ಸಾಮಾನ್ಯವಾಗಿ ಅಶ್ವಿನಿ ಕುಮಾರರ ಹೆಸರನ್ನು ಕೇಳಿರುತ್ತೀರಿ ಇವರು ವೈದ್ಯ ದೇವತೆಗಳು ಋಗ್ವೇದದಲ್ಲಿ ದೈವಿಕ ಅವಳಿ ಕುದುರೆ ಸವಾರರು, ಮೋಡಗಳ ದೇವತೆಗಳು ಇವರು ಸೂರ್ಯೋದಯ ಸೂರ್ಯಾಸ್ತದ ಹೊಳಪನ್ನು ಸಂಕೇತಿಸುತ್ತಾರೆ.
* ಸೂರ್ಯೋದಯಕ್ಕೆ ಮುಂಚೆ ಆಕಾಶದಲ್ಲಿ ಸುವರ್ಣ ರಥದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಮನುಷ್ಯರಿಗೆ ಸಂಪತ್ತನ್ನು ದಯಪಾಲಿಸು. ತ್ತಾರೆ ಮತ್ತು ಅನಾರೋಗ್ಯವನ್ನು ದೂರ ಮಾಡುತ್ತಾರೆ.
* ಇವರ ಕೆಲಸವೇನೆಂದರೆ ಯಾವಾಗಲೂ ತಥಾಸ್ತು ಅಸ್ತು ಎಂದು ಹೇಳುವುದು ಹೆಚ್ಚಾಗಿ ಹೋಮ ಹವನಗಳು ನಡೆಯುವಂತಹ ಸ್ಥಳಗಳಲ್ಲಿ ಇವರು ಇರುತ್ತಾರೆ.
* ಅಸ್ತು ದೇವತೆಗಳೆಂದು ಕರೆಯಲಾಗುವ ಅಶ್ವಿನಿ ದೇವತೆಗಳ ಬಗ್ಗೆ ನಿಮಗೆಲ್ಲಾ ಇದಾಗಲೇ ತಿಳಿದಿರಬಹುದು. ಅಶ್ವಿನಿ ದೇವತೆಗಳ ಬಗ್ಗೆ ತಿಳಿಯೋಣ. ನಿಮಗೆ ಅಶ್ವಿನಿ ದೇವತೆಗಳು ಯಾರು? ಅವರು ಯಾವ ಸಮಯದಲ್ಲಿ ಸಂಚಾರ ಮಾಡುತ್ತಾರೆ? ಅವರ ಮಹತ್ವವೇನೆಂಬುದು ತಿಳಿಯುತ್ತೆ.
ಈ ಸುದ್ದಿ ನೋಡಿ:- ಮಂಚ ಅಥವಾ ಹಾಸಿಗೆ ಮೇಲೆ ಗೊತ್ತಿಲ್ಲದೆ ಇವುಗಳನ್ನು ಇಟ್ಟರೆ ಅಶುಚಿ.! ದುಡ್ಡು ನಿಲ್ಲದೆ ಇರೋದಕ್ಕೆ ಕಾರಣ ಇದೆ.!
* ಕೆಲವೊಮ್ಮೆ ನಾವು ಕೆಟ್ಟ ಮಾತುಗಳನ್ನಾಡುವಾಗ ನಮ್ಮ ಹಿರಿಯರು ತಡೆಯುತ್ತಾರೆ. ಬಿಡ್ತು ಅಂತಾ ಹೇಳು ಎಂದು ಒತ್ತಾಯಿಸಿದ ಅನುಭವ ನಿಮಗೂ ಆಗಿರಬಹುದು. ನಮ್ಮ ಹಿರಿಯರು ಹೇಳುವ ಪ್ರಕಾರ, ನಾವು ಕೆಟ್ಟ ಮಾತುಗಳನ್ನಾಡುವಾಗ ಅಶ್ವಿನಿ ದೇವತೆಗಳು ಅಥವಾ ಅಸ್ತು ದೇವತೆಗಳು ಅಸ್ತು ಎಂದರೆ ಅದು ಖಂಡಿತ ನಡೆಯುತ್ತದೆ ಎನ್ನುತ್ತಾರೆ.
ಈ ಕಾರಣಕ್ಕಾಗಿ ಅವರು ಕೆಡುಕುಂಟು ಮಾಡುವ ಮಾತುಗಳನ್ನಾಡಿದಾಗ ಬಿಡ್ತು ಎಂದು ಹೇಳುವಂತೆ ನಮ್ಮನ್ನು ಒತ್ತಾಯಿಸುತ್ತಿದ್ದರು. ಹಾಗಾದರೆ ಈ ಅಸ್ತು ದೇವತೆಗಳು ಯಾರು.? ಇವರು ಅಸ್ತು ಅಂದಾಕ್ಷಣ ನಾವು ಆಡಿದ ಮಾತುಗಳು ನಿಜವಾಗುತ್ತದೆಯೇ. ಈ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ.
* ಅಶ್ವಿನಿ ದೇವತೆಗಳು ಯಾರು.? ಅಶ್ವಿನಿ ದೇವತೆಯರು ಅಂದರೆ ಸೂರ್ಯಪುತ್ರರು. ಭಗವಾನ್ ಸೂರ್ಯ ದೇವನಿಗೆ ಸಂಧ್ಯಾದೇವಿಗೆ ಜನಿಸಿದ ಅವಳಿ ಮಕ್ಕಳು. ಇವರು ಅದೃಷ್ಟದ ದೇವತೆಗಳಾಗಿದ್ದು, ಅಸ್ತು ಅಸ್ತು ಎಂದು ಸದಾ ಪಠಿಸುವ ದೇವರು. ಇವರನ್ನು ಅಶ್ವಿನಿ ಕುಮಾರ ರೆಂದು ದೇವತೆಗಳ ವೈದ್ಯರೆಂದು ಪರಿಗಣಿಸಲಾಗುತ್ತದೆ. ಅಶ್ವಿನಿ ದೇವತೆ ಗಳ ರೂಪವೇ ವಿಚಿತ್ರ. ಯಾಕೆಂದರೆ ಈ ಅವಳಿ ಅಶ್ವಿನಿ ಕುಮಾರರದ್ದು ದೇಹ ಮಾನವ ದೇಹವಾದರೆ, ಮುಖ ಕುದುರೆಯ ಮುಖ. ಆದರೂ ನೋಡಲು ಅತ್ಯಂತ ಆಕರ್ಷಕರಾಗಿದ್ದರು.
ಈ ಸುದ್ದಿ ನೋಡಿ:- 200% ನೀವು ಅಂದುಕೊಂಡಿದ್ದು ಆಗುತ್ತದೆ ಅಂದರೆ ನೀವು ಕೂತ ಕಲ್ಲು ಬಲಗಡೆಗೆ ತಿರುಗುತ್ತದೆ.!
