Home Blog Page 322

ದೀಪಿಕಾ ದಾಸ್ ಎಲ್ಲಿಯೂ ಕೂಡ ನಾನು ಯಶ್ ತಂಗಿ ಎಂಬ ವಿಚಾರವನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.?

ನಟಿ ದೀಪಿಕಾ ದಾಸ್ ನಿಮ್ಮೆಲ್ಲರಿಗೂ ಕೂಡ ಚಿರಪರಿಚಿತ ಏಕೆಂದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ನಾಗಿಣಿ ಎಂಬ ಧಾರಾವಾಹಿಯಲ್ಲಿ ಇವರು ನಟನೆ ಮಾಡುತ್ತಿದ್ದರು. ಈ ಒಂದು ಧಾರಾವಾಹಿಯ ಮೂಲಕ ಸಾಕಷ್ಟು ಜನಪ್ರಿಯನ್ನು ಗಳಿಸಿಕೊಂಡರು ತದನಂತರ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬಂದಂತಹ ಡಾನ್ಸ್ ಕರ್ನಾಟಕ ಡಾನ್ಸ್ ಎಂಬ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ವಿಜೇತರಾಗಿಯೂ ಕೂಡ ಹೊರಹೊಮ್ಮಿದರು. ತದನಂತರ ಬಿಗ್ ಬಾಸ್ ಸೀಸನ್ 6 ರಲ್ಲಿ ಕೂಡ ಭಾಗವಹಿಸಿದರು ಈ ಒಂದು ಕಾರ್ಯಕ್ರಮದಿಂದ ದೀಪಿಕಾ ದಾಸ್ ಅವರು ಇನ್ನಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡರು ಬಿಗ್ ಬಾಸ್ ಮನೆಯಲ್ಲಿ ಸುಮಾರು 111 ದಿನಗಳ ಕಾಲ ವಾಸವಾಗಿದ್ದು ಫಿನಾಲೆ ಅಂತಕ್ಕೂ ಕೂಡ ತಲುಪಿದ್ದರು.

ಬಿಗ್ ಬಾಸ್ ಮನೆಯಲ್ಲಿ ನಟ ಶೈನ್ ಶೆಟ್ಟಿ ಅವರ ಜೊತೆ ಪ್ರೀತಿ ಪ್ರೇಮದಲ್ಲಿ ಇದ್ದರೆ ಎಂಬ ವದಂತಿಗಳು ಕೇಳಿ ಬರುತ್ತಿತ್ತು ಆದರೆ ಇದೆಲ್ಲದಕ್ಕೂ ಕೂಡ ದೀಪಿಕಾ ದಾಸ್ ಅವರು ತೆರೆ ಹೇಳಿದಿದ್ದು ನಾವಿಬ್ಬರು ಒಳ್ಳೆಯ ಸ್ನೇಹಿತರಷ್ಟೇ ಎಂಬುದನ್ನು ವ್ಯಕ್ತಪಡಿಸಿದರು.ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ದೀಪಿಕಾ ದಾಸ್ ಬರುವ ಹಲವಾರು ಮೋಡಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿರುತೆರೆಯಲ್ಲಿ ಸದ್ಯಕ್ಕೆ ನಟನೆ ಮಾಡದೆ ಇದ್ದರೂ ಕೂಡ ಮಾಡಲಿಂಗ್ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ. ಜೊತೆಗೆ ಹಲವಾರು ಫ್ಯಾಷನ್ ಶೋನಲ್ಲಿಯೂ ಕೂಡ ಭಾಗವಹಿಸುತ್ತಾರೆ ಜಾಹೀರಾತಿನಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಬಿಗ್ ಬಾಸ್ ನಾನಂತರ ದೀಪಿಕಾ ದಾಸ್ ಅವರ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗಿದೆ.

ಇವೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ದೀಪಿಕಾ ದಾಸ್ ಅವರು ಸ್ವಂತ ರಾಕಿಂಗ್ ಸ್ಟಾರ್ ಯಶ್ ಅವರ ತಂಗಿ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಏನೆಂದರೆ ದೀಪಿಕಾ ದಾಸ್ ಅವರು ಎಲ್ಲಿಯೂ ಕೂಡ ತಮ್ಮ ಅಣ್ಣ ರಾಕಿಂಗ್ ಸ್ಟಾರ್ ಯಶ್ ಎಂಬ ವಿಚಾರವನ್ನು ರಿವೀಲ್ ಮಾಡಿಲ್ಲ ಇದಕ್ಕೆ ಬೇರೊಂದು ಕಾರಣವೂ ಕೂಡ ಇದೆ. ಹೌದು ರಾಕಿಂಗ್ ಸ್ಟಾರ್ ಯಶ್ ಅವರ ಸ್ವಂತ ಚಿಕ್ಕಮ್ಮನ ಮಗಳೇ ದೀಪಿಕಾ ದಾಸ್ ಇವರಿಬ್ಬರ ನಡುವೆ ಅವಿನಾಭವನ ಸಂಬಂಧವಿದ್ದರು ಎಲ್ಲಿಯೂ ಕೂಡ ಯಶ್ ಆಗಲಿ ಅಥವಾ ದೀಪಿಕಾ ಆಗಲಿ ನಾವಿಬ್ಬರು ಅಣ್ಣ ತಂಗಿ ಎಂಬ ವಿಚಾರವನ್ನು ಹೇಳಿಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಏನೆಂದರೆ ದೀಪಿಕಾ ದಾಸ್ ಅವರು ತಮ್ಮ ಸ್ವಂತ ಪರಿಶ್ರಮದಿಂದ ಮೇಲೆ ಬರಬೇಕು ಎಂಬ ಆಸೆಯನ್ನು ಹೊಂದಿದ್ದಾರಂತೆ ಒಂದು ವೇಳೆ ನಾನು ಯಶ್ ತಂಗಿ ಅಂತ ಹೇಳಿಕೊಂಡರೆ ಆ ಒಂದು ಇನ್ಫ್ಲುಯೆನ್ಸ್ ಮೂಲಕ ನನಗೆ ಹೆಸರು ಕೀರ್ತಿ ಅಥವಾ ಅವಕಾಶ ದೊರೆಯಬಹುದು.

ಆದರೆ ಇಂತಹ ಅವಕಾಶಗಳು ಬಹುದಿನ ಉಳಿಯುವುದಿಲ್ಲ ಹಾಗಾಗಿ ನಾನು ನನ್ನ ಸ್ವಂತ ಪರಿಶ್ರಮದಿಂದ ಮುಂದೆ ಬರುವುದಕ್ಕೆ ಇಷ್ಟ ಪಡುತ್ತೇನೆ ನನ್ನ ಅಣ್ಣನ ಹೆಸರು ಹೇಳಿ ಆತನಿಂದ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ನನಗೆ ಇಷ್ಟ ಇಲ್ಲ ಎಂಬುದನ್ನು ಹೇಳಿಕೊಂಡಿದ್ದಾರೆ. ನಿಜಕ್ಕೂ ದೀಪಿಕಾ ದಾಸ್ ಅವರ ಈ ನಿರ್ಧಾರವನ್ನು ನಾವು ಮೆಚ್ಚಲೇಬೇಕು. ಏಕೆಂದರೆ ಇತ್ತೀಚಿನ ದಿನದಲ್ಲಿ ಎಲ್ಲರೂ ಕೂಡ ಇನ್ಫ್ಲುಯೆನ್ಸ್ ಗಾಗಿ ಕಾದು ಕುಳಿತಿರುತ್ತಾರೆ ಅಷ್ಟೇ ಅಲ್ಲದೆ ಸಂಬಂಧ ಇಲ್ಲದೆ ಇರುವಂತಹ ವ್ಯಕ್ತಿಯನ್ನು ಕೂಡ ಇವರು ನನಗೆ ಸಹೋದರ ಸಂಬಂಧಿ ಅಥವಾ ನನಗೆ ಆಪ್ತರು ಚಿರ ಪರಿಚಿತರು ಎಂದು ಹೇಳಿಕೊಳ್ಳುವುದರ ಮೂಲಕ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ. ಅಂತಹ ಜನರ ನಡುವೆ ಈಗಲೂ ಕೂಡ ಇಂತಹ ಒಳ್ಳೆಯ ಗುಣಗಳನ್ನು ಒಳಗೊಂಡಿರುವಂತಹ ನಟಿಯನ್ನು ನೋಡಿದರೆ ನಿಜಕ್ಕೂ ಕೂಡ ಶಭಾಷ್ ಅನಿಸುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ರವಿಚಂದ್ರನ್ ಅವರ ಮಗನ ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿ ಭೇಟಿ ಕೊಟ್ಟಿದ್ದಾರೆ ಗೊತ್ತಾ.? ಈ ವಿಡಿಯೋ ನೋಡಿ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಇಂದು ಮದುವೆಯ ಸಂಭ್ರಮ. ರವಿಚಂದ್ರನ್ ಅವರು ಈಗಷ್ಟೇ ತಮ್ಮ ಮುದ್ದಿನ ಮಗಳ ಮದುವೆಯನ್ನು ಅದ್ದೂರಿಯವಾಗಿ ಮಾಡಿದ್ದು ಎಲ್ಲರ ಕಣ್ಣಿನಲ್ಲಿ ಕಟ್ಟಿದೆ ಈಗ ಅವರ ಮನೆಯಲ್ಲಿ ಮತ್ತೊಂದು ನಡೆಸುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೇಷ್ಠ ಪುತ್ರ ಮನೋರಂಜನ್ ಅವರು ಇಂದು ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಾಹೇಬ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದ್ದ ಮನೋರಂಜನ್ ಅವರ ತ್ರಿವಿಕ್ರಮ ಸಿನಿಮಾ ಕಳೆದ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಈ ಸಿನಿಮಾ ಪ್ರಚಾರವನ್ನು ವಿಭಿನ್ನ ರೀತಿಯಲ್ಲಿ ಪ್ಲಾನ್ ಮಾಡಿದ್ದ ಸಿನಿಮಾ ತಂಡವನ್ನು ಪ್ರೇಕ್ಷಕರನ್ನು ಥಿಯೇಟರ್ ಗೆ ಆಹ್ವಾನಿಸಲು ಮದುವೆ ಪತ್ರಿಕೆ ರೂಪದಲ್ಲಿ ಸಿನಿಮಾ ಬಗ್ಗೆ ಪ್ರಚಾರ ಮಾಡಿದ್ದರು ಆದರೆ ಇದೀಗ ಆ ತ್ರಿವಿಕ್ರಮನಿಗೆ ಇಂದು ನಿಜವಾಗಿ ಕಂಕಣ ಭಾಗ್ಯ ಕೂಡಿಬಂದಿದೆ.

ಸ್ನೇಹಿತರು, ಕುಟುಂಬದವರು ಹಾಗೂ ಬಂಧು ಬಾಂಧವರ ನಡುವೆ ಸಂಪ್ರದಾಯಿಕವಾಗಿ ಮದುವೆ ನಡೆಯುತ್ತಿದೆ. ಈಗಾಗಲೇ ಇವರ ರಿಸೆಪ್ಶನ್ ನಡೆದಿರುವ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದ್ದು ಮದುವೆ ಸಂಭ್ರಮ ನೋಡಿ ಎಲ್ಲರೂ ಬಾಯ ಮೇಲೆ ಬೆರಳು ಇಡುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯ ಮದುವೆ ಎಂದರೆ ಅದರಲ್ಲಿ ಅದ್ದೂರಿತನಕೆ ಏನೂ ಕಡಿಮೆ ಇಲ್ಲ. ಗ್ರಾಂಡ್ ಡೆಕೋರೇಷನ್ ಅದ್ದೂರಿ ಲೈಟ್ಸ್ ಸೆಟ್ ಇನ್ನು ಮುಂತಾದ ಹಲವು ವಿಶೇಷತೆಗಳಿಂದ ಮದುವೆ ಮಂಟಪ ಜಗಮಗಗೊಳಿಸುತ್ತಿದೆ. ಮಧ್ಯೆ ನಿಂತಿರುವ ವಧು-ವರರು ನೋಡುಗರ ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಕಾಣುತ್ತಿದ್ದಾರೆ. ಮದುವೆ ಮನೆ ತುಂಬಾ ರವಿಚಂದ್ರನ್ ಹಾಗೂ ಅವರ ಪತ್ನಿ ಮತ್ತು ಮಗಳು ಅಳಿಯ, ಕಿರಿಯ ಪುತ್ರ ಯುವ, ತಮ್ಮ ಬಾಲಾಜಿ ಹೀಗೆ ಎಲ್ಲರೂ ಬಹಳ ಸಂಭ್ರಮದಿಂದ ಓಡಾಡಿಕೊಂಡು ಬಂದು ಬಾಂಧವರ ಆಗಮನವನ್ನು ವಿಚಾರಿಸುತ್ತಿದ್ದಾರೆ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ರವಿಚಂದ್ರನ್ ಅವರ ಆತ್ಮೀಯ ಸ್ನೇಹಿತ ಇವರು ಕೂಡ ಆಗಮಿಸಿ ವಧುವರರಿಗೆ ಶುಭಾಶಯ ಕೋರಿದ್ದಾರೆ. ಶಿವಣ್ಣನ ಜೊತೆ ರಾಘಣ್ಣ ಕೂಡ ಮದುವೆಗೆ ಬಂದಿದ್ದಾರೆ. ಸಾಧುಕೋಕಿಲ ಅವರು ಕುಟುಂಬ ಸಮೇತ ಆಗಮಿಸಿದ್ದಾರೆ ಮತ್ತು ಡೈರೆಕ್ಟರ್ ಯೋಗರಾಜ್ ಭಟ್ ಅವರು ಕೂಡ ವಧುವರರಿಗೆ ಆಶೀರ್ವದಿಸಲು ಬಂದಿದ್ದಾರೆ. ಖುಷ್ಬು ಅವರು ರವಿಚಂದ್ರನ್ ಅವರಿಗೆ ಬಹಳ ಆತ್ಮೀಯರು ಇವರು ಸಹ ಉಡುಗೊರೆಯೊಂದಿಗೆ ಮಧುಮಕ್ಕಳಿಗೆ ಶುಭಾಶಯ ತಿಳಿಸಲು ಬಂದಿದ್ದಾರೆ. ಸಿಟಿ ರವಿ ಅವರು ಕೂಡ ರಿಸೆಪ್ಶನ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಉಮಾಶ್ರೀ ಅವರಿಗೂ ಆಹ್ವಾನ ತಲುಪಿತ್ತು ಹೀಗಾಗಿ ಅವರು ಸಹ ರವಿಚಂದ್ರನ್ ಪುತ್ರನಿಗೆ ಶುಭ ಹಾರೈಸಲು ಬಂದಿದ್ದಾರೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಸಹ ಮದುವೆ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ರವಿಚಂದ್ರನ್ ಅವರ ಮನೆಯ ಯಾವುದೇ ಸಮಾರಂಭ ಇದ್ದರೂ ಕೂಡ ಹಂಸಲೇಖ ಅವರು ತಪ್ಪಿಸಿಕೊಳ್ಳುವುದಿಲ್ಲ ಯಾಕೆಂದರೆ ಅವರ ಒಂದು ಕುಟುಂಬದ ಒಂದು ಭಾಗವಾಗಿ ಹಂಸಲೇಖ ಅವರು ಇದ್ದಾರೆ. ಈಗ ಮನೋರಂಜನ್ ಮದುವೆಗೆ ಕುಟುಂಬ ಸಮೇತ ಹಂಸಲೇಖ ಅವರು ಬಂದಿದ್ದಾರೆ. ನಿರೂಪಕ ಮಾಸ್ಟರ್ ಆನಂದ್ ಅವರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ, ಇವರ ಜೊತೆ ಆಂಕರ್ ಅಕುಲ್ ಬಾಲಾಜಿ ಅವರು ಕೂಡ ಭಾಗವಹಿಸಿ ನವ ವಧುವರರಿಗೆ ಶುಭ ಹಾರೈಸಿದ್ದಾರೆ. ಇದರೊಂದಿಗೆ ಇನ್ನು ಅನೇಕ ಕರ್ನಾಟಕದ ಗಣ್ಯ ವ್ಯಕ್ತಿಗಳು ರಾಜಕೀಯ ವ್ಯಕ್ತಿಗಳು ಮತ್ತು ಸಿನಿಮಾ ಇಂಡಸ್ಟ್ರಿಗೆ ಸಂಬಂಧಪಟ್ಟ ಹಲವಾರು ಸ್ನೇಹಿತರು ಕೂಡ ಭೇಟಿ ಕೊಟ್ಟಿದ್ದಾರೆ.

ಅಪ್ಪು ಪ್ರತಿನಿತ್ಯ ರಾತ್ರಿ ಮಾಡುತ್ತಿದ್ದ ಈ ಕೆಲಸದಿಂದಲೇ ಸಾ-ವ-ನ-ಪ್ಪಿ-ದ್ದು ಎಂಬ ರೋ.ಚ.ಕ ಮಾಹಿತಿಯನ್ನು ತೆರೆದಿಟ್ಟ ಪ್ರಶಾಂತ್ ಸಂಭರ್ಗಿ.

ಅಪ್ಪು ನಮ್ಮೆಲ್ಲರನ್ನು ಬಿಟ್ಟು ಅ.ಗ.ಲಿ 10 ತಿಂಗಳೇ ಆಗುತ್ತಾ ಬರುತ್ತಿದೆ ಆದರೂ ಕೂಡ ಅವರನ್ನು ಮರೆಯೋದಕ್ಕೆ ಸಾಧ್ಯವಾಗುತ್ತಿಲ್ಲ ಅಷ್ಟೇ ಅಲ್ಲದೆ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಹೋಗುವುದಕ್ಕೆ ಏನು ಕಾರಣ ಎಂಬ ವಿಚಾರವನ್ನು ಸಾಕಷ್ಟು ಅಭಿಮಾನಿಗಳು ಚಿಂತಿಸುತ್ತಲೇ ಇರುತ್ತಾರೆ. ಸದ್ಯಕ್ಕೆ ಅಪ್ಪು ಅವರುಗೆ ಹೃ.ದ.ಯ.ಘಾ.ತ ಆಗುವುದಕ್ಕೆ ನಿಜವಾದ ಕಾರಣವೇನು ಎಂಬ ವಿಚಾರವನ್ನು ಪ್ರಶಾಂತ್ ಸಂಭರ್ಗಿ ತೆರೆದಿಟ್ಟಿದ್ದಾರೆ. ಹೌದು ಇವರು ಹೇಳಿದಂತಹ ವಿಚಾರವನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಎನಿಸಬಹುದು ಆದರೂ ಕೂಡ ಇದು ಸತ್ಯ ಎಂದು ಪ್ರಶಾಂತ್ ಮಾಧ್ಯಮದ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅಪ್ಪು ಅಭಿಮಾನಿಗಳು ನಿಜಕ್ಕೂ ಕೂಡ ಬಹಳ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಒಂದು ಕೆಲಸವನ್ನು ಅಪ್ಪು ಅವರು ಮಾಡದೆ ಇದ್ದಿದ್ದರೆ ಖಂಡಿತವಾಗಿಯೂ ಕೂಡ ಇಂದು ಅಪ್ಪು ಅವರು ನಮ್ಮ ಜೊತೆಗೆ ಇರುತಿದ್ದರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅಪ್ಪು ಅವರಿಗೆ ಸಾಕಷ್ಟು ಸ್ನೇಹಿತರಿದ್ದಾರೆ ಅವರ ಬಳಗ ಬಹಳನೇ ದೊಡ್ಡದು ಚಿತ್ರದಂಗದವರು ಇರಬಹುದು ಕುಟುಂಬದವಸ್ಥರು ಇರಬಹುದು ಅಥವಾ ನೆರೆಹೊರೆಯವರು ಇರಬಹುದು ಎಲ್ಲರನ್ನೂ ಕೂಡ ಬಹಳ ಪ್ರೀತಿ-ವಿಶ್ವಾಸದಿಂದ ನೋಡುತ್ತಿದ್ದರು ಇವರ ಫ್ರೆಂಡ್ಶಿಪ್ ಲಿಸ್ಟ್ ನೋಡಿದರೆ ತುಂಬಾನೇ ದೊಡ್ಡದಾಗಿರುತ್ತದೆ. ಅದರಲ್ಲಿ ಪ್ರಶಾಂತ್ ಸಾಂಬರ್ಗಿ ಅವರು ಕೂಡ ಒಬ್ಬರು ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಪ್ರಶಾಂತ್ ಸಂಬರ್ಗಿ ಜನರಲಿಸ್ಟ್ ಅಷ್ಟೇ ಅಲ್ಲದೆ ನಿರ್ಮಾಪಕರು ಕೂಡ ಹೌದು ಹಲವರು ಸಿನಿಮಾಗಳಿಗೆ ಬಂಡವಾಳನ್ನು ಹೂಡಿಕೆ ಮಾಡಿದ್ದಾರೆ ಬಿಗ್ ಬಾಸ್ ಸೀಸನ್ ಏಳರಲ್ಲೂ ಕೂಡ ಕಾಣಿಸಿಕೊಂಡಿದ್ದರು ಬಿಗ್ ಬಾಸ್ ನಿಂದ ಸಾಕಷ್ಟು ಜನಮನನೆಯನ್ನು ಗಳಿಸಿದವರು.

ಇತ್ತೀಚಿಗಷ್ಟೇ ಪ್ರಶಾಂತ್ ಮಾಧ್ಯಮ ಮಿತ್ರರೊಂದಿಗೆ ಸಂದರ್ಶನ ಒಂದು ನಡೆಸಿದರೆ ಈ ಸಮಯದಲ್ಲಿ ಅಪ್ಪು ಹಾಗೂ ಅವರ ನಡುವೆ ಇದ್ದಂತಹ ಸ್ನೇಹ ಸಂಬಂಧವನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಅಪ್ಪು ಅವರು ಮಾಡುತ್ತಿದ್ದಂತಹ ಹವ್ಯಾಸಗಳು ಕೆಲಸಗಳು ಹಾಗೂ ಅವರ ಜೀವನ ಚರಿ ಇನ್ನಿತರ ಇಂಟರೆಸ್ಟಿಂಗ್ ಮಾಹಿತಿಯನ್ನು ಅನಾವರಣಗೊಳಿಸಿದ್ದಾರೆ. ಪ್ರಶಾಂತ್ ಸಂಬರ್ಗಿ ಅವರು ಹೇಳುವ ಪ್ರಕಾರ ಅಪ್ಪು ಅವರಿಗೆ ಸಿನಿಮಾ ನೋಡುವುದು ಎಂದರೆ ಬಹಳನೇ ಇಷ್ಟವಂತೆ. ಇದರ ಜೊತೆಗೆ ಕಾರು ಮತ್ತು ಸೈಕಲ್ ಬೈಕ್ ರೇಸ್ ಗಳು ಹೆಚ್ಚಾಗಿ ಇದ್ದಂತೆ ಇದೇ ಕಾರಣಕ್ಕೆ ಅಪ್ಪು ಅವರು ಬಿಡುವಿನ ಸಮಯದಲ್ಲಿ ಬೈಕ್ ರೈಸು ಹೋಗುವುದು ಕಾರನ್ನು ಓಡಿಸುವುದು ಮಾಡುತ್ತಿದ್ದರಂತೆ. ಬೆಂಗಳೂರಿಗೆ ಯಾವುದೇ ಹೊಸ ಮಾಡೆಲ್ ಕಾರ್ ಪ್ರವೇಶ ಮಾಡಿದ್ರು ಮೊದಲು ಅದರ ಟೆಸ್ಟಿಂಗ್ ಗೆ ಅಪ್ಪು ಅವರನ್ನೇ ಅಪ್ರೋಚ್ ಆಗುತ್ತಿದ್ದರು.

ಇನ್ನು ಹೀಗೆ ಯಾವುದೇ ಕಾರ್ ಕಂಪನಿ ಪುನೀತ್ ಅವರನ್ನ ಮೀಟ್ ಆಗ್ಬೇಕು ಅಂದ್ರೆ ಪ್ರಶಾಂತ್ ಸಂಬರ್ಗಿಯವರೇ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಇನ್ನು ಪ್ರಶಾಂತ್ ಸಂಬರಗಿ ಹಾಗೂ ಪುನೀತ್ ರಾಜಕುಮಾರ್ ಸಾಕಷ್ಟು ವಿಚಾರಗಳನ್ನ ಒಟ್ಟಾಗಿ ಕುಳಿತು ಚರ್ಚೆ ಮಾಡುತ್ತಿದ್ದರು. “ನಾವಿಬ್ಬರು ಅತ್ಯುತ್ತಮ ಸ್ನೇಹಿತರಾಗಿದ್ವಿ ಅವರ ಜೊತೆಗೆ ಕಳೆದ ಸಮಯ ನಿಜಕ್ಕೂ ಅದ್ಭುತ ಅದು ಗೋಲ್ಡನ್ ಡೇಸ್. ನಾನು ಪುನೀತ್ ಜೊತೆಗೆ ಇರುವ ಫೋಟೋಗಳನ್ನು ಯಾರಾದರೂ ನನಗೆ ಕಳಿಸಿ ನೀವು ಈ ಸಮಾರಂಭದಲ್ಲಿ ಒಟ್ಟಿಗೆ ಇದ್ದರೆ ನೋಡಿ ಅಂತ ಹೇಳಿದಾಗ ನನಗೆ ನಿಜಕ್ಕೂ ಖುಷಿ ಅನ್ನಿಸುತ್ತೆ. ಸಾ.ವು ಯಾರಿಗೆ ಹೇಗೆ ಬರುತ್ತೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ ಯಾಕಂದ್ರೆ ನಾನು ಹಾಗೂ ಪುನೀತ್ ಅವರು ಸೇರಿ ಒಂದು ಸಿನಿಮಾ ಮಾಡುವುದಿತ್ತು. ಈ ಬಗ್ಗೆ ಅವರೊಂದಿಗೆ ನಾನು ಮಾತನಾಡಿದ್ದೆ. ಅಕ್ಟೋಬರ್ 2 ನನಗೆ ಕರೆ ಮಾಡಿ ಮುಂಬೈನ ನಿರ್ಮಾಪಕರನ್ನು ಕರೆದುಕೊಂಡು ಬರುವಂತೆ ಪುನೀತ್ ಹೇಳಿದ್ರು.

