ಹಿಂದುಗಳಿಗೆ ಗೋವು ಎಂದರೆ ಮಾತೆ, ಗೋವು ಎಂದರೆ ಕಾಮಧೇನು, ದೇವತೆಯ ಸಮಾನ ಕಾಮಧೇನುವಿನಲ್ಲಿ ಮುಕ್ಕೋಟಿ ದೇವಾನುದೇವತೆ ಗಳು ಇದ್ದಾರೆ. ಗೋವು ಕೇಳಿದ್ದನ್ನು ದಯಪಾಲಿಸುತ್ತಾಳೆ. ಹಾಗಾಗಿ ಗೋವನ್ನು ಕಾಮಧೇನು ಎಂದು ಕರೆಯುತ್ತಾರೆ. ಕಾಮಧೇನು ಎಂದರೆ ಬೇಡಿದ್ದನ್ನು ಕೊಡುವುದು ಅಂತ ಅರ್ಥ.
ಈ ಕಾಮಧೇನು ಎನ್ನುವ ಪದದ ಬಗ್ಗೆ ಭಗವದ್ಗೀತೆಯಲ್ಲಿ ಉಲ್ಲೇಖವಿದೆ. ಶ್ರೀ ಕೃಷ್ಣನು ಭಗವದ್ಗೀತೆ ಯಲ್ಲಿ ” ಧೇನುನಾಮ್ ಆಸ್ಮೇ ಕಾಮಧುಕ ” ಎನ್ನುತ್ತಾರೆ. ಇದರ ಅರ್ಥ ಗೋವುಗಳಲ್ಲಿ ನಾನು ಕಾಮಧುಕ ಬೇಡಿದ್ದನ್ನು ಕೊಡುವ ಗೋವು ಎಂದು ಕಾಮಧುಕ ಎಂದರೆ ಕಾಮಧೇನು ಅಂತ ಅರ್ಥ. ಇದನ್ನೇ ಸುರಭಿ ಎನ್ನಲಾಗುತ್ತದೆ.
ಗೋವುಗಳನ್ನು ದೇವತೆಗಳ ದೇವತೆ ಎನ್ನುತ್ತಾರೆ ಇದರಿಂದಾಗಿಯೇ ಸಾವಿರಾರು ವರ್ಷಗಳಿಂದಲೂ ಗೋವನ್ನು ಪೂಜ್ಯನೀಯವೆಂದು ಪರಿಗಣಿಸಲಾಗಿದೆ ಮತ್ತು ಗೋಮಾತೆಯನ್ನು ಪೂಜಿಸಲಾಗುತ್ತದೆ. ಗೋಮಾತೆಯ ಸಗಣಿ ಮೂತ್ರ ಹಾಲು ಅತೀ ಪವಿತ್ರ ಎಂದೂ ಪರಿಗಣಿಸಲಾಗಿದೆ.
ಗೋವನ್ನು ಅದರ ಕರುವಿನಿಂದ ದೂರ ಮಾಡಬಾರದು ಒಂದು ವೇಳೆ ಹೀಗೆ ಮಾಡಿದ್ದಲ್ಲಿ ಅದು ಮಹಾ ಪಾಪ ಅನ್ನುವ ನಂಬಿಕೆ ನಮ್ಮ ಪುರಾಣಗಳಲ್ಲಿ ಇದೆ. ಪುರಾತನ ಕಾಲದಲ್ಲಿ ಸಗಣಿಯನ್ನು ಕೂಡ ಪೂಜಿಸಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಸಗಣಿಯನ್ನು ಬಿಡಿ ಗೋವುಗಳನ್ನು ಗೌರವಿ ಸುವುದನ್ನು ಕೂಡ ಮರೆಯುತ್ತಾ ಇದ್ದಾರೆ.
ಗೋವಿನ ಹಾಲನ್ನು ಪ್ರತಿ ಯೊಂದು ಹಿಂದುಗಳು ತಮ್ಮ ಮನೆಯಲ್ಲಿ ಪವಿತ್ರವೆಂದು ಬಳಸುತ್ತಾರೆ ಹಿಂದುಗಳು ಗೋಮಾತೆಯನ್ನು ಪೂಜಿಸುವುದಕ್ಕೆ ಹಲವಾರು ಕಾರಣಗಳು ಇದೆ. ಗೋಮಾತೆಯ ಪಂಚಗವ್ಯಗಳಾದಂತಹ ಹಾಲು ಮೊಸರು ತುಪ್ಪ ಮೂತ್ರ ಮತ್ತು ಸಗಣಿ ಇವು ಹೇರಳವಾದ ಔಷಧಿ ಗುಣಗಳಿಂದ ಕೂಡಿದೆ ಇವುಗಳನ್ನು ಯೋಗ್ಯವಾಗಿ ಸರಿಯಾದ ರೀತಿಯಲ್ಲಿ ಬಳಸಿದರೆ ಮನುಷ್ಯನಿಗೆ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ.
