* ಜೇನುತುಪ್ಪವನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಇದನ್ನು ಕೋಣೆಯ ತಾಪಮಾನದಲ್ಲಿ ಇರಿಸಿ.
* ಆಲೂಗಡ್ಡೆಯನ್ನು ಫ್ರಿಡ್ಜ್ ನಲ್ಲಿ ಇಡಬಾರದು, ಇದನ್ನು ಇಡುವುದರಿಂದ ಮೊಳಕೆ ಬಂದು ಬೇಗನೆ ಹಾಳಾಗುತ್ತದೆ. ಇದನ್ನು ಗಾಳಿ ಆಡುವ ಜಾಗದಲ್ಲಿ ಇರಿಸಿ.
* ಟಮೆಟೋ ಕೆಚಪ್‌ಅನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಇದನ್ನು ಕೋಣೆಯ ತಾಪಮಾನದಲ್ಲಿ ಇರಿಸಿ.
* ಸೌತೆಕಾಯಿಯನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಇದನ್ನು ಇಡುವುದರಿಂದ ಬೇಗನೆ ಬಾಡಿಹೋಗಿ ತಿನ್ನಲು ಅದರ ರುಚಿಯನ್ನು ಕಳೆದುಕೊಳ್ಳುತ್ತದೆ.
* ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಇದನ್ನು ಹಾಗೆಯೇ ಕೋಣೆಯ ತಾಪಮಾನದಲ್ಲಿ ಇರಿಸುವುದರಿಂದ ಅದರ ರುಚಿ ಮತ್ತು ಬಣ್ಣ ಬದಲಾಗುವುದಿಲ್ಲ
* ಫ್ರಿಡ್ಜ್ ನಲ್ಲಿ ಬ್ರೆಡ್ ಅನ್ನು ಇಡಬಾರದು ಇದನ್ನು ಪ್ಲಾಸ್ಟಿಕ್ ಕವರ್ ಅಥವಾ ಏರ್ ಟೈಟ್ ಬಾಕ್ಸ್ ಗಳಲ್ಲಿ ಇಡಬೇಕು.
ಈ ಸುದ್ದಿ ಓದಿ:- 1BHK/2BHK/3BHK BDA ಮನೆಗಳು ಕೈಗೆಟಕುವ ಬೆಲೆಯಲ್ಲಿ ಮನೆ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ ಸಂಪೂರ್ಣ ಮಾಹಿತಿ ಇಲ್ಲಿದೆ…….||
* ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಬೇಗನೆ ಕೊಳೆಯುತ್ತದೆ. ಇದನ್ನು ರಂಧ್ರಗಳಿರುವ ಬುಟ್ಟಿ ಅಥವಾ ಬಿದಿರಿನ ಬುಟ್ಟಿಯಲ್ಲಿ ಗಾಳಿಯಾಡುವ ಸ್ಥಳದಲ್ಲಿರಿಸಿ.
* ಹಸಿಯಾದ ಫಲಗಳನ್ನು ಹಣ್ಣಾಗಲೆಂದು ಫ್ರಿಡ್ಜ್‌ನಲ್ಲಿ ಇಡಬಾರದು, ಏಕೆಂದರೆ ಅದು ಬೇಗ ಹಣ್ಣಾಗುವುದಿಲ್ಲ.
* ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಇದು ಇಡುವುದರಿಂದ ಮೊಳಕೆ ಬಂದು ಬೇಗನೆ ಹಾಳಾಗುತ್ತದೆ.
* ಡ್ರೈ ಪೂಟ್ ಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಅದರಲ್ಲಿರುವ ಪೋಷ ಕಾಂಶಗಳನ್ನು ಕಳೆದುಕೊಳ್ಳುತ್ತದೆ. ಇದನ್ನು ಡಬ್ಬಿಗಳಲ್ಲಿ ಶೇಖರಿಸಿಕೊಳ್ಳಿ.
* ಪನ್ನೀರನ್ನು ಫ್ರಿಡ್ಜ್‌ನಲ್ಲಿ ಹಾಗೆಯೇ ಇಡುವುದರಿಂದ ಬೇಗನೆ ಕೆಟ್ಟುಹೋಗುವುದಲ್ಲದೆ ತಿನ್ನಲು ಯೋಗ್ಯವಾಗುವುದಿಲ್ಲ. ಇದನ್ನು ಒಂದು ಪ್ಲಾಸ್ಟಿಕ್ ಕವರ್ ಅಥವಾ ಏರ್ ಟೈಟ್ ಬಾಕ್ಸ್‌ನಲ್ಲಿ ಇಟ್ಟು ನಂತರ ಫ್ರಿಡ್ಜ್‌ನಲ್ಲಿ ಇಡಿ.
ಈ ಸುದ್ದಿ ಓದಿ:- ಯಾರೀ ಅಶ್ವಿನಿ ದೇವತೆಗಳು.? ಇವರೇಕೆ ಅಸ್ತು ಎನ್ನುತ್ತಾರೆ………??
* ಬಾಳೆಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಅದನ್ನು ಇಡುವುದರಿಂದ ಬೇಗನೆ ಕಪ್ಪಾಗಿ ಹಾಳಾಗುವುದಲ್ಲದೆ, ಜೊತೆಯಲ್ಲಿರುವ ಹಣ್ಣುಗಳು ಬೇಗನೆ ಹಾಳಾಗುತ್ತದೆ. ಇದನ್ನು ಗಾಳಿಯಾಡುವ ಸ್ಥಳದಲ್ಲಿ ಇರಿಸಬೇಕು.
