ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ಮದುವೆಯಾದ ಮಹಿಳೆ ಯರಿಗೆ ಅಂದ ಮತ್ತು ಐಶ್ವರ್ಯ ಆಕೆಯ ಕೊರಳಿನಲ್ಲಿ ಇರುವಂತಹ ಮಂಗಳಸೂತ್ರ. ಮಾಂಗಲ್ಯ ಮಂಗಳಸೂತ್ರ ಅಥವಾ ತಾಳಿ ಹೀಗೆ ಪದಗಳು ಬೇರೆ ಬೇರೆಯಾಗಿದ್ದರು ಅರ್ಥ ಮಾತ್ರ ಒಂದೇ ಈ ಮಂಗಳ ಸೂತ್ರವನ್ನು ವಿವಾಹಿತರು ಮಾತ್ರ ಧರಿಸುವುದೆಂದು ನಮ್ಮೆಲ್ಲರಿಗೂ ತಿಳಿದ ವಿಷಯವೇ.
ಇದು ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಿಂದೂ ಧರ್ಮದಲ್ಲಿ ತಿಳಿಸಲಾದ ಕಡ್ಡಾಯವಾದ ನಿಯಮ. ಗಂಡನು ಹೆಂಡತಿಗೆ ಈ ತಾಳಿಯನ್ನು ಕಟ್ಟಿದಾಗ ವೇದ ಮಂತ್ರಗಳಿಂದ ಈ ಕಾರ್ಯ ನಡೆಯುತ್ತದೆ. ಹೆಂಡತಿಯ ಕೊರಳಿನಲ್ಲಿರುವಂತಹ ಮಾಂಗಲ್ಯ ಸರ ಮತ್ತು ಹಣೆಯಲ್ಲಿರುವಂತಹ ಸಿಂಧೂರವೂ ಗಂಡನ ಪ್ರಾಣ ಹಾಗೆಯೇ ಸಂತೋಷವನ್ನು ಕಾಪಾಡುತ್ತದೆ.
ಮಾಂಗಲ್ಯ ಸರಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯಗಳನ್ನು ತಿಳಿದುಕೊಂಡು ಗಂಡನು ತಿಳಿದು ಕೊಂಡು ಹಾಗೂ ಹೆಂಡತಿಯು ಅದೇ ರೀತಿಯಾಗಿ ಮಂಗಳಸೂತ್ರವನ್ನು ಧರಿಸುವ ಹಾಗೆ ಮಾಡಬೇಕು. ಮಂಗಳ ಸೂತ್ರದ ವಿಶೇಷತೆ ಮತ್ತು ಮಂಗಳಸೂತ್ರ ಯಾವ ರೀತಿ ಇರಬೇಕು ಯಾವ ರೀತಿ ಇರಬಾರದು ಮತ್ತು ಅದರಲ್ಲಿ ಯಾವುದನ್ನು ಹಾಕಿಕೊಳ್ಳಬಾರದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಮನೆಯಲ್ಲಿ ಧನ ಸಂಪತ್ತು ಸಂತೋಷ ನೆಲೆಸಬೇಕೆಂದರೆ ಈ 9 ವಸ್ತುಗಳು ಇರಲೇಬೇಕು.!
ವಿವಾಹದ ನಂತರ ಸ್ತ್ರೀಯರು ಮಂಗಳಸೂತ್ರವನ್ನು ಧರಿಸಬೇಕು ಎನ್ನುವುದು ನಮ್ಮ ಭಾರತೀಯ ಸಂಪ್ರದಾಯ. ಈ ಆಚಾರವು ಈಗಿನ ದಲ್ಲ. ಮದುವೆಯ ದಿನ ವರನು ವಧುವಿಗೆ ತಾಳಿ ಕಟ್ಟುವಂತಹ ಸಂಪ್ರದಾಯ ಆರನೇ ಶತಮಾನದಿಂದಲೂ ಕೂಡ ಆರಂಭವಾಗಿತ್ತು. ಮಂಗಳಸೂತ್ರ ಎನ್ನುವ ಶಬ್ದವು ಸಂಸ್ಕೃತದಿಂದ ಹುಟ್ಟಿದೆ.
ಮದುವೆಯ ಸಂದರ್ಭದಲ್ಲಿ ಮದುಮಗನು ಮದುಮಗಳ ಕೊರಳಿಗೆ ತಾಳಿ ಮಾತ್ರ ಕಟ್ಟುತ್ತಾನೆ. ಆನಂತರ ಮಹಿಳೆಯರು ಈ ತಾಳಿಯ ಜೊತೆ ಪಗಡೆಗಳು ಮುತ್ತುಗಳು ಮತ್ತು ಚಿಕ್ಕ ಚಿಕ್ಕ ಡಾಲರ್ ಗಳನ್ನು ಸಹ ಧರಿಸಿಕೊಳ್ಳುತ್ತಿರುತ್ತಾರೆ ಹಾಗೆ ಧರಿಸುವುದು ಫ್ಯಾಶನ್ ಎಂದೂ ಬಹಳ ಮಂದಿ ಅಂದುಕೊಳ್ಳುತ್ತಾರೆ.
ಆದರೆ ಅದು ದೊಡ್ಡ ತಪ್ಪು ಹಾಗೆ ಯಾವುದೇ ಕಾರಣಕ್ಕೂ ಕೂಡ ಮಾಡಬಾರದು. ಹಾಗೆಯೇ ಈ ಮಂಗಳಸೂತ್ರ ಎನ್ನುವುದು ಗಂಡ ಹೆಂಡತಿ ಇವರಿಬ್ಬರ ನಡುವಿನ ಅನುಬಂಧದ ಪ್ರತೀಕ. ಮಂಗಳ ಎಂದರೆ ಶುಭಪ್ರದ ಶೋಭಾಯಮಾನ ಸೂತ್ರ ಎಂದರೆ ದಾರ ಅಥವಾ ಆಧಾರ ಎಂದರ್ಥ.
ಈ ಸುದ್ದಿ ಓದಿ:- ಈ ಗುಣಗಳಿರುವ ಪತಿ ಸಿಕ್ಕಿದ್ರೆ ಹೆಣ್ಣು ಮಕ್ಕಳೇ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ.!
ವಿವಾಹದ ಭಾಗವಾಗಿ ವರನು ವಧುವಿನ ಕೊರಳಿಗೆ ಮೂರು ಗಂತುಗಳನ್ನು ಹಾಕುವುದು ಸಂಪ್ರದಾಯಿದ ಪದ್ಧತಿ. ಗಂಡನ ಆಯಸ್ಸು ಚೆನ್ನಾಗಿರಬೇಕೆಂದು ಆರೋಗ್ಯವಾಗಿರಬೇಕು ಎಂದು ಮತ್ತು ತನ್ನ ಸಂಸಾರವು ನೂರು ವರ್ಷದ ಆಯಸ್ಸಿನಿಂದ ಸುಖ ಸಂತೋಷಗಳಿಂದ ಕೂಡಿರಬೇಕೆಂದು ವಧುವಿನ ಕೊರಳಿಗೆ ಮೂರು ಗಂಟುಗಳನ್ನು ಹಾಕಿಸುತ್ತಾರೆ ವೇದ ಪಂಡಿತರು.
ಆ ಮುಕ್ಕೋಟಿ ದೇವಾನುದೇವತೆಗಳ ಆಶೀರ್ವಾದವಾಗಿ ಈ ಮದುವೆ ನಡೆಯಿತು ಎಂದು ಆ ದೇವತೆಗಳು ಆಶೀರ್ವದಿಸುತ್ತಾರೆ ಎಂದು ನಮ್ಮ ಸಂಪ್ರದಾಯದ ನಂಬಿಕೆ. ಆದರೆ ಈಗ ಪ್ರಸ್ತುತ ಮಹಿಳೆಯರು ಮಂಗಳ ಸೂತ್ರವನ್ನು ಪಕ್ಕಕ್ಕಿಟ್ಟು ಬದಲಿಗೆ ಟ್ರೆಂಡ್ ಎಂದು ವಿಧವಿಧವಾದಂತಹ ತಾಳಿ ಸರಗಳನ್ನು ಧರಿಸುತ್ತಿದ್ದಾರೆ.
ದಕ್ಷಿಣ ಭಾರತದಲ್ಲಿ ಮಂಗಳಸೂತ್ರ ವೆಂದು ತಾಳಿ ಎಂದು ಮಾಂಗಲ್ಯವೆಂದು ಹೇಳುತ್ತಾರೆ. ಕಪ್ಪು ಮಿಶ್ರಿತ ಬಂಗಾರದ ಬಣ್ಣದಲ್ಲಿರುವ ಆ ಮಂಗಳಸೂತ್ರದಲ್ಲಿ ಆ ಪಾರ್ವತಿ ಪರಮೇಶ್ವರರೇ ವಾಸಿಸುತ್ತಾರೆ ಎಂದು ನಂಬಲಾಗಿದೆ. ಕಪ್ಪು ಬಣ್ಣದಲ್ಲಿ ಶಿವನು ಚಿನ್ನದ ಬಣ್ಣದಲ್ಲಿ ಪಾರ್ವತಿ ದೇವಿಯು ವಾಸಿಸುತ್ತಿರುತ್ತಾಳೆ.
ಈ ಸುದ್ದಿ ಓದಿ:- ಈ ರಾಶಿಯವರಿಗೆ ಗಜಕೇಸರಿ ರಾಜಯೋಗ ಪ್ರಾರಂಭ..!
ಯಾವುದೇ ರೀತಿಯ ಕೇಡು ಬರದ ಹಾಗೆ ಸದಾ ಕಾಲ ವಧುವು ಸುಮಂಗಲಿಯಾಗಿರಬೇಕು ಎಂದು ಪಾರ್ವತಿ ಮತ್ತು ಪರಮೇಶ್ವರರು ಸ್ತ್ರೀ- ಹೃದಯ ಭಾಗಕ್ಕೆ ಅಂಟಿಕೊಂಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.