Home Blog Page 38

ಮೀನಾ ರಾಶಿಯವರಿಗೆ ಏಪ್ರಿಲ್-2024 ತಿಂಗಳ ಭವಿಷ್ಯ ಹೇಗಿರುತ್ತದೆ ಗೊತ್ತಾ.?

0

 

ಮೀನ ರಾಶಿಯವರಿಗೆ ಈಗಾಗಲೇ ಸಾಡೇಸಾತಿ ಪ್ರಭಾವ ಕಾಡುತ್ತಿದೆ. ಆದರೂ ಇದರ ನಡುವೆ ಹೊಸ ವರ್ಷವು ಹೊಸ ರೀತಿ ಬದಲಾವಣೆ ತರಲಿದಿಯೋ ಇಲ್ಲವೋ ಎನ್ನುವ ನಿರೀಕ್ಷೆ ಖಂಡಿತಾ ಇರುತ್ತದೆ. ಸಾಡೆ ಸಾತಿ ಸಮಯವನ್ನು ಅರಗಿಸಿಕೊಂಡು ಬುದ್ಧಿ ಕಲಿತು ಜೀವನದ ಮಹತ್ವವನ್ನು ಬದುಕಿನ ಪಾವಿತ್ರತೆಯನ್ನು ಅರಿತು ಅನುಭವ ಪಡೆಯಲೇಬೇಕು, ಇದು ಪರಮಾತ್ಮ ನಿಯಮ.

ಆದರೂ ಇಷ್ಟು ಕಷ್ಟದ ಸಮಯದಲ್ಲೂ ಭರವಸೆ ಮಾಡುವಂತಹ ಒಂದಷ್ಟು ಶುಭ ವಿಚಾರಗಳು ನಡೆದರೆ ನಮ್ಮನ್ನು ಇನ್ನಷ್ಟು ದಿನಗಳು ಮುಂದೆ ನಡೆಯುವ ಹಾಗೆ ಮಾಡುತ್ತದೆ. ಅಂತಹ ಯಾವುದಾದರೂ ಶುಭ ಸಮಾಚಾರ ಕ್ರೋಧಿ ಸಂವತ್ಸರ ಆರಂಭವಾಗುತ್ತಿರುವ ಈ ಏಪ್ರಿಲ್ ತಿಂಗಳಿನಲ್ಲಿ ಇದೆಯೇ ಎಂದು ಮೀನ ರಾಶಿಯವರು ನಿರೀಕ್ಷೆ ಮಾಡುತ್ತಿದ್ದರೆ ಇದರ ಕುರಿತ ಮಾಹಿತಿ ಹೀಗಿದೆ ನೋಡಿ.

ಹೌದು ಏಪ್ರಿಲ್ ತಿಂಗಳಲ್ಲಿ ನಿಮಗೆ ಇಂತಹ ಶುಭ ಸಮಾಚಾರಗಳು ಇದೆ. ಆದರೆ ಅದಕ್ಕೂ ಮುನ್ನ ನೀವು ಬಹಳ ಕ’ಷ್ಟದ ದಿನಗಳನ್ನು ಕೂಡ ಆರಂಭದಲ್ಲಿಯೇ ಕಳೆಯಬೇಕು. ಯಾಕೆಂದರೆ ಶನಿ ಜೊತೆಗೆ ರವಿ ಹಾಗೂ ಕುಜ ಪಕ್ಕದಲ್ಲಿ ಇರುವುದರಿಂದ ಇವುಗಳ ಸಂಯೋಗವು ಅಷ್ಟೊಂದು ಶುಭ ತರುವುದಿಲ್ಲ.

ಪರಿಣಾಮವಾಗಿ ಕುಟುಂಬದ ವಿಚಾರವಾಗಿ ನೀವು ಒಂದಷ್ಟು ಭಿನ್ನಾಭಿಪ್ರಾಯಗಳನ್ನು, ನೋ’ವುಗಳನ್ನು ತಿನ್ನಲೇಬೇಕಾಗುತ್ತದೆ. ಆ ಸಮಯದಲ್ಲಿ ಶುಕ್ರನ ಸಹಕಾರದಿಂದ ನಿಮಗೆ ಹಣಕಾಸಿನ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬರುತ್ತದೆ. ಆದರೆ ನೀವು ಎಚ್ಚರಿಕೆಯಿಂದ ಇರಬೇಕು.

ಆದಷ್ಟು ಜಾಗ್ರತೆಯಿಂದ ಹಣ ವಿನಿಯೋಗ ಮಾಡುವುದು ಅಥವಾ ಹೂಡಿಕೆ ಮಾಡುವುದು ಅಥವಾ ಬುದ್ಧಿವಂತಿಕೆಯಿಂದ ಕಳೆದುಕೊಂಡಿದ್ದ ಹಣವನ್ನು ಪಡೆದುಕೊಳ್ಳುವ ಮಾರ್ಗ ಹುಡುಕಿದರೆ ನಿಮ್ಮ ನಿರೀಕ್ಷಿತ ಫಲ ಸಿಗುತ್ತದೆ. ತೃತೀಯ ಭಾವ ಎಂದು ಹೇಳುವ ಸಹೋದರ ಸ್ಥಾನವು ನಿಮ್ಮ ಈ ತಿಂಗಳ ಪರಿಸ್ಥಿತಿಗೆ ವರದಾನವಾಗಿದೆ ಯಾಕೆಂದರೆ ನೀವು ನಿಮ್ಮ ಒಡಹುಟ್ಟಿದವರ ಸಹಕಾರದಿಂದ ಅನೇಕ ಕಷ್ಟಗಳಿಂದ ಹೊರ ಬರುತ್ತೀರಿ.

ಈ ಹಂತದಲ್ಲಿ ಅವರಿಂದ ಹಣಬಲ ಹಾಗೂ ಹಿತನುಡಿಗಳು ಕೂಡ ಸಿಗುತ್ತವೆ. ಅವರು ಜೊತೆಗಿದ್ದಾರೆ ಎನ್ನುವ ಧೈರ್ಯವು ನಿಮ್ಮನ್ನು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ ಮತ್ತು ಈ ತಿಂಗಳ ಅಂತ್ಯದಲ್ಲಿ ಗುರುವಿನ ಜೊತೆಗೆ ಬುಧನು ಕೂಡ ಸೇರುತ್ತಿರುವುದರಿಂದ ಇವರಿಬ್ಬರ ಯೋಗವು ಇನ್ನು ಉತ್ತಮ ಫಲಗಳನ್ನು ನೀಡುತ್ತಿದೆ.

ಆ ಪರಿಣಾಮವಾಗಿ ನೀವೇನಾದರೂ ಒಳ್ಳೆಯ ಕೆಲಸಗಳಿಗೆ ಕೈ ಹಾಕಿದರೆ ಅಥವಾ ಯಾವುದೇ ಹೊಸ ಪ್ರಯತ್ನ ಮಾಡಿದರು ಅದು ನಡೆಯುತ್ತದೆ, ಕೈಗೂಡುತ್ತದೆ. ಆದರೆ ಇದನ್ನು ಇಷ್ಟೇ ಯಶಸ್ಸಿನಲ್ಲಿ ನಡೆಸಿಕೊಂಡು ಹೋಗಲು ನಿಮ್ಮ ಶ್ರದ್ದೆ ಆಸಕ್ತಿ ನೋಡಿ ಪರಮಾತ್ಮನು ಆಶೀರ್ವದಿಸಬೇಕಾಗುತ್ತದೆ.

ವಿದ್ಯಾರ್ಥಿಗಳಿಗೂ ಅತ್ಯಂತ ಶುಭ ಫಲಗಳು ಇವೆ. ಈ ತಿಂಗಳ ಅಂತ್ಯದಲ್ಲಿ ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತಾರೆ. ಆರೋಗ್ಯದ ವಿಚಾರದಲ್ಲಿ ಕೂಡ ಅಷ್ಟೇನೂ ತೊಂದರೆ ಇರುವುದಿಲ್ಲ ಆದರೆ ಮೀನ ರಾಶಿಯವರಿಗೆ ಈ ತಿಂಗಳು ಪೂರ್ತಿ ಟೆನ್ಶನ್ ತಪ್ಪೋದಿಲ್ಲ.

ಒಟ್ಟಾರೆಯಾಗಿ ಒಂದಲ್ಲ ಒಂದು ಕಾರಣದ ಜಂಜಾಟದಲ್ಲಿಯೇ ಈ ತಿಂಗಳನ್ನು ಕಳೆಯುತ್ತೀರಿ. ಈಗ ಶುಭಗ್ರಹಗಳ ಪರಿಣಾಮ ಉತ್ತಮಗೊಳ್ಳಲು ಹಾಗೂ ಪಾಪಗ್ರಹಗಳ ಪ್ರಭಾವ ಕಡಿಮೆ ಆಗಲು ಪ್ರತಿ ಶನಿವಾರದಂದು ಶನೇಶ್ವರ ಹಾಗೂ ಆಂಜನೇಯನ ದರ್ಶನ ಮಾಡಿ ಶನಿ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಪಠಿಸಿ ನವಗ್ರಹಗಳನ್ನು ಆರಾಧನೆ ಮಾಡಿ ಎಲ್ಲರಿಗೂ ಶುಭವಾಗಲಿ.

https://youtu.be/lXfTxKp0zhs?si=ZAkXHeq3zOjFYSpv

ಬೆಳಗಿನ ಜಾವ 3:00 ರಿಂದ 5:00 ಗಂಟೆ ಒಳಗೆ ನೀವೇನಾದರೂ ಈ ಕನಸು ಕಂಡರೆ ಶೀಘ್ರವೇ ಶ್ರೀಮಂತರಾಗುತ್ತೀರಾ ಎನ್ನುವ ಸೂಚನೆ ಸಿಕ್ಕಿದಂತೆ.!

0

 

ಬೆಳಗಿನ ಜಾವ ಬೀಳುವ ಕನಸು ನಿಜ ಆಗುತ್ತದೆ ಎಂದು ಎಲ್ಲರೂ ಮಾತನಾಡುವುದನ್ನು ನಾವು ಕೇಳಿರುತ್ತೇವೆ ಹಾಗೂ ಸ್ವಪ್ನ ಶಾಸ್ತ್ರ ಹೇಳುವ ಪ್ರಕಾರ ಯಾವುದೇ ಕನಸು ಬಿದ್ದರೂ ಕೂಡ ಅದು ನಮ್ಮ ಭವಿಷ್ಯದ ಬಗ್ಗೆ ಸೂಚನೆ ನೀಡಲು ಬಂದಿರುತ್ತದೆ. ಇದನ್ನು ಸ್ವಪ್ನ ಶಕುನ ಎಂದು ಕೂಡ ಹೇಳುತ್ತಾರೆ.

ಕೆಲವೊಮ್ಮೆ ನಮಗೆ ಬೀಳುವ ಕನಸುಗಳು ಎದುರಾಗುವ ಕ’ಷ್ಟಗಳು, ಕೆ’ಟ್ಟ ಸುದ್ದಿ ಕೇಳುವುದರ ಸುಳಿವನ್ನು ಕೊಟ್ಟಿರುತ್ತದೆ. ಇದರ ಅನುಭವ ಅನೇಕರಿಗೆ ಆಗಿರುವುದನ್ನು ಮಾತನಾಡುವಾಗಲೂ ಕೇಳಿರುತ್ತೇವೆ. ಇದು ಮಾತ್ರವಲ್ಲದೆ ನಮಗೆ ಶ್ರೀಮಂತರಾಗುವ ನಮ್ಮ ಜೀವನದಲ್ಲಿ ಬಹಳ ದೊಡ್ಡ ಅದೃಷ್ಟ ಬರುವ ಸೂಚನೆಗಳು ಕೂಡ ಕನಸಿನಲ್ಲಿ ಸಿಕ್ಕಿರುತ್ತವೆ ಹಾಗೂ ಈ ಕನಸುಗಳು ಬೆಳಗಿನ ಜಾವದಲ್ಲಿ ಬೀಳುತ್ತವೆ ಎಂದು ಹೇಳಲಾಗುತ್ತದೆ.

ವೈದಿಕ ಶಾಸ್ತ್ರದ ಪ್ರಕಾರ ರಾಹು ಕನಸುಗಳ ಒಡೆಯ, ಈತ ಚಂದ್ರನ ಜೊತೆ ಸಂಪರ್ಕಕ್ಕೆ ಬಂದಾಗ ಹೆಚ್ಚು ಕನಸುಗಳು ಬೀಳುತ್ತವೆ. ವಿಜ್ಞಾನ ಹೇಳುವ ಪ್ರಕಾರವಾಗಿ ಸಬ್ ಕಾನ್ಶಿಯಸ್ ಮೆಮೊರಿ ನಲ್ಲಿ ರೆಕಾರ್ಡ್ ಆಗಿರುವ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಕನಸುಗಳು ಬಿಡುತ್ತವೆ ಎನ್ನುವ ವಾದವು ಇದೆ.

ಕನಸು ಬಹಳ ವಿಚಿತ್ರ ಮನಸ್ಸಿನಲ್ಲಿರುವ ಭಾಷೆಗೆ ಕನಸಾಗಿ ಬರುತ್ತದೆ ಎನ್ನುವುದು ಇದೆ. ಕೆಲವರಿಗೆ ಹಿಂದಿನ ದಿನ ತಾವು ಆಡಿದ ಮಾತು, ನೋಡಿದ ಚಿತ್ರ ಯೋಚಿಸಿದ ವಿಚಾರಗಳು ಕನಸಿನಲ್ಲಿ ಬಂದರೆ ಕೆಲವರಿಗೆ ಬಹಳ ದಿನಗಳಿಂದ ಒಂದೇ ಕನಸು ಪದೇ ಪದೇ ಬೀಳುತ್ತಿರುತ್ತದೆ. ಆ ಪ್ರಕಾರವಾಗಿ ಯಾವ ಕನಸು ಬಿದ್ದರೆ ಏನು ಫಲ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.

* ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಕನಸಿನಲ್ಲಿ ದೇವರನ್ನು ನೋಡುವುದು ಬಹಳ ಶುಭದ ಸಂಕೇತವಾಗಿದೆ ನೀವು ಬಹಳ ಕಷ್ಟದಲ್ಲಿದ್ದಾಗ ಅಥವಾ ಹೇಳಿಕೊಳ್ಳಲಾಗದ ಧರ್ಮ ಸಂಕಟ ಅನುಭವಿಸುತ್ತಿದ್ದಾಗ ಈ ರೀತಿ ಭಗವಂತ ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ನಿಮ್ಮ ಪ್ರಾರ್ಥನೆ ಅವರಿಗೆ ಸಲ್ಲಿಕೆಯಾಗಿದೆ, ನಿಮ್ಮ ಸಮಸ್ಯೆ ಶೀಘ್ರವೇ ಬಗೆಹರಿಯುತ್ತದೆ ಎಂದು ಸೂಚನೆ ಕೊಡುತ್ತಿದ್ದಾರೆ ಎಂದರ್ಥ.

* ನಿಮ್ಮ ಕನಸಿನಲ್ಲಿ ನೀವೇನಾದರೂ ಹಾವನ್ನು ಕಂಡರೆ ಅದು ಹೆಡೆ ಬಿಚ್ಚಿದ ರೀತಿ ಅಥವಾ ಬಿಲದ ಬಳಿ ಹಾವು ಇರುವ ರೀತಿ ಕಂಡರೆ ಯಾವುದೇ ರೀತಿ ಭ’ಯ ಬೀಳುವ ಅಗತ್ಯ ಇಲ್ಲ. ಅನೇಕರು ಇದನ್ನು ತಪ್ಪು ತಿಳಿದುಕೊಂಡಿದ್ದಾರೆ ಈ ಸಂಕೇತವು ಕೂಡ ಶುಭ ಸಂಕೇತವೇ ಆಗಿದ್ದು ನಿಮ್ಮ ಕ’ಷ್ಟಗಳಿಂದ ಹೊರಬಂದು ಹೊಸ ಜೀವನ ಆರಂಭಿಸುವ ಅದೃಷ್ಟ ಹೊಂದಿದ್ದಾರೆ ಎನ್ನುವ ಸೂಚನೆ ಕೊಡುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು.

* ಮುಂಜಾನೆ ಕನಸಿನಲ್ಲಿ ಶವ ಕಂಡರೆ ಒಂದು ವೇಳೆ ಬದುಕಿರುವ ವ್ಯಕ್ತಿಯೇ ಸ’ತ್ತಿರುವ ರೀತಿ ಕಂಡರೆ ಆಗಲೂ ಆತಂಕ ಬೇಡ ಆ ವ್ಯಕ್ತಿಯ ಆಯುಷ್ಯ ಹೆಚ್ಚಾಗುತ್ತದೆ ಮತ್ತು ಅವರ ಅನಾರೋಗ್ಯ ಸಮಸ್ಯೆ ಪರಿಹಾರ ಆಗುತ್ತದೆ ಎನ್ನುವುದರ ಸೂಚನೆ ಆಗಿರುತ್ತದೆ.

* ಮುಂಜಾನೆ ಕನಸಿನಲ್ಲಿ ಕಳಶ, ಮಂಗಳ ದ್ರವ್ಯ, ಮೃಷ್ಟಾನ್ನ ಭೋಜನ, ಸಿಹಿ ಪದಾರ್ಥಗಳು, ಫಲ ತುಂಬಿದ ವೃಕ್ಷಗಳು ಕಾಮಧೇನು ಮುಂತಾದ ವಸ್ತುಗಳನ ಕಂಡರೆ ನಿಮ್ಮ ಅದೃಷ್ಟ ಕುಲಾಯಿಸುತ್ತಿದೆ ನಿಮಗೆ ಶೀಘ್ರವೇ ರಾಜಯೋಗ ಬರುತ್ತದೆ ಎಂದು ಅರ್ಥ.

* ಕನಸಿನಲ್ಲಿ ಗತಿಸಿ ಹೋದ ನಿಮ್ಮ ಕುಟುಂಬದ ಹಿರಿಯರನ್ನು ಅಥವಾ ದೂರದ ಊರುಗಳಲ್ಲಿ ಇರುವ ಪೋಷಕರನ್ನು ಕಂಡರೆ ಅವರ ಆಶೀರ್ವಾದದಿಂದ ನಿಮ್ಮ ಸಮಸ್ಯೆಯೊಂದು ಬಗೆಹರಿಯದೆ ನಿಮ್ಮ ಕೋರಿಕೆ ನೆರವೇರಲಿದೆ ಎಂದು ಅರ್ಥ.

ಈ ಮಂತ್ರವನ್ನು ಜಪ ಮಾಡಿ ಸಾಕು, ಮಕ್ಕಳಾಗದೇ ಇದ್ದವರಿಗೆ ಮಕ್ಕಳಾಗುವ ಯೋಗ ಬರುತ್ತದೆ…

 

ಮಕ್ಕಳು ಇಲ್ಲ ಎನ್ನುವ ಕುರುಕು ಮನುಷ್ಯನನ್ನು ಬಹಳ ಕಾಡುತ್ತದೆ ಅದರಲ್ಲೂ ಹೆಣ್ಣು ಮಕ್ಕಳಂತೂ ಈ ಕಾರಣದಿಂದಾಗಿ ತಮ್ಮ ತಪ್ಪು ಇದೆಯೋ ಇಲ್ಲವೋ ಆದರೆ ಬಹಳ ಕಷ್ಟ ಅನುಭವಿಸುತ್ತಾರೆ ಬಂಧು ಬಾಂಧವರಿಂದ ನಿಂದನೆ ಮಾತುಗಳು ಕುಟುಂಬದವರಿಂದ ತಾತ್ಸರ ಹಾಗೂ ಮಗು ಆಗುವವರೆಗೂ ಕೂಡ ಒಂದು ರೀತಿಯ ಅಭದ್ರತೆ ಜೊತೆ ಆತಂಕ ಇದೆಲ್ಲವೂ ಕೂಡ ಕಾಡುತ್ತಾ ಇರುತ್ತದೆ.

ಕೆಲವರಿಗೆ ಮಕ್ಕಳ ಫಲ ಚೆನ್ನಾಗಿರುತ್ತದೆ ಮದುವೆ ಆದ ತಕ್ಷಣವೇ ಮಕ್ಕಳಾಗುತ್ತದೆ ಇನ್ನು ಕೆಲವರಿಗೆ ಮಕ್ಕಳ ಯೋಗ ದೂರದ ಫಲವಾಗಿರುತ್ತದೆ ಅವರು ಕೆಲ ಸಮಯ ಕಾಯಲೇಬೇಕು ಇನ್ನು ಕೆಲವರಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಅಥವಾ ಇನ್ನಿತರ ದೋಷಗಳಿಂದ ಹೀಗೆ ಸಮಸ್ಯೆಗಳಾಗಿ ಮಕ್ಕಳಾಗುವುದು ವಿಳಂಬವಾಗುತ್ತದೆ.

ಈ ಸಮಸ್ಯೆ ಪರಿಹಾರಕ್ಕಾಗಿ ವರ್ಷಗಟ್ಟಲೇ ಹತ್ತಾರು ಆಸ್ಪತ್ರೆ ಸುತ್ತಿರುತ್ತಾರೆ. ಮಾಡದ ಪೂಜೆ ಇಲ್ಲ, ಹೋಗದ ದೇವಸ್ಥಾನ ಇಲ್ಲ ಆದರೂ ಎಷ್ಟೇ ಟ್ರೀಟ್ಮೆಂಟ್ ತೆಗೆದುಕೊಂಡರು ಅಥವಾ ಪರಿಹಾರಗಳನ್ನು ಮಾಡಿಸಿದರು ಮಕ್ಕಳ ಫಲ ದೊರಕುತ್ತಿಲ್ಲ ಎಂದು ನೋವಿನಲ್ಲೇ ಇರುವವರು ಭಗವಂತನ ಮೇಲೆ ನಂಬಿಕೆ ಇಡಿ. ಚಿಕಿತ್ಸೆ ಜೊತೆಗೆ ಭಗವಂತನ ಕೃಪಾಕಟಾಕ್ಷ ಇದ್ದರೆ ಕೊರಡು ಕೂಡ ಕೊನರುತ್ತದೆ.

ಈ ಸುದ್ದಿ ಓದಿ:- ಏಪ್ರಿಲ್ 1, 2024 ರಿಂದ ಉಚಿತ ವಿದ್ಯುತ್ ಸೌಲಭ್ಯ ಬಂದ್, ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

ಹಾಗಾಗಿ ನೀವು ಭಗವಂತನನ್ನು ನಿಮ್ಮ ಕ’ಷ್ಟ ಪರಿಹಾರಕ್ಕಾಗಿ ಪ್ರಾರ್ಥಿಸಬೇಕು ಮಕ್ಕಳ ಫಲಕ್ಕಾಗಿ ಪ್ರಾರ್ಥಿಸುವವರಿಗೆ ಒಂದು ವಿಶೇಷವಾದ ಆಚರಣೆ ಇದೆ. ಇದನ್ನು ಮಕ್ಕಳು ಇಲ್ಲದೆ ಇದ್ದವರು, ಆರೋಗ್ಯ ಸಮಸ್ಯೆ ಇಂದ ಮಕ್ಕಳಾಗದೆ ಈಗ ಚಿಕಿತ್ಸೆ ಪಡೆಯುತ್ತಾ ಇರುವವರು ಅಥವಾ ವೈದ್ಯರು ಮಕ್ಕಳಾಗುವುದು ಕಷ್ಟ ಎಂದು ಹೇಳಿದ್ದರು ಕೂಡ ಅಂಥವರು ಬಹಳ ನಂಬಿಕೆ ಇಟ್ಟು ಮಾಡುವುದರಿಂದ ಇಷ್ಟಾರ್ಥ ಸಿದ್ಧಿ ಆಗುತ್ತದೆ.

ಬಹಳ ಸರಳವಾದ ಪೂಜಾ ವಿಧಾನ ಆಗಿದ್ದು, ಶ್ರದ್ಧೆ, ಭಕ್ತಿ ಹಾಗೂ ಅಪಾರವಾದ ನಂಬಿಕೆಯಿಂದ ಇದನ್ನು ಆರಂಭಿಸಿದರೆ ಈ ವ್ರತ ಪೂರ್ತಿಗೊಳ್ಳುವುದರ ಒಳಗೆ ನೀವು ಶುಭ ಸುದ್ದಿ ಕೇಳುವುದು ಖಂಡಿತ. ಈ ರೀತಿ ಮಕ್ಕಳ ಫಲಕ್ಕಾಗಿ ಯಾವುದೇ ಪೂಜೆ ಮಾಡಿದರೂ ಕೂಡ ಅದು ಗುರುವಾರದ ದಿನ ಆರಂಭಿಸಿದರೆ ಒಳ್ಳೆಯದು ಹಾಗಾಗಿ ಇದನ್ನು ಕೂಡ ಗುರುವಾರ ಆರಂಭಿಸಿ.

ಗುರುವಾರ ಸ್ನಾನ ಮಾಡಿ ನಿಮ್ಮ ಮನೆ ದೇವರ ಇಷ್ಟ ದೇವರ ಹೆಸರೇಳಿ ದೀಪ ಹಚ್ಚಿ. ಬಾಲ ಗಣಪನ, ಸಂತಾನ ಗೋಪಾಲನ ಪೂಜೆ ಮಾಡಿ ಮತ್ತು ಗುರು ಸ್ವರೂಪದಲ್ಲಿರುವ ರಾಯರು ಅಥವಾ ಸಾಯಿಬಾಬಾ ಅಥವಾ ದತ್ತಾತ್ರೇಯ ಮಂದಿರಗಳಿಗೆ ಭೇಟಿ ಕೊಡಿ. ಈ ಸಮಯದಲ್ಲೆಲ್ಲಾ ನಿಮ್ಮ ಕಷ್ಟ ಹೇಳಿಕೊಂಡು ಅನುಗ್ರಹಕ್ಕಾಗಿ ಪ್ರಾರ್ಥಿಸಿ.

ಈ ಸುದ್ದಿ ಓದಿ:- ಏಪ್ರಿಲ್ 1, 2024 ರಿಂದ ಉಚಿತ ವಿದ್ಯುತ್ ಸೌಲಭ್ಯ ಬಂದ್, ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

ನಂತರ ಮನೆಗೆ ಬಂದ ಮೇಲೆ ಈಗ ನಾವು ಹೇಳುವ ಈ ಮಂತ್ರವನ್ನು ಪಠಿಸಿ. ನೀವು ಇದನ್ನು ಬರೆಯಬಹುದು ಅಥವಾ ಬಾಯಿಯಿಂದ ಹೇಳಬಹುದು. ನಿಮಗೆ ಹೇಗೆ ಅನುಕೂಲ ಹಾಗೆ ಮಾಡಿ ಆದರೆ ಇದರ ಜೊತೆಗೆ ಎಂದಿನಂತೆ ವೈದ್ಯರಿಂದ ಚಿಕಿತ್ಸೆ ತೆಗೆದುಕೊಳ್ಳುವುದನ್ನು ಮಾತ್ರ ಮರೆಯಬಾರದು.

ಈ ಮಂತ್ರವನ್ನು 10 ಸಾವಿರ ಬಾರಿ ಹೇಳಿ ಮುಗಿಸಿ ಇದಾದ ಕೆಲವೇ ದಿನಗಳಲ್ಲಿ ನಿಮಗೆ ಶುಭ ಸುದ್ದಿ ಕೇಳುವುದು ಖಂಡಿತ. ಒಂದೇ ದಿನ 10,000 ಬಾರಿ ಹೇಳಬೇಕಾದ ಅವಶ್ಯಕತೆ ಇಲ್ಲ ಒಂದು ದಿನ ಶುಭ ಗುರುವಾರದಂದು ಆರಂಭ ಮಾಡಿ ದಿನನಿತ್ಯವೂ ಮುಂದುವರಿಸಿ. ಇದು ಪೂರ್ತಿ ಆದ ಬಳಿಕ ನೂರಕ್ಕೆ ನೂರರಷ್ಟು ನಿಮ್ಮ ಕೋರಿಕೆ ನೆರವೇರುತ್ತದೆ.

ಮಂತ್ರ:-
ಓಂ ಹ್ರೀಂ ಗಂ ಗಣಪತಯಾಂ
ಮತ್ ಕುಲೆ ಪುತ್ರಂ ದೇಹಿ ದೇಹಿ
ಪುತ್ರಂ ದೇಹಿ ದೇಹಿ ಸ್ವಾಹಃ

ಮನೆಯಲ್ಲಿ ಫ್ರಿಡ್ಜ್ ಇದೆಯಾ? ಗೋಡೆ ಪಕ್ಕವೇ ಇಡುತ್ತಿದ್ದೀರಾ? ಇಂದೇ ಬದಲಾಯಿಸಿ ಅದಕ್ಕೂ ಮುನ್ನ ಈ ವಿಷಯಗಳನ್ನು ತಿಳಿದುಕೊಂಡಿರಿ.!

 

ಪ್ರತಿಯೊಂದು ಮನೆಯಲ್ಲೂ ಕೂಡ ಈಗ ಫ್ರಿಡ್ಜ್ ಅವಶ್ಯಕತೆ ಇದೆ ಯಾಕೆಂದರೆ ಸಮಯದ ಕೊರತೆ ಇರುವುದರಿಂದ ಪ್ರತಿನಿತ್ಯವೂ ಹೊರಗೆ ಹೋಗಿ ಹಾಲು, ಮೊಸರು, ತರಕಾರಿ, ಗ್ರೋಸರಿ ತರಲು ಎಲ್ಲರಿಗೂ ಅವಕಾಶ ಆಗದಿರುವೂದರಿಂದ ಅಲ್ಲದೇ ಮನೆ ಹೆಣ್ಣು ಮಕ್ಕಳು ಕೂಡ ಈಗ ದುಡಿಯಲು ಹೋಗಬೇಕಾಗಿರುವುದರಿಂದ ಬೆಳಗ್ಗೆ ಮಕ್ಕಳು ಶಾಲೆಗೆ ಹೋಗುವ ಹೊತ್ತಿಗೆ ಪತಿ ಕಛೇರಿಗೆ ಹೋಗುವ ಹೊತ್ತಿಗೆ ಅಡಿಗೆ ಮಾಡಿ ಮುಗಿಸಬೇಕು

ಮತ್ತು ಅಂದುಕೊಂಡ ತಕ್ಷಣ ಅಡುಗೆ ಆಗಬೇಕು ಎಂದರೆ ಹಿಂದಿನ ದಿನವೇ ರಾತ್ರಿ ಹೊತ್ತು ತರಕಾರಿ, ಸೊಪ್ಪು ಎಲ್ಲವನ್ನು ಹೆಚ್ಚಿಟ್ಟು ಫಾರಿಡ್ಜ್ ನಲ್ಲಿ ಸ್ಟೋರ್ ಮಾಡಿ ಇಟ್ಟು ಮಲಗುವುದು ಬೆಳಗಿನ ವೇಳೆ ಎಷ್ಟೋ ಕೆಲಸಗಳನ್ನು ಕಡಿಮೆ ಮಾಡಿರುತ್ತದೆ. ಹೆಚ್ಚಿಗೆ ತಂದ ವಸ್ತುಗಳನ್ನು ಫ್ರೆಶ್ ಆಗಿ ಇಟ್ಟುಕೊಳ್ಳಲು ಹೀಗೆ ಇನ್ನಷ್ಟು ಕಾರಣಗಳಿಂದಾಗಿ ಫ್ರಿಡ್ಜ್ ಬೇಕೇ ಬೇಕು.

ಹೀಗೆ ಪ್ರತಿ ಮನೆಯಲ್ಲೂ ಒಬ್ಬ ಶಾಶ್ವತ ವ್ಯಕ್ತಿಯಾಗಿ ಸ್ಥಾನ ಪಡೆದಿರುವ ಈ ಫ್ರಿಡ್ಜ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳನ್ನು ಇಂದು ನಾವು ಈ ಲೇಖನದಲ್ಲಿ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಅದೇನೆಂದರೆ ವಾಸ್ತು ಪ್ರಕಾರವಾಗಿ ಫ್ರಿಜ್ ಕೆಲವು ಜಾಗದಲ್ಲಿ ಇರಬಾರದು ಎನ್ನುವ ನಿಯಮಗಳಿದೆ ಅದೇ ರೀತಿಯಾಗಿ ವೈಜ್ಞಾನಿಕ ದೃಷ್ಟಿಕೋನದಿಂದಲೂ ಕೂಡ ಫ್ರಿಡ್ಜ್ ನಲ್ಲಿ ಕೆಲವು ವಸ್ತುಗಳನ್ನು ಇಡಬಾರದು ಮತ್ತು ಫ್ರಿಡ್ಜ್ ಅಕ್ಕಪಕ್ಕ ಕೆಲವು ವಸ್ತುಗಳನ್ನು ಇಡಬಾರದು.

ಈ ಸುದ್ದಿ ಓದಿ:- ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 6 ವಸ್ತುಗಳು ಖಾಲಿಯಾಗಲು ಬಿಡಬೇಡಿ.!

ಹೀಗೆ ಮನೆಯಲ್ಲಿ ಫ್ರಿಡ್ಜ್ ಇಡುವ ವಿಚಾರವಾಗಿ ಪ್ರತಿಯೊಬ್ಬರ ತಿಳಿದುಕೊಳ್ಳಲೇ ಬೇಕಾದ ಕೆಲ ಸಾಮಾನ್ಯ ವಿಷಯಗಳು ಹೀಗಿವೆ ನೋಡಿ. ಒಂದು ವೇಳೆ ಗೊತ್ತಿಲ್ಲದೆ ನಿಮ್ಮ ಮನೆಯಲ್ಲಿ ಇದುವರೆಗೂ ಈ ಮಿಸ್ಟೇಕ್ ಮಾಡಿದ್ದರೆ ಇನ್ನು ಮುಂದೆ ಆದರೂ ಸರಿಪಡಿಸಿಕೊಳ್ಳಿ.

ಅನೇಕರು ಫ್ರಿಡ್ಜ್ ನ್ನು ಗೋಡೆಗೆ ತಾಗಿಸಿ ಇಡುತ್ತಾರೆ ಇದರಿಂದಲೂ ಕೂಡ ಅನಾನುಕೂಲತೆಗಳು ಇವೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಗೋಡೆಗೆ ತಾಗಿಸಿದಂತೆಯೇ ರೆಫ್ರಿಜರೇಟರ್ ಇದ್ದರೆ ಅದರ ಹಿಂದೆ ಗಾಳಿ ಆಡುವುದಿಲ್ಲ. ರೆಫ್ರಿಜರೇಟರ್ ನ ಹಿಂಭಾಗದಲ್ಲಿರುವ ಸುರುಳಿಯಿಂದ ಹೊರಬರುವ ಶಾಖವು ಹಿಮ್ಮುಖವಾಗುತ್ತದೆ.

ಇದರಿಂದ ಫ್ರಿಡ್ಜ್ ಒಳಗಿನ ಉಷ್ಣತೆಯ ಹಲವು ಬಾರಿ ವ್ಯತ್ಯಾಸವಾಗುತ್ತದೆ, ಫ್ರಿಡ್ಜ್ ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ತಂಪು ನೀಡುತ್ತದೆ. ಫ್ರಿಡ್ಜ್ ಒಳಗೆ ಉಷ್ಣಾಂಶ ಹೆಚ್ಚಾದರೆ ಕಂಪ್ರೆಸರ್ ಮೇಲಿನ ಒತ್ತಡವು ಕೂಡ ಹೆಚ್ಚಾಗುತ್ತದೆ. ಇದು ಇಲ್ಲಸಲ್ಲದ ಅಪಾಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಈ ಸುದ್ದಿ ಓದಿ:- ಗೃಹ ಜ್ಯೋತಿ ಫಲಾನುಭವಿಗಳ ಇಲ್ಲಿ ನೋಡಿ, ಇನ್ನು ಮುಂದೆ ಉಚಿತ ಕರೆಂಟ್ ಎಲ್ಲರಿಗೂ ಇಲ್ಲ, ಪೂರ್ತಿ ಬಿಲ್ ಕಟ್ಟಲೇಬೇಕು.!

ಮತ್ತು ಗೋಡೆಗೆ ತಾಗಿಸಿ ಫ್ರಿಡ್ಜ್ ಇಡುವುದರಿಂದ ಅದರಿಂದ ಹೊರಬರುವ ಶಾಖವು ಗೋಡೆಗೂ ಕೂಡ ಹಾನಿ ಉಂಟು ಮಾಡುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಪೈಂಟ್ ಬಣ್ಣ ಕಪ್ಪಾದ ಅಥವಾ ಕೊಳಕಾದ ರೀತಿ ಕಂಡಿರುವ ಉದಾಹರಣೆಗಳು ಇವೆ.

ಹಾಗೆ ನಾವು ಸ್ಥಳವಕಾಶವನ್ನು ಇಟ್ಟುಕೊಂಡು ಜೋಡಿಸಿಕೊಳ್ಳುವುದರಿಂದ ಕ್ಲೀನ್ ಮಾಡಲು ಕೂಡ ಬಹಳ ಸುಲಭ ಆಗುತ್ತದೆ, ಇಲ್ಲವಾದಲ್ಲಿ ಅದರ ಕಡೆ ಗಮನಹರಿಸದೆ ಸರಿಯಾಗಿ ಮೇಂಟೆನ್ ಮಾಡದ ಕಾರಣ ಫ್ರಿಡ್ಜ್ ಬೇಗ ಹಾಳಾಗಲೂಬಹುದು. ಹಾಗಾದರೆ ಗೋಡೆ ಮತ್ತು ಫ್ರಿಡ್ಜ್ ಮಧ್ಯೆ ಗ್ಯಾಪ್ ಎಷ್ಟಿರಬೇಕು? ಎನ್ನುವ ಪ್ರಶ್ನೆ ಮೂಡದೇ ಇರದು.

ಟೆಕ್ನಾಲಜಿ ಪ್ರಕಾರವಾಗಿ ಗೋಡೆ ಮತ್ತು ಫ್ರಿಡ್ಜ್ ನಡುವೆ ಕನಿಷ್ಠ 6 ಇಂಚು ಗ್ಯಾಪ್ ಇರಬೇಕು ಇದರಿಂದ ಕಾಯಿಲ್ ತಂಪಾಗಿರಿಸಲು ಬೇಕಾದಷ್ಟು ಗಾಳಿ ಸಿಗುತ್ತದೆ ಇದಕ್ಕಿಂತಲೂ ಹೆಚ್ಚಿಗೆ ಗ್ಯಾಪ್ ಇಟ್ಟುಕೊಳ್ಳುವುದು ಕೂಡ ಉತ್ತಮವೇ ಅದು ಮನೆಯ ಸ್ಥಳಾವಕಾಶದ ಅನುಕೂಲತೆಗೆ ಬಿಟ್ಟಿದ್ದು.

ಮಹಿಳೆಯರಿಗೆ ಕೆಲವು ಕಿವಿ ಮಾತುಗಳು. ಇವುಗಳನ್ನು ಪಾಲಿಸಿದರೆ ನಿಮಗೆ ಬರುವ ಎಷ್ಟೋ ಕಷ್ಟಗಳಿಂದ ಪಾರಾಗಬಹುದು.!

ಹೆಣ್ಣು ಮಕ್ಕಳನ್ನು ಮನೆಯ ಮಹಾಲಕ್ಷ್ಮಿ ಎಂದು ಕರೆಯುತ್ತಾರೆ, ಹಾಗಾಗಿ ಹೆಣ್ಣು ಮಕ್ಕಳನ್ನು ಬಹಳ ಪೂಜನ್ಯೀಯ ಸ್ಥಾನದಲ್ಲಿ ಇಟ್ಟು ನೋಡುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು, ಭೂಮಿಯನ್ನು, ನದಿಗಳನ್ನು ಹೆಣ್ಣು ಮಕ್ಕಳಿಗೆ ಹೋಲಿಸಲಾಗಿದೆ ಮನೆಗೆ ಅದೃಷ್ಟ ತರುವ ಅಥವಾ ಮನೆಯ ಕಷ್ಟಕ್ಕೆ ಕಾರಣರಾಗುವವರು ಇದೆ ಹೆಣ್ಣು.

ಯಾವ ಹೆಣ್ಣು ಮನೆಯಲ್ಲಿ ಶಾಂತರೀತಿಯಲ್ಲಿ ಇದ್ದು ಪದ್ಧತಿ ಪ್ರಕಾರ ಸಂಪ್ರಧಾಯ ಬದ್ಧವಾಗಿ ಧರ್ಮದಿಂದ ಸಾಗುತ್ತಾರೋ ಆ ಮನೆಯಲ್ಲಿ ಲಕ್ಷ್ಮೀನಾರಾಯಣ ಸಮೇತರಾಗಿ ಎಲ್ಲ ದೇವತೆಗಳು ನೆಲೆಸುತ್ತಾರೆ, ಆಶೀರ್ವದಿಸುತ್ತಾರೆ ಮತ್ತು ಆಕೆಯ ಪತಿ ಮತ್ತು ಮಕ್ಕಳು ಏಳಿಗೆ ಆಗುವುದರಲ್ಲಿ ಅನುಮಾನವಿಲ್ಲ.

ಅಂತಹ ಕುಟುಂಬದಲ್ಲಿ ಸಂತೋಷಕ್ಕೆ ಪಾರವು ಇರುವುದಿಲ್ಲ. ಪ್ರತಿಯೊಬ್ಬರೂ ಕೂಡ ಇಂತಹ ವಾತಾವರಣದಲ್ಲಿ ಇರಲು ಬಯಸುತ್ತಾರೆ ಹಾಗಾಗಿ ಮನೆ ಹೆಣ್ಣು ಮಕ್ಕಳು ಯಾವ ರೀತಿ ಇರಬೇಕು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಹೆಣ್ಣುಮಕ್ಕಳು ಅದರಲ್ಲೂ ಮದುವೆಯಾಗಿರುವ ಗೃಹಿಣಿಯರು ಈ ನಿಯಮಗಳನ್ನು ಪಾಲಿಸಲೇಬೇಕು.

ಈ ಸುದ್ದಿ ಓದಿ:- ಗೃಹ ಜ್ಯೋತಿ ಫಲಾನುಭವಿಗಳ ಇಲ್ಲಿ ನೋಡಿ, ಇನ್ನು ಮುಂದೆ ಉಚಿತ ಕರೆಂಟ್ ಎಲ್ಲರಿಗೂ ಇಲ್ಲ, ಪೂರ್ತಿ ಬಿಲ್ ಕಟ್ಟಲೇಬೇಕು.!

* ಯಾವಾಗಲು ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು, ತಪ್ಪದೇ ಮನೆ ಮುಂದೆ ಹಾಗೂ ತುಳಸಿ ಕಟ್ಟೆ ಮುಂದೆ ರಂಗೋಲಿ ಹಾಕಬೇಕು.
* ಸ್ನಾನ ಮಾಡಿ ದೇವರ ಕೋಣೆಯಲ್ಲಿ ದೀಪ ಹಚ್ಚಬೇಕು, ಅರಿಶಿನ ಕುಂಕುಮ ಹಚ್ಚಿ ಹೂವು ಇಟ್ಟು ಪ್ರತಿನಿತ್ಯವೂ ಪೂಜೆ ಮಾಡಬೇಕು.

ಈ ಸುದ್ದಿ ಓದಿ:-ನಿಮ್ಮ ಪಾಲಿನ ಆಸ್ತಿ ನಿಮಗೆ ಸಿಗಬೇಕು ಎಂದರೆ ಈ ರೀತಿ ಮಾಡಿ, ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸುಲಭ ಪರಿಹಾರ.!

* ಸ್ನಾನ ಮಾಡಿದ ನಂತರವಷ್ಟೇ ಅಡುಗೆ ಮನೆಗೆ ಪ್ರವೇಶ ಮಾಡಿ ಗ್ಯಾಸ್ ಗೆ ನಮಸ್ಕರಿಸಿ ಆಮೇಲೆ ಬೆಂಕಿ ಹಚ್ಚಿ ಅಡುಗೆ ಆರಂಭಿಸಬೇಕು. ಅದೇ ರೀತಿ ರಾತ್ರಿ ಹೊತ್ತು ಅಡುಗೆ ಆದ ತಕ್ಷಣ ಗ್ಯಾಸ್ ಸ್ವಚ್ಛಗೊಳಿಸಿ ಪಾತ್ರೆಗಳನ್ನು ಸ್ವಚ್ಛಗೊಳಿಸಿ ನಂತರ ಮಲಗಬೇಕು ಯಾವುದೇ ಕಾರಣಕ್ಕೂ ಎಂಜಲು ಪಾತ್ರೆಗಳನ್ನು ಸಿಂಕ್ ನಲ್ಲಿ ಹಾಗೆ ಇಟ್ಟು ಮಲಗಬಾರದು ಇದರಿಂದ ಲಕ್ಷ್ಮಿ ಕೋ’ಪಕ್ಕೆ ತುತ್ತಾಗುತ್ತೇವೆ.

* ಸೂರ್ಯೋದಯ ಆದ ನಂತರವೂ ಕೂಡ ಮಲಗೇ ಇದ್ದರೆ ಅಂತಹ ಗೃಹಿಣಿಯರು ಕೂಡ ಲಕ್ಷ್ಮಿ ಅವಕೃಪೆಗೆ ಪಾತ್ರರಾಗುತ್ತಾರೆ ಅವರನ್ನು ದಟ್ಟದರಿದ್ರ ಆವರಿಸುತ್ತದೆ.
* ಗೃಹಿಣಿಯರಿಗೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಕೆಟ್ಟ ಭಾಷೆಗಳನ್ನು ಬಳಸಿ ಮಾತನಾಡಬಾರದು, ಹಿರಿಯರಿಗೆ ಗೌರವ ಕೊಟ್ಟೇ ನೋಡಿಕೊಳ್ಳಬೇಕು. ಕಾಯಿಲೆ ಬಿದ್ದರೆ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಹಾಗೆ ಮನೆಗೆ ಯಾರೇ ಅತಿಥಿಗಳು ಬಂದರೂ ಕೂಡ ಅವರನ್ನು ಸತ್ಕರಿಸಿ ಕಳುಹಿಸಬೇಕು.

* ಆಹಾರವನ್ನು ಎಂದಿಗೂ ವ್ಯರ್ಥ ಮಾಡಲೇಬಾರದು ಆಹಾರದ ಬಗ್ಗೆ ಗೌರವ ಇಟ್ಟುಕೊಂಡಿರುವ ಹೆಣ್ಣುಮಕ್ಕಳಿಗೆ ತಾಯಿ ಅನ್ನಪೂರ್ಣೇಶ್ವರಿ ಆಶಿರ್ವಾದ ಕೂಡ ಸಿಗುತ್ತದೆ, ಅಕ್ಕಿಯನ್ನು ಲಕ್ಷ್ಮಿ ಎಂದು ಕರೆಯುತ್ತಾರೆ ಹಾಗಾಗಿ ಮನೆಯಲ್ಲಿ ಅಕ್ಕಿ, ನೀರು ಧಾನ್ಯ ಇವೆಲ್ಲವನ್ನೂ ಕೂಡ ಹಿಡಿತದಲ್ಲಿ ಬಳಸಬೇಕು.

ಈ ಸುದ್ದಿ ಓದಿ:-ಆಂಜನೇಯನ ಬಳಿ ಈ ವಸ್ತು ಇಡಿ, ಎಷ್ಟೇ ಸಾಲ ಇದ್ದರು ಖಂಡಿತ ತೀರುತ್ತೆ.!

* ಅತಿ ಮುಖ್ಯವಾಗಿ ಯಾವಾಗಲೂ ನಗುಮುಖದಿಂದ ಕೂಡಿರಬೇಕು
* ಎಷ್ಟೇ ಬ್ಯುಸಿ ಇದ್ದರೂ ಕೂಡ ಲಕ್ಷಣವಾಗಿ ಮುಖಕ್ಕೆ ಕುಂಕುಮ ಹಚ್ಚಿ ತಲೆ ಬಾಚಿಕೊಂಡು, ಕೈಯಲ್ಲಿ ಬಳೆ, ಮುಡಿಯಲ್ಲಿ ಹೂವು ಇಟ್ಟುಕೊಂಡು ಓಡಾಡಬೇಕು, ಕೆಲಸ ಇದೆ ಎನ್ನುವ ಕಾರಣಕ್ಕೆ ಹೇಗೇಗೋ ಇದ್ದರೆ ಮನೆಗೆ ಶುಭವಲ್ಲ.

* ಪತಿಯನ್ನು ಗೌರವ ಪೂರ್ವಕವಾಗಿ ಕಾಣಬೇಕು.
* ಪತಿ ಒಂದು ವೇಳೆ ಕೆಟ್ಟವರಾಗಿದ್ದರೆ ಅಥವಾ ತಪ್ಪು ದಾರಿ ಹಿಡಿದಿದ್ದರೆ ಒಳ್ಳೆಯ ಮಾತಿನಿಂದ ಅವರನ್ನು ಸರಿದಾರಿಗೆ ತರಬೇಕು
* ಮನೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಧೈರ್ಯ ಮಾಡಬೇಕು. ಅವಶ್ಯಕತೆ ಇದ್ದಾಗ ಸಲಹೆಗಳನ್ನು ಕೊಡಬೇಕು ಎಲ್ಲರಿಗೂ ಒಳಿತನ್ನೇ ಬಯಸಬೇಕು. ಈ ರೀತಿಯ ಗುಣಗಳನ್ನು ಹೊಂದಿರುವ ಮಹಿಳೆಗೆ ತಾಯಿ ಮಹಾಲಕ್ಷ್ಮಿ ಆಶೀರ್ವಾದ ಸದಾ ಇರುತ್ತದೆ ಮತ್ತು ಆಕೆಗೆ ಬದುಕಿನಲ್ಲಿ ಕಡಿಮೆ ಕಷ್ಟಗಳು ಬರುತ್ತವೆ.

https://youtu.be/-VrWYRAkzpE?si=aIkfkVUI_AtvkXXc

ತವರು ಮನೆಯಿಂದ ಈ ವಸ್ತುಗಳನ್ನು ತೆಗೆದುಕೊಂಡು ಬಂದರೆ ಗಂಡನ ಅದೃಷ್ಟ ಕುಲಾಯಿಸುತ್ತೆ.!

 

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಇಂತಹ ವಾತಾವರಣವನ್ನು ಕಾಣಬಹುದು. ಒಡಹುಟ್ಟಿದ ತಂಗಿಯನ್ನು ಅಥವಾ ಮನೆ ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಕೊಟ್ಟ ಮೇಲೆ ಆಕೆಯನ್ನು ಹಬ್ಬ ಹರಿದಿನಗಳಲ್ಲಿ ಅಥವಾ ಹೆರಿಗೆ ಬಾಣಂತನ ಇತ್ಯಾದಿ ವಿಶೇಷ ದಿನಗಳಲ್ಲಿ ಪ್ರೀತಿಯಿಂದ ಕರೆತಂದು ಗೌರವ ಪೂರ್ವಕವಾಗಿ ಕಳುಹಿಸಿ ಕೊಡುವುದು ಇದು ಅಣ್ಣನ ಅಥವಾ ತಂದೆಯ ಅಥವಾ ತಂದೆಯ ಕುಟುಂಬದವರ ಜವಾಬ್ದಾರಿಯೂ ಆಗಿರುತ್ತದೆ.

ಜವಾಬ್ದಾರಿ ಎನ್ನುವುದಕ್ಕಿಂತ ಮನೆ ತುಂಬಾ ಓಡಾಡಿಕೊಂಡಿದ್ದ ನಮ್ಮ ಮನೆಗೆ ಹೆಣ್ಣು ಮಗು ಮದುವೆಯಾಗಿ ಮತ್ತೊಂದು ಮನೆಯ ಜವಾಬ್ದಾರಿ ಹೊತ್ತು ಈಗ ತನ್ನ ಮನೆಗೆ ಅತಿಥಿಯಾಗಿ ಹೋದಳಲ್ಲ ಎನ್ನುವ ನೋವನ್ನು ಆಕೆಯ ಬರುವಿಕೆಯ ಸಂಭ್ರಮ ಸ್ವಲ್ಪ ಮರೆಸುತ್ತದೆ ಆದರೆ ಆಧುನಿಕ ಯುಗದ ಅಬ್ಬರಕ್ಕೆ ಸಿಲುಕಿರುವ ನಾವು ಇಂದು ಇಂತಹ ಬೆಲೆ ಕಟ್ಟಲಾಗದ ಸಂತೋಷ ಕ್ಷಣಗಳನ್ನು ಹಣಕಾಸಿನಲ್ಲಿ ಲೆಕ್ಕ ಹಾಕಿ ಕಳೆದುಕೊಳ್ಳುವಷ್ಟು ಬಡವರಾಗಿ ಹೋಗಿದ್ದೇವೆ.

ಅದೇನೆ ಇರಲಿ, ಈ ರೀತಿ ಮದುವೆ ಆದಾಗ ಅಥವಾ ತವರು ಮನೆಗೆ ಹೋದಾಗ ಖಂಡಿತವಾಗಿಯೂ ತವರು ಮನೆಯಿಂದ ಕೆಲವು ಉಡುಗೊರೆಗಳನ್ನು ಕೊಡುತ್ತಾರೆ. ಕೆಲವು ಹೆಣ್ಣು ಮಕ್ಕಳು ಇದೇ ಬೇಕೆಂದು ಡಿಮ್ಯಾಂಡ್ ಮಾಡಿ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವು ಹೆಣ್ಣು ಮಕ್ಕಳು ಸಾತ್ವಿಕರಾಗಿದ್ದು ತವರು ಮನೆ ಚೆನ್ನಾಗಿರಲಿ ಎಂದು ಹರಸಿ ಹೋಗುತ್ತಾರೆ.

ಈ ಸುದ್ದಿ ಓದಿ:- BPL / ಅಂತ್ಯೋದಯ ರೇಷನ್ ಕಾರ್ಡ್ ಇರುವ ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಸಿಗಲಿದೆ 1 ಲಕ್ಷ ಹಣ.!

ಈ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು ಮತ್ತು ಕೆಲ ವಸ್ತುಗಳನ್ನು ಕೊಂಡು ಹೋದರೆ ಬಹಳ ಅದೃಷ್ಟ ಎಂದು ಕೂಡ ಹಿರಿಯರು ಪದ್ಧತಿಯಲ್ಲಿ ತಿಳಿಸಿದ್ದಾರೆ ಆ ಪ್ರಕಾರವಾಗಿ ಶಾಸ್ತ್ರದಲ್ಲಿ ಯಾವ ವಸ್ತುಗಳನ್ನು ಈ ರೀತಿ ಗಂಡನ ಮನೆಗೆ ತಂದರೆ ಶುಭ ಎನ್ನುವ ವಿಚಾರವನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

* ತವರು ಮನೆಯಿಂದ ಹಸು ಏನಾದರೂ ಕರುವಿನ ಸಮೇತ ನಿಮ್ಮ ಗಂಡನ ಮನೆಗೆ ಉಡುಗೊರೆಯಾಗಿ ಬಂದರೆ ನಿಮ್ಮ ಗಂಡನ ಮನೆಯಲ್ಲಿ ಅದೃಷ್ಟ ಕುಲಾಯಿಸಿದಂತೆ ಸರಿ, ಸಾಮಾನ್ಯವಾಗಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಈ ರೀತಿಯ ಪದ್ಧತಿ ಇದ್ದೇ ಇದೆ. ಈಗ ಇದರ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ಕೂಡ ಗುರುತಿಸಿದ್ದೇವೆ.

* ತವರು ಮನೆಯಲ್ಲಿ ಅನುಕೂಲಕರ ಪರಿಸ್ಥಿತಿ ಇದ್ದು ಗಂಡನ ಮನೆಯಲ್ಲಿ ಬಹಳ ಕಷ್ಟ ಅಥವಾ ಸಮಸ್ಯೆ ಇದ್ದಾಗ ನೀವು ನಿಮ್ಮ ಪರಿಸ್ಥಿತಿ ಹೇಳಿಕೊಳ್ಳದೆ ಇದ್ದಾಗಲೂ ತಂದೆ ಕಡೆಯಿಂದ ಅಥವಾ ಅಣ್ಣನ ಕಡೆಯಿಂದ ಹೀಗೆ ತವರು ಮನೆಯಿಂದ ನಿಮಗೆ ಉಡುಗೊರೆ ರೂಪದಲ್ಲಿ ಹಣ ಏನಾದರೂ ಬಂದರೆ ಆಗಲು ಕೂಡ ನಿಮ್ಮ ಗಂಡನ ಮನೆ ಕಷ್ಟ ತೀರಿದಂತೆ ಸರಿ.

ಈ ಸುದ್ದಿ ಓದಿ:- ಏಪ್ರಿಲ್ 1, 2024 ರಿಂದ ಉಚಿತ ವಿದ್ಯುತ್ ಸೌಲಭ್ಯ ಬಂದ್, ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

ಆ ಹಣವನ್ನು ಉಪಯೋಗಿಸಿಕೊಂಡು ನೀವು ಹೊಸ ಚೈತನ್ಯದಿಂದ ಮತ್ತೆ ಯಾವುದೇ ವ್ಯಾಪಾರ ವ್ಯವಹಾರ ಅಥವಾ ಕೃಷಿ ಮಾಡಲು ಪ್ರಯತ್ನಿಸಿ ಮತ್ತು ಪ್ರಾಮಾಣಿಕವಾಗಿ ಶ್ರದ್ಧೆಯಿಂದ ದುಡಿಯಿರಿ ಅಂದಿನಿಂದ ನಿಮ್ಮ ಅದೃಷ್ಟ ಖುಲಾಯಿಸುತ್ತದೆ.

* ತವರು ಮನೆಯ ಸಂಬಂಧಗಳು ಯಾವಾಗಲೂ ಒಂದೇ ರೀತಿ ಇರುತ್ತದೆ ಎಂದು ಹೇಳಲು ಆಗುವುದಿಲ್ಲ ಅಮ್ಮ ಇದ್ದ ಜಾಗದಲ್ಲಿ ನಾಳೆ ಅತ್ತಿಗೆ ಬರಬಹುದು ಆಗ ತವರು ಮನೆಗೆ ಹೋಗುವ ಮನಸೇ ಅನೇಕರಿಗೆ ಕಳೆದು ಹೋಗಿರುತ್ತದೆ.

ಆದರೆ ಈ ತಪ್ಪು ಮಾಡಬೇಡಿ ಪರಿಸ್ಥಿತಿ ಹೇಗೆ ಇದ್ದರು ಕಾಲ ಎಷ್ಟೇ ಮುಂದುವರೆದಿದ್ದರೂ, ನಿಮಗೆ ತಂದೆ ಮನೆಗಿಂತ ಹೆಚ್ಚಿನ ಸಿರಿ ಇದ್ದರೂ ಹೆಣ್ಣು ಮಕ್ಕಳು ಪತಿ ಹಾಗೂ ಮಕ್ಕಳ ಜೊತೆ ಆಗಾಗ ತವರು ಮನೆಗೆ ಹೋಗುತ್ತಿರಬೇಕು ಮತ್ತು ಬರುವಾಗ ತಪ್ಪದೇ ಅರಿಶಿನ ಕುಂಕುಮ ಬಳೆ ಹೂವು ಇತ್ಯಾದಿ ಮಂಗಳ ದ್ರವ್ಯಗಳನ್ನು ಮತ್ತು ಕುಟುಂಬದ ಹಿರಿಯರ ಆಶೀರ್ವಾದವನ್ನು ಪಡೆದು ಬರಬೇಕು.

ಈ ಸುದ್ದಿ ಓದಿ:- ಮಾರ್ಚ್ 25ರಂದು ಶಕ್ತಿಶಾಲಿ ಹೋಳಿ ಹುಣ್ಣಿಮೆ, ನಿಮ್ಮೆಲ್ಲರ ಕಷ್ಟ, ದಾರಿದ್ರ್ಯ, ಬಡತನ ಕಳೆಯಲು ಈ ದಿನ ಶಿವ, ವಿಷ್ಣು, ಲಕ್ಷ್ಮೀ ಮುಂದೆ ಈ ವಸ್ತು ಇಟ್ಟು ಪ್ರಾರ್ಥಿಸಿ.!

ಹೀಗೆ ಮಾಡುವುದರಿಂದ ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ತೊಂದರೆಗಳು ಬಂದಿದ್ದರು ಅದನ್ನು ಎದುರಿಸಲು ಧೈರ್ಯ ಬರುತ್ತದೆ ಮತ್ತು ಕಲ್ಲಿನಂತಹ ಕಷ್ಟಗಳು ಮಂಜಿನಂತೆ ಕರಗುತ್ತವೆ.

BPL / ಅಂತ್ಯೋದಯ ರೇಷನ್ ಕಾರ್ಡ್ ಇರುವ ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಸಿಗಲಿದೆ 1 ಲಕ್ಷ ಹಣ.!

ಲೋಕಸಭಾ ಚುನಾವಣೆ (Parliment Election) ದಿನಾಂಕ ಘೋಷಣೆಯಾಗಿದ್ದು ಏಪ್ರಿಲ್ 19, 2024ರಿಂದಲೇ ಚುನಾವಣೆ (Election) ಆರಂಭಗೊಂಡಿದೆ. ದೇಶದಲ್ಲಿ 7 ಹಂತಗಳಲ್ಲಿ ಹಾಗೂ ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು ಎಲ್ಲೆಡೆ ಭರ್ಜರಿಯಾದ ಪ್ರಚಾರ ಕಾರ್ಯಕ್ರಮ ಕೂಡ ನಡೆಯುತ್ತಿದೆ.

ಇದರ ಅಂಗವಾಗಿ ಕಾಂಗ್ರೆಸ್ ಪಕ್ಷ (Congress Party) ಈ ವರ್ಷವಾದರೂ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎನ್ನುವ ಉದ್ದೇಶದಿಂದ ಮಹಿಳೆಯರಿಗಾಗಿ ವಿಶೇಷವಾದ ಐದು ಗ್ಯಾರಂಟಿ ಯೋಜನೆಗಳನ್ನು (Nari Nyaya Guaranty Schemes) ಘೋಷಿಸಿ ತಮ್ಮ ಪಕ್ಷವು ಬಹುಮತ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದರೆ ತಕ್ಷಣವೇ ಜಾರಿಗೆ ತರುವುದಾಗಿ ಭರವಸೆ ಕೂಡ ನೀಡಿದೆ.

ಇದಕ್ಕೆ ಮಹಿಳಾ ನ್ಯಾಯ ಖಾತರಿ ಯೋಜನೆ ಎನ್ನುವ ಹೆಸರು ಕೂಡ ಇಟ್ಟಿದ್ದಾರೆ. ಇದರಲ್ಲಿ ಕರ್ನಾಟಕದಲ್ಲಿ (Karnataka State) ಘೋಷಿಸಿರುವ ಗೃಹಲಕ್ಷ್ಮಿ ಯೋಜನೆಯನ್ನೇ (Gruhalakshmi Scheme) ಹೋಲುವ ರೂ.1 ಲಕ್ಷ ಸಹಾಯದ ನೀಡುವ ಮಹಾಲಕ್ಷ್ಮಿ ಯೋಜನೆಯು ದೇಶದ ಗಮನ ಸೆಳೆದಿದ್ದು ಈ ಕುರಿತದ ಮಾಹಿತಿ ಹೀಗಿದೆ ನೋಡಿ.

ಈ ಸುದ್ದಿ ಓದಿ:-  ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 6 ವಸ್ತುಗಳು ಖಾಲಿಯಾಗಲು ಬಿಡಬೇಡಿ.!

ಕರ್ನಾಟಕ ವಿಧಾನಸಭಾ ಚುನಾವಣೆ- 2023ರಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಬಳಸಿದ್ದ ಗ್ಯಾರಂಟಿ ಅಸ್ತ್ರವನ್ನು ಉಪಯೋಗಿಸಿ ಇದೇ ಮಾದರಿಯಲ್ಲೇ ಇಡೀ ದೇಶಕ್ಕೆ ಅನ್ವಯವಾಗುವ ರೀತಿಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರಿಗಾಗಿ ಘೋಷಣೆ ಮಾಡಿದೆ. ಅದರಲ್ಲಿ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯನ್ನು ಹೋಲುವಂತಹ ಮಹಾಲಕ್ಷ್ಮಿ ಯೋಜನೆ (Mahalakshmi) ಜಾರಿಗೆ ತಂದಿರುವುದು ದೇಶದ ಎಲ್ಲರ ಗಮನ ಸೆಳೆದಿದೆ.

ಈ ಮಹಾಲಕ್ಷ್ಮಿ ಯೋಜನೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ವಾರ್ಷಿಕವಾಗಿ ರೂ. 1ಲಕ್ಷ ರೂಪಾಯಿ ನೆರವು ಸಿಗುತ್ತಿದೆ. ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಯೋಜನೆಯಡಿಯಲ್ಲಿ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥೆಯು ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ಸರ್ಕಾರದಿಂದ ರೂ.2000 ಸಹಾಯಧನವನ್ನು ನೇರವಾಗಿ DBT ಮೂಲಕ ತಮ್ಮ ಬ್ಯಾಂಕ್ ಖಾತೆಗೆ ಪಡೆಯುತ್ತಿದ್ದಾರೆ.

ಮಹಿಳೆಯರಿಗೆ ರೂಪಿಸಲಾಗಿರುವ ವಿಶೇಷ ಯೋಜನೆ ಎಂದು ಗೃಹಲಕ್ಷ್ಮಿ ಯೋಜನೆ ಹೆಸರುವಾಸಿಯಾಗಿದೆ. ರಾಜ್ಯದ 1.20 ಸೊನ್ನೆ ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಪಡೆಯುತ್ತಿದ್ದಾರೆ ಮತ್ತು ಆರಂಭದಲ್ಲಿ ಯೋಜನೆ ಕುರಿತ ಎಲ್ಲಾ ಗೊಂದಲಗಳನ್ನು ಪರಿಹರಿಸಿ ಹಣ ಪಡೆಯಲು ಆಗದಿದ್ದವರಿಗೆ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು ಏರ್ಪಡಿಸಿ ಸಮಸ್ಯೆ ಬಗೆ ಹರಿಸಿಕೊಡಲಾಗಿದೆ.

ಈ ಸುದ್ದಿ ಓದಿ:- ಗೃಹ ಜ್ಯೋತಿ ಫಲಾನುಭವಿಗಳ ಇಲ್ಲಿ ನೋಡಿ, ಇನ್ನು ಮುಂದೆ ಉಚಿತ ಕರೆಂಟ್ ಎಲ್ಲರಿಗೂ ಇಲ್ಲ, ಪೂರ್ತಿ ಬಿಲ್ ಕಟ್ಟಲೇಬೇಕು.!

ಈ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ ಯೋಜನೆ ಮತ್ತು ಯುವನಿಧಿ ಯೋಜನೆಗೆ ಕಾರಣ ಎಂದು ಎಲ್ಲಡೆ ಹೇಳಲಾಗುತ್ತಿದೆ. ಈಗ ಈ ಸಾಲಿಗೆ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ಘೋಷಿಸಿರುವ ಉಳಿತ 5 ಗ್ಯಾರಂಟಿ ಯೋಜನೆಗಳು ಸೇರುತ್ತಿದ್ದು ಇದರ ಕುರಿತಾದ ಮಾಹಿತಿ ಹೇಗಿದೆ ನೋಡಿ.

ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi) ಮಹಾರಾಷ್ಟ್ರದ (Maharastra) ಧುಲೆ ಯಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿ ನಾರಿ ನ್ಯಾಯ ಗ್ಯಾರಂಟಿಯಡಿ ಮಹಿಳೆಯರಿಗಾಗಿಯೇ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಅವರು ಘೋಷಿಸಿರುವ ಗ್ಯಾರಂಟಿ ಯೋಜನೆಗಳ ವಿವರ ಹೀಗಿದೆ.

ಈ ಸುದ್ದಿ ಓದಿ:- ಮಾರ್ಚ್ 25ರಂದು ಶಕ್ತಿಶಾಲಿ ಹೋಳಿ ಹುಣ್ಣಿಮೆ, ನಿಮ್ಮೆಲ್ಲರ ಕಷ್ಟ, ದಾರಿದ್ರ್ಯ, ಬಡತನ ಕಳೆಯಲು ಈ ದಿನ ಶಿವ, ವಿಷ್ಣು, ಲಕ್ಷ್ಮೀ ಮುಂದೆ ಈ ವಸ್ತು ಇಟ್ಟು ಪ್ರಾರ್ಥಿಸಿ.!

1. ಮಹಾಲಕ್ಷ್ಮಿ ಯೋಜನೆ (Mahalakshmi Scheme):- ದೇಶಾದ್ಯಂತ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ರೂ. ಹಣಕಾಸಿನ ನೆರವನ್ನು DBT ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಭರವಸೆಯ ಯೋಜನೆಯಾಗಿದೆ.

2. ಆದಿ ಅಭಾಡಿ, ಪೂರ ಏಕ್ (Adi Abhadi Pura Ak):- ಕೇಂದ್ರ ಸರ್ಕಾರದ ಎಲ್ಲಾ ನೇಮಕಾತಿಗಳಲ್ಲೂ ಮಹಿಳೆಯರಿಗೆ 50% ಮೀಸಲಾತಿ ಭರವಸೆ.

3. ಶಕ್ತಿ ಕಾ ಸಮ್ಮಾನ್ (Shakti ka Samman):- ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಮಧ್ಯಾಹ್ನದ ಬಿಸಿಯೂಟ ತಯಾರಿಕಾ ಸಿಬ್ಬಂದಿಯ ಪ್ರತಿ ತಿಂಗಳ ಗೌರವಧನವನ್ನು ದ್ವಿಗುಣ ಮಾಡೋದಾಗಿ ಭರವಸೆಯ ಯೋಜನೆ.

4. ಅಧಿಕಾರ ಮೈತ್ರಿ (Adhikar Maitri):- ದೇಶದ ಪ್ರತಿಯೊಂದು ಪಂಚಾಯತಿ ಮಟ್ಟದಲ್ಲಿ ಕಾನೂನು ಸಹಾಯಕರನ್ನು ನೇಮಕ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ಅಧಿಕಾರಿ ಮೈತ್ರಿಯ ರೂಪದಲ್ಲಿ ಈ ಸಹಾಯಕರು ಕಾರ್ಯ ನಿರ್ವಹಿಸಲಿದ್ದು, ಮಹಿಳೆಯರಿಗೆ ತಮ್ಮ ಹಕ್ಕು ಹಾಗೂ ಅಧಿಕಾರಿಗಳನ್ನು ಅರಿಯಲು ಕಾನೂನು ನೆರವು ನೀಡಲಿದ್ದಾರೆ.

5. ಸಾವಿತ್ರಿಬಾಯಿ ಫುಲೆ ಹಾಸ್ಟೆಲ್ (Savitri Bai Pule Hostel):- ಉದ್ಯೋಗದ ಉದ್ದೇಶದಿಂದಾಗಿ ದೂರದ ಪ್ರದೇಶಗಳಿಗೆ ಬರುವ ಮಹಿಳೆಯರಿಗಾಗಿ ದೇಶದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಕನಿಷ್ಟ ಪಕ್ಷ ಒಂದಾದರು ಮಹಿಳಾ ಹಾಸ್ಟೆಲ್ ನಿರ್ಮಿಸಿ ನಂತರದ ದಿನಗಳಲ್ಲಿ ಈ ಹಾಸ್ಟೆಲ್‌ಗಳ ಸಂಖ್ಯೆಯನ್ನು ದ್ವಿಗುಣ ಮಾಡುವ ಭರವಸೆ.

 

ಕಟಕ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ 2024-25, ನಿಮ್ಮ ಕಷ್ಟಗಳೆಲ್ಲಾ ಇಲ್ಲಿಗೆ ಕಳೆದು ಕನಸು ನನಸಾಗುವ ಸಮಯ ಆದರೆ ಶನಿಪ್ರಭಾವ ಹೇಗಿರುತ್ತದೆ ಗೊತ್ತಾ.?

0

 

ನಮ್ಮ ಹಿಂದೂ ಪಂಚಾಂಗದ ಪ್ರಕಾರವಾಗಿ ಯುಗಾದಿಯು ನಮಗೆ ಹೊಸ ವರ್ಷವಾಗಿದೆ. ಏಪ್ರಿಲ್ 9ರಂದು ಕ್ರೋಧಿ ಸಂವತ್ಸರ ಆರಂಭವಾಗುತ್ತಿದ್ದು ಮುಂದಿನ ಒಂದು ವರ್ಷದವರೆಗೆ ಕಟಕ ರಾಶಿಯವರಿಗೆ ನೂತನ ವರ್ಷ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

ಈಗಾಗಲೇ ಕಟಕ ರಾಶಿಗೆ ಕಳೆದ ಒಂದು ವರ್ಷದಿಂದ ಅಷ್ಟಮ ಶನಿ ಕಾಟ ನಡೆಯುತ್ತಿದೆ. ಒಂದು ಕಡೆ ಗುರು ಚೆನ್ನಾಗಿಲ್ಲ, ಮತ್ತೊಂದೆಡೆ ಶನಿ ಪ್ರಭಾವ. ಒಟ್ಟಾರೆಯಾಗಿ ಈ ಒಂದು ವರ್ಷ ಕಟಕ ರಾಶಿಯವರು ನಾನಾ ರೀತಿಯ ಸಂಕಷ್ಟ ಎದುರಿಸಿದ್ದಾರೆ, ಹೊಂದಾಣಿಕೆಯಲ್ಲಿ ಸಮಯ ಕಳೆದಿದ್ದಾರೆ.

ಈ ವರ್ಷವಾದರೂ ಶುಭಫಲಗಳಿವೆಯೇ ಎಂದು ನಿರೀಕ್ಷಿಸುವವರಿಗೆ ಒಂದು ಸಮಾಧಾನಕರ ಉತ್ತರ ಸಿಗಲಿದೆ, ಲೇಖನವನ್ನು ಕೊನೆಯವರೆಗೂ ಓದಿ ಕಟಕ ರಾಶಿಯವರಿಗೆ ರಾಶಿಯಿಂದ 6ನೇ ಮನೆ ಅಧಿಪತಿ ಮತ್ತು ಭಾಗ್ಯಧಿಪತಿ ಅಂದರೆ 9ನೇ ಮನೆಯ ಅಧಿಪತಿಯು ಗುರು ಆಗಿದ್ದಾರೆ.

ಆದರೆ ಗುರುವೇ ಕೆಟ್ಟಿರುವುದರಿಂದ ಈ ಕೆಟ್ಟ ಸಮಯದಲ್ಲಿ ಕಟಕ ರಾಶಿಯವರು ಅನುಭವಿಸಿರುವ ಕ’ಷ್ಟಗಳು ಅಷ್ಟಿಷ್ಟಲ್ಲ. ಯಾಕೆಂದರೆ ಸಾಲಭಾದೆ ಶತ್ರುಗಳ ಕಾಟ ಹೆಚ್ಚಾಗುವುದು, ಆರೋಗ್ಯ ಹದಗೆಡುವುದು ಕೆಲಸಗಳಲ್ಲಿ ಹಿನ್ನಡೆ ಯಾವುದೇ ಕೆಲಸ ಮಾಡಲು ಎಷ್ಟೇ ಪ್ರಯತ್ನ ಪಡಲು ಅದು ಅರ್ಧಕ್ಕೆ ನಿಲ್ಲುವುದು, ಇದೆಲಾ ಲ ಸಮಸ್ಯೆಗಳಿಗೆ ಗುರುಬಲ ಇಲ್ಲದೆ ಇರುವುದು ಅಥವಾ ಗುರು ಸೂಕ್ತ ಸ್ಥಳದಲ್ಲಿ ಇಲ್ಲದೆ ಇರುವುದೇ ಕಾರಣವಾಗಿದೆ.

ಆದರೆ ಸಮಾಧಾನದಿಂದ ಇರಿ ಯಾಕೆಂದರೆ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ ಸದ್ಯಕ್ಕೆ 10ನೇ ಮನೆಯಲ್ಲಿರುವ ಗುರುವು ಉತ್ತಮ ಫಲಗಳನ್ನು ನೀಡಲು ಅಡೆತಡೆ ಆಗುತ್ತಿದ್ದರು ಯುಗಾದಿಯ ನಂತರ ಸ್ಥಾನ ಬದಲಾವಣೆ ನಿಮ್ಮ ಹಣೆಬರಹವನ್ನು ಕೂಡ ಬದಲಾಯಿಸಲಿದೆ.

ಏಪ್ರಿಲ್ 9 ರಿಂದ ಮುಂದಿನ 21 ದಿನಗಳ ಕಾಲ ಅಂದರೆ ಏಪ್ರಿಲ್ 30, 2024ರ ವರೆಗೆ ಮಾತ್ರ ಹೊಸ ವರ್ಷದಲ್ಲಿ ನಿಮಗೆ ಒಂದಷ್ಟು ಸಮಸ್ಯೆಗಳು ಇರುತ್ತವೆ. ಮೇ 1, 2024 ರಿಂದ ಮುಂದಿನ ವರ್ಷದ ಯುಗಾದಿವರೆಗೂ ಕೂಡ ನೀವು ಯಾವುದೇ ಭ’ಯಪಡುವ ಅಗತ್ಯವೇ ಇಲ್ಲ.

ಯಾಕೆಂದರೆ ಮೇ 1, 2024 ರಂದು ಗುರು ತಮ್ಮ ಸ್ಥಾನ ಬದಲಾವಣೆ ಮಾಡುತ್ತಿದ್ದಾರೆ 11ನೇ ಮನೆಯಲ್ಲಿ ನೆಲೆಸುವ ಗುರು ನಿಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ಬಗೆಹರಿಸಿ ಜೀವನದಲ್ಲಿ ನೆಮ್ಮದಿ ತರುತ್ತಾರೆ. ಗುರು ಬಲದಿಂದಾಗಿ ನಿಮಗೆ ಶನಿಪ್ರಭಾವದ ಕಷ್ಟಗಳನ್ನು ಸುಧಾರಿಸಿಕೊಳ್ಳುವ ಶಕ್ತಿ ಬರುತ್ತದೆ ನೀವು ಮಾಡುವ ಎಲ್ಲಾ ಕೆಲಸಕ್ಕೂ ಗುರುವಿನ ಬಲ ಆಶೀರ್ವಾದ ಕೃಪಾಕಟಾಕ್ಷ ಸಿಗುತ್ತದೆ.

ಹಾಗಾಗಿ ಒಂದು ರೀತಿಯಲ್ಲಿ ಅಷ್ಟಮ ಶನಿ ಕಾಟ ಇದ್ದರೂ ಗುರುಬಲದ ಪ್ರಭಾವದಿಂದಾಗಿ ಕಟಕ ರಾಶಿಯರು ಒಂದಷ್ಟು ಈ ಸಮಯದಲ್ಲಿ ಧೈರ್ಯದಿಂದ ಇರಬಹುದು ಎನ್ನುವ ಭರವಸೆ ಕೊಡಬಹುದು. ನಿಮ್ಮ ವೃತ್ತಿ ಜೀವನದಲ್ಲಿ ಬದಲಾವಣೆ, ಹಣಕಾಸಿನಲ್ಲಿ ಸ್ಥಿರತೆ, ಸಾಲಬಾಧೆಯಿಂದ ಮುಕ್ತಿ ಆರೋಗ್ಯ ಸುಧಾರಣೆ, ವ್ಯಾಪಾರ ವ್ಯವಹಾರ ತಕ್ಕಮಟ್ಟಿಗೆ ಅಭಿವೃದ್ದಿ, ಇದೆಲ್ಲಾ ಫಲವೂ ಕೂಡ ಮುಂದಿನ ಒಂದು ವರ್ಷದವರೆಗೆ ನಿಮಗೆ ಸಿಗಲಿದೆ.

ಇನ್ನು ಹೆಚ್ಚಿನ ಪ್ರಭಾವಕ್ಕಾಗಿ ಗುರುವಿನ ಆರಾಧನೆ ಮಾಡಿ. ಗುರುವಾರದಂದು ಹಳದಿ ವಸ್ತ್ರ ಫಲ ಇವುಗಳನ್ನು ಧಾನ ಮಾಡಿ ಧರ್ಮ ಗ್ರಂಥಗಳ ಪಠಣೆ ಮಾಡಿ ಧರ್ಮ ಮಾರ್ಗದಲ್ಲಿ ನಡೆದು ಗುರುವಿನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ, ಕಟಕ ರಾಶಿಯ ಇನ್ನಷ್ಟು ಫಲಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 6 ವಸ್ತುಗಳು ಖಾಲಿಯಾಗಲು ಬಿಡಬೇಡಿ.!

0

 

ನಮ್ಮ ಶಾಸ್ತ್ರಗಳಲ್ಲಿ, ಪುರಾಣಗಳಲ್ಲಿ ಕೆಲ ವಸ್ತುಗಳ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಈ ಬ್ರಹ್ಮಾಂಡವೇ ಭಗವಂತನ ಸೃಷ್ಟಿಯಾಗಿದ್ದರು, ಸೃಷ್ಟಿಯಲ್ಲಿರುವ ಕೆಲವು ವಸ್ತುಗಳು ಭಗವಂತನನ್ನು ಪ್ರತಿನಿಧಿಸುತ್ತಿರುತ್ತವೆ ಮತ್ತು ದೇವರುಗಳ ಆವಾಸಸ್ಥಾನವಾಗಿರುತ್ತದೆ. ಈ ರೀತಿ ಮಂಗಳ ದ್ರವ್ಯಗಳ ಮೂಲಕ ಮನೆ ಸೇರುವ ದೇವತೆಗಳು ಆ ಮನೆಯ ಅದೃಷ್ಟವನ್ನು ಹೆಚ್ಚಿಸುತ್ತಾರೆ ಎನ್ನುವುದು ನಂಬಿಕೆ.

ತಾಯಿ ಮಹಾಲಕ್ಷ್ಮಿ, ಮಹಾ ಗೌರಿ, ಮಹಾ ಸರಸ್ವತಿ, ಮಹಾವಿಷ್ಣು ಮಹಾದೇವನ ಸ್ವರೂಪ ಎಂದು ಅನೇಕ ವಸ್ತುಗಳ ಬಗ್ಗೆ ಹಿರಿಯರು ಹೇಳಿರುವುದನ್ನು ಕೇಳಿರುತ್ತೇವೆ. ಯಾವುದೇ ಕಾರಣಕ್ಕೂ ಇಂತಹ ಪವಿತ್ರ ವಸ್ತುಗಳು ಮನೆಯಲ್ಲಿ ಖಾಲಿ ಆಗದಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಮನೆಗೆ ದರಿದ್ರ ಬರುವುದರಲ್ಲಿ ಅನುಮಾನವೇ ಇಲ್ಲ. ಯಾವ ವಸ್ತುಗಳು ಮತ್ತು ಏಕೆ? ಎನ್ನುವುದನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.

* ಅಕ್ಕಿ:- ಅನ್ನಂ ಪರಬ್ರಹ್ಮ ಸ್ವರೂಪಂ ಎನ್ನುತ್ತೇವೆ, ಅನ್ನವನ್ನು ತಾಯಿ ಅನ್ನಪೂರ್ಣೇಶ್ವರಿಯ ಪ್ರಸಾದ ಎಂದು ಹೇಳಲಾಗುತ್ತದೆ ಮತ್ತು ಅಕ್ಕಿಯನ್ನು ಚಂದ್ರ ಗ್ರಹದ ಪ್ರಭಾವ ಇರುವ ಧಾನ್ಯ ಎನ್ನುತ್ತೇವೆ. ಚಂದ್ರನ ಸಹೋದರಿಯು ತಾಯಿ ಮಹಾಲಕ್ಷ್ಮಿ ಆಗಿದ್ದಾರೆ.

ಹಾಗಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಅಕ್ಕಿಯು ಖಾಲಿ ಆಗದಂತೆ ನೋಡಿಕೊಳ್ಳಬೇಕು ಮತ್ತು ಪ್ರತಿಬಾರಿ ಅಡುಗೆ ಮಾಡುವಾಗಲೂ ಕೃಷ್ಣ ಅಕ್ಷಯಂ ಎಂದು ಹೇಳಿ ಅಡುಗೆ ಮಾಡಬೇಕು. ಅಕ್ಕಿ ಹಾಗೂ ಇತರೆ ಧಾನ್ಯಗಳನ್ನು ಧನಲಕ್ಷ್ಮಿ ಎಂದು ಕೂಡ ಕರೆಯಲಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಇವುಗಳನ್ನು ಖಾಲಿ ಮಾಡಬಾರದು.

* ಉಪ್ಪು:- ಉಪ್ಪು ತಾಯಿ ಮಹಾಲಕ್ಷ್ಮಿಯ ಸ್ವರೂಪವಾಗಿದೆ. ಯಾಕೆಂದರೆ ಸಮುದ್ರದಲ್ಲಿ ಉಪ್ಪು ತಯಾರಾಗುತ್ತದೆ, ತಾಯಿ ಲಕ್ಷ್ಮಿ ಕೂಡ ಸಮುದ್ರದಿಂದಲೇ ಉದ್ಭವಿಸಿದವರು. ಯಾವುದೇ ಅಡುಗೆ ಆದರೂ ಉಪ್ಪು ಇಲ್ಲದೆ ಪರಿಪೂರ್ಣವಾಗುವುದಿಲ್ಲ. ಪರಿಹಾರ ಶಾಸ್ತ್ರದಲ್ಲಿ ಇದನ್ನು ಲವಣ ಎಂದು ಹೇಳಲಾಗಿದೆ. ಆಯುರ್ವೇದದಲ್ಲಿ, ವಾಸ್ತು ಶಾಸ್ತ್ರದಲ್ಲಿ, ಅಡಿಕೆ ಶಾಸ್ತ್ರದಲ್ಲಿ, ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲದರಲ್ಲೂ ಕೂಡ ಉಪ್ಪಿಗೆ ಬಹಳ ಪ್ರಾಶಸ್ತ್ಯ ಇದೆ. ಇಂತಹ ವಸ್ತುವು ಮನೆಯಲ್ಲಿ ಖಾಲಿ ಆಗುವುದು ಶುಭವಲ್ಲ ಹಾಗಾಗಿ ಎಚ್ಚರ ಇರಲಿ.

* ಅರಿಶಿಣ ಮತ್ತು ಕುಂಕುಮ:- ಅರಿಶಿಣ ಕುಂಕುಮವನ್ನು ಹರಿದ್ರ ಚೂರ್ಣ ಮತ್ತು ಕುಂಕುಮ ಚೂರ್ಣ ಎಂದು ಕರೆಯಲಾಗುತ್ತದೆ. ಯಾವ ಶುಭಕಾರ್ಯವು, ದೇವರ ಪೂಜೆಯು ಅರಿಶಿಣ ಕುಂಕುಮ ಇಲ್ಲದೇ ನಡೆಯುವುದಿಲ್ಲ. ಅರಿಶಿನ ಕುಂಕುಮ ಧರಿಸುವವರ ಜೊತೆಯಲ್ಲಿ ತಾಯಿ ಗೌರಿ, ಶಾರದೆ ಮತ್ತು ಲಕ್ಷ್ಮಿ ಆಶೀರ್ವಾದ ಇದ್ದೇ ಇರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಇವು ಖಾಲಿ ಆಗಬಾರದು. ಒಂದು ವೇಳೆ ಖಾಲಿಯಾದ ಅರಿಶಿನ ಕುಂಕುಮದ ಬಟ್ಟಲನ್ನು ನೋಡಿದರೆ ಅದು ಬಹಳ ಅಪಶಕುನ ಹಾಗಾಗಿ ಎಚ್ಚರ ಇರಲಿ.

4. ನೀರು ತುಂಬಿದ ಪಾತ್ರೆ:- ನಿರು ಜೀವಜಲ. ನೀರಿನಲ್ಲಿ ಗಂಗಾ ಭವಾನಿ ನರ್ಮದೇ ಸರಸ್ವತಿ ಮಹಾಲಕ್ಷ್ಮಿ ಎಲ್ಲರೂ ನೆಲೆಸಿರುತ್ತಾರೆ. ಮನೆಯಲ್ಲಿ ಯಾವಾಗಲೂ ಒಂದು ಕುಡಿಯುವ ಬಿಂದಿಗೆ ಇಟ್ಟಿರುತ್ತೇವೆ. ಇದು ಅಡಿಗೆ ಮನೆಯಲ್ಲಿ ಇಡಬಹುದು ಅಥವಾ ಹಾಲ್ ನಲ್ಲಿ ಇಡಬಹುದು. ಯಾವುದೇ ಕಾರಣಕ್ಕೂ ಇದರಲ್ಲಿ ಪೂರ್ತಿ ನೀರು ಖಾಲಿ ಆಗದಂತೆ ನೋಡಿಕೊಳ್ಳಿ. ಸ್ವಲ್ಪ ಇರುವಾಗಲೇ ಪಾತ್ರೆಯನ್ನು ಶುದ್ಧ ಮಾಡಿ ಮತ್ತೆ ತುಂಬಿ ಇಟ್ಟುಕೊಳ್ಳಿ ಅದು ಖಾಲಿ ಆಗುತ್ತಿದ್ದಂತೆ ಗಮನಿಸಿ ಮತ್ತೆ ತುಂಬಿಸಿ. ಯಾಕೆಂದರೆ ಪೂರ್ತಿ ಖಾಲಿಯಾದ ಇಂತಹ ತಂಬಿಗೆ ನೋಡಿದರೆ ಅದು ಅಪಶಕುನ ಹಾಗಾಗಿ ಅದರಲ್ಲಿ ನೀರು ಖಾಲಿಯಾಗಬಾರದು.

5. ಹಣ:- ಹಣ ಒಡವೆ ಇದೆಲ್ಲವೂ ಕೂಡ ತಾಯಿ ಮಹಾಲಕ್ಷ್ಮಿ ಸ್ವರೂಪ. ಕೆಲವರು ಹಣ ಖರ್ಚು ಮಾಡಬೇಕಾದಾಗ ಅಥವಾ ಮನೆಯಿಂದ ಒಡವೆ ತೆಗೆದುಕೊಂಡು ಅಡ ಇಡಬೇಕಾದಾಗ ಅಥವಾ ಒಳ್ಳೆಯ ಕೆಲಸಕ್ಕೆ ಮನೆಯಿಂದ ಹಣ ತೆಗೆದುಕೊಂಡು ಹೋಗಬೇಕಾದಾಗ ಒಂದು ರೂಪಾಯಿಯೂ ಕೂಡ ಇಡದಂತೆ ಪೂರ್ತಿಯಾಗಿ ತೆಗೆದುಕೊಂಡು ಹೋಗುತ್ತಾರೆ.

ಯಾವುದೇ ಕಾರಣಕ್ಕೂ ಇಂತಹ ತಪ್ಪು ಮಾಡಬೇಡಿ. ನೀವು ಎಷ್ಟು ಹಣ ಇಟ್ಟಿರುತ್ತೀರೋ ಅದರಲ್ಲಿ 10% ಆದರೂ ಮನೆಯಲ್ಲಿಯೇ ಇಟ್ಟು ಉಳಿದ ಹಣವನ್ನು ತೆಗೆದುಕೊಂಡು ಹೋಗಿ. ಪೂರ್ತಿ ಹಣವನ್ನು ಖಾಲಿ ಮಾಡಿ ಖಾಲಿ ಪರ್ಸ್, ಪೆಟ್ಟಿಗೆ, ಬೀರು ಇಡುವುದು ಶುಭವಲ್ಲ. ಅಂತಹ ಸ್ಥಳಗಳಲ್ಲಿ ತಾಯಿ ಮಹಾಲಕ್ಷ್ಮಿ ನೆಲೆಸಲು ಇಷ್ಟಪಡುವುದಿಲ್ಲ.

ಏಪ್ರಿಲ್ 1, 2024 ರಿಂದ ಉಚಿತ ವಿದ್ಯುತ್ ಸೌಲಭ್ಯ ಬಂದ್, ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

 

ಕಾಂಗ್ರೆಸ್ ಪಕ್ಷವು (Congress Party) ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆ – 2024ರ (Karnataka Assembly Election – 2024) ಸಂದರ್ಭದಲ್ಲಿ ತಮ್ಮ ಪಕ್ಷ ಬಹುಮತ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು (Gyaranty Schemes) ನೀಡುವುದಾಗಿ ಭರವಸೆ ನೀಡಿತ್ತು.

ಅಂತೆಯೇ ನುಡಿದಂತೆ ನಡೆದು ತಾನು ನೀಡಿದ ಆಶ್ವಾಸನೆಯಂತೆ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಹಾಗೂ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಇದರಲ್ಲಿ ಗೃಹಜ್ಯೋತಿ ಯೋಜನೆಯು ಮೊದಲನೇ ಗ್ಯಾರಂಟಿಯಾಗಿ ಘೋಷಣೆಯಾಗಿತ್ತು ಕತ್ತಲು ಮುಕ್ತ ಕರ್ನಾಟಕ ಎನ್ನುವ ಧ್ಯೇಯದೊಂದಿಗೆ ಕರ್ನಾಟಕದ ಪ್ರತಿ ಕುಟುಂಬಕ್ಕೂ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವ ಭರವಸೆಯಾಗಿ ಜಾರಿಗೆ ಕೂಡ ಬಂದಿದೆ.

ಕಳೆದ ಜುಲೈ ತಿಂಗಳಿನಿಂದಲೂ (July – 2023) ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಲ್ಲಿದ್ದು ತಮ್ಮ ವಿದ್ಯುತ್ ಖಾತೆ ಸಂಖ್ಯೆ ಹಾಗೂ ಆಧಾರ್ ಕೊಟ್ಟು ನೋಂದಾಯಿಸಿಕೊಂಡಿರುವ ಕುಟುಂಬಗಳು ಇಂದು ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿವೆ ಆದರೆ ಇದರಲ್ಲಿ ಒಂದು ಸಣ್ಣ ಟ್ವಿಸ್ಟ್ ಇದೆ.

ಏನೆಂದರೆ, ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಇದ್ದರೂ ಆ ಕುಟುಂಬಗಳು ಯೋಜನೆ ಜಾರಿ ಆಗುವುದಕ್ಕೂ ಹಿಂದಿನ ಒಂದು ವರ್ಷದಲ್ಲಿ ಎಷ್ಟು ವಿದ್ಯುತ್ ಬಳಕೆ ಮಾಡಿತ್ತು ಅದರ ಸರಾಸರಿಯ ಜೊತೆಗೆ ಕೇವಲ 10% ಪಾತ್ರ ಹೆಚ್ಚು ವಿದ್ಯುತ್ ಉಚಿತವಾಗಿ ಪಡೆಯಲು ಅರ್ಹವಾಗಿವೆ‌.

ಮತ್ತು ಗೃಹ ಜ್ಯೋತಿ ಯೋಜನೆ ಜಾರಿಯಾದ ಮೇಲೆ ಒಂದು ವೇಳೆ ಈ ಸರಾಸರಿ ವಿದ್ಯುತ್ ಬಳಕೆ ಗಿಂತ ಮತ್ತು ಹೆಚ್ಚುವರಿ 10% ಮೀರಿಯೂ ವಿದ್ಯುತ್ ಬಳಕೆ ಮಾಡಿದ್ದಕ್ಕೆ ಉಚಿತ ಸರಾಸರಿ ಹೊರತುಪಡಿಸಿ ಉಳಿದ ಬಳಕೆಗೆ ವಿದ್ಯುತ್ ಬಿಲ್ ಪಡೆಯುತ್ತಿವೆ.

ಇದುವರೆಗೂ ಯೋಜನೆಯಡಿ 200 ಯೂನಿಟ್ ದಾಟಿ ವಿದ್ಯುತ್ ಬಳಕೆ ಮಾಡಿದ್ದರೂ ಕೂಡ ಕುಟುಂಬ ಸರಾಸರಿಯಾಗಿ ಪಡೆಯಲು ಅರ್ಹರಾಗಿದ್ದ ವಿದ್ಯುತ್ ಬಳಕೆ ಮತ್ತು ಅದರ ಮೇಲೆ 10% ಬಿಟ್ಟು ಉಳಿದ ಹೆಚ್ಚುವರಿ ಬಳಕೆ ಮಾಡಿದಷ್ಟು ವಿದ್ಯುತ್ ಗೆ ಮಾತ್ರ ಬಿಲ್ ನೀಡಲಾಗುತ್ತಿತ್ತು.

ಆದರೆ ಏಪ್ರಿಲ್ 01, 2024ದಿಂದ ರಾಜ್ಯದಾದ್ಯಂತ ಉಚಿತ ವಿದ್ಯುತ್ ಬಳಕೆ ಕುರಿತಾಗಿ ಮಹತ್ವದ ಬದಲಾವಣೆ ಆಗುತ್ತಿದೆ. ಸ್ವತಃ ಇಂಧನ ಇಲಾಖೆಯೇ ಸಂದರ್ಭವನ್ನು ವಿವರಿಸಿ ಇದಕ್ಕೆ ಉತ್ತರಿಸಿದೆ. ಇಲಾಖೆ ಅಧಿಕಾರಿಗಳೊಬ್ಬರು ನೀಡಿದ ಮಾಹಿತಿ ಪ್ರಕಾರವಾಗಿ ಬೇಸಿಗೆ ಸಮೀಪವಾಗುತ್ತಿರುವುದರಿಂದ ಹೆಚ್ಚು ವಿದ್ಯುತ್ ಬಳಕೆ ಆಗುತ್ತಿದೆ ಇದೇ ಸಂದರ್ಭದಲ್ಲಿ ಈ ವರ್ಷ ಮಳೆ ಕೊರತೆ ಆಗಿರುವ ಕಾರಣದಿಂದಾಗಿ ವಿದ್ಯುತ್ ಉತ್ಪಾದನೆ ಸಂಕಷ್ಟದ ಪರಿಸ್ಥಿತಿಯಲ್ಲಿದೆ.

ಇದನ್ನು ಸದ್ಯದ ಮಟ್ಟಿಗೆ ಸರಿದೂಗಿಸುವ ಕಾರಣದಿಂದಾಗಿ ಇನ್ನು ಮುಂದೆ ಒಂದು ವೇಳೆ ಕುಟುಂಬಗಳು 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದ್ದೇ ಆದರೆ ಪೂರ್ತಿ ವಿದ್ಯುತ್ ಬಳಕೆಗೆ 20% ಹೆಚ್ಚುವರಿಯಾಗಿ ವಿದ್ಯುತ್ ಶುಲ್ಕ ಪಾವತಿ ಮಾಡಬೇಕು ಎನ್ನುವ ಕಂಡೀಶನ್ ಹಾಕಲಾಗಿದೆ.

ಈಗಾಗಲೇ ಫೆಬ್ರವರಿ ತಿಂಗಳಿನ ವಿದ್ಯುತ್ ಬಳಕೆಗೂ ಕೂಡ 200 ಯೂನಿಟ್ ಗಡಿ ಮೀರಿದ ಕುಟುಂಬಗಳು ಪೂರ್ತಿ ಬಿಲ್ ಪಡೆದಿದ್ದಾರೆ, ಇನ್ನು ಮುಂದೆ ಇದೇ ರೀತಿ ಮುಂದುವರೆಯಲಿದೆ ಎನ್ನುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ. ಒಂದು ವೇಳೆ ಫಲಾನುಭವಿಗಳು ವಿದ್ಯುತ್ ಬಳಕೆ ನಿಯಂತ್ರಣ ಮಾಡಿದ್ದಲ್ಲಿ ಮತ್ತು ಅವರಿಗೆ ಅರ್ಹವಿರುವ ಸರಾಸರಿ ಒಳಗೆ ಬಳಕೆ ಮಾಡಿದ್ದಲ್ಲಿ ಎಂದಿನಂತೆ ಜೀರೋ ಬಿಲ್ (Zero Bill) ಪಡೆಯಲು ಅರ್ಹರಾಗುತ್ತಾರೆ ಎಂದು ಹೇಳಿದ್ದಾರೆ.