ಪ್ರತಿಯೊಬ್ಬರಿಗೂ ಆಹಾರ ಎನ್ನುವುದು ಅವರ ದೇಹವು ಚಟುವಟಿಕೆಯಿಂದ ಇರುವುದಕ್ಕೆ ದೇಹಕ್ಕೆ ಶಕ್ತಿ ಬರುವುದಕ್ಕೆ ಪ್ರಮುಖ ಆಧಾರ. ಆದರೆ ಇಂದು ನಾವು ಆಹಾರದ ರೂಪದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಟಾಕ್ಸಿನ್ ಅಂಶಗಳನ್ನು ದೇಹಕ್ಕೆ ಸೇರಿಸಿ ನಾನಾ ರೋಗಗಳಿಗೆ ತುತ್ತಾಗುತ್ತಿದ್ದೇವೆ.
ನಮ್ಮ ದೇಹಕ್ಕೆ ಶಕ್ತಿಯ ರೂಪವಾಗಿ ಸಿಗುತ್ತಿರುವ ಆಹಾರವು ಶೇಕಡ 80% ಗಿಂತ ಹೆಚ್ಚು ಕಾರ್ಬೋಹೈಡ್ರೇಟ್ ಗಳಿಂದ ಕೂಡಿದೆ. ಆದರೆ ದೇಹವು ಆರೋಗ್ಯಕರವಾಗಿ ಯಾವುದೇ ರೀತಿ ರೋಗವಿಲ್ಲದೆ ಆಕ್ಟಿವ್ ಆಗಿ ಇರಬೇಕು ಎಂದರೆ ಈ ಪ್ರಮಾಣ ಸರಿಯಲ್ಲ ದೇಹಕ್ಕೆ ಕಾರ್ಬೋಹೈಡ್ರೇಟ್ಸ್ ಗಳಿಗಿಂತ ಫ್ಯಾಟ್ಸ್ ಅಂಶ ಹೆಚ್ಚು ಬೇಕಾಗಿದೆ ಆದರೆ ಫ್ಯಾಟ್ಸ್ ಎಂದು ಹೇಳಿದ ತಕ್ಷಣವೇ ಅನೇಕರು ಗಾಬರಿಗೊಳ್ಳುತ್ತಾರೆ.
ಫ್ಯಾಟ್ ನಿಂದ ದೇಹದ ತೂಕ ಹೆಚ್ಚಾಗುತ್ತದೆ ಅಲ್ಲವೇ ಎಂದು ಗೊಂದಲಕ್ಕೊಳಕಾಗುತ್ತಾರೆ ಅದರ ಬಗ್ಗೆ ಸಂಶೋಧನೆಗಳಿಂದ ತಿಳಿದು ಬಂದಿರುವ ಕೆಲ ಸತ್ಯಾಂಶಗಳ ಬಗ್ಗೆ ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಸ್ಟ್ಯಾಚುರೇಟೆಡ್ ಫ್ಯಾಟ್ಸ್ ಮತ್ತು ಅನ್ಸಾಚುರೆಟೆಡ್ ಫ್ಯಾಟ್ಸ್ ಎನ್ನುವ ಎರಡು ಬಗೆ ಇದೆ.
ಇದರಲ್ಲಿ ಸ್ಯಾಚುರೇಟ್ ಫ್ಯಾಟ್ಸ್ ಗಳಾದ ಬೆಣ್ಣೆ, ತುಪ್ಪ, ಕೊಬ್ಬರಿ, ಶುದ್ಧ ಕೊಬ್ಬರಿ ಎಣ್ಣೆ, ತೆಂಗಿನ ಹಾಲು ಇದೆಲ್ಲವೂ ಕೂಡ ಅತ್ಯುತ್ತಮವಾದದ್ದು ಹಾಗಾಗಿ ಆಯುರ್ವೇದದಲ್ಲಿ ಇದಕ್ಕೆ ಬಹಳ ಪ್ರಾಶಸ್ಯ್ತ ನೀಡಲಾಗಿತ್ತು. ಇಂದು ನಾವು ತುಪ್ಪ ತಿಂದರೆ ದಪ್ಪ ಆಗುತ್ತೇವೆ ಎಂದು ದೂರ ಇಟ್ಟಿದ್ದೇವೆ. ತುಪ್ಪ, ಬೆಣ್ಣೆ ತಿನ್ನುವುದು ಒಳ್ಳೆಯದೇ ಆದರೆ ಬ್ರೆಡ್ ಜೊತೆ ಬಟರ್ ಹಾಕಿಕೊಂಡು ತಿನ್ನುತ್ತಾರೆ.
ಈ ರೀತಿ ಬಟರ್ ಜೊತೆ ತಿನ್ನುತ್ತಿರುವ ಬ್ರೆಡ್ ತಯಾರಾಗಿರುವ ರೀತಿ ನೋಡಿದರೆ ಅದನ್ನು ಮುಟ್ಟುವುದು ಬೇಡ ಅನಿಸುತ್ತದೆ. ಯಾಕೆಂದರೆ ಅದಕ್ಕೆ ಅನೇಕ ಕೆಮಿಕಲ್ , ರೀಫೈಂಡ್ ಮೈದಾ ಹಾಕಿ ತಯಾರಿಸುತ್ತಾರೆ. ಇದು ದೇಹಕ್ಕೆ ಮಾರಕವಾಗಿವೆ ಮತ್ತು ತುಪ್ಪ ತಿನ್ನುವ ರೀತಿ ಕೂಡ ಗೊತ್ತಿರಬೇಕು.
ನಾವು ಚಪಾತಿ ಜೊತೆ ತುಪ್ಪ ತಿಂದರೆ ಬಾಯಿಗೆ ರುಚಿ ಆಗಿ ಚಪಾತಿಯನ್ನು ಹೆಚ್ಚು ತಿಂದು ಬಿಡುತ್ತೇವೆ ಆಗ ಆ ಚಪಾತಿ ಕೂಡ ಕಾರ್ಬೋಹೈಡ್ರೇಟ್ ಆಗಿರುವುದರಿಂದ ಚಪಾತಿ ಪ್ರಮಾಣ ದೇಹದಲ್ಲಿ ಹೆಚ್ಚಾಗುತ್ತದೆ ಇದರ ಬದಲು ತುಪ್ಪದ ಸಂಪೂರ್ಣ ಪೋಷಕಾಂಶಗಳು ದೇಹಕ್ಕೆ ಸೇರುವ ರೀತಿ ತಿನ್ನಬೇಕು.
ಉತ್ತಮ ಎಂದರೆ ರಾತ್ರಿ ಮಲಗುವ ಮುನ್ನ ಬೆಚ್ಚಗಿನ ನೀರಿಗೆ 3 ಸ್ಪೂನ್ ತುಪ್ಪ ಹಾಕಿ ಕಲಸಿ ಕುಡಿದರೆ ಬೆಳಗ್ಗೆ ದೇಹದಿಂದ ತ್ಯಾಜ್ಯ ಅಂಶಗಳು ಹೊರಹೋಗುವ ಕ್ರಿಯೆಗೆ ಬಹಳ ಅನುಕೂಲವಾಗುತ್ತದೆ ಮತ್ತು ತುಪ್ಪದಲ್ಲಿರುವ ಪೂರ್ತಿ ಪೋಷಕಾಂಶವು ಸರಿಯಾಗಿ ದೇಹಕ್ಕೆ ಸೇರುತ್ತದೆ.
ಅನ್ಸಾಚುರೆಟೆಡ್ ಫ್ಯಾಟ್ಸ್ ಬಗ್ಗೆ ಹೇಳುವುದಾದರೆ ನಾವು ಡ್ರೈ ಫ್ರೂಟ್ಸ್ ಗಳಾದ ಗೋಡಂಬಿ ಬಾದಾಮಿ ಪಿಸ್ತಾ ಕುಂಬಳಕಾಯಿ ಬೀಜ ಇತ್ಯಾದಿಗಳನ್ನು ನೀರಿನಲ್ಲಿ ನೆನೆಸಿ ತಿನ್ನುವುದು ದೇಹಕ್ಕೆ ಅತ್ಯುತ್ತಮ. ದಿನದಲ್ಲಿ 50 ಗ್ರಾಂಗಳನಾದರೂ ಇವುಗಳನ್ನು ಸೇವಿಸಬೇಕು. ಆಗ ದೇಹಕ್ಕೆ ಹೊಸ ಚೈತನ್ಯ ಬರುತ್ತದೆ ಮತ್ತು ಅನೇಕ ರೋಗಗಳು ದೇಹದಿಂದ ದೂರ ಇರುತ್ತವೆ.
ಅದರಲ್ಲೂ ಹೃದಯಘಾತ ಉಂಟು ಮಾಡುವ LDL ನ್ನು ಕಡಿಮೆ ಮಾಡುತ್ತದೆ ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಆದರೆ ಇದನ್ನು ನಾವು ನೇರವಾಗಿ ಈ ರೀತಿ ಸೇವಿಸುವುದರ ಬದಲು ಬಾದಾಮಿ ಎಣ್ಣೆ ಅಥವಾ ಕಡಲೇಕಾಯಿ ಎಣ್ಣೆ ಎಂದು ಅಂಗಡಿಗಳಲ್ಲಿ ಸಿಗುವ ರೀಫೈನ್ಡ್ ಆಯಿಲ್ ಗಳನ್ನು ಸೇವಿಸುತ್ತಿದ್ದೇವೆ.
ಅದು ತುಂಬಾ ತಪ್ಪು ಅವುಗಳನ್ನು ತಯಾರಿಸುವಾಗ ಅನೇಕ ಕೆಮಿಕಲ್ ಗಳನ್ನು ಬಳಸಿರುತ್ತದೆ ಅದರ ಬದಲು ಆದಷ್ಟು ನೇರವಾಗಿ ನಾವೇ ಗಾಣಗಳಿಗೆ ಹೋಗಿ ಎಣ್ಣೆ ಮಾಡಿಸಿಕೊಂಡು ಬಂದರೆ ಉತ್ತಮ. ಮ್ಯಾನ್ ಮೇಡ್ ಫ್ಯಾಟ್ ಗಳಾದ ವನಸ್ಪತಿ ಇಂಥವುಗಳಿಂದ ದೂರ ಇರಬೇಕು. ಪ್ರೋಟೀನ್ ಅವಶ್ಯಕತೆ ದೇಹಕ್ಕೆ 20% ಇದೆ ಈ ಪ್ರೊಟೀನ್ ಗಳು ಮೊಳಕೆ ಕಾಳುಗಳು, ತರಕಾರಿಗಳು, ಹಣ್ಣುಗಳಿಂದ ಸಿಗುತ್ತದೆ.
ಕಾರ್ಬೋಹೈಡ್ರೇಟ್ಸ್ ದೇಹಕ್ಕೆ ಶಕ್ತಿಗಾಗಿ ಅವಶ್ಯಕತೆ ಇದೆ ಆದರೆ ನಾವು ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ, ಗೋಧಿ, ಜೋಳ, ರಾಗಿ ಇವುಗಳ ಪದಾರ್ಥಗಳನ್ನು ಸೇವಿಸಿದಾಗ ಲಿವರ್ ಅದನ್ನು ಮತ್ತೆ ಫ್ಯಾಟ್ ಆಗಿ ಕನ್ವರ್ಟ್ ಮಾಡಿ ನಾಳೆಗೆಂದು ಇಟ್ಟುಕೊಳ್ಳುತ್ತದೆ.
ಇದು ಬಳಕೆ ಆಗದೆ ಸ್ಟೋರ್ ಆಗುವುದಿಲ್ಲ ನಮಗೆ ಫ್ಯಾಟಿ ಲಿವರ್, ಹೊಟ್ಟೆ ಭಾಗದಲ್ಲಿ ಬೊಜ್ಜಾಗುವುದು ಇಂತಹ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಹಾಗಾಗಿ 40% ಫ್ಯಾಟ್ 20 % ಪ್ರೋಟೀನ್ ಹಾಗೂ 40% ಮಾತ್ರ ಕಾರ್ಬೋಹೈಡ್ರೇಟ್ ಸೇವಿಸಿದರೆ ಬಹಳ ಒಳ್ಳೆಯದು. ಮೂರು ತಿಂಗಳು ಇದನ್ನು ಪಾಲಿಸಿ ನೋಡಿ ನಿಮ್ಮ ದೇಹದ ತೂಕ ಸಮತೋಲನಗೊಳ್ಳುತ್ತದೆ.
ನೀವು ಹೆಚ್ಚು ಚೈತನ್ಯದಿಂದ ಕಾಣುತ್ತೀರಿ, ಚರ್ಮದ ಕಾಂತಿ ಹೆಚ್ಚಾಗುತ್ತದೆ, ನಿಮಗೆ PCOD, ಥೈರಾಯ್ಡ್, BP, ಶುಗರ್ ಸಮಸ್ಯೆ ಇದ್ದರೆ ಅವುಗಳು ಕಂಟ್ರೋಲ್ ಆಗುತ್ತವೆ, ಆ ಬದಲಾವಣೆಯನ್ನು ನೀವೇ ಕಾಣುತ್ತೀರಿ. ಈ ವಿಚಾರದ ಬಗ್ಗೆ ಇನ್ನಷ್ಟು ವಿಸ್ತೃತವಾದ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.