* ಬೆಣ್ಣೆ ಕಾದ ನಂತರ ತುಪ್ಪವು ಗಟ್ಟಿಯಾಗದೆ ನೀರಾಗಿರಬೇಕೆಂದು ಬಯಸುವುದಾದರೆ ಬಿಸಿ ತುಪ್ಪಕ್ಕೆ ಸ್ವಲ್ಪ ಮಜ್ಜಿಗೆ ಮತ್ತು ಎರಡು ಉಪ್ಪಿನ ಹರಳುಗಳನ್ನು ಹಾಕಿಡಿ.
* ಕಾಫಿ ಡಿಕಾಕ್ಷನ್ನಿಗೆ ಚಿಟಿಕೆ ಅಡಿಗೆ ಸೋಡಾ ಹಾಕಿದರೆ ಅದರ ಬಣ್ಣ ಹಾಗೂ ರುಚಿ ಹೆಚ್ಚುತ್ತದೆ.
* ಬೆಳಿಗ್ಗೆ ಕರೆದು ತೆಗೆದ ಹಾಲು ರಾತ್ರಿಯ ತನಕ ಕೆಡದಂತೆ ಇರಬೇಕಾದರೆ ಆ ಹಾಲಿನಲ್ಲಿ 10 ರಿಂದ 15 ಭತ್ತದ ಕಾಳುಗಳನ್ನು ತೊಳೆದು ಹಾಕಿಡಬೇಕು.
* ಬಿಸಿನೀರಿಗೆ ಸ್ವಲ್ಪ ಉಪ್ಪು ಮತ್ತು ಅಡಿಗೆ ಸೋಡವನ್ನು ಹಾಕಿ ಆ ನೀರಿನಿಂದ ಸ್ನಾನ ಮಾಡಿದರೆ ಮಾಂಸಖಂಡಗಳ ನೋವು ನಿವಾರಣೆ ಯಾಗುತ್ತದೆ.
* ಹಣ್ಣಿನ ರಸವನ್ನು ತಯಾರಿಸುವಾಗ ಅದಕ್ಕೆ ಹೆಚ್ಚಿನ ಸಕ್ಕರೆಯನ್ನು ಸೇರಿಸಬೇಡಿ. ಸೇರಿಸಿದರೆ ಅದು ಜೀರ್ಣಶಕ್ತಿಯನ್ನು ಕುಂದಿಸುತ್ತದೆ.
* ಆಲೂಗಡ್ಡೆಯನ್ನು ತಿನ್ನುತ್ತಾ ಬಂದರೆ ದೇಹ ದಡೂತಿಯಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಬರೇ ಆಲೂಗಡ್ಡೆಯ ಸೇವನೆಯಿಂದ ದೇಹವು ದಪ್ಪಗಾಗುವುದಿಲ್ಲ. ಆಲೂಗಡ್ಡೆಯೊಂದಿಗೆ ಸೇರಿಸುವ ಇತರ ಪದಾರ್ಥಗಳಿಂದಾಗಿ ದೇಹ ದಡೂತಿಯಾಗುತ್ತದೆ.
* ಅನಾನಸ್, ಕಿತ್ತಳೆ ಇತ್ಯಾದಿ ಯಾವುದೇ ಶರಬತ್ತನ್ನು ತಯಾರಿಸುವಾಗ ಅದಕ್ಕೆ ಸ್ವಲ್ಪ ನಿಂಬೆಹಣ್ಣಿನ ಅಥವಾ ಹೇರಳೆಕಾಯಿಯ ರಸವನ್ನು ಹಿಂಡಿದರೆ ಅದರ ರುಚಿ ಹೆಚ್ಚುತ್ತದೆ.
ಈ ಸುದ್ದಿ ಓದಿ :- ರಾಜ್ಯದ ಎಲ್ಲಾ ರೇಷನ್ ಕಾರ್ಡ್ ರದ್ದು.! ಹೊಸ ರೂಲ್ಸ್ ಜಾರಿ.!
* ನಿಂಬೆಹಣ್ಣಿನ ಹೋಳುಗಳನ್ನು ಉಪ್ಪಿನ ಜಾಡಿಯಲ್ಲಿ ಇಟ್ಟರೆ ಬೂಷ್ಟು ಬರುವುದಿಲ್ಲ.
* ತರಕಾರಿ ಹೆಚ್ಚುವಾಗ ಬಹಳ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡ ಬಾರದು. ಹಾಗೆ ಮಾಡಿದರೆ ಅವುಗಳಲ್ಲಿನ ಜೀವಸತ್ವ, ಲವಣ ಮತ್ತು ಪೋಷಕಾಂಶಗಳು ನಷ್ಟ ಹೊಂದುತ್ತವೆ.
* ಕೋಸನ್ನು ಬೇಯಿಸುವಾಗ ಅದಕ್ಕೆ ಒಂದು ಚೂರು ಹಸಿಶುಂಠಿಯನ್ನು ಹಾಕಿದರೆ ಅದರಿಂದ ಯಾವುದೇ ವಾಸನೆಯೂ ಬರುವುದಿಲ್ಲ. ಅಡುಗೆ ಪದಾರ್ಥಗಳು ರುಚಿಕರವಾಗಿರುತ್ತವೆ.
* ಗಿಣ್ಣುಗಳು ಹೆಚ್ಚಾಗಿರುವ ನುಗ್ಗೆಕಾಯಿಯನ್ನು ಅಡುಗೆಗೆ ಬಳಸಿದರೆ ಹೆಚ್ಚು ರುಚಿಯಾಗಿರುತ್ತದೆ.
