ಜೀವನದಲ್ಲಿ ನಾವು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಹಾಗಾಗಿ ನಮ್ಮ ಹಿರಿಯರು ಇದನ್ನು ಸಂಸ್ಕಾರ. ಪದ್ಧತಿ ಎನ್ನುವ ಹೆಸರಿನಲ್ಲಿ ಕಲಿಸುತ್ತಿದ್ದರು. ಆದರೆ ಆಧುನಿಕ ಯುಗದ ಓಟದಲ್ಲಿ ನಾವು ಇವುಗಳನ್ನು ಮರೆಯುತ್ತಿರುವುದರಿಂದಲೇ ನಾವು ಎಷ್ಟೇ ದುಡಿದರೂ ಸಮಸ್ಯೆಗಳು ತೀರುತ್ತಿಲ್ಲ. ಹಾಗಾಗಿ ಸುಖ, ಶಾಂತಿ, ನೆಮ್ಮದಿಯ ಜೊತೆ ಹಣ, ಐಶ್ವರ್ಯಗಳನ್ನು ಹೊಂದಲು ನೀವು ಮಾಡುತ್ತಿರುವ ಕೆಲಸ ತಪ್ಪುಗಳನ್ನು ಸರಿಪಡಿಸಿಕೊಳ್ಳಿ.
* ಊಟ ಮಾಡುವ ಸಮಯದಲ್ಲಿ ನಾವು ಅನ್ನವನ್ನು ತಟ್ಟೆಯ ಮುಂದೆ ಇಟ್ಟುಕೊಂಡು ಕಾಯಿಸುತ್ತಾ ಆ ಸಮಯದಲ್ಲಿ ಅವಶ್ಯಕತೆ ಇಲ್ಲದ ಕೆಲಸಗಳನ್ನು ಮಾಡುವುದು ತಾಯಿ ಅನ್ನಪೂರ್ಣೇಶ್ವರಿ ಗೆ ಅವಮಾನ ಮಾಡಿದಂತೆ, ಜೊತೆಗೆ ಕೆಲವರು ಅನ್ನವನ್ನು ಮುಂದೆ ಇಟ್ಟುಕೊಂಡು ಮನಸ್ಸಿನಲ್ಲಿ ಏನೇನೋ ನಡೆಸಿಕೊಂಡು ಕ’ಣ್ಣೀ’ರು ಇಡುತ್ತಾರೆ. ಇದನ್ನು ಕೂಡ ಮಾಡಬಾರದು ಇದರಿಂದ ಕ’ಷ್ಟ ಕಾರ್ಪಣ್ಯಗಳು ಇನ್ನು ಹೆಚ್ಚಾಗುತ್ತವೆ.
* ಊಟ ಮಾಡಲು ಕುಳಿತುಕೊಳ್ಳುವಾಗ ನೆಲದ ಮೇಲೆ ಚಾಪೆ ಹಾಕಿಕೊಂಡು ಕುಳಿತು ತಟ್ಟೆಯನ್ನು ನಮ್ಮ ಮುಂದಿಟ್ಟು ಊಟ ಮಾಡಬೇಕು. ಕೆಲವು ಹೆಣ್ಣು ಮಕ್ಕಳು ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಊಟ ಮಾಡುತ್ತಾರೆ ಇದು ಕೂಡ ತಪ್ಪು. ಇದರಿಂದಲೂ ಕೂಡ ದರಿದ್ರ ಬರುತ್ತದೆ.
* ಮನೆಗೆ ಯಾರೇ ಅತಿಥಿಗಳು ಬಂದರು ಅವರಿಗೆ ಗೌರವ ಕೊಡಿ, ನಿಮ್ಮ ಶಕ್ತಿಯನುಸಾರ ಅವರ ಹಸಿವನ್ನು ತಣಿಸುವ ಪ್ರಯತ್ನ ಮಾಡಿ, ಹಸಿದು ಬಂದವರಿಗೆ ಎಂದು ಅ’ವ’ಮಾ’ನ ಮಾಡಿ ಕಳುಹಿಸಬೇಡಿ ಇದು ಮನೆಗೆ ಶ್ರೇಯಸ್ಕರವಲ್ಲ.
* ಮನೆಯ ಆವರಣದಲ್ಲಿ ಒಣಗಿದ ಗಿಡಗಳು ಇರಲು ಬಿಡಬೇಡಿ, ಇದರಿಂದ ಖಿ’ನ್ನ’ತೆ ಶುರುವಾಗಿ ಮಾನಸಿಕ ಆರೋಗ್ಯ ಕುಸಿಯುತ್ತದೆ
* ಸಾಧ್ಯವಾದಷ್ಟು ದೇವರಿಗೆ ನೀವೇ ನಿಮ್ಮ ಕೈತೋಟದಲ್ಲಿ ಬೆಳೆಸಿದ ಹೂಗಳನ್ನು ಅರ್ಪಿಸಿ ಇದರಿಂದ ಹೆಚ್ಚು ಫಲ ಸಿಗುತ್ತದೆ ಒಂದು ವೇಳೆ ಅನುಕೂಲತೆ ಇಲ್ಲದಿದ್ದರೆ ಹೊರಗಿನಿಂದ ಹೂವು ತಂದು ಅದಕ್ಕೆ ಮಡಿ ನೀರು ಚಿಮ್ಮಿಸಿ ಶುದ್ಧ ಮಾಡಿ ನಂತರ ಬಳಸಬೇಕು
* ನಿಮ್ಮ ಮನೆಯ ಗಡಿಯಾರ ನಿಂತಿದ್ದರೆ ಅಥವಾ ಕೆ’ಟ್ಟು ಹೋಗಿದ್ದರೆ ಅಥವಾ ಅದು ಒಡೆದಿದ್ದರೆ ಅದು ಮನೆಗೆ ಮಂಗಳಕರವಲ್ಲ. ಇದರಿಂದ ಮನೆಯವರ ಸಮಯ ಕೆಡುತ್ತದೆ, ಇಲ್ಲಸಲ್ಲದ ಸಮಸ್ಯೆಗಳು ಹೆಚ್ಚಾಗುತ್ತವೆ.
* ಮುಖ್ಯದ್ವಾರದ ಮುಂದೆ ಮೆಟ್ಟಲು ಗಳಿದ್ದರೆ ಅವು ಬೆಸ ಸಂಖ್ಯೆಯಲ್ಲಿರಬೇಕು ಮತ್ತು ರಸ್ತೆ ಗಿಂತ ಸ್ವಲ್ಪ ಎತ್ತರದ ಸ್ಥಾನದಲ್ಲಿರಬೇಕು.
* ಮನೆಯಲ್ಲಿರುವ ಹಿರಿಯರನ್ನು ಗೌರವಿಸಿ ನಿಮ್ಮ ತಂದೆ ತಾಯಿಯನ್ನು ಅತ್ತೆ ಮಾವರನ್ನು ನೀವು ಪೂಜ್ಯ ಭಾವನೆಯಿಂದ ನೋಡಿದರೆ ನಿಮ್ಮ ಮಕ್ಕಳು ಅದನ್ನೇ ಅನುಸರಿಸುತ್ತಾರೆ ಹಾಗಾಗಿ ಮುಖ್ಯ ಕೆಲಸ ಕಾರ್ಯಗಳಿಗೆ ಹೊರಟಾಗ, ಹುಟ್ಟು ಹಬ್ಬ, ಹಬ್ಬ ಹರಿದಿನಗಳ ಸಮಯದಲ್ಲಿ ಹಿರಿಯರ ಕಾಲುಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳಿ. ಅವರನ್ನು ಪ್ರೀತಿಯಿಂದ ಮಾತನಾಡಿಸಿ ಒಂದು ವೇಳೆ ಅವರ ನಡವಳಿಕೆ ಅಥವಾ ನಿರ್ಧಾರಗಳು ಅನುಕೂಲಕರವಾಗಿಲ್ಲದಿದ್ದರೆ ಮನವರಿಕೆ ಮಾಡಿ ಯಾವುದೇ ಕಾರಣಕ್ಕೂ ಅವರ ಮನಸ್ಸು ನೋಯಿಸಲು ಹೋಗಬೇಡಿ ಇದು ಮನೆಗೆ ಶುಭವಲ್ಲ
* ದೇವರ ಪೂಜೆ ಮಾಡುವಾಗ ಶುದ್ಧತೆ ಬಗ್ಗೆ ಗಮನ ಇರಲಿ. ಜೊತೆಗೆ ನೀವು ಕೂಡ ಮನಸು ಮತ್ತು ಬುದ್ಧಿಯನ್ನು ಸ್ವಚ್ಛ ಮಾಡಿಕೊಂಡು ದೇವರ ಮುಂದೆ ನಿಲ್ಲಿ ಮತ್ತು ದೇವರ ಕೋಣೆಯಲ್ಲಿ ಯಾವಾಗಲೂ ಒಂಟಿ ದೀಪ ಹಚ್ಚಬೇಡಿ ಚಿಕ್ಕ ದೀಪವಾದರೂ ಎರಡು ದೀಪಗಳಿರಲಿ.
