ಈಗಾಗಲೇ ಈ ಗಿಡದ ಹೆಸರು ಎಲ್ಲರಿಗೂ ತಿಳಿದಿದೆ ಹೌದು ಅದೇ ನಿತ್ಯ ಕಣಗಿಲೆ ಅಥವಾ ಸದಾ ಪುಷ್ಪ. ಈ ಗಿಡದ ಎಲೆ ಹೂವು ಖಾಂಡ ಪ್ರತಿ ಯೊಂದು ಕೂಡ ಹಲವಾರು ರೀತಿಯ ಔಷಧಿ ಗುಣವನ್ನು ಹೊಂದಿದೆ. ಆಯುರ್ವೇದದಲ್ಲಿಯೂ ಕೂಡ ಇದರ ಬಳಕೆ ಯಥೇಚ್ಛವಾಗಿ ಬಳಸಲಾಗುತ್ತದೆ ಆದ್ದರಿಂದಲೇ ಈ ಗಿಡಕ್ಕೆ ಇಷ್ಟು ಮಹತ್ವ ಇದೆ ಎಂದು ಹೇಳಬಹುದು.
ಹಾಗಾದರೆ ಈ ದಿನ ನಿತ್ಯ ಕಣಗಿಲೆ ಅಥವಾ ಸದಾ ಪುಷ್ಪ ಸಸ್ಯದ ಎಲೆ ಹೂವು ಖಾಂಡ ಇವುಗಳನ್ನು ಯಾವ ಸಮಸ್ಯೆಗಳಿಗೆ ಹೇಗೆ ತೆಗೆದುಕೊಳ್ಳಬೇಕು ಹಾಗೂ ಇದನ್ನು ಸೇವನೆ ಮಾಡುವುದರಿಂದ ಯಾವ ರೀತಿಯ ಲಾಭಗಳನ್ನು ಪಡೆದುಕೊಳ್ಳಬಹುದು ಹಾಗೂ ಯಾರೆಲ್ಲ ಈ ಮನೆ ಮದ್ದನ್ನು ಸೇವನೆ ಮಾಡಬಹುದು ಯಾರು ಸೇವನೆ ಮಾಡಬಾರದು. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
* ಇದು ಅತಿಹೆಚ್ಚಿನ ಕ್ಷಾರ ಗುಣವನ್ನು ಹೊಂದಿರುವಂತಹ ಸಸ್ಯ ಎನ್ನಬಹುದು.
ಆಮ್ಲ ಗುಣದಿಂದ ಶರೀರಕ್ಕೆ ಯಾವುದೆಲ್ಲ ಸಮಸ್ಯೆಗಳು ಉಂಟಾಗುತ್ತ ದೆಯೋ ಅವೆಲ್ಲವನ್ನು ಸಹ ದೂರ ಮಾಡುವಲ್ಲಿ ಈ ಎಲೆ ಹಾಗೂ ಹೂವು ಬಹಳ ಪ್ರಮುಖವಾದ ಕೆಲಸ ಮಾಡುತ್ತದೆ ಎನ್ನಬಹುದು.
* ಡಯಾಬಿಟೀಸ್ ಸಮಸ್ಯೆ ಹೊಂದಿರುವವರಿಗೆ ಅತಿಯಾಗಿ ಹೊಟ್ಟೆ ಹಸಿವು ಕಾಣಿಸಿಕೊಳ್ಳುವುದು, ದೇಹದಲಿ ಸುಸ್ತು, ನಿಶಕ್ತಿ, ದೇಹದಲ್ಲಿ ಯಾವುದೇ ಶಕ್ತಿ ಇಲ್ಲದೆ ಅವರ ದೇಹ ದಿನೇ ದಿನೇ ತೆಳ್ಳಗಾಗುತ್ತಾ ಬರುವುದು “ಇದಕ್ಕೆ ಕಾರಣ ಅವರ ದೇಹದಲ್ಲಿ ಆಮ್ಲೀಯತೆ ಅಭಿವೃದ್ಧಿ ಯಾಗುವುದು”. ಹೀಗೆ ಈ ರೀತಿಯ ಸಮಸ್ಯೆಗಳು ಉಂಟಾಗುತ್ತಿದ್ದರೆ ಅದನ್ನು ದೂರ ಮಾಡುವಂತಹ ಶಕ್ತಿಯನ್ನು ಇದು ಒಳಗೊಂಡಿದೆ ಎನ್ನಬಹುದು.
