ಶಿವಣ್ಣ ಅವರ 125ನೇ ಸಿನಿಮಾ ವೇದ
ಇಂದು ಇಡೀ ಕರ್ನಾಟಕವೇ ಆರಾಧ್ಯ ದೈವವಾಗಿ ಪೂಜಿಸುತ್ತಿರುವ ಪುನೀತ್ ರಾಜಕುಮಾರ್ ಅವರನ್ನು ನೆನೆಯದ ದಿನಗಳೇ ಇಲ್ಲ ಎನ್ನಬಹುದು. ಜೊತೆಗಿರದ ಜೀವ ಸದಾ ಜೀವಂತ ಎನ್ನುವ ಅವರದೇ ಮಾತಿನಂತೆ ಇಂದು ಪ್ರತಿಯೊಂದು ಸಿನಿಮಾರಂಗದ ಕಾರ್ಯಕ್ರಮದ ಚಾಲನೆಗೂ ಮುನ್ನ ಅಪ್ಪು ಫೋಟೋ ನಮಿಸುವ ಮೂಲಕ ಶುರು ಮಾಡಲಾಗುತ್ತದೆ.
ಅಪ್ಪು ಅವರು ಇಲ್ಲದಿದ್ದರೂ ಸಹ ಅವರು ಇದ್ದಾಗ ಸಲ್ಲುತ್ತಿದ್ದ ಪ್ರೀತಿ ಹಾಗೂ ಗೌರದಷ್ಟೇ ಅಭಿಮಾನವನ್ನು ಈಗಲೂ ತೋರಲಾಗುತ್ತಿದೆ. ಇನ್ನು ಅವರ ಕುಟುಂಬದ ವಿಚಾರಕ್ಕೆ ಬರುವುದಾದರೆ ಮನೆಯ ಮುದ್ದಿನ ರಾಜಕುಮಾರನಾಗಿದ್ದ ಅಪ್ಪು ಅವರು ಎಲ್ಲರಿಗಿಂತ ಕಿರಿಯರಾಗಿದ್ದ ಕಾರಣ ಅವರ ತಂದೆ ತಾಯಿ ಮಾತ್ರ ಅಲ್ಲದೆ ಅಣ್ಣಂದಿರು ಹಾಗು ಅಕ್ಕಂದಿರು ಕೂಡ ಸ್ವಂತ ಮಗನಂತೆ ಪ್ರೀತಿಸುತ್ತಿದ್ದರು. ಅದೇ ರೀತಿ ಕಾಳಜಿ ತೋರಿ ನೋಡಿಕೊಂಡಿದ್ದರು.
ಇದೀಗ ಅವರೇ ಎಲ್ಲರಿಗಿಂತ ಮುನ್ನವೇ ಇ.ಹ.ಲೋ.ಕ.ದ ಯಾತ್ರೆ ಮುಗಿಸಿರುವ ಕಾರಣ ಅಪ್ಪು ಅವರನ್ನು ಪ್ರತಿದಿನವೂ ನೆನೆದು ಕೊರಗಿ ಆ ಜೀವಗಳು ಅನುಭವಿಸುತ್ತಿರುವ ನೋ.ವುಗಳನ್ನು ವಿವರಿಸಲು ಅಸಾಧ್ಯ. ಅದರಲ್ಲೂ ಶಿವಣ್ಣ ಅವರಿಗೆ ಅಪ್ಪು ಎಂದರೆ ವಿಶೇಷ ಪ್ರೀತಿ ಸಿನಿಮಾ ಇಂಡಸ್ಟ್ರಿ ಗೆ ಸಂಬಂಧ ಪಟ್ಟ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಕೂಡ ಅಪ್ಪು ಬಗ್ಗೆ ಹೊಗಳದೇ ಅವರ ಮಾತೇ ಮುಗಿಯುತ್ತಿರಲಿಲ್ಲ.
ಅಂತಹದರಲ್ಲಿ ಪ್ರಾ.ಣಕ್ಕೆ ಪ್ರಾ.ಣವಾಗಿದ್ದ ಇಂತಹ ಲಕ್ಷ್ಮಣನಂತ ತಮ್ಮನನ್ನು ಕಳೆದುಕೊಂಡಿರುವ ಶಿವಣ್ಣನ ಮುಖದಲ್ಲಿ ಇನ್ನು ಸಹ ನೋವಿನ ಛಾಯೆ ಕಡಿಮೆ ಆಗಿಲ್ಲ. ಇದೆಲ್ಲವನ್ನು ಬದಿಗಿಟ್ಟು ಬದುಕಿನ ಜವಾಬ್ದಾರಿ ಹೊರುವ ಕಾರಣ ವಾಸ್ತವನ್ನು ಒಪ್ಪಿಕೊಂಡು ಕ.ಷ್ಟಪಟ್ಟು ದಿನವನ್ನು ಸವೆಸುತ್ತಿದ್ದಾರೆ ಇವರು. ಈಗ ಶಿವಣ್ಣ ಅವರು ಮತ್ತೊಮ್ಮೆ ಅಪ್ಪು ಫೋಟೋ ಮುಂದೆ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ವಿಶೇಷವಾದ ಮನವಿ ಕೂಡ ಮಾಡಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಬಾರಿ ಶಿವಣ್ಣ ಅವರು ಮಾತನಾಡಿರುವುದು ಏನು ಎಂದರೆ ಈ ತಿಂಗಳ ಅಂತ್ಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶಿವಣ್ಣ ಅವರ ಬಹು ನಿರೀಕ್ಷಿತ ಚಿತ್ರ ಹಾಗೂ ಅವರ 125 ಚಿತ್ರವಾದ ವೇದ ಸಿನಿಮಾವು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮ ಹಾಗೂ ಟ್ರೈಲರ್ ರಿಲೀಸ್ ಕಾರ್ಯಕ್ರಮಗಳು ಬಹಳ ಅದ್ದೂರಿಯಾಗಿ ನಡೆದಿತ್ತು.
ಇದನ್ನೇ ಮುಂದುವರಿಸಿ ಈಗ ವೇದ ಸಿನಿಮಾದ ಟೀಸರ್ ಕಾರ್ಯಕ್ರಮವನ್ನು ಕೂಡ ಅಷ್ಟೇ ಅದ್ದೂರಿನಿಂದ ನಡೆಸಲು ಚಿತ್ರ ತಂಡ ತಯಾರಾಗಿದೆ. ಈ ಉದ್ದೇಶದಿಂದ ಡಿಸೆಂಬರ್ 14ರಂದು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆ. ಶಿವಣ್ಣ ಅವರು ಅಪ್ಪು ಹಾಗೂ ಅಣ್ಣಾವ್ರ ಫೋಟೋ ಮುಂದೆ ನಿಂತು ಅಭಿಮಾನಿಗಳ ಜೊತೆ ಈ ರೀತಿ ಮಾತನಾಡಿದ್ದಾರೆ.
ನೀವು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾವು ಎಂದಿಗೂ ಚಿರಋಣಿ. ಅಪ್ಪಾಜಿ ಇದ್ದ ದಿನದಿಂದಲೂ ಕೂಡ ನೀವೆಲ್ಲರೂ ನಮ್ಮನ್ನು ವಿಶೇಷವಾಗಿ ಕಂಡಿತೀರಿ ನೀವೇ ನಮ್ಮ ಪಾಲಿನ ಅಭಿಮಾನಿ ದೇವರು ಎನ್ನುವುದು ಅಕ್ಷರಶಃ ಸತ್ಯ. ಈಗ ನಮ್ಮ ಹೋಂ ಬ್ಯಾನರ್ ಇಂದ ರಿಲೀಸ್ ಆಗುತ್ತಿರುವ ವೇದ ಸಿನಿಮಾ ಮೇಲೆ ಕೂಡ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
ಇದರ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಿ ಎಂದು ಕೇಳಿದ್ದಾರೆ. ಹರ್ಷ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಹರ್ಷ ಹಾಗೂ ಶಿವಣ್ಣರ ಕಾಂಬಿನೇಷನ್ನು ಮತ್ತೊಂದು ಸಿನಿಮಾ ಆಗಿದೆ. ಈಗಾಗಲೇ ಶಿವಣ್ಣನ ಹಲವು ಸಿನಿಮಾಗಳಲ್ಲಿ ಇವರಿಬ್ಬರ ಕಾಂಬಿನೇಷನ್ ವರ್ಕ್ ಆಗಿದ್ದು ಜನ ವೇದ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.