ಅದಾಗಿ 10 ದಿನ ಕಳೆದ ನಂತರ ಒಂದು ಮೆಸೇಜ್ ಮಾಡಿದ್ರು. ಅದಾದ ಬಳಿಕ ನನ್ನ ಕಿವಿಗೆ ಬಿದ್ದಿದೆ ಅಪ್ಪು ಸಾ.ವಿ.ನ ಸುದ್ದಿ ಇದು ನಿಜಕ್ಕೂ ಅರಗಿಸಿಕೊಳ್ಳಲಾಗದ ಘಟನೆ” ಅಂತ ಪ್ರಶಾಂತ್ ಸಂಬರಗಿ ಬಹಳ ನೋ.ವಿನಿಂದ ಹೇಳಿಕೊಂಡಿದ್ದಾರೆ. ಇನ್ನು ಪ್ರಶಾಂತ್ ಸಂಬರ್ಗಿ ಪುನೀತ್ ರಾಜಕುಮಾರ್ ಅವರಿಗೆ ಎಷ್ಟು ಸಣ್ಣ ವಯಸ್ಸಿನಲ್ಲಿಯೇ ಹೃ.ದ.ಯಾ.ಘಾ.ತ ಆಗುವುದಕ್ಕೆ ಕಾರಣ ಏನು ಇರಬಹುದು ಅಂತ ನಾನು ಕೆಲವು ವೈದ್ಯರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದಿದ್ದಾರೆ. ಯಾಕಂದ್ರೆ ಪುನೀತ್ ರಾಜಕುಮಾರ್ ತುಂಬಾ ಫಿಟ್ ಆಗಿರುವ ವ್ಯಕ್ತಿ ಅಲ್ಲದೆ ಅವರ ಆಹಾರ ಕ್ರಮವಾಗಲಿ, ಜೀವನ ಶೈಲಿಯಾಗಲಿ ಎಲ್ಲವೂ ಕ್ರಮಬದ್ಧವಾಗಿಯೇ ಇತ್ತು. ಆದರೂ ಹೀಗೆ ಹಾ.ರ್ಟ್ ಅ.ಟ್ಯಾ.ಕ್ ಆಗಿರುವುದಕ್ಕೆ ಕಾರಣವನ್ನು ನಾನು ಹುಡುಕಿದ್ದೇನೆ ಎನ್ನುತ್ತಾರೆ ಪ್ರಶಾಂತ್ ಸಂಬರ್ಗಿ.

ಲಾಕ್ಡೌನ್ ಸಮಯದಲ್ಲಿ ಯಾವ ಸಿನಿಮಾ ಶೂಟಿಂಗ್ ಕೂಡ ಇರಲಿಲ್ಲ ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಒಂದು ಹೊಸ ಹವ್ಯಾಸವನ್ನು ಶುರು ಮಾಡಿಕೊಂಡರು ಇದು ನಿಜಕ್ಕೂ ಕೆಟ್ಟ ಹವ್ಯಾಸ ಅಂತ ಸಂಬರಗಿ ಹೇಳಿದ್ದಾರೆ. ಆ ಹವ್ಯಾಸ ಯಾವುದು ಗೊತ್ತಾ?.. ಪುನೀತ್ ರಾಜಕುಮಾರ್ ಅವರು ಚಿತ್ರೀಕರಣ ಇಲ್ಲದ ವೇಳೆ ದಿನಕ್ಕೆ ಎರಡು ಸಿನಿಮಾ ನೋಡುವ ಅಭ್ಯಾಸವನ್ನು ಶುರು ಮಾಡಿಕೊಂಡರಂತೆ. ಸಂಜೆ 8 ರಿಂದ ಬೆಳಗಿನ ಜಾವ ಎರಡರವರೆಗೂ ಸಿನಿಮಾ ನೋಡುವುದು ನಂತರ ಅದರ ವಿಮರ್ಶೆ ಸಿನಿಮಾದ ಬಗ್ಗೆ ಸ್ನೇಹಿತರಿಗೆ ಕರೆ ಮಾಡಿ ಹೇಳುವುದು ಹೀಗೆ ಅವರ ನಿದ್ದೆಯ ಅವಧಿ ಕೇವಲ ನಾಲ್ಕು ಗಂಟೆ ಆಗಿತ್ತು. ಬೆಳಗಿನ ಜಾವ ಜಿಮ್ ಟ್ರೈನರ್ ಬಂದ ಕೂಡಲೇ ಅವರನ್ನು ಕಾಯಿಸುವುದು ಬೇಡ ಅಂತ ತಕ್ಷಣವೇ ಎದ್ದು ಜಿಮ್ ಮಾಡುವುದಕ್ಕೆ ಹೊರಟು ಬಿಡುತ್ತಿದ್ದರು.

ಲಾಕ್ ಡೌನ್ ಮುಗಿದ ನಂತರವೂ ಶೂಟಿಂಗ್ ಇದ್ದರೂ ಕೂಡ ಮನೆಗೆ ಬಂದ ನಂತರ ಇದೇ ಪ್ರಾಕ್ಟೀಸ್ ಮುಂದುವರೆಸಿದ್ರು. ಪುನೀತ್ ಎಷ್ಟೇ ಫಿಟ್ ಆಗಿ ಇದ್ದರೂ ಅವರ ನಿದ್ದೆ ಕಡಿಮೆಯಾಗಿರುವುದೇ ಅವರ ಹಾರ್ಟ್ ಅ ಟ್ಯಾಕ್ ಗೆ ಒಂದು ಕಾರಣ ಅಂತ ಪ್ರಶಾಂತ್ ಸಂಬರ್ಗಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹೇಳಿದ್ದಾರೆ. ಪ್ರಸನ್ನ ಸಾಂಬರ್ ಗೆ ಬರುವ ಹೇಳಿದಂತಹ ಈ ವಿಚಾರ ಎಷ್ಟು ನಿಜ ಎಷ್ಟು ಸುಳ್ಳು ಎಂಬುದು ತಿಳಿದಿಲ್ಲ ಆದರೆ ಅಪ್ಪು ಅಪ್ಪು ಅವರು ನಮ್ಮೆಲ್ಲರನ್ನು ಇಷ್ಟು ಬೇಗ ಬಿಟ್ಟು ಹೋಗಿದ್ದು ನಿಜಕ್ಕೂ ಕೂಡ ದುಃ.ಖಕರ ಸಂಗತಿ ಅಂತ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ವ್ಯಕ್ತಪಡಿಸಿ.

ದರ್ಶನ್ ಅವರ 56ನೇ ಸಿನಿಮಾಗೆ ಮಾಲಾಶ್ರೀ ಮಗಳನ್ನು ಕೈ ಬಿಟ್ಟು ಅನುಷ್ಕಾ ಶೆಟ್ಟಿಯನ್ನು ಹೀರೋಯಿನ್ ಆಗಿ ಹಾಕಿಕೊಳ್ತಾರ.?

ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಈಗಾಗಲೇ ಬಿಡುಗಡೆಗೆ ಸಜ್ಜಾಗಿದ್ದು ಡಬ್ಬಿಂಗ್ ಕಾರ್ಯವು ಕೂಡ ಮುಗಿದಿದೆ ಹಾಡುಗಳ ಚಿತ್ರೀಕರಣವು ಕೂಡ ಸಂಪೂರ್ಣವಾಗಿದೆ ಇನ್ನೇನು ಮುಂದಿನ ತಿಂಗಳು ಬಿಡುಗಡೆಯಾಗಬೇಕಷ್ಟೆ. ಇದರ ಬೆನ್ನಲ್ಲೇ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಡಿ ಬಾಸ್ ಅವರ ಮುಂದಿನ ಸಿನಿಮಾ ಯಾವುದು ಎಂಬುದನ್ನು ರಾಕ್ ಲೈನ್ ವೆಂಕಟೇಶ್ ಪ್ರೊಡಕ್ಷನ್ ಅವರು ರಿವೀಲ್ ಮಾಡಿದ್ದಾರೆ ಹೌದು. ಕನಕಪುರ ಸಮೀಪದಲ್ಲಿ ಇರುವಂತಹ ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ ದರ್ಶನ ಅವರ 56ನೇ ಸಿನಿಮಾ ಕಾಟೇರ ಸಿನಿಮಾದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಗಿತ್ತು. ಈ ಒಂದು ಅದ್ದೂರಿ ಕಾರ್ಯಕ್ರಮಕ್ಕೆ ಚಿತ್ರರಂಗದ ಕೆಲವು ಗಣ್ಯ ಅತಿಥಿಗಳು ಭಾಗವಹಿಸಿದ್ದರು ವಿಶೇಷವಾಗಿ ಮಾಲಾಶ್ರೀ ತರುಣ್ ಸುಧೀರ್ ರಾಕ್ಲೈನ್ ವೆಂಕಟೇಶ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ದರ್ಶನ್ ಅವರ 56ನೇ ಸಿನಿಮಾಗೆ ಮಾಲಾಶ್ರೀ ಮಗಳು ಹೀರೋಯಿನ್ ಆಗಿ ನಟಿಸಲಿದ್ದಾರೆ ಎಂಬ ವಿಚಾರವನ್ನು ರಿವೀಲ್ ಮಾಡಿದ್ದರು ಇದೇ ಮೊದಲ ಬಾರಿಗೆ ಮಾಲಾಶ್ರೀ ಅವರ ಮಗಳು ರಾಧನಾ ರಾಮ್ ಅವರು ದರ್ಶನ ಅವರ ಜೊತೆ ಅಭಿನಯಿಸುತ್ತಿರುವುದು. ಸ್ಯಾಂಡಲ್ ವುಡ್ ನಲ್ಲಿ ಈವರೆಗೂ ರಾಧನ ರಾಮ್ ಅವರು ಎಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ. ದರ್ಶನವರ ಜೊತೆ ನಾಯಕ ನಟಿಯಾಗಿ ಎಂಟ್ರಿ ಪಡೆಯುವುದು ಇವರ ಮೂಲ ಉದ್ದೇಶವಾಗಿರುತ್ತದೆ ಹಾಗಾಗಿ ನಟನೆಗೆ ತರಬೇತಿಯನ್ನು ಪಡೆದು ಎರಡು ವರ್ಷವಾಗಿದ್ದರು ಕೂಡ ಯಾರ ಸಿನಿಮಾದಲ್ಲೂ ಕೂಡ ರಾಧನಾ ರಾಮ್ ಅವರು ನಟಿಸುವುದಕ್ಕೆ ಒಪ್ಪಿಕೊಂಡಿರಲಿಲ್ಲ.

