ಕಿಚ್ಚ ಸುದೀಪ್ (kicha Sudeep) ಅವರು ಬಹುಭಾಷಾ ಕಲಾವಿದ. ಕನ್ನಡ ತಮಿಳು ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಕೂಡ ನಟಿಸಿ ತನ್ನದೇ ಆದ ಛಾಪನ್ನು ದೇಶದಾದ್ಯಂತ ಮೂಡಿಸಿರುವ ಇವರು ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಕೂಡ ಹೆಸರು ಮಾಡುತ್ತಿದ್ದಾರೆ. ಸುದೀಪ್ ಅವರು ನಟನೆಯ ಜೊತೆಗೆ ಇನ್ನು ಅನೇಕ ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ.
ಸದ್ಯಕ್ಕೆ ಸಕಲಕಲಾವಲ್ಲಭ ಎಂದು ಕರೆಯಬಹುದಾದ ಕಿಚ್ಚ ಕೆಸಿಎಲ್ (KCL) ನಾಯಕತ್ವ ವಹಿಸಿಕೊಂಡು ಪ್ರಾಕ್ಟೀಸ್ ಅಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆಯೇ ಕರ್ನಾಟಕಕ್ಕೆ ಮೋದಿ (Modi) ಅವರ ಆಗಮನ ಆಗಿದ್ದು, ಕರ್ನಾಟಕದ ಕೆಲವು ಗಣ್ಯರನ್ನು ಔತಣಕೂಟಕ್ಕೆ ಕರೆದಿದ್ದಾರೆ. ಸಿನಿಮಾ ಇಂಡಸ್ಟ್ರಿಯ ಕೆಲವರನ್ನು ಸಹ ಮರೆಯದ ಮೋದಿ ಅವರು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಹಾಗೂ ಕಾಂತಾರಸಿನಿಮಾ ಸಕ್ಸಸ್ ಅಲ್ಲಿ ತೇಲುತ್ತಿರುವ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಅವರನ್ನು ಸಹ ಆಹ್ವಾನಿಸಿದ್ದಾರೆ.
ಚಿತ್ರರಂಗದ ಕಡೆ ಗಮನ ಇರುವುದನ್ನು ಕೂಡ ತೋರ್ಪಡಿಸಿಕೊಂಡು ಅದರ ಕುರಿತು ಮಾತನಾಡಿದ್ದಾರೆ ಎನ್ನುವ ಮಾಹಿತಿಗಳು ಕೂಡ ಹೊರ ಬಿದ್ದಿದೆ. ಇದೆಲ್ಲದರ ನಡುವೆ ಕಿಚ್ಚ ಸುದೀಪ್ ಅವರನ್ನು ಮೀಡಿಯಾದವರು ನಿಮಗೆ ಆಹ್ವಾನ ಇರಲಿಲ್ಲವ ನೀವ್ಯಾಕೆ ಮೋದಿ ಭೇಟಿಗೆ ಹೋಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಸುದೀಪ್ ಅವರು ಕೊಟ್ಟ ಉತ್ತರ ಈ ರೀತಿ ಇತ್ತು.
“ಖಂಡಿತವಾಗಿಯೂ ನನಗೂ ಸಹ ಆಹ್ವಾನ ಇತ್ತು ಡೈರೆಕ್ಟರ್ ಆಫೀಸ್ ಇಂದಾನೆ ಕರೆ ಬಂದಿತ್ತು. ನಾನು ಬರುತ್ತೇನೆ ಎಂತಲೇ ಹೇಳಿದ್ದೆ ಯಾಕೆಂದರೆ ನಮ್ಮ ದೇಶದ ಲೀಡರ್ ಗಳನ್ನು ನಾವು ಗೌರವಿಸುತ್ತೇವೆ. ನಮಗಿಂತ ದೊಡ್ಡವರು ಕರೆದಾಗ ಇಲ್ಲ ಎಂದು ಹೇಳುವಷ್ಟು ದೊಡ್ಡ ಮಟ್ಟದಲ್ಲಿ ನಾವಿಲ್ಲ, ನನಗೆ ಹೋಗಲು ತುಂಬಾ ಖುಷಿ ಸಹಾ ಇತ್ತು ಆದರೆ ಅಲ್ಲಿನ ಪ್ರೊಟೋಕಾಲ್ ತುಂಬಾ ಸ್ಟ್ರಾಂಗ್ ಆಗಿತ್ತು, ಆರ್ ಟಿ ಪಿ ಸಿ ಆರ್ ಕಡ್ಡಾಯವಾಗಿತ್ತು ನೆನ್ನೆಯಿಂದ ನನ್ನ ಹೆಲ್ತ್ ಅಪ್ಸೆಟ್ ಆಗಿದೆ ಹಾಗೂ ಬಾಡಿ ಟೆಂಪರೇಚರ್ ಕೂಡ ಇದೆ ಕೆಸಿಎಲ್ ಅಲ್ಲಿ ಪ್ರಾಕ್ಟೀಸ್ ಜಾಸ್ತಿ ಇರುವುದರಿಂದ ಈ ರೀತಿ ವ್ಯತ್ಯಾಸ ಆಗುತ್ತಿದೆ.
ಅಲ್ಲಿಗೆ ಹೋಗಿ ಆದ ಮೇಲೆ ಈ ಕಾರಣಕ್ಕೆ ಒಳ ಹೋಗಲು ಆಗಲಿಲ್ಲ ಎಂದರೆ ಅದು ಕೂಡ ಅವಮಾನ ಆಗುತ್ತದೆ ಮತ್ತೆ ಮಾಧ್ಯಮದವರು ಆಗಿ ನೀವು ಸಹ ಅದನ್ನೇ ಪ್ರಶ್ನಿಸುತ್ತೀರಾ ಹಾಗಾಗಿ ನನಗೂ ಸಹಜವಾಗಿ ಆ ಒಂದು ಭಯ ಇತ್ತು. ಅದೇ ಕಾರಣಕ್ಕಾಗಿ ನಾನು ಹೋಗದೆ ಉಳಿದುಕೊಂಡಿದ್ದೆ ಅಂತಹ ಒಂದು ಕ್ಷಣವನ್ನು ತಪ್ಪಿಸಿಕೊಂಡಿಲ್ಲ ಅಂತ ಖಂಡಿತವಾಗಿಯೂ ನನಗೆ ಬೇಸರ ಆಗುತ್ತಿದೆ. ಅದೇ ಸಮಯಕ್ಕೆ ಇಂಡಸ್ಟ್ರಿಯ ಕೆಲ ಮಂದಿಗೆ ಆಹ್ವಾನ ಎಂದಾಗ ನನ್ನ ಹೆಸರು ಸಹ ಅದರಲ್ಲಿ ಇತ್ತಲ್ಲ ಎಂದು ಖುಷಿ ಕೂಡ ಆಗುತ್ತಿದೆ.
ಅಲ್ಲಿಗೇ ಹೋಗಲು ಆಗದಿದ್ದಕ್ಕೆ ನಾನು ಸಂಬಂಧ ಪಟ್ಟವರಿಗೆ ಕರೆ ಮಾಡಿ ಕ್ಷಮೆ ಕೂಡ ಯಾಚಿಸಿದ್ದೆನೆ ಮುಂದೆ ಒಂದು ದಿನ ಖಂಡಿತ ಭೇಟಿಯಾಗುತ್ತೇನೆ ಎಂದು ಹೇಳಿದರು. ಇತ್ತೀಚೆಗೆ ಸುದೀಪ್ ಅವರು ರಾಜಕೀಯಕ್ಕೆ ಸೇರುತ್ತಾರೆ ಎನ್ನುವ ಊಹಾ ಪೋಹ ಜೋರಾಗಿದ್ದು ಡಿಕೆ ಶಿವಕುಮಾರ್ ಅವರ ಭೇಟಿ ಅಚ್ಚರಿ ಮೂಡಿಸಿದೆ. ನಡುವೆ ಮೋದಿ ಭೇಟಿ ಅವಕಾಶವನ್ನು ತಪ್ಪಿಸಿಕೊಂಡಿರುವುದರಿಂದ ಸುದೀಪ್ ಅವರ ಮನಸ್ಸಿನಲ್ಲಿ ಏನು ಓಡುತ್ತಿದೆ ಎನ್ನುವ ಅನುಮಾನ ಇನ್ನಷ್ಟು ಜೋರಾಗುತ್ತಿದೆ.