ರಶ್ಮಿಕಾ ಮಂದಣ್ಣ ಸದ್ಯಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ . ನ್ಯಾಷನಲ್ ಕ್ರಶ್ ಎಂದೂ ಕೂಡ ಕರೆಸಿಕೊಳ್ಳುತ್ತಿರುವ ಈಕೆ ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಹು ಬೇಡಿಕೆ ನಟಿ ಆಗಿದ್ದಾರೆ. ರಶ್ಮಿಕ ಮಂದಣ್ಣ ಅವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ.
ಇವರು ಆಡುವ ಮಾತುಗಳಿಂದ, ನಡವಳಿಕೆಯಿಂದ ಹಿಗ್ಗಾಮುಗ್ಗ ಟ್ರೋಲಿಗೂ ಗುರಿಯಾಗಿರುವ ರಶ್ಮಿಕ ಮಂದಣ್ಣ ಅವರು ಮೊದಲ ಬಾರಿಗೆ ಇಂಟರ್ವ್ಯೂ ಒಂದರಲ್ಲಿ ಯಾವುದೇ ಹಿಂಜರಿಕೆ ಇಲ್ಲದಂತೆ ರಕ್ಷಿತ್ ಶೆಟ್ಟಿ ಕುರಿತು ನೇರವಾಗಿ ಮಾತನಾಡಿದ್ದಾರೆ. ಈ ತಿಂಗಳು ರಶ್ಮಿಕಾ ಅವರ ಎರಡು ಸಿನಿಮಾ ರಿಲೀಸ್ ಆಗುತ್ತಿದೆ ಈಗಾಗಲೇ ರಿಲೀಸ್ ಆಗಿರುವ ವಾರಿಸು ಒಳ್ಳೆಯ ರೆಸ್ಪಾನ್ಸ್ ಪಡೆಯುತ್ತಿದ್ದೆ ಮತ್ತು ಬಾಲಿವುಡ್ ನ ಬಹು ನಿರೀಕ್ಷಿತ ಚಲನಚಿತ್ರದ ಮಿಷನ್ ಮಜ್ನು ಬಿಡುಗಡೆಗೆ ತುದಿಯಲ್ಲಿ ನಿಂತಿದೆ.
ಇದರ ಕುರಿತು ಸಂದರ್ಶನಗಳಲ್ಲಿ ಭಾಗಿಯಾಗಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ ರಶ್ಮಿಕ. ಹೀಗೆ ಪ್ರೇಮ ದಿ ಜರ್ನಲಿಸ್ಟ್ ಎನ್ನುವ ಯೂಟ್ಯೂಬ್ ಚಾನೆಲ್ ಗೆ ಸಂದೇಶನ ಕೊಟ್ಟ ರಶ್ಮಿಕ ಮಂದಣ್ಣ ಅವರು ನಿರೂಪಕಿ ಕೇಳಿದ ಪ್ರಶ್ನೆಗಳಿಗೆ ಬಹಳ ಚೆನ್ನಾಗಿ ಉತ್ತರಿಸಿದ್ದಾರೆ. ಅದಲ್ಲದೆ ಮೊದಲ ಎರಡು ಸಿನಿಮಾಗಳ ಬಗ್ಗೆ ಪ್ರಶ್ನೆ ಕೇಳಿದಾಗ ಈ ಬಾರಿ ನೇರವಾಗಿ ಸತ್ಯವನ್ನೇ ನುಡಿದಿದ್ದಾರೆ ಎನ್ನಬಹುದು.
ಯಾಕೆಂದರೆ ಕೆಲ ದಿನಗಳ ಹಿಂದೆ ಅಷ್ಟೇ ಬಾಲಿವುಡ್ ಇಂಟರ್ವ್ಯೂ ಅಲ್ಲಿ ಭಾಗಿಯಾಗಿದ್ದ ಇವರು ಅಲ್ಲಿ ತಮ್ಮ ಸಿನಿ ಜರ್ನಿ ಸ್ಟಾರ್ಟಿಂಗ್ ಕುರಿತು ಕೇಳಲಾದ ಪ್ರಶ್ನೆಗೆ ತನಗೆ ಮೊದಲ ಅವಕಾಶ ಕೊಟ್ಟ ಪ್ರೊಡಕ್ಷನ್ ಹೌಸ್ ಹೆಸರು ಹೇಳಲು ಇಷ್ಟ ಪಡದೆ ಸೊ ಕಾರ್ಡ್ ಪ್ರೊಡಕ್ಷನ್ ಹೌಸ್ ಎಂದು ಬೆರಳು ಹಿಡಿದು ಸೈನ್ ಮಾಡಿ ತೋರಿಸಿದರು. ಆ ಬಳಿಕ ಅದು ಸಾಕಷ್ಟು ಜನರ ಸಿಟ್ಟಿಗೆ ಕಾರಣವಾಗಿ ಅವರನ್ನು ಬ್ಯಾನ್ ಮಾಡಬೇಕು ಎನ್ನುವ ಮಟ್ಟಕ್ಕೂ ವಿವಾದವಾಗಿತ್ತು.
ಆದರೆ ಈ ಬಾರಿ ರಶ್ಮಿಕ ಮಂದಣ್ಣ ಅವರು ತಪ್ಪನ್ನು ತಿದ್ದುಕೊಂಡಿದ್ದು ಮೊದಲ ಎರಡು ಸಿನಿಮಾ ಅವಕಾಶಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡಿ ರಕ್ಷಿತ್ ಶೆಟ್ಟಿ ಅವರು ನಿರ್ಮಾಣ ಮಾಡಿ ನಟನೆ ಮಾಡಿದ್ದ ಕಿರಿಕ್ ಪಾರ್ಟಿ ಸಿನಿಮಾದ ಕುರಿತು ಈ ಬಾರಿ ಹೆಮ್ಮೆಯಿಂದ ಮಾತನಾಡಿ ನನಗೆ ಇಂಡಸ್ಟ್ರಿಯ ದಾರಿ ತೋರಿಸಿದ್ದೆ, ರಿಷಬ್ ಹಾಗೂ ರಕ್ಷಿತ್ ಶೆಟ್ಟಿ ಎಂದು ಹೇಳಿಕೊಂಡಿದ್ದಾರೆ.
ಮತ್ತು ಎರಡನೇ ಸಿನಿಮವಾದ ಅಂಜನಿಪುತ್ರ ಪುನೀತ್ ರಾಜಕುಮಾರ್ ಅವರ ಜೊತೆ ಅಭಿನಯಿಸಿದೆ, ಆ ಸಿನಿಮಾದಿಂದ ನಾನು ವಿಶಾಲವಾಗಿ ಯೋಚಿಸುವುದನ್ನು ಕಲಿತೆ. ಈಗ ನಾನು ನಾಲ್ಕು ಐದು ಇಂಡಸ್ಟ್ರಿಗಳಲ್ಲಿ ನಟಿಯಾಗಿ ಕೆಲಸ ಮಾಡುತ್ತಿದ್ದೇನೆ ಅಂದರೆ ನನಗೆ ಒಂದೊಂದು ಸಲ ಆಶ್ಚರ್ಯ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ರಶ್ಮಿಕಾ ಅವರು ಕನ್ನಡದ ಬಗ್ಗೆ ತೋರುತ್ತಿರುವ ಅಸಡ್ಡೆ ಹಾಗೂ ಹೇಳುತ್ತಿರುವ ಹೇಳಿಕೆಗಳ ಕುರಿತು ಸಾಕಷ್ಟು ಜನರಿಗೆ ಅಸಮಾಧಾನ ಇತ್ತು. ಈ ಬಾರಿ ಆಕೆ ಸಂಕ್ರಾಂತಿ ಹಬ್ಬಕ್ಕೆ ಐದು ಭಾಷೆಗಳಲ್ಲಿ ಅಭಿಮಾನಿಗಳಿಗೆ ವಿಶ್ ಮಾಡಿದ್ದು ಅದರಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ಟು ಕನ್ನಡದಲ್ಲಿ ಮೊದಲ ವಿಶ್ ಮಾಡಿದ್ದರು. ಸದ್ಯಕ್ಕೆ ರಶ್ಮಿಕ ಬುದ್ಧಿ ಕಲಿತಿದ್ದಾರೆ ಎನಿಸುತ್ತಿದೆ, ಇನ್ನಾದರೂ ಅವರ ಕುರಿತ ಟ್ರೋಲ್ ಗಳು ಕಡಿಮೆಯಾಗುತ್ತಿವೆಯ ಎಂದು ಕಾದು ನೋಡಬೇಕಾಗಿದೆ.