅನ್ಯಾಯವಾಗಿದೆ ಎಂಬುದು ಕೆಲವು ಅಭಿಮಾನಿಗಳ ಅಭಿಪ್ರಾಯವಾಗಿದೆ.