* ಬದನೆಕಾಯಿಯ ಕಹಿ ರುಚಿಯನ್ನು ಹೋಗಲಾಡಿಸಲು ಅದನ್ನು ಹೆಚ್ಚಿದ ನಂತರ ಹೋಳುಗಳನ್ನು ಅಕ್ಕಿತೊಳೆದ ನೀರಿನಲ್ಲಿ ಹಾಕಿಟ್ಟು ಆಮೇಲೆ ಅಡುಗೆಗೆ ಬಳಸಬೇಕು.
* ಟೊಮೆಟೊ ಹಣ್ಣುಗಳನ್ನು ಕೆಲವು ದಿನಗಳ ಕಾಲ ಕೆಡದಂತೆ ಇರಿಸಬೇಕೆಂದರೆ ಮೇಣದ ಬತ್ತಿಯನ್ನು ಉರಿಸಿ ಅದರಿಂದ ಬರುವ ದ್ರವದ ಒಂದು ಹನಿಯನ್ನು ಟೊಮೆಟೊಹಣ್ಣುಗಳ ತೊಟ್ಟಿನ ಭಾಗದಲ್ಲಿ ಹಾಕಿರಿಸಬೇಕು.
* ಈರುಳ್ಳಿಯನ್ನು ಬೇಯಿಸಿದಾಗ ಅದು ಪದರಗಳಾಗಿ ಸೀಳದೆ ಒಂದೇ ಗಡ್ಡೆಯಂತೆ ಇರಬೇಕೆಂದರೆ ಇಲ್ಲೊಂದು ಉಪಾಯವಿದೆ. ಅದರ ಸಿಪ್ಪೆಯನ್ನು ಸುಲಿದ ನಂತರ ಗುಂಡುಸೂಜಿಯಿಂದ ಅದರಲ್ಲಿ ರಂಧ್ರ ವೊಂದನ್ನು ಮಾಡಬೇಕು.
* ಬದನೆಕಾಯಿಯ ತೊಟ್ಟನ್ನು ಸಾಮಾನ್ಯವಾಗಿ ಎಲ್ಲರೂ ಬಿಸಾಡುತ್ತಾರೆ. ಆದರೆ ಅದನ್ನು ಸಾರು ಅಥವಾ ಹುಳಿಯಲ್ಲಾಗಲೀ ಸಣ್ಣಗೆ ತುಂಡರಿಸಿ ಹಾಕಬಹುದು. ತರಕಾರಿಯಂತೆ ಬೆಂದ ನಂತರ ತಿನ್ನಲು ರುಚಿಕರ.
ಈ ಸುದ್ದಿ ಓದಿ :- ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಕಿಡ್ನಿ ಹಾಳಾಗಿದೆ ಎಂದರ್ಥ ಎಚ್ಚರ.!
* ಬಿರಿಯಾನಿಯನ್ನು ತಯಾರಿಸುವಾಗ ಅದಕ್ಕೆ ಕೆಲವು ಹನಿಗಳಷ್ಟು ನಿಂಬೆಹಣ್ಣಿನ ರಸವನ್ನು ಹಾಕಿದರೆ ಬಿರಿಯಾನಿ, ಗಟ್ಟಿಯಾಗಿರದೆ ಮೆದುವಾಗಿ ತಯಾರಾಗುತ್ತದೆ.
* ಬೂದುಗುಂಬಳಕಾಯಿಯ ಸಿಪ್ಪೆಯನ್ನು ಬಿಸಾಡುವ ಬದಲು ಸಣ್ಣಗೆ ಹೆಚ್ಚಿ ಬಿಸಿಲಿನಲ್ಲಿ ಒಣಗಿಸಿ ಎಣ್ಣೆಯಲ್ಲಿ ಕರಿದು ಉಪ್ಪು ಖಾರ ಸೇರಿಸಿದರೆ ಬೂದು ಗುಂಬಳದ ಉಪ್ಪೇರಿ ಸಿದ್ದವಾಗುತ್ತದೆ.
ಹೀಗೆ ಮೇಲೆ ಹೇಳಿದ ಎಷ್ಟು ಮಾಹಿತಿಗಳು ಕೂಡ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು.
ಮಹಿಳೆಯರಿಗೆ ಅಡುಗೆ ವಿಚಾರದಲ್ಲಿ ಕೆಲವೊಂದಷ್ಟು ಸಮಯದಲ್ಲಿ ಅಡುಗೆಯಲ್ಲಿ ಸಮಸ್ಯೆ ಉಂಟಾಗುತ್ತದೆ ಅಂತಹ ಸಮಯದಲ್ಲಿ ಹೇಗೆ ಅದನ್ನು ಸರಿ ಪಡಿಸುವುದು ಎಂದು ಕೆಲವೊಂದಷ್ಟು ಜನರಿಗೆ ತಿಳಿದಿರುವುದಿಲ್ಲ. ಅಂತವರು ಈಗ ಮೇಲೆ ಹೇಳಿದ ಇಷ್ಟು ಮಾಹಿತಿಗಳನ್ನು ತಿಳಿದುಕೊಂಡು ಅಂತಹ ಸಮಯದಲ್ಲಿ ಈ ವಿಧಾನ ಅನುಸರಿಸುವುದು ತುಂಬಾ ಒಳ್ಳೆಯದು. ಇದರಿಂದ ಅಡುಗೆಯನ್ನು ಸರಿಪಡಿಸಬಹುದು ಹಾಗೂ ಅಡುಗೆಯ ರುಚಿಯನ್ನು ಸಹ ಮತ್ತಷ್ಟು ಹೆಚ್ಚಿಸಬಹುದು.