* ಅಶ್ವಿನಿ ದೇವತೆಗಳಿಗೆ ಕುದುರೆ ಮುಖ ಬರಲು ಕಾರಣವೇನು.? ಒಮ್ಮೆ ಸೂರ್ಯ ದೇವನ ಪತ್ನಿಯಾದ ಸಂಧ್ಯಾ ದೇವಿಯು ಸೂರ್ಯ ದೇವನ ತಾಪವನ್ನು ತಾಳಲಾರದೆ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾಳೆ. ಇದನ್ನು ನೋಡಿದ ಸೂರ್ಯ ದೇವನು ತನ್ನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಮುಂದಾಗುತ್ತಾನೆ. ಆಗ ಸಂಧ್ಯಾ ದೇವಿಯು ಸೂರ್ಯದೇವನು ನನಗಾಗಿ ತನ್ನ ತಾಪವನ್ನು ಇನ್ನೂ ಕಡಿಮೆ ಮಾಡಿಕೊಂಡರೆ ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಅಪಾರ ಕಷ್ಟಗಳು ಉಂಟಾಗುತ್ತವೆ ಎಂದು ಯೋಚಿಸಿ
ಹಿಮಾಲಯ ಪರ್ವತದತ್ತ ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊಳ್ಳಲು ಹೋಗುತ್ತಾಳೆ. ಅಲ್ಲಿ ಯಾರಿಗೂ ಗುರುತು ಸಿಗದ ಹಾಗೆ ಕುದುರೆಯ ಅವತಾರವನ್ನು ತಾಳಿ ಹಿಮಾಲಯದ ತಪ್ಪಲಿನಲ್ಲಿ ವಿಹರಿಸುತ್ತಿರುವಾಗ ಸೂರ್ಯ ದೇವನು ಕುದುರೆಯ ರೂಪದಲ್ಲಿ ಇರುವ ಸಂಧ್ಯಾ ದೇವಿಯನ್ನು ಗುರುತಿಸಿ ತಾನು ಕೂಡ ಕುದುರೆಯ ರೂಪವನ್ನು ತೆಗೆದುಕೊಳ್ಳುತ್ತಾನೆ.
ಅಶ್ವಗಳ ಅವತಾರದಲ್ಲಿ ಇವರಿಬ್ಬರ ನಡುವೆ ನಡೆದ ಮಿಲನದ ಸಂಕೇತವಾಗಿ ಜನಿಸಿದವರೇ ಅಶ್ವಿನಿ ದೇವತೆಗಳು. ಇನ್ನು ಕೆಲವು ಕಥೆಗಳಲ್ಲಿ ಅಶ್ವಿನಿ ದೇವತೆಗಳು ಸೂರ್ಯಮತ್ತು ಮೋಡದ ಪುತ್ರರು ಎಂದು ಹೇಳಲಾಗಿದೆ.ಅಶ್ವಿನಿ ದೇವತೆಗಳ ಮಹತ್ವ ಇನ್ನು ಜೀವನದಲ್ಲಿ ವಿಪರೀತ ಕಷ್ಟಗಳನ್ನು ಅನುಭವಿಸುತ್ತಿದ್ದರೆ ತೊಂದರೆ ಗಳಿಂದ ಮುಕ್ತಿಯನ್ನು ಹೊಂದಬೇಕು.
ಈ ಸುದ್ದಿ ನೋಡಿ:- ಎಕ್ಕದ ಗಿಡದ ಬುಡದಲ್ಲಿ ಈ ವಸ್ತುಗಳನ್ನು ಇಡಬೇಕು ಇದರಿಂದ ಸಾಲ ಇದ್ದರೆ ತೀರುತ್ತದೆ..!
ಜೊತೆಗೆ ಆರೋಗ್ಯ ವೃದ್ಧಿಯಾಗಬೇಕು ಎಲ್ಲಾ ಶುಭ ಫಲಗಳು ಪ್ರಾಪ್ತಿಯಾಗಬೇಕು ಎಂದರೆ ಮುಸ್ಸಂಜೆ ಅಂದರೆ ಸೂರ್ಯಮುಳುಗುವುದಕ್ಕಿಂತ ಮುಂಚಿತವಾದ ಮುಸ್ಸಂಜೆ ಸಮಯವನ್ನು ಅಂದರೆ ಸೂರ್ಯ ಮುಳುಗುವುದಕ್ಕಿಂತ ಮೊದಲು 24 ನಿಮಿಷಗಳನ್ನು ಅಶ್ವಿನಿ ದೇವತೆಗಳ ಸಮಯವೆಂದು ಪರಿಗಣಿಸಲಾಗು ತ್ತದೆ. ಈ ಸಮಯದಲ್ಲಿ ಅಶ್ವಿನಿ ದೇವತೆಗಳು ಚಿನ್ನದ ಕುದುರೆಯಲ್ಲಿ ಸಂಚಾರವನ್ನು ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.