ಹಾಗೆಯೇ ಇಂದು ದೇಶೀಯ ಹಾಗೂ ವಿದೇಶಿಯ ಕಂಪನಿಗಳು ರೈತರಿಂದ ಗೋಮೂತ್ರವನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ ಲೀಟರ್ ನಂತೆ ಖರೀದಿಸಿ ಅದನ್ನು ಸಂಸ್ಕರಿಸಿ ಆನ್ಲೈನ್ ಮುಖಾಂತರ ನೂರಾರು ರೂಪಾಯಿಗೆ ಮಾರಾಟ ಮಾಡುತ್ತಿರುವುದು ನಮಗೆಲ್ಲರಿಗೂ ಕೂಡ ತಿಳಿದಿರುವ ವಿಷಯ ಆಕಳ ಸಗಣಿ ಕೂಡ ಮಾರಾಟವಾಗುತ್ತದೆ.
ಇದನ್ನು ಅದರ ಬತ್ತಿ ಸೊಳ್ಳೆ ಬತ್ತಿ ತಯಾರಿಕೆಗೆ ಬಳಸಲಾಗುತ್ತಿದೆ. ಆದ್ದರಿಂದ ರೈತರು ಹಾಲು ಕೊಡದ ಗೋಮಾತೆಯನ್ನು ಕಟುಕರಿಗೆ ಮಾರಾಟ ಮಾಡದೆ ಅವುಗಳನ್ನು ರಕ್ಷಿಸಿ ಹಸುವಿನ ಮೇಲೆ ಕೈಯಿಟ್ಟು ಈ ಒಂದು ಸರಳವಾದ ಮಂತ್ರವನ್ನು ಹೇಳುವುದರಿಂದ ನಿಮ್ಮ ಮನೋಕಾಮನೆಗಳು ಈಡೇರುತ್ತದೆ. ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗೆಯೇ ಹಲವಾರು ರೋಗಗಳಿಂದ ಮುಕ್ತಿ ಸಿಗುತ್ತದೆ.
ಸುಲಭವಾಗಿ ವಾಸಿಯಾಗದ ಲಕ್ಷ ದಂತಹ ಕಾಯಿಲೆಗಳು ಕೂಡ ವಾಸಿ ಯಾಗುತ್ತದೆ. ಹಾಗಾದರೆ ಇವುಗಳನ್ನು ನಾವು ಹೇಗೆ ಉಪಯೋಗಿಸು ವುದು ಎನ್ನುವುದನ್ನು ಈಗ ತಿಳಿಯೋಣ. ನಿಮ್ಮ ಮನೆಯಲ್ಲಿ ಹಸು ಇದ್ದರೆ ಬಹಳ ಒಳ್ಳೆಯದು. ಇಲ್ಲದಿದ್ದರೆ ಯಾರ ಮನೆಯಲ್ಲಿ ಹಸು ಇದೆಯೋ ಅಲ್ಲಿ ಹೋಗಿ ನೀವು ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಅಥವಾ ನಿಮ್ಮ ಮನೆಯ ಹತ್ತಿರ ಹಸು ಬರುತ್ತಾ ಇದ್ದರೆ ಆ ಹಸುವನ್ನು ಕೂಡ ನೀವು ಬೇಡಿಕೊಳ್ಳಬಹುದು.
ಪ್ರತಿದಿನ ಹಸುವಿಗೆ ಏನಾದರೂ ತಿನ್ನುವುದಕ್ಕೆ ಕೊಡಬೇಕು ರೊಟ್ಟಿ ಹಣ್ಣು ಅಥವಾ ಅನ್ನ ಹೀಗೆ ಏನಾದರೂ ತಿನ್ನುವುದಕ್ಕೆ ಕೊಡಬೇಕು ಹೀಗೆ ತಿನ್ನಿಸುವ ಪದಾರ್ಥ ಅವತ್ತಿನ ದಿನವೇ ತಯಾರಿಸಿದ ಆಹಾರವಾಗಿರಬೇಕು.
ಬದಲಿಗೆ ಹಿಂದಿನ ದಿನ ತಯಾರಿಸಿದ ಆಹಾರ ಅಥವಾ ಹಳಸಿದ ಆಹಾರವನ್ನು ಯಾವುದೇ ಕಾರಣಕ್ಕೂ ಕೊಡಬಾರದು. ಇದನ್ನು ಯಾವ ಸಮಯದಲ್ಲಾದರೂ ಮಾಡಬಹುದು ಯಾವುದೇ ದಿನದಲ್ಲಾದರೂ ಆರಂಭಿಸಬಹುದು. ನೀವು ಆಹಾರವನ್ನು ಬಲಗೈಯಿಂದ ತಿನ್ನಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.