ಆಹಾರ ಸೇವಿಸುವುದು ಮಾತ್ರವಲ್ಲದೇ ನಾವು ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶ ಎಷ್ಟಿದೆ ಎಂದು ತಿಳಿದುಕೊಂಡು ಆಹಾರ ಸೇವಿಸುವುದು ಕೂಡ ಮುಖ್ಯ. ಹಾಗಾಗಿ ಎಲ್ಲಾ ಮಹಿಳೆಯರಿಗೂ ಅನುಕೂಲವಾಗಲಿ ಎಂದು ಕೆಲವು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
* ಅಕ್ಕಿಯನ್ನು ಹೆಚ್ಚು ಫಾಲಿಶ್ ಮಾಡಬೇಡಿ, ಅದರಲ್ಲಿರುವ ಪೌಷ್ಟಿಕಾಂಶಗಳು ನಾಶವಾಗುತ್ತವೆ.
* ಸಸ್ಯಹಾರಿಗಳು ಎರಡು ಮೂರು ಬಗೆಯ ಧಾನ್ಯ ಉಪಯೋಗಿಸಿದರೆ ದೇಹಕ್ಕೆ ಬೇಕಾದ ಅಮೈನೋ ಆಮ್ಲಗಳು ಸಿಗುತ್ತವೆ
* ಬೆಲ್ಲ, ಕೊಟ್ಟಣದಕ್ಕಿ, ಕಾಳು, ಗೋಧಿಯಂತಹ ಸಂಸ್ಕರಿಸಿದ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದು
* ಧಾನ್ಯಗಳನ್ನು ಮೊಳಕೆ ಕಟ್ಟಿ ಸೇವಿಸುವುದರಿಂದ ಕಬ್ಬಿನಾಂಶ ಪ್ರೋಟೀನ್ ಹೆಚ್ಚಿಗೆ ಸಿಗುತ್ತದೆ ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಕೂಡ ಕಬ್ಬಿನಾಂಶ ಹೆಚ್ಚಿಗೆ ಸಿಗುತ್ತದೆ.
ಈ ಸುದ್ದಿ ಓದಿ:- ಎಷ್ಟೇ ವರ್ಷಗಳಿಂದ ಥೈರಾಯ್ಡ್ ಇರಲಿ, ಈ ಶಂಖ ಮುದ್ರೆ ಮಾಡಿದ್ರೆ ಥೈರಾಯ್ಡ್ ಸಂಪೂರ್ಣ ಗುಣಮುಖವಾಗುತ್ತೆ.!
* ದ್ವಿದಳ ಧಾನ್ಯಗಳನ್ನು ಬೇಯಿಸುವ ಮುನ್ನ ಸ್ವಲ್ಪ ನೀರಿನಲ್ಲಿ ನೆನೆಗಿಟ್ಟು ನಂತರ ಬೇಯಿಸಿ ಇದರಿಂದ ಪ್ರೋಟಿನ್ ನಾಶವಾಗುವುದಿಲ್ಲ, ದ್ವಿದಳ ಧಾನ್ಯಗಳನ್ನು ಉರಿದು ಬಳಸುವುದು ಇನ್ನೂ ಉತ್ತಮ.
* ಕುದಿಯುವ ನೀರಿಗೆ ಕಾಳುಗಳು ಅಥವಾ ತರಕಾರಿಯನ್ನು ಹಾಕಿದಾಗ ಬೇಗ ಬೇಯಿಸಲು ಆತರ ಮಾಡಬೇಡಿ ಮತ್ತು ಅಗತ್ಯಕ್ಕಿಂತ ಹೆಚ್ಚು ಬೇಯಿಸಬೇಡಿ ಈ ಎರಡು ರೀತಿ ಮಾಡುವುದರಿಂದ ಕೂಡ ಪೋಷಕಾಂಶ ನಷ್ಟವಾಗುತ್ತದೆ
* ಯಾವುದೇ ಪ್ರಾಣಿಯ ಮಾಂಸಗಳನ್ನು ಅಡುಗೆ ಮಾಡುವಾಗ ಚೆನ್ನಾಗಿ ಬೇಯಿಸಿಯೇ ಬಳಸಬೇಕು ಇಲ್ಲವಾದಲ್ಲಿ ಅನೇಕ ಸೋಂಕು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ, ಈ ಬಗ್ಗೆ ಎಚ್ಚರ ಇರಲಿ.
* ಸೊಪ್ಪು ಅಥವಾ ತರಕಾರಿ ಹೆಚ್ಚುವಾಗ ತೊಳೆದು ನಂತರ ಹಚ್ಚಿ ಬಹಳ ಸಣ್ಣದಾಗಿ ಸೊಪ್ಪು ಅಥವಾ ತರಕಾರಿ ಹಚ್ಚಿದರೆ ಜೀವ ಸತ್ವಗಳು ನಾಶವಾಗುತ್ತವೆ.
ಈ ಸುದ್ದಿ ಓದಿ:- ಎಲ್ಲಾ ರೈತರ ಖಾತೆಗೂ ಬೆಳೆ ಹಾನಿ ಹಾಗೂ ಬರ ಪರಿಹಾರದ ಹಣ ಜಮೆ, ನಿಮ್ಮ ಖಾತೆಗೆ ಹಣ ಬರಲಿದೆಯೇ ಈ ರೀತಿ ಚೆಕ್ ಮಾಡಿ.!
* ಟೊಮೋಟೋವನ್ನು ಹಸಿ ತಿಂದರೆ ಒಳ್ಳೆಯದು. ಬೇಯಿಸಿ ಟೊಮೇಟೊ ತಿನ್ನುವುದರಿಂದ ಯಾವುದೇ ರೀತಿಯ ಪೋಷಕಾಂಶ ಸಿಗುವುದಿಲ್ಲ
* ತರಕಾರಿ ಬೇಯಲು ಎಷ್ಟು ಬೇಕೋ ಅಷ್ಟು ನೀರು ಮಾತ್ರ ಹಾಕಿ ಮುಚ್ಚಿಟ್ಟು ಬೇಯಿಸುವುದರಿಂದ ಬೇಗ ಬೇಯುತ್ತದೆ ಅಥವಾ ಪ್ರೆಶರ್ ಕುಕ್ಕರ್ ಗೆ ಹಾಕಿ ಬೇಯಿಸಿ
* ಪದೇ ಪದೇ ಸಾಂಬಾರ್ ಕುದಿಸಬೇಡಿ
* ಬೇಯಿಸಿದ ಸೊಪ್ಪು ತರಕಾರಿಗಳನ್ನು ಬೇಗ ಸೇವಿಸಿ
* ಕಾಳು, ತರಕಾರಿ, ಸೊಪ್ಪು ಬೇಯಿಸುವಾಗ ಚೆನ್ನಾಗಿ ಬೇಯಲಿ ಬೇಗ ಬೇಯಲಿ ಎಂದು ಸೋಡಾಪುಡಿ ಹಾಕಬೇಡಿ
* ತರಕಾರಿ, ಕಾಳು, ಸೊಪ್ಪು ಬೇಯಿಸಿದ ನೀರನ್ನು ವೇಸ್ಟ್ ಮಾಡಬೇಡಿ ಇದನ್ನು ಚಪಾತಿ ಹಿಟ್ಟು ಮಿಕ್ಸ್ ಮಾಡಲು ಅಥವಾ ಕುಡಿಯಲು ಬಳಸಿ ಇದರಲ್ಲಿ ಪೋಷಕಾಂಶ ಇರುತ್ತದೆ.
ಈ ಸುದ್ದಿ ಓದಿ:- ಹಣಕಾಸು ಉಳಿತಾಯಕ್ಕೆ ನಿಮ್ಮ ಮನೆ ವಾಸ್ತು ಕಾರಣವಾಗುತ್ತಾ ನೀವೇ ತಿಳಿದುಕೊಳ್ಳಿ.
* ಫ್ರಿಜ್ ನಲ್ಲಿ ಇಟ್ಟು ಬಳಸುವುದರಿಂದ ತರಕಾರಿಗಳ ಸತ್ವ ಹಾಳಾಗುವುದಿಲ್ಲ ಬದಲಾಗಿ ರುಚಿ ಹೋಗುತ್ತದೆ
* ಯಾವಾಗಲೂ ಫ್ರೆಶ್ ತರಕಾರಿಗಳನ್ನು ಖರೀದಿಸಿ ಬಳಸಿ, ಬಾಡಿದ ತರಕಾರಿಗಳಲ್ಲಿ ಪೌಷ್ಟಿಕಾಂಶ ಕಡಿಮೆ ಇರುತ್ತದೆ.
* ಅಡುಗೆ ಮಾಡುವಾಗ ಈರುಳ್ಳಿ ಹೆಚ್ಚಿಕೊಳ್ಳಿ ಅಥವಾ ಹೆಚ್ಚಿದ ಈರುಳ್ಳಿಯನ್ನು ಬೇಗ ಬಳಸಿ. ಈರುಳ್ಳಿ ಹೆಚ್ಚಿ ಹೆಚ್ಚು ಹೊತ್ತು ಗಾಳಿಗೆ ಇಡಬಾರದು
* ಬೆಣ್ಣೆ ಕೆಡದಂತೆ ಬಹಳ ದಿನಗಳವರೆಗೆ ಇಡಲು ಪ್ರತಿದಿನ ಫ್ರೆಶ್ ನೀರಿನಲ್ಲಿ ತೊಳೆದಿಡಬೇಕು
* ಜಾನುವಾರುಗಳನ್ನು ಬಿಸಿನಲ್ಲಿ ನಿಲ್ಲಿಸಿ ಹಾಲು ಕರೆಯುವುದರಿಂದ ಜೀವ ಸತ್ವ ನಾಶವಾಗುತ್ತದೆ ಮತ್ತು ಕಡಿಮೆ ಹಾಲು ಸಿಗುತ್ತದೆ
* ಪಲ್ಯ ಮಾಡುವಾಗ ಹಸಿಮೆಣಸಿನಕಾಯಿ ಹಾಕಿ ಖಾರ ಹೆಚ್ಚಾಗಿದ್ದರೆ ಇದನ್ನು ಬ್ಯಾಲೆನ್ಸ್ ಮಾಡಲು ಟೊಮೆಟೊ ರಸ ಹಾಕಬಹುದು.
ಈ ಸುದ್ದಿ ಓದಿ:- ಈ ಐದು ಲಕ್ಷಣಗಳು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವುದನ್ನು ತಿಳಿಸುತ್ತವೆ.!
* ಹಾಲಿಗೆ ನೇರವಾಗಿ ಹಾಲಿನ ಪುಡಿ ಹಾಕಿದರೆ ಗಂಟುಗಂಟಾಗುತ್ತದೆ. ಆದ್ದರಿಂದ ಲೋಟಕ್ಕೆ ಸಕ್ಕರೆ ಹಾಗೂ ಹಾಲಿನ ಪುಡಿ ಹಾಕಿ ಬೆಚ್ಚಗಿರುವ ನೀರಿನಲ್ಲಿ ಕರಗಿಸಿಕೊಂಡು ಅಥವಾ ದಪ್ಪವಾಗಿ ಮಿಕ್ಸ್ ಮಾಡಿ ನಂತರ ಬಿಸಿ ಹಾಲನ್ನು ಹಾಕಿ.
* ಗೋಧಿಯನ್ನು ಹಿಟ್ಟು ಮಾಡಿಸಲು ಕೊಡುವಾಗ ಒಂದು ಹಿಡಿ ಉಪ್ಪನ್ನು ಹಾಕಿ ಹಿಟ್ಟು ಮಾಡಿಸಿ ಈ ರೀತಿ ಮಾಡುವುದರಿಂದ ಹುಳ ಆಗುವುದಿಲ್ಲ, ಮತ್ತು ಈ ಹಿಟ್ಟನ್ನು ಚಪಾತಿ ಮಾಡಲು ಮಿಕ್ಸ್ ಮಾಡುವಾಗ ಉಪ್ಪು ಹಾಕದೆ ಮಿಕ್ಸ್ ಮಾಡಿ.
* ಊಟ ಆದ ತಕ್ಷಣ ಏಲಕ್ಕಿ ಜಗಿದು ತಿನ್ನಿ, ಊಟದಲ್ಲಿ ನಂಜು ಇದ್ದರೆ ನಾಶವಾಗುತ್ತದೆ.