ರಜಿನಿಕಾಂತ್ ಭಾರತೀಯ ಚಿತ್ರರಂಗ ಕಂಡ ಖ್ಯಾತ ಸೂಪರ್ ಸ್ಟಾರ್ ನಟ ತಮ್ಮ ವಿಭಿನ್ನ ಸ್ಟೈಲ್ ಮತ್ತು ಮ್ಯಾನರಿಸಂಗಳಿಂದ ಖ್ಯಾತರಾಗಿರುವ ಇವುರು ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಜನಿಸಿದ್ದು ಮತ್ತು ಶಿಕ್ಷಣ ಪಡೆದಿದ್ದು ಎಲ್ಲಾ ಕರ್ನಾಟಕದ ಬೆಂಗಳೂರಿನಲ್ಲಿಯೇ. ಇವರ ಬಾಲ್ಯದ ಹೆಸರು ಶಿವಾಜಿರಾವ್ ಗಾಯಕವಾಡ್, ಸಿಬಿಎಸ್‌ಇ ಶಾಲೆ ಪಠ್ಯದಲ್ಲಿ ಸೇರ್ಪಡೆಗೊಂಡಿರುವ ಭಾರತದ ಏಕೈಕ ನಟ ರಜನಿಕಾಂತ್. ಅವರ ಕುರಿತು ಪುಸ್ತಕ ಒಂದರಲ್ಲಿ ಬಸ್ ಕಂಡಕ್ಟರ್ ಟು ಸೂಪರ್ ಸ್ಟಾರ್ ಎಂದು ಇದೆ.
ತಮಿಳಿನ ಖ್ಯಾತ ನಿರ್ದೇಶಕ ಕೆ.ಬಿ.ಬಾಲಚಂದರ್ ನಿರ್ದೇಶನದ ಚಿತ್ರದ ಮೂಲಕ ಖಳನಟನಾಗಿ 1975 ರಲ್ಲಿ ಸಿನಿರಂಗ ಪ್ರವೇಶಿಸಿದರು. ಕಮಲ್ ಹಾಸನ್ ಮತ್ತು ಶ್ರೀವಿದ್ಯಾ ಈ ಚಿತ್ರದಲ್ಲಿ ನಟಿಸಿದ್ದರು. ಅದೇ ವರ್ಷ ಅವರು ಕಥಾ ಸಂಗಮ ಎಂಬ ಕನ್ನಡ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದರು. ನಂತರ ಕೆಲ ಚಿತ್ರಗಳಲ್ಲಿ ಖಳನಾಗಿ ನಟಿಸಿ ಮುಂದೆ ನಾಯಕನಾಗಿ ಬಡ್ತಿ ಪಡೆದರು. ಕನ್ನಡದಲ್ಲಿಯೂ ಸುಮಾರು 11 ಚಿತ್ರಗಳಲ್ಲಿ ನಟಿಸಿದ್ದಾರೆ.
ರಜನಿಕಾಂತ್ ಸೂಪರ್ ಸ್ಟಾರ್ ಆಗಿ ಬೆಳೆದು ಬಂದ ಹಾದಿ ಸುಲಭವಾಗಿರಲಿಲ್ಲ. ಸಿನಿಮಾ ಜಗತ್ತಿಗೆ ಕಾಲಿಡುವ ಮುನ್ನ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಆಗಲೇ ಅವರು ಹಲವಾರು ವೇದಿಕೆ ಕಾರ್ಯಕ್ರಮ, ಸ್ಟಂಟ್‌ಗಳ ಮೂಲಕ ನಟನೆಯಲ್ಲಿ ಇರುವ ಆಸಕ್ತಿ ತೋರಿಸಿದ್ದರು. ಇವರು ಮದ್ರಾಸಿಗೆ ಹೋದಾಗ ಮನೆ ಇಲ್ಲದೆ, ಬಾಡಿಗೆಯ ಗುಡಿಸಲು ಮನೆಯಲ್ಲಿದ್ದರು.
ಚಿತ್ರರಂಗದಲ್ಲಿನ ಸೇವೆಗಾಗಿ ಪದ್ಮ ವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ರಜಿನಿ 2019 ರಲ್ಲಿ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸುವರ್ಣ ಮಹೋತ್ಸವದಲ್ಲಿ ಐಕಾನ್ ಆಫ್ ಗೋಲ್ಡನ್ ಜುಬ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದರು. ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ರಜನಿಕಾಂತ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್. ರಜನಿಕಾಂತ್ ಬಾಬಾರ ಅತಿ ದೊಡ್ಡ ಅನುಯಾಯಿ. ದೇವರು, ಧರ್ಮಗಳ ಬಗ್ಗೆ ಅಪಾರವಾದ ನಂಬಿಕೆ ಹೊಂದಿದ್ದಾರೆ.
ಸೂಪರ್ ಸ್ಟಾರ್ ತಮಿಳುನಾಡು ರಾಜಕೀಯದ ಮೇಲೆ ಭಾರೀ ಪ್ರಭಾವ ಬೀರಿದ್ದಾರೆ. ಚುನಾವಣಾ ಫಲಿತಾಂಶವನ್ನು ಬದಲಾವಣೆ ಮಾಡುವಷ್ಟು ಪ್ರಭಾವ ಹೊಂದಿದ್ದಾರೆ. 2020ರ ಡಿಸೆಂಬರ್ 3ರಂದು ರಜನಿಕಾಂತ್ ಅಧಿಕೃತವಾಗಿ ರಾಜಕೀಯಕ್ಕೆ ಬರುವುದಾಗಿ ಘೋಷಣೆ 22ಮಾಡಿದ್ದರು. ಆದರೂ ಅದೇಕೋ ರಾಜಕೀಯಕ್ಕೆ ರಜನಿಕಾಂತ್ ರವರು ಇನ್ನು ಪ್ರವೇಶಿಸಲಿಲ್ಲ. 2000-2010ರ ತನಕ ರಜನಿಕಾಂತ್ 26 ಕೋಟಿ ಸಂಭಾವಣೆ ಪಡೆದಿದ್ದಾರೆ.
ಜಾಕಿ ಚಾನ್ ನಂತರ ಏಷ್ಯಾದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ 2ನೇ ನಟ ರಜನಕಾಂತ್ ಆಗಿದ್ದಾರೆ. ಇವರು ಮದ್ರಾಸಿಗೆ ಹೋದಾಗ ಮನೆ ಇಲ್ಲದೆ, ಬಾಡಿಗೆಯ ಗುಡಿಸಲು ಮನೆಯಲ್ಲಿದ್ದರು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಪುನೀತ್ ರವರ ಕಾರ್ಯಕ್ರಮಕ್ಕೆ ರಜಿನಿಕಾಂತ್ ಅವರು ಬಂದಿದ್ದರು, ಇವರು ಪಡೆದಿರುವ ಸಂಭಾವನೆಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಹೇಳುವುದಾದರೆ ಯಾವುದೇ ಸೆಲಬ್ರಿಟಿಗಳು ಸಂಭಾವನೆ ಪಡೆಯದೆ ಯಾವ ಕಾರ್ಯಕ್ರಮಕ್ಕೂ ಬರುವುದಿಲ್ಲ.
ಆದರೆ ಸೂಪರ್ ಸ್ಟಾರ್ ಆದ ಇವರು ಪುನೀತ್ ರಾಜಕುಮಾರ್ ಅವರ ಕಾರ್ಯಕ್ರಮಕ್ಕೆ ಯಾವುದೇ ಹಣವನ್ನು ಪಡೆಯದೆ, ತಮ್ಮ ದೊಡ್ಡತನವನ್ನು ತೋರಿಸಿದ್ದಾರೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖವು ಇನ್ನು ಎಲ್ಲಾ ಅಭಿಮಾನಿಗಳಲ್ಲಿ ಹಾಗೂ ಕಲಾವಿದರಲ್ಲಿ ಹಸಿಯಾಗಿದೆ. ಹಾಗಾಗಿ ಎಲ್ಲಾ ಕಾರ್ಯಕ್ರಮಕ್ಕೂ ಕೂಡ ಸಂಭಾವನೆಯನ್ನು ಕೋಟಿಗಟ್ಟಲೆ ಪಡೆಯುವ ರಜನಿಕಾಂತ್ ಅಪ್ಪು ಅವರ ಕಾರ್ಯಕ್ರಮಕ್ಕೆ ಮಾತ್ರ ಒಂದು ನಯಪೈಸೆಊ ಕೂಡ ಸಂಭಾವನೆ ಬೇಡ ಎಂದು ತಿರಸ್ಕಾರ ಮಾಡಿದ್ದಾರೆ. ನಿಜಕ್ಕೂ ಇದು ಮೆಚ್ಚುವ ಕಾರ್ಯವೇ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.