ಕಳೆದ ಕೆಲ ದಿನಗಳ ಹಿಂದೆ LIC ತನ್ನ ಗ್ರಾಹಕರುಗಳಿಗೆ ಸಿಹಿ ಸುದ್ದಿ ನೀಡಿತ್ತು. ಲ್ಯಾಪ್ಸ್ ಆಗಿದ್ದ ತಮ್ಮ ಪಾಲಿಸಿಗಳನ್ನು ದಂಡ ಕಟ್ಟಿ ಪುನರಾರಂಭಿಸಿಕೊಳ್ಳಲು ಅವಕಾಶ ನೀಡಿತ್ತು. ಇದರಿಂದ ದೇಶದ ಅನೇಕ ಗ್ರಾಹಕರಿಗೆ ಅನುಕೂಲತೆವಾಗಿತ್ತು ಈ ಮೂಲಕ LIC ಮತ್ತೊಮ್ಮೆ ತಾನು ಗ್ರಾಹಕ ಸ್ನೇಹಿ ಎನ್ನುವುದನ್ನು ನಿರೂಪಿಸಿಕೊಂಡಿತು.
ಈಗ ಇದರ ಬೆನ್ನಲ್ಲೇ ಕೇಂದ್ರ ಕಳೆದ ಹಣಕಾಸು ಸಚಿವಾಲಯ ಈ ಬಾರಿ LIC ನೌಕರರು ಹಾಗೂ ಏಜೆಂಟ್ ಗಳಿಗೆ ಸಿಹಿ ಸುದ್ದಿ ನೀಡಿದೆ. ಈ ವಿಚಾರವನ್ನು ತನ್ನ ಅಧಿಕೃತ ಎಕ್ಸ್ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದೆ. ಹಣಕಾಸು ಸಚಿವಾಲಯವು ಭಾರತೀಯ ಜೀವ ವಿಮಾ ನಿಗಮ (LIC) ಉದ್ಯೋಗಿಗಳು ಮತ್ತು LIC ಏಜೆಂಟ್ಗಳ ಕೆಲವು ಪ್ರಯೋಜನಗಳಿಗೆ ಅನುಮೋದನೆಯನ್ನು ನೀಡಿದೆ.
ಉಚಿತ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್.!
ಆ ಪ್ರಕಾರವಾಗಿ ಭಾರತೀಯ ಹಣಕಾಸು ಸಚಿವಾಲಯವು LIC ನೌಕರರಿಗೆ ಮತ್ತು ಏಜೆಂಟ್ ಗಳಿಗೆ ಗ್ರಾಚ್ಯುಟಿಯ ಮಿತಿ, ಅವರ ರಿನ್ಯೂಯೇಬಲ್ ಕಮಿಷನ್ ಅರ್ಹತೆ, ಟರ್ಮ್ ಇನ್ಸ್ಯೂರೆನ್ಸ್ ರಕ್ಷಣೆ ಮತ್ತು ಕುಟುಂಬ ಪಿಂಚಣಿಗೆ ಏಕರೂಪದ ದರಕ್ಕೆ ಅನುಮೋದನೆಯನ್ನು ನೀಡಿ ಗೌರಿ ಮತ್ತು ಗಣೇಶ ಹಬ್ಬದ ಈ ಬೇಳೆ ಸಚಿವಾಲಯದ ಘೋಷಣೆ LIC ಏಜೆಂಟ್ ಮತ್ತು ನೌಕರರಿಗೆ ಇದು ಬಹಳ ದೊಡ್ಡ ಉಡುಗೊರೆಯಂತೆ ಸಿಕ್ಕಿದೆ.
LIC ಪ್ರಮುಖ ಭಾಗವಾಗಿ ಸಂಸ್ಥೆಯ ಶ್ರೇಯೋಭಿವೃದ್ಧಿಯ ಅತಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವ 13 ಲಕ್ಷಕ್ಕೂ ಹೆಚ್ಚು LIC ಏಜೆಂಟರು ಒಂದು ಲಕ್ಷಕ್ಕೂ ಹೆಚ್ಚು LIC ಕಚೇರಿಗಳ ಸಿಬ್ಬಂದಿ ಈ ಪ್ರಯೋಜನ ಪಡೆಯಲಿದ್ದಾರೆ. ಸದ್ಯಕ್ಕೆ ಅವರುಗಳಿಗೆ ಸಿಕ್ಕಿರುವ ಅನುಕೂಲತೆಗಳೇನು ಎಂದು ನೋಡುವುದಾದರೆ ಇದುವರೆಗೂ ಇದ್ದ LIC ಏಜೆಂಟ್ಗಳ ಗ್ರಾಚ್ಯುಟಿ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಜಾರಿ ಆಯ್ತು ಹೊಸ ಯೋಜನೆ.!
ಇದು ಅವರ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲಿದೆ ಮತ್ತು LIC ಏಜೆಂಟ್ ಗಳಿಗೆ ಇದರಿಂದ ಸಾಕಷ್ಟು ಪ್ರಯೋಜನಗಳು ಸಿಗಲಿದೆ. ಇದರೊಂದಿಗೆ ಮರು ನೇಮಕಾತಿಯ ನಂತರ ಬರುವ LIC ಏಜೆಂಟ್ಗಳನ್ನು ರಿನ್ಯೂಯೇಬಲ್ ಕಮಿಷನ್ ಗೆ ಅರ್ಹರನ್ನಾಗಿ ಮಾಡಲು ಹಣಕಾಸು ಸಚಿವಾಲಯವು ಅನುಮೋದಿಸಿದೆ, ಇದರಿಂದ ಅವರು ಹೆಚ್ಚಿದ ಆರ್ಥಿಕ ಸ್ಥಿರತೆಯನ್ನು ಪಡೆಯುತ್ತಾರೆ.
ಪ್ರಸ್ತುತ, LIC ಏಜೆಂಟ್ಗಳು ಯಾವುದೇ ಹಳೆಯ ಏಜೆನ್ಸಿ ಅಡಿಯಲ್ಲಿ ಪೂರ್ಣಗೊಂಡ ಯಾವುದೇ ವ್ಯವಹಾರಕ್ಕಾಗಿ ರಿನ್ಯೂಯೇಬಲ್ ಕಮಿಷನ್ ಗೆ ಅರ್ಹರಾಗಿರುವುದಿಲ್ಲ. LIC ಏಜೆಂಟ್ಗಳಿಗೆ ಟರ್ಮ್ ಇನ್ಶೂರೆನ್ಸ್ ಕವರ್ ಅನ್ನು ಹೆಚ್ಚಿಸಲಾಗಿದೆ ಮತ್ತು ಅದರ ವ್ಯಾಪ್ತಿಯನ್ನು 3000-10,000 ರೂ.ನಿಂದ 25,000-1,50,000 ರೂ.ಗೆ ಹೆಚ್ಚಿಸಲಾಗಿದ್ದು ಟರ್ಮ್ ಇನ್ಶೂರೆನ್ಸ್ ಮೊತ್ತವನ್ನು ಹೆಚ್ಚಿಸಲಾಗಿದೆ.
8 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಯಾಕೆ ಗೊತ್ತಾ.?
ಈ ಅನುಕೂಲತೆಯು LIC ಏಜೆಂಟ್ ಕುಟುಂಬಕ್ಕೆ ಸಾಕಷ್ಟು ಪ್ರಯೋಜನವನ್ನುಂಟು ಮಾಡುತ್ತದೆ. ಇದರಿಂದ ನಿಧನರಾದ LIC ಏಜೆಂಟರ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ನೀಡಲು ಸಾಧ್ಯವಾಗಲಿದೆ, ಇನ್ನೂ ಹೆಚ್ಚಿನ ಕಲ್ಯಾಣ ಪ್ರಯೋಜನಗಳು ಸಿಗಲಿವೆ. LIC ಉದ್ಯೋಗಿಗಳ ಏಳಿಗೆಗಾಗಿ, ಅವರ ಕುಟುಂಬ ಪಿಂಚಣಿಯ ಲಾಭವನ್ನು ಏಕರೂಪದ ಶೇಕಡಾ 30%ರಷ್ಟು ಪಡೆಯಲು ಇದರಿಂದ ಸಾಧ್ಯವಾಗುತ್ತದೆ.
LIC ಏಜೆಂಟ್ ಗಳು ಮತ್ತು LIC ಸಂಸ್ಥೆಯಲ್ಲಿ ದುಡಿಯುವ ನೌಕರನ ಅನೇಕ ದಿನದ ಕೋರಿಕೆಗಳು ಈಗ ಈ ರೀತಿಯಾಗಿ ಪೂರ್ತಿಗೊಂಡಿವೆ ಎಂದೇ ಹೇಳಬಹುದು. ದಿನದಿಂದ ದಿನಕ್ಕೆ LIC ಸಂಸ್ಥೆಯು ಕೂಡ ಇಂದಿನ ಕಾಲಘಟ್ಟಕ್ಕೆ ಹೋಲುವಂತಹ ಹೊಸ ಹೊಸ ಪಾಲಿಸಿಗಳನ್ನು ಪರಿಚಯಿಸುವ ಮೂಲಕ ತನ್ನ ಇರುವಿಕೆಯನ್ನು ಮತ್ತಷ್ಟು ಭದ್ರಗೊಳಿಸುತ್ತಿದೆ ಇದರೊಂದಿಗೆ ಸಿಬ್ಬಂದಿ ಹಾಗೂ ಸಂಸ್ಥೆಯ ಬುನಾದಿ ಎಂದು ಹೇಳಬಹುದಾದ ಏಜೆಂಟ್ಗಳ ಕ್ಷೇಮಕ್ಕಾಗಿ ಸರ್ಕಾರ ಕೂಡ ಚಿಂತಿಸುತ್ತಿರುವುದು ಅಭಿನಂದನಾರ್ಹವಾಗಿದೆ.