ಹಿಂದೂ ರಾಷ್ಟ್ರವಾದ ನಮ್ಮ ದೇಶದಲ್ಲಿ ಸಾಕಷ್ಟು ದೇವಾಲಯಗಳು ಇವೆ. ಅದರಲ್ಲೂ ವಿಷ್ಣು ಹಾಗು ವಿಷ್ಣುವಿನ ಅವತಾರದ ದೇವಸ್ಥಾನಗಳಕ್ಕೆ ಲೆಕ್ಕವೇ ಇಲ್ಲ. ಅದರಲ್ಲಿ ಕೆಲವು ವಿಶೇಷ ಶಕ್ತಿ ಇರುವ ದೇವಾಲಯಗಳು ದೇಶದ ಎಲ್ಲರ ಗಮನವನ್ನು ಕೂಡ ಸೆಳೆಯುತ್ತವೆ, ದೇಶ ವಿದೇಶದ ಲಕ್ಷಾಂತರ ಭಕ್ತರನ್ನು ಸೆಳೆಯುತ್ತವೆ. ಅಂತಹ ದೇವಾಲಯಗಳ ಪಟ್ಟಿಗೆ ಸಾಕ್ಷಾತ್ ಮಹಾವಿಷ್ಣುವಿನ ಪಾದದ ಗುರುತಿರುವ ಈ ದೇವಾಲಯ ಕೂಡ ಸೇರುತ್ತದೆ.
ಈ ದೇವಸ್ಥಾನದಲ್ಲಿ ಬಂಡೆಕಲ್ಲಿನ ಮೇಲೆ ವಿಷ್ಣುವಿನ ಪಾದದ ಗುರುತಿದೆ, ಆ ಪಾದದ ಗುರುತಿಗೆ ಇಲ್ಲಿ ಪೂಜೆ ನೆರವೇರುತ್ತದೆ. ಈ ದೇವಾಲಯವು ಬಿಹಾರ ಜಿಲ್ಲೆಯ ಬುದ್ದಗಯಾ ನಗರದ ಬಳಿ ಚಾಂದ್ ಚೌರ್ ಎನ್ನುವ ಪ್ರದೇಶದಲ್ಲಿದೆ. ಬುದ್ದಗಯಾ ಎನ್ನುವ ಪ್ರದೇಶವು ಎಲ್ಲರಿಗೂ ತಿಳಿದಿದೆ. ಸಿದ್ದಾರ್ಥನು ಜ್ಞಾನೋದಯವಾಗಿ ಗೌತಮ ಬುದ್ಧನಾಗಿ ಬದಲಾದ ಸ್ಥಳ ಇದು. ನಂತರ ಈ ಸ್ಥಳಕ್ಕೆ ಅಶೋಕ ಮಹಾರಾಜನು ಭೇಟಿ ಕೊಟ್ಟು ಗೌತಮ ಬುದ್ಧನಿಗೆ ಬೃಹತ್ತಾದ ದೇವಾಲಯವನ್ನು ಕಟ್ಟಿಸಿ ಕೊಟ್ಟಿದ್ದಾರೆ.
ಮಹಿಳೆಯರಿಗೆ ಉಪಯುಕ್ತವಾಗುವ ಕೆಲವು ಸಲಹೆಗಳು ಇವು, ಎರಡೇ ಎರಡು ನಿಮಿಷ ಫ್ರೀ ಮಾಡಿಕೊಂಡು ನೋಡಿ ಸಾಕು.!
ಇಂದು ಈ ಪ್ರದೇಶವು UNESCO ಪಾರಂಪರಿಕ ಪಟ್ಟಿಗೂ ಕೂಡ ಸೇರಿದೆ. 2022 ರಲ್ಲಿ ಬುದ್ಧ ಗಯಾದ ಜೊತೆಗೆ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಬಿಹಾರದ ಮತ್ತೊಂದು ದೇವಸ್ಥಾನ ವಿಷ್ಣುವಿನ ಪಾದದ ಗುರುತಿರುವ ಚಾಂದ್ ಚೌರ್ ಪ್ರದೇಶದಲ್ಲಿರುವ ಈ ವಿಷ್ಣು ದೇವಾಲಯ. ಪುರಾತತ್ವ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ ಇಲ್ಲಿರುವ ಪಾದದ ಕುರಿತು ಸುಮಾರು 7,000 – 9,000 ದಷ್ಟು ಹಳೆಯದ್ದು ಎಂದು ತಿಳಿದು ಬಂದಿದೆ.
ಇಲ್ಲಿ ವಿಷ್ಣುವಿನ ಪಾದಕ್ಕೆ ದೇವಸ್ಥಾನವನ್ನು ಮಾಡುವ ಸಾಮ್ರಾಜ್ಯದ ಅಹಲ್ಯಾದೇವಿ ಹೊಳ್ಕರ್ ಎನ್ನುವ ರಾಣಿಯು ಕಟ್ಟಿಸಿದಳು ಎನ್ನುವುದನ್ನು ಇತಿಹಾಸ ಹೇಳುತ್ತದೆ. ಇಲ್ಲಿರುವ ಬಂಡೆಕಲ್ಲು ಹಾಗೂ ಪಾದದ ಗುರುತಿನ ಕಥೆಯ ಹಿನ್ನೆಲೆ ಏನೆಂದರೆ, ಈ ಪ್ರದೇಶದಲ್ಲಿದ್ದ ಗಯಾಸುರ ಎನ್ನುವ ರಾಕ್ಷಸನು ತಾನು ಮಾಡಿದ ತಪ್ಪಿನ ಅರಿವಾಗಿ ಮಹದೇವನನ್ನು ಕುರಿತು ತಪಸ್ಸು ಮಾಡುತ್ತಾನೆ ಶಿವನು ಪ್ರತ್ಯಕ್ಷನಾದಾಗ ತನ್ನ ತಪ್ಪುಗಳಿಗೆ ಪ್ರಾಯಶ್ಚಿತವನ್ನು ಕೇಳುತ್ತಾನೆ.
ಮಹಿಳೆಯರು ಈ ರೀತಿ ತಪ್ಪುಗಳನ್ನು ಮಾಡಿದ್ರೆ ಆ ಮನೆಯ ಸರ್ವನಾಶ ಆಗೋದು ಖಂಡಿತ.!
ಆಗ ಶಿವನು ಮಹಾವಿಷ್ಣುವಿನಿಂದ ಮಾತ್ರ ನಿನಗೆ ಮುಕ್ತಿ ಸಿಗಲು ಸಾಧ್ಯ ನೀನು ಮಹಾವಿಷ್ಣುವಿನ ಕುರಿತು ಧ್ಯಾನ ಮಾಡಿ ಮುಕ್ತಿ ಪಡೆಯಬೇಕು ಅದೇ ನಿನ್ನ ವಿಧಿ ಲಿಖಿತ ಎಂದು ಹೇಳಿ ಮಾಯವಾಗುತ್ತಾರೆ. ಅದರಂತೆ ಮಹಾವಿಷ್ಣುವನ್ನು ಬೇಡಿಕೊಂಡಾಗ ಮಹಾವಿಷ್ಣು ಬಂದು ಗಯಾಸುರನನ್ನು ಎದೆ ಭಾಗದಲ್ಲಿ ಕಾಲಿಟ್ಟು ವ’ಧೆ ಮಾಡುತ್ತಾರೆ. ಮತ್ತು ಅತನಿಗೆ ಹೇಳುತ್ತಾರೆ ಈಗ ಮುಕ್ತಿ ಸಿಗುತ್ತದೆ ಇನ್ನು ಮುಂದೆ ನೀನು ಗಯಾಸುರ ಎನ್ನುವ ಹೆಸರಿನ ಬದಲಾಗಿ ಮುಕ್ತೀಶ್ವರ ಎನ್ನುವ ಹೆಸರಿನಿಂದ ಖ್ಯಾತಿಯಾಗು ಎಂದು ಆಶೀರ್ವದಿಸುತ್ತಾರೆ.
ಹ’ತನಾದ ನಂತರ ಗಯಾಸುರನ ದೇಹವು ದೊಡ್ಡ ಬಂಡೆಯಾಗಿ ಬದಲಾಗಿ ಹೋಗುತ್ತದೆ ಮತ್ತು ವಿಷ್ಣುವಿನ ಪಾದದ ಗುರುತು ಮಾತ್ರ ಹಾಗೆ ಉಳಿಯುತ್ತದೆ. ಇಲ್ಲಿದ್ದ ವಿಷ್ಣುವಿನ ಪಾದದ ಗುರುತನ್ನು ಮೊದಲು ಪತ್ತೆ ಮಾಡಿದ್ದು ಶ್ರೀ ಕೃಷ್ಣನ ಅಣ್ಣ ಬಲರಾಮ ಭಾರದ್ವಾಜ ಮಹರ್ಷಿಗಳಿಗೆ ಬಲರಾಮನ ಈ ಪಾದದ ಬಗ್ಗೆ ತಿಳಿಸಿದಾಗ ಅವರು ತಮ್ಮ ಗ್ರಂಥಗಳಲ್ಲಿ ಇದರ ಬಗ್ಗೆ ಉಲ್ಲೇಖಿಸಿ ಜನಸಾಮಾನ್ಯರಿಗೆ ತಿಳಿಯುವಂತೆ ಮಾಡುತ್ತಾರೆ.
ಇಂದು ಗಯಾ ಪ್ರದೇಶಕ್ಕೆ ಭೇಟಿಕೊಡುವ ಪ್ರತಿಯೊಬ್ಬರೂ ಕೂಡ ಮೊದಲಿಗೆ ವಿಷ್ಣುವಿನ ಈ ದೇವಸ್ಥಾನಕ್ಕೆ ಬಂದು ಪಾದದರ್ಶನ ಪಡೆದು ನಂತರ ಬುದ್ದನ ದೇವಸ್ಥಾನಕ್ಕೆ ಹೋಗುತ್ತಾರೆ. ಇಲ್ಲಿ ವಿಷ್ಣುವಿನ ಪಾದದ ದರ್ಶನ ಮಾಡಿ ಮಹಾವಿಷ್ಣುವಿನ ಮಂತ್ರವನ್ನು ಹೇಳಿದರೆ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ ಎನ್ನುವುದು ನಂಬಿಕೆ. ನೀವು ಕೂಡ ಸಾಧ್ಯವಾದರೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಡಿ ಹಾಗೂ ಮಹಾ ವಿಷ್ಣುವಿನ ಈ ಮಂತ್ರವನ್ನು ತಪ್ಪದೆ ಭಜಿಸಿ.
ಮಂಗಳಂ ಭಗವಾನ್ ವಿಷ್ಣುಃ , ಮಂಗಳಂ ಗರುಢಧ್ವಜಃ,
ಮಂಗಳಂ ಪುಂಡರೀಕಾಕ್ಷಃ, ಮಂಗಳಾಯ ತನೋ ಹರಿಃ,
ಮಂಗಳಂ ಭಗವಾನ್ ವಿಷ್ಣುಃ, ಮಂಗಳಂ ಗರುಢಧ್ವಜಃ,
ಮಂಗಳಂ ಪುಂಡರೀಕಾಕ್ಷಃ, ಮಂಗಳಂ ತನೋ ಹರಿಃ.