* ಜೊತೆಗೆ ಅರ್ಬುದ ಎನ್ನುವಂತಹ ಕ್ಯಾನ್ಸರ್ ಸಮಸ್ಯೆ ಇರುವವರು ಕೂಡ ಇದರ ಒಂದು ಮನೆ ಮದ್ದನ್ನು ಉಪಯೋಗಿಸಬಹುದು. ಹಾಗಾದರೆ ಇಷ್ಟೆಲ್ಲಾ ಸಮಸ್ಯೆಗಳನ್ನು ದೂರ ಮಾಡುವಂತಹ ಈ ಎಲೆ ಹಾಗೂ ಹೂವನ್ನು ಯಾವ ರೀತಿಯಾಗಿ ಉಪಯೋಗಿಸಬೇಕು ಹಾಗೂ ಯಾವ ಸಮಯದಲ್ಲಿ ಉಪಯೋಗಿಸಬೇಕು ಎಂದು ಈ ಕೆಳಗೆ ತಿಳಿಯೋಣ.
* ಈ ಗಿಡದ ಎಲೆ ಮತ್ತು ಹೂಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳ ಬೇಕು ಅಂದರೆ ಇದನ್ನು ಚೆನ್ನಾಗಿ ಅರೆದು ಎರಡು ಚಮಚ ಆಗುವಷ್ಟು ತೆಗೆದುಕೊಳ್ಳಬೇಕು ನಂತರ ಇದನ್ನು 600ml ನೀರಿನಲ್ಲಿ ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿಕೊಳ್ಳಬೇಕು ಅದು ಕುದ್ದು ಕುದ್ದು 300ml ಗೆ ಇಳಿಯಬೇಕು.
ಆನಂತರ ಆ ನೀರನ್ನು ಬೆಳಗ್ಗೆ 100ml, ಮಧ್ಯಾಹ್ನ 100ml, ಹಾಗೂ ರಾತ್ರಿ 100ml ಹೀಗೆ 9 ದಿನಗಳ ತನಕ ಇದನ್ನು ಖಾಲಿ ಹೊಟ್ಟೆಯಲ್ಲಿ ಶೋಧಿಸಿಕೊಂಡು ಸೇವನೆ ಮಾಡಬೇಕು.
* ಅದೇ ರೀತಿಯಾಗಿ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ದಿನಕ್ಕೆ ಒಂದು ಬಾರಿ ಉಪಯೋಗಿಸಿದರೆ ಸಾಕು. ಇವರು ಕಡ್ಡಾಯವಾಗಿ ಸರಿ ಸುಮಾರು 6 ತಿಂಗಳ ತನಕ ಸೇವನೆ ಮಾಡಬೇಕು ಆದ್ದರಿಂದ ದಿನಕ್ಕೆ ಒಂದು ಬಾರಿ ಉಪಯೋಗಿಸಿದರೆ ಸಾಕು.
* ಕೆಲವೊಂದಷ್ಟು ಜನರಿಗೆ ಮೈ ಮೇಲೆ ಹುಳು ಕಡ್ಡಿ ಆಗಾಗ ಕಾಣಿಸಿ ಕೊಳ್ಳುತ್ತಿರುತ್ತದೆ ಅಂತವರು ಈ ಗಿಡದ ಎಲೆ ಹೂವು ಎರಡನ್ನು ಅರೆದು ಅದನ್ನು ಕೊಬ್ಬರಿ ಎಣ್ಣೆಯ ಜೊತೆ ಮಿಶ್ರಣ ಮಾಡಿ ಇಡೀ ದೇಹಕ್ಕೆ ಹಚ್ಚಿ 1 ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರು ಅಥವಾ ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ಈ ರೀತಿ ಮಾಡುತ್ತಾ ಬರುವುದರಿಂದ ಮೈ ಮೇಲೆ ಇರುವಂತಹ ಹುಳುಕಡ್ಡಿ ಸಮಸ್ಯೆ ದೂರವಾಗುತ್ತದೆ.