Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬಿಗ್ ಬಾಸ್ ಮನೆಯಿಂದ ಪ್ರಶಾಂತ್ ಸಂಬರ್ಗಿಗೆ ಗೇಟ್ ಪಾಸ್

Posted on December 11, 2022 By Kannada Trend News No Comments on ಬಿಗ್ ಬಾಸ್ ಮನೆಯಿಂದ ಪ್ರಶಾಂತ್ ಸಂಬರ್ಗಿಗೆ ಗೇಟ್ ಪಾಸ್

ಪ್ರಶಾಂತ್ ಸಂಬರ್ಗಿ ಆಟ ಮುಕ್ತಾಯ

ಬಿಗ್ ಬಾಸ್ ಮನೆಯ ಕಾಂಟ್ರವರ್ಸಿ ಕಿಂಗ್ ಎಂದೇ ಖ್ಯಾತಿ ಹೊಂದಿರುವ ಪ್ರಶಾಂತ್ ಸಂಬರ್ಗಿ ಅವರು 13ನೇ ವಾರಕ್ಕೆ ತಮ್ಮ ಆಟ ಮುಗಿಸಿ ಹೊರ ಬಿದ್ದಿದ್ದಾರೆ. ಸೀಸನ್ ಎಂಟರ ಕಂಟೆಸ್ಟೆಂಟ್ ಕೂಡ ಆಗಿದ್ದ ಪ್ರಶಾಂತ್ ಆ ಮೂಲಕ ಬಿಗ್ ಬಾಸ್ ಪ್ರಶಾಂತ್ ಸಂಬರ್ಗಿ ಎಂದೇ ಕರ್ನಾಟಕದಲ್ಲಿ ಫೇಮಸ್ ಕೂಡ ಆದರು.

ಇದಕ್ಕೂ ಮೊದಲು ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಪ್ರಶಾಂತ್ ಸಂಬರ್ಗಿ ಅವರು ಅದೇ ವ್ಯಕ್ತಿತ್ವವನ್ನು ಬಿಗ್ ಬಾಸ್ ಮನೆಯಲ್ಲಿ ಸಹ ಉಳಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಂದು ವಿಷಯಕ್ಕೂ ಕೂಡ ಗಲಾಟೆ ಮಾಡಿ ಗದ್ದಲ ಸೃಷ್ಟಿಸುತ್ತಿದ್ದ ಇವರ ಮಾತು ಬಹಳ ನೇರದಿಂದ ಕೂಡಿರುತ್ತಿತ್ತು.

ಇವರ ನೇರನುಡಿ ಕಟು ಮಾತುಗಳಿಂದ ಸಹ ಸ್ಪರ್ಧಿಗಳು ಇವರ ಮೇಲೆ ಯಾವಾಗಲೂ ಕೆಂಡ ಕಾರುತ್ತಿದ್ದರು. ಮೊದ ಮೊದಲಿಗೆ ಪ್ರಶಾಂತ್ ಸಂಬರ್ಗಿ ಅವರ ಆರೋಪಗಳು ಜಗಳಗಳು ಗಲಾಟೆಗಳು ಕಿರಿಕಿರಿ ಎನಿಸಿದರೂ ಸಹ ವಿಮರ್ಶೆ ಮಾಡಿದಾಗ ಅದು ನ್ಯಾಯ ಪರವಾಗಿರುತ್ತಿತ್ತು.

ಈ ಕಾರಣದಿಂದಲೇ ಬಿಗ್ ಬಾಸ್ ಮನೆಯ ಮಂದಿಗೆ ಇಷ್ಟವಾಗದಿದ್ದರೂ ಹೊರಗಡೆ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಕೂಡ ನಾಮಿನೇಟ್ ಆಗುವುದರಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಸಾಂಬಾರ್ಗಿ ಅವರನ್ನು ಅವರ ಅಭಿಮಾನಿಗಳು ಮಾತ್ರ ವೋಟ್ ಮಾಡಿ ಉಳಿಸಿಕೊಳ್ಳುತ್ತಿದ್ದರು.

ಈ ಬಾರಿ 9ನೇ ಸೀಸನ್ ಕೂಡ ವಿಶೇಷತೆಯಿಂದ ಕೂಡಿದ್ದು ನವೀನರ ಜೊತೆ ಪ್ರವೀಣರನ್ನು ಮನೆ ಒಳಗಡೆ ಬಿಡಲಾಗಿತ್ತು. ಬಿಗ್ ಬಾಸ್ ಓಟಿಟಿ ಸೀಸನ್ ಅಲ್ಲಿ ಗೆದ್ದಿದ್ದ ನಾಲ್ಕು ಕಂಟೆಸ್ಟೆಂಟ್ಗಳ ಜೊತೆ, ಇದುವರೆಗಿನ ಹಳೆ ಸೀಸನ್ ಗಳಲ್ಲಿ ಜನಮನ್ನಣೆ ಗಳಿಸಿದ್ದ ಅನುಪಮ ಗೌಡ, ದೀಪಿಕಾ ದಾಸ್, ಅರುಣ್ ಸಾಗರ್, ದಿವ್ಯ ಉರುಡುಗ ಜೊತೆ ಸಂಬರ್ಗಿ ಅವರು ಸಹ ಬಿಗ್ ಮನೆ ಸೇರಿದ್ದರು.

ಕಳೆದ ಸೀಸನ್ ಅಷ್ಟೇ ಚಟುವಟಿಕೆಯಿಂದ ಹಾಗೂ ಆ ಅನುಭವದಿಂದ ಈ ಸೀಸನ್ ಅಲ್ಲೂ ಕೂಡ ಮನೆ ಪೂರ್ತಿ ಕಾಣಿಸಿಕೊಳ್ಳುತ್ತಿದ್ದ ಅವರು ಈ ಬಾರಿ ಕೂಡ ಹಲವು ಬಾರಿ ಮನೆಯಲ್ಲಿ ಚರ್ಚೆಯ ವಿಷಯ ಆಗಿದ್ದರು. ಎದುರಾಳಿಗಳ ಜೊತೆ ಮಾತಿನ ಚಕಮಕಿಯೊಂದಿಗೆ ಫೈಟಿಂಗೆ ಬೀಳುತ್ತಿದ್ದ ಇವರು ಅದನ್ನು ಹೊರತುಪಡಿಸಿ ದಿನದ ಸಾಮಾನ್ಯ ಸಮಯದಲ್ಲೂ ಕೆಲವೊಮ್ಮೆ ಸಣ್ಣಪುಟ್ಟ ವಿಚಾರಕ್ಕೆ ವಿವಾದ ಶುರು ಮಾಡಿ ಜಗಳ ಮಾಡಿ ವಿಷಯ ಮುಗಿಸುತ್ತಿದ್ದರು.

ಸಹ ಕಂಟೆಸ್ಟೆಂಟ್ಗಳ ಜೊತೆ ಈ ಬಾರಿ ಕೆಲವರೊಂದಿಗೆ ಹೊಂದಿಕೊಂಡು ಹಾಗೂ ಕೆಲವರಿಗೆ ಕಿರಿಕಿರಿ ಮಾಡಿ ನೋಡುಗರಿಗೆ ಮನೋರಂಜನೆ ನೀಡುತ್ತಿದ್ದರು. ಇದುವರೆಗೆ ಹಲವು ಬಾರಿ ಕಳಪೆ ಪಟ್ಟ ತೊಟ್ಟು ,ಅತ್ಯುತ್ತಮವನ್ನು ಸಹ ಪಡೆದು ಕಿಚ್ಚನ ಚಪ್ಪಾಳೆಗೂ ಕೂಡ ಭಾಜರಾಗಿದ್ದರು ಇವರು. ಪ್ರಶಾಂತ್ ಸಂಬರ್ಗಿಯವರನ್ನು ನೋಡಲೆಂದೇ ಹಲವು ಮಂದಿ ಬಿಗ್ ಬಾಸ್ ನೋಡುತ್ತಿದ್ದರು.

ಇದೀಗ ಪ್ರಶಾಂತ್ ಸಾಂಬರ್ಗಿ ಅವರು ಬಹಳ ಬೇಗ ಔಟ್ ಆಗಿದ್ದು ಆ ಅಭಿಮಾನಿಗಳಿಗೆಲ್ಲ ಇದು ಬೇಸರ ತರಿಸಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಂಬರ್ಗಿ ಅವರು ಔಟ್ ಆಗಿರುವ ವಿಷಯ ತಿಳಿದು ಅಭಿಮಾನಿಗಳು ಬೇಸರದಿಂದ ಕಮೆಂಟ್ ಕೂಡ ಮಾಡುತ್ತಿದ್ದಾರೆ. ಈ ವಾರದಲ್ಲಿ ಸಂಬರ್ಗಿ ಅವರು ಬಹಳ ಚೆನ್ನಾಗಿ ಕಾಣಿಸಿಕೊಂಡಿದ್ದರು.

ಅವರ ಬದಲಾಗಿ ಅಮೂಲ್ಯ ಗೌಡ ಅವರು ಹೊರ ಹೋಗಬೇಕಿತ್ತು ಅಥವಾ ಇತರ ಯಾರಾದರೂ ಹೊರಗೆ ಹೋಗಬೇಕಿತ್ತು. ಇನ್ನು ಸ್ವಲ್ಪ ದಿನ ಪ್ರಶಾಂತ್ ಅವರ ಆಟ ನೋಡಬೇಕಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ. ನಿಮ್ಮ ಪ್ರಕಾರ ಈ ವಾರ ಮನೆಯಿಂದ ಯಾರು ಹೊರ ಹೋಗಬೇಕಿತ್ತು ಕಾಮೆಂಟ್ ಮಾಡಿ

Entertainment Tags:Big Boss Season 9, Prasanth Sambhargi
WhatsApp Group Join Now
Telegram Group Join Now

Post navigation

Previous Post: 40 ವರ್ಷ ವಯಸ್ಸಾದರೂ ರಂಗೋಲಿ ಸೀರಿಯಲ್ ನಟಿ ಸಿರಿ ಯಾಕಿನ್ನು ಮದುವೆಯಾಗಿಲ್ಲ ಗೊತ್ತ.? ಸಿರಿ ಮದುವೆ ಮಾಡಿಕೊಳ್ಳುವ ಹುಡುಗನಿಗೆ ಏನೆಲ್ಲಾ ಕಂಡೀಶನ್ ಹಾಕಿದ್ದಾರೆ ಗೊತ್ತ
Next Post: ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್, ಕಂಪ್ಲೀಟ್ ವಿಡಿಯೋ ಇಲ್ಲಿದೆ ನೋಡಿ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore