ಈ ದಿನ ನಾವು ಹೇಳುತ್ತಿರುವಂತಹ ಈ ದೇವಸ್ಥಾನದ ಪವಾಡ ನಿಮಗೆ ತಿಳಿದರೆ ಖಂಡಿತವಾಗಿಯೂ ನೀವು ಕೂಡ ಈ ದೇವಸ್ಥಾನಕ್ಕೆ ಹೋಗಿ ಭೇಟಿ ನೀಡುತ್ತೀರಿ. ಅಷ್ಟೊಂದು ಚಮತ್ಕಾರಿ ಘಟನೆಗಳನ್ನು ನೀವು ಇಲ್ಲಿ ಕಾಣಬಹುದು. ಯಾರು ಏನೇ ಕಷ್ಟ ಎಂದು ಹೋದರು ಅವರೆಲ್ಲರ ಕಷ್ಟವನ್ನು ದೂರ ಮಾಡುತ್ತಾ ಅವರೆಲ್ಲರಿಗೆ ಒಳ್ಳೆಯದನ್ನು ಮಾಡುತ್ತಾ ಬಂದಿದೆ ಈ ಒಂದು ಸ್ಥಳದಲ್ಲಿ ನೆಲೆಸಿರುವಂತಹ ಆ ಒಂದು ಚಮತ್ಕಾರಿ ಶಕ್ತಿ.
ಹೌದು ಯಾರಿಗೆ ಮಕ್ಕಳಾಗಿಲ್ಲ, ವ್ಯಾಪಾರ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುತ್ತಿರುತ್ತಾರೋ, ಯಾರ ಮನೆಯಲ್ಲಿ ಸದಾ ಕಾಲ ಜಗಳ ಕಲಹ ಮನಸ್ಥಾಪಗಳು ಹೀಗೆ ಪ್ರತಿಯೊಂದು ಸಮಸ್ಯೆಗೂ ಕೂಡ ಇಲ್ಲಿ ನೀವು ಪರಿಹಾರವನ್ನು ಪಡೆದುಕೊಳ್ಳಬಹುದು. ಹೌದು ಇಲ್ಲಿ ನೀವು ಹೋಗಿ ದೇವರ ಆಶೀರ್ವಾದವನ್ನು ಪಡೆಯುವುದರ ಮೂಲಕ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಇಲ್ಲಿ ದೇವರು ಪರಿಹಾರ ವನ್ನು ಕೊಡುತ್ತಾರೆ ಎಂದೇ ಹೇಳಬಹುದು.
ಜನ್ ಧನ್ ಜೀರೋ ಅಕೌಂಟ್ ಗೆ ಕೇಂದ್ರದ ಮೋದಿ ಬಂಪರ್ ಗಿಫ್ಟ್ 10,000 ಹಣ ಇವತ್ತು ಖಾತೆಗೆ ಜಮಾ.!
ಹಾಗಾದರೆ ಇಷ್ಟೆಲ್ಲಾ ಚಮತ್ಕಾರಿ ಘಟನೆಗಳನ್ನು ಸೃಷ್ಟಿಸುತ್ತಿರುವಂತಹ ಆ ಒಂದು ಚಮತ್ಕಾರಿ ದೇವರು ಯಾರು ಹಾಗೂ ಈ ದೇವಸ್ಥಾನ ಬರುವುದಾದರೂ ಎಲ್ಲಿ ಇದರ ಸಂಪೂರ್ಣವಾದ ವಿಳಾಸ ಏನು ಈ ದೇವಸ್ಥಾನದ ವಿಷಯಕ್ಕೆ ಸಂಬಂಧಿಸಿದ ಇನ್ನು ಹಲವಾರು ರೀತಿಯ ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ದೇವಸ್ಥಾನದ ವಿಳಾಸ :- ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು ಅಂಚೆ ಕನ್ಯಾನ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ – 576230
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರಿನಿಂದ ಪೂರ್ವ ದಿಕ್ಕಿಗೆ ಸಾಗುವ ರಸ್ತೆಯಲ್ಲಿ 4-5 K.m. ಸಾಗುತ್ತಾ ಹೋದರೆ.
ಕಾಣ ಸಿಗುವ ಈ ಕಾಡು-ಮೇಡಿನಂತಿರುವ ಬಿಳಲುಗಳ ನಡುವೆ ಅಡಿಯನ್ನಿಟ್ಟ ಕೂಡಲೇ, ಕೂಗಳತೆಯ ದೂರದಲ್ಲಿ ಪುಟ್ಟದೊಂದು ಗುಡಿ ಚಿಗುರೊಡೆದು ದಿವ್ಯ ಭವ್ಯವಾಗಿ ಸತ್ಯಧರ್ಮಗಳ ತವರೂರಾಗಿ ಕಣ್ಮನ ಸೆಳೆಯುವುದು ಆ ವಿಶಾಲವಾದ ಒಂದು ಆರಾಧನಾ ಸ್ಥಳವೇ ಕೂಡ್ಲು ಬಾಡಬೆಟ್ಟು ಶ್ರೀ ಶನೀಶ್ವರ ಸ್ವಾಮಿಯ ಕ್ಷೇತ್ರ. ಇಲ್ಲಿ ಬರುವಾಗ ಮೊದಲಾಗಿ ಕಾಣಸಿಗುವ ಸ್ಥಳವೇ ಸ್ವಾಮಿದೇವರ ಕೂಡ್ಲು. ಇಲ್ಲಿಯೇ ಈ ಶನೀಶ್ವರ ಸ್ವಾಮಿ ದೇವರ ನೆಲೆ ಇರುವುದು.
ಇವತ್ತು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಈ ಜಿಲ್ಲೆಗಳಿಗೆ ಜಮಾ ಆಗುತ್ತೆ.!
ಶ್ರೀ ದೇವರ ಪಾದವನ್ನು ಮುಟ್ಟಿ ಏನನ್ನೇ ತಮ್ಮ ಯಥಾನುಶಕ್ತಿ ರೂಪ ದಲ್ಲಿ ಹರಕೆ ಹೊತ್ತು ಪ್ರಾರ್ಥನೆಯನ್ನಿರಿಸಿದರೂ ಮದುವೆ ಸಂತಾನದ ಬಗ್ಗೆ, ವ್ಯಾಪಾರ-ವ್ಯವಹಾರ, ಎಲ್ಲಾ ವಹಿವಾಟಿನ ಬಗ್ಗೆ, ಭೂಮಿ ಬಗ್ಗೆ, ಇನ್ನು ಅನೇಕ ವೈಯ್ಯಕ್ತಿಕ ಹಾಗೂ ವೃತ್ತಿಪರ ಜೀವನದ ಕುರಿತು ಸಮಸ್ಯೆಗಳಿದ್ದು.
ಅದರ ಪರಿಹಾರಕ್ಕೆ ಬೇಡಿಕೆಯನ್ನಿಟ್ಟು ಇಲ್ಲಿಗೆ ಬಂದವರ ಆ ಸರ್ವ ಬೇಡಿಕೆಗಳೆಲ್ಲವೂ ಸಹ ಯಥೇಚ್ಛವಾಗಿ ನೆರವೇರುತ್ತದೆ ಎಂಬ ಪ್ರತೀತಿಯಲ್ಲಿ ಇದೀಗ ಶ್ರೀ ಕ್ಷೇತ್ರಕ್ಕೆ ಹಿಂದೆಗಿಂತಲೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧೆಡೆಯಿಂದ ಸದ್ಭಕ್ತರು ಆಗಮಿಸುತ್ತಿದ್ದು ತಮ್ಮ ಸಕಲ ಸಂಕಷ್ಟ-ಸಮಸ್ಯೆಗಳ ವಿಚಾರದಲ್ಲಿ ದೇವರ ಮುಂದಿಟ್ಟು ತಮ್ಮ ತಮ್ಮ ಇಷ್ಟಾರ್ಥಗಳನ್ನೆಲ್ಲಾ ಸಿದ್ದಿ ಮಾಡಿಕೊಂಡವರು ಅನೇಕರಿದ್ದಾರೆ.
ಶ್ರೀ ಕ್ಷೇತ್ರಕ್ಕೆ ಸಹಸ್ರಾರು ಭಕ್ತಾದಿಗಳು ಉತ್ತರ ಕನ್ನಡ, ಮಲೆನಾಡು ಉಡುಪಿ, ದಕ್ಷಿಣ ಕನ್ನಡ ಹಾಗೂ ರಾಜ್ಯ, ಹೊರದೇಶದಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿನ ವಿಶೇಷವೆಂದರೆ ಪ್ರಪಂಚದ ಯಾವುದೇ ಒಂದು ಶನೇಶ್ವರ ದೇಗುಲಕ್ಕೆ ನಿರ್ಮಾಣವಾಗದಂತಹ ಬ್ರಹ್ಮರಥ ಹೊಂದಿದೆ.
ಈ 5 ಟಿಪ್ಸ್ ಫಾಲೋ ಮಾಡಿದರೆ ಪೈಲ್ಸ್ ಸಮಸ್ಯೆ ಯಾವತ್ತೂ ಬರೋದಿಲ್ಲ.! ವೈದ್ಯರ ಸಲಹೆ ನೋಡಿ.!
ವಿಶೇಷ ದರ್ಶನ ಸೇವೆ ಸಮಯ ಮಧ್ಯಾಹ್ನ 12:30ಕ್ಕೆ ಬೆಳಿಗ್ಗೆ 5 ರಿಂದ ಅಪರಾಹ್ನ 1.30 ವರೆಗೆ ಸಂಜೆ 5 ರಿಂದ 7:30ರ ವರೆಗೆ, ಶನಿವಾರ ಬೆಳಿಗ್ಗೆ 4ರಿಂದ ಸಂಜೆ 8:30ರ ವರೆಗೆ ದೇವರ ದರ್ಶನವಿರುತ್ತದೆ. ಶನಿವಾರ ವಿಶೇಷವಾಗಿ ಮಹಾಪೂಜೆ ನವಗ್ರಹ ಶಾಂತಿ ವಿವಿಧ ಹೋಮ ಅನ್ನದಾನ ನಡೆಯುತ್ತದೆ. ಶ್ರೀ ಕ್ಷೇತ್ರದಲ್ಲಿ ದೇವರಿಗೆ ತುಳಸಿ ಹಾರ ವಿಶೇಷವಾಗಿರುತ್ತದೆ.