ಕಷ್ಟವನ್ನು ಪರಿಹಾರ ಮಾಡಿ ಸಂಪೂರ್ಣ ಸಂಪತ್ತನ್ನು ಕೊಡುವ ಶಕ್ತಿ ಈ ಮೂರು ನಾಮಗಳಲ್ಲಿದೆ. ಇವುಗಳಲ್ಲಿ ಒಂದನ್ನಾದರೂ ಹೇಳಿ, ಜೀವನದಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಿ.!
ಮನುಷ್ಯ ಎಂದ ಮೇಲೆ ಆತನಿಗೆ ಜೀವನದಲ್ಲಿ ಕಷ್ಟಗಳು ಬರುವುದು ಸಹಜವೇ. ಮನುಷ್ಯ ಸಹಜವಾದ ನೂರಾರು ಬಗೆಯ ಸಮಸ್ಯೆಗಳು ದಿನನಿತ್ಯ ನಮ್ಮನ್ನು ಕಾಡುತ್ತಲ್ಲೇ ಇರುತ್ತವೆ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ತೊಂದರೆ ಇದೆ. ಕೆಲವರಿಗೆ ಸಂಸಾರದಲ್ಲಿ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇರದ ಈ ಕಾರಣಕ್ಕಾಗಿ ಮನೆಯ ಶಾಂತಿ ಹಾಳಾಗಿರುವ ಸಮಸ್ಯೆ ಇದ್ದರೆ. ಇನ್ನು ಕೆಲವರಿಗೆ ಮಕ್ಕಳಿರುವುದಿಲ್ಲ ಅಥವಾ ಮಕ್ಕಳು ಒಳ್ಳೆಯ ಬುದ್ಧಿ ಕಲಿಯುತ್ತಿರುವುದಿಲ್ಲ ಹೇಳಿದ ಮಾತು ಕೇಳದಿರುವುದು, ವಿದ್ಯಾಭ್ಯಾಸ ಮುಗಿಸಿ ವರ್ಷಗಳಾದರೂ ಕೆಲಸ ಸಿಗದಿರುವುದು, ಕಂಕಣ…