Home Blog Page 337

ಇದುವರೆಗೂ ಒಂದು ಹನಿ ಕೂಡ ಎಣ್ಣೆ ಮುಟ್ಟದ ಕನ್ನಡದ ಸ್ಟಾರ್ ನಟ ಯಾರು ಗೊತ್ತಾ?

ತೆರೆ ಮೇಲೆ ಕಾಣುವ ಹೀರೋಗಳು ಎಂದರೆ ನಾವು ನಿಜ ಜೀವನದಲ್ಲೂ ಕೂಡ ಅವರು ಹಾಗೆ ಇರುತ್ತಾರೆ ಎಂದು ಕೊಡುತ್ತೇವೆ. ಎಷ್ಟೋ ಜನರು ಇದಕ್ಕೆ ನಿಜ ಜೀವನದಲ್ಲಿ ವಿರುದ್ಧವಾಗಿರುತ್ತಾರೆ. ಯಾಕೆಂದರೆ ಅವರು ಕಲಾವಿದರುಗಳು ಅವರು ತೆರೆ ಮೇಲೆ ಬರಿ ಪಾತ್ರವನ್ನು ಅಷ್ಟೇ ಅನುಸರಿಸಿ ಆ ರೀತಿ ಅಭಿನಯ ಮಾಡುತ್ತಿರುತ್ತಾರೆ ಆದರೆ ತೆರೆ ಹಿಂದೆ ಅವರಿಗೊಂದು ವೈಯಕ್ತಿಕ ಬದುಕಿದೆ ಎಷ್ಟೋ ಜನ ಕಲಾವಿದರುಗಳು ತೆರೆ ಮೇಲೆ ಖಳನಾಯಕನಾಗಿ ಅಭಿನಯ ಮಾಡಿದರೂ ಕೂಡ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು. ಎಷ್ಟೋ ಜನರು ತೆರೆ ಮೇಲೆ ಹೀರೋಗಳಾಗಿದ್ದರು ಕೂಡ ಅವರು ಅಂತಹ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದೆ ಅವರ ಬಣ್ಣ ಬಯಲಾಗಿದ್ದು ಎಲ್ಲರಿಗೂ ತಿಳಿದಿದೆ ಹಾಗಾಗಿ ಸಿನಿಮಾ ಹಾಗೂ ವೈಯಕ್ತಿಕ ಬದುಕು ಒಂದೇ ರೀತಿ ಇದೆ ಎಂದು ನೂರಕ್ಕೆ ನೂರರಷ್ಟು ಹೇಳುವುದು ಕಷ್ಟ.

ಆದರೆ ಕೆಲವೇ ಕೆಲವು ಬೆರಳೆಣಿಕೆಯಷ್ಟು ಹೀರೋಗಳು ಮಾತ್ರ ಈ ರೀತಿ ತೆರೆ ಮೇಲೆ ಹೇಗೆ ಜನರಿಗೆ ಸಂದೇಶ ಕೊಡುತ್ತಾರೆ ನಿಜ ಜೀವನದಲ್ಲಿಯೂ ಕೂಡ ಹಾಗೆ ನಡೆ ಕೊಂಡುಕೊಂಡು ಎಲ್ಲರಿಗೂ ಆದರ್ಶ ವಾಗುತ್ತಾರೆ. ತೆರೆ ಮೇಲೆ ಕಾಣುವ ಹೀರೋಗಳ ವಿಚಾರವಾಗಿ ಹೇಳುವುದಾದರೆ ಆಗಿನ ಕಾಲದಲ್ಲಿ ಹೀರೋಗಳು ಎಂದರೆ ಅವುಗಳ ಚಿತ್ರಣವೇ ಬೇರೆಯಾಗಿತ್ತು. ಹಿಂದೆ ಡಾಕ್ಟರ್ ರಾಜಕುಮಾರ್ ಅವರ ಕಾಲದಲ್ಲಿ ಮೂಡಿ ಬರುತ್ತಿದ್ದ ಸಿನಿಮಾಗಳಲ್ಲಿ ಸಿನಿಮಾದ ನಾಯಕ ಎಂದರೆ ಎಲ್ಲರೂ ಕೂಡ ಅವರನ್ನು ತುಂಬಾ ಭಕ್ತಿಭಾವದಿಂದ ನೋಡುತ್ತಿದ್ದರು. ನಿಜ ಜೀವನದಲ್ಲೂ ಕೂಡ ಅದೇ ರೀತಿ ಬದುಕಬೇಕು ಎಂದು ಪ್ರಯತ್ನ ಪಡುತ್ತಿದ್ದರು. ಡಾಕ್ಟರ್ ರಾಜಕುಮಾರ್ ಅಥವಾ ವಿಷ್ಣುವರ್ಧನ್, ಶಂಕರ್ ನಾಗ್ ಇವರ ಸಿನಿಮಾಗಳು ಈ ರೀತಿ ಜನಕ್ಕೆ ಅನುಕೂಲವಾಗುವ ರೀತಿ ಸಂದೇಶಗಳು ಹಾಗೂ ಆ ರೀತಿಯ ಒಳ್ಳೆಯ ಭಾವನೆಗಳಿರುವ ದೃಶ್ಯಗಳಿಂದ ಕೂಡಿರುತ್ತಿದ್ದವು.

ಈಗಿನ ಕಾಲದ ಸಿನಿಮಾಗಳು ಮೊದಲ ದೃಶ್ಯವೇ ಶುರುವಾಗುವುದು ಹೀರೋನ ಹೀರೋಯಿಸಂ ತೋರಿಸುವುದರಿಂದ ಈಗಿನ ಕಾಲದ ಹೀರೋಯಿಸಂ ಎಂದರೆ ನಾಲ್ಕು ಜನರಿಗೆ ಹೊಡೆಯುವುದು, ಸಿಗರೇಟ್ ಸೇದುತ್ತಾ ಹೊಗೆ ಬಿಡುತ್ತಾ ಕೈಯಲ್ಲಿ ಮಧ್ಯದ ಬಾಟಲಿಗಳನ್ನು ಹಿಡಿದುಕೊಂಡು ತಂದೆ ತಾಯಿ ಗುರು ಹಿರಿಯರಿಗೆ ಎದುರು ಮಾತನಾಡುತ್ತಾ ಸಿನಿಮಾ ಆರಂಭದಲ್ಲೇ ಈ ರೀತಿಯ ದುರ್ವರ್ತನೆಗಳನ್ನು ಸಿನಿಮಾ ಮುಗಿಯವರೆಗೂ ಮುಂದುವರಿಸಿಕೊಂಡು ಹೋಗುವುದು ರೂಢಿಯಾಗಿದೆ. ಇಂತಹ ಸಿನಿಮಾಗಳನ್ನು ನೋಡುವ ಯುವ ಜನತೆಯ ಮನಸ್ಸಿನಲ್ಲಿ ಇದೇ ಹೀರೋಯಿಸಂ ಎನ್ನುವ ಒಂದು ಬಲವಾದ ಮೌಢ್ಯತೆ ಆವರಿಸಿಕೊಳ್ಳುತ್ತದೆ. ಅವರು ಕೂಡ ನಾನು ಹೀರೋ ಆಗಬೇಕು ನನ್ನನ್ನು ಜನ ನೋಡಿ ಮೆಚ್ಚಿಕೊಳ್ಳಬೇಕು ಎಂದು ಇಂತಹ ವರ್ತನೆಗಳನ್ನು ಅನುಸರಿಸಲು ಶುರುಮಾಡುತ್ತಾರೆ.

ಈ ಮನಸ್ಥಿತಿ ಇರುವ ಹುಡುಗರುಗಳು ಸಾರ್ವಜನಿಕವಾಗಿ ಈ ರೀತಿ ಕಾಣಿಸಿಕೊಳ್ಳುತ್ತಾರೆ ಹಾಗೂ ಇದರಿಂದಲೇ ಸಮಾಜದ ಸ್ವಾಸ್ಥ್ಯ ಇದರಿಂದಲೇ ಹಾಳಾಗುತ್ತಿದೆ ಎನ್ನಬಹುದು. ಜನ ಎಡುವುತ್ತಿರುವುದು ಇಲ್ಲಿಯೇ ತೆರೆ ಮೇಲೆ ಇಂಥ ಸನ್ನಿವೇಶಗಳು ಬರುವಾಗಲೇ ಧೂ.ಮಪಾನ ಹಾಗೂ ಮ.ಧ್ಯಪಾನ ಆರೋಗ್ಯಕ್ಕೆ ಹಾ.ನಿಕರ ಎನ್ನುವ ಶೀರ್ಷಿಕೆಯೊಂದಿಗೆ ಬರುತ್ತದೆ ಹಾಗೂ ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುವ ಸಂದರ್ಭದಲ್ಲಿ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಸಂಬಂಧಪಟ್ಟ ಹಾಗೆ ಎಲ್ಲ ಜಾಗರೂಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ದಯವಿಟ್ಟು ಯಾವುದೇ ಮುಂಜಾಗತ ಕ್ರಮವಿಲ್ಲದೆ ಯಾರು ಈ ರೀತಿ ನಡೆದುಕೊಳ್ಳಬಾರದು ಎನ್ನುವುದನ್ನು ಕೂಡ ಅಲ್ಲಿ ಬರೆದಿರುತ್ತಾರೆ ಆದರೆ ಇವುಗಳನ್ನು ಯಾರು ಗಮನಿಸುವುದಿಲ್ಲ ಬರಿ ಹೀರೋ ಹಾಗೂ ಆತನ ನಟನೆ ಮೇಲೆ ಗಮನ ಕೊಡುವ ಇವರು ಅದನ್ನೇ ಅನುಸರಿಸಲು ಹೋಗಿ ಹಲವಾರು ಅವಾಂತರ ಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.

ಆದರೆ ಸಿನಿಮಾ ಹಾಗೂ ಧಾರಾವಾಹಿ ಇನ್ನಿತರ ಸಂದರ್ಭದಲ್ಲಿ ಆ ಪಾತ್ರಗಳಿಗೆ ಅದು ಅವಶ್ಯಕತೆ ಇರುವುದರಿಂದ ಮಾತ್ರ ಹೀರೋಗಳು ಹಾಗೆ ನಡೆದುಕೊಳ್ಳುತ್ತಾರೆ ಆದರೆ ವೈಯುಕ್ತ ಬದುಕಿನಲ್ಲಿ ಅವರು ಸುಂದರವಾಗಿ ಅವರ ಜೀವನವನ್ನು ಕಟ್ಟಿಕೊಂಡಿರುತ್ತಾರೆ ಎನ್ನುವುದು ಇನ್ನು ನಮ್ಮ ಜನಕ್ಕೆ ಸರಿಯಾಗಿ ಮನವರಿಕೆ ಆಗಿಯೇ ಇಲ್ಲ. ಉದಾಹರಣೆಗೆ ಹೇಳಬೇಕು ಎಂದರೆ ಸಿನಿಮಾಗಳಲ್ಲಿ ಧೂಮಪಾನ ಮದ್ಯಪಾನ ಮಾಡುವ ಎಷ್ಟೋ ನಟರುಗಳು ನಿಜ ಜೀವನದಲ್ಲಿ ಅವುಗಳನ್ನು ಕೈಯಲ್ಲಿ ಕೂಡ ಮುಟ್ಟುವುದಿಲ್ಲ ಇಂತಹ ಉದಾಹರಣೆಗಳು ಮೊದಲಿಗೆ ಡಾಕ್ಟರ್ ರಾಜಕುಮಾರ್ ಅವರಿಂದ ಶುರುವಾಗುತ್ತದೆ. ಅಣ್ಣಾವ್ರು ಕರ್ನಾಟಕದ ಎಷ್ಟೋ ಜನರ ಪಾಲಿಕೆ ಆದರ್ಶ ಹಾಗೂ ಅಣ್ಣಾವ್ರ ಬಂಗಾರದ ಮನುಷ್ಯ ಎನ್ನುವ ಸಿನಿಮಾವನ್ನು ನೋಡಿ ಎಷ್ಟೋ ಜನ ಪಟ್ಟಣ ಸೇರಿದ್ದ ಯುವಕರು ಮತ್ತೆ ಹಳ್ಳಿಗಳಿಗೆ ಹೋಗಿ ವ್ಯವಸಾಯ ಮಾಡಲು ಶುರು ಮಾಡಿದರು.

ಯಾಕೆಂದರೆ ಅಣ್ಣ ಅವರ ಒಂದೊಂದು ಮಾತು ಹಾಗು ಅವರ ಒಂದೊಂದು ಸಿನಿಮವು ಜನರ ಮನಸ್ಸಿನಲ್ಲಿ ಇಂತಹದೊಂದು ಒಳ್ಳೆಯ ಪರಿವರ್ತನೆಗೆ ಕಾರಣವಾಗಿತ್ತು. ಸನ್ನಿವೇಶಗಳಿಗೆ ಅವಶ್ಯಕತೆ ಇದ್ದಾಗ ಧೂಮಪಾನ ಮತ್ತು ಮಧ್ಯಪಾನ ಮಾಡುವಂತೆ ಕಾಣಿಸಿಕೊಂಡರು ಕೂಡ ನಿಜ ಜೀವನದಲ್ಲಿ ಇವುಗಳಿಂದ ದೂರವಿದ್ದರು. ಇವರ ಹಾದಿಯಲ್ಲೇ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ ಅವರು ಸಹ ನಡೆಕೊಂಡರು. ಅಪ್ಪು ಅವರು ಕೂಡ ಸಾಧ್ಯವಾದಷ್ಟು ಇಂತಹ ಪಾತ್ರಗಳು ಕಡಿಮೆ ಮಾಡಿಕೊಂಡೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇವರ ಸಿನಿಮಾಗಳನ್ನು ಕುಟುಂಬ ಸಮೇತವಾಗಿ ಕುಳಿತು ನೆಮ್ಮದಿಯಾಗಿ ಯಾವುದೇ ಮುಜುಗರವಿಲ್ಲದೇ ನೋಡಬಹುದಾಗಿತ್ತು. ಅಂತಹ ಒಳ್ಳೆಯ ಮೌಲ್ಯಯುತ ಕಥೆಗಳು ಪುನೀತ್ ರಾಜ್ ಕುಮಾರ್ ಅವರ ಸಿನಿಮಾದಲ್ಲಿ ಇರುತ್ತಿತ್ತು.

ಇವರು ಕೂಡ ನಿಜ ಜೀವನದಲ್ಲಿ ಎಂದಿಗೂ ಧೂಮಪಾನ ಮಾಡಿದವರಲ್ಲ ಹಾಗೂ ಮಧ್ಯವನ್ನು ಮುಟ್ಟಿದವರಲ್ಲ. ಹಾಗೆ ಕಿಚ್ಚ ಸುದೀಪ್ ಅವರು ಕೂಡ ಮುಂದೆ ಸಿಗರೇಟ್ ಅನ್ನು ಸೇದುತ್ತಿದ್ದರು ಆದರೆ 10 ವರ್ಷಗಳ ಹಿಂದೆ ಅವರಿಗೆ ಅನಾರೋಗ್ಯ ಸಮಸ್ಯೆಯಾಗಿ ಅಂದಿನಿಂದ ಆ ಚಟವನ್ನು ಅವರೇ ಇಷ್ಟಪಟ್ಟು ಬಿಟ್ಟವರು ಇಂದಿಗೂ ಸಹ ಅದನ್ನು ಮುಟ್ಟೇ ಇಲ್ಲ ಮತ್ತು ಇದುವರೆಗೂ ಒಂದು ಸಲವೂ ಕೂಡ ಇವರು ಮದ್ಯಪಾನ ಕೂಡ ಮಾಡಿಲ್ಲವಂತೆ. ಇನ್ನು ಎಲ್ಲರಿಗಿಂತ ಹೆಚ್ಚಾಗಿ ರವಿಚಂದ್ರನ್ ಸರ್ ಅವರನ್ನು ಸಿನಿಮಾ ಮೇಲೆ ನೋಡಿದವರು ಖಂಡಿತ ಇವರೊಬ್ಬ ಕುಡುಕ ಎಂದುಕೊಳ್ಳುತ್ತಾರೆ. ಆದರೆ ನಿಜ ಜೀವನದಲ್ಲಿ ರವಿಚಂದ್ರನ್ ಅವರು ಸಹ ಧೂಮಪಾನ ಮಧ್ಯಪಾನ ಇಂತಹ ದುಷ್ಚಟಗಳಿಂದ ದೂರವಿದ್ದು ಒಳ್ಳೆಯ ಜೀವನ ನಡೆಸುತ್ತಿದ್ದಾರೆ ಹಾಗೂ ಇದೇ ಹಾದಿಯಲ್ಲಿ ವಿಜಯ ರಾಘವೇಂದ್ರ ಅವರು ಕೂಡ ಇದ್ದಾರೆ. ಎಲ್ಲರೂ ಇವರನ್ನು ಅಮೂಲ್ ಬೇಬಿ ಎನ್ನುತ್ತಾರೆ ನಿಜವಾಗಿಯೂ ಅದೇ ರೀತಿಯ ಮಗುವಿನಂತಹ ಗುಣಗಳು ವಿಜಯ ರಾಘವೇಂದ್ರ ಅವರಿಗಿದೆ. ಇಷ್ಟು ನಟರಲ್ಲಿ ನಿಮ್ಮ ನೆಚ್ಚಿನ ನಟ ಯಾರು ಅಂತ ಕಾಮೆಂಟ್ ಮಾಡಿ.

ಅಭಿಮಾನಿಗಳು ಸೃಷ್ಟಿಸಿದ ಈ ಫೋಟೋ ನೋಡಿ ಭಾವುಕರಾಗಿ ಕಣ್ಣಿರಿಡುತ್ತ ಮೇಘನಾ ರಾಜ್ ಹೇಳಿದ್ದೇನೆ ನೋಡಿ. ಯಾವ ಹೆಣ್ಣಿಗೂ ಈ ಸ್ಥಿತಿ ಬರದಿರಲಿ.

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ತಾರಾ ಜೋಡಿಗಳು ಕಣ್ಮಣವನ್ನು ಸೆಳೆಯುತ್ತಾರೆ ಅದರಲ್ಲಿ ಮೇಘನಾ ರಾಜ್ ಹಾಗು ಚಿರಂಜೀವಿ ಸರ್ಜಾ ಜೋಡಿ ಕೂಡ ಒಂದು. ಪ್ರೀತಿಗೆ ಯಾವುದೇ ರೀತಿಯಾದಂತಹ ಧರ್ಮ ಆಸ್ತಿ ಬಣ್ಣ ಅಡಚಣೆಯಾಗುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಂತಹ ಜೋಡಿ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೇಘನಾ ರಾಜ್ ಆಗು ಚಿರಂಜೀವಿ ಸರ್ಜಾ ಅವರು ಒಬ್ಬರನ್ನೊಬ್ಬರು ಕಳೆದ ಹತ್ತು ವರ್ಷಗಳಿಂದಲೂ ಕೂಡ ಇಷ್ಟಪಡುತ್ತಿದ್ದರು. ಮೂರು ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದರು ಆದರೆ ಇವರ ಸಂಸಾರದ ಮೇಲೆ ಅದು ಯಾರ ಕೆಟ್ಟ ದೃಷ್ಟಿ ಬಿತ್ತೋ ಏನ್ನೋ ಗೊತ್ತಿಲ್ಲ ಸದಾ ಕಾಲ ಜೊತೆಯಲ್ಲಿ ಬದುಕಬೇಕು ಅಂತ ಸಪ್ತಪಡಿ ತುಳಿದಂತಹ ಈ ಜೋಡಿಯ ಬದುಕು ವಿಧಿಯಾಟಕ್ಕೆ ತತ್ತರಿಸಿ ಹೋಯಿತು.

ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೇಘಾನ ರಾಜ್ ಅವರು ತಮ್ಮ ಪತಿ ಚಿರಂಜೀವಿ ಸರ್ಜಾ ಅವರನ್ನು ಬಹಳಷ್ಟು ಇಷ್ಟ ಪಡುತ್ತಿದ್ದರು ಈ ಕಾರಣಕ್ಕಾಗಿ ಅನ್ಯ ಧರ್ಮದವರು ಆದರೂ ಕೂಡ ಮನೆಯವರನ್ನು ಒಪ್ಪಿಸಿ ಅವರ ಸಮ್ಮತಿಯ ಮೇರೆಗೆ ಪ್ರೀತಿಸಿ ಮದುವೆಯಾಗಿದ್ದರು. ಇತ್ತ ಕಡೆ ಚಿರಂಜೀವಿ ಸರ್ಜಾ ಅವರಿಗೂ ಕೂಡ ಮೇಘನಾ ರಾಜೇಂದರೆ ಬಹಳನೇ ಪ್ರೀತಿ ಇವರಿಬ್ಬರ ಅವಿನಾ ಬಾವನ ಸಂಬಂಧವನ್ನು ನೋಡಿ ಆ ದೇವರಿಗೂ ಕೂಡ ಹೊಟ್ಟೆಕಿಚ್ಚು ಬಂತು ಅಂತ ಅನಿಸುತ್ತದೆ. ನೂರ್ಕಾಲ ಜೊತೆಯಾಗಿ ಬಾಳಬೇಕಾದಂತಹ ಜೋಡಿ ದೂರಾಗಿದ್ದಾರೆ ಬಾರದ ಲೋಕಕ್ಕೆ ತೆರಳಿದಂತಹ ಚಿರಂಜೀವಿ ಸರ್ಜಾ. ಆದರೆ ಮೇಘನಾ ರಾಜ್ ಅವರು ಇಂದಿಗೂ ಕೂಡ ತಮ್ಮ ಪತಿ ತಮ್ಮ ಆತ್ಮದಲ್ಲಿ ಇದ್ದಾರೆ ಎಂಬ ಭಾವನೆಯ ದಲ್ಲಿ ಜೀವನ ನಡೆಸುತ್ತಿದ್ದಾರೆ.

ಚಿರುವರು ಅಗಲಿದರೂ ಕೂಡ ಚಿರು ಅವರ ನೆನಪಿನಲ್ಲಿಯೇ ಸದಾ ಕಾಲ ಇರುವಂತಹ ಮೇಘನಾ ರಾಜ್ ಅವರು ಆಗಾಗ ಚಿರುವಿನೊಟ್ಟಿಗೆ ಇರುವಂತಹ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಮಗನಿಗೂ ಕೂಡ ಅಪ್ಪ ಎಂಬುದನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಅಪ್ಪನ ಫೋಟೋ ತೋರಿಸಿ ಅವರನ್ನು ಬೈತುಂಬ ಅಪ್ಪ ಎನಿಸುವಂತಹ ಮಾತುಗಳನ್ನು ಕೂಡ ಆಡಿಸುತ್ತಾ ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದೆ. ಆದರೆ ಇದೀಗ ಮೇಘನಾ ರಾಜ್ ಅವರು ಅಭಿಮಾನಿಗಳೊಬ್ಬರು ಮಾಡಿದಂತಹ ಕೈ ಚಲಕಕ್ಕೆ ಮಾರು ಹೋಗಿದ್ದಾರೆ. ಹೌದು ಅಭಿಮಾನಿಗಳ ಕೈಚಳಕದಿಂದ ಮೂಡಿ ಬಂದಂತಹ ಈ ಒಂದು ಭಾವಚಿತ್ರವನ್ನು ನೋಡಿದಂತಹ ಮೇಘನಾ ರಾಜ್ ಅವರು ಭಾವುಕರಾಗಿ ಅವರ ಪ್ರತಿಭೆಗೆ ಸಲಾಂ ಹೊಡೆದಿದ್ದಾರೆ.

ಮೇಘನಾ ರಾಜ್ ಅವರು ತಮ್ಮ ಮಗ ರಾಯಲ್ ರಾಜ್ ಸರ್ಜಾ ಅವರನ್ನು ಎತ್ತಿ ಹಿಡಿದುಕೊಂಡಿರುವಂತಹ ಫೋಟೋಗಳ ಪಕ್ಕ ಚಿರಂಜೀವಿ ಸರ್ಜಾ ಅವರು ನಿಂತಿರುವಂತಹ ಫೋಟೋ ಒಂದನ್ನು ಎಡಿಟ್ ಮಾಡಿದ್ದಾರೆ. ಈ ಫೋಟೋ ನೋಡಿದರೆ ಯಾರಿಂದಲೂ ಕೂಡ ಇದು ಎಡಿಟೆಡ್ ಫೋಟೋ ಅಂತ ಅನಿಸುವುದಿಲ್ಲ ಇಬ್ಬರೂ ಕೂಡ ಅಕ್ಕಪಕ್ಕದಲ್ಲಿಯೇ ನಿಂತಿದ್ದಾರೆ ಎಂಬ ಮಾದರಿಯಲ್ಲಿ ಭಾಸವಾಗುತ್ತದೆ. ಅಷ್ಟು ಅಚ್ಚುಕಟ್ಟಾಗಿ ಈ ಫೋಟೋವನ್ನು ಎಡಿಟ್ ಮಾಡಿದ್ದಾರೆ ಈ ಫೋಟೋ ಎಡಿಟ್ ಮಾಡಿದವರಿಗೆ ಆಸ್ಕರ್ ಅವಾರ್ಡ್ ನೀಡಬೇಕು. ಇಲ್ಲಿಯವರೆಗೂ ನೋಡಿದಂತಹ ಎಲ್ಲಾ ಫೋಟೋ ಎಡಿಟಿಂಗ್ ಗಿಂತ ಈ ಫೋಟೋ ಎಡಿಟ್ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ ಇದು ನನ್ನ ಹೃದಯಕ್ಕೆ ಮತ್ತು ಭಾವನೆಗೆ ತುಂಬಾ ಹತ್ತಿರವಾದ ಫೋಟೋ. ಎಂದು ಮೇಘನಾ ರಾಜ್ ಅವರ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಆ ಫೋಟೋವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಲ್ಪನೆಯ ಲೋಕದಲ್ಲಿ ಒಟ್ಟಾಗಿ ಇರುವಂತಹ ಈ ದಂಪತಿಗಳು ನಿಜ ಜೀವನದಲ್ಲಿಯೂ ಒಂದಾಗಿದ್ದರೆ ಎಷ್ಟು ಚೆನ್ನಾಗಿರುತ್ತೆ ಎಂದು ನೆಟ್ಟಿಗರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಫೋಟೋ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಒಂದು ಭಾವನಾತ್ಮಕ ಸಾಲು ಬರೆದು ಕಾಮೆಂಟ್ ಮಾಡಿ.

ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ರಾಗಿಣಿಯ ಈ ಹಾಟ್ ವಿಡಿಯೋ ನೋಡಿದರೆ ನಿಮ್ಮ ತಲೆ ಗಿರ್ ಅನ್ನುತ್ತೆ ಪಕ್ಕಾ.

ನಟಿ ರಾಗಿಣಿ ಅವರು ಕನ್ನಡ ಸೇರಿದಂತೆ ಹಿಂದಿ, ಮಲಯಾಳಂ, ತೆಲುಗು, ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ ನಟಿ ರಾಗಿಣಿ ದ್ವಿವೇದಿ ಅವರು ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ ಎಂದರೆ ಅದು ವೀರಮದಕರಿ. ವೀರಮದಕರಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಅಭಿನಯಿಸಿದ್ದು ಈ ಒಂದು ಸಿನಿಮಾ ಅವರಿಗೆ ಹೆಚ್ಚಿನ ಹೆಸರನ್ನು ತಂದು ಕೊಟ್ಟಿತು, ವೀರಮದಕರಿ ಸಿನಿಮಾದಲ್ಲಿನ ಇವರ ನಟನೆಯನ್ನು ನೋಡಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ತಾವು ನಟಿಸಿದಂತಹ ಮೊದಲ ಸಿನಿಮಾದಲ್ಲಿ ಯಶಸ್ಸನ್ನು ಪಡೆದುಕೊಂಡಂತಹ ನಟಿ ರಾಗಿಣಿ ಅವರು ಈ ಸಿನಿಮಾದ ನಂತರ ಬಹುತೇಕ ಕನ್ನಡ ಸಿನಿಮಾ ನಟರುಗಳ ಜೊತೆಯಲ್ಲಿ ನಟಿಸಿದ್ದಾರೆ. ಬಹುಭಾಷ ನಟಿಯಾದಂತಹ ರಾಗಿಣಿ ಸುಮಾರು 25ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟನೆಯನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.

ತುಪ್ಪದ ಬೆಡಗಿ ಎಂದೇ ಖ್ಯಾತಿಯನ್ನು ಪಡೆದುಕೊಂಡಿರುವಂತಹ ರಾಗಿಣಿ ದ್ವಿವೇದಿ ಅವರು ಕನ್ನಡದ ಕಳ್ಳ ಮಳ್ಳ ಸುಳ್ಳ ಸಿನಿಮಾದ ಮೂಲಕ ತುಪ್ಪದ ಬೆಡಗಿ ಎಂದು ಹೆಸರನ್ನು ಪಡೆದುಕೊಂಡರು. ಈ ಒಂದು ಸಿನಿಮಾದಲ್ಲಿ ಇವರಿಗೆ ನೀಡಿದಂತಹ ಹಾಡು ಎಲ್ಲರ ಫೇವರೆಟ್ ಎಂದು ಹೇಳಬಹುದು. ಕೆಂಪೇಗೌಡ ಹಾಗೂ ವೀರಮದಕರಿ ಸಿನಿಮಾಗಳು ಇವರಿಗೆ ಸ್ಟಾರ್ ಗಿರಿಯನ್ನು ತಂದು ಕೊಟ್ಟಿದ್ದೆ ಎಂದು ಹೇಳಿದರೆ ತಪ್ಪಾಗಲಾರದು ಈ ಸಿನಿಮಾಗಳ ನಂತರ ಇವರು ಹೆಚ್ಚಾಗಿ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು ಈ ಒಂದು ಸಿನಿಮಾಗಳು ಸಹ ರಾಗಿಣಿ ಅವರಿಗೆ ತುಂಬಾ ಚೆನ್ನಾಗಿ ಒಪ್ಪುವಂತಹ ಸಿನಿಮಾಗಳೇ ಆಗಿದೆ. ರಾಗಿಣಿ ಅವರು ಚಿತ್ರರಂಗಕ್ಕೆ ಬಂದಿದ್ದೆ ಬಂದಿದ್ದು ಒಂದರ ಮೇಲೊಂದರಂತೆ ಸಿನಿಮಾ ಆಫರ್ ಗಳು ಇವರನ್ನು ಹುಡುಕಿಕೊಂಡು ಬಂದವು ಇವರು ನಟಿಸಿರುವಂತಹ ಹಲವು ಸಿನಿಮಾಗಳು ಬೋಲ್ಡ್ ಕ್ಯಾರೆಕ್ಟರ್ ನಲ್ಲಿ ಇದೆ ಎಂದೇ ಹೇಳಬಹುದು.

ಇವರು ಹೆಚ್ಚಾಗಿ ಟ್ರೆಡಿಶನಲ್ ಲುಕ್ ಇರುವಂತಹ ಪಾತ್ರ ಗಳಿಗಿಂತ ಗ್ಲಾಮರಸ ಪಾತ್ರಗಳನ್ನೇ ಹೆಚ್ಚಾಗಿ ಆರಿಸಿಕೊಂಡಿದ್ದಾರೆ. ರಾಗಿಣಿ ಅವರು ಕನ್ನಡ ಚಿತ್ರರಂಗ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಈಗ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಸದ್ಯದಲ್ಲಿ ಇವರು ಕನ್ನಡದ ಗಾಂಧಿಗಿರಿ ಮತ್ತು ತಮಿಳಿನ ಒನ್ ಟು ಒನ್ ಸಿನಿಮಾಗಳ ಬಿಸಿಯಾಗಿದ್ದಾರೆ. ಅಷ್ಟೇ ಅಲ್ಲದೆ ಕರ್ಮ3, ಜಾನಿವಾಕರ್ ಚಿತ್ರಗಳಲ್ಲಿಯೂ ಸಹ ಬಣ್ಣ ಹಚ್ಚುತ್ತಿದ್ದಾರೆ. ರಾಗಿಣಿ ಅವರಿಗೆ 32 ವರ್ಷಗಳು ಆಗಿದ್ದರೂ ಸಹ ಇನ್ನೂ ಸಹ ಅವರು ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ ಈಗಲೂ ಸಹ ಅದಿ ಅರೆಯದ ಹುಡುಗಿಯಂತೆ ಇರುವ ರಾಗಿಣಿಯವರು ಸಾಕಷ್ಟು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುತ್ತಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ರಾಗಿಣಿ ಅವರು ಸಾಕಷ್ಟು ರೀತಿಯಾದಂತಹ ರೀಲ್ಸ್ ಗಳನ್ನು ಮಾಡಿ ಅದರಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಅವರು ಮಾಡಿರುವಂತಹ ಈ ಒಂದು ರೀಲ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಹೌದು ರಾಗಿಣಿ ದ್ವಿವೇದಿ ಮೇರಿ ಮಂಜಿಲ್ ಅಪಿಲೇ ಎಂಬ ಹಿಂದಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು ಕಪ್ಪು ಬಣ್ಣದ ಉಡುಗೆಯನ್ನು ತೊಟ್ಟಿಕೊಂಡು ತುಂಬಾ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಇದನ್ನು ನೋಡಿದಂತಹ ಸಾಕಷ್ಟು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ ತುಂಬಾ ಬೋಲ್ಡ್ ಆಗಿ ಇರುವಂತಹ ರಾಗಿಣಿ ಅವರಿಗೆ ದಿನದಿಂದ ದಿನ ಅಭಿಮಾನಿಗಳು ಹೆಚ್ಚುತ್ತಲೇ ಇದ್ದಾರೆ. ಈ ಹಾಟ್ ಡ್ಯಾನ್ಸ್ ನೋಡಿದರೆ ಪಡ್ಡೆ ಹುಡುಗರ ನಿದ್ದೆ ಕೆಡುವುದಂತೂ ಖಚಿತ ಡ್ರ-ಗ್ಸ್ ಕೇಸ್ ನಿಂದ ಹೊರಬಂದ ನಂತರ ಡ್ಯಾನ್ಸ್ ನಷೆಯಲ್ಲಿ ತೇಲಾಡುತ್ತಿದ್ದಾರೆ ಎಂಬುದು ಬಹಳಷ್ಟು ನೆಟ್ಟಿಗರ ಅಭಿಪ್ರಾಯವಾಗಿದೆ. ಈ ಡಾನ್ಸ್ ನೋಡಿದ ಮೇಲೆ ನಿಮ್ಮ ಮನಸ್ಸಿನಲ್ಲಿ ಮೂಡಿದ ಅನಿಸಿಕೆ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮಾಡಿ.

 

ಮಾಳವಿಕಾ ಅವಿನಾಶ್ ರವರ ಮಗನಿಗೆ ಬಂದಿರುವ ಕಷ್ಟ ಕೇಳಿದರೆ ಕಣ್ಣೀರು ಬರುತ್ತದೆ. ಇಷ್ಟು ಚಿಕ್ಕ ವಯಸ್ಸಿಗೆ ಇಂಥ ಕಷ್ಟನಾ.!

ನಟ ಅವಿನಾಶ್ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ಇವರು ವಿಶ್ವ ವಿದ್ಯಾಲಯದಲ್ಲಿ ಆಂಗ್ಲ ಭಾಷೆಯಲ್ಲಿ ಎಮ್.ಎ ಪದವಿಯನ್ನು ಪಡೆದುಕೊಂಡಿದ್ದಾರೆ. ಕನ್ನಡ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಇವರ ಅಭಿನಯಿಸಿರುವ ಇವರು ಮೊದಲಿಗೆ ಮಾಯಾಮೃಗ ಧಾರಾವಾಹಿಯ ಮೂಲಕ ಬಣ್ಣವನ್ನು ಹಚ್ಚಿದ್ದಾರೆ. ನಂತರದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟನೆಯನ್ನು ಮಾಡಿರುವಂತಹ ಅವಿನಾಶ್ ಅವರು ಸಾಕಷ್ಟು ಮಟ್ಟದ ಕೀರ್ತಿಯನ್ನು ಗಳಿಸಿಕೊಂಡಿದ್ದಾರೆ. ಹಾಗೆಯೇ ಮಾಳವಿಕಾ ಅವರು ಜನಿಸಿದ್ದು ತಮಿಳುನಾಡಿನಲ್ಲಿ ತಂದೆ ಎನ್ ಗಣೇಶ್ ಹಾಗು ತಾಯಿ ಸಾವಿತ್ರಿ, ಬಾಲ್ಯ ಹಾಗು ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮಿಳುನಾಡಿನಲ್ಲಿಯೇ ಮುಗಿಸಿದರು ನಂತರ ಬೆಂಗಳೂರಿನಲ್ಲಿ ಲಾ ಪದವಿಯನ್ನು ಪಡೆದುಕೊಂಡರು. ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಡ್ಯಾನ್ಸರ್ ಆಗಿದ್ದ ಅವರು ಭರತನಾಟ್ಯವನ್ನು ಕಲಿತಿದ್ದರು ಮಾಳವಿಕಾ ಅವರು ಅವಿನಾಶ್ ರವರ ಜೊತೆ ಸಿನಿಮಾ ಮಾಡುತ್ತಿದ್ದ ವೇಳೆ ಇಬ್ಬರಿಗೂ ಪ್ರೀತಿಯಾಗಿ ಮದುವೆ ಕೂಡ ಆದರು.

 

ಪದವಿ ಶಿಕ್ಷಣವನ್ನು ಪಡೆದ ನಂತರ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಲು ಹಲವು ಅವಕಾಶಗಳು ಇವರಿಗೆ ಹುಡುಕಿಕೊಂಡು ಬಂದವು ಕಿರುತೆರೆಯ ಮೂಲಕ ಮಾಳವಿಕಾ ಅವರು ಕನ್ನಡದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬದುಕು ಜಟಕಾ ಬಂಡಿ ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುವುದರ ಮೂಲಕ ಸಾಕಷ್ಟು ಹೆಸರನ್ನು ಗಳಿಸಿಕೊಂಡಿದ್ದಾರೆ. ಸದ್ಯಕ್ಕೆ ರಾಜಕೀಯವಾಗಿ ಬಿಜೆಪಿ ಪಾರ್ಟಿಯಲ್ಲಿ ಸಕ್ರಿಯವಾಗಿದ್ದಾರೆ ಮಾಳವಿಕ ಹಾಗೂ ನಟ ಅವಿನಾಶ್ ದಂಪತಿಗಳಿಗೆ ಒಂದು ಮಗು ಇದೆ ದುರಾದೃಷ್ಟವಶಾತ್ ಆ ಮಗು ಬುದ್ಧಿಹೀನ ಮಗುವಾಗಿ ಹುಟ್ಟಿದೆ, ಬುದ್ಧಿ ಶಕ್ತಿ ಕಡಿಮೆ ಇರುವಂತಹ ಮಗುವನ್ನು ನೋಡಿ ಈ ದಂಪತಿಗಳು ಬೇಸರ ಮಾಡಿಕೊಳ್ಳದೆ ಆ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಈ ಮಗು ಹುಟ್ಟಿದಾಗ ಮಾಳವಿಕಾ ಹಾಗೂ ಅವಿನಾಶ್ ಅವರು ಹಲವು ಜನರಿಂದ ಅನೇಕ ನಿಂದನೆಗಳನ್ನು ಅನುಭವಿಸಿದ್ದಾರೆ. ಅವಿನಾಶ್ ಹಾಗೂ ಮಾಳವಿಕಾ ಅವರಿಗೆ 14 ವರ್ಷಗಳ ವಯಸ್ಸಿನ ಅಂತರ ಇದ್ದಿದ್ದರಿಂದ ಈ ರೀತಿ ಆದಂತಹ ಮಗು ಜನಿಸಿದೆ ಎಂದು ಚುಚ್ಚು ಮಾತುಗಳು ಸಹ ಕೇಳಿ ಬಂದಿದೆಯಂತೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಮಾಳವಿಕಾ ಹಾಗೂ ಅವಿನಾಶ್ ಆ ಮಗುವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ಆದರೆ ನಾವು ಬದುಕಿರುವ ತನಕ ನಾವು ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಆದರೆ ಮುಂದೆ ಯಾರು ನೋಡಿಕೊಳ್ಳುತ್ತಾರೆ ಎನ್ನುವಂತಹ ಚಿಂತೆಯು ಸಹ ಇವರಿಗೆ ಕಾಡಿದೆಯಂತೆ, ಯಾಕೆಂದರೆ ವೈದ್ಯರು ಹೇಳುವ ಪ್ರಕಾರ ಆ ಮಗುವಿಗೆ ಬುದ್ಧಿಶಕ್ತಿ ಬರುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ. ಕಿರಿತೆರೆ ಮತ್ತು ಬೆಳ್ಳಿ ತೆರೆ ಮೇಲೆ ನಮ್ಮಲ್ಲೆಲ್ಲಾ ರಂಜಿಸುವ, ನಗಿಸುವ ಕಲಾವಿದರು ಕೂಡ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋ.ವು, ದುಃ.ಖ ಅನುಭವಿಸುತ್ತಾ ಇರುತ್ತಾರೆ ಎನ್ನುವುದಕ್ಕೆ ಮಾಳವಿ ಮತ್ತು ಅಭಿನಾಶ್ ಅವರ ಜೀವನವೇ ಸಾಕ್ಷಿ. ಬಣ್ಣ ಹಚ್ಚಿ ನಟನೆಯನ್ನು ಮಾಡುವಂತಹ ಕಲಾವಿದರ ಜೀವನ ಎಲ್ಲವೂ ಸಹ ಚೆನ್ನಾಗಿ ಇರುವುದಿಲ್ಲ, ಅವರಿಗೆ ಅವರದ್ದೇ ಆದಂತಹ ಒಂದಷ್ಟು ನೋ.ವುಗಳು ಹಾಗೆ ಅವರ ವೈಯಕ್ತಿಕ ಜೀವನದಲ್ಲಿ ಕೆಲವೊಂದು ಮರೆಯಲಾಗದ ಕಹಿ ಘಟನೆಗಳು ಸಹ ಇರುತ್ತದೆ ಆದರೆ ಅದನ್ನೆಲ್ಲವನ್ನು ಮರೆತು ಜನರನ್ನು ರಂಜಿಸುವಂತಹ ಕಾರ್ಯದಲ್ಲಿ ಅವರು ತೊಡಗಿಕೊಂಡಿರುತ್ತಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಕಣ್ಣೀರು ಹಾಕುತ್ತ ಅಪ್ಪ ಕೆಟ್ಟವನು ಅಮ್ಮ ಮಾತ್ರ ಒಳ್ಳೆಯವಳು ಎಂದ ಯಶ್ ಮಗನ ಈ ಮಾತು ಕೇಳಿದರೆ ಪಕ್ಕಾ ಶಾಕ್ ಆಗ್ತೀರಾ.

ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯೂಟಿಫುಲ್ ಜೋಡಿ ಅಂದರೆ ಅದು ರಾಧಿಕಾ ಪಂಡಿತ್ ಯಶ್ ಅಂತಾನೇ ಹೇಳಬಹುದು ಅದರಲ್ಲಿಯೂ ಕೂಡ ಈ ದಂಪತಿಗಳಿಗೆ ಮುದ್ದಾದ ಇಬ್ಬರು ಮಕ್ಕಳು ಇದ್ದಾರೆ ಐರಾ ಮತ್ತು ಯಥರ್ವ ಇಬ್ಬರು ಕೂಡ ಬಹಳ ಚುರುಕು ಮತ್ತು ಚೂಟಿ. ಏನೇ ಹೇಳಿಕೊಟ್ಟರು ಕೂಡ ಅಷ್ಟೇ ಸರಳವಾಗಿ ಮತ್ತೆ ಹಿಂತಿರುಗು ಹೇಳುತ್ತಾರೆ ಬುದ್ಧಿವಂತಿಕೆಯಲ್ಲಿ ಇವರಿಬ್ಬರನ್ನು ಕೂಡ ಮೆಚ್ಚಿಕೊಳ್ಳಲೇಬೇಕು ಸದ್ಯಕ್ಕೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಸಿನಿಮಾ ಜರ್ನಿಯಲ್ಲಿ ಎಷ್ಟೇ ಬ್ಯುಸಿಯಾಗಿ ಇದ್ದರೂ ಕೂಡ ತಮ್ಮ ಕುಟುಂಬಕ್ಕೆ ಅಷ್ಟೇ ಸಮಯವನ್ನು ಮೀಸಲು ಇಡುತ್ತಾರೆ ಅಂತ ಹೇಳಬಹುದು. ಇದಕ್ಕೆ ಉದಾಹರಣೆಯಾಗಿ ಈ ದಂಪತಿಗಳು ಆಗಾಗ ಕುಟುಂಬದೊಟ್ಟಿಗೆ ಪ್ರವಾಸ ಹೋಗುವುದು ಹೆಚ್ಚಿನ ಸಮಯ ಕಳೆಯುವುದು ಹರಟೆ ಹೊಡೆಯುವುದು ಡ್ಯಾನ್ಸ್ ಮಾಡುವುದನ್ನು ನಾವು ನೋಡಬಹುದು. ಇಂತಹ ವಿಚಾರಗಳಿಗೆ ಸಂಬಂಧಪಟ್ಟಂತಹ ಕೆಲವೊಂದು ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರೂ ಕೂಡ ಆಗಾಗ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ.

ಕಳೆದ ಬಾರಿ ಯಶ್ ಅವರು ತಮ್ಮ ಮುದ್ದು ಮಗಳು ಐರಾಗೆ ಕನ್ನಡದ ವರ್ಣಮಾಲೆ ಆದಂತಹ ಅ ಆ ಇ ಈ ಅನ್ನು ಹೇಳಿಕೊಳ್ಳುವಂತಹ ವಿಡಿಯೋ ಒಂದನ್ನು ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದಾದ ಬಳಿಕ ರಾಧಿಕಾ ಪಂಡಿತ್ ಅವರು ಸಮುದ್ರದ ತಟದಲ್ಲಿ ತಮ್ಮ ಮಕ್ಕಳ ಅಡುಗೆಗೆ ಆಟ ಆಡುವಂತಹ ಮುದ್ದಾದ ಕ್ಯೂಟ್ ವಿಡಿಯೋ ಒಂದನ್ನು ಕೂಡ ಹಾಕಿದ್ದರು ಈ ಫೋಟೋ ಮತ್ತು ವಿಡಿಯೋಗಳನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಅಷ್ಟೇ ಅಲ್ಲದ ದಿ ಪರ್ಫೆಕ್ಟ್ ಪೇರೆಂಟ್ಸ್ ಎಂಬ ಟೈಟಲ್ ಅನ್ನು ಕೂಡ ಕೊಟ್ಟಿದ್ದರು.

ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಸದ್ಯಕ್ಕೆ ಇಡೀ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಇದಾರೆ ಹಾಗಾಗಿ ಇವರ ಬಗ್ಗೆ ಆಗಿರಬಹುದು ಅಥವಾ ಸಿನಿಮಾ ಬಗ್ಗೆ ಆಗಿರಬಹುದು ಅಥವಾ ಮಕ್ಕಳ ಬಗ್ಗೆ ಆಗಿರಬಹುದು ಯಾವುದಾದರೂ ಅಪ್ಡೇಟ್ ಸಿಕ್ಕರೆ ಸಾಕು ಅಂತ ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿರುತ್ತಾರೆ. ಅಂತಹ ಅಭಿಮಾನಿಗಳಿಗೆ ಇಂದು ಒಂದು ಸಂತಸದ ಸುದ್ದಿ ಅಂತ ಹೇಳಬಹುದು ಏಕೆಂದರೆ ಯಶ್ ಅವರು ತಮ್ಮ ಮಗನೊಟ್ಟಿಗೆ ಹರಟೆ ಹೊಡೆಯುವಂತಹ ವಿಡಿಯೋ ಒಂದು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯಶ್ ಮಗ ಯಥರ್ವ ಯಾಕೋ ಅಪ್ಪನ ಮೇಲೆ ಸಖತ್ ಗರಂ ಆಗಿದ್ದಾನೆ ಅಂತ ಕಾಣಿಸುತ್ತದೆ.

ಏಕೆಂದರೆ ವಿಡಿಯೋದಲ್ಲಿ ಅಳುತ್ತಾ ಅಮ್ಮನ ಮಡಿಲನ್ನು ಅಪ್ಪಿಕೊಂಡು ಅಪ್ಪ ನೀನು ಕೆಟ್ಟವನು ಅಮ್ಮ ಮಾತ್ರ ಒಳ್ಳೆಯವಳು ಅಂತ ಹೇಳುತ್ತಿದ್ದಾನೆ. ಡ್ಯಾಡಿ ಇಸ್ ಬ್ಯಾಡ್ ಮಮ್ಮಿ ಇಸ್ ಗುಡ್ ಅಂತ ಹೇಳುತ್ತಿದ್ದಾನೆ ಎಷ್ಟೇ ಬಾರಿ ನಿಮ್ಮ ಅಪ್ಪ ಒಳ್ಳೆಯವನು ತುಂಬಾ ಸ್ವೀಟ್ ಆತ ತುಂಬಾ ಒಳ್ಳೆಯವನು ಅಂತ ಹೇಳಿಕೊಟ್ಟರು ಕೂಡ ಯಥರ್ವ ಮಾತ್ರ ಅದನ್ನು ಕೇಳುವುದಕ್ಕೆ ಸಿದ್ಧ ಇಲ್ಲ ತುಂಬಾನೇ ಕೋಪಗೊಂಡು ಅಪ್ಪ ಕೆಟ್ಟವನು ಅಂತ ಹೇಳುತ್ತಾನೆ ಇದ್ದಾನೆ. ಸದ್ಯಕ್ಕೆ ಈ ವಿಡಿಯೋ ನೋಡಿದಂತಹ ಫ್ಯಾನ್ಸ್ ಸಿಕ್ಕಾಪಟ್ಟೆ ಮನರಂಜನೆ ಪಡೆಯುತ್ತಿದ್ದಾರೆ ಆದರೆ ಕೆಲವೊಂದು ಮಾತ್ರ ತೀ.ವ್ರ.ವಾಗಿ ವಿ.ರೋ.ಧ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಈ ವಿಡಿಯೋದಲ್ಲಿ ಯಥರ್ವ ಕೇವಲ ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸುತ್ತಿದ್ದಾನೆ ಇದನ್ನು ನೋಡಿದಂತಹ ಕನ್ನಡ ಅಭಿಮಾನಿಗಳು ಮತ್ತು ನೆಟ್ಟಿಗರು ಮೊದಲು ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಿ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸ್ಟಾರ್ ನಟ ಆಗಿದ್ದರು ಅಪ್ಪು ಸಿನಿಮಾದಲ್ಲಿ ನಟನೆ ಮಾಡಲು ಪಡೆಯುತಿದ್ದ ಸಂಭಾವನೆ ಇಷ್ಟೇನಾ.?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಹೆಸರು ಕೇಳಿದ ತಕ್ಷಣ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಯಾಕೆಂದರೆ ಇವರೊಬ್ಬ ಪ್ರತಿಭಾನ್ವಿತ ನಟ ಎನ್ನುವುದಕ್ಕಿಂತ ಹೆಚ್ಚಾಗಿ ಸರಳ ಸಜ್ಜನಿಕೆಯ ವಿಶಾಲ ಹೃದಯ ಹೊಂದಿರುವ ಕರುಣಾಮಯಿ ಎನ್ನಬಹುದು. ತೆರೆ ಮೇಲೆ ಹೀರೋ ಆಗಿ ಮಿಂಚುತ್ತಿದ್ದ ಇವರು ತೆರೆ ಹಿಂದೆ ಕೂಡ ಹಾಗೆ ಬದುಕಿ ತೋರಿಸಿದವರು ಎಂದು. ಇವರು ಬದುಕಿದ ಈ ಬದುಕು ಎಷ್ಟೋ ಜನರಿಗೆ ಆದರ್ಶವಾಗಿದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಆದರೆ ಅಪ್ಪು ಅವರು ನಮ್ಮೊಂದಿಗೆ ಇಲ್ಲವಲ್ಲ ಎನ್ನುವ ದುಃಖ ಮಾತ್ರ ಸಹಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ಅವರು ಇದ್ದಾಗಲಿಗಿಂತ ಅವರನ್ನು ಕಳೆದುಕೊಂಡ ಮೇಲೆ ನಮಗೆ ಅವರ ಬೆಲೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ತಿಳಿಯುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೂ ಕೂಡ ಅಭಿಮಾನಿಗಳು ಅಪ್ಪು ಅವರನ್ನು ದೇವರು ಎಂದು ಕಂಡು ಅವರಿಲ್ಲದರೂ ಕೂಡ ಅವರನ್ನು ಮೊದಲಿಗಿಂತ ಹೆಚ್ಚಾಗಿಯೇ ಪ್ರೀತಿಸುತ್ತಿದ್ದಾರೆ ಹಾಗೂ ಗೌರವಿಸುತ್ತಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮೊದಲು ಬಾಲ ನಟನಾಗಿ ಕನ್ನಡ ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಪ್ಪನೊಂದಿಗೆ ಸಿನಿಮಾ ಸೆಟ್ ಗೆ ಬರುತ್ತಿದ್ದ ಅಪ್ಪು ಅವರಿಗೆ ಅಭಿನಯ ಎನ್ನುವುದು ರಕ್ತಕತವಾಗಿ ಬಂದಿತ್ತು ಎಂದು ಹೇಳಬಹುದು. ಹೀಗಾಗಿ ಬಾಲ್ಯದಲ್ಲೇ ಅಷ್ಟು ಅದ್ಭುತವಾದ ನಟನೆ ಅವರಿಂದ ಮಾಡಲು ಸಾಧ್ಯವಾಗಿತ್ತು. ಅಣ್ಣಾವ್ರ ಎದುರಿನಲ್ಲಿ ನಿಂತು ಪುನೀತ್ ರಾಜಕುಮಾರ್ ಅವರು ಭಕ್ತ ಪ್ರಹ್ಲಾದ ಡೈಲಾಗ್ ಹೇಳುತ್ತಿದ್ದರೆ ನಿಜಕ್ಕೂ ಮೈ ಜುಮ್ ಎನಿಸುತ್ತಿತ್ತು ಯಾಕೆಂದರೆ ಅಷ್ಟು 10 ವರ್ಷ ಕೂಡ ತುಂಬದ ಬಾಲಕ ಸಂಸ್ಕೃತದ ಶ್ಲೋಕಗಳನ್ನು ನಿರರ್ಗಳವಾಗಿ ಒಪ್ಪಿಸುತ್ತಿದ್ದರೆ ಅದು ಮುಖದ ಭಾವ ತಪ್ಪದ ಹಾಗೆ ನಿಜಕ್ಕೂ ಅವನೊಬ್ಬ ಸರಸ್ವತಿ ಪುತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಪುನೀತ್ ರಾಜಕುಮಾರ್ ಅವರು ಬಾಲ್ಯದಲ್ಲಿಯೇ ಬೆಟ್ಟದ ಹೂವು ಎನ್ನುವ ಸಿನಿಮಾಗೆ ರಾಷ್ಟ್ರಪತಿ ಅವರಿಂದ ರಾಷ್ಟ್ರಪ್ರಶಸ್ತಿ ಪಡೆದು ಬಂದಿದ್ದರು.

ಅವರ ಚಲಿಸುವ ಮೋಡಗಳು ಸಿನಿಮಾದ ಕಾಣದಂತೆ ಮಾಯವಾದನು ಹಾಡಿನ ನೃತ್ಯ ಗಾನ ಹಾಗೂ ಸ್ಟೆಪ್ಸ್ ಗಳನ್ನು ಯಾರು ಕೂಡ ಮರೆಯಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಯಾರಿವನು ಎರಡು ನಕ್ಷತ್ರಗಳು ಪರಶುರಾಮ ಸನಾದಿ ಅಪ್ಪಣ್ಣ ಭಾಗ್ಯವಂತ ಇನ್ನೂ ಮುಂತಾದ ಅನೇಕ ಸಿನಿಮಾಗಳಲ್ಲಿ ಅಪ್ಪು ಅವರು ಬಾಲ ನಟನಾಗಿ ಕಾಣಿಸಿಕೊಂಡಿದ್ದರು. ನಂತರ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡು ಪಾರ್ವತಮ್ಮ ರಾಜಕುಮಾರ್ ಅವರ ನಡೆಸುತ್ತಿದ್ದ ವಜ್ರೇಶ್ವರಿ ಕಂಬೈನ್ಸ್ ನಿರ್ಮಾಣದ ಕೆಲಸಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡರು. ಪುನೀತ್ ರಾಜಕುಮಾರ್ ಅವರು ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಿದ್ದು 2000ನೇ ಇಸವಿಯಲ್ಲಿ ತೆರೆಕಂಡ ಅಪ್ಪು ಎನ್ನುವ ರೋಮ್ಯಾಂಟಿಕ್ ಲವ್ ಸ್ಟೋರಿ ಯ ಮೂಲಕ. ಈ ಸಿನಿಮಾ ಕೂಡ ಭರ್ಜರಿ ನೂರು ದಿನಗಳ ಪ್ರದರ್ಶನ ಕಾಣುವ ಮೂಲಕ ಅಪ್ಪು ಅವರನ್ನು ಮತ್ತೊಮ್ಮೆ ಕನ್ನಡಕ್ಕೆ ಅಭಿಮಾನದಿಂದ ಸ್ವಾಗತಿಸಿತ್ತು.

ಅಲ್ಲಿಂದ ಇಲ್ಲಿಯ ತನಕ ಅಪ್ಪು ಅವರು ಸೋಲು ಕಂಡಿದ್ದೇ ಕಡಿಮೆ. ಅಪ್ಪು ಅವರು ಅಭಿನಯಿಸಿರುವ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳೇ. ಮಕ್ಕಳಿಂದ ವೃದ್ದರವರಿಗೆ ಎಲ್ಲರೂ ಕೂಡ ಇಷ್ಟಪಟ್ಟು ನೋಡುವಂತ ಸಿನಿಮಾ ಕಥೆಗಳನ್ನು ಹಾಗೂ ಪಾತ್ರಗಳನ್ನು ಮತ್ತು ಕಥೆಯ ಕೊನೆಯಲ್ಲಿ ಒಂದು ಸಂದೇಶ ಇರುವಂತಹ ಉತ್ತಮ ಸ್ಟೋರಿಗಳನ್ನು ಅಪ್ಪು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಹಾಗಾದರೆ ಅಪ್ಪು ಅವರು ತಮ್ಮ ಅಭಿನಯಕ್ಕಾಗಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎಂದರೆ ಅಪ್ಪು ಅವರು ಇತ್ತೀಚಿಗಷ್ಟೇ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದರು. ಅವರು ಒಂದು ಸಿನಿಮಾ ಗೆ 5 ರಿಂದ 8 ಕೋಟಿ ರೂಗಳನ್ನು ಪಡೆಯುತ್ತಿದ್ದರು. ಅಪ್ಪು ಅವರ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಇರುವ ಭಾವನೆಯನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.

ಅನುಷ್ಕಾ ವಿರಾಟ್ ಕೋಹ್ಲಿ ಮದುವೆಗೆ ಖರ್ಚಾಗಿದ್ದ ಹಣ ಎಷ್ಟು ಕೋಟಿ ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರ

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಯಾವುದೇ ದೇಶ ಭಾಷೆ ಜನಾಂಗ ಧರ್ಮದವರಾದರೂ ಕೂಡ ಈ ಒಂದು ಅದ್ಭುತ ಸಂಗತಿಯನ್ನು ಒಂದು ಹಬ್ಬದಂತೆ ಆಚರಿಸುತ್ತಾರೆ. ಆಯಾ ಪ್ರದೇಶಕ್ಕೆ ತಕ್ಕ ಸಂಪ್ರದಾಯ ಸಂಸ್ಕೃತಿ ಆಚರಣೆಗಳ ಪ್ರಕಾರ ಅವುಗಳನ್ನು ನೆರವೇರಿಸುತ್ತಾರೆ. ಈ ರೀತಿ ಎಲ್ಲ ಶಾಸ್ತ್ರ ಸಂಪ್ರದಾಯ ಹಾಗೂ ಗುರು ಹಿರಿಯರ ಒಪ್ಪಿಗೆಯೊಂದಿಗೆ ಆಶೀರ್ವಾದದೊಂದಿಗೆ ನಡೆಯುವ ಮದುವೆ ಗಳಿಗೆ ಬಾಳಿಕೆ ಹೆಚ್ಚು ಎನ್ನುವುದು ನಮ್ಮವರ ನಂಬಿಕೆ. ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಈ ಮದುವೆ ಎನ್ನುವದಕ್ಕೆ ಉಳಿದ ಎಲ್ಲಾ ಸಂಸ್ಕೃತಿಗಿಂತಲೂ ಹೆಚ್ಚಿನ ಬೆಲೆ ಇದೆ. ಗಂಡು ಹೆಣ್ಣು ಜಾತಕ ಹೊಂದಿಸುವ ದಿನದಿಂದ ಹಿಡಿದು ಅವರನ್ನು ಮದುವೆ ಮಾಡಿ ಗಂಡನ ಮನೆಗೆ ಕಳಿಸುವ ತನಕ ಪ್ರತಿಯೊಂದು ದಿನ ಕ್ಷಣವನ್ನು ಕೂಡ ಬಹಳ ಸಂಭ್ರಮದಿಂದ ಆಚರಿಸುತ್ತಾರೆ ನಮ್ಮವರು. ಹಾಗಾಗಿ ಭಾರತೀಯ ಸಂಸ್ಕೃತಿಯಲ್ಲಿಯೇ ಮದುವೆಯಾಗಲು ಎಲ್ಲರೂ ಬಯಸುತ್ತಾರೆ.

ನಮ್ಮ ದೇಶದಲ್ಲಿ ಪ್ರತಿಯೊಬ್ಬ ಹೆಣ್ಣೆತ್ತ ತಂದೆಯು ಕೂಡ ಹೆಣ್ಣು ಮಗಳ ಹುಟ್ಟಿದ ದಿನದಿಂದಲೇ ಮದುವೆ ಬಗ್ಗೆ ಕನಸು ಕಟ್ಟಿಕೊಳ್ಳುತ್ತಾನೆ ನನ್ನ ಮಗಳಿಗೆ ಇಂತಹ ವರನನ್ನು ತರಬೇಕು, ಅಂತಹ ಮನೆಗೆ ಮದುವೆ ಮಾಡಿಕೊಡಬೇಕು, ಇಷ್ಟು ದೊಡ್ಡ ಛತ್ರದಲ್ಲಿ ಮದುವೆ ಮಾಡಬೇಕು, ಅಷ್ಟು ಲಕ್ಷ ಖರ್ಚು ಮಾಡಿ ಇಷ್ಟು ಜನರನ್ನು ಕರೆಯಬೇಕು ಎಂದು ಅವರ ಮನಸ್ಸಿನಲ್ಲಿ ಅಂದಿನಿಂದಲೇ ಸಾವಿರಾರು ಆಲೋಚನೆಗಳು ಹಾಗೂ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಹಾಗೂ ಜೀವನದ ಗಳಿಕೆಯ ಪ್ರತಿಯೊಂದು ರೂಪಾಯಲ್ಲೂ ಕೂಡ ಅದಕ್ಕಾಗಿ ಪಾಲು ಮಾಡಿ ಎತ್ತಿ ಇಡುತ್ತಾನೆ. ಎಂತಹ ಬಡ ಹಾಗೂ ಮಾಧ್ಯಮ ಕುಟುಂಬದ ಜನರಾದರೂ ಕೂಡ ಮಕ್ಕಳ ಮದುವೆಯನ್ನು ಈ ರೀತಿಯಾಗಿ ಎಲ್ಲರೂ ಮೆಚ್ಚುವಂತೆ ಮಾಡಬೇಕು ಎಂದು ಆಸೆ ಪಡುತ್ತಾರೆ. ಆದರೆ ಶ್ರೀಮಂತರ ಹಾಗೂ ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಕೊಂಚ ವಿಭಿನ್ನ ಎನ್ನಬಹುದು.

ನಮ್ಮಲ್ಲಿ ಶ್ರೀಮಂತರುಗಳು ಸಂಸ್ಕೃತಿ ಸಂಪ್ರದಾಯದ ಜೊತೆಗೆ ಇನ್ನಿತರ ಹೊಸ ಹೊಸ ವಿಶೇಷತೆಗಳನ್ನು ಸೇರಿಸಿ ತಮ್ಮ ಮದುವೆಗಳನ್ನು ಹೊಸ ರೀತಿಯ ಇವೆಂಟ್ ಗಳನ್ನಾಗಿ ಮಾಡಿ ಎಲ್ಲರೂ ಮೂಗಿನ ಮೇಲೆ ಬೆರಳು ಇಡುವಷ್ಟು ಆಶ್ಚರ್ಯ ಪಡುವಂತೆ ಅದ್ದೂರಿಯಾಗಿ ನೆರವೇರೆಸಿಕೊಳ್ಳಲು ಆಸೆಪಡುತ್ತಾರೆ. ಇನ್ನು ಸೆಲೆಬ್ರಿಟಿಗಳ ವಿಚಾರಕ್ಕೆ ಬರುವುದಾದರೆ ಸೆಲೆಬ್ರಿಟಿಗಳು ಹೆಚ್ಚಾಗಿ ತಮ್ಮ ಮದುವೆಗಳನ್ನು ಸೀಕ್ರೆಟ್ ಆಗಿ ಇಟ್ಟುಕೊಂಡು ಮದುವೆಯಾದ ಬೆಳಕ ಪ್ರತಿಕಾಗೋಷ್ಠಿಯಲ್ಲಿ ಘೋಷಿಸಿಕೊಂಡು ಅಭಿಮಾನಿಗಳಿಗೆ ಆಶ್ಚರ್ಯ ನೀಡುತ್ತಾರೆ. ಇದಕ್ಕೆ ಹಲವಾರು ಕಾರಣಗಳಿವೆ ಕೆಲವೊಮ್ಮೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ತಮ್ಮ ಮದುವೆಗೆ ಅಭಿಮಾನಿಗಳು ಜಾಸ್ತಿ ಸಂಖ್ಯೆಯಲ್ಲಿ ಬಂದು ಸೇರಿದರೆ ಇದರಿಂದ ಸಮಾರಂಭ ಹಾಗೂ ಸಾರ್ವಜನಿಕರಿಗೂ ಸಹ ತೊಂದರೆ ಆಗಬಹುದು ಎಂದು ಮನದಲ್ಲಿಟ್ಟುಕೊಂಡು ಈ ರೀತಿ ಸೀಕ್ರೆಟ್ ಆಗಿ ಮದುವೆ ಆಗಲು ಇಚ್ಛೆ ಪಡುತ್ತಾರೆ. ಅಥವಾ ದೇವಸ್ಥಾನಗಳಿಗೆ ಹೋಗಿ ತೀರ ಸರಳವಾಗಿ ಮದುವೆಯಾಗಿ ನಂತರ ಬೇಕಾದವರನ್ನು ಮಾತ್ರ ಕರೆದು ರಿಸಪ್ಶನ್ ಮಾಡಿಕೊಳ್ಳುತ್ತಾರೆ.

ಮತ್ತು ಕೆಲವರು ವಿದೇಶಗಳಿಗೆ ಹೋಗಿ ತಮ್ಮ ಮದುವೆ ಮಾಡಿಕೊಂಡು ಬರುತ್ತಾರೆ ಹಾಗೂ ಅಲ್ಲಿ ಕೆಲವರಿಗಷ್ಟೇ ಆಹ್ವಾನ ಇರುತ್ತದೆ. ಇತ್ತೀಚೆಗೆ ಸ್ಟಾರ್ ನಟ ನಟಿಯರು ಹಾಗೂ ಸ್ಟಾರ್ ಕ್ರಿಕೆಟ್ಗರು ಈ ರೀತಿ ವಿದೇಶಕ್ಕೆ ಹೋಗಿ ಮದುವೆ ಆಗಿ ಬರುತ್ತಿರುವುದು ನಮ್ಮೆಲ್ಲರಿಗೂ ತಿಳಿದಿದೆ. ಈ ರೀತಿ ನಮ್ಮ ಭಾರತ ದೇಶದ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಫೇವರೆಟ್ ನಂಬರ್ ಒನ್ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನ ಸ್ಟಾರ್ ನಟಿ ಅನುಷ್ಕಾ ಅವರು ಕೂಡ ವಿದೇಶಕ್ಕೆ ಹೋಗಿ ತಮ್ಮ ಮದುವೆ ಮಾಡಿಕೊಂಡಿದ್ದು ಎಲ್ಲರಿಗೂ ತಿಳಿದಿದೆ. ಈ ಇಬ್ಬರ ಜೋಡಿಗಳು ಪ್ರೀತಿಯಲ್ಲಿದ್ದಾರೆ ಎಂದು ಮಾಧ್ಯಮಗಳಲ್ಲಿ ಯಾವಾಗಲೂ ಸುದ್ದಿಯಾಗುತ್ತಲೇ ಇತ್ತು. ಆದರೆ ಕೊನೆಯ ದಿನದವರೆಗೂ ಇವರಿಬ್ಬರು ನಾವಿಬ್ಬರು ಸ್ನೇಹಿತರು ಅಷ್ಟೇ ಎಂದೇ ಹೇಳಿಕೊಂಡು ಬಂದಿದ್ದರು.

ಒಮ್ಮೆ ಇದ್ದಕ್ಕಿದ್ದಂತೆ ದೂರದ ಇಟಲಿ ದೇಶಕ್ಕೆ ಹೋಗಿ ಅದ್ದೂರಿಯಾಗಿ ರೆಸಾರ್ಟ್ ಒಂದರಲ್ಲಿ ಖರ್ಚು ಮಾಡಿಕೊಂಡು ಮದುವೆ ಆಗಿ ಬಂದಿದ್ದಾರೆ.11 ಡಿಸೆಂಬರ್, 2017ರಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಇಟಲಿಯ ಬುರ್ಗೋಫಿನಿಚಿಯ ಆಟೋ ಎಂಬಲ್ಲಿ ಅದ್ದೂರಿ ರೆಸಾರ್ಟ್ ಒಂದರಲ್ಲಿ ಇವರಿಬ್ಬರ ವಿವಾಹ ಏರ್ಪಟ್ಟಿದೆ. ಈ ಮದುವೆಗೆ ಆಹ್ವಾನ ಇದ್ದಿದ್ದು ಕೇವಲ 44 ಮಂದಿ ವಿಐಪಿ ಗಳಿಗೆ ಮಾತ್ರ. ಆದರೂ ಕೂಡ ಅನುಷ್ಕಾ ಹಾಗೂ ವಿರಾಟ್ ಜೋಡಿ ಈ ಮದುವೆ ಖರ್ಚು ಮಾಡಿದ ಮೊತ್ತ ಬರೋಬ್ಬರಿ 77 ಕೋಟಿ ರೂಗಳು. ಕೆಲವರು ಇದನ್ನು ದುಂದು ವೆಚ್ಚ ಎನ್ನಬಹುದು ಆದರೆ ಕೆಲವರ ಪ್ರಕಾರ ಮದುವೆ ಎನ್ನುವುದು ಜೀವನದಲ್ಲಿ ಒಂದೇ ಬಾರಿ ಆಗುವುದು ಹಾಗೂ ಇಂತಹ ಅದ್ಭುತ ಸಮಾರಂಭವನ್ನು ಮತ್ತಷ್ಟು ವಿಶೇಷವಾಗಿ ಮಾಡಿಕೊಳ್ಳುವುದು ಅವರವರ ಇಷ್ಟ ಎನ್ನುವುದು ಕೆಲವರ ಅಭಿಪ್ರಾಯ. ಹಾಗಾಗಿ ಇತ್ತೀಚೆಗೆ ಸೆಲೆಬ್ರಿಟಿಗಳು ಒಬ್ಬರ ಮದುವೆಗಿಂತ ಒಬ್ಬರ ಮದುವೆಯನ್ನು ಮತ್ತಷ್ಟು ಅದ್ದೂರಿ ಮಾಡಿಕೊಳ್ಳುವ ಮೂಲಕ ಸದ್ದಿಯಾಗುತ್ತಿದ್ದಾರೆ.

ಅನುಷ್ಕಾ ಹಾಗು ವಿರಾಟ್ ತಮ್ಮ ಮದುವೆಯಲ್ಲಿ ಧರಿಸಿದ್ದ ಉಡುಪು ಕೂಡ ಬಹಳ ಬೆಲೆಬಾಳುವಂತದ್ದಾಗಿತ್ತು. ಹಾಗೂ ಇವರು ಮದುವೆ ಆಹ್ವಾನ ಪತ್ರಿಕೆಗೆ ಒಂದು ಪ್ರತಿಗೆ ಸುಮಾರು ಒಂದೂವರೆ ಲಕ್ಷದಷ್ಟು ಹಣವನ್ನು ಖರ್ಚು ಮಾಡಿ ಸ್ಪೆಷಲ್ ಆಗಿ ಡಿಸೈನ್ ಮಾಡಿಸಿದ್ದರು. ಜೊತೆಯಲ್ಲಿ ಇಟಲಿಯಲ್ಲಿ ಇವರು ತಂಗಿದ್ದ ರೆಸಾರ್ಟ್ ಬಹಳ ಹಳೆಯ ರೆಸಾರ್ಟ್ ಆಗಿದ್ದು ತುಂಬಾ ರಾಯಲ್ ಹಾಗೂ ಫೇಮಸ್ ರೆಸಾರ್ಟ್ ಆಗಿತ್ತು. ಈ ರೆಸಾರ್ಟ್ ಅಲ್ಲಿ ಒಬ್ಬ ವ್ಯಕ್ತಿಗೆ ಒಂದು ವಾರ ತಂಗಲು ಬರೋಬ್ಬರಿ ಒಂದು ಕೋಟಿ ರೂಗಳನ್ನು ಕೊಡಬೇಕಾಗುತ್ತದೆ. ಇವರು ಬಂದಿದ್ದ ಅತಿಥಿಗಳ ಆತಿತ್ಯಕ್ಕಾಗಿ ಸುಮಾರು 45 ಕೋಟಿ ರೂಗಳನ್ನು ರೆಸಾರ್ಟ್ ಒಂದಕ್ಕೆ ತೆತ್ತಿದ್ದಾರೆ ಎನ್ನಬಹುದು. ಅವರಿಬ್ಬರ ಪ್ರೇಮ ವಿವಾಹ ಒಂದು ದಾಖಲೆ ಬರೆದಿದ್ದು ಈ ಜೋಡಿ ವಿರುಷ್ಕ ಜೋಡಿ ಎಂದೇ ಭಾರತದಲ್ಲಿ ಫೇಮಸ್ ಆಗಿದೆ ಹಾಗೂ ಈ ಮುದ್ದಾದ ಜೋಡಿ ಈಗ ಹೆಣ್ಣು ಮಗುವನ್ನು ಕೂಡ ಪಡೆದು ಸಂತೋಷವಾಗಿದ್ದಾರೆ. ಈ ದುಂದು ವೆಚ್ಚದ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು.! ವಿರಾಟ್ ಕೋಹ್ಲಿ ಮಾಡಿದ್ದು ಸರಿನಾ ಅಥವಾ ತಪ್ಪಾ.? ಕಾಮೆಂಟ್ ಮುಖಾಂತರ ನಿಮ್ಮ ಅನಿಸಿಕೆ ತಿಳಿಸಿ.

ಅದೊಂದು ಕಾರು ಖರೀದಿಸುವುದಕ್ಕೆ ದರ್ಶನ್ ಅವರು ಇನ್ನು ಕಾಯುತ್ತಿದ್ದರಂತೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರೇ ಹೇಳುವಂತೆ ಜೀವನವನ್ನು ಒಂದು ಚಾಲೆಂಜಿಂಗ್ ಆಗಿ ಸ್ವೀಕರಿಸಿ ಗೆದ್ದು ಬಂದವರು. ಕನ್ನಡದ ಫೇಮಸ್ ಖಳನಾಯಕನ ಪುತ್ರನಾಗಿದ್ದರೂ ಕೂಡ ದರ್ಶನ್ ಅವರ ಈ ಮಟ್ಟಕ್ಕೆ ಬೆಳೆಯಲು ತುಳಿದ ಹಾದಿ ಹೂವಿನದ್ದಾಗಿರಲಿಲ್ಲ. ತಂದೆ ಮರಣದ ಬಳಿಕ ಕುಟುಂಬದ ಜವಾಬ್ದಾರಿ ಹೊತ್ತುಕೊಂಡ ದರ್ಶನ್ ಅವರು ಹೊಟ್ಟೆಪಾಡಿಗಾಗಿ ಹಾಲು ಮಾರುವ ಕೆಲಸವನ್ನು ಕೂಡ ಮಾಡಿದ್ದಾರೆ. ದರ್ಶನ್ ಅವರು ಎಷ್ಟೇ ಬೆಳದಿದ್ದರೂ ಕೂಡ ಹಿಂದಿನ ದಿನಗಳನ್ನು ಇನ್ನು ಮರೆತಿಲ್ಲ ಯಾಕೆಂದರೆ ಅಂದು ಅವರು ಬಿದ್ದಿದ್ದ ಕಷ್ಟಗಳೇ ದರ್ಶನ್ ಅವರು ಇನ್ನೂ ಸಾಧನೆ ಮಾಡಬೇಕು ಎನ್ನುವುದಕ್ಕೆ ಸ್ಪೂರ್ತಿಯಂತೆ. ದರ್ಶನ್ ಅವರ ನೇರ ವ್ಯಕ್ತಿತ್ವ ಹಾಗೂ ಅವರು ಜೀವನದಲ್ಲಿ ಪಟ್ಟಿರುವ ಕಷ್ಟ ಮತ್ತು ಅವರು ಅಭಿಮಾನಿಗಳನ್ನು ಪ್ರೀತಿಸುವ ಪರಿಯಿಂದ ಮತ್ತು ಅವರ ಸಹೃದಯ ಗುಣಗಳಿಂದ ಕರ್ನಾಟಕದ ಅಪಾರ ಅಭಿಮಾನಿಗಳ ಅಭಿಮಾನ ಗಳಿಸಿದ್ದಾರೆ.

ದರ್ಶನ್ ಅವರು ಮೊದಮೊದಲು ಸಿನಿಮಾ ಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ನಂತರ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಾ ಆಮೇಲೆ ಸಹಾಯಕ ನಿರ್ದೇಶನಕ್ಕೆ ಕೂಡ ಪಳಗಿ ನಂತರ ಹೀರೋ ಆಗಿ ಕಾಣಿಸಿಕೊಂಡರು. ಮೆಜೆಸ್ಟಿಕ್ ಎನ್ನುವ ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯ ಮಾಡುವ ಮೂಲಕ ಕನ್ನಡಿಗರ ಮನದಲ್ಲಿ ಚಾಲೆಂಜಿಂಗ್ ಸ್ಟಾರ್ ಆಗಿ ಉಳಿದರು. ಮೆಜೆಸ್ಟಿಕ್ ಸಿನಿಮಾದ ಅದ್ಭುತ ಗೆಲುವಿನ ನಂತರ ದರ್ಶನ್ ಅವರು ನಡೆದದ್ದೇ ಇತಿಹಾಸ ಆಯ್ತು ಎನ್ನಬಹುದು ದರ್ಶನ್ ಅವರು ಮೆಜಸ್ಟಿಕ್ ಸಿನಿಮಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು ಹಾಗೂ ಇವರ ನಟಿಸಿದ ಅಷ್ಟು ಸಿನಿಮಾಗಳನ್ನು ಕೂಡ ಹಿಟ್ ಮಾಡಿದ್ದಾರೆ. ದರ್ಶನ್ ಅವರ ನನ್ನ ಪ್ರೀತಿಯ ರಾಮು ಅನಾಥರು ಲಾಲಿ ಹಾಡು ಲಂಕೇಶ್ ಪತ್ರಿಕೆ ದತ್ತ ದಾಸ ಅಯ್ಯಾ ಸುಂಟರಗಾಳಿ ಕಲಾಸಿಪಾಳ್ಯ ಮಂಡ್ಯ ಇನ್ನು ಮುಂತಾದ ಸಿನಿಮಾಗಳು ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರುತ್ತವೆ.

ದರ್ಶನ್ ಅವರು ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ ಪ್ರಾಣಿಗಳ ಬಗ್ಗೆ ಬಹಳ ಪ್ರೀತಿ ಇಟ್ಟುಕೊಂಡಿದ್ದಾರೆ. ಪ್ರಾಣಿಗಳನ್ನು ಸಾಕುವುದಕ್ಕಾಗಿಯೇ ಮೈಸೂರಿನ ಬಳಿ ಒಂದು ಫಾರಂ ಹೌಸ್ ಕೂಡ ಕಟ್ಟಿಸಿ ಅಲ್ಲಿ ಹಸು ದನ ಕುದುರೆ ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದಾರೆ. ದರ್ಶನ್ ಅವರು ಕೊರೋನ ಲಾಕ್ಡೌನ್ ಸಮಯದಲ್ಲಿ ತಮ್ಮ ಅಭಿಮಾನಿಗಳಲ್ಲೂ ಕೂಡ ಮನವಿ ಮಾಡಿದ್ದರು. ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕುವುದಕ್ಕೆ ಸಹಾಯ ಮಾಡಿ ಎಂದು ಇವರ ಒಂದೇ ಒಂದು ಕರೆಗೆ ಕರ್ನಾಟಕದಾದ್ಯಂತ ಅಭಿಮಾನಿಗಳು ಓಗೊಟ್ಟು ಅನೇಕ ಮೃಗಾಲಯಗಳಲ್ಲಿ ಪ್ರಾಣಿಗಳು ದತ್ತು ತೆಗೆದುಕೊಂಡು ಸಾಕುವ ನಿರ್ಧಾರ ಮಾಡಿದ್ದಾರೆ. ಸಿನಿಮಾ ಹಾಗೂ ಪ್ರಾಣಿಗಳನ್ನು ಬಿಟ್ಟರೆ ದರ್ಶನ್ ಅವರಿಗೆ ಬಹಳ ಇಷ್ಟವಾಗುವುದು ಅವರ ಸ್ನೇಹಿತರು. ದರ್ಶನ್ ಅವರಿಗೆ ಬಹುದೊಡ್ಡ ಸ್ನೇಹಿತರ ಬಳಗವೇ ಇದೆ. ದರ್ಶನ್ ಅವರು ಎಲ್ಲೇ ಹೋದರೂ ಕೂಡ ಅವರ ಸುತ್ತ ದೊಡ್ಡ ದಂಡೆ ಇರುತ್ತದೆ.

ದರ್ಶನ್ ಅವರು ಸ್ನೇಹಿತರಿಗೆ ಬಹಳ ಗೌರವ ಕೊಡುತ್ತಾರೆ ಹಾಗೂ ಒಮ್ಮೆ ಸ್ನೇಹಿತ ಎಂದು ಒಪ್ಪಿಕೊಂಡು ಬಿಟ್ಟರೆ ಒಳ್ಳೆಯದು ಹಾಗೂ ಕೆಟ್ಟದು ಎಲ್ಲದರಲ್ಲೂ ಅವರ ಜೊತೆ ನಿಲ್ಲುತ್ತಾರೆ. ದರ್ಶನ್ ಅವರ ಸ್ನೇಹ ಸಿಗುವುದಕ್ಕೆ ನಿಜವಾಗಿಯೂ ಅದೃಷ್ಟ ಮಾಡಬೇಕು ಅದರಲ್ಲೂ ದರ್ಶನ್ ಅವರಿಗೆ ಅವರ ಮೈಸೂರಿನ ಸ್ನೇಹಿತರು ಎಂದರೆ ಬಹಳ ಇಷ್ಟ ಹಾಗೂ ಅವರಿಗೆ ಅವರ ಮೈಸೂರಿನ ಸ್ನೇಹಿತರೇ ಬಹಳ ಆತ್ಮೀಯರು. ಅವರ ಸ್ನೇಹ ಬಳಗ ಎಷ್ಟು ದೊಡ್ಡದು ಎನ್ನುವುದನ್ನು ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಭಾಗವಹಿಸಿದಾಗ ನಾವೆಲ್ಲರೂ ಕಣ್ತುಂಬಿಕೊಂಡಿದ್ದೇವೆ ಹಾಗೂ ಆಶ್ಚರ್ಯವನ್ನು ಕೂಡ ಪಟ್ಟಿದ್ದೇವೆ. ಮತ್ತೊಂದು ದರ್ಶನ್ ಅವರ ಪ್ರಿಯ ವಿಚಾರ ಏನೆಂದರೆ, ದರ್ಶನ್ ಅವರಿಗೆ ಕಾರುಗಳ ಮೇಲೂ ಕೂಡ ಅಷ್ಟೇ ಮೋಹವಿದೆ.

ದರ್ಶನ್ ಅವರು ಕಾರುಪ್ರಿಯರು ಮಾರ್ಕೆಟ್ಗೆ ಯಾವುದೇ ಹೊಸ ರೀತಿಯ ಕಾರ್ ಬಂದರೂ ಕೂಡ ಮೊದಲು ಖರೀದಿಸಬೇಕು ಹಾಗೂ ಅದನ್ನು ಡ್ರೈವ್ ಮಾಡಿಕೊಂಡು ಹೋಗಬೇಕು ಎಂದು ದರ್ಶನ್ ಅವರು ಬಹಳ ಆಸೆ ಪಡುತ್ತಾರೆ. ಈಗಾಗಲೇ ದರ್ಶನ್ ಅವರ ಬಳಿ ಹಲವಾರು ಕಾರುಗಳ ಕಲೆಕ್ಷನ್ ಇದೆ. ಕನ್ನಡ ಸಿನಿಮಾ ರಂಗದಲ್ಲಿ ಉಳಿದ ಎಲ್ಲಾ ನಟರಿಗಿಂತಲೂ ದರ್ಶನ್ ಅವರ ಬಳಿಗೆ ಹೆಚ್ಚಿನ ದುಬಾರಿ ಬೆಲೆಯ ಕಾರುಗಳು ಇವೆ. ದರ್ಶನ್ ಅವರ ಬಳಿ ಲಂಬೋರ್ಗಿನಿ ಕಾರು ಇದೆ. ಒಂದಲ್ಲ ಎರಡೆರಡು ಲಂಬೋರ್ಗಿನಿ ಕಾರುಗಳು ದರ್ಶನ್ ಅವರ ಬಳಿ ಇದೆ ದರ್ಶನ್ ಅವರು ಮೊದಲು ಲಂಬೋರ್ಗಿನಿ ಅವೆಡೆಂಟರಿ ಕಾರನ್ನು ಖರೀದಿ ಮಾಡಿದ್ದರು, ಅದು ಬಿಳಿ ಬಣ್ಣದಾಗಿತ್ತು ಇದೀಗ ದರ್ಶನ್ ಅವರು ಅದೇ ಲಂಬೋರ್ಗಿನಿ ಕಂಪನಿಯ ಲಂಬೋರ್ಗಿನಿ ಉರುಸ್ ಕಾರು ಕೂಡ ಖರೀದಿಸಿದ್ದಾರೆ.

ಈಗ ಖರೀದಿಸಿರುವ ಲಂಬೋರ್ಗಿನಿ ಉರುಸ್ ಕಾರು ಹಳದಿ ಬಣ್ಣದಲ್ಲಿದ್ದು ಇದರ ಬೆಲೆ 3 ಕೋಟಿ. ಇದಕ್ಕೂ ಮುಂಚೆ ಇದ್ದ ಲಂಬೋರ್ಗಿನಿ ಬಿಳಿ ಬಣ್ಣದ ಕಾರಿಗೆ ಐದು ಕೋಟಿ ಕೊಟ್ಟು ಖರೀದಿ ಮಾಡಿದ್ದರು. ದರ್ಶನ್ ಅವರು ಆಯುಧ ಪೂಜೆಯಲ್ಲಿ ಪೂಜೆ ಮಾಡವುದು ನೋಡಲು ಎಲ್ಲರೂ ಕಾಯುತ್ತಿರುತ್ತಾರೆ. ಯಾಕೆಂದರೆ ಅವರ ಬಳಿ ಇರುವ ಎಲ್ಲಾ ಕಾರುಗಳು ಕೂಡ ಸಾಲಾಗಿ ಅವರ ಮನೆ ಮುಂದೆ ಅಂದು ನಿಂತಿರುತ್ತದೆ. ಅದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ ಆ ಸಾಲಿನಲ್ಲಿ ಅವರ ಬಳಿ ಇರುವ ರೇಂಜ್ ರೋವರ್, ಫಾರ್ಚುನರ್, ಬೆನ್ಸ್, ಜಾಗ್ವಾರ್, ಪಾರ್ಚು ಆಡಿ ಕ್ಯೂ, ಮಿನಿ ಕೂಪರ್, ಲಂಬೋರ್ಗಿನಿ ಇನ್ನು ಮುಂತಾದ ಕಾರುಗಳು ಹಾಗೂ ಹಲವು ಫ್ಯಾಷನ್ ಬೈಕುಗಳು ಸಾಲಾಗಿ ನಿಂತಿರುತ್ತವೆ. ದರ್ಶನ್ ಅವರು ಹಿಂದೊಮ್ಮೆ ತುಂಬಾ ಆಸೆ ಬಿದ್ದು ದುಬೈ ಕಂಪನಿಯ ಕಾರೊಂದನ್ನು ಖರೀದಿಸಿದ್ದರಂತೆ.

ಆದರೆ ಅದರ ಬ್ರಾಂಚ್ ಗಳು ಇಂಡಿಯಾದಲ್ಲಿ ಇರದ ಕಾರಣ ಅದರಿಂದ ತುಂಬಾ ಸಮಸ್ಯೆ ಅನುಭವಿಸಿ ನಂತರ ಮಾರಿಬಿಟ್ಟರಂತೆ ಹಾಗಾಗಿ ಇವರು ಮತ್ತೆ ಕಾರು ಖರೀದಿ ಮಾಡಿದರೆ ಭಾರತದಲ್ಲಿ ಬ್ರಾಂಚ್ ಹೊಂದಿರುವ ಕಂಪನಿಗಳ ಕಾರನ್ನು ಮಾತ್ರ ಖರೀದಿಸುತ್ತಾರಂತೆ. ಸದ್ಯಕ್ಕೆ ದರ್ಶನ್ ಅವರಿಗೆ ದೆಹಲಿಯಲ್ಲಿ ಮಾತ್ರ ಬ್ರಾಂಚ್ ಇರುವ ಬೆಂಟ್ಲಿ ಕಾರು ಖರೀದಿಸುವ ಆಸೆಯಾಗಿದೆಯಂತೆ ಹಾಗೂ ಸದ್ಯದಲ್ಲೇ ಅದನ್ನು ಖರೀದಿಸಲಿದ್ದಾರಂತೆ. ಯಾವುದೇ ಕಾರನ್ನು ಕೊಂಡರೂ ಕೂಡ ಮೊದಲು ಅವರು ಪೂಜೆ ಮಾಡಿಸುವುದು ತಾಯಿ ಚಾಮುಂಡೇಶ್ವರಿಯ ಕ್ಷೇತ್ರದಲ್ಲಿ. ಆ ತಾಯಿ ದರ್ಶನ್ ಅವರಿಗೆ ಆಶೀರ್ವಾದ ಮಾಡಲಿ ಅವರು ಸಿನಿಮಾ ರಂಗದಲ್ಲಿ ಮತ್ತಷ್ಟು ಬೆಳೆಯಲಿ ಹಾಗೂ ಇನ್ನಷ್ಟು ಇದೇ ರೀತಿ ಫ್ಯಾಷನ್ ಮುಂದುವರಿಸಿಕೊಂಡು ಹೋಗುವಂತೆ ಮಾಡಲಿ ಎಂದು ನಾವು ಕೇಳಿಕೊಳ್ಳೋಣ.

ಬಹಳ ದಿನಗಳ ನಂತರ ಅಶ್ವಿನಿ ಅವರ ಮುಖದ ಮೇಲೆ ಮೂಡಿದ ನಗು ಇದಕ್ಕೆ ಕಾರಣವೇನು ಗೊತ್ತಾ.?

ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಮ್ಮ ಹೆಮ್ಮೆಯ ನಟ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ. ರಾಜ್ ಕುಟುಂಬದ ಘನತೆಗೆ ತಕ್ಕ ಕಿರಿಯ ಸೊಸೆ. ಪ್ರೀತಿಸಿ ಮದುವೆಯಾದ ಈ ಜೋಡಿಯು ಕಳೆದ 21 ವರ್ಷಗಳಿಂದ ಯಾವುದೇ ಸಣ್ಣ ವಿವಾದವು ಕೂಡ ಇಲ್ಲದೆ ಕನ್ನಡ ಚಲನಚಿತ್ರರಂಗದ ಎಲ್ಲಾ ಜೋಡಿಗಳಿಗೂ ಸ್ಫೂರ್ತಿ ಆಗುವಂತಹ ಆದರ್ಶ ಜೀವನ ನಡೆಸಿದರು. ಮೊದಮೊದಲು ಪುನೀತ್ ರಾಜಕುಮಾರ್ ಅವರ ಜೊತೆ ಮಗಳ ಮದುವೆ ಮಾಡಲು ಅಶ್ವಿನಿ ಅವರ ಕುಟುಂಬದವರು ಒಪ್ಪದಿದ್ದರೂ ಸಹ ನಂತರ ಡಾಕ್ಟರ್ ರಾಜಕುಮಾರ್ ಅವರ ಮಧ್ಯಸ್ಥಿಕೆಯಿಂದ ಇಬ್ಬರ ವಿವಾಹವನ್ನು ಸಂತೋಷದಿಂದ ನೆರವೇರಿಸಿದರು. ಡಿಸೆಂಬರ್ 1, 1999 ರಲ್ಲಿ ಅಶ್ವಿನಿ ಹಾಗೂ ಅಪ್ಪು ಅವರ ವಿವಾಹ ಅದ್ದೂರಿಯಾಗಿ ನೆರವೇರಿತು. ಅಂದಿನಿಂದ ಅಪ್ಪು ಗೆ ಎಲ್ಲವೂ ಆಗಿದ್ದರೂ ಅಶ್ವಿನಿ ಅವರು.

ಅಪ್ಪು ಹಾಗೂ ಅಶ್ವಿನಿ ಅವರ ನಡುವೆ ಆತ್ಮೀಯ ಬಾಂಧವ್ಯವಿತ್ತು. ಅಶ್ವಿನಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡು ಮಾತನಾಡುವುದೇ ಆಗಲಿ ಅಥವಾ ಮಾಧ್ಯಮಗಳ ಮುಂದೆ ಮಾತನಾಡುವುದೇ ಆಗಲಿ ಅಥವಾ ಕ್ಯಾಮರಾ ಮುಂದೆ ಮಾತನಾಡುವುದಕ್ಕಾಗಲಿ ಎಂದೂ ಇಷ್ಟ ಪಟ್ಟವರಲ್ಲ. ಯಾವಾಗಲೂ ಕೂಡ ತಾವು ಸಾಮಾನ್ಯ ಮಹಿಳೆಯಂತೆ ಇದ್ದ ಅಶ್ವಿನಿ ಅವರನ್ನು ಪುನೀತ್ ರಾಜಕುಮಾರ್ ಅವರು ಬಹಳ ಇಷ್ಟ ಪಡುತ್ತಿದ್ದರು. ಅಪ್ಪು ಅವರಂತೆ ಅಶ್ವಿನಿ ಅವರದು ಕೂಡ ತೀರ ಸರಳ ವ್ಯಕ್ತಿತ್ವ. ದೊಡ್ಮನೆ ಸೊಸೆ ಅಂತ ಆಗಲಿ ಅಥವಾ ಪವರ್ ಸ್ಟಾರ್ ನ ಹೆಂಡತಿಯಂತಾಗಲಿ ಎಂದು ಕೂಡ ಬೀಗಿದವರಲ್ಲ. ಆದರೆ ಅಪ್ಪು ಅವರು ಮಾತ್ರ ತಮಗೆ ಆಹ್ವಾನ ಬರುತ್ತಿದ್ದ ಎಲ್ಲಾ ಕಾರ್ಯಕ್ರಮಗಳು ಮದುವೆ ಸಮಾರಂಭಗಳು ಅಥವಾ ಇನ್ನಿತರ ಯಾವುದೇ ಇವೆಂಟ್ಗಳು ಇದ್ದರು ತಪ್ಪದೇ ಅಶ್ವಿನಿ ಅವರನ್ನು ಕೂಡ ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದರು.

ಅವರು ಸಿನಿಮಾದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಕುಟುಂಬಕ್ಕಾಗಿ ಸಮಯ ಮೀಸಲಿಡುತ್ತಿದ್ದರು ಅಪ್ಪು ಮತ್ತು ಅಶ್ವಿನಿ ದಂಪತಿಗೆ ಎರಡು ಮುದ್ದಾದ ಹೆಣ್ಣು ಮಕ್ಕಳಿದ್ದು ದೊಡ್ಡ ಮಗಳು ಧೃತಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮತ್ತು ಕಿರಿಯ ಮಗಳು ವಂದನ ಅಪ್ಪಅಮ್ಮನ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಅಪ್ಪು ಅವರು ಪ್ರತಿ ದಿನ ಶೂಟಿಂಗ್ ಮುಗಿದ ಬಳಿಕ ಮಡದಿ ಹಾಗೂ ಮಕ್ಕಳ ಮುಖ ನೋಡದೆ ಮಲಗುತ್ತಿರಲಿಲ್ಲವಂತೆ. ಎಷ್ಟೇ ತಡವಾದರೂ ಕೂಡ ಬಂದು ಮಗಳ ಜೊತೆ ಒಂದು ರೌಂಡ್ ವಾಕಿಂಗ್ ಮಾಡಿ ಮಾತನಾಡಿಕೊಂಡು ನಂತರ ಮಲಗುತ್ತಿದ್ದರಂತೆ. ಇದರಲ್ಲೇ ತಿಳಿಯುತ್ತದೆ ಅಪ್ಪು ಅವರು ಕುಟುಂಬದ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದರು ಎಂದು ಆದರೆ ಅಪ್ಪು ಅವರ ಅನುಪಸ್ಥಿತಿ ಇಂದು ಮಡದಿ ಹಾಗೂ ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರಿದೆ. ಒಂದು ರೀತಿಯಲ್ಲಿ ಆ ಕುಟುಂಬದ ನಗುವೆ ಕಣ್ಮರೆಯಾಗಿದೆ ಎನ್ನಬಹುದು.

ಅವರು ನಮ್ಮನ್ನು ಅಗಲಿದ ದಿನದಿಂದ ಇಡೀ ಕರ್ನಾಟಕದಲ್ಲಿ ಒಂದು ರೀತಿಯ ಸೂತಕದ ವಾತಾವರಣ ಇದೆ. ಎಲ್ಲವನ್ನು ಮರೆತು ವಾಸ್ತವವನ್ನು ಒಪ್ಪಿಕೊಂಡು ಎಲ್ಲರೂ ಕೂಡ ಅವರವರ ಚಟುವಟಿಕೆಗಳಲ್ಲಿ ಮತ್ತೆ ತೊಡಗಿಕೊಂಡಿದ್ದರೂ ಕೂಡ ಮನದಾಳದಲ್ಲಿ ಎಲ್ಲೋ ಅಪ್ಪು ಅವರು ಇನ್ನಿಲ್ಲ ಎನ್ನುವ ನೋವು ಆಳವಾಗಿ ಎಲ್ಲರನ್ನು ಕಾಡುತ್ತಿದೆ. ಅಭಿಮಾನಿಗಳಾದ ನಮಗೆ ಈ ವಿಷಯ ಇಷ್ಟೊಂದು ಅರಗಿಸಿಕೊಳ್ಳಲು ಕಷ್ಟ ಇಷ್ಟೊಂದು ದುಃಖ ತರುತ್ತದೆ ಎಂದರೆ ಇನ್ನು ಅಪ್ಪು ಅವರ ಕುಟುಂಬದ ಜನರ ಮನಸ್ಥಿತಿಯನ್ನು ಊಹಿಸಲು ಕೂಡ ಅಸಾಧ್ಯ. ಅಪ್ಪು ಅವರಿಗೆ ಸಂಬಂಧಪಟ್ಟ ಎಲ್ಲ ಕಾರ್ಯಗಳು ಹಾಗೂ ಸಮಾರಂಭಗಳಿಗೂ ಶಿವಣ್ಣ ರಾಘಣ್ಣ ಕುಟುಂಬ ಸಮೇತ ಎಲ್ಲರೂ ಕೂಡ ಭಾಗವಹಿಸುತ್ತಿದ್ದಾರೆ ಆದರೆ ಎಲ್ಲರ ಮುಖದ ಮೇಲು ಕೂಡ ಅಪ್ಪು ಅವರು ಇಲ್ಲ ಎನ್ನುವ ನೋ.ವಿನ ಛಾಯೆ ಎದ್ದು ಕಾಣುತ್ತಿದೆ.

ಇದೀಗ ಅಪ್ಪು ಸರ್ ಇಲ್ಲದೆ ಕರುನಾಡು ಎಂಟು ತಿಂಗಳನ್ನು ನೋ.ವಿನಿಂದ ಕಳೆದಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪ್ರತಿ ತಿಂಗಳು ಕೂಡ ಅಪ್ಪು ಅವರ ಸ.ಮಾ.ಧಿ ಬಳಿ, ಮಕ್ಕಳೊಂದಿಗೆ ಹೋಗಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ ಹಾಗೂ ಶಿವಣ್ಣ ಮತ್ತು ರಾಘಣ್ಣ ಕೂಡ ಅವರ ಜೊತೆ ನಿಲ್ಲುತ್ತಾರೆ ರಾಘಣ್ಣ ಅವರು ಯಾವಾಗ ತಮ್ಮನ ನೆನಪಾಗುತ್ತದೆ ಆಗೆಲ್ಲಾ ಅಲ್ಲಿ ಸಮಯ ಕಳೆದು ಬರುತ್ತಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ಅನುಪಸ್ಥಿತಿಯಲ್ಲಿ ಅವರೆಲ್ಲ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಪಿ ಆರ್ ಕೆ ಪ್ರೊಡಕ್ಷನ್ ಅಪ್ಪು ಅವರ ಬಹುದೊಡ್ಡ ಕನಸಾಗಿತ್ತು ಈ ಮೂಲಕ ಕನ್ನಡ ಚಲನಚಿತ್ರ ಹಾಗೂ ಕಿರುತರಿಗೆ ಹಲವಾರು ಕಲಾವಿದರು ಗಳನ್ನು ಕೊಡಬೇಕು ಎನ್ನುವುದು ಅಪ್ಪು ಅವರ ಆಸೆಯಾಗಿತ್ತು.

ಈಗ ಅಶ್ವಿನಿ ಅವರು ಅಪ್ಪು ಕಛೇರಿ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದು ಅಪ್ಪು ಅವರು ಇದ್ದಾಗ ಹೇಗೆ ಜನರು ಅಪ್ಪು ಅವರ ಬಳಿ ಸಹಾಯ ಕೇಳಿಕೊಂಡು ಬರುತ್ತಿದ್ದರು ಹಾಗೆಯೇ ಈಗಲೂ ಸಹ ಅಶ್ವಿನಿ ಅವರ ಬಳಿ ಬಂದು ತಮ್ಮ ನೋವುಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಅಪ್ಪು ಅವರ ಹಾದಿಯಲ್ಲಿ ಸಾಗುತ್ತಿರುವ ಅಶ್ವಿನಿ ಅವರು ಕೂಡ ತಮ್ಮಿಂದ ಆದಷ್ಟು ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ ಮತ್ತು ಇತ್ತೀಚೆಗೆ ಅಶ್ವಿನಿ ಅವರು ಮೊದಲ ಬಾರಿ ನಗುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಬಹಳ ದಿನಗಳ ನಂತರ ಅಪ್ಪು ಅವರ ಮಡದಿ ಮುಖದಲ್ಲಿ ಈ ನಗು ಮೂಡಿಬಂದಿದೆ ಅದು ಕೂಡ ನಮ್ಮ ಪವರ್ ರನ್ ಎನ್ನುವ ಕಾರ್ಯಕ್ರಮದ ಮೂಲಕ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಗುನಗುತ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಆದರೆ ಅವರು ಎಲ್ಲರೆದುರು ನಗುತ್ತಿರಬಹುದು ಅಷ್ಟೇ ಮನಸ್ಸಿನ ದುಃ.ಖ ಕಡಿಮೆಯಾದಂತೆ ಕಾಣುತ್ತಿಲ್ಲ. ಅಶ್ವಿನಿ ಅವರ ಈ ಕಾರ್ಯ ಮೆಚ್ಚುವುದಾದರೇ ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.

ಜೋಗಿ ಸಿನಿಮಾದಲ್ಲಿ ಮಿಂಚಿದ್ದ ಜೆನಿಫರ್ ಕೊತ್ವಾಲ್ ಬದುಕು ಈಗ ಹೇಗಾಗಿದೆ ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ ಈ ನಟಿ ಕಥೆ ಕೇಳಿದ್ರೆ.

ಜೋಗಿ ಸಿನಿಮಾ ಓಂ ಸಿನಿಮಾದ ನಂತರ ರೌಡಿಸಂ ಬಗ್ಗೆ ಜನರಿಗೆ ಮತ್ತಷ್ಟು ಹತ್ತಿರವಾದ ಸಿನಿಮಾ. ಶಿವಣ್ಣನಿಗೆ ಈ ರೀತಿಯ ಪಾತ್ರಗಳು ಸೂಟ್ ಆಗುತ್ತವೋ ಅಥವಾ ಶಿವಣ್ಣನಿಗಾಗಿಯೇ ಈ ರೀತಿಯ ಪಾತ್ರಗಳನ್ನು ಮಾಡುತ್ತಾರೋ ಗೊತ್ತಿಲ್ಲ. ಜೋಗಿ ಸಿನಿಮಾದ ಶಿವಣ್ಣನ ಪಾತ್ರ ನಮ್ಮ ಕಣ್ಣು ಮುಂದೆ ನಮ್ಮ ಮನೆ ಎದುರಿಗಿರುವ ವ್ಯಕ್ತಿಯ ಬದುಕಿನಲ್ಲಿ ಆಗುತ್ತಿರುವಂತಹ ಘಟನೆ ಎನಿಸುವಷ್ಟು ತುಂಬಾ ನೈಜವಾಗಿ ಅಭಿನಯಿಸಿದ್ದಾರೆ ಶಿವರಾಜ್ ಕುಮಾರ್ ಅವರು. ಡೈರೆಕ್ಟರ್ ಪ್ರೇಮ್ ಅವರ ನಿರ್ದೇಶನದ ಈ ಸಿನಿಮಾ ಕನ್ನಡದಲ್ಲಿ ಹೊಸ ದಾಖಲೆಯನ್ನೇ ಬರೆಯಿತು. ಪ್ರೇಮ್ ಅವರು ಹಳ್ಳಿಯಿಂದ ಬಂದ ಪ್ರತಿಭೆ ಆಗಿದ್ದರಿಂದ ತಮ್ಮ ಬಾಲ್ಯದಿಂದ ಏನನ್ನು ಅವರು ನೋಡಿಕೊಂಡು ಬಂದಿದ್ದರು ಅದೇ ಜೋಗಿಯ ಕಾರ್ಯವನ್ನು ಸಿನಿಮಾ ಮೂಲಕ ಜನರಿಗೆ ತೋರಿಸಲು ಪ್ರಯತ್ನ ಪಟ್ಟರು. ಅವರ ನಿರೀಕ್ಷೆಗಿಂತಲೂ ಒಂದು ಪಟ್ಟು ಹೆಚ್ಚಿಗೆ ಅದನ್ನು ಸಮರ್ಪಕವಾಗಿ ನಿರ್ವಹಿಸಿದರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಎನ್ನಬಹುದು.

ಡಾಕ್ಟರ್ ರಾಜಕುಮಾರ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರಾದ್ದರಿಂದ ಮಲೈ ಮಹದೇಶ್ವರನ ಭಕ್ತರು ಎಂದು ಹೇಳಬಹುದು ಹೀಗಾಗಿ ಆ ಭಾಷೆ ಸೊಗಡು ರಾಜಣ್ಣನ ಕುಟುಂಬದಲ್ಲಿ ಎಲ್ಲರಿಗೂ ಇದೆ. ಸಾಮಾನ್ಯವಾಗಿ ಶಿವರಾಜ್ ಕುಮಾರ್, ಡಾಕ್ಟರ್ ರಾಜಕುಮಾರ್ ಅವರು ಮಾತನಾಡುವಾಗ ಪುನೀತ್ ರಾಜಕುಮಾರ್ ಅವರು ಮಾತನಾಡುವಾಗ ಈ ರೀತಿ ಮೂಡಲು ಸೀಮೆಯ ಸೊಗಡು ಅವರ ಭಾಷೆಯಲ್ಲಿ ಬರುವುದನ್ನು ನಾವೆಲ್ಲರೂ ಗಮನಿಸಬಹುದು. ಹಾಗಾಗಿ ಜೋಗಿ ಸಿನಿಮಾದಲ್ಲಿ ಶಿವರಾಜಕುಮಾರ್ ಅವರು ಮಾತನಾಡಿರುವ ಸ್ಟ್ಲಾಂಗ್ ಶಿವರಾಜ್ ಕುಮಾರ್ ಅವರಿಗೆ ತಿಳಿದಿರುವ ಭಾಷಾ ಶೈಲಿಯೇ ಆಗಿದೆ. ಹೀಗಾಗಿ ಸಿನಿಮಾದಲ್ಲಿ ಇದು ಅವರಿಗೆ ಹೆಚ್ಚು ಸಹಾಯ ಆಗಿರಬಹುದು ಹಾಗೂ ಅದೇ ಸ್ಕ್ರೀನ್ ಮೇಲೆ ಹೆಚ್ಚು ವರ್ಕ್ ಕೂಡ ಆಗಿರಬಹುದು. ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ತಾಯಿ ಸೆಂಟಿಮೆಂಟ್.

ಅರುಂಧತಿ ನಾಗ್ ಅವರು ಕನ್ನಡ ಸಿನಿಮಾ ಗೆ ಮತ್ತೆ ಕಂಬ್ಯಾಕ್ ಮಾಡಿದ ಸಿನಿಮಾ ಇದು ಅದರಲ್ಲೂ ಶಿವರಾಜ್ ಕುಮಾರ್ ಅವರ ತಾಯಿಯಾಗಿ ಅರುಂಧತಿ ನಾಗ್ ಅವರು ಅಭಿನಯ ಮಾಡಿರುವುದು ವಿಶೇಷ. ಈ ಸಿನಿಮಾದಲ್ಲಿ ತಾಯಿಗಾಗಿ ಬರೆದಿರುವ ಬೇಡುವೆನು ವರವನ್ನು ಕೊಡೆ ತಾಯಿ ಜನುಮವನು ಈ ಹಾಡು ಈಗಲೂ ಕೂಡ ಎಷ್ಟೊ ತಾಯಿ ಮಕ್ಕಳ ಫೇವರೆಟ್ ಹಾಡು. ಇಂದಿಗೂ ಅದೆಷ್ಟೋ ಜನರ ಫೇವರೆಟ್ ಹಾಡಿನ ಲಿಸ್ಟಿನಲ್ಲಿ ಈ ಹಾಡು ಮೊದಲನೇ ಸಾಲಿನಲ್ಲಿ ಬರುತ್ತದೆ ಹಾಡಿಗೆ ತಕ್ಕ ಹಾಗೆ ಇರುವ ಮದರ್ ಥೀಮ್ ಎಂತವರ ಮನಸ್ಸನ್ನು ಕೂಡ ಕಲಕಿ ಬಿಡುತ್ತದೆ. ತಾಯಿಗೆ ಬಳೆ ಮಾಡಿಸುವ ಆಸೆಗಾಗಿ ಊರನ್ನು ಬಿಟ್ಟು ಬೆಂಗಳೂರಿಗೆ ಕೆಲಸ ಅರಸಿ ಬರುವ ಮಗನು ಅಮಾಯಕವಾಗಿ ರೌಡಿಸಂ ಗೆ ಸಿಕ್ಕಿ ಬದುಕು ದಿಕ್ಕೆಡಿಸಿಕೊಂಡ ಕಥೆ ಇದು.

ಹಾಗೂ ಮುನಿಸಿಕೊಂಡ ಬಂದ ಮಗನನ್ನು ಊರಿಗೆ ಮತ್ತೆ ಕರೆತರಲು ಬೆಂಗಳೂರಿನಂತಹ ಮಹಾನಗರಕ್ಕೆ ಅಡ್ರೆಸ್ ಇಲ್ಲದೆ ಬಂದ ತಾಯಿಯ ಗೋಳಿನ ಕಥೆ ಇದು ಎನ್ನಬಹುದು. ಜೊತೆಗೆ ಅಂಡರ್ವರ್ಲ್ಡ್ ಡಾನ್ ಒಬ್ಬರ ಕಥೆಯನ್ನು ಸೇರಿಸಿ ಸಿನಿಮಾಗೆ ಮಿಶ್ರಣ ಮಾಡಿ ಒಂದೊಳ್ಳೆ ಚಿತ್ರವನ್ನು ಕನ್ನಡಕ್ಕೆ ಕೊಟ್ಟರು ಪ್ರೇಮ್ ಅವರು. ಈ ಸಿನಿಮಾದಲ್ಲಿ ಇತರ ಪಾತ್ರಗಳ ಜೊತೆಗೆ ಸಿನಿಮಾ ಪೂರ್ತಿ ಪ್ರೇಕ್ಷಕರನ್ನು ರಂಜಿಸಿದ್ದು ನಾಯಕಿಯ ಪಾತ್ರ. ಆ ಸಮಯದ ಎಲ್ಲಾ ಶಾಲಾ, ಕಾಲೇಜು ಮಕ್ಕಳ ಫಂಕ್ಷನ್ ಗಳಿಗೆ ಜನಿಫರ್ ಅವರ ಎಲ್ಲೋ ಜೋಗಪ್ಪ ನಿನ್ನ ಅರಮನೆ ಮತ್ತು ಚುಕುಬುಕು ರೈಲು ಹಾಡು ಅವರ ಸೆಲೆಕ್ಷನ್ ಆಗಿರುತ್ತಿತ್ತು. ಜನಿಫರ್ ಕೊತ್ವಾಲ್ ಅವರು ಮೂಲತಃ ಮುಂಬೈನವರು ಮಾಡೆಲ್ ಆಗಿ ಇದ್ದ ಇವರನ್ನು ಕನ್ನಡದ ಜೋಗಿ ಸಿನಿಮಾ ಪಾತ್ರಕ್ಕಾಗಿ ಪ್ರೇಮ್ ಅವರು ಕರೆತಂದಿದ್ದರು.

ಜೋಗಿ ಸಿನಿಮಾದಲ್ಲಿ ಸಿನಿಮಾ ಪೂರ್ತಿ ತುಂಬಾ ಚಟುವಟಿಕೆಯಿಂದ ಕಾಣಿಸಿಕೊಂಡು ಎಲ್ಲರನ್ನೂ ರಂಜಿಸಿದ ಜನಿಫರ್ ಅವರು ಆ ಸಿನಿಮಾದ ನಂತರ ಕೆಲವೇ ಕೆಲವು ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಂಡು ನಂತರ ಕನ್ನಡ ಚಿತ್ರರಂಗದಿಂದ ದೂರವಾಗಿ ಬಿಟ್ಟರು. ಲವಕುಶ ಸ್ವಸ್ತಿಕ್ ಮಸ್ತ್ ಮಜಾ ಮಾಡಿ ಮಸ್ತಿ ಮತ್ತು ಕೊನೆಯದಾಗಿ ಕಿಶೋರ್ ಅವರ ಅಭಿನಯದ ಹುಲಿ ಎನ್ನುವ ಸಿನಿಮಾದಲ್ಲಿ ಜೆನಿಫರ್ ಕೊಪ್ಪಲ್ ಅವರ ನಾಯಕಿಯಾಗಿ ಕಾಣಿಸಿಕೊಂಡರು ಹಾಗೂ ತಮಿಳು ತೆಲುಗು ಭಾಷೆ ಒಂದೆರಡು ಸಿನಿಮಾದಲ್ಲಿ ಮಾತ್ರ ಇವರು ಕಾಣಿಸಿಕೊಂಡರು. ಅನಂತರ ಹೆಚ್ಚಾಗಿ ಇವರಿಗೆ ಅವಕಾಶಗಳು ಅರಸಿ ಬರಲೇ ಇಲ್ಲ ಹಾಗಾಗಿ ತಮ್ಮ ಕುಟುಂಬದವರ ಒತ್ತಾಯದ ಮೇರೆಗೆ ಹೆತ್ತವರ ಜೊತೆ ಸಮಯ ಕಳೆಯಲು ನಟಿ ದೆಹಲಿಗೆ ಹೋಗಿ ಈಗ ಕುಟುಂಬದವರ ಜೊತೆ ಸಂತೋಷದಿಂದ ಅಲ್ಲೇ ಕಾಲ ಕಳೆಯುತ್ತಿದ್ದಾರೆ. ಸಿನಿಮಾದಿಂದ ದೂರವಾದ ಮೇಲೆ ನಟಿ ಗಳಿಕೆಗಾಗಿ ಜಾಹೀರಾತುಗಳಲ್ಲಿ ಭಾಗವಹಿಸುತ್ತಿದ್ದಾರೆ ಹಾಗೂ ತಮ್ಮ ಹಿಂದಿನ ಮಾಡಲ್ ವೃತ್ತಿಯನ್ನು ಕೂಡ ಮುಂದುವರಿಸಿದ್ದಾರೆ.

ಅಲ್ಲದೆ ತಮ್ಮದೇ ಖಾಸಗಿ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಇವರು ಹಲವಾರು ಬ್ಲಾಗ್ ಗಳನ್ನು ಹೊಂದಿದ್ದಾರೆ. ಇವುಗಳ ಮೂಲಕ ಟೂರಿಂಗ್ ಗೆ ಸಂಬಂಧ ಪಟ್ಟ ವಿಶೇಷ ಮಾಹಿತಿಗಳು ಹಾಗೂ ಗೈಡೆನ್ಸ್ ಗಳನ್ನು ನೀಡುತ್ತಿದ್ದಾರೆ ಆ ಮೂಲಕ ಹಣವನ್ನು ಗಳಿಸುತ್ತಿದ್ದಾರೆ. ಇನ್ನು ಸಿಂಗಲ್ ಆಗಿ ಉಳಿದಿರುವ ಈ ನಟಿಯ ಮದುವೆ ಬಗ್ಗೆ ಕುಟುಂಬದವರು ಹೆಚ್ಚು ತಲೆ ಕೆಡಿಸಿಕೊಂಡಿದ್ದಾರಂತೆ. ಒಳ್ಳೆ ಹುಡುಗ ಸಿಕ್ಕರೆ ಶೀಘ್ರವೇ ನಟಿ ಜೆನಿಫರ್ ಅವರ ಮದುವೆ ಕಾರ್ಯಕ್ರಮವನ್ನು ಕೂಡ ಮಾಡಿ ಮುಗಿಸಲಿದ್ದಾರಂತೆ. ಜೋಗಿ ಹಾಗೂ ಇನ್ನು ಹಲವು ಸಿನಿಮಾಗಳಿಂದ ಕನ್ನಡಿಗರಿಗೆ ಮನೋರಂಜನೆ ಕೊಟ್ಟ ಈ ನಟ್ಟಿಗೆ ಕನ್ನಡದಲ್ಲಿ ಇನ್ನಷ್ಟು ವಿಶೇಷ ಪಾತ್ರಗಳಿಗಾಗಿ ಅವಕಾಶಗಳು ದೊರಕಲಿ ಹಾಗೂ ಅವರ ಮುಂದಿನ ಕನಸುಗಳು ಏನೇ ಇದ್ದರೂ ಕೂಡ ಎಲ್ಲವೂ ಕೂಡ ಒಳಿತಾಗಲಿ ಎಂದು ಹಾರೈಸೋಣ. ಜೆನಿಫರ್ ಕಥೆ ಕೇಳಿದ್ರಲ್ಲ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ನಮಗೆ ತಿಳಿಸಿ