* ಸಂಜೆ ಹೊತ್ತು ಮುಳುಗಿದ ಮೇಲೆ ಮನೆಯ ಕಸ ಗುಡಿಸಿ ಹೊರ ಹಾಕುವುದು ಮಾಡಿದರೆ ಹಣಕಾಸಿನ ಸಮಸ್ಯೆಗಳು ಉಂಟಾಗುತ್ತವೆ, ನಿಮ್ಮ ಐಶ್ವರ್ಯ ಕುಸಿಯುತ್ತದೆ.
* ಚಾಪೆ ಮೇಲೆ ಮಲಗುವವರು ಬೆಳಿಗ್ಗೆ ಎದ್ದ ಕೂಡಲೇ ಎಲ್ಲವನ್ನು ನೀಟಾಗಿ ಎತ್ತಿ ಇಡಬೇಕು. ಅದರ ಮೇಲೆ ಅಡ್ಡಾದಿಡ್ಡಿ ಓಡಾಡುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳುಂಟಾಗುತ್ತದೆ ಮತ್ತು ಮನೆಗೆ ದರಿದ್ರ ಬರುತ್ತದೆ.
* ಮನೆಯಲ್ಲಿ ಎಷ್ಟು ಶುದ್ಧವಾಗಿ ಇಟ್ಟುಕೊಳ್ಳುತ್ತೇವೆ ಅಷ್ಟು ದೈವಿಕ ಕಳೆ ಬರುತ್ತದೆ ಮತ್ತು ಆ ಮನೆಯಲ್ಲಿ ಸಕಾರಾತ್ಮಕ ವಾತಾವರಣವಿದ್ದರೆ ತಾಯಿ ಮಹಾಲಕ್ಷ್ಮಿ ಅನುಗ್ರಹವಾಗುತ್ತದೆ. ಮನೆಯ ಸುಖ ಶಾಂತಿ ಸಮೃದ್ಧಿ ಹೆಚ್ಚಾಗುತ್ತದೆ.
* ಮನೆಯಲ್ಲಿ ಯಾವುದಾದರೂ ಜೀವಿಗಳು ಬಂದು ವಾಸಿಸಲು ಅಥವಾ ಗೂಡು ಕಟ್ಟಿಕೊಳ್ಳಲು ಪ್ರಯತ್ನಿಸಿದರೆ ಸಾಕು ಪ್ರಾಣಿಗಳಾಗಿದ್ದರೆ ಅವಕಾಶ ಮಾಡಿಕೊಡಿ, ವಿಷಕಾರಿಯಾಗಿದ್ದರೆ ಅವುಗಳಿಗೆ ನೋವಾಗದಂತೆ ಅವುಗಳ ಪ್ರಾಣಕ್ಕೆ ತೊಂದರೆ ಆಗದಂತೆ ಮನೆಯಿಂದ ಓಡಿಸಿ.