ಮೇಲೆ ಹೇಳಿದ ಇಷ್ಟು ಮಾಹಿತಿಗಳನ್ನು ಕೂಡ ಪ್ರತಿಯೊಬ್ಬರೂ ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಏಕೆಂದರೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ಯಾವ ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟು ತಿನ್ನುವುದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಹಾಗೂ ಅದರಲ್ಲಿ ಇರುವಂತಹ ಯಾವುದೇ ಅಂಶ ನಮ್ಮ ದೇಹಕ್ಕೆ ಸೇರುವುದಿಲ್ಲ ಹೌದು ಆದ್ದರಿಂದ ಆದಷ್ಟು ಫ್ರಿಡ್ಜ್ ನಲ್ಲಿ ನಾವು ತಿನ್ನುವಂತಹ ಆಹಾರ ವನ್ನು ಶೇಖರಣೆ ಮಾಡುವುದನ್ನು ತಪ್ಪಿಸಬೇಕು ಅದರಲ್ಲೂ ಬೇಯಿಸಿದ ಆಹಾರವನ್ನು ಫ್ರಿಡ್ಜ್ ನಲ್ಲಿ ಇಟ್ಟು ತಿನ್ನುವುದರಿಂದ ಅದು ನಮ್ಮ ಹಲವಾರು ಕಾಯಿಲೆಗೆ ಪ್ರಮುಖವಾದ ಕಾರಣವಾಗಿರುತ್ತದೆ.
ಈ ಸುದ್ದಿ ಓದಿ:- ಸದಾ ಆರೋಗ್ಯವಾಗಿ ಇರಲು ಪೂರ್ವಜರ ಸರಳ ಮನೆ ಮದ್ದುಗಳು.!
ಅದರಲ್ಲೂ ಮೇಲೆ ಹೇಳಿದ ಇಷ್ಟು ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟು ತಿನ್ನುವುದರ ಬದಲು ನಮ್ಮ ಹೊರಗಿನ ವಾತಾವರಣದಲ್ಲಿ ಇಟ್ಟು ಅವುಗಳನ್ನು ಚೆನ್ನಾಗಿರುವಂತೆ ನೋಡಿಕೊಂಡು. ಆನಂತರ ಅವುಗಳ ಬಳಕೆಯನ್ನು ಮಾಡುವುದು ಬಹಳ ಒಳ್ಳೆಯದು. ಹಾಗೇನಾದರೂ ಫ್ರಿಡ್ಜ್ ನಲ್ಲಿ ಇಂತಹ ವಸ್ತುಗಳನ್ನು ಹೆಚ್ಚಿನ ದಿನಗಳ ವರೆಗೆ ಇಟ್ಟು ಆನಂತರ ನಾವು ಅದನ್ನು ನಮ್ಮ ಆಹಾರ ಕ್ರಮದಲ್ಲಿ ಉಪಯೋಗಿಸಿದರೆ ಅದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ.
ಇನ್ನು ಕೆಲವೊಂದಷ್ಟು ಜನರಿಗೆ ಉಸಿರಾಟದ ತೊಂದರೆ ಹೀಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗೆ ಪ್ರಮುಖವಾದ ಕಾರಣವಾಗುತ್ತದೆ. ಆದಷ್ಟು ನೀವು ಸೇವನೆ ಮಾಡು ವಂತಹ ಆಹಾರ ಪದಾರ್ಥಗಳನ್ನು ಹೊರಗಡೆ ಇಟ್ಟು ಯಾವುದೇ ಪದಾರ್ಥವನ್ನು ತಂದ ಸ್ವಲ್ಪ ದಿನಗಳ ಒಳಗೆ ಅದನ್ನು ಉಪಯೋಗಿಸಿ ಕೊಳ್ಳುವುದು ಒಳ್ಳೆಯದು.
ಈ ಸುದ್ದಿ ಓದಿ:- ಮಂಚ ಅಥವಾ ಹಾಸಿಗೆ ಮೇಲೆ ಗೊತ್ತಿಲ್ಲದೆ ಇವುಗಳನ್ನು ಇಟ್ಟರೆ ಅಶುಚಿ.! ದುಡ್ಡು ನಿಲ್ಲದೆ ಇರೋದಕ್ಕೆ ಕಾರಣ ಇದೆ.!
ಉಳಿದ ಕೆಲವೊಂದನ್ನು ಮಾತ್ರ ಫ್ರಿಡ್ಜ್ ನಲ್ಲಿ ಇಟ್ಟು ಆನಂತರ ತಕ್ಷಣವೇ ಅದನ್ನು ಉಪಯೋಗಿಸುವುದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಆದರೆ ಹೆಚ್ಚಿನ ದಿನಗಳವರೆಗೆ ಫ್ರಿಡ್ಜ್ ನಲ್ಲಿ ಯಾವುದೇ ಆಹಾರ ಪದಾರ್ಥವನ್ನು ಶೇಖರಣೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದೇ ತಿಳಿಸಲಾಗಿದೆ.