ಇದೀಗ ದರ್ಶನ್ ಅವರ ಐವತ್ತಾರನೇ ಸಿನಿಮಾಗೆ ರಾಧನ ರಾಮ್ ಅವರೇ ಹೀರೋ ಇನ್ ಎಂಬುದನ್ನು ಫಿಕ್ಸ್ ಮಾಡಿದ್ದರು ಈ ವಿಚಾರದ ಬಗ್ಗೆ ಮಾಲಾಶ್ರೀ ಹಾಗೂ ತರುಣ್ ಸುಧೀರ್ ರಾಕ್ ಲೈನ್ ವೆಂಕಟೇಶ್ ದರ್ಶನ್ ಎಲ್ಲರೂ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದರು. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕೆಲವು ಟೀಕೆ ನಿಂ.ದ.ನೆಗಳು ಕೂಡ ಕೇಳಿ ಬರುತ್ತಿತ್ತು. ಏಕೆಂದರೆ ದರ್ಶನ್ ಅವರಿಗೆ 46 ವರ್ಷ ರಾಧಾನ ರಾಮ್ ಅವರಿಗೆ ಕೇವಲ 21 ವರ್ಷ ಮಗಳ ವಯಸ್ಸಿನ ಜೊತೆ ಹೀರೋಯಿನ್ ಆಗಿ ಪಾತ್ರ ಮಾಡುವುದಕ್ಕೆ ಹೇಗೆ ಸಾಧ್ಯ ದಯವಿಟ್ಟು ಪಾತ್ರವನ್ನು ಬದಲಾವಣೆ ಮಾಡಿ ಎಂದು ಕೆಲವು ಅಭಿಮಾನಿಗಳು ಕೇಳಿಕೊಂಡಿದ್ದರು. ನೆಟ್ಟಿಗರಂತೂ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡಿದರೂ ಆದರೆ ಇದು ಯಾವುದರ ಬಗ್ಗೆಯೂ ಕೂಡ ದರ್ಶನ್ ಆಗಲಿ ಮಾಲಾಶ್ರೀ ಅವರಾಗಲಿ ಪ್ರತಿಕ್ರಿಯೆ ನೀಡಿರಲಿಲ್ಲ.

ಆದರೆ ಇದ್ದಕ್ಕಿದ್ದ ಹಾಗೆ ಇದೀಗ ದರ್ಶನ್ ಅವರ 56ನೇ ಸಿನಿಮಾಗೇ ಬೇರೆ ಹೀರೋಯಿನ್ ಅನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೌದು ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅನುಷ್ಕಾ ಶೆಟ್ಟಿ ಅವರ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಈ ಫೋಟೋ ನೋಡಿದಂತಹ ಅಭಿಮಾನಿಗಳು ಡಿ ಬಾಸ್ ಅವರ 56ನೇ ಸಿನಿಮಾ ಗೆ ಇವರೇ ಹೀರೋಯಿನ್ ಎಂದು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೆ ಈ ವಿಚಾರವನ್ನು ಎಲ್ಲಾ ಕಡೆ ಸ್ಪ್ರೆಡ್ ಮಾಡುತ್ತಿದ್ದಾರೆ ಹಾಗಾಗಿ ರಾಧನ ರಾಮ್ ಅವರನ್ನು ಕೈ ಬಿಟ್ಟು ಅನುಷ್ಕಾ ಶೆಟ್ಟಿ ಅವರನ್ನು ಈ ಸಿನಿಮಾಗೆ ಹಾಕಿಕೊಳ್ಳಬಹುದು ಎಂದು ಗಾಂಧಿನಗರದವರು ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಈ ವಿಚಾರದ ಬಗ್ಗೆ ದರ್ಶನ್ ಆಗಲಿ ಅಥವಾ ರಾಕ್ ಲೈನ್ ವೆಂಕಟೇಶ್ ಪ್ರೊಡಕ್ಷನ್ ಆಗಲಿ ಎಲ್ಲಿಯೂ ಕೂಡ ಪ್ರತಿಕ್ರಿಯೆ ನೀಡಿಲ್ಲ ಇವೆಲ್ಲವನ್ನು ನೋಡುತ್ತಿದ್ದರೆ ಅಭಿಮಾನಿಗಳ ಅನುಮಾನ ಭಾಗಶಃ ಸತ್ಯ ಎಂಬುದು ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ. ಇನ್ನು ಈ ಫೋಟೋ ನೋಡಿದಂತಹ ಕೆಲವು ಅಭಿಮಾನಿಗಳು ಮಾಲಾಶ್ರೀ ಅವರ ಮಗಳಿಗೆ ಮೋಸ ಮಾಡಿ ಈ ರೀತಿ ಬೇರೆ ಹೀರೋಯಿನ್ ಅನ್ನೋ ಆಯ್ಕೆ ಮಾಡಿಕೊಳ್ಳುವುದು ತಪ್ಪು. ಈಗಾಗಲೇ ಮುಹೂರ್ತದ ಚಿತ್ರೀಕರಣ ನೆರವೇರಿದೆ ಇಂತಹ ಸಂದರ್ಭದಲ್ಲಿ ಮಾಲಾಶ್ರೀ ಮಗಳ ಕೈಬಿಡುವುದು ತಪ್ಪು ಅಂತ ಹೇಳಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ದರ್ಶನ್ ಅವರು ಒಂದು ಬಾರಿ ಮಾತು ಕೊಟ್ಟ ಮೇಲೆ ಮುಗಿಯಿತು. ಆ ಮಾತಿನಿಂದ ಅವರು ಎಂದು ಕೂಡ ಹಿಂದೆ ಬರುವುದಿಲ್ಲ ಈ ಸಿನಿಮಾಗೆ ಮಾಲಾಶ್ರೀ ಅವರ ಮಗಳೇ ಹೀರೋಯಿನ್ ಆಗಿ ಬರುತ್ತಾರೆ ಎಂದು ಹೇಳುತ್ತಿದ್ದಾರೆ.

ಇನ್ನು ಕೆಲವು ನೆಟ್ಟಿಗರು ಮಾಲಾಶ್ರೀ ಅವರ ಮಗಳಿಗೆ ಯಾವುದೇ ರೀತಿಯಾದಂತಹ ಅನುಭವವಿಲ್ಲ ವಯಸ್ಸು ಕೂಡ ಚಿಕ್ಕದು ಹಾಗಾಗಿ ಈ ಒಂದು ಸಿನಿಮಾಗೆ ಅನುಷ್ಕಾ ಶೆಟ್ಟಿಯವರೇ ಹೀರೋಯಿನ್ ಅಂತ ಹೇಳುತ್ತಿದ್ದಾರೆ. ಈ ವಿಚಾರದ ಬಗ್ಗೆ ದರ್ಶನ್ ಹಾಗೂ ಪ್ರೊಡಕ್ಷನ್ ಟೀಂ ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ದರ್ಶನ್ ಅವರಿಗೆ ನಾಯಕ ನಟಿಯಾಗಿ ರಾಧಾ ರಾಮ್ ಅವರು ಬಂದರೆ ಚೆನ್ನಾಗಿರುತ್ತದೆಯೋ ಅಥವಾ ಅನುಷ್ಕಾ ಶೆಟ್ಟಿ ಅವರು ಬಂದರೆ ಚೆನ್ನಾಗಿ ಇರುತ್ತದೆಯೋ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.

ಸೀರೆಲೇ ಹುಡುಗಿರ ನೋಡಲೆಬಾರದು ನಿಲ್ಲಲ್ಲ ಟೆಂಪರೇಚರ್ ಹಾಡಿಗೆ ಹೆಜ್ಜೆ ಹಾಕಿದ ಅನುಶ್ರೀ, ಈ ಕ್ಯೂಟ್ ವಿಡಿಯೋ ನೋಡಿ ಎಷ್ಟು ಚಂದ ಇದೆ.

ಆಂಕರ್ ಅನುಶ್ರೀ ಯಾವುದೇ ಕಾರ್ಯಕ್ರಮ ಇರಲಿ ಅಥವಾ ರಿಯಾಲಿಟಿ ಶೋ ಇರಲಿ, ಸಿನಿಮಾಗೆ ಸಂಬಂಧಪಟ್ಟಂತಹ ಸಮಾರಂಭಗಳು ಇರಲಿ ಎಲ್ಲದರಲ್ಲೂ ಕೂಡ ಅನುಶ್ರೀ ಅವರ ಆಂಕರಿಂಗ್ ಇದ್ದೆ ಇರುತ್ತದೆ, ಆಂಕರಿಂಗ್ ಮಾಡುವುದರಲ್ಲಿ ಇವರನ್ನು ಮೀರಿಸಿದವರು ಮತ್ಯಾರು ಇಲ್ಲ ಅಂತಾನೇ ಹೇಳಬಹುದು ಸದ್ಯಕ್ಕೆ ಕಿರುತೆರೆಯಲ್ಲಿ ನಂಬರ್ ಒನ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವಂತಹ ಪ್ರತಿಯೊಂದು ಕಾರ್ಯಕ್ರಮವನ್ನು ಕೂಡ ಇವರೇ ನಡೆಸಿಕೊಡುತ್ತಾರೆ. ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮ, ಸರಿಗಮಪ ಕಾರ್ಯಕ್ರಮ ಇನ್ನು ಇತರೆ ಕಾರ್ಯಕ್ರಮಗಳಲ್ಲಿ ಅನುಶ್ರೀ ಅವರು ಇದ್ದೇ ಇರುತ್ತಾರೆ. ಕೇವಲ ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯ ಹಲವಾರು ಸಿನಿಮ ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಂಡು ಹೋಗುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಅನುಶ್ರೀ ಅವರ ಮಾತು ಅವರ ಆಂಕರಿಂಗ್ ಅಂದರೆ ಅಲ್ಲಿ ಜನ ಸಮೂಹವೇ ನೆರೆದಿರುತ್ತದೆ.

ತನ್ನ ಚಟಪಟ ಮಾತಿನ ಮುಖಾಂತರವೇ ಎಲ್ಲರ ಗಮನವನ್ನು ಸೆಳೆಯುತ್ತಾರೆ ಮೂಲತಃ ಮಂಗಳೂರಿನವರಾದರು ಕೂಡ ಸ್ಪಷ್ಟ ಕನ್ನಡ ಮಾತನಾಡುತ್ತಾರೆ ಈ ಕಾರಣಕ್ಕಾಗಿ ಅನುಶ್ರೀ ಅವರಿಗೆ ಎಲ್ಲದ ಬೇಡಿಕೆ. ಇನ್ನು ಇವರ ಸಂಭಾವನೆಯೂ ಕೂಡ ಕಡಿಮೆ ಏನಲ್ಲ ಒಂದು ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಒಂದರಿಂದ ಮೂರು ಲಕ್ಷ ರೂಪಾಯಿ ಸಂಬಳವನ್ನು ತೆಗೆದುಕೊಳ್ಳುತ್ತಾರೆ. ದುಬಾರಿ ಸಂಭಾವನೆ ಪಡೆಯುವ ಆಂಕರಿಂಗ್ ಪೈಕಿ ಅನುಶ್ರೀ ಅವರು ಮೊದಲಿಗೆ ಹೇಳಬಹುದು. ಇನ್ನು ಅನುಶ್ರೀ ಅವರು ಯಾವಾಗಲೂ ಕೂಡ ಲವಲವಿಕೆಯಿಂದ ಸೆಟ್ ನಲ್ಲಿ ಇರುವಂತಹ ಪ್ರತಿಯೊಬ್ಬರನ್ನು ಕೂಡ ಮಾತನಾಡಿಸುವುದನ್ನು ನೀವು ಸಾಮಾಜಿಕ ಜಾಲತಾಣ ಖಾತೆಯಲ್ಲಿ ನೋಡಬಹುದು ಇದರ ಜೊತೆಗೆ ಎಲ್ಲಾ ಸ್ಪರ್ಧಿಗಳ ಜೊತೆ ಲವ್ಲಿಯಾಗಿ ಇರುತ್ತಾರೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಬಿಡುವಿನ ಸಮಯದಲ್ಲಿ ಸ್ಪರ್ಧಿಗಳ ಜೊತೆ ಹೆಜ್ಜೆಯನ್ನು ಹಾಕುತ್ತಾರೆ ಸದ್ಯಕ್ಕೆ ಅನುಶ್ರೀ ಅವರು ಕಾಮಿಡಿ ನಟ ಆದಂತಹ ಸೂರಜ್ ಹಾಗೂ ಇನ್ನಿತರ ಕಲಾವಿದರೊಂದಿಗೆ ಕಿಚ್ಚ ಸುದೀಪ್ ಅಭಿನಯ ಹಾಗೂ ರಚಿತರಾಮ್ ಅಭಿನಯದ ರನ್ನ ಸಿನಿಮಾದ ಸೀರೆಲಿ ಹುಡುಗಿರ ನೋಡಲೆಬಾರದು ಎಂಬ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ. ಈ ಡ್ಯಾನ್ಸ್ ಬಹಳ ಮನ ಮೋಹಕವಾಗಿದ್ದು ನೋಡುಗರ ಕಣ್ಮನವನ್ನು ಸೆಳೆಯುತ್ತಿದೆ ಅನುಶ್ರೀ ಅವರು ಆಂಕರಿಂಗ್ ನಲ್ಲಿ ಮಾತ್ರ ಮೊದಲಿಗರು ಅಲ್ಲ ಡ್ಯಾನ್ಸ್ ಮಾಡುವುದರಲ್ಲೂ ಕೂಡ ತುಂಬಾನೇ ಪ್ರಾವಿನ್ಯತೆಯನ್ನು ಪಡೆದುಕೊಂಡಿದ್ದಾರೆ ಎಂಬುದು ಈ ಡ್ಯಾನ್ಸ್ ನೋಡಿದರೆ ತಿಳಿಯುತ್ತದೆ.

ಬಿಗ್ ಬಾಸ್ ಸೀಸನ್ ಒಂದರಲ್ಲಿ ಕೂಡ ಅನುಶ್ರೀ ಅವರು ಸ್ಪರ್ಧಿಸಿರುತ್ತಾರೆ ಈ ಒಂದು ಕಾರ್ಯಕ್ರಮದ ನಂತರ ಇವರಿಗೆ ಹೆಚ್ಚು ಹೆಸರು ಮತ್ತು ಖ್ಯಾತಿ ದೊರೆಯುತ್ತದೆ. ತದನಂತರ ಕಸ್ತೂರಿ ವಾಹಿನಿಯಲ್ಲಿ ಮೂಡಿ ಬರುವಂತಹ ಬಂಗಾರದ ಬೇಟೆ ಎಂಬ ಕಾರ್ಯಕ್ರಮದಲ್ಲಿಯೂ ಕೂಡ ಪಾಲ್ಗೊಳ್ಳುತ್ತಾರೆ ಇಲ್ಲಿಂದ ಇವರ ಕಿರಿಯರ್ ಪ್ರಾರಂಭವಾಗುತ್ತದೆ ಅಂತಾನೇ ಹೇಳಬಹುದು. ಒಂದು ಕಾಲದಲ್ಲಿ ಅವಕಾಶಗಳು ಇಲ್ಲದೆ ಜೀವನ ಸಾಗಿಸಲು ತುಂಬಾನೇ ಪರಿತಪಿಸುತ್ತಿದ್ದರು ಆದರೆ ಇದೀಗ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದಿಂದ ಕಿರುತೆರೆಯಲ್ಲಿ ಒಳ್ಳೆಯ ಸ್ಥಾನಮಾನವನ್ನು ಗುಟ್ಟಿಸಿಕೊಂಡು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ಇದರ ಜೊತೆಗೆ ಮನರಂಜನೆಯನ್ನು ನೀಡುತ್ತಿದ್ದಾರೆ. ಸದ್ಯಕ್ಕೆ ಅನುಶ್ರೀ ಅವರು ಮಾಡಿದಂತಹ ಈ ಒಂದು ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಧನ್ಯವಾದಗಳು ಸ್ನೇಹಿತರೆ ಈ ಲೇಖನಕ್ಕೆ ಲೈಕ್ ಕೊಟ್ಟು ಶೇರ್ ಮಾಡಿ

ವಿಷ್ಣುವರ್ಧನ್ ಅಳಿಯ ಅನಿರುಧ್ ಗೆ ಇದೆಂಥ ಪರಿಸ್ಥಿತಿ ಬಂತು.! ಕಿರುತೆರೆಯಿಂದ ಎರಡು ವರ್ಷ ಬ್ಯಾನ್, ಅನಿರುಧ್ ಮಾಡಿದ ತಪ್ಪಾದರೂ ಏನು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುಧ್ ಅವರು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಜೊತೆ ಜೊತೆಯಲಿ ಎಂಬ ಧಾರಾವಾಹಿಯಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯಲ್ಲಿ ಆರ್ಯವರ್ಧನ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದ್ದರು ಈಗಾಗಲೇ ಜೊತೆ ಜೊತೆಯಲಿ ಧಾರವಾಹಿ ಪ್ರಾರಂಭವಾಗಿ ನಾಲ್ಕು ವರ್ಷಗಳ ಕಳೆದು ಹೋಗಿದೆ. ನಾಲ್ಕು ವರ್ಷದಿಂದಲೂ ಕೂಡ ಉತ್ತಮವಾದಂತಹ ಪ್ರದರ್ಶನವನ್ನೇ ಕಂಡುಬಂದಿತು ಅಷ್ಟೇ ಅಲ್ಲದೆ ಸೀರಿಯಲ್ ಅಂದರೆ ಹೀಗಿರಬೇಕು ಎಂದು ತೋರಿಸಿಕೊಟ್ಟಿತ್ತು. ಮೇಕಿಂಗ್ ಆಗಿರಬಹುದು ವಿಸುವಲ್ ಎಫೆಕ್ಟ್ ಆಗಿರಬಹುದು ಅದ್ದೂರಿ ತನ ಆಗಿರಬಹುದು. ಎಲ್ಲವೂ ಕೂಡ ಜೊತೆ ಜೊತೆಯಲಿ ಧಾರಾವಾಹಿ ಬಂದ ನಂತರವಷ್ಟೇ ನಮ್ಮ ಕನ್ನಡ ಕಿರುತೆರೆಗೆ ಬಂದಿದ್ದು ಅಂತ ಹೇಳಿದರು ಕೂಡ ತಪ್ಪಾಗಲಾರದು.

ತೆಲುಗು ತಮಿಳು ಮಲಯಾಳಂ ಹಿಂದಿ ಭಾಷೆಗಳಿಗೆ ಹೋಲಿಕೆ ಮಾಡಿದರೆ ಕನ್ನಡ ಭಾಷೆಯಲ್ಲಿ ಮೇಕಿಂಗ್ ಕಡಿಮೆ ಮಟ್ಟದಲ್ಲಿ ಇತ್ತು ಅದ್ದೂರಿ ತನದಲ್ಲೂ ಅಷ್ಟೇ ಕಳಪೆಯನ್ನು ತೋರಿಸುತ್ತಿತ್ತು. ಆದರೆ ಜೊತೆ ಜೊತೆಯಲಿ ಧಾರಾವಾಹಿ ಮಾತ್ರ ಇವೆಲ್ಲವನ್ನು ಸುಳ್ಳು ಮಾಡಿ ಬೇರೆ ಭಾಷೆಗಳಿಗಿಂತಲೂ ಕೂಡ ಅದ್ದೂರಿಯಾಗಿ ಮೇಕಿಂಗ್ ಮಾಡಿತು. ಈ ಧಾರಾವಾಹಿ ಬಂದ ನಂತರ ಇತರೆ ಧಾರವಾಹಿಗಳು ಕೂಡ ಇದನ್ನೇ ಅನುಸರಿಸಿಕೊಂಡು ಹೋಗುತ್ತಿತ್ತು. ಇನ್ನು ಟಿ.ಆರ್.ಪಿ ಲೋಕಕ್ಕೆ ಬಂದರು ಯಾವಾಗಲೂ ಕೂಡ ಜೊತೆ ಜೊತೆಯಲಿ ಧಾರಾವಾಹಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುಧ್ ಅವರಿಗೆ ಒಂದು ಗೌರವ ಸ್ಥಾನಮಾನ ಎಲ್ಲವೂ ಕೂಡ ದೊರೆಯುತ್ತದೆ.

ಇದಕ್ಕಿಂತ ಮೊದಲು ಅನಿರುದ್ಧ ಅವರು ಬೆಳ್ಳಿತೆರೆಯಲ್ಲಿ ಹಲವಾರು ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಆದರೆ ಯಾವ ಸಿನಿಮಾ ಕೂಡ ಇವರ ಕೈಹಿಡಿಯಲಿಲ್ಲ ಸಾಲು ಸಾಲು ಸಿನಿಮಾಗಳು ಸೋತ ನಂತರ ಅನಿರುಧ್ ಅವರು ಚಿತ್ರರಂಗವೇ ಬೇಡ ಅಂತ ಒಂದಷ್ಟು ದಿನ ಮನೆಯಲ್ಲೇ ಕುಳಿತುಬಿಟ್ಟಿದ್ದರು. ಅಷ್ಟೇ ಅಲ್ಲದೆ ತಮ್ಮ ವೈಯಕ್ತಿಕ ವ್ಯವಹಾರದ ಗಮನವನ್ನು ನೀಡುತ್ತಾರೆ ಆ ಸಮಯದಲ್ಲಿ ಇವರಿಗೆ ಬದುಕನ್ನು ಕಲ್ಪಿಸಿಕೊಟ್ಟದ್ದು ಕಿರುತರೆ‌. ಹೌದು ಜೊತೆ ಜೊತೆಯಲಿ ಧಾರಾವಾಹಿ ತಂಡದ ಮುಖಾಂತರ ಇವರ ಲೈಫ್ ಗೆ ಒಂದು ಟರ್ನಿಂಗ್ ಪಾಯಿಂಟ್ ಎಂಬುದು ದೊರೆಯುತ್ತದೆ. ಅನಿರುಧ್ ಅವರಿಗೆ ಅವಕಾಶಗಳು ಇಲ್ಲದೆ ಇದ್ದಾಗ ಅವಕಾಶ ಕಲ್ಪಿಸಿಕೊಟ್ಟಿದ್ದು ಜೊತೆ ಜೊತೆಯಲಿ ತಂಡ ಈ ಒಂದು ಧಾರವಾಹಿ ಮೂಲಕ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಾರೆ. ಉತ್ತಮ ಹೆಸರು ಯಶಸ್ಸು ಇವರ ಅಭಿನಯಕ್ಕೆ ತಕ್ಕಂತಹ ಸಂಭವನೆ ಎಲ್ಲವೂ ಕೂಡ ದೊರೆಯುತ್ತದೆ ಒಟ್ಟಾರೆಯಾಗಿ ಹೇಳುವುದಾದರೆ ಅನಿರುಧ್ ಅವರ ಕಿರುತೆರೆ ಜರ್ನಿ ಬಹಳ ಚೆನ್ನಾಗಿರುತ್ತದೆ.

ಆದರೆ ಇದೀಗ ಅನಿರುದ್ಧವರನ್ನು ಬ್ಯಾನ್ ಮಾಡಲಾಗಿದೆ ಎಂಬ ಸಂಗತಿ ಎಂದು ಹೊರ ಬಿದ್ದಿದೆ ಹೌದು ಇದಕ್ಕೆ ಕಾರಣವಾದರೂ ಏನು ಎಂಬುದನ್ನು ನೋಡುವುದಾದರೆ. ಅನಿರುಧ್ ಅವರು ಶೂಟಿಂಗ್ ಸ್ಪಾಟ್ ಗೆ ತಡವಾಗಿ ಬರುತ್ತಿದ್ದರು ಅಷ್ಟೇ ಅಲ್ಲದೆ ಆಗಾಗ ಟೆಕ್ನಿಕಲ್ ಟೀಂ ನೋಟ್ಟಿಗೆ ವಾದ ವಿವಾದ ಮಾಡುತ್ತಿದ್ದರು. 2 ರಿಂದ 3 ಬಾರಿ ಶೂಟಿಂಗ್ ಅನ್ನು ಅರ್ಧಕ್ಕೆ ನಿಲ್ಲಿಸಿ ಕೋಪ ಮಾಡಿಕೊಂಡು ಮನೆಗೆ ಹೊರಟು ಹೋಗಿದ್ದರು. ಆ ಸಮಯದಲ್ಲಿ ನಿರ್ಮಾಪಕ ನಿರ್ದೇಶಕರೆಲ್ಲರೂ ಕೂಡ ಅನಿರುಧ್ ಅವರನ್ನು ಸಮಾಧಾನ ಪಡಿಸಿ ಮತ್ತೆ ಧಾರಾವಾಹಿ ತಂಡಕ್ಕೆ ಕರೆತಂದಿದ್ದರು. ಆದರೆ ಈ ಬಾರಿ ಮಾತ್ರ ಅನಿರುದ್ಧ ಅವರು ಅತೀವವಾಗಿ ವರ್ತನೆ ಮಾಡಿದ್ದಾರೆ ಅಷ್ಟೇ ಅಲ್ಲದೆ ನಿರ್ದೇಶಕರನ್ನು ನೀನೊಬ್ಬ ಮೂರ್ಖ ಎಂದು ನಿಂದಿಸಿ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಇದರಿಂದ ಕೋಪಗೊಂಡಂತಹ ನಿರ್ದೇಶಕ ಕಿರುತೆರೆ ವಾಣಿಜ್ಯ ಮಂಡಳಿಗೆ ದೂರ ದಾಖಲಿಸಿದ್ದಾರೆ ಈ ದೂರಿನ ಪ್ರಕಾರ ಅನಿರುಧ್ ಅವರನ್ನು ಎರಡು ವರ್ಷಗಳ ಕಾಲ ಕಿರುತೆರೆಯಿಂದ ಬ್ಯಾನ್ ಮಾಡಲಾಗಿದೆ. ಇನ್ನು ಎರಡು ವರ್ಷಗಳ ಕಾಲ ಅನಿರುಧ್ ಅವರು ಕಿರುತೆರೆಯಲ್ಲಿ ಪ್ರಾರಂಭವಾಗುವಂತಹ ಯಾವುದೇ ಧಾರಾವಾಹಿ ಆಗಿರಬಹುದು, ರಿಯಾಲಿಟಿ ಶೋ ಆಗಿರಬಹುದು ಅಥವಾ ಇನ್ನಿತರ ಯಾವುದೇ ಸಮಾರಂಭದಲ್ಲಿಯೂ ಕೂಡ ಪಾಲ್ಗೊಳ್ಳುವಂತೆ ಇಲ್ಲ ಎಂದು ಆದೇಶವನ್ನು ಹೊರಡಿಸಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅನಿರುದ್ಧ ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಅ.ಘಾ.ತ.ವೇ ಎದುರಾಗಿದೆ ಅಷ್ಟೇ ಅಲ್ಲದೆ ಅಚ್ಚರಿಗು ಕೂಡ ಒಳಪಟ್ಟಿದ್ದಾರೆ.

ಏಕೆಂದರೆ ವಿಷ್ಣುವರ್ಧನ್ ಅಳಿಯ ಅಂದರೆ ಅವರಿಗೆ ಇದ್ದಂತಹ ಸಹನೀಯ ಗುಣ, ಸರಳತೆ, ಇವೆಲ್ಲವನ್ನು ಕೂಡ ಅನಿರುಧ್ ಅವರು ಮೈಗೂಡಿಸಿಕೊಂಡಿದ್ದರು ಅಂತ ತಿಳಿದುಕೊಂಡಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಅನಿರುಧ್ ಅವರು ಈ ರೀತಿ ವರ್ತನೆಯಿಂದಾಗಿ ಕೆಟ್ಟ ಹೆಸರನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ವಿಷ್ಣುವರ್ಧನ್ ಅವರ ಗೌರವಕ್ಕೂ ಕೂಡ ಚ್ಯೂತಿ ಬರುವಂತಹ ಕೆಲಸವನ್ನು ಮಾಡಿಕೊಂಡಿದ್ದಾರೆ ಎಂಬುದು ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಪುನೀತ್ ಅಣ್ಣನ ಮೇಲೆ ಆಣೆ ಮಾಡಿ ಹೇಳ್ತಿನಿ ನನ್ನ ಅತ್ತಿರ ಊಟಕ್ಕೂ ಕೂಡ ದುಡ್ಡು ಇಲ್ಲ ಅಂತ ಕಣ್ಣೀರು ಹಾಕ್ತಿರೋ ಕಾಫಿ ನಾಡು ಚಂದು.

ಕಾಫಿ ನಾಡು ಚಂದು ಸದ್ಯಕ್ಕೆ ಕಳೆದ ಕೆಲವು ತಿಂಗಳಿನಿಂದ ಸಿಕ್ಕಾಪಟ್ಟೆ ಟ್ರೈಂಡ್ ನಲ್ಲಿ ಇರುವ ಹೆಸರು ಅಂತಾನೆ ಹೇಳಬಹುದು ಹುಟ್ಟು ಹಬ್ಬದ ಹಾಡುಗಳನ್ನು ಹಾಡುವುದರ ಮೂಲಕ ಸಿಕ್ಕಾಪಟ್ಟೆ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಕೂಡ ಕಾಫಿ ನಾಡು ಚಂದು ಅವರು ಸುಮಾರು 11 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ ತಮ್ಮ ವಿಭಿನ್ನವಾದ ಶೈಲಿಯಲ್ಲಿ ವಿಭಿನ್ನವಾದಂತಹ ಪದಗಳನ್ನು ಜೋಡಣೆ ಮಾಡಿ ಹಾಡು ಹೇಳುವುದೇ ಇವರ ಹವ್ಯಾಸವಾಗಿದೆ. ಮೊದಲಿನಿಂದಲೂ ಕೂಡ ಕಾಫಿ ನಾಡು ಚಂದು ಅವರು ಹುಟ್ಟು ಹಬ್ಬದ ಹಾಡನ್ನು ಹೇಳಿಕೊಂಡು ಬರುತ್ತಿದ್ದರು. ಆದರೆ ಕಾಫಿನಾಡು ಚಂದು ಅವರು ಎಲ್ಲಿಯೂ ಕೂಡ ಅಷ್ಟಾಗಿ ಗುರುತಿಸಿಕೊಂಡಿರಲಿಲ್ಲ ಯಾವಾಗ instagram ಖಾತೆಯಲ್ಲಿ ಇವರ ಹುಟ್ಟು ಹಬ್ಬದ ಹಾಡೊಂದು ವೈರಲ್ ಆಯಿತೋ ಅಲ್ಲಿಂದ ಇವರ ನಸೀಬೆ ಬದಲಾಯಿತು ಅಂತ ಹೇಳಬಹುದು.

ಹೌದು ಒಂದು ಕಾಲದಲ್ಲಿ ಕಾಫಿ ನಾಡು ಚಂದು ಎಂಬ ಹೆಸರನ್ನು ಯಾರು ಕೂಡ ಗುರುತಿಸುತ್ತಿರಲಿಲ್ಲ ಆದರೆ ಈಗ ಕಾಫಿ ನಾಡು ಚಂದು ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ಎಲ್ಲರೂ ಕೂಡ ಬರ್ತಡೇ ಸಾಂಗ್ ಅಂತ ಹೇಳುತ್ತಾರೆ. ಅಷ್ಟು ಫೇಮಸ್ ಆಗಿದ್ದಾರೆ ಇನ್ನು ಇವರ instagram ಫಾಲೋವರ್ಸ್ ಕೂಡ ಏನು ಕಡಿಮೆ ಇಲ್ಲ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಯಾವಾಗಲೂ ಕೂಡ ಕಾಫಿ ನಾಡು ಚಂದು ಅವರು ಹಾಡು ಹೇಳುವುದಕ್ಕಿಂತ ಮುಂಚೆ ನಾನು ಪುನೀತ್ ಅಣ್ಣ ಮತ್ತು ಶಿವಣ್ಣ ಅವರ ಅಭಿಮಾನಿ ಅಂತ ಹೇಳಿಕೊಳ್ಳುತ್ತಾರೆ ಈ ಒಂದು ಹೆಸರಿನಿಂದಲೇ ಇವರಿಗೆ ಹೆಚ್ಚು ಖ್ಯಾತಿ ದೊರೆಯಿತು ಅಂತ ಹೇಳಿದರು ಕೂಡ ತಪ್ಪಾಗಲಾರದು.

ಕಾಫಿನಾಡು ಚಂದು ಅವರು ಮೂಲತಃ ಚಿಕ್ಕಮಂಗಳೂರಿನವರು ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ, ಆದರೆ ಇತ್ತೀಚಿನ ದಿನದಲ್ಲಿ ಕಾಫಿ ನಾಡು, ಚಂದು ಅವರು ಸಾರ್ವಜನಿಕವಾಗಿ ಬಹಳನೇ ತೊಂದರೆಯನ್ನು ಅನುಭವಿಸುತ್ತಿದ್ದಾರಂತೆ. ಹೌದು ಇವರು ಹಾಡು ಹೇಳುವುದಕ್ಕೆ ಫೇಮಸ್ ಎಂಬ ಕಾರಣಕ್ಕಾಗಿ ಹಲವಾರು ಅಭಿಮಾನಿಗಳು ಮತ್ತು ಸಾರ್ವಜನಿಕರು ಪ್ರತಿನಿತ್ಯವೂ ಕೂಡ ಆಟೋ ಸ್ಟ್ಯಾಂಡ್ ಗೆ ಹೋಗಿ ಹಾಡು ಹೇಳುವಂತೆ ಒತ್ತಾಯ ಮಾಡುತ್ತಾರಂತೆ. ಇದಕ್ಕೆ ಬೇಸರವನ್ನು ವ್ಯಕ್ತಪಡಿಸಿದಂತಹ ಕಾಫಿ ನಾಡು ಚಂದು ಅವರು ನಾನು ಬಡವ ನಾನು ಕೆಲಸ ಮಾಡಿದರೆ ಮಾತ್ರ ನನಗೆ ಹಣ ದೊರೆಯುತ್ತದೆ. ಹಣ ದೊರೆಯುತ್ತದೆ ಮಾತ್ರ ನಾನು ನನ್ನ ಕುಟುಂಬವನ್ನು ನಿರ್ವಹಿಸುವುದಕ್ಕೆ ಸಾಧ್ಯ ನಾನು ಹಾಡನ್ನು ಹೇಳುತ್ತೇನೆ ಇಲ್ಲ ಎಂದು ಹೇಳುವುದಿಲ್ಲ.

ಆದರೆ ಬೆಳಗ್ಗೆ ಬಂದು ಹಾಡು ಹೇಳು ಅಂತ ಪಟ್ಟು ಹಿಡಿದುಕೊಂಡು ಕುಳಿತುಕೊಂಡರೆ ನಾನು ಸಂಪಾದನೆ ಮಾಡುವುದು ಹೇಗೆ ನನಗೆ ಮದುವೆಯಾಗಿದೆ ಎರಡು ಮಕ್ಕಳು ಇದೆ ಅವರ ಭವಿಷ್ಯವನ್ನು ಕಲ್ಪಿಸುವುದಾದರೂ ಹೇಗೆ. ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ ನನ್ನ ಬಳಿ ಮಧ್ಯಾಹ್ನದ ಹೊತ್ತು ಊಟ ಮಾಡುವುದಕ್ಕೂ ಕೂಡ ಕಾಸು ಇರುವುದಿಲ್ಲ. ಆಟೋ ಬಾಡಿಗೆ ಹೋದರೆ ಮಾತ್ರ ಊಟ ಮಾಡುವುದಕ್ಕೆ ಕಾಸು ಇರುತ್ತದೆ ಮನೆಗೆ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತದೆ. ಇದರ ಜೊತೆಗೆ ನಾನು ಆಟೋ ಬಾಡಿಗೆಯನ್ನು ಕೂಡ ಕಟ್ಟಬೇಕು ಹಾಗಾಗಿ ನನ್ನ ಪರಿಸ್ಥಿತಿಯನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ.

ನಾನು ಬಿಡುವಿನ ಸಮಯದಲ್ಲಿ ಹಾಡು ಹೇಳುತ್ತೇನೆ ಆದರೆ ಎಲ್ಲಾ ಸಮಯದಲ್ಲೂ ಹಾಡು ಹೇಳಿ ಅಂತ ಒತ್ತಾಯ ಮಾಡಬೇಡಿ ಎಂದು ಕಾಫಿ ನಾಡು ಚಂದು ಅವರು ಕಣ್ಣೀರು ಹಾಕಿದ್ದಾರೆ. ಸದ್ಯಕ್ಕೆ ಆ ವಿಡಿಯೋ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದನ್ನು ನೋಡಿದಂತಹ ನೆಟ್ಟಿದರು ನಿನಗೆ ಬೇಕಿತ್ತಾ ಎಂದು ಕಾಮೆಂಟ್ ಹಾಕಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ರಾತ್ರೋರಾತ್ರಿ ಫೇಮಸ್ ಆಗಬೇಕು ಸೆಲೆಬ್ರಿಟಿಗಳು ಆಗಬೇಕು ಅಂತ ತಮ್ಮ ಹವ್ಯಾಸವನ್ನು ಮತ್ತು ಅತೀವ ವರ್ತನೆಯನ್ನು ಹೆಚ್ಚಾಗಿ ತೋರಿಸಿಕೊಳ್ಳುತ್ತಾರೆ ಆ ಪೈಕಿ ಕಾಫಿ ನಾಡು ಚಂದು ಅವರು ಕೂಡ ಒಬ್ಬರು ಅಂತನೇ ಹೇಳಬಹುದು.

ಹೌದು ಕರ್ನಾಟಕದಾದ್ಯಂತ ಗುರುತಿಸಿಕೊಳ್ಳಬೇಕು ಹೆಚ್ಚು ಹುಟ್ಟು ಹಬ್ಬದ ಹಾಡುಗಳನ್ನು ಹಾಡಿ ಫೇಮಸ್ ಆಗಬೇಕು ಅಂತ ಅಂದುಕೊಂಡಿದ್ದರು ಆದರೆ ಇದೀಗ ಅದೇ ಅವರ ಜೀವನಕ್ಕೆ ಮುಳ್ಳಾಗುತ್ತಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಏಕೆಂದರೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಸಂಪಾದನೆಯೂ ಇಲ್ಲ ಹೀಗಾಗಿ ಅವರು ಕಷ್ಟದ ಜೀವನವನ್ನು ಎದುರಿಸುವಂತಹ ಅನಿವಾರ್ಯ ಬಂದಿದೆ. ಅದಕ್ಕೆ ಹಿರಿಯರು ಹೇಳುವುದು ಯಾವುದೇ ಆದರೂ ಕೂಡ ಇತಿಮಿತಿಯಲ್ಲಿ ಇರಬೇಕು ಅಂತ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ ಕಾಫಿನಾಡು ಚಂದು ಅವರ ಬಗ್ಗೆ ನಿಮ್ಮ ಮನದಾಳದ ಮಾತನ್ನು ಹಂಚಿಕೊಳ್ಳಿ.

 

39 ವರ್ಷವಾದರೂ ಇನ್ನೂ ಮದುವೆ ಆಗದೆ ಇರುವುದಕ್ಕೆ ಕಾರಣ ಏನೆಂಬುದನ್ನು ತಿಳಿಸಿದ ನಟಿ ರಮ್ಯಾ.

ನಟಿ ರಮ್ಯಾ ಅವರು ಅಭಿ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು 2002ನೇ ಇಸ್ವಿಯಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆ ಮೊಟ್ಟಮೊದಲ ಬಾರಿಗೆ ತೆರೆಯನ್ನು ಹಂಚಿಕೊಂಡರು. ಇಲ್ಲಿಂದ ಪ್ರಾರಂಭವಾದ ಇವರ ಸಿನಿಮಾ ಜರ್ನಿ ಸುಮಾರು ಎರಡು ದಶಕಗಳವರೆಗೂ ಕೂಡ ಮುಂದುವರೆದಿದೆ. ಇಲ್ಲಿಯವರೆಗೂ ಕೂಡ ಕನ್ನಡದಲ್ಲಿ ಸುಮಾರು ಐವತ್ತಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿಚ್ಚ ಸುದೀಪ್ ಧ್ಯಾನ್, ಲೂಸ್ ಮಾದ ಯೋಗಿ, ದುನಿಯಾ ವಿಜಯ್, ರಾಕಿಂಗ್ ಸ್ಟಾರ್ ಯಶ್, ವಿಜಯ್ ರಾಘವೇಂದ್ರ, ಶ್ರೀಮುರಳಿ, ನೆನಪಿರಲಿ ಪ್ರೇಮ್, ಉಪೇಂದ್ರ ಹೀಗೆ ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ.

ಬಹು ಬೇಡಿಕೆಯನ್ನು ಉಳಿಸಿಕೊಂಡಿದ್ದಂತಹ ನಟಿ ರಮ್ಯಾ ಅವರು ಯಾಕೋ ಇತ್ತೀಚಿನ ದಿನದಲ್ಲಿ ಸಿನಿಮಾರಂಗದಿಂದ ದೂರ ಉಳಿದಿದ್ದರೆ ಇದಕ್ಕೆ ಮುಖ್ಯ ಕಾರಣ ಅಂದರೆ ಅವರು ರಾಜಕೀಯ ಪ್ರವೇಶ ಮಾಡಿದ್ದು. ಹೌದು 2017ರಲ್ಲಿ ಅವರು ಮಂಡ್ಯ ಎಲೆಕ್ಷನ್ ನಲ್ಲಿ ನಿಂತುಕೊಳ್ಳುತ್ತಾರೆ ಈ ಒಂದು ಎಲೆಕ್ಷನ್ ನಲ್ಲಿ ವಿಜೇತರಾಗಿ ಸುಮಾರು ಐದು ವರ್ಷಗಳ ಕಾಲ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಇಲ್ಲಿಂದ ಇವರಿಗೆ ಸಿನಿಮಾರಂಗದ ಕಡೆ ಇದ್ದಂತಹ ಒಲವು ಕಡಿಮೆಯಾಗುತ್ತದೆ ಈ ಕಾರಣದಿಂದ ಸಿನಿಮಾರಂಗದಿಂದ ದೂರ ಉಳಿಯುತ್ತಾರೆ. ಆದರೆ ರಮ್ಯಾ ಅವರು ಸದ್ಯಕ್ಕೆ ರಾಜಕೀಯದಿಂದಲೂ ದೂರ ಉಳಿದಿದ್ದು ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಬೇಕು ಅಂತ ಹೇಳಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಕಳೆದ ತಿಂಗಳಷ್ಟೇ ಡಾಲಿ ಧನಂಜಯ್ ಅವರ ಹೊಯ್ಸಳ ಸಿನಿಮಾ ಒಂದಕ್ಕೆ ರಮ್ಯಾ ಅವರು ಆಗಮಿಸಿದ್ದರು.

ಅಷ್ಟೇ ಅಲ್ಲದೆ ನಾನು ಮತ್ತೆ ಒಳ್ಳೆಯ ಕಥೆಯೊಂದಿಗೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತೇನೆ ಎಂಬುದನ್ನು ಕೂಡ ಹೇಳಿಕೊಂಡಿದ್ದರು ರಮ್ಯಾ ಅವರು ನೀಡಿದಂತಹ ಹೇಳಿಕೆಯನ್ನು ಕೇಳಿದಂತಹ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಏಕೆಂದರೆ ಕಳೆದ ಐದು ವರ್ಷಗಳಿಂದ ರಮ್ಯಾ ಅಭಿನಯದ ಯಾವ ಸಿನಿಮಾ ಕೂಡ ಇನ್ನೂ ತೆರೆಕಂಡಿಲ್ಲ ನಮ್ಮ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ನಟಿಯರು ಇರಬಹುದು ಆದರೆ ಈಗಲೂ ಕೂಡ ನಂಬರ್ ಒನ್ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಏಕೈಕ ನಟಿ ಅಂದರೆ ಅದು ರಮ್ಯಾ ಅವರು ಅಂತಾನೆ ಹೇಳಬಹುದು. ಇನ್ನು ರಮ್ಯಾ ಅವರ ವೈಯಕ್ತಿಕ ವಿಚಾರ ಜೀವನದ ವಿಚಾರಕ್ಕೆ ಬರುವುದಾದರೆ ರಮ್ಯಾ ಅವರಿಗೆ ಈಗಾಗಲೇ 39 ವರ್ಷ ಆಗುತ್ತಿದ್ದು 40ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೂ ಕೂಡ ಇನ್ನೂ ಯಾಕೆ ಖ್ಯಾತ ನಟಿ ಮದುವೆಯಾಗಿಲ್ಲ ಎಂಬ ವಿಚಾರಗಳು ಕೇಳಿ ಬರುತ್ತಿದೆ ಕಳೆದ ಕೆಲವು ವರ್ಷಗಳ ಹಿಂದೆ ರಮ್ಯಾ ಅವರ ಹೆಸರು ರಾಜಕಾರಣಿ ಉದ್ಯಮಿ ಬಿಸಿನೆಸ್ ಮ್ಯಾನ್ ಗಳ ಜೊತೆ ಕೇಳಿ ಬರುತ್ತಿತ್ತು.

ಆದರೆ ರಮ್ಯಾ ಅವರು ಇನ್ನೂ ಕೂಡ ಒಂಟಿಯಾಗಿ ಇದ್ದಾರೆ ಹಾಗಾಗಿ ರಮ್ಯಾ ಅವರ ಜೊತೆಯಲ್ಲಿ ಕೇಳಿ ಬರುತ್ತಿದ್ದಂತಹ ಹೆಸರಿನ ವ್ಯಕ್ತಿಗಳು ಏನಾದರೂ ಇವರಿಬ್ಬರ ನಡುವೆ ಪ್ರೀತಿ ಪ್ರೇಮ ಇತ್ತ ಅಥವಾ ಇವೆಲ್ಲವೋ ಕಾಸಿಪ್ಪ ಮದುವೆ ಯಾವಾಗ ಆಗುತ್ತಾರೆ ಎಂಬ ಪ್ರಶ್ನೆಯನ್ನು ರಮ್ಯ ಅವರಿಗೆ ಅಭಿಮಾನಿಗಳು instagram ಖಾತೆಯಲ್ಲಿ ಕೇಳಿದರು ಈ ಒಂದು ಪ್ರಶ್ನೆಗೆ ಉತ್ತರ ನೀಡಿದಂತಹ ರಮ್ಯಾ ಅವರು ಬಹುಶಃ ನನ್ನ ಸೌಲ್ ಮೇಟ್ ಸ-ತ್ತು ಹೋಗಿರಬಹುದು ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಮ್ಯಾ ಅವರು Iamnotshane ಅವರ Maybe My Soulmate Died ಹಾಡಿಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. “ನಾನು ಯಾಕೆ ಮದುವೆಯಾಗಿಲ್ಲ? ನನ್ನ ಸೋಲ್‌ಮೇಟ್ ಸತ್ತುಹೋಗಿರಬಹುದು” ಎಂದು ಕ್ಯಾಪ್ಶನ್ ನೀಡಿದ್ದಾರೆ. ಇವೆಲ್ಲವನ್ನು ನೋಡಿದಂತಹ ಅಭಿಮಾನಿಗಳು ರಮ್ಯಾ ಅವರು ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದಿದ್ದರು ಅಂತ ಅನಿಸುತ್ತದೆ. ಆ ಹುಡುಗ ಕೈ ಕೊಟ್ಟಿರಬಹುದು ಅದಕ್ಕೆ ರಮ್ಯಾ ಅವರು ಈ ರೀತಿ ಹೇಳಿಕೊಂಡಿರಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸಂತಸದ ಸುದ್ದಿ ಹಂಚಿಕೊಂಡ ಹಾಸ್ಯ ನಟ ಸಾಧುಕೋಕಿಲ, ಸಾಧು ಅಭಿಮಾನಿಗಳು ತಪ್ಪದೇ ಇದನ್ನು ನೋಡಿ.

ಸಾಧು ಕೋಕಿಲ ಅದ್ಭುತ ಹಾಸ್ಯಗಾರ, ಪೋಷಕ ನಟ, ಸಂಗೀತ ನಿರ್ದೇಶಕ, ಬರಹಗಾರ, ಹಾಡುಗಾರ, ಕೀಬೋರ್ಡ್ ಪ್ಲೇಯರ್, ಹೀಗೆ ಸಾಕಷ್ಟು ಪ್ರತಿಭೆಯನ್ನು ಒಳಗೊಂಡಿರುವ ಕಲಾವಿದ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಸಾಧುಕೋಕಿಲ ಅವರ ಹಾಸ್ಯ ನಿಮ್ಮೆಲ್ಲರನ್ನು ನಕ್ಕು ನಗಿಸುವಂತೆ ಮಾಡುತ್ತದೆ ಸಾಧುಕೋಕಿಲ ಇರುವಂತಹ ಸಿನಿಮಾ ಎಲ್ಲವು ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಸದ್ದು ಮಾಡುತ್ತದೆ. ಇನ್ನು ಸಾಧು ಕೋಕಿಲ ಅವರು ಹೀರೋಗಳಿಗಿಂತಲೂ ಕೂಡ ಹೆಚ್ಚು ಹೆಚ್ಚು ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಸಾಧುಕೋಕಿಲ ಅವರ ಡೇಟ್ ಸಿಗುವುದೇ ವಿರಳ ಸಾಧು ಅವರು ಒಂದು ಸಿನಿಮಾದಲ್ಲಿ ಹಾಸ್ಯ ಪಾತ್ರ ಮಾಡುತ್ತಿದ್ದಾರೆ ಅಂದರೆ ಆ ಸಿನಿಮಾ ಭಾಗಶಹ ಗೆದ್ದಂತೆಯೇ ಲೆಕ್ಕ .

ಇಲ್ಲಿಯವರೆಗೂ ಕೂಡ ಸುಮಾರು 20 ಅಧಿಕ ಸಿನಿಮಾದಲ್ಲಿ ಹಾಸ್ಯ ಮತ್ತು ಪೋಷಕ ಪಾತ್ರದಲ್ಲಿ ನಟನೆ ಮಾಡಿದ್ದಾರೆ ಸುಮಾರು ಹತ್ತಕ್ಕೂ ಅಧಿಕ ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ರಕ್ತ ಕಣ್ಣೀರು ಎಂಬ ಸಿನಿಮಾ ಗೆ ಮ್ಯೂಸಿಕ್ ಕಂಪೋಸರ್ ಮಾಡುವ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಇದಕ್ಕೂ ಮೊದಲು ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಆದರೆ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ ಸಿನಿಮಾ ಅಂದರೆ ಅದು ರಕ್ತ ಕಣ್ಣೀರು ಅಂತಾನೆ ಹೇಳಬಹುದು. ಈ ಸಿನಿಮಾದ ನಂತರ ಎದೆಗಾರಿಕೆ, ಅಮ್ಮ ಐ ಲವ್ ಯು, ಇನ್ನು ಮುಂತಾದ ಸಿನಿಮಾಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದರೆ. ಇನ್ನು ಸಾಧುಕೋಕಿಲ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು ಅವರು ಕೂಡ ಸಂಗೀತದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಕಾರಣ ಸಂಗೀತ ತರಬೇತಿಯನ್ನು ಸ್ವತಃ ಸಾಧುಕೋಕಿಲ ಅವರೇ ನೀಡುತ್ತಿದ್ದಾರೆ.

ಇದಿಷ್ಟು ಕೂಡ ಸಾಧುಕೋಕಿಲ ಅವರ ವೈಯಕ್ತಿಕ ವಿಚಾರ ಆದರೆ ಇದೀಗ ಸಾಧುಕೋಕಿಲ ಅವರು ಮತ್ತೊಂದು ಸಂತಸದ ಸುದ್ದಿಯನ್ನು ತಮ್ಮ ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಹೌದು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮತ್ತು ಸ್ಟಾರ್ ನಟ ನಟಿಯರು ತಮ್ಮ ಜೀವನದಲ್ಲಿ ಹಾಗೂ ಹೋಗು ಎಲ್ಲಾ ಘಟನೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ ತಮ್ಮ ಅಭಿಮಾನಿಗಳೊಟ್ಟಿಗೆ ತಮ್ಮ ಸಿನಿಮಾದ ಅಪ್ಡೇಟ್ಸ್ ಗಳನ್ನು ಕೂಡ ಹಂಚಿಕೊಳ್ಳುತ್ತಾರೆ .ಇನ್ನು ಈ ಕಾಲದಲ್ಲಿ ಸೋಶಿಯಲ್ ಮೀಡಿಯಾ ಬಳಕೆ ಮಾಡಿದವರು ಯಾರಿದ್ದಾರೆ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಕೂಡ ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಾರೆ ನಮ್ಮ ಜೀವನದ ಒಂದು ಭಾಗಶಹ ಅಂಶವಾಗಿದೆ.

ಸಾಮಾನ್ಯ ಜನರು ಸೋಶಿಯಲ್ ಮೀಡಿಯಾವನ್ನು ಬಳಕೆ ಮಾಡುತ್ತಿಲ್ಲ ಅಂದರೆ ನಾವು ನಂಬಬಹುದು ಆದರೆ ಸೆಲೆಬ್ರಿಟಿಗಳು ಕೂಡ ಸೋಶಿಯಲ್ ಮೀಡಿಯಾವನ್ನು ಬಳಸುವುದಿಲ್ಲ ಎಂದರೆ ನೀವು ನಂಬುತ್ತೀರಾ.? ಖಂಡಿತವಾಗಿಯೂ ಕೂಡ ಇದನ್ನು ನಂಬುವುದಕ್ಕೆ ಸ್ವಲ್ಪ ಕಷ್ಟ ಸಾಧ್ಯವಾಗಬಹುದು ಆದರೂ ಕೂಡ ಇದು ಸತ್ಯ. ಹೌದು ಸಾಧು ಕೋಕಿಲ ಅವರು ಇಲ್ಲಿಯವರೆಗೂ ಯಾವುದೇ ರೀತಿಯಾದಂತಹ ಸೋಶಿಯಲ್ ಮೀಡಿಯಾವನ್ನು ಬಳಕೆ ಮಾಡುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾ ಅಕೌಂಟನ್ನು ಕ್ರಿಯೇಟ್ ಮಾಡಿದ್ದಾರೆ. ಹೌದು ಇನ್ಸ್ಟಾಗ್ರಾಂ ಫೇಸ್ಬುಕ್ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಸದಾಗಿ ಕ್ರಿಯೇಟ್ ಮಾಡಿದ್ದಾರೆ.

ಈ ಒಂದು ಖಾತೆಯ ಮುಖಾಂತರ ತಮ್ಮ ಅಭಿಮಾನಿಗಳಿಗೆ ತಮ್ಮ ದಿನಚರಿ ಹಾಗೂ ಸಿನಿಮಾದ ಅಪ್ಡೇಟ್ಸ್ ಅನ್ನು ಇನ್ನು ಮುಂದೆ ನಾನು ನೀಡುತ್ತೇನೆ ಎಂದು ಸಾಧುಕೋಕಿಲ ಅವರು ವಿಡಿಯೋ ಒಂದನ್ನು ಮಾಡಿ ಅದನ್ನು ತಮ್ಮ ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದಂತಹ ಸಾಧುಕೋಕಿಲ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸಾಧುಕೋಕಿಲ ಅವರು ನಿಜಕ್ಕೂ ಗ್ರೇಟ್ ಅಂದಿದ್ದಾರೆ ಏಕೆಂದರೆ ಇಷ್ಟು ವರ್ಷಗಳ ಕಾಲ ಸೋಶಿಯಲ್ ಮೀಡಿಯಾದಿಂದ ದೂರ ಇದ್ದು ಇದೀಗ ತಮ್ಮ ಅಭಿಮಾನಿಗಳ ಬಾಂಧವ್ಯವನ್ನು ಬೆಸೆಯುವ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾಗೆ ಬಂದಿರುವುದು. ಸಾಧು ಕೋಕಿಲ ಅವರು ಅಫಿಶಿಯಲ್ ಆಗಿ ತಾವು ಇನ್ನು ಮುಂದೆ ಸೋಶಿಯಲ್ ಮೀಡಿಯಾಗಳನ್ನು ಬಳಕೆ ಮಾಡುತ್ತೇನೆ ಎಂದು ಹೇಳಿರುವಂತಹ ವಿಡಿಯೋ ಈ ಕೆಳಗಿದೆ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಇದೇ ಮೊದಲ ಬಾರಿಗೆ ತನ್ನ ಇಬ್ಬರು ಅವಳಿ ಮಕ್ಕಳ ಜೊತೆ ಫೋಟೋಶೂಟ್ ಮಾಡಿಸಿದ ಅಮೂಲ್ಯ ಈ ವಿಡಿಯೋ ನೋಡಿ ಎಷ್ಟು ಕ್ಯೂಟ್ ಆಗಿದೆ.

ಅಮೂಲ್ಯ ಅವರು ಬಾಲನಟಿ ಇರುವಾಗಲೇ ಚಿತ್ರರಂಗಕ್ಕೆ ಕಾಲಿಟ್ಟವರು ಹೌದು ಲಾಲಿ ಹಾಡು ಎಂಬ ಸಿನಿಮಾದಲ್ಲಿ ನಾಯಕ ದರ್ಶನ್ ಅವರ ಜೊತೆ ತೆರೆಯನ್ನು ಹಂಚಿಕೊಳ್ಳುವುದರ ಮೂಲಕ ಮೊಟ್ಟಮೊದಲಗೆ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ತದನಂತರ ಹಲವು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಆದರೆ ಇವರು ಪೂರ್ಣ ಪ್ರಮಾಣದ ನಾಯಕಿ ನಟಿಯಾಗಿ ಗುರುತಿಸಿಕೊಂಡಿದ್ದು ಚೆಲುವಿನ ಚಿತ್ತಾರ ಎಂಬ ಸಿನಿಮಾದಲ್ಲಿ. ಹೌದು ಕೇವಲ ತನ್ನ ಹದಿನಾರನೇ ವಯಸ್ಸಿಗೆ ಹೀರೋಯಿನ್ ಆಗಿ ಗುರುತಿಸಿಕೊಂಡರು ತದನಂತರ ಹಲವಾರು ಸಿನಿಮಾದಲ್ಲಿ ನಟಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಗಜಕೇಸರಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಚೆಲುವಿನ ಚಿತ್ತಾರ, ಶ್ರಾವಣಿ ಮತ್ತು ಸುಬ್ರಮಣ್ಯ.

ನೆನಪಿರಲಿ ಪ್ರೇಮ್ ಅವರ ಜೊತೆ ಮಳೆ ಸಿನಿಮಾ, ದುನಿಯಾ ವಿಜಯ್ ಅವರ ಜೊತೆ ಮಾಸ್ತಿಗುಡಿ ಸಿನಿಮಾ ಹೀಗೆ ಕನ್ನಡದ ಬಹುತೇಕ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ನಟನೆಯ ಉತುಂಗ ಶಿಖರದಲ್ಲಿ ಇರುವಾಗಲಿಯೇ ನಟಿ ಅಮೂಲ್ಯ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ನಡುವೆ ಗಾಸಿಪ್ ಒಂದು ಪ್ರಾರಂಭವಾಗುತ್ತದೆ. ಇವರಿಬ್ಬರ ನಡುವೆ ಪ್ರೀತಿ ಪ್ರೇಮ ಇದೆ ಎಂಬ ವಿಚಾರ ಹೊರಬರುತ್ತದೆ ಆದರೆ ನಿಜಕ್ಕೂ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರು. ಈ ಒಂದು ವಿವಾದದಿಂದ ಹೊರಬರಬೇಕು ಎಂಬ ಕಾರಣಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಬೆಂಗಳೂರಿನಲ್ಲಿ ವಾಸವಾಗಿ ಇರುವಂತಹ ಜಗದೀಶ್ ಎಂಬುವ ರಾಜಕಾರಣಿ ಮತ್ತು ಬಿಸಿನೆಸ್ ಮ್ಯಾನ್ ಅವರನ್ನು ಅಮೂಲ್ಯ ಅವರಿಗೆ ತೋರಿಸಿ ಇವರಿಬ್ಬರಿಗೂ ಮದುವೆ ಮಾಡಿಸುತ್ತಾರೆ.

ಮದುವೆಯಾದ ಒಂದೆರಡು ವರ್ಷ ನಟಿ ಅಮೂಲ್ಯ ಅವರು ಚಿತ್ರರಂಗದಲ್ಲಿ ಕಾಣಿಸದೆ ಇಲ್ಲದೆ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ. ಯಾವುದೇ ವಿಚಾರವನ್ನಾಗಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಆ ವಿಚಾರವನ್ನು ಮುಟ್ಟಿಸುತ್ತಾರೆ. ಇನ್ನು ಅಮೂಲ್ಯ ಅವರು ಇನ್ಸ್ಟಾಗ್ರಾಮ್ ಅಲ್ಲಿ ಆಗಾಗ ಅಪ್ಲೋಡ್ ಮಾಡುವಂತಹ ವಿಡಿಯೋಗಳು ಹೆಚ್ಚು ಜನ ಮನ್ನಣೆಯನ್ನು ಗಳಿಸಿಕೊಳ್ಳುತ್ತದೆ. ಸದ್ಯಕ್ಕೆ ಅಮೂಲ್ಯ ಅವರು ಕಳೆದ ನಾಲ್ಕು ತಿಂಗಳ ಹಿಂದೆ ಎಷ್ಟೇ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಆದರೆ ಎಲ್ಲಿಯೂ ಕೂಡ ತಮ್ಮ ಮಕ್ಕಳ ಫೋಟೋವನ್ನು ಅಮೂಲ್ಯ ಆಗಲಿ ಅಥವಾ ಅವರ ಪತಿಯಾಗಲಿ ರಿವೀಲ್ ಮಾಡಿರಲಿಲ್ಲ.

ಆದರೆ ಇದೇ ಮೊದಲ ಬಾರಿಗೆ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಅವರು ವಿಶೇಷವಾದಂತಹ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ ಈ ಫೋಟೋ ಶೂಟ್ ನಲ್ಲಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಇಬ್ಬರೂ ಅವಳಿ ಮಕ್ಕಳ ಜೊತೆ ಫೋಟೋವನ್ನು ತೆಗೆಸಿಕೊಂಡು ಅದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಈ ಫೋಟೋ ಬಹಳನೆ ಮನಮೋಹಕವಾಗಿದ್ದು ಇಬ್ಬರು ಮುದ್ದು ಮಕ್ಕಳು ಕೂಡ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಈ ಮುದ್ದು ಮಕ್ಕಳನ್ನು ನೋಡಿದರೆ ನಿಜಕ್ಕೂ ಸಂತೋಷವಾಗುತ್ತದೆ ಅಷ್ಟೇ ಅಲ್ಲದೆ ದೃಷ್ಟಿಯನ್ನು ಕೂಡ ಬೀಳುತ್ತದೆ ಅಷ್ಟು ಸುಂದರವಾಗಿದ್ದರೆ ಮಕ್ಕಳ ಮುಖವನ್ನು ನೋಡಿದರೆ ಮನಸ್ಸಿನಲ್ಲಿ ಒಂದು ರೀತಿಯಾದಂತಹ ಆನಂದ ಉಂಟಾಗುತ್ತದೆ ಅಂತ ಹಿರಿಯರು ಹೇಳುತ್ತಾರೆ. ಆ ಅನುಭವ ಈ ವಿಡಿಯೋ ನೋಡಿದರೆ ನಿಮಗೆ ತಿಳಿಯುತ್ತದೆ ಈ ಮಕ್ಕಳನ್ನು ನೋಡಿದರೆ ನಿಮಗೆ ಏನನಿಸುತ್